Wednesday, March 25, 2026
Wednesday, March 25, 2026
Home Blog Page 505

CM Siddhramaiah ಜಾಣ ಜೋಡಿಯ ಜಾಣ ಮೌನ?

0

CM Siddhramaiah ಅಜಿತ್ ಹನುಮಕ್ಕನವರ್ ಮತ್ತು ಪ್ರಶಾಂತ್ ನಾತು ಅವರು ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ನಡೆಸಿದ. “ಸ್ಟ್ರೈಟ್ ಹಿಟ್ ಸಿದ್ಧು” ಸಂದರ್ಶನ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಪ್ರಸಾರವಾಯಿತು.

ನನಗೆ ಆದ ಅಚ್ಚರಿಯೆಂದರೆ ಈರ್ವರೂ ಈ ಕ್ಷಣದವರೆಗೂ ರಾಜ್ಯದ ರಾಜಕೀಯ ಮತ್ತು ಆಡಳಿತ, ಅಭಿವೃದ್ಧಿ, ಹಣಕಾಸಿನ ಮಾಹಿತಿ ಬಗ್ಗೆ ಕರತಲಾಮಲಕ ಕಾರ್ಯಕ್ತಮ ನಿರೂಪಿಸಿದ್ದಾರೆ.

ಪ್ರತಿಯೊಂದು ಪ್ರಶ್ನೆಯನ್ನೂ ಬಹಳ
ವಿಧೇಯತೆ ,ನಮ್ರತೆಯಿಂದಲೇ ಕೇಳಿದ್ದಾರೆ.
ಆದರೆ ದಿನಂಪ್ರತಿ ಅವರು ನಡೆಸು ವಿಶ್ಲೇಷಣೆಯ ಲೇಪನ ಮತ್ತು ಹರಿತತೆ ಮಾಯವಾಗಿಬಿಟ್ಟಿತ್ತು.
ಸಂದರ್ಶನ ಅವರವರ ಜಾಯಮಾನಕ್ಕೆ ತಕ್ಕಂತೆ ನಡೆಸಲಾಗುತ್ತದೆ. ಇಲ್ಲಿ ಅವರ ಸಾಮರ್ಥ್ಯ ಅಥವಾ ಕಸಬುದಾರಿಕೆಯನ್ನ ಪ್ರಶ್ನಿಸುತ್ತಿಲ್ಲ.

ಟೀವಿ ತೆರೆಯಲ್ಲಿ ಅಂಕಿಅಂಶಗಳ ಮೂಲಕ ಮಾತಾಡುವ ಜೋಡಿ
ಗ್ಯಾರಂಟಿಗಳು, ಬಜೆಟ್ ಕೊರತೆ, ಕ್ಷೇತ್ರ ಅನುದಾನ ತಡೆ ಇತ್ಯಾದಿಗಳನ್ನ ಆಧರಿಸಿ ಪ್ರಶ್ನಾವಳಿ ಮಾಡಬಹುದಿತ್ತು.

CM Siddhramaiah ಸೀಎಂ ಅವರನ್ನ ಮಾತಿನಲ್ಲಿ ಕಟ್ಟಿಹಾಕಲಿಲ್ಲ ಎಂಬರ್ಥವಲ್ಲ. ನೈಜ ಸಂಗತಿ ಅರಿವಿದ್ದ ಜೋಡಿ ಸಂದರ್ಶಕರು ಯಾಕೆ ಜಾಣಮೌನ ವಹಿಸಿದರು‌ ಅರ್ಥವಾಗಲಿಲ್ಲ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಬಹಳ ತರ್ಕಬದ್ಧವಾಗಿಯೇ ‌ಮಾತಾಡಿದರು.

Gruha Lakshmi Scheme ಗೃಹಲಕ್ಷ್ಮಿ’ ಹಣದಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಿದ ತಾಯಿ” ಗಂಗವ್ವ”

0

Gruha Lakshmi Scheme ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಗ್ರಾಮದ ನಿವಾಸಿ ಗಂಗವ್ವ ಬಿರಾದಾರ ಎಂಬ ಮಹಿಳೆ ಗೃಹಲಕ್ಷ್ಮಿ ಯೋಜನೆಯ 12 ತಿಂಗಳ ₹24,000 ಹಣ ಕೂಡಿಟ್ಟು ಹೊಲಿಗೆ ಯಂತ್ರ ಖರೀದಿಸಿ, ತನ್ನ ಹೆಣ್ಣುಮಕ್ಕಳಿಗೆ ಹೊಲಿಗೆ ತರಬೇತಿ ನೀಡುವ ಮೂಲಕ ಬದುಕಿನ ಹಾದಿ ರೂಪಿಸಿಕೊಟ್ಟು ತಾಯ್ತನವನ್ನು ಮೆರೆದಿದ್ದಾರೆ. ಬಡತನದಲ್ಲೂ ಸ್ವಾವಲಂಬಿ ಬದುಕಿನ ಕನಸು ಕಾಣುತ್ತಿರುವ ಹೆಣ್ಣುಮಕ್ಕಳಿಗೆ ನೆರವಾಗುವುದೇ ನಮ್ಮ ಯೋಜನೆಯ ಉದ್ದೇಶವೂ ಆಗಿದೆ. ಈ ತಾಯಿಯ ಸಂಕಲ್ಪಕ್ಕೆ ನನ್ನ ಪ್ರಣಾಮ.

ಇದು ನನ್ನ ರಾಜಕೀಯ ಬದುಕಿನ ಮತ್ತೊಂದು ಸಾರ್ಥಕ ಕ್ಷಣ. ನಮ್ಮ ಗ್ಯಾರಂಟಿಗಳ ಬಗ್ಗೆ ದೇಶದ ಪ್ರಧಾನಿಯೇ ಅಪಪ್ರಚಾರಕ್ಕೆ ಇಳಿದಿರುವ, ಇಡೀ ಬಿಜೆಪಿ ಪಕ್ಷ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗಲೆಂದು ದಿನವಿಡೀ ಜಪಿಸುತ್ತಿರುವ ಹೊತ್ತಿನಲ್ಲಿ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿರುವುದು ಗ್ಯಾರಂಟಿ ವಿರೋಧಿಗಳೆಲ್ಲರಿಗೂ ತಪರಾಕಿ ಬಾರಿಸಿದಂತಿದೆ.

Gruha Lakshmi Scheme ಬಿಜೆಪಿ – ಜೆಡಿಎಸ್ ನಾಯಕರ ಸುಳ್ಳು, ಅಪಪ್ರಚಾರಗಳ ನಡುವೆ ನಮ್ಮ ಗ್ಯಾರಂಟಿ ಯೋಜನೆ ಗೆಲ್ಲುತ್ತಿದೆ, ಜನರ ಬದುಕು ಬದಲಿಸುತ್ತಿದೆ.
ಟೀಕೆಗಳು ಸಾಯುತ್ತಿವೆ, ಕೆಲಸಗಳು ಕಾಣುತ್ತಿವೆ. ಇನ್ನಾದರೂ ಗ್ಯಾರಂಟಿ ವಿರೋಧಿಗಳ ಕಣ್ಣು ತೆರೆಯಲಿ ಎಂದು
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.

Rotary East English Medium School ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಪ್ರತಿಭಾ ಕಾರಂಜಿ,ಮಕ್ಕಳ ಕಲಾಸಕ್ತಿ ಅನಾವರಣಕ್ಕೆ ಸೂಕ್ತ ವೇದಿಕೆ- ಶಶಿರೇಖಾ

0

Rotary East English Medium School ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆ, ರಾಜೇಂದ್ರನಗರ ಶಿವಮೊಗ್ಗ ಮತ್ತು ರವೀಂದ್ರನಗರ ಕ್ಲಸ್ಟರ್‌ನ ಸಂಯೋಗದಲ್ಲಿ ಏರ್ಪಡಿಸಲಾಗಿದ್ದ, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಮಾರಂಭದ ಉದ್ಘಾಟನೆ ಸಮಾರಂಭದಲ್ಲಿ ಶ್ರೀಮತಿ ಶಶಿರೇಖಾ ಇವರು ಮಾತನಾಡುತ್ತ, ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ & ಕಲೋತ್ಸವವು ವಿದ್ಯಾರ್ಥಿಗಳಲ್ಲಿ ಸೂಪ್ತವಾಗಿರುವ ಪ್ರತಿಭೆಯನ್ನು ಅನಾವರಣಗೊಳ್ಳಲು ಅತ್ಯುತ್ತಮ ವೇದಿಕೆಯಾಗಿರುತ್ತದೆ. ಯಾವ ವಿದ್ಯಾರ್ಥಿಗಳಲ್ಲಿ ಯಾವ ಪ್ರತಿಭೆ ಅಡಗಿದೆ ಎಂಬುದನ್ನು ಗುರುತಿಸುವಲ್ಲಿ ಈ ಪ್ರತಿಭಾ ಕಾರಂಜಿ & ಕಲೋತ್ಸವ ಸಹಕಾರಿಯಾಗಿರುತ್ತದೆ ಎಂದು, ಈ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳೆಲ್ಲರೂ ತಮ್ಮಲ್ಲಿರುವ ವಿವಿಧ ಪ್ರತಿಭೆಗಳನ್ನು ನಿರ್ಭೀತಿಯಿಂದ ಹೊರ ಹಾಕಿ ಈ ಪ್ರತಿಭಾ ಕಾರಂಜಿಯನ್ನು ಯಶಸ್ವಿಗೊಳಿಸಿ, ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಬೇಕೆಂದು, ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಶುಭ ಹಾರೈಸಿದರು.
ಇದೇ ಸಮಾರಂಭದಲ್ಲಿ ಶ್ರೀ ದಿನೇಶ್, ಅಧ್ಯಕ್ಷರು, ತಾ.ಪ್ರಾ.ಶಾ.ಶಿ.ಸಂಘ, ಶಿವಮೊಗ್ಗ ಇವರು ಮಾತನಾಡುತ್ತಾ ಈ ಪ್ರತಿಭಾ ಕಾರಂಜಿಯಲ್ಲಿ ಸುಮಾರು ೩೦ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಆಯಾ ಶಾಲೆಯ ಶಿಕ್ಷಕ ವೃಂದದವರು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಿದ್ದು, ಈ ಒಂದು ಪ್ರತಿಭಾ ಕಾರಂಜಿಯು ಯಶಸ್ವಿಯಾಗಲೆಂದು ಮತ್ತು ಇಲಾಖೆಯ ವತಿಯಿಂದ ಈ ನಿಟ್ಟಿನಲ್ಲಿ ಎಲ್ಲ ರೀತಿಯ ಮಾರ್ಗದರ್ಶನ & ಸಲಹೆ ಸಹಕಾರವನ್ನು ನೀಡಲಾಗಿದ್ದು, ಈ ವೇದಿಕೆಯನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಪೂರ್ವದ ಅಧ್ಯಕ್ಷರಾದ ರೊ. ಅರುಣ್ ದೀಕ್ಷಿತ್ ಅವರು ಮಾತನಾಡುತ್ತಾ, ಹಲವಾರು ವರ್ಷಗಳ ನಂತರ ನಮ್ಮ ರೋಟರಿ ಶಾಲೆಯಲ್ಲಿ ಈ ಒಂದು ಪ್ರತಿಭಾ ಕಾರಂಜಿ & ಕಲೋತ್ಸವವು ನಡೆಯತ್ತಿರುವುದಕ್ಕೆ ನಮಗೆ ಅತೀವ ಸಂತೋಷವಾಗಿದೆ ಎಂದು ಈ ಒಂದು ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲ ರೀತಿಯ ಸಹಕಾರವನ್ನು ಕ್ಲಬ್ ವತಿಯಿಂದ ನೀಡಲಾಗಿದೆ ಎಂದು ತಿಳಿಸಿದರು.
Rotary East English Medium School ಟ್ರಸ್ಟ್ನ ಕಾರ್ಯದರ್ಶಿ ರೊ. ಎಸ್.ಸಿ. ರಾಮಚಂದ್ರ ಇವರು ಮಾತನಾಡುತ್ತಾ, ಪ್ರತಿಭಾ “ನವನವನವನ್ಮೋದ ಶಾಲಿನಿ” ಅಂದರೆ ಪ್ರತಿಭೆಯ ಮೂಲಕ ಹೊಸ ಹೊಸ ಆವಿಷ್ಕಾರಗಳು ಅನಾವರಣಗೊಳ್ಳುತ್ತವೆ ಎಂದು ಈ ಪ್ರತಿಭೆಯು ಯಾವ ಸಂದರ್ಭದಲ್ಲಿ ಯಾವ ರೀತಿ ಪ್ರಕಟಗೊಳ್ಳುತ್ತದೆ ಎಂಬುದಕ್ಕೆ ಸೂಕ್ತ ವೇದಿಕೆಯ ಅವಶ್ಯಕತೆ ಇರುತ್ತದೆ ಎಂದು ಈ ನಿಟ್ಟಿನಲ್ಲಿ ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆ, ರವೀಂದ್ರನಗರ ಕ್ಲಸ್ಟರ್ ಮಟ್ಟದ ಸಹಯೋಗ & ಶಿಕ್ಷಣ ಇಲಾಖೆಯಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮವು ಅತ್ಯಂತ ಶ್ಲಾಘನೀಯವೆಂದು, ಇಂತಹ ಕಾರ್ಯಕ್ರಮಗಳು ಪುನರಾವರ್ತನೆಯಾದರೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸುಲಭವಾಗುತ್ತದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ರೊ. ಚಂದ್ರಶೇಖರಯ್ಯ ಎಂ., ಇವರು ಮಾತನಾಡುತ್ತ, ನಮ್ಮ ಟ್ರಸ್ಟ್ ಮೂಲಕ ಈ ಒಂದು ಕಾರ್ಯಕ್ರಮವನ್ನು ನಡೆಸಿಕೊಡಬೇಕೆಂದು ಶಿಕ್ಷಣ ಇಲಾಖೆಯವರು ತಿಳಿಸಿದಾಗ ಈ ಒಂದು ಕಾರ್ಯಕ್ರಮದ ಮಹತ್ವವನ್ನು ತಿಳಿದ ತಾವು ಈಗ್ಗೆ ೧೫-೨೦ ದಿನಗಳಿಂದಲೂ ಪೂರ್ವ ತಯಾರಿಯನ್ನು ನಡೆಸಿ, ಈ ಒಂದು ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಅನಾನುಕೂಲಗಳಾಗದಂತಹ ವ್ಯವಸ್ಥೆಯನ್ನು ಕಲ್ಪಿಸಿರುವುದಾಗಿ ಬಹಳ ಮುಖ್ಯವಾಗಿ ಇಲಾಖೆಯು ನಮ್ಮ ಶಾಲೆಯನ್ನು ಗುರುತಿಸಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಆಯೋಜಿಸಿರುವುದಕ್ಕೆ ಇಲಾಖೆಗೆ & ಸಂಬAಧಿಸಿದ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ, ಸುಮಾರು ೩೦ ವಿವಿಧ ಕಲಾ ಪ್ರಕಾರಗಳಿಗೆ ಸಂಬAಧಿಸಿದAತೆ ಸಂಪೂರ್ಣ ಸಿದ್ಧತೆಯೊಂದಿಗೆ ಹಾಜರಾಗಿರುವ ವಿದ್ಯಾರ್ಥಿಗಳನ್ನು ನೋಡಿದಾಗ ಈ ಮಕ್ಕಳಲ್ಲಿರುವ ಪ್ರತಿಭೆ ಅತ್ಯದ್ಬುತವಾಗಿ ಪ್ರಕಟಗೊಳ್ಳುತ್ತದೆ ಎಂಬ ಭಾವನೆ ತಮ್ಮಲ್ಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾರಂಭಕ್ಕೆ ಮೊದಲು ಪ್ರಾಸ್ತವಿಕವಾಗಿ ಶ್ರೀ ಪ್ರವೀಣ್, ರವೀಂದ್ರನಗರ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ, ಅವರು ಮಾತನಾಡುತ್ತ, ಈ ಒಂದು ಕಾರ್ಯಕ್ರಮದ ಉದ್ದೇಶ & ಮಹತ್ವವನ್ನು ತಿಳಿಸಿದರು. ಸಮಾರಂಭದಲ್ಲಿ ಟ್ರಸ್ಟ್ನ ಉಪಾಧ್ಯಕ್ಷರು ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಖಜಾಂಚಿ ರೊ. ವಿಜಯ್ ಕುಮಾರ್, ಜಂಟಿ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., ಶ್ರೀಮತಿ ಶೈಲಶ್ರೀ, ಸ್ರೀ ಸತೀಶ್ ಡಿ.ಬಿ., ಶ್ರೀ ಯುಗಪುರುಷ, ಶ್ರೀ ಸೂರ್ಯನಾರಾಯಣ್ ಆರ್., ಶ್ರೀಮತಿ ಜಯಶೀಲಾ ಬಾಯಿ, ಶ್ರೀ ಮಂಜುನಾಥ್ ಇನ್ನು ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಸುಪ್ರಿತಾ, ಇವರು ನಿರೂಪಣೆ ಮಾಡಿದರು. ಎಲ್ಲರನ್ನು ದಾದಾಪಲ್ಲಿ, ಇವರು ಸ್ವಾಗತಿಸಿದ್ದು, ಶ್ರೀಮತಿ ಶೋಭಾ, ಇವರ ವಂದನಾರ್ಪಣೆಯೊAದಿಗೆ ಸಭೆ ಮುಕ್ತಾಯವಾಯಿತು.

Karunada Yuva Shakti ಅನ್ಯ ಭಾಷಾ ವ್ಯಾಮೋಹ ತೊರೆದು ಕನ್ನಡ ಪ್ರೇಮ ಬೆಳೆಸಿಕೊಳ್ಳೋಣ

0

Karunada Yuva Shakti ಕನ್ನಡ ನಾಡಿನ ಆಸ್ಮಿತೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ, ಕನ್ನಡ ಭಾಷೆಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಹೋರಾಟ ಮಾಡುವ ಮೂಲಕ ಕನ್ನಡ ನಾಡು ನುಡಿಯನ್ನು ಉಳಿಸಿದ ಸಾಹಿತಿಗಳು ಹಾಗೂ ಹೋರಾಟಗಾರ ಶ್ರಮ ಶ್ಲಾಘನೀಯವಾಗಿದೆ ಎಂದ ಅವರು ಕನ್ನಡ ನಾಡು, ನುಡಿ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ಅನ್ಯಭಾಷೆ ವ್ಯಾಮೋಹ ತೊರೆದು ಪ್ರತಿಯೊಬ್ಬರು ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರುನಾಡ ಯುವಶಕ್ತಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಎಸ್.ಎನ್.ಮಿಲನ್‌ಕುಮಾರ್ ತಿಳಿಸಿದರು.

ನಮ್ಮ ಮಾತೃ ಭಾಷೆ ಕನ್ನಡದ ಬಗ್ಗೆ ಮಕ್ಕಳಲ್ಲಿ ಅಭಿಮಾನ ಬೆಳೆಸಬೇಕು ಎಂದು ಸಲಹೆ ನೀಡಿದರು., ಭಾಷೆಗಳ ಆಧಾರದ ಮೇಲೆ ರಾಜ್ಯಗಳು ವಿಂಗಡಣೆಯಾಗಿದೆ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿದ ಮಹನೀಯರನ್ನು ನಾವು ಸ್ಮರಿಸಬೇಕಾಗಿದೆ. ದೈನಂದಿನ ಚಟುವಟಿಕೆಗಳಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು. ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಬೇಕು ಎಂದರು.

ಕನ್ನಡ ಭಾಷೆಯನ್ನು ಬಳಸಿದಾಗ ಮಾತ್ರ ಭಾಷೆ ನಶಿಸುವುದಿಲ್ಲ. ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳಿಗೆ ಮಾತೃ ಭಾಷೆಯನ್ನು ಸ್ಪಷ್ಟವಾಗಿ ಬರೆಯುವುದನ್ನು ಓದುವುದನ್ನು ಕಲಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ. ಪ್ರಥಮ ಕನ್ನಡ ಸಾಮ್ರಾಜ್ಯ ಸ್ಥಾಪಕ ಮಯೂ ರವರ್ಮ, ಶೂನ್ಯ ಸಿಂಹಾಸನಾಧೀಶ ಅಲ್ಲಮಪ್ರಭು ಹಾಗೂ ಮಹಿಳಾ ವಚನಗಾರ್ತಿ ಅಕ್ಕಮಹಾದೇವಿ ಜನಿಸಿರುವುದು ನಾವೆಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ ಎಂದರು.

Karunada Yuva Shakti ಅನ್ಯ ಭಾಷೆಯನ್ನ ಪ್ರೀತಿಸಿ ಕನ್ನಡದಲ್ಲಿ ನಮ್ಮ ನಡೆ-ನುಡಿ ವ್ಯವಹಾರ. ನಡೆಯಬೇಕು. ಕನ್ನಡವನ್ನು ಉಳಿಸಿ ಬೆಳೆಸಿ ಅನ್ನುವುದಕ್ಕಿಂತ. ಕನ್ನಡವನ್ನು ನಾವು ಬಳಸಬೇಕು. ಈ ಭಾಷೆಗೆ ನೂರಾರು ಜನ ಕವಿ ಸಾಧಕರು ಲೇಖಕರು ತಮ್ಮದೇ ಆದ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಕೇವಲ ನವಂಬರ್ ಮಾತ್ರ ಕನ್ನಡ ಸೀಮಿತವಾಗಬಾರದು ಇದು ನಿರಂತರವಾಗಿ ನಡೆಯುವಂತೆ ನಮ್ಮ ಮನೆಯ ಹಬ್ಬದಂತೆ ಆಚರಣೆ ಮಾಡಬೇಕು ಹಾಗೂ ಈ ಕನ್ನಡ ಹಬ್ಬದಲ್ಲಿ ಕನ್ನಡಕ್ಕೆ ಹೋರಾಟ ಮಾಡಿದ, ಮಾಡುತ್ತಿರುವವರನ್ನು ಗುರುತಿಸಿ ಗೌರವಿಸ ಕಾರ್ಯಗಳು ಹೆಚ್ಚಾಗಿ ನಡೆಯಬೇಕು ಎನ್ನುವುದು ನನ್ನ ಮನದಾಸೆ ಎಂದಿದ್ದಾರೆ.

MESCOM ನವೆಂಬರ್ 12 ರಿಂದ 15 ರವರಗೆ ಹಾಡೋನಹಳ್ಳಿ,ಮಡಿಕೆ ಚೀಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ತಾಲ್ಲೂಕು ಹೊಳಲೂರು ಗ್ರಾಮದಲ್ಲಿರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಮಾರ್ಗದಿಂದ ಸರಬರಾಜಾಗುವ ಎಫ್-7, ಎಫ್-8 ಮತ್ತು ಎಫ್-10 ಮಾರ್ಗಗಳಲ್ಲಿ ಲಿಂಕ್ ಲೈನ್ ಮಾರ್ಗ ರಚಿಸುವ ಕಾಮಗಾರಿ ಇರುವುದರಿಂದ ಹಾಡೋನಹಳ್ಳಿ, ಹಳೆ/ಹೊಸ ಮಡಿಕೆಚೀಲೂರು ಮತ್ತು ಬಿ.ಕೆ.ತಾವರೆ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಸುತ್ತಮುತ್ತಲಿನ ಗ್ರಾಮಗಳಲ್ಲಿ ನ. 12, 13, 14 ಮತ್ತು 15 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೋರಿದೆ.

Education Officers Office ಮಿಳಘಟ್ಟ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ

0

Education Officers Office ಶಿವಮೊಗ್ಗ ಜಿಲ್ಲಾ ಸಮಗ್ರ ಶಿಕ್ಷಣ ಅಭಿಯಾನ ಯೋಜನೆ ಅಡಿ 2024-25 ನೇ ಸಾಲಿನಲ್ಲಿ ಶಿವಮೊಗ್ಗ ತಾಲ್ಲೂಕಿನ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಿವಮೊಗ್ಗ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ನ.14 ರಂದು ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಳಘಟ್ಟ ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ಪೂರ್ಣದೃಷ್ಟಿ ದೋಷ, ಶ್ರವಣ ದೋಷ, ಲೋಕೋಮೋಟರ್ (ದೈಹಿಕ ಅಂಗವಿಕಲತೆ), ಸೆರೆಬ್ರಲ್ ಪಾಲ್ಸಿ, ಬಹು ಅಂಗಾಂಗ ವಿಕಲತೆ, ದೈಹಿಕ ಅಂಗವಿಕಲತೆವುಳ್ಳ ಮಕ್ಕಳು ಭಾಗವಹಿಸಬಹುದು.

Education Officers Office ಶಿಬಿರಕ್ಕೆ ಹಾಜರಾಗಲು ಅಂಗವಿಕಲ ಗುರುತಿನ ಚೀಟಿ, ಆದಾಯ ಪ್ರಮಾಣ ಪತ್ರ, ಮಗುವಿನ ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಮಗುವಿನ ಪಾಸ್‌ಪೋರ್ಟ್ ಸೈಜಿನ 4 ಭಾವಚಿತ್ರಗಳು ಮಗುವಿನ ಬ್ಯಾಂಕ್ ಪಾಸ್ ಪುಸ್ತಕ, ಮಗುವಿನ ಆಧಾರ್ ಕಾರ್ಡ್ನ್ನು ತರಬೇಕು .
ಈ ಶಿಬಿರದಲ್ಲಿ ಪೂರ್ವ ಪ್ರಾಥಮಿಕದಿಂದ 12 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಸರ್ಕಾರಿ/ಅನುದಾನಿತ ಶಾಲೆಗಳ ವಿಕಲಚೇತನ ಮಕ್ಕಳು(ಈ ಹಿಂದೆ ಸಾಧನ ಸಲಕರಣೆ ಪಡೆದ ಮಕ್ಕಳನ್ನು ಹೊರತುಪಡಿಸಿ) ಇದರ ಸದುಪಯೋಗವನ್ನು ಪಡೆಯಬಹುದೆಂದು ಬಿಇಓ ರಮೇಶ್ ಮತ್ತು ಬಿಆರ್‌ಸಿ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರು ತಿಳಿಸಿದ್ದಾರೆ.

Regional Transport Authority, Shimoga ಸಾರಿಗೆ ಇಲಾಖೆಯಿಂದ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಕಾರ್ಯಕ್ರಮ

0

Regional Transport Authority, Shimoga ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಶಿವಮೊಗ್ಗದ ವತಿಯಿಂದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ 2024 ರ ಪ್ರಯುಕ್ತ ಶುಕ್ರವಾರ ಪೋದಾರ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ವಾಯು ಮಾಲಿನ್ಯ ನಿಯಂತ್ರಣ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.

Regional Transport Authority, Shimoga ಈ ಸಂದರ್ಭದಲ್ಲಿ ಮೋಟಾರು ವಾಹನ ನಿರೀಕ್ಷಕ ಪಿ. ಎಂ. ಮಲ್ಲೇಶಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರಗೇಂದ್ರ, ಅಧೀಕ್ಷಕರಾದ ರಾಮಚಂದ್ರಪ್ಪ, ಮೋಹನ್ ಕುಮಾರ್, ಸಿಬ್ಬಂದಿ ವರ್ಗದವರು, ಕಾಲೇಜಿನ ಪ್ರಾಂಶುಪಾಲ ಸುಖೇಶ್ ದೇವಾಡಿಗ, ಕಾಲೇಜಿನ ಬಸ್ ಚಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Rovers Club Shivamogga ರೋವರ್ಸ್ ಕ್ಲಬ್ ಅಧ್ಯಕ್ಷರಾಗಿ ಎಚ್.ಸಿ.ಸುರೇಶ್ ಅವಿರೋಧ ಆಯ್ಕೆ

0

Rovers Club Shivamogga ರೋವರ‍್ಸ್ ಕ್ಲಬ್ ಶಿವಮೊಗ್ಗ ಅಧ್ಯಕ್ಷರಾಗಿ ಸುರೇಶ್.ಎಚ್.ಸಿ. ಅವಿರೋಧವಾಗಿ ಆಯ್ಕೆಯಾದರು. 2024-27ನೇ ಸಾಲಿನ ಮೂರು ವರ್ಷಗಳ ಅವಧಿಗೆ ಅವಿರೋಧವಾಗಿ ಕಾರ್ಯಕಾರಿ ಮಂಡಳಿ ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷರಾಗಿ ಕೃಷ್ಣ.ಎಚ್, ಕಾರ್ಯದರ್ಶಿಯಾಗಿ ಅ.ಮ.ಪ್ರಕಾಶ್, ಸಹ ಕಾರ್ಯದರ್ಶಿಯಾಗಿ ನಾಗರಾಜ ಪಾಟ್ಕರ್ ಪಿ.ಎಲ್., ಖಜಾಂಚಿಯಾಗಿ ಸೋಮಶೇಖರ ಶಿ.ದು, ನಿರ್ದೇಶಕರಾಗಿ ಕೆ.ಶಂಕರ್, ಚಿನ್ನಪ್ಪ, ಜಿ.ವಿಜಯಕುಮಾರ್, ವಿನಾಯಕ.ಎಂ.ಬಿ., ಅಗಡಿ ಮಹೇಶ್, ಬಸವರಾಜ್.ಎಂ.ಆರ್., ಪರಶುರಾಮ, ಸುನೀಲ್‌ಕುಮಾರ್.ಎಸ್., ಮಹದೇವಾಚಾರ್.ಟಿ. ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣೆಯ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಲು ಮಾಜಿ ಅಧ್ಯಕ್ಷ ಎಚ್.ಡಿ.ರಮೇಶ್ ಶಾಸ್ತ್ರಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಮಾಜಿ ಉಪಾಧ್ಯಕ್ಷ ರವಿ ಕೋಟೋಜಿ, ಜಿ.ಕೆ.ಪ್ರಕಾಶ್, ಪುರುಷೋತ್ತಮ್, ಗೋವಿಂದರಾಜ್, ಮಾಜಿ ಕೋಶಾಧ್ಯಕ್ಷ ಎ.ಎಚ್.ಸುನೀಲ್ ಸಹಕರಿಸಿದ್ದಾರೆ. ಚುನಾವಣಾಧಿಕಾರಿಗಳಾಗಿ ಸತೀಶ್‌ಕುಮಾರ ಶೆಟ್ಟಿ, ಪ್ರಭಾಕರ ಕಾರ್ಯ ನಿರ್ವಹಿಸಿದರು.

Rovers Club Shivamogga ಈಗಾಗಲೇ ಕಾನೂನಾತ್ಮಕವಾಗಿ ಮುಂಚಿನ ಚುನಾವಣೆಯನ್ನ ರದ್ದು ಪಡಿಸಿ ರೋವರ್ಸ್ ಕ್ಲಬ್ಬಿನ ಗೌ ಕಾರ್ಯದರ್ಶಿಗಳು
ಆದೇಶಮಾಡಿದ್ದರು.
ಮತ್ತೆ ಮರು ಆದೇಶದನ್ವಯ
ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ನಡೆಸಿ ಅವಿರೋಧವಾಗಿ ಆಯ್ಕೆಯಾದವರ ಹೆಸರು ಮತ್ತು ಹುದ್ದೆಗಳನ್ನ ಘೋಷಣೆಮಾಡಲಾಗಿದೆ.

Rotary East English School ರೋಟರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಿ ಬಾಳಿದರೆ ಶ್ರಮ ಸಾರ್ಥಕ- ಸಿ.ಎ.ದೇವ್ ಆನಂದ್

0

Rotary East English School ಶಾಲೆಗಳಲ್ಲಿ ಸ್ಥಾಪಿತವಾಗಿರುವ ಇಂಟರ್ಯಾಕ್ಟ್ ಕ್ಲಬ್‌ಗಳು ಮಕ್ಕಳಲ್ಲಿ ಅಂತರಾಷ್ಟ್ರೀಯ ಸಂಪರ್ಕವನ್ನು ವೃದ್ಧಿಸಿಕೊಂಡು ಅವರಲ್ಲಿರುವ ಹಿಂಜರಿಕೆ ಮತ್ತು ಕೀಳರಿಮೆ ಮನೋಭಾವವನ್ನು ತೊಡದು ಹಾಕಿ ತಮ್ಮ ವ್ಯಕ್ತಿತ್ವ ಹಾಗೂ ನಾಯಕತ್ವವನ್ನು ಬೆಳೆಸಿಕೊಳ್ಳಲು ಪೂರಕವಾಗಿವೆ ಎಂದು ರೋಟರಿ ಜಿಲ್ಲೆ 3121ರ ಜಿಲ್ಲಾ ಗವರ್ನರ್ ಆದ ರೊ. ಸಿ.ಎ. ದೇವ್ ಆನಂದ್ ಇವರು ಅಭಿಪ್ರಾಯ ಪಟ್ಟರು.

ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ಇಂರ‍್ಯಾಕ್ಟ್ ಕ್ಲಬ್ ವತಿಯಿಂದ ಏರ್ಪಡಿಸಿದ ಸಮಾರಂಭದಲ್ಲಿ ಇಂರ‍್ಯಾಕ್ಟ್ ಸದಸ್ಯರು ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತಮ್ಮ ಮಾತನ್ನು ಮುಂದುವರೆಸಿದ ಅವರು, ರೋಟರಿ ಪೂರ್ವ ಸಂಸ್ಥೆಯ ಹಿರಿಯರು ಕಳೆದ ೪೫ ವರ್ಷಗಳ ಹಿಂದೆ ಒಂದು ವಿದ್ಯಾ ಸಂಸ್ಥೆಯನ್ನು ಸ್ಥಾಪಿಸುವುದರ ಜೊತೆಗೆ ಭವ್ಯವಾದ ಹಾಗೂ ವಿಶಾಲವಾದ ಕಟ್ಟಡವನ್ನು ನಿರ್ಮಿಸಿ, ಸುತ್ತ-ಮುತ್ತಲಿನ ಮಕ್ಕಳಿಗೆ ಶಾಲಾ ಸೌಲಭ್ಯವನ್ನು ಒದಗಿಸಿದ್ದು, ಈ ಸೌಲಭ್ಯವನ್ನು ಅನುಭವಿಸುತ್ತಿರುವ ವಿದ್ಯಾರ್ಥಿಗಳಾದ ನೀವೆಲ್ಲರೂ ಋಣಿಗಳಾಗಿರಬೇಕಾಗಿದ್ದು, ನಿಮ್ಮ ವ್ಯಕ್ತಿತ್ವವನ್ನು ವಿಕಸಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾದಾಗ ಮಾತ್ರ ಹಿರಿಯ ರೋಟೇರಿಯನ್‌ರ ಹಾಗೂ ಪ್ರಸಕ್ತ ಆಡಳಿತ ಮಂಡಳಿಯವರ ಶ್ರಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ ರೋಟರಿ ವಲಯ 11ರ ಸಹಾಯಕ ಗವರ್ನರ್ ರೊ. ಪ್ರೊ. ಹೆಚ್.ಎಂ. ಸುರೇಶ್ ರವರು ಮಾತನಾಡುತ್ತ, ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಮಕ್ಕಳು ಶಾಲೆಯಲ್ಲಿನ ವಿವಿಧ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ತಮ್ಮ ಹೆತ್ತವರಿಗೆ ಹಾಗೂ ಸಮಾಜಕ್ಕೆ ಆಸ್ತಿಯಾಗಿ ರೂಪುಗೊಳ್ಳಬೇಕೆಂದು ಕರೆ ಕೊಟ್ಟರು.

ಇಂರ‍್ಯಾಕ್ಟ್ ಕ್ಲಬ್ ಅಧ್ಯಕ್ಷರಾದ ಕುಮಾರ್ ಎನ್., ಇವರು ಅತಿಥಿಗಳೆಲ್ಲರನ್ನು ಸ್ವಾಗತಿಸುತ್ತ, ಇಂರ‍್ಯಾಕ್ಟ್ ಕ್ಲಬ್‌ನ ಅಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಕೈಗೊಂಡ ಎಲ್ಲಾ ಸಮಾಜಮುಖಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

Rotary East English School ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ರೊ. ಚಂದ್ರಶೇಖರಯ್ಯ ಎಂ., ಇವರು ಮಾತನಾಡುತ್ತಾ, ಈ ಶಾಲೆಯಲ್ಲಿ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಉತ್ತಮ ಪಡಿಸಲು ಶಿಕ್ಷಕರು ಎಲ್ಲ ಮಕ್ಕಳಿಗೆ ವ್ಯಯಕ್ತಿಕ ಗಮನ ಹರಿಸುವುದರ ಜೊತೆಗೆ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವೇದಿಕೆಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಶ್ರೀಮತಿ ರೇಖಾ ದೇವ್ ಆನಂದ್, ಜೋನಲ್ ಲೆಫ್ಟಿನೆಂಟ್ ರೊ. ಮಂಜುನಾಥ್ ರಾವ್ ಕದಂ, ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ರೊ. ಅರುಣ್ ದೀಕ್ಷಿತ್, ಕಾರ್ಯದರ್ಶಿ ರೊ. ಶಶಿಕಾಂತ್ ನಾಡಿಗ್, ಟ್ರಸ್ಟ್ನ ಉಪಾಧ್ಯಕ್ಷರು ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಟ್ರಸ್ಟ್ನ ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಕ್ಲಬ್‌ನ ಇಂರ‍್ಯಾಕ್ಟ್ ಛೇರ್‌ಮನ್ ರೊ. ಶೇಷಾದ್ರಿ ಡಿ.ಕೆ., ಟ್ರಸ್ಟ್ ಖಜಾಂಚಿ ಹಾಗೂ ಮಾಜಿ ಸಹಾಯಕ ಗವರ್ನರ್ ರೊ. ವಿಜಯ್ ಕುಮಾರ್ ಜಿ., ಜಂಟಿ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., ಪ್ರಾಂಶುಪಾಲ ಸೂರ್ಯನಾರಾಯಣ್ ಆರ್., ಇಂರ‍್ಯಾಕ್ಟ್ ಕೋ-ಆರ್ಡಿನೇಟರ್ ಶ್ರೀಮತಿ ಹರ್ಷಿತಾ ಕೆ.ಎಂ., ಇಂರ‍್ಯಾಕ್ಟ್ ಕಾರ್ಯದರ್ಶಿ ಗೌತಮಿ ಹಾಗೂ ರೋಟರಿ ಪೂರ್ವದ ಅನೇಕ ಸದಸ್ಯರುಗಳು ಹಾಜರಿದ್ದರು.

ವಿದ್ಯಾರ್ಥಿನಿ ಅನನ್ಯ ಜಿ. ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿದರೆ, ಇಂರ‍್ಯಾಕ್ಟ್ ಕಾರ್ಯದರ್ಶಿ ವಂದನಾರ್ಪಣೆ ಮಾಡಿದರು.

S.N.Chennabasappa ಶ್ರೀಬನಶಂಕರಿ ದೇಗುಲದ ಸ್ವಾಗತ ಕಮಾನಿಗೆ ಗುದ್ದಲಿಪೂಜೆ

0

S.N.Chennabasappa ಶಾಸಕರಾದ ಎಸ್. ಎನ್. ಚನ್ನಬಸಪ್ಪ ಅವರು ಶಿವಮೊಗ್ಗದ ಮಲ್ಲಿಕಾರ್ಜುನ ನಗರದ ಶ್ರೀ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿ ತಾಯಿ ಬನಶಂಕರಿಯ ದರ್ಶನ ಪಡೆದು, ದೇವಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸುತ್ತಿರುವ ಸ್ವಾಗತ ಕಮಾನಿನ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

S.N.Chennabasappa ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಪರಂದಾಮ ರೆಡ್ಡಿ, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.