Saturday, April 26, 2025
Saturday, April 26, 2025

Sorabha ಮೈನವಿರೇಳಿಸಿದ ಸೊರಬ ತಾಲ್ಲೂಕಿನ ಗುಡುವಿಯಲ್ಲಿನ ಹೋರಿ ಬೆದರಿಸುವ ಹಬ್ಬ

Date:

Sorabha ಸೊರಬ ತಾಲೂಕಿನ ಗುಡುವಿ ಗ್ರಾಮದಲ್ಲಿ ಶ್ರೀ ರಾಮೇಶ್ವರ ಹೋರಿ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಮಲೆನಾಡು ಹಾಗೂ ಬಯಲುಸೀಮೆ ಭಾಗದ ರೈತರ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ಸಡಗರ ಸಂಭ್ರಮದಿAದ ಜರುಗಿತು.
ಗ್ರಾಮೀಣ ಭಾಗದಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವವನ್ನು ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲೂಕು ಸೇರಿದಂತೆ ನೆರೆಯ ತಾಲೂಕಿನ ವಿವಿಧ ಗ್ರಾಮಗಳಿಂದ ಭಾರಿ ಸಂಖ್ಯೆಯಲ್ಲಿ ಹೋರಿ ಪ್ರಿಯರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರಲ್ಲಿ ಮೈನವಿರೇಳಿಸಿತು.
ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಟೇಪು, ಬಲೂನುಗಳು ಮತ್ತು ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಅಖಾಡದಲ್ಲಿ ಮರೂರು ತಾರಕಾಸುರ, ಉದ್ರಿ ವೀರೇಶ, ಸಾರೇಕೊಪ್ಪ ಸರದಾರ, ಶಿಗ್ಗಾದ ಸಾರಂಗ, ಕುಪ್ಪಗಡ್ಡೆ ಪವರ್‌ಸ್ಟಾರ್, ಸಾರೆಕೊಪ್ಪ ಸುನಾಮಿ, ಕೊರಕೋಡು ಕಾಲಭೈರವ, ಜಡೆ ಓಂಕಾರ, ಬಳ್ಳಿಬೈಲು ಅಗ್ನಿ, ಬಿದರೇರಿ ಬುಲೇಟ್ ಕಾ ರಾಜ, ಕೊಡಕಣಿ ದೊಡ್ಮನೆ ಹುಡುಗ, ಹೈಸ್ಪೀಡ್ ಚಿನ್ನ, ಯಡಗೊಪ್ಪ ೭ಸ್ಟಾರ್, ಹರೂರು ಜೈ ಹನುಮ, ಕೆರೆಕೊಪ್ಪದ ಮಲೆನಾಡ ಹೈಸ್ಪೀಡ್ ಚಕ್ರವರ್ತಿ, ಹರೂರು ಮಾರಿಕಾಂಬ ಎಕ್ಸ್ಪ್ರೆಸ್ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊAಡರು.
Sorabha ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದವು. ಗ್ರಾಮದ ಮಹಿಳೆಯರು, ಮಕ್ಕಳು, ಯುವತಿಯರು ಸಹ ಹೋರಿ ಬೆದರಿಸುವ ಹಬ್ಬವನ್ನು ಕಣ್ತುಂಬಿಕೊAಡಿದ್ದು ವಿಶೇಷವಾಗಿತ್ತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲಪ್ರದರ್ಶನ ತೋರಿದ ಪೈಲ್ವಾನರನ್ನು ಸಮಿತಿ ವತಿಯಿಂದ ಗುರುತಿಸಲಾಯಿತು. ಅಖಾಡದ ಎರಡು ಬದಿಯಲ್ಲಿ ಬೇಲಿ ನಿರ್ಮಿಸಿ, ಒಂದೊAದೆ ಹೋರಿಗಳನ್ನು ಓಡಿಸುವ ಮೂಲಕ ಗ್ರಾಮಸ್ಥರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದರು.
ಫೋಟೋ
೦೭ ಸೊರಬ ೦೨: ಸೊರಬ ತಾಲೂಕಿನ ಗುಡುವಿ ಗ್ರಾಮದಲ್ಲಿ ನಡೆದ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬದಲ್ಲಿ ಓಡುತ್ತಿರುವ ಜಡೆ ಓಂಕಾರ ಹೆಸರಿನ ಹೋರಿ.
೦೭ ಸೊರಬ ೦೨ಬಿ: ಸೊರಬ ತಾಲೂಕಿನ ಗುಡುವಿ ಗ್ರಾಮದಲ್ಲಿ ನಡೆದ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬದಲ್ಲಿ ಅಖಾಡದಲ್ಲಿ ಮಿಂಚಿನAತೆ ಓಡುತ್ತಿರುವ ಮರೂರು ತಾರಕಾಸುರ ಹೆಸರಿನ ಹೋರಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...

Dr. Rajkumar ಡಾ.ರಾಜ್ ಅವರಿಗಿದ್ದಷ್ಟು ಅಭಿಮಾನಿಗಳು ಬೇರೆ ಯಾವ ನಟರಿಗೂ ಇಲ್ಲ: ವಿ.ಮೂರ್ತಿ

Dr. Rajkumar ವರನಟ ನಟಸಾರ್ವಭೌಮ ಕನ್ನಡದ ಮೇರು ನಟ ಡಾಕ್ಟರ್ ರಾಜಕುಮಾರ್...

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...