Drawing Grade Exam ನ.20 ರಿಂದ 22ರವರೆಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆ ಜರುಗಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ ಫಾಸಲೆಯವರೆಗಿನ ಪ್ರದೇಶದಲ್ಲಿ ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಭಾ.ನಾ.ಸು.ಸಂ.: -2023ರ ಕಲಂ 163ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ಆದೇಶ ನೀಡಿದ್ದಾರೆ.
ಜಿಲ್ಲೆಯ ಕೆ.ಪಿ.ಎಸ್. ಶಾಲೆ- ಬಿ.ಹೆಚ್.ರಸ್ತೆ,ಶಿವಮೊಗ್ಗ, ಸ.ಪ.ಪೂ.ಕಾಲೇಜು, ಶಾಗರ, ಶ್ರೀ ತುಂಗಾಭದ್ರ ಪ್ರೌಢಶಾಲೆ, ಸೂಗೂರು, Drawing Grade Exam ಸ.ಪ.ಪೂ.ಕಾ-ತೀರ್ಥಹಳ್ಳಿ, ಸಂಚಿಹೊನ್ನಮ್ಮ ಸ,ಪ.ಪೂ.ಕಾ. ಹಳೆನಗರ, ಭದ್ರಾವತಿ, ಸ,ಪ.ಪೂ.ಕಾ. ಸೊರಬ ತಾ. ಈ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಯಲಿದ್ದು, ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಳತೆಯಲ್ಲಿ ಐದು ಮತ್ತು ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿದೆ. ಟೈಪಿಂಗ್, ಜೇರಾಕ್ಸ್ ಮತ್ತು ಫ್ಯಾಕ್ಸ್ ಅಂಗಡಿಗಳು ಪರೀಕ್ಷಾ ಅವಧಿಯಲ್ಲಿ ಪ್ರತಿಬಂಧಿಸಿದೆ. ಮೊಬೈಲ್ ಬಳಕೆಯನ್ನು ನಿಷೇಧಿಸಿದೆ. ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ/ಅಧಿಕಾರಿಗಳನ್ನು ಹೊರತುಪಡಿಸಿ ಇತರೆ ಪರೀಕ್ಷಾ ಕೇಂದ್ರಗಳ ಫಾಸಲೆ ಪ್ರವೇಶಿಸುವುದನ್ನು ನಿಷೇಧಿಸಿದೆ
Drawing Grade Exam ನವೆಂಬರ್ 20 ರಿಂದ 22. ವರೆಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ-ಗುರುದತ್ತ ಹೆಗಡೆ
Shimoga District Scheduled Castes Welfare Department ಶಿವಮೊಗ್ಗ ವಾಲ್ಮೀಕಿ ಭವನ ಕಾರ್ಯಕ್ರಮ ನಡೆಸಲು ಬಾಡಿಗೆಗೆ ಲಭ್ಯ
Shimoga District Scheduled Castes Welfare Department ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾನಗರದ ಕಂಟ್ರಿ ಕ್ಲಬ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಿಲ್ಲಾ ಭವನವನ್ನು ದಿನದ ಆಧಾರದ ಮೇಲೆ ಬಾಡಿಗೆಗೆ ನೀಡಲಾಗುತ್ತಿದ್ದು, ಈ ಭವನದಲ್ಲಿ 500 ಜನ ಕುಳಿತುಕೊಳ್ಳುವ ಸಭಾಂಗಣ, ಊಟದ ಹಾಲ್, ಅಡುಗೆ ಮನೆ, ದಾಸ್ತಾನು ಕೊಠಡಿ, ಪ್ಲಾಸ್ಟಿಕ್ ಕುರ್ಚಿಗಳು, ಊಟದ ಟೇಬಲ್ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಪರಿಶಿಷ್ಟ ವರ್ಗದವರಿಗೆ ರೂ. 2500/- ಹಾಗೂ ಇತರೆಯವರಿಗೆ ರೂ. 3000/- ಬಾಡಿಗೆಯನ್ನು ನಿಗದಿಪಡಿಸಲಾಗಿದ್ದು, ವಿದ್ಯುತ್ ಮತ್ತು Shimoga District Scheduled Castes Welfare Department ಇತರೆ ವೆಚ್ಚಗಳು ಪ್ರತ್ಯೇಕ. ಹೆಚ್ಚಿನ ಮಾಹಿತಿ ಹಾಗೂ ವಿಚಾರಣೆಗಾಗಿ ದೂ.ಸಂ.: 08182-200266/ 9986029073/ 9482762350 ಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಜಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
S.N.Chennabasappa ನಿರ್ಮಲ ತುಂಗಭದ್ರ ನಮ್ಮೆಲ್ಲರ ಹಕ್ಕು- ಶಾಸಕ ಚನ್ನಬಸಪ್ಪ
S.N.Chennabasappa ತುಂಗಾಭದ್ರ ನದಿಗಳು ಸಾಮ್ರಾಜ್ಯಗಳ ಉಗಮ ಮತ್ತು ಪತನಕ್ಕೆ ಸಾಕ್ಷಿಯಾಗಿರುವ ಐತಿಹಾಸಿಕ ಪ್ರಾಮುಖ್ಯತೆಯ ನದಿಗಳು. ಮಲೆನಾಡಿನ ಹಾಗೂ ಬಯಲು ಸೀಮೆಯ 5 ಜಿಲ್ಲೆಗಳಲ್ಲಿ ರೈತರೂ ಸೇರಿದಂತೆ ಸುಮಾರು ಒಂದು ಕೋಟಿ ನಾಗರಿಕರ ಜೀವ ನದಿಗಳಾಗಿ ಪರಿಗಣಿಸಲ್ಪಟ್ಟಿದೆ. ತುಂಗಾ-ಭದ್ರಾ ನದಿಗಳ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಹಾಗೂ ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಸಹಯೋಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ಕೊಪ್ಪಳ ಜಿಲ್ಲೆಯ ಕಿಷ್ಕಿಂದೆಯವೆರೆಗೂ ಹಮ್ಮಿಕೊಂಡಿರುವ ನಿರ್ಮಲ ತುಂಗಾ ಭದ್ರಾ ಅಭಿಯಾನ ಪಾದಯಾತ್ರೆಯು ಶಿವಮೊಗ್ಗ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ “ಬೃಹತ್ ಯುವ ಜಾಗೃತಿ ಕಾರ್ಯಕ್ರಮ”ದಲ್ಲಿ ಯುವ ಪೀಳಿಗೆಯೊಂದಿಗೆ ಪಾಲ್ಗೊಂಡು ಸ್ವಚ್ಛತೆ, ನೈರ್ಮಲ್ಯತೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಮ್ಮ ನದಿಗಳ ಪ್ರಾಮುಖ್ಯತೆಯ ಕುರಿತು ಅಭಿಪ್ರಾಯ ಶಾಸಕ ಚನ್ನಬಸಪ್ಪ ನುಡಿದರು.
ನಂತರ ನಡೆದ ಬೃಹತ್ ಜಾಥಾದಲ್ಲಿ ಕಾಲೇಜು ಮಕ್ಕಳೊಂದಿಗೆ ಹೆಜ್ಜೆ ಹಾಕುವ ಮೂಲಕ ಈ ಬೃಹತ್ ಪಾದಯಾತ್ರೆ ಗೆ ಕೈಜೋಡಿಸಲಾಯಿತು.
S.N.Chennabasappa ಶ್ರೀಕ್ಷೇತ್ರ ಶೃಂಗೇರಿ ಬಳಿಯ ಗಂಗಡಿಕಲ್ಲು ಪ್ರದೇಶದಲ್ಲಿ ಹುಟ್ಟುವ ತುಂಗಾ ಮತ್ತು ಭದ್ರಾ ನದಿಗಳು ಶ್ರೀಕ್ಷೇತ್ರ ಕೂಡಲಿಯಲ್ಲಿ ಸಂಗಮವಾಗಿ ತುಂಗಾಭದ್ರಾ ನದಿಯಾಗಿ ಒಟ್ಟು ಸುಮಾರು 400 ಕಿ.ಮೀ. ಉದ್ದದಷ್ಟು ವಿಸ್ತಾರಗೊಂಡಿದೆ. ಪವಿತ್ರ ಜಲವನ್ನು ಸಂರಕ್ಷಿಸಿ ಮಲಿನ ಮುಕ್ತ ನದಿಯನ್ನಾಗಿ ಮಾಡುವ ಮೂಲಕ ಭವಿಷ್ಯದ ದಿನಗಳನ್ನು ರಕ್ಷಿಸುವುದು ಅಭಿಯಾನದ ಮೂಲ ಉದ್ದೇಶವಾಗಿದೆ.
ಈ ಮಹಾನ್ ಕಾರ್ಯವು ಯಶಸ್ವಿಯಾಗಲು ಶ್ರಮಿಸಿದ ಶಿವಮೊಗ್ಗದ ಅನೇಕ ಸಂಘ- ಸಂಸ್ಥೆಗಳಿಗೆ ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತ ಪ್ರತಿಯೊಬ್ಬರಿಗೂ ಆತ್ಮೀಯವಾಗಿ ಧನ್ಯವಾದಿಸುತ್ತ, ಇದು ಕೇವಲ ಆರಂಭ ಮಾತ್ರ. ತುಂಗಾ-ಭದ್ರೆಯನ್ನು ಪ್ರತಿ ದಿನವೂ ಸಂರಕ್ಷಿಸುವ ಮೂಲಕ, ನಾವು ನಮ್ಮ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುತ್ತಾ ಸಾಗೋಣ ಎಂದು ಶಾಸಕ ಚೆನ್ನಿ ಕರೆಕೊಟ್ಟಿದ್ದಾರೆ.
S.N.Chennabasappa ಶಿವಮೊಗ್ಗ ನಾಗರೀಕರ ಕುಂದುಕೊರತೆಗಳ ಬಗ್ಗೆ ವಾಟ್ಸ್ ಆ್ಯಪ್ ಮೂಲಕ ದೂರು ಸಲ್ಲಿಸಲು ಸೌಲಭ್ಯ- ಶಾಸಕ ಚೆನ್ನಿ
S.N.Chennabasappa ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ , ಮಳೆ ನೀರು ಬ್ಲಾಕ್ ಆಗಿರುವ ಬಗ್ಗೆ, ಬೀದಿ ದೀಪಗಳ ಸಮಸ್ಯೆ, ರಸ್ತೆ ಗುಂಡಿಗಳ ಸಮಸ್ಯೆ, UGD ಬ್ಲಾಕ್ ಹಾಗೂ ಯಾವುದೇ ರೀತಿಯ ಸಮಸ್ಯೆಗಳಿದ್ದರೆ, ಶಾಸಕರ ವಾಟ್ಸಾಪ್ ಹೆಲ್ಪ್ ಲೈನ್ +91-90199 01177 ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದು,ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ವಿನಂತಿಸಿಕೊಳ್ಳುತ್ತೇನೆ. ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ನೌಕರರುಗಳನ್ನು ನೇರವಾಗಿ ಸಂಪರ್ಕಿಸಲು ಈ ಕೆಳಕಂಡಂತಹ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬೇಕಾಗಿ ವಿನಂತಿಸುತ್ತೇನೆ ಎಂದು ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಅವರು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
Youth Empowerment and Sports ಮಕ್ಕಳ ದಿನಾಚರಣೆ ವಿಶೇಷ 6 ರಿಂದ 20 ವರ್ಷ ವಯೋಮಿತಿಯ ಬಾಲಕ/ಬಾಲಕಿಯರಿಗೆ ಕ್ರೀಡಾಸ್ಪರ್ಧೆ
Youth Empowerment and Sports ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮಕ್ಕಳ ದಿನಾಚರಣೆಯ ಪ್ರಯುಕ್ತ ನ.14 ರಂದು ಗೋಪಾಲಗೌಡ ಬಡಾವಣೆಯಲ್ಲಿರುವ ಕ್ರೀಡಾಸಂಕೀರ್ಣದಲ್ಲಿ 6 ರಿಂದ 20 ವರ್ಷ ವಯೋಮಿತಿಯೊಳಗಿನ ಬಾಲಕ/ಬಾಲಕಿಯರಿಗೆ 500ಮೀ, 1000 ಮೀ, 15000 ಮೀ ಮತ್ತು 2000ಮೀ ಫ್ರೀಸ್ಟೈಲ್ ಈಜು ಸ್ಪರ್ಧೆಯನ್ನು ಆಯೋಜಿಸಿದೆ.
ಆಸಕ್ತರು ನ. 14 ರಂದು ಬೆಳಗ್ಗೆ 6.00 ಗಂಟೆಗೆ ಆಯೋಜನಾ ಸ್ಥಳದಲ್ಲಿ ಹಾಜರಾಗಿ ನೊಂದಣಿ ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Youth Empowerment and Sports ಹೆಚ್ಚಿನ ಮಾಹಿತಿಗಾಗಿ ಸಚಿನ್ ಬಿ.ಎಸ್. -9743820293 ಇವರನ್ನು ಸಂಪರ್ಕಿಸುವುದು
DC Shivamogga ಜಿಲ್ಲೆಯ ಪಿಯು ವಿಜ್ಞಾನ ವಿಜ್ಞಾನ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ್ ಸಿಇಓ ಎನ್.ಹೇಮಂತ್ ಮಾರ್ಗದರ್ಶನದಲ್ಲಿಎನ್ ಇಟಿ/ ಸಿಇಟಿ ಉಚಿತ ಕೋಚಿಂಗ್
DC Shivamogga ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಎಂಬುದು ಒಂದು ಅತ್ಯಂತ ನಿರ್ಣಾಯಕ ಘಟ್ಟವಾಗಿದೆ. ಇನ್ನೊಂದು ರೀತಿಯಲ್ಲಿ ಪಿಯುಸಿ ಅಧ್ಯಯನವು ಹಗ್ಗದ ಮೇಲಿನ ನಡಿಗೆಯಂತೆ. ಹದಿಹರೆಯದ ಮಕ್ಕಳಲ್ಲಿ ನೂರೆಂಟು ಕನಸುಗಳು ತುಂಬಿರುತ್ತವೆ. ನಾನು ಡಾಕ್ಟರ್ ಆಗಬೇಕು, ಐಐಟಿಯಲ್ಲಿ ಓದಿ ಇಂಜಿನಿಯರ್ ಆಗಬೇಕು, ಇತ್ಯಾದಿ ನೂರೆಂಟು ಕನಸುಗಳನ್ನು ಮನದಲ್ಲಿ ತುಂಬಿಕೊಂಡು ವಿದ್ಯಾರ್ಥಿಗಳು ಪಿಯುಸಿ ವಿಜ್ಞಾನ ಸಂಯೋಜನೆಗೆ ಸೇರುತ್ತಾರೆ. ಆದರೆ ತರಬೇತಿ ರಹಿತ ಅಧ್ಯಯನವು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.
ಗ್ರಾಮಾಂತರ ಪ್ರದೇಶದ ಬಡ ಕುಟುಂಬದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಿಗಂತೂ ಪಿಯುಸಿ ನಂತರದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಗಗನಕುಸುಮವಾಗಿ ಪರಿಣಮಿಸಿದೆ. ಕೇಳಿದಷ್ಟು ಶುಲ್ಕ ಕೊಟ್ಟು ತರಬೇತಿ ಕೊಡಲು ಪೋಷಕರಿಗೂ ಕಷ್ಟವಾಗುತ್ತಿದೆ. ಕುಗ್ರಾಮಗಳಿಂದ ಬರುವ ರೈತ ಕಾರ್ಮಿಕರ ಮಕ್ಕಳಿಗಂತೂ ಕೆ-ಸಿಇಟಿ ನೀಟ್ ತರಬೇತಿಯಂತೂ ಕೈಗೆಟುಕದ ಸನ್ನಿವೇಶ ಸೃಷ್ಟಿಯಾಗುತ್ತಿದೆ.
ನಮ್ಮ ಜಿಲ್ಲೆಯ ಇಂತಹ ವಿದ್ಯಾರ್ಥಿಗಳ ಕನಸನ್ನು ನನಸಾಗಿಸಲು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಸಹಯೋಗದಲ್ಲಿ “LEAP-THE SMART WAY TO SUCCESS” ಎಂಬ ವಿನೂತನ ಸಿಇಟಿ-ನೀಟ್ ಪೂರ್ವ ಸಿದ್ಧತಾ ಕಾರ್ಯಕ್ರಮವನ್ನು ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ನಡೆಸಲು ಉದ್ದೇಶಿಸಲಾಗಿದೆ.
ಇದು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಹೇಮಂತ್ ಎನ್ ರವರ ಕನಸಿನ ಕೂಸು. ಶ್ರೀ ಹೇಮಂತ್ ರವರು ಜಿಲ್ಲೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪಿಯೂಸಿ ಅಧ್ಯಯನ ಮಾಡುತ್ತಿರುವ, ಸಿಇಟಿ ತರಬೇತಿಯಿಂದ ವಂಚಿತರಾದ ನೂರಾರು ವಿದ್ಯಾರ್ಥಿಗಳ ಸಂಕಟವನ್ನು ಸ್ವತಃ ಮನಗಂಡು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಶ್ರೀ ಹೇಮಂತ್‌ರವರು ಶಿವಮೊಗ್ಗದ ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಆಧ್ಯಯನ ಮಾಡಿದವರು.
DC Shivamogga ಜಿಲ್ಲೆಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಬೆಂಬಲವಾಗಿ ನಿಲ್ಲಬೇಕೆಂಬ ಅವರ ನಿರಂತರ ಪ್ರಯತ್ನವೇ ಈ ಉಚಿತ ತರಬೇತಿ ಕಾರ್ಯಕ್ರಮದ ಅನುಷ್ಟಾನದ ಮೂಲಕ ಸಾಕ್ಷಾತ್ಕರವಾಗುತ್ತಿದೆ. ಇವರ ಜೊತೆಗೆ ಜಿಲ್ಲೆಯಲ್ಲಿ ಪ್ರಸ್ತುತ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕುಮಾರಿ ದೃಷ್ಟಿ ಜೈಸ್ವಾಲ್ ರವರ ಮಾರ್ಗದರ್ಶನವೂ ಈ ಕಾರ್ಯಕ್ರಮ ಸಾಕಾರಗೊಳ್ಳುವುದರಲ್ಲಿ ಮುಖ್ಯ ಪಾತ್ರ ವಹಿಸಿದೆ.
ಇದರಿಂದಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಕೆ-ಸಿಇಟಿ ನೀಟ್ ತರಬೇತಿಯನ್ನು ಉಚಿತವಾಗಿ ಪಡೆದು ಅತ್ಯುತ್ತಮ ಅಂಕ ಗಳಿಸಿ ಭವಿಷ್ಯದ ಪಿಯೂಸಿ ನಂತರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ತಮ್ಮ ಕನಸನ್ನು ನಿಜವಾಗಿಸಬಹುದಾಗಿದೆ.
ಈ ಕಾರ್ಯಕ್ರಮದ ಲಾಭವನ್ನು ಶಿವಮೊಗ್ಗ ಜಿಲ್ಲೆಯ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ನಾಲ್ಕು ಸಾವಿರಕ್ಕೂ ಅಧಿಕ ಪಿಯುಸಿಯ ವಿದ್ಯಾರ್ಥಿಗಳು ಪಡೆಯಲಿದ್ದಾರೆ.
ಈ ಕಾರ್ಯಕ್ರಮವು ನವೆಂಬರ್ ಎರಡನೇ ವಾರದಿಂದ ಆರಂಭವಾಗಲಿದ್ದು, ಪ್ರತಿ ತಿಂಗಳು ಇದರಲ್ಲಿ ಅಧ್ಯಾಯವಾರು ಅಭ್ಯಾಸ ಪರೀಕ್ಷೆಗಳು ಸಿಇಟಿ ನೀಟ್ ಮಾದರಿಯಲ್ಲಿ ನಡೆಯಲಿವೆ. ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಪೂರ್ಣ ಪಠ್ಯಕ್ರಮಕ್ಕೆ ಅಣಕು ಪರೀಕ್ಷೆಗಳು ನಡೆಯಲಿವೆ.
ಇದಕ್ಕೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲೆಯ ಅನುಭವಿ, ಸಮರ್ಥ ಉಪನ್ಯಾಸಕರು ತಯಾರಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಲ್ಲಿಯೇ ಸಿದ್ಧತಾ ಪರೀಕ್ಷೆಗಳನ್ನು, ಅಣುಕು ಪರೀಕ್ಷೆಗಳನ್ನು ಬರೆಯಬಹುದಾಗಿದೆ. ಹಾಗು ಪರೀಕ್ಷೆಗಳ ನಂತರ ಅನುಮಾನ ಪರಿಹಾರ ತರಗತಿಗಳು ಆನ್‌ಲೈನ್‌ನಲ್ಲಿ ನಡೆಯಲಿದ್ದು, ಇದರ ಮೂಲಕ ವಿದ್ಯಾರ್ಥಿಗಳು ತಜ್ಞ ಉಪನ್ಯಾಸಕರ ಜೊತೆ ಸಂವಾದ ನಡೆಸಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.
ಅತ್ಯುತ್ತಮ ಸಾಧನೆ ಮಾಡಿದವರಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗುತ್ತದೆ.
ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವ್ಯಾಸಂಗದ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದು ತಮ್ಮ ಕನಸಿನ ಉನ್ನತ ಶಿಕ್ಷಣಕ್ಕೆ ಸೇರಬಯಸುವ ಪ್ರಯತ್ನವು ಯಶಸ್ವಿಯಾಗಲೆಂದು ಹಾರೈಸುತ್ತೇವೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರಾಜ ಚಂದ್ರಪ್ಪ ಎಸ್ ಗುಂಡಪಲ್ಲಿ ಅವರು ತಿಳಿಸಿದ್ದಾರೆ .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9448319982
Department of Kannada and Culture ಒಂದು ಸಂಸ್ಥಾನ ಉಳಿಸಿದ ಸ್ಮರಣೀಯ ಮಹಿಳೆ ಓಬವ್ವ- ಚಂದ್ರಭೂಪಾಲ್
Department of Kannada and Culture ಚಿತ್ರದುರ್ಗದ ಒನಕೆ ಓಬವ್ವ ಒಬ್ಬ ವೀರ ಮಹಿಳೆ. ಅವರ ಹೋರಾಟ ಅವಿಸ್ಮರಣಿಯ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್ ತಿಳಿಸಿದರು.
ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಒಬ್ಬ ಸಾಮಾನ್ಯ ಮಹಿಳೆ ಶತ್ರುಗಳ ದಾಳಿಯಿಂದ ಒಂದು ಸಂಸ್ಥಾನವನ್ನು ಉಳಿಸಿ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಗೌರವಿಸಲ್ಪಟಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಜಗನ್ನಾಥ ಕೆ ಡಾಂಗೆ ಅವರು ಓಬವ್ವನ ಕುರಿತು ಉಪನ್ಯಾಸ ನೀಡಿದ ಅವರು, ನಮ್ಮ ದೇಶದಲ್ಲಿ ಅನೇಕ ರಾಣಿಯರು ಹೋರಾಟವನ್ನು ಮಾಡಿರುವ ಕುರಿತು ಓದಿದ್ದೇವೆ ಆದರೆ ಒಬ್ಬ ಸಾಮಾನ್ಯ ಮಹಿಳೆಯಾದ ಒನಕೆ ಓಬವ್ವ ಹೋರಾಟ ಅತ್ಯಂತ ರೋಮಾಂಚಕವಾಗಿದೆ. ಮಹಿಳೆಯರಿಗೆ ಗೌರವ ಸ್ಥಾನಮಾನ ಗೌರವ ಇಲ್ಲದ ಸಂದರ್ಭದಲ್ಲಿ ಹೈದಾರ್ ಆಲಿ ಸೈನ್ಯದ ವಂಚನೆಯ ದಾಳಿಯಿಂದ ಚಿತ್ರದುರ್ಗ ಸಂಸ್ಥಾನವನ್ನು ರಕ್ಷಿಸುವ ಮೂಲಕ ಇಂದಿಗೂ ಒನಕೆ ಓಬವ್ವನ ಹೆಸರು ಅಜರಾಮರವಾಗಿದೆ ಎಂದರು.
Department of Kannada and Culture ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಓಬವ್ವನವರ ಜೀವನ ಯೋಶೋಗಾಥೆಯನ್ನು ಮಕ್ಕಳಿಗೆ ತಿಳಿಸಬೇಕು. ಸರ್ಕಾರ ಪಠ್ಯ ಪುಸ್ತಕದಲ್ಲಿ ಪಾಠಗಳ ಮೂಲಕ ಮಕ್ಕಳಿಗೆ ಹೋರಾಟಗಾರನ್ನು ಪರಿಚಯಿಸಬೇಕು. ಮಹಿಳಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹೆಣ್ಣು ಮಕ್ಕಳಿಗೆ ಓಬವ್ವನ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಬೇಕು. ಈ ಮೂಲಕ ಅವರ ಹೆಸರನ್ನು ಶಾಶ್ವತವಾಗಿಸುವಂತೆ ಮಾಡಬೇಕಾಗಿದೆ ಎಂದರು.
ಈ ಸಂಧರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಉಮೇಶ್ ಹೆಚ್., ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರತ್ನ ಮತ್ತು ಛಲವಾದಿ ಸಮಾಜದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
University of Agricultural & Horticultural Sciences ವಿವಿಧ ಭತ್ತದ ತಳಿಗಳ ತಾಕಿನಲ್ಲಿ ಕೃಷಿ ವಿವಿ ಆಶ್ರಯದಲ್ಲಿ ಕ್ಷೇತ್ರೋತ್ಸವ
University of Agricultural & Horticultural Sciences ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ವತಿಯಿಂದ ಮಾರುತಿ ನಗರ ಭದ್ರಾವತಿಯಲ್ಲಿ ಸಹ್ಯಾದ್ರಿ ಕೆಂಪು ಮುಕ್ತಿ ಮತ್ತು ಗಂಧಸಾಲೆ ನಂದ ಶಾಲೆ ತಳಿಗಳ ಪೋಷಕಾಂಶ ನಿರ್ವಹಣೆಯ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕ್ಷೇತ್ರೋತ್ಸವವನ್ನು ಕೆಳದಿ ಶಿವಪ್ಪ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾಕ್ಟರ್ ಆರ್ ಸಿ ಜಗದೀಶ್ ಅವರು ಈ ಕ್ಷೇತ್ರೋತ್ಸವವನ್ನು ಉದ್ಘಾಟಿಸಿದರು ಕುಲಪತಿಗಳು ತಮ್ಮ ಉದ್ಘಾಟನಾ ಭಾಷಣದಲ್ಲಿ ಪದ್ಧತಿ ಪ್ರತ್ಯಕ್ಷಗಳನ್ನು ರೈತರ ಠಾಕುಗಳಲ್ಲಿ ತೆಗೆದುಕೊಂಡು ರೈತರಿಗೆ ಬೀಜೋಪಚಾರ ಸಮಗ್ರ ಪೋಷಕಾಂಶಗಳ ನಿರ್ವಹಣೆ, ರೋಗ ಮತ್ತು ಕೀಟಗಳಿಗೆ ಸಮಗ್ರ ನಿರ್ವಹಣೆ ನಿರ್ವಹಣೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ರೈತರಿಗೆ ತಿಳಿಸಿಕೊಡಲಾಗುತ್ತದೆ ಹಾಗೆಯೇ ಈ ಸಹ್ಯಾದ್ರಿ ಕೆಂಪು ಮುಕ್ತಿಯು ಬಣ್ಣದಲ್ಲಿ ಕೆಂಪಾಗಿದ್ದು ಹೆಚ್ಚು ಪೋಷಕಾಂಶಗಳನ್ನು ಹೊಂದಿದ್ದು ರುಚಿ ಮತ್ತು ಸಿಹಿಯಾಗಿರುತ್ತದೆ ಇದೇ ರೀತಿ ಗಂಡಸಾಲ ಭತ್ತದ ತಳಿಯು ಹೆಚ್ಚು ಪರಿಮಳವನ್ನು ಹೊಂದಿದ್ದು ಜೀರಿಗೆ ಹಾಗೆ ಇರುತ್ತದೆ.
University of Agricultural & Horticultural Sciences ಸಹ್ಯಾದ್ರಿ ಕೆಂಪು ಮುಕ್ತಿಯು ಕೆಂಪು ಮುಕ್ತಿಯ ತಳಿಯನ್ನು ನಮ್ಮ ವಿಶ್ವ ನಮ್ಮ ವಿಶ್ವವಿದ್ಯಾಲಯದಿಂದ ಬಿಡುಗಡೆಗೊಂಡಿರುತ್ತದೆ.
ಈ ಕ್ಷೇತ್ರೋತ್ಸವದಲ್ಲಿಸಹ ಸಂಶೋಧನ ನಿರ್ದೇಶಕರಾದ ಡಾಕ್ಟರ್ ಪ್ರದೀಪ್ ಹಾಗೂ ಸಹ ವಿಸ್ತಾರಣ ನಿರ್ದೇಶಕರಾದ ಬಿಸಿ ಹನುಮಂತ್ ಸ್ವಾಮಿ ಅವರು ಮತ್ತು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸಿ ಸುನಿಲ್ ಅವರು ಮತ್ತು ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳು ಭಾಗವಹಿಸಿದ್ದರು. ಈ ಕ್ಷೇತ್ರೋತ್ಸವದಲ್ಲಿ ಸುಮಾರು 75 ರೈತರು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು
Shivamogga Police ಮಹಿಳೆ ನಾಪತ್ತೆ. ಜಯನಗರ ಪೊಲೀಸ್ ಠಾಣೆ ಪ್ರಕಟಣೆ
Shivamogga Police ಶಿವಮೊಗ್ಗ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟೇಶನಗರ 5ನೇ ಕ್ರಾಸ್ ವಾಸಿ ಕೋಟೆಪ್ಪ ಎಂಬುವವರ ಪತ್ನಿ 41 ವರ್ಷದ ಪಾರ್ವತಮ್ಮ ಎಂಬ ಮಹಿಳೆ ನ.09 ರಂದು ರಾತ್ರಿ ತನ್ನ ಮನೆಯಿಂದ ಹೊರಗೆ ಹೋಗಿದ್ದು, ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ಮಹಿಳೆಯ ಚಹರೆ 4.5 ಅಡಿ ಎತ್ತರ, ದುಂಡುಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಆರೆಂಜ್ ಕಲರ್ ಸೀರೆ ಮತ್ತು ಹಸಿರು ಬಣ್ಣದ ರವಿಕೆ ಧರಿಸಿರುತ್ತಾರೆ
Shivamogga Police ಕಾಣೆಯಾದ ಮಹಿಳೆ ಮಾಹಿತಿ ನೀಡಲು ಮನವಿ ಈ ಮಹಿಳೆಯ ಕುರಿತು ಸುಳಿವು ದೊರಕಿದಲ್ಲಿ ಜಯನಗರ ಪೊಲೀಸ್ ಠಾಣೆ 08182-261416, ಜಿಲ್ಲಾ ಕಂಟ್ರೋಲ್ ರೂಂ.: 08182-261413 ಹಾಗೂ ಎಸ್.ಪಿ. ಕಚೇರಿ 08182-261400 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.
