Priyanka Gandhi ಪ್ರಿಯಾಂಕಾ ಗಾಂಧಿ ವಾದ್ರಾ 4,10,931 ಮತಗಳ ಅಂತರದಿಂದ ಗೆದ್ದಿದ್ದಾರೆ, ಇದು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ಸಹೋದರ ರಾಹುಲ್ ಗಾಂಧಿ ವಯನಾಡ್ ಅನ್ನು ಗೆದ್ದ 3,64,422 ಮತಗಳಿಗಿಂತ ಹೆಚ್ಚಾಗಿದೆ. ನಾಂದೇಡ್‌ನಲ್ಲಿ ಕಾಂಗ್ರೆಸ್‌ನ ರವೀಂದ್ರ ವಸಂತರಾವ್ ಚವಾಣ್ 1,457 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
SP Mithun Kumar ಮದ್ಯವರ್ಜನ ಶಿಬಿರ ಚಾಲನೆ, ಸಮಾಜಕ್ಕೆ ಹೆಚ್ಚು ಉಪಯುಕ್ತ- ಎಸ್.ಪಿ .ಮಿಥುನ್ ಕುಮಾರ್
SP Mithun Kumar ಶಿವಮೊಗ್ಗ,ನ.22 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪರಯಪೂಜ್ಯ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ವಿನೂತನ ಕಾರ್ಯಕ್ರಮ ಮದ್ಯವರ್ಜನ ಶಿಬಿರ ಸಮಾಜಕ್ಕೆ ಹೆಚ್ಚು ಉಪಯುಕ್ತವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹೇಳಿದರು.
ನವುಲೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ನಡೆದ ೧೮೯೦ನೇ ಮದ್ಯವರ್ಜನ ಶಿಬಿರದ ಉದ್ಘಾಟಿಸಿ ಮಾತನಾಡಿದ ಅವರು, ಇದುವರೆಗೂ ಯಾರು ಮಾಡದಿರುವ ವಿಶೇಷವಾದ ಕಾರ್ಯಕ್ರಮವನ್ನು ಜಗತ್ತಿನಲ್ಲಿ ಯಾರಾದರೂ ಮಾಡುವವರಿದ್ದರೆ ಅದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಎಂದರು.
ಸಂಸ್ಥೆಯ ಮುಖೇನ ಸಮುದಾಯದ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮ ಮತ್ತು ಜನತೆಯಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ವಿಶಿಷ್ಟ ಮತ್ತು ವಿಭಿನ್ನ ಕಾರ್ಯಕ್ರಮಗಳೆಲ್ಲವು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.
SP Mithun Kumar ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಶೇಖರಪ್ಪ, ಸೂಡಾ ಅಧ್ಯಕ್ಷ ಸುಂದರೇಶ್, ಪಾಲಿಕೆ ಮಾಜಿ ಸದಸ್ಯ ವಿಶ್ವಾಸ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಪಿ ಪಿ ಶಿಬಿರಾಧಿಕಾರಿ ನಂದಕುಮಾರ್, ಆರೋಗ್ಯ ಸಹಾಯಕಿ ನೇತ್ರಾವತಿ, ವಿವಿಧ ಸಂಘಟನೆಗಳ ಪ್ರಮುಖರಾದ ರಮೇಶ್, ಉದಯಕುಮಾರ್ ಶೆಟ್ಟಿ, ಮಮತಾ ಶಿವಣ್ಣ, ರಮೇಶ್ ಕತ್ತಿಗೆ, ರಾಮಚಂದ್ರ, ಇತರರು ಉಪಸ್ಥಿತರಿದ್ದರು.
Kuvempu Birthday ಕುವೆಂಪು ಜನ್ಮದಿನದ ವಿಶೇಷ ಷಿಕಾರಿಪುರದಲ್ಲಿ ನಾಟಕ ಸ್ಪರ್ಧೆ
Kuvempu Birthday ಸಹ್ಯಾದ್ರಿ ರಂಗತರಂಗ ನಾಟಕ ಸ್ಪರ್ಧೆ ಶಿವಮೊಗ್ಗ ನಗರದ ಸಹಾದ್ರಿ ರಂಗ ತರಂಗ (ರಿ) ವತಿಯಿಂದ ದಿನಾಂಕ ಡಿ.28, 2024 ರಂದು ಕುವೆಂಪು ಜನ್ಮದಿನದ ಅಂಗವಾಗಿ ಶಿಕಾರಿಪುರದಲ್ಲಿ ಶಿವಮೊಗ್ಗ ಜಿಲ್ಲಾ ಪದವಿ ಕಾಲೇಜು / ಬಿಎಡ್ ಕಾಲೇಜು ವಿದ್ಯಾರ್ಥಿಗಳಿಗೆ ಕುವೆಂಪು ನಾಟಕ/ ಸಾಹಿತ್ಯ /ವಿಚಾರ ಆಧಾರಿತ ಅಂತರ ಕಾಲೇಜು ನಾಟಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ವಿಜೇತರಿಗೆ ನಗದು ಪುರಸ್ಕಾರವಿರುತ್ತದೆ. ರಂಗ ಪ್ರಯೋಗ ಅರ್ಧಗಂಟೆಯ ಅವಽಯದ್ದಾಗಿದ್ದು, ವಿವರಗಳಿಗೆ 9448414752, 9449284495 ರಲ್ಲಿ ಸಂಪರ್ಕಿಸಬಹುದು.
Dargah Shah Aleem Deewan ಶಿವಮೊಗ್ಗದ ದಿವಾನ್ ಭಾಬಾ ದರ್ಗಾದಲ್ಲಿ ನ.24 ರಿಂದ 26 ವರೆಗೆ ಉರುಸ್
Dargah Shah Aleem Deewan ಶಿವಮೊಗ್ಗದ ಹಜ್ರತ್ ಸೈಯದ್ ಶಾ ಅಲೀಮ್ ದಿವಾನ್ ಬಾಬಾ ದರ್ಗಾ ದಲ್ಲಿ ಮೂರು ದಿನಗಳ ಉರುಸ್ ಸಮಾರಂಭ ಏರ್ಪಡಿಸಲಾಗಿದೆ ಎಂದು ಕಾರ್ಯದರ್ಶಿ ರೆಹಮಾನ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.24,25ಮತ್ತು 26ರಂದು ಕಾರ್ಯಕ್ರಮ ಏರ್ಪಡಿಸಲಾಗಿದ್ದು, 24 ಭಾನುವಾರ ರಂದು ಮಧ್ಯಾಹ್ನ 3 ಗಂಟೆಯಿಂದ ದರ್ಗಾ ಸಂದಲ್ ಮೆರವಣಿಗೆ ಪ್ರಾರಂಭವಾಗಲಿದ್ದು ನಗರದ ಟ್ಯಾಂಕ್ ಮೊಹಲ್ಲ, ಬಿ ಎಚ್ ರಸ್ತೆ , ಎಂಕೆ ಕೆ ರೋಡ್, ಗಾಂಧಿಬಜಾರ್, ನೆಹರು ರಸ್ತೆ ಮುಖಾಂತರವಾಗಿ ದರ್ಗಾದಲ್ಲಿ ಮುಕ್ತಾಯವಾಗಲಿದೆ. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ , ಧರ್ಮ ಗುರುಗಳ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ನ.25 ರಂದು ಬೆಳಗ್ಗೆ 11ರಂದು ದರ್ಗಾ ಆವರಣದಲ್ಲಿ ಮುಸ್ಲಿಂ ವಧು-ವರರ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ವಿವಾಹದಲ್ಲಿ ಸುಮಾರು 15 ವಧು-ವರರ ಮದುವೆ ನಡೆಯಲಿದೆ ನಂತರ ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
Dargah Shah Aleem Deewan ಮರುದಿನ ನವೆಂಬರ್ 26ರಂದು ಸೂಫಿ ಕವಾಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ . ಈ ಎಲ್ಲಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದರ್ಗಾ ಉರಸ್ ಕಮಿಟಿಯ ಅಧ್ಯಕ್ಷರಾದಂತಹ ಶ್ರೀ ಸೈಯದ್ ಮುಝಮ್ಮಿಲ್ ರವರ ನೇತೃತ್ವದಲ್ಲಿ ಹಾಗೂ ದರ್ಗಾ ಉರುಸ್ ಕಮಿಟಿ ಯ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದರು,
ಹಾಗೂ ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯದ ದರ್ಗಾಗಳ ಧರ್ಮ ಗುರುಗಳು, ಸೂಫಿ ಸಂತರು, ದರ್ಗಾ ಶಾಪಿಂಗ್ ಕಾಂಪ್ಲೆಕ್ಸ್ ಮ್ಯಾನೇಜ್ಮೆಂಟ್ ಕಮಿಟಿ ಯ ಅಧ್ಯಕ್ಷರಾದಂತಹ ಕೇಬಲ್ ಫೈರೋಜ್ ರವರು ಹಾಗೂ ಕಮಿಟಿಯ ಸದಸ್ಯರು ನಗರದ ಮುಸ್ಲಿಂ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ದರ್ಗಾ ಉರುಸ್ ಕಮಿಟಿಯ ಕಾರ್ಯದರ್ಶಿ ರೆಹಮಾನ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Shimoga News ಬದುಕು ಸುಂದರವಾಗಲು ಧ್ಯಾನ ಸಹಕಾರಿ- ಯೋಗಗುರು ರುದ್ರಾರಾಧ್ಯ
Shimoga News ಶಿವಮೊಗ್ಗ ಬದುಕು ಸುಂದರಗೊಳಿಸಲು ಹಾಗೂ ಸದಾ ಲವಲವಿಕೆಯಿಂದ ಆರೋಗ್ಯದಿಂದ ಇರಲು ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಅತ್ಯಂತ ಸಹಕಾರಿಯಾಗುತ್ತದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಅಭಿಪ್ರಾಯಪಟ್ಟರು.
ಶಿವಗಂಗಾ ಯೋಗಕೇಂದ್ರದ ರಾಘವ ಶಾಖೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಯೋಗ, ಧ್ಯಾನ, ಪ್ರಾಣಾಯಾಮ ತರಬೇತಿ ಮತ್ತು ಮಾಹಿತಿ ಶಿಬಿರದಲ್ಲಿ ಮಾತನಾಡಿ, ಮನುಷ್ಯ ತನ್ನಲ್ಲಿನ ಅಸೂಯೆ, ಹೊಟ್ಟೆಕಿಚ್ಚು, ನಕರಾತ್ಮಕ ಭಾವನೆಗಳನ್ನು ತೊರೆಯಬೇಕು. ದುರಾಸೆ ಬಿಟ್ಟು ನೆಮ್ಮದಿ ಹಾಗೂ ಸಂತೋಷದ ಜೀವನ ರೂಢಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರೂ ಯೋಗ ಅಭ್ಯಾಸ ಮಾಡುವುದು ಒಳ್ಳೆಯದು. ಯೋಗ, ಧ್ಯಾನ, ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ದೇಹದ ಆರೋಗ್ಯ ಸದೃಢಗೊಳ್ಳುತ್ತದೆ. ಒತ್ತಡರಹಿತ ಜೀವನ ನಡೆಸಲು ಸಾಧ್ಯವಾಗುತ್ತದೆ. ಆಯುಷ್ಯ ವೃದ್ಧಿ ಜತೆಯಲ್ಲಿ ತೃಪ್ತಿಕರ ಬದುಕು ನಮ್ಮದಾಗುತ್ತದೆ ಎಂದರು.
Shimoga News ಯೋಗದ ಅಭ್ಯಾಸದಿಂದ ಮನುಷ್ಯನದಲ್ಲಿ ಧನಾತ್ಮಕ ಬದಲಾವಣೆ ಕಾಣಬಹುದಾಗಿದೆ. ಜೀವನಶೈಲಿ ಉತ್ತಮಗೊಳ್ಳುವ ಮೂಲಕ ಉನ್ನತ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಅನೇಕರು ಯೋಗ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮನಶಾಂತಿ ಮತ್ತು ಏಕಾಗ್ರತೆ ವೃದ್ಧಿಸುವ ಯೋಗ ಕಾರ್ಯಕ್ರಮ, ಒತ್ತಡ ಆತಂಕ ನಿರ್ವಹಣೆ ಬಗ್ಗೆ ಎಸ್.ವ್ಯಾಸ ಅವರು ಯೋಗ ವಿಶ್ವವಿದ್ಯಾಲಯ ನಿರ್ಮಿತ ತರಬೇತಿಯನ್ನು ನೀಡಿದರು.
80ಕ್ಕೂ ಹೆಚ್ಚು ಯೋಗ ಪ್ರಶಿಕ್ಷಣಾರ್ಥಿಗಳು ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು. ರಾಘವ ಶಾಖೆ ಯೋಗ ಶಿಕ್ಷಕರಾದ ಜಿ.ಎಸ್.ಓಂಕಾರ್, ವೈ.ಎಸ್.ವಿಜಯಕೃಷ್ಣ, ಎಚ್.ಕೆ.ಹರೀಶ್, ನರಸೋಜಿ ರಾವ್, ಜಿ.ವಿಜಯಕುಮಾರ್, ಸುಜಾತಾ ಮಧುಕೇಶ್ವರ, ಗಾಯತ್ರಿ ಅಶೋಕ್, ಮಹೇಶ್, ಎಸ್.ಟಿ.ಆನಂದ್, ಶಂಕರ್, ಶಶಿಧರ್, ಶಿವಕುಮಾರ್, ದೀಪಕ್, ಸುರೇಖಾ, ಅಜಯ್, ಅರುಣ್, ಸುಮಂತ್, ಸತೀಶ್ ಉಮೇಶ್ ಉಪಸ್ಥಿತರಿದ್ದರು.
N Gopinath ಪಾಠದ ಜೊತೆ ವಿದ್ಯಾರ್ಥಿಗಳಿಗೆ ಸಾಹಸ,ಸಾಮಾಜಿಕ ಅರಿವು ಮೂಡಿಸುವುದು ಮುಖ್ಯ- ಎನ್.ಗೋಪಿನಾಥ್
N Gopinath ವಿದ್ಯಾರ್ಥಿಗಳ ಪಾಠ ಪ್ರವಚನ ಜೋತೆಗೆ ಸಾಹಸ, ಪ್ರವಾಸ, ಸಾಮಾಜಿಕ ಅರಿವು ಕುರಿತು ಜಾಗ್ರತಿ ಮೂಡಿಸುವುದು ಸಮಾಜದ ಕರ್ತವ್ಯ ಎಂದು ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕದ ಅಧ್ಯಕ್ಷರಾದ ಎನ್.ಗೋಪಿನಾಥ್, ಸಹ್ಯಾದ್ರಿ ಕಲಾ ಕಾಲೇಜ್, ಮಂಗಳೂರು ಇನ್ಸಿಟ್ಯೂಟ್ ಆಫ್ ಅಂಕಾಲಜಿ ತೀರ್ಥಹಳ್ಳಿ, ಸಹಾಸ ಮತ್ತು ಸಂಸ್ಕೃತಿ ಅಕಾಡಮಿ, ಮಥುರ ರಜತಮಹೋತ್ಸವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ ಕವಲೇದುರ್ಗ ಚಾರಣ, ಕವಿಶೈಲ, ಕ್ಯಾನ್ಸರ್ ಕುರಿತು ಜಾಗೃತಿ ಪ್ರವಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
N Gopinath ವಿದ್ಯಾಭ್ಯಾಸದ ಜೊತೆ ಸಾಮಾಜಿಕ ಕಳಕಳಿ, ಜನ ಸಾಮಾನ್ಯರಲ್ಲಿ ಇರುವ ಅಳುಕು ಹಾಗೂ ಇತಿಹಾಸ ಪ್ರಸಿದ್ದ ಸ್ಥಳ ದರ್ಶನದಿಂದ ಸುಲಭವಾಗಿ ಅರಿವು ಮೂಡುತ್ತದೆ. ಜೊತೆಗೆ ಸಾಹಸ ಮತ್ತು ನಮ್ಮ ಸಂಸ್ಕೃತಿಯನ್ನು ಬಿಂಭಿಸಿದ ಮಹನೀಯರ ಜನ್ಮ ಸ್ಥಳಕ್ಕೆ ಪ್ರವಾಸ ಏರ್ಪಡಿಸಿರುವುದರ ಸದುಪಯೋಗ ಪಡಿಸಿಕೊಳ್ಳ ಬೇಕೆಂದು ಕಿವಿ ಮಾತು ಹೇಳಿದರು.
ಸಹಾಸ ಮತ್ತು ಸಂಸ್ಕೃತಿ ಬಗ್ಗೆ ಆಗಿಂದಾಗೆ ಈ ರೀತಿಯ ಕಾರ್ಯಕ್ರಮ ಆಯೋಜಿಸುತ್ತೇವೆ. ಅದರ ಸದುಪಯೋಗವನ್ನು ಆಗಿಂದಾಗೆ ಸಹ್ಯಾದ್ರಿ ಕಲಾ ಕಾಲೇಜ್ ವಿದ್ಯಾರ್ಥಿಗಳು ಉಪಯೋಗಿಸಿ ಕೊಳ್ಳುತ್ತಿದ್ದಾರೆ ಎಂದು ಆ.ನ.ವಿಜಯೇಂದ್ರ ರಾವ್ ತಿಳಿಸಿದರು.
ತರುಣೋದಯ ಘಟಕದ ಛೇರ್ಮನ್ ಎಸ್.ಎಸ್.ವಾಗೇಶ್, ಇತಿಹಾಸ ಅಕಾಡಮಿ ಕಾರ್ಯದರ್ಶಿ ದಿಲೀಪ್ ನಾಡಿಗ್, ಸಹ್ಯಾದ್ರಿ ಕಾಲೇಜ್ ಪ್ರಾಧ್ಯಾಪಕರುಗಳು ಐವತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Sri Sri Prasannanatha Swamiji ಶ್ರೀ ಪ್ರಸನ್ನನಾಥ ಶ್ರೀಗಳಿಗೆ ಮಾತೃ ವಿಯೋಗ
Sri Sri Prasannanatha Swamiji ಶಿವಮೊಗ್ಗ,ನ.22 ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಮಠದ ರೂವಾರಿಗಳೂ ಆದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ತಾಯಿ ಶ್ರೀಮತಿ ಗಂಗಮ್ಮ ಅವರು ವಯೋ ಸಹಜವಾಗಿ ಇಂದು ಚೆಂಬು ಗ್ರಾಮದಲ್ಲಿ ನಿಧನರಾದರು.
ಶ್ರೀಗಳು ತಾಯಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಇಂದು ಮಧ್ಯಾಹ್ನ ಚೆಂಬು ಗ್ರಾಮಕ್ಕೆ ಬೇಟಿ ನೀಡಲಿದ್ದಾರೆ.
ಸ್ವಾಮೀಜಿಯವರಿಗೆ ಕರೆ ಮಾಡಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಅವರು ಸಂತಾಪ ಸೂಚಿಸಿದರು.
Karnataka Rajyotsava ನಮ್ಮ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ- ಡಾ.ಎಚ್.ಬಿ.ಮಂಜುನಾಥ್
Karnataka Rajyotsava “ನಮ್ಮ ದೇಶೀಯ ಸಂಸ್ಕೃತಿಯು ವಿಶ್ವದಲ್ಲೇ ಶ್ರೇಷ್ಠವಾಗಿದೆ” ಬಿ ಜೆ ಎಂ ಶಾಲಾ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಾ.ಎಚ್.ಬಿ.ಮಂಜುನಾಥ- ದಾವಣಗೆರೆ.ನ.23. ನಮ್ಮ ದೇಶದ ಸಂಸ್ಕೃತಿ ಸಂಸ್ಕಾರಗಳು ಪ್ರಪಂಚದಲ್ಲೇ ಶ್ರೇಷ್ಠವಾಗಿದ್ದು ನಮ್ಮ ರಾಜ್ಯದ ಸಂಸ್ಕೃತಿಯಂತೂ ಪರಮ ಶ್ರೇಷ್ಠವಾಗಿದೆ, ಇದನ್ನು ಶಾಲಾ ಶಿಕ್ಷಣದಲ್ಲಿ ಪೂರ್ತಿಯಾಗಿ ಕೊಡಲು ಸಾಧ್ಯವಿಲ್ಲ, ಮನೆಯಲ್ಲಿ ಪೋಷಕರೇ ಮಕ್ಕಳಿಗೆ ಕೊಡಬೇಕು ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ.ಮಂಜುನಾಥ ಕರೆ ಕೊಟ್ಟರು. ಅವರಿಂದು ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಬಿ ಜೆ ಎಂ ಶಾಲೆಯಲ್ಲಿ ಏರ್ಪಾಡಾಗಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಭುವನೇಶ್ವರೀ ಹಾಗೂ ನೆಹರೂ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಾ ಕನ್ನಡದ ನೆಲದಲ್ಲಿ ವಾಸವಾಗಿದ್ದು ಕನ್ನಡದ ಅನ್ನಾಹಾರಗಳನ್ನು ಸೇವಿಸುವ ಎಲ್ಲರೂ ಕರ್ನಾಟಕದ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲೇಬೇಕು, ಕನ್ನಡ ಭಾಷೆಯನ್ನು ಬಳಸಲೇಬೇಕು, ಅನ್ಯ ಭಾಷೆಗಳನ್ನು ದ್ವೇಷಿಸಬಾರದು ಆದರೆ ಕನ್ನಡವನ್ನು ಅಲಕ್ಷಿಸಬಾರದು ಎಂದರು. ಮತ್ತೋರ್ವ ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಪತ್ರಕರ್ತರು ದಾವಣಗೆರೆ ವರದಿಗಾರರ ಕೂಟದ ಅಧ್ಯಕ್ಷರು ಆದ ನಾಗರಾಜ ಎಸ್ ಬಡಿದಾಳ್ ರವರು ಮನೆಯಲ್ಲಿ ತಾಯಂದಿರು ತಮ್ಮ ಬಿಡುವಿನ ವೇಳೆಯಲ್ಲಿ ಟಿವಿ ಧಾರಾವಾಹಿ ಮುಂತಾದವುಗಳನ್ನು ಮಿತವಾಗಿ ನೋಡುತ್ತಾ ಉಳಿದ ಸಮಯವನ್ನು ಮಕ್ಕಳೊಂದಿಗೆ ಕಳೆಯಬೇಕು, ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಕುರಿತಾಗಿ ಹೇಳುತ್ತಿರಬೇಕು ಎಂದು ಕರೆ ಕೊಟ್ಟರು. ಮುಖ್ಯ ಅತಿಥಿಗಳಾಗಿ ಸಾಧಕರ ಸಂದರ್ಶಕಿ ಅಶ್ವಿನಿ ಗೌಡ ರವರು ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಬದಲಾವಣೆಗಳು ಶಾಲೆಯಲ್ಲಿ Karnataka Rajyotsava ಶಿಕ್ಷಕರಿಂದಲೂ ಮನೆಯಲ್ಲಿ ಪೋಷಕರಿಂದಲೂ ಆಗಬೇಕೆಂದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಶಾಲಾ ಕಾರ್ಯದರ್ಶಿ ಕೆ ಎಸ್ ಮಂಜುನಾಥ ಅಗಡಿ ಮಾತೃಭಾಷೆಯಾದ ಕನ್ನಡದೊಂದಿಗೆ ರಾಷ್ಟ್ರೀಯ ಭಾಷೆಯಾದ ಹಿಂದಿ ಹಾಗೂ ಅಂತಾರಾಷ್ಟ್ರೀಯ ಭಾಷೆಯಾದ ಆಂಗ್ಲವನ್ನು ಕಲಿತರೆ ಒಳ್ಳೆಯದೆಂದರು. ಹನುಮಂತಪ್ಪ ಉಪಸ್ಥಿತರಿದ್ದು ಅಧ್ಯಾಪಕಿ ಗೀತಾಂಜಲಿ ಸ್ವಾಗತ ಕೋರಿದರು. ಅರ್ಪಿತಾ ಶ್ರೀ ವಿದ್ಯಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಆಶಾ ಪ್ರಸ್ತಾವಿಕ ನುಡಿಗಳನ್ನಾಡಿದರು. ದಿನಾಚರಣೆಯ ಕುರಿತು ವಿದ್ಯಾರ್ಥಿಗಳಾದ ರಂಜಿತಾ ತೇಜಸ್ ರಿಷಿಕಾ ಅಮೀರ ವೈಷ್ಣವಿ ರಾಜೇಶ್ವರಿ ಮುಂತಾದವರು ಮಾತನಾಡಿದರು. ಅರ್ಪಿತ ವಂದನೆ ಸಲ್ಲಿಸಿದರು. ಶಾಲಾ ಮಕ್ಕಳಿಂದ ವೈವಿಧ್ಯಮಯ ನೃತ್ಯ ಹಾಗೂ ಸಾಂಸ್ಕೃತಿಕ ಪ್ರಸ್ತುತಿಗಳು ನೆರವೇರಿದವು.
Poorna Prajna School ಓದು & ಕ್ರೀಡೆ ಎರಡನ್ನೂ ಸಮಾನ ಸ್ವೀಕರಿಸಿ- ಶ್ರೀಕೃಷ್ಣ ಉಪಾಧ್ಯಾಯ
Poorna Prajna School ಭದ್ರಾವತಿ,ನ.22, ದೈಹಿಕ ಶಿಕ್ಷಣ ಶಿಕ್ಷಕರು ಸಂಸ್ಥೆಯ ಆಧಾರಸ್ಥಂಭ ವಿದ್ದ ಆಗೆ, ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷಣ ಶಿಕ್ಷಕರು ಅಂದರೆ ಬಹಳ ಅಚ್ಚುಮೆಚ್ಚು ಎಂದು ಪೂರ್ಣಪ್ರಜ್ಞಾ ಶಾಲೆಯ ಸಹ ಕಾರದರ್ಶಿಯಾದ ಪ್ರೊಫೆಸರ್ ಶ್ರೀ ಕೃಷ್ಣ ಉಪಾಧ್ಯಾಯರು ಅಭಿಪ್ರಾಯ ಪಟ್ಟರು.
ಅವರು ಭದ್ರಾವತಿಯ ಪೂರ್ಣ ಪ್ರಜ್ಞಾ ಶಾಲೆಯಲ್ಲಿಇಂದಿನಿಂದ ಎರಡು ದಿನ ನಡೆಯಲಿರುವ ಅಂತರ್ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡುತ್ತಾ,ತಮ್ಮ ಜೀವನದಲ್ಲಿ ಓದಿನ ಜೊತೆಗೆ ಶಿಸ್ತು ಅನ್ನುವಂತದ್ದು ಬಹಳ ಮುಖ್ಯ, ಓದು ಮತ್ತು ಕ್ರೀಡೆ ಎರಡನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ತಿಳಿಸಿದರು.
ರಾಷ್ಟ್ರ ಪ್ರಶಸ್ತಿ ಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕ, ಶಿವಲಿಂಗೇಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ,
ಓದಿನ ಜೊತೆಗೆ ಕ್ರೀಡೆಗೂ ಹೆಚ್ಚು ಒತ್ತು ಕೊಟ್ಟಾಗ ಕ್ರೀಡೆ ಬೆಳೆಯಲು ಸಾಧ್ಯವಾಗುತ್ತದೆ.
Poorna Prajna School ಕ್ರೀಡೆಯಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ, ಸೋಲು – ಗೆಲುವನ್ನು ಸಮಾನವಾಗಿ ಸ್ವೀಕರಿಸಿ,ನಿರಂತರ ಅಭ್ಯಾಸದಿಂದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.
ಮನಸ್ಸು ಮತ್ತು ದೇಹದ ಬೆಳವಣಿಗೆಯು ಸಮಾನವಾಗಿ ಬೆಳೆಯಲು ಕ್ರೀಡೆ ಸಹಕಾರಿ ಎಂಬುದು ನಮಗೆಲ್ಲರಿಗೂ ತಿಳಿದಿದೆ.
ಆಟಗಳು ಮತ್ತು ಕ್ರೀಡೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ, ಅದಕ್ಕಾಗಿಯೇ ದೈಹಿಕ ತರಬೇತಿ, ವ್ಯಾಯಾಮ ಮತ್ತು ಆಟಗಳಿಲ್ಲದೆ – ಶಿಕ್ಷಣವು ಅಪೂರ್ಣವಾಗಿರುತ್ತದೆ. ಅಲ್ಲದೆ, ಶಿಕ್ಷಣದ ಜೊತೆಗೆ, ಆಟಗಳು ಸಹ ನಮ್ಮೆಲ್ಲರನ್ನೂ ಎದ್ದು ನಿಲ್ಲಲು ಮತ್ತು ಜೀವನದ ಎಲ್ಲಾ ಕಠಿಣ ಸವಾಲುಗಳನ್ನು ಎದುರಿಸಲು ಸಿದ್ಧಗೊಳಿಸುತ್ತವೆ. ಆಟಗಳನ್ನು ಆಡುವಾಗ, ವಿದ್ಯಾರ್ಥಿಗಳು ಆಮ್ಲಜನಕದ ಉತ್ತಮ ಸೇವನೆಯನ್ನು ತೆಗೆದುಕೊಳ್ಳುತ್ತಾರೆ, ಅವರ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಎಂದರು.
ಪೂರ್ಣಪ್ರಜ್ಞ ಶಾಲೆಯ ಕಾರ್ಯದರ್ಶಿಯಾದ ಡಾ.ವಿನೀತ್ ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಅಮರೇಗೌಡ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ, ಜಯಶ್ರೀ , ವಿಜಯಲಕ್ಷ್ಮಿ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ
Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಿಜೆಪಿಗೆ ಭಾರೀ ಸಂತೋಷ ತಂದಿದೆ. ಶಿವಸೇನೆಯ ಇಬ್ಭಾಗ ಮತ್ತು ಸದ್ಯದ ರಾಜಕೀಯ ವಿದ್ಯಮಾನಗಳಿಂದ
“ಮಹಾ” ಚುನಾವಣೆ ದೊಡ್ಡ ಕುತೂಹಲ ಉಂಟುಮಾಡಿತ್ತು.
ಏಕನಾಥ ಶಿಂಧೆ ಅವರ” ಸಿಎಂ ಗಿರಿ”ಗೆ ಈ ಬಾರಿ ಮತದಾರ ಭಾರೀ ಮಣೆ ಹಾಕಿದ್ದಾನೆ. ಹಲವಾರು ಜನಪರ ಯೋಜನೆಗಳಿಂದ ಶಿಂಧೆ ಒಂದು ಕೈ ಮೇಲೆ ಇದ್ದರು. ಉದ್ಧವ್ ಠಾಕ್ರೆ ಅವರ ಚಂಚಲಿತ ನಿಲುವು, ಕಾಂಗ್ರೆಸ್, ಶರದ್ ಪವಾರ್ ಅವರ ಎನ್ ಸಿ ಪಿ ಇವುಗಳ ನಡುವೆ ಭದ್ರ ಬೆಸುಗೆಯ ಕೊರತೆಯಿಂದ ಶಿಂಧೆ ಬಣದ ಶಿವಸೇನೆ ಮತ್ತು ಮೋದಿಯವರ ಮೋಡಿ ಮತ್ತೆ “ಲಕ್ “
ಸಿಗುವಂತೆ ಮಾಡಿದೆ.
Maharashtra Election ಈಗಾಗಲೇ 218 ಸ್ಥಾನ ಗಳಿಸಿ ನಿಚ್ವಳ ಬಹುಮತ ಪಡೆದ ಮಹಾಯುತಿ ಒಕ್ಕೂಟ ಮತ್ತೆ ಮಹಾರಾಷ್ಟ್ರದ ಗದ್ದುಗೆ ಹಿಡಿಯುವಲ್ಲಿ
ಸಫಲವಾಗಿದೆ. ಇನ್ನೂ ಎಣಿಕೆ ಪೂರ್ಣವಾಗಿಲ್ಲದಿದ್ದರೂ ಮತ ಎಣಿಕೆಯ
ಟ್ರೆಂಡ್ ನಲ್ಲಿ ಮಹಾಯುತಿಗೆ ಬಹುಮತ ಸಾಬೀತಾಗಿದೆ.ಬಹಳ ಭರವಸೆ ಇರಿಸಿಕೊಂಡಿದ್ಧ ಕಾಂಗ್ರೆಸ್ ಇರುವ ಮಹಾ ವಿಕಾಸ ಅಘಾಡಿ ಗೆ ಒಂದು ಥರ ಪಾರ್ಶ್ವವಾಯು ಬಡಿದಂತಾಗಿದೆ. ಅಭ್ಯರ್ಥಿಗಳ ಆಯ್ಕೆ, ಪರಸ್ಪರ ಸ್ಥಾನ ಹೊಂದಾಣಿಕೆ ಇವುಗಳಲ್ಲಿ ಮೀನಮೇಷ ಎಣಿಸಿದ್ದರ ಫಲ ಅಘಾಡಿಗೆ ಹಿನ್ನೆಡೆ ಎಂದು ಪರಿಣಿತರ ಲೆಕ್ಕಾಚಾರ. ಪೂರ್ಣ ಸ್ಥಾನಗಳ ಮಾಹಿತಿ ಇನ್ನೂ ಬಂದಿಲ್ಲ.
ಆದರೂ ಎಣಿಕೆ ಸುತ್ತು ಕಡಿಮೆಯಿರುವ ಹಿನ್ನೆಲೆಯಲ್ಲಿ ಮಹಾಯುತಿಗೆ ಜಯಭೇರಿ ಎನ್ನುವುದಕ್ಕೆ ಸಂದೇಹವಿಲ್ಲ.
