Thursday, March 26, 2026
Thursday, March 26, 2026
Home Blog Page 520

CM Siddharamaiah ಕೆರೆ ಒತ್ತುವರಿ ತೆರವುಗೊಳಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ- ಮುಖ್ಯಮಂತ್ರಿ ಸಿದ್ಧರಾಮಯ್ಯ

0

CM Siddharamaiah ಕೆರೆಗಳ ಒತ್ತುವರಿ ತೆರವುಗೊಳಿಸಲು ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗಡುವು ವಿಧಿಸಲಾಗಿತ್ತು. ಬೆಂಗಳೂರು ಸುತ್ತಮುತ್ತ ಬಹುತೇಕ ಕೆರೆಗಳು ಕೇವಲ ಶೇ.30ರಷ್ಟು ಮಾತ್ರ ತುಂಬಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ರಾಜ್ಯದಲ್ಲಿ ಪ್ರಸ್ತುತ 63,647 ಕೆರೆ, ಕಲ್ಯಾಣಿಗಳ ಅಭಿವೃದ್ದಿ ಕಾರ್ಯವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗಿದೆ. ಅತಿವೃಷ್ಟಿಯಿಂದಾಗಿ 12,553ಕಿಮೀ ಗ್ರಾಮೀಣ ರಸ್ತೆಗಳು ಹಾನಿಗೀಡಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ 1,106 ಸಣ್ಣ ಸೇತುವೆ, ಮೋರಿಗಳು ಹಾನಿಗೀಡಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳಿಗೆ ಉಂಟಾಗಿರುವ ಹಾನಿ ಕುರಿತು ಸಮಗ್ರ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಹೆಚ್ಚುವರಿ ಬಿತ್ತನೆಗೆ ರೈತರಿಂದ ಬಿತ್ತನೆ ಬೀಜಕ್ಕೆ ಬೇಡಿಕೆ ಬಂದರೆ ಅದನ್ನು ಒದಗಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ರೈತರಿಗೆ ಪರ್ಯಾಯ ಬೆಳೆ ಬೆಳೆಸಲು ಬಿತ್ತನೆ ಬೀಜ ಲಭ್ಯವಿದೆ. ಬಿತ್ತನೆ ಬೀಜ ಮತ್ತು ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು.

ಅತಿವೃಷ್ಟಿ, ಪ್ರವಾಹ, ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಸ್ವತಃ ಭೇಟಿ ನೀಡಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹಾನಿಗೀಡಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಯಮಾವಳಿ ಪ್ರಕಾರ ತಕ್ಷಣ ಪರಿಹಾರ ಒದಗಿಸಿ ಜನರಿಗೆ ಸಾಂತ್ವಾನ ನೀಡುವ ಕಾರ್ಯ ಮಾಡಬೇಕು ಎಂಬ ಸೂಚನೆ ನೀಡಲಾಗಿದೆ.

 CM Siddharamaiah ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶವಿದ್ದು, ಪರಿಸರಕ್ಕೆ ಹಾನಿಯಾಗುವ ಪಟಾಕಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಪಟಾಕಿ ದಾಸ್ತಾನು, ಮಾರಾಟ ಪ್ರಕ್ರಿಯೆಯಲ್ಲಿ ಸುರಕ್ಷತೆ ವಿಷಯದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ ಎಂದು
ಮುಖ್ಯಮಂತ್ರಿ ಸಿದ್ಧರಾಮಯ್ಯ
ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ

Bhadravati Police ಭದ್ರಾವತಿಯಲ್ಲಿ ಗಾಂಜಾ ಮಾರಾಟ. ಆರೋಪಿ ಮಹಮ್ಮದ್ ಅಬ್ಬಾಸ್ ಬಂಧನ

0

Bhadravati Police ಭದ್ರಾವತಿ ನಗರದ ಸಿಗೇಬಾಗಿ ಹಳೆ ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ
ಸ್ಥಳೀಯ ಮೊಹಮ್ಮದ್ ಅಬ್ಬಾಸ್ (೨೭) ಎನ್ನುವವನನ್ನು ಪೊಲೀಸರು ಬಂಧಿಸಿದ್ದಾರೆ.

 ಖಚಿತ ಮಾಹಿತಿಯ ಮೇರೆಗೆ ಪಿಐ* ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಮಂಜುನಾಥ ನೇತೃತ್ವದ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಬಂಧಿಸಿ
ಅಂದಾಜು ಮೌಲ್ಯ ೯೫,೦೦೦ ರೂಗಳ ೧ ಕೆಜಿ ೩೭ ಗ್ರಾಂ ತೂಕದ ಒಣ ಗಾಂಜಾ ಮತ್ತು ರೂ ೩೫೦ ನಗದು ಹಣವನ್ನು* ಅಮಾನತ್ತುಪಡಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
 Bhadravati Police ಇನ್ನೊಂದು ಪ್ರಕರಣದಲ್ಲಿ ಹೊಳೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಗರದಹಳ್ಳಿ ಕ್ಯಾಂಪ್ ನ ವಾಸಿ ಸಂಜೀವಬಾಬು (೪೦) ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದನ್ನು ಖಚಿತ ಮಾಹಿತಿಯ ಮೇರೆಗೆ ಪಿ ಐ ಲಕ್ಷ್ಮಿಪತಿ, ಎಸ್ ಐ ರಮೇಶ್, ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದವನ್ನು ಬಂಧಿಸಿದೆ.
 ಇನ್ನೊಬ್ಬ ಆರೋಪಿತ ಗುರುಪ್ರಸಾದ್ (೨೪) ಸಿದ್ದರ ಕಾಲೋನಿ ಭದ್ರಾವತಿ ಈತನನ್ನೂ ಸಹ ದಸ್ತಗಿರಿ ಮಾಡಿ, ಸದರಿ ಆರೋಪಿತರಿಂದ ಅಂದಾಜು ಮೌಲ್ಯ ೨,೮೦,೦೦೦ ರೂ ಗಳ ಒಟ್ಟು ೫ ಕೆಜಿ ೫೭೪ ಗ್ರಾಂ ತೂಕದ ಒಣ ಗಾಂಜಾ ಮತ್ತು ಮೊಬೈಲ್ ಫೋನ್ ಅನ್ನು ಅಮಾನತ್ತು ಪಡಿಸಿಕೊಂಡು, ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಬೈಸೆ ಗ್ರಾಮದಲ್ಲಿ ಬೆಂಕಿ ಆಕಸ್ಮಿಕ ₹4.5. ಲಕ್ಷ ಮೌಲ್ಯದನಗದು, ಬಟ್ಟೆ , ಬಂಗಾರ ಬೆಂಕಿಗಾಹುತಿ

0

ಆಕಸ್ಮಿಕ ಬೆಂಕಿಗೆ ತುತ್ತಾಗಿ ವಾಸದ ಮನೆ ಭಾಗಶಃ ಸುಟ್ಟು ಹೋದ ಘಟನೆ ತಾಲೂಕಿನ ಬೈಸೆ ಗ್ರಾಮದ ಹೂಕೊಪ್ಪಲು ಎಂಬಲ್ಲಿ ಭಾನುವಾರ ನಡೆದಿದೆ.

ವಿಶಾಲಾಕ್ಷಿಯವರಿಗೆ ಸೇರಿದ ಮನೆಗೆ ಮಧ್ಯಾಹ್ಮ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿಗೆ 95 ಸಾವಿರ ಹಣ, ಬಟ್ಟೆ, 30 ಗ್ರಾಂ ತೂಕದ ಬಂಗಾರ, ಅಡಿಕೆ ಸೇರಿದಂತೆ ಒಟ್ಟು ರೂ. 4.5 ಲಕ್ಷ ನಷ್ಟ ಉಂಟಾಗಿದೆ.

ಮನೆಯವರು ಹತ್ತಿರದ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮನೆ ಯಿಂದ ಹೊಗೆ ಹೊರಗೆ ಹೋಗುತ್ತಿದ್ದುದನ್ನು ಗಮನಿಸಿ ಅವರು ಓಡೋಡಿ ಬಂದಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶಾಲಾಕ್ಷಿ ಎಂಬುವವರು 5 ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಮೂವರು ಚಿಕ್ಕ ಮಕ್ಕಳನ್ನು ಹೊಂದಿದ್ದಾರೆ.

ಕಷ್ಟಪಟ್ಟು ಬದುಕುತ್ತಿದ್ದ ಅವರಿಗೆ ಈ ದುರಂತ ಅಸಹಾಯಕನ್ನಾಗಿ ಮಾಡಿದೆ.
ಸ್ಥಳಕ್ಕೆ ಗ್ರಾಪಂ ಸದಸ್ಯರಾದ ಅರುಣ ಬೈಸೆ, ಕೆ.ಬಿ.ಕುಮಾರ್, ಕರುಣಾಕರ ಶೆಟ್ಟಿ, ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು.

Nagashree Begar ಶೃಂಗೇರಿಯ ಪ್ರತಿಭಾನ್ವಿತ ಚಿತ್ರನಟಿ ನಾಗಶ್ರೀಗೆ ಜೀ ಕುಟುಂಬ ದ” ನೆಚ್ಚಿನ ಸಹೋದರಿ” ಪ್ರಶಸ್ತಿ

0

Nagashree Begar ಶೃಂಗೇರಿ ಯ ಬಹುಮುಖ ಪ್ರತಿಭೆ ಯ ನಾಗಶ್ರೀ ಬೇಗಾರ್ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮ ದಲ್ಲಿ ” ನೆಚ್ಚಿನ ಸಹೋದರಿ ” ಪ್ರಶಸ್ತಿಗೆ ಪಾತ್ರರಾಗಿ ಮಲೆನಾಡ ಕೀರ್ತಿಯನ್ನು ಮತ್ತೆ ಕಿರುತೆರೆಯಲ್ಲಿ ಬೆಳಗಿದ್ದಾರೆ.

ಬಾಲಪ್ರತಿಭೆ ಯಾಗಿ ರಂಗವೇರಿ ನೃತ್ಯ, ನಾಟಕ, ಯಕ್ಷಗಾನ ಮೊದಲಾದ ಕಲಾ ಪ್ರಕಾರಗಳಲ್ಲಿ ತನ್ನ ಛಾಪು ಮೂಡಿಸಿ, ಎಲ್ಲಾ ವಯೋಮಾನದಲ್ಲೂ ನಿರಂತರ ಸೃಜನಶೀಲತೆ ಕಾಯ್ದುಕೊಂಡ ಕಲಾವಿದೆ ನಾಗಶ್ರೀ ಏಕಪಾತ್ರಾಭಿನಯದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಸತತವಾಗಿ ಬಹುಮಾನ ಗೆದ್ದವರು.

ಶ್ರೀ ಆದಿ ಚುಂಚನಗಿರಿ ಶೃಂಗೇರಿ ಶಾಖಾ ಮಠದಿಂದ ಚುಂಚೋತ್ಸವ ಯುವ ಪ್ರಶಸ್ತಿ , ಕಲ್ಕಟ್ಟೆ ಕನ್ನಡತಿ, ಬಾಳೆಹೊನ್ನೂರಿನ ಅಯ್ಯಪ್ಪ ಸಮಿತಿಯ ಕಲಾ ಪ್ರಶಸ್ತಿ ಪಡೆದಿರುವ ನಾಗಶ್ರೀ ಜಲಪಾತ ಚಲನಚಿತ್ರ ದ ನಾಯಕಿಯಾಗಿ ಜನ ಮನ್ನಣೆ ಪಡೆದವರು.

ಜೀ ಕನ್ನಡ ದಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಯ ರತ್ನಾ ಎಂಬ ಸೌಮ್ಯ ಸ್ವಭಾವದ ಶಿಕ್ಷಕಿ ಪಾತ್ರ ದ ಮೂಲಕ ಮನೆಮಾತಾಗಿದ್ದಾರೆ.

ಜೀ ಕನ್ನಡ ಬೆಂಗಳೂರಿನ ನಂದಿ ಗ್ರೌಂಡ್ಸ್ ಲ್ಲಿ ಏರ್ಪಡಿಸಿದ್ದ ವರ್ಣರಂಜಿತ ಕಾರ್ಯಕ್ರಮ ದಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಇವರಿಂದ ನಾಗಶ್ರೀ ಇತರ ಮೂವರು ಸಹೋದರಿ ಯರೊಂದಿಗೆ ಪ್ರಶಸ್ತಿ ಸ್ವೀಕರಿಸಿದರು.

Nagashree Begar ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ನಾಗಶ್ರೀ ತಂಡ ದ ಸಹಕಾರ ದಿಂದ ತನ್ನ ಮೂಲ ವಯಸ್ಸಿಗೆ ಮೀರಿದ ಈ ಗಂಭೀರ ಪಾತ್ರದಲ್ಲಿ ತೊಡಗುವಂತಾಯ್ತು. ಮನೆಯವರ ಪ್ರೋತ್ಸಾಹ ಮತ್ತು ರಂಗಭೂಮಿ ಯ ಭದ್ರ ನೆಲೆ ತನ್ನ ಸಾಧನೆಗೆ ಕಾರಣವಾಗಿದೆ ಎಂದರು.

ಮಲೆನಾಡ ಪ್ರಸಿದ್ಧ ಕಲಾವಿದ ರಮೇಶ್ ಬೇಗಾರ್ ಮತ್ತು ಭಾಗ್ಯಶ್ರೀ ದಂಪತಿಗಳ ಪುತ್ರಿಯಾಗಿರುವ ನಾಗಶ್ರೀ ಶೃಂಗೇರಿ ಯ ಜೇಸಿಸ್ ಸ್ಕೂಲ್ ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಬಿ ಜೀ ಎಸ್ ದರ್ಶಿನಿ ಸಂಸ್ಥೆ ಯಲ್ಲಿ ಪದವಿಪೂರ್ವ ಮತ್ತು ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ಪದವಿ ಪಡೆದಿದ್ದಾರೆ. ಭರತ ನಾಟ್ಯ ದಲ್ಲೂ ಪದವಿ ಪಡೆದು ಸಂಗೀತವನ್ನು ವಿದುಷಿ ಸಾವಿತ್ರಿ ಪ್ರಭಾಕರ್, ಯಕ್ಷಗಾನ ವನ್ನು ಅಶ್ವಥ್ ನಾರಾಯಣ ಇವರಿಂದ ಅಭ್ಯಾಸ ಮಾಡಿದ್ದಾರೆ. ಶೃಂಗೇರಿ ಯ ಪ್ರಸಿದ್ಧ ರಂಗಮಿತ್ರ ತಂಡ ಮತ್ತು ಬೆಂಗಳೂರು ಬಣ್ಣದಮನೆ ತಂಡದ ಪ್ರಮುಖ ಕಲಾವಿದೆಯಾಗಿದ್ದಾರೆ.

Rotary Shivamogga ಸರ್ಕಾರಿ ಶಾಲೆಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಘ ಸಂಸ್ಥೆಗಳ ನೆರವು ಅಗತ್ಯ- ಅರುಣ್ ದೀಕ್ಷಿತ್

0

Rotary Shivamogga ಸರ್ಕಾರಿ ಶಾಲೆಯಲ್ಲಿ ಅಧ್ಯಯನ ನಡೆಸುತ್ತಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಘ ಸಂಸ್ಥೆಗಳ ನೆರವು ಅಗತ್ಯ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಪ್ರೋತ್ಸಾಹ ನೀಡಬೇಕು ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಹೇಳಿದರು.

ಕನ್ನಡ ರಾಜ್ಯೋತ್ಸವ ಅಂಗವಾಗಿ ಹಾಗೂ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ಶಿವಮೊಗ್ಗ ತಾಲೂಕಿನ ನಿದಿಗೆ ಜನತಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ 50 ಸೆಟ್ ಯೂನಿಫಾರಂ ಕೋಟ್ ಹಾಗೂ ಅಗತ್ಯ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಕರ್ಯಗಳನ್ನು ಸಂಘ ಸಂಸ್ಥೆಗಳು ಒದಗಿಸಿದರೆ ಶಾಲೆಯಲ್ಲಿನ ವಿದ್ಯಾರ್ಥಿಗಳು ಮಹತ್ತರ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಮಕ್ಕಳ ಕಲಿಕಾ ಗುಣಮಟ್ಟ ವೃದ್ಧಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ನಿದಿಗೆ ಶಾಲೆಯಲ್ಲಿ ಸ್ವಚ್ಛ ಸುಂದರ ಪರಿಸರದ ವಾತಾವರಣ ಕಾಪಾಡಿಕೊಳ್ಳುತ್ತಿದ್ದು, ಮಕ್ಕಳ ಕಲಿಕೆಗೆ ಪೂರಕವಾಗಿ ಅವಶ್ಯವಿರುವ ವಸ್ತುಗಳನ್ನು ನೀಡುವುದು ಅವಶ್ಯಕ. ಮಕ್ಕಳಿಗೆ ಅಗತ್ಯ ಮಾರ್ಗದರ್ಶನವನ್ನು ಶಿಕ್ಷಕರು ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.

Rotary Shivamogga ಇದೇ ಸಂದರ್ಭದಲ್ಲಿ ಸಿದ್ದಶ್ರೀ ಮಾರ್ಕೆಟಿಂಗ್ ಮಾಲೀಕ ವಿನೋದಕುಮಾರ್ ಜೈನ್ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳಿಗೆ ನೆರವು ನೀಡಿದರೆ ಅವರ ಭವಿಷ್ಯ ಸುಂದರಗೊಳಿಸಲು ಸಾಧ್ಯವಾಗುತ್ತದೆ. ಉನ್ನತ ಹುದ್ದೆ ತಲುಪಿದ ನಂತರ ಹೆಚ್ಚಿನ ಸೇವೆ ಮಾಡಲು ಮುಂದಾಗಬೇಕು. ಅನೇಕರಿಗೆ ಸ್ಪೂರ್ತಿಯಾಗುತ್ತದೆ ಎಂದು ತಿಳಿಸಿದರು.

ಮುಖ್ಯಶಿಕ್ಷಕಿ ತುಳಸಿ ಅಡಿಗ ಮಾತನಾಡಿ, ಹತ್ತು ವರ್ಷಗಳಿಂದ ವಿಜಯಕುಮಾರ್ ಅವರು ಅನೇಕ ದಾನಿಗಳು ಹಾಗೂ ಸಂಘ ಸಂಸ್ಥೆಗಳ ನೆರವಿನಿಂದ ಶಾಲೆ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದು, ಸಂಘ ಸಂಸ್ಥೆಗಳು ಕುಡಿಯುವ ನೀರಿನ ಘಟಕ ಹಾಗೂ ಅಗತ್ಯ ಸೌಕರ್ಯಗಳನ್ನು ಒದಗಿಸಿವೆ ಎಂದು ತಿಳಿಸಿದರು.

ಸಹಶಿಕ್ಷಕಿ ಸೋಮಿಬಾಯಿ ಹಾಗೂ ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Rangdol Construction Company 70 ಬಾರಿ ರಕ್ತದಾನಮಾಡಿದ ಆತ್ಮಾರಂದೋಳ್ ಗೆ ಆತ್ಮೀಯ ಸನ್ಮಾನ

0

Rangdol Construction Company ಶಿವಮೊಗ್ಗ ನಗರದ ರಂಗದೋಳ್ ಕನ್ಸ್ಟ್ರಕ್ಷನ್ ಸಂಸ್ಥೆ ಮಾಲೀಕ, ಇಂಜಿನಿಯರ್ ಆತ್ಮಾರಂಗದೋಳ್ ಅವರು 70ನೇ ಬಾರಿ ರಕ್ತದಾನ ಮಾಡಿದ್ದಾರೆ. ಹೆಚ್ಚಿನ ಬಾರಿ ರಕ್ತದಾನ ಮಾಡಿದ ಆತ್ಮಾರಂಗದೋಳ್ ಅವರಿಗೆ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದ ವಾಕಿಂಗ್ ಸ್ನೇಹಿತರು ಸನ್ಮಾನ ಮಾಡಿದರು.

ಎಲ್ಲ ಸ್ನೇಹಿತರು ಆತ್ಮಾರಂಗದೋಳ್ ಹೆಚ್ಚು ಬಾರಿ ರಕ್ತದಾನ ಮಾಡಿರುವ ಬಗ್ಗೆ ಮೆಚ್ಚಗೆಯ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು. ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ರಕ್ತದಾನ ತುಂಬಾ ಅವಶ್ಯಕವಾಗಿದೆ. ಮರ‍ನಾಲ್ಕು ತಿಂಗಳಿಗೊಮ್ಮೆ ಆರೋಗ್ಯವಂತ ಜನತೆ ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡುವುದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪೂರಕವಾಗಲಿದೆ ಎಂದು ತಿಳಿಸಿದರು.

Rangdol Construction Company ಸಮಾರಂಭದಲ್ಲಿ ನರಸೋಜಿರಾವ್, ಶ್ರೀನಿವಾಸ್, ಹಾಲಪ್ಪ, ಇಂಜಿನಿಯರ್‌ಗಳಾದ ಉಮೇಶ್, ಮಂಜಣ್ಣ, ಸಿ.ರವಿಕುಮಾರ್, ಜಯಣ್ಣ, ಮೋಹನರಾವ್, ಮಧುಕರ್, ರಾಜೇಂದ್ರ, ಸುಬ್ಬಣ್ಣ, ರಮೇಶ್, ರುದ್ರಮೂರ್ತಿ ಇತರರು ಉಪಸ್ಥಿತರಿದ್ದರು.

N.J. Rajashekhar ಶಿವಮೊಗ್ಗದ ಜನಪ್ರಿಯ ಸಮಾಜ ಸೇವಕ ಎನ್.ಜೆ.ರಾಜಶೇಖರ್ ನಿಧನ

0

N.J. Rajashekhar ಶಿವಮೊಗ್ಗ ನಗರಸಭಾ ಮಾಜಿ ಅಧ್ಯಕ್ಷ N J ರಾಜಶೇಖರ್ (ಸುಭಾಷ್) (72)ಭಾನುವಾರ ತಡರಾತ್ರಿ ವಿಧಿವಶರಾಗಿದ್ದಾರೆ.
ವೀರಶೈವ ಸಮಾಜದ ಮುಖಂಡರಾಗಿ, ಬಸವೇಶ್ವರ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

N.J. Rajashekhar ನಾಲ್ಕು ಬಾರಿ ನಗರಸಭೆ ಸದಸ್ಯರಾಗಿ, ಒಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಲಿವರ್ ಕ್ಯಾನ್ಸರ್ ನಿಂದ ಬಳಲುತಿದ್ದ ರಾಜಶೇಖರ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಕಳೆದ ವಾರ ಮತ್ತೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಂಜಪ್ಪ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾದವರು ಇಂದು ಕೊನೆ ಉಸಿರೆಳೆದಿದ್ದಾರೆ.

ಅಗಲಿದ ಶ್ರೀ ಎನ್ ಜೆ ಸುಭಾಷ್ ರವರಿಗೆ ಶ್ರೀ ಶಿವಗಂಗಾ ಯೋಗ ಕೇಂದ್ರದಿಂದ ಶ್ರದ್ಧಾಂಜಲಿ.

ನೋವಿನಲ್ಲೂ ನಲಿವನ್ನು ಕಾಣುತ್ತಿದ್ದವರು ಇವರು. ಯೋಗ ಕೇಂದ್ರದ ಕಾರ್ಯ ನಿಮಿತ್ತ ಅನೇಕ ಸಾರಿ ಚರ್ಚೆಗೆ ಅವರ ಮನೆಯಲ್ಲಿ ಸೇರಿದಾಗ ಅನಾರೋಗ್ಯದ ಬಳಲಿಕೆಯಲ್ಲೂ ಕೂಡ ತಮ್ಮ ಎಂದಿನಂತೆ ಹಾಸ್ಯ ಚಟಾಕಿಯೊಂದಿಗೆ ಎಲ್ಲರನ್ನು ನಗುವಿನ ಹೊಳೆಯಲ್ಲಿ ಹರಿಸುತ್ತಿದ್ದರು. ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುತ್ತಿದ್ದರು. ಶ್ರೀ ಶಿವಗಂಗಾ ಯೋಗ ಕೇಂದ್ರದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು. ಪೋಷಕರು ಹಿತೈಷಿಗಳು ಮಾರ್ಗದರ್ಶಕರು ಆಗಿದ್ದರು.
ಯೋಗ ಕೇಂದ್ರದಲ್ಲಿ ಮೌನಚರಣೆ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಯೋಗ ಟ್ರಸ್ಟ್ ನ   ಕಾರ್ಯಾಧ್ಯಕ್ಷರಾದ ಯೋಗಾಚಾರ್ಯ ಶ್ರೀ ಸಿ.ವಿ. ರುದ್ರಾರಾಧ್ಯರು ಕೇಂದ್ರಕ್ಕೆ ಅವರ ಸಹಕಾರ ಸೇವೆಯನ್ನು ಸ್ಮರಿಸಿದರು.  ಅಧ್ಯಕ್ಷರಾದ ಶ್ರೀ ಬಿ.ಸಿ.ನಂಜುಂಡ ಶೆಟ್ಟಿ, ಕಾರ್ಯದರ್ಶಿ ಎಸ್.ಎಸ್. ಜ್ಯೋತಿ ಪ್ರಕಾಶ್, ಖಜಾಂಚಿಗಳಾದ ರಾಮಮೋಹನ್, ಸದಸ್ಯರಾದ ಎಸ್ ಎಸ್ ರುದ್ರೇಗೌಡರು, ಎಸ್ ವೈ ಅರುಣದೇವಿ , ಕಲಗೋಡು ರತ್ನಾಕರ್, ಹೊಸ ತೋಟ ಸೂರ್ಯನಾರಾಯಣ. ಯೋಗ ಶಿಕ್ಷಕರಗಳಾದ ಜಿಎಸ್ ಓಂಕಾರ್. ವಿಜಯ ಕೃಷ್ಣ. ಹರೀಶ್. ಯೋಗ ಕೇಂದ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ.ಜಿ ವಿಜಯಕುಮಾರ್. ಹಾಗೂ ಯುವ ಕೇಂದ್ರದ ಎಲ್ಲಾ ಶಿಕ್ಷಕರು ಹಾಗೂ ಯೋಗ ಬಂಧುಗಳು ತೀರ್ವ  ಸಂತಾಪ ವ್ಯಕ್ತಪಡಿಸಿದ್ದಾರೆ .

ಶಿವಮೊಗ್ಗ ಬಿಜೆಪಿ ಘಟಕದಿಂದ ಶ್ರದ್ಧಾಂಜಲಿ

ನ್.ಜೆ ರಾಜಶೇಖರ್(ಸುಭಾಷ್) ಇವರು ಉತ್ತಮ ಸಂಸ್ಕಾರ ಕುಟುಂಬದಿಂದ ಬಂದಿದ್ದು, ರಾಷ್ಟ್ರೀಯ ಸ್ವಯಂಸೇವಕರಾಗಿ, ವೀರಶೈವ ಸಮಾಜದ ಅಧ್ಯಕ್ಷರಾಗಿ, ವೀರಶೈವ ಕಲ್ಯಾಣ ಮಂದಿರದ ಕಾರ್ಯದರ್ಶಿಯಾಗಿ ಹಾಹು ಭಾರತಿಯ ಜನತ ಪಾರ್ಟಿಯ ಅನನ್ಯ ಬಿಜೆಪಿಯ ಪಕ್ಷದ ಜವಬ್ದಾರಿಗಳನ್ನು ಹೋತ್ತು ಶಿವಮೊಗ್ಗ ನಗರದಲ್ಲಿ ಪಕ್ಷಕ್ಕೆ ದೋಡ್ಡಶಕ್ತಿಯಾಗಿದ್ದರು.ಶಿವಮೋಗ್ಗ ನಗರಸಭಾ ಅದ್ಯಕ್ಷಾರಗಿ ಉತ್ತಮವಾಗಿ ಕಾರ್ಯನಿರ್ವಹಿಸಿ ಸಮಾಜದ ಹಾಲವಾರು ಉಚಿತ ಸಾಮಜಿಕ ಕಾರ್ಯ ಮಾಡಿದ ಹೇಮೈಯ ದಿಮಂತ ನಾಯಕ ಎನ್.ಜೆ ರಾಜಶೇಖರ್(ಸುಭಾಷ್) ನಿನ್ನೆ ದಿನಾಂಕ 27-10-2024 ಭಾನುವಾರ ರಾತ್ರಿ ನಿದನರಾಗಿರುತ್ತಾರೆ.ಅವರ ನಿಧನರಾಗಿದ್ದಾರೆ. ಅವರಿಗೆ ದಿವ್ಯ ಅತ್ಯಕ್ಕೆ ಭಗವಂತನು ಚಿರ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತವೆ.ಅವರ ಕುಟುಂಬಕ್ಕೆ ಅವರ ಅಭಿಮಾನಿವರ್ಗಕ್ಕೆ ದುಂಖ ಸಹಿಸುವ ಶಕ್ತಿ ಭಗವಂತ ಕರುಣಿಸಲಿ. ಸಂತಾಪ ಸುಚಿಸುವರು ಶಾಸಕರು ಎಸ್ ಎನ್ ಚನ್ನಬಸಪ್ಪ(ಚೆನ್ನಿ) ಶಿವಮೊಗ್ಗ ನಗರ ,
ಡಿ ಮೋಹನ್ ರೆಡ್ಡಿ ಅಧ್ಯಕ್ಷರು ಬಿಜೆಪಿ ಶಿವಮೊಗ್ಗ ನಗರ, ಎಸ್. ಜ್ಞಾನೇಶ್ವರ ಎನ್ ಜೆ ನಾಗರಾಜ್, ಎನ್.ಕೆ ಜಗದೀಶ್,
ಹೆಚ್ ಕೆ ದೀನದಯಾಳು , ನವುಲೆ ಮಂಜುನಾಥ್, ಬಿಜೆಪಿ ಶಿವಮೊಗ್ಗ ನಗರ ಸಮಿತಿ


Ministry of Youth Affairs and Sports ಶಿವಮೊಗ್ಗದಲ್ಲಿ ” ಏಕ್ ಪೇಡ್ ಮಾ ಕೆ ನಾಮ್” ಕಾರ್ಯಕ್ರಮ

0

Ministry of Youth Affairs and Sports ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮತ್ತೊಂದು ಅಭಿಯಾನವಾದ “ಏಕ್ ಪೆಡ್ ಮಾ ಕೆ ನಾಮ್” 2024ರ ವಿಶ್ವ ಪರಿಸರ ದಿನದಂದು ಗೌರವಾನ್ವಿತ ಪ್ರಧಾನ ಮಂತ್ರಿಯವರು ನವದೆಹಲಿಯ ಬುದ್ದ ಜಯಂತಿ ಪಾರ್ಕ್ ನಲ್ಲಿ ಪೀಪಲ್ ಮರದ ಸಸಿ ನೆಡುವುದರ ಮೂಲಕ ಪ್ರಾರಂಭಿಸಿದರು.

ತಾಯಿ ಭೂಮಿಯನ್ನು ಹೋಲುವ ಶಕ್ತಿಯಾಗಿದ್ದು ಇದನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು.ಜನರು ತಮ್ಮ ತಾಯಿಯ ಮೇಲೆ ಪ್ರೀತಿ,ಗೌರವವನ್ನು ತೋರಿಸುತ್ತಾರೆ. ಈ ಮಹತ್ವಕಾಂಶ ಕಾರ್ಯಕ್ರಮವನ್ನು ದಿನಾಂಕ 25.10.2024 ರಂದು ನೆಹರು ಯುವ ಕೇಂದ್ರ, ಶಿವಮೊಗ್ಗ ಮತ್ತು ಮುಖಾ ಮುಖಿ ರಂಗ ತಂಡ ಹಾಗೂ ನಿರ್ಮಲ ತುಂಗ-ಭದ್ರ ಅಭಿಯಾನ, ಶ್ರೀ.ರಾಮಕೃಷ್ಣ ಐ.ಟಿ.ಐ ಕಾಲೇಜು, ಮಹಿಳಾ ಪಾಲಿಟೆಕ್ನಿಕ್‌ ಕಾಲೇಜು,ಶಿವಮೊಗ್ಗ ಇವರ ಸಹಯೋಗದೊಂದಿಗೆ “ ಏಕ್ ಪೇಡ್ ಮಾ ಕೆ ನಾಮ್” ಅಪ್ಪರ್‌ ತುಂಗಾ ಚಾನಲ್‌ ಆವರಣದಲ್ಲಿ ಗಿಡ ನೆಡುವುದರ ಮೂಲಕ ಆಚರಿಸಲಾಯಿತು.

Ministry of Youth Affairs and Sports ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿಯಾದ ಶ್ರೀ. ವಿಜಯ್ ಕುಮಾರ್ ರವರು ಗಿಡ ನೆಡುವುದರ ಮುಲಕ ಚಾಲನೆ ನೀಡಿದರು. ಕಾರ್ಯಕ್ರಮ ಕುರಿತಾಗಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಶ್ರೀ. ಉಲ್ಲಾಸ್ ಕೆ.ಟಿ.ಕೆ ಮತ್ತು ಶಿವಮೊಗ್ಗ ಕ್ರಿಕೆಟ್ ಅಸೋಸಿಯೇಷನ್ ಸದಸ್ಯರಾದ ಬಾಲಕೃಷ್ಣ ನಾಯ್ಡುರವರು ಈಗಿನ ಕಾಂಕ್ರೀಟ್ ನಾಡಿನಲ್ಲಿ ಗಿಡ ಮರಗಳು ಕಾಣೆಯಾಗಿದ್ದು, ನಮ್ಮ ಸುತ್ತಮುತ್ತಲಿನ ಖಾಲಿ ಜಾಗದಲ್ಲಿ ಗಿಡಗಳನ್ನು ನೆಡಬೇಕು ಇದರಿಂದ ಪರಿಸರದಲ್ಲಿ ಒಳ್ಳೆ ಗಾಳಿ ಮತ್ತು ಶುದ್ಧ ನೀರು .ಉತ್ತಮ ಪರಿಸರದ ವಾತಾವಣವು ಶುದ್ಧವಾಗಿರುತ್ತದೆ. ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಮಕೃಷ್ಣ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಷಣ್ಮುಖಪ್ಪ ಮತ್ತು ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಮಹಿಳಾ ಪಾಲಿಟೆಕ್ನಿಕ್‌ ನ ಎನ್ಎಸ್ ಎಸ್‌ ಅಧಿಕಾರಿ ಶ್ರಿಮತಿ ಜ್ಯೋತಿ, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ರಂಗ ತಂಡದ ಮಂಜು ರಂಗಾಯಣ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಗೊಳಿಸಿದರು.

Rotary Shivamogga Jubilee ಅನಾಥ ಮಕ್ಕಳನ್ನ ಸಮಾಜದ ಮುಖ್ಯವಾಹಿನಿಗೆ ತರುವುದು ಪ್ರಜ್ಞಾವಂತ ನಾಗರೀಕರ ಜವಾಬ್ದಾರಿ- ರೂಪ ಪುಣ್ಯಕೋಟಿ

0

Rotary Shivamogga Jubilee ಅನಿಶ್ಚಿತ ಸಂದರ್ಭದಲ್ಲಿ ಕೆಲವು ಮಕ್ಕಳು ಅನಾಥರಾಗುತ್ತಾರೆ ಅವರನ್ನು ಗುರ್ತಿಸಿ ಸರಿದಾರಿಯಲ್ಲಿ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಎಲ್ಲಾ ಪ್ರಜ್ಞಾವಂತ ನಾಗರಿಕರ ಧರ್ಮ ಎಂದು ರೋಟರಿ ಶಿವಮೊಗ್ಗ ಜ್ಯುಬಿಲಿ “ತಾಯಿ ಮನೆ”ಯಲ್ಲಿ ಹಮ್ಮಿಕೊಂಡಿದ್ದ ವಾರದ ಸಭೆಯಲ್ಲಿ ರೂಪ ಪುಣ್ಯಕೋಟಿ ಹೇಳಿದರು.
ಸ್ವಾರ್ಥಪೂರ್ಣ ಸಮಾಜದಲ್ಲಿ, ಕೆಲವು ಸ್ವಹಿತ ಮೀರಿದ ಸೇವೆಗೆ ತೊಡಗಿಕೊಂಡಿರುವವರಿಂದ ಕೆಲವು ಮಕ್ಕಳು ಉತ್ತಮ ಶಿಕ್ಷಣ ಹೊಂದಿ ಸಮಾಜದ ಏಳಿಗೆಗೆ ದುಡಿಯಲು ಸಹಕಾರಿ ಯಾಗಿದೆ ಎಂದರು. ಮಾಜಿ ಅಧ್ಯಕ್ಷ ಎಸ್.ಎಸ್.ವಾಗೇಶ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನೊಂದ ಮಕ್ಕಳ ಕಷ್ಟಕ್ಕೆ ಮರುಗಿ, ಕೆಲವರ ಸಹಕಾರದಿಂದ 2009ರಲ್ಲಿ ಪ್ರಾಂಭಿಸಿದ ಈ ತಾಯಿ ಮನೆ ಇಂದು ಹಲವು ಸಂಘ ಸಂಸ್ಥೆಗಳ ಸಹಕಾರದಿಂದ, ಯಾವುದೇ ಪ್ರಚಾರಕ್ಕೆ ಒತ್ತು ಕೊಡದೆ ತಮ್ಮದೇ ಸಿದ್ದಾಂತದಿಂದ ಶಿವಮೊಗ್ಗ ಆಸ್ತಿಯಾಗಿದೆ ಎಂದರು.
Rotary Shivamogga Jubilee ತಾಯಿಮನೆ ಸ್ಥಾಪಕ ಸುದರ್ಶನ್ ಮಾತನಾಡುತ್ತಾ, ಕನಿಷ್ಟ ಸಹಕಾರವಿಲ್ಲದ ಮಕ್ಕಳ ಏಳಿಗೆಗೆ ಪಣತೊಟ್ಟು ಇಂದು ನಾಲ್ಕುನೂರ ಐವತ್ತು ಮಕ್ಕಳ ಜೀವನಕ್ಕೆ ದಾರಿ ದೀಪವಾಗಿರುವ ಹೆಮ್ಮೆ ನಮಗಿದೆ. ಇಂದು ನೂರಕ್ಕಿಂತ ಹೆಚ್ಚು ಮಕ್ಕಳು ಅರ್ಜಿ ನೊಂದಾಯಿಸುತ್ತಾರೆ. ಆದರೆ ಅತ್ಯಂತ ಅವಶ್ಯಕವಿರುವ ನಿರ್ಗತಿಕರು, ನಮ್ಮಲ್ಲಿ ಇರುವ ಅನುಕೂಲ ನೋಡಿ ಕೊಂಡು ಸೇರಿಸಿ ಕೊಳ್ಳುತ್ತೇವೆ.
ನಮ್ಮಲ್ಲಿ ಬೆಳೆದ ಮಕ್ಕಳು ಐಎಎಸ್ ಇನ್ನೂ ಅನೇಕ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಓದಲು ಅನಾಸಕ್ತಿ ತೋರುವ ಮಕ್ಕಳಿಗೆ ಜೀವನೊಪಯಕ್ಕೆ ದುಡಿಯಲು ಎಲೆಕ್ಟ್ರೀಕಲ್, ಪ್ಲಂಬರ್ ಮುಂತಾದ ಕೈಕೆಲಸ ಕಲಿಸುತ್ತೇವೆ.
 ಅನಾತ ಎಂಬ ಬಾವನೆ ಬರಬಾರದು ಎಂದು ನಮ್ಮ ಮನೆ ಎಂದು ಹೆಸರಿಟ್ಟಿದ್ದೇವೆ. ಶಿವಮೊಗ್ಗದ ನಾಗರಿಕರು, ಸಂಘ ಸಂಸ್ಥೆಗಳ ಸಹಕಾರದಿಂದ ಈ ಕಾರ್ಯ ನಡೆಸಿಕೊಂಡು ಬಂದಿದ್ದೇವೆ. ಇಂದು ರೋಟರಿ ಜ್ಯೂಬಿಲಿ ಸದಸ್ಯರು ಮಕ್ಕಳಿಗೆ ದಿನ ನಿತ್ಯದ ಊಟಕ್ಕೆ ಅಗತ್ಯವಾದ ದಿನಸಿ ಸಾಮಗ್ರಿಗಳನ್ನು ನೀಡಿದ್ದು ಅವರ ಸಹಕಾರಕ್ಕೆ ಧನ್ಯವಾದ ಅರ್ಪಿಸಿದರು.
ರೇಣುಕಾರಾಧ್ಯ ಸ್ವಾಗತಿಸಿದರು ಸತ್ಯನಾರಾಯಣ್ ವಂದಿಸಿ ಡಾ.ಗುರುಪಾದಪ್ಪ ನಿರೂಪಿಸಿದರು.

High School Physical Education Teachers Association Shimoga ನಿರಂತರ ಅಭ್ಯಾಸದಿಂದ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಸಾಧ್ಯ- ರಮೇಶ್

0

High School Physical Education Teachers Association Shimoga ಕ್ರೀಡೆಯಿಂದ ಶಿಸ್ತು, ಏಕಾಗ್ರತೆ  ಬೆಳೆಯುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಕ್ರೀಡಾಪಟುಗಳಿಗೆ ತಿಳಿಸಿದರು.
   
ಅವರು ನೆಹರೂ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಿವಮೊಗ್ಗ ಹಾಗೂ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ  ಸಂಘ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 17ವರ್ಷ ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ತಾಲ್ಲೂಕು ಮಟ್ಟದ ಪ್ರೌಢ ಶಾಲೆಗಳ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ  ಮಾತನಾಡುತ್ತಾ, ಓದಿನ ಜೊತೆಗೆ ಕ್ರೀಡೆಗೂ ಹೆಚ್ಚು ಒತ್ತು ಕೊಟ್ಟಾಗ ಕ್ರೀಡೆ ಬೆಳೆಯಲು ಸಾಧ್ಯವಾಗುತ್ತದೆ.
   
ಕ್ರೀಡೆಯಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ, ಸೋಲು – ಗೆಲುವನ್ನು ಸಮಾನವಾಗಿ ಸ್ವೀಕರಿಸಿ,ನಿರಂತರ ಅಭ್ಯಾಸದಿಂದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.
     
High School Physical Education Teachers Association Shimoga
ಇದೇ ಸಂಧರ್ಭದಲ್ಲಿ   ನಿವೃತ್ತಿ ಆರೋಗ್ಯ ಅಧಿಕ್ಷಕರಾದ ಗುಂಡಾಚಾರ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಿಂಗಪ್ಪ, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕಾಳಾನಾಯ್ಕ, ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.