Monday, March 23, 2026
Monday, March 23, 2026
Home Blog Page 486

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

0

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಕಾರ್ಯ ನಿರ್ವಹಿಸಲು ಪೊಲೀಸ್‌ ಇಲಾಖೆಯಿಂದ ಆಸಕ್ತ ಮಾಜಿ ಸೈನಿಕರಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದ್ದು, ಆಸಕ್ತ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಸಂಬಂಧಿಸಿದ ಮಾಜಿ ಸೈನಿಕರು ತಮ್ಮ ಇಚ್ಚೆಯನ್ನು ದಿನಾಂಕ 25-11-2024 ರಂದು ಬೆಳಿಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 01.00 ಘಂಟೆಯೊಳಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಛೇರಿಯ ದೂರವಾಣಿ ಸಂಖ್ಯೆ 08182-220925 ಗೆ ಕರೆ ಮಾಡಿ ತಿಳಿಸಲು ಕೋರಲಾಗಿದೆ.

ಶಿವಮೊಗ್ಗ – 30, ದಾವಣಗೆರೆ – 5 ಮತ್ತು ಚಿತ್ರದುರ್ಗ – 4 ಹುದ್ದೆಗಳು ಖಾಲಿ ಇದ್ದು, ಒಂದು ವರ್ಷದ ಗುತ್ತಿಗೆ ಅವಧಿಯು ಅವಶ್ಯಕತೆಗೆ ಅನುಗುಣವಾಗಿ ಮುಂದುವರೆಸುವ ಅವಕಾಶವೂ ಸಹ ಇರುತ್ತದೆ ಎಂಬುದನ್ನು ತಮ್ಮ ಮಾಹಿತಿಗಾಗಿ ನೀಡಿದೆ.

Police Department ಕರ್ತವ್ಯದ ಅವಧಿಯು 8 ಘಂಟೆಗಳು ಮೂರು ಶಿಫ್ಟ್‌ ಆಗಿದ್ದು, ವೇತನ ರೂ. 28,499/- ಆಗಿರುತ್ತದೆ. ಆಸಕ್ತರ ಪಟ್ಟಿಯನ್ನು ಈ ಇಲಾಖೆಯ ನಿರ್ದೇಶನಾಲಯಕ್ಕೆ ದಿನಾಂಕ 25-11-2024 ರಂದೇ ನೀಡಬೇಕಾಗಿರುವುದರಿಂದ ಹೆಚ್ಚಿನ ಸಮಯವಕಾಶವಿರುವುದಿಲ್ಲ.

ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ರವರ ಆದೇಶದ ಮೇರೆಗೆ ಮೇಲಿನ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

0

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ) ರಾಜ್ಯ ಸರಾಸರಿಗಿಂತ ಹೆಚ್ಚಿದ್ದು ಇದನ್ನು ತಗ್ಗಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲೆಯ ಮತದಾರರ ಪಟ್ಟಿಯ ವೀಕ್ಷಕರಾದ ಡಾ.ಕೆ.ವಿ.ತ್ರಿಲೋಕ್ ಚಂದ್ರ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025 ಕ್ಕೆ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಪಿ ರೇಷಿಯೋ ಜಿಲ್ಲೆಯಲ್ಲಿ 78 ಇದೆ. ಸರಾಸರಿ 68 ರಿಂದ 69 ಇರಬೇಕು. ಆದ್ದರಿಂದ ಎಲ್ಲ ಕ್ಷೇತ್ರವಾರು ಮತ್ತು ಪಾರ್ಟ್ವಾರು ಅಗತ್ಯವಾದ ವಿಶ್ಲೇಷಣೆ ನಡೆಸಿ ಹಾಗೂ ಇ-ಜನ್ಮ ಪೋರ್ಟಲ್‌ನಿಂದ ಮಾಹಿತಿ ಪಡೆದು ಕಡಿಮೆ ಮಾಡಬೇಕು.
ಗೈರು ಮತದಾರರು, ಮರಣ ಹೊಂದಿದ ಮತ್ತು ಇತರೆಡೆ ವರ್ಗಾವಣೆಯಾದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಬೇಕು. ಫಾರಂ ಸಂಖ್ಯೆ 7 ಅಪ್‌ಡೇಟ್ ಆಗಬೇಕು. ಮುಂದಿನ ಸಭೆಯೊಳಗೆ ಇಪಿ ರೇಷಿಯೋ ಸುಧಾರಣೆಯಾಗಬೇಕು. ಪಾಲಿಕೆ ವ್ಯಾಪ್ತಿಯಲೂ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಹಾಗೂ ಯುವ ಮತದಾರರು ಸೇರಿದಂತೆ ಮತದಾರರ ನೋಂದಣಿಯನ್ನು ಪರಿಣಾಮಕಾರಿಯಾಗಿ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಕ್ಷೇತ್ರವಾರು ಇಆರ್‌ಓ ಮತ್ತು ಎಇಆರ್‌ಓ ಗಳನ್ನು ನೇಮಿಸಿ, ತರಬೇತಿಯನ್ನು ನೀಡಲಾಗಿದೆ. ಒಟ್ಟು 1793 ಮತಗಟ್ಟೆಗಳಿದ್ದು ಎಲ್ಲ ಮತಗಟ್ಟೆಗಳಿಗೆ ಬಿಎಲ್‌ಓ ಗಳ ನೇಮಕ ಆಗಿದೆ.
ದಿ: 29-10-2024 ಕ್ಕೆ ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು,
ದಿ: 29-10-2024 ರಿಂದ 28-11-2024 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಕರೆಯಲಾಗಿದೆ.

ದಿ: 09-11-204, 10-11-2024, 23-11-2024 ಮತ್ತು
24-11-2024 ರಂದು ಮತದಾರರ ಪಟ್ಟಿ ಪರಿಷ್ಕರಣೆಗೆ ವಿಶೇಷ ಅಭಿಯಾನ ಮಾಡಲಾಗುತ್ತಿದೆ. ದಿ: 24-12-2024ಕ್ಕೆ ಹಕ್ಕು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುವುದು. ದಿ: 01-01-2025ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟಕ್ಕೆ ಕ್ರಮ ವಹಿಸಲಾಗುವುದು ಮತ್ತು ದಿ: 06-01-2025 ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.

DC Shivamogga ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಾರ ಪ್ರಸ್ತುತ 1520326 ಮತದಾರರು ಇದ್ದಾರೆ. 2024 ರ ಅಂತಿಮ ಪಟ್ಟಿ ಪ್ರಕಾರ 1482938 ಮತದಾರರು ಇದ್ದರು.
ದಿ: 29-10-2024 ಕ್ಕೆ ಲಿಂಗಾನುಪಾತ 1031 ಇದೆ. ಕಳೆದ ಬಾರಿ 1022 ಇತ್ತು. ಜನವರಿಯಿಂದ ಜೂನ್‌ವರೆಗೆ 18 ರಿಂದ 19 ವಯಸ್ಸಿನ 18222 ಮತದಾರರು ನೋಂದಣಿಯಾಗಿದ್ದಾರೆ.

80+ ವರೆಗೆ ಒಟ್ಟಾರೆ 1520326 ಜನ ಮತದಾರರ ಪಟ್ಟಿಯಲ್ಲಿದ್ದಾರೆ.
ಇಪಿ ರೇಷಿಯೋ ಪುರುಷ 78.87 ಮತ್ತು 79.07 ಒಟ್ಟು 78.99 ಇದ್ದು ಇದನ್ನು ಕಡಿತಗೊಳಿಸಲು ಫಾರಂ ನಂ 7, ವರ್ಗಾವಣೆ, ಮರಣ ಗೈರು ಮತದಾರರ ಡಿಲೀಷನ್ ಕೆಲಸ ಮಾಡಲಾಗುತ್ತಿದೆ. ಇದನ್ನು ಎಲ್ಲ ಕ್ಷೇತ್ರ ಮತ್ತು ಪಾರ್ಟ್ವರು ಇನ್ನೂ ಪರಿಣಾಮಗೊಳಿಸಲಾಗುವುದು ಎಂದು ತಿಳಿಸಿದರು.

ಜಿ.ಪಂ ಸಿಇಓ ಎನ್.ಹೇಮಂತ್, ಐಎಎಸ್ ಪ್ರೊಬೇಷನರಿ ಅಧಿಕಾರಿ ದೃಷ್ಟಿ ಜೈಸ್ವಾಲ್, ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಎಸಿ ಸತ್ಯನಾರಾಯಣ್, ಚುನಾವಣಾ ತಹಶೀಲ್ದಾರ್ ಪ್ರದೀಪ್, ತಾಲ್ಲೂಕುಗಳ ತಹಶೀಲ್ದಾರರು, ತಾ.ಪಂ ಗಳ ಇಓ ಗಳು ಮತ್ತು ಚುನಾವಣೆಗೆ ಸಂಬAಧಿಸಿದ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Excise Districts – State Excise Department ಮಾಹಿತಿ ಆಧರಿಸಿ ಮನೆ‌ಮೇಲೆ ಅಬಕಾರಿ ಸಿಬ್ಬಂದಿಯ ದಾಳಿ.ಅಕ್ರಮ ದಾಸ್ತಾನಿದ್ದ ಗೋವಾ ಮದ್ಯ ವಶ

0

Excise Districts – State Excise Department ದಿನಾಂಕ 22/11/2024 ರಂದು ಅಬಕಾರಿ ಜಂಟಿ ಆಯುಕ್ತರು ದಾವಣಗೆರೆ ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ರವರ ನಿರ್ದೇಶನದಲ್ಲಿ ಅಬಕಾರಿ ಉಪ ಅಧೀಕ್ಷಕರು ಶಿವಮೊಗ್ಗ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕರು ಶಿವಮೊಗ್ಗ ವಲಯ-1 ಹಾಗೂ ಸಿಬ್ಬಂದಿಗಳು ಶಿವಮೊಗ್ಗ ನಗರದ ವಿನಾಯಕ ನಗರದ 3ನೇ ತಿರುವಿನಲ್ಲಿರುವ ಹನುಮಂತ ನಾಯ್ಕ ಬಿನ್ ಶಿವ್ಯನಾಯ್ಕ ರವರ ಮನೆ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ವಿವಿಧ ಬ್ರಾಂಡ್ ನ ಒಟ್ಟು 7.350 ಲೀಟರ್ ಗೋವಾ ಮದ್ಯ ಜಪ್ತು ಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

MESCOM ನವೆಂಬರ್ 26. ಸಾಗರ ಮೆಸ್ಕಾಂ ನಗರ ಉಪವಿಭಾಗೀಯ ಕಚೇರಿಯಲ್ಲಿ ಜನ ಸಂಪರ್ಕ ಸಭೆ

0

MESCOM ಸಾಗರ ಮೆಸ್ಕಾಂ ನಗರ ಉಪವಿಭಾಗ ಕಛೇರಿಯಲ್ಲಿ ನ. 26 ರಂದು ಸಮಯ ಬೆಳಿಗ್ಗೆ 11.00 ರಿಂದ 01.00 ಗಂಟೆಯವರೆಗೆ ಜನಸಂಪರ್ಕ ಸಭೆ ನಡೆಯಲ್ಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ; 9448289516.

Bhadra Command Area Development Authority ಭದ್ರಾ ಕಾಡಾದಿಂದ 2023-24 ರ ವಾರ್ಷಿಕ ವರದಿ ಬಿಡುಗಡೆ

0

Bhadra Command Area Development Authority ಶ್ರೀ ಡಾ.ಅಂಶುಮಂತ್ ಅಧ್ಯಕ್ಷರು ಭದ್ರಾ ಕಾಡಾ ಇವರು ಭದ್ರಾ ಅಚ್ಚು ಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ 2023-24 ನೇ ಸಾಲಿನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಪ್ರಾಧಿಕಾರದ ಆಡಳಿತ ಅಧಿಕಾರಿಗಳಾದ ಸತೀಶ್ ಆರ್ ಹಾಗೂ ಪ್ರಾಧಿಕಾರದ ಇನ್ನಿತರೆ ಅಧಿಕಾರಿ/ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

DC Shivamogga ಜಿಲ್ಲೆಯಲ್ಲಿನ ನೆಟ್ ವರ್ಕ್ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾಡಳಿತದಿಂದ‌ ಸೂಕ್ತ ಕ್ರಮ- ಗುರುದತ್ತ ಹೆಗಡೆ

0

DC Shivamogga ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮೊಬೈಲ್ ನೆಟ್‌ವರ್ಕ್ ಸೇವೆ ಲಭ್ಯವಾಗದಿರುವ ಬಗ್ಗೆ ಸಾರ್ವಜನಿಕರಿಂದ ಅಹವಾಲುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಯುವಕರಿಗೆ ಆಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಮೊಬೈಲ್ ನೆಟ್‌ವರ್ಕ್ ದೊರಕಿಸಿಕೊಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಹೇಳಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ವಿವಿಧ ಮೊಬೈಲ್ ಕಂಪನಿಗಳ ನಿರ್ವಾಹಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯ ಮಲೆನಾಡು ಪ್ರದೇಶ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ಈಗಾಗಲೇ ಗುರುತಿಸಲಾದ ಅನೇಕ ಸ್ಥಳಗಳಲ್ಲಿ ಬಿ.ಎಸ್.ಎನ್.ಎಲ್. ಸ್ಥಾವರಗಳನ್ನು ನಿರ್ಮಿಸಿ ಸೇವೆ ಒದಗಿಸುತ್ತಿದೆ. ಆದರೆ, ಬಿ.ಎಸ್.ಎನ್.ಎಲ್.ನ ಸೇವೆ ನಿರೀಕ್ಷಿಸದಷ್ಟು ಪ್ರಮಾಣದಲ್ಲಿ ಜನರಿಗೆ ದೊರಕದಿರುವುದರಿಂದ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಸ್ಥಳಗಳಲ್ಲಿ ಏರ್‌ಟೆಲ್, ಜಿಯೋ ಸೇರಿದಂತೆ ಬೇರೆಬೇರೆ ಮೊಬೈಲ್ ಕಂಪನಿಗಳ ನಿರ್ವಾಹಕರೂ ಕೂಡ ತಮ್ಮ ಸೇವೆಯನ್ನು ಜನನಿಬಿಡ ಸ್ಥಳಗಳಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿಯೂ ಉಭಯ ಕಂಪನಿಗಳ ನಡುವೆ ಒಡಂಬಡಿಕೆ ಮಾಡಿಕೊಂಡು ತಮ್ಮ ಸೇವಾ ವಲಯವನ್ನು ವಿಸ್ತರಿಸಿಕೊಳ್ಳುವಂತೆ ಸೂಚಿಸಿದರು.ಅನ್ಯ ಕಂಪನಿಗಳ ಮುಖ್ಯಸ್ಥರು ತಾವು ಮೊಬೈಲ್ ಸೇವೆ ಒದಗಿಸುವ ಸ್ಥಾವರಗಳನ್ನು ನಿರ್ಮಿಸುವ ಮುನ್ನ ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿದಲ್ಲಿ ಜಿಲ್ಲಾಡಳಿತದ ವತಿಯಿಂದ ತಮಗೆ ಅಗತ್ಯವಿರುವ ಭೂಮಿ, ವಿದ್ಯುತ್ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗುವುದು ಅಂತೆಯೇ ಸಮಸ್ಯೆಗಳಿಗೆ ತಕ್ಷಣದ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದವರು ನುಡಿದರು.

DC Shivamogga ಸಣ್ಣಪುಟ್ಟ ನ್ಯೂನತೆಗಳ ನಡುವೆಯೂ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿವಿದ ಕಂಪನಿಗಳ ನೆಟ್‌ವರ್ಕ್ ಸೇವೆ ಒದಗಿಸಲಾಗುತ್ತಿದೆ. ಅಂತೆಯೇ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಸೇವೆ ಒದಗಿಸುವ ಬಗ್ಗೆ ಇರುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಮೊಬೈಲ್ ನೆಟ್‌ವರ್ಕ್ ನಿರ್ವಾಹಕ ಅಧಿಕಾರಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೊಬೈಲ್ ಕಂಪನಿಗಳ ನಿರ್ವಹಣಾಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ಸ್ಥಾವರಗಳ ನಿರ್ಮಾಣಕ್ಕೆ ಸೂಕ್ತ ನಿವೇಶನ ಒದಗಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಅಲ್ಲದೇ ಜಿಲ್ಲೆಯ ಇನ್ನೂ ಕೆಲವು ಪ್ರದೇಶಗಳಲ್ಲಿ ಸ್ಥಾವರಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಿ, ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಂಸ್ಥೆಯ ಮುಖ್ಯಸ್ಥರಿಗೆ ಕಳಿಸಿದ್ದು, ಸಂಸ್ಥೆಯ ಮುಖ್ಯಸ್ಥರ ಅನುಮೋದನೆಯ ನಂತರ ಸ್ಥಾವರ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಮ್ಮ ಸಹಕಾರವನ್ನು ಕೋರಲಾಗುವುದು ಎಂದರು.


ಸಭೆಯಲ್ಲಿ ಜಿಯೋ, ಏರ್‌ಟೆಲ್ ಮತ್ತಿತರ ಮೊಬೈಲ್ ಕಂಪನಿಗಳ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

Kuvempu University ಕುವೆಂಪು ವಿವಿಯಲ್ಲಿ 2024-25 ನೇ ಸಾಲಿನಲ್ಲಿ ಖಾಲಿಯಿರುವ ಪಿಜಿ/ಡಿಪ್ಲೊಮಾ/ಸರ್ಟಿಫಿಕೇಟ್ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

0

Kuvempu University ಕುವೆಂಪು ವಿಶ್ವವಿದ್ಯಾಲಯವು 2024-25ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ/ ಡಿಪ್ಲೊಮಾ/ ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಾತಿಗಾಗಿ ಯು.ಯು.ಸಿ.ಎಂ.ಎಸ್. ಪೊರ್ಟಲ್ ಮೂಲಕ ಆರ್ಜಿ ಆಹ್ವಾನಿಸಿದ್ದು, ಖಾಲಿಯಿರುವ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಆಯಾ ವಿಭಾಗಗಳಲ್ಲಿ ಆಫ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನ. 30 ರವರೆಗೆ ವಿಸ್ತರಿಸಲಾಗಿದೆ ಎಂದು ಉಪ ಕುಲಸಚಿವರು ತಿಳಿಸಿದ್ದಾರೆ.

Kuvempu University ಹೆಚ್ಚಿನ ಮಾಹಿತಿಗಾಗಿ ವಿವಿಯ ಅಂತರ್ಜಾಲ ತಾಣ www.kuvempu.ac.in ನ್ನು ವೀಕ್ಷಿಸುವುದು

Electricity Suppliers in Bannur ಶಿಕಾರಿಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಕೆಪಿಟಿಸಿಎಲ್ ಲೈನ್ ಭೂನಷ್ಟ ಬಾಧಿತರು ಸಭೆಗೆ ಹಾಜರಾಗಲು ಪ್ರಕಟಣೆ

0

Electricity Suppliers in Bannur ಬನ್ನೂರು ವಿದ್ಯುತ್ ಉಪಕೇಂದ್ರ ಕಾಮಗಾರಿಗೆ ಸಂಬಂಧಿಸಿದಂತೆ, ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕು, ಸಂಡ, ಆಮಟೇಕೊಪ್ಪ, ಕೋಟಿಪುರ, ಚುಂಚನಕೊಪ್ಪ, ಕಪ್ಪನಹಳ್ಳಿ, ಹೋತನಕಟ್ಟೆ, ರಾಂಪುರ, ಬನ್ನೂರು, ಗ್ರಾಮಗಳ ವಿವಿಧ ಜಮೀನುಗಳಲ್ಲಿ 110ಕೆವಿ ವಿದ್ಯುತ್ ಮಾರ್ಗವು ಈ ಕೆಳಗೆ ತಿಳಿಸಿರುವ ಸರ್ವೆ ನಂ. ಜಮೀನುಗಳಲ್ಲಿ ಹಾದು ಹೋಗುವುದರಿಂದ, ಸಂಬಂಧಪಟ್ಟ ಭೂನಷ್ಟ ಭಾದಿತರಿಗೆ ಗೋಪುರದ ತಳಪಾಯ ಹಾಗೂ 110ಕೆವಿ ಮಾರ್ಗದ ಕಾರಿಡಾರ್ ಪರಿಹಾರ ನಿಗದಿಪಡಿಸಲು ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ಅವರ ಅಧ್ಯಕ್ಷತೆಯಲ್ಲ್ಲಿ ದಿನಾಂಕ: 28.11.2024 ಮಧ್ಯಾಹ್ನ 12:00 ಗಂಟೆಗೆ ಜಿಲ್ಲಾಧಿಕಾರಿಗಳು ಕಛೇರಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ.

ಸಂಡ ಗ್ರಾಮದ ಸರ್ವೆ ನಂ.233, 232, 231, 5/1, 5/2, 6, 7, 8, 10, 11, 12, 14, 18, 19, 20/1, 20/2, 22, 27/1, 30, 31, 43, 44, 45, 60, 59, 58, 96, 87.
ಹರಗವಳ್ಳಿ ಗ್ರಾಮದ ಸರ್ವೆ ನಂ. 57.

ಆಮಟೇಕೊಪ್ಪ ಗ್ರಾಮದ ಸರ್ವೆ ನಂ.91, 104, 106, 110/1, 110/2, 109/1, 109/2, 109/3, 108/2, 127, 128, 129/1, 129/3, 129/4, 137, 139/1, 139/2, 138, 142/1, 142/2, 143/1, 143/2, 144, 145/1, 145/2, 146/1, 146/2, 149, 148.
*
ಕೋಟಿಪುರ* ಗ್ರಾಮದ ಸರ್ವೆ ನಂ. 125, 124, 72, 113/1, 113/3, 113/4, 112, 111,7/1, 7/3, 7/4,4/1, 4/3, 4/4, 4/6, 4/7, 4/9, 4/10, 106/1, 103, 98/1, 98/3, 98/4, 98/6, 99, 102, 100, 101/1, 101/3, 101/4, 96, 19/1, 19/2, 21, 20/1, 20/3, 20/4, 20/5, 24/1, 24/2, 25/1, 25/2, 53, 54/1, 54/2, 56, 57/1, 57/2, 58/1, 58/3, 59/2, 49, 50, 51, 52, 37, 38, 67/1, 45/1, 45/2, 39/1, 39/2, 39/3, 44, 43/1, 43/3, 43/4, 42/1.

Electricity Suppliers in Bannur ಚುಂಚನಕೊಪ್ಪ ಗ್ರಾಮದ ಸರ್ವೆ ನಂ.8/8, 8/10, 8/11, 8/13, 8/16, 8/7, 8/3, 8/4, 8/6, 8/9, 8/5, 9, 4/1, 23, 24, 26, 27, 28/1, 28/2, 29, 30, 31/1, 31/2, 33/2, 34/2, 35/1, 35/3, 39, 36/1, 36/2, 39, 38, 37.
ಹೋತನಕಟ್ಟೆ ಗ್ರಾಮದ ಸರ್ವೆ ನಂ. 14, 15/1, 15/2, 9/, 18/2, 6/1, 20/4, 20/5, 21/1, 21/2, 26, 23/1, 23, 25/1, 25/2, 33, 32/1, 32/2, 34/2, 3/1, 38/2, 39/2, 40/1, 40/2, 41/1, 41/2. 12/2, 13/1, 12/3, 33/1, 33/2, 34, 10/1, 4/1, 4/2, 6/1, 6/3, 6/4, 6/6, 6/7, 6/8, 7, 8/3, 9/1, 9/2, 10, 11/1, 11/2, 12/1.
ರಾಂಪುರ ಗ್ರಾಮದ ಸರ್ವೆ ನಂ.2, 3/4, 3/5, 3/3, 3/2, 3/6, 4, 5, 6/1, 6/2, 17/1, 17/2, 8/1, 8/3, 11.
ಬನ್ನೂರು ಗ್ರಾಮದ ಸರ್ವೆ ನಂ.35, 1, 126, 125.
ಈ ಎಲ್ಲಾ ಗ್ರಾಮಗಳ ಸರ್ವೆ ನಂ. ಜಮೀನಿನ ಭೂನಷ್ಟ ಭಾದಿತರು ತಪ್ಪದೆ ಹಾಜರಾಗುವಂತೆ ಕವಿಪ್ರನಿನಿ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Dinesh Gundurao ಜಿಲ್ಲೆಯಲ್ಲಿನ ಮಂಗನ ಕಾಯಿಲೆ ಪೀಡಿತ ಪ್ರದೇಶಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಭೇಟಿ

0

Dinesh Gundurao ಗುಂಡುರಾವ್‌ರವರು ನ.26 ಮತ್ತು 27 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ನ.26 ರಂದು ಮಧ್ಯಾಹ್ನ 1.55ಕ್ಕೆ ವಿಮಾನದ ಮೂಲಕ ಶಿವಮೊಗ್ಗಕ್ಕೆ ಆಗಮಿಸಿ, ಸಾಗರಕ್ಕೆ ರಸ್ತೆ ಮೂಲಕ ಪ್ರಯಾಣಿಸಲಿದ್ದಾರೆ. ಮ. 3.00ಕ್ಕೆ ಸಾಗರ ತಾಲೂಕಿನ ತಾಳಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹಿರೆಮನೆ ಹಾಗೂ ತಲವಾಟ ಗ್ರಾಮಗಳಲ್ಲಿ ಮಂಗನಕಾಯಿಲೆ (ಕೆ.ಎಫ್.ಡಿ) ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮ. 4.00ಕ್ಕೆ ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ.

ಸಂಜೆ 5.00ಕ್ಕೆ ಸಾಗರದ ಪ್ರವಾಸಿ ಮಂದಿರದಲ್ಲಿ ಮಂಗನಕಾಯಿಲೆ ಕಂಡುಬAದಿರುವ ಜಿಲ್ಲೆಗಳಲ್ಲಿ ಕೈಗೊಂಡಿರುವ/ಕೈಗೊಳ್ಳಬೇಕಾಗಿರುವ ಸುರಕ್ಷಾ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 7.00 ಸಾಗರದಿಂದ ಶಿವಮೊಗ್ಗಕ್ಕೆ ಆಗಮಿಸಿ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಲಿದ್ದಾರೆ.

Dinesh Gundurao ನ. 27ರಂದು ಬೆಳಗ್ಗೆ 8.20ಕ್ಕೆ ಭದ್ರಾವತಿ ತೆರಳಿ ಭದ್ರಾವತಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಬೆ. 9.25 ಭದ್ರಾವತಿಯಿಂದ ಶಿವಮೊಗ್ಗ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಮಧ್ಯಾಹ್ನ: 2.15ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಕೆ. ಎ. ಹಿದಾಯತ್ತುಲ್ಲರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

International Day of Persons with Disabilities ನವೆಂಬರ್ 27. ವಿಕಲಚೇತನರಿಗೆ ಜಿಲ್ಲಾ ಮಟ್ಟದ ಕ್ರೀಡೆ & ಸಾಂಸ್ಕೃತಿಕ ಸ್ಪರ್ಧೆಗಳು

0

International Day of Persons with Disabilities 2024 ರ ಡಿಸೆಂಬರ್ 3 ರಂದು ನಡೆಸಲಿರುವ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಪೂರ್ವಭಾವಿಯಾಗಿ ವಿಕಲಚೇತನರಿಗೆ ಜಿಲ್ಲಾ ಮಟ್ಟದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ನ.27 ರಂದು ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವವರ ವಯೋಮಿತಿ 5, 6 ರಿಂದ 10 ವರ್ಷದೊಳಗೆ, 11 ರಿಂದ 15 ವರ್ಷದೊಳಗೆ, 16 ರಿಂದ 25 ವರ್ಷದೊಳಗೆ, 26 ರಿಂದ 40 ವರ್ಷದೊಳಗೆ ಮತ್ತು 40 ವರ್ಷ ಮೇಲ್ಪಟ್ಟು. ದೈಹಿಕ ವಿಕಲಚೇತನ ಕ್ರೀಡಾಪಟುಗಳ ಸ್ಪರ್ಧೆಯಲ್ಲಿ ಒಂದು ಕಾಲಿಲ್ಲದ ಕ್ರೀಡಾಪಟುಗಳಿಗೆ 50ಮೀ ಓಟದ ಸ್ಪರ್ಧೆ ಮತ್ತು ಚೆಂಡು ಎಸೆತ, ಎರಡು ಕಾಲಿಲ್ಲದ ಕ್ರೀಡಾಪಟುಗಳಿಗೆ ಸಾಧ ತ್ರಿಚಕ್ರವಾಹನ 100ಮೀ ಓಟದ ಸ್ಪರ್ಧೆ ಮತ್ತು ಚೆಂಡು ಎಸೆತ, ಒಂದು ಕೈ ಮತ್ತು ಎರಡು ಕೈ ಇಲ್ಲದ ಕ್ರೀಡಾಪಟುಗಳಿಗೆ 100 ಮೀಟರ್ ಓಟದ ಸ್ಪರ್ಧೆ ಮತ್ತು ಕೆರೆ ದಡ, ಒಂದು ಕೈ ಮತ್ತು ಒಂದು ಕಾಲು ಇಲ್ಲದ ಕ್ರೀಡಾಪಟುಗಳಿಗೆ 50 ಮೀಟರ್ ನಡಿಗೆ ಸ್ಪರ್ಧೆ ಮತ್ತು ಬಕೆಟ್‌ಗೆ ಚೆಂಡು ಹಾಕುವುದು, ಕುಬ್ಜ ಕ್ರೀಡಾಪಟುಗಳಿಗೆ 100 ಮೀಟರ್ ಓಟ ಮತ್ತು ಚೆಂಡು ಎಸೆತ. ಅಂಧ ವಿಕಲಚೇತನ ಕ್ರೀಡಾಪಡುಗಳ ಸ್ಪರ್ಧೆಯಲ್ಲಿ 6 ರಿಂದ 10 ವರ್ಷದವರಿಗೆ ಚೆಂಡು ಎಸೆತ, 50 ಮೀಟರ್ ಓಟದ ಸ್ಪರ್ಧೆ ಮತ್ತು 11 ವರ್ಷ ಮೇಲ್ಪಟ್ಟವರಿಗೆ ಶಾಟ್‌ಪುಟ್, 100 ಮೀಟರ್ ಓಟದ ಸ್ಪರ್ಧೆ.

ಬುದ್ಧಿಮಾಂದ್ಯ ಕ್ರೀಡಾಪಟುಗಳಿಗೆ ಬಕೆಟ್‌ಗೆ ಚೆಂಡು ಹಾಕುವುದು, 50 ಮೀಟರ್ ಓಟದ ಸ್ಪರ್ಧೆ. ಕಿವುಡ ಮತ್ತು ಮೂಕ ಕ್ರೀಡಾಪಟುಗಳಿಗೆ 50 ಮೀಟರ್ ಓಟ ಮತ್ತು ಬಾಂಬಿಂಗ್ ದ ಸಿಟಿ ಸ್ಪರ್ಧೆ ಆಯೋಜಿಸಲಾಗಿದೆ. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 6 ರಿಂದ 15 ಮತ್ತು 16 ವರ್ಷ ಮೇಲ್ಪಟ್ಟ ಅಂಧರಿಗಾಗಿ ಎರಡು ವಿಭಾಗಗಳಲ್ಲಿ ಭಾವಗೀತೆ ಸ್ಪರ್ಧೆ, ದೈಹಿಕ ವಿಕಲಚೇತನರಿಗಾಗಿ ಜಾನಪದ ಗೀತೆ ಸ್ಪರ್ಧೆ ಬುದ್ಧಿಮಾಂದ್ಯರಿಗಾಗಿ ಗುಂಪು ನೃತ್ಯ ಏರ್ಪಡಿಸಲಾಗಿದೆ. ಕಿವುಡ ಮತ್ತು ಮೂಕರಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು 6 ರಿಂದ 10 ವರ್ಷದವರಿಗೆ ತರಕಾರಿ ಚಿತ್ರ, 11 ರಿಂದ 40 ವರ್ಷದವರಿಗೆ ಪ್ರಕೃತಿ ಮತ್ತು ಪರಿಸರ ಚಿತ್ರ ವಿಷಯವನ್ನು ನೀಡಲಾಗಿದೆ.

ಅಭ್ಯರ್ಥಿಗಳಿಗೆ ಇಲಾಖೆಯಿಂದ ಡ್ರಾಯಿಂಗ್ ಶೀಟ್‌ನ್ನು ಮಾತ್ರ ನೀಡಲಾಗುವುದು.

International Day of Persons with Disabilities ಚಿತ್ರ ಬಿಡಿಸಲು ಬೇಕಾದ ಪರಿಕರಗಳನ್ನು ಅಭ್ಯರ್ಥಿಗಳೇ ತರತಕ್ಕದು, ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ವಯಸ್ಸು ಮತ್ತು ಶಾಲೆಯ ಹೆಸರನ್ನು ಸ್ಪಷ್ಟವಾಗಿ ಬರೆಯುವುದು. ನಿಮ್ಮ ಆಕೃತಿಯನ್ನು ಕಾಗದದ ಪ್ರಮಾಣಕ್ಕನುಸಾರವಾಗಿ ಅಂದವಾಗಿ ಕಾಣುವಂತೆ ರಚಿಸಿ. ಅಭ್ಯರ್ಥಿಗಳು ಪೆನ್ಸಿಲ್ ಶೇಡ್, ಕ್ರಯಾನ್ಸ್, ವಾಟರ್ ಕಲರ್, ಪೋಸ್ಟರ್ ಕಲರ್ ಯಾವುದಾದರೂ ಮಾಧ್ಯಮವನ್ನು ಬಳಸಬಹುದು.

ಅಂದವಾದ ಮತ್ತು ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುವುದು. ಚಿಕ್ಕ ಹಾಗೂ ಅಪೂರ್ಣ ಚಿತ್ರಗಳನ್ನು ಮಾನ್ಯ ಮಾಡಲಾಗುವುದಿಲ್ಲ.
ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೈಹಿಕ ಶಿಕ್ಷಕರು ಮಂಜಯ್ಯ
ಮೊ.ನಂ:7411579167, ಸಂಗೀತ ಶಿಕ್ಷಕಿ ರಾಜಲಕ್ಷ್ಮೀ -ಮೊ.ನಂ:9845327635 ಮತ್ತು ಚಿತ್ರಕಲಾ ಶಿಕ್ಷಕರು ಮಾದವಮೂರ್ತಿ ಮೊ.ನಂ:9964179749 ಇವರುಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.