Tuesday, March 24, 2026
Tuesday, March 24, 2026
Home Blog Page 497

Bharatiya Janata Party ಬಿಜೆಪಿ ಬಡವರ ಉದ್ಧಾರ ಮಾಡುವ ಪಕ್ಷವಲ್ಲ.- ವೈ.ಬಿ.ಚಂದ್ರಕಾಂತ್

0

Bharatiya Janata Party ಭಾರತೀಯ ಜನತಾಪಕ್ಷದ ನಾಯಕರೇನಾದರೂ ಈ ಬಾರಿ ಕಾಂಗ್ರೇಸ್ ಪಕ್ಷದ ಶಾಸಕರಿಗೆ ಕೋಟ್ಯಾಂತರ ರೂಪಾಯಿಗಳ ಆಮಿಷ್ಯ ಒಡ್ಡಿ ಶಾಸಕರ ಖರೀದಿಗೆ ಪ್ರಯತ್ನಿಸಿದರೆ ಅಂತಹ ಬಿ.ಜೆ.ಪಿ. ನಾಯಕರ ಆಮಿಷ್ಯಗಳ ಬಗ್ಗೆ ರೇಕಾರ್ಡ್ ಮಾಡಿಕೊಂಡು ಮುಖಕ್ಕೆ ಸಗಣಿ ಬಳಿಯಲು ಕಾಂಗ್ರೇಸ್ ಪಕ್ಷದ ಗುಂಪೊಂದು ನಿರ್ಧರಿಸಿದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿ.ಜೆ.ಪಿ. ಜನರ ಸೇವೆ ಮಾಡಲೆಂದು ಹುಟ್ಟಿಕೊಂಡಿರುವ ಪಕ ್ಷವಲ್ಲ. ಅದು ಬಡವರು, ಹಿಂದುಳಿದ ವರ್ಗಗಳ ಜನರನ್ನು ಶೋಷಣೆ ಮಾಡಲೆಂದೆ ಹುಟ್ಟಿಕೊಂಡಿರುವ ಪಕ ್ಷವಾಗಿದೆ. ಈ ವರ್ಗಗಳ ಜನರ ಏಳಿಗೆಗೆ ಶ್ರಮಿಸುತ್ತಿರುವ ಕಾಂಗ್ರೇಸ್ ಪಕ್ಷ ಮತ್ತು ಪಕ್ಷದ ನಾಯಕರ ಕಂಡರೆ ಬಿ.ಜೆ.ಪಿ. ನಾಯಕರಿಗೆ ಎಲ್ಲಿಲ್ಲದ ಉರಿ ಬೀಳುತ್ತದೆ. ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ ಮತದಾರರು ಬೆಂಬಲ ಕೊಡದಿದ್ದರೂ ಲೂಟಿ ಮಾಡಿದ ಹಣ ಬಳಸಿಕೊಂಡು ಶಾಸಕರ ಖರೀದಿಸಿ ಸರ್ಕಾರ ಮಾಡುವ ಲಜ್ಜೆಗೇಡಿತನ ಮಾಡಿಕೊಂಡು
ಬಂದಿದ್ದಾರೆಂದು ವಕ್ತಾರರಾದ ವೈ.ಬಿ.ಚಂದ್ರಕಾಂತ ಅವರು ಟೀಕಿಸಿದ್ದಾರೆ.
Bharatiya Janata Party ಕಾಂಗ್ರೇಸ್ ಪಕ್ಷ ಆಡಳಿತಕ್ಕೆ ಬರುವ ರಾಜ್ಯಗಳಲ್ಲಿ ಬಡವರು, ಮಹಿಳೆಯರು, ಕೂಲಿ ಕಾರ್ಮಿಕರಿಗಾಗಿ ಉಚಿತ ಯೋಜನೆಗಳ ಜಾರಿಗೆ ತಂದಿರುವುದನ್ನು ಸಹಿಸಿಕೊಳ್ಳದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮೀತ್ ಷಾ ಸೇರಿದಂತೆ ಬಿ.ಜೆ.ಪಿ ನಾಯಕರು ಕಾಂಗ್ರೇಸ್ ಪಕ್ಷದ ಸರ್ಕಾರಗಳ ಆರ್ಥಿಕ ನೀತಿಗಳಿಂದ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ ಎಂದು
ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇನೊಂದು ಕಡೆಗೆ ದೇಶದ 19 ಶ್ರೀಮಂತ ಕಳ್ಳರು 16 ಲಕ್ಷ ಕೋಟಿ ರೂಪಾಯಿಗಳ ದೊಚಿಕೊಂಡು ದೇಶ ಬಿಟ್ಟು ಹೋದವರ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಾಲಮನ್ನಾ ಮಾಡಿದ್ದಾರೆ. ಇಂತಹ ಎಡಬಿಡಂಗಿ ಪ್ರಧಾನಿ ದೇಶಕ್ಕೆ ದೊರಕಿರುವುದು ಬಹುದೊಡ್ಡ ದುರಂತವೆಂದು ವೈ.ಬಿ.ಚಂದ್ರಕಾಂತ ಅವರು ಟೀಕಿಸಿದ್ದಾರೆ.
ದೇಶದಲ್ಲೆ ಮೊದಲ ಬಾರಿಗೆ ಶಾಸಕರ ಖರೀದಿಸಿ ರಾಜ್ಯದಲ್ಲಿ ಸರ್ಕಾರ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ
ಕಗ್ಗೊಲೆ ಮಾಡಿದ ಪಿತಾಮಹ ಎನ್ನುವ ಬಿರುದನ್ನು ಬಿ.ಎಸ್. ಯಡಿಯೂರಪ್ಪ ಅವರು ಪಡೆದಿದ್ದಾರೆ. ಬಿ.ಜೆ.ಪಿ ನಾಯಕರು ಇದೇ ರೋಗವನ್ನು ದೇಶದ ತುಂಬೆಲ್ಲಾ ಹರಡಿದ್ದಾರೆ. ಈಗ ಬಿ.ಎಸ್,ಯಡಿಯೂರಪ್ಪ ಸುಪುತ್ರ ಬಿ.ವೈ. ವಿಜಯೇಂದ್ರ ಮತ್ತು
ಕೆಲವು ಬಿ.ಜೆ.ಪಿ. ನಾಯಕರು ಇಂತಹದ್ದೆ ಲಜ್ಜೆಗೇಡಿ ಕೆಲಸಕ್ಕೆ ಇಳಿದಿದ್ದಾರೆ. ಇದರ ಬಗ್ಗೆ ಚರ್ಚಿಸಿರುವ ಕಾಂಗ್ರೇಸ್ ಶಾಸಕರು ತಮ್ಮನ್ನು ಖರೀದಿಸಲು ಬರುವ ಬಿ.ಜೆ.ಪಿ. ನಾಯಕರ ಮುಖಕ್ಕೆ ಸಗಣಿ ಬಳಿಯುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು
ನಿರ್ಧರಿಸಿದ್ದಾರೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ,ಬಿ, ಚಂದ್ರಕಾಂತ ಅವರು ಎಚ್ಚರಿಕೆನೀಡಿದ್ದಾರೆ.

Youth Hostel Association of India ಒತ್ತಡದ ಬದುಕಿನಿಂದ ವಿಶ್ರಾಂತಿ ಪಡೆಯಲು ಚಾರಣ-ಸುದರ್ಶನ್ ಪೈ

0

Youth Hostel Association of India ಚಾರಣದಲ್ಲಿ ಭಾಗವಹಿಸುವುದರಿಂದ ಮಾನಸಿಕ ಸಾಮಾರ್ಥ್ಯ ವೃದ್ಧಿಸುವ ಜತೆಯಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯ ಘಟಕದ ನೂತನ ಚೇರ್ಮನ್ ಸುದರ್ಶನ್ ಪೈ ಅಭಿಪ್ರಾಯಪಟ್ಟರು.
ಯೂತ್ ಹಾಸ್ಟೆಲ್ ಜಿಲ್ಲಾ ಘಟಕ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ಮಲೆನಾಡು ರಾಜ್ಯಮಟ್ಟದ ಚಾರಣ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಒತ್ತಡದ ಜೀವನಶೈಲಿಯಲ್ಲಿ ಎಲ್ಲರೂ ಬದುಕು ನಡೆಸುತ್ತಿದ್ದು, ಇದರಿಂದ ವಿಶ್ರಾಂತಿ ಪಡೆಯಲು ಚಾರಣ, ಪ್ರವಾಸ ಹಾಗೂ ಪ್ರಾಕೃತಿಕ ಸ್ಥಳಗಳಿಗೆ ಭೇಟಿ ವಿಶೇಷ ಅನುಭವ ಒದಗಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಯೂತ್ ಹಾಸ್ಟೆಲ್ ರಾಷ್ಟ್ರೀಯ ಉಪಾಧ್ಯಕ್ಷ ರವಿಕುಮಾರ್ ಮಾತನಾಡಿ, ಚಾರಣದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 80ಕ್ಕೂ ಹೆಚ್ಚು ಜನರು ಆಗಮಿಸಿರುವುದು ವಿಶೇಷ. ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದ ಹಿಮಾಲಯ ಚಾರಣ ಆಯೋಜಿಸಲಾಗುವುದು ಎಂದು ಹೇಳಿದರು.
ಯೂತ್ ಹಾಸ್ಟೆಲ್ ಮಾಜಿ ರಾಜ್ಯ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಕುಪ್ಪಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಾರಣ ಮಾಡುವುದು ವಿಶೇಷ ಅನುಭವ ನೀಡುತ್ತದೆ. ಶುದ್ಧ ಗಾಳಿ, ಒಳ್ಳೆಯ ಪರಿಸರ ಹಾಗೂ ಪ್ರಕೃತಿ ಸೌಂದರ್ಯ ಸಂತೋಷವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
Youth Hostel Association of India ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಮಾತನಾಡಿ, ಕುವೆಂಪು ಅವರು ನಡೆದಾಡಿದ ಪುಣ್ಯಭೂಮಿ ಇದು. ಪ್ರತಿಷ್ಠಾನದ ವತಿಯಿಂದ ಪರಿಸರ ಜಾಗೃತಿ ಹಾಗೂ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ಈಗಾಗಲೇ ನಮ್ಮ ಘಟಕದಿಂದ 26ಕ್ಕೂ ಹೆಚ್ಚು ರಾಜ್ಯಮಟ್ಟದ ಚಾರಣ ಆಯೋಜಿಸಿ ಯಶಸ್ವಿಯಾಗಿದ್ದೇವೆ ಎಂದರು.
ಮಂಗಳೂರು ಯೂನಿಟ್ ಚೇರ್ಮನ್ ಮನಮೋಹನ್, ರಾಜ್ಯ ಘಟಕದ ಮಾಜಿ ಚೇರ್ಮನ್ ಪುರುಷೋತ್ತಮ್, ಚೇರ್ಮನ್ ಹರೀಶ್ ಪಂಡಿತ್, ಕಾರ್ಯದರ್ಶಿ ಪ್ರಶಾಂತ್, ಚಿಕ್ಕನೂರು ಸುಬ್ಬಣ್ಣ, ಮನಮೋಹನ್ ಪವಾರ್, ಬದರಿನಾಥ್, ಮಹೇಶ್, ದೊರೆ ಚಿನ್ನಪ್ಪ, ಪದಾಧಿಕಾರಿಗಳು ಉಪಸ್ಥಿತರಿದ್ದರು.

MESCOM ನವೆಂಬರ್ 20. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗೀಯ ಕಚೇರಿಯಲ್ಲಿ ಜನಸಂಪರ್ಕ ಸಭೆ

0

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ದಿನಾಂಕ 20.11.2024 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುತ್ತಾರೆ. ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂ. ಸಂ.;9448289506.

ಶಿಕಾರಿಪುರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಆದ ಬೆಳೆ ನಷ್ಟ ಪರಿಹಾರಕ್ಕೆ ಪ್ರಸ್ತಾವನೆ: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

0

ಅಕ್ಟೋಬರ್ ತಿಂಗಳಿನ ಅಕಾಲಿಕ ಮಳೆಯಿಂದಾಗಿ ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿ, ತಡಸನಹಳ್ಳಿ, ಮದಗಹಾರನಹಳ್ಳಿ, ದಿಂಡದಹಳ್ಳಿ, ಮತ್ತು ದಬ್ಬಣಬೈರನಹಳ್ಳಿ ಗ್ರಾಮಗಳಲ್ಲಿ ರೈತರು ಬೆಳೆದ ಬಾಳೆ, ಶುಂಠಿ ಮತ್ತು ತರಕಾರಿ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿದ್ದು ನಷ್ಟ ಪರಿಹಾರ ಕೊಡಲು ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿರುವುದರಿಂದ ಸಾರ್ವಜನಿಕರು ಆಕ್ಷೇಪಣೆಗಳನ್ನು ನ. 21 ರಂದು ಲಿಖಿತವಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಚೇರಿ, ಶಿಕಾರಿಪುರ ಇಲ್ಲಿಗೆ ಸಲ್ಲಿಸುವುದು.
ಸುಣ್ಣದಕೊಪ್ಪ ಗ್ರಾ.ಪಂ, ತಡಸಹಳ್ಳಿ ಗ್ರಾ. ಮಹೇಶಕುಮಾರ ಎ.ಜಿ ಇವರ 0.36 ಹೆ. ಟೋಮ್ಯಾಟೋ ಬೆಳೆ ಮತ್ತು 0.18 ಹೆ. ಬದನೆಕಾಯಿ ಬೆಳೆ ಹಾನಿಯಾಗಿದೆ.

ತಡಸಹಳ್ಳಿ ಗ್ರಾ. ಪ್ರಾಂಶಾತ ಇವರ 0.40 ಹೆ. ಟೋಮ್ಯಾಟೋ ಬೆಳೆ ಮತ್ತು 0.18 ಹೆ. ಬದನೆಕಾಯಿ ಬೆಳೆ ಹಾನಿಯಾಗಿದೆ. ಕಡೇನಂದಿಗಳ್ಳಿ ಗ್ರಾ, ವಿಜಯಾ ಬಿ.ಬಿ ಇವರ 0.18 ಹೆ. ಶುಂಠಿ ಹಾಗೂ 0.08 ಹೆ. ಶುಂಠಿ ಬೆಳೆ ಹಾನಿಯಾಗಿದೆ. ಕಡೇನಂದಿಗಳ್ಳಿ ಗ್ರಾ, ಮಾಲತೇಶ ಇವರ 0.18 ಹೆ. ಶುಂಠಿ ಬೆಳೆ ಮತ್ತು 0.07 ಹೆ, ಶುಂಠಿ ಬೆಳೆ ಹಾನಿಯಾಗಿದೆ. ಕಡೇನಂದಿಹಳ್ಳಿ ಗ್ರಾ, ಜಯಾನಂದ ಇವರ 0.18 ಹೆ. ಶುಂಠಿ ಬೆಳೆ ಹಾಗೂ 0.08 ಹೆ. ಶುಂಠಿ ಬೆಳೆ ಹಾನಿಯಾಗಿದೆ. ಮದಗಹಾರನಹಳ್ಳಿ ಗ್ರಾಂ.ಪಂ, ಮದಗಹಾರನಹಳ್ಳಿ ಗ್ರಾ, ಸಿದ್ದನಗೌಡ ಇವರ 0.50 ಹೆ. ಬಾಳೆ ಮತ್ತು 0.25 ಹೆ. ಬಾಳೆ ಬೆಳೆ ಹಾನಿಯಾಗಿದೆ.

ದಿಂಡದಹಳ್ಳಿ ಗ್ರಾಂ.ಪಂ. ಕಿಟ್ಟದಹಳ್ಳಿ ಗ್ರಾ, ಕೊಲ್ಲಮ್ಮ, ಗಣೇಶಪ್ಪ, ನಾಗಪ್ಪ, ಮಂಜಮ್ಮ, ಸಂಜೀವಪ್ಪ ಮತ್ತು ದಾನಪ್ಪ ಇವರುಗಳ ಜಂಟಿಯಲ್ಲಿ 1.20 ಹೆ. ಶುಂಠಿ ಬೆಳೆ ಹಾನಿಯಾಗಿದೆ. ಬೇಗೂರು ಗ್ರಾಂ.ಪಂ, ದಬ್ಬಣ ಬೈರನಹಳ್ಳಿ ಗ್ರಾ, ಬಸವಗೌಡ 0.15 ಹೆ. ಶುಂಠಿ ಬೆಳೆ ಹಾನಿಯಾಗಿರುತ್ತದೆ ಎಂದು ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶರು ತಿಳಿಸಿದಾರೆ.

B.Y.Raghavendra ಶಿವಮೊಗ್ಗದಲ್ಲಿ ಬಿಎಸ್ಎನ್ಎಲ್ ನಅಸಮರ್ಪಕ ನೆಟ್ ಸೌಲಭ್ಯ: ತುರ್ತು ಕ್ರಮಕ್ಕೆ ಸಂಸದ ರಾಘವೇಂದ್ರ ಸೂಚನೆ

0

B.Y.Raghavendra ಶಿವಮೊಗ್ಗ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬಿ.ಎಸ್.ಎನ್.ಎಲ್. ಮೊಬೈಲ್ ಸಂಪರ್ಕ ಕಲ್ಪಿಸುವ ನೆಟ್‌ವರ್ಕ್ ಅಸಮರ್ಪಕವಾಗಿದ್ದು, ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ಒದಗಿಸಲು ತುರ್ತು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಬಿ.ಎಸ್.ಎನ್.ಎಲ್. ವ್ಯವಸ್ಥಾಪಕ ವೆಂಕಟೇಶ್ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣೆ (ದಿಶಾ) ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ತಲೆದೂರಿರುವ ನೆಟ್ವರ್ಕ್ ಸಮಸ್ಯೆಯನ್ನು ಇತ್ಯರ್ಥಗೊಳಿಸುವಲ್ಲಿ ಬಿ.ಎಸ್.ಎನ್.ಎಲ್. ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಬ್ರಿಟೀಷ್ ಆಡಳಿತ ಪದ್ದತಿಯಿಂದ ಹೊರಬಂದು ಜನಸ್ನೇಹಿಯಾಗಿ ವ್ಯವಹರಿಸಬೇಕು. ಒಂದು ತಿಂಗಳಲ್ಲಿ ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಬೇಕು ಎಂದರು.

ಗ್ರಾಮಾಂತರ ಭಾಗಗಳಲ್ಲಿ ತೀವ್ರವಾಗಿ ಕಾಡುತ್ತಿರುವ ನೆಟ್ವರ್ಕ್ ಸಮಸ್ಯೆ ತಕ್ಷಣದಿಂದಲೇ ಪರಿಹಾರಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಅನೇಕ ಬಾರಿ ನೆಟ್ವರ್ಕ್ ಸಮಸ್ಯೆ ಪರಿಹರಿಸುವ ಕುರಿತ ಸಭೆಗಳನ್ನು ನಡೆಸಿ, ಯೋಜನೆಯ ರೂಪುರೇಷೆಗಳನ್ನು ಚರ್ಚಿಸಲಾಗಿತ್ತು.

ಆದಾಗ್ಯೂ ಸಮಸ್ಯೆ ಇನ್ನೂ ಜೀವಂತವಾಗಿರುವುದು ಬೇಸರವೆನಿಸಿದೆ. ಟವರ್‌ಗಳನ್ನು ನಿರ್ಮಿಸಲು ಇರುವ ಭೂಸ್ವಾಧೀನ ಪ್ರಕ್ರಿಯೆ, ಕಂದಾಯ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದ ಅವರು, ಜನಸಾಮಾನ್ಯರ ನಿರೀಕ್ಷೆಯಂತೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲೆಯ ಗ್ರಾಮಾಂತರ ಭಾಗ ಸೇರಿದಂತೆ ಸುಮಾರು 141 ನೆಟ್ವರ್ಕ್ ಕಂಬ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 138 ನೆಟ್ವರ್ಕ್ ಸ್ಥಾವರಗಳ ಕಾಮಗಾರಿ ಪ್ರಗತಿಯಲ್ಲಿವೆ. ಅರಣ್ಯ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ 63 ನೆಟ್ವರ್ಕ್ ಅಳವಡಿಕೆಯಲ್ಲಿ 15 ನೆಟ್ವರ್ಕ್ ಸಂಪರ್ಕ ಕಾರ್ಯ ಪೂರ್ಣಗೊಂಡಿವೆ. ಕಂದಾಯ ಭೂಮಿಗೆ ಸಂಬಂಧಿಸಿದ 55 ಪ್ರಕರಣಗಳಲ್ಲಿ 47 ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ 17 ನೆಟ್ವರ್ಕ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುವ ಬಗ್ಗೆ ಬಿ.ಎಸ್.ಎನ್.ಎಲ್. ಅಧಿಕಾರಿ ವೆಂಕಟೇಶ್ ಅವರಿಂದ ಸಂಸದರು ಮಾಹಿತಿ ಪಡೆದರು.

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ತೀರ್ಥಹಳ್ಳಿ ಪಟ್ಟಣ ಪ್ರದೇಶದಲ್ಲಿಯೇ ನೆಟ್ವರ್ಕ್ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ಬಿಎಸ್‌ಎನ್‌ಎಲ್ ಜನರ ನಿರೀಕ್ಷೆ, ಅಪೇಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

B.Y.Raghavendra ಅದಕ್ಕೆ ಪೂರಕವಾಗಿ ಶಿವಮೊಗ್ಗ ನಗರಕ್ಷೇತ್ರದ ಶಾಸಕ ಎಸ್.ಎನ್.ಚೆನ್ನಬಸಪ್ಪ ಅವರು ಮಾತನಾಡಿ, ನಗರ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ತುಂಬಾ ಇದೆ. ಈ ಸಮಸ್ಯೆ ಶಾಸಕರ ಕಚೇರಿಯನ್ನು ಬಿಟ್ಟಿಲ್ಲ. ತುರ್ತು ಸಂದರ್ಭದಲ್ಲಿ ಕಚೇರಿಯಿಂದ ಹೊರ ಬಂದು ಮಾತನಾಡುವ ಪ್ರಸಂಗ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿವಮೊಗ್ಗ-ತಾಳಗುಪ್ಪ ನಡುವೆ ಸಂಚರಿಸುವ ಎಲ್ಲಾ ರೈಲುಗಳು ಮಾರ್ಗದ ಎಲ್ಲಾ ನಿಲ್ದಾಣಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಕನಿಷ್ಟ 02 ನಿಮಿಷಗಳ ಕಾಲ ನಿಲುಗಡೆಗೆ ಅವಕಾಶ ನೀಡುವಂತೆ ಶಾಸಕ ಆರಗ ಜ್ಞಾನೇಂದ್ರ ಸಂಸದರಲ್ಲಿ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಯ ರೈಲು ನಿಲ್ಲಿಸುವ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾಗರ ತಾಲ್ಲೂಕಿನಲ್ಲಿ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ 2025ರ ಮೇ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು. ಈಗಾಗಲೇ ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಡಿಸೆಂಬರ್ ಮಾಸಾಂತ್ಯದೊಳಗೆ ಸೇತುವೆ ಮೇಲೆ ವಾಹನಗಳು ಪ್ರಾಯೋಗಿಕವಾಗಿ ಸಂಚರಿಸಲಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಎಂದರು.

ಸಾಗರ ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಹೆದ್ದಾರಿಗಳ ಕಾಮಗಾರಿ ಅತ್ಯಂತ ಕಳಪೆ ಮಟ್ಟದಿಂದ ಕೂಡಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ದೂರುಗಳು ಬಂದಿವೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೂಡಲೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಬಿ.ವೈ.ರಾಘವೇಂದ್ರ, ಸಂಸದರು.
ಶಿವಮೊಗ್ಗ-ರಾಣೆಬೆನ್ನೂರು ರೈಲುಮಾರ್ಗಕ್ಕೆ ಸಂಬAಧಿಸಿದAತೆ ಶೇ. ೯೦ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರಬೇಕು. ಇದರಿಂದ, ಕೇಂದ್ರ ಸರ್ಕಾರಕ್ಕೆ ಅನುದಾನದ ಬೇಡಿಕೆ ಸಲ್ಲಿಸಲು ಅನುಕೂಲವಾಗಲಿದೆ ಇಲ್ಲಿನ ಕಾಮಗಾರಿಗಳಿಗೆ ಸಂಬAಧಿಸಿದAತೆ ಭೂಸ್ವಾಧೀನ ಪಡಿಸಿಕೊಳ್ಳುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ಭೂಸ್ವಾದೀನಕ್ಕೆ ಸಂಬAಧಿಸಿದAತೆ ಯಾವುದೇ ರೈತರಿಗೆ ಹಂಚುವ ಪರಿಹಾರದಲ್ಲಿ ಅನ್ಯಾಯವಾಗಬಾರದು. ಭೂಮಿ ವಶಪಡಿಸಿಕೊಂಡ ರೈತರಿಗೂ ಸಹ ಶೇ. ೯೦ರಷ್ಟು ಹಣ ಸಂದಾಯವಾಗಿರಬೇಕು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಮಾಜಿ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶ್ರೀಮತಿ ಶಾರದಾ ಪೂರ್ಯಾನಾಯ್ಕ್, ಶ್ರೀಮತಿ ಬಲ್ಕಿಷ್‌ಬಾನು, ಡಾ|| ಧನಂಜಯಸರ್ಜಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಹಾಗೂ ದಿಶಾ ಸಮಿತಿಯ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

Karnataka Rajyotsava ಕೊರಿಯರ್ ಮುಂತಾಗಿ ಅಂಚೆಗೆ ಪರ್ಯಾಯ ಬಂದರೂ ಅಂಚೆ ಸೇವೆ ಕುಂದಿಲ್ಲ- ಡಾ.ಎಚ್.ಬಿ.ಮಂಜುನಾಥ್

0

Karnataka Rajyotsava ದೇಶದಲ್ಲಿ ಸುಮಾರು 1,65,000 ಅಂಚೆ ಕಚೇರಿಗಳ ನಾಲ್ಕು ಲಕ್ಷದ ಮೂವತ್ತು ಸಾವಿರ ಸಿಬ್ಬಂದಿಗಳು ಪ್ರತಿನಿತ್ಯ ಸುಮಾರು 13 ಕೋಟಿ ಮಂದಿಗೆ ಅಂಚೆ ಸೇವೆಯನ್ನು ಒದಗಿಸುತ್ತಿದ್ದು ವಿಶ್ವದ ಅತಿ ದೊಡ್ಡ ಸೇವಾ ಜಾಲಗಳ ಪೈಕಿ ಒಂದಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಪ್ರಶಂಸೆ ವ್ಯಕ್ತಪಡಿಸಿದರು.

ದಾವಣಗೆರೆ ಪ್ರಧಾನ ಅಂಚೆ ಕಛೇರಿಯ ಮನರಂಜನಾ ಕೂಟ ಹಾಗೂ ವಿಭಾಗೀಯ ಕಚೇರಿ ವತಿಯಿಂದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಏರ್ಪಾಡಾಗಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಾ ಕುರಿಯರ್ ಮುಂತಾಗಿ ಅಂಚೆಗೆ ಏನೇ ಪರ್ಯಾಯ ವ್ಯವಸ್ಥೆಗಳು ಬಂದರೂ ಭಾರತೀಯ ಅಂಚೆ ಇಲಾಖೆಯ ಪ್ರಾಮುಖ್ಯತೆಗೆ ಕುಂದು ಬಂದಿಲ್ಲ, ಕೇವಲ ಅಂಚೆ ಸೇವೆ ಒಂದೇ ಅಲ್ಲದೆ ಸಮಾಜಮುಖಿಯಾದ ಜನಪರವಾದ ಅನೇಕ ಸೇವಾ ಸೌಲಭ್ಯಗಳಿಂದಾಗಿ ಭಾರತೀಯ ಅಂಚೆಯು ಅನಿವಾರ್ಯ ಅವಶ್ಯವೂ ಆಗಿ ತನ್ನ ಜನಪ್ರಿಯತೆ ಹಾಗೂ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದರು.

ಭಾಷೆ ಕೇವಲ ಅಭಿವ್ಯಕ್ತಿ ಮಾಧ್ಯಮ, ಸಂವಹನ ಸಾಧನ ಅಷ್ಟೇ ಅಲ್ಲ, ಆ ಭಾಷಿಗರ ಸಂಸ್ಕೃತಿಯೂ ಅದರಲ್ಲಿ ಬಿಂಬಿತವಾಗುತ್ತದೆ. ಭಾಷೆ ಉಳಿದರೆ ಸಂಸ್ಕೃತಿಯೂ ಉಳಿದಂತೆ, ಆದರೆ ಈಗೀಗ ಹಳ್ಳಿ ಪಟ್ಟಣ ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ತಿನ್ನುವ ಅನ್ನಕ್ಕೆ ಅನ್ನ ಎನ್ನದೆ ರೈಸ್ ಎನ್ನುತ್ತಿರುವುದು ವಿಪರ್ಯಾಸವಾಗಿದೆ. ದಿನನಿತ್ಯದ ನಮ್ಮ ಭಾಷಾ ಬಳಕೆಯಲ್ಲಿ ಅನವಶ್ಯಕವಾದ ಅನ್ಯ ಭಾಷಾ ಪದಗಳನ್ನು ನಾವೆಷ್ಟು ಬಳಸುತ್ತಿದ್ದೇವೆ ಎಂಬುದನ್ನು ಪ್ರತಿಯೊಬ್ಬರು ತಾವಾಗಿಯೇ ವಿಮರ್ಶಿಸಿಕೊಂಡು ಸರಿಪಡಿಸಿಕೊಂಡಲ್ಲಿ ನಮ್ಮ ಭಾಷೆ ಖಂಡಿತ ಉಳಿಯುತ್ತದೆ ಎಂದರು.

Karnataka Rajyotsava ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂಚೆ ಅಧೀಕ್ಷಕರಾದ ಚಂದ್ರಶೇಖರ ಹೊಳ್ಳರವರು ವೈವಿಧ್ಯಮಯ ಪ್ರಯೋಗ ನಮ್ಮ ಕನ್ನಡ ಭಾಷೆಗೆ ಇದೆ, ಕನ್ನಡ ಧ್ವಜವು ಹಳದಿ ಮತ್ತು ಕೆಂಪು ವರ್ಣಗಳ ಅರ್ಥವತ್ತಾದ ಸಂಕೇತ ಹೊಂದಿದೆ ಎಂದರು. ಪ್ರಧಾನ ಅಂಚೆಪಾಲಕರಾದ ಎಂ. ಓಂಕಾರ ಮೂರ್ತಿ ಯವರ ಅಧ್ಯಕ್ಷತೆಯಲ್ಲಿ ಸಹಾಯಕ ಅಂಚೆ ಅಧೀಕ್ಷಕರುಗಳಾದ ಜೆ.ಎಸ್. ಗುರುಪ್ರಸಾದ್ ಹಾಗೂ ಕೆ. ಎಮ್. ನರೇಂದ್ರ ನಾಯ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ದಿನೇಶ್ ಆಚಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಅಂಚೆ ಕಚೇರಿಯ ಮಹಿಳಾ ಸಿಬ್ಬಂದಿ ನಾಡಗೀತೆ ಹಾಡಿದರು.

ಜೆ. ಎಸ್. ಗುರುಪ್ರಸಾದ್ ಪ್ರಾರ್ಥನೆ ನೆರವೇರಿಸಿದರೆ ಯಾಸ್ಮಿನ್ ಬಾನು ಸ್ವಾಗತ ಕೋರಿದರು. ಅತಿಥಿಗಳ ಪರಿಚಯವನ್ನು ಕೆ.ಪಿ.ಮಮತಾ ಮಾಡಿದರು. ಸಾರ್ವಜನಿಕ ಸಂಪರ್ಕ ಅಂಚೆ ನಿರೀಕ್ಷಕ ಅರಳು ಮಲ್ಲಿಗೆ ನಾಗರಾಜರಾವ್ ವೆಂಕಟರಾಮಯ್ಯ ಬಹುಮಾನ ವಿತರಣೆ ನಿರ್ವಹಿಸಿದರು.ಲೋಕೇಶ್ ನಾಯ್ಕ ವಂದನೆ ಸಲ್ಲಿಸಿದರು. ಹಿರಿಯೂರಿನ ದಿವೂಶಂಕರ್ ಅಣಕು ಪ್ರದರ್ಶನ ನೀಡಿದರೆ ಶ್ರೀನಿವಾಸ್ ಮಾಯಕೊಂಡ ಮುಂತಾದವರು ಸಾಂಸ್ಕೃತಿಕ ಪ್ರಸ್ತುತಿ ನೆರವೇರಿಸಿದರು. ಸೋಮಣ್ಣ ಮಾಯಾಚಾರ್ ಮುಂತಾದವರು ಸಹಕರಿಸಿದರು.

Kanakadasa Jayanti ಕನಕಶ್ರೀ ಪ್ರಶಸ್ತಿಗೆ ವಿದ್ವಾಂಸ ವ್ಯಾಸನಕೆರೆ ಪ್ರಭಂಜನಾಚಾರ್ಯ ಆಯ್ಕೆ- ಸಚಿವ ಶಿವರಾಜ ತಂಗಡಗಿ

0

Kanakadasa Jayanti ಶ್ರೀ ಸಂತ ಕನಕದಾಸ ಜಯಂತಿ ಪ್ರಯುಕ್ತ ನೀಡಲಾಗುವ 2024ನೇ ಸಾಲಿನ ಪ್ರತಿಷ್ಠಿತ ಕನಕಶ್ರೀ ಪ್ರಶಸ್ತಿ ಗೆ ಬಳ್ಳಾರಿಯ ಶ್ರೀ ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಸೋಮವಾರ ನವೆಂಬರ್ 18ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಕನಕದಾಸ ಜಯಂತಿ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಪ್ರದಾನ ಮಾಡಲಿದ್ದಾರೆ ಎಂದು ಅವರು ಹೇಳಿದರು.

Kanakadasa Jayanti ಈ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು , ಕನಕದಾಸರ ಪುತ್ಥಳಿ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

Rotary Pre School ರೋಟರಿ ಪೂರ್ವ ಆಂಗ್ಲ ಶಾಲೆಗೆ ಪ್ರತಿಭಾಕಾರಂಜಿಯಲ್ಲಿ 24 ಕಲಾಪ್ರಕಾರಗಳಲ್ಲಿ ಪ್ರಶಸ್ತಿ ಸುರಿಮಳೆ

0

Rotary Pre School ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆ ರಾಜೇಂದ್ರನಗರ ಶಿವಮೊಗ್ಗ ಮತ್ತು ರವೀಂದ್ರನಗರ ಕ್ಲಸ್ಟರ್‍ನ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಮಾರಂಭದಲ್ಲಿ ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರೋಟರಿ ಪೂರ್ವ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಸುಮಾರು 40 ವಿವಿಧ ಕಲಾ ಪ್ರಕಾರಗಳಲ್ಲಿ ತಮ್ಮಲ್ಲಿದ್ದ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿ 24 ಕಲಾ ಪ್ರಕಾರಗಳಲ್ಲಿ ಪ್ರಶಸ್ತಿಗಳನ್ನು ಪಡೆದು, ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯಿಂದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಕ್ಕೆ 11 ಕಲಾ ಪ್ರಕಾರಗಳಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.

ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿಸುವವಲ್ಲಿ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕ ವರ್ಗದವರ ಕೊಡುಗೆಯು ಕೂಡ ಬಹಳ ಮುಖ್ಯವಾಗಿದ್ದು, ಪ್ರಶಸ್ತಿಗೆ ಭಾಜನರಾಗಿರುವ ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ವತಿಯಿಂದ ಪ್ರಶಂಶಿಸಿ, ಪ್ರಸಸ್ತಿ ಪತ್ರಗಳನ್ನು ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಲಾಯಿತು.

Rotary Pre School ಈ ಸಮಾರಂಭದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ರೊ. ಅರುಣ್ ದೀಕ್ಷಿತ್, ಕಾರ್ಯದರ್ಶಿ ರೊ. ಶಶಿಕಾಂತ್ ನಾಡಿಗ್ ಮತ್ತು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಮತ್ತು ಛಾರಿಟಬಲ್ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ, ರೊ. ಚಂದ್ರಶೇಖರಯ್ಯ.ಎಂ, ಉಪಾಧ್ಯಕ್ಷರು ರೊ. ಡಾ. ಪರಮೇಶ್ವರ್ ಡಿ. ಶಿಗ್ಗಾಂವ್, ಕಾರ್ಯದರ್ಶಿ ರೊ. ಎಸ್.ಸಿ.ರಾಮಚಂದ್ರ, ಖಜಾಂಚಿ ರೊ. ವಿಜಯ್ ಕುಮಾರ್.ಜಿ, ಜಂಟಿ ಕಾರ್ಯದರ್ಶಿ ರೊ. ನಾಗವೇಣಿ.ಎಸ್.ಆರ್, ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕ ವರ್ಗದವರು ಹಾಗೂ ಬಿಂದು ವಿಜಯ್ ಕುಮಾರ್ ಉಪಸ್ಥಿತರಿದ್ದರು. ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

Shimoga Roller Skating Association ಶಿವಮೊಗ್ಗದ ಆರು ಸ್ಕೇಟರ್ ಗಳು ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆ

0

Shimoga Roller Skating Association ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ಆರು ಸ್ಕೇಟರ್‌ಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೊದಲ ಹಂತದಲ್ಲೇ ಐದರಿಂದ ಏಳು ವರ್ಷ ವಯೋಮಿತಿಯ ಕ್ರೀಡಾಕೂಟದಲ್ಲಿ ನಮ್ಮ ಶಿವಮೊಗ್ಗ ತಂಡದ ಹಿತಾ ಪ್ರವೀಣ್ ಎರಡು ಬೆಳ್ಳಿ ಪದಕ ಗೆಲ್ಲುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅದೇ ರೀತಿ 17 ವರ್ಷ ವಯೋಮಿತಿಯ ಪಂದ್ಯಾವಳಿಯಲ್ಲಿ ನಮ್ಮ ಶಿವಮೊಗ್ಗ ತಂಡದ ರಾಗಶ್ರೀ ಎಸ್. ಅವರು ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ವಿಶೇಷವಾಗಿದೆ.
ಈ ಪಂದ್ಯಾವಳಿಯಲ್ಲಿ11-14 ವರ್ಷ ವಯೋಮಿತಿಯ ಸ್ಪರ್ಧೆಯಲ್ಲಿ ಸೈಯದ್ ಪೈಜಲ್ ಎರಡು ಕಂಚು ಹಾಗೂ ಒಂದು ಬೆಳ್ಳಿ ಪದಕವನ್ನು ಪಡೆದಿದ್ದು, ದಾನೇಶ್ ಎಚ್ ಶೆಟ್ಟಿ ಅವರು 14-17 ವರ್ಷ ವಯೋಮಿತಿಯ ಪಂದ್ಯದಲ್ಲಿ ಒಂದು ಕಂಚಿನ ಪದಕ ಪಡೆದಿದ್ದಾರೆ. 17ವರ್ಷ ವಯೋಮಿತಿಯ ಪಂದ್ಯದಲ್ಲಿ ಸಾಧನ ಎಸ್. ಒಂದು ಕಂಚಿನ ಪದಕ ಪಡೆದಿದ್ದರೆ 9-11 ವರ್ಷ ವಯೋಮಿತಿಯ ಪಂದ್ಯಾವಳಿಯಲ್ಲಿ ನೀಲಾಸಂಪತ್ ಒಂದು ಬೆಳ್ಳಿ ಪದಕ ಪಡೆಯುವ ಮೂಲಕ ರಾಷ್ಟ್ರಮಟ್ಟದ ಆಯ್ಕೆಗೆ ಪಾತ್ರರಾಗಿದ್ದಾರೆ.
Shimoga Roller Skating Association 11-14 ವರ್ಷ ವಯೋಮಿತಿಯ ಪಂದ್ಯದಲ್ಲಿ ವೇದಾಂಶ್ ಗಜೇಂದ್ರ ಪೆರಡಿ ಒಂದು ಬೆಳ್ಳಿ ಪದಕವನ್ನು ಪಡೆದಿದ್ದಾರೆ.
ನಮ್ಮ ಶಿವಮೊಗ್ಗ ಸ್ಟೇಟಿಂಗ್ ಅಸೋಸಿಯೇಷನ್‌ನ ಸ್ಕೇಟರ್ ಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದನ್ನು ಶಿವಮೊಗ್ಗ ಲೋಕಸಭಾ ಸದಸ್ಯರಾದ ಶ್ರೀ ಬಿ. ವೈ. ರಾಘವೇಂದ್ರ ಅವರು ಪ್ರಶಂಸಿಸಿ ಅವರ ಕ್ರೀಡಾ ಜಗತ್ತು ಇನ್ನಷ್ಟು ಉತ್ತಮವಾಗಲೆಂದು ಶುಭ ಹಾರೈಸಿದ್ದಾರೆ.
ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಯ ಹಾಗೂ ಸಂಸ್ಥೆಯ ಗೌರವಕ್ಕೆ ಕಾರಣವಾದ ಎಲ್ಲಾ ಸ್ಟೇಟರ್‌ಗಳನ್ನು ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್ ಕೆ.ಎಚ್. ಹಾಗೂ ಪ್ರಧಾನ ಕಾರ್ಯದರ್ಶಿ ಎಂ. ರವಿ ಮತ್ತು ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Adichunchanagiri Education Trust Shimoga ಮಕ್ಕಳು ದೇಶದ ಭವಿಷ್ಯ ಪ್ರತಿನಿಧಿಸುವ ಅಮೂಲ್ಯ ಸಂಪತ್ತು- ಶ್ರೀಸಾಯಿನಾಥಶ್ರೀ

0

Adichunchanagiri Education Trust Shimoga ಮಕ್ಕಳ ಮನಸ್ಸು ನಿರ್ಮಲವಾಗಿರುತ್ತದೆ, ಮೇಲು ಕೀಳು ಎಂಬ ಭೇದ ಭಾವ ಇರುವುದಿಲ್ಲ, ಮಕ್ಕಳು ದೇಶದ ಭವಿಷ್ಯವನ್ನು ಪ್ರತಿನಿಧಿಸುವ ಅತ್ಯಮೂಲ್ಯವಾದ ಸಂಪತ್ತು. ಎಂದು ಶ್ರೀ ಆದಿಚುಂಚನಗಿರಿ ಮಠ, ಶಿವಮೊಗ್ಗ ಶಾಖೆಯ ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಶಾಲಾ ಕಾಲೇಜಿನ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆಯ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು, ಮಕ್ಕಳೆಲ್ಲರಿಂದ ಚಾಚಾ ನೆಹರೂ ಎಂದೇ ಕರೆಸಿಕೊಳ್ಳುತ್ತಿದ್ದ ಪಂಡಿತ್ ಜವಾಹರ್ ಲಾಲ್ ನೆಹರುರವರ ಜನ್ಮದಿನ ಇಂದು, ನೆಹರು ಅವರು ಮಕ್ಕಳ ಸಮೂಹಕ್ಕೆ ಅಕ್ಕರೆಯ ಪ್ರೀತಿಯ ಚಾಚಾ ಆಗಿದ್ದರು ಎಂದು ತಿಳಿಸಿದರು.
ಮುದ್ದು ಮಕ್ಕಳ ಕಣ್ಣುಗಳಲ್ಲಿ ನೆಹರು ಅವರ ಜೀವನದ ಆರ‍್ಶ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು. ಜೀವನದಲ್ಲಿ ಬರುವ ಪ್ರತಿಯೊಂದು ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಶುಭ ಹಾರೈಸಿದರು.
Adichunchanagiri Education Trust Shimoga ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು, ರಂಗಭೂಮಿ ಕಲಾವಿದರಾದ ಡಾ. ಚಿದಾನಂದ್ ಎನ್.ಕೆ. ಸೊರಬ ಮಾತನಾಡುತ್ತಾ, ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಪ್ರಯುಕ್ತ ಭಕ್ತಿ ಗೀತೆಯನ್ನು ಮಕ್ಕಳಿಗೆ ಹೇಳಿಕೊಡುತ್ತಾ ಹಾಡಿ ರಂಜಿಸಿದರು. ನಿಮ್ಮ ಸರಿ ತಪ್ಪುಗಳನ್ನು ಪರಾರ‍್ಶೆ ಮಾಡುವವರು ನೀವಾಗಬೇಕು ಎಂದು ಹೇಳಿದರು.
ಇಂದಿನ ದಿನಮಾನಗಳಲ್ಲಿ ಮಕ್ಕಳು ಮೊಬೈಲ್, ಟಿವಿ ಬಳಕೆ ಅತಿಯಾದರೆ ಅದು ನಮ್ಮ ಜೀವನವನ್ನೇ ಹಾಳು ಮಾಡುತ್ತದೆ. ಅದನ್ನು ಹಿತ ಮಿತವಾಗಿ ಬಳಸಿದರೆ, ನಮ್ಮ ಜೀವನಕ್ಕೆ ಸಹಾಯ ಮಾಡುತ್ತದೆ. ಆದರೆ ವಿದ್ಯರ‍್ಥಿಗಳಾದ ನಿಮಗೆ ಅದರಲ್ಲಿ ಕೆಟ್ಟದ್ದನ್ನು ಬಳಸಿಕೊಳ್ಳುವ ಮನಸ್ಥಿತಿಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಪರೀಕ್ಷೆ ಮುಗಿಯುವ ತನಕ ಮೊಬೈಲನ್ನು ಮುಟ್ಟದೇ, ಪುಸ್ತಕದ ಮೊರೆ ಹೋಗಿ ಅದು ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ ಎಂದ ಅವರು, ಪರೀಕ್ಷೆಗೆ ಕೆಲವೇ ದಿನಗಳು ಇರುವ ಈ ಸಂರ‍್ಭದಲ್ಲಿ ಪ್ರತಿ ನಿಮಿಷವನ್ನೂ ಕೂಡ ವ್ಯಯಮಾಡದೇ, ಸದುಪಯೋಗ ಪಡಿಸಿಕೊಂಡು ಅಭ್ಯಾಸ ಮಾಡಿದ್ದೇ ಆದರೆ ಪರೀಕ್ಷೆಯಲ್ಲಿ ನಿಮ್ಮ ನಿರೀಕ್ಷೆಯ ಗೋಲನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ಕರ‍್ಯಕ್ರಮದಲ್ಲಿ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್., ಉಪನ್ಯಾಸಕರು, ಅಧ್ಯಾಪಕ ವೃಂದದವರು, ಶಾಲಾ ಕಾಲೇಜಿನ ವಿದ್ಯಾರ‍್ಥಿಗಳು ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.