Tuesday, March 24, 2026
Tuesday, March 24, 2026
Home Blog Page 498

Shivamogga Police ಹೊಳಲೂರುನ ನಿವಾಸಿ ನಾಪತ್ತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮಾಹಿತಿ

0

Shivamogga Police ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಣೆಯಾದವರ ಕುರಿತು ಪ್ರಕಟಣೆಗಾಗಿ
ಹೊಳಲೂರು ಗ್ರಾಮ ವಾಸಿ 66 ವರ್ಷದ ವಿರೂಪಾಕ್ಷಪ್ಪ ಬಿನ್ ಲೇ ರಂಗಪ್ಪ ಎಂಬುವವರು ಜೂ. 5ರಂದು ಮನೆಯಿಂದ ಹೊರಗೆ ಹೋಗಿದ್ದು, ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ 5 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ಬಿಳಿ ಶರ್ಟ್, ನೀಲಿ ಪಂಚೆ ಮತ್ತು ಕೆಂಪು ಟವೆಲ್ ಧರಿಸಿರುತ್ತಾರೆ. ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ.
ತೊಪ್ಪಿನಘಟ್ಟ, 1ನೇ ಕ್ರಾಸ್,ಹರಿಗೆ ವಾಸಿ 48 ವರ್ಷದ ಸತೀಶ್ ಡಿ ಬಿನ್ ಲೇ ದೇವರಾಜ್ ಎಂಬ ವ್ಯಕ್ತಿಯು ಸೆ.24ರಂದು ಮನೆಯಿಂದ ಕೆಲಸಕ್ಕೆ ಹೋದವರು, ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ 5.6 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಕಪ್ಪು ಕೂದಲು ಹೊಂದಿದ್ದು, ಮನೆಯಿಂದ ಹೋಗುವಾಗ ಕ್ರೀಮ್ ಬಣ್ಣದ ಪ್ಯಾಂಟ್, ನೀಲಿ ಬಣ್ಣದ ಕಾಟನ್ ಶರ್ಟ್ ಧರಿಸಿರುತ್ತಾರೆ. ಕನ್ನಡ ಮತ್ತು ತಮಿಳು ಭಾಷೆ ಮಾತನಾಡುತ್ತಾರೆ
ಗೊಂದಿಚಟ್ನಹಳ್ಳಿ ಗ್ರಾಮ ವಾಸಿ 20 ವರ್ಷದ ಅಮೃತ ಟಿ ಬಿನ್ ಎಸ್ ತಿಪ್ಪೇಶಪ್ಪ ಎಂಬ ಮಹಿಳೆ ಆ.21ರಂದು ಮನೆಯಿಂದ ಸ್ನೇಹಿತೆಯ ಜೊತೆ ಹೊರಗೆ ಹೋಗಿದ್ದು, ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ಮಹಿಳೆ ಚಹರೆ 5.1ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್‌ದು, ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ ಬಣ್ಣದ ಮಿಶ್ರಿತ ಚೂಡಿದಾರ ಧರಿಸಿರುತ್ತಾರೆ. ಕನ್ನಡ ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ.
Shivamogga Police ರಾಗಿಗುಡ್ಡ 02ನೇ ಕ್ರಾಸ್, ವಾಸಿ 69 ವರ್ಷದ ದೇವೇಗೌಡ ಬಿನ್ ಲೇ ಚುಂಚೇಗೌಡ ಎಂಬುವವರು ಅ. 31 ರಂದು ರಾತ್ರಿ ಮನೆಯಿಂದ ಹೊರಗೆ ಹೋಗಿದ್ದು, ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ 5 ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಬಿಜಾಪುರ ತಾ.ಘಾಳಪೂಜಿ ಗ್ರಾಮ ವಾಸಿ 20 ವರ್ಷದ ಮೀನಾಕ್ಷಿ ಬಿನ್ ರಮೇಶ್ ಹಾರೆದೊಂಬರ ಎಂಬ ಯುವತಿ ನ. 07 ರಂದು ಶಿವಮೊಗ್ಗ ಕಲ್ಲಾಪುರದ ಸಾವಿತ್ರಮ್ಮ ಮನೆಯಿಂದ ಹೋದವರು ಈ ವರೆಗೂ ವಾಪಸ್ಸಾಗಿರುವುದಿಲ್ಲ. ಈ ಮಹಿಳೆ ಚಹರೆ 5ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ಅರಿಶಿಣ ಬಣ್ಣದ ಚೂಡಿದಾರ, ಪ್ಯಾಂಟ್ ಮತ್ತು ಕಪ್ಪು ಬಣ್ಣದ ದುಪ್ಪಟ್ಟ ಧರಿಸಿರುತ್ತಾರೆ. ಕನ್ನಡ, ಹಿಂದಿ ಮತ್ತು ದೊಂಬರ ಭಾಷೆ ಮಾತನಾಡುತ್ತಾರೆ.
ಚಿತ್ರದುರ್ಗ ಜಿಲ್ಲೆ, ಕಾಲ್ಕೆರೆ ಗ್ರಾಮ ವಾಸಿ ನಿಂಗರಾಜ ಕೆ.ಎಸ್ ಬಿನ್ ಲೇ ಶೇಖರಪ್ಪ ಎಂಬ 23 ವರ್ಷದ ಬುದ್ಧಿಮಾಂದ್ಯ ವ್ಯಕ್ತಿ ಅ.11 ರಂದು ಶಿವಮೊಗದ್ಗ ಚೀಲೂರು ಬಸ್ಸ್ ನಿಲ್ದಾಣದಿಂದ ಹೋದವರು ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿ ಚಹರೆ 5.6ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದು, ನಡೆಯುವಾಗ ಎರಡೂ ಕಾಲು ತುದಿಯಲ್ಲಿ ಮಂಗಾಲಿನಲ್ಲಿ ನಡೆಯುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಬರ್ಮೂಡ ಚಡ್ಡಿ ಧರಿಸಿರುತ್ತಾರೆ. ಕನ್ನಡ ಬಾಷೆ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ.
ಕಾಣೆಯಾಗಿರುವ ಈ ವ್ಯಕ್ತಿಗಳ ಸುಳಿವು ದೊರೆಕಿದಲ್ಲಿ ಸಿಪಿಐ ಗ್ರಾಮಾಂತರ ವೃತ್ತ ಶಿವಮೊಗ್ಗ, ಪಿ.ಎಸ್.ಐ ಗ್ರಾಮಾಂತರ ಪೊಲೀಸ್ ಠಾಣೆ ದೂ. ಸಂ. 08182 261400, 261418, ಮೊ. ನಂ 9480803332, 9480803350 ಅಥವಾ ಕಂಟ್ರೋಲ್ ಶಿವಮೊಗ್ಗ 100 ಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.

MESCOM ಗಮನಿಸಿ ನವೆಂಬರ್ 17 ರಿಂದ 20 ವರೆಗೆ ಹಾಡೋನಹಳ್ಳಿ ಸುತ್ತಮುತ್ತ ವಿದ್ಯುತ್ ಸರಬರಾಜಿಲ್ಲ. ನಾಕುದಿನ ಕತ್ತಲೆ!

0

MESCOM ಹೊಳಲೂರು 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಮಾರ್ಗಗಳಲ್ಲಿ ಲಿಂಕ್ ಲೈನ್ ಮಾರ್ಗ ರಚಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ. 17 ರಿಂದ 20 ರವರೆಗೆ ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಹಾಡೋನಹಳ್ಳಿ, ಹಳೆ/ಹೊಸ ಮಡಿಕೆಚೀಲೂರು ಮತ್ತು ಬಿ.ಕೆ.ತಾವರೆ ಗ್ರಾಮಗಳ ವ್ಯಾಪ್ತಿಯಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ MESCOM ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Shimoga Gayatri Vidyalaya ಪರಿಪೂರ್ಣತೆ ಸಾಧಿಸಲು ಮಕ್ಕಳಿಗೆ ಸಂಸ್ಕಾರ & ಕೌಶಲ್ಯ ಅಗತ್ಯ – ಜಿ‌.ವಿಜಯ ಕುಮಾರ್

0

Shimoga Gayatri Vidyalaya ಮಕ್ಕಳು ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳಬೇಕಾದರೆ ಸಂಸ್ಕಾರ ಹಾಗೂ ಕೌಶಲ್ಯ ತುಂಬಾ ಅತ್ಯಗತ್ಯ ಎಂದು ಶುಭದಿನ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಹಾಗೂ ರೋಟರಿ ಮಾಜಿ ಸಹಾಯಕ ಗವರ್ನರ್ ಆದ ಜಿ ವಿಜಯಕುಮಾರ್ ಅಭಿಮತ ವ್ಯಕ್ತಪಡಿಸಿದರು.

Shimoga Gayatri Vidyalaya ಶಿವಮೊಗ್ಗ ನಗರದ ಗಾಯಿತ್ರಿ ವಿದ್ಯಾಲಯದಲ್ಲಿ ಚಾಚಾ ನೆಹರು ಅವರ ಜನ್ಮದಿನಾಚರಣೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಮಕ್ಕಳ ಮನಸ್ಸು ತಿಳಿಯಾದ ಸುಣ್ಣದ ಗೋಡೆ ಇದ್ದಹಾಗೆ ನಾವು ಬರೆಯುತ್ತೇವೋ ತಿಳಿಸುತ್ತೇವೆ ಅದು ಅವರ ಮನಸ್ಸಿನಲ್ಲಿ ಉಳಿಯುತ್ತದೆ ಹಾಗಾಗಿ ಮಕ್ಕಳ ಎದುರುಗಡೆ ನಮ್ಮ ನಡವಳಿಕೆಗಳು ತುಂಬಾ ಸರಿಯಾಗಿರಬೇಕು ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಅವಕಾಶಗಳನ್ನು ಕಲ್ಪಿಸಬೇಕು ವೇದಿಕೆಗಳನ್ನು ನೀಡಬೇಕು ಅವರ ಸರಿ ತಪ್ಪುಗಳನ್ನು ತಿದ್ದುದರ ಮುಖಾಂತರ ಅವರನ್ನು ಸನ್ಮಾರ್ಗದಲ್ಲಿ ನಡೆಸುವುದು ಗುರುಹಿರಿಯರ ಹಾಗೂ ಶಿಕ್ಷಕರ ಕರ್ತವ್ಯ ಎಂದ ಅವರು ಬಾಲ್ಯದಲ್ಲಿ ಮಕ್ಕಳಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಆಸಕ್ತಿಯನ್ನು ಮೂಡಿಸಬೇಕು ಎಂದು ನುಡಿದರು ಇದೇ ಸಂದರ್ಭದಲ್ಲಿ ಗಾಯಿತ್ರಿ ವಿದ್ಯಾಲಯದ ಅಧ್ಯಕ್ಷರಾದ ಹೆಚ್ ಮೊಣೇಶ್ವರ ಶೇಟ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಸಾಧಕರ ಪರಿಚಯ ಹಾಗೂ ಜಯಂತಿಗಳ ದಿನಾಚರಣೆಯ ಮಾಹಿತಿಯನ್ನು ತಿಳಿಸಬೇಕಾಗಿದೆ ಚಿಂತನೆಗಳನ್ನು ಬೋದಿ ಸುವ ಅವಶ್ಯಕತೆ ಇದೆ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದರು.. ಕಾರ್ಯಕ್ರಮದಲ್ಲಿ. ಖಜಾಂಚಿ ಚಂದ್ರಹಾಸ್ ಪಿ ರಾಯ್ಕರ್. ಎಂ ಬಿ ಕುರುಡೇಕರ್. ರಾಮ ಸುಬ್ಬರಾಯ ಶೇಟ್.. ಮಾಲ್ತೇಶ್ ರಾಯ್ಕರ್
ಮಂಜುನಾಥ ರಾಯ್ಕರ್. . ಮತ್ತು ಶಿಕ್ಷಕರು ಉಪಸ್ಥಿತರಿದ್ದರು

Rotary Shivamogga ರೋಟರಿ ಪೂರ್ವಯುವಶಕ್ತಿ ನವಭಾರತ ನಿರ್ಮಾಣಕ್ಕೆ ಬಹಳ ಪ್ರಮುಖ- ಡಾ.ಪರಮೇಶ್ವರ್ ಡಿ.ಶಿಗ್ಗಾಂವ್

0

Rotary Shivamogga ರಾಷ್ಟ್ರ ನಿರ್ಮಾಣದಲ್ಲಿ ಯುವ ಶಕ್ತಿಯ ಕೊಡುಗೆ ಅನನ್ಯವಾದುದೆಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ನ ಉಪಾಧ್ಯಕ್ಷರಾದ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್ ಇವರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಅವರು ಇಂದು ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿದ್ದ, ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಭಾರತದಲ್ಲಿ ಯುವ ಜನರು ಅಪಾರ ಸಂಖ್ಯೆಯಲ್ಲಿದ್ದು, ಯುವ ಶಕ್ತಿ ನವ ಭಾರತದ ನಿರ್ಮಾಣಕ್ಕೆ ಬಹಳ ಪ್ರಮುಖವಾಗಿರುತ್ತದೆಂದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೋರಾಟದ ಮನೋಭಾವದ ಜೊತೆಗೆ ರಾಷ್ಟç ನಿರ್ಮಾಣದಲ್ಲಿ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಂತೆ ನಡೆಯುವುದು ಕೂಡ ಅವಶ್ಯಕತೆ ಇದೆ ಎಂದು ತಿಳಿಸಿದರು.
ರೋಟರಿ ಪೂರ್ವ ಅಧ್ಯಕ್ಷರಾದ ರೊ. ಅರುಣ್ ದೀಕ್ಷಿತ್ ಇವರು ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತ, ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣದ ಕೊರತೆ ಪ್ರಸ್ತುತದಲ್ಲಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಂಸ್ಕಾರಯುಕ್ತ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಕೊಡಬೇಕೆಂದು ಕರೆ ನೀಡಿದರು.
ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ನ ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಇವರು ಈ ಸಂದರ್ಭದಲ್ಲಿ ಮಾತನಾಡುತ್ತ, ಪ್ರಸ್ತುತ ಮಾಹಿತಿ ತಂತ್ರಜ್ಞಾನ ಈ ಯುಗದಲ್ಲಿ ವಿದ್ಯಾಥಿಗಳು ತಮ್ಮ ಹಕ್ಕಿನ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಬೇಕೆಂದು, ನಾನಾ ಕಾರಣದಿಂದ ಭ್ರೂಣ ಹತ್ಯೆಯಂತ ಹೀನ ಘಟನಾವಳಿಗಳು ನಡೆಯುತ್ತಿದ್ದು, ಮುಖ್ಯವಾಗಿ ಈ ನಿಟ್ಟಿನಲ್ಲಿ ಹಕ್ಕು ಮತ್ತು ಕಾನೂನಿನ ಅರಿವನ್ನು ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವೆಂದು ಮಕ್ಕಳಿಗೆ ಸಹಜವಾಗಿ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಭಾಗವಹಿಸುವ ಹಕ್ಕು & ವಿಕಸನ ಹೊಂದುವ ಹಕ್ಕುಗಳೆಲ್ಲವನ್ನು ನಮ್ಮ ಸಂವಿಧಾನದ ಅಡಿಯಲ್ಲಿಯೇ ಪ್ರದತ್ತವಾಗಿರುವ ಪ್ರಯುಕ್ತ ಈ ಒಂದು ಅರಿವನ್ನು ವಿದ್ಯಾರ್ಥಿಗಳ ದೆಸೆಯಲ್ಲಿ ಮೂಢಿಸುವುದು ಅತೀ ಅವಶ್ಯಕವಾಗಿರುತ್ತದೆಂದು ಸಭೆಯಲ್ಲಿ ಅಭಿಪ್ರಾಯ ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸಿದ ಡಾ|| ಹರ್ಷ ಹೆಚ್.ಸಿ., ಮಕ್ಕಳ ತಜ್ಞರು, ಇವರು ಮಾತನಾಡುತ್ತ, ಪ್ರತಿಯೊಬ್ಬ ಮಕ್ಕಳು ದೈನಂದಿನ ಶುಚಿತ್ವದ ಮತ್ತು ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕೆಂದು ಕರೆ ನೀಡಿದರು.
Rotary Shivamogga ರೋಟರಿ ಪೂರ್ವದ ಕಾರ್ಯದರ್ಶಿ ರೊ. ಶಶಿಕಾಂತ್ ನಾಡಿಗ್ ಇವರು ಮಾತನಾಡುತ್ತ, ಮಕ್ಕಳ ದಿನಾಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುತ್ತ, ರಾಷ್ಟçದ ಮೊದಲ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ಜವಹರಲಾಲ್ ನೆಹರು ಅವರು ಮಕ್ಕಳ ಬಗ್ಗೆ ಹೊಂದಿದ ಪ್ರೀತಿ ಮತ್ತು ಸದಾಭಿಪ್ರಾಯವನ್ನು ಸಭೆಗೆ ಮನವರಿಕೆ ಮಾಡಿಕೊಟ್ಟರು.
ಸಮಾರಂಭದಲ್ಲಿ ಟ್ರಸ್ಟ್ನ ಉಪಾಧ್ಯಕ್ಷರಾದ ರೊ. ಸುರೇಶ್ ಕುಮಾರ್ ಬಿ., ಖಜಾಂಚಿ ರೊ. ವಿಜಯ್ ಕುಮಾರ್, ಜಂಟಿ ಕಾರ್ಯದರ್ಶಿಗಳಾದ ರೊ. ನಾಗವೇಣಿ ಎಸ್.ಆರ್. & ನಾಗರಾಜ್ ಎಂ.ಪಿ., ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಶ್ರೀಮತಿ ಲತಾ ಸೋಮಶೇಖರ್, ಮಾಜಿ ಅಧ್ಯಕ್ಷೆ ಶ್ರೀಮತಿ ಬಿಂದು ವಿಜಯ್ ಕುಮಾರ್, ಪ್ರಾಂಶುಪಾಲ ಶ್ರೀ ಸೂರ್ಯನಾರಾಯಣ್ ಆರ್., ಇವರುಗಳು ಉಪಸ್ಥಿತರಿದ್ದರು. ಹಾಜರಿದ್ದ ಎಲ್ಲರನ್ನು ಶ್ರೀ ಪ್ರದೀಪ್ ಕುಮಾರ್ ಇವರು ಸ್ವಾಗತಿಸಿದ್ದು, ಶ್ರೀಮತಿ ರೂಪ ರಾವ್ ಇವರು ಕಾರ್ಯಕ್ರಮ ನಿರೂಪಣೆ ನಡೆಸಿದ್ದು, ಶ್ರೀಮತಿ ರೇಖಾ ಎಂ., ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

National Health Campaign ತಜ್ಞವೈದ್ಯರ & ಅರೆ ವೈದ್ಯಕೀಯ ಸಿಬ್ಬಂದಿಗಳ ತಾತ್ಕಾಲಿಕ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ

0

National Health Campaign ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಅಧೀನದಲ್ಲಿ ಬರುವ ವಿವಿಧ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಆಸಕ್ತರಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ.
ಎನ್.ಪಿ.ಹೆಚ್.ಸಿ.ಇ. ಕಾರ್ಯಕ್ರಮದಡಿ ತಜ್ಞ ವೈದರ (ಎಂ.ಡಿ. ಇಂಟರ್ನಲ್ ಮೆಡಿಸಿನ್/ಜನರಲ್ ಮೆಡಿಸಿನ್) ಒಂದು ಹುದ್ದೆಗೆ ಎಂ.ಬಿ.ಬಿ.ಎಸ್., ಎಂ.ಡಿ. ಮಾಡಿರುವ ಸ್ಪೆಷಲಿಸ್ಟ್ ಹುದ್ದೆಯಲ್ಲಿ 2 ವರ್ಷಗಳ ಅನುಭವವಿರುವವರಿಗೆ ಆದ್ಯತೆ ನೀಡಲಾಗುವುದು.
ಸಿ.ಪಿ.ಹೆಚ್-ಯು.ಹೆಚ್.ಸಿ. ಕಾರ್ಯಕ್ರಮದಡಿ ಜಿಲ್ಲಾ ಆರೋಗ್ಯ ಮತ್ತು ಕ್ಷೇಮಕೇಂದ್ರ ಸಂಯೋಜಕರ ಒಂದು ಹುದ್ದೆಗೆ ಬಿ.ಡಿ.ಎಸ್./ಬಿ.ಎ.ಎಂ.ಎಸ್/ ಬಿ.ಯು.ಎಂ.ಎಸ್./ ಬಿ.ಹೆಚ್.ಎಂ.ಎಸ್./ಬಿ.ವೈ.ಎನ್.ಎಸ್./ಎಂ.ಎಸ್.ಸಿ.ನರ್ಸಿಂಗ್/ಎಂ.ಎಸ್.ಸಿ. ಲೈಫ್ ಸೈನ್ಸ್/ಬಿ.ಎಸ್.ಸಿ. ನರ್ಸಿಂಗ್ ಎಲ್ಲಾ ಪದವಿಯೊಂದಿಗೆ ಎಂ.ಪಿ.ಹೆಚ್ ಅಥವಾ ಎಂ.ಬಿ.ಎ ಕಡ್ಡಾಯವಾಗಿ ಪೂರ್ಣಗೊಂಡಿರುವವರಿಗೆ ಆದ್ಯತೆ ನೀಡಲಾಗುವುದು.
National Health Campaign ಐ.ಡಿ.ಎಸ್.ಪಿ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಎಪಿಡೆಮಿಯಾಲಜಿಸ್ಟ್ 1 ಹುದ್ದೆಗೆ ಮೆಡಿಕಲ್ ಗ್ರಾಜುಯೇಟ್ಸ್, ಎಂ.ಬಿ.ಬಿ.ಎಸ್. ಜೊತೆಗೆ ಪೋಸ್ಟ್ ಗ್ರಾಜುಯೇಟ್ ಪದವಿ/ ಡಿಪ್ಲೊಮಾ ಇನ್ ಪ್ರೆವೆಂಟಿವ್ ಆಂಡ್ ಸೋಶೀಯಲ್ ಮೆಡಿಸಿನ/ ಪಬ್ಲಿಕ್ ಹೆಲ್ತ್ ಅಥವಾ ಎಪಿಡೆಮಿಯಾಲಿಜಿ ಅಥವಾ ಯಾವುದೇ ಮೆಡಿಕಲ್ ಗ್ರಾಜುಯೇಟ್ (ಎಂ.ಬಿ.ಬಿ.ಎಸ್ ಹೊರತುಪಡಿಸಿ) ಜೊತೆಗೆ ಎಂಪಿಹೆಚ್ ಜೊತೆಗೆ ಪಬ್ಲಿಕ್ ಹೆಲ್ತ್ನಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಉಳ್ಳವರಿಗೆ ಆದ್ಯತೆ ನೀಡಲಾಗುವುದು ಅಥವಾ ಎಂ.ಎಸ್.ಸಿ. ಇನ್ ಲೈಫ್ ಸೈನ್ಸ್ ಅಥವಾ ಎಂ.ಎಸ್.ಸಿ. ಜೊತೆಗೆ ಎಂ.ಪಿ.ಹೆಚ್‌ನಲ್ಲಿ 2 ವರ್ಷದ ಅನುಭವ ಉಳ್ಳವರಿಗೆ ಆದ್ಯತೆ ನೀಡಲಾಗುವುದು.
ಆಸಕ್ತರು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಎನ್.ಸಿ.ಡಿ. ಘಟಕ, ಮೆಗ್ಗಾನ್ ಆಸ್ಪತ್ರೆ ಆವರಣ, ತುಂಗಾ ವಿದ್ಯಾರ್ಥಿನಿಯರ ವಸತಿ ನಿಲಯದ ಎದುರು, ಶಿವಮೊಗ್ಗ ಇಲ್ಲಿ ನ.20 ರಂದು ಬೆಳಗ್ಗೆ 10.30 ರಿಂದ ನಡೆಯುವ ನೇರ ಸಂದರ್ಶನಕ್ಕೆ ದಾಖಲೆಗಳ ಮೂಲಪತ್ರಿ ಮತ್ತು ಛಾಯಾಪ್ರತಿಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ನೇಮಕಾತಿಯು ಎನ್.ಹೆಚ್.ಎಂ ನಿಯಮಾವಳಿ, ಷರತ್ತು ಮತ್ತು ನಿಬಂಧನೆಗಳಿಗೆ ಮತ್ತು ಆಯ್ಕೆ ಸಮಿತಿ ತೀರ್ಮಾನಕ್ಕೆ ಒಳಪಟ್ಟಿರುತ್ತದೆ.
ಎಂ.ಬಿ.ಬಿ.ಎಸ್. ವೈದ್ಯರಿಗೆ ವಿಶೇಷ ಸೂಚನೆ : ಎನ್.ಸಿ.ಸಿ. ಕ್ಲಿನಿಕ್ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇದ್ದಲ್ಲಿ ಪ್ರತೀ ತಿಂಗಳ 3ನೇ ಸೋಮವಾರದಂದು ವೈದ್ಯರ ಮತ್ತು ತಜ್ಞ ವೈದ್ಯರ ಹುದ್ದೆಗೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೆಲಸದ ವೇಳೆಯಲ್ಲಿ ಕಚೇರಿಯನ್ನು ಸಂಪರ್ಕಿಸುವುದು

McGann Hospital ಅಪರಿಚಿತ ಶವ ಪತ್ತೆ. ದೊಡ್ಡಪೇಟೆ ಪೊಲೀಸ್ ಠಾಣೆಯ ಪ್ರಕಟಣೆ

0

McGann Hospital ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆ ಎದುರುಗಡೆ ಗೇಟ್ ಹತ್ತಿರ ಸುಮಾರು 70-75 ವರ್ಷ ವಯಸ್ಸಿನ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದು, ಆತನನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನ. 12ರಂದು ಮೃತಪಟ್ಟಿರುತ್ತಾರೆ. ಈತನ ಹೆಸರು, ವಿಳಾಸ ಹಾಗೂ ವಾರಸ್ಸುದಾರರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ.
ಈತನ ಚಹರೆ 5.6 ಅಡಿ ಉದ್ದ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಮುಂದೆಲೆ ಭಾಗ ಬೋಳಾಗಿರುತ್ತದೆ. ಎಡ ಕೆನ್ನೆಯ ಮೇಲೆ ಜೋಳದ ಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಮೈಮೇಲೆ ಕಂದು ಮತ್ತು ಬಿಳಿ ಕಪ್ಪು ಬಣ್ಣದ ಅಡ್ಡಪಟ್ಟಿಗಳಿರುವ ತುಂಬು ತೋಳಿನ ಸ್ವೆಟರ್ ಧರಿಸುತ್ತಾರೆ.
McGann Hospital ಈತನ ವಾರಸ್ಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 /9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

Bahumukhi Shivamogga ನ.16. ‘ಬಹುಮುಖಿ’ಯಿಂದ ನಿರ್ಮಲ ತುಂಗಭದ್ರ ಅಭಿಯಾನದ ಬಗ್ಗೆ ತಜ್ಞರೊಡನೆ ಸಂವಾದ ವ್ಯವಸ್ಥೆ

0

Bahumukhi Shivamogga ಶಿವಮೊಗ್ಗ ನಗರದ ಬಹುಮುಖಿ ವತಿಯಿಂದ ನಲವತ್ತೆರಡನೇ ಕಾರ್ಯಕ್ರಮವಾಗಿ ನಿರ್ಮಲ ತುಂಗ ಭದ್ರ ಅಭಿಯಾನ ಕುರಿತಾದ ಮಾಹಿತಿ- ಸಂವಾದ-ಚರ್ಚೆ ಅಯೋಜನೆಗೊಂಡಿದೆ. ನ. ,16ರಂದು ಸಂಜೆ 5:30ಕ್ಕೆ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ರಂಡ್ಸ್ ಸೆಂಟರ್ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಅಭಿಯಾನದ ಅಧ್ಯಕ್ಷರಾದ ಬಸವರಾಜ ಪಾಟೀಲ್‌ರವರು ಮಾಹಿತಿ ನೀಡಲಿದ್ದು, ಪರಿಸರ ತಜ್ಞ ಡಾ. ಎಲ್.ಕೆ. ಶ್ರೀಪತಿಯವರು ಸಂವಾದ ನಡೆಸಿಕೊಡಲಿದ್ದಾರೆ.

ತುಂಗಾ ಭದ್ರಾ ನದಿಗಳು ಕಲುಷಿತಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಜನಜಾಗೃತಿ ಮೂಡಿಸಲು ಮಾಜಿ ಕೇಂದ್ರ ಸಚಿವ ಗೋವಿಂದನ್ ನಾಯಕತ್ವದ ರಾಷ್ಟ್ರೀಯ ಸ್ವಾಭಿಮಾನ್ ಅಂದೋಲನ, ಈಗಾಗಲೇ ಶೃಂಗೇರಿಯಿಂದ ಪಾದಯಾತ್ರೆ ಮೂಲಕ ಒಂದು ದೊಡ್ಡ ಆಂದೋಲನ ಆರಂಭ ಮಾಡಿದೆ. ಇದರ ಮೊದಲ ಹಂತ ನ.14ರಂದು ಹರಿಹರದಲ್ಲಿ ಮುಗಿಯಲಿದ್ದು, ಎರಡನೇ ಹಂತ ಕೊಪ್ಪಳ ಜಿಲ್ಲೆಯ ಕಿಷ್ಕಿಂದೆವರೆಗೆ ಮುಂದುವರೆಯಲಿದೆ.

Bahumukhi Shivamogga ಒಟ್ಟಾರೆ ಸುಮಾರು 430 ಕಿಮೀ ಪಾದಯಾತ್ರೆ ಕ್ರಮಿಸಲಿದೆ.
ಪವಿತ್ರ ತುಂಗಾ ತಟದಲ್ಲಿ ವಾಸಿಸುತ್ತಿರುವ ಎಲ್ಲರೂ ಈ ಆಂದೋಲನದಲ್ಲಿ ಕೈ ಜೋಡಿಸಬೇಕಿದೆ. ಈ ಆಂದೋಲನದ ರೂಪು ರೇಷೆ, ಮಾಹಿತಿ ಪಡೆದು ಚರ್ಚೆಯಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ.

ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

Shimoga Institute of Medical Sciences Shivamogga ಮಧುಮೇಹ ದೊಡ್ಡ ಕಾಯಿಲೆಯೆಂಬ ಆತಂಕ ಬೇಡ. ಜೀವನ ಪದ್ಧತಿ ಬದಲಾವಣೆಯಿಂದ ನಿಯಂತ್ರಣ ಸಾಧ್ಯ- ಡಾ.ವಿರುಪಾಕ್ಷಪ್ಪ

0

Shimoga Institute of Medical Sciences Shivamogga ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಮಧುಮೇಹ ನಿಯಂತ್ರಿಸಬಹುದು ಎಂದು ಸಿಮ್ಸ್ ನಿರ್ದೇಶಕ ಡಾ. ವಿರುಪಾಕ್ಷಪ್ಪ ಅವರು ತಿಳಿಸಿದರು.

ಇತ್ತೀಚಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್ ಸಿಡಿ ಘಟಕ ವತಿಯಿಂದ ಸಿಮ್ಸ್ ಮೆಡಿಕಲ್ ಕಾಲೇಜಿನ ಎನ್‌ಸಿಡಿ ಆವರಣದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಧುಮೇಹ ಒಂದು ದೊಡ್ಡ ಕಾಯಿಲೆ ಎಂದು ಜನರು ಆತಂಕ ಪಡುವ ಅಗತ್ಯವಿಲ್ಲ. ಪ್ರಾಥಮಿಕವಾಗಿ ನಿಯಂತ್ರಿಸಲು ನಮ್ಮ ಜೀವನ ಪದ್ದತಿ ಬದಲಾಗಬೇಕಿದೆ ಎಂದರು.

Shimoga Institute of Medical Sciences Shivamogga ಡಿಹೆಚ್‌ಓ ಡಾ.ನಟರಾಜ್ ಮಾತನಾಡಿ ಮಧುಮೇಹದಿಂದ ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು, ನರಗಳಿಗೆ ಹಾನಿಯಾಗುವುದು ಈ ರೀತಿ ಅನೇಕ ಕಾಯಿಲೆಗಳಿಗೆ ಮಧುಮೇಹ ಕಾರಣವಾಗುತ್ತದೆ. ಅದ್ದರಿಂದ ಮಧುಮೇಹವನ್ನು ನಿಯಂತ್ರಿಸಲು ಪ್ರತಿನಿತ್ಯ ದೈಹಿಕ ಚಟುವಟಿಕೆ, ಆರೋಗ್ಯಕರ ಆಹಾರ ಸೇವನೆ, ತಾಜಾ ಹಣ್ಣು, ತರಕಾರಿ, ಧಾನ್ಯಗಳನ್ನು ಹೆಚ್ಚಾಗಿ ಸೇವಿಸುವುದು ಮತ್ತು ಮದ್ಯಪಾನ ತ್ಯಜಿಸುವುದು, ದಿನನಿತ್ಯ ನಿಗದಿತ ಚಿಕಿತ್ಸೆ ಪಾಲನೆ, ನಿಯಮಿತ ರಕ್ತದ ಸಕ್ಕರೆ ಪರೀಕ್ಷೆ ಮಾಡಿಸುವ ಮೂಲಕ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವ ಹೊಣೆ ನಿಮ್ಮ ಕೈಯಲ್ಲೇ ಇದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್, ಎಂ.ಎಸ್. ಡಾ.ತಿಮ್ಮಪ್ಪ, ಡಿ.ಎಸ್.ಓ ಡಾ.ನಾಗರಾಜ್ ನಾಯ್ಕ್, ಡಾ.ಹರ್ಷ ಹಾಗೂ ಎನ್‌ಸಿಡಿ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಪೈಲ್ವಾನರೆರ ..ಹಿಡೀರಿ ಹೋರಿ! ಹರಿ ಕೊಬ್ಬರಿ.. “ಸೊರಬ ತಾಲ್ಲೂಕಿನ ತಾವರೆಕೊಪ್ಪದಲ್ಲಿ ಹೋರಿ ಹಬ್ಬ ಜೋರು

0

ಪೈಲ್ವಾನರಾ… ಹಿಡಿರಿ ಹೋರಿ, ಹರಿ ಕೊಬ್ಬರಿ, ಹೊಡಿರಿ ಕೇಕೆ.. ಇದು ತಾಲೂಕಿನ ತಾವರೆಕೊಪ್ಪ ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬದ ಧಮಾಕಾ. ಗ್ರಾಮದಲ್ಲಿ ಹೋರಿ ಹಬ್ಬ ಆಚರಣಾ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಹೋರಿ ಬೆದರಿಸುವ ಹಬ್ಬ ಅಕ್ಷರಶಃ ರೋಚಕತೆ ತಂದಿತ್ತು. ನೆರೆದವರ ಕೇಕೆ, ಹಲಗೆ ಸದ್ದಿಗೆ ಹೋರಿಗಳ ಹೂಂಕರಿಸುವಿಕೆ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.
ಮಲೆನಾಡು ಹಾಗೂ ಬಯಲುಸೀಮೆ ಭಾಗದ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ಸಡಗರ ಸಂಭ್ರಮದಿಂದ ಜರುಗಿತು. ದೀಪಾವಳಿಯ ನಂತರ ಗ್ರಾಮೀಣ ಭಾಗದಲ್ಲಿ ಹೋರಿ ಬೆದರಿಸುವ ಹಬ್ಬಕ್ಕೆ ಸಾಕಷ್ಟು ಮಹತ್ವವಿದೆ. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರಲ್ಲಿ ಮೈನವಿರೇಳಿಸಿತು. ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಟೇಪು, ಬಲೂನುಗಳು ಮತ್ತು ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು.
ಅಖಾಡದಲ್ಲಿ ತಾವರೆಕೊಪ್ಪದ ರಾಜನರಸಿಂಹ, ರಾಜಾ ಹುಲಿ, ಶ್ರೀವೀರ ಕಲ್ಕಿ, ನಾಗನೂರ ನಾಗರಹಾವು, ನರಹಂತಕ, ಚಿಕ್ಕಸವಿ ದೊಡ್ಮನೆ ದೊರೆ, ಶಾಂತಗೇರಿ ಸುಗ್ರೀವ, ಹರೂರು ಘಟಸರ್ಪ, ಯಲವಳ್ಳಿ ಜಮೀನ್ದಾರ, ತಾವರೆಕೊಪ್ಪ ಚಕುವ, ಬಿದರಗೇರಿ ಸ್ನೇಹಜೀವಿ ಶ್ರೀನಂದಿ, ಕೊಲೆಗಾರ ಸಾಮ್ರಾಜ್ಯದ ಪ್ರಳಯ, ಹರಗಿ ಗ್ಯಾಂಗ್ ಸ್ಟಾರ್, ಮಲೆನಾಡ ಹುಲಿ, ಶಿಗ್ಗಾದ ಮೆಜೆಸ್ಟಿಕ್ ಹುಲಿ, ಅಂಬರಕೊಪ್ಪದ ಕಿಂಗ್, ಸೊರಬದ ಸೃಷ್ಟಿಕರ್ತ, ಪೈಲ್ವಾನ, ಸೊರಬದ ಸೈಕೋ, ಬಿದರೇರಿ ಬುಲೇಟ್ ಕಾ ರಾಜ, ಎಎನ್‌ಕೆ ಬ್ಲಾಕ್ ಟೈಗರ್, ಹರೂರು ಜೈ ಹನುಮ, ಹರೂರು ಮಾರಿಕಾಂಬ ಎಕ್ಸ್ಪ್ರೆಸ್, ಬಿದರಗೇರಿ ಸೆವೆನ್ ಸ್ಟಾರ್ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊAಡರು.
ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲೂಕು ಸೇರಿದಂತೆ ನೆರೆಯ ತಾಲೂಕು ಮತ್ತು ಜಿಲ್ಲೆಯ ವಿವಿಧ ಗ್ರಾಮಗಳಿಂದ ಭಾರಿ ಸಂಖ್ಯೆಯಲ್ಲಿ ಹೋರಿ ಪ್ರಿಯರು ಆಗಮಿಸಿದ್ದರು. ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದವು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲಪ್ರದರ್ಶನ ತೋರಿದ ಪೈಲ್ವಾನರನ್ನು ಸಮಿತಿ ವತಿಯಿಂದ ಗುರುತಿಸಲಾಯಿತು. ಅಖಾಡದ ಎರಡು ಬದಿಯಲ್ಲಿ ಬೇಲಿ ನಿರ್ಮಿಸಿ, ಒಂದೊAದೆ ಹೋರಿಗಳನ್ನು ಓಡಿಸುವ ಮೂಲಕ ಸಮಿತಿಯವರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದರು.

Election Commission of India ಉಪಕದನವೇ ಆಗಿ ಮಾರ್ಪಟ್ಟಿದ್ದ ಶಿಗ್ಗಾಂವಿ, ಸಂಡೂರು & ಚನ್ನಪಟ್ಟಣದಲ್ಲಿ ಬಿರುಸಿನ ಮತದಾನ . ಮತ ಪೆಟ್ಟಿಗೆಯಲ್ಲಿ ಅಭ್ಯರ್ಥಿಗಳಭವಿಷ್ಯ ಭದ್ರ

0

Election Commission of India ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಉಪ ಚುನಾವಣೆ ನಡೆದಿದ್ದು, ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣದಲ್ಲಿ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದೆ.

ಇದರೊಂದಿಗೆ ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ.

ನಿನ್ನೆ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದ್ದು, ಮೂರು ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 76.9 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಚನ್ನಪಟ್ಟಣದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಸಿ. ಪಿ. ಯೋಗೇಶ್ವರ್ ಸೇರಿದಂತೆ 31 ಮಂದಿ ಕಣದಲ್ಲಿದ್ದಾರೆ.

Election Commission of India ಇನ್ನೂ ಸಂಡೂರಿನಲ್ಲಿ ಶೇ.76.24 ರಷ್ಟು ಹಾಗೂ ಶಿಗ್ಗಾಂವಿಯಲ್ಲಿ ಶೇ.80.48ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಬೊಂಬೆ ನಾಡು ಚನ್ನಪಟ್ಟಣದಲ್ಲಿ ದಾಖಲೆಯ ಶೇ. 88.80 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.