Wednesday, March 25, 2026
Wednesday, March 25, 2026
Home Blog Page 503

Actor Shivarajkumar ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹ್ಯಾಟ್ರಿಕ್ ಹೀರೋ

0

Actor Shivarajkumar ಸ್ಯಾಂಡಲ್‌ವುಡ್‌ನ ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಿಗೆ, ಆಪ್ತರಿಗೆ, ಚಿತ್ರರಂಗದ ಸಹೋದ್ಯೋಗಿಗಳಿಗೆ ಆತಂಕ ತಂದಿದ್ದು,ಆದರೆ ಶಿವಣ್ಣ, “ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ” ಅಂತ ಹೇಳಿದ್ದಾರೆ. ಸದ್ಯ ಚಿಕಿತ್ಸೆಯನ್ನು ಅವರು ಪಡೆದುಕೊಳ್ಳಲಿದ್ದು, ಶೀಘ್ರದಲ್ಲೇ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನನಗೆ ಆರೋಗ್ಯ ಸಮಸ್ಯೆ ಇರುವುದು ನಿಜ. ಇದರಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ. ಟ್ರೀಟ್‌ಮೆಂಟ್ ಕೂಡ ಪಡೆದುಕೊಳ್ಳುತ್ತಿದ್ದೇನೆ. ಹಲವು ಹಂತಗಳಲ್ಲಿ ಚಿಕಿತ್ಸೆ ನಡೆಯಲಿದೆ. ಆದರೆ, ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಆರಂಭದಲ್ಲಿ ನನಗೂ ಸ್ವಲ್ಪ ಭಯವಾಗಿತ್ತು.

Actor Shivarajkumar ಆದರೆ, ಎಲ್ಲರೂ ಧೈರ್ಯ ತುಂಬಿದ್ದಾರೆ. ನಾನು ಕೂಡ ಧೈರ್ಯದಿಂದ ಇದ್ದೇನೆ” ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.

Rovers Club Shimoga ರೋವರ‍್ಸ್ ಕ್ಲಬ್ ಅಧ್ಯಕ್ಷರಾಗಿ ಸುರೇಶ್.ಎಚ್.ಸಿ. ಅವಿರೋಧ ಆಯ್ಕೆ

0

Rovers Club Shimoga ರೋವರ‍್ಸ್ ಕ್ಲಬ್ ಶಿವಮೊಗ್ಗ ಅಧ್ಯಕ್ಷರಾಗಿ ಸುರೇಶ್.ಎಚ್.ಸಿ. ಅವಿರೋಧವಾಗಿ ಆಯ್ಕೆಯಾದರು. 2024-27ನೇ ಸಾಲಿನ ಮೂರು ವರ್ಷಗಳ ಅವಧಿಗೆ ಅವಿರೋಧವಾಗಿ ಕಾರ್ಯಕಾರಿ ಮಂಡಳಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಕೃಷ್ಣ.ಎಚ್, ಕಾರ್ಯದರ್ಶಿಯಾಗಿ ಅ.ಮ.ಪ್ರಕಾಶ್, ಸಹ ಕಾರ್ಯದರ್ಶಿಯಾಗಿ ನಾಗರಾಜ ಪಾಟ್ಕರ್ ಪಿ.ಎಲ್., ಖಜಾಂಚಿಯಾಗಿ ಸೋಮಶೇಖರ ಶಿ.ದು, ನಿರ್ದೇಶಕರಾಗಿ ಕೆ.ಶಂಕರ್, ಚಿನ್ನಪ್ಪ, ಜಿ.ವಿಜಯಕುಮಾರ್, ವಿನಾಯಕ.ಎಂ.ಬಿ., ಅಗಡಿ ಮಹೇಶ್, ಬಸವರಾಜ್.ಎಂ.ಆರ್., ಪರಶುರಾಮ, ಸುನೀಲ್‌ಕುಮಾರ್.ಎಸ್., ಮಹದೇವಾಚಾರ್.ಟಿ. ಅವಿರೋಧ ಆಯ್ಕೆಯಾಗಿದ್ದಾರೆ. Rovers Club Shimoga ಚುನಾವಣೆಯ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಲು ಮಾಜಿ ಅಧ್ಯಕ್ಷ ಎಚ್.ಡಿ.ರಮೇಶ್ ಶಾಸ್ತ್ರಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಮಾಜಿ ಉಪಾಧ್ಯಕ್ಷ ರವಿ ಕೋಟೋಜಿ, ಜಿ.ಕೆ.ಪ್ರಕಾಶ್, ಪುರುಷೋತ್ತಮ್, ಗೋವಿಂದರಾಜ್, ಮಾಜಿ ಕೋಶಾಧ್ಯಕ್ಷ ಎ.ಎಚ್.ಸುನೀಲ್ ಸಹಕರಿಸಿದ್ದಾರೆ. ಚುನಾವಣಾಧಿಕಾರಿಗಳಾಗಿ ಸತೀಶ್‌ಕುಮಾರ ಶೆಟ್ಟಿ, ಪ್ರಭಾಕರ ಕಾರ್ಯ ನಿರ್ವಹಿಸಿದರು

Delhi Ganesh ತಮಿಳು ಚಿತ್ರರಂಗದ ಹಿರಿಯ ನಟ ಡೆಲ್ಲಿ ಗಣೇಶ್ ವಿಧಿವಶ

0

ತಮಿಳು ಚಿತ್ರರಂಗದ ಹಿರಿಯ ಮತ್ತು ಖ್ಯಾತ ನಟ ಡೆಲ್ಲಿ ಗಣೇಶ್ ಶನಿವಾರ ಇಹಲೋಕ ತ್ಯಜಿಸಿದ್ದಾರೆ. ಡೆಲ್ಲಿ ಗಣೇಶ್ ಅವರಿಗೆ ಅವರಿಗೆ 80 ವರ್ಷ ವಯಸ್ಸಾಗಿತ್ತು.

ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ಡೆಲ್ಲಿ ಗಣೇಶ್ ಅವರು, ಶನಿವಾರ ತಡರಾತ್ರಿ 11 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ.

Delhi Ganesh ಕೆ ಬಾಲಚಂಧರ್ ಅವರಂತಹ ಮೇರು ನಿರ್ದೇಶಕರ ಸಿನಿಮಾ ಮೂಲಕ ನಟನೆ ಆರಂಭಿಸಿದ ಡೆಲ್ಲಿ ಗಣೇಶ್ ಅವರು, ಹಲವು ಸ್ಟಾರ್ ನಟ-ನಟಿಯರೊಟ್ಟಿಗೆ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲಿಯೂ ಕೆಲಸ ಮಾಡಿದ್ದರು.

1976 ರಿಂದಲೂ ನಟಿಸುತ್ತಿರುವ ಡೆಲ್ಲಿ ಗಣೇಶ್ ಅವರು, ತಮಿಳು, ಮಲಯಾಳ, ತೆಲುಗು ಹಾಗೂ ಕೆಲವು ಹಿಂದಿ ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ನಟಿಸಿರುವ ‘ಚೆನ್ನೈ ಎಕ್ಸ್ಪ್ರೆಸ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಸುಮಾರು 25ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.

Sri Sanjeevaraya Swamy Temple ಶಿವಮೊಗ್ಗದಲ್ಲಿ ಶ್ರದ್ಧಾಪೂರ್ವಕ ಶ್ರೀವಿಜಯದಾಸರ ಆರಾಧನೆ

0

Sri Sanjeevaraya Swamy Temple ಶಿವಮೊಗ್ಗ ನಗರದ ಕೆ.ಆರ್.ಪುರಮ್. ರಸ್ತೆಯಲ್ಲಿರುವ ಶ್ರೀಸಂಜೀವಾಂಜನೇಯ ದೇವಸ್ಥಾನದಲ್ಲಿ ಗೆಳೆಯ ವೃಂದದ ವತಿಯಿಂದ ಪ್ರಾತಃ ಸ್ಮರಣೀಯರಾದ ಶ್ರೀ ವಿಜಯದಾಸರ ಹಾಗೂ ಶ್ರೀ ಸತ್ಯವೀರತೀರ್ಥ ಶ್ರೀಪಾದಂಗಳವರ ಆರಾಧನೆಯನ್ನು ಶ್ರೀ ಸಂಜೀವಾಂಜನೇಯ ದೇವಸ್ಥಾನದಿಂದ ಕೆ.ಆರ್.ಪುರಮ್ ರಸ್ತೆ, ತಿಮ್ಮಪ್ಪನ ಕೊಪ್ಪಲು, ತುಮಕೂರು ಶ್ಯಾಮರಾವ್
ರಸ್ತೆಯಲ್ಲಿ ಯಾಯಿವಾರ (ಗ್ರಾಮ ಪ್ರದಕ್ಷಿಣೆ) ನಡೆಸಲಾಯಿತು.

ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ, ಪಂಡಿತ ರಾಯಚೂರು ಕೃಷ್ಣಾಚಾರ್,
ಮತ್ತು ಪಂ. ಶ್ರೀನಿಧಿ ಗುಡಿ ಇವರಿಂದ ಶ್ರೀ ವಿಜಯದಾಸರ
ಕೃತಿಗಳ ಬಗ್ಗೆ, ಹಾಗೂ ಶ್ರೀ ಸತ್ಯವೀರ ತೀರ್ಥರ ಬಗ್ಗೆ
ಉಪನ್ಯಾಸ ಏರ್ಪಡಿಸಲಾಗಿತ್ತು.

Sri Sanjeevaraya Swamy Temple ಚಿತ್ರದಲ್ಲಿ ಗೆಳೆಯ ವೃಂದದ ಹೆಚ್.ಎಸ್.ನಾಗೇಂದ್ರ, ಸತ್ಯನಾರಾಯಣ, ಪ್ರಹ್ಲಾದ, ಕುಷ್ಟಗಿ
ಅನಂತಾಚಾರ್, ಅನಂತ ರಾಮದ್ಯಾನಿ, ಬಿಂದು ಮಾಧವ, ಶ್ರೀಧರ, ಅಚ್ಯುತ, ಪಲ್ಲಕ್ಕಿ ಮಧುಸೂಧನಾಚಾರ್, ರಾಯಚೂರು
ಕೃಷ್ಣಾಚಾರ್, ಕುಷ್ಟಗಿ ವಾಸುದೇವ ಮೂರ್ತಿ, ಮುರಳೀಧರ, ಗೀತ, ಸುಧಾ, ಇನ್ನಿತರ ಪ್ರಮುಖರು ಇದ್ದರು.

Tungabhadra ನಿರ್ಮಲ ತುಂಗಭದ್ರಾ ಅಭಿಯಾನ ಜಾಗೃತಿ ಕಾರ್ಯಕ್ರಮ

0

Tungabhadra ನಿರ್ಮಲ ತುಂಗಭದ್ರಾ ಅಭಿಯಾನದ ಜನ ಜಾಗೃತಿ ಹಿನ್ನಲೆ ನದಿಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲು ಪರ್ಯಾವರಣ ಟ್ರಸ್ಟ್ ಹಾಗೂ ನಿರ್ಮಲ ತುಂಗಾಭದ್ರ ತಂಡದಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದ ಆವರಣದಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನಾ ಮುರುಘರಾಜೇಂದ್ರ ಸ್ವಾಮೀಜಿ
ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Tungabhadra ತುಂಗಾಭದ್ರಾ ನದಿಗೆ ಸೇರುತ್ತಿರುವ ಕಲುಷಿತ ನೀರು ತಡೆಗಟ್ಟುವ ನಿಟ್ಟಿನಲ್ಲಿ ನ. 6 ರಿಂದ ಶೃಂಗೇರಿಯಿಂದ ತುಂಗಾಭದ್ರಾ ಅಭಿಯಾನ ಶುರುವಾಗಿದೆ.ತುಂಗಾ ಭದ್ರಾ ಉಳಿವಿಗಾಗಿ 400 ಕಿಲೋ ಮೀಟರ್ ತುಂಗಾ ಅಭಿಯಾನ ತಂಡ ಪಾದಯಾತ್ರೆ ಹಮ್ಮಿಕೊಂಡಿದೆ.

ಕಾರ್ಯಕ್ರಮದಲ್ಲಿ ಭಾಗಿಯಾದ ಸಾವಿರಾರು ಕಾಲೇಜು ವಿದ್ಯಾರ್ಥಿಗಳು,ಶಾಸಕ ಚನ್ನಬಸಪ್ಪ,ಎಂಎಲ್ಸಿ ಡಿ.ಎಸ್ ಅರುಣ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಭಾಗವಹಿಸಿದ್ದರು.

Good Luck Care Center ಮಕ್ಕಳಲ್ಲಿ ಸೃಜಶೀಲತೆ ಮನೋಭಾವ ವೃದ್ಧಿಸಿ: ಅಧ್ಯಕ್ಷ ಯು.ರವೀಂದ್ರನಾಥ ಐತಾಳ್

0

Good Luck Care Center ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಹೆಚ್ಚಿಸುವ ಹಾಗೂ ಸೃಜನಶೀಲತೆ ಉಂಟುಮಾಡುವ ಕಾರ್ಯಕ್ರಮಗಳು ಅವಶ್ಯಕ ಎಂದು ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ಯು.ರವೀಂದ್ರನಾಥ ಐತಾಳ್ ಹೇಳಿದರು.

ವಿಶ್ವ ವಿಜ್ಞಾನ ದಿನದ ಪ್ರಯುಕ್ತ ಗೋಪಾಳದ ಇಂಡೋಕಿಡ್ಸ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಆಯೋಜಿಸಿದ್ದ ಇನ್ನೋವೇಟಿವ್ ಎಕ್ಸಿಬಿಷನ್ ಆಫ್ ಸೈನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿ, ವಿಜ್ಞಾನ ನಮ್ಮ ಪ್ರಗತಿಯ ಪ್ರತಿಯೊಂದು ಹಂತದಲ್ಲಿದೆ. ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆ, ತಂತ್ರಜ್ಞಾನ ಹೆಚ್ಚಾಗಬೇಕು. ಜ್ಞಾನ ಹೆಚ್ಚಿಸಿಕೊಳ್ಳುವುದರಿಂದ ಅಭಿವೃದ್ಧಿ ಹೊಂದಲು ಸಾಧ್ಯ. ಮಕ್ಕಳ ಪ್ರತಿಭೆ ಕೇವಲ ಮನೆಗೆ, ಶಾಲೆಗೆ, ಶಿವಮೊಗ್ಗಕ್ಕೆ ಸೀಮಿತವಾಗಿರದೆ, ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.

ಶಾಲೆಯ ಮ್ಯಾನೆಜಿಂಗ್ ಟ್ರಸ್ಟಿ ಉಮೇಶ್ ಪ್ರಾಸ್ತವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಸಂಶೋಧನಾತ್ಮಕ ಮನೋಭಾವ ಹೆಚ್ಚಿಸಬೇಕು. ಮುಂದಿನ ವಿದ್ಯಾಭ್ಯಾಸದ ಪ್ರತಿಯೊಂದು ಹಂತದಲ್ಲೂ ಪ್ರಗತಿ ಸಾಧಿಸಬೇಕು. ಮಕ್ಕಳ ಜೀವನಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ವಿಜ್ಞಾನ ಕುರಿತ ವೈವಿಧ್ಯ ಮಾದರಿಗಳನು ಸಿದ್ಧಪಡಿಸಿದ್ದರು. ಅತಿಥಿಗಳಿಗೆ ಮಕ್ಕಳು ತಾವು ತಯಾರಿಸಿದ್ದ ಮಾದರಿಗಳ ಬಗ್ಗೆ ವಿವರಣೆ ನೀಡಿದರು.

Good Luck Care Center ಶಾಲೆಯ ಪ್ರಾಚಾರ್ಯೆ, ಕಾರ್ಯದರ್ಶಿ ಸಂಧ್ಯಾ ಯು.ರಾವ್, ಉಪಪ್ರಾಚಾರ್ಯೆ ತಾರಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವೈಷ್ಣವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಷಾ ನಿರೂಪಿಸಿದರು. ಸೌಮ್ಯ ಸ್ವಾಗತಿಸಿದರು.

ನಮ್ರತಾ ಎನ್ ಪೈ ಅತಿಥಿ ಪರಿಚಯ ಮಾಡಿಕೊಟ್ಟರು. ಅರ್ಷಿಯ ಖಾನಂ ವಂದನಾರ್ಪಣೆ ಮಾಡಿದರು.

Innerwheel Club Shivamogga ಮೂಳೆ ಸವಕಳಿ‌ & ಚಿಕಿತ್ಸಾ ಕ್ರಮಗಳ ಬಗ್ಗೆ ತಜ್ಞ ಡಾ.ಪಿ.ಸುಧೀಂದ್ರ ಅವರಿಂದ ಪ್ರಾತ್ಯಕ್ಷಿಕೆ

0

Innerwheel Club Shivamogga ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಮಂಡಿ ನೋವು ಕಾಣಿಸುತ್ತಿದ್ದು, ಉತ್ತಮ ಆಹಾರ ಪದ್ಧತಿ, ಸರಿಯಾದ ಜೀವನ ಶೈಲಿ ಇಲ್ಲದಿರುವುದು ಹಾಗೂ ಸ್ಥೂಲ ಕಾಯ ಪ್ರಮುಖ ಕಾರಣವಿದೆ ಎಂದು ಕೀಲುಮೂಳೆ ತಜ್ಞ ಡಾ. ಪಿ.ಸುಧೀಂದ್ರ ಹೇಳಿದರು.
ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಸದಸ್ಯರು ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ಮಂಡಿ ನೋವಿನ ತಪಾಸಣೆ ಶಿಬಿರ ಹಾಗೂ ಸಲಹೆ ಮುನ್ನೆಚ್ಚರಿಕಾ ಕ್ರಮಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಆಹಾರ ಪದ್ಧತಿ ಪಾಲಿಸಬೇಕು. ಸರಿಯಾದ ಜೀವನ ಶೈಲಿ ಪಾಲಿಸಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಮಂಡಿ ನೋವಿನ ವಿವಿಧ ಬಗೆಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಮಂಡಿ ನೋವಿನ ಕಾರಣಗಳು, ಬರದೇ ಇರುವ ರೀತಿ ಮುಂಜಾಗ್ರತಾ ಕ್ರಮಗಳು, ಬಂದ ನಂತರ ಮಾಡುವ ಚಿಕಿತ್ಸಾ ಕ್ರಮಗಳನ್ನು ವಿವರಿಸಿದರು. ಆಹಾರ ಪದ್ಧತಿ ಮತ್ತು ವ್ಯಾಯಾಮಗಳ ಮಹತ್ವ ತಿಳಿಸಿದರು. ಮೂಳೆ ಸವಕಳಿ ತಡೆಗಟ್ಟುವುದು ಹಾಗೂ ಚಿಕಿತ್ಸಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮುಖಾಂತರ ಮಾಹಿತಿ ನೀಡಿದರು.

ಫಿಜಿಯೋಥೆರಪಿಸ್ಟ್ ವೈದ್ಯೆ ಪವಿತ್ರಾ ರಾಯ್ಸದ್ ಅವರು ಮಂಡಿ ನೋವಿಗೆ ಫಿಜಿಯೋಥೆರಪಿ, ವ್ಯಾಯಾಮ ಹಾಗೂ ಸೂಕ್ತವಾದ ಯೋಗಾಸನಗಳ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ವಿಸ್ತಾರವಾಗಿ ತಿಳಿಸಿದರು.
ರೋಟರಿ ಜಿಲ್ಲಾ ಗವರ್ನರ್ ದೇವ್ ಆನಂದ್ ಮಾತನಾಡಿ, ರೋಟರಿ ಸಂಸ್ಥೆ ಹಾಗೂ ಇನ್ನರ್ ವ್ಹೀಲ್ ಸಂಸ್ಥೆ ಒಂದೇ ಮುಖದ ಎರಡು ನಾಣ್ಯಗಳು. ಎರಡು ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳಾಗಿದ್ದು, ಪ್ರೀತಿ ಸ್ನೇಹ ಸಮಾಜಮುಖಿ ಸೇವೆಗಾಗಿ ಸ್ಥಾಪಿಸಿರುವ ಸಂಸ್ಥೆಗಳಾಗಿವೆ ಎಂದು ಹೇಳಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷೆ ವಾಗ್ದೇವಿ ಬಸವರಾಜ್ ಮಾತನಾಡಿ, ಈಗಾಗಲೇ ಇಂತಹ ಆರೋಗ್ಯ ಶಿಬಿರಗಳನ್ನು ಎಲ್ಲಾ ಕಡೆಗಳಲ್ಲಿ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಮಹಿಳೆಯರಿಗೆ ತುಂಬಾ ಅಗತ್ಯವಾಗಿ ಬೇಕಾಗಿರುವಂತಹ ಸಮಸ್ಯೆಗಳ ಬಗ್ಗೆ ಅರಿವು ಜಾಗೃತಿ ಬೇಕಾಗಿರುವುದರಿಂದ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದೇವೆ ಎಂದರು.

Innerwheel Club Shivamogga ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಲಯ 11ರ ಸಹಾಯಕ ಗವರ್ನರ್ ಎಚ್.ಎಂ.ಸುರೇಶ್, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಶಬರಿ ಕಡಿದಾಳ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್, ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಡಾ. ಧನಂಜಯ, ಡಾ. ಕೌಸ್ತುಭ ಅರುಣ್ ಹಾಗೂ ಪದಾಧಿಕಾರಿಗಳು, ಸದಸ್ಯರು ಇದ್ದರು.

Karnataka State Under 19 Cricket ಕರ್ನಾಟಕ ರಾಜ್ಯ ಅಂಡರ್ 19 ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಲೋಹಿತ್ ಎಸ್ ಆಯ್ಕೆ

0

Karnataka State Under 19 Cricket ನವಂಬರ್ ತಿಂಗಳು 13 ರಿಂದ 21ರ ವರೆಗೆ ನೇಪಾಳದಲ್ಲಿ ನಡೆಯಲಿರುವ 19 ವರ್ಷದೊಳಗಿನ ಪಂದ್ಯಾವಳಿಗಳಿಗೆ ಶಿವಮೊಗ್ಗದ ಹರಿಗೆ ನಿವಾಸಿ ಗಳಾದ ಶ್ರೀ ಶಿವಕುಮಾರ್ ಹಾಗೂ ಶ್ರೀಮತಿ ನಾಗರತ್ನ ಇವರ ಪುತ್ರ ಲೋಹಿತ್ ಎಸ್ ಕರ್ನಾಟಕ ತಂಡಕ್ಕೆ ಬೌಲಿಂಗ್ ಅಲ್ಲರೌಂಡರ್ ಆಗಿ ಆಯ್ಕೆ ಯಾಗಿರುವರು,ಕಳೆದ ತಿಂಗಳಲ್ಲಿ ಓದಿಶಾ ದ ಕಟಕ್ ನಲ್ಲಿ ನಡೆದ ರಾಷ್ಟ್ರೀಯ ಪಂಧ್ಯಾ ವಳಿಗಳಲ್ಲಿ ಯು ಸಹ ಕರ್ನಾಟಕ ತಂಡದಿಂದ ಭಾಗವಹಿಸಿದ್ದರು.

Karnataka State Under 19 Cricket ಲೋಹಿತ್,ಎಸ್ ಪ್ರಸ್ತುತ ಡಿ.ವಿ.ಸ್ ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು,ಸಹ್ಯಾದ್ರಿ ಕ್ರಿಕೆಟ್ ಅಕಾಡೆಮಿ ಯಲ್ಲಿ ಹಲವು ವರ್ಷಾ ಗಳಿಂದ ಕ್ರಿಕೆಟ್ ಕೋಚ್ ನಾಗರಾಜ್ ರವರಿಂದ ತರಬೇತಿ ಪಡೆಯುತಿದ್ದು, ನಗರದ ಪ್ರಖ್ಯಾತ ಕ್ಲಬ್ಬುಗಳಲ್ಲಿ ಒಂದಾದ FCC ತಂಡದ ಪರ ಪ್ರಥಮ ದರ್ಜೆಯ ಪಂದ್ಯಾವಳಿ ಗಳಲ್ಲಿ ಪ್ರತಿನಿಧಿಸುತ್ತಿದ್ದು.
ಜಿಲ್ಲೆಗೆ ಕೀರ್ತಿ ತಂದ ಲೋಹಿತ್ ಎಸ್ ಗೆ KSCA ಶಿವಮೊಗ್ಗ ವಲಯದ,ಅಧ್ಯಕ್ಷರು, ಸಂಚಾಲಕರು, ಸಹ್ಯಾದ್ರಿ ಕ್ರಿಕೆಟ್ ಅಕಾಡೆಮಿಯ ಆಡಳಿತ ವರ್ಗ, ಸಹ್ಯಾದ್ರಿ ಕಾಲೇಜಿನ ಸಿಬ್ಬಂದಿ, ಎಫ್‌ಸಿಸಿ ಕ್ಲಬ್ ನ ಆಡಳಿತ ವರ್ಗ ನಗರದ ಎಲ್ಲಾ ಹಿರಿಯ ಹಾಗೂ ಕಿರಿಯ ಕ್ರೀಡಾಪಟುಗಳು ಅಭಿನಂದನೆಗಳೊಂದಿಗೆ ಇನ್ನು ಉತ್ತಮ ಸಾಧನೆ ಮಾಡಲೆಂದು ಹಾರೈಸಿದ್ದಾರೆ.

Rotary Shivamogga ರಾಷ್ಟ್ರೀಯ ಕಾನೂನು ಕಾಲೇಜಿನ ಯು. ದೀಕ್ಷಾ ಚೆನೈ ನಲ್ಲಿ ನಡೆಯಲಿರುವ ಮಹಿಳಾ ಕರಾಟೆ ಪಂದ್ಯಾವಳಿಗೆ ಆಯ್ಕೆ

0

Rotary Shivamogga ಪೂರ್ವಜರು ತಮ್ಮ ಅನುಭವದಿಂದ ಪ್ರಾಕೃತಿಕ ಗಿಡಮೂಲಿಕೆಗಳನ್ನು ಉಪಯೊಗಿಸಿ ತಮಗಾಗುತ್ತಿದ್ದ ಅನಾರೋಗ್ಯವನ್ನು ಹೊಗಲಾಡಿಸುತ್ತಿದ್ದರು ಎಂದು ರೋಟರಿ ಶಿವಮೊಗ್ಗ ಜ್ಯೂಬಿಲಿ ಕ್ಲಬ್ ಋೃತ್ವಿ ಆಯೂರ್ ವೇದಿಕ್ ಆಸ್ವತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣ ಶಿಬಿರ ಉದ್ಘಾಟಿಸಿದ ಅಧ್ಕಕ್ಷೆ ರೂಪ ಪುಣ್ಯಕೋಟಿ ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ತಕ್ಷಣ ಅನಾರೋಗ್ಯ ವಾಸಿ ಆಗಬೇಕೆಂದು ರಾಸಾಯಿನಿಕ ಪದಾರ್ಥ ಉಪಯೋಗಿಸಿದ ಔಷದಿ ಸೇವನೆಯಿಂದ ಹಲವರು ಹೊಸಕಾಯಿಲೆ ಪ್ರಾರಂಭಕ್ಕೆ ನಾಂದಿ ಹಾಡುತ್ತಿವೆ. ನಮ್ಮ ಪೂರ್ವಿಜರ ಅನುಭವದ ನುಡಿಗಳು ಹಾಗೂ ಪ್ರಸಿದ್ದ ಔಷದಿ ಕಂಪನಿಗಳು ನೀಡುವ ಉಪಯುಕ್ತ ಮಹಿತಿಯನ್ನು ತಲುಪಿಸುವ ಕಾರ್ಯ ಮಾಡುತ್ತಿರುವ ಡಾ.ಪ್ರಕೃತಿಮಂಚಾಲೆ ಯಂತವರು ರೋಟರಿ ಸಂಸ್ಥೆ ತಿಳಿಸುವಂತೆ ಸ್ವಾಹಿತ ಮೀರಿದ ಸೇವೆಗೆ ಅನ್ವರ್ಥವಾಗಿ ನಿಸ್ವಾರ್ಥದಿಂದ ಇಂದು ಈ ಉಚಿತ ಆರೋಗ್ಯ ಶಿಬಿರ ಸಂತೋಷದಿಂದ ಉದ್ಘಾಟಿಸುತ್ತಿದ್ದೇನೆ ಎಂದರು.

Rotary Shivamogga ಅವಶ್ಯಕತೆ ಇರುವ ಪಲಾನುಭವಿಗಳಿಗೆ ದೊರಕಲಿ ಎಂದು ಡಾ.ಜೆ.ಆರ್.ಕೆ.ರಿಸರ್ಚ್ ಅಂಡ್ ಫಾರ್ಮಸ್ಟಿಕಲ್ಸ್ ನವರು ಇಂದು ಉಚಿತ ಕೆಲವು ಔಷದಿ ಪೂರೈಸುತ್ತಿದ್ದು, ನಮ್ಮ ರೋಟರಿ ಜ್ಯೂಬಿಲಿ ಕ್ಲಬ್ ಆಯೋಜಿಸಿರುವ ಈ ಉಚಿತ ಆರೋಗ್ಯ ಶಿಬಿರಕ್ಕೆ ಪುಷ್ಠಿ ದೊರಕಿದ್ದು ಉತ್ತೇದನ ದೊರಕಿದೆ ಎಂದು ಡಾ.ಪ್ರಕೃತಿ ಮಂಚಾಲೆ ತಿಳಿಸುತ್ತಾ, ನಮ್ಮ ಆಯುರ್ ಪದ್ದತಿ ಶತಮಾನಗಳಷ್ಟು ಹಳೆಯದಾಗಿದ್ದು ಉತ್ತಮ ಪರಿಹಾರ ದೊರಕುತ್ತಿದೆ. ಇಂದಿನ ಯುವ ಜನತೆ ಸಹ ಆಯುರ್ ಔಷದಿಗಳ ಕಡೆ ಗಮನ ಹರಿಸುತ್ತಿದ್ದು ಒಳ್ಳೆಯ ನಡೆಯಾಗಿದೆ ಎಂದರು.
ಶ್ರೀಕಾಂತ್ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು, ಸತ್ಯನಾರಾಯಣ್ ನಿರೂಪಿಸಿದರು, ರೇಣುಕಾರಾಧ್ಯ ವಂದಿಸಿದರು

B.Y.Vijayendra ಸ್ವದೇಶಿ ಉತ್ಪನ್ನ ಕ್ರಾಂತಿಗೆ ಮುನ್ನುಡಿಪಿಎಂ ವಿಶ್ವಕರ್ಮ ಯೋಜನೆ”- ಬಿ.ವೈ.ವಿಜಯೇಂದ್ರ

0

B.Y.Vijayendra ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರ ಸರ್ಕಾರದ ಯೋಜನೆಗಳು ಜಾರಿಯಾಗದಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಎಷ್ಟೇ ತಾತ್ಸಾರ ಧೋರಣೆ ತಾಳಿದರೂ ಕನ್ನಡಿಗರು ಮಾತ್ರ ಮೋದಿ ಸರ್ಕಾರದ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಅಪ್ಪಿ, ಒಪ್ಪುತ್ತಾ ವಿಶ್ವಾಸಪೂರ್ವಕವಾಗಿ ಸ್ವಾಗತಿಸುತ್ತಿರುವುದಕ್ಕೆ ವಿಶ್ವಕರ್ಮ ಯೋಜನೆಯ ನೋಂದಣಿ ಹಾಗೂ ಸಾಲ ಬಿಡುಗಡೆಯಲ್ಲೂ ಕರ್ನಾಟಕ ನಂ.1 ಸ್ಥಾನ ಪಡೆದಿರುವುದೇ ನೈಜ ಸಾಕ್ಷಿ.

B.Y.Vijayendra ದೇಸಿಯ ಕುಲಕಸುಬು ಆಧಾರಿತ ಕುಶಲಕರ್ಮಿಗಳಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ‘ವಿಶ್ವಕರ್ಮ’ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ “ನಮ್ಮದು ಹರ್ಷದ ಕೂಳು ಕೊಡುವ ಸರ್ಕಾರವಲ್ಲ, ವರ್ಷದ ಕೂಳನ್ನು ಕೊಟ್ಟು ಬದುಕು ಕಟ್ಟಿಕೊಡುವ ಸರ್ಕಾರ” ಎಂದು ಮೋದಿ ಸರ್ಕಾರ ತೋರಿಸಿಕೊಟ್ಟಿದೆ ಎಂದು ಷಿಕಾರಿಪುರ ಶಾಸಕ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ.ವಿಜಯೇಂದ್ರ ಹೇಳಿದ್ದಾರೆ.