Thursday, March 26, 2026
Thursday, March 26, 2026
Home Blog Page 521

Dr. G. Parameshwar ಉಪ ಚುನಾವಣೆ ಕಾಂಗ್ರೆಸ್ ಗೇ ಗೆಲುವು. ವಕ್ಫ್ ಬೋರ್ಡ್ ಆಸ್ತಿ ವಿವಾದ ಪರಿಶೀಲನೆ, ಬೆಂಗಳೂರಿಗೆ ಶರಾವತಿ ಪ್ರಸ್ತಾಪ ಇಲ್ಲ- ಗೃಹಸಚಿವ ಡಾ.ಜಿ.ಪರಮೇಶ್ವರ್

0

Dr. G. Parameshwar ಮುಂಬರುವ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ನಮ್ಮ ಹೈಕಮಾಂಡ್ ಅಭ್ಯರ್ಥಿಗಳನ್ನು ಹಾಕಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಬಿಜೆಪಿ- ಜೆಡಿಎಸ್ ಎನ್​ಡಿಎ ಅಂತ ಒಂದಾಗಿದ್ದರೂ ಸಹ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯ ಮೂಲಕ ಜನಪರ ಕೆಲಸ ಮಾಡುತ್ತಿದೆ ಎಂದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿದರು.
ಶಿಗ್ಗಾವಿಯಲ್ಲಿ ಕಾಂಗ್ರೆಸ್ ಬಂಡಾಯದ ವಿಚಾರವಾಗಿ ಮಾತನಾಡಿ, ಶಿಗ್ಗಾವಿಯಲ್ಲಿ ಖಾದ್ರಿ ಅವರು ಹಿಂದೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು‌. ಈಗ ಅವರ ಮನವೊಲಿಸುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್​ನಲ್ಲಿ ಯಾವುದೇ ಗೊಂದಲವಿಲ್ಲ. ಶಿಗ್ಗಾವಿಯಲ್ಲೂ ಗೆಲ್ಲುತ್ತೇವೆ ಎಂದು ಹೇಳಿದರು.

ವಿಜಯಪುರದಲ್ಲಿ ವಕ್ಫ್ ಬೋರ್ಡ್ ರೈತರಿಗೆ ನೀಡುವ ನೋಟಿಸ್ ಕುರಿತು ರಾಜ್ಯ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಸಚಿವರು ತಿಳಿಸಿದರು.
Dr. G. Parameshwar ನೂತನ ಪೊಲೀಸ್ ಸಭಾಂಗಣ ಉದ್ಘಾಟಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ್
ಸಾಮಾಜಿಕ, ಆರ್ಥಿಕ ಗಣತಿ ಸಂಪುಟದಲ್ಲಿ ಮಂಡನೆ : ಆರ್ಥಿಕ, ಸಾಮಾಜಿಕ ಗಣತಿಯ ವರದಿಯನ್ನು ಮುಂದಿನ ಸಂಪುಟದಲ್ಲಿ ಮಂಡನೆ ಮಾಡಲಿದ್ದೇವೆ. ಸಂಪುಟದಲ್ಲಿ ವರದಿ ಮಂಡನೆಯಾದ ನಂತರ ಮುಂದೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ವಿಮಾನ ನಿಲ್ದಾಣ ತಜ್ಞರ ವರದಿಯೇ ಅಂತಿಮ :

ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣ ಇನ್ನೂ ಅಂತಿಮವಾಗಿಲ್ಲ. ವರದಿಯ ಆಧಾರದ ಮೇಲೆ ತೀರ್ಮಾನವಾಗಲಿದೆ. ಈ ಕುರಿತು ಡಿಜಿಸಿಎ ರವರು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ನಾನು ತುಮಕೂರಿನಲ್ಲಿ ಮಾಡಬೇಕೆಂದು ಹೇಳುತ್ತೇನೆ. ಆದರೆ ತಜ್ಞರ ವರದಿಯೇ ಅಂತಿಮವಾಗಲಿದೆ ಎಂದು ಹೇಳಿದರು.

ಬೆಂಗಳೂರಿಗೆ ಶರಾವತಿ ನೀರು ಪ್ರಸ್ತಾಪ ಇಲ್ಲ :

ಶರಾವತಿ ನದಿ ನೀರು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಕುರಿತು ಹಿಂದೆ ನಾನು ಡಿಸಿಎಂ ಆದಾಗ ಚರ್ಚೆ ನಡೆಸಿದ್ದೆ. ಆದರೆ, ಅದರ ಕುರಿತು ಇನ್ನೂ ಅಂತಿಮವಾದ ತೀರ್ಮಾನವಾಗಿಲ್ಲ‌. ಅಂತಹ ಪ್ರಸ್ತಾಪ ಇನ್ನೂ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Akhil Bharath Sahitya Parishad ಶಿವಮೊಗ್ಗ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಕವಿಗೋಷ್ಠಿಗೆ ಕವಿತೆಗಳಿಗೆ ಆಹ್ವಾನ

0

Akhil Bharath Sahitya Parishad ಬರುವ ನವೆಂಬರ್ “ರಾಜ್ಯೋತ್ಸವ’ ನಮ್ಮೆಲ್ಲರ ಕನ್ನಡ ಅಭಿಮಾನ ಮತ್ತು ಪ್ರೀತಿಯ ತಿಂಗಳು.ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು. ಶಿವಮೊಗ್ಗ ಜಿಲ್ಲಾ  ಶಾಖೆಯು ಕವಿತೆಗಳನ್ನ  ಆಹ್ವಾನಿಸಿದೆ. ವಿಷಯ:
ಕನ್ನಡ ನಾಡು,ನುಡಿ ಅಭಿಮಾನ,ಪ್ರೀತಿ
ಇವುಗಳನ್ನ ಕುರಿತೇ ಕವಿತೆಗಳನ್ನ ಬರೆಯಲು ಕೋರಿಕೆ. ಕವಿತೆಗಳನ್ನ ಆಯ್ಕೆ ಮಂಡಳಿಗೆ ತಲುಪಿಸಲಾಗುತ್ತದೆ. ಬೇರೆ ವಿಷಯವಿದ್ದರೆ ಪರಿಗಣಿಸಲಾಗುವುದಿಲ್ಲ.
ಕನಿಷ್ಠ ಮೂರು ಕವಿತೆಗಳನ್ನ ಕಳಿಸಬೇಕು. ಒಂದನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆದಾರರ ತೀರ್ಮಾನವೇ ಅಂತಿಮ. ಕವಿತೆಯ ಸಂಗಡ ತಮ್ಮ ಮೊ.ನಂ. ಅವಶ್ಯ ನಮೂದಿಸಬೇಕು. ಒಬ್ಬರಿಗೆ ಒಂದು ಕವಿತೆ ವಾಚಿಸಲು ಅಥವಾ ಹಾಡಲು ಅವಕಾಶ. ಆಯ್ಕೆಯಾದ ಕವಿತೆಗಳನ್ನ ರಚಿಸಿದ ಕವಿ/ ಕವಯತ್ರಿಗಳಿಗೆ ಆಂಮಂತ್ರಿಸಲಾಗುತ್ತದೆ. ಕವಿಗೋಷ್ಠಿಯ ದಿನಾಂಕದಂದು  ಕವಿ/ ಕವಯಿತ್ರಿ  ಆಗಮಿಸಲು ತಿಳಿಸಲಾಗುತ್ತದೆ. Akhil Bharath Sahitya Parishad ಕವಿತೆಗಳು ನಮಗೆ ಅಕ್ಟೋಬರ್ 30 ರ ಒಳಗೆ ತಲುಪಬೇಕು. ಕವಿತೆಗಳನ್ನು
ಶ್ರೀಸುರೇಶ ಭಟ್.
ಕಾರ್ಯದರ್ಶಿ.
ಅಭಾಸಾಪ.
ಶಿವಮೊಗ್ಗ
ಮೊ.ನಂ.
+91 94483 03740
ಇಲ್ಲಿಗೆ
ವಾಟ್ಸ್ ಆ್ಯಪ್ ಮೂಲಕ ಕಳಿಸಲು ಪ್ರಾರ್ಥನೆ.

S.Bangarappa ಬಂಗಾರಪ್ಪ, ದೀನದಲಿತರ ಆಶಾಕಿರಣವಾಗಿದ್ದರು- ಎಸ್.ಚಿನ್ನಪ್ಪ

0

S.Bangarappa ಬಂಗಾರಪ್ಪನವರು ತಮ್ಮ ಅಧಿಕಾರದ ಅವಧಿಯಲ್ಲಿ ದೀನ ದಲಿತರಿಗೆ ಬಡವರಿಗೆ ಆಶಾಕಿರಣವಾಗಿ ನೂರಾರು ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ಜನಮಾನಸವನ್ನು ತಲುಪಿದ್ದಾರೆ ಅದರಲ್ಲೂ ಅವರ ಕೊಡುಗೆ ಶಿವಮೊಗ್ಗ ಜಿಲ್ಲೆಗೆ ಅತ್ಯಂತ ವಿಶೇಷ ಪಾತ್ರವಹಿಸಿದೆ ಎಂದು ಸ್ನೇಹಮಹಿ ಸಂಘದ ಅಧ್ಯಕ್ಷ ಎಸ್ ಚಿನ್ನಪ್ಪ ನುಡಿದರು ಅವರು ಇಂದು ಬೆಳಿಗ್ಗೆ ನಗರ ಜಿಲ್ಲಾ ಮೆಗಾನ್ ಆಸ್ಪತ್ರೆಯಲ್ಲಿ ಜೀವನದ ಎಸ್ ಬಂಗಾರಪ್ಪನವರ 92ನೇ ಜನ್ಮದಿನ ಆಚರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಬಡವರಿಗೆ ಹಣ್ಣು ಹಾಲು ಬ್ರೆಡ್ ವಿತರಣೆ ಹಾಗೂ ವೈದ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು ಇದುವರೆಗೂ ಸ್ನೇಹಮಯ ಸಂಘದ ವತಿಯಿಂದ ರಾಜ ರಾಷ್ಟ್ರಮಟ್ಟದ ಟೂರ್ನಮೆಂಟ್ ಗಳನ್ನ ಮಾಡುವುದರ ಮುಖಾಂತರ ಹಾಗೂ ರಕ್ತದಾನ ಮತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವುದರ ಮುಖಾಂತರ ಬಂಗಾರಪ್ಪಜಿಯವರ ಜನ್ಮದಿನವನ್ನು ಆಚರಿಸಲಾಗುತ್ತಿದೆ ಇದೇ ರೀತಿ ಶಿವಮೊಗ್ಗದಲ್ಲಿ ಹಲವಾರು ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಗಿದೆ ಎಂದು ನುಡಿದರು ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಜಿ ವಿಜಯಕುಮಾರ್ ಮಾತನಾಡುತ್ತ ಬಂಗಾರಪ್ಪನವರು ಬಡವರ ಆಶಾಕಿರಣ ಜಿಲ್ಲಾ ಮೇಘನಾ ಆಸ್ಪತ್ರೆಗೆ ಅವರ ಕೊಡುಗೆ ಅಪಾರ .ಅಭಿವೃದ್ಧಿ ಹರಿಕಾರರಾದ ಆಯಸ್ಸು ಬಂಗಾರಪ್ಪನವರು ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿದಿದ್ದಾರೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮೆಗಾನ್ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಸಿದ್ದನಗೌಡ ಪಾಟೀಲ್ ಡಾಕ್ಟರ್ ತಿಮ್ಮಪ್ಪ. ಡಾಕ್ಟರ್ ವಿರೂಪಾಕ್ಷಪ್ಪ ಇವರನ್ನು ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.

S.Bangarappa ಇದೇ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನ ಕುಮಾರ್ ಬಂಗಾರಪ್ಪನವರ ಸಾಧನೆ ಅವರ ಚಿಂತನೆ ಅವರು ಮಾಡಿದ
ಸೇವೆ ಸತ್ ರ್ಯಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನುಡಿದರು ಸಮಾರಂಭದಲ್ಲಿ ಉಪಾಧ್ಯಕ್ಷ ಜೀ ವಿಜಯಕುಮಾರ್ ಮಾತನಾಡಿ ಸ್ನೇಹ ಮಹಿ ಸಂಘ ನಡೆದುಕೊಂಡು ಬಂದ ದಾರಿ ಬಗ್ಗೆ ಹಾಗೂ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಸಮಾರಂಭದಲ್ಲಿ ಕಲ ಗೋಡು ರತ್ನಾಕರ್. ಶಾಮ್ ಪ್ರಸಾದ್ ಶರತ್ ಮರಿಯಪ್ಪ ಹಾಗೂ ಸ್ನೇಹ ಮಹಿ ಸಂಘದ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು

Dr. G. Parameshwar ಕುಂಸಿ ಪೊಲೀಸ್ ಕಚೇರಿಗೆ ಗೃಹ ಸಚಿವರ ದಿಢೀರ್ ಭೇಟಿ. ಕಡತಗಳ ಪರಿಶೀಲನೆ. ಸಿಬ್ಬಂದಿಗಳಿಗೆ ಸಲಹೆ-ಸೂಚನೆ.

0

Dr. G. Parameshwar ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಅ.26 ರ ಶನಿವಾರ ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ನಡೆಯಿತು.
ಶಿವಮೊಗ್ಗ ನಗರದಲ್ಲಿ ಪೂರ್ವ ನಿರ್ಧರಿತ ಕಾರ್ಯಕ್ರಮಗಳಲ್ಲಿ ಭಾಗಿಯಾದ ಸಚಿವರು, ಸಾಗರಕ್ಕೆ ತೆರಳುವ ಮಾರ್ಗಮಧ್ಯೆ ಕುಂಸಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿದ್ದರು.
ಈ ವೇಳೆ ಠಾಣೆಯ ವಿವಿಧ ವಿಭಾಗಗಳಿಗೆ ತೆರಳಿ ವೀಕ್ಷಿಸಿದರು. ಕಡತಗಳ ಪರಿಶೀಲನೆ ನಡೆಸಿದರು. ಠಾಣೆಯಲ್ಲಿನ ಕೆಲಸಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಪೊಲೀಸರಿಗೆ ಕೆಲ ಸಲಹೆ – ಸೂಚನೆಗಳನ್ನು ಗೃಹ ಸಚಿವರು ನೀಡಿದರು.
Dr. G. Parameshwar ಈ ಸಂದರ್ಭದಲ್ಲಿ ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಬಲ್ಕಿಶ್ ಭಾನು, ಪೂರ್ವ ವಲಯ ಐಜಿಪಿ ರಮೇಶ್ ಬಾನೋತ್, ಎಸ್ಪಿ ಮಿಥುನ್ ಕುಮಾರ್, ಇನ್ಸ್’ಪೆಕ್ಟರ್ ದೀಪಕ್, ಗೃಹ ಸಚಿವರ ಆಪ್ತ ಸಹಾಯಕರಾದ ಕೆಎಎಸ್ ಅಧಿಕಾರಿ ಚನ್ನಬಸಪ್ಪ ಮೊದಲಾದವರಿದ್ದರು.

Dr. Dhananjaya Sarji ವೈದ್ಯರು ರೋಗ ಬಂದಾಗ ಚಿಕಿತ್ಸೆ ನೀಡುತ್ತಾರೆ. ಅಂಗನವಾಡಿ ಕಾರ್ಯಕರ್ತೆಯರು ರೋಗ ಬರುವ ಮುನ್ನವೇ ಉಪಚರಿಸುತ್ತಾರೆ- ಡಾ.ಧನಂಜಯ ಅರ್ಜಿ

0

Dr. Dhananjaya Sarji ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ವೈದ್ಯರಾಗಿ, ಚಿಕ್ಕ ಮಕ್ಕಳ ತಾಯಂದಿರಾಗಿ ಸೇವೆ ಒದಗಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಅವರ ಸೇವೆಯನ್ನು ಶ್ಲಾಘಿಸಿದರು.

 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಆರೋಗ್ಯ, ದೈಹಿಕ, ಮಾನಸಿಕ ಬೆಳವಣಿಗೆ, ಪಾಲನೆ-ಪೋಷಣೆ ಹಾಗೂ ಮಹಿಳೆಯರ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ ಕುರಿತು ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ಏರ್ಪಡಿಸಲಾಗಿದ್ದ ವರ್ಚುವಲ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

 ವೈದ್ಯರು ಜನರಿಗೆ ರೋಗ ಬಂದ ಮೇಲೆ ಚಿಕಿತ್ಸೆ ನೀಡುತ್ತಾರೆ. ಆದರೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ರೋಗ ಬರುವ ಮುನ್ನವೇ ಮಹಿಳೆಯರು-ಮಕ್ಕಳನ್ನು ಉಪಚರಿಸಿ ರೋಗ ಬಾರದಂತೆ ತಡೆಯುತ್ತಾರೆ. ಇವರು ನಿಜವಾದ ಸಮಾಜದ ವೈದ್ಯರು ಮತ್ತು ಸರ್ಕಾರ ಹಾಗೂ ಜನರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ವೈದ್ಯರು ಮಹಿಳೆಯರು-ಮಕ್ಕಳಿಗೆ ಅಗತ್ಯವಾದ ಪಾಲನೆ-ಪೋಷಣೆ, ಪೌಷ್ಟಿಕತೆ, ಆರೋಗ್ಯ ನಿರ್ವಹಣೆ ಬಗ್ಗೆ ತಿಳಿಯುವುದು ಅತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಈ ತರಬೇತಿಯನ್ನು ಆಯೋಜಿಸಲಾಗಿದೆ ಎಂದರು.

 ಪ್ರತಿ ನಿಮಿಷಕ್ಕೆ 10 ಲಕ್ಷ ಪ್ಲಾಸ್ಟಿಕ್ ನೀರಿನ ಬಾಟಲ್ ಮಾರಾಟವಾಗುತ್ತಿದೆ. ನಾವು ಪ್ರತಿಯೊಬ್ಬರು 1 ವರ್ಷಕ್ಕೆ 1 ಎಟಿಎಂ ಕಾರ್ಡ್ನಷ್ಟು ಪ್ಲಾಸ್ಟಿಕ್ ಸೇವನೆ ಮಾಡುತ್ತಿದ್ದೇವೆ. ಎಲ್ಲೆಡೆ ಪ್ಲಾಸ್ಟಿಕ್‌ಮಯವಾಗಿದ್ದು ಇದನ್ನು ನಿಯಂತ್ರಿಸಬೇಕಿದೆ. ಪ್ರತಿ ವರ್ಷ ಕೇವಲ ಟಿಶ್ಯೂ ತಯಾರಿಸಲು 27 ಸಾವಿರ ಮರ ಮತ್ತು ಮನೆ ಕಟ್ಟಲು 3.36 ಲಕ್ಷ ಮರಗಳನ್ನು ಕಡಿಯಲಾಗುತ್ತಿದೆ. ಒಂದು ದೊಡ್ಡ ಮರ 10 ಜನರಿಗೆ ಆಮ್ಲಜನಕ ಒದಗಿಸುತ್ತದೆ. ಮಕ್ಕಳಿಗೆ ಗಿಡಗಳನ್ನು ಬೆಳೆಸುವುದನ್ನು ಕಲಿಸಬೇಕು. ಪರಿಸರ ಪ್ರಜ್ಞೆ ಬಿತ್ತಬೇಕು ಎಂದು ವಿಧಾನ ಪರಿಷತ್ ಶಾಸಕರಾದ
 ಡಾ.ಧನಂಜಯ ಸರ್ಜಿ ಅವರು ತಿಳಿಸಿದರು.

 ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ನಾವೆಲ್ಲ ಶ್ರಮಿಸಬೇಕು. ಆದ್ದರಿಂದ ಅವರು ಚಿಕ್ಕವರಾಗಿದ್ದಾಗಿನಿಂದ ಉತ್ತಮ ಅಡಿಪಾಯ ಅವರಲ್ಲಿ ಹಾಕಬೇಕು. 3 ರಿಂದ 6 ವರ್ಷದ ಮಕ್ಕಳನ್ನು ಸದೃಢವಾಗಿ ತಯಾರು ಮಾಡಬೇಕು. ನಿದ್ರೆಯಿಂದ ರೋಗ ಗುಣಪಡಿಸಬಹುದಾಗಿದ್ದು, ಉತ್ತಮ ನಿದ್ರೆ ಮಾಡಲು ಮಕ್ಕಳಿಗೆ ಅವಕಾಶ ನೀಡಬೇಕು.
 ಮಕ್ಕಳಲ್ಲಿ ನಾವು ಮುಖ್ಯವಾಗಿ ಆತ್ಮವಿಶ್ವಾಸವನ್ನು ಬೆಳೆಸಬೇಕು. ಎದ್ದು ನಿಂತು ಪ್ರಶ್ನಿಸುವುದನ್ನು ಉತ್ತೇಜಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಬೇಕು. ಧನಾತ್ಮಕ ಸಲಹೆಗಳನ್ನು ನೀಡತ್ತಾ ಹೋಗಬೇಕು. ಅತಿ ಮುದ್ದಿನಿಂದ ಕೇಳಿದ್ದಕ್ಕೆಲ್ಲ ಯೆಸ್ ಎನ್ನಬಾರದು, ಹಣದ ಮತ್ತು ಹಸಿವಿನ ಮಹತ್ವ ತಿಳಿಸಬೇಕು, ಅವರು ಆಯ್ಕೆ ಮಾಡುವುದಕ್ಕೆ ಅವಕಾಶ ನೀಡಬೇಕು, ಸೇವಾ ಮನೋಭಾವ ಬೆಳೆಸಬೇಕು. ಟಿವಿ ಮೊಬೈಲ್‌ನಿಂದ ಅವರು ಹೊರಬೇಕೆಂದರೆ ಮೊದಲು ಪೋಷಕರು ಅದರಿಂದ ದೂರವಿರಬೇಕು. ಉತ್ತಮ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ ನೀಡಬೇಕು. ಬಂಡೆಯಿಂದ ಉತ್ತಮ ಶಿಲ್ಪ ರೂಪುಗೊಳ್ಳಲು ಪೋಷಕರು, ಗುರುಗಳು ಶ್ರಮಿಸಬೇಕು ಎಂದರು.
ಅಂಗನವಾಡಿ ಕಾರ್ಯಕರ್ತೆಯರ ಪ್ರಶ್ನೆಗಳಿಗೆ ಉತ್ತರಿಸಿ ಸಂವಾದ ನಡೆಸಿದರು.

Dr. Dhananjaya Sarji  ಆಯುಷ್ ಇಲಾಖೆಯ ಡಾ.ಜ್ಯೋತಿ ಲಕ್ಷ್ಮಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ದಿನ ನಿತ್ಯ ತಮ್ಮ ವೈಯಕ್ತಿಕ, ಸಾಂಸರಿಕ ಮತ್ತು ಅಂಗನವಾಡಿ ಕೆಲಸಗಳನ್ನು ನಿರ್ವಹಿಸಬೇಕಿದ್ದು ಮೂರು ದೋಣಿಗಳನ್ನು ನಡೆಸುವ ನಾವಿಕರಾಗಿರುತ್ತಾರೆ. ಹೆಣ್ಣುಮಕ್ಕಳ ಪೌಷ್ಟಿಕತೆ ನೋಡಿಕೊಳ್ಳುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹೆಣ್ಣುಮಕ್ಕಳ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರವನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದ ಅವರು ಗರ್ಭಾವಸ್ಥೆಯ ವಿವಿಧ ಸ್ತರಗಳು, ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಬೇಕಾದ ಪೌಷ್ಟಿಕ ಆಹಾರ, ದಿನಚರಿ, ವ್ಯಾಯಾಮ, ಪ್ರಸವದ ಮುನ್ನೆಚ್ಚರಿಕೆ, ಎದೆಹಾಲು ಉತ್ಪಾದನೆ ಕಡೆ ಗಮನ, ಬಾಣಂತನದಲ್ಲಿ ಆಯುರ್ವೇದದ ಪಾತ್ರ ಕುರಿತು ವಿವರಿಸಿದರು.

 ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ಬಿ ಹೆಚ್ ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಿ.ಪಂ ಸಿಇಓ ಮಾರ್ಗದರ್ಶನದಲ್ಲಿ ಇಂದು ಜಿಲ್ಲೆಯ ವಿಡಿಯೋ ಕಾನ್ಫರೆನ್ಸ್ಗೆ ಅವಕಾಶವಿರುವ ಗ್ರಾ.ಪಂ, ತಾಲ್ಲೂಕು ಕಚೇರಿ ಸೇರಿದಂತೆ 44 ಕೇಂದ್ರಗಳಿAದ 2400 ಅಂಗನವಾಡಿ ಕಾರ್ಯಕರ್ತೆಯರು, 80 ಮೇಲ್ವಿಚಾರಕರಿಗೆ ವರ್ಚುವಲ್ ಮೂಲಕ ತರಬೇತಿ ನೀಡಲಾಗುತ್ತಿದೆ ಎಂದರು.
 
ವೇದಿಕೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಿಂಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಸಿಡಿಪಿಓ ಗಳು, ಇತರೆ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

Satish Sail ಬೇಲೇಕೇರಿ ಅದಿರು‌ ನಾಪತ್ತೆ ಕೇಸ್. ಶಾಸಕ ಸತೀಶ್ ಸೈಲ್ ದೋಷಿ‌. ಕೋರ್ಟ್ ತೀರ್ಪಿನ ಹಿನ್ನೆಲೆ ಶಾಸಕ ಸ್ಥಾನಕ್ಕೆ ಕುತ್ತು?

0

Satish Sail ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ-ಅಂಕೋಲಾದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ವಾದ-ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಅಕ್ಟೋಬರ್​ 24 ರಂದು ಶಾಸಕ ಸತೀಶ್​ ಸೈಲ್​ ದೋಷಿ ಎಂದು ತೀರ್ಪು ನೀಡಿತ್ತು. ಇಂದು (ಅ.26) 82ನೇ ಸಿಸಿಹೆಚ್‌ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.
ಶಾಸಕ ಸ್ಥಾನದಿಂದ ಅನರ್ಹ:
Satish Sail ನಿಯಮಗಳ ಪ್ರಕಾರ ಎರಡು ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯಾದರೆ ಶಾಸಕ, ಸಂಸದ ಸ್ಥಾನ ರದ್ದಾಗಲಿದೆ. ಇದೀಗ ಸೈಲ್​ಗೆ 7 ವರ್ಷ ಜೈಲು ಶಿಕ್ಷೆಯಾಗಿರುವುದರಿಂದ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಸಾಧ್ಯತೆ ಇದೆ.

Dr. G. Parameshwara 500 ಆಸನ ಸಾಮರ್ಥ್ಯದ ಪೊಲೀಸ್ ಸಮುದಾಯ ಭವನ, ಗೃಹಸಚಿವರಿಂದ ಲೋಕಾರ್ಪಣೆ.

0

Dr. G. Parameshwara ಶಿವಮೊಗ್ಗದ ಡಿ.ಎ.ಆರ್. ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಸಮುದಾಯ ಭವನದ ಉದ್ಘಾಟನೆಯನ್ನು ಶನಿವಾರದಂದು ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ನೆರವೇರಿಸಿದರು.

 ಡಿ.ಎ.ಆರ್ ಆವರಣದಲ್ಲಿ 3.75 ಕೋಟಿ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ನೂತನವಾಗಿ ಪೊಲೀಸ್ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. 500 ಸೀಟಿಂಗ್ ಸಾಮರ್ಥ್ಯ, ಊಟದ ಹಾಲ್ ಸೇರಿದಂತೆ ಸುಸಜ್ಜಿತವಾಗಿ ಭವನವನ್ನು ನಿರ್ಮಿಸಲಾಗಿದೆ.
 
Dr. G. Parameshwara ನಂತರ ಡಿಎಆರ್ ಸಭಾಂಗಣದಲ್ಲಿ ಗೃಹ ಸಚಿವರು ಪೂರ್ವ ವಯಲದ ಉಪ ಪೊಲೀಸ್ ಮಹಾ ನಿರೀಕ್ಷಕರಾದ ಬಿ.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವಿಮರ್ಶನಾ ಸಭೆಯನ್ನು ನಡೆಸಿದರು.
 ಡಿಎಆರ್ ಪೊಲೀಸ್ ಭವನದ ಉದ್ಘಾಟನೆ ವೇಳೆ ಶಾಸಕರಾದ ಎಸ್.ಎನ್ ಚನ್ನಬಸಪ್ಪ, ಬಿ.ಕೆ ಸಂಗಮೇಶ್ವರ್, ಗೋಪಾಲ ಕೃಷ್ಣ ಬೇಳೂರು, ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಂಜುನಾಥ ಭಂಡಾರಿ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.

Madhu Bangarappa ಶಾಸಕರು ಊರಲ್ಲಿದ್ದರೂ ಪ್ರತಿಭಟನಾಕಾರರನ್ನ ಭೇಟಿ ಮಾಡಿ ವಿಚಾರಿಸಿಲ್ಲ. ಮುಳುಗಡೆ ಸಂತ್ರಸ್ತರ ಬಗ್ಗೆ ಅಸಡ್ಡೆ. ನಮ್ಮ ಹೋರಾಟ ನಿಲ್ಲದು- ತೀ.ನಂ.ಶ್ರೀನಿವಾಸ

0

Madhu Bangarappa ಕಳೆದ ಐದು ದಿನಗಳಿಂದ ಭೂಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ೧೫೦ಕ್ಕೂ ಹೆಚ್ಚು ರೈತರನ್ನು ಶುಕ್ರವಾರ ಕಾರ್ಗಲ್ ಚೌಡೇಶ್ವರಿ ದೇವಸ್ಥಾನದ ಬಳಿ ಬಂಧಿಸಲಾಯಿತು.
ಶರಾವತಿ ಮುಳುಗಡೆ ಸೇರಿದಂತೆ ವಿವಿಧ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಸಂತ್ರಸ್ತರಾದವರಿಗೆ ಹಕ್ಕುಪತ್ರ, ಅರಣ್ಯಹಕ್ಕು ಕಾಯ್ದೆ ವಯೋಮಿತಿ ಸಡಿಲ, ಬಗರ್‌ಹುಕುಂ ಸೇರಿದಂತೆ ವಿವಿಧ ಭೂಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಅಕ್ಟೋಬರ್ ೨೧ರಿಂದ ಡಾ. ಎಚ್.ಗಣಪತಿಯಪ್ಪ ರೈತ ಸಂಘ, ಮಲೆನಾಡು ರೈತ ಹೋರಾಟ ವೇದಿಕೆ ಇನ್ನಿತರೆ ಸಂಘಟನೆಗಳು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದವು.
ಸಚಿವರು ಮತ್ತು ಶಾಸಕರು ತಮ್ಮ ಅಹವಾಲು ಕೇಳಲು ಬರುತ್ತಿಲ್ಲ ಎನ್ನುವ ದೂರಿನೊಂದಿಗೆ ರೈತ ಹೋರಾಟಗಾರರು ಗುರುವಾರ ಸಾಗರದಿಂದ
ಲಿಂಗನಮಕ್ಕಿ ಜಲಾಶಯಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಾರ್ಗಲ್‌ನಲ್ಲಿ ಪ್ರತಿಭಟನಾಕಾರರನ್ನು ಭೇಟಿಯಾಗಿ ವಾಪಾಸ್ ಹೋಗುತ್ತಿದ್ದಂತೆಯೆ ಪೊಲೀಸರು ಪಾದಯಾತ್ರೆನಿರತ ರೈತರನ್ನು ಬಂಧಿಸಿದ್ದಾರೆ. ನಂತರ ರೈತರನ್ನು ಸಾಗರದಲ್ಲಿ ಬಿಡುಗಡೆ ಮಾಡಲಾಯಿತು.

ಸರ್ಕಾರದ ಹಂತದಲ್ಲಿ ಮಾತುಕತೆ :

Madhu Bangarappa ಈಗಾಗಲೆ ಮಲೆನಾಡು ರೈತರ ಭೂಸಮಸ್ಯೆ ಸರ್ಕಾರದ ಅರಿವಿನಲ್ಲಿದೆ. ನಮ್ಮ ಹಂತದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದೇವೆ. ಭೂಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಿಶೇಷ ಟಾಸ್ಕ್‌ಫೋರ್ಸ್ ರಚನೆಗೆ ಸರ್ಕಾರ ಸಿದ್ದವಿದೆ. ಸದ್ಯದಲ್ಲಿಯೆ ನೀವು ಕೆಲವರು ಬನ್ನಿ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಟಾಸ್ಕ್‌ಫೋರ್ಸ್ ರಚನೆ ಸೇರಿದಂತೆ ವಿವಿಧ ಭೂಸಮಸ್ಯೆ ಬಗೆಹರಿಸುವ ಕುರಿತು ಚರ್ಚೆ ಮಾಡೋಣ. ದಯವಿಟ್ಟು ಪ್ರತಿಭಟನೆ ಕೈಬಿಡಿ ಎಂದು ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.

ಸಚಿವರ ಮಾತಿಗೆ ಸೊಪ್ಪು ಹಾಕದ ಹೋರಾಟಗಾರರು :

ನಂತರ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಪ್ರತಿಭಟನಾ ಸ್ಥಳಕ್ಕೆ ಬಂದ ಸಚಿವರಿಗೆ ನಮ್ಮ ಮನವಿಯನ್ನು ತಿಳಿಸಿದ್ದೇವೆ. ದುರಾದೃಷ್ಟವೆಂದರೆ ಸರ್ಕಾರದ ಹಂತದಲ್ಲಿ ನಮ್ಮ ಬೇಡಿಕೆ ಕುರಿತು ಸಣ್ಣ ಚರ್ಚೆಯೂ ನಡೆದಿಲ್ಲ. ನಾವು ರಾಜ್ಯ ಸರ್ಕಾರವನ್ನು ನಂಬಿ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಮಲೆನಾಡು ರೈತರ ಹಿತಕ್ಕಾಗಿ ಕಾಯ್ದೆ ಬದಲಾವಣೆ ಮಾಡುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ತಿಳಿಸಿದರು.
ಹೋರಾಟ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ನಾವು ಪ್ರತಿಭಟನೆ ನಡೆಸುವ ದಿನ ಶಾಸಕರು ಸಾಗರದಲ್ಲಿ ಇದ್ದರೂ ನಮ್ಮನ್ನು ಭೇಟಿ ಮಾಡಿಲ್ಲ. ತಾಲ್ಲೂಕಿನಲ್ಲಿ ಎಂಟರಿಂದ ಹತ್ತುಸಾವಿರ ಕುಟುಂಬ ಮುಳುಗಡೆ ಸಂತ್ರಸ್ತರದ್ದು ಇದೆ. ಶಾಸಕರು ಅವರಿಗೆ ದ್ರೋಹ ಬಗೆದಿದ್ದಾರೆ. ಹೋರಾಟ ನಿಲ್ಲಿಸುವ ಪ್ರಶ್ನೆಯೆ ಇಲ್ಲ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಮಧು ಬಂಗಾರಪ್ಪ ರೈತನ ಮಗನಾಗಿದ್ದು ನಮಗೆ ಹೆಚ್ಚು ರಕ್ಷಣೆ ಸಿಗುತ್ತದೆ ಎನ್ನುವ ನಂಬಿಕೆ ಇತ್ತು. ಆದರೆ ಮಧು ಬಂಗಾರಪ್ಪ ಬಂದು ಹೋದ ಮೇಲೆ ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ. ಇದು ರೈತ ವಿರೋಧಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪರಮೇಶ್ವರ ದೂಗೂರು, ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ ಮನೆಘಟ್ಟ, ಇಲಿಯಾಸ್, ಜಿ.ಟಿ.ಸತ್ಯನಾರಾಯಣ, ಗಣೇಶ್ ತುಮರಿ ಇನ್ನಿತರರು ಹಾಜರಿದ್ದರು.

Shivamogga Police ಶಿವಮೊಗ್ಗ- ಭದ್ರಾ‌ವತಿ ರಸ್ತೆಯಲ್ಲಿ ತಡರಾತ್ರಿ ಬೈಕ್-ಲಾರಿ ಅಫಘಾತ. ಈರ್ವರ ಮರಣ

0

Shivamogga Police ಶಿವಮೊಗ್ಗ-ಭದ್ರಾವತಿ ಹೆದ್ದಾರಿಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

ನಿಧಿಗೆ ಬಳಿಯಲ್ಲಿ ಈ ಅಪಘಾತ ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ.
ಒಂದೇ ಬೈಕ್‌ನಲ್ಲಿ ವೇಗವಾಗಿ ಮೂವರು ಯುವಕರು ತೆರಳುತ್ತಿದ್ದು, ಎದುರಿಗೆ ಬಂದ ಲಾರಿಗೆ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಚೇತನ್ ಮತ್ತು ರೋಹಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Shivamogga Police ತೇಜಸ್ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ
ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಮೃತಪಟ್ಟ ಇಬ್ಬರು ಹಾಗೂ ಗಾಯಗೊಂಡ ಯುವಕ ಮೂವರು ವಿದ್ಯಾನಗರದ ನಿವಾಸಿಗಳು ಎಂದು ಗೊತ್ತಾಗಿದೆ.

Shivamogga Karnataka ಅಕ್ಟೋಬರ್ 28 . ಶಿವಮೊಗ್ಗ ಕರ್ನಾಟಕ. ಸಂಘದಲ್ಲಿ “ತಿಂಗಳ ಅತಿಥಿ”ಯಾಗಿ ಕಾದಂಬರಿಕಾರ ಎಂ.ಅರ್.ದತ್ತಾತ್ರಿ

0

Shivamogga Karnataka ಅ. 28ರ ಸೋಮವಾರ, ಸಂಜೆ 5:30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಕವಿ, ಕಾದಂಬರಿಕಾರ, ಅಂಕಣಕಾರ ಹಾಗೂ ಅನುವಾದಕ ಬೆಂಗಳೂರಿನ ಎಂ.ಆರ್. ದತ್ತಾತ್ರಿ ಅವರೊಡನೆ ತಿಂಗಳ ಅತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರೊ. ಹೆಚ್.ಆರ್. ಶಂಕರನಾರಾಯಣಶಾಸ್ತ್ರಿ ವಹಿಸುವರು. ದತ್ತಾತ್ರಿ ಅವರು ‘ ತಂತ್ರಜ್ಞಾನ ಯುಗದಲ್ಲಿ ಕಾದಂಬರಿ ಬರವಣಿಗೆ ಮತ್ತು ಓದು’ ವಿಷಯದ ಕುರಿತು ಮಾತನಾಡಲಿದ್ದಾರೆ.

Shivamogga Karnataka ದತ್ತಾತ್ರಿ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆದರೂ, ಪ್ರವೃತ್ತಿಯಲ್ಲಿ ಈ ಕಾಲಮಾನದ ಬಹು ಚರ್ಚಿತ ಕನ್ನಡ ಬರಹಗಾರ. ಅಂಕಣ, ಕವನ, ಅನುವಾದ, ಕಾದಂಬರಿ ಹೀಗೆ ಹಲವು ಆಯಾಮಗಳಲ್ಲಿ ಅವರ ಸಾಹಿತ್ಯ ಕೃಷಿಯ ವಿಸ್ತಾರವಿದೆ. ವೃತ್ತಿಯ ನಿಮಿತ್ತ ಹಲವು ದೇಶ-ವಿದೇಶಗಳಲ್ಲಿ ಕಾರ್ಯ ನಿರ್ವಹಿಸಿದ ಅವರ ಜೀವನಾನುಭವ, ಮನು? ಜೀವನದ ಆಧ್ಯಾತ್ಮಿಕ ಮೌಲ್ಯಗಳು ಅವರ ಕಾದಂಬರಿಯಲ್ಲಿ ಕಾಣಸಿಗುತ್ತದೆ.

ಕರ್ನಾಟಕ ಸಂಘ ಇವರ ಬರಹದ ಕಸುವನ್ನು ಪ್ರಪ್ರಥಮವಾಗಿ ೨೦೦೬ಲ್ಲೇ ಗುರುತಿಸಿ ಇವರ ಅಂಕಣ ಬರಹಕ್ಕೆ ಡಾ. ಹಾ.ಮಾ ನಾಯಕರ ಹೆಸರಿನ ಪುಸ್ತಕ ಬಹುಮಾನ ನೀಡಿದೆ.