Bharat Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಶಿಸ್ತಿನ ಸಂಸ್ಥೆಯಾಗಿದ್ದು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ ಎಂದು ಜಿಪಂ ಸಿಇಒ ಹೇಮಂತ್ ಹೇಳಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜ ಚೀಟಿ ಬಿಡುಗಡೆಗೊಳಿಸಿ ಮಾತನಾಡಿ, ಸಂಸ್ಥೆಯು ಅನೇಕ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎತ್ತರಕ್ಕೆ ಬೆಳೆಯುತ್ತಿದ್ದು, ಅದರ ಬೆಳವಣಿಗೆಗೆ ನಾವೆಲ್ಲರೂ ಕೈ ಜೋಡಿಸೋಣ, ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವಿನಾಶ್.ಸಿ ಧ್ವಜ ಚೀಟಿ ಬಿಡುಗಡೆ ಮಾಡಿ ಮಕ್ಕಳನ್ನುದ್ದೇಶಿಸಿ ಮಾತನಾಡಿ, ಸಂಸ್ಥಾಪನಾ ದಿನಾಚರಣೆ ಮಹತ್ವವನ್ನು ತಿಳಿಸುತ್ತ ಸ್ಕೌಟ್ಸ್ ಇತಿಹಾಸದ ಬಗ್ಗೆ ವಿವರಿಸಿದರು.
ಭಾರತದಲ್ಲಿ ಸ್ಕೌಟಿಂಗ್ ಗೈಡಿಂಗ್ ಬೆಳೆದು ಬಂದ ದಾರಿ ತಿಳಿಸಿ ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನ ನ್ಯಾಷನಲ್ ಸ್ಕೌಟ್ ಅಸೋಸಿಯೇಷನ್, ಹಿಂದೂಸ್ತಾನ ಸ್ಕೌಟ್ಸ್ ಅಸೋಸಿಯೇಷನ್, ಗರ್ಲ್ ಗೈಡ್ ಅಸೋಸಿಯೇಷನ್ ಹೀಗೆ ಅನೇಕ ಸಂಘಟನೆಗಳಿದ್ದು, ಇವೆಲ್ಲವನ್ನು ಒಂದುಗೂಡಿ ಒಂದೇ ಸಂಘಟನೆ ಆಗಬೇಕೆಂದು ನಿರ್ಧರಿಸಿ ಪ್ರತಿಫಲವಾಗಿ 1950 ನವೆಂಬರ್ 7 ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು ಎಂದು ತಿಳಿಸಿದರು.
Bharat Scouts and Guides ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಡಿಡಿಪಿಐ ಎಸ್.ಆರ್.ಮಂಜುನಾಥ್ ಅವರು ಇಲಾಖೆ ಕಚೇರಿ ಆವರಣದಲ್ಲಿ ಧ್ವಜ ಚೀಟಿ ಬಿಡುಗಡೆ ಮಾಡಿ ಮಾತನಾಡಿದರು. ಎ.ವಿ.ರಾಜೇಶ್ ಮಾತನಾಡಿದರು. ಜಿಲ್ಲಾ ಆಯುಕ್ತ(ಸ್ಕೌಟ್ಸ್) ಎಸ್.ಜಿ.ಆನಂದ್ ಮತ್ತು ಜಿಲ್ಲಾ ಆಯುಕ್ತ ಕೆ.ರವಿ, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ಸಹ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ವಿಜಯಕುಮಾರ, ಜಿಲ್ಲಾ ಸಹಾಯಕ ಆಯುಕ್ತರು ಮಲ್ಲಿಕಾರ್ಜುನ ಕಾನೂರು, ಕೃಷ್ಣಸ್ವಾಮಿ, ಮೀನಾಕ್ಷಮ್ಮ, ಶಾಂತಮ್ಮ, ದಾಕ್ಷಾಯಿಣಿ ರಾಜಕುಮಾರ್, ನಗರದ ವಿವಿಧ ಶಾಲೆಯ 200 ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಉಪಸ್ಥಿತರಿದ್ದರು.
Bharat Scouts and Guides ಸ್ಕೌಟ್ಸ್ & ಗೈಡ್ಸ್ ಶಿಸ್ತಿನ ಸಂಸ್ಥೆ. ಅದರ ಬೆಳವಣಿಗೆಗೆ ಎಲ್ಲರೂ ಶ್ರಮಿಸೋಣ- ಸಿಇಓ ಹೇಮಂತ್
Klive Special Article ಸಮಾಜ ಪ್ರೀತಿಯ” ಸುಬ್ಬಯ್ಯ ಮಾವನವರು- ಅವಿಸ್ಮರಣೀಯ ವ್ಯಕ್ತಿ
Klive Special Article ನಾನು ಡಾ ಶ್ರೀನಿವಾಸ್ ರವರನ್ನು ಮದುವೆಯಾಗಿ ಬಂದಾಗ ನನ್ನ ಮಾವನವರಿಗೆ ಸುಮಾರು ಐವತ್ತೈದರ ಹರೆಯವಿರಬಹುದು. ನನ್ನ ಮದುವೆಯ ದಿನವೇ ಅವರ ಅಚ್ಚುಕಟ್ಚುತನವನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೆ. ಮಾಡುವ ಕೆಲಸಗಳು ಪರಿಪೂರ್ಣವಾಗಿರಬೇಕು ಎಂಬುದು ಅವರ ಬದುಕಿನ ನಿಯಮವಾಗಿತ್ತು. ದುಡಿಮೆಯೇ ದೇವರು ಎಂಬುದನ್ನು ಅಕ್ಷರಶಃ ಪಾಲಿಸಿದವರು ಅವರು. ಪ್ರತಿ ಬಾರಿ ಊಟಕ್ಕೆ ಕುಳಿತಾಗ ‘ಈ ದಿನದ ಊಟವನ್ನು ನಾನು ಗಳಿಸಿದ್ದೇನೆಯೇ? ಅಷ್ಟು ಕೆಲಸವನ್ನು ನಾನು ಇಂದು ಮಾಡಿದ್ದೇನೆಯೇ’ ಎಂದು ಸ್ವ ವಿಮರ್ಶೆ ಮಾಡಿ ತುತ್ತನ್ನು ಕೈಗೆತ್ತಿಕೊಳ್ಳುವ ಸ್ವಭಾವ ಅವರದ್ದು. ಮನೆಯ ಮೂರೂ ಸೊಸೆಯಂದಿರನ್ನು ಕಡೆಯವರೆಗೂ ಬಹುವಚನ ಪ್ರಯೋಗ ಮಾಡಿಯೇ ಮಾತನಾಡಿಸುತ್ತಿದ್ದುದು ಅವರ ವ್ಯಕ್ತಿತ್ವದ ವಿಶೇಷತೆ.

ಸ್ಮರಣೆ: ಡಾ.ವಿನಯಾ ಶ್ರೀನಿವಾಸ್.
ಹಿರಿಯ ಸಮಾಜ ಸೇವಕ ಮತ್ತು ಸುಬ್ಬಯ್ಯ ವೈದ್ಯಕೀಯ ಕಾಲೇಜು ಸಂಸ್ಥಾಪಕರಾದ ಶ್ರೀಸುಬ್ಬಯ್ಯ ಅವರ ಸೊಸೆ,ಡಾ.ವಿನಯಾ ಶ್ರೀನಿವಾಸ್.
ಪತ್ರಿಕೆಗಳಲ್ಲಿ ವೈದ್ಯಕೀಯ ಲೇಖನ ಪ್ರಕಟಿಸಿ ಜನತೆಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಇತ್ತೀಚೆಗಷ್ಟೆ ನಿಧನರಾದ ತಮ್ಮ ಪ್ರೀತಿಯ “ಮಾವ” ನವರಾದ ದಿ.ಸುಬ್ಬಯ್ಯ ಅವರ ಆತ್ಮೀಯ ನೆನಪನ್ನ ಹಂಚಿಕೊಂಡಿದ್ದಾರೆ.
Klive Special Article ಯಾವುದೇ ಮಹತ್ತರ ಕಾರ್ಯ ಕೈಗೆತ್ತಿಕೊಳ್ಳುವಾಗ ಮುಂದಿನ ನೂರು ವರ್ಷಗಳವರೆಗಿನ ಸಾಧಕ ಬಾಧಕಗಳನ್ನು ಆಲೋಚಿಸಿ ಹೆಜ್ಜೆ ಇಡುವಂತಹ ದೂರದೃಷ್ಟಿ ಅವರದ್ದು. ಯಾರೇ ತಪ್ಪು ದಾರಿ ತುಳಿದರೂ ಖಡಾ ಖಂಡಿತವಾಗಿ ಖಂಡಿಸುತ್ತಿದ್ದ ನಿಷ್ಟುರತೆ ಅವರದ್ದು. ‘ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಏಕೆಂದರೆ ಯಾರೂ ನಮ್ಮಿಂದ ಕಸಿದುಕೊಳ್ಳದ ಆಸ್ತಿಯೆಂದರೆ ವಿದ್ಯೆ ಮಾತ್ರ ಎಂಬ ಕಿವಿಮಾತನ್ನು ಮನೆಯಲ್ಲಿ ಸದಾ ಹೇಳುತ್ತಿದ್ದರು. ತಮ್ಮಲ್ಲಿ ಸಹಾಯ ಕೇಳಿ ಬರುತ್ತಿದ್ದ ಬಡವರಿಗೆ ಎಂದೂ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಅವರು ವ್ಯಯ ಮಾಡುತ್ತಿದ್ದ ಹಣದ ಲೆಕ್ಕಾಚಾರವನ್ನು ಬರೆದಿಡುತ್ತಿದ್ದ ಪರಿ ನನ್ನನ್ನು ಎಷ್ಟೋ ಬಾರಿ ಚಕಿತಗೊಳಿಸಿದೆ. ಇತ್ತೀಚೆಗೆ ಅವರ ಬೀರುವಿನಲ್ಲಿ ಸಿಕ್ಕ ಪುಸ್ತಕವೊಂದರಲ್ಲಿ ಇಡೀ ಕಟ್ಟಡವೊಂದಕ್ಕೆ ಖರ್ಚು ಮಾಡಿ ಬರೆದಿಟ್ಟ ವಿವರ ಅವರ ಆರ್ಥಿಕ ಶಿಸ್ತು ಹಾಗೂ ಕಾರ್ಯತತ್ಪರತೆಯನ್ನು ಎತ್ತಿ ತೋರುತ್ತದೆ. ಸರಳತೆ ಮತ್ತು ಮಿತವ್ಯಯತೆ ಅವರ ವ್ಯಕ್ತಿತ್ವದ ಮತ್ತೊಂದು ಮುಖ. ಸ್ವತಃ ಪದವೀಧರರಲ್ಲದಿದ್ದರೂ ಒಬ್ಬ ವೈದ್ಯನಿಗಿಂತಲೂ ಹೆಚ್ಚಾಗಿ ಆಸ್ಪತ್ರೆಯೊಂದರ ಆಡಳಿತವನ್ನು ಪರಿಪೂರ್ಣವಾಗಿ ನಡೆಸುವ ಸಾಮರ್ಥ್ಯ ಅವರದ್ದು. ಯಾವುದೇ ಮಹತ್ತರ ಕಾರ್ಯವನ್ನು ಕೈಗೆತ್ತಿಕೊಂಡಾಗ ಅದು ಮುಗಿಯುವ ತನಕ ವಿಶ್ರಾಂತಿ ಬಯಸದ ರೀತಿ ಅವರದ್ದು. ಅವರ ಈ ವೈಖರಿಯೇ ನಮ್ಮ ಸಂಸ್ಥೆಗಳಿಗೆ ಭದ್ರ ಅಡಿಪಾಯ ಎಂದರೆ ಪ್ರಾಯಶಃ ತಪ್ಪಾಗಲಾರದು. ಅವರು ಒಂದು ಮಹಾನ್ ಶಕ್ತಿಯಂತೆ ನಮ್ಮ ಮುಂದಿನ ತಲೆಮಾರುಗಳಿಗೂ ದಾರಿದೀಪವಾಗಲಿ ಎಂಬದೇ ಈ ಹೊತ್ತಿನ ನಮ್ಮ ಆಶಯ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಲಿ ಎಂಬುದು ಸದ್ಯದ ಪ್ರಾರ್ಥನೆ.
Nirmala Tunga Bhadra ನಿರ್ಮಲ ತುಂಗ ಭದ್ರಾ ಅಭಿಯಾನ ಯಶಸ್ಸಿಗೆ ಸಹಕರಿಸಲು ಶಾಸಕ ಚೆನ್ನಿ ಮನವಿ
Nirmala Tunga Bhadra ತುಂಗಭದ್ರಾ ನದಿಯ ಉಳಿವಿಗಾಗಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನವದೆಹಲಿ ಹಾಗೂ ಪರ್ಯಾವರಣ ಟ್ರಸ್ಟ್ (ರಿ) ಶಿವಮೊಗ್ಗ ಇವರ ಸಹಯೋಗದಲ್ಲಿ ನಡೆಯುತ್ತಿರುವ “ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ” ಯ ಕುರಿತಂತೆ ಇಂದು ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಸಾರ್ವಜನಿಕ ಶಿಕ್ಷಣದ ಉಪ ನಿರ್ದೇಶಕರ ಕಚೇರಿಯಲ್ಲಿ ನಗರದ ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರೊಂದಿಗೆ ಚರ್ಚಿಸಿ, ಅಭಿಯಾನವನ್ನು ಯಶಸ್ವಿಗೊಳಿಸಲು ಸಹಕಾರ ಕೋರಿದರು.
Rotary Shivamogga ರೋಟರಿ ಸದಸ್ಯರು ಜನ್ಮದಿನ,ವಿವಾಹ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ಸಸಿ ನೆಟ್ಟು ಪೋಷಿಸಬೇಕು- ರೋ.ಜಿ. ಗವರ್ನರ್. ಸಿ.ಎ.ದೇವ್ ಆನಂದ್
Rotary Shivamogga ಪರಿಸರ ಸಂರಕ್ಷಣೆಯು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಉತ್ತಮ ಪರಿಸರ ನಿರ್ಮಾಣದಿಂದ ಎಲ್ಲರ ಆರೋಗ್ಯ ವೃದ್ಧಿಯಾಗುತ್ತದೆ. ಸಸಿಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಶಕ್ತಿಧಾಮ ಬಡಾವಣೆಯಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಹಾಗೂ 101 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈಗಾಗಲೇ ರೋಟರಿ ವತಿಯಿಂದ ನಿರಂತರವಾಗಿ ಜಿಲ್ಲಾ ಯೋಜನೆಯಲ್ಲಿ ಪರಿಸರ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಶಿಕ್ಷಣ ಆರೋಗ್ಯ ಸೇವೆಗಳ ಬಗ್ಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂದು ತಿಳಿಸಿದರು.
ರೋಟರಿ ಸದಸ್ಯರು ಜನ್ಮದಿನ, ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು. ಈ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಬೇಕು. ಜಿಲ್ಲಾ ಯೋಜನೆಗಳಲ್ಲಿ ಒಂದಾದ ಪರಿಸರ ಸಂರಕ್ಷಣೆ ಮುಂದಿನ ಮನುಕುಲಕ್ಕೆ ತುಂಬಾ ಅಗತ್ಯವಾಗಿ ಬೇಕಾಗಿರುವ ಯೋಜನೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರೋಟರಿ ವಲಯ 11ರ ಸಹಾಯಕ ಗವರ್ನರ್ ಸುರೇಶ್ ಎಚ್ ಎಂ ಮಾತನಾಡಿ, ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ತುಂಬಾ ಮುಖ್ಯ. ಆದ್ದರಿಂದ ನಮ್ಮ ಸಾಮಾಜಿಕ ಸೇವೆಗಳ ಮಧ್ಯೆ ಉತ್ತಮ ಪರಿಸರ, ಉತ್ತಮವಾದ ವಾತಾವರಣವನ್ನು ಕಲ್ಪಿಸಲು ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಬೇಕು. ರೋಟರಿ ಸಂಸ್ಥೆ ವತಿಯಿಂದ ಜಿಲ್ಲಾದ್ಯಂತ ಎಲ್ಲ ಕ್ಲಬ್‌ಗಳು ಸೇರಿ ವಿವಿಧ ಬಗೆಯ ಸಸಿಗಳನ್ನು ನೆಡುವುದರ ಮುಖಾಂತರ ಉತ್ತಮ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದು ಹೇಳಿದರು.
Rotary Shivamogga ರೋಟರಿ ಮಾಜಿ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಮಾತನಾಡಿ, ಬಡಾವಣೆಗಳು, ಮನೆಗಳು ಸುಂದರವಾಗಿರಲು ಗಿಡಮರಗಳು ನಮಗೆ ಅಗತ್ಯವಾಗಿ ಬೇಕು. ಈ ನಿಟ್ಟಿನಲ್ಲಿ ನಮ್ಮ ಬಡಾವಣೆಯಲ್ಲಿ ಪ್ರಥಮ ಬಾರಿಗೆ 101 ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಲ್ಲ ಬಡಾವಣೆಗಳ ನಿವಾಸಿಗಳ ಸಂಘದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿ ಸಂದರ್ಭದಲ್ಲಿ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಶಕ್ತಿಧಾಮ ಟೌನ್‌ಶಿಪ್ 2ನೇ ಹಂತದ ಅಧ್ಯಕ್ಷ ಹಾಲಸ್ವಾಮಿ, ಮೂರ್ತಿ, ಪ್ರಕಾಶ್, ಸತೀಶ್, ಶಿವಾನಂದ್, ಶಿಶಿರ, ಪ್ರೇಮ್ ಕುಮಾರ್, ವಿಜಯಲಕ್ಷ್ಮೀ, ರೂಪಾ, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ವಲಯ ಸೇನಾನಿ ಮಂಜುನಾಥ ರಾವ್ ಕದಂ, ವಸಂತ ಹೋಬಳಿದಾರ್, ಕಿಶೋರ್, ರವಿಶಂಕರ್, ನಾಗರಾಜ್, ಡಾ. ಧನಂಜಯ, ಶ್ರೀಕಾಂತ್, ಸಂಜೀವ್, ರೇಖಾ ದೇವಾನಂದ್ ಉಪಸ್ಥಿತರಿದ್ದರು.
Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2022 ನೇ ಸಾಲಿನ ಗೌರವ ಪ್ರಶಸ್ತಿ & ವಿವಿಧ ದತ್ತಿ ಪ್ರಶಸ್ತಿ ಘೋಷಣೆ
Karnataka Sahitya Academy ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಸೇರಿದಂತೆ ಐವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ ಗೌರವ ಪ್ರಶಸ್ತಿ, ಬಂಜಗೆರೆ ಜಯಪ್ರಕಾಶ್ ಸೇರಿದಂತೆ 10 ಮಂದಿಗೆ ‘ಸಾಹಿತ್ಯಶ್ರೀ’ ಪ್ರಶಸ್ತಿ ಹಾಗೂ 2021ರಲ್ಲಿ ಪ್ರಕಟವಾದ 17 ಕೃತಿಗಳನ್ನು ಪುಸ್ತಕ ಬಹುಮಾನಕ್ಕೆ ಹಾಗೂ ಎಂಟು ನಾನಾ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಸಾಹಿತಿಗಳಾದ ಆರ್.ಕೆ. ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಇಂದಿರಾ ಹೆಗಡೆ, ರಂಜಾನ್ ದರ್ಗಾ ಹಾಗೂ ತುಂಬಾಡಿ ರಾಮಯ್ಯ ಅವರು ‘ಗೌರವ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
Karnataka Sahitya Academy ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಒಳಗೊಂಡಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ ಎನ್ ಮುಕುಂದರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು
Sorabha ಮೈನವಿರೇಳಿಸಿದ ಸೊರಬ ತಾಲ್ಲೂಕಿನ ಗುಡುವಿಯಲ್ಲಿನ ಹೋರಿ ಬೆದರಿಸುವ ಹಬ್ಬ
Sorabha ಸೊರಬ ತಾಲೂಕಿನ ಗುಡುವಿ ಗ್ರಾಮದಲ್ಲಿ ಶ್ರೀ ರಾಮೇಶ್ವರ ಹೋರಿ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಮಲೆನಾಡು ಹಾಗೂ ಬಯಲುಸೀಮೆ ಭಾಗದ ರೈತರ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ಸಡಗರ ಸಂಭ್ರಮದಿAದ ಜರುಗಿತು.
ಗ್ರಾಮೀಣ ಭಾಗದಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವವನ್ನು ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲೂಕು ಸೇರಿದಂತೆ ನೆರೆಯ ತಾಲೂಕಿನ ವಿವಿಧ ಗ್ರಾಮಗಳಿಂದ ಭಾರಿ ಸಂಖ್ಯೆಯಲ್ಲಿ ಹೋರಿ ಪ್ರಿಯರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರಲ್ಲಿ ಮೈನವಿರೇಳಿಸಿತು.
ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಟೇಪು, ಬಲೂನುಗಳು ಮತ್ತು ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಅಖಾಡದಲ್ಲಿ ಮರೂರು ತಾರಕಾಸುರ, ಉದ್ರಿ ವೀರೇಶ, ಸಾರೇಕೊಪ್ಪ ಸರದಾರ, ಶಿಗ್ಗಾದ ಸಾರಂಗ, ಕುಪ್ಪಗಡ್ಡೆ ಪವರ್‌ಸ್ಟಾರ್, ಸಾರೆಕೊಪ್ಪ ಸುನಾಮಿ, ಕೊರಕೋಡು ಕಾಲಭೈರವ, ಜಡೆ ಓಂಕಾರ, ಬಳ್ಳಿಬೈಲು ಅಗ್ನಿ, ಬಿದರೇರಿ ಬುಲೇಟ್ ಕಾ ರಾಜ, ಕೊಡಕಣಿ ದೊಡ್ಮನೆ ಹುಡುಗ, ಹೈಸ್ಪೀಡ್ ಚಿನ್ನ, ಯಡಗೊಪ್ಪ ೭ಸ್ಟಾರ್, ಹರೂರು ಜೈ ಹನುಮ, ಕೆರೆಕೊಪ್ಪದ ಮಲೆನಾಡ ಹೈಸ್ಪೀಡ್ ಚಕ್ರವರ್ತಿ, ಹರೂರು ಮಾರಿಕಾಂಬ ಎಕ್ಸ್ಪ್ರೆಸ್ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊAಡರು.
Sorabha ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದವು. ಗ್ರಾಮದ ಮಹಿಳೆಯರು, ಮಕ್ಕಳು, ಯುವತಿಯರು ಸಹ ಹೋರಿ ಬೆದರಿಸುವ ಹಬ್ಬವನ್ನು ಕಣ್ತುಂಬಿಕೊAಡಿದ್ದು ವಿಶೇಷವಾಗಿತ್ತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲಪ್ರದರ್ಶನ ತೋರಿದ ಪೈಲ್ವಾನರನ್ನು ಸಮಿತಿ ವತಿಯಿಂದ ಗುರುತಿಸಲಾಯಿತು. ಅಖಾಡದ ಎರಡು ಬದಿಯಲ್ಲಿ ಬೇಲಿ ನಿರ್ಮಿಸಿ, ಒಂದೊAದೆ ಹೋರಿಗಳನ್ನು ಓಡಿಸುವ ಮೂಲಕ ಗ್ರಾಮಸ್ಥರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದರು.
ಫೋಟೋ
೦೭ ಸೊರಬ ೦೨: ಸೊರಬ ತಾಲೂಕಿನ ಗುಡುವಿ ಗ್ರಾಮದಲ್ಲಿ ನಡೆದ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬದಲ್ಲಿ ಓಡುತ್ತಿರುವ ಜಡೆ ಓಂಕಾರ ಹೆಸರಿನ ಹೋರಿ.
೦೭ ಸೊರಬ ೦೨ಬಿ: ಸೊರಬ ತಾಲೂಕಿನ ಗುಡುವಿ ಗ್ರಾಮದಲ್ಲಿ ನಡೆದ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬದಲ್ಲಿ ಅಖಾಡದಲ್ಲಿ ಮಿಂಚಿನAತೆ ಓಡುತ್ತಿರುವ ಮರೂರು ತಾರಕಾಸುರ ಹೆಸರಿನ ಹೋರಿ.
Election Commission ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ. ಪ್ರಕಟಣೆ
Election Commission ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ – 2025 ಕ್ಕೆ ಸಂಬಂಧಿಸಿದಂತೆ 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳು ದಿ: 09-11-2024, 10-11-2024, 23-11-2024 ಮತ್ತು 24-11-24 ರಂದು ತಮ್ಮ ಮತಗಟ್ಟೆಗಲಲ್ಲಿ ಹಾಜರಿದ್ದು ಕಾರ್ಯ ನಿರ್ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಯ ಮತದಾರರ ಪಟ್ಟಿ ಪರಿಶೀಲಿಸಿಕೊಂಡು ತಮ್ಮ ಹೆಸರು ಹಾಗೂ ತಮ್ಮ ಕುಟುಂಬದ ಇತರೆ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿದೆ.
17 ವರ್ಷ ತುಂಬಿದ ಅಥವಾ 18 ವರ್ಷ ಪೂರೈಸಿದ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು, ಮತದಾರರ ಗುರುತಿನ ಚೀಟಿಗಳಲ್ಲಿ ಮುದ್ರಣ ದೋಷ ಉಂಟಾಗಿದ್ದರೆ ತಿದ್ದುಪಡಿ ಮಾಡಲು, ಒಂದು ಮತದಾನ ಕೇಂದ್ರದಿAದ ಮತ್ತೊಂದು ಮತದಾನ ಕೇಂದ್ರಕ್ಕೆ ವಿಳಾಸ ಬದಲಾಯಿಸಿಕೊಂಡಿದ್ದಲ್ಲಿ ವರ್ಗಾವಣೆ ಮಾಡಲು ಹಾಗೂ ಮತದಾರರು ಮೃತಪಟ್ಟಿದ್ದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಅವಕಾಶವಿದೆ.
Election Commission ಮತದಾರರು ತಮ್ಮ ಮೊಬೈಲ್ ನ ವೋಟರ್ ಹೆಲ್ಪ್ಲೈನ್ ಆ್ಯಪ್ ನಲ್ಲಿ ನಮೂನೆ-6 ರಲ್ಲಿ ಸೇರ್ಪಡೆಗೆ, ನಮೂನೆ-7 ರಲ್ಲಿ ತೆಗೆದುಹಾಕಲು ಹಾಗೂ ನಮೂನೆ-8 ರಲ್ಲಿ ತಿದ್ದುಪಡಿಗಾಗಿ, ವರ್ಗಾವಣೆಗಾಗಿ ಅವಕಾಶವಿದೆ. ಮತದಾರರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೆಂದು 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಮಹಾನಗರಪಾಲಿಕೆ ಆಯುಕ್ತರು ಕೋರಿದ್ದಾರೆ.
DVS College of Arts, Science and Commerce ಬಸವಣ್ಣನವರ ವಚನ ಓದಿ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು- ಡಾ.ಅರವಿಂದ ಜತ್ತಿ
ಕನ್ನಡತ್ವ ಮತ್ತು ಬಸವಣ್ಣ ನೆಲದ ಅಸ್ಮಿತೆಗೆ ಮೆರುಗು ನೀಡಿದ ಎರಡು ಸಂಗತಿಗಳು ಎಂದು ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ಹಬ್ಬ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾಷೆಯಾಗಿ ಪ್ರಾಚೀನತೆಯಿಂದ ಆಧುನಿಕತೆಯವರೆಗೆ ಕನ್ನಡವೂ, ಧರ್ಮದಾಚೆಗೆ ವಚನಗಳು ತನ್ನತನವನ್ನು ಹುಡುಕಿಕೊಳ್ಳುವ ಪ್ರಮೇಯದಿಂದ ಬಸವಣ್ಣನೂ ನಮಗೆ ಮುಖ್ಯವಾಗಬೇಕು. ಆಗ ನಾವು ನಮ್ಮನ್ನು ಹುಡುಕುತ್ತ ವಾಸ್ತವ ಜ್ಞಾನದೆಡೆಗೆ ಸಾಗುತ್ತೇವೆ ಎಂದು ತಿಳಿಸಿದರು.
ಬಸವಣ್ಣನ ವಚನಗಳು ಸರಳವಾಗಿವೆ. ವಚನಗಳನ್ನು ಅಧ್ಯಯನ ನಡೆಸಿ ಅರ್ಥ ಮಾಡಿಕೊಳ್ಳಬೇಕು. ವಚನದಲ್ಲಿನ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ವ್ಯಕ್ತಿತ್ವ ರೂಪಿತವಾಗುತ್ತದೆ ಎಂದರು.
ಜಗದಗಲ ಮುಗಿಲಗಲ… ವಚನದ ಬಗೆಯ ಅರ್ಥ ವಿವರಣೆಯನ್ನು ಸಂಶೋಧಿತ ವಿಡಿಯೋ ತುಣುಕುಗಳ ಮೂಲಕ ವಿಶ್ಲೇಷಣೆ ಮಾಡಿದರು.
DVS College of Arts, Science and Commerce ದೇಶೀಯ ವಿದ್ಯಾಶಾಲಾ ಸಮಿತಿಯ ಉಪಾಧ್ಯಕ್ಷ ಎಸ್.ಪಿ.ದಿನೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡದ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಲು ಅತೀವ ಅನುಭವವುಳ್ಳ ಡಾ. ಅರವಿಂದ ಜತ್ತಿ ಅವರು ಕನ್ನಡ ನಾಡಿನ ಉತ್ಸವವನ್ನು ಹಬ್ಬವಾಗಿಸುವ ಚಾತಿಯುಳ್ಳವರು. ಅವರಲ್ಲಿರುವ ಅಗಾಧ ಜ್ಞಾನ ಎಲ್ಲರಿಗೂ ಸ್ಪೂರ್ತಿ ಎಂದು ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಸಹ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿಯ ಆಳವನ್ನು ಕುತೂಹಲದ ಕಣ್ಣಿನಿಂದ ಗ್ರಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ರುದ್ರಪ್ಪ ಕೊಳಲೆ ಮಾತನಾಡಿ, ಜತ್ತಿ ಅವರ ಭಾಷೆಯ ಪ್ರೇಮ ದೊಡ್ಡದು. ಅವರು ವಚನಗಳನ್ನು ಅನೇಕ ಭಾಷೆಗಳಿಗೆ ಅನುವಾದ ಮಾಡಿಸುವ ಕಾರ್ಯದಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ ಎಂದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ವೆಂಕಟೇಶ, ಪ್ರೊ. ಕುಮಾರಸ್ವಾಮಿ, ಪ್ರೊ. ಸಾವಿತ್ರಿ ಉಪಸ್ಥಿತರಿದ್ದರು.
