Wednesday, March 25, 2026
Wednesday, March 25, 2026
Home Blog Page 507

Donald Trump ಟ್ರಂಪ್, ಪುನರಾಗಮನ. ಭಾರತಕ್ಕೆ ಏನಾಗಬಹುದು

0

Donald Trump ಅಮೆರಿಕಕ್ಕೆ ವಿಶ್ವದ ದೊಡ್ಡಣ್ಣ ಎಂಬ ಅಡ್ಡ ಹೆಸರಿದೆ. ಅಲ್ಲಿ ಏ‌ನಾದರೂ ರಾಜಕೀಯ ಸ್ಥಿತ್ಯಂತರವಾದರೆ ಜಗತ್ತಿನ ಮೂಲೆ ಮೂಲೆ ದೇಶಗಳಲ್ಲಿ ಎದೆ ಢವಗುಟ್ಟುತ್ತದೆ.
ಇದು ಸಾಮಾನ್ಯ ಸಂಗತಿ. ಅಮೆರಿಕದ ಅಧ್ಯಕ್ಷ ಚುನಾವಣೆ ನಡೆದಾಗಲೆಲ್ಲ ಸಣ್ಣಪುಟ್ಟ ದೇಶಗಳು‌ಜೀವ ಹಿಡಿದುಕೊಂಡು ನಿಂತಿರುತ್ತವೆ. ಜಾಗತಿಕ ಯುದ್ಧ ಆರ್ಥಿಕ ನೆರವು ,ವ್ಯಾಪಾರ ವಹಿವಾಟಿನ ಒಪ್ಪಂದ ಇವುಗಳ ವಿಚಾರದಲ್ಲಿ ಅಮೆರಿಕ ಹೇಗೆ ವರ್ತಿಸುತ್ತದೆ ಎಂಬುದು ಚುನಾಯಿತ ಅಧ್ಯಕ್ಷರ ಮೇಲೆ ಅವಲಂಬಿತ.

ಈಗ ಟ್ರಂಪ್ ಪುನರಾಗಮನವಾಗಿದೆ. ಭಾರತದ ಮೇಲೆ ಏನು ಪರಿಣಾಮ ಬೀರಬಹುದು?
ಮೊದಲ ಪರಿಣಾಮವೆಂದರೆ
ಡಾಲ್ ಎದುರು ರೂಪಾಯಿ ಕುಸಿತ.
ಇದು ಚೀನಾ ಮತ್ತು ಇರಾನ್ ಗೂ ಬೀರಿದೆ.

Donald Trump “ಅಮೆರಿಕ ಮೊದಲು” ಎಂಬ ಟ್ರಂಪ್ ಘೋಷಣೆಯಂತೆ
ಭಾರತದ ಆಟೊಮೊಬೈಲ್ ಕ್ಷೇತ್ರಕ್ಕೆ ಹೊಡೆತ ಬೀಳಲಿದೆ. ರಫ್ತಿನ ಮೇಲೆ ಅಧಿಕ ಸುಂಕ ಹಾಕುವ ಸಾಧ್ಯತೆಯಿಂದ ಸಂಕಷ್ಟ ಬರಬಹುದು.
ಎಚ್ -1 ವೀಸಾ ನೀತಿಯೂ ಕಠಿಣವಾಗಬಹುದು.
ಭಾರತದಿಂದ ಐಟಿ ರಂಗವು ಶೇ,80 ರಫ್ತು ಮಾಡುತ್ತಿದೆ. ಇದೂ ಕೂಡ ಕೆಳಗಿಳಿಯುವ ಸಾಧ್ಯತೆ ಹೆಚ್ಚಾಗಿದೆ.

Tungabhadra River ಶಾಸಕ ಚನ್ನಬಸಪ್ಪ ಅವರಿಂದ ಜಲ ಜಾಗೃತಿ & ಸ್ವಚ್ಛತಾ ಜಾಗೃತಿ ಕಾರ್ಯಕ್ರಮದ ಪೂರ್ವಭಾವಿ ಸಭೆ

0

Tungabhadra River ತುಂಗಭದ್ರಾ ನದಿಯ ಉಳಿವಿಗಾಗಿ ಇಂದಿನಿಂದ ಪ್ರಾರಂಭಗೊಂಡಿರುವ “ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆಗೆ ಸಂಬಂಧಿಸಿದಂತೆ ನವೆಂಬರ್ 10 ರಂದು ಶಿವಮೊಗ್ಗ ನಗರದಲ್ಲಿ ನಡೆಯಲಿರುವ “ಜಲ ಜಾಗೃತಿ ಹಾಗೂ ಸ್ವಚ್ಛತಾ ಜಾಗೃತಿಯ” ಕಾರ್ಯಕ್ರಮದ ಪೂರ್ವಭಾವಿಯ ಸಿದ್ಧತೆಯ ಕುರಿತಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೇಮಂತ್, ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ಕವಿತಾ ಅವರೊಂದಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಸಭೆ ನಡೆಸಿ, ಅನೇಕ ವಿಷಯಗಳ ಕುರಿತು ಚರ್ಚಿಸಿದರು.

Tungabhadra River ನಂತರ ಅಂಬೇಡ್ಕರ್ ಭವನದಲ್ಲಿ ಶಿವಮೊಗ್ಗ ನಗರದ ಶಿಕ್ಷಕರು ಹಾಗೂ ಸಂಘ ಸಂಸ್ಥೆಗಳ ಸದಸ್ಯರೊಂದಿಗೆ ಸಭೆಯಲ್ಲಿ ಭಾಗವಹಿಸಿ, ಈ ಮಹಾನ್ ಕಾರ್ಯವನ್ನು ಯಶಸ್ವಿಗೊಳಿಸಲು ಸಹಕಾರ ಕೋರಿದರು.

Karnataka Arya Vaishya Corporation ಕರ್ನಾಟಕ ಆರ್ಯವೈಶ್ಯ ನಿಗಮದಿಂದ ಅರಿವು ಶೈಶಕ್ಷಣಿಕ ಸಾಲಯೋಜನೆ ಆನ್ ಲೈನ್ ಅರ್ಜಿಗೆ ಆಹ್ವಾನ

0

Karnataka Arya Vaishya Corporation ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು 2024-25ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಿ.ಇ.ಟಿ/ಎನ್.ಇ.ಇ.ಟಿ. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಪರ ಕೋರ್ಸ್ ಹಾಗೂ ಪಿ.ಹೆಚ್.ಡಿ. ವ್ಯಾಸಂಗ ಮಾಡುವ ಆರ್ಯ ವೈಶ್ಯ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ವಾರ್ಷಿಕ ರೂ. 1.00 ಲಕ್ಷಗಳ ಸಾಲವನ್ನು ಶೇ. 2ರ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ನೀಡಲಾಗುವುದು. ವ್ಯಾಸಂಗ ಪೂರ್ಣಗೊಂಡ ನಂತರ 4 ತಿಂಗಳ ವಿರಾಮಾವಧಿ ಇರುತ್ತದೆ. ನಂತರ ಸಾಲವನ್ನು 36 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. ಅರ್ಜಿದಾರರು 18 ದಿಂದ 35 ವರ್ಷ ವಯೋಮಿತಿಯೊಳಗಿದ್ದು, ಕುಟುಂಬದ ವಾರ್ಷಿಕ ವರಮಾನ ರೂ. 6.00 ಲಕ್ಷಗಳ ಮಿತಿಯೊಳಗಿರಬೇಕು.

ಆಸಕ್ತರು ವೆಬ್‌ಸೈಟ್ www.kacdc.karnataka.gov.in ರಲ್ಲಿ ದಿ: 15/12/2024 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿರುತ್ತಾರೆ.

Karnataka Arya Vaishya Corporation ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ 9448451111 ನ್ನು ಅಥವಾ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ಭಾಗ್ಯನಿಲಯ, ಭಂಡಾರಿ ಗ್ಯಾಸ್ ಏಜೆನ್ಸಿ ಹತ್ತಿರ, 1ನೇ ಪ್ಯಾರಲಲ್ ರಸ್ತೆ, ಗಾಂಧಿನಗರ, ಶಿವಮೊಗ್ಗ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸುವುದು.

Rotary Shivamogga ನವೆಂಬರ್ 8.ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಶಿವಮೊಗ್ಗಕ್ಕೆ ಭೇಟಿ

0

Rotary Shivamogga ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಅವರ ಅಧಿಕೃತ ಭೇಟಿ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ನ. ೮ರಂದು ವೈವಿಧ್ಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನ. ,08ರಂದು ಬೆಳಗ್ಗೆ 7ಕ್ಕೆ ಶಿವಮೊಗ್ಗ ನಗರದ ಪೆಸಿಟ್ ಕಾಲೇಜಿನ ಎದುರಿನ ಶಕ್ತಿಧಾಮ ಟೌನ್‌ಶಿಪ್ ಎರಡನೇ ಹಂತದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 9ಕ್ಕೆ ರೋಟರಿ ಚಿತಾಗಾರಕ್ಕೆ ಭೇಟಿ ಕಾರ್ಯಕ್ರಮ ಇರಲಿದೆ. ಬೆಳಗ್ಗೆ 11ಕ್ಕೆ ರೋಟರಿ ಶಾಲೆಯ ಇಂರ‍್ಯಾಕ್ಟ್ ಮಕ್ಕಳೊಂದಿಗೆ ಸಂವಾದ ನಡೆಸುವರು. ಮಲವಗೊಪ್ಪದ ಸರ್ಕಾರಿ ಶಾಲೆಗೆ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಭೇಟಿ ನೀಡುವರು. ಸಂಜೆ ೪.೩೦ಕ್ಕೆ ಸಕ್ರೆಬೈಲು ಸಮೀಪದಲ್ಲಿ ಸಂಚಾರ ಜಾಗೃತಿ ಫಲಕ ಅಳವಡಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Rotary Shivamogga ನ. 8ರ ಸಂಜೆ 7:30ಕ್ಕೆ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಅವರು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಗೆ ಭೇಟಿ ನೀಡುವರು. ರೋಟರಿ ಸಹಾಯಕ ಗವರ್ನರ್ ಎಚ್.ಎಂ.ಸುರೇಶ್, ವಲಯ ಸೇನಾನಿ ಮಂಜುನಾಥ ರಾವ್ ಕದಂ, ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಅರುಣ್ ದೀಕ್ಷಿತ್, ಕಾರ್ಯದರ್ಶಿ ಶಶಿಕಾಂತ್ ನಾಡಿಗ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿರುವರು.

FRUITS Software ಕೆಎಂಎಫ್ ನಿಂದ ಮೆಕ್ಕೆಜೋಳ ಪ್ರತಿ ಕ್ವಿಂಟಾಲ್ ಗೆ ₹ 2400 ನಂತೆ ಖರೀದಿ

0

FRUITS Software ಕರ್ನಾಟಕ ಸರ್ಕಾರದ ಅಧಿಸೂಚನೆಯನ್ವಯ ಮೆಕ್ಕೆಜೋಳ ಬೆಳೆದ ರೈತರಿಗೆ ನೆರವಾಗಲು, ಕರ್ನಾಟಕ ಹಾಲು ಮಹಾಮಂಡಳಿಯು ರೈತರಿಂದ ಮೆಕ್ಕೆಜೋಳವನ್ನು ನೇರವಾಗಿ ಪ್ರತಿ ಕ್ವಿಂಟಾಲ್‌ಗೆ ರೂ.2400/- ರ ಬೆಲೆಯಲ್ಲಿ ಖರೀದಿಸಲಿದೆ.

ಮೆಕ್ಕೆಜೋಳ ಬೆಳೆದಿರುವ ಆಸಕ್ತ ರೈತರು ಸಮೀಪದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಒಂದು ಕೆ.ಜಿ. ಪ್ರಮಾಣದಷ್ಟು ಮೆಕ್ಕೆಜೋಳದ ಮಾದರಿಯನ್ನು ನೀಡಿ, FRUITS ತಂತ್ರಾಂಶದಲ್ಲಿ ನೋಂದಾವಣೆಯಾಗಿರುವ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಬಹುದಾಗಿದೆ.

ನೋಂದಣಿ ಪ್ರಕ್ರಿಯೆಯು ನ.11 ರಿಂದ ಪ್ರಾರಂಭವಾಗುತ್ತಿದ್ದು ದಾವಣೆಗೆರೆ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆದಿರುತ್ತದೆ.

ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಸ್ತುತ ಬಳಕೆ ಮಾಡುತ್ತಿರುವ ಕ್ಷೀರಸಿರಿ ಮತ್ತು ಸರಕಾರದ ಕೃಷಿ ಇಲಾಖೆ ಸಿದ್ದಪಡಿಸಿರುವ FRUITS ತಂತ್ರಾಂಶದ ಮೂಲಕ ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ಅನುಷ್ಟಾನಕ್ಕೆ ತರುತ್ತಿದ್ದು, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆದ ಆಸಕ್ತ ರೈತರು, ತಮ್ಮ ಮೆಕ್ಕೆಜೋಳದ ಮಾದರಿಗಳನ್ನು ತಮ್ಮ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ನೀಡಬಹುದು.

FRUITS Software ಪ್ರತಿ ಒಬ್ಬ ರೈತರಿಂದ ಗರಿಷ್ಟ 500 ಕ್ವಿಂಟಾಲ್ ಮೆಕ್ಕೆಜೋಳ ಸರಬರಾಜಿಗೆ ಸೀಮಿತಗೊಳಿಸಿದ್ದು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸೊರಬ, ಸಾಗರ ವ್ಯಾಪ್ತಿಯಲ್ಲಿ ಡಾ.ಶರತ್, ಉಪ ವ್ಯವಸ್ಥಾಪಕರು, ಮೊ.ಸಂ: 7760970616 ಇವರನ್ನು, ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಡಾ.ಸೂರಜ್, ಸಹಾಯಕ ವ್ಯವಸ್ಥಾಪಕರು ಮೊ.ಸಂ: 9844346640 ಹಾಗೂ ನ್ಯಾಮತಿ ತಾಲ್ಲೂಕು ವ್ಯಾಪ್ತಿಗೆ ಸಂಬಂಧಪಟ್ಟಂತೆ ಹರೀಶ್ ಕರೇಗೌಡ, ಸಹಾಯಕ ವ್ಯವಸ್ಥಾಪಕರು ಮೊ.ಸಂ: 7399530405 ರನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ಕಹಾಮ ಪಶುಘಟಕ, ಶಿಕಾರಿಪುರ ಮೊ.ಸಂ: 9606012571 ನ್ನು ಸಂಪರ್ಕಿಸಬಹುದೆಂದು ಪ್ರಧಾನ ವ್ಯವಸ್ಥಾಪಕರು, ಕಹಾಮ ಪಶು ಆಹಾರ ಘಟಕ, ಶಿಕಾರಿಪುರ ಇವರು ತಿಳಿಸಿದ್ದಾರೆ.

Thirtahalli Police ತೀರ್ಥಹಳ್ಳಿ ಮೃತ‌ವ್ಯಕ್ತಿಯ ಬಗ್ಗೆ ವಾರಸುದಾರರಿಗೆ ಮಾಹಿತಿ ತಿಳಿಸಲು ಪೊಲೀಸ್ ಪ್ರಕಟಣೆ

0

Thirtahalli Police ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ರಮೇಶ್, ಸುಮಾರು 45 ವರ್ಷ ಈತನು ಅಸ್ವಸ್ಥನಾದ ಕಾರಣಕ್ಕೆ ಅ.24 ರಂದು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾನೆಂದು
ತಿಳಿಸಿರುತ್ತಾನೆ.

ರಮೇಶ್ ತಾನು ಮಂಗಳೂರಿನ ಕಡೆಯಿಂದ ಬಂದವನು, ತನಗೆ ಯಾರೂ ಇಲ್ಲ, ಕೆಲಸ ನೀಡಿರೆಂದು ಕೂಲಿ ಕೆಲಸಕ್ಕೆ ಸೇರಿರುತ್ತಾನೆ. ಪ್ರತಿ ದಿನ ಮದ್ಯಪಾನ ಮಾಡಿ ಅಸ್ವಸ್ಥನಾಗಿರುತ್ತಾನೆ. ಶವವನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

Thirtahalli Police ಮೃತನು 5 ಅಡಿ ಎತ್ತರ, ಎದೆ ಮೇಲೆ ಜ್ಯೋತಿ ಅಂತ ಹಚ್ಚೆ ಇದ್ದು, ಹೊಟ್ಟೆ ಮೇಲೆ 4*2 ಇಂಚು ಉದ್ದ ಅಗಲದ ಮಚ್ಚೆ ಇರುತ್ತದೆ. ಕುರುಚಲು ಗಡ್ಡ, 02 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಕೂದಲು ಇದ್ದು ಕೆಂಪು ತುಂಬು ತೋಳಿನ ಷರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.

ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಠಾಣಾಧಿಕಾರಿ, ತೀರ್ಥಹಳ್ಳಿ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆ ಇವರನ್ನು ಸಂಪರ್ಕಿಸಬಹುದೆಂದು ತಿಳಿಸಿದೆ

Rotary Club Shivamogga ಸಾಂಸ್ಕೃತಿಕ ಕಾರ್ಯಕ್ರಮಗಳು ಪರಸ್ಪರ ಬಾಂಧವ್ಯ ಬೆಸೆಯುತ್ತವೆ- ಜಿ.ಕಿರಣ್ ಕುಮಾರ್

0

Rotary Club Shivamogga ಆತ್ಮವಿಶ್ವಾಸ, ಪರಸ್ಪರ ಓಡನಾಟ ವೃದ್ಧಿಸುವಲ್ಲಿ ಸಂಘ ಸಂಸ್ಥೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣಕುಮಾರ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ಕುಟುಂಬ ಮಿಲನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಕುಟುಂಬದ ಕಾರ್ಯಕ್ರಮದಿಂದ ಸಂಸ್ಥೆ ಸದಸ್ಯರಲ್ಲಿ ಪರಸ್ಪರ ಬಾಂಧವ್ಯ ಬೆಳೆಯುತ್ತದೆ. ಜೀವನ ಉತ್ತಮಗೊಳಿಸಲು ನೆರವಾಗುತ್ತದೆ ಎಂದು ತಿಳಿಸಿದರು.

Rotary Club Shivamogga ಸಾಂಸ್ಕೃತಿಕ ಚಾಂಪಿಯನ್ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಿ ಸ್ಪರ್ಧಾಳುಗಳಿಗೆ ಗೌರವಿಸಲಾಯಿತು. ಗಾಯನ ತರಬೇತಿದಾರ ಪ್ರಹ್ಲಾದ್ ದೀಕ್ಷಿತ್, ನೃತ್ಯ ತರಬೇತಿದಾರ ತೇಜಸ್ ಹಾಗೂ ಡ್ರಾಮಾ ನಿರ್ದೇಶಕ ಶಂಕರ್ ಹಾಗೂ ಸೈಯದ್ ಅಲಿ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಸೆಂಟ್ರಲ್‌ನ ಎಲ್ಲಾ ಸದಸ್ಯರು ಕುಟುಂಬ ಸಮೇತರಾಗಿ ದೀಪಾವಳಿ ಹಬ್ಬ ಆಚರಿಸಿದರು. ದೀಪ ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಹಬ್ಬ ಆಚರಣೆಗೆ ಸದಸ್ಯರು ಸಂತೋಷ ವ್ಯಕ್ತಪಡಿಸಿದರು. ಪ್ರಹ್ಲಾದ್ ದೀಕ್ಷಿತ್ ರಾಗ ರಂಜಿನಿ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಮೂರು ಗಂಟೆಗೂ ಅಧಿಕ ಸಮಯ ನಡೆಯಿತು.
ರೋಟರಿ ಕ್ಲಬ್ ಸೆಂಟ್ರಲ್ ಕಾರ್ಯದರ್ಶಿ ಈಶ್ವರ್, ಪಿಡಿಜಿ ಜಿ.ಎನ್.ಪ್ರಕಾಶ್, ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಚುಡಾಮಣಿ ಪವಾರ್, ಆನಂದ್, ಮುರಳಿ, ಅರುಣ್ ಕುಮಾರ್, ಇಂದ್ರೇಶ್, ರಮಾನಾಥ್ ಗಿರಿಮಾಜಿ, ಕುಮಾರ ಎಸ್ ಕೆ, ಕಲ್ಚರ ಚೇರ್ಮನ್ ರಾಜಶ್ರೀ ಬಸವರಾಜ್, ಅನ್ ಕ್ಲಬ್ ಅಧ್ಯಕ್ಷೆ ಗೀತಾ ಜಗದೀಶ್, ಶುಭಾ ಚಿದಾನಂದ್ ಹಾಗೂ ಕ್ಲಬ್ಬಿನ ಎಲ್ಲಾ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು.

Nagarjuna University ರಾಜ್ಯಮಟ್ಟದ ಅಂಡರ್ 18 ವಯೋಮಿತಿ ಅಥ್ಲೆಟಿಕ್ ನಲ್ಲಿ ಅನುಷಾ ಜಿ ನಾಯಕ್ & ಅಭಿಜ್ಞಾ ಗಮನಾರ್ಹ ಸಾಧನೆ

0

Nagarjuna University ಇತ್ತೀಚೆಗೆ ಆಂಧ ಪ್ರದೇಶದ ಗುಂಟೂರು ನಾಗಾರ್ಜುನ ವಿಶ್ವವಿದ್ಯಾನಿಲಯದಲ್ಲಿ ನಡೆದ 35ನೇ ದಕ್ಷಿಣ ವಲಯದ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ ಶಿಫ್‌ನಲ್ಲಿ 18ರ ವಯೋಮಿತಿಯ ಬಾಲಕ – ಬಾಲಕಿಯರ ಅಥ್ಲೆಟಿಕ್ ಚಾಂಪಿಯನ್‌ಶಿಫ್ ನಲ್ಲಿ ಜಿಲ್ಲೆಯ ಅನುಷಾ ಜಿ ನಾಯಕ್ 100 ಮೀ 200 ಮೀ 4×100ಮೀ ರಿಲೇಯಲ್ಲಿ ಅಭಿಜ್ಞಾ 400 ಮೀ 4×100 ಮೀ ಪಡೆದು ನಮ್ಮ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

Nagarjuna University ಈ ವಿದ್ಯಾರ್ಥಿಗಳು ಜಿಲ್ಲೆಯ ಡಿವಿ ಸ್. ಕಾಲೇಜಿನಲ್ಲಿ ವಿದ್ಯಾ ಭ್ಯಾಸ ಮಾಡುತ್ತಿರುತ್ತಾರೆ. ಶಿವ ಮೊಗ್ಗದ ನೆಹರು ಕ್ರೀಡಾಂ ಗಣದಲ್ಲಿ ತರಬೇತುದಾರರಾದ ಶಿವುಕುಮಾರ್. ಎಂ. ಡಿ. ಅವರ ಬಳಿ ತರಬೇತಿಯನ್ನು ಪಡೆ ಯುತ್ತಿದ್ದು, ಈ ಕ್ರೀಡಾಪಟುಗಳು ಮುಂದೆ ಬರುವ ಆಲ್ ಇಂಡಿ ಯಾ ಲೆವೆಲ್ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾರೆ. ಇವರುಗಳಿಗೆ ತರಬೇತುದಾ ರಾದ ಶಿವುಕುಮಾರ್ ಎಂ. ಡಿ. ಜಿಲ್ಲಾ ಅಥ್ಲೆಟಿಕ್ ಅಸೋಸಿ ಯೇಷನ ಕಾರ್ಯ ದರ್ಶಿ ಉದಯ್ ಕುಮಾರ್, ಯಶವಂತ ನಾಯ್ಕ್, ಅಶೋಕ್, ಯುವ ಜನ ಮತ್ತು ಕ್ರೀಡಾ ಇಲಾಖೆ ಸಹ ಕಾರ್ಯದರ್ಶಿ ರೇಖಾ ನಾಯ್ಕ್ ಮತ್ತು ಕ್ರೀಡಾಪಟುಗಳು ಶುಭಕೋರಿದ್ದಾರೆ.

CM Siddhramaiah ಮೂಡಾ ಬಗ್ಗೆ ಲೋಕಾಯುಕ್ತ ವಿಚಾರಣೆಯಲ್ಲಿ ಸೀಎಂ ಸಿದ್ಧರಾಮಯ್ಯ ಹೇಳಿದ್ದೇನು?

0

CM Siddhramaiah ಮುಡಾ ಪ್ರಕರಣ ಸಂಬಂಧ ಇಂದು( ಬುಧವಾರ) ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದೆ, ಅವರ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿದ್ದೇನೆ. ನನ್ನ ಮೇಲೆ ದುರುದ್ದೇಶದಿಂದ ಕೂಡಿದ ಸುಳ್ಳು ಪ್ರಕರಣ ಇದಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ವಾಸ್ತವಾಂಶ ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಸ್ನೇಹಮಯಿ ಕೃಷ್ಣ ಅವರು ಕೋರಿದಂತೆ, ರಾಜ್ಯಪಾಲರ ಆದೇಶದಂತೆ ಲೋಕಾಯುಕ್ತ ವಿಚಾರಣೆಯನ್ನು ನಡೆಸಲಾಗಿದೆ. ಈಗ ಬಿಜೆಪಿ ನಾಯಕರು ಲೋಕಾಯುಕ್ತ ವಿಚಾರಣೆ ಬೇಡ, ಸಿಬಿಐಗೆ ವಹಿಸಬೇಕು ಎಂದು ತಗಾದೆ ತೆಗೆದರೆ ಅದು ವಿಚಾರಣೆಯ ವಿರುದ್ಧವಾಗಿದ್ದಾರೆ ಎಂಬ ಅರ್ಥವಲ್ಲವೇ? ಇದರಿಂದಲೇ ಅವರ ಎಲ್ಲಾ ಆರೋಪ ಸುಳ್ಳು ಎಂದು ಸ್ಪಷ್ಟವಾಗುತ್ತದೆ.

ಕೇಂದ್ರ ಸರ್ಕಾರದ ಅಧೀನದಲ್ಲಿ ಸಿಬಿಐ ಇದೆ. ಬಿಜೆಪಿಯವರು ಇದುವರೆಗೆ ಯಾವುದಾದರೂ ಹಗರಣವನ್ನು ಸಿಬಿಐ ಗೆ ವಹಿಸಿದ್ದಾರೆಯೇ? ಲೋಕಾಯುಕ್ತ ಒಂದು ಸ್ವತಂತ್ರ ತನಿಖಾ ಸಂಸ್ಥೆ. ಲೋಕಾಯುಕ್ತದಲ್ಲಿ ನಂಬಿಕೆಯಿಲ್ಲದ ಬಿಜೆಪಿಯವರಿಗೆ ಕಾನೂನಿನ ಬಗ್ಗೆಯೂ ಗೌರವವಿಲ್ಲ. ರಾಜ್ಯಪಾಲರು ಕೂಡ ಲೋಕಾಯುಕ್ತದಲ್ಲಿಯೇ ತನಿಖೆಯಾಗಬೇಕೆಂದು ಸೂಚಿಸಿದ್ದು, ಅದರಂತೆ ವಿಚಾರಣೆ ನಡೆಯುತ್ತಿದೆ.

CM Siddhramaiah ಮುಡಾದಿಂದ 14 ನಿವೇಶನಗಳು ಕಾನೂನೂಬದ್ಧವಾಗಿಯೇ ಹಂಚಿಕೆ ಆಗಿದೆ. ಬಿಜೆಪಿ – ಜೆಡಿಎಸ್ ನವರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತ ವಿಚಾರಣೆಯಲ್ಲಿ ಇಂದು ಉತ್ತರವನ್ನು ನೀಡಿದ್ದೇನೆ. ತನಿಖೆಯನ್ನು ಕಾನೂನುರೀತ್ಯಾ ಮುಂದುವರೆಸಲಿದ್ದಾರೆ.

ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ನನ್ನ ಬಳಿಯಿಲ್ಲ ಹಾಗೂ ನನ್ನಿಂದ ಯಾವುದೇ ದಾಖಲೆ ಕೇಳಲಾಗಿಲ್ಲ. ಇಡೀ ಪ್ರಕರಣವೇ ಒಂದು ಷಡ್ಯಂತ್ರವಾಗಿರುವುದರಿಂದ ನ್ಯಾಯಾಲಯದಲ್ಲಿ ತೀರ್ಮಾನವಾಗುವವರೆಗೆ ನನ್ನ ರಾಜಕೀಯ ಜೀವನಕ್ಕೆ ಯಾವುದೇ ಕಪ್ಪು ಮಸಿ ಇಲ್ಲ. ನನ್ನ ಮೇಲೆ ಮಾಡಲಾಗಿರುವ ಸುಳ್ಳು ಆರೋಪಗಳಿಗೆ ನ್ಯಾಯಾಲಯದಲ್ಲಿ ತಕ್ಕ ಉತ್ತರವನ್ನು ನೀಡಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

Chamber of Commerce Shivamogga ದೈಹಿಕ, ಮಾನಸಿಕ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೀಗ ಶಿವಮೊಗ್ಗದಲ್ಲಿ “ಪ್ರಾಣಶಕ್ತಿ ಚಿಕಿತ್ಸಾ ಕಾರ್ಯಾಗಾರ

0

Chamber of Commerce Shivamogga ಯಾವುದೇ ಬಗೆಯ ಮಾನಸಿಕ ಹಾಗೂ ದೈಹಿಕ ಸಂಬಂಧದ ಆರೋಗ್ಯ ಸಮಸ್ಯೆಗಳಿಗೆ ಡಾ. ಲತಾಶೇಖರ್ ಅವರು ಕಳೆದ ಎರಡು ದಶಕಗಳಿಂದ ನಿಖರ ಫಲಿತಾಂಶದ ಭಾರತೀಯ ಪ್ರಾಚೀನ ಪರಂಪರೆಯ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆಗಳನ್ನು ಒದಗಿಸಿ ಜನಸಾಮಾನ್ಯರಿಗೆ ರಾಸಾಯನಿಕ ಮಾತ್ರೆ-ಔಷಧಮುಕ್ತ ಜೀವನಶೈಲಿಯನ್ನು ಕಲ್ಪಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ನವೆಂಬರ್ 10 ರಂದು ಪ್ರಪ್ರಥಮ ಬಾರಿಗೆ ಡಾ. ಲತಾಶೇಖರ್ ಅವರ ಒಂದು ದಿನದ ಚಿಕಿತ್ಸಾ ಕಾರ್ಯಗಾರವನ್ನು ಶಿವಮೊಗ್ಗ ನಗರದ ಚೇಂಬರ್ ಆಫ್ ಕಾಮಸ್೯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಗಾರದಲ್ಲಿ ದೇಹ ಮತ್ತು ಮನಸ್ಸನ್ನು ಕ್ರೋಢೀಕರಿಸುವ ಪ್ರಾಣಶಕ್ತಿ ಜಾಗೃತಿ ಚಿಕಿತ್ಸೆ ಒಳಗೊಂಡ ಮುದ್ರಾ ಸಹಿತ ವಿವಿಧ ಬಗೆಯ ಪರ್ಯಾಯ ಚಿಕಿತ್ಸಾ ಕ್ರಮಗಳನ್ನು ಪ್ರಯೋಗ ಮಾಡಲಾಗುವುದು.

Chamber of Commerce Shivamogga ನಿಮ್ಮಲ್ಲಿರುವ ಸಮಸ್ಯೆಗಳಾದ ಮಾನಸಿಕ ಖಿನ್ನತೆ, ಭಯ, ನಿದ್ರಾಹೀನತೆ, ಮಧುಮೇಹ, ಅಧಿಕ ರಕ್ತದೊತ್ತಡ, ನರ ದೌರ್ಬಲ್ಯ, ಅರ್ಧ ತಲೆನೋವು, ಮಂಡಿ ನೋವು, ಸ್ತ್ರೀಯರ ಎಲ್ಲಾ ಬಗೆಯ ಸಮಸ್ಯೆಗಳು, ವಯೋವೃದ್ಧರ ಯಾವುದೇ ಬಗೆಯ ಸಮಸ್ಯೆಗಳು, ಮಕ್ಕಳ ಸಮಸ್ಯೆಗಳು, ಹಾಗೂ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಸರಳ ಹಾಗೂ ಸೂಕ್ತ ಚಿಕಿತ್ಸೆಯನ್ನು ಶಿಬಿರದಲ್ಲಿ ಪಡೆಯಬಹುದು.
ಸಾವ೯ಜನಿಕರು ನ್ಯಾಯವಾದ ಚಿಕಿತ್ಸಾ ಶುಲ್ಕವನ್ನು ಪಾವತಿಸಿ ಅಪರೂಪದ ಪ್ರಾಣಶಕ್ತಿ ಚಿಕಿತ್ಸಾ ಕಾರ್ಯಾಗಾರದ ನೋಂದಣಿಯನ್ನು ಮಾಡಿಕೊಳ್ಳಬಹುದು.

ಶಿಬಿರದ ವಿವರ
ದಿನಾಂಕ : 10 ನವೆಂಬರ್ ಬೆಳಿಗ್ಗೆ 8.30 ರಿಂದ ಸಂಜೆ 7 ಗಂಟೆ ವರೆಗೆ 2024 ಭಾನುವಾರ
ಸ್ಥಳ : ಛೇಂಬರ್ ಆಫ್ ಕಾಮಸ್೯ ಸಭಾಂಗಣ ಶಿವಮೊಗ್ಗ ಸಿಟಿಕ್ಲಬ್ ಹಿಂಭಾಗ
ಡಿಸ್ಟ್ರಿಕ್ಟ್ ಲೈಬ್ರರಿ ಪಕ್ಕ, ಶಿವಮೊಗ್ಗ.

ಹೆಚ್ಚಿನ ಆರೋಗ್ಯಕರ ಮಾಹಿತಿ ಹಾಗೂ ಸಲಹೆಗಳಿಗೆ ನಮ್ಮನ್ನು ಸಂಪರ್ಕಿಸಿ.
9353755841/831077452