Tuesday, March 24, 2026
Tuesday, March 24, 2026
Home Blog Page 501

Sri Adichunchanagiri Composite High School ಪಠ್ಯೇತರ ಚಟುವಟಿಕೆಗಳ ಸಂಗಡ ಸಹಪಠ್ಯ ಚಟುವಟಿಕೆಗಳೂ ಶಿಕ್ಷಣದ ಒಂದು ಭಾಗ- ಶಾಸಕ ಚನ್ನಬಸಪ್ಪ

0

Sri Adichunchanagiri Composite High School ಪ್ರತಿಭೆ ಎಲ್ಲಾ ಮಕ್ಕಳಲ್ಲಿ ಅಡಗಿರುತ್ತದೆ. ಅದನ್ನು ಹೊರ ತೆಗೆಯುವುದಕ್ಕಾಗಿಯೇ ಪ್ರತಿಭಾ ಕಾರಂಜಿ ಯಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕರಾದ ಚನ್ನಬಸಪ್ಪ ಅಭಿಪ್ರಾಯ ಪಟ್ಟರು.

ಅವರು ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶಿವಮೊಗ್ಗ ಹಾಗೂ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಗಾಡಿಕೊಪ್ಪ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪಠ್ಯೇತರ ಚಟುವಟಿಗಳ ಜೊತೆಗೆ ಸಹಪಠ್ಯ ಚಟುವಟಿಕೆಗಳು ಶಿಕ್ಷಣದ ಒಂದು ಭಾಗವಾಗಿವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಶ್ರೀ ಆದಿಚುಂಚನಗಿರಿ ಶಾಖಾ ಮಠ, ಶಿವಮೊಗ್ಗ ಶಾಖೆಯ, ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ,ನಮ್ಮ ಭಾರತೀಯ ಸಂಸ್ಕೃತಿ, ಕಲೆಗೆ ಹೆಚ್ಚು ಮಹತ್ವ ನೀಡಿದೆ,ನಮ್ಮ ಗ್ರಾಮೀಣ ಜನಪದ ಕಲೆಗಳ ಸೊಗಡು ತುಂಬಾ ಅಭೂತ ಪೂರ್ವವಾದದು. ಪ್ರತಿಯೊಂದು ಮಗುವಿನಲ್ಲಿಯೂ ಪ್ರತಿಭೆ ಎನ್ನುವುದು ಬೂದಿ ಮುಚ್ಚಿದ ಕೆಂಡದಂತಿರುತ್ತದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಆತ್ಮ ಸಾಕ್ಷಿಯಾಗಿ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಬೇಕು ಎಂದ ಅವರು, ನಿಮ್ಮ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರ ಹಾಗೂ ಪೋಷಕರ ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿಭಾಗ, ವಲಯ,ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

Sri Adichunchanagiri Composite High School ಕೌಶಲ್ಯವನ್ನು ಹೊರ ತೆಗೆಯುವುದಕ್ಕಾಗಿ ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಎಂದ ಅವರು, ಹಿಂಜರಿಕೆ ನಿಮ್ಮ ಶತ್ರು, ಅದನ್ನು ತೊಡೆದು ಹಾಕಿ ಧೈರ್ಯದಿಂದ ಹಾಗೂ ಆತ್ಮವಿಶ್ವಾಸದಿಂದ ನಿಮ್ಮಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯವನ್ನು ಪ್ರದರ್ಶಿಸಿ ಎಂದು ಕರೆ ನೀಡಿದರು.

ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರವಿ ಹೆಚ್. ಮಾತನಾಡುತ್ತಾ, ಪ್ರತಿಭಾ ಕಾರಂಜಿಯು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣ ಮಾಡಲು ಇಂತಹ ವೇದಿಕೆಗಳು ಸಹಾಯಕವಾಗಿದೆ ಎಂದರು.

ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಹಿರಿಯಣ್ಣ ಹೆಗಡೆ, ಶ್ರೀ ಕೊಳಿಗೆ ವಾಸಪ್ಪಗೌಡ, ಸಿ.ಆರ್.ಪಿ.ಮಂಜುನಾಥ್ , ಶಿಕ್ಷಕರಾದ ಸುನಿತಾ,ಸಂಸ್ಥೆಯ ಪ್ರಾಂಶುಪಾಲರು, ಮುಖ್ಯ ಶಿಕ್ಷಕರುಗಳು, ಶಿಕ್ಷಕರು ಮತ್ತು ಪೋಷಕರು ಭಾಗಿಯಾಗಿದ್ದರು.

Horticulture Department ಕಿಸಾನ್ ಮಾಲ್ ಸ್ಥಾಪಿಸಲು ಆಸಕ್ತ ರೈತ ಉತ್ಪಾದಕ ಸಂಸ್ಥೆಗಳಿಂದ ಅರ್ಜಿ ಆಹ್ವಾನ

0

Horticulture Department ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಇಲಾಖೆಯು 2024-25ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಗಾಂಧಿಪಾರ್ಕ್ನಲ್ಲಿರುವ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೈಸೂರು ಕಿಸಾನ್ ಮಾಲ್ ಸ್ಥಾಪಿಸಲು ಆಸಕ್ತ ರೈತ ಉತ್ಪಾದಕ ಸಂಸ್ಥೆಗಳಿಂದ ಕರ್ನಾಟಕ ಪಬ್ಲಿಕ್ ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನಿಸಿದೆ.

ಆಸಕ್ತ ಅರ್ಹ ರೈತ ಉತ್ಪಾದಕ ಸಂಸ್ಥೆಗಳು ನ.27ರೊಳಗಾಗಿ ಕ.ಪ.ಪ್ರೊ.ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

Horticulture Department ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9902546944 ನ್ನು ಸಂಪರ್ಕಿಸಬಹುದು

MESCOM ನವೆಂಬರ್ 14, ಆರ್ ಎಂ ಎಲ್ ನಗರ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ನಗರ ಉಪವಿಭಾಗ -2ರ ಘಟಕ 5 ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಕೆಲಸ ಇರುವುದರಿಂದ ನ.14 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಆರ್.ಎಂ.ಎಲ್.ನಗರ, ಮಂಡ್ಲಿ ವೃತ್ತ, ಬೈಪಾಸ್, ಎನ್.ಟಿ.ರಸ್ತೆ, ಮರ‍್ನಮಿಬೈಲು, ಜೆ.ಸಿ.ನಗರ, ಭಾರತಿ ಕಾಲೋನಿ, ಪಂಚವಟಿ ಕಾಲೋನಿ, ಬಿ.ಹೆಚ್.ರಸ್ತೆ, ಪಿಯರ್‌ಲೈಟ್ ಫ್ಯಾಕ್ಟರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

MESCOM ನ.14. ರಂದು ಗಾಂಧಿಬಜಾರ್ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ನಗರ ಎಲೆರೇವಣ್ಣ ಕೇರಿ ರಸ್ತೆಯಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿ ಇರುವುದರಿಂದ ನ.14 ರಂದು ಬೆಳಗ್ಗೆ 09.00 ರಿಂದ ಸಂಜೆ 6.00ರವರೆಗೆ ಗಾಂಧಿಬಜಾರ್, ಎಲೆರೇವಣ್ಣಕೇರಿ, ನಾಗಪ್ಪಕೇರಿ, ಅಶೋಕ ರಸ್ತೆ, ತುಳುಜಾ ಭವಾನಿ ರಸ್ತೆ, ಅನವೇರಪ್ಪ ಕೇರಿ, ಹಾವಿನಕೇರಿ, ಲಷ್ಕರ್ ಮೊಹಲ್ಲಾ, ಮೀನುಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

National Adoption Month ಮಗುವಿನ ದತ್ತು ಪ್ರಕ್ರಿಯೆ ಹೇಗೆ? ಎಲ್ಲಿ? ದಂಪತಿಗಳ ಅರ್ಹತೆ ಏನು? ಇಲ್ಲಿದೆ ಮಾಹಿತಿ

0

National Adoption Month ಮಕ್ಕಳಿಲ್ಲದವರಿಗೆ ತಂದೆ-ತಾಯಿಯಾಗುವ ಸುಯೋಗವನ್ನು ಮತ್ತು ತಂದೆತಾಯಿ ಇಲ್ಲದ ಮಕ್ಕಳಿಗೆ ತಂದೆತಾಯಿ, ಕುಟುಂಬ ಹೊಂದುವ ಪ್ರಯೋಜನವನ್ನು ಒದಗಿಸುವ ವಿಧಾನವೇ ದತ್ತು.
ಪ್ರಾಚೀನ ಕಾಲದಿಂದಲೂ ದತ್ತು ಸ್ವೀಕಾರ ಇತ್ತೆಂಬ ಆಧಾರಗಳಿವೆ. ಆದರೆ ಪ್ರಾಚೀನ ಕಾಲದಲ್ಲಿ ದತ್ತು ಸ್ವೀಕಾರದ ಉದ್ದೇಶಗಳು ಈಗ ಇರುವುದಕ್ಕಿಂತ ಭಿನ್ನವಾಗಿದ್ದವು. ಆಧುನಿಕ ಸಮಾಜಗಳಲ್ಲಿ ಶಿಶು ಕಲ್ಯಾಣ ಸಾಧನೆಯ ದೃಷ್ಟಿಯಿಂದ ದತ್ತು ಸ್ವೀಕಾರಕ್ಕೆ ಪ್ರಾಮುಖ್ಯತೆ ಲಭ್ಯವಾಗುತ್ತಿದೆ.
ಪ್ರತಿ ವರ್ಷ ನವೆಂಬರ್ ತಿಂಗಳನ್ನು ರಾಷ್ಟ್ರೀಯ ದತ್ತು ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಸಾರ್ವಜನಿಕರಲ್ಲಿ ಕಾನೂನು ಬದ್ದ ದತ್ತು ಮತ್ತು ಕಾನೂನು ಬಾಹಿರವಾಗಿ ಮಕ್ಕಳನ್ನು ದತ್ತು ಪಡೆದಲ್ಲಿ ವಿಧಿಸಬಹುದಾದ ಶಿಕ್ಷೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವ್ಯಾಪಕವಾದ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ದತ್ತು ಮಾಚಾಚರಣೆ 2024 ರ
‘ಪೋಷಕತ್ವ ಕಾರ್ಯಕ್ರಮದಡಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ಉತ್ತೇಜಿಸಲು ಮೀಸಲಾದ ವಿಶೇಷ ದಿನವಾಗಿದೆ. ಶಾಶ್ವತ ಕುಟುಂಬದ ಅಗತ್ಯವಿರುವ ಮಕ್ಕಳಿಗೆ ಶಾಶ್ವತ, ಸ್ಥಿರ ಮತ್ತು ಕಾಳಜಿಯುಳ್ಳ ವಾತಾವರಣ ಒದಗಿಸಲು ತಮ್ಮ ಹೃದಯ ಮತ್ತ ಮನೆಗಳನ್ನು ತೆರೆಯುವ ಪ್ರೀತಿಯ ಕುಟುಂಬಗಳನ್ನು ಗುರುತಿಸುವ ಸಂದರ್ಭವಾಗಿದೆ’ ಎಂಬ ಘೋಷವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
National Adoption Month ದತ್ತು ಯಾರು ತೆಗೆದುಕೊಳ್ಳಬಹುದು?
ಮಗುವನ್ನು ಕುಟುಂಬದಲ್ಲಿ ಇಟ್ಟುಕೊಳ್ಳಲು ಆಸಕ್ತಿ ಇರುವ ದಂಪತಿಗಳು ದತ್ತು ತೆಗೆದುಕೊಳ್ಳಬಹುದು. ದತ್ತು ಸ್ವೀಕಾರ ಮಾಡಲು ಇಚ್ಛಿಸುವ ದಂಪತಿಗಳಿಗೆ ಮಗುವಿಗೆ ಅಗತ್ಯಗಳನ್ನು ಪೂರೈಸಬೇಕಾದ ಆದಾಯ ಇರತಕ್ಕದ್ದು, ಮಗುವಿನ ಆರೈಕೆ ಮಾಡಲು ತೊಂದರೆ ನೀಡಬಲ್ಲಂತಹ ಸುದೀರ್ಘ ಕಾಲದ ಕಾಯಿಲೆಗಳು ದಂಪತಿಗಳಿಗೆ ಇರಬಾರದು. ತಂದೆ-ತಾಯಿಗೆ ಯಾವುದೇ ಅಪರಾಧದ ದಾಖಲೆಗಳಿರಬಾರದು.
ದತ್ತು ಪೋಷಕರು ನೋಂದಣಿ ಮಾಡಿದ ದಿನದಿಂದ ಅನ್ವಯಿಸುವಂತೆ ಅವರ ವಯಸ್ಸಿಗನುಗುಣವಾಗಿ ವಿವಿಧ ವಯೋಮಾನದ ಮಕ್ಕಳನ್ನು ದತ್ತು ಪಡೆಯಲು ಅರ್ಹರಾಗಿರುತ್ತಾರೆ.
ನಿರೀಕ್ಷಿತ ದತ್ತು ಪೋಷಕ ಗರಿಷ್ಟ ಸಂಯೋಜಿತ(ಗOಡ-ಹೆOಡತಿ ಸೇರಿ) ವಯಸ್ಸು 85 ವರ್ಷದ ಪೋಷಕರು ಮತ್ತು 40 ವರ್ಷ ವಯಸ್ಸಿನ ಏಕ ಪೋಷಕರು 0 ಯಿಂದ 2 ವರ್ಷ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಬಹುದು. 90 ವರ್ಷ ವಯಸ್ಸಿನ ಪೋಷಕರು ಮತ್ತು 45 ವರ್ಷ ವಯಸ್ಸಿನ ಏಕ ಪೋಷಕರು 2 ವರ್ಷ ಮೇಲ್ಪಟ್ಟು ಮತ್ತು 4 ವರ್ಷಗಳವರೆಗಿನ ಮಕ್ಕಳನ್ನು ದತ್ತು ಪಡೆಯಬಹುದು. 100 ವರ್ಷ ವಯಸ್ಸಿನ ಪೋಷಕರು ಮತ್ತು 50 ವರ್ಷ ವಯಸ್ಸಿನ ಏಕ ಪೋಷಕರು 4 ವರ್ಷ ಮೇಲ್ಪಟ್ಟು ಮತ್ತು 8 ವರ್ಷ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಬಹುದು. 110 ವರ್ಷ ವಯಸ್ಸಿನ ಪೋಷಕರು ಮತ್ತು 55 ವರ್ಷ ವಯಸ್ಸಿನ ಏಕ ಪೋಷಕರು 8 ವರ್ಷ ಮೇಲ್ಪಟ್ಟು ಮತ್ತು 18 ವರ್ಷ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಬಹುದಾಗಿದೆ.
ಮಗುವನ್ನು ಎಲ್ಲಿ ದತ್ತು ತೆಗೆದುಕೊಳ್ಳಬಹುದು?
ಅರ್ಹತೆಗಳನ್ನು ಪಡೆದ ದಂಪತಿಗಳು ಸರ್ಕಾರವು ಸೂಚಿಸಿದ ದತ್ತು ಸ್ವೀಕಾರ ಕೇಂದ್ರದಲ್ಲಿ ಮಗುವನ್ನು ದತ್ತು ತೆಗೆದುಕೊಳ್ಳಬಹುದಾಗುದೆ. ಆಸಕ್ತ ದಂಪತಿಗಳು ಅಥವಾ ಏಕ ಪೋಷಕರು ದತ್ತು ಸ್ವೀಕಾರವನ್ನು www.cara.wcd.gov.in ವೆಬ್‌ಸೈಟ್ ಮೂಲಕ ನೋಂದಾವಣಿ ಮಾಡಿಕೊಳ್ಳಬಹುದು. ಹಾಗೂ
ಈ ಕುರಿತು ಇದೇ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ.
ಕಾನೂನುಬಾಹಿರ ದತ್ತು ಎಂದರೇನು :
ನರ್ಸಿಂಗ್ ಹೋಂಗಳಿಂದ ಸಿಕ್ಕಿರುವ ಮಗು ಹಾಗೂ ರಸ್ತೆಯಲ್ಲಿ ಯಾರೋ ಬಿಟ್ಟು ಹೋದ ಮಕ್ಕಳನ್ನು ಸಾಕಿಕೊಳ್ಳುವುದು. ಪಾಲಕರಿಗೆ ಬೇಡವಾದ ಮಗುವನ್ನು ಸಾಕಿಕೊಳ್ಳುವುದು, ಮಗುವನ್ನು ಕಳ್ಳತನ ಮಾಡಿ ಸಾಕಿಕೊಳ್ಳುವುವು, ಯಾವುದೇ ಕಾನೂನು ಕ್ರಮವಿಲ್ಲದೇ ದತ್ತು ತೆಗೆದುಕೊಳ್ಳುವುದು ಕಾನೂನು ಬಾಹಿರ.
ಈ ರೀತಿ ಕಾನೂನು ಬಾಹಿರವಾಗಿ ದತ್ತು ಪಡೆದ ಅಥವಾ ಅನಾಥ ಮಗುವನ್ನು ಪೋಷಿಸಿದಾಗ ಭವಿಷ್ಯದಲ್ಲಿ ಮಗುವಿಗೆ ನೈಜಸ್ಥಿತಿ ಅರಿವಾಗಿ ಮಗು ಕಾನೂನಿನ ಮೊರೆ ಹೋಗುವ ಸಾಧ್ಯತೆ ಇದೆ. ಪೋಷಕರು ತೀವ್ರ ಸಂಕಷ್ಟಕ್ಕೆ ಒಳಗಾಗಿ ಮಾನಸಿಕ ಹಿಂಸೆಗೆ ಒಳಗಾಗಬಹುದು. ಅಲ್ಲದೇ ಸೂಕ್ತ ದಾಖಲೆಗಳಿಲ್ಲದಿರುವುದರಿಂದ ಪೋಷಕರು ಹಾಗೂ ಮಗು ಸಮಸ್ಯೆಯ ಸುಳಿಗೆ ಸಿಲುಕಬಹುದು. ಮಗು ಬೆಳೆಯುತ್ತಿರುವಾಗ ಅಂಗವಿಕಲತೆ, ಮಂದಮತಿ ಅಥವಾ ಭಯಂಕರ ರೋಗಗು ಬಂದಾಗ, ಪೋಷಕರು ಸೂಕ್ತ ದಾಖಲೆ ಪಡೆಯದೇ ಸಾಕಲು ಪಡೆದುಕೊಂಡ ಮಗುವನ್ನು ಬೀದಿಗೆಸೆಯುವ ಸಾಧ್ಯತೆ ಇದೆ. ಹಾಗೂ ಮಗುವನ್ನು ಸಾಕಲು ಪಡೆದುಕೊಂಡ ಕೆಲ ಕಾಲದ ನಂತರ ಸ್ವಂತ ಮಗು ಹುಟ್ಟಿದಾಗ ಸಾಕಲು ಪಡೆದುಕೊಂಡ ಮಗುವನ್ನು ನಿರ್ಲಕ್ಷಿಸಬಹುದು.
ದತ್ತು ತೆಗೆದುಕೊಳ್ಳಲು ಬೇಕಾಗುವ ಮುಖ್ಯ ದಾಖಲಾತಿಗಳು:
ವಯಸ್ಸಿನ ದೃಢೀಕರಣ ಪತ್ರ,ವಿವಾಹ ದೃಢೀಕರಣ ಪತ್ರ, ಆದಾಯ ದೃಢೀಕರಣ ಪತ್ರ, ವೇತನ ಪ್ರಮಾಣ ಪತ್ರ, ಬ್ಯಾಂಕಿನ ಸ್ಟೇಟ್ ಮೆಂಟ್, ಯಾವುದೇ ಅನುವಂಶಿಕ ಕಾಯಿಲೆಗಳು ಇರದೆ ಇರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ, ಉದ್ಯೋಗ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ತಮ್ಮ ಸ್ವಂತ ಮಗುವಂತೆ ದತ್ತು ಪಡೆದು ಮಗುವನ್ನು ಪೋಷಿಸುತ್ತೇವೆ ಎಂಬ ಮುಚ್ಚಳಿಕೆ ಪತ್ರವನ್ನು ರೂ.100/- ಗಳ ಬಾಂಡ್ ಪೇಪರ್ ನಲ್ಲಿ ಬರೆದುಕೊಡಬೇಕು. ಹಾಗೂ ದತ್ತು ತೆಗೆದುಕೊಳ್ಳಲು ಇಚ್ಛಿಸುವ ದಂಪತಿಗಳ ನೆರೆ-ಹೊರೆಯವರಿಂದ ಪರಿಚಯದ ದೃಢೀಕರಣ ಪತ್ರ (ಇಬ್ಬರು ಜಾಮೀನುದಾರರ ದೃಢೀಕರಣ ಪತ್ರ) ದಾಖಲೆಗಳನ್ನು ನೀಡಬೇಕಾಗುತ್ತದೆ.
ದತ್ತು ಕೇಂದ್ರದಲ್ಲಿ ನೀಡಲಾಗುವ ಸೇವೆಗಳು:
ಬೇಡವಾದ ಮಕ್ಕಳಿಗೆ ಮಕ್ಕಳ ಕಲ್ಯಾಣ ಸಮಿತಿಯ ಮಾರ್ಗದರ್ಶನ ಮೇರೆಗೆ ದತ್ತು ಕೇಂದ್ರಕ್ಕೆ ಸ್ವೀಕರಿಸುವುದು. ಪ್ರೀತಿ, ಮಮತೆ ಹಾಗೂ ಆರೋಗ್ಯ ಭರಿತವಾಗಿ ಮಗು ಬೆಳೆಯಲು ವಾತಾವರಣ ಕಲ್ಪಿಸುವುದು. ಅನುಭವಿ ಮಕ್ಕಳ ತಜ್ಞರಿಂದ ಸಲಹೆ ಮತ್ತು ಚಿಕಿತ್ಸೆ ನೀಡುವುದು, ಮಗುವಿಗೆ ಪೌಷ್ಠಿಕ ಹಾಗೂ ಉತ್ತಮ ಗುಣಮಟ್ಟದ ಆಹಾರ ವಿತರಣೆ, ಪೋಷಕರಿಗೆ ದತ್ತು ಸ್ವೀಕಾರಕ್ಕೆ ಸಂಬAಧಿಸಿದ ಸ್ಪಷ್ಟ ಮಾಹಿತಿ ಒದಗಿಸುವುದುಮ, ಮಗು ಬೇಡವಾದ ಪಾಲಕರಿಗೆ ಹಾಗೂ ಮಗುವನ್ನು ದತ್ತು ಪಡೆಯುವ ದಂಪತಿಗಳಿಗೆ ಅಗತ್ಯವಾದ ಕಾನೂನು ನೆರವನ್ನು ಒದಗಿಸುವುದು, ಮಗುವಿನ ದೈನಂದಿನ ಪ್ರಗತಿ ಗಮನಿಸಿ, ಬೇಕು-ಬೇಡಗಳನ್ನು ನೋಡಿಕೊಳ್ಳುವುದು, ಸುವ್ಯವಸ್ಥಿತ ಕೊಠಡಿಯಲ್ಲಿ ಆಟಿಕೆ ಮತ್ತು ಮನೋರಂಜನೆ ನೀಡುವುದು ಕುಟುಂಬದ ವಾತಾವರಣ ನೀಡಲಾಗುವುದು, ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅವಶ್ಯಕವಿರುವ ಪೂರಕ ಕಲ್ಪಿಸಲಾಗುವುದು.
ಪೋಷಕತ್ವ :
ಮಾರಣಾಂತಿಕ ಕಾಯಿಲೆ, ತೀವ್ರ ಅನಾರೋಗ್ಯ, ಸಾವು ಅಥವಾ ಇನ್ನಿತರ ಕಾರಣಗಳಿಂದ ಪೋಷಕರ ಆರೈಕೆಯಿಂದ ವಂಚಿತರಾದ ಮಕ್ಕಳನ್ನು ವಿಸ್ತೃತ ಕುಟುಂಬ ಸದಸ್ಯರು ಅಥವಾ ಅಸಂಬಂಧಿತ ವ್ಯಕ್ತಿ/ಕುಟುಂಬದಲ್ಲಿ ತಾತ್ಕಾಲಿಕ ಆರೈಕೆ ನೀಡುವ ಹಾಗೂ ಕಾರಣಾಂತರಗಳಿAದ ದತ್ತು ಸ್ವೀಕಾರಕ್ಕೆ ಒಳಪಡಲು ಸಾಧ್ಯವಿಲ್ಲದ ಮಕ್ಕಳಿಗೆ ತಾತ್ಕಾಲಿಕ ಪೋಷಕರನ್ನು ನೀಡುವ ಪರ್ಯಾಯ ವ್ಯವಸ್ಥೆಯೇ ಪೋಷಕತ್ವ.
ಬಾಲ ನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015 ಸೆಕ್ಷನ್ 44 ಹಾಗೂ ನಿಯಮದಲ್ಲಿ ಪೋಷಕತ್ವವನ್ನು ಉಲ್ಲೇಖಿಸಲಾಗಿದೆ. ಮಕ್ಕಳನ್ನು ಪುನರ್ವಸತಿ ಮಾಡುವುದು ಹಾಗೂ ಮಕ್ಕಳನ್ನು ಸಾಂಸ್ಥಿಕ ಸೇವೆಗೆ ಒಳಪಡಿಸುವುದನ್ನು ತಪ್ಪಿಸುವುದು ಪೋಷಕತ್ವ ಕಾರ್ಯಕ್ರಮದ ಗುರಿ.
ಮಕ್ಕಳ ಕಲ್ಯಾಣ ಸಮಿತಿ ಮುಖಾಂತರ ಒಂದು ವರ್ಷಕ್ಕೆ ಮಾತ್ರ ಪೋಷಕತ್ವಕ್ಕೆ ಅನುಮತಿ ಕೊಡಬಹುದು. ಮಗುವಿಗೆ ಪೋಷಕರೊಮದಿಗೆ ಇರಲು ಇಚ್ಚೆ ಇದ್ದಲ್ಲಿ ಮತ್ತು 18 ವರ್ಷದವರೆಗೆ ಪ್ರತಿ ವರ್ಷ ನವೀಕರಣ ಮಾಡಿ ಕೊಡಲಾಗುತ್ತದೆ. ಎರಡು ವರ್ಷಗಳ ಕಾಲ ಮಗು ಪೋಷಕರೊಂದಿಗೆ ಹೊಂದಾಣಿಕೆ ಇತ್ತು, ಮಗುವಿಗೂ ಒಪ್ಪಿಗೆ ಇದೆ ಮತ್ತು ಪೋಷಕರಿಗೂ ಒಪ್ಪಿಗೆ ಇದ್ದಾಗ ಕಾನೂನುಬದ್ದ ದತ್ತು ಪಡೆಯಬಹುದು.
ದತ್ತು ಕೊಟ್ಟಂತಹ ಮಕ್ಕಳನ್ನು 2 ವರ್ಷದವರೆಗೆ ಅನುಪಾಲನೆ ಮಾಡಲಾಗುತ್ತದೆ. 6 ತಿಂಗಳಿಗೊಮ್ಮೆ ಮನೆ ಭೇಟಿ ಮಾಡಿ ಮಗು ಮತ್ತು ಪೋಷಕರ ನಡುವೆ ಹೊಂದಾಣಿಕೆ ಇದೆಯಾ ಅಂತ ನೋಡಲಾಗುತ್ತದೆ. ಫಾಸ್ಟರ್ ಕೇರ್‌ನಲ್ಲಿ ಪ್ರತಿ ತಿಂಗಳು ಮಕ್ಕಳ ಕಲ್ಯಾಣ ಸಮಿತಿಯವರು ಮನೆ ಭೇಟಿ ಮಾಡಿ ಮಗು ಮತ್ತು ಪೋಷಕರಿಗೆ ಹೊಂದಾಣಿಕೆ ಇದೆಯಾ ಅನ್ನೋದನ್ನು ಚೆಕ್ ಮಾಡುತ್ತಾರೆ.
ಶಿವಮೊಗ್ಗ ಜಿಲ್ಲೆಯ ದತ್ತು ಕೇಂದ್ರದಲ್ಲಿ ಇಲ್ಲಿವರೆಗೆ ಪೋಷಕರು 300 ಪೋಷಕರ ನೋಂದಣಿಯಾಗಿದ್ದಾರೆ. ಕಳೆದ ಸಾಲಿನಲ್ಲಿ 14 ಮಕ್ಕಳು ದಾಖಲಾಗಿದ್ದು 6 ಮಕ್ಕಳನ್ನು ಅರ್ಹ ಪೋಷಕರಿಗೆ ದತ್ತು ನೀಡಲಾಗಿದೆ. ಈ ವರ್ಷವೂ 14 ಮಕ್ಕಳು ದಾಖಲಾಗಿದ್ದು ಈವರೆಗೆ 04 ಮಕ್ಕಳನ್ನು ದತ್ತು ನೀಡಲಾಗಿದ್ದು, ಈವರೆಗೆ 12 ಮಕ್ಕಳನ್ನು ದತ್ತು ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 100 ಅಡಿ ರಸ್ತೆ, ಆಲ್ಕೊಳ, ಶಿವಮೊಗ್ಗ, ದೂರವಾಣಿ ಸಂಖ್ಯೆ: 08182-295709 ಮತ್ತು https://icps.karnataka.gov.in ವೈಬ್‌ಸೈಟ್‌ಗೆ ಭೇಟಿ ಕೊಡಿ ಮಾಹಿತಿ ಪಡೆಯಬಹುದಾಗಿದೆ.

  • ಭಾಗ್ಯ ಎಂ.ಟಿ, ವಾರ್ತಾ ಇಲಾಖೆ

SJM College of Pharmacy ನ್ಯಾಯಕ್ಕೇ ಜಯ ಡಾ.ಸ್ವಾಮಿ ಪ್ರಾಚಾರ್ಯರಾಗಿ ಮರು ನೇಮಕ-” ಹೈ” ಆದೇಶ

0

SJM College of Pharmacy ಕಳೆದ 15 ವರ್ಷಗಳಿಂದ ಕಾನೂನು ಸಮರದಲ್ಲಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ.ಎಚ್ ಕೆ ಎಸ್ ಸ್ವಾಮಿಯವರಿಗೆ ಚಿತ್ರದುರ್ಗದ ಎಸ್ ಜೆ ಎಂ ಫಾರ್ಮಸಿ ಕಾಲೇಜಿಗೆ ಮತ್ತೆ ಪ್ರಾಂಶುಪಾಲರಾಗಿ ಮರುನೇಮಕ ಮಾಡಿಕೊಳ್ಳಬೇಕು ಹಾಗೂ ಅವರಿಗೆ ಎಲ್ಲಾ ಸೇವಾ ಸೌಲಭ್ಯಗಳನ್ನು ನೀಡಿ 2007 ರಿಂದ ಇಲ್ಲಿಯವರೆಗೂ 50% ವೇತನವನ್ನು ನೀಡಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ನೀಡಿದೆ.
ಇದರಿಂದ ವೇತನವಿಲ್ಲದೇ 15 ವರ್ಷಗಳಿಂದ ಜೀವನ ನಡೆಸುತ್ತಿದ್ದಂತಹ ಡಾ. ಸ್ವಾಮಿಯವರ ಕಾನೂನು ಸಮರಕ್ಕೆ ತೆರೆ ಬಿದ್ದಂತಾಗಿದೆ.

ಕಳೆದ 15 ವರ್ಷಗಳಿಂದ ಎಸ್ ಜೆ ಎಂ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಡಾ. ಎಚ್ ಕೆ ಎಸ್ ಸ್ವಾಮಿಯವರು ಎಂ.ಫಾರ್ಮ.ಪಿ.ಹೆಚ್.ಡಿ. ಪದವೀಧರರಾಗಿದ್ದರ. ಅವರನ್ನು ಎಸ್. ಜೆ ಎಂ. ಆಡಳಿತ ಮಂಡಳಿಯ ಆಡಳಿತಾಧಿಕಾರಿಗಳಾದ ಶ್ರೀ. ಎಮ್. ಚಿತ್ರಶೇಖರ್ ರವರು ಪ್ರಾಂಶುಪಾಲರನ್ನಾಗಿ 2007 ನೇಮಕ ಮಾಡಿ, ಬಡ್ತಿ ನೀಡಿದ್ದರು, ಆದರೆ ಅವರಿಗೆ ಕರ್ತವ್ಯ ನಿರ್ವಹಿಸಲು ಮತ್ತು ವೇತನ ಪಡೆಯಲು ಅವಕಾಶ ನೀಡದಿದ್ದರಿಂದ ತಮಗಾದ ಅನ್ಯಾಯವನ್ನು ಸರಿಪಡಿಸಲು ಹೈಕೋರ್ಟಿನ ಮೊರೆಹೋಗಿದ್ದರು. 15 ವರ್ಷ ನಡೆದ ಕಾನೂನು ಸಮರದಲ್ಲಿ ಈಗ ಮತ್ತೆ ಡಾ. ಸ್ವಾಮಿಯವರಿಗೆ ಪ್ರಾಂಶುಪಾಲರಾಗಿ ಮರುನೇಮಕ ಮಾಡಿ, ಅವರಿಗೆ 2007 ರಿಂದ ಇಲ್ಲಿಯವರೆಗೂ 50% ವೇತನವನ್ನು ನೀಡಿ, ಸೇವಾ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ಹೈಕೋರ್ಟ್ ಆದೇಶ ನೀಡಿದೆ.

ಡಾ ಸ್ವಾಮಿಯವರು 2007ರಲ್ಲಿ ಎಸ್.ಜೆ.ಎಂ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾಗಿ ಮುಂಬಡ್ತಿ ಪಡೆದಿದ್ದರು. ಇವರ ಮುಂಬಡ್ತಿಯನ್ನ ಎಐಸಿಟಿಇ AICTE ಗೆ ಮತ್ತು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ PCI ಸಲ್ಲಿಸಿ ಕಾಲೇಜಿಗೆ ಎಂ. ಫಾರ್ಮ. ಮತ್ತು ಫಾರ್ಮ. ಡಿ. ಕೋರ್ಸ್ ಗಳನ್ನು ತರಲಾಗಿತ್ತು. ಆದರೂ ಸಹ ಅದೇ ಕಾಲೇಜಿನಲ್ಲಿ ಹಳೆಯ ಪ್ರಾಂಶುಪಾಲರಾಗಿದ್ದ ಡಾ.ಎನ್ ಜಗದೀಶ್ ರವರು ಇವರಿಗೆ ಕರ್ತವ್ಯ ನಿರ್ವಹಿಸಲು ಮತ್ತು ವೇತನ ಪಡೆಯಲು ಅವಕಾಶ ನೀಡದೆ, ತಾವೇ ಪ್ರಾಂಶುಪಾಲರಾಗಿ ಮುಂದುವರೆದಿದ್ದರು. ಒಟ್ಟಿಗೆ ಎರಡು ವರ್ಷ ಕಾಲೇಜು ಇಬ್ಬರೂ ಪ್ರಾಂಶುಪಾಲರುಗಳನ್ನ ಹೊಂದಿತ್ತು. ಇದನ್ನ ಕಾಲೇಜಿನ ಎಲ್ಲಾ ಸಿಬ್ಬಂದಿಗಳು, ಉಪನ್ಯಾಸಕರುಗಳು ಎಸ್ಎಂ ವಿದ್ಯಾಪೀಠದ ಸ್ವಾಮೀಜಿಯವರ ಗಮನಕ್ಕೆ ತಂದಿದ್ದರು. ಆದರೆ ಆಡಳಿತ ಮಂಡಳಿ ಇದನ್ನ ನರಿಪಡಿಸದೇ ಇವರಿಗೆ ಆನ್ಯಾಯ ಎಸಗಿತ್ತು. ಆಗತಾನೆ ಪಿ.ಎಚ್ ಡಿ. ಮಾಡಿ ಬಂದಿದ್ದ ಡಾ. ಬಿ.ಆರ್. ಭಾರತಿ ಎಂಬುವರನ್ನು ಹೊಸದಾಗಿ ಪ್ರಾಂಶುಪಾಲರನ್ನಾಗಿ ನೇಮಕ ಮಾಡಿತ್ತು. ಇವರು ಸಹ ಫಾರ್ಮಸಿ ವಿಷಯದಲ್ಲಿ ಪಿ. ಎಚ್ ಡಿ. ಮಾಡಿರಲಿಲ್ಲವೆಂದು ಹಾಗೂ ಸೇವೆಯಲ್ಲಿ ಕಿರಿಯರು ಎಂದು ಹಾಗೂ ತಮ್ಮ ನೇಮಕ ಇನ್ನೂ ರದ್ದಾಗಿಲ್ಲ ಎಂದು ಡಾ. ಸ್ವಾಮಿಯವರು ಇವರ ನೇಮಕದ ವಿರುದ್ಧ AICTE , ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ RGUHS ಮತ್ತು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಕ್ಕೆ ದೂರು ನೀಡಿದ್ದರು.

SJM College of Pharmacy ಆಡಳಿತ ಮಂಡಳಿ ಇದನ್ನ ಸಹಿಸಲಾರದೆ ಇವರನ್ನು 2009ರಂದು ಸಂಸ್ಥೆಯ ವಿರುದ್ಧ ವಿರೋಧಿ ಚಟುವಟಿಕೆಗಳನ್ನ ಮಾಡಿದ್ದಾರೆ ಎಂದು ಕೆಲಸದಿಂದ ಅಮಾನತುಗೊಳಿಸಿತ್ತು.
ಅಮಾನತುಗೊಳಿಸಿ ವಿಚಾರಣೆಯನ್ನು ಕೈಗೊಳ್ಳದೆ ಬಾಕಿ ಇರಿಸಿತ್ತು. ಈ ಅಮಾನತ್ತಿನ ವಿರುದ್ಧ ಡಾ. ಸ್ವಾಮಿಯವರು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದಲ್ಲಿ 2009ರಲ್ಲಿ ದಾವೆ ಹೋಡಿದ್ದರು. ಗಾವೆ ಹೂಡಿದ ತಕ್ಷಣ ವಿದ್ಯಾಪೀಠವು ಯಾವುದೇ ವಿಚಾರಣೆಯನ್ನು ಕೈಗೊಳ್ಳದೆ ಪ್ರಾಧ್ಯಾಪಕರ ಹುದ್ದೆಗೆ ವಾಪಸ್ ಬನ್ನಿ ಎಂದು ಅಮಾನತ್ತನ್ನು ರದ್ದುಗೊಳಿಸಿತ್ತು. ಆದರೆ ಡಾ. ಸ್ವಾಮಿಯವರು ತನ್ನನ್ನು ಪ್ರಾಂಶುಪಾಲರಾಗಿ ನೇಮಕ ಮಾಡಲಾಗಿದ್ದು, ಪ್ರಾಂಶುಪಾಲ ಹುದ್ದೆಗೆ ಮಾತ್ರ ವಾಪಸ್ಸು ಬರುತ್ತೇನೆ, ಕೆಳಗಿನ ಪ್ರಾಧ್ಯಾಪಕರು ಹುದ್ದೆಗೆ ಬರುವುದಿಲ್ಲ ಎಂದು ಪತ್ರ ನೀಡಿ, ಕಾಲೇಜಿನಿಂದ ಸಂಬಳ ಪಡೆಯದೆ ಹೊರಗುಳಿದಿದ್ದರು.

ಅದೇ ವರ್ಷ ವಿಧಾನಸೌಧದಲ್ಲಿ ಹೂಡಿದ್ದ ದಾವೆಗೆ ಐಎಎಸ್ ಅಧಿಕಾರಿ ಶ್ರೀ ವಿಠ್ಠಲ್ ಮೂರ್ತಿಯವರು ಇವರನ್ನು ಪ್ರಾಂಶುಪಾಲರಾಗಿ ಮರುನೇಮಕ ಮಾಡಿಕೊಳ್ಳಿ ಎಂಬ ಆದೇಶ ನೀಡಿದ್ದರು, ಆದರೆ ಎಸ್. ಜೆ. ಎಂ ವಿದ್ಯಾಪೀಠವು ಈ ಆದೇಶದ ವಿರುದ್ಧ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ಮತ್ತೆ ಈ ಆದೇಶವನ್ನು ಕಾನೂನು ಪ್ರಕಾರವಾಗಿ ಮಾಡಿಲ್ಲ, ಮತ್ತೊಮ್ಮೆ ಇದನ್ನು ವಿಮರ್ಶೆ ಮಾಡಿ ಆದೇಶ ನೀಡಿ ಎಂದು ಕಡತವನ್ನ ಮತ್ತೆ ವಿಧಾನಸೌಧಕ್ಕೆ ವಾಪಾಸ್ ಕಳಿಸಿತ್ತು. ಅಲ್ಲಿ ಐಎಎಸ್ ಅಧಿಕಾರಿ ಶ್ರೀ ವಿಠ್ಠಲ್ ಮೂರ್ತಿಯವರು ನಿವೃತ್ತಿ ಹೊಂದಿದ್ದರು, ಅಲ್ಲಿ ಬದಲಾಗಿದ್ದ ಐಎಎಸ್ ಅಧಿಕಾರಿ ಶ್ರೀ ಗೋಪಾಲಕೃಷ್ಣ ಎನ್ನುವರು ಇವರು ಪ್ರಾಂಶುಪಾಲರಾಗಿ ನೇಮಕವಾಗಿದ್ದರೂ ಸಹ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ, ಕರ್ತವ್ಯ ನಿರ್ವಹಿಸಿಲ್ಲ ಎಂಬ ಆದೇಶ ನೀಡಿ, ಇವರಿಗೆ ನ್ಯಾಯಾಲಯವನ್ನು ತಪ್ಪುದಾರಿಗೆಳದಿದ್ದಾರೆ ಮತ್ತು ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಾರೆ ಎಂದು 50,000 ರೂ ದಂಡವನ್ನು ವಿಧಿಸಿದ್ದರು.

ಇದರ ವಿರುದ್ಧವಾಗಿ ಮತ್ತೆ ಡಾ. ಸ್ವಾಮಿಯವರು ಹೈಕೋರ್ಟ್ ನಲ್ಲಿ ಮೇಲ್ಮನ ಸಲ್ಲಿಸಿದ್ದರು. ಅವರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ ಎಂಬ ಆದೇಶದ ವಿರುದ್ಧ ತಾವು ಸಹಿ ಹಾಕಿಕೊಟ್ಟ ಎಲ್ಲಾ ದಾಖಲೆಗಳು ಮತ್ತು ಎಐಸಿಟಿಇ ಮತ್ತು ಫಾರ್ಮಸಿ ಕೌನ್ಸಿಲ ಆಫ್ ಇಂಡಿಯಾ ಎಂ. ಫಾರ್ಮಾ ಮತ್ತು ಫಾರ್ಮ. ಡಿ ಕೋರ್ಸ್ ಗಳನ್ನ ಇವರ ಹೆಸರಿನಲ್ಲಿ ಮಂಜೂರಾತಿ ಮಾಡಿದ್ದನ್ನು ದಾಖಲೆಗಳ ಸಮೇತ 2013ರಲ್ಲಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.

2013 ರಿಂದ 2022 ರವರೆಗೂ 11 ವರ್ಷ ಈ ದಾವೆ ಹೈಕೋರ್ಟ್ ನಲ್ಲಿ ಹಿಂದೆ ಮುಂದೆ ಸಂಚರಿಸುತ್ತಾ, ಕರೋನ ನೆಪದಲ್ಲಿ ಎರಡು ವರ್ಷ ಹಾಗೂ ಡಾ. ಬಿ.ಆರ್. ಭಾರತೀಯವರು ಕೆಲಸದಿಂದ ನಿರ್ಗಮಿಸಿದರು ಎಂದು ಆ ಜಾಗಕ್ಕೆ ಡಾ. ಟಿ.ಎಸ್.ನಾಗರಾಜ್ ರವರ ನೇಮಕವಾಗಿದ್ದನ್ನ ಮತ್ತೆ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ಧರು. ಡಾ. ಟಿ. ಎಸ್. ನಾಗರಾಜ್ ರವರು ಸಹ ತನಗಿಂತ ಸೇವೆಯಲ್ಲಿ ಕಿರಿಯರಾಗಿದ್ದು, ಫಾರ್ಮಸಿಯಲ್ಲಿ ಪಿ.ಹೆಚ್.ಡಿ. ಮಾಡಿಲ್ಲ ಎಂಬ ಮರುದಾವೆಯನ್ನು ಹೂಡಿದರು. ಆಗ ಮತ್ತೆ ಎರಡು ವರ್ಷ ದಾವೆ ಮುಂದಕ್ಕೆ ಹೋಯಿತು.

14 ವರ್ಷದಿಂದ ನೆಡೆಯುತ್ತಿರುವ ಈ ದಾವೆಯನ್ನು ಬೇಗ ವಿಲೇವಾರಿ ಮಾಡಿ ಎಂದು ಉಚ್ಚ ನ್ಯಾಯಾಲಯದ ರಿಜಿಸ್ಟರ್ ಅವರಿಗೆ ಡಾ. ಸ್ವಾಮಿಯವರು ಮನವಿ ಮಾಡಿಕೊಂಡರು. ಆಗ ಈ ದಾವೆಯನ್ನ ಗೌರವಾನ್ವಿತ ನ್ಯಾಯಾಧೀಶರಾದ ಆರ್. ನಟರಾಜ್ ಎಂಬ ನ್ಯಾಯಾಧೀಶರು ತೆಗೆದುಕೊಂಡು, ಕೇವಲ ಒಂದು ತಿಂಗಳಲ್ಲೇ ವಿಚಾರಣೆ ಮಾಡಿ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಎಸ್.ಜೆ.ಎಂ. ವಿದ್ಯಾಪೀಠಕ್ಕೆ ರಾಜಿ ಮಾಡಿಕೊಳ್ಳಲು ಎರಡು ಬಾರಿ ಅವಕಾಶ ನೀಡಿದ್ದರು. ಆದರೆ ಈ ದಾವೇಯನ್ನು ರಾಜಿ ಮಾಡಿಕೊಂಡು ಬಗೆಹರಿಸಲು ಒಪ್ಪದೇ ಎಸ್.ಜೆ.ಎಂ. ವಿದ್ಯಾಪೀಠ ಗೌರವಾನ್ವಿತ ನ್ಯಾಯಾಧೀಶರಿಗೆ ಆದೇಶ ಮಾಡಲು ವಿನಂತಿಸಿಕೊಂಡಿದ್ದರು.

ಇದನ್ನ ಪರಿಗಣಿಸಿ ಗೌರವಾನ್ವಿತ ನ್ಯಾಯಾಧೀಶರು 24-9-2024 ಆದೇಶ ಮಾಡಿ, ಡಾ. ಸ್ವಾಮಿಯವರ ನೇಮಕವನ್ನು ಎತ್ತಿ ಹಿಡಿದು, ಅವರನ್ನ ಪ್ರಾಂಶುಪಾಲರನ್ನಾಗಿ ಮರು ನೇಮಕ ಮಾಡಿ, ಅವರಿಗೆ 50% ರಷ್ಟು ಹಳೆಯ ಬಾಕಿ ಸಂಬಳವನ್ನು ನೀಡಿ, ಸೇವಾ ಸೌಲಭ್ಯವನ್ನು ಕಲ್ಪಿಸಿಕೊಡಬೇಕೆಂಬ ಆದೇಶವನ್ನು ಹೊರಡಿಸಿದ್ದಾರೆ. ಇದರಿಂದ ಡಾ. ಸ್ವಾಮಿಯವರಿಗೆ ಆಗಿದ್ದ 15 ವರ್ಷದ ಅನ್ಯಾಯಕ್ಕೆ ನ್ಯಾಯ ದೊರಕಿದೆ ಎಂದು ಅವರು ಪತ್ರಿಕಾ ಪ್ರಕಟಣೆ ಮುಖಾಂತರ ಸಂತಸ ವ್ಯಕ್ತಪಡಿಸಿದ್ದಾರೆ.

ಇವರಿಗೆ ಇನ್ನೂ ಕೇವಲ ಮೂರು ತಿಂಗಳಷ್ಟು ಮಾತ್ರ ಪ್ರಾಂಶುಪಾಲರಾಗಿ ಸೇವೆ ಮಾಡಲು ಅವಕಾಶವಿದ್ದು, 2025 ಜನವರಿ 22ರಂದು ಇವರು ನಿವೃತ್ತಿ ಹೊಂದುವರು. ಹಾಗಾಗಿ ನ್ಯಾಯಾಲಯವು ಕನಿಷ್ಠಪಕ್ಷ ಸೇವಾ ಅವಧಿ ಒಳಗೆ ತೀರ್ಮಾನ ನೀಡಿದ್ದರಿಂದ ಮೂರು ತಿಂಗಳಾದರೂ ಇವರು ಪ್ರಾಂಶುಪಾಲರಾಗಿ ಕೆಲಸ ಮಾಡುವ ಅವಕಾಶವನ್ನು ಒದಗಿಸಿ ಕೊಟ್ಟಿದೆ ಎಂದರು.

15 ವರ್ಷದಿಂದ ನಡೆದ ಈ ಕಾನೂನು ಸಮರದಲ್ಲಿ ಸತ್ಯಕ್ಕೆ ಜಯ ಸಿಕ್ಕಿದೆ, ಇಲ್ಲದಿದ್ದರೆ ಜನರಲ್ಲಿ ಕೋರ್ಟು ಕಚೇರಿಗಳ ಮೇಲೆ ನಂಬಿಕೆ ಹೋಗುತ್ತಿತ್ತು, ಆ ನಂಬಿಕೆಯನ್ನ ಉಚ್ಚ ನ್ಯಾಯಾಲಯ ಮತ್ತೆ ಉಳಿಸಿಕೊಟ್ಟಿದೆ. ಇದೊಂದು ಗಾಂಧಿ ಮಾರ್ಗದಲ್ಲಿ ನಡೆಸಿದ ಅಪರೂಪವಾದ ಹೋರಾಟವಾಗಿದೆ.
15 ವರ್ಷ ಕಾಲೇಜಿನ ಹೊರಗಡೆ ಇದ್ದು ಯಾವುದೇ ವೇತನವನ್ನು ಪಡೆಯದೆ, ಹೋರಾಟವನ್ನು ಮುಂದುವರಿಸಿದ್ದ ಇವರು ಸತ್ಯಕ್ಕೆ ಜಯ ತಂದುಕೊಟ್ಟಿದ್ದಾರೆ. ಈ ಕಳೆದ 15 ವರ್ಷಗಳಿಂದ ಡಾ. ಸ್ವಾಮಿಯವರು ಪರಿಸರ ಮತ್ತು ಗಾಂಧಿ ತತ್ವಗಳ ಬಗ್ಗೆ ಕಾರ್ಯಕ್ರಮಗಳನ್ನು ನೀಡುತ್ತಾ ಬದುಕು ಸಾಗಿಸುತ್ತಿದ್ದರು.

Klive Special Article ಭಾಷಾ ಕರುಳಿನ ಉರುಳಲ್ಲಿ ಕನ್ನಡಿಗರೊಬ್ಬರ ಅನುಭವ ಬರಹ: ಡಾ.ಎಚ್.ಎಸ್.ಸುರೇಶ್. ಬೆಂಗಳೂರು

0

Klive Special Article ಹನ್ನೆರಡು ವರ್ಷಗಳ ಕಾಲ ಕರ್ನಾಟಕದ ಹೊರಗಡೆ ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ಅಧಿಕಾರಿಯಾಗಿ ಕೆಲಸ ಮಾಡಿ, ದೇಶದ ಉದ್ದಗಲಕ್ಕೂ ನಡೆದ ಸಭೆ, ಶಿಬಿರ, ಸಮಾರಂಭಗಳಲ್ಲಿ ಭಾಗವಹಿಸಿದ ನನ್ನ ಅನ್ಯ ಭಾಷಿಕ ಅನುಭವಗಳನ್ನು ಮಾತ್ರ ಇಲ್ಲಿ ಹಂಚಿಕೊಳ್ಳ ಬಯಸುತ್ತೇನೆ ಇಂದಿನ ಸಂದರ್ಭದಲ್ಲಿ ಹೇಳುವುದಾದರೆ ಇಂಗ್ಲಿಷ್ ಒಂದೇ ಸಾಲದೆಂಬಂತೆ, ಹಿಂದಿ ಸೇರಿದಂತೆ , ನೆರೆ ರಾಜ್ಯಗಳ ಭಾಷೆಗಳಾದ ಮರಾಠಿ , ತಮಿಳು ,ತೆಲುಗು ಮತ್ತು ಮಲೆಯಾಳಂ ಗಳ ದಬ್ಬಾಳಿಕೆ ಯನ್ನೂ ನಾಡು ಸಹಿಸಿಕೊಳ್ಳ ಬೇಕಾಗಿದೆ ಮತ್ತು ಎದುರಿಸಬೇಕಿದೆ . ದೈನಂದಿನ ಜೀವನಕ್ಕೆ ಅನಿವಾರ್ಯ ಅನಿಸದ ಹೊರತು ಯಾರೂ ಸ್ಥಳೀಯ ಭಾಷೆಯನ್ನು ಕಲಿಯುವ ಉತ್ಸಾಹ ತೋರುವುದಿಲ್ಲ . ಅಷ್ಟಕ್ಕೂ ನಮಗೇ ಬೇಡವಾದದ್ದು ಅವರಿಗೇಕೆ ?


Klive Special Article ಪುಣೆ ಯಲ್ಲಿ ಪಿ .ಎಂ . ಟಿ. ಅಥವಾ ಪಿ . ಸಿ. ಎಂ.ಟಿ. ಬಸ್ ಹತ್ತಿ ನಿರ್ವಾಹಕನಿಗೆ ’ ಕಾರ್ಪೋರೇಶನ್’ ಗೆ ಟಿಕೆಟ್ ಕೇಳಿ . ಆತ ನಿಮ್ಮನ್ನು ಕೆಕ್ಕರಿಸಿ ನೋಡುತ್ತಾ ನಯವಿಲ್ಲದೇ ಮ. ನ .ಪಾ . ಕಾ ? ( ಮಹಾ ನಗರ್ ಪಾಲಿಕಾ ನಾ ) ಎಂದು ಕೇಳುತ್ತಾನೆ. ನೀವು ಇಪ್ಪತ್ತರದೋ, ಐವತ್ತರದೋ ನೋಟು ಕೊಟ್ಟಿರಿ ಎಂದಿಟ್ಟುಕೊಳ್ಳಿ . ಅಷ್ಟೇ ಒರಟಾಗಿ ‘ ಸುಟ್ಟಿ ಪೈಸೆ ಧ್ಯಾ’ ಅನ್ನುತ್ತಾನೆ ಈಗ ನೀವೊಂದು ಮರಾಠಿ ಪದ ಕಲಿತಿರಿ. ನಿರ್ವಾಹಕನ ಆತಿಥ್ಯದ ಅನುಭವವೂ ಆಯಿತು !

ಮತ್ತೆ ನೀವೆಂದೂ’ ಕಾರ್ಪೋರೇಶನ್’ ಅನ್ನುವ ಧೈರ್ಯ ಮಾಡಲಾರಿರಿ. ಹಾಗೇ ಬಸ್ಸಿನಲ್ಲಿ ಓಡಾಡುವಾಗ ‘ ಉತ್ರ , ಟಿಕೆಟ್ ಕಾಡಲಿ ಕಾ , ಸರ್ಕ , ಪುಡೇ ಝಾ, ಘ್ಯಾ, ಧ್ಯಾ , ಥಂಬಾ, ಮಾಘೇ , ಬಸ, ಕುಟೆ, ಕುಟೂನ್ – ಕೇಳುತ್ತಾ ಕೇಳುತ್ತಾ ಮೂರು ದಿನದ ನಿಮ್ಮ ಬಸ್ ಪ್ರಯಾಣದಲ್ಲಿ ಸಾಕಷ್ಟು ಮರಾಠಿ ಕಲಿತುಬಿಡುತ್ತೀರಿ ! ದಿನಸಿ ಅಂಗಡಿಗೆ ಹೋಗಿ ‘ ರೈಸ್ ಟೂ ಕೆ ಜಿ’ . ಅನ್ನಿ .ಅವನು ಅಕ್ಕಿಯನ್ನು ತೋರಿಸಿ ತಂಡೂಲ್ ದೋ ನ್ ಕಿಲೋ ಕಾ ? ಎಂದು ಕೇಳಿ ನಿಮಗೆ ಮರಾಠಿ ಕಲಿಸುತ್ತಾನೆ. ನಿಮಗೆ ಮತ್ತೊದು ಮರಾಟಿ ಪದ ಬಂದಂತಾಯಿತು . ಭಾಷೆಯನ್ನು ಬಳಸುವ , ಬೆಳೆಸುವ, ಉಳಿಸುವ ರೀತಿ ಇದು !



ಇನ್ನೊಂದು ಅಷ್ಟೇನೂ ಒಳ್ಳೆಯದಲ್ಲದ ಅನುಭವವನ್ನು ಕೇಳಿ . ಮುಂಬೈ ನ ಮಲಾಡ್ ನ ರಸ್ತೆಯ ಬದಿ ಅಂಗಡಿಯಲ್ಲಿ ಕಣ್ಣಿಗೆ ಬಿದ್ದ ‘ಕರ್ನಾಟಕ ಮಲ್ಲ ‘ ಕನ್ನಡ ದೈನಿಕವನ್ನು ಕೊಳ್ಳಲು ಕೇಳುತ್ತೇನೆ , ಅಂಗಡಿಯ ಮರಾಟಿ ಒಡತಿ ನನ್ನನ್ನು ನೋಡುತ್ತಾ ಅವಳ ಮಗಳಿಗೆ ಹೇಳುತ್ತಾಳೆ ‘ ತಿಥೆ ಪಹಾ. ತೇವಡಚಾ ಮದ್ರಾಸಿ ಪೇಪರ್ ಬಾಹೆರ್ ಕಾಡೂನ್ ಇಥೆ ಫೆಕೂನ್ ಧ್ಯಾ ( ಅಲ್ನೋಡು ಅಲ್ಲಿರೋ ಮದ್ರಾಸಿ ಪೇಪರ್ ನ ಹೊರಗೆ ತೆಗೆದು ಇಲ್ಲಿ ಬಿಸಾಡು ಅನ್ನುತ್ತಾ ಳೆ .) ಕನ್ನಡಿಗರ ಬಗ್ಗೆ ಅಸಹನೆ ಅಲ್ಲಿ ಬೆಳೆಸಿಕೊಂಡು ಬಂದ ಒಂದು ಪ್ರವೃತ್ತಿ ಆಗಿದೆ . ೧೯೬೬-೬೭ ರಲ್ಲಿ ಮುಂಬೈ ನ ರಸ್ತೆಗಳಲ್ಲಿ ಲುಂಗಿ ಉಟ್ಟು ಓಡಾಡಲು ಬಹಳ ಧೈರ್ಯ ಬೇಕಿತ್ತು ! .



ಮಹಾರಾಷ್ಟ್ರದಲ್ಲಿ ಯಾರೇ ಆಡಳಿತಕ್ಕೆ ಬರಲಿ ಅವರೆಲ್ಲರೂ ಹೃದಯಾಂತರಾಳದಲ್ಲಿ ಶಿವಸೈನಿಕರೇ ಆಗಿರುತ್ತಾರೆ. ಮಹಾರಾಷ್ಟ್ರದ ಅಸ್ಮಿತೆ ಮತ್ತು ಹಿತರಕ್ಷಣೆ ಅಲ್ಲಿನ ಎಲ್ಲ ಪಕ್ಷಗಳ ಅಘೋಷಿತ ‘ಅಜೆಂಡಾ’ ಆಗಿರುತ್ತದೆ .

ಮಹಾರಾಷ್ಟ್ರದಲ್ಲಿ ಅಥವಾ ಗುಜರಾತ್ ನಲ್ಲಾಗಲೀ ಅಲ್ಲಿನ ಸಾಹಿತ್ಯ ಪರಿಷತ್ ಹೊರತು ಪಡಿಸಿ ಬೇರೇ ಯಾವುದೇ ಭಾಷಾ ಅಭಿವೃದ್ಧಿ ಪ್ರಾಧಿಕಾರ ,ರಕ್ಷಣಾವೇದಿಕೆ ,ಕಾವಲು ಸಮಿತಿ , ಇಲಾಖೆ ಅಥವಾ ಶಕ್ತಿ ಕೇಂದ್ರ ವಾಗಲಿ ಇರುವುದು ನನಗೆ ತಿಳಿದಿಲ್ಲ . ಆ ಎಲ್ಲಾ ಕೆಲಸಗಳನ್ನೂ ಅಲ್ಲಿನ ಭಾಷಿಕರೇ ‘ನೋಡಿ’ ಕೊಳ್ಳುತ್ತಾರೆ !

Klive Special Article ಕೇಂದ್ರ ಸರ್ಕಾರದ ಎನ್. ಎಸ್. ಎಸ್. ಸಲಹಗಾರನಾಗಿ ಮಹಾರಾಷ್ಟ್ರ ದಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಎಲ್ಲ ವಿಶ್ವ ವಿದ್ಯಾಲಯಗಳಲ್ಲೂ ಮರಾಠಿಯಲ್ಲಿ ಸಭೆ ನಡೆಯುತ್ತಿತ್ತು. ಹಾಗೊಂದು ಸಭೆಯಲ್ಲಿ ಪುಣೆ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಶ್ರೀಧರ್ ಗುಪ್ತೆ ‘ ಅಪಣ ಅಂಚೆ ಶೇಜಾರಿಲ ರಾಜ್ಯಾತಿಲ ಅಹಾತ ತುಮ್ಹಾಲ ಮರಾಠಿ ಮಾಹಿತ ಅಸೇಲ ಪಾಯಿಜೆ’ (ನೀವು ನಮ್ಮ ನೆರೆರಾಜ್ಯದಿಂದ ಬಂದವರು. ನಿಮಗೆ ಮರಾಠಿ ಗೊತ್ತಿರಲೇ ಬೇಕು) ಎಂದು

ತೀರ್ಮಾನಿಸಿಬಿಟ್ಟರು .ಕನ್ನಡಿಗರ ಬಗ್ಗೆ ಅದೆಂಥ ಧೃಡ ವಿಶ್ವಾಸ ! ಗುಜರಾತ್ ನಲ್ಲಿಯೂ ಅಲ್ಲಿನ ಎನ್.ಎಸ್.ಎಸ್. ಪ್ರಾದೇಶಿಕ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಕೂಡಲೇ ಅಂದಿನ ಶಿಕ್ಷಣ ಮಂತ್ರಿ ಶ್ರೀ ನರಹರಿ ಅಮೀನ್ ರವರನ್ನು ಭೇಟಿ ಯಾಗಲು ಹೋದಾಗ ಅವರು ಸೌಜನ್ಯದಿಂದಲೇ ’ಹೂಂ ಜಾಣೂಂಚು ಕೆ ತಮೆ ಗುಜರಾತಿ ಬೊಲಿ ಸಕತಾ ನಥಿ. ಪರಂತು ಹೂಂ ಪಕ್ತ ತಮಣೆ ಗುಜರಾತಿಮಾ ಜ ಬೋಲಿ ಸಕುಂಚು.( ನಿಮಗೆ ಗುಜರಾತಿ ಗೊತ್ತಿಲ್ಲ ಎಂದು ಗೊತ್ತಾಯಿತು. ಆದರೆ ನಾನು ನಿಮಗೆ ಗುಜರಾತಿನಲ್ಲಿ ಮಾತ್ರ ಮಾತನಾಡಬಲ್ಲೆ) ಅಂದರು. ಅಲ್ಲಿದ್ದ ನಾಲ್ಕು ವರ್ಷಗಳಲ್ಲಿ ಅಲ್ಲಿನ ‘ಗುಜರಾತ್ ಸಮಾಚಾರ್ ‘ ಓದ ಬಲ್ಲವನಾಗಿದ್ದೆ


ಆ ಎರಡೂ ರಾಜ್ಯಗಳೂ ನನಗೆ ಅಲ್ಲಿನ ಭಾಷೆಗಳನ್ನು ಕಲಿಯಬೇಕಾದ ” ಅನಿವಾರ್ಯತೆ “ ಹುಟ್ಟಿಸಿದವು.

ಆದರೆ ಕೇರಳದಲ್ಲಿನ ಅನುಭವವೇ ಬೇರೆ. ಕೇರಳ ವಿಶ್ವವಿದ್ಯಾಲಯದ ಎನ್. ಎಸ್ .ಎಸ್ . ಸಂಯೋಜಕರ ಬಳಿ ಮಲೆಯಾಳಂ ಕಲಿಯುವ ಆಸಕ್ತಿಯನ್ನ ಹೇಳಿದಾಗ ಅವರು ಹೇಳಿದ ಮಾತು ಇಂದಿಗೂ ನಮಗೊಂದು ಪಾಠವದೀತು ಅನಿಸುತ್ತದೆ



‘ ನೀವು ಇಂಗ್ಲೀಷ್ ನಲ್ಲಿಯೇ ಮಾತನಾಡಿ . ಮಲೆಯಾಳಂ ಭಾಷೆಯನ್ನು ಕಲಿಯುವ ಅಗತ್ಯ ಇಲ್ಲ. ಅದು ನಾವು ನಮಗಾಗಿ ಮಾಡಿಕೊಂಡ ಭಾಷೆ .ನಮ್ಮ ಸಂಸ್ಕೃತಿ , ನುಡಿಗಟ್ಟು, ಹಬ್ಬ ,ಉತ್ಸವ ,ನಾಟಕ, ನರ್ತನ, ಕಲೆ ಸಾಹಿತ್ಯ ಆಚಾರ, ಆಹಾರ, ವಿಚಾರ, ಗಾದೆ , ಗುಟ್ಟು, ಗೌಪ್ಯ ಗಳನ್ನು ಕಾಪಾಡಿಕೊಳ್ಳಲು ಸೃಷ್ಟಿಸಿಕೊಂಡದ್ದು. ಮಲೆಯಾಳಿ ಭಾಷೆಯನ್ನೇ ಊಟ ಹಾಗೂ ಉಸಿರಾಗಿಸಿಕೊಂಡಿರುವ ನಾವು ಕೋಟ್ಯಾಂತರ ಜನರಿದ್ದೇವೆ ಅಷ್ಟೇ ಸಾಕು.’ ಅಂದದ್ದು ಪ್ರತಿಯೊಂದು ಭಾಷಯೂ ತನ್ನ ಅರ್ಥವನ್ನ ತನ್ನದೇ ಆದ ಸಂಸ್ಕೃತಿ ಯಿಂದ ಪಡೆದುಕೊಳ್ಳುತ್ತದೆ ಅನ್ನುವ ಮಾತನ್ನು ಸಮರ್ಥಿಸುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಮಲೆಯಾಳಿ ಭಾಷೆ ಮಾರ್ದನಿಸದ ಸ್ಥಳ ಹುಡುಕುವುದು ಕಷ್ಟ . ಹೋಗಲಿ ಬಿಡಿ. ಅವರೆಲ್ಲಿ, ನಾವೆಲ್ಲಿ.



ನನ್ನ ಎಲ್ಲ ಇತಿ ಮಿತಿ ಗಳ ನಡುವೆಯೂ ನನ್ನ ಕೆಲಸ ಕಾರ್ಯಗಳಲ್ಲಿ ಈ ಮೂರೂ ರಾಜ್ಯಗಳಲ್ಲಿಯೂ ನನಗೆ ಅದ್ಭುತ ಸಹಕಾರ ಸಿಕ್ಕಿತು . ಗುಜರಾತ್, ಮಹಾರಾಷ್ಟ್ರ ಮತ್ತು ಕೇರಳ – ಈ ಮೂರೂ ರಾಜ್ಯಗಳಲ್ಲಿ ನಡೆದ ಕಾಲೇಜು ಎನ್.ಎಸ್.ಎಸ್. ಶಿಬಿರಗಳಿಗೆ ನಮ್ಮ ರಾಜ್ಯದ ಮುನ್ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳನ್ನು ಆಹ್ವಾನಿಸಿ ಅವರಿಗೆ ಅಲ್ಲಿನ ಗ್ರಾಮ ಜೀವನದ ಅನುಭವ ಮಾಡಿಕೊಟ್ಟಿದ್ದೆವು .



ಆದರೆ ೨೦೦೧ ರಿಂದ ೨೦೦೯ ರಲ್ಲಿ ನನ್ನ ನಿವೃತ್ತಿಯವರೆಗೂ ಕರ್ನಾಟಕದ ಲ್ಲಿನ ನನ್ನ ಅನುಭವ ಮೇಲಿನ ಎಲ್ಲಕ್ಕೂ ತದ್ವಿರುದ್ಧ ವಾದದ್ದು ಬೇಸರದ ಸಂಗತಿ. ಇಲ್ಲಿ ಬರಲಿ, ಬರದಿರಲಿ ಎಲ್ಲರಿಗೂ ಇಂಗ್ಲಿಷ್ ವ್ಯಾಮೋಹ .

“ ಮಕ್ಕಳಿವರೇನಮ್ಮ ಆರು ಕೋಟಿ, ತೂರಿದರೆ ಉಳಿದಾವೇ ನಾಲ್ಕಾರು ಘಟ್ಟಿ “ ಅನ್ನುವ ಸ್ಥಿತಿ !

ಕರ್ನಾಟಕದ ನಮ್ಮ ಕಾಲೇಜುಗಳಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳನ್ನು ಮತ್ತು ಸ್ವಯಂ ಸೇವಕರನ್ನು ಕುರಿತು ಇಂಗ್ಲಿಷ್ ನಲ್ಲಿ ಮಾತನಾಡಬೇಕೆಂದು ಬಂದ ಕೋರಿಕೆಯನ್ನು ‘ ನನಗೆ ಅದಕ್ಕೆ ಅವಶ್ಯವಾದಷ್ಟು ಇಂಗ್ಲಿಷ್ ಬರುವುದಿಲ್ಲ’ ಎಂದು ವಿನಯ ಪೂರ್ವಕ ಹೇಳಿಬಿಡುತ್ತಿದ್ದೆ. ಮಹಾತ್ಮಾಗಾಂಧಿ ಜೀ ಅವರು ‘ನನ್ನ ದೇಶ ಬಾಂಧವರನ್ನು ಕುರಿತು ಅವರದೂ ಅಲ್ಲದ, ನನ್ನದೂ ಅಲ್ಲದ , ನನ್ನ ದೇಶದ್ದೂ ಅಲ್ಲದ ಬೇರೊಂದು ಭಾಷೆಯಲ್ಲಿ ಮಾತನಾಡ ಬೇಕಾಗಿ ಬಂದಾಗಲೆಲ್ಲಾ ನನಗೆ ಘೋರ ಅಪಮಾನ ಹಾಗೂ ಲಜ್ಜೆ ಅನಿಸುತ್ತದೆ ’ ಅನ್ನುವ ಮಾತು ಸ್ವಾತಂತ್ರ್ಯ ಬಂದು ೭೫ ವರ್ಷಗಳೇ ಕಳೆದರೂ ಬದಲಾಗದ ವ್ಯಥೆಯಾಗಿ ಉಳಿದಿದೆ .

ಇತ್ತೀಚಿನ ನನ್ನ ಅನುಭವ ಹೇಳುತ್ತೇನೆ

ನನ್ನ ಖಾತೆ ಇರುವುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಶಾಖೆ ಯೊಂದರಲ್ಲಿ . ಅಲ್ಲಿನ ಸಿಬ್ಬಂದಿ ಎಲ್ಲರೂ ಮಹಿಳೆಯರು ಮತ್ತು ಕನ್ನಡ ಬಾರದವರು . ಸ್ಥಳೀಯ ಭಾಷಾ ಜ್ಞಾನದ ಅಗತ್ಯತೆಯನ್ನು ಮನಗಾಣಿಸುವ ಉದ್ದೇಶದಿಂದ ನಾನು ಚೆಕ್ಕಿನಲ್ಲಿ ಬೇಕಂತಲೇ ಒಂದು ರೂ ಕಡಿಮೆ ಮಾಡಿ ‘ಸ್ವಂತಕ್ಕೆ’ ‘ ಒಂಭತ್ತು ಸಾವಿರದ ಒoಭೈನೂರಾ ತೊಂಭತ್ತ ಒಂಭತ್ತು ರೂಪಾಯಿಗಳು ಮಾತ್ರ ‘ ಎಂದು ಬರೆದು ಕೊಟ್ಟು ಕಾಯುತ್ತಾ ಕುಳಿತೆ . ಸ್ವಲ್ಪ ಸಮಯದಲ್ಲೇ ಕೌಂಟರ್ ನಲ್ಲಿ ಸಂಚಾಲನ ಉಂಟಾಯಿತು . ನನ್ನ ಚೆಕ್ ಹಿಡಿದುಕೊಂಡು ಕೌಂಟರ್ ನ ಮಹಿಳೆ ಮ್ಯಾನೇಜರ್ ಕ್ಯಾಬಿನ್ ಗೆ ಹೋದಳು. ಮ್ಯಾನೇಜರ್ ಚೆಕ್ಕನ್ನು ಹಿಂದೆ ಮುಂದೆ ತಿರುಗಿಸುತ್ತಾ “ ಏ ಕಿಸನೇ ಲಿಖಾ ಹೈ, ಸಿಗ್ನೇಚರ್ ತೋ ಅಂಗ್ರೇಜೀ ಮೇ ಕಿಯಾ ಹಾಯ್, ಚೆಕ್ ಭೀ ಅಇಸೆ ಲಿಖ್ ಸಕ್ತಾಥ ನಾ ‘ ಅಂತ ಗೊಣಗಿದಳು . ನನ್ನನ್ನು ಕ್ಯಾಬಿನ್ ಗೆ ಕರೆದು ಕೂರಿಸಿ ಕೇಳಿದಾಗ ನನ್ನ ಭಾಷಾ ಉದ್ದೇಶ ವಿವರಿಸಿದೆ. ಆಕೆ ವಿನಮ್ರವಾಗಿ ‘ ಮುಝೆ ಕನ್ನಡ್ ಸೀಖ್ನಾ ಹಯ್ ’ ಅನ್ನುತ್ತಾ ಚೆಕ್ ವಿ ವಿಲೇವಾರಿ ಮಾಡಿ ತಡವಾದ ಬಗ್ಗೆ ವಿಷಾದಿಸಿದಳು.



ನಾನು ಕ್ಯಾಬಿನ್ ನಿಂದ ಹೊರ ಬರುತ್ತಿದ್ದಂತೆ ನಾನೇನೋ ಅಪರಾಧ ಮಾಡಿದ್ದೇನೆ ಅನ್ನುವಂತೆ ಅಲ್ಲಿದ್ದ ಕೆಲವರು ‘ ಏನಾಯ್ತು ಸಾರ್ ‘ ಅಂದರು . ಕನ್ನಡಕ್ಕಾಗಿ ಹೀಗೆ ಮಾಡಬೇಕಾಗಿ ಬಂದದ್ದನ್ನು ಹೇಳಿದೆ. ಕನ್ನಡ ತಾಯಿಯ ಪುಣ್ಯ ಚೆನ್ನಾಗಿತ್ತು ಅನಿಸುತ್ತದೆ . ಮುಂದಿನ ಐದಾರು ದಿನಗಳಲ್ಲಿ ಕನ್ನಡ ಬಲ್ಲ ಕೆಲವು ಖಾತೆದಾರರು ಕನ್ನಡದಲ್ಲಿ ‘ ಚೆಕ್’ ‘ ‘ ಪೆ ಇನ್ ಸ್ಲಿಪ್’ ಆರ್. ಟಿ. ಜಿ. ಎಸ್. ಬರೆಯಲು ಪ್ರಾರಂಭಿಸಿದಾಗ ಮ್ಯಾನೇಜರ್, ತತ್ಕಾಲಕ್ಕೆ ಬೇರೆ ಶಾಖೆಯಿಂದ ಇಲ್ಲಿಗೆ ಕನ್ನಡ ಬಲ್ಲ ಒಬ್ಬರನ್ನು ಡೆಪ್ಯೂಟ್ ಮಾಡುವಂತೆ ಬರೆದ ಪರಿಣಾಮ , ಒಬ್ಬ ಕನ್ನಡಿಗ ಸ್ವಲ್ಪ ಕಾಲವಾದರೂ ಈ ಶಾಖೆಗೆ ಬರುವಂತೆ ಆಯಿತು.

ರಾಷ್ಟ್ರೀಕರಣಗೊಂಡ ಕೇಂದ್ರ ಸರಕಾರದ ಎಲ್ಲ ಬ್ಯಾಂಕ್ ಗಳಲ್ಲೂ ಹಿಂದಿ ಅನುಷ್ಠಾನಕ್ಕಾಗಿ ಹಿಂದಿ ಆಫೀಸರ್ ಗಳನ್ನು ತಪ್ಪದೆ ನೇಮಕ ಮಾಡಿಕೊಳ್ಳಲಾಗುತ್ತಿದೆ . ನನ್ನ ಈ ಪ್ರಯೋಗವನ್ನು ಎಲ್ಲ ಕನ್ನಡಿಗರೂ ಅಂಚೆ , ರೈಲ್ವೆ ಮತ್ತು ಬ್ಯಾಂಕ್ ಗಳಲ್ಲಿ ನಿರಂತರವಾಗಿ ಮಾಡಿದ್ದೇ ಆದರೆ ಅದರ ಪರಿಣಾಮವನ್ನು ಊಹಿಸಿಕೊಳ್ಳಿ !
ಡಾ. ಹೆಚ್ ಎಸ್ ಸುರೇಶ್ (9448027400)
ಜಿ 4
ಅಕ್ಷಯ ಅಪಾರ್ಟ್ಮೆಂಟ್
ಅಕ್ಷಯನಗರ, ಬೇಗೂರು, ಬೆಂಗಳೂರು
560114
ನವೆಂಬರ್ ಸಂಚಿಕೆಯಲ್ಲಿ ಪ್ರಕಟಣೆಯ ಕೃಪೆಗೆ

National Festivals Celebration Committee ಒನಕೆ ಓಬವ್ವನ ಧೈರ್ಯ & ಸಾಹಸ ಮಹಿಳೆಯರಿಗೆ ಮಾದರಿ- ಮಂಜುಳಾ ಬಿ.ಹೆಗಡಾಳ್

0

National Festivals Celebration Committee ಸಮಯ ಪ್ರಜ್ಞೆ ಮತ್ತು ಪರಾಕ್ರಮದಿಂದ ವೈರಿ ಸೈನಿಕರನ್ನು ಸದೆಬಡಿದ ಒನಕೆ ಓಬವ್ವ ಇಂದಿನ ಪೀಳಿಗೆಗೆ ಪ್ರೇರಣೆ ಆಗಿದ್ದಾರೆ ಎಂದು ತಹಶೀಲ್ದಾರ್ ಮಂಜುಳಾ ಬಿ. ಹೆಗಡಾಳ್ ಹೇಳಿದರು.

ಸೊರಬ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ, ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಛಲವಾದಿ ಸಮಾಜದ ವತಿಯಿಂದ ಹಮ್ಮಿಕೊಂಡ ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಗೃಹಿಣಿಯಾಗಿದ್ದ ಓಬವ್ವ ತನ್ನ ಸಾಹಸ ಮತ್ತು ಧೈರ್ಯದ ಮೂಲಕ ಒನಕೆ ಹಿಡಿದು ಶತ್ರು ಸೈನ್ಯದ ಸೈನಿಕರನ್ನು ಸೆದೆಬಡಿದರು. ಇದು ದೇಶದ ಚರಿತ್ರೆಯ ಪುಟದಲ್ಲಿ ದಾಖಲಾಗಿದೆ. ಶತ್ರುಗಳ ಎದುರು ಉಗ್ರವಾಗಿ ನಿಂತು ಅನುಕರಣೀಯವಾದ ಧೈರ್ಯವನ್ನು ತೋರಿದರು. ಒನಕೆ ಓಬವ್ವನ ಧೈರ್ಯ ಮತ್ತು ಸಾಹಸ ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರಿಗೆ ಮಾದರಿಯಾಗಿದೆ ಎಂದರು.

ಸಿಪಿಐ ಎಲ್. ರಾಜಶೇಖರ್ ಮಾತನಾಡಿ, ದೇಶದ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸಲ್ಲದು. ಒನಕೆ ಓಬವ್ವ ಒಂದು ಜಾತಿಗೆ ಸೀಮಿತರಲ್ಲ. ಯಾವುದೇ ಆಸ್ಥಾನದ ರಾಣಿಯಾಗಿರದೇ ಸಾಮಾನ್ಯ ಮಹಿಳೆಯಾಗಿ, ಕೋಟೆಯ ಕಾವಲುಗಾರನ ಪತ್ನಿಯಾಗಿ ತೋರಿದ ಧೈರ್ಯ ಅವಿಸ್ಮರಣೀಯವಾದುದು. ಅವರ ಧೈರ್ಯ, ಸಾಹಸ ಮತ್ತು ಆದರ್ಶಗಳನ್ನು ಮಹಿಳೆಯರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಚಿತ್ರದುರ್ಗದ ಸಮೀಪದ ಅಗಸನಕಲ್ಲು ಎಂಬ ಗ್ರಾಮದಲ್ಲಿ ಒಬವ್ವನನ್ನು ಪೂಜನೀಯವಾಗಿ ಗೌರವಿಸಲಾಗುತ್ತಿರುವುದನ್ನು ಕಾಣಬಹುದಾಗಿದೆ ಎಂದರು.
ವೀರ ವನಿತೆ ಒನಕೆ ಓಬವ್ವ ಅವರ ಜೀವನ ಮತ್ತು ಸಾಹಸದ ಕುರಿತು ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ ಉಪನ್ಯಾಸ ನೀಡಿದರು.

National Festivals Celebration Committee ಛಲವಾದಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ತಾಲೂಕು ಛಲವಾದಿ ಸಮಾಜದ ಮಂಜಪ್ಪ ಹಸವಿ, ತಾಲೂಕು ಕಚೇರಿಯ ಶಿರಸ್ತೆದಾರ್ ಎಸ್. ನಿರ್ಮಲಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಇಕ್ಬಾಲ್ ಜಾತಿಗೇರ್, ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಗುರುರಾಜ್, ದಲಿತ ಮುಖಂಡ ಶ್ಯಾಮಣ್ಣ ತುಡನೀರು, ತಾಲೂಕು ಕಚೇರಿಯ ನಾಗರತ್ನಾ, ವಿಕ್ರಂ ಹೆಬ್ದಾರ್, ಬಿ.ಜೆ. ವಿನೋದ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಸುರೇಶ್ ಸ್ವಾಗತಿಸಿ, ಬಿ.ಜೆ. ವಿನೋದ್ ವಂದಿಸಿ, ಎಸ್. ರಾಘವೇಂದ್ರ ನಿರೂಪಿಸಿದರು.

All Karnataka Financiers Association ರಾಜ್ಯ ಫೈನಾನ್ಷಿಯರ್ಸ್ ಸಂಸ್ಥೆ ಕಾರ್ಯಕಾರಿ ಸಮಿತಿಗೆ ಬದರಿನಾಥ್ & ವಿಜಯ ಕುಮಾರ್ ಆಯ್ಕೆ

0

All Karnataka Financiers Association ಅಖಿಲ ಕರ್ನಾಟಕ ಫೈನಾನ್ಸಿಯರ್ ಅಸೋಸಿಯೇಷನ್‌ನ 2024ರಿಂದ 2027ರ ಕಾರ್ಯಕಾರಿ ಸಮಿತಿಗೆ ಶಿವಮೊಗ್ಗದ ಲಕ್ಷ್ಮೀ ಫೈನಾನ್ಸ್ ನ ಟಿ.ಎಸ್.ಬದರಿನಾಥ್, ಸಾವಿತ್ರಮ್ಮ ಫೈನಾನ್ಸ್ ನ ಜಿ.ವಿಜಯಕುಮಾರ್ ಅವರು ಚುನಾವಣೆಯಲ್ಲಿ ವಿಜೇತರಾಗಿದ್ದಾರೆ.

ಅಖಿಲ ಕರ್ನಾಟಕ ಫೈನಾನ್ಸಿಯರ್ ಅಸೋಸಿಯೇಷನ್‌ನ ರಾಜ್ಯಮಟ್ಟದ ಕಾರ್ಯಕಾರಿ ಸಮಿತಿಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಶಿವಮೊಗ್ಗ ನಗರದ ಲಕ್ಷ್ಮೀ ಫೈನಾನ್ಸ್ ಮಾಲೀಕರಾದ ಟಿ.ಎಸ್.ಬದರಿನಾಥ್ ಪ್ರಥಮ ಬಾರಿಗೆ ಅಧಿಕ ಮತಗಳಿಂದ ಜಯಶೀಲರಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಬದರಿನಾಥ್ ಅವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾವಿತ್ರಮ್ಮ ಫೈನಾನ್ಸ್ ಮಾಲೀಕರಾದ ಜಿ.ವಿಜಯಕುಮಾರ್ ಅವರು ಎರಡನೇ ಬಾರಿಗೆ ಅಧಿಕ ಮತಗಳಿಂದ ಜಯಶೀಲರಾಗಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಜಿ.ವಿಜಯಕುಮಾರ್ ಅವರು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾಗಿದ್ದಾರೆ.

All Karnataka Financiers Association ಜಿ.ವಿಜಯಕುಮಾರ್ ಅವರು ರೋವರ್ಸ್ ಕ್ಲಬ್ ನಿರ್ದೇಶಕರು, ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರ ಸ್ಥಾನಿಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ.

ಅಖಿಲ ಕರ್ನಾಟಕ ಫೈನಾನ್ಸಿಯರ್ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ.ಮೂರ್ತಿ, ಉಪಾಧ್ಯಕ್ಷ ಬಿ.ಟಿ.ರಾಜಶೇಖರ್, ಬಿ.ಶಿವರಾಂ, ಎಂ.ಮಾದಯ್ಯ, ನರಸಿಂಹಮೂರ್ತಿ ಮತ್ತು ನೂತನ ಕಾರ್ಯಕಾರಿ ಮಂಡಳಿ ಸದಸ್ಯರು, ನಿರ್ದೇಶಕರು, ಪದಾಧಿಕಾರಿಗಳಿಗೆ ಅಭಿನಂದಿಸಿ ಪ್ರಮಾಣಪತ್ರ ನೀಡಿ ಸನ್ಮಾನಿಸಿದರು. ಶಿವಮೊಗ್ಗ ಸಹ್ಯಾದ್ರಿ ಚಿಟ್ಸ್ ಸಂಸ್ಥೆ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Shivamogga City Corporation ಇ- ಸ್ವತ್ತು ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ- ಎನ್.ಗೋಪಿನಾಥ್.

0

Shivamogga City Corporation ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳಲ್ಲಿ ಇ-ಸ್ವತ್ತು ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಮಹಾನಗರ ಪಾಲಿಕೆ ವತಿಯಿಂದ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ನಮ್ಮ ಕನಸಿನ ಶಿವಮೊಗ್ಗದ ಅಧ್ಯಕ್ಷ ಎನ್.ಗೋಪಿನಾಥ್ ಕೋರಿದ್ದಾರೆ.

ಶಿವಮೊಗ್ಗದ ಎಲ್ಲ ವಾರ್ಡ್ ಗಳಲ್ಲಿ ಇ-ಸ್ವತ್ತು ಕುರಿತು ಅರಿವು ಮೂಡಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ನಮ್ಮ ಕನಸಿನ ಶಿವಮೊಗ್ಗ ಪರವಾಗಿ ಹಾಗೂ ನಾಗರಿಕರ ಪರವಾಗಿ ಮನವಿ ಮಾಡುತ್ತಿದ್ದು, ಜನರಿಗೆ ಜಾಗೃತಿ ಅತ್ಯಂತ ಅವಶ್ಯಕವಾಗಿದೆ.

ಕರ್ನಾಟಕ ಸರ್ಕಾರದ ಇ-ಸ್ವತ್ತು ವೇದಿಕೆ, ನಾಗರಿಕರಿಗೆ ಆಸ್ತಿ ದಾಖಲೆಗಳ ಮಾಹಿತಿ ಪಡೆಯಲು, ಆಸ್ತಿ ಮಾಲಿಕತ್ವ ಪರಿಶೀಲಿಸಲು ಮತ್ತು ಆಸ್ತಿ ಸಂಬಂಧಿತ ವಂಚನೆಗಳನ್ನು ತಪ್ಪಿಸಲು ನೆರವಾಗುವ ಉದ್ದೇಶದಿಂದ ತಯಾರಿಸಲಾಗಿದೆ. ಆದರೆ ಹೆಚ್ಚಿನ ನಾಗರಿಕರಿಗೆ ಇ-ಸ್ವತ್ತು ಮತ್ತು ಪ್ರಯೋಜನಗಳ ಬಗ್ಗೆ ತಿಳಿದಿಲ್ಲ, ಇದರಿಂದ ವೇದಿಕೆಯ ಪೂರ್ಣ ಪ್ರಯೋಜನ ಸಮಾಜಕ್ಕೆ ತಲುಪುತ್ತಿಲ್ಲ.

ಅರಿವು ಕಾರ್ಯಕ್ರಮಗಳನ್ನು ನಡೆಸುವುದರಿಂದ, ನಾಗರಿಕರಿಗೆ ಆಸ್ತಿ ದಾಖಲೆಗಳ ಪೂರೈಕೆ, ಮಾಲಿಕತ್ವ ನೋಂದಣಿ ಮತ್ತು ಸರ್ಕಾರದ ನಿಯಮಾವಳಿಗಳಿಗೆ ಅನುಗುಣವಾಗಿ ಆಸ್ತಿಗಳನ್ನು ದಾಖಲಿಸಲು ಸಹಾಯ ಆಗಲಿದೆ. ಇಂತಹ ಕಾರ್ಯಕ್ರಮಗಳು ಆಸ್ತಿ ವಂಚನೆಗಳು ಮತ್ತು ಅನಧಿಕೃತ ಭೂಮಿ ನೋಂದಣಿಗಳನ್ನು ತಡೆಗಟ್ಟುವಲ್ಲಿ ಸಹಾಯಮಾಡುತ್ತವೆ. ಇದರಿಂದ ನಮ್ಮ ನಗರದಲ್ಲಿ ಆಸ್ತಿ ವ್ಯವಹಾರಗಳ ಸುರಕ್ಷತೆ ಮತ್ತು ಪಾರದರ್ಶಕತೆ ಹೆಚ್ಚಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shivamogga City Corporation ವಿವಿಧ ವಾರ್ಡ್ ಗಳಲ್ಲಿ ಇ-ಸ್ವತ್ತು ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ನಾಗರಿಕರು ಇ-ಸ್ವತ್ತು ಬಳಕೆ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಆಸ್ತಿಗಳನ್ನು ಸರಿಯಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಮಾಡಬೇಕು. ಇ-ಸ್ವತ್ತು ಪ್ರಚಾರಕ್ಕಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಹೆಚ್ಚು ಗಮನ ಹರಿಸಬೇಕು. ಸಮೃದ್ಧ ಮತ್ತು ಸುರಕ್ಷಿತ ಆಸ್ತಿ ನಿರ್ವಹಣಾ ವ್ಯವಸ್ಥೆಯನ್ನು ಶಿವಮೊಗ್ಗದಲ್ಲಿ ನಿರ್ಮಿಸಬೇಕು ಎಂದು ನಮ್ಮ ಕನಸಿನ ಶಿವಮೊಗ್ಗದ ಅಧ್ಯಕ್ಷ ಎನ್.ಗೋಪಿನಾಥ್ ಮನವಿ ಮಾಡಿದ್ದಾರೆ.