Tuesday, March 24, 2026
Tuesday, March 24, 2026
Home Blog Page 496

ನವೆಂಬರ್ 21. ಶಿವಮೊಗ್ಗ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ & ಕಲೋತ್ಸವ

0

ಕೆ,ಎಸ್,ಅರ್,ಟಿ,ಸಿ ಶಿವಮೊಗ್ಗ ವಿಭಾಗವು ನ. 15 ರಂದು ಕೆ.ಎಸ್. ಅರ್. ಟಿ.ಸಿ. ಡಿಪೋದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಾಯು ಮಾಲಿನ್ಯ ನಿಯಂತ್ರಣದಲ್ಲಿ ಉತ್ತಮ ನಿರ್ವಹಣೆ ತೋರಿದ 10 ಜನ ವಾಹನ ಚಾಲಕರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಭೀಮನ ಗೌಡ ಪಾಟೀಲ್, ಕೆ.ಎಸ್. ಅರ್. ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ನವೀನ ಕುಮಾರ್, ಡಿ.ಟಿ.ಒ ದಿನೇಶ್ ಚನ್ನಗಿರಿ, ಡಿಪೋ ಮ್ಯಾನೇಜರ್ ಎಂ. ರಾಮಚಂದ್ರಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರಗೇಂದ್ರ ಬಿ. ಶಿರೋಲ್ಕರ್, ಹಿ. ಮೋ. ವಾ ನಿ. ಪಿ.ಎಂ. ಮಲ್ಲೇಶಪ್ಪ, ಕಚೇರಿ ಅಧೀಕ್ಷಕರುಗಳಾದ ರಾಮಚಂದ್ರಪ್ಪ ಎಚ್. ಸಿ., ಶ್ರೀಮತಿ ರಮ್ಯಾ, ವಿಷಯ ನಿರ್ವಾಹಕರಾದ ಡಿ.ಮೋಹನ್ ಕುಮಾರ್, ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಕೆ,ಎಸ್,ಆರ್,ಟಿ,ಸಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Scheduled Castes Welfare Department ತನ್ನ ಸಮುದಾಯದ ಜನರನ್ನ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಸಾಹಸಿ ,ಬಿರ್ಸಾ ಮುಂಡಾ- ಸಂಸದ ರಾಘವೇಂದ್ರ

0

Scheduled Castes Welfare Department ಭಾರತೀಯ ಬುಡಕಟ್ಟುಸ್ವಾತಂತ್ರ್ಯ ಹೋರಾಟಗಾರ ಭಗವಾನ್ ಬಿರ್ಸಾ ಮುಂಡಾ ಅವರು ತಮ್ಮ ಜೀವತಾವಧಿಯ ಅತ್ಯಲ್ಪ ಕಾಲದಲ್ಲಿ ಬ್ರಿಟೀಷರ ವಿರುದ್ಧ ಮಾತ್ರವಲ್ಲ ತನ್ನ ಸಮುದಾಯದ ಜನರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ನಿರಂತರ ಹೋರಾಡಿದ ಮಹಾನ್ ಸಾಧಕರಾಗಿದ್ದರು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಏರ್ಪಡಿಸಲಾಗಿದ್ದ ಭಗವಾನ್ ಶ್ರೀ ಬಿರ್ಸಾಮುಂಡಾ ಅವರ 150ನೇ ಜಯಂತಿ ಹಾಗೂ ಜನಜಾತೀಯ ಗೌರವ ದಿವಸ ಆಚರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಬ್ರಿಟೀಷರ ವಸಾಹತುಶಾಹಿ ಶೋಷಣೆ ವಿರುದ್ಧ ಜನರ ಪ್ರತಿರೋಧದ ನಾಯಕರಾಗಿ ಹೊರಹೊಮ್ಮಿದ್ದ ಭಗವಾನ್ ಬಿರ್ಸಾಮುಂಡಾ, ಜನರ ಹಕ್ಕುಗಳ ಹೋರಾಟಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ನಾಯಕತ್ವ ವಹಿಸಿದ್ದ ಪ್ರಬುದ್ದ ಹಾಗೂ ಮಹಾನ್ ಜನನಾಯಕರಾಗಿ ಗುರುತಿಸಿಕೊಂಡಿದ್ದ ಅವರ ಸಾಹಸಗಾಥೆಗಳು ಈಗಲೂ ಜಾರ್ಖಂಡ್ ರಾಜ್ಯದಲ್ಲಿ ದಂತಕತೆಗಳಾಗಿವೆ. ಅವರ ಆಕಾಂಕ್ಷೆಗಳು, ಸ್ವಾತಂತ್ರ್ಯ, ನ್ಯಾಯ, ಅಸ್ಮಿತೆ ಮತ್ತು ಘನತೆ ನಮ್ಮ ದೇಶದ ಯುವಕರಿಗೆ ಸದಾ ಪ್ರೇರಣೆಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ನಮ್ಮ ಧರ್ಮದ ವಿರುದ್ಧ ಪ್ರಚಾರ ಮಾಡುತ್ತಿದ್ದ ಮಿಷನರಿಗಳ ವಿರುದ್ಧವೂ ಹೋರಾಟ ನಡೆಸಿದ್ದ ಭೂಮಿಯ ಪಿತಾಮಹ ಎಂದೆ ಖ್ಯಾತರಾಗಿದ್ದ ಮುಂಡಾ ಅವರು, ಬ್ರಿಟೀಷ್ ಅಧಿಕಾರಿಗಳು ಮತ್ತು ಸ್ಥಳೀಯ ಜಮೀನುದಾರರು ಬುಡಕಟ್ಟು ಸಮುದಾಯಗಳನ್ನು ಶೋಷಿಸುತ್ತಿದ್ದಾಗ ಅವರ ಭೂಮಿಯನ್ನು ಕಸಿದುಕೊಂಡು ದೌರ್ಜನ್ಯ ಎಸಗುತ್ತಿದ್ದಾಗ ಬಿರ್ಸಾ ಅವರು ಈ ಸಾಮಾಜಿಕ ಮತ್ತು ಆರ್ಥಿಕ ಅನ್ಯಾಯದ ವಿರುದ್ಧ ಸಿಡಿದೆದ್ದು, ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ನಾಯಕತ್ವ ವಹಿಸಿದ್ದರು ಎಂದರು.
Scheduled Castes Welfare Department ಬಿರ್ಸಾ ಅವರ ಅಸಾಧಾರಣ ಬುದ್ದಿಮತ್ಯೆಯಿಂದಾಗಿ ಬುಡಕಟ್ಟು ಜನರು ಯಾವುದೇ ವ್ಯಕ್ತಿಯ ಹಸ್ತಕ್ಷೇಪವಿಲ್ಲದೇ ಭೂಮಿಯನ್ನು ಹೊಂದುವ ಮತುತ ಕೃಷಿ ಮಾಡುವ ಹಕ್ಕನ್ನು ಕೊಡಿಸಿದರು. ಬುಡಕಟ್ಟು ಪದ್ದತಿಗಳು ಮತ್ತು ಸಾಮಾಜಿಕ ಮೌಲ್ಯಗಳ ಮಹತ್ವವನ್ನು ಸಾರಿದ ಮುಂಡಾ ಅವರ ಹೋರಾಟದ ಪರಿ ಮಹಾತ್ಮಗಾಂಧೀಜಿಯವರನ್ನು ನ್ಯಾಯ ಮತ್ತು ಸತ್ಯದ ಅನ್ವೇಷಣೆಯಿಂದ ಮಾರ್ಗದರ್ಶನ ಹೊಂದಿದಂತೆ ಕಾಣುತ್ತಿತ್ತು ಎಂದ ಅವರು, ರೋಗಿಗಳ ಶುಶ್ರೂಶೆ ಮಾಡುವುದು ಅವರಿಗೆ ಒಂದು ಹವ್ಯಾಸವಾಗಿತ್ತು. ರೋಗಿಗಳ ಗುಣಪಡಿಸುವುದರಲ್ಲಿ ಸಂತೃಪ್ತ ಭಾವ ಹೊಂದುತ್ತಿದ್ದರು ಎಂದರು. ಬುಡಕಟ್ಕಕಟು ಸಂಸ್ಕೃತಿ, ಘನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಹೋರಾಡಿದ ಮುಂಡಾ ಅವರು ಬುಡಕಟ್ಟು ಸಮುದಾಯದವರೆಲ್ಲರೂ ಹೆಮ್ಮೆಯ ಸಂಕೇತವಾಗಿದ್ದರು. ಮಾತ್ರವಲ್ಲ ಭಾರತೀಯ ಸ್ವಾತಂತ್ರö್ಯ ಹೋರಾಟದಲ್ಲಿ ಮಹಾನ್ ಜನನಾಯಕರಾಗಿ ಗುರುತಿಸಿಕೊಂಡಿದ್ದರು ಎಂದರು.
ಬುಡಕಟ್ಟು ಜನರಲ್ಲಿ ಸ್ವಾವಲಂಬನೆ, ಸ್ವಯಂ ಆಡಳಿತ ಮತ್ತು ಘನತೆಯ ಪ್ರಜ್ಞೆಯನ್ನು ಜಾಗೃತಗೊಳಿಸಿ ಬಿರ್ಸಾ ಮುಂಡಾ ಈ ಶೋಷಣೆಯ ವಿರುದ್ಧ ಪ್ರಬಲ ಚಳುವಳಿಯನ್ನು ಹುಟ್ಟುಹಾಕಿದರು. ಇದು ಸಮುದಾಯದ ಭವ್ಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದರು.
ರಾಜ್ಯದಲ್ಲಿಯೂ ಇಂತಹ ಶೋಷಿತ ಹಾಗೂ ತಳ ಸಮುದಾಯಗಳಲ್ಲಿ ಸಾಮಾನ್ಯ ಜೀವನ ನಿರ್ವಹಿಸುತ್ತಿರುವ ಎಲ್ಲಾ ಜಾತಿ-ಜನಾಂಗಗಳ ಪ್ರತಿ ವ್ಯಕ್ತಿಯೂ ಶಿಕ್ಷಿತರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಅದಕ್ಕಾಗಿ ಸರ್ಕಾರಗಳ ವತಿಯಿಂದ ಅಗತ್ಯವಿರುವ ಎಲ್ಲಾ ನೆರವನ್ನು ಒದಗಿಸಿಕೊಡಲು ಬದ್ದವಾಗಿರುವುದಾಗಿ ಅವರು ನುಡಿದರು.
ಇದೇ ಸಂದರ್ಭದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಉಪನ್ಯಾಸಕ ಡಾ.ಮೋಹನ್ ಚಂದ್ರಗುತ್ತಿ ಅವರು ಭಗವಾನ್ ಬಿರ್ಸಾಮುಂಡಾ ಅವರು ಜೀವನಾದರ್ಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಜಿ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

Dr. C. N. Manjunath “ನಾನು ಕೇವಲ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯನಾಗಿದ್ದೆ.ಹೊರತು ಹಣಕಾಸು ನಿರ್ವಹಿಸಿಲ್ಲ- ಸಂಸದ ಡಾ.ಸಿ.ಎನ್.ಮಂಜುನಾಥ್

0

Dr. C. N. Manjunath ಕೊವೀಡ್ ನಿರ್ವಹಣೆ ವಿಚಾರದಲ್ಲಿ ಕೆಲವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ನನ್ನ‌ ಹೆಸರು
ಪ್ರಸ್ತಾಪವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು

ನಾನು ಕೊವೀಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥನಾಗಿರಲಿಲ್ಲ. ಕೇವಲ ಸಮಿತಿಯ ಸದಸ್ಯನಾಗಿ ಅನೇಕ ತಜ್ಞರು, ವೈದ್ಯರು, ಸರ್ಕಾರಿ ಅಧಿಕಾರಿಗಳ ಜೊತೆ ಸೇರಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಕೊವೀಡ್ ನಿಯಂತ್ರಣದ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡುವುದಷ್ಟೇ ನನ್ನ ಜವಾಬ್ದಾರಿ ಆಗಿತ್ತು. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಹಣಕಾಸಿನ ಜವಾಬ್ದಾರಿಯಾಗಲಿ, ನಿಯಂತ್ರಣವಾಗಲಿ ನನ್ನ ವ್ಯಾಪ್ತಿಗೆ ಬರುತ್ತಿರಲಿಲ್ಲ.

Dr. C. N. Manjunath ಸಚಿವ ಸಂಪುಟದ ಮಾರ್ಗದರ್ಶನದಲ್ಲಿ ಕೊವೀಡ್ ನಿರ್ವಹಣೆ ನಡೆಯುತ್ತಿತ್ತು. ಆದರೂ ಕೆಲವು ಸಾಮಾಜಿಕ ಜಾಲತಾಣದಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ಉಲ್ಲೇಖಿಸಲಾಗುತ್ತಿರುವುದು ನನಗೆ ನೋವು ತರಿಸಿದೆ ಎಂದು ಸಂಸದ ಡಾ.ಸಿ‌ಎನ್.ಮಂಜುನಾಥ್ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.

CM Siddhramaiah ರಾಜ್ಯ ಅಬಕಾರಿ ಇಲಾಖೆಯಲ್ಲಿ ₹ 700 ಕೋಟಿ ಲಂಚ ಪ್ರಕರಣ ಪ್ರಸ್ತಾಪಿಸಿದ ಮೋದಿ ಅವರಿಗೆ ಸಿಎಂ ಸಿದ್ಧರಾಮಯ್ಯ ಬಹಿರಂಗ ಸವಾಲು

0

CM Siddhramaiah ಅಬಕಾರಿ ಇಲಾಖೆಯಲ್ಲಿ 700 ಕೋಟಿ ಲಂಚ ಪಡೆದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಚುನಾವಣೆ ನಡೆಸುತ್ತಿದೆ ಎನ್ನುವ ಹಸಿ ಹಸಿ ಸುಳ್ಳನ್ನು ಇದೇ ಮಹಾರಾಷ್ಟ್ರದಲ್ಲಿ ಮೋದಿ ಹೇಳಿದ್ದಾರೆ. ಮೋದಿಯವರೇ ನೀವು ಸುಳ್ಳು ಭಾಷಣ ಮಾಡಿದ ಮಹಾರಾಷ್ಟ್ರಕ್ಕೇ ಬಂದು ನಿಮಗೆ ನೇರ ಸವಾಲು ಹಾಕುತ್ತಿದ್ದೇನೆ. ನಿಮ್ಮ ಭಾಷಣದ ಸುಳ್ಳನ್ನು ಸಾಬೀತು ಮಾಡಿದರೆ ನಾನು ಆ ಕ್ಷಣವೇ ರಾಜಕೀಯ ನಿವೃತ್ತಿ ಪಡೆಯಲು ಸಿದ್ಧ. ಇಲ್ಲದಿದ್ದರೆ ನೀವು ರಾಜಕೀಯ ನಿವೃತ್ತಿ ಘೋಷಿಸುತ್ತೀರಾ? ಎಂದು ಮುಖ್ಯಮಂತ್ರಿ CM Siddhramaiah ಸಿದ್ಧರಾಮಯ್ಯನವರು ಮಹಾರಾಷ್ಟ್ರದ ವಿಧಾನ ಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.

State Government Employees Union ರಾಜ್ಯ ಸರ್ಕಾರಿ ನೌಕರರ ಸಂಘದ‌ ಶಿವಮೊಗ್ಗ ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ

0

State Government Employees Union ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯ ಫಲಿತಾಂಶಗಳ ವಿವರ

ಗಿರೀಶ್ ಬಿ ಕೃಷಿ ಇಲಾಖೆ ತಾಂತ್ರಿಕ ತರ

ಸತ್ಯನಾರಾಯಣ ಜಿಎಚ್ ಕಂದಾಯ ಇಲಾಖೆ

ದೀಪಕ್ ಪಿಎಸ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ

ಕಿರಣ್ ಎಚ್ ಜಿಲ್ಲಾ ಪಂಚಾಯತಿ

ಪ್ರವೀಣ್ ಕುಮಾರ್ ಜಿ ತಾಲೂಕು ಪಂಚಾಯಿತಿ

ಮಧುಸೂದನ್ ಅಬಕಾರಿ ಇಲಾಖೆ

ಕೊಟ್ರೇಶ್, ಸಮಾಜ ಕಲ್ಯಾಣ ಇಲಾಖೆ

ಅನಿತಾ ವಿ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ರಂಗನಾಥ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ಸತ್ಯಭಾಮ ಎಸ್ ಜಿ ಮೀನುಗಾರಿಕೆ ಇಲಾಖೆ

ರಾಜು ಲಿಂಬು ಚೌಹಾನ್ ಅರಣ್ಯ ಇಲಾಖೆ

ಡಾಕ್ಟರ್ ಗುಡದಪ್ಪ ಕಸಬಿ ಆರೋಗ್ಯ ಇಲಾಖೆ

ಡಾ ಸಿ ಎ ಹಿರೇಮಠ್ ಆಯುಷ್ ಇಲಾಖೆ

ಮಹೇಶ ಪಿಎಲ್ ESI

ರಮೇಶ್ ಎಸ್ ವೈ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ

State Government Employees Union ಮಹೇಶ್ ಕೆಎಚ್ ಗ್ರಂಥಾಲಯ ಇಲಾಖೆ

ಲಿಂಗಪ್ಪ ಮತ್ತು ಧರ್ಮಪ್ಪ ಪ್ರೌಢಶಾಲಾ ವಿಭಾಗ

ಶಶಿಧರ್ ಡಿ ಟಿ ಪದವಿ ಪೂರ್ವ ಶಿಕ್ಷಣ

ಧನ್ಯ ಕುಮಾರ್ ಪ್ರಥಮ ದರ್ಜೆ ಕಾಲೇಜು

ಹನುಮಂತಪ್ಪ ಜಿ ಮಹಿಳಾ ಪಾಲಿಟೆಕ್ನಿಕ್

ಅಣ್ಣಪ್ಪ ವಿ ಬಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ

ರವಿಕಿರಣ್ ವೈ ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ಚನ್ನಕೇಶವ ಮೂರ್ತಿ ಭೂಮಾಪನ ಮತ್ತು ಕಂದಾಯ ಇಲಾಖೆ

ಸುಬ್ರಮಣ್ಯ ಜಾದವ್ ಶಾಲಾ ಶಿಕ್ಷಣ ಇಲಾಖೆ

ಇನ್ನು ಇನ್ನುಳಿದ ಎರಡು ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸಿ ನೀಡಲಾಗುವುದು

Bharatiya Janata Party ಬಿಜೆಪಿ ಬಡವರ ಉದ್ಧಾರ ಮಾಡುವ ಪಕ್ಷವಲ್ಲ.- ವೈ.ಬಿ.ಚಂದ್ರಕಾಂತ್

0

Bharatiya Janata Party ಭಾರತೀಯ ಜನತಾಪಕ್ಷದ ನಾಯಕರೇನಾದರೂ ಈ ಬಾರಿ ಕಾಂಗ್ರೇಸ್ ಪಕ್ಷದ ಶಾಸಕರಿಗೆ ಕೋಟ್ಯಾಂತರ ರೂಪಾಯಿಗಳ ಆಮಿಷ್ಯ ಒಡ್ಡಿ ಶಾಸಕರ ಖರೀದಿಗೆ ಪ್ರಯತ್ನಿಸಿದರೆ ಅಂತಹ ಬಿ.ಜೆ.ಪಿ. ನಾಯಕರ ಆಮಿಷ್ಯಗಳ ಬಗ್ಗೆ ರೇಕಾರ್ಡ್ ಮಾಡಿಕೊಂಡು ಮುಖಕ್ಕೆ ಸಗಣಿ ಬಳಿಯಲು ಕಾಂಗ್ರೇಸ್ ಪಕ್ಷದ ಗುಂಪೊಂದು ನಿರ್ಧರಿಸಿದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿ.ಜೆ.ಪಿ. ಜನರ ಸೇವೆ ಮಾಡಲೆಂದು ಹುಟ್ಟಿಕೊಂಡಿರುವ ಪಕ ್ಷವಲ್ಲ. ಅದು ಬಡವರು, ಹಿಂದುಳಿದ ವರ್ಗಗಳ ಜನರನ್ನು ಶೋಷಣೆ ಮಾಡಲೆಂದೆ ಹುಟ್ಟಿಕೊಂಡಿರುವ ಪಕ ್ಷವಾಗಿದೆ. ಈ ವರ್ಗಗಳ ಜನರ ಏಳಿಗೆಗೆ ಶ್ರಮಿಸುತ್ತಿರುವ ಕಾಂಗ್ರೇಸ್ ಪಕ್ಷ ಮತ್ತು ಪಕ್ಷದ ನಾಯಕರ ಕಂಡರೆ ಬಿ.ಜೆ.ಪಿ. ನಾಯಕರಿಗೆ ಎಲ್ಲಿಲ್ಲದ ಉರಿ ಬೀಳುತ್ತದೆ. ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ ಮತದಾರರು ಬೆಂಬಲ ಕೊಡದಿದ್ದರೂ ಲೂಟಿ ಮಾಡಿದ ಹಣ ಬಳಸಿಕೊಂಡು ಶಾಸಕರ ಖರೀದಿಸಿ ಸರ್ಕಾರ ಮಾಡುವ ಲಜ್ಜೆಗೇಡಿತನ ಮಾಡಿಕೊಂಡು
ಬಂದಿದ್ದಾರೆಂದು ವಕ್ತಾರರಾದ ವೈ.ಬಿ.ಚಂದ್ರಕಾಂತ ಅವರು ಟೀಕಿಸಿದ್ದಾರೆ.
Bharatiya Janata Party ಕಾಂಗ್ರೇಸ್ ಪಕ್ಷ ಆಡಳಿತಕ್ಕೆ ಬರುವ ರಾಜ್ಯಗಳಲ್ಲಿ ಬಡವರು, ಮಹಿಳೆಯರು, ಕೂಲಿ ಕಾರ್ಮಿಕರಿಗಾಗಿ ಉಚಿತ ಯೋಜನೆಗಳ ಜಾರಿಗೆ ತಂದಿರುವುದನ್ನು ಸಹಿಸಿಕೊಳ್ಳದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮೀತ್ ಷಾ ಸೇರಿದಂತೆ ಬಿ.ಜೆ.ಪಿ ನಾಯಕರು ಕಾಂಗ್ರೇಸ್ ಪಕ್ಷದ ಸರ್ಕಾರಗಳ ಆರ್ಥಿಕ ನೀತಿಗಳಿಂದ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ ಎಂದು
ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇನೊಂದು ಕಡೆಗೆ ದೇಶದ 19 ಶ್ರೀಮಂತ ಕಳ್ಳರು 16 ಲಕ್ಷ ಕೋಟಿ ರೂಪಾಯಿಗಳ ದೊಚಿಕೊಂಡು ದೇಶ ಬಿಟ್ಟು ಹೋದವರ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಾಲಮನ್ನಾ ಮಾಡಿದ್ದಾರೆ. ಇಂತಹ ಎಡಬಿಡಂಗಿ ಪ್ರಧಾನಿ ದೇಶಕ್ಕೆ ದೊರಕಿರುವುದು ಬಹುದೊಡ್ಡ ದುರಂತವೆಂದು ವೈ.ಬಿ.ಚಂದ್ರಕಾಂತ ಅವರು ಟೀಕಿಸಿದ್ದಾರೆ.
ದೇಶದಲ್ಲೆ ಮೊದಲ ಬಾರಿಗೆ ಶಾಸಕರ ಖರೀದಿಸಿ ರಾಜ್ಯದಲ್ಲಿ ಸರ್ಕಾರ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ
ಕಗ್ಗೊಲೆ ಮಾಡಿದ ಪಿತಾಮಹ ಎನ್ನುವ ಬಿರುದನ್ನು ಬಿ.ಎಸ್. ಯಡಿಯೂರಪ್ಪ ಅವರು ಪಡೆದಿದ್ದಾರೆ. ಬಿ.ಜೆ.ಪಿ ನಾಯಕರು ಇದೇ ರೋಗವನ್ನು ದೇಶದ ತುಂಬೆಲ್ಲಾ ಹರಡಿದ್ದಾರೆ. ಈಗ ಬಿ.ಎಸ್,ಯಡಿಯೂರಪ್ಪ ಸುಪುತ್ರ ಬಿ.ವೈ. ವಿಜಯೇಂದ್ರ ಮತ್ತು
ಕೆಲವು ಬಿ.ಜೆ.ಪಿ. ನಾಯಕರು ಇಂತಹದ್ದೆ ಲಜ್ಜೆಗೇಡಿ ಕೆಲಸಕ್ಕೆ ಇಳಿದಿದ್ದಾರೆ. ಇದರ ಬಗ್ಗೆ ಚರ್ಚಿಸಿರುವ ಕಾಂಗ್ರೇಸ್ ಶಾಸಕರು ತಮ್ಮನ್ನು ಖರೀದಿಸಲು ಬರುವ ಬಿ.ಜೆ.ಪಿ. ನಾಯಕರ ಮುಖಕ್ಕೆ ಸಗಣಿ ಬಳಿಯುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು
ನಿರ್ಧರಿಸಿದ್ದಾರೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ,ಬಿ, ಚಂದ್ರಕಾಂತ ಅವರು ಎಚ್ಚರಿಕೆನೀಡಿದ್ದಾರೆ.

Youth Hostel Association of India ಒತ್ತಡದ ಬದುಕಿನಿಂದ ವಿಶ್ರಾಂತಿ ಪಡೆಯಲು ಚಾರಣ-ಸುದರ್ಶನ್ ಪೈ

0

Youth Hostel Association of India ಚಾರಣದಲ್ಲಿ ಭಾಗವಹಿಸುವುದರಿಂದ ಮಾನಸಿಕ ಸಾಮಾರ್ಥ್ಯ ವೃದ್ಧಿಸುವ ಜತೆಯಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯ ಘಟಕದ ನೂತನ ಚೇರ್ಮನ್ ಸುದರ್ಶನ್ ಪೈ ಅಭಿಪ್ರಾಯಪಟ್ಟರು.
ಯೂತ್ ಹಾಸ್ಟೆಲ್ ಜಿಲ್ಲಾ ಘಟಕ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ಮಲೆನಾಡು ರಾಜ್ಯಮಟ್ಟದ ಚಾರಣ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಒತ್ತಡದ ಜೀವನಶೈಲಿಯಲ್ಲಿ ಎಲ್ಲರೂ ಬದುಕು ನಡೆಸುತ್ತಿದ್ದು, ಇದರಿಂದ ವಿಶ್ರಾಂತಿ ಪಡೆಯಲು ಚಾರಣ, ಪ್ರವಾಸ ಹಾಗೂ ಪ್ರಾಕೃತಿಕ ಸ್ಥಳಗಳಿಗೆ ಭೇಟಿ ವಿಶೇಷ ಅನುಭವ ಒದಗಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಯೂತ್ ಹಾಸ್ಟೆಲ್ ರಾಷ್ಟ್ರೀಯ ಉಪಾಧ್ಯಕ್ಷ ರವಿಕುಮಾರ್ ಮಾತನಾಡಿ, ಚಾರಣದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 80ಕ್ಕೂ ಹೆಚ್ಚು ಜನರು ಆಗಮಿಸಿರುವುದು ವಿಶೇಷ. ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದ ಹಿಮಾಲಯ ಚಾರಣ ಆಯೋಜಿಸಲಾಗುವುದು ಎಂದು ಹೇಳಿದರು.
ಯೂತ್ ಹಾಸ್ಟೆಲ್ ಮಾಜಿ ರಾಜ್ಯ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಕುಪ್ಪಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಾರಣ ಮಾಡುವುದು ವಿಶೇಷ ಅನುಭವ ನೀಡುತ್ತದೆ. ಶುದ್ಧ ಗಾಳಿ, ಒಳ್ಳೆಯ ಪರಿಸರ ಹಾಗೂ ಪ್ರಕೃತಿ ಸೌಂದರ್ಯ ಸಂತೋಷವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
Youth Hostel Association of India ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಮಾತನಾಡಿ, ಕುವೆಂಪು ಅವರು ನಡೆದಾಡಿದ ಪುಣ್ಯಭೂಮಿ ಇದು. ಪ್ರತಿಷ್ಠಾನದ ವತಿಯಿಂದ ಪರಿಸರ ಜಾಗೃತಿ ಹಾಗೂ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ಈಗಾಗಲೇ ನಮ್ಮ ಘಟಕದಿಂದ 26ಕ್ಕೂ ಹೆಚ್ಚು ರಾಜ್ಯಮಟ್ಟದ ಚಾರಣ ಆಯೋಜಿಸಿ ಯಶಸ್ವಿಯಾಗಿದ್ದೇವೆ ಎಂದರು.
ಮಂಗಳೂರು ಯೂನಿಟ್ ಚೇರ್ಮನ್ ಮನಮೋಹನ್, ರಾಜ್ಯ ಘಟಕದ ಮಾಜಿ ಚೇರ್ಮನ್ ಪುರುಷೋತ್ತಮ್, ಚೇರ್ಮನ್ ಹರೀಶ್ ಪಂಡಿತ್, ಕಾರ್ಯದರ್ಶಿ ಪ್ರಶಾಂತ್, ಚಿಕ್ಕನೂರು ಸುಬ್ಬಣ್ಣ, ಮನಮೋಹನ್ ಪವಾರ್, ಬದರಿನಾಥ್, ಮಹೇಶ್, ದೊರೆ ಚಿನ್ನಪ್ಪ, ಪದಾಧಿಕಾರಿಗಳು ಉಪಸ್ಥಿತರಿದ್ದರು.

MESCOM ನವೆಂಬರ್ 20. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗೀಯ ಕಚೇರಿಯಲ್ಲಿ ಜನಸಂಪರ್ಕ ಸಭೆ

0

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ದಿನಾಂಕ 20.11.2024 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುತ್ತಾರೆ. ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂ. ಸಂ.;9448289506.

ಶಿಕಾರಿಪುರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಆದ ಬೆಳೆ ನಷ್ಟ ಪರಿಹಾರಕ್ಕೆ ಪ್ರಸ್ತಾವನೆ: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

0

ಅಕ್ಟೋಬರ್ ತಿಂಗಳಿನ ಅಕಾಲಿಕ ಮಳೆಯಿಂದಾಗಿ ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿ, ತಡಸನಹಳ್ಳಿ, ಮದಗಹಾರನಹಳ್ಳಿ, ದಿಂಡದಹಳ್ಳಿ, ಮತ್ತು ದಬ್ಬಣಬೈರನಹಳ್ಳಿ ಗ್ರಾಮಗಳಲ್ಲಿ ರೈತರು ಬೆಳೆದ ಬಾಳೆ, ಶುಂಠಿ ಮತ್ತು ತರಕಾರಿ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿದ್ದು ನಷ್ಟ ಪರಿಹಾರ ಕೊಡಲು ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿರುವುದರಿಂದ ಸಾರ್ವಜನಿಕರು ಆಕ್ಷೇಪಣೆಗಳನ್ನು ನ. 21 ರಂದು ಲಿಖಿತವಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಚೇರಿ, ಶಿಕಾರಿಪುರ ಇಲ್ಲಿಗೆ ಸಲ್ಲಿಸುವುದು.
ಸುಣ್ಣದಕೊಪ್ಪ ಗ್ರಾ.ಪಂ, ತಡಸಹಳ್ಳಿ ಗ್ರಾ. ಮಹೇಶಕುಮಾರ ಎ.ಜಿ ಇವರ 0.36 ಹೆ. ಟೋಮ್ಯಾಟೋ ಬೆಳೆ ಮತ್ತು 0.18 ಹೆ. ಬದನೆಕಾಯಿ ಬೆಳೆ ಹಾನಿಯಾಗಿದೆ.

ತಡಸಹಳ್ಳಿ ಗ್ರಾ. ಪ್ರಾಂಶಾತ ಇವರ 0.40 ಹೆ. ಟೋಮ್ಯಾಟೋ ಬೆಳೆ ಮತ್ತು 0.18 ಹೆ. ಬದನೆಕಾಯಿ ಬೆಳೆ ಹಾನಿಯಾಗಿದೆ. ಕಡೇನಂದಿಗಳ್ಳಿ ಗ್ರಾ, ವಿಜಯಾ ಬಿ.ಬಿ ಇವರ 0.18 ಹೆ. ಶುಂಠಿ ಹಾಗೂ 0.08 ಹೆ. ಶುಂಠಿ ಬೆಳೆ ಹಾನಿಯಾಗಿದೆ. ಕಡೇನಂದಿಗಳ್ಳಿ ಗ್ರಾ, ಮಾಲತೇಶ ಇವರ 0.18 ಹೆ. ಶುಂಠಿ ಬೆಳೆ ಮತ್ತು 0.07 ಹೆ, ಶುಂಠಿ ಬೆಳೆ ಹಾನಿಯಾಗಿದೆ. ಕಡೇನಂದಿಹಳ್ಳಿ ಗ್ರಾ, ಜಯಾನಂದ ಇವರ 0.18 ಹೆ. ಶುಂಠಿ ಬೆಳೆ ಹಾಗೂ 0.08 ಹೆ. ಶುಂಠಿ ಬೆಳೆ ಹಾನಿಯಾಗಿದೆ. ಮದಗಹಾರನಹಳ್ಳಿ ಗ್ರಾಂ.ಪಂ, ಮದಗಹಾರನಹಳ್ಳಿ ಗ್ರಾ, ಸಿದ್ದನಗೌಡ ಇವರ 0.50 ಹೆ. ಬಾಳೆ ಮತ್ತು 0.25 ಹೆ. ಬಾಳೆ ಬೆಳೆ ಹಾನಿಯಾಗಿದೆ.

ದಿಂಡದಹಳ್ಳಿ ಗ್ರಾಂ.ಪಂ. ಕಿಟ್ಟದಹಳ್ಳಿ ಗ್ರಾ, ಕೊಲ್ಲಮ್ಮ, ಗಣೇಶಪ್ಪ, ನಾಗಪ್ಪ, ಮಂಜಮ್ಮ, ಸಂಜೀವಪ್ಪ ಮತ್ತು ದಾನಪ್ಪ ಇವರುಗಳ ಜಂಟಿಯಲ್ಲಿ 1.20 ಹೆ. ಶುಂಠಿ ಬೆಳೆ ಹಾನಿಯಾಗಿದೆ. ಬೇಗೂರು ಗ್ರಾಂ.ಪಂ, ದಬ್ಬಣ ಬೈರನಹಳ್ಳಿ ಗ್ರಾ, ಬಸವಗೌಡ 0.15 ಹೆ. ಶುಂಠಿ ಬೆಳೆ ಹಾನಿಯಾಗಿರುತ್ತದೆ ಎಂದು ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶರು ತಿಳಿಸಿದಾರೆ.

B.Y.Raghavendra ಶಿವಮೊಗ್ಗದಲ್ಲಿ ಬಿಎಸ್ಎನ್ಎಲ್ ನಅಸಮರ್ಪಕ ನೆಟ್ ಸೌಲಭ್ಯ: ತುರ್ತು ಕ್ರಮಕ್ಕೆ ಸಂಸದ ರಾಘವೇಂದ್ರ ಸೂಚನೆ

0

B.Y.Raghavendra ಶಿವಮೊಗ್ಗ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬಿ.ಎಸ್.ಎನ್.ಎಲ್. ಮೊಬೈಲ್ ಸಂಪರ್ಕ ಕಲ್ಪಿಸುವ ನೆಟ್‌ವರ್ಕ್ ಅಸಮರ್ಪಕವಾಗಿದ್ದು, ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ಒದಗಿಸಲು ತುರ್ತು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಬಿ.ಎಸ್.ಎನ್.ಎಲ್. ವ್ಯವಸ್ಥಾಪಕ ವೆಂಕಟೇಶ್ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣೆ (ದಿಶಾ) ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ತಲೆದೂರಿರುವ ನೆಟ್ವರ್ಕ್ ಸಮಸ್ಯೆಯನ್ನು ಇತ್ಯರ್ಥಗೊಳಿಸುವಲ್ಲಿ ಬಿ.ಎಸ್.ಎನ್.ಎಲ್. ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಬ್ರಿಟೀಷ್ ಆಡಳಿತ ಪದ್ದತಿಯಿಂದ ಹೊರಬಂದು ಜನಸ್ನೇಹಿಯಾಗಿ ವ್ಯವಹರಿಸಬೇಕು. ಒಂದು ತಿಂಗಳಲ್ಲಿ ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಬೇಕು ಎಂದರು.

ಗ್ರಾಮಾಂತರ ಭಾಗಗಳಲ್ಲಿ ತೀವ್ರವಾಗಿ ಕಾಡುತ್ತಿರುವ ನೆಟ್ವರ್ಕ್ ಸಮಸ್ಯೆ ತಕ್ಷಣದಿಂದಲೇ ಪರಿಹಾರಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಅನೇಕ ಬಾರಿ ನೆಟ್ವರ್ಕ್ ಸಮಸ್ಯೆ ಪರಿಹರಿಸುವ ಕುರಿತ ಸಭೆಗಳನ್ನು ನಡೆಸಿ, ಯೋಜನೆಯ ರೂಪುರೇಷೆಗಳನ್ನು ಚರ್ಚಿಸಲಾಗಿತ್ತು.

ಆದಾಗ್ಯೂ ಸಮಸ್ಯೆ ಇನ್ನೂ ಜೀವಂತವಾಗಿರುವುದು ಬೇಸರವೆನಿಸಿದೆ. ಟವರ್‌ಗಳನ್ನು ನಿರ್ಮಿಸಲು ಇರುವ ಭೂಸ್ವಾಧೀನ ಪ್ರಕ್ರಿಯೆ, ಕಂದಾಯ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದ ಅವರು, ಜನಸಾಮಾನ್ಯರ ನಿರೀಕ್ಷೆಯಂತೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲೆಯ ಗ್ರಾಮಾಂತರ ಭಾಗ ಸೇರಿದಂತೆ ಸುಮಾರು 141 ನೆಟ್ವರ್ಕ್ ಕಂಬ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 138 ನೆಟ್ವರ್ಕ್ ಸ್ಥಾವರಗಳ ಕಾಮಗಾರಿ ಪ್ರಗತಿಯಲ್ಲಿವೆ. ಅರಣ್ಯ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ 63 ನೆಟ್ವರ್ಕ್ ಅಳವಡಿಕೆಯಲ್ಲಿ 15 ನೆಟ್ವರ್ಕ್ ಸಂಪರ್ಕ ಕಾರ್ಯ ಪೂರ್ಣಗೊಂಡಿವೆ. ಕಂದಾಯ ಭೂಮಿಗೆ ಸಂಬಂಧಿಸಿದ 55 ಪ್ರಕರಣಗಳಲ್ಲಿ 47 ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ 17 ನೆಟ್ವರ್ಕ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುವ ಬಗ್ಗೆ ಬಿ.ಎಸ್.ಎನ್.ಎಲ್. ಅಧಿಕಾರಿ ವೆಂಕಟೇಶ್ ಅವರಿಂದ ಸಂಸದರು ಮಾಹಿತಿ ಪಡೆದರು.

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ತೀರ್ಥಹಳ್ಳಿ ಪಟ್ಟಣ ಪ್ರದೇಶದಲ್ಲಿಯೇ ನೆಟ್ವರ್ಕ್ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ಬಿಎಸ್‌ಎನ್‌ಎಲ್ ಜನರ ನಿರೀಕ್ಷೆ, ಅಪೇಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

B.Y.Raghavendra ಅದಕ್ಕೆ ಪೂರಕವಾಗಿ ಶಿವಮೊಗ್ಗ ನಗರಕ್ಷೇತ್ರದ ಶಾಸಕ ಎಸ್.ಎನ್.ಚೆನ್ನಬಸಪ್ಪ ಅವರು ಮಾತನಾಡಿ, ನಗರ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ತುಂಬಾ ಇದೆ. ಈ ಸಮಸ್ಯೆ ಶಾಸಕರ ಕಚೇರಿಯನ್ನು ಬಿಟ್ಟಿಲ್ಲ. ತುರ್ತು ಸಂದರ್ಭದಲ್ಲಿ ಕಚೇರಿಯಿಂದ ಹೊರ ಬಂದು ಮಾತನಾಡುವ ಪ್ರಸಂಗ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿವಮೊಗ್ಗ-ತಾಳಗುಪ್ಪ ನಡುವೆ ಸಂಚರಿಸುವ ಎಲ್ಲಾ ರೈಲುಗಳು ಮಾರ್ಗದ ಎಲ್ಲಾ ನಿಲ್ದಾಣಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಕನಿಷ್ಟ 02 ನಿಮಿಷಗಳ ಕಾಲ ನಿಲುಗಡೆಗೆ ಅವಕಾಶ ನೀಡುವಂತೆ ಶಾಸಕ ಆರಗ ಜ್ಞಾನೇಂದ್ರ ಸಂಸದರಲ್ಲಿ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಯ ರೈಲು ನಿಲ್ಲಿಸುವ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾಗರ ತಾಲ್ಲೂಕಿನಲ್ಲಿ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ 2025ರ ಮೇ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು. ಈಗಾಗಲೇ ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಡಿಸೆಂಬರ್ ಮಾಸಾಂತ್ಯದೊಳಗೆ ಸೇತುವೆ ಮೇಲೆ ವಾಹನಗಳು ಪ್ರಾಯೋಗಿಕವಾಗಿ ಸಂಚರಿಸಲಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಎಂದರು.

ಸಾಗರ ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಹೆದ್ದಾರಿಗಳ ಕಾಮಗಾರಿ ಅತ್ಯಂತ ಕಳಪೆ ಮಟ್ಟದಿಂದ ಕೂಡಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ದೂರುಗಳು ಬಂದಿವೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೂಡಲೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಬಿ.ವೈ.ರಾಘವೇಂದ್ರ, ಸಂಸದರು.
ಶಿವಮೊಗ್ಗ-ರಾಣೆಬೆನ್ನೂರು ರೈಲುಮಾರ್ಗಕ್ಕೆ ಸಂಬAಧಿಸಿದAತೆ ಶೇ. ೯೦ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರಬೇಕು. ಇದರಿಂದ, ಕೇಂದ್ರ ಸರ್ಕಾರಕ್ಕೆ ಅನುದಾನದ ಬೇಡಿಕೆ ಸಲ್ಲಿಸಲು ಅನುಕೂಲವಾಗಲಿದೆ ಇಲ್ಲಿನ ಕಾಮಗಾರಿಗಳಿಗೆ ಸಂಬAಧಿಸಿದAತೆ ಭೂಸ್ವಾಧೀನ ಪಡಿಸಿಕೊಳ್ಳುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ಭೂಸ್ವಾದೀನಕ್ಕೆ ಸಂಬAಧಿಸಿದAತೆ ಯಾವುದೇ ರೈತರಿಗೆ ಹಂಚುವ ಪರಿಹಾರದಲ್ಲಿ ಅನ್ಯಾಯವಾಗಬಾರದು. ಭೂಮಿ ವಶಪಡಿಸಿಕೊಂಡ ರೈತರಿಗೂ ಸಹ ಶೇ. ೯೦ರಷ್ಟು ಹಣ ಸಂದಾಯವಾಗಿರಬೇಕು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಮಾಜಿ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶ್ರೀಮತಿ ಶಾರದಾ ಪೂರ್ಯಾನಾಯ್ಕ್, ಶ್ರೀಮತಿ ಬಲ್ಕಿಷ್‌ಬಾನು, ಡಾ|| ಧನಂಜಯಸರ್ಜಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಹಾಗೂ ದಿಶಾ ಸಮಿತಿಯ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.