Sunday, August 2, 2026
Sunday, August 2, 2026

Shivamogga Rangayana ನವೆಂಬರ್ 19 ರವರೆಗೆ ಶಿವಮೊಗ್ಗ ರಂಗಾಯಣದಿಂದ “ಕಾಲೇಜು ರಂಗೋತ್ಸವ

Date:

Shivamogga Rangayana ಶಿವಮೊಗ್ಗ ರಂಗಾಯಣವು ವಿಶೇಷವಾಗಿ ಯುವಜನತೆಯನ್ನು ರಂಗಭೂಮಿಯತ್ತ ಆಕರ್ಷಿಸುವ ಕಾರ್ಯಕ್ರಮಗಳ ಭಾಗವಾಗಿ, ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ‘ಕಾಲೇಜು ರಂಗೋತ್ಸವ 2024-25’ ಮತ್ತು ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗಾಗಿ ‘ಶಿಕ್ಷಣದಲ್ಲಿ ರಂಗಕಲೆ’ ಕಮ್ಮಟವನ್ನು ಆಯೋಜಿಸಿದೆ.
ಮೊದಲ ಹಂತದ ಕಾಲೇಜು ರಂಗೋತ್ಸವಕ್ಕಾಗಿ ಕಳೆದ ಒಂದು ತಿಂಗಳಿಂದ ಶಿವಮೊಗ್ಗ ರಂಗಾಯಣ ವ್ಯಾಪ್ತಿಯ ಶಿವಮೊಗ್ಗ, ಚಿತ್ರದುರ್ಗ ಮತ್ತು ತುಮಕೂರು ಮೂರು ಜಿಲ್ಲೆಗಳ ಮೂರು ಕಾಲೇಜುಗಳನ್ನು ಗುರುತಿಸಿ, ಆ ಕಾಲೇಜುಗಳಲ್ಲಿ ರಂಗ ತರಬೇತಿ ಶಿಬಿರಗಳನ್ನು ನಡೆಸಿ, ಪ್ರತಿ ಕಾಲೇಜುಗಳಿಗೆ ನಾಟಕವನ್ನು ನಿರ್ದೇಶಿಸಿ, ನ.17 ರಿಂದ 19 ರವರೆಗೆ ಪ್ರತಿದಿನ ಮಧ್ಯಾಹ್ನ 3.00 ಮತ್ತು ಸಂಜೆ 6.30ಕ್ಕೆ ರಂಗಾಯಣ, ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.
ನ. 17 ರಂದು ಭಾನುವಾರ ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಅಭಿನಯದ ಕುಮಾರವ್ಯಾಸ ಮೂಲ ರಚನೆಯ ಶ್ರೀಮತಿ ಕಲ್ಪನಾ ಕೆ. ನೀನಾಸಂ ನಿರ್ದೇಶನದ ‘ದುರಂತ ಕರ್ಣ’ ನಾಟಕ ಏರ್ಪಡಿಸಲಾಗಿದೆ.
Shivamogga Rangayana ನ. 18 ರಂದು ಸೋಮವಾರ ತುರುವೇಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಅಭಿನಯದ ರಾಷ್ಟ್ರಕವಿ ಕುವೆಂಪುರವರ ರಚನೆಯ ನಟರಾಜ ಎಲ್ತಿ ಪಟೂರು ನಿರ್ದೇಶನದ ‘ಮಹಾರಾತ್ರಿ’ ನಾಟಕ ಏರ್ಪಡಿಸಲಾಗಿದೆ.
ನ. 19 ರಂದು ಮಂಗಳವಾರ ಹೊಸದುರ್ಗ ಜಿಲ್ಲೆಯ ಯಾಲಕ್ಕಿನಗರದ ಎಸ್.ವಿ.ಎಸ್. ಕಾಲೇಜ್ ಆಫ್ ಎಜುಕೇಷನ್ ವಿದ್ಯಾರ್ಥಿಗಳ ಅಭಿನಯದ ಚೇತನ್ ತೇಜಸ್ಕರ್ ರಚನೆಯ ವಿಶ್ವನಾಥಸ್ವಾಮಿ ಹೆಚ್.ಎಮ್. ನಿರ್ದೇಶನದ ‘ನಚಿಕೇತಾಗ್ನಿ’ ನಾಟಕ ಏರ್ಪಡಿಸಲಾಗಿದೆ.
ದಿನಾಂಕ:17-11-2024 ರಂದು ಬೆಳಿಗ್ಗೆ 10.00ಕ್ಕೆ ಕಾಲೇಜು ರಂಗೋತ್ಸವ ಮತ್ತು ಕಮ್ಮಟವನ್ನು ಡಾ|| ಧನಂಜಯ ಸರ್ಜಿ, ಮಾನ್ಯ ಶಾಸಕರು, ವಿಧಾನಪರಿಷತ್ ಇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಮತಿ ಬಲ್ಕೀಶ್ಬಾನು, ಮಾನ್ಯ ಶಾಸಕರು, ವಿಧಾನಪರಿಷತ್ ಆಗಮಿಸಲಿದ್ದಾರೆ. ಡಾ. ಹರಿಪ್ರಸಾದ್ ಜಿ.ವಿ., ಹಿರಿಯ ಉಪನ್ಯಾಸಕರು, ಡಯಟ್, ಶಿವಮೊಗ್ಗ ಇವರಿಂದ ಆಶಯನುಡಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸನ್ನ ಡಿ. ಸಾಗರ, ನಿರ್ದೇಶಕರು, ರಂಗಾಯಣ, ಶಿವಮೊಗ್ಗ ಇವರು ವಹಿಸಲಿದ್ದಾರೆ. ಡಾ.ಶೈಲಜಾಎ.ಸಿ., ಆಡಳಿತಾಧಿಕಾರಿಗಳು, ರಂಗಾಯಣ, ಶಿವಮೊಗ್ಗ ಹಾಗೂ ಮಂಜು ರಂಗಾಯಣ, ಸಂಚಾಲಕರು, ಕಾಲೇಜು ರಂಗೋತ್ಸವ 2024-25 ಹಾಗೂ ಕಮ್ಮಟದ ಸಂಚಾಲಕರಾದ ಹಾಲಸ್ವಾಮಿ ಆರ್.ಎಸ್.ಇವರ ಉಪಸ್ಥಿತಿಯಿರುತ್ತದೆ.
ದಿನಾಂಕ:17-11-2024 ರಿಂದ 19-11-2024 ರವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 5.00 ರವರೆಗೆ ನೋಂದಣಿಯಾಗಿರುವ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗಾಗಿ ನಡೆಯಲಿರುವ ‘ಶಿಕ್ಷಣದಲ್ಲಿ ರಂಗಕಲೆ’ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸಾಸ್ವೆಹಳ್ಳಿ ಸತೀಶ್, ಕೊಟ್ರಪ್ಪ ಜಿ. ಹಿರೇಮಾಗಡಿ ಹಾಗೂ ಅಣ್ಣಪ್ಪ ಒಂಟಿಮಾಳಗಿ ಇವರು ಭಾಗವಹಿಸಲಿದ್ದಾರೆ.
ಟಿಕೆಟ್ ದರ ಒಬ್ಬರಿಗೆ ಒಂದು ಪ್ರದರ್ಶನಕ್ಕೆ ರೂ.30/- ಗಳನ್ನು ನಿಗದಿ ಮಾಡಲಾಗಿದೆ.
ರಂಗಾಸಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರಂಗಾಯಣದ ಆಡಳಿತಾಧಿಕಾರಿಗಳು ಕೋರಿರುತ್ತಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...