Tuesday, March 24, 2026
Tuesday, March 24, 2026
Home Blog Page 495

Kanaka Dasa Jayanti 2024 ಶ್ರೀಕನಕರು ಸಾಮಾಜಿಕ ತಾರತಮ್ಯ & ಅಸಮಾನತೆ ಬಗ್ಗೆ ತಮ್ಮ ಕೃತಿಗಳ ಮೂಲಕ ಜನಜಾಗೃತಿ ಮಾಡಿದವರು- ಸಿದ್ಧರಾಮಯ್ಯ

0

Kanaka Dasa Jayanti 2024 ಜಾತಿ-ಕುಲ ಸೃಷ್ಟಿಸಿರುವ ಸಾಮಾಜಿಕ ತಾರತಮ್ಯ ಮತ್ತು ಅಸಮಾನತೆ ಬಗ್ಗೆ ಕೀರ್ತನೆ-ಕಾವ್ಯಗಳ ಮೂಲಕ ಜನಜಾಗೃತಿಗೊಳಿಸಿದ್ದ ಕನಕ ದಾಸರು ದಾಸಶ್ರೇಷ್ಠರು ಮಾತ್ರವಲ್ಲ, ಒಬ್ಬ ಅಪೂರ್ವ ಸಮಾಜ ಸುಧಾರಕರಾಗಿದ್ದರು.

ಜಾತಿ-ಧರ್ಮದ ದುರ್ಬಳಕೆಯಿಂದಾಗಿ ಇತಿಹಾಸದ ಚಕ್ರ ಹಿಂದಕ್ಕೆ ಚಲಿಸುತ್ತಿದೆಯೇನೋ ಎನ್ನುವ ಆತಂಕ ಕಾಡುತ್ತಿರುವ ಇಂದಿನ ದಿನಗಳಲ್ಲಿ ಕನಕದಾಸರ ಚಿಂತನೆ ನಮ್ಮ ದಾರಿಯ ಬೆಳಕಾಗಬೇಕು.

Kanaka Dasa Jayanti 2024 ಕವಿ, ದಾರ್ಶನಿಕ, ಮಹಾನ್ ಮಾನವತಾವಾದಿ ಕನಕದಾಸರಿಗೆ ನನ್ನ ಭಕ್ತಿ ಪೂರ್ವಕ ನಮನಗಳು.
ಎಂದು ಮುಖ್ಯಮಂತ್ರಿ
ಸಿದ್ಧರಾಮಯ್ಯವರು ಕನಕದಾಸರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದ್ದಾರೆ.

CM Siddaramaiah ದಲಿತರು,ಮಹಿಳೆಯರು,ಹಿಂದುಳಿದವರು ,ಅಲ್ಪ ಸಂಖ್ಯಾತರು ಹೆಚ್ಚು‌ ಸಹಕಾರ ಚಳವಳಿಯಲ್ಲಿ ತೊಡಗಿಸಿಕೊಳ್ಳಬೇಕು- ಸಿದ್ಧರಾಮಯ್ಯ

0

CM Siddaramaiah ಸಹಕಾರ ಕ್ಷೇತ್ರ ರಾಜ್ಯ ವ್ಯಾಪ್ತಿಗೆ ಸೇರಿದ್ದು. ಆದರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದಲ್ಲಿ ಸಹಕಾರ ಇಲಾಖೆ ಆರಂಭಿಸಿದರು. ಇದಕ್ಕೆ ಅಮಿತ್ ಶಾ ಅವರೇ ಸಚಿವರು‌. ಇದು ಕೇಂದ್ರದ ವ್ಯಾಪ್ತಿಗೆ ಬರುವ ವಿಷಯ ಅಲ್ಲ. ಇದರಿಂದಾಗಿ ನಮಗೆ ನಬಾರ್ಡ್ ನಿಂದ ಬರುವ ರೈತರ ಪಾಲಿನ ನೆರವು ಕಡಿತಗೊಂಡಿದೆ. ಒಮ್ಮೆಲೇ 58% ನಬಾರ್ಡ್ ನೆರವು ಕಡಿತಗೊಂಡಿದೆ. ಇದು ನಮ್ಮ ರೈತರಿಗೆ ಆದ ಬಹಳ ದೊಡ್ಡ ಅನ್ಯಾಯ.

ರೈತರ ಬಗ್ಗೆ ಬಿಜೆಪಿ ಭಾಷಣ ಮಾತ್ರ ಚೆನ್ನಾಗಿ ಮಾಡುತ್ತದೆ. ಬರೀ ಭಾಷಣದಿಂದ ರೈತರ ಬದುಕನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಬಾರ್ಡ್ ನಿಂದ ನಮಗೆ ಆದ ಅನ್ಯಾಯವನ್ನು ಪ್ರತಿಯೊಬ್ಬರು ಪ್ರತಿಭಟಿಸಬೇಕು.

2013 ರಲ್ಲಿ ₹8,165 ಕೋಟಿ ರೈತರ ಸಾಲವನ್ನು ನಾನು ಮೊದಲು ಬಾರಿ ಮುಖ್ಯಮಂತ್ರಿಯಾಗಿ ಮನ್ನಾ ಮಾಡಿದ್ದೆ. ಇದರಿಂದ ಸಹಸ್ರಾರು ರೈತರ ಬದುಕಿಗೆ ನೆರವಾಯಿತು.

ಸಹಕಾರ ಮಹಾಮಂಡಳದ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರದ ನೆರವು ನೀಡಬೇಕು ಎನ್ನುವ ಬೇಡಿಕೆ ಇದೆ. ಈ ಬೇಡಿಕೆಯನ್ನೂ ಈಡೇರಿಸಲಾಗುವುದು
ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಹೆಚ್ಚೆಚ್ಚು ಸಹಕಾರಿ ಚಳವಳಿಯಲ್ಲಿ ತೊಡಗಿಸಿಕೊಳ್ಳಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಸಹಕಾರ ಸಂಘಗಳಿಗೆ ಈ ಸಮುದಾಯದ ಯುವಕ / ಯುವತಿಯರನ್ನು ಉಚಿತವಾಗಿ ಸದಸ್ಯರನ್ನಾಗಿ ಮಾಡಿದ್ದೆ. ಈಗಲೂ ಇದು ಮುಂದುವರೆಯಬೇಕು.

CM Siddaramaiah ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಮತ್ತು ಇವರಿಂದ ಹೆಚ್ಚೆಚ್ಚು ಹಾಲನ್ನು ಖರೀದಿಸಬೇಕು. ಸಹಕಾರ ಸಂಘಗಳ ಹಾಲಿಗೆ ಮಾರುಕಟ್ಟೆ ವಿಸ್ತರಿಸಬೇಕು. ಚನ್ನಪಟ್ಟಣ ತಾಲ್ಲೂಕೊಂದರಲ್ಲೇ 3 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಲೀ ಹಾಲಿಗೆ 31 ರೂ ಅಂದರೆ 3 ಲಕ್ಷ ಲೀಟರ್ ಗೆ ಕೋಟಿ ರೂಪಾಯಿ ಆಗ್ತದೆ. ಇದು ಆರ್ಥಿಕತೆಗೂ ಹೆಚ್ಚಿನ ಕೊಡುಗೆ ನೀಡಿದಂತಾಗುತ್ತದೆ.

ಹಾಲು ಉತ್ಪಾದಕರಿಗೆ ಅನುಕೂಲ ಮಾಡುವ ಉದ್ದೇಶದಿಂದಲೇ ನಮ್ಮ ಸರ್ಕಾರ ಕ್ಷೀರಭಾಗ್ಯ ಆರಂಭಿಸಿತು. ಲೀಟರ್ ಹಾಲಿಗೆ 5 ರೂ ಪ್ರೋತ್ಸಾಹಧನ ನೀಡುವುದನ್ನು ನಮ್ಮ ಅವಧಿಯಲ್ಲಿ ಆರಂಭಿಸಲಾಯಿತು. ರೈತರ ಕೈಯಲ್ಲೇ ಹಾಲು ಉತ್ಪಾದಕ ಸಂಘಗಳು ಇರಬೇಕು ಎನ್ನುವ ಉದ್ದೇಶದಿಂದ ಡೈರಿಗಳನ್ನು ರೈತರಿಗೇ ನೀಡುವ ತೀರ್ಮಾನ ಮಾಡಿದೆವು. ಈ ಅಧಿಕಾರ ವಿಕೇಂದ್ರೀಕರಣದಿಂದ ಗ್ರಾಮೀಣ ಆರ್ಥಿಕತೆ ಗಟ್ಟಿಯಾಯಿತು. ಇದೇ ಮಹಾತ್ಮಗಾಂಧಿಯವರ ಗ್ರಾಮ ಸ್ವರಾಜ್ಯದ ಆಶಯವೂ ಆಗಿದೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಏರ್ಪಡಿಸಿದ್ದ ‌71 ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನುಡಿದರು

Kannada short film ಕಿರುಚಿತ್ರ ನಿರ್ದೇಶಕ ವರಪ್ರಸಾದ್ ಶರ್ಮಾರಿಗೆ ‘ ಕನ್ನಡ ಕೌಸ್ತುಭ’ ಪ್ರಶಸ್ತಿ ಪ್ರದಾನ

0

Kannada short film ಕಿರುಚಿತ್ರ ನಿರ್ದೇಶಕ ವರಪ್ರಸಾದ್ ಶರ್ಮಾರವರಿಗೆ “ಕನ್ನಡ ಕೌಸ್ತುಭ” ಪ್ರಶಸ್ತಿ ಪ್ರಧಾನ ಶಿವಮೊಗ್ಗ : ಕಿರುಚಿತ್ರ, ಹೊಸ ಬಿಡುಗಡೆಯ ಸಿನಿಮಾಗಳ ಬಗ್ಗೆ ವೀಕ್ಷಕ ಸಮುದಾಯದ ರಿವ್ಹೀವ್ಸ್, ಉದ್ಯಮಗಳ ಪ್ರಮೋಷನ್ಸ್, ಹೀಗೆ ಸದಭಿರುಚಿಯ ಕಿರುತೆರೆಯ ಹಿಂದಿನ ನಿರ್ದೇಶಕ, ಸಂಭಾಷಣೆ, ಸಂಕಲನ ರೂವಾರಿಯಾಗಿ ಅದರ ನಿರ್ಮಾಣ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಸಬ್ ಸ್ಕೈಬರ್ ಹೊಂದಿರುವ ಯುವ ಮುಂದಾಳು ವರಪ್ರಸಾದ್ ಶರ್ಮಾರವರಿಗೆ “ಗಾರಾ ಫೌಂಡೇಶನ್” ನಿಂದ ನೀಡಲಾಗುವ “ಕನ್ನಡ ಕೌಸ್ತುಭ” ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮೊದಲಿಗೆ ಕನ್ನಡದ ಧ್ವಜ ಭಾವುಟವನ್ನು ನಟ ರಘುರಾಜ್ ಮಲ್ನಾಡ್ ರವರು ಆಹ್ವಾನಿಸಿದರು, ಕಾರ್ಯಕ್ರಮದ ಉದ್ಘಾಟನೆಯನ್ನು ನಗರದ ಉದ್ಯಮಿಗಳಾದ ಉಮಾಕಾಂತ್ ರವರು ಕನ್ನಡ ಧ್ವಜಕ್ಕೆ ಪುಷ್ಪವನ್ನು ಅರ್ಪಿಸುವುದರ ಮುಖೇನ ನೆರವೇರಿಸಿದರು, ಅವರು ಈ ಸಂದರ್ಭದಲ್ಲಿ ಮಾತಾನಾಡಿ ಸಾಹಿತ್ಯ, ಪತ್ರಿಕಾ ಹಾದಿ, ಸೇವೆಯ ಹಾದಿಯಲ್ಲಿ ನಡೆವುದು ಬಲು ಅಸಾಧ್ಯ ಆದರೂ ಅದನ್ನು ಸಂಘಟಿಸುತಲಿ ಸಾಗುತ್ತಿರುವುದು ಶ್ಲಾಘನೀಯ, ವರಪ್ರಸಾದ್ ಶರ್ಮಾ ಇನ್ನೂ ಬೆಳೆಯುತ್ತಿರುವ ಯುವಕ ಬಿಡುವಿಲ್ಲದೆ ಕಿರುಚಿತ್ರಗಳ ಬಗ್ಗೆ, ಎಡಿಟಿಂಗ್, ಸಿನಿಮಾಗಳ ಕುರಿತಂತೆ ಇರುವ ಆಸಕ್ತಿ Kannada short film ನಿಜಕ್ಕೂ ಮೆಚ್ಚುವಂತಹದ್ದಾಗಿದ್ದು ಈ ಪ್ರಶಸ್ತಿ ಅವರಿಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸುವಂತೆ ಮಾಡಿದೆ, ಮುಂದೆ ಕರುನಾಡಿನಲ್ಲಿ ಶ್ರೇಷ್ಟ ನಿರ್ದೇಶಕನಾಗಿ ಹೊರಹೊಮ್ಮಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ನಟ ರಘುರಾಜ್ ಮಲ್ನಾಡ್, ಅನಿಲ್ ವರ್ಣೇಕರ್, ಚಾಂದೂ, ರಾಮಣ್ಣ, ಗಾರಾ ಫೌಂಡೇಶನ್ ನ ಮ್ಯಾನೇಜ್ಮೆಂಟ್ ಟ್ರಸ್ಟಿ ಗಾರಾ.ಶ್ರೀನಿವಾಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವರಪ್ರಸಾದ್ ಕುಟುಂಬದವರು ಹಾಗೂ ನೆರೆಹೊರೆಯವರು ಭಾಗವಹಿಸಿದ್ದರು.

CM Siddaramaiah ಅನರ್ಹರ ಬಿಪಿಎಲ್ ಕಾರ್ಡ್ ಮಾತ್ರ ವಾಪಸ್ – ಸಿದ್ಧರಾಮಯ್ಯ

0

CM Siddaramaiah ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನು ಮಾತ್ರ ವಾಪಾಸ್ ಪಡೆಯಬಹುದು. ಅರ್ಹರ ಕಾರ್ಡ್ ಗಳಿಗೆ ಯಾವುದೇ ತೊಂದರೆ ಇಲ್ಲ.

ಬಿಪಿಎಲ್ ಕಾರ್ಡ್ ಗಳು ರದ್ದಾಗುತ್ತಿವೆಯೇ? ಎನ್ನುವ ಪ್ರಶ್ನೆಯೇ ಪೂರ್ತಿ ತಪ್ಪು. ಅನರ್ಹರ ಕಾರ್ಡ್ ಗಳನ್ನು ವಾಪಾಸ್ ಪಡೆಯಬಹುದು ಎನ್ನುವ ಆಲೋಚನೆ ಮಾತ್ರ ನಮ್ಮದಾಗಿದೆ. ಈ ಬಗ್ಗೆ ಇನ್ನೂ ಆಹಾರ ಇಲಾಖೆ ಪರಿಶೀಲಿಸುತ್ತಿದೆ. ಅಂತಿಮ ತೀರ್ಮಾನ ಆಗಿಲ್ಲ. ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ.

ಆದಾಯ ತೆರಿಗೆ ಪಾವತಿಸುವವರ ಬಳಿ, ಸರ್ಕಾರಿ ನೌಕರರ ಬಳಿಯೂ ಬಿಪಿಎಲ್ ಕಾರ್ಡ್ ಇರಬೇಕ? ಅರ್ಹರ ಯಾವ ಕಾರ್ಡ್ ಗಳೂ ರದ್ದಾಗುವುದಿಲ್ಲ. ಅನರ್ಹರಿಂದ ವಾಪಾಸ್ ಪಡೆಯಬಹುದು. ಅರ್ಹರು ವಂಚಿತರಾಗಬಾರದು.

CM Siddaramaiah ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರು ಕೊಟ್ಟ ದೂರಿನ ಆಧಾರದಲ್ಲಿ ನಾವು ತನಿಖೆಗೆ ಸೂಚಿಸಿದ್ದೆವು. ಆರೋಪ ಸಾಬೀತಾಗಿಲ್ಲ. ಕೆಲವೊಮ್ಮೆ ಸಾಕ್ಷ್ಯಾಧಾರಗಳ ಕೊರತೆಯಿಂದ ಕೊಲೆ ಆರೋಪಿಗಳು ಬಿಡುಗಡೆ ಆಗುತ್ತಾರೆ. ಹಾಗಂತ ಕೊಲೆಯೇ ಆಗಿಲ್ಲ ಅಂದರೆ ಅದರಲ್ಲಿ ಅರ್ಥ ಇಲ್ಲ. ಕೊಲೆ ನಡೆದಿರುತ್ತದೆ ಆದರೆ ಸಾಕ್ಷಿಗಳು ಸಾಕ್ಷ್ಯ ಹೇಳಿರುವುದಿಲ್ಲ ಅಷ್ಟೆ. ಇದೂ ಹಾಗೆಯೇ ಎಂದು ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

KSRTC Shimoga ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ. ಸಾರಿಗೆ ವಾಹನ ಚಾಲಕರಿಗೆ ಸನ್ಮಾನ

0

KSRTC Shimoga ಕೆ,ಎಸ್,ಅರ್,ಟಿ,ಸಿ ಶಿವಮೊಗ್ಗ ವಿಭಾಗವು ನ. 15 ರಂದು ಕೆ.ಎಸ್. ಅರ್. ಟಿ.ಸಿ. ಡಿಪೋದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಾಯು ಮಾಲಿನ್ಯ ನಿಯಂತ್ರಣದಲ್ಲಿ ಉತ್ತಮ ನಿರ್ವಹಣೆ ತೋರಿದ 10 ಜನ ವಾಹನ ಚಾಲಕರನ್ನು ಸನ್ಮಾನಿಸಲಾಯಿತು
KSRTC Shimoga ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಭೀಮನ ಗೌಡ ಪಾಟೀಲ್, ಕೆ.ಎಸ್. ಅರ್. ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ನವೀನ ಕುಮಾರ್, ಡಿ.ಟಿ.ಒ ದಿನೇಶ್ ಚನ್ನಗಿರಿ, ಡಿಪೋ ಮ್ಯಾನೇಜರ್ ಎಂ. ರಾಮಚಂದ್ರಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರಗೇಂದ್ರ ಬಿ. ಶಿರೋಲ್ಕರ್, ಹಿ. ಮೋ. ವಾ ನಿ. ಪಿ.ಎಂ. ಮಲ್ಲೇಶಪ್ಪ, ಕಚೇರಿ ಅಧೀಕ್ಷಕರುಗಳಾದ ರಾಮಚಂದ್ರಪ್ಪ ಎಚ್. ಸಿ., ಶ್ರೀಮತಿ ರಮ್ಯಾ, ವಿಷಯ ನಿರ್ವಾಹಕರಾದ ಡಿ.ಮೋಹನ್ ಕುಮಾರ್, ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಕೆ,ಎಸ್,ಆರ್,ಟಿ,ಸಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು

State Government Employees Union ರಾಜ್ಯ ಸರ್ಕಾರಿ ನೌಕರರ ಸಂಘದ‌ ಶಿವಮೊಗ್ಗ ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ

0

State Government Employees Union ಶಿವಮೊಗ್ಗ ಜಿಲ್ಲೆ ಶಾಖೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ 2024 29ನೇ ಅವಧಿಯ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಾದ. ಡಾ ಗುಡದಪ್ಪ ಕಸಬಿ ರವರು ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶೀಲರಾಗಿದ್ದಾರೆ.
ಇವರಿಗೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷರಾದ ಅರುಣ್ ದೀಕ್ಷಿತ್, ಮಾಜಿ ಸಹಾಯಕ ಗೌರ್ನರ್ ಜಿ ವಿಜಯ್ ಕುಮಾರ್, State Government Employees Union ಮಂಜುನಾಥ್ ಕದಂ, ಶಶಿಕಾಂತ್ ನಾಡಿಗ್, ವಸಂತ್ ಹೋಬ್ಳಿದಾರ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ ನಟರಾಜ್
ಡಾ.ಸಿದ್ದನಗೌಡರು, ಡಾ. ನಾಗರಾಜ್ ನಾಯಕ್,
ಡಾ.ಮಲ್ಲಪ್ಪ ಒಡಲುಮನೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ವೈದ್ಯರು ಶುಭ ಹಾರೈಸಿರುತ್ತಾರೆ

CM Sidharamaiah ತೆರಿಗೆ ಅನುದಾನ ಮಹಾರಾಷ್ಟ್ರಕ್ಕೂ ಅನ್ಯಾಯ, ಜತೆಗೂಡಿ ಧ್ವನಿಯೆತ್ತೋಣ- ಸಿದ್ಧರಾಮಯ್ಯ

0

CM Sidharamaiah ಕರ್ನಾಟಕ ಪ್ರತೀ ವರ್ಷ ₹4 ಲಕ್ಷದ 50 ಸಾವಿರ ಕೋಟಿಯಷ್ಟು ತೆರಿಗೆಯನ್ನು ಪಾವತಿಸಿದರೆ ವಾಪಾಸ್ ರಾಜ್ಯಕ್ಕೆ ಬರುತ್ತಿರುವುದು ₹60 ಸಾವಿರ ಕೋಟಿ ಮಾತ್ರ.

ಮಹಾರಾಷ್ಟ್ರ ರಾಜ್ಯ ಪ್ರತೀ ವರ್ಷ 8 ಲಕ್ಷದ 78 ಸಾವಿರ ಕೋಟಿ ರೂಪಾಯಿ ತೆರಿಗೆ ಕಟ್ಟಿದರೆ ವಾಪಾಸ್ ಬರುತ್ತಿರುವುದು 1 ಲಕ್ಷದ 30 ಸಾವಿರ ಕೋಟಿ ಮಾತ್ರ.

ಹೀಗಾಗಿ ಮಹಾರಾಷ್ಟ್ರ ಕಟ್ಟುವ ಪ್ರತೀ ಒಂದು ರೂಪಾಯಿ ತೆರಿಗೆಯಲ್ಲಿ 15 ಪೈಸೆಯಷ್ಟನ್ನು, ಕರ್ನಾಟಕ 13 ಪೈಸೆಯಷ್ಟನ್ನು ಮಾತ್ರ ವಾಪಾಸ್ ಪಡೆಯುತ್ತಿದೆ.

CM Sidharamaiah ಕೇಂದ್ರದ ನರೇಂದ್ರ‌ಮೋದಿ ನೇತೃತ್ವದ ಸರ್ಕಾರ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಿಗೂ ಅನ್ಯಾಯ ಮಾಡುತ್ತಿದೆ. ಈ ಅನ್ಯಾಯದ ವಿರುದ್ಧ ಜಿತೆಗೂಡಿ ಧ್ವನಿಯೆತ್ತೋಣ ಎಂದು ಮುಖ್ಯ ಮಂತ್ರಿ ಸಿದ್ಧರಾಮಯ್ಯನವರು ಮಾಹಾರಾಷ್ಟ್ರದ ವಿಧಾನ ಸಭಾ ಚುನಾವಣೆ ಪ್ರಚಾರ ಭಾಷಣದಲ್ಲಿ ಹೇಳಿದ್ದಾರೆ.

NES Institute of Advanced Studies College ಕಲ್ಚರಲ್ & ಮ್ಯಾನೇಜ್ ಮೆಂಟ್ ಫೆಸ್ಟ್ ಗೆ ಶುಭಕೋರಿದ ಶಾಸಕ ‘ಚೆನ್ನಿ’

0

NES Institute of Advanced Studies College ರಾಷ್ಟ್ರೀಯ ಶಿಕ್ಷಣ ಸಮಿತಿಯ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಕಾಲೇಜನ ವತಿಯಿಂದ ಆಯೋಜಿಸಿದ್ದ “ಕೌಶಲ್ಯ-2024 ರಾಜ್ಯಮಟ್ಟದ ಕಲ್ಚರಲ್ ಮತ್ತು ಮ್ಯಾನೇಜ್ಮೆಂಟ್ ಫಸ್ಟ್ ” ಕಾರ್ಯಕ್ರಮವನ್ನು ಉದ್ಘಾಟಿಸಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶುಭ ಕೋರಲಾಯಿತು.

NES Institute of Advanced Studies College ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸದಸ್ಯರಾದ ಡಿಎಸ್ ಅರುಣ್, ಸಹ ಕಾರ್ಯದರ್ಶಿಗಳಾದ ಡಾ.ಪಿ ನಾರಾಯಣ್, ನಿರ್ದೇಶಕರಾದ ಅಶ್ವಥ್ ನಾರಾಯಣ್ ಶೆಟ್ಟಿ, ಪ್ರಾಂಶುಪಾಲರಾದ ಶ್ರೀ ಡಾ. ಶಿವಪ್ರಸಾದ್ ಬಿ ಎಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Shivamogga Rangayana ನವೆಂಬರ್ 19 ರವರೆಗೆ ಶಿವಮೊಗ್ಗ ರಂಗಾಯಣದಿಂದ “ಕಾಲೇಜು ರಂಗೋತ್ಸವ

0

Shivamogga Rangayana ಶಿವಮೊಗ್ಗ ರಂಗಾಯಣವು ವಿಶೇಷವಾಗಿ ಯುವಜನತೆಯನ್ನು ರಂಗಭೂಮಿಯತ್ತ ಆಕರ್ಷಿಸುವ ಕಾರ್ಯಕ್ರಮಗಳ ಭಾಗವಾಗಿ, ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ‘ಕಾಲೇಜು ರಂಗೋತ್ಸವ 2024-25’ ಮತ್ತು ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗಾಗಿ ‘ಶಿಕ್ಷಣದಲ್ಲಿ ರಂಗಕಲೆ’ ಕಮ್ಮಟವನ್ನು ಆಯೋಜಿಸಿದೆ.
ಮೊದಲ ಹಂತದ ಕಾಲೇಜು ರಂಗೋತ್ಸವಕ್ಕಾಗಿ ಕಳೆದ ಒಂದು ತಿಂಗಳಿಂದ ಶಿವಮೊಗ್ಗ ರಂಗಾಯಣ ವ್ಯಾಪ್ತಿಯ ಶಿವಮೊಗ್ಗ, ಚಿತ್ರದುರ್ಗ ಮತ್ತು ತುಮಕೂರು ಮೂರು ಜಿಲ್ಲೆಗಳ ಮೂರು ಕಾಲೇಜುಗಳನ್ನು ಗುರುತಿಸಿ, ಆ ಕಾಲೇಜುಗಳಲ್ಲಿ ರಂಗ ತರಬೇತಿ ಶಿಬಿರಗಳನ್ನು ನಡೆಸಿ, ಪ್ರತಿ ಕಾಲೇಜುಗಳಿಗೆ ನಾಟಕವನ್ನು ನಿರ್ದೇಶಿಸಿ, ನ.17 ರಿಂದ 19 ರವರೆಗೆ ಪ್ರತಿದಿನ ಮಧ್ಯಾಹ್ನ 3.00 ಮತ್ತು ಸಂಜೆ 6.30ಕ್ಕೆ ರಂಗಾಯಣ, ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.
ನ. 17 ರಂದು ಭಾನುವಾರ ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಅಭಿನಯದ ಕುಮಾರವ್ಯಾಸ ಮೂಲ ರಚನೆಯ ಶ್ರೀಮತಿ ಕಲ್ಪನಾ ಕೆ. ನೀನಾಸಂ ನಿರ್ದೇಶನದ ‘ದುರಂತ ಕರ್ಣ’ ನಾಟಕ ಏರ್ಪಡಿಸಲಾಗಿದೆ.
Shivamogga Rangayana ನ. 18 ರಂದು ಸೋಮವಾರ ತುರುವೇಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಅಭಿನಯದ ರಾಷ್ಟ್ರಕವಿ ಕುವೆಂಪುರವರ ರಚನೆಯ ನಟರಾಜ ಎಲ್ತಿ ಪಟೂರು ನಿರ್ದೇಶನದ ‘ಮಹಾರಾತ್ರಿ’ ನಾಟಕ ಏರ್ಪಡಿಸಲಾಗಿದೆ.
ನ. 19 ರಂದು ಮಂಗಳವಾರ ಹೊಸದುರ್ಗ ಜಿಲ್ಲೆಯ ಯಾಲಕ್ಕಿನಗರದ ಎಸ್.ವಿ.ಎಸ್. ಕಾಲೇಜ್ ಆಫ್ ಎಜುಕೇಷನ್ ವಿದ್ಯಾರ್ಥಿಗಳ ಅಭಿನಯದ ಚೇತನ್ ತೇಜಸ್ಕರ್ ರಚನೆಯ ವಿಶ್ವನಾಥಸ್ವಾಮಿ ಹೆಚ್.ಎಮ್. ನಿರ್ದೇಶನದ ‘ನಚಿಕೇತಾಗ್ನಿ’ ನಾಟಕ ಏರ್ಪಡಿಸಲಾಗಿದೆ.
ದಿನಾಂಕ:17-11-2024 ರಂದು ಬೆಳಿಗ್ಗೆ 10.00ಕ್ಕೆ ಕಾಲೇಜು ರಂಗೋತ್ಸವ ಮತ್ತು ಕಮ್ಮಟವನ್ನು ಡಾ|| ಧನಂಜಯ ಸರ್ಜಿ, ಮಾನ್ಯ ಶಾಸಕರು, ವಿಧಾನಪರಿಷತ್ ಇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಮತಿ ಬಲ್ಕೀಶ್ಬಾನು, ಮಾನ್ಯ ಶಾಸಕರು, ವಿಧಾನಪರಿಷತ್ ಆಗಮಿಸಲಿದ್ದಾರೆ. ಡಾ. ಹರಿಪ್ರಸಾದ್ ಜಿ.ವಿ., ಹಿರಿಯ ಉಪನ್ಯಾಸಕರು, ಡಯಟ್, ಶಿವಮೊಗ್ಗ ಇವರಿಂದ ಆಶಯನುಡಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸನ್ನ ಡಿ. ಸಾಗರ, ನಿರ್ದೇಶಕರು, ರಂಗಾಯಣ, ಶಿವಮೊಗ್ಗ ಇವರು ವಹಿಸಲಿದ್ದಾರೆ. ಡಾ.ಶೈಲಜಾಎ.ಸಿ., ಆಡಳಿತಾಧಿಕಾರಿಗಳು, ರಂಗಾಯಣ, ಶಿವಮೊಗ್ಗ ಹಾಗೂ ಮಂಜು ರಂಗಾಯಣ, ಸಂಚಾಲಕರು, ಕಾಲೇಜು ರಂಗೋತ್ಸವ 2024-25 ಹಾಗೂ ಕಮ್ಮಟದ ಸಂಚಾಲಕರಾದ ಹಾಲಸ್ವಾಮಿ ಆರ್.ಎಸ್.ಇವರ ಉಪಸ್ಥಿತಿಯಿರುತ್ತದೆ.
ದಿನಾಂಕ:17-11-2024 ರಿಂದ 19-11-2024 ರವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 5.00 ರವರೆಗೆ ನೋಂದಣಿಯಾಗಿರುವ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗಾಗಿ ನಡೆಯಲಿರುವ ‘ಶಿಕ್ಷಣದಲ್ಲಿ ರಂಗಕಲೆ’ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸಾಸ್ವೆಹಳ್ಳಿ ಸತೀಶ್, ಕೊಟ್ರಪ್ಪ ಜಿ. ಹಿರೇಮಾಗಡಿ ಹಾಗೂ ಅಣ್ಣಪ್ಪ ಒಂಟಿಮಾಳಗಿ ಇವರು ಭಾಗವಹಿಸಲಿದ್ದಾರೆ.
ಟಿಕೆಟ್ ದರ ಒಬ್ಬರಿಗೆ ಒಂದು ಪ್ರದರ್ಶನಕ್ಕೆ ರೂ.30/- ಗಳನ್ನು ನಿಗದಿ ಮಾಡಲಾಗಿದೆ.
ರಂಗಾಸಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರಂಗಾಯಣದ ಆಡಳಿತಾಧಿಕಾರಿಗಳು ಕೋರಿರುತ್ತಾರೆ.

Department of Youth Empowerment and Sports ಯುವಜನರ ಪ್ರತಿಭೆ ಪ್ರೋತ್ಸಾಹಕ್ಕೆ ಸರ್ಕಾರ ಅನೇಕ ವೇದಿಕೆಗಳನ್ನ ಸೃಷ್ಟಿಸುತ್ತಿದೆ- ಶಾಸಕಿ ಬಲ್ಕೀಷ್ ಬಾನು

0

Department of Youth Empowerment and Sports ಯುವಜನರ ಸರ್ವತೋಮುಖ ಬೆಳವಣಿಗೆಗೆ ಸಾಂಸ್ಕೃತಿಕ ಚಟುವಟಿಕೆಗಳು ಸಹಾಯಕವಾಗಿದೆ. ಯುವ ಸಮೂಹವು ತಮ್ಮ ಪ್ರತಿಭೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರವು ಅನೇಕ ವೇದಿಕೆಗಳನ್ನು ಸೃಷ್ಟಿಸುತ್ತಿದೆ ಎಂದು ವಿಧಾನ ಪರಿಷತ್ ಶಾಸಕಿ ಶ್ರೀಮತಿ ಬಲ್ಕೀಷ್ ಬಾನು ಅವರು ಹೇಳಿದರು.
ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿ.ವಿ. ಹಾಗೂ ನಿಸರ್ಗ ಮಹಿಳಾ ಮಂಡಳಿ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಯುವಜನರಲ್ಲಿ ಅನೇಕ ಕೌಶಲ್ಯ, ಕಲೆ ಇದೆ. ಅದನ್ನು ಬಳಸಿಕೊಂಡು ವ್ಯಕ್ತಿತ್ವ ಬೆಳವಣಿಗೆ ಮಾಡಿಕೊಂಡು ಅವಕಾಶ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
Department of Youth Empowerment and Sports ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್ ಮಾತನಾಡಿ ಕಾಲ ನಿಧಾನವಾಗಿ ಬದಲಾವಣೆ ಆಗಿದೆ. ಇಂದು ಮನೆಗಳಲ್ಲಿ ಜನರ ಸಂಖ್ಯೆ ಕಡಿಮೆ ಇರುವ ಕಾರಣ ಯುವಜನರ ಮೇಲೆ ಜವಾಬ್ಧಾರಿ ಹೆಚ್ಚಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ ಇಂದು ಹೆಚ್ಚು ಅವಕಾಶಗಳನ್ನು ನೀಡಲಾಗುತ್ತಿದೆ ಎಂದರು. ಯುವಜನರ ಸಾಂಸ್ಕೃತಿಕ ಕಲೆಯನ್ನು ಪ್ರೋತ್ಸಾಹಿಸಲು ಸರ್ಕಾರವು ಪೂರಕವಾದ ವಾತವರಣ ಸೃಷ್ಟಿಸಿದೆ. ಇಂದು ಕಂಪ್ಯೂಟರ್, ಟಿ.ವಿ., ಮೊಬೈಲ್‌ಗಳಲ್ಲಿ ಹೆಚ್ಚು ಕಾಲಕಳೆಯುವುದನ್ನು ಬಿಡಬೇಕು, ಆರೋಗ್ಯಕರವಾದ ಅಭ್ಯಾಸಗಳನ್ನು ಹೊಂದಬೇಕು ಎಂದರು. ಭಾರತದ ಅಮೂಲ್ಯವಾದ ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಬೆಳಸುವುದು ಮತ್ತು ಉಳಿಸುವುದು ಯುವ ಸಮೂಹದ ದೊಡ್ಡ ಜವಾಬ್ಧಾರಿ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಭೋವಿ ನಿಗಮದ ಅಧ್ಯಕ್ಷರಾದ ರವಿಕುಮಾರ್ ಎಸ್. ಮಾತನಾಡಿ ನಮ್ಮ ದೇಶದ ಕಲೆ, ಸಾಹಿತ್ಯ ಮರೆಯುವಂತಹ ಪರಿಸ್ಥಿತಿ ಎದುರಾಗಿದೆ. ಆದರೆ ಈ ರೀತಿಯ ಕಾರ್ಯಕ್ರಮದ ಮೂಲಕ ಮತ್ತೆ ಪುರ್ನಜನ್ಮ ಆಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡೋಣ ಎಂದು ಹೇಳಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷರಾದ ಸಿ.ಎಸ್ ಚಂದ್ರಭೂಪಾ¯ ಮಾತನಾಡಿ ರಾಷ್ಟ್ರಕ್ಕೆ ಶಕ್ತಿ ಬರಲು ಯುವ ಶಕ್ತಿಯೇ ಮುಖ್ಯ, ನಮ್ಮಲ್ಲಿ ಅಡಗಿರುವ ಕಲೆ, ಕೌಶಲ್ಯವನ್ನು ಎಚ್ಚರಿಸಬೇಕಾಗಿದೆ. ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಬಲಿಷ್ಠಗೊಳಿಸುವ ಕಾರ್ಯ ಯುವಜನತೆ ಮಾಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್, ನಿಸರ್ಗ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಭಾರತಿ, ನೆಹರು ಯುವ ಕೇಂದ್ರ ಯುವ ಅಧಿಕಾರಿ ಉಲ್ಲಾಸ ಕೆ.ಟಿ.ಕೆ., ಯುವಜನೋತ್ಸವ ಸ್ಪರ್ಧಿಗಳು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.