Tuesday, March 24, 2026
Tuesday, March 24, 2026
Home Blog Page 500

Bhagana Institute ನವೆಂಬರ್ 17. ಭಾವಗಾನ ಸಂಸ್ಥೆಯ ವಾರ್ಷಿಕೋತ್ಸವ

0

Bhagana Institute ಮಥುರ ಪ್ಯಾರಡೈಸ್ ಹೋಟೆಲ್ ರಜತ ಮಹೋತ್ಸವ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಭಾವ ಗಾನ ಶಿವಮೊಗ್ಗ ಸಂಸ್ಥೆಯ 8ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದಿನಾಂಕ 17 11 2024ರ ಭಾನುವಾರ ಬೆಳಿಗ್ಗೆ 9.30 ರಿಂದ ಸಂಜೆ
7 ಗಂಟೆಯವರೆಗೆ. ಮಥುರಾ ಪ್ಯಾರಡೈಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಈ ವಾರ್ಷಿಕೋತ್ಸವದಲ್ಲಿ ನಿರಂತರ ಗಾಯನ ಹಾಗೂ ದಂಪತಿಗಳ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್ ಹಾಲಾಡಿಯವರು ಮಥುರಾ ಪ್ಯಾರಡೈಸಿನ ಮಾಲೀಕರು ಹಾಗೂ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರಾದ ಎನ್ ಗೋಪಿನಾಥ್ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ
ಜಿ ವಿಜಯಕುಮಾರ್ ಆಗಮಿಸಲಿದ್ದಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪೊಲೀಸ್
ಸಬ್ ಇನ್ಸ್ಪೆಕ್ಟರ್ ಹಾಗೂ ಸುಗಮ ಸಂಗೀತಗಾರರು ಶ್ರೀಯುತ ಭದ್ರಾವತಿ ವಾಸು ಅವರು ವಹಿಸಲಿದ್ದಾರೆ.

Bhagana Institute ಈ ಕಾರ್ಯಕ್ರಮದಲ್ಲಿ ಸಾಗರದ ಶ್ರೀಮತಿ ಮಂಜುಳಾ ಡಿ ಸುಭಾಷ್ ಚಂದ್ರ ಕುಲಕರ್ಣಿ ಯವರನ್ನು ಸನ್ಮಾನಿಸಲಾಗುವುದು.. ಕಾರ್ಯಕ್ರಮದಲ್ಲಿ ಶ್ರೀಮತಿ ವಸುಮತಿ ಬಾಪಟ್. ಸುಮಾ ಚಂದ್ರಶೇಖರ್ ಭಟ್. ಶಶಿರೇಖಾ ಹಾಗೂ ಕುಮಾರಿ
ಆದ್ಯಾ ಪಿ ರಾವ್. ಭುಜಂಗಪ್ಪ ಪ್ರಶಾಂತ್ ಹದಡಿ. ಹಾಗೂ ಭಾವಗಾನ ತಂಡದ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ

Sri Shivaganga Yoga Centre ಸಮಾಜ ಸೇವಕ ಜ್ಯೋತಿ ಪ್ರಕಾಶ್ ಅವರಿಗೆ ಜನ್ಮದಿನದ ಅಭಿನಂದನೆ

0


Sri Shivaganga Yoga Centre ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷರು ಹಾಗೂ ಕ್ಷೇಮಾಭಿವೃದ್ಧಿ ಸಂಘದ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡ ಸಮಿತಿಯ ಗೌರವಾಧ್ಯಕ್ಷರೂ. ಶ್ರೀ ಶಿವಗಂಗಾ ಯೋಗ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳು ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ನಿಸ್ವಾರ್ಥ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಸರಳ ಸಜ್ಜನಿಕೆಯ ರಾಜಕಾರಣಿ ಹಾಗೂ ದಾನಿಗಳಾದ ಶ್ರೀಯುತ ಎಸ್ ಜ್ಯೋತಿ ಪ್ರಕಾಶ್ ರವರಿಗೆ ಇಂದು ಅವರ 66ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ನಿವಾಸದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರ. ಜಿಲ್ಲಾ ಜಂಗಮ ಸಮಾಜ. ಬೇಡ ಜಂಗಮ ಸಮಾಜ. ಗಾಣಿಗ ಕ್ಷೇಮಭಿವೃದ್ಧಿ ಸಂಘ.. ಕಾರ್ಯದರ್ಶಿಗಳು ಹಾಗೂ ಹಲವಾರು ಸಂಘಟನೆಗಳಿಂದ ಅವರ ನಿವಾಸದಲ್ಲಿ ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು. Sri Shivaganga Yoga Centre ಇದೇ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಸಿವಿ ರುದ್ರಾರಾಧ್ಯ ಅವರು ಮಾತನಾಡಿ ಜ್ಯೋತಿ ಪ್ರಕಾಶ್ ಅವರ ಅಧಿಕಾರದ ಅವಧಿಯಲ್ಲಿ ಶಿವಮೊಗ್ಗ ನಗರದಲ್ಲಿ ಹಾಗೂ lಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಮಹತ್ತರ ಸಮಾಜಮುಖಿ ಸೇವಾ ಕಾರ್ಯಗಳು ನೆರವೇರಿದ್ದು ಇಂದಿಗೂ ಸ್ಮರಣೀಯವಾಗಿವೆ. ಶ್ರೀ ಶಿವಗಂಗಾ ಯೋಗ ಕೇಂದ್ರದ ಕಟ್ಟಡದ ನಿರ್ಮಾಣದಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಹಾಗೆ ಬರುವ ದಿನಗಳಲ್ಲಿ ಅವರಿಂದ ಇನ್ನು ಅನೇಕ ಸಮಾಜಮುಖಿ ಮನುಕುಲದ ಕಾರ್ಯಕ್ರಮಗಳು ನೆರವೇರಲಿ ಎಂದು ಆಶೀರ್ವದಿಸಿದರು.. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಜಂಗಮ ಸಮಾಜ ವತಿಯಿಂದ ಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿ ಹಾರೈಸಿದರು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯ ಕುಮಾರ್ ಅವರು ಮಾತನಾಡುತ್ತಾ ಎಸ್ ಎಸ್ ಜ್ಯೋತಿಪ್ರಕಾಶ್ ಅವರು ಸಮಾಜದಲ್ಲಿ ಎಲ್ಲರೂ ಬೇಕಾದ ವ್ಯಕ್ತಿಯಾಗಿ ನಮ್ಮ ಸಂಘದ ಶಕ್ತಿಯಾಗಿ ದುಡಿಯುತ್ತಿದ್ದಾರೆ ಎಲ್ಲರ ಕಷ್ಟ ಕಾರ್ಪಣ್ಯಗಳಿಗೆ ಕೂಡಲೇ ಸ್ಪಂದಿಸಿ ಸಹಾಯ ವನ್ನು ನೀಡುತ್ತಿರುವ ಜ್ಯೋತಿಪ್ರಕಾಶ್ ಅವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆಳೆಯುತ್ತಿದ್ದಾರೆ ಇವರಿಗೆ ದೇವರು ಆಯಸ್ಸು ಆರೋಗ್ಯವನ್ನು ಕರುಣಿಸಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಯೋಗ ಗುರುಗಳಾದ ಜಿಎಸ್ ಓಂಕಾರವರು ಜ್ಯೋತಿ ಪ್ರಕಾಶ್ ಅವರ ಬಾಲ್ಯದ ನೆನಪುಗಳನ್ನು ಮಾಡುತ್ತಾ ಅವರ ಸಾಧನೆಗಳನ್ನು ತಿಳಿಸಿದರು
ನಗರದ ಪ್ರಮುಖರಾದ ಜಂಗಮ ಸಮಾಜದ ಅಧ್ಯಕ್ಷರಾದ ಚಂದ್ರಯ್ಯ , ಜಿ. ಲಿಂಗರಾಜು ಎಚ್ ಎಲ್ ಸತೀಶ್, ಹಿರೇಮಠ್ ಸತೀಶ್ ಗಾಂಧಿ. ಪ್ರೇಮ್ ಕುಮಾರ್. ಎಸ್ ಟಿ ಆನಂದ್ ವಿಜಯಕುಮಾರ್, ಕಾಟನ್ ಜಗದೀಶ್, ಪರಿಸರ ನಾಗರಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Karnataka Brain Health Initiative ಮೆದುಳಿನ ಆರೋಗ್ಯ ಜೀವನ ಪೂರ್ತಿ ಸೌಭಾಗ್ಯ

0

ವಿಶೇಷ ಲೇಖನ: ಆರ್ .ರಘು. ಪ್ರಶಿಕ್ಷಣಾರ್ಥಿ.
ವಾರ್ತಾ ಇಲಾಖೆ.

Karnataka Brain Health Initiative ದೇಹದಂತೆ ಮೆದುಳಿನ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಅತಿ ಮುಖ್ಯವಾಗಿದ್ದು, ಮಾನವ ಸಂಭಾವ್ಯ ಜೀವತಾವಧಿಯನ್ನು ಹೆಚ್ಚಿಸುವ ಮೆದುಳು ಮತ್ತು ಮಾನಸಿಕ ಆರೋಗ್ಯಕ್ಕೆ ನಾವೆಲ್ಲ ಹೆಚ್ಚಿನ ಒತ್ತು ನೀಡಬೇಕಿದೆ.
ಮೆದುಳಿನ ಆರೋಗ್ಯವು ನಮ್ಮ ದಿನನಿತ್ಯದ ಜೀವವನಕ್ಕೆ ಅತ್ಯಗತ್ಯ, ಸಂವಹನ ನಡೆಸುವ ನಿರ್ಧಾರಗಳನ್ನು ತೆಗೆದುಕೊಳ್ಳುವ, ಸಮಸ್ಯೆ ಪರಿಹರಿಸುವ , ಉತ್ಪಾದಕ ಮತ್ತು ಉಪಯುಕ್ತ ಜೀವನವನ್ನು ನಡೆಸಲು ಸಹಕಾರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಮೆದುಳಿನ ಆರೋಗ್ಯವು ವ್ಯಕ್ತಿಗೆ ತಮ್ಮ ಜೀವನದ ಅವಧಿಯಲ್ಲಿ ತಮ್ಮ ಪೂರ್ಣ ಸಂಭಾವ್ಯತೆಯನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದೆ.
ಕಭಿ ಯೋಜನೆ:
ಮಾನಸಿಕ ರೋಗಿಗಳಿಗೆ, ಮಾನಸಿಕ ಅನಾರೋಗ್ಯ, ಖಿನ್ನತೆ ಮುಂತಾದ ಮಿದುಳಿನ ಕಾಯಿಲೆಗಳಿಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಕರ್ನಾಟಕ ಸರ್ಕಾರ ದೇಶದಲ್ಲಿಯೇ ಮೊದಲು ಕಭಿ (ಕರ್ನಾಟಕ ಬ್ರೇನ್ ಹೆಲ್ತ್ ಇನಿಷಿಯೇಟಿವ್) ಎಂಬ ವಿನೂತನ ಯೋಜನೆ ಜಾರಿಗೆ ತಂದಿದೆ.
ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಅಡಿಯಲ್ಲಿ ನಿಮ್ಹಾನ್ಸ್ ಸಹಯೋಗದೊಂದಿಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಮೆದುಳಿನ ಆರೋಗ್ಯ ಚಿಕಿತ್ಸಾಲಯಗಳನ್ನು ಸ್ಥಾಪನೆ ಆರೋಗ್ಯ ಇಲಾಖೆ ಮುಂದಾಗಿದೆ.
ಮೆದಳಿನ ರಕ್ಷಣೆ ಹೇಗೆ..?
ಮೆದುಳಿನ ಆರೋಗ್ಯದ ಕುರಿತು ಕಭಿ ಯೋಜನೆಯಲ್ಲಿ ಕೆಲವು ಉಪಕ್ರಮಗಳನ್ನು ತಿಳಿಸಲಾಗಿದ್ದು, ಅದರಲ್ಲಿ ದೈಹಿಕ ಚಟುವಟಿಕೆ, ಆರೋಗ್ಯಕರ ಹವ್ಯಾಸಗಳು, ಹೊಸ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದು, ಯೋಗ ಮತ್ತು ಧ್ಯಾನ, ಸಾಕಷ್ಟು ನಿದ್ರೆ, ಸಂಘಜೀವಿಯಾಗಿರುವುದು, ಈ ರೀತಿ ಅನೇಕ ಉಪಕ್ರಮಗಳನ್ನು ತಿಳಿಸಲಾಗಿದೆ.
ದೈಹಿಕ ಚಟುವಟಿಕೆ:
ಮೆದುಳಿನ ಆರೋಗ್ಯಕ್ಕೆ ದೈಹಿಕ ಚಟುವಟಿಕೆಗಳು ಅತ್ಯಂತ ಅವಶ್ಯಕವಾಗಿದೆ. ಪ್ರತಿನಿತ್ಯ ವ್ಯಾಯಾಮವನ್ನು ಮಾಡುವುದರಿಂದ ಜ್ಞಾಪಕಶಕ್ತಿ ಮತ್ತು ಅರಿವು ಸುಧಾರಣೆಯಾಗುತ್ತದೆ. ವಾಕಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್, ಈಜು, ಯೋಗ, ಮತ್ತಿತ್ತರ ಚಟುವಟಿಗಳಿಂದ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸ್ವಾಮಿ ‘ಸದೃಢ ದೇಹದಲ್ಲಿ ಸದೃಢ ಮನಸ್ಸು’ ಇರಲು ಸಾಧ್ಯ ಎಂಬ ಹೇಳಿಕೆಗೆ ಪೂರಕವಾಗಿ ವಿವೇಕಾನಂದರು ಸಹ ಯುವ ಜನತೆಗೆ ಬಲಿಷ್ಠವಾದ ದೇಹ ಬಲಿಷ್ಠವಾದ ಮೆದುಳನ್ನು ಹೊಂದುವುದು ಅತ್ಯಂತ ಅವಶ್ಯಕವಾದ್ದರಿಂದ ಪ್ರತಿದಿನ ದೈಹಿಕ ವ್ಯಾಯಾಮ ಮಾಡಬೇಕೆಂದು ಕರೆ ನೀಡಿದ್ದಾರೆ.
ಸಾಮಾಜಿಕ ಚಟುವಟಿಕೆ:
ಒಂಟಿತನ ಮೆದುಳಿನ ಆರೋಗ್ಯವನ್ನು ಹದಗೆಡಿಸುತ್ತದೆ. ಇದನ್ನು ನಾವು ಸಾಮಾನ್ಯವಾಗಿ ಅನೇಕರಲ್ಲಿ ನೊಡಿದ್ದೇವೆ. ಒಂಟಿಯಾಗಿ ಒಂದು ಕಡೆ ಕುಳಿತುಕೊಂಡು ಯೋಚನೆ ಮಾಡುವುದು, ಸದಾ ಚಿಂತಾಗ್ರಸ್ತÀರಾಗಿರುವು , ಹೀಗೆ ಮಾಡಿದರೆ ಮಾನಸಿಕವಾಗಿ ಕುಗ್ಗತ್ತಾ ಹೋಗುತ್ತಾರೆ. ಮೆದುಳು ಆರೋಗ್ಯವಾಗಿರಲು ಯಾವುದೇ ಚಿಂತೆಗಳಿಗೆ ಒಳಗಾಗದೆ, ಸಾಮಾಜಿಕ ಚುಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ಹತ್ತಾರು ಜನರೊಂದಿಗೆ ಮಾತುಕಥೆ, ಹರಟೆ, ಚೆರ್ಚೆಗಳನ್ನು ನಡೆಸುವುದರಿಂದ ಮಾನಸಿಕ ಒತ್ತಡದಿಂದ ಹೊರಬರಬಹುದು.
ಹೊಸ ಕೌಶಲ್ಯಗಳ ಅಭ್ಯಾಸ ಹಾಗೂ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಜ್ಞಾನವನ್ನು ಹೆಚ್ಚಿಸುತ್ತದೆ. ಪತ್ರಿಕೆಗಳಲ್ಲಿ ಬರುವ ಪದಜೋಡಣೆ, ಪದಬಂಧ, ಚದುರಂಗ, ಒಗಟುಗಳನ್ನು ಬಿಡುಸುವುದು ಹೀಗೆ ಮೆದುಳಿಗೆ ಕೆಲಸ ಕೊಡುವ ಹವ್ಯಾಸವನ್ನು ರೂಢಿಸಿಕೊಂಡರೆ ಮೆದುಳು ಚುರುಕಾಗುತ್ತದೆ.
Karnataka Brain Health Initiative ಕರಕುಶಲತೆಯಿಂದ ಮೆದುಳಿನ ಆರೋಗ್ಯ ವೃದ್ಧಿ:
ಕುಂಬಾರಿಕೆ, ಚಿತ್ರಕಲೆ, ಗಾಳಿಪಟ ತಯಾರಿಕೆ, ಪತ್ರಿಕೆಗಳಲ್ಲಿ ದೋಣಿ ತಯಾರಿಕೆ, ವಾದ್ಯಗಳನ್ನು ನುಡಿಸುವುದು, ಹೀಗೆ ಕಲೆ ಮತ್ತು ಕರಕುಶಲ ಕೆಲಸಗಳ ಅಭ್ಯಾಸದ ಮೂಲಕ ಮನಸ್ಸು ಉಲ್ಲಾಸದಾಯಕವಾಗಿರುತ್ತದೆ. ಕರಕುಶಲ ಕೌಶಲ್ಯಗಳಿಂದ ಜ್ಞಾಪಕಶಕ್ತಿ ಮತ್ತು ಅರಿವು ಹೆಚ್ಚುತ್ತದೆ.
ತಲೆನೋವು ತಲೆನೋವಿನ ವಿಧಗಳು:
ತಲೆ ಮತ್ತು ಕುತ್ತಿಗೆ ಭಾಗದಲ್ಲಿ ನೋವು, ಮೈಗ್ರೇನ್, ಉದ್ವೇಗದಿಂದ ಉಂಟಾಗುವ ತಲೆನೋವು, ಕ್ಲಸ್ಟರ್ ತಲೆನೋವು, ದೈನಂದಿನ ತಲೆನೋವು, ಸೈನಸೈಟಿಸ್ ಮತ್ತು ಅಧಿಕ ರಕ್ತದೊತ್ತಡದಂತಹ ಇತರೆ ಕಾರಣಗಳಿಂದ ಉಂಟಾಗುವ ತಲೆನೋವು.
ಕಾರಣ/ಪರಿಹಾರ:
ಒತ್ತಡ ಮತ್ತು ಆತಂಕ, ನಿದ್ರೆಯ ಕೊರತೆ, ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುವುದು ,ಹವಾಮಾನ ಬದಲಾವಣೆ, ಅತಿಯಾದ ಕಾಫಿ ಸೇವೆನೆ, ಮದ್ಯಪಾನ, ಧೂಮಪಾನ, ಅಧಿಕ ಕಂಪ್ಯೂಟರ್ ಬಳಕೆ, ಇನ್ನೂ ಅನೇಕ ಸಂಗತಿಯಗಳು ಕಾರಣವಾಗುತ್ತದೆ.
ತಲೆನೋವನ್ನು ತಡೆಯಲು ಆರೋಗ್ಯಕರ ಆಹಾಪದ್ಧತಿ ಮತ್ತು ಜೀವನಶೈಲಿ, ದೈಹಿಕ ಚಟುವಟಿಕೆ, ಹೆಚ್ಚು ನೀರಿನ ಸೇವನೆ, ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ, ಪ್ರಕೃತಿಯಲ್ಲಿ ಹೆಚ್ಚು ಕಾಲ ಕಳೆಯುವುದು, ಮೊಬೈಲ್ ಹಾಗೂ ಕಂಪ್ಯೂಟರ್ ಗಳ ಮಿತ ಬಳಕೆ ಇನ್ನೂ ಅನೇಕ ಚಟುವಟಿಕೆಗಳ ಮೂಲಕ ತಲೆನೋವನ್ನು ತಡೆಗಟ್ಟಬಹುದಾಗಿದೆ.
ಅಪಸ್ಮಾರ:
ಇದು ಮೆದುಳಿನ ಅಸ್ವಸ್ಥತೆ. ವ್ಯಕ್ತಿಯೊಬ್ಬರು ಎರಡು ಅಥವಾ ಹೆಚ್ಚು ಬಾರಿ ಮೂರ್ಛೆ ಹೋದರೆ ಇದನ್ನು ಅಪಸ್ಮಾರ ಎನ್ನುತ್ತೇವೆ.
ಅಪಸ್ಮಾರವನ್ನು ಗುರುತಿಸುವುದು ಹೇಗೆ?
ರೋಗಿಯ ಆರೋಗ್ಯ ಇತಿಹಾಸ, ಮೂರ್ಛೆ ರೋಗದ ಪ್ರತ್ಯಕ್ಷ ಸಾಕ್ಷಿಗಳು, ತಜ್ಞರ ಸಲಹೆ ಮೇರೆಗೆ ಗುರುತಿಸಬಹುದು.
ಅಪಸ್ಮಾರಕ್ಕೆ ಕಾರಣವೇನು?
ಪಾರ್ಶ್ವವಾಯು, ಮೆದುಳಿನ ಗಡ್ಡೆ, ಮೆದುಳಿನ ಸೋಂಕು (ಉದಾ: ನ್ಯೂರೋಸಿಸ್ಟಿಸರ್ಕೋಸಿಸ್) ತಲೆಗೆ ಪೆಟ್ಟು , ಮೆದುಳಿಗೆ ಆಮ್ಲಜನಕದ ಕಡಿಮೆ ಪೂರೈಕೆ (ಉದಾ: ಜನನದ ಸಮಯ), ಕೆಲವು ಆನುವಂಶೀಯ ಅಸ್ವಸ್ಥತೆಗಳು ಹಾಗೂ ಹಲವು ರೋಗಿಗಳಲ್ಲಿ ಅಪಸ್ಮಾರದ ನಿಖರವಾದ ಕಾರಣ ತಿಳಿದಿಲ್ಲ.
ಅಪಸ್ಮಾರದಿಂದ ಬಳಲುತ್ತಿರುವವರಿಗೆ ಹೇಗೆ ಸಹಾಯ ಮಾಡಬಹುದು?
ಇದಕ್ಕೆ ಖಂಡಿತ ಚಿಕಿತ್ಸೆ ಲಭ್ಯ, ಅಪಸ್ಮಾರ ವಿರೋಧಿ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಈ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮೂರ್ಛೆ ರೋಗವನ್ನು ನಿಯಂತ್ರಿಸಬಹುದು.
ಪಾರ್ಶ್ವವಾಯು:
ಪಾರ್ಶ್ವವಾಯು ಅಥವಾ ಮೆದುಳಿನ ಆಘಾತ- ಮೆದುಳಿನ ಭಾಗಕ್ಕೆ ಕಡಿಮೆ ಆಮ್ಲಜನಕ ಪೂರೈಕೆಯಿಂದಾಗಿ ಉಂಟಾಗುವ ಒಂದು ಸ್ಥಿತಿ.
ಪಾರ್ಶ್ವವಾಯುವಿನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಹೇಗೆ ಸಹಾಯ ಮಾಡಬಹುದು?
ಔಷಧಿಗಳು, ಜೀವನಶೈಲಿಯಲ್ಲಿ ಬದಲಾವಣೆ, ಫಿಸಿಯೋಥೆರಪಿ / ಸ್ಪೀಚ್ ಥೆರಪಿ, ಔದ್ಯೋಗಿಕ ಚಿಕಿತ್ಸೆ, ಅರಿವಿನ ಪುನರ್ವಸತಿ (ಕಾಗ್ನಿಟಿವ್ ರಿಹ್ಯಾಬಿಲಿಟೇಶನ್) ಸುತ್ತಮುತ್ತಲಿನ ಪರಿಸರದಲ್ಲಿ ಬದಲಾವಣೆ/ ಆರೈಕೆದಾರರಿಂದ ಸಹಾಯ.
ಪಾರ್ಶ್ವವಾಯುವಿಗೆ ಕಾರಣವೇನು?
ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಉದ್ವೇಗ ಮತ್ತು ಅಧಿಕ ಕೊಲೆಸ್ಟ್ರಾಲ್, ಹೃದಯ ಕಾಯಿಲೆಗಳು, ಮದ್ಯಪಾನ ಮತ್ತು ಧೂಮಪಾನದಿಂದ ಯುವಜನರೂ ಸಹ ಪಾರ್ಶ್ವವಾಯುವಿನಿಂದ ಬಳಲಬಹುದು.
ಪಾರ್ಶ್ವವಾಯುವನ್ನು ಗುರುತಿಸುವುದು ಹೇಗೆ?
ಸಾಮಾನ್ಯ ಲಕ್ಷಣಗಳು(ಃಇ ಈಂSಖಿ) :
*B-ಸಮತೋಲನ (ಸಮನ್ವಯದ ನಷ್ಟ) (ಃಚಿಟಚಿಟಿಛಿe)
*E ಇ-ಕಣ್ಣುಗಳು (ದೃಷ್ಟಿ ಬದಲಾವಣೆ) (ಇಥಿes)
*Fಈ-ಮುಖ (ಬಾಯಿ ಜೋತುಬೀಳುವುದು) (ಈಚಿಛಿe)
*A-ತೋಳುಗಳು (ಬಲಹೀನತೆ) (ಂಡಿms)
*S -ಮಾತು (ಮಾತಿನಲ್ಲಿ ತೊಂದರೆ) (Sಠಿeeಛಿh)

  • T-ಸಮಯ (ತುರ್ತು ಸೇವೆಗಳಿಗೆ ಕರೆ ಮಾಡುವುದು) (ಖಿime) ಶಿವಮೊಗ್ಗ ಜಿಲ್ಲೆಯಲ್ಲಿ ಕಭಿ ಕೇಂದ್ರದ ಮೂಲಕ ಮೆದುಳಿದ ಆರೋಗ್ಯದ ಕುರಿತು ವಿಶೇಷ ಕಾರ್ಯಕ್ರಗಳನ್ನು ನಡೆಸಲಾಗಿದ್ದು, ಜಿಲ್ಲಾ ಮೆಗ್ಗಾನ್ ಬೊಧಾನಾ ಆಸ್ಪತ್ರೆಯಲ್ಲಿ ಕಭಿ ಕ್ಲಿನಿಕ್ ಮೂಲಕ ತಲೆನೋವಿಗೆ 1457 ಜನರು ,ಎಪಿಲೆಪ್ಸಿ 500, ಪಾರ್ಶ್ವವಾಯು 356, ಬುದ್ಧಿಮಾಂದ್ಯತೆ 28, ಇತರ ನರರೋಗ ಪ್ರಕರಣಗಳು 395, ಫಿಸಿಯೋಥೆರಪಿ ಚಿಕಿತ್ಸೆ 488 ರೋಗಿಗಳಿಗೆ ಚಿಕಿತ್ಸೆ ಮಾಡಲಾಗಿದೆ. ಒಟ್ಟು ಒಳ ರೋಗಿಗಳು 399, ಒಟ್ಟು ಹೊರ ರೋಗಿಗಳು 89, ಅನುಸರಣಾ ಪ್ರಕರಣಗಳು 113, ಲೆಫ್ಟ್ ಹೆಮಿಪರೆಸಿಸ್ 01, 6745 ಕ್ಕೂ ಹಚ್ಚು ನ್ಯೂರೋ ಚೆಕ್ ಸ್ಕ್ರೀನಿಂಗ್‌ಗಳು ಮತ್ತು 2 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ
ಟೆಲಿ ಮನಸ್:
ಯಾರು ಕರೆ ಮಾಡಬಹುದು ?
ವ್ಯಥೆಗೆ ಒಳಪಟ್ಟವರು,ಪರೀಕ್ಷಾ ಒತ್ತಡಕ್ಕೊಳಗಾದವರು, ಕೌಟುಂಬಿಕ ಸಮಸ್ಯೆಗೊಳಗಾದವರು, ಆತ್ಮಹತ್ಯೆ ಆಲೋಚನೆಗಳು, ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿರುವವರು, ಸಂಬAಧಗಳ ಸಮಸ್ಯೆಯಲ್ಲಿ ಸಿಲುಕಿರುವವರು, ಜ್ಞಾಪಕಶಕ್ತಿ ತೊಂದರೆಯುಳ್ಳವರು, ಆರ್ಥಿಕ ಒತ್ತಡದಲ್ಲಿರುವವರು, ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಟೆಲಿ ಮನಸ್‌ಗೆ ಶುಲ್ಕರಹಿತ ದೂರವಾಣಿ ಸಂಖ್ಯೆ-14416 ಮೂಲಕ ಕರೆ ಮಾಡಿ ಉಪಯೋಗ ಪಡೆಯಬಹುದು.

Supreme Court ದೆಹಲಿಯಲ್ಲಿ ವಾಯುಮಾಲಿನ್ಯ. ತುರ್ತು ನಿಯಂತ್ರಣ ಕ್ರಮಕೈಗೋಳ್ಳಲು “ಸುಪ್ರೀಂ” ಸೂಚನೆ

0

Supreme Court ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿಮೀರಿರುವ ವಾಯುಮಾಲಿನ್ಯದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ವಿಷಾನಿಲದ ಗೂಡಾಗಿರುವ ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಅದು ಸ್ಪಷ್ಟವಾಗಿ ಹೇಳಿದೆ.

ದೀಪಾವಳಿ ಹೆಸರಿನಲ್ಲಿಇಷ್ಟು ದೊಡ್ಡ ಮಟ್ಟದಲ್ಲಿಪಟಾಕಿಗಳನ್ನು ಸುಟ್ಟರೆ, ಅದು ಆರೋಗ್ಯವಂತವಾಗಿ ಜೀವಿಸುವ ಜನರ ಮೂಲಭೂತ ಹಕ್ಕಿನ ಮೇಲೂ ಪರಿಣಾಮ ಬೀರುತ್ತದೆ ಎಂದಿರುವ ನ್ಯಾಯಪೀಠ, ಪಟಾಕಿ ನಿಷೇಧವನ್ನು ಜಾರಿಗೊಳಿಸಲು ವಿಫಲವಾದ ದಿಲ್ಲಿಸರಕಾರ ಹಾಗೂ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

Supreme Court ವರ್ಷವಿಡೀ ರಾಜಧಾನಿಯಲ್ಲಿಪಟಾಕಿ ಸುಡುವುದನ್ನು ನಿಷೇಧಿಸುವ ಕುರಿತು ನ.25ರ ಒಳಗಾಗಿ ನಿರ್ಧಾರ ಕೈಗೊಂಡು ವರದಿ ಸಲ್ಲಿಸುವಂತೆ ದಿಲ್ಲಿಸರಕಾರಕ್ಕೆ ಸೂಚಿಸಿದೆ.

Bangalore University ಸಾಗರದ ವ್ಯಕ್ತಿ. ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಎಂ.ಎಸ್ .ತಿಮ್ಮಪ್ಪ ನಿಧನ

0

Bangalore University ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳೂ, ಮನೋವಿಜ್ಞಾನ ಪ್ರಾಧ್ಯಾಪಕರೂ ಆಗಿ ಖ್ಯಾತರಾಗಿದ್ದ ಪ್ರೊ. ಮಂಚಾಲೆ ಸೂರ್ಯನಾರಾಯಣರಾವ್ ತಿಮ್ಮಪ್ಪನವರು ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ತಿಮ್ಮಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1941ರಲ್ಲಿ ಜನಿಸಿದರು. ಪದವಿಪೂರ್ವದವರೆಗಿನ ಶಿಕ್ಷಣವನ್ನು ಶಿವಮೊಗ್ಗದಲ್ಲಿ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದರು. ಬೆಂಗಳೂರಿನ ನಿಮ್ಹಾನ್ಸ್ ಇಂದ ಮೆದುಳು ಮತ್ತು ಮಾನವ ಸ್ವಭಾವಗಳ ಕುರಿತಾದ ಉನ್ನತ ಅಧ್ಯಯನ ವ್ಯಾಸಂಗವನ್ನು ನಡೆಸಿದರು.

ಮನೋವಿಜ್ಞಾನದ ಪ್ರಾಧ್ಯಾಪಕರಾಗಿದ್ದ ‌ ತಿಮ್ಮಪ್ಪ ಅವರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಹಾಗೂ ಎರಡು ಅವಧಿಗಳಿಗೆ ರಿಜಿಸ್ಟ್ರಾರ್‌ ಆಗಿ ಸೇವೆ ಸಲ್ಲಿಸಿದ್ದರು. ಮನೋವಿಜ್ಞಾನದ ಪ್ರಾಧ್ಯಾಪಕರಾಗಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿ, ಹಲವಾರು ಡಾಕ್ಟರೇಟ್ ಮತ್ತು ಎಂಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಅನೇಕ ವರ್ಷಗಳ ಕಾಲ ಮನೋವಿಜ್ಞಾನ ವಿಭಾಗವನ್ನು ಮುನ್ನಡೆಸಿದ್ದರು.

Bangalore University ಪ್ರೊ. ತಿಮ್ಮಪ್ಪನವರು ತಮ್ಮ ಆಕರ್ಷಕ ವ್ಯಕ್ತಿತ್ವ ಮತ್ತು ಆಪ್ತ ಸಂವಹನಕ್ಕೆ ಹೆಸರುವಾಸಿಯಾಗಿದ್ದರು. ಅವರು 2000 ವರ್ಷದಲ್ಲಿ ತಮ್ಮ ಏಕೈಕ ಮಗಳನ್ನು ಮತ್ತು 2007 ರಲ್ಲಿ ತಮ್ಮ ಪತ್ನಿಯನ್ನು ಕಳೆದುಕೊಂಡು ಏಕಾಂಗಿಯಾಗಿ ವಾಸಿಸುತ್ತಿದ್ದರಂತೆ. ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದ ಅವರು ಸಾರ್ವಜನಿಕ ಚರ್ಚೆಗಳಲ್ಲಿಯೂ ಸಕ್ರಿಯರಾಗಿರುತ್ತಿದ್ದರು.

ಅಷ್ಟೊಂದು ಎತ್ತರದ ಹಾದಿ ಕ್ರಮಿಸಿದ್ದರೂ, ಆತ್ಮೀಯ ಸಹೃದಯಿಯಾಗಿದ್ದ ಅವರು ಸ್ನೇಹಿಯಾಗಿ ನಮ್ಮಂತಹವರ ಬರಹಗಳನ್ನೂ ಓದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ಅಗಲಿದ ಚೇತನಕ್ಕೆ ನಮನ.

ಲೇಖನ ಸೌಜನ್ಯ: ತಿರು ಶ್ರೀಧರ

Indian Department of Posts ಪಿಂಚಣಿದಾರರಿಗೆ ಅಂಚೆ ಇಲಾಖೆಯಿಂದ ಮನೆಬಾಗಿಲಿನಲ್ಲೇ ಜೀವನ ಪ್ರಮಾಣ ಪತ್ರ ಸಲ್ಲಿಸುವ ಸೌಲಭ್ಯ

0

Indian Department of Posts ಭಾರತೀಯ ಅಂಚೆ ಇಲಾಖೆಯು ರಾಜ್ಯ ಸರ್ಕಾರದ ಖಜಾನೆಯೊಂದಿಗೆ ಕರ್ನಾಟಕ ರಾಜ್ಯ ಸರ್ಕಾರದ ಪಿಂಚಣಿದಾರರಿಗೆ/ ಕುಟುಂಬ ಪಿಂಚಣಿದಾರರು ವೈಯಕ್ತಿಕವಾಗಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಸಮಯದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ತಪ್ಪಿಸಲು ಭಾರತೀಯ ಅಂಚೆ ಇಲಾಖೆಯು “ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್”, ಪಿಂಚಣಿದಾರರ ಮನೆಬಾಗಿಲಿನಲ್ಲಿ ಡಿಜಿಟಲ್ ಲೈಫ್ ಪ್ರಮಾಣ ಪತ್ರವನ್ನು ಸಲ್ಲಿಸುವ ವ್ಯವಸ್ಥೆಯನ್ನು ಮಾಡಿದೆ.

ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಕೆಲವೇ ನಿಮಿಷಗಳಲ್ಲಿ ಪೋಸ್ಟ್ಮನ್ ಮೂಲಕ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಓ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬಯೋಮೆಟ್ರಿಕ್ (ಬೆರಳಚ್ಚು) ವೆರಿಫೈ ಮಾಡಿ ಸಲ್ಲಿಸಬಹುದಾಗಿದೆ.

Indian Department of Posts ತಮ್ಮಲ್ಲಿರುವ ಮೊಬೈಲ್ ಮುಖಾಂತರ ಜೀವನ ಪ್ರಮಾಣ ಪತ್ರ ಮಾಡಿ ಕೊಡುವ ವ್ಯವಸ್ಥೆಯಲ್ಲಿ ಯಾವುದೆ ಕಾಗದ ಪತ್ರವನ್ನು ಕೊಡಬೇಕಾಗಿಲ್ಲ. ಡಿಜಿಟಲ್ ಜೀವನ ಪ್ರಮಾಣ ಪತ್ರವು ಪಿಂಚಣಿ ಪಡೆಯುವ ಕಚೇರಿಗೆ ತಂತ್ರಾಂಶ ಮೂಲಕ ರವಾನೆಯಾಗುವುದು ಹಾಗೂ ಮೊಬೈಲ್ ಗೆ ಇದರ ವಿವರ ಸಂದೇಶದ ಮೂಲಕ ಬರುತ್ತದೆ.
ಕರ್ನಾಟಕ ಸರ್ಕಾರದ ಪಿಂಚಣಿದಾರರು/ಕುಟುಂಬ ಪಿಂಚಣಿದಾರರು ತಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ ಪೋಸ್ಟ್ಮನ್ ಮೂಲಕ ಕೇವಲ ರೂ. 70/- (ಜಿಎಸ್‌ಟಿ ಸೇರಿದಂತೆ) ಶುಲ್ಕನೀಡಿ ಈ ಸೌಲಭ್ಯವನ್ನು ಪಡೆದು ತಮ್ಮ ಡಿಜಿಟಲ್ ಲೈಪ್ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಶಿವಮೊಗ್ಗ ಅಂಚೆ ಇಲಾಖಾ ಕಚೇರಿಯ ಸೂಪರಿಟೆಂಡೆಂಟ್ ತಿಳಿಸಿದ್ದಾರೆ .

ಮಾಹಿತಿಗಾಗಿ ಹತ್ತಿರದ ವಿಭಾಗೀಯ ಕಚೇರಿಯನ್ನು ಅಥವಾ ಇಮೇಲ್ doshimoga.ka@indiapost.gov.in ಮೂಲಕ ಸಂಪರ್ಕಿಸಬಹುದಾಗಿದೆ.

Ministry of Youth Affairs and Sports ನವೆಂಬರ್ 16. ಶಿವಮೊಗ್ಗ ಜಿಲ್ಲಾಯುವಜನೋತ್ಸವ-2024

0

Ministry of Youth Affairs and Sports, ಭಾರತ ಸರ್ಕಾರ, ಯುವ ವ್ಯವಹಾರ ಮತ್ತುಕ್ರೀಡಾ ಸಚಿವಾಲಯ,ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಶಿವಮೊಗ್ಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಶಿವಮೊಗ್ಗ, ನೆಹರು ಯುವ ಕೇಂದ್ರ ಶಿವಮೊಗ್ಗ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿಶ್ವವಿದ್ಯಾಲಯ,ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ-2024 ಪಂಚಪ್ರಾಣ-ಭಾರತ@2047 ಕಾರ್ಯಕ್ರಮವನ್ನು ಕುವೆಂಪು ರಂಗಮಂದಿರ, ಶಿವಮೊಗ್ಗದಲ್ಲಿ ದಿನಾಂಕ 16.11.2024 ರಂದು ನಡೆಸಲಾಗುವುದು.

ಈ ಕಾರ್ಯಕ್ರಮದಲ್ಲಿ ಯುವಜನತೆಗೆ ವಿವಿಧ ಪ್ರತಿಭೆಗಳ ಅನಾವರಣ ಹಾಗೂ ಸ್ಪರ್ಧಾಕಾರ್ಯಕ್ರಮವನ್ನು ನಡೆಸಲಾಗುವುದು. ಕಾರ್ಯಕ್ರಮವು ರಾಜ್ಯ ಹಾಗೂ ರಾಷ್ಟ್ರ ಮಟ್ಟದವರೆಗೂ ಇರುವುದು. ಸ್ಥಳೀಯ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವಉದ್ದೇಶದಿಂದ ಹಾಗೂ ಮನೋರಂಜನೆ ಅಲ್ಲದೇ ಸಾಮಾಜಿಕ ಸಂದೇಶವನ್ನು ಯುವಜನರಿಗೆ ಮುಟ್ಟಿಸುವ ಕೆಲಸವು ಈ ಸ್ಪರ್ಧಾ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಈ ಕಾರ್ಯಕ್ರಮದ ಸ್ಟರ್ಧೆಯಲ್ಲಿ ಭಾಗವಹಿಸುವವರ ವಯೋಮಿತಿ15ರಿಂದ29 ವರ್ಷದೊಳಗಿರಬೇಕು(01.01.2025)ಶಿವಮೊಗ್ಗ ಜಿಲ್ಲೆಯವರಿಗ ಮಾತ್ರ ಅವಕಾಶ. ಇದರಲ್ಲಿ ವಿಜೇತರಾದ ತಂಡ/ಅಭ್ಯರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ಹಾಗೂ ಆಕರ್ಷಕ ಪಾರಿತೋಷಕ/ಪ್ರಶಸ್ತಿ ಪತ್ರ ನೀಡಲಾಗುವುದು.

ಸ್ಪರ್ಧೆಗಳ ವಿವರ ಮತ್ತು ನಿಯಮಗಳು:ಯುವಕಲಾವಿದ ಸ್ಪರ್ಧೆ(ಚಿತ್ರಕಲೆ)ಸಮಯಾವಕಾಶ 90 ನಿಮಿಷ ಚಿತ್ರಬಿಡಿಸುವ ಪರಿಕರಗಳನ್ನು ಸ್ಪರ್ಧಿಗಳೆ ತರತಕ್ಕದ್ದು. ಡ್ರಾಯಿಂಗ್ ಶೀಟ್ ಮಾತ್ರ ನೀಡಲಾಗುವುದು ಪ್ರಥಮ-2500/-ದ್ವಿತೀಯ-1500/-ತೃತೀಯ-1000/-

ಪರಿಕಲ್ಪನೆ: ಪಂಚಪ್ರಾಣ-ಭಾರತ@2047.
ಯುವ ಬರಹಗಾರಸ್ಪರ್ಧೆ (ಕವಿತೆ) :ಸಮಯಾವಕಾಶ 60 ನಿಮಿಷ (1000 ಪದಗಳಿಗೆ ಮೀರದಂತೆಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಬರೆಯಬಹುದು.ಪ್ರಥಮ-2500/-, ದ್ವಿತೀಯ-1500/-, ತೃತೀಯ-1000/-ಪರಿಕಲ್ಪನೆ: ಪಂಚಪ್ರಾಣ-ಭಾರತ@2047.

ಯುವ ಬರಹಗಾರ ಸ್ಪರ್ಧೆ (ಕಥೆ):ಸಮಯಾವಕಾಶ60 ನಿಮಿಷ (1000 ಪದಗಳಿಗೆ ಮೀರದಂತೆಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಬರೆಯಬಹುದು.ಪ್ರಥಮ-2500/-, ದ್ವಿತೀಯ-1500/-, ತೃತೀಯ-1000/-ಪರಿಕಲ್ಪನೆ: ಪಂಚಪ್ರಾಣ-ಭಾರತ@2047.

ಭಾಷಣ ಸ್ಪರ್ಧೆ : ಸಮಯಾವಕಾಶ3 ನಿಮಿಷ, ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಮಾತನಾಡಲುಅವಕಾಶವಿರುತ್ತದೆ. (ಕನ್ನಡ ಭಾಷೆರಾಜ್ಯ ಮಟ್ಟದವರೆಗೆ ಮಾತ್ರ ಸೀಮಿತವಾಗಿದೆ.) ಪ್ರಥಮ-5000/-ದ್ವಿತೀಯ-2500/-ತೃತೀಯ-1500

ಪರಿಕಲ್ಪನೆ: ಪಂಚಪ್ರಾಣ-ಭಾರತ@2047.

ಸಾಂಸ್ಕ್ರೃತಿಕ ಉತ್ಸವ–(ಜನಪದ ನೃತ್ಯತಂಡ ಮತ್ತು ವೈಯಕ್ತಿಕ) :- ಭಾಗವಹಿಸುವವರ ಸಂಖ್ಯೆತAಡದಲ್ಲಿ10 ಜನ, ವೈಯಕ್ತಿಕ05 ಜನಇರಬೇಕು. ಸಮಯಾವಕಾಶ15 ನಿಮಿಷ. ತಂಡದ ಬಹುಮಾನ ಪ್ರಥಮ7000/ ದ್ವಿತೀಯ-5000/-ತೃತೀಯ-3000/- ಮತ್ತು ವೈಯಕ್ತಿಕ ಬಹುಮಾನ ಪ್ರಥಮ-3000/-ದ್ವಿತೀಯ-2000/-, ತೃತೀಯ-1000/- ನೀಡಲಾಗುವುದು. ನೃತ್ಯವುಜನಪದ ಪ್ರಕಾರ ಮತ್ತುಕರ್ನಾಟಕ/ಭಾರತೀಯ ಶೈಲಿಯದ್ದಾಗಿರಬೇಕು.

Ministry of Youth Affairs and Sports, ಸಾಂಸ್ಕೃತಿಕ ಉತ್ಸವ–(ಜನಪದಗೀತೆತಂಡ ಮತ್ತು ವೈಯಕ್ತಿಕ) :- ಭಾಗವಹಿಸುವವರ ಸಂಖ್ಯೆ ತಂಡದಲ್ಲಿ10 ಜನ, ವೈಯಕ್ತಿಕ 05 ಜನ ಇರಬೇಕು. ಸಮಯಾವಕಾಶ07 ನಿಮಿಷ. ತಂಡದ ಬಹುಮಾನ ಪ್ರಥಮ-5000/-ದ್ವಿತೀಯ- 3000/- ತೃತೀಯ-2000/- ಮತ್ತು ವೈಯಕ್ತಿಕ ಬಹುಮಾನ ಪ್ರಥಮ-3000/-ದ್ವಿತೀಯ-2000/-, ತೃತೀಯ-1000/-ನೀಡಲಾಗುವುದು. ಹಲವು ಜನಪದ ಹಾಡುಗಳ ಮಿಶ್ರಿತ ಹಾಡುಗಾರಿಕೆಗೆ ಅವಕಾಶವಿಲ್ಲ. ಚಲನಚಿತ್ರ ಗೀತೆಗಳನ್ನು ಹಾಡಲು ಅವಕಾಶವಿರುವುದಿಲ್ಲ.

ಒಬ್ಬರಿಗೆ ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. (ಜನಪದಗೀತೆ & ನೃತ್ಯ ಹೊರತು ಪಡಿಸಿ) ಸ್ಪರ್ಧಾ ಕಾರ್ಯಕ್ರಮದಲ್ಲಿ ಸಂಘಟಕರು ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ.

ಭಾಗವಹಿಸುವ ಸ್ಪರ್ಧಿಗಳಿಗೆ ಪ್ರಯಾಣ ಭತ್ಯೆ ಹಾಗೂ ಊಟದ ವ್ಯವಸ್ಥೆ ಇರುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು MYBHARAT ಪೋರ್ಟಲ್ (mybharat.gov.in) ನಲ್ಲಿರಿಜಿಸ್ಟ್ರೆಷನ್ ಮಾಡಿಕೊಳ್ಳತಕ್ಕದ್ದು.
ದಿನಾಂಕ 16.11.2024ರಂದು ಬೆಳಿಗ್ಗೆ 10 ಗಂಟೆಯ ಒಳಗೆ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ 08182-220883, 9961332968, 9900280416 ಸಂಪರ್ಕಿಸಬಹುದೆಂದು ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ತಿಳಿಸಿದ್ದಾರೆ.

ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಣಿ ಮಾಡಕೊಳ್ಳತಕ್ಕದ್ದು.

Rotary Club Shimoga Central ಕನ್ನಡ ಕೇವಲ ನುಡಿಯಲ್ಲ.ನಮ್ಮ ಅಂತರಂಗದ ಮಾತು- ಡಾ.ಎಚ್.ಕೆ.ಹಸೀನಾ

0

Rotary Club Shimoga Central ಕನ್ನಡ ರಾಜ್ಯೋತ್ಸವ ಆಚರಣೆಯು ನವೆಂಬರ್‌ಗೆ ಸೀಮಿತ ಆಗಬಾರದು. ಎಲ್ಲ ಸಂದರ್ಭಗಳಲ್ಲಿ ಕನ್ನಡ ಭಾಷೆ ಬಳಸಬೇಕು. ಕನ್ನಡ ನಮ್ಮ ನಿತ್ಯೋತ್ಸವ ಆಗಬೇಕು ಎಂದು ಪ್ರೊ. ಡಾ. ಹಸೀನಾ ಎಚ್.ಕೆ. ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕ ಸಂಸ್ಕೃತಿಯ ನಾಡು. ಕನ್ನಡ ಕೇವಲ ನುಡಿಯಲ್ಲ, ನಮ್ಮ ಅಂತರಂಗದ ಮಾತು ಎಂದು ತಿಳಿಸಿದರು.

ರೋಟರಿ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಬಹಳ ವಿಶೇಷ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದರ ಜತೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಜಿ.ಕಿರಣ್ ಕುಮಾರ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಪ್ರತಿಯೊಬ್ಬರಿಗೂ ವಿಶೇಷ ಹಬ್ಬ. ಇದು ಕನ್ನಡ ನಾಡಿನ ಎಲ್ಲರೂ ಸೇರಿ ಆಚರಿಸುವ ಹೆಮ್ಮೆಯ ಹಬ್ಬ ಎಂದು ಹೇಳಿದರು.

Rotary Club Shimoga Central ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್.ಎಸ್. ಮಾತನಾಡಿ, ಈವರೆಗೂ ನಮ್ಮ ಸಂಘಟನೆಗಳು ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಇತರರನ್ನು ನಾವು ಗೌರವಿಸುತ್ತಿದ್ದೆವು. ಆದರೆ ರೋಟರಿ ಸಂಸ್ಥೆಯು ವಿಶೇಷವಾಗಿ ನಮ್ಮನ್ನು ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಗುರುತಿಸಿರುವುದು ನಮಗೆ ಬಹಳ ತಂದಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಭಾಷೆಯನ್ನು ಹೆಮ್ಮೆಯಿಂದ ಆಚರಿಸೋಣ. ಕನ್ನಡ ನಾಡು ಬೆಳೆಸೋಣ, ಭಾಷೆ ಉಳಿಸೋಣ, ನಾವು ಬೆಳೆಯೋಣ ಎಂದು ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಮಹಿಳಾ ಜಿಲ್ಲಾಧ್ಯಕ್ಷೆ ಕವಿತಾ ಮಾತನಾಡಿ, ಈ ಸಲ ನಾವು ರೋಟರಿ ಸಂಸ್ಥೆಯಲ್ಲಿ ರಾಜ್ಯೋತ್ಸವ ಆಚರಿಸುತ್ತಿರುವುದು ವಿಶೇಷ. ರಾಜ್ಯೋತ್ಸವ ಅಂದರೆ ಸಂಭ್ರಮ ಸಡಗರ ಕರುನಾಡಿನ ಹೆಮ್ಮೆಯ ಹಬ್ಬ ಎಂದರು.

ಪ್ರೊ. ಡಾ. ಹಸೀನಾ ಎಚ್.ಕೆ., ಕಿರಣ್ ಕುಮಾರ್.ಎಚ್.ಎಸ್. ಮತ್ತು ಕವಿತಾ ಅವರನ್ನು ಸಂಸ್ಥೆಯಿಂದ ಗೌರವಿಸಲಾಯಿತು.
ರೋಟರಿ ಸಂಸ್ಥೆಯ ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ ರೋಟರಿ ಕ್ಲಬ್, ಸಂಸ್ಥೆಯ ಕಾರ್ಯ ವೈಖರಿಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆ ಕಾರ್ಯದರ್ಶಿ ಈಶ್ವರ್, ಚೂಡಾಮಣಿ ಪವಾರ್, ಧರ್ಮೇಂದ್ರ ಸಿಂಗ್, ಬಸವರಾಜ್, ಜಯಶೀಲ ಶೆಟ್ಟಿ ಹಾಗೂ ಅನ್ ಅಧ್ಯಕ್ಷೆ ಗೀತಾ ಜಗದೀಶ್ ಹಾಗೂ ಶುಭಾ ಚಿದಾನಂದ್, ಕ್ಲಬ್‌ನ ಎಲ್ಲ ಸದಸ್ಯರು ಭಾಗವಹಿಸಿದ್ದರು.

Jagadguru Shri Vidhusekhara Bharati ಶೃಂಗೇರಿ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳಿಂದ ಸನಾತನ ಧರ್ಮಜಾಗೃತಿ ಅಭಿಯಾನ ಯಶಸ್ವಿ

0

Jagadguru Shri Vidhusekhara Bharati 17 ದಿನಗಳ ಚೆನ್ನೈನ ವಿಜಯ ಯಾತ್ರೆ ಮುಗಿಸಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನ ಮುಂದಿನ ಊರಿಗೆ ಯಾತ್ರೆ ಮುಂದುವರಿಸಿದ್ದಾರೆ.

ಯಾತ್ರೆಯ ಕಡೆಯ ಎರಡು ದಿನವೂ ಹಲವು ಉಪಯುಕ್ತ ಕಾರ್ಯಕ್ರಮಗಳು ನಡೆದವು.ಐದು ವರ್ಷಗಳ ಕೆಳಗೆ ಇಲ್ಲಿನ ಶ್ರೀ ವಿದ್ಯಾತೀರ್ಥ ಫೌಂಡೇಶನ್ನಿಗೆ ಸನ್ನಿಧಾನ ಒಂದು ಜವಾಬ್ದಾರಿ ವಹಿಸಿದ್ದರು. ಶಾಲಾ ಮಟ್ಟದಲ್ಲೇ ಸನಾತನ ಧರ್ಮ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಬೇಕು ಎಂದು ಅದರಂತೆ ವಿವಿದ ಸ್ಪರ್ಧೆ ಸಂಸ್ಥೆ ನಡೆಸುತ್ತಾ ಬಂದಿದೆ.

ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದವರನ್ನು ಶೃಂಗೇರಿಗೇ ಕರೆತಂದು ಗುರುದರ್ಶನ ಮಾಡಿಸಲಾಗುತ್ತದೆ.ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಶಾಲಾ ವಿದ್ಯಾರ್ಥಿಗಳ ಸಮಾವೇಶ ನಡೆಸಿ ಜಗದ್ಗುರುಗಳಿಂದ ಆಶೀರ್ವಾದ ಕೊಡಿಸಲಾಯಿತು.

2500 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಧರ್ಮ ಮತ್ತು ಪರಮಾತ್ಮನ ಕುರಿತು ಈ ವಿದ್ಯಾರ್ಥಿಗಳಿಗೆ ಗುರುಗಳು ಸರಳವಾಗಿ ಉಪನ್ಯಾಸ ನೀಡಿದರು. ಶೃಂಗೇರಿಯ ಸೂತ್ತಲಿನ ವಿದ್ಯಾರ್ಥಿಗಳಿಗೂ ಇಂತದೇ ಕಾರ್ಯಕ್ರಮ ನಡೆಯುತ್ತಿದೆ.ಮೈಸೂರು ಸೇರಿದಂತೆ ಅನೇಕ ಕಡೆ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡುವ ಕಾರ್ಯಕ್ರಮ ಹಲವು ವರ್ಷಗಳಿಂದ ನಡೆಯುತ್ತಿದೆ. ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ 108 ನೇ ವರ್ಷಾಚರಣೆಯ ಸಂದರ್ಭದಲ್ಲಿ ವಿದ್ಯಾತೀರ್ಥ ಫೌಂಡೇಶನ್ನಿಗೆ ಇನ್ನೂ ಮಹತ್ವದ ಜವಾಬ್ದಾರಿ ನೀಡಲಾಗುವುದು ಎಂದು ಶ್ರೀಗಳು ತಿಳಿಸಿ ಅವರುಗಳನ್ನು ಆಶೀರ್ವಾದಿಸಿದರು.

Jagadguru Shri Vidhusekhara Bharati ಮೀನಾಕ್ಷಿ ಕಾಲೇಜಿನಲ್ಲಿ ಜಗದ್ಗುರುಗಳಿಗೆ ಗುರುವಂದನ ಕಾರ್ಯಕ್ರಮ ನಡೆಯಿತು. ಇಲ್ಲಿ 1986 ರಲ್ಲಿ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಶ್ರೀ ಶಾರದಮ್ಮ, ಮಹಾಗಣಪತಿ ಮತ್ತು ಶ್ರೀ ವೆಂಕಟಾಚಲಪತಿ ದೇವರ ಕುಂಬಾಬಿಶೇಕ ನೆರವೇರಿಸಿದ್ದರು. 2012 ರಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನ ಮತ್ತೊಮ್ಮೆ ಕುಂಬಾಬಿಶೇಕ ನೆರವೇರಿಸಿದ್ದರು. ಶ್ರೀ ವಿದ್ಯಾತೀರ್ಥರು ಕುಂಬಾಬಿಶೇಕ ನಡೆಸಿದ 38 ವರ್ಷಗಳ ನಂತರ ಅದೇ ದಿನದಂದು ಸನ್ನಿಧಾನ ಕುಂಬಾಬಿಶೇಕ ನೆರವೇರಿಸಿದರು.

ಈ ವಾಸ್ತವ್ಯದ ವಿವರವನ್ನು ಆಡಳಿತಾಧಿಕಾರಿ ಶ್ರೀ ಮುರುಳಿ ತಮ್ಮ ವರದಿಯಲ್ಲಿ ಗುರುವಂದನಾ ಸಮಾರಂಭದಲ್ಲಿ ತಿಳಿಸಿದರು.ದಿನವೂ ಸಹಸ್ರಾರು ಜನ ಗುರುದರ್ಶನ ಮಾಡಿದರು.407 ವೇದ ಪಂಡಿತರನ್ನು ಪುರಸ್ಕರಿಸಲಾಯಿತು. ವಿವಿದ ಕಾರ್ಯಕ್ರಮ ನೇರ ಪ್ರಸಾರವನ್ನು 16 ಲಕ್ಷ ಭಕ್ತರು ವೀಕ್ಷಿಸಿದರು. ಶ್ರೀಗಳು 40 ಕ್ಕಿಂತ ಹೆಚ್ಚು ಅನುಗ್ರಹ ಭಾಷಣ ಮಾಡಿದರು.ಚಂದ್ರಮೌಳೇಶ್ವರ ಪೂಜೆ ಸೇರಿದಂತೆ 30 ಪೂಜೆ ನೆರವೇರಿಸಿದರು. ಹಲವು ಕುಂಬಾಬಿಶೇಕ, ಸಹಸ್ರ ಚಂಡೀಯಾಗದಂತ ಧಾರ್ಮಿಕ ಕಾರ್ಯಕ್ರಮ ಈ ಸಂದರ್ಭ ನಡೆಯಿತು.ರಾಜ್ಯಪಾಲರುಗಳು,ಮಂತ್ರಿಗಳು,ಉಚ್ಚ ನ್ಯಾಯಾಲಯದ ನ್ಯಾಯಾದೀಶರು,ಅಧಿಕಾರಿಗಳು, ಉದ್ಯಮಿಗಳು,ಶಿಕ್ಷಣ ತಜ್ಞರು,ಮಠಾಧೀಶರುಗಳು, ಹೀಗೆ ಗಣ್ಯರುಗಳನೇಕರು ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಹಲವು ದೇವಸ್ಥಾನಗಳಿಗೆ ಶ್ರೀಗಳು ಬೇಟಿ ನೀಡಿದರು. ಚೆನ್ನೈನಲ್ಲಿ ಶ್ರೀಗಳ ವಾಸ್ತವ್ಯದ ದಿನಗಳು ಶೃಂಗೇರಿಯ ಭಕ್ತರ ಪಾಲಿಗೆ ಅಪೂರ್ವ ಕ್ಷಣಗಳಾಗಿತ್ತು. ಹಲವು ತಲೆಮಾರಿನಿಂದ ಶೃಂಗೇರಿಯ ಗುರುಗಳಲ್ಲಿ ಅಚಲ ಭಕ್ತಿ ಇಟ್ಟು ನಡೆದುಕೊಂಡು ಬಂದ ಭಕ್ತರು ಅದೇ ಶ್ರದ್ಧಾಭಕ್ತಿಯಿಂದ ಗುರುಸೇವೆ ಮಾಡಿ ಕೃತಾರ್ಥರಾದರು. ಶೃಂಗೇರಿಯ ನೂತನ ಆಡಳಿತಾಧಿಕಾರಿ ಶ್ರೀ ಮುರಳಿ ಇನ್ನೂ ಹೊಸಬರು. ವಿಜಯ ಯಾತ್ರೆ ಹೇಗೆ ಸಂಯೋಜಿಸುತ್ತಾರೋ ಎಂಬ ಶಂಕೆಗೆ ಆಸ್ಪದವೇ ಇಲ್ಲದೇ ಪೀಠದ ಘನತೆ ಎತ್ತಿ ಹಿಡಿಯುವ ರೀತಿ ಕಾರ್ಯಕ್ರಮ ಸಂಯೋಜಿಸಿದರು. ಎಲ್ಲೂ ತಮ್ಮ ಇರುವನ್ನು ತೋರಿಸಿಕೊಳ್ಳದೇ ವಿನೀತರಾಗಿ ನೇಫತ್ಯದಲ್ಲಿದ್ದೇ ಅವರು ಕಾರ್ಯನಿರತರಾಗಿದ್ದು ಭಕ್ತರ ಗಮನ ಸೆಳೆಯಿತು.
ಶೃಂಗೇರಿಯಲ್ಲಿ ಸಹ ಎಂದಿನ ಚಟುವಟಿಕೆ ಯಥಾ ನಡೆಯುತ್ತಿದೆ. ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನ ಶೃಂಗೇರಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಶಿಷ್ಯರ ಅನುಪಸ್ಥಿತಿಯಲ್ಲಿ ಪಾಲ್ಗೊಂಡು ಆಶೀರ್ವಾದಿಸುತ್ತಿದ್ದಾರೆ. ಈಗ ನಡೆಯುತ್ತಿರುವ ತುಂಗಾರತಿ ಎಂದಿನ ವೈಭವದಿಂದ ನಡೆಯುತ್ತಿದೆ.ಅದೇ ಶೃಂಗೇರಿಯ ವಿಶೇಷ.

Mathura Paradise Hotel ಮಲೆನಾಡು ಇತಿಹಾಸ ಸಂಶೋಧನೆ & ಅಧ್ಯಯನ ವೇದಿಕೆ ಅಧ್ಯಕ್ಷರಾಗಿ ಡಾ.ಎಸ್.ಜಿ.ಸಾಮಕ್ ಆಯ್ಕೆ

0

Mathura Paradise Hotel ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ನನ್ನ ಕನಸಿನ ಶಿವಮೊಗ್ಗ ಸಂಸ್ಥೆಯ ಅಂಗ ಸಂಸ್ಥೆಯಾದ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ ಭಾನುವಾರ ಅಸ್ತಿತ್ವಕ್ಕೆ ಬಂದಿದೆ.

ಪಟ್ಟಣದ ಮಥುರ ಪ್ಯಾರಡೈಸ್ ಹೋಟೆಲ್ ಸಭಾಂಗಣದಲ್ಲಿ ನಡೆದ ಪ್ರಥಮ ಸಭೆಯಲ್ಲಿ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು

ವೇದಿಕೆಯ ನೂತನ ಅಧ್ಯಕ್ಷರಾಗಿ ಇತಿಹಾಸ ಸಂಶೋಧಕ ಡಾ. ಎಸ್. ಜಿ. ಸಾಮಕ್, ಉಪಾಧ್ಯಕ್ಷರಾಗಿ ಡಾ. ಜಿ.ವಿ.‌ಕಲ್ಲಾಪುರ್, ಕಾರ್ಯದರ್ಶಿಯಾಗಿ ದಿಲೀಪ್ ನಾಡಿಗ್, ಖಜಾಂಚಿಯಾಗಿ ಶ್ರೀಕಂಠ ಹೆಚ್.‌ಆರ್, ನಿರ್ದೇಶಕರಾಗಿ ಡಾ. ಕೆ.ಪಿ. ಸುನೀಲ್, ನಗರ ಸುಧೀಂದ್ರ ಭಂಡಾರ್ಕರ್, ರಮೇಶ್ ಹಿರೇಜಂಬೂರು, ನಾಗರಾಜ್ ಎಮ್.ಪಿ. ಕಲ್ಯಾಣ್ ಕುಮಾರ್ ಆಯ್ಕೆ ಆಗಿದ್ದಾರೆ. ಇತಿಹಾಸ ಆಸಕ್ತರು ಪ್ರತಿಷ್ಟಾನದ ಸದಸ್ಯತ್ವಕ್ಕಾಗಿ ವೇದಿಕೆಯ ಕಾರ್ಯದರ್ಶಿ ಹಾಗೂ ನಿರ್ದೇಶಕರನ್ನು ಸಂಪರ್ಕಿಸ ಬಹುದು. ಸದಸ್ಯತ್ವ ಶುಲ್ಕ
ವಾರ್ಷಿಕ ರೂ 100 ಹಾಗು
ಆಜೀವ ಸದಸ್ಯತ್ವಕ್ಕಾಗಿ ಶುಲ್ಕ ರೂ ಒಂದು ಸಾವಿರ ರೂಪಾಯಿ ನಿಗದಿ ಪಡಿಸಲಾಗಿದೆ.

Mathura Paradise Hotel ಆಸಕ್ತರು ಸದಸ್ಯತ್ವಕ್ಕಾಗಿ ಈ ಕೆಳಕಂಡ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ವೇದಿಕೆಯ ಕಾರ್ಯದರ್ಶಿ ದಿಲೀಪ್ ನಾಡಿಗ್ ಕೋರಿದ್ದಾರೆ.

9448438038
6361124316
6364211088
9483016851
8088685745