Good Luck Care Center ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಹೆಚ್ಚಿಸುವ ಹಾಗೂ ಸೃಜನಶೀಲತೆ ಉಂಟುಮಾಡುವ ಕಾರ್ಯಕ್ರಮಗಳು ಅವಶ್ಯಕ ಎಂದು ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ಯು.ರವೀಂದ್ರನಾಥ ಐತಾಳ್ ಹೇಳಿದರು.
ವಿಶ್ವ ವಿಜ್ಞಾನ ದಿನದ ಪ್ರಯುಕ್ತ ಗೋಪಾಳದ ಇಂಡೋಕಿಡ್ಸ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಆಯೋಜಿಸಿದ್ದ ಇನ್ನೋವೇಟಿವ್ ಎಕ್ಸಿಬಿಷನ್ ಆಫ್ ಸೈನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿ, ವಿಜ್ಞಾನ ನಮ್ಮ ಪ್ರಗತಿಯ ಪ್ರತಿಯೊಂದು ಹಂತದಲ್ಲಿದೆ. ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆ, ತಂತ್ರಜ್ಞಾನ ಹೆಚ್ಚಾಗಬೇಕು. ಜ್ಞಾನ ಹೆಚ್ಚಿಸಿಕೊಳ್ಳುವುದರಿಂದ ಅಭಿವೃದ್ಧಿ ಹೊಂದಲು ಸಾಧ್ಯ. ಮಕ್ಕಳ ಪ್ರತಿಭೆ ಕೇವಲ ಮನೆಗೆ, ಶಾಲೆಗೆ, ಶಿವಮೊಗ್ಗಕ್ಕೆ ಸೀಮಿತವಾಗಿರದೆ, ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ಶಾಲೆಯ ಮ್ಯಾನೆಜಿಂಗ್ ಟ್ರಸ್ಟಿ ಉಮೇಶ್ ಪ್ರಾಸ್ತವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಸಂಶೋಧನಾತ್ಮಕ ಮನೋಭಾವ ಹೆಚ್ಚಿಸಬೇಕು. ಮುಂದಿನ ವಿದ್ಯಾಭ್ಯಾಸದ ಪ್ರತಿಯೊಂದು ಹಂತದಲ್ಲೂ ಪ್ರಗತಿ ಸಾಧಿಸಬೇಕು. ಮಕ್ಕಳ ಜೀವನಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ವಿಜ್ಞಾನ ಕುರಿತ ವೈವಿಧ್ಯ ಮಾದರಿಗಳನು ಸಿದ್ಧಪಡಿಸಿದ್ದರು. ಅತಿಥಿಗಳಿಗೆ ಮಕ್ಕಳು ತಾವು ತಯಾರಿಸಿದ್ದ ಮಾದರಿಗಳ ಬಗ್ಗೆ ವಿವರಣೆ ನೀಡಿದರು.
Good Luck Care Center ಶಾಲೆಯ ಪ್ರಾಚಾರ್ಯೆ, ಕಾರ್ಯದರ್ಶಿ ಸಂಧ್ಯಾ ಯು.ರಾವ್, ಉಪಪ್ರಾಚಾರ್ಯೆ ತಾರಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವೈಷ್ಣವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಷಾ ನಿರೂಪಿಸಿದರು. ಸೌಮ್ಯ ಸ್ವಾಗತಿಸಿದರು.
ನಮ್ರತಾ ಎನ್ ಪೈ ಅತಿಥಿ ಪರಿಚಯ ಮಾಡಿಕೊಟ್ಟರು. ಅರ್ಷಿಯ ಖಾನಂ ವಂದನಾರ್ಪಣೆ ಮಾಡಿದರು.