Thursday, March 26, 2026
Thursday, March 26, 2026
Home Blog Page 522

Karnataka Lokayukta Shimoga ಅಕ್ಟೋಬರ್ 28. ” ಭ್ರಷ್ಟಾಚಾರದ ವಿರುದ್ಧ ಅರಿವು” ಸಪ್ತಾಹ ಉದ್ಘಾಟನೆ

0

Karnataka Lokayukta Shimoga ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಇವರ ವತಿಯಿಂದ ಅ. 28 ರಂದು ಬೆಳಿಗ್ಗೆ 10.00 ಕ್ಕೆ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್ ನೆರವೇರಿಸುವರು. ಮುಖ್ಯ ಅಥಿತಿಗಳಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಮಂಜುನಾಥ್ ನಾಯಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಹನುಮಂತಪ್ಪ ಕೆ.ಟಿ ಪಾಲ್ಗೊಳ್ಳುವರು.

Karnataka Lokayukta Shimoga ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಮಂಜುನಾಥ್ ಚೌದರಿ ಎಂ.ಹೆಚ್ ವಹಿಸುವರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್, ಹಾಗೂ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಎನ್. ಮೃತ್ಯುಂಜಯ ನಡೆಸಿಕೊಡಲಿದ್ದಾರೆ.

Anandapura ಆನಂದಪುರ ಸಮೀಪ ಭೀಕರ ಅಫಘಾತ. ಬೈಕ್ ಸವಾರಿಯಲ್ಲಿದ್ದ ಮಾವ- ಅಳಿಯ ಸಾವು

0

Anandapura ಸಾಗರ ತಾಲ್ಲೂಕಿನ ಆನಂದಪುರದ ಸಮೀಪ ಭೀಕರ ಅಪಘಾತ ಸಂಭವಿಸಿದೆ. ಬೆಳಂದೂರು ಸಮೀಪ ನಡೆದ ಈ ಘಟನೆಯಲ್ಲಿ ಮಾವ- ಅಳಿಯ ಇಬ್ಬರು ಸಾವನ್ನಪ್ಪಿದ್ದಾರೆ. ಬೈಕ್ ಹಾಗೂ ಅಶೋಕಾ ಲೈಲ್ಯಾಂಡ್ ವಾಹನದ ನಡುವೆ ಡಿಕ್ಕಿಯಾಗಿದೆ.
ಇದರ ಪರಿಣಾಮ ಅಪಘಾತವಾಗಿದೆ.
ವಾಸಪ್ಪ (೫೦) ಮತ್ತು ಅವರ ಅಳಿಯ ಸಾನ್ನಪ್ಪಿದವರು.

Anandapura ಬೆಳಂದೂರು ಗ್ರಾಮದಿಂದ ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ಇಬ್ಬರು ಆನಂದಪುರದ ಕಡೆ ತೆರಳುತ್ತಿದ್ದರು. ಆನಂದಪುರದಿಂದ ತ್ಯಾಗರ್ತಿ ಕಡೆ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನ ಬರುತ್ತಿತ್ತು. ಎರಡು ವಾಹನಗಳ ನಡುವೆ ಡಿಕ್ಕಿಯಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದರು.

Kumsi Police ಕುಂಸಿ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ, ಆರೋಪಿಗಳ ದಸ್ತಗಿರಿ

0

Kumsi Police ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಭಾವಿ ಬಸ್ ನಿಲ್ದಾಣದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಪಿಐ ದೀಪಕ್ ಎಂ. ಎಸ್, ಎಸ್ ಐ ಶಾಂತರಾಜ್ ನೇತೃತ್ವದ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದವನ್ನು ಬಂಧಿಸಿದೆ.

Kumsi Police ಬೀರನಕೆರೆ ಗ್ರಾಮದ ಚಂದ್ರಾ ನಾಯ್ಕ್ (೪೬) ಈತನನ್ನು ದಸ್ತಗಿರಿ ಮಾಡಿ, ಅಂದಾಜು ಮೌಲ್ಯ ೧೫,೦೦೦ ರೂಗಳ ೬೪೦ ಗ್ರಾಂ ತೂಕದ ಒಣ ಗಾಂಜಾ* ಅಮಾನತ್ತು ಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Kuvempu University ಕುವೆಂಪು ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ- ಎನ್ ಎಸ್ ಯು ಐ ಆರೋಪ

0

Kuvempu University ಕುವೆಂಪು ವಿಶ್ವವಿದ್ಯಾಲಯವು ಸಮಯಕ್ಕೆ ಸರಿಯಾಗಿ ಶುಲ್ಕಗಳನ್ನು ತುಂಬದವರಿಂದ ದಂಡಸಮೇತವಾಗಿ ವಸೂಲಿಮಾಡುತ್ತಿದೆ. ಆದರೆ ಕಟ್ಟಿಸಿಕೊಂಡ ಶುಲ್ಕಕ್ಕನುಗುಣವಾಗಿ ಅಂಕಪಟ್ಟಿಗಳನ್ನು ವಿತರಿಸದಿರುವುದು ಖಂಡನೀಯ ಎಂದು ಎನ್ ಎಸ್ ಯು ಐ ಹೇಳಿದೆ.

ಸಾವಿರಾರು ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಮುಗಿಸಿಕೊಂಡು ಮುಂದಿನ ವಿದ್ಯಾಭ್ಯಾಸಕ್ಕಾಗಲಿ ಅಥವಾ ಉದ್ಯೋಕ್ಕಾಗಲಿ ಹೋಗಬೇಕೆಂಬ ಆಸೆಗೆ ವಿಶ್ವವಿದ್ಯಾಲಯವು ಮುಳ್ಳಾಗಿದೆ. ಪದವಿ ಮುಗಿಸಿದರೂ ಅಂಕಪಟ್ಟಿ ಸಿಗದೆ ವಿದ್ಯಾರ್ಥಿಗಳು ಅಲೆದಾಡುವ ಸ್ಥಿತಿ ಎದುರಾಗಿದೆ. ಇದರಿಂದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಹಾಗು ವೃತ್ತಿ ಭವಿಷ್ಯಕ್ಕೆ ಸಮಸ್ಯೆಯಾಗುತ್ತಿದೆ ಎಂದಿದೆ.

ವಿಶ್ವವಿದ್ಯಾಲಯವು ಪಿ ಪಿ ಸಿ ಹೆಸರಿನಲ್ಲಿ 485 ರೂ ಗಳನ್ನು ವಸೂಲಿ ಮಾಡಿ ವಿದ್ಯಾರ್ಥಿಗಳಿಗೆ ಹೊರೆನೀಡುತ್ತಿದೆ. ಅಂಕಪಟ್ಟಿಯ ಶುಲ್ಕ ಪಡೆದು ವರ್ಷಗಳೇ ಕಳೆದರೂ ಅಂಕಪಟ್ಟಿ ನೀಡದಿದ್ದರೂ ಪಿಪಿಸಿ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಎನ್ ಎಸ್ ಯುಐ , ವಿಶ್ವವಿದ್ಯಾಲಯವು ಬಿ.ಇಡಿ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಇದುವರೆಗೂ ಸಿಬಿಸಿಎಸ್ ಅಳವಡಿಳಿಸಿಕೊಳ್ಳದಿರುವ ಕಾರಣದಿಂದ ಈಗಾಗಲೇ ವಿಶ್ವವಿದ್ಯಾಲಯದಿಂದ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಎಬಿಸಿ ಎಂದು ನಮೂದಾಗಿದ್ದು, ಇದರಿಂದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಹಾಗೂ ವೃತ್ತಿ ಜೀವನಕ್ಕೆ ಸಮಸ್ಯೆಯಾಗುತ್ತಿರುವುದರಿಂದ ಈಗಾಗಲೇ Kuvempu University ಕುವೆಂಪು ವಿಶ್ವವಿದ್ಯಾಲಯದಿಂದ ಬಿ.ಇಡಿ ಪದವಿ ಪಡೆದ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು ತಾವುಗಳು ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮುಂಬರುವ ವಿದ್ಯಾರ್ಥಿಗಳಿಗೆ ಈ ಅನ್ಯಾಯವನ್ನು ಸರಿಪಡಿಸಿ ತ್ವರಿತವಾಗಿ ಬಿ.ಇಡಿ ಪಠ್ಯಕ್ರಮವನ್ನು ಸಿಬಿಸಿಎಸ್ ಗೆ ಅಳವಡಿಸಿಕೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನಗೊಳಿಸಲು ಸೂಚಿಸಬೇಕೆಂದು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಕುಲಪತಿಗಳು ಕೂಡಲೇ ಅಂಕ ಪಟ್ಟಿಗಳನ್ನು ನೀಡುವ ಭರವಸೆ ನೀಡಿದರು. ಪಿ ಪಿ ಸಿ ಪಡೆಯುತ್ತಿದ್ದ ಶುಲ್ಕವನ್ನು ಇಳಿಸುವ ಭರವಸೆಯನ್ನೂ ಕೊಟ್ಟು ಈ ಹಿಂದೆ ಆದ ಎಲ್ಲಾ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ನೀಡುವುದಾಗಿ ಹೇಳಿದರು.

ಅಕ್ಕಿಚೀಲದಲ್ಲಿ ಕಂತೆ ಕಂತೆ ನಗದು ನೋಟುಗಳು. ಖರೀದಿಸಿದ ಗ್ರಾಹಕ ಕಕ್ಕಾಬಿಕ್ಕಿ

0

ಅಕ್ಕಿ ತಂದವನಿಗೆ ಚೀಲದಲ್ಲಿ ಸಿಕ್ಕಿದ್ದು ಕಂತೆ ಕಂತೆ ನೋಟುಗಳು ಒಂದೇ ಚೀಲದಲ್ಲಿ ಅಕ್ಕಿಗಿಂತ್ಲೂ ಹೆಚ್ಚು ಸಿಕ್ಕಿದ್ದು ಬರೀ ದುಡ್ಡು
ಅಂಗಡಿಯಿಂದ ಏನಾದ್ರೂ ಖರೀದಿಸಿದಾಗ ಫ್ರೀಯಾಗಿ ಸಣ್ಣ ವಸ್ತು ಸಿಕ್ಕರೂ ಖುಷಿ ಆಗುತ್ತದೆ. ಆದರೇ, ಇಲ್ಲೊಬ್ಬ ಗ್ರಾಹಕನಿಗೆ ಒಂದು ಚೀಲ ಅಕ್ಕಿ ಖರೀದಿಸಿದ್ದಕ್ಕೆ ಕಂತೆ ಕಂತೆ ನೋಟುಗಳು ಸಿಕ್ಕಿವೆ.

ಅಕ್ಕಿಗಿಂತಲೂ ಹೆಚ್ಚು ನೋಟುಗಳೇ ಇದ್ದಿದ್ದು ನೋಡಿ ಶಾಕ್ ಖುಷಿಯಾಗಿದ್ದ. ಅರ್ಧ ಗಂಟೆಯಲ್ಲೇ ಗೂಗಲ್ ಪೇ ಅಡ್ರೆಸ್ ಗ್ರಾಹಕನಿಗೆ ಶಾಕ್ ನೀಡಿತ್ತು.

25 ಕೆಜಿ ಅಕ್ಕಿ ಚೀಲದಲ್ಲಿ 15 ಲಕ್ಷ ಹಣ ಸಿಕ್ಕಿತ್ತು. ತಮಿಳುನಾಡಿನ ಕಡಲೂರಿನಲ್ಲಿ ಅಕ್ಕಿ ವ್ಯಾಪಾರಿ ಶ್ರೀನಿವಾಸನ್ ಅಂಗಡಿಯಲ್ಲಿ ಇರಲಿಲ್ಲ. ಆತನ ಸಹಾಯಕ ಷಣ್ಮುಗಂ ಮಾತ್ರ ಇದ್ದ. ಯಾರೋ ಬಂದು 25 ಕೆಜಿ ಅಕ್ಕಿಯನ್ನು ಖರೀದಿದ್ರು. ಚೀಲದ ಸಮೇತ ಅಕ್ಕಿಯನ್ನು ಮೇಲ್ಬಡಿ ಅನ್ನೋ ಗ್ರಾಮದ ಭೂಪಾಲನ್ಗೆ ಮಾರಿದ್ದ. ಅಕ್ಕಿ ಕೊಂಡು ಹೋದ ಭೂಪಾಲನ್ಗೆ ಮನೆಯಲ್ಲಿ ಶಾಕ್ ಆಯ್ತು. ಚೀಲ ಬಿಚ್ಚಿ ನೋಡಿದರೇ ಅಕ್ಕಿಗಿಂತಲೂ ಹೆಚ್ಚು ಕಂತೆ ಕಂತೆ ನೋಟುಗಳೇ ಕಾಣಿಸಿದ್ದವು.

ಎಲ್ಲವನ್ನೂ ಎಣಿಸಿ ನೋಡಿದಾಗ ಅದರಲ್ಲಿ ಭರ್ತಿ 15 ಲಕ್ಷ ರೂಪಾಯಿ ಇರುವುದು ಖಾತ್ರಿ ಆಗಿತ್ತು.
ಅರ್ಧ ಗಂಟೆಯಲ್ಲೇ ಮನೆಗೆ ಬಂದಿದ್ದ ಅಂಗಡಿ ಮಾಲೀಕ
ಹೊರಕ್ಕೆ ಹೋಗಿದ್ದ ಅಕ್ಕಿ ಅಂಗಡಿ ಮಾಲೀಕ ಶ್ರೀನಿವಾಸನ್ ಅಂಗಡಿಗೆ ಬಂದವನೇ ಶಾಕ್ ಆದ. ಯಾಕಂದ್ರೆ, ಅಲ್ಲೇ ಪಕ್ಕದಲ್ಲೇ ಇದ್ದ ಅಕ್ಕಿ ಮೂಟೆ ಕಾಣಿಸಲಿಲ್ಲ. ಕೂಡಲೇ ಸಹಾಯಕ ಷಣ್ಮುಖನಿಗೆ ಇಲ್ಲಿದ್ದ ಅಕ್ಕಿ ಮೂಟೆ ಏನಾಯ್ತು ಅಂತ ಕೇಳಿದ.

ಸ್ವಾಮಿ ಅದನ್ನ ಯಾರೋ ಬಂದಿದ್ರು, ಅವರಿಗೆ ಮಾರಿಬಿಟ್ಟೆ ಅನ್ನೋ ಉತ್ತರ ಕೊಟ್ಟಿದ್ದ. ಅದನ್ನ ಕೇಳಿ ಶ್ರೀನಿವಾಸನ್ ರೊಚ್ಚಿಗೆದ್ದ. ಷಣ್ಮುಖನ ತಲೆಗೆ ಎರಡು ಬಿಟ್ಟು, ಅಕ್ಕಿ ಮೂಟೆ ಖರೀದಿಸಿದ್ದು ಯಾರು ಅನ್ನೋದು ಗೊತ್ತಾ? ಅಂತ ಕೇಳಿದ. ಇಲ್ಲ ಗೊತ್ತಿಲ್ಲ ಎಂದ ಷಣ್ಮುಖನ ಉತ್ತರ ಊಹಿಸಿದ್ದ ಶ್ರೀನಿವಾಸನ್ ಗೂಗಲ್ ಪೇ ಮೂಲಕ ಹಣ ಕೊಟ್ಟಿದ ಸುಳಿವಿನ ಮೇರೆಗೆ ಭೂಪಾಲನ್ ಅಡ್ರೆಸ್ ಹುಡುಕಿದ್ದ.

ಅಷ್ಟೇ ಅಲ್ಲ, ಆ ಕೂಡಲೇ ಭೂಪಾಲನ್ ಮನೆ ಮುಂದೆ ಬಂದು ನಿಂತು ಬಿಟ್ಟ.
ಇದ್ದಿದ್ದೇ 10 ಲಕ್ಷ ಅಂತ ಹೇಳಿಬಿಟ್ಟಳು ಭೂಪಾಲನ್ ಮಗಳು!
ಅಕ್ಕಿ ಮಾಲೀಕ ಮನೆಗೆ ಬಂದು ಚೀಲದಲ್ಲಿ ನಮಗೆ ಸೇರಿದ ಹಣವಿದೆ ಕೊಡಿ ಅಂತ ಕೇಳಿದ. ಭೂಪಾಲನ್ ಏನೂ ಮಾತಾಡದೆ ನಿಂತಿದ್ದನ್ನ ಕಂಡು, ಆತನ ಮಗಳು ದಾತ್ಸಾಯಿನಿ “ಅಣ್ಣಾ, ಅದಲ್ಲಿ ಇದ್ದಿದ್ದೇ 10 ಲಕ್ಷ. ಇಲ್ಲಿದೆ ನೋಡಿ” ಅಂತ ಒಂದಷ್ಟು ಕಂತೆ ನೋಟುಗಳನ್ನು ಹಿಂದುರಿಗಿಸಿದ್ದಾಳೆ. ಅಕ್ಕಿ ಚೀಲದಲ್ಲಿ ಹತ್ತು ಲಕ್ಷ ಇತ್ತು ಅಂತ ವಾಗ್ವಾದವೇ ನಡೆದಿದೆ.

ಕೊನೆಗೆ ಶ್ರೀನಿವಾಸನ್, ಭೂಪಾಲನ್ ವಿರುದ್ಧ ಶ್ರೀನಿವಾಸನ್ ವಡಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ, ವಿಚಾರಣೆಯೂ ಆರಂಭವಾಗಿದೆ.

Kaduru Police ಕಡೂರು ಮಳಿಗೆಯಲ್ಲಿ ಮಹಿಳೆಯೊಂದಿಗಿದ್ದ ಮಗುವಿನ ಕಿಡ್ನಾಪ್ ಪ್ರಕರಣ

0

Kaduru Police ಎರಡು ವರ್ಷದ ಮಗುವನ್ನು ಮಹಿಳೆಯೊಬ್ಬರು ಕಿಡ್ನಾಪ್ ಮಾಡಿದ ಘಟನೆ ಕಡೂರು ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮೀಪ ಶುಕ್ರವಾರ ನಡೆದಿದೆ.

ಕಡೂರು ತಾಲೂಕಿನ ಸೀತಾಪುರ ಗ್ರಾಮದ ಮಾನಸ (2) ಅಪಹರಣಕ್ಕೊಳಗಾದ ಮಗು. ಬಟ್ಟೆ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡುವಂತೆ ನಾಟಕವಾಡಿದ ಮಹಿಳೆ, ಪಕ್ಕದ ಎಣ್ಣೆ ಗಾಣದ ಅಂಗಡಿ ಮುಂದೆ ನಿಂತಿದ್ದ
ಮಗುವನ್ನು ಹೊತ್ತೊಯ್ದ ಮಹಿಳೆ,ಮಗು ಕಾಣಿಸದಂತೆ ಸೀರೆಯ ‌ ಸೆರಗು ಮುಚ್ಚಿಕೊಂಡು ತೆರಳಿದ್ದಾಳೆ ಎನ್ನಲಾಗಿದೆ.

ದೀಪಾವಳಿ ಹಬ್ಬಕ್ಕೆಂದು ಬಟ್ಟೆ ಖರೀದಿಗೆಂದು ರಾಘು ನಾಯಕ್ ದಂಪತಿ ಬಂದಿದ್ದರು. ಈ ವೇಳೆ ಮಗು ಮಾನಸ ಮತ್ತು ತಂದೆ ರಘು ನಾಯಕ್ ಎಣ್ಣೆ ಗಾಣದ ಅಂಗಡಿಗೆ ತೆರಳಿದ್ದರು. ಸಂದರ್ಭಕ್ಕಾಗಿ ಹೊಂಚು ಹಾಕುತ್ತಿದ್ದ ಮಹಿಳೆ, ಎಣ್ಣೆ ಗಾಣದ ಅಂಗಡಿ ಮುಂದೆ ನಿಂತಿದ್ದ ಮಗುವನ್ನು ಅಪಹರಿಸಿದ್ದಾಳೆ.

Kaduru Police ನಾಪತ್ತೆಯಾದ ಮಗಳಿಗಾಗಿ ತಂದೆ ರಘು ನಾಯ್ಕ್ ಹುಡುಕಾಟ ನಡೆಸಿದ್ದು, ಬಟ್ಟೆ ಅಂಗಡಿಯ ಮುಂದಿನ ಸಿಸಿ ಕ್ಯಾಮರಾದಲ್ಲಿ ಮಗುವಿನ ಕಿಡ್ನಾಪ್ ದೃಶ್ಯ ಸೆರೆಯಾಗಿದೆ.
ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿಗೆ ಶೋಧ ನಡೆದಿದೆ.

K.S.Eshwarappa ಬೊಮ್ಮಾಯಿ ಪುತ್ರನಿಗೆ ಟಿಕೆಟ್: ಕುಟುಂಬ ರಾಜಕಾರಣದ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ

0

K.S.Eshwarappa ಚನ್ನಪಟ್ಟಣದಲ್ಲಿ ಯೋಗೀಶ್ವರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವುದು ಹೊಸದಲ್ಲ. ಆದರೆ ಸಿದ್ದಾಂತವನ್ನೇ ಬಿಟ್ಟು ಹೋಗಿದ್ದು ಬೇಸರ ತರಿಸುತ್ತದೆ. ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ, ಸ್ವಜನ ಪಕ್ಷಪಾತ,. ಸಿದ್ದಾಂತವಿಲ್ಲದಂತೆ ರಾಜ್ಯ ರಾಜಕಾರಣ ನಡೆಯುತ್ತಿದೆ. ಇದಕ್ಕೆ ಯಡಿಯೂರಪ್ಪನವರನ್ನೇ ನೇರವಾಗಿ ದೂಷಿಸಲಾಗುತ್ತಿದೆ
ಶುಕ್ರವಾರ ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಅವರ ಪುತ್ರ ಸ್ಪರ್ಧೆಗೆ ಪ್ರತಿಕ್ರಿಯಿಸಿದ ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಯಾರಿಗೂ ನೈತಿಕತೆ ಇಲ್ಲದಂತಾಗಿದೆ. ಮೋದಿಗೆ ಅಪಮಾನವಾಗುವಂತೆ ರಾಜ್ಯದಲ್ಲಿ ನಡೆದುಕೊಳ್ಳಲಾಗುತ್ತಿದೆ. . ಕೆಲವು ನಾಯಕರು ನೇಪಥ್ಯಕ್ಕೆ ಹೋದಂತಾಗಿದೆ. ಆದರೆ ಪಕ್ಷ ಸಿದ್ದಾಂತವನ್ನು ಪರಿಪಾಲಿಸುವವರು ನೇಪಥ್ಯಕ್ಕೆ ಸರಿದಿಲ್ಲ. ಸಾವಿರಾರು ಜನ ನೋವು ಅನುಭವಿಸಿದ್ದಾರೆ. ನಾನು ಇದನ್ನು ಧಿಕ್ಕರಿಸಿ ಹೊರಗೆ ಬಂದೆ. ಪಕ್ಷದ ಹಿರಿಯರು ಇದನ್ನು ಸರಿಪಡಿಸಲಿದ್ದಾರೆ ಎಂದರು.
ಹಿಂದುತ್ವ, ಗೋಹತ್ಯೆ ನಿಷೇಧಕ್ಕೆ ಜನ ನಮಗೆ ಓಟು ಕೊಟ್ಟು ಅಧಿಕಾರಕ್ಕೆ ತಂದಿದ್ದಾರೆ. ಸಿದ್ದಾಂತದ ಮೇಲೆ ಅಧಿಕಾರವನ್ನು ಬಿಜೆಪಿ ನಡೆಸಿದೆ. ಕೆಲವರ ಹಿತಾಸಕ್ತಿಯಿಂದ ಪಕ್ಷ ಹಾಳಾಗಿದೆ. ಸರಿಯಾಗುವ ಭರವಸೆ ಇದೆ. ೭ ಜನ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಲಿದ್ದಾರೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೈತ್ರಾದೇವಿಯ ಬಗ್ಗೆ ಮಾತನಾಡಿದ ಹಾಗೆ ಇದು ಆಗಿದೆ ಎಂದರು.
ಇಬ್ಬರೂ ಕ್ಷಮೆ ಯಾಚಿಸಲಿ:
K.S.Eshwarappa ಸಚಿವ ಬೈರತಿ ಸುರೇಶ್ ಮೈತ್ರಾದೇವಿಯ ಸಾವಿನ ಬಗ್ಗೆ ಮಾತನಾಡಿರುವುದು ಮತ್ತು ಸಚಿವೆ ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ಅವರ ಪುತ್ರನ ಸಾವಿನ ಬಗ್ಗೆ ಮಾತನಾಡಿರುವುದು ಖಂಡನೀಯ. ಟೀಕೆ ಟಿಪ್ಪಣಿಗಳು ಸ್ವಾಭಾವಿಕ. ಸ್ವರ್ಗದಲ್ಲಿರುವ ತಾಯಿ ಮತ್ತು ಪುತ್ರನ ಬಗ್ಗೆ ಮಾತನಾಡಿರುವ ಬಗ್ಗೆ ಇಬ್ಬರೂ ಕ್ಷಮೆಯಾಚಿಸಲಿ ಎಂದು
ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದರು.
ನನ್ನ ಶ್ರೀಮತಿ ಮತ್ತು ಮೈತ್ರಾದೇವಿಯರು ಹಲವೆಡೆ ಜಂಟಿಯಾಗಿ ಕೆಲಸ ಮಾಡಿದ್ದಾರೆ. ಅವರ ಸಾವು ಆಕಸ್ಮಿಕವಾಗಿದೆ. ಭೈರತಿ ಅವರು ಶೋಭಾ ಕರಂದ್ಲಾಂಜೆ ಹೇಳಿಕೆಗೆ ಪ್ರತಿಕ್ರಿಯಿಸಲು ಮುಂದಾಗಿ ಮೈತ್ರಾದೇವಿಯ ಸಾವಿನ ಬಗ್ಗೆ ಮಾತನಾಡಿ ನೈತಿಕ ಅಧಃಪತನಕ್ಕೆ ಇಳಿದಿದ್ದಾರೆ ಎಂದರು.
ಇವರು ಟೀಕೆ ಮಾಡಿದ್ದಕ್ಕೆ ಶೋಭಾ ಕರದ್ಲಾಂಜೆ ಅವರು ಸಿದ್ದರಾಮಯ್ಯನವರ ಪುತ್ರನ ಸಾವಿನ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಇದನ್ನೂ ಖಂಡಿಸುವೆ. ರಾಜಕಾರಣ ಮಾಡುವ ರೀತಿ ಇದಲ್ಲ. ಇಬ್ಬರೂ ದಾರಿತಪ್ಪಿ ಮಾತನಾಡಿದ್ದಾರೆ. ಸತ್ತವರ ಹೆಸರಿನಲ್ಲಿ ರಾಜಕೀಯ ಬೇಡ ಎಂದರು.
ಪೇಜಾವರ ಶ್ರೀಗಳ ಬಗ್ಗೆ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಮಾತನಾಡಿದ್ದಾರೆ. ಸ್ವಾಮೀಜಿ ಬಗ್ಗೆ ಇವರಿಗೆ ಮಾತನಾಡುವ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಜಾತಿ
ಜನಗಣತಿ ಬಗ್ಗೆ ಇತರೆ ಸ್ವಾಮಿಗಳು ಮಾತನಾಡಿದ್ದಾರೆ. ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದರಲ್ಲದೆ, ಪೇಜಾವರ ಶ್ರೀಗಳು ರಾಮಮಂದಿರದ ಬಗ್ಗೆ ಮಾತನಾಡುತ್ತಾರೆ. ಜಾತಿಜನಗಣತಿ ಮಾತನಾಡುತ್ತಾರೆ. ಅವರ ಅಭಿಪ್ರಾಯ ವ್ಯಕ್ತಪ್ತಡಿಸಲು ಸ್ವತಂತ್ರರಲ್ಲವೇ? ಹರಿಪ್ರಸಾದ್ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕೆಂದು ಎಚ್ಚರಿಸಿದರು.
ಬ್ರಿಗೇಡ್ ಸ್ಥಾಪಿಸಿ ಈಶ್ವರಪ್ಪ ಹಿಂದಿನ ರೀತಿಯಲ್ಲಿ ಯೂಟರ್ನ್ ಹೊಡೆಯದಿರಲಿ ಎಂದು ಆಯನೂರು ಮಂಜುನಾಥ್ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಹಿಂದೆ ದೊಡ್ಡವರನ್ನು ಮನವೊಲಿಸುವಷ್ಟು ದೊಡ್ಡವನಾಗಿರಲಿಲ್ಲ. ಹಾಗಾಗಿ ಮಾತು ಮೀರಲಿಲ್ಲ. ಈಗ ಅದೇ ದೊಡ್ಡವರು ಅಡ್ಡಬಂದರೆ ಮನವೊಲಿಸುವ ಪ್ರಯತ್ನ ನಡೆಸುವೆ ಎಂದರು.

B.Y. Vijayendra ಇ.ತುಕಾರಾಂ ಅವರ ಸಂಸದ್ ಸದಸ್ಯತ್ವ ಅನರ್ಹಗೊಳಿಸಲು ಮನವಿ- ಬಿ.ವೈ.ವಿಜಯೇಂದ್ರ

0

B.Y. Vijayendra ಬಳ್ಳಾರಿಯ ಸಂಸದ ಇ.ತುಕಾರಾಂ ಅವರು ಎಲ್ಲ ಕಾನೂನನ್ನು ಗಾಳಿಗೆ ತೂರಿ ಅಕ್ರಮವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರನ್ನು ಅನರ್ಹಗೊಳಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದೇವೆ ಎಂದು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ದೆಹಲಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾನು, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಇವತ್ತು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದೇವೆ. ಅವರಿಗೆ ಇ.ತುಕಾರಾಂ ಅನರ್ಹತೆ ಸಂಬಂಧ ಮನವಿ ಸಲ್ಲಿಸಿದ್ದೇವೆ ಎಂದು ವಿವರಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಕುರಿತು ಸಾಕಷ್ಟು ಬಾರಿ ಚರ್ಚೆಗಳಾಗಿವೆ. ಬಿಜೆಪಿ, ಈ ನಿಗಮದ ಹಗರಣವನ್ನು ಮುಂದಿಟ್ಟು ಹೋರಾಟಗಳನ್ನು ನಡೆಸಿದೆ. ನಂತರ ತನಿಖೆ ಆಧಾರದಲ್ಲಿ ಕಳೆದ ತಿಂಗಳು ಇ.ಡಿ. ಪ್ರೆಸ್ ನೋಟನ್ನೂ ಬಿಡುಗಡೆ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಣವನ್ನು ಕಾಂಗ್ರೆಸ್ ಸರಕಾರ ಲೂಟಿ ಮಾಡಿದ್ದಾಗಿ ತಿಳಿಸಿದ್ದಾರೆ ಎಂದರು.
ಈ ಸಂಬಂಧ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 187 ಕೋಟಿ ಹಣವನ್ನು ಲೂಟಿ ಮಾಡಿದ ಕಾಂಗ್ರೆಸ್ ಸರಕಾರವು ಆ ಹಣವನ್ನು ದುರ್ಬಳಕೆ ಮಾಡಿಕೊಂಡಿತ್ತು. ಬಳ್ಳಾರಿ, ಇತರ ಲೋಕಸಭಾ ಕ್ಷೇತ್ರಕ್ಕೆ ಆ ಹಣವನ್ನು ಬಳಸಿದ್ದು ಬೆಳಕಿಗೆ ಬಂದಿದೆ ಎಂದು ಗಮನ ಸೆಳೆದರು.
ಸಂಡೂರು, ಚನ್ನಪಟ್ಟಣ, ಶಿಗ್ಗಾವಿ ಉಪ ಚುನಾವಣೆ ನಡೆಯುತ್ತಿದೆ. ಮಾದರಿ ನೀತಿಸಂಹಿತೆ ಅನುಷ್ಠಾನಗೊಂಡಿದೆ. ಇದರ ನಡುವೆಯೂ ರಾಜ್ಯ ಸರಕಾರವು ಅಕ್ರಮವಾಗಿ ಇವತ್ತು ಜಾಹೀರಾತುಗಳನ್ನು ನೀಡುವುದರ ಮೂಲಕ ಎಲ್ಲ ಮಾದರಿ ನೀತಿಸಂಹಿತೆಯನ್ನು ಗಾಳಿಗೆ ತೂರುತ್ತಿದೆ ಎಂದು ಆಕ್ಷೇಪಿಸಿದರು. ಈ ವಿಚಾರದಲ್ಲಿ ರಾಜ್ಯ ಸರಕಾರದ ವಿರುದ್ಧ ಕ್ರಮ ಜರುಗಿಸುವಂತೆ ನಾವು ಒತ್ತಾಯಿಸಿದ್ದೇವೆ ಎಂದರು.
B.Y. Vijayendra ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಾರೆ. ಸಂಡೂರಿನಲ್ಲಿ ಆದ ಅಕ್ರಮಗಳು, ಉಪ ಚುನಾವಣೆ ಸಂದರ್ಭದಲ್ಲಿ ಕಾನೂನನ್ನು ಗಾಳಿಗೆ ತೂರುತ್ತಿರುವುದನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ ಎಷ್ಟು ಗೌರವ ಕೊಡುತ್ತದೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು.
ಇ.ಡಿ.ಯು ಬಳ್ಳಾರಿ ಲೋಕಸಭಾ ಕ್ಷೇತ್ರದ ಅಕ್ರಮ ಕುರಿತು ತಿಳಿಸಿದೆ. ನಮಗಿರುವ ಮಾಹಿತಿ ಪ್ರಕಾರ ಬಳ್ಳಾರಿ, ರಾಯಚೂರು, ಕೊಪ್ಪಳದಲ್ಲೂ ವಾಲ್ಮೀಕಿ ನಿಗಮದ ಅವ್ಯವಹಾರದ ಹಣ ದುರ್ಬಳಕೆ ಆಗಿದೆ ಎಂಬ ವಿಚಾರಗಳು ಗಮನಕ್ಕೆ ಬರುತ್ತಿವೆ. ಆ ಕ್ಷೇತ್ರಗಳಲ್ಲಿ ಗೆದ್ದವರ ಅನರ್ಹತೆ ಕುರಿತು ಮನವಿ ವಿಷಯದಲ್ಲಿ ಮುಂದಿನ ದಿನಗಳಲ್ಲಿ ಗಮನ ಹರಿಸುತ್ತೇವೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಮುಂದಿನ ದಿನಗಳಲ್ಲಿ ಇತರ ಕ್ಷೇತ್ರಗಳ ವಿಚಾರವೂ ಬಹಿರಂಗ ಆಗಲಿದೆ. ಇವತ್ತು ನಾವು ಬಳ್ಳಾರಿ ಲೋಕಸಭಾ ಕ್ಷೇತ್ರದ ವಿಷಯದಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದೇವೆ. ತುಕಾರಾಂ ಅವರನ್ನು ಅನರ್ಹಗೊಳಿಸಲು ಕೋರಿದ್ದೇವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಚನ್ನಪಟ್ಟಣದಲ್ಲಿ ಅಭ್ಯರ್ಥಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರೇ ಸ್ಪರ್ಧೆ ಮಾಡಬೇಕು; ಅವರಿಗೆ ಅವಕಾಶ ಸಿಗಬೇಕು ಎಂದು ಆಶಿಸುವುದಾಗಿ ಹೇಳಿದರು. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಇದ್ದರು.

College of Agriculture Shivamogga ನವೆಂಬರ್ 6 ರಿಂದ ಬೇಕರಿ ಉತ್ಪನ್ನ ತಯಾರಿಕೆ ಕೌಶಲ್ಯ ತರಬೇತಿ ಆರಂಭ.‌ ಆಸಕ್ತರಿಗೆ ಮಾಹಿತಿ

0

College of Agriculture Shivamogga ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದ ಬೇಕರಿ ಘಟಕದಲ್ಲಿ ನವೆಂಬರ್ 6.ರಿಂದ ಡಿ.5 ರವರೆಗೆ ಒಂದು ತಿಂಗಳು ವಿವಿಧ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿಲಾಗುತ್ತಿದೆ.

ತರಬೇತಿಯಲ್ಲಿ ಬೇಕರಿ ಉತ್ಪನ್ನಗಳಾದ ಬೆಣ್ಣೆ ಬಿಸ್ಕತ್, ಕೋಕೋನಟ್ ಕುಕಿಸ್, ಕೋಕೋನಟ್ ಬಿಸ್ಕತ್, ಮಸಾಲ ಬಿಸ್ಕತ್, ಮೆಲ್ಟಿಂಗ್ ಮೊಮೆಂಟ್ ಬಿಸ್ಕತ್, ಪೀನಟ್ ಕುಕಿಸ್, ವೆನಿಲಾ ಬಟನ್, ಬನಾನಾ ಕೇಕ್, ಕೋಕೊನಟ್ ಕ್ಯಾಸಲ್ಸ, ಫ್ರೂಟ್ ಕೇಕ್, ಸ್ಪಾಂಜ್ ಕೇಕ್, ಆರೆಂಜ್ ಕೇಕ್, ಬ್ಲಾಕ್ ಫಾರೆಸ್ಟ್ ಕೇಕ್, ಸ್ವಿಸ್ ರೋಲ್, ಜೆಲ್ ಕೇಕ್, ಬಟರ್ ಐಸಿಂಗ್, ಮಸಾಲಾ ಡೋನಟ್, ಮಿಲ್ಕ್ ಬ್ರೆಡ್, ಬ್ರೌನಬ್ರೆಡ್, ಫಿಜ್ಜಾ, ಪಪ್ ಪೇಸ್ಟ್ರೀ, ಡ್ಯಾನಿಷ್ ಪೇಸ್ಟ್ರೀ, ದಿಲ್ ಪಸಂದ್, ಬಾಂಬೆ ಕಾರ ಹಾಗೂ ಇತರೆ ಉತ್ಪನ್ನಗಳ ತಯಾರಿಕೆಯ ಬಗ್ಗೆ ತರಬೇತಿ ನೀಡಲಾಗುವುದು.

College of Agriculture Shivamogga ಈ ತರಬೇತಿಯಲ್ಲಿ ಭಾಗವಹಿಸಲು ಇಚ್ಚಿಸುವವರು ನ. 05 ರೊಳಗಾಗಿ ಡಾ. ಜಯಶ್ರೀ ಎಸ್.-9449187763, ಜಯಶಂಕರ-9686555897 ಇವರುಗಳನ್ನು ದೂರವಾಣಿ ಮೂಲಕ ಅಥವಾ ಖುದ್ದಾಗಿ ಸಂಪರ್ಕಿಸಿ ಹೆಸರನ್ನು ನೊಂದಾಯಿಸಿಕೊಳ್ಳುವುದು. ತರಬೇತಿ ಶುಲ್ಕ ರೂ. 3500/- ಆಗಿರುತ್ತದೆ ಎಂದು ತಿಳಿಸಿದೆ.

Department of Health and Family Welfare ಪರಿಸರ ಸಮತೋಲನಕ್ಕೆ ಗಿಡಮರಗಳು ಅವಶ್ಯ- ಪ್ರೊ.ಕುಮಾರಸ್ವಾಮಿ

0

Department of Health and Family Welfare ಮನುಷ್ಯನ ದುರಾಸೆಯಿಂದ ಪರಿಸರ ವಿನಾಶದತ್ತ ಸಾಗುತ್ತಿದ್ದು, ನಗರೀಕರಣದಿಂದ ಗಿಡ ಮರಗಳನ್ನು ನೆಡಲು ಸ್ಥಳವೇ ಇಲ್ಲವಾಗಿದೆ. ಪರಿಸರ ಸಮತೋಲನಕ್ಕೆ ಗಿಡಮರಗಳು ಅತ್ಯಂತ ಅವಶ್ಯಕ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಬಿ.ಎಂ.ಕುಮಾರಸ್ವಾಮಿ ಹೇಳಿದರು.

ಜಿಲ್ಲಾ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವೈದ್ಯರ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಹವಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ಬಗ್ಗೆ” ಮಾತನಾಡಿದರು.
ವಾಯುಮಾಲಿನ್ಯದಿಂದ ಮನುಷ್ಯರಿಗೆ ಹೊಸ ಹೊಸ ರೀತಿ ಕಾಯಿಲೆಗಳು ಬರುತ್ತಿವೆ. ಪರಿಸರ ಸಂರಕ್ಷಣೆ ಮಾಡದಿರುವ ಕಾರಣ ಹವಮಾನದಲ್ಲಿ ಬದಲಾವಣೆ ಆಗುತ್ತಿದ್ದು, ಯಾವಾಗ ಬೇಕಾದರೂ ಮಳೆ, ಬಿಸಿಲು ಎಂಬ ವಾತಾವರಣ ಸೃಷ್ಟಿಯಾಗಿದೆ. ಪ್ರಕೃತಿ ಅಸಮತೋಲನದಿಂದ ಬೆಳೆಯಲ್ಲಿ ಏರುಪೇರಾಗುತ್ತಿದೆ ಎಂದು ತಿಳಿಸಿದರು.

Department of Health and Family Welfare ಅತಿಯಾದ ರಾಸಾಯನಿಕ ಬಳಕೆಯಿಂದ ಪ್ರಕೃತಿ ವಿನಾಶದಂಚಿಗೆ ಸಾಗುತ್ತಿದೆ. ಹವಮಾನ ವೈಪರೀತ್ಯವು ಬಹುಮುಖ್ಯ ಕಾರಣವಾಗಿದೆ. ಮನುಷ್ಯನ ಜೀವಿತ ಅವಧಿಯು ಕುಂಠಿತವಾಗುತ್ತಿದೆ. ಈಗಲೇ ನಾವೆಲ್ಲರು ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನೋಡಲ್ ಅಧಿಕಾರಿ ಡಾ. ಗುಡದಪ್ಪ ಕಸಬಿ ಮಾತನಾಡಿ, ವೈದ್ಯರ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ತರಬೇತಿ ನೀಡುವ ಮೂಲಕ ಜಿಲ್ಲೆಯ ಜನರಿಗೆ ಸಮಗ್ರ ಮಾಹಿತಿ ತಲುಪಿಸುವ ಪ್ರಯತ್ನ ಇದಾಗಿದೆ. ಆರೋಗ್ಯ, ಪರಿಸರ ಸಂರಕ್ಷಣೆ, ಹವಮಾನ ವೈಪರೀತ್ಯದ ಬಗ್ಗೆ ಜನರು ತಿಳವಳಿಕೆ ಹೊಂದಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು. ನಿವೃತ್ತ ಪ್ರಾಚಾರ್ಯ ಪ್ರೊ. ಬಿ.ಎಂ.ಕುಮಾರಸ್ವಾಮಿ ಅವರನ್ನು ಅಭಿನಂದಿಸಲಾಯಿತು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್.ಕೆ.ಎಸ್, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯೆ ಡಾ. ಶಮಾ ಬೇಗಂ, ಜಿಲ್ಲಾ ಲೆಪ್ರಸಿ ಅಧಿಕಾರಿ ಡಾ. ಕಿರಣ್ ಎಸ್.ಕೆ, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್, ಡಾ ಸುರೇಶ್, ಡಾ. ಚಂದ್ರಶೇಖರ್, ಡಾ. ಅನಿಕೇತನ್, ಡಾ. ನವೀದ್ ಖಾನ್, ಜಿಲ್ಲಾ ಮಲೇರಿಯಾ ಕಚೇರಿ ಹಿರಿಯ ಆರೋಗ್ಯ ಸಹಾಯಕರಾದ ನಾರಾಯಣ್, ಯಜುರ್ವೇದ, ತಿಪ್ಪೆಸ್ವಾಮಿ, ಧೀರೆಂದ್ರ ಉಪಸ್ಥಿತರಿದ್ದರು.