Saturday, June 21, 2025
Saturday, June 21, 2025

Onake Obavva ಹೈದರಾಲಿಯ ಸೈನ್ಯ ಮೆಟ್ಟಿನಿಂತ ವೀರ ವನಿತೆ ಓಬವ್ವ – ವೆಂಕಟೇಶ್

Date:

‘Onake Obavva ಹೈದರಾಲಿ ಸೈನ್ಯವು ಚಿತ್ರದುರ್ಗ ಕೋಟೆಯನ್ನು ಮುತ್ತಿಗೆ ಹಾಕಿದಾಗ ತನ್ನ ಪ್ರಾಣದ ಹಂಗು ತೊರೆದು ಒನಕೆಯಿಂದ ಕಾದಾಡಿ ವೀರ ಮರಣ ಹೊಂದಿದವರು ಓಬವ್ವ ಎಂದು ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್ ಹೇಳಿದರು.
ಚಿಕ್ಕಮಗಳೂರು ನಗರದ ಪಾಂಚಜನ್ಯ ಕಚೇರಿಯಲ್ಲಿ ನಾಡಿನ ವೀರ ಮಹಿಳೆ ಚಿತ್ರದುರ್ಗದ ಒನಕೆ ಓಬವ್ವ ಅವರ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶನಿವಾರ ಆಚರಿಸಿದರು.

ರಾಜ್ಯದ ಇತಿಹಾಸದಲ್ಲಿ ಆಕ್ರಮಣಕಾರರನ್ನು ಏಕಾಂಗಿಯಾಗಿ ಉಳ್ಳಾಲದ ರಾಣಿ ಅಬ್ಬಕ್ಕ ಚೌಟ, ಕೆಳದಿ ಚೆನ್ನಮ್ಮ ಮತ್ತು ವೀರ ಕಿತ್ತೂರು ರಾಣಿ ಚೆನ್ನಮ್ಮ ವೀರ ಮಹಿಳಾ ಯೋಧರಿದ್ದಾರೆ. ಇದರೊಂದಿಗೆ ಹೈದರಾಲಿಯ ಸೈನಿಕರಿಂದ ಚಿತ್ರದುರ್ಗದ ಕೋಟೆಯನ್ನು ಏಕಾಂಗಿಯಾಗಿ ರಕ್ಷಿಸಿದ ಒನಕೆ ಓಬವ್ವ ಅಂತಹ ಪ್ರಸಿದ್ಧರಾಗಿದ್ದಾರೆ ಎಂ ದು ಹೇಳಿದರು.

ಸ್ವಾಮಿನಿಷ್ಠೆ, ಧೈರ್ಯ, ಸಮಯಸ್ಫೂರ್ತಿ ಮತ್ತು ತ್ಯಾಗದ ಸಂಗಮವಾಗಿರುವ ಒನಕೆ ಓಬವ್ವ ಜಯಂತಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದ ಅವರು ಇಂತಹ ಮಹಾ ವೀರ ವನಿತೆಯ ಜೀವನದ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುನ್ನೆಡೆಯಬೇಕು ಎಂದು ಕಿವಿಮಾತು ಹೇಳಿದರು.
ನಗರಸಭಾ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ ನಾಡಿನ ವೀರ ವನಿತೆಯರ ಸಾಲಿಗೆ ಸೇರುವ ಚಿತ್ರದುರ್ಗದ ಒನಕೆ ಓಬವ್ವ 18ನೆಯ ಶತಮಾನದಲ್ಲೇ ಸಾಹಸಿ, ದಿಟ್ಟ, ವಿರೋಧಿಗಳ ವಿರುದ್ಧ ಹೋರಾಡಿದ ಮಹಿಳೆ. ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವ ಲುಗಾರ ಕಹಳೆ ಮದ್ದಹನುಮಪ್ಪನ ಮಡದಿಯಾಗಿದ್ದು ಕನ್ನಡ ನಾಡಿನ ವೀರ ಮಹಿಳೆಯರಾದ ಕಿತ್ತೂರು ಚೆನ್ನಮ್ಮ ಹೆಸರಿನಲ್ಲಿ ಪ್ರಖ್ಯಾತಿ ಹೊಂದಿದ್ದಾರೆ ಎಂದರು.

‘Onake Obavva ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಿ ಸದಸ್ಯ ಕನಕರಾಜ ಅರಸ್, ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಸೀತಾರಾಮ ಭರಣ್ಯ, ನಗರ ಮಂಡಲ ಸಹ ಕಾರ್ಯದರ್ಶಿ ನಿಶಾಂತ್, ನಗರ ಮಂಡಲ ಎಸ್ ಸಿ ಮೋರ್ಚಾ ಅಧ್ಯಕ್ಷ ಆರ್.ಕೆ.ನರಸಿಂಹ ಮೂರ್ತಿ, ಗ್ರಾಮಾಂತರ ಮಂಡಲ ಎಸ್ ಸಿ ಮೋರ್ಚಾ ಅಧ್ಯಕ್ಷ ಹಂಪಯ್ಯ, ನಗರಸಭೆ ಸದಸ್ಯರಾದ ಅರುಣ್ ಕುಮಾರ್, ಡಾ.ಶಿವಪ್ರಸಾದ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಕ್ಕಳಿಗೆ ಜಾನಪದದ ಅರಿವು ಮೂಡಿಸುವುದು ಅವಶ್ಯ: ಕವಿತಾ ಸುಧೀಂದ್ರ

ಮಕ್ಕಳಲ್ಲಿ ಬಾಲ್ಯದಿಂದಲೇ ಜಾನಪದ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು...

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...