Wednesday, March 25, 2026
Wednesday, March 25, 2026
Home Blog Page 504

CVR National Law College ನಿತ್ಯ ಜೀವನಕ್ಕೆ ಅಗತ್ಯವಾದ ಕಾನೂನಿನ ಜ್ಞಾನ ಅವಶ್ಯ-ನ್ಯಾ. ಮಂಜುನಾಥ ನಾಯ್ಕ್

0

CVR National Law College ವಿಧ್ಯಾರ್ಥಿಗಳು ಸೇರಿದಂತೆ ನಾವೆಲ್ಲ ದಿನನಿತ್ಯದ ಜೀವನಕ್ಕೆ ಅಗತ್ಯವಾದ ಕಾನೂನಿನ ಜ್ಞಾನ ಹೊಂದುವುದು ಅಗತ್ಯವಾಗಿದೆ. ಇದನ್ನು ವಿದ್ಯಾರ್ಥಿಗಳು ಇಂದಿನಿಂದಲೇ ರೂಢಿಸಿಕೊಳ್ಳುವುದು ಮುಖ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ್ ನಾಯಕ್ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಿವಿಆರ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ, ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜು ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶಿವಮೊಗ್ಗ ಇವರ ಸಹಯೋಗದೊಂದಿಗೆ ಶನಿವಾರ ನಗರದ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜು ಇಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನವೆಂಬರ್ 9 ರಂದು ದೇಶಾದ್ಯಂತ ಕಾನೂನು ಸೇವಾ ದಿನಾಚರಣೆ ಆಚರಿಸಲಾಗುತ್ತದೆ. ಈ ಕಾರ್ಯ ಕ್ರಮದ ಮೂಲಕ ಜನರಿಗೆ ಕಾನೂನಿನ ಅರಿವು ಮೂಡಿಸುವುದು, ಯಾರಿಗೆ ಕಾನೂನಿನ ಸೇವೆ ಅಗತ್ಯ ಇದೆ, ಯಾರು ಅಸಮರ್ಥರು ಅವರಿಗೆ ಕಾನೂನಿನ ನೆರವು ನೀಡುವುದು ಮತ್ತು ಬಾಕಿ ಇರುವ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ರಾಜೀ ಸಂಧಾನದ ಮೂಲಕ ಪರಿಹರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ನಾವು ಯಾವುದೇ ಸೌಲಭ್ಯ ಪಡೆಯಲು ಜನನ ಪ್ರಮಾಣ ಪತ್ರ ಮುಖ್ಯ ವಾಗಿರುತ್ತದೆ. ಆದ್ದರಿಂದ ಸರಿಯಾಗಿ ನೊಂದಾವಣೆ ಮಾಡದಿದ್ದರೆ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗುವ ಸಂದರ್ಭ ಎದುರಾಬಹುದು ಎಂದರು. ಶಾಲಾ ಕಾಲೇಜುಗಳಲ್ಲಿ, ಶಾಲಾ ದಾಖಲಾತಿಗಳಲ್ಲಿ ಹಲವಾರು ತಪ್ಪು ಗಳಿರುತ್ತವೆ. ಜಾತಿ, ಹೆಸರು, ವಿಳಾಸ ಆಧಾರದ ಮೇಲೆ ಮೀಸಲಾತಿ ಮೂಲಕ ಕೆಲಸ ದೊರೆಯುತ್ತದೆ. ಅದಕ್ಕಾಗಿ ಆ ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಬೇಕು. ಎಲ್ಲರು ಕನಿಷ್ಠ ಕಾನೂನು ಜ್ಞಾನವನ್ನು ಹೊಂದಬೇಕು. ನ್ಯಾಯಾಲಯಕ್ಕೆ ಬರುವ ಸಂದರ್ಭ ತಂದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

CVR National Law College ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ(ಪ್ರಭಾರ) ಶ್ರೀಮತಿ ಭಾರತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಕಾನೂನಿನ ಬಗ್ಗೆ ತಿಳಿಯುವುದು ಬಹಳ ಮುಖ್ಯ, ನಾವು ವಿದ್ಯಾರ್ಥಿಗಳಿಗೆ ಪ್ರತಿ ದಿನ ಕಾನೂನಿನ ಬಗ್ಗೆ ಮತ್ತು ಪೋಕ್ಸೊ ಕಾಯಿದೆ ಬಗ್ಗೆ ಅರಿವು ಮೂಡಿಸುತ್ತೇವೆ. ಮಕ್ಕಳ ದಾಖಾಲಾತಿಗಳನ್ನು ಸ್ಯಾಟ್ಸ್ ಪೋರ್ಟಲ್ ಮೂಲಕ ಸರಿಯಾಗಿ ಪರಿಶೀಲನೆ ಮಾಡಲಾಗುತ್ತದೆ ಎಂದು‌ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ ಎಂ.ಎಸ್, ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕ ಶಿವಲಿಂಗಪ್ಪ ಬಿ .ಎಲ್ , ಕಾಲೇಜಿನ ಉಪನ್ಯಾಸಕರು,ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tunga-Bhadra Campaign ಶೃಂಗೇರಿಯಿಂದ ಬಂದ ನಿರ್ಮಲ ತುಂಗಭದ್ರ ಅಭಿಯಾನಕ್ಕೆ ಅದ್ಧೂರಿ ಸ್ವಾಗತ

0

Tunga-Bhadra campaign ನವೆಂಬರ್ 6ನೇ ರಂದು ಶೃಂಗೇರಿಯಿಂದ ಪ್ರಾರಂಭಗೊಂಡ “ನಿರ್ಮಲ ತುಂಗಾ-ಭದ್ರ ಅಭಿಯಾನ” ಪಾದಯಾತ್ರೆಯೂ ಇಂದು ಶಿವಮೊಗ್ಗಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರದ ಅಶೋಕ ವೃತ್ತದಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಅದ್ದೂರಿಯಾಗಿ ಸ್ವಾಗತಿಸಿ, ನಂತರ ನಡೆದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

B.Y.Raghavendra ತುಂಗ- ಭದ್ರಾ ನದಿಗಳು ನಮ್ಮ ಮಲೆನಾಡಿನ ಜೀವನದಿಗಳು- ಸಂಸದ ರಾಘವೇಂದ್ರ

0

B.Y.Raghavendra ದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಹಾಗೂ ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಸಹಯೋಗದಲ್ಲಿ “ಶೃಂಗೇರಿಯಿಂದ-ಕಿಷ್ಕಿಂದೆವರೆಗೆ” ನಡೆಯುತ್ತಿರುವ “ನಿರ್ಮಲ ತುಂಗಾ-ಭದ್ರಾ ಅಭಿಯಾನ – ಬೃಹತ್ ಜಲ ಜಾಗೃತಿ, ಬೃಹತ್ ಜನ ಜಾಗೃತಿ” ಅಭಿಯಾನದ ಪಾದಯಾತ್ರೆ ನಗರಕ್ಕೆ ಆಗಮಿಸಿದ್ದು ಇದರ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಮಲೆನಾಡ ಜೀವನದಿಯನ್ನು ಉಳಿಸುವ ಪ್ರಯುಕ್ತ ಅದರ ಸಾಧ್ಯ ಸಾಧ್ಯತೆಗಳನ್ನು ವಿಮರ್ಶಿಸಲು ಇಂದು ಆಯೋಜಿಸಿದ್ದ “ಪ್ರಬುದ್ಧರ ಸಭೆ” ಯಲ್ಲಿ ಪಾಲ್ಗೊಂಡು ಅಭಿಪ್ರಾಯ ಹಂಚಿಕೊಳ್ಳಲಾಯಿತು.

ತುಂಗಾ-ಭದ್ರಾ ನದಿಯು ನಮ್ಮ ಮಲೆನಾಡಿನ ಜೀವನದಿಯಾಗಿದೆ. ದೈವದತ್ತವಾಗಿ ನಮಗೆ ದೊರಕಿರುವ ಎರಡು ಪ್ರಮುಖ ನದಿಗಳಾಗಿದೆ. ಆಧುನೀಕರಣ ಮತ್ತು ಕೈಗಾರಿಕರಣದಿಂದ ನದಿಯ ಪಾವಿತ್ರತೆ ಹದಗೆಡುತ್ತಿದೆ. ಮನುಷ್ಯನ ತಪ್ಪಿನಿಂದಾಗಿ ನದಿಯು ಮಲಿನಗೊಳ್ಳುತ್ತಿದೆ. ಪವಿತ್ರ ಜಲವನ್ನು ಸಂರಕ್ಷಿಸಿ ಮಲಿನ ಮುಕ್ತ ನದಿಯನ್ನಾಗಿ ಮಾಡುವುದು ಈ ಮೂಲಕ ಭವಿಷ್ಯದ ಉತ್ತಮ ದಿನಗಳನ್ನು ರಕ್ಷಿಸುವುದು ಅಭಿಯಾನದ ಮೂಲ ಉದ್ದೇಶವಾಗಿದೆ.

B.Y.Raghavendra ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಚನ್ನಬಸಪ್ಪ ಅವರು, ಗಣ್ಯರಾದ ಪ್ರೊ. ಕುಮಾರಸ್ವಾಮಿ ಅವರು, ಶ್ರೀ ಗೋಪಿನಾಥ ಅವರು, ಶ್ರೀ ಗಿರೀಶ್ ಪಟೇಲ್ ಅವರು, ಡಾ. ಶ್ರೀಧರ್ ಅವರು ಸೇರಿದಂತೆ ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.

Shivamogga Regional Transport Office ಸಾರಿಗೆ ಇಲಾಖೆಯಿಂದ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಕಾರ್ಯಕ್ರಮ

0

Shivamogga Regional Transport Office ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿ ಯಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಆಚರಣೆ ನಡೆಸಲಾಯಿತು.
ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಭೀಮನ ಗೌಡ ಪಾಟೀಲ್ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾದ ಮುರಗೇಂದ್ರ ಬಿ. ಶಿರೋಲ್ಕಾರ್, ಕಚೇರಿಯ ಅಧೀಕ್ಷಕರಾದ ರಾಮಚಂದ್ರಪ್ಪ ಎಚ್.ಸಿ, ಕಚೇರಿಯ ಅಧೀಕ್ಷಕರಾದ ಶ್ರೀಮತಿ ರಮ್ಯಾ, ಕಚೇರಿಯ ಸಿಬ್ಬಂದಿಗಳು, ಚಾಲನ ತರಬೇತಿಯ ಮುಖ್ಯಸ್ಥರು, ಶೋರೂಂ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Kannada Rajyotsava ಡಿಸೆಂಬರ್ 1. ಭಾವಸಾರ ಕ್ಷತ್ರಿಯ ಯುವಕ ಸಂಘದಿಂದ ಕನ್ನಡ ರಾಜ್ಯೋತ್ಸವ & ಪ್ರತಿಭಾ ಪುರಸ್ಕಾರ

0

Kannada Rajyotsava ಶಿವಮೊಗ್ಗ ನಗರದ ಭಾವಸಾರ ಕ್ಷತ್ರಿಯ ಯುವಕರ ಸಂಘದಿಂದ ಡಿ. 1ರ ಭಾನುವಾರ ಸಂಜೆ 5ಗಂಟೆಗೆ 69ನೇ ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ತುಳಜಾ ಭವನದಲ್ಲಿ ಆಯೋಜಿಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ನ. 25ರ ಸಂಜೆ 5ಗಂಟೆಯೊಳಗೆ ತುಳಜಾ ಭವಾನಿ ದೇವಸ್ಥಾನದ ಕಛೇರಿಗೆ ಫೋಟೊ, ಅಂಕಪಟ್ಟಿ ದಾಖಲೆಗಳನ್ನು ಸಲ್ಲಿಸಲು ತಿಳಿಸಲಾಗಿದೆ. ಮಾಹಿತಿಗೆ 9740729313ರಲ್ಲಿ ಸಂಪರ್ಕಿಸಿ, ಕಾರ್ಯಕ್ರಮ ಮತ್ತು ಪುರಸ್ಕಾರ ಮಾಹಿತಿಗೆ ಮೊ. 9481466666, 9986511189, 9844736606ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

Women And Child Development Department ರಘು ಸಮರ್ಥ ಭಾವಗೀತೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

Women And Child Development Department ಮಕ್ಕಳ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಬಾಲ ಭವನ ಸೊಸೈಟಿ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸೃಜನಾತ್ಮಕ ಕಲೆ ವಿಭಾಗದಲ್ಲಿ ಶಿವಮೊಗ್ಗ ವಿಕಾಸ ಶಾಲೆಯ 10ನೇ ತರಗತಿ ವಿದ್ಯಾರ್ಥಿ ರಘುಸಮರ್ಥ ನಾಡಿಗ್ ಭಾವಗೀತೆ ಗಾಯನದಲ್ಲಿ  ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ನವೆಂಬರ್ 14ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದೆ. ವಿಕಾಸ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

CM Siddharamaiah ಕೊರೋನ ಅವಧಿಯ ₹2000 ಕೋಟಿ ಹಗರಣ ವರದಿ ನೋಡಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕ್ರಮಕೈಗೊಳ್ಳುವೆ- ಸಿದ್ಧರಾಮಯ್ಯ

0

CM Siddharamaiah ಕೊರೊನಾ ಅವಧಿಯಲ್ಲಿ 2 ಸಾವಿರ ಕೋಟಿಗೂ ಹೆಚ್ಚು ಹಗರಣ ನಡೆದಿದೆ, ಆರೋಗ್ಯ ರಕ್ಷಣೆಯ ಸಾಮಗ್ರಿಗಳ ಖರೀದಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಹಿನ್ನೆಲೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿಕುನ್ಹಾ ಅವರ ನೇತೃತ್ವದ ಆಯೋಗ ರಚಿಸಲಾಗಿದೆ, ವರದಿ ಇನ್ನೂ ಕೈ ಸೇರಿಲ್ಲ, ಪತ್ರಿಕೆಯಲ್ಲಿ ಓದಿದ್ದನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದೇನೆ.‌

ಮಾಜಿ ಸಿ.ಎಂ.ಯಡಿಯೂರಪ್ಪ ಅವರು ಇದೆಲ್ಲ ಸುಳ್ಳು ಎಂದರೆ ವಾಸ್ತವಾಂಶ ಬದಲಾಗಲ್ಲ. ಈ ಬಗ್ಗೆ ನ್ಯಾಯಾಲಯವಿದೆ, ಅಲ್ಲಿ ಸತ್ಯಾಸತ್ಯತೆ ಬಯಲಾಗಲಿದೆ.‌
ಬಿಜೆಪಿಯವರು ಎಲ್ಲವನ್ನೂ ಸುಳ್ಳು ಅಂತಾರೆ. ಅವರು ಸುಳ್ಳಿನ ಪಿತಾಮಹರು. ಯಡಿಯೂರಪ್ಪ ಅವರು ಸಿ.ಎಂ.ಆಗಿದ್ದಾಗ ಕೋವಿಡ್ ಹಗರಣಗಳನ್ನು ನಾನು ವಿರೋಧಪಕ್ಷದ ನಾಯಕನಾಗಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದೆ. ಆಗಲೂ ಸಾಕಷ್ಟು ಅಂಶಗಳನ್ನು ದಾಖಲೆ ಸಹಿತ ಮಾತನಾಡಿದ್ದೆ. ಈಗ ಆಯೋಗದ ವರದಿ ಬರಲಿ, ನಂತರ ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು.

ಆಕ್ಸಿಜನ್ ಕೊರತೆಯಿಂದ ಜನರು ಮೃತಪಟ್ಟಿರುವ ದುರ್ಘಟನೆಗಳು ನಡೆದವು. ಇದನ್ನು ಸಚಿವರಾಗಿದ್ದ ಸುಧಾಕರ್ ಅವರು ಸುಳ್ಳು ಸುಳ್ಳು ಎಂದರು. ನಾನು ಮತ್ತು ಡಿ.ಕೆ ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ ಮೇಲೆ ಸರ್ಕಾರ ತನ್ನ ನಿರ್ಲಕ್ಷ್ಯ ಒಪ್ಪಿಕೊಂಡು, ಸಮಸ್ಯೆ ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿತು.

ಶೀಘ್ರದಲ್ಲೇ ಸಿ.ಎಂ ರಾಜೀನಾಮೆ ನೀಡಲಿದ್ದಾರೆ ಎಂದು ಯಡಿಯೂರಪ್ಪ ಅವರು ಮಾತನಾಡಿದ್ದಾರೆ. ಚುನಾವಣಾ ಕಾರಣಕ್ಕೆ ಇಂತಹ ಹೇಳಿಕೆ ನೀಡುತ್ತಾರೆ. ನಾನು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳುವವನು.
ನಾನು ಸಣ್ಣ ತಪ್ಪೂ ಮಾಡಿಲ್ಲ, ಮಾಡೋದು ಇಲ್ಲ, ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ.‌

ಯಡಿಯೂರಪ್ಪ ಅವರು 2 ಸಾವಿರ ಕೋಟಿ ಕೊಟ್ಟು ಮುಖ್ಯಮಂತ್ರಿ‌ ಆದ್ರು.‌ ಇವರ ಪುತ್ರ ವಿಜಯೇಂದ್ರ ಕೂಡ ದುಡ್ಡು ಕೊಟ್ಟೇ ಪಕ್ಷದ ಅಧ್ಯಕ್ಷ ಆಗಿದ್ದು ಅಂತ ಯತ್ನಾಳ್ ಅವರೇ ಹೇಳಿದ್ದಾರೆ. ಇವರಿಗೆ ಸಾವಿರ ಸಾವಿರ ಕೋಟಿ ಎಲ್ಲಿಂದ ಬಂತು? ಇದರ ಸತ್ಯಾಸತ್ಯತೆ ಕೂಡ ಬಯಲಾಗಬೇಕು.

CM Siddharamaiah ಗೃಹಲಕ್ಷ್ಮಿಗೆ ಹಂಚಲು ಹಣ ಇಲ್ಲ ಎಂಬ ದೇವೇಗೌಡರ ಹೇಳಿಕೆ ಶುದ್ಧ ಸುಳ್ಳು. ಅಕ್ಟೋಬರ್ ವರೆಗೂ ಒಂದು ತಿಂಗಳದ್ದೂ ತಪ್ಪದೆ ಗೃಹಲಕ್ಷ್ಮಿ ಹಣ ನೀಡಿದ್ದೇವೆ ಅಂದರೆ ಏನು ಅರ್ಥ? ನವೆಂಬರ್ ತಿಂಗಳದ್ದೂ ಸದ್ಯದಲ್ಲೇ ಹಾಕುತ್ತೇವೆ.

ವಕ್ಫ್ ಆಸ್ತಿ ಒತ್ತುವರಿಯನ್ನು ತೆರವುಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲೇ ಬಿಜೆಪಿ ಘೋಷಿಸಿದೆ. ಬಿಜೆಪಿ ಸರ್ಕಾರವೇ 216 ಮಂದಿಯನ್ನು ಒಕ್ಕಲೆಬ್ಬಿಸಲು ನೋಟಿಸ್ ನೀಡಿತ್ತು. ಈಗ ನೋಟಿಸ್ ನೀಡಿದವರೇ ಸುಳ್ಳು ಹೇಳಿಕೆ ನೀಡುತ್ತಾ, ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಒಬ್ಬೇ ಒಬ್ಬ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ. ಇದು ನಮ್ಮ‌ ಸ್ಪಷ್ಟ ತೀರ್ಮಾನ.‌ ನೋಟಿಸ್ ಗಳನ್ನು ಹಿಂಪಡೆಯಬೇಕು ಎಂದು ಖಡಕ್ ಸೂಚನೆ ನೀಡಿದ್ದೇನೆ, ಚುನಾವಣೆ ಪ್ರಣಾಳಿಕೆಯಲ್ಲಿ ಅವರೇ ವಕ್ಫ್ ಆಸ್ತಿ ಒತ್ತುವರಿ ತೆರವು ಮಾಡುವುದಾಗಿ ಹೇಳಿ, ಈಗ ರಾಜಕೀಯಕ್ಕಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ.

ತೋರಣಗಲ್ಲು ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ

Chamber Of Commerce Shivamogga ಎಸ್ ಐಡಿಬಿ ಬ್ಯಾಂಕ್ ಆರಂಭಿಸಿದ್ದಕ್ಕೆ ಚೇಂಬರ್ ಆಫ್ ಕಾಮರ್ಸ್ ನಿಂದ ಕೃತಜ್ಣತೆ

0

Chamber Of Commerce Shivamogga ಶಿವಮೊಗ್ಗದಲ್ಲಿ ನೂತನವಾಗಿ ಸಿಡ್ ಬಿ ಬ್ಯಾಂಕ್ ಆರಂಭಗೊಂಡಿದ್ದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಶುಭ ಕೋರಲಾಗಿದೆ.

ಸಿಡ್‌ಬಿ ಬ್ಯಾಂಕಿನ ವಿಶೇಷ ಸೌಲಭ್ಯಗಳ ವಿವರ:

೧. ಸಿಡ್ ಬಿ ಭಾರತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಕೇವಲ ಇದು ಎಂಎಸ್ಎಂಇ ಗಳಿಗೆ ಸಾಲ ನೀಡಿ ಪ್ರೋತ್ಸಾಹಿಸುವ ಬ್ಯಾಂಕಿಂಗ್ ವ್ಯವಸ್ಥೆ ಆಗಿರುತ್ತದೆ.

೨. ಈ ಬ್ಯಾಂಕಿನಲ್ಲಿ ಹಾಲಿ ಉದ್ಯಮಗಳನ್ನು ನಡೆಸುತ್ತಿರುವ ಮತ್ತು ನವ ಉದ್ಯಮದಾರರಿಗೆ ಕೈಗಾರಿಕೆಗಳಿಗೆ ಬೇಕಾಗುವ ಎಲ್ಲ ರೀತಿಯ ಮೆಶಿನರಿಗಳಿಗೆ ಸಾಲ ಸೌಲಭ್ಯ ಒದಗಿಸುವ ವ್ಯವಸ್ಥೆಯನ್ನು ಹೊಂದಿರುತ್ತದೆ.

೩. ಈ ಬ್ಯಾಂಕ್ ಸಂಪೂರ್ಣ ಡಿಜಿಟಲೈಸೇಶನ್ ಆಗಿರುವ ಬ್ಯಾಂಕ್ ಆಗಿರುತ್ತದೆ ,ಇಲ್ಲಿ ತಾವು ಮನೆಯಲ್ಲೇ ಕುಳಿತು ದಾಖಲೆಗಳನ್ನು ಆನ್‌ಲೈನ್ ಮೂಲಕ ಅಪ್ಲೋಡ್ ಮಾಡಬಹುದಾಗಿರುತ್ತದೆ, ನಂತರ ಆನ್ಲೈನ್ ಮೂಲಕವೇ ಪರಿಶೀಲನೆಗೆ ಒಳಪಟ್ಟು ,ತಮ್ಮ ಐಟಿ, ಉದ್ಯಮ್ ಆದಾರ್, ಸಿಬಿಲ್ ರಿಪೋರ್ಟ್, ಪ್ರಾಜೆಕ್ಟ್ ರಿಪೋರ್ಟ್, ಇತ್ಯಾದಿಗಳನ್ನು ಪರಿಶೀಲಿಸಿ, ಬ್ಯಾಂಕಿನವರು ತಮ್ಮನ್ನು ಸಂಪರ್ಕಿಸಬಹುದು ಅಥವಾ ತಾವು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

೪. ಸಾಮಾನ್ಯವಾಗಿ ಸಾಲ ಪಡೆಯಲು, ಈಗ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತುಂಬಾ ಕಠಿಣವಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿರುವುದು, ಆದರೆ ಈ ಬ್ಯಾಂಕ್ ಕೊಲಾಟರಲ್ ಫ್ರೀ ಸಾಲ ಸೌಲಭ್ಯಗಳು.

ಯಂತ್ರೋಪಕರಣಗಳಿಗಾಗಿ ,ನೀಡುವ ವಿಶೇಷ ನೀತಿಯನ್ನು ರೂಪಿಸಿಕೊಂಡಿರುತ್ತದೆ. ತಮ್ಮ ದಾಖಲೆಗಳು ಸರಿ ಇದ್ದಲ್ಲಿ ಕೇವಲ ೪೮ ಗಂಟೆಗಳ ಒಳಗಡೆ ಸಾಲ ಮಂಜೂರಾತಿ ಪಡೆಯಬಹುದಾಗಿರುತ್ತದೆ.

ಇಂತಹ ಎಲ್ಲ ಸೌಲಭ್ಯಗಳನ್ನು ನೀಡುವ ಬ್ಯಾಂಕ್ ನಮ್ಮ ಶಿವಮೊಗ್ಗ ಜಿಲ್ಲೆಗೆ ತರಲು ಕಾರಣೀಭೂತರಾದ ನಮ್ಮ ಹೆಮ್ಮೆಯ ಲೋಕಸಭಾ ಸದಸ್ಯರಾದ ಸನ್ಮಾನ್ಯಶ್ರೀ ಬಿ.ವೈ ರಾಘವೇಂದ್ರರವರು ಹಾಗೂ ಗೌರವಾನ್ವಿತ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಹಾಗೂ ಇವರೆಲ್ಲರಿಗೂ ಬೆನ್ನೆಲುಬಾಗಿ ಕೆಲಸ ಮಾಡುತ್ತಿರುವ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯವರರಾದ ಸನ್ಮಾನ್ಯಶ್ರೀ ನರೇಂದ್ರ ಮೋದಿಜಿಯವರಿಗೆ ಶಿವಮೊಗ್ಗ ಜಿಲ್ಲೆಯ ನಾಗರೀಕರು, ಉದ್ಧಿಮೆದಾರರು ಹಾಗೂ ಎಲ್ಲರ ಪರವಾಗಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಶುಭ ಕೋರಲಾಗಿದೆ.

Chamber Of Commerce Shivamogga ಸಿಡ್‌ಬಿಯು ದಿನಾಂಕ ೦೨.೦೪.೧೯೯೦ರ ಪಾರ್ಲಿಮೆಂಟಿನ ಕಾಯ್ದೆಯಡಿ ಸ್ಥಾಪಿತವಾಗಿದೆ. ಇದು ಮುಖ್ಯವಾಗಿ ಎಂ.ಎಸ್.ಎಂ.ಇ ಗಳಿಗೆ ಅಭಿವೃದ್ಧಿಗೆ ಹಣಕಾಸಿನ ಅವಶ್ಯಕತೆಯನ್ನು ಪೂರೈಸುವ ಪ್ರಧಾನ ಹಣಕಾಸಿನ ಸಂಸ್ಥೆಯಾಗಿದೆ ಮತ್ತು ಎಂ.ಎಸ್.ಎಂ.ಇಗಳಿಗೆ ಈ ರೀತಿ ಹಣಕಾಸು ಒದಗಿಸುವ ಅನೇಕ ಸಂಸ್ಥೆಗಳಿಗೆ ಸಮನ್ವಯಕಾರಕವಾಗಿ ನೋಡಲ್ ಏಜೆನ್ಸಿ ರೀತಿ ಕೆಲಸ ಮಾಡುತ್ತದೆ.

ಸೇವೆಗಳು ಮತ್ತು ಉತ್ಪಾದನಾ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತದೆ. ಸಾಲದ ಮರುಪಾವತಿ ಅವಧಿಯ ಮೊರಟೋರಿಯಂ ಅವಧಿ ಒಳಗೊಂಡಂತೆ ದೀರ್ಘಾವಾಗಿದ್ದು ಆಕರ್ಷಕ ಬಡ್ಡಿ ದರಗಳನ್ನು ಒಳಗೊಂಡಿರುತ್ತದೆ.

ಎಂ.ಎಸ್.ಎಂ.ಇಗಳಿಗೆ ಉನ್ನತಮಟ್ಟದ ಯಂತ್ರೋಪಕರಣಗಳ ಖರೀದಿಗಳಿಗೆ ಸ್ಪೀಟ್ ಪ್ಲೇ ತಕ್ಷಣದ ಉದ್ದೇಶಗಳಿಗೆ ಟಾಪ್‌ಅಫ್ ಲೋನ್ ಟುಲಿಪ್.

ಸೌರ ಸ್ಥಾವರಗಳಿಗೆ ಸ್ಟಾರ್ ಟರ್ಮ ಲೋನ್ ಇದುಎಂ.ಎಸ್.ಎಂ ಇಗಳ ವಿದ್ಯುತ್ ಬಿಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಲಕರಣೆ ಹಣಕಾಸು ಎಸ್.ಇ.ಎಫ್

ಕೋವಿಡ್ ನಂತರದ ಸಮಯದಲ್ಲಿ ಚೇತರಿಕೆ ಮತ್ತು ಸಾವಯವ ಬೆಳವಣಿಗೆಗಾಗಿ ಕೈಗಾರಿಕೆಗಳನ್ನು ಪುನಶ್ಛೇತನಗೊಳಿಸಲು ಆರೋಗ್ಯ, ಸ್ವ್ಡಾಸ್, ತ್ವರಿತ್ ಮುಂತಾದ ಸಾಲಗಳನ್ನು ನೀಡಲಾಗುತ್ತದೆ.

ನಗದು ಸಾಲ ವರ್ಕಿಂಗ್ ಕ್ಯಾಪಿಟಲ್ ಲೋನ್ , ಮೂಲ ಸಲಕರಣೆ ತಯಾರಕ, ಪಾಲುದಾರಿಕೆ ಅಡಿಯ ಸಾಲಗಳು ಸಿಡ್‌ಬಿಯು ಮುಖ್ಯವಾಗಿ ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್‌ಗಳಿಗೆ ಸಹಾಯ ಹಣಕಾಸು ಸಂಸ್ಥೆಗಳಿಗೆ ಸಾಲ ನೀಡುತ್ತದೆ.

ಎಂ.ಎಸ್.ಎಂ.ಇ ವಲಯದಲ್ಲಿ ವರ್ಗೀಕರಿಸಲಾದ ಕಂಪನಿಗಳಿಗೆ ನೇರ ಸಾಲವನ್ನು ನೀಡುತ್ತದೆ. ಉದ್ಯೋಗದ ಉತ್ತೇಜನ, ತಂತ್ರಜ್ಞಾನದ ಉನ್ನತೀಕರಣ, ಜಾಗತಿಕ ಮಟ್ಟದಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಮಾರುಕಟ್ಟೆ.ಸೂಕ್ಷ್ಮ ಸಣ್ಣ ಮತ್ತು ಮದ್ಯಮ ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಸಾಲಗಳನ್ನು ವಿನ್ಯಾಸಗೊಳಿಸುತ್ತದೆ.

ಸಿಡ್‌ಬಿಯು ಅನೇಕ ಬ್ಯಾಂಕುಗಳು, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ, ವಿಶ್ವಬ್ಯಾಂಕ್ ಗಳೊಂದಿಗೆ ಒಪ್ಪಂದಗಳನ್ನು ಹೊಂದಿದೆ ಆದ್ದರಿಂದ ರಿಯಾಯಿತಿ ದರದಲ್ಲಿ ಬಡ್ಡಿ ದರಗಳನ್ನು ಪಡೆಯಬಹುದು.

ಸಿಡ್‌ಬಿ ಕೇವಲ ಸಾಲ ನೀಡುವುದಷ್ಟೇ ಅಲ್ಲ, ವಾಣಿಜ್ಯೋಧ್ಯಮಿಗಳಿಗೆ ಸರಿಯಾದ ನಿರ್ದಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.ಸಿಡ್‌ಬಿಯು ವೆಂಚರ್ ಮತ್ತು ಇಕ್ವಿಟಿ ಫಂಡ್‌ಗಳ – ವೆಂಚರ್ ಕ್ಯಾಪಿಟಲ್ ಲಿಮಿಟೆಡ್ ಎಂಬ ಅಂಗ ಸಂಸ್ಥೆ ಹೊಂದಿದೆ ಈ ಸಂಬಂಧಿತ ಎಂ.ಎಸ್.ಎಂ.ಇ ಗಳಿಗೆ ಇಕ್ವಿಟಿ ರೂಪದಲ್ಲಿ ಬಂಡವಾಳವನ್ನು ಒದಗಿಸುತ್ತದೆ.

ಸರ್ಕಾರದ ಅನೇಕ ರಿಯಾಯಿತಿ ಬಡ್ಡಿ ದರ ಮತ್ತು ಸರಳವಾದ ನಿಯಮಗಳನ್ನು ಹೊಂದಿರುವ ವಿವಿಧ ಯೋಜನೆಗಳ ಸಾಲವನ್ನು ನೀಡುತ್ತದೆ. ಮುಖ್ಯವಾಗಿ ಪಾರದರ್ಶಕತೆ – ಪ್ರಕ್ರಿಯೆ ಮತ್ತು ದರ ರಚೆನೆಯು ಪಾರದರ್ಶಕವಾಗಿರುತ್ತದೆ . ಯಾವುದೇ ಗುಪ್ತ ಶುಲ್ಕಗಳಿಲ್ಲ. ತಂತ್ರಜ್ಞಾನದ ಅವಿಷ್ಕಾರಕ್ಕೆ ರಿವಾಲ್ವಿಂಗ್ ಫಂಡ್ ಯೋಜನೆಯೊಂದಿಗೆ ಮಾಡಿ ಸಾಲವನ್ನು ಒದಗಿಸುತ್ತದೆ.

Drinking Water Supplier Shivamogga ಶಿವಮೊಗ್ಗ ನಗರ ಕುಡಿಯುವ ನೀರು ಸರಬರಾಜು ಕುಂದುಕೊರತೆಗೆ ವಾಟ್ಸ್ ಆ್ಯಪ್ ಮೂಲಕ ದೂರು ಸಲ್ಲಿಸಲು ಅವಕಾಶ

0

Drinking Water Supplier Shivamogga ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಅಡಚಣೆ/ಕುಂದುಕೊರತೆಗಳಿದ್ದಲ್ಲಿ ನಗರದ ಸಾರ್ವಜನಿಕರು ದೂ.ಸಂ. 08182 273000 ಮತ್ತು ವಾಟ್ಸ್ಆಪ್ ಸಂಖ್ಯೆ 761955584 ಕ್ಕೆ ದೂರುಗಳನ್ನು ದಾಖಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಸೇವಾ ಕೇಂದ್ರ, ನಿರಂತರ ನೀರು ಸರಬರಾಜು ಯೋಜನೆ, ಕನನೀಸ ಮತ್ತು ಒಳ ಚರಂಡಿ ಮಂಡಳಿ, ಮೊದಲನೇ ಮಹಡಿ ವಿಭಾಗ ಕಚೇರಿ ಆವರಣ ಬಾಲರಾಜ್ ಅರಸ್ ರಸ್ತೆ ಸಂಪರ್ಕಿಸಬಹುದೆಂದು ಎಂದು ಶಿವಮೊಗ್ಗ ಕನನೀಸ ಮತ್ತು ಒಳ ಚರಂಡಿ ಮಂಡಳಿ, ನಿರ್ವಹಣೆ ಮತ್ತು ಪಾಲನೆ ಸಹಾಯಕ ಕಾರ್ಯಪಾಲಕ ಅಭಿಯಂತರು ತಿಳಿಸಿದ್ದಾರೆ.

code of conduct election ಜಿಲ್ಲೆಯ ವಿವಿಧ “ಗ್ರಾಪಂ” ಚುನಾವಣೆ ನಿಮಿತ್ತ ಜಿಲ್ಲಾಡಳಿತದಿಂದ ಚುನಾವಣಾ ನೀತಿ ಸಂಹಿತೆ ಜಾರಿ- ಗುರುದತ್ತ ಹೆಗಡೆ

0

code of conduct election ಶಿವಮೊಗ್ಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು ಕೆಳಕಂಡ ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಶಸ್ತ್ರ/ಆಯುಧಗಳನ್ನು ಚುನಾವಣಾ ಪ್ರಕ್ರಿಯೆ ಪೂರ್ಣ ಗೊಳ್ಳುವವರೆಗೆ ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದ್ದಾರೆ.

ರಾಜ್ಯ ಚುನಾವಣಾ
ಆಯೋಗವು ಶಿವಮೊಗ್ಗ ತಾಲ್ಲೂಕಿನ 32- ಕೋಟೆಗಂಗೂರು, ಸಾಗರ ತಾಲ್ಲೂಕಿನ 23-ಕುದರೂರು, ಭದ್ರಾವತಿ ತಾಲ್ಲೂಕಿನ 34-ಬಾರಂದೂರು, 40- ಮೈದೊಳಲು, 10-ಅರಹತೊಳಲು, 17-ಅರಕೆರೆ, ತೀರ್ಥಹಳ್ಳಿ ತಾಲ್ಲೂಕಿನ 9-ತೀರ್ಥಮತ್ತೂರು, ಹೊಸನಗರ ತಾಲ್ಲೂಕಿನ
4-ಎಂ ಗುಡ್ಡೆಕೊಪ್ಪ, ಶಿಕಾರಿಪುರ ತಾಲ್ಲೂಕಿನ 1-ಮಾರವಳ್ಳಿ, 13-ಹಿತ್ತಲ, 18-ಸುಣ್ಣದಕೊಪ್ಪ, 11-ತರಲಘಟ್ಟ, ಸೊರಬ ತಾಲ್ಲೂಕಿನ 22-ಹೊಸಬಾಳೆ, 5-ಜಡೆ, 2-ಭಾರಂಗಿ ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಗಳಲ್ಲಿ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಚುನಾವಣೆ ನೀತಿ ಸಂಹಿತೆ ನ. 06 ರಿಂದ 26 ರ ವರೆಗೆ ಜಾರಿಯಲ್ಲಿರುತ್ತದೆ.

ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಳ್ಳುವವರೆಗೆ ಮೇಲ್ಕಂಡ ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಗಳಲ್ಲಿ ಆಯುಧಗಳನ್ನು ಹೊಂದಿರುವವರು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಶಸ್ತ್ರ/ಆಯುಧಗಳನ್ನು ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಬೇಕು.

code of conduct election ಈ ಶಸ್ತ್ರ/ಆಯುಧಗಳನ್ನು ಚುನಾವಣಾ ಪ್ರಕ್ರಿಯೆ ಮುಕ್ತಾಯವಾದ ನಂತರ ಚುನಾವಣೆಯ ಫಲಿತಾಂಶವನ್ನು ಘೋಷಿಸಿದ ಮೇಲೆ ಡಿಪಾಸಿಟ್ ಮಾಡಿದ ಪರವಾನಿಗೆದಾರರಿಗೆ ಹಿಂದಿರುಗಿಸಲಾಗುವುದು. ಚುನಾವಣೆಯು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಯಬೇಕಾಗಿರುವುದರಿಂದ ಜಿಲ್ಲಾಡಳಿತವು ಕೈಗೊಂಡ ಕ್ರಮಕ್ಕೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದ್ದಾರೆ.

ಸರ್ಕಾರಿ ಕರ್ತವ್ಯದಲ್ಲಿ ನಿರತರಾದ ರಕ್ಷಣಾ ಸಿಬ್ಬಂದಿಗಳಿಗೆ ಎಂ.ಪಿ.ಎಂ/ವಿ.ಐ.ಎಸ್.ಎಲ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಇತ್ಯಾದಿಗಳಲ್ಲಿ ಭದ್ರತಾ ಕರ್ತವ್ಯದಲ್ಲಿರುವ ಆಯುಧ ಪರವಾನಿಗೆ ಹೊಂದಿರುವ ಸಿಬ್ಬಂದಿಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.