Monday, March 23, 2026
Monday, March 23, 2026
Home Blog Page 484

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಸೆ.27 ರಂದು ಬೆಳಗ್ಗೆ 9.00 ರಿಂದ ಸಂಜೆ 5.00ರವರೆಗೆ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ನಗರ ಪ್ರದೇಶಗಳಾದ ಚಿಕ್ಕಲ್ಲು, ಗುರುಪುರ, ಪುರಲೆ, ಸಿದ್ದೇಶ್ವರನಗರ, ಶಾಂತಮ್ಮ ಲೇಔಟ್, ವೆಂಕಟೇಶನಗರ, ವಿದ್ಯಾನಗರ, ಗಣಪತಿ ಲೇಔಟ್, ಕಂಟ್ರಿಕ್ಲಬ್‌ ರಸ್ತೆ, ಎಂ.ಆರ್.ಎಸ್. ವಾಟರ್ ಸಪ್ಲೈ ಎಂಆರ್‌ಎಸ್. ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಬಿ.ಹೆಚ್.ರಸ್ತೆ (ಗಾಯತ್ರಿ ಕಲ್ಯಾಣ ಮಂದಿರದಿಂದ ಅಮೀರ್ ಅಹ್ಮದ್ ವೃತ್ತ), ನೆಹರು ರಸ್ತೆ, ದುರ್ಗಿಗುಡಿ ಮುಖ್ಯರಸ್ತೆ, ಪಾರ್ಕ್ ಬಡಾವಣೆ, ಸರ್.ಎಂ.ವಿ.ರಸ್ತೆ (ಮಹಾವೀರ್ ವೃತ್ತದಿಂದ ಗೋಪಿ ವೃತ್ತದವರೆಗೆ), ಗಾಂಧಿ ಪಾರ್ಕ್, ಲೂರ್ದೂನಗರ, ಕಾನ್ವೆಂಟ್ ರಸ್ತೆ, ಬಾಪೂಜಿನಗರ, ಚರ್ಚ್ ಕಾಂಪೌಂಡ್, ಟಿ.ಜಿ.ಎನ್.ಬಡಾವಣೆ, ಜೋಸೆಫ್ ನಗರ, ಟ್ಯಾಂಕ್‌ಬೌಂಡ್ ರಸ್ತೆ, ಕುವೆಂಪು ರಂಗಮಂದಿರ ಮತ್ತು ಮಹಾನಗರ ಪಾಲಿಕೆ ಸುತ್ತಮುತ್ತ, ಮೀನಾಕ್ಷಿಭವನ, ಶಂಕರಮಠರಸ್ತೆ,ಹಳೆ ಹೊನ್ನಾಳಿ ರಸ್ತೆ, ಬಾಲ್‌ರಾಜ್ ಅರಸ್‌ರಸ್ತೆ, ಮೆಹದಿನಗರ, ಬಾಪೂಜಿನಗರ, ಬಸವನಗುಡಿ ವಿನಾಯಕ ಪಾರ್ಕ್, ವಿನಾಯಕನಗರ, ಅಮೀರ್ ಅಹ್ಮದ್ ಕಾಲೋನಿ, ಸೋಮಯ್ಯ ಬಡಾವಣೆ, ಟ್ಯಾಂಕ್ ಬಂಡ್‌ರಸ್ತೆ, ಟ್ಯಾಂಕ್‌ಮೊಹಲ್ಲಾ, ಕೋರ್ಟ್ ಕಚೇರಿ, ಆರ್.ಟಿ.ಓ. ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Shri Shankar Narayan Kashi Trust ಬಹು ಸಾಂಸ್ಕೃತಿಕ ಆಸಕ್ತಿಗಳ ಕೇಂದ್ರ ವ್ಯಕ್ತಿ, ಮಥುರಾ ಗೋಪಿನಾಥ್- ಪತ್ರಕರ್ತ ಎನ್.ಮಂಜುನಾಥ್

0

Shri Shankar Narayan Kashi Trust ಶಿವಮೊಗ್ಗ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಹಾಗೂ ಹಲವು ಯೋಜನೆಗಳ ಮಂಜೂರಾತಿಯಲ್ಲಿ ಮಧುರ ಪ್ಯಾರಡೈಸ್ ಶಕ್ತಿ ಕೇಂದ್ರವಾಗಿ ಕಾರ್ಯನಿರ್ವಹಿಸಿದೆ ಎಂದು ಕ್ರಾಂತಿ ದೀಪ ಪತ್ರಿಕೆ ಸಂಪಾದಕ ಹಾಗೂ ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತ ಎನ್ ಮಂಜುನಾಥ್ ಹೇಳಿದರು.
ರವೀಂದ್ರನಗರ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಶ್ರೀ ಶಂಕರ್ ನಾರಾಯಣ ಕಾಶಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮಥುರ ಪ್ಯಾರಡೈಸ್ ರಜತ ಮಹೋತ್ಸವ, ಕನ್ನಡ ರಾಜ್ಯೋತ್ಸವ, ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಉಮಾಶಂಕರ್ ಉಪಾಧ್ಯ ಹಾಗೂ ಎನ್ ಗೋಪಿನಾಥ್ ಇವರುಗಳು ನನ್ನ ಕನಸಿನ ಶಿವಮೊಗ್ಗ ತಂಡವನ್ನ ರಚಿಸಿಕೊಂಡು ಶಿವಮೊಗ್ಗ ನಗರದಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನ ಕೈಗೊಂಡರು ಶಿವಮೊಗ್ಗ ನಗರದಲ್ಲಿ ಇಂದು ಸಾಕಷ್ಟು ಗಿಡಮರಗಳು ಬೆಳೆದಿದ್ದರೆ ಅದರ ಹಿಂದೆ ನನ್ನ ಕನಸಿನ ತಂಡ ಕಾರ್ಯವಿದೆ ಎಂದು ಹೇಳಿದರು.
ಶಿವಮೊಗ್ಗ ನಗರಕ್ಕೆ ವೈದ್ಯಕೀಯ ಕಾಲೇಜನ್ನು ತರುವ ನಿಟ್ಟಿನಲ್ಲಿ ಹಲವು ಸಭೆಗಳನ್ನ ಮಾಡಲಾಯಿತು. ಕೆಲವು ಸಭೆಗಳ ಪ್ರಯತ್ನ ವಿಫಲವಾಯಿತು. ಅಂತಿಮ ವಾಗಿ ನಡೆಸಿದ ಪ್ರಯತ್ನದಿಂದಾಗಿ ಶಿವಮೊಗ್ಗಕ್ಕೆ ವೈದ್ಯ ಕೀಯ ಕಾಲೇಜ್ ಮಂಜೂರಾಯಿತು ಎಂದರು.
ಉಮಾಶಂಕರ ಉಪಾಧ್ಯಕ್ಷ ಹಾಗೂ ಮಥುರ ಗೋಪಿನಾಥ್ ಇವರುಗಳಿಗೆ ಶಿವಮೊಗ್ಗದ ಜನಪ್ರತಿ ನಿಧಿಯಾಗುವ ಎಲ್ಲಾ ಅರ್ಹತೆ ಇತ್ತು. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಅದು ಈಡೇರಲಿಲ್ಲ ಎಂದರು.

Shri Shankar Narayan Kashi Trust
ಪತ್ರಿಕೋದ್ಯಮದಲ್ಲಿ ಸರ್ವಶ್ರೇಷ್ಠ ಪ್ರಶಸ್ತಿ ಎನಿಸಿಕೊಂಡಿರುವ ಮೊಹರೆ ಹಣಮಂತರಾಯ ಪ್ರಶಸ್ತಿಗೆ ಭಾಜನರಾದ ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಎನ್.ಮಂಜುನಾಥ್‌ರವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಸವಾಲಾತ್ಮಕ ಭಾವಗೀತೆ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ನಡೆಯಿತು.
ಕನಕದಾಸರ ಪದಗಳ ಗಾಯನ ಕಾರ್ಯಕ್ರಮ ಗುರುಗುಹ ಸಂಗೀತ ಮಹಾವಿದ್ಯಾಲಯದ ವತಿಯಿಂದ ನಡೆಸಲಾಯಿತು.
ಸಭೆಯಲ್ಲಿ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್ ರವಿಕುಮಾರ್, ಎನ್ ಗೋಪಿನಾಥ್, ನಿರ್ಮಲ ಕಾಶಿ, ಉಮಾಶಂಕರ್ ಉಪಾಧ್ಯ ಇತರರು ಉಪಸ್ಥಿತರಿದ್ದರು.

Constitution Day ನವೆಂಬರ್ 26.”ಸಂವಿಧಾನ ದಿನ” .ಫ್ರೀಡಂ ಪಾರ್ಕಿನಲ್ಲಿ ವಿಶೇಷ ಕಾರ್ಯಕ್ರಮ

0

Constitution Day ನ. 26 ರಂದು ‘ಸಂವಿಧಾನ ದಿನಾಚರಣೆ’ ಪ್ರಯುಕ್ತ ಭಾರತ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆ ವ್ಯಾಪ್ತಿಯ ಫ್ರೀಡಂ ಪಾರ್ಕ್ ಉದ್ಯಾನದಲ್ಲಿ 10ಘಿ6 ಅಡಿ ಅಳತೆಯ ಕನ್ನಡ ಮತ್ತು ಆಂಗ್ಲ ಭಾಷೆ ಮುದ್ರಿತ ಸಂವಿಧಾನ ಪೀಠಿಕೆಯನ್ನು ಪ್ರತಿಷ್ಠಾಪಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬೆಳಗ್ಗೆ 10:00 ಗಂಟೆಗೆ ಗುದ್ದಲಿ ಪೂಜೆ ನೆರವೇರಿಸಲಿರುವರು.

Constitution Day ಬೆಳಗ್ಗೆ 11:00 ಗಂಟೆಗೆ ಡಾ: ಬಿ. ಆರ್. ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು,ದೀಕಾರ್ಯಕ್ರಮದಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಲಿರುವರು. ಇದೇ ಕಾರ್ಯಕ್ರಮದಲ್ಲಿ ಉಪನ್ಯಾಸಕರು ಸಂವಿಧಾನದ ಬಗ್ಗೆ ಉಪನ್ಯಾಸ ನೀಡಲಿದ್ದು, ಜಿಲ್ಲೆಯ ನಾಗರೀಕರೆಲ್ಲರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

Shivamogga police ವಿಷ ಸೇವಿಸಿ ಮೃತಪಟ್ಟ ಅಪರಿಚಿತ ವ್ಯಕ್ತಿ.ಪೊಲೀಸ್ ಪ್ರಕಟಣೆ

0

Shivamogga police ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರ್ಕಾರಿ ಬಸ್ ನಿಲ್ದಾಣದ ಸಂತೆ ಮೈದಾನದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುಮಾರು 35-40 ವರ್ಷ ವಯಸ್ಸಿನ ವ್ಯಕ್ತಿಯನ್ನು ಸ್ಥಳೀಯರ ಸಹಾಯದಿಂದ ಅಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಈತ ವಿಷ ಸೇವಿಸಿದ್ದು ತಿಳಿದು ಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ನ.19 ರಂದು ಮೃತಪಟ್ಟಿರುತ್ತಾನೆ.

Shivamogga police ಮೃತ ವ್ಯಕ್ತಿಯ ಚಹರೆ 5.6 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಮೃತನ ಎಡಕೆನ್ನೆಯ ಮೇಲೆ ಜೋಳದ ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಈ ಮೃತ ವ್ಯಕ್ತಿಯ ವಾರಸ್ಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.:08182-261414 / 99166882544 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ತಿಳಿಸಿದೆ.

B.Y. Raghavendra ಯೋಗದಲ್ಲಿ ಭಾರತೀಯರ ಸಾಧನೆ.ಎಲ್ಲರೂ ಅನುಸರಿಸುವಂಥದ್ದಾಗಿದೆ- ಸಂಸದ ರಾಘವೇಂದ್ರ

0

B.Y. Raghavendra ವಿಶ್ವಕ್ಕೆ ಯೋಗ ಮತ್ತು ಯೋಗದ ಮಹತ್ವವನ್ನು ಪರಿಚಯಿಸಿದ ದೇಶ ಭಾರತ ಎಂಬ ಹೆಮ್ಮೆ ನಮ್ಮದು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.

ಶಿವಮೊಗ್ಗ ಮಹಾನಗರಪಾಲಿಕೆಯು ಉದ್ಯಮನಿಧಿ ಯೋಜನೆ ಯಡಿಯಲ್ಲಿ ಮೂರು ಕೋಟಿ ರು. ಗಳ ವೆಚ್ಚದಲ್ಲಿ ಶಿವಮೊಗ್ಗದ ವಿನೋಬನಗರದಲ್ಲಿ ನೂತನವಾಗಿ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣ ಹಾಗೂ ಐವತ್ತು ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಅಜಿತ ಯೋಗಕೇಂದ್ರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಯೋಗದಲ್ಲಿ ಭಾರತೀಯರ ಸಾಧನೆ ಎಲ್ಲರೂ ಅನುಸರಿಸುವಂತದ್ದು. ವಿಶ್ವದ ಸುಮಾರು 150 ದೇಶಗಳಲ್ಲಿ ಯೋಗವನ್ನು ಅಭ್ಯಸಿಸುತ್ತಿರುವುದು ಹೆಮ್ಮೆ ಎನಿಸಿದೆ. ಇದರಿಂದಾಗಿ ಜಾಗತಿಕವಾಗಿ ಭಾರತ ವಿಶ್ವಗುರುವಾಗಿ ಗುರುತಿಸಲಾಗುತ್ತಿದೆ. ಯೋಗ ವಿಶ್ವಮಾನ್ಯ ವಾಗಿದೆ ಎಂದರು.

B.Y. Raghavendra ಉತ್ತಮ ಸಂಸ್ಕೃತಿ, ಸಂಸ್ಕಾರಗಳಿರುವಲ್ಲಿ ಈ ರೀತಿಯ ಸದಾಚಾರ ಸದ್ವಿಚಾರಗಳು ಆಚರಣೆ ಬಂದು, ಸರ್ವರ ಹಿತಕಾಯುವ ಕಾರ್ಯಗಳು ನಡೆಯುತ್ತವೆ. ಶಾಸಕ ಚನ್ನಬಸಪ್ಪ ಅವರ ಸಮಾಜಮುಖಿ ಚಿಂತನೆಯ ಫಲದಿಂದಾಗಿ ಯೋಗ ಕೇಂದ್ರ ಶುಭಾರಂಭಗೊಂಡಿರುವುದು ಎಲ್ಲರಿಗೂ ಸಂತಸದ ಸಂಗತಿಯಾಗಿದೆ. ಅದಕ್ಕಾಗಿ ಶಾಸಕರು ಅಭಿನಂದನಾರ್ಹರು ಎಂದರು.

ಈ ಸಂದರ್ಭದಲ್ಲಿ ಶಾಸಕ ಎಸ್. ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ರಾಜ್ಯ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಚಂದ್ರಭೂಪಾಲ್, ಯೋಗ ಶಿಕ್ಷಕರಾದ ಶ್ರೀನಿವಾಸಮೂರ್ತಿ, ಅರವಿಂದ್, ಪಾಲಿಕೆ ಆಯುಕ್ತ ಶ್ರೀಮತಿ ಕವಿತಾ ಯೋಗಪ್ಪನವರ, ಎಸ್. ದತ್ತಾತ್ರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Madhu Bangarappa ಉದ್ಯಮನಿಧಿ ಯೋಜನೆಯಿಂದ ನಿರ್ಮಿಸಲಾದ ವಾಣಿಜ್ಯ ಸಂಕೀರ್ಣ. ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆ

0

Madhu Bangarappa ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಇಂದು ಶಿವಮೊಗ್ಗ ಮಹಾನಗರಪಾಲಿಕೆಯು ಉದ್ಯಮನಿಧಿ ಯೋಜನೆ ಯಡಿಯಲ್ಲಿ ಮೂರು ಕೋಟಿ ರು. ಗಳ ವೆಚ್ಚದಲ್ಲಿ ಶಿವಮೊಗ್ಗದ ಗಾಂಧೀನಗರದಲ್ಲಿ ನೂತನವಾಗಿ ನಿರ್ಮಿಸಲಾದ 15 ಮಳಿಗೆಗಳ ವಾಣಿಜ್ಯ ಸಂಕೀರ್ಣವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

Madhu Bangarappa ಈ ಸಂದರ್ಭದಲ್ಲಿ ಕಾರ್ಪೋರೇಟರ್ ನಾಗರಾಜ್ ಕಂಕಾರಿ, ರಾಜ್ಯ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಚಂದ್ರಭೂಪಾಲ್, ಪಾಲಿಕೆ ಆಯುಕ್ತ ಶ್ರೀಮತಿ ಕವಿತಾ ಯೋಗಪ್ಪನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Chamber of Commerce Shivamogga ಜಂಕ್ ಫುಡ್, ಫಾಸ್ಟ್ ಫುಡ್ ಗಳಿಂದ ಅನಾರೋಗ್ಯ.ಆಯುರ್ವೇದ ಮದ್ದು ಇವಕ್ಕೆ ಪರಿಹಾರ- ಜಿ.ವಿಜಯ್ ಕುಮಾರ್

0

Chamber of Commerce Shivamogga ಸಾವಿರಾರು ವರ್ಷ ಇತಿಹಾಸವಿರುವ ಆಯುರ್ವೇದ ಪದ್ಧತಿ ಇಂದಿಗೂ ಪ್ರಸ್ತುತ. ಸೊಪ್ಪು, ತರಕಾರಿ ಹಾಗೂ ಔಷಧ ಗುಣವಿರುವ ಪದಾರ್ಥಗಳು ನಮ್ಮ ಜಮೀನು, ತೋಟ ಹಾಗೂ ನಮ್ಮ ಮನೆಗಳಲ್ಲೇ ಸಾಕಷ್ಟು ಇರುತ್ತವೆ. ಆದರೆ ಅವುಗಳ ಗುಣ ಪರಿಚಯ ನಮಗೆ ಸರಿಯಾಗಿ ಇರುವುದಿಲ್ಲ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ವಿಷಾಧ ವ್ಯಕ್ತಪಡಿಸಿದರು.

ಅವರು ಜೆಸಿಐ ಶಿವಮೊಗ್ಗ ವಿವೇಕ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಯೋಗ ಪ್ರಾಣಯಾಮ, ಧ್ಯಾನ, ‘ಆಯುರ್ವೇದದಲ್ಲಿ ಮನೆ ಮದ್ದು’ ಏಳು ದಿನದ ವಿಶೇಷ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಹಾಗಾಗಿ ಹಿಂದೆ ಋಷಿಮುನಿಗಳು ಸಾಧುಸಂತರು ಕಾಡುಗಳಲ್ಲಿ ಸಿಗುವ ನಾರು ಬೇರು ಔಷಧಿಗುಣ ಇರುವ ಸಸ್ಯಗಳನ್ನು ಬಳೆಸಿ ನೂರಾರು ವರ್ಷ ಯಾವುದೇ ಕಾಯಿಲೆ ಇಲ್ಲದೆ ಸುಖಕರ ಜೀವನ ನಡೆಸುತ್ತಿದ್ದರು. ಇಂದು ನಮ್ಮ ಬದಲಾದ ಜೀವನ ಶೈಲಿ ಆರೋಗ್ಯ ಪದ್ಧತಿ, ಫಾಸ್ಟ್ ಫುಡ್, ಜಂಕ್ ಫುಡ್ ಮತ್ತು ರಾಸಾಯನಿಕ ಸಂಪಡಿಸಿದ ಅಡುಗೆ ಪದಾರ್ಥಗಳಿಂದ ನಮ್ಮ ಜೀವನ ದುರಸ್ತವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಡಾ. ವಿಜಯಲಕ್ಷ್ಮಿ ಪಾಟೀಲ್ ಮಾತನಾಡಿ, ವಾತಾ ಪಿತ್ತ, ಪ್ರಕೃತಿ, ಆಹಾರ ಪದ್ಧತಿ ಹಾಗೂ ಆಹಾರ ಸೇವನೆ ಮತ್ತು ಸಸ್ಯಗಳಲ್ಲಿ ಔಷಧಿಗುಣ ಹಾಗೂ ಶಿಬಿರಾರ್ಥಿಗಳ ಹಲವಾರು ಸಮಸ್ಯೆಗಳಿಗೆ, ಪ್ರಶ್ನೆಗಳಿಗೆ ಉತ್ತರಿಸಿ, ಒಂದು ವಾರಗಳ ಕಾಲ ಪ್ರತಿಯೊಂದು ಕಾಯಿಲೆ ಗುಣಲಕ್ಷಣ ಹಾಗೂ ಪರಿಹಾರ ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸುವುದರ ಜೊತೆಗೆ ಯಾವ ಯಾವ ಯೋಗ, ಪ್ರಾಣಯಾಮ ಧ್ಯಾನಗಳು ನಮ್ಮ ಶರೀರಕ್ಕೆ ಅಗತ್ಯ ಎನ್ನುವುದರ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

Chamber of Commerce Shivamogga ಯೋಗ ಶಿಕ್ಷಕರಾದ ಕಾಟನ್ ಜಗದೀಶ್ ಮಾತನಾಡಿ, ನಮ್ಮ ಅಶ್ವತನಗರ 8ನೇ ಕ್ರಾಸ್ ನ ಶಿವಶಕ್ತಿ ಯೋಗ ಮಂದಿರದಲ್ಲಿ ನಿರಂತರವಾಗಿ ಯೋಗದ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಹಾಗೂ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರ ಮುಖಾಂತರ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ ಎಂದು ನುಡಿದರು.

ರಾಮಚಂದ್ರಪ್ಪ, ಪ್ರತಿಭಾ ಅಶೋಕ್. ಪ್ರೇಮ್ ಕುಮಾರ. ಮಂಜುಳಾ ಎಸ್.ಟಿ.ಆನಂದ ಹಾಗೂ ಶಿಬಿರಾರ್ಥಿಗಳು ಶಿಬಿರದ ಲಾಭ ಪಡೆದರು.

Shivamogga City Corporation ಶಿವಮೊಗ್ಗದಲ್ಲಿ ವಾಣಿಜ್ಯ ಸಂಕೀರ್ಣ & ಯೋಗ ಭವನ ‌ಲೋಕಾರ್ಪಣೆ

0

Shivamogga City Corporation ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗದ ವಿನೋಬನಗರ ಪೊಲೀಸ್ ಚೌಕಿಯ ಬಳಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಹಾಗೂ ಯೋಗಭವನದ ಉದ್ಘಾಟನಾ ಸಮಾರಂಭದಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚೆನ್ನಬಸಪ್ಪ ಅವರು ಭಾಗವಹಿಸಿ, ಭಾಗವಹಿಸಿ ನೂತನ ವಾಣಿಜ್ಯ ಸಂಕೀರ್ಣವನ್ನು ಲೋಕಾರ್ಪಣೆಗೊಳಿಸಿದರು.

Shivamogga City Corporation ಈ ಸಂದರ್ಭದಲ್ಲಿ ಸಂಸದರಾದ ಬಿ ವೈ ರಾಘವೇಂದ್ರ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ ಪಾಲಿಕೆಯ ಆಯುಕ್ತರಾದ ಕವಿತಾ ಯೋಗಪ್ಪನವರ್, ರಾಜ್ಯ ಪ್ರಕೋಷ್ಟಾಗಳ ಸಂಯೋಜಕರಾದ ದತ್ತಾತ್ರೇಯ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಪ್ರಭಾಕರ್, ಸೂಡ ಮಾಜಿ ಅಧ್ಯಕ್ಷರಾದ ನಾಗರಾಜ್ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

MESCOM ನವೆಂಬರ್ 27. ಗಾಂಧಿ ಬಜಾರ್ ಸುತ್ತಮುತ್ತ ವಿದ್ಯುತ್ ಸರಬರಾಜು

0

ಶಿವಮೊಗ್ಗ ನಗರದ ಎಲೆರೇವಣ್ಣ ಕೇರಿ ರಸ್ತೆಯಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿ ಇರುವುದರಿಂದ ನ. 27 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ಗಾಂಧಿಬಜಾರ್, ಎಲೆರೇವಣ್ಣ ಕೇರಿ, ನಾಗಪ್ಪಕೇರಿ, ಅಶೋಕರಸ್ತೆ, ತುಳುಜಾ ಭವಾನಿ ರಸ್ತೆ, ಅನವೇರಪ್ಪ ಕೇರಿ, ಹಾವಿನಕೇರಿ, ಲಷ್ಕರ್ ಮೊಹಲ್ಲಾ, ಮೀನು ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, MESCOM ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಇಲಾಖೆ ತಿಳಿಸಿದೆ.

Rotary Shimoga ನಿರಂತರ ಪರಿಶ್ರಮ,ಶ್ರದ್ಧೆ, ಪ್ರಾಮಾಣಿಕತೆಯಿಂದ ಜೀವನದಲ್ಲಿ ಯಶ ಸಾಧ್ಯ- “ಅಮೃತ್ ನೋನಿ” ಡಾ.ಶ್ರೀನಿವಾಸ ಮೂರ್ತಿ

0

Rotary Shimoga ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಶ್ರದ್ಧೆ, ಪ್ರಾಮಾಣಿಕತೆ ಹಾಗೂ ನಿರಂತರ ಪರಿಶ್ರಮ ಮುಖ್ಯ ಎಂದು ಅಮೃತ್‌ನೋನಿ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.

ರಾಮೇನಕೊಪ್ಪದ ಅಮೃತ್‌ನೋನಿ ಫ್ಯಾಕ್ಟರಿ ಆವರಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಹಾಗೂ ರೋಟರಿ ಶಿವಮೊಗ್ಗ ಸೆಂಟ್ರಲ್ ವತಿಯಿಂದ ವೃತ್ತಿ ಮಾಸಾಚರಣೆ ಅಂಗವಾಗಿ ಆಯೋಜಿಸಿದ್ದ ಕೈಗಾರಿಕಾ ಕ್ಷೇತ್ರದ ಭೇಟಿ ಸಂದರ್ಭದಲ್ಲಿ ಮಾತನಾಡಿದರು.

ಉದ್ಯಮದ ಯಶಸ್ಸಿನಲ್ಲಿ ಕಾರ್ಮಿಕ ವರ್ಗ ಹಾಗೂ ಸಿಬ್ಬಂದಿಯ ಪಾತ್ರ ಬಹುಮುಖ್ಯವಾಗಿರುತ್ತದೆ. ಸಣ್ಣದಾಗಿ ಆರಂಭಗೊಂಡ ಸಂಸ್ಥೆಯು ಬೃಹತ್ ಉದ್ಯಮವಾಗಿ ಬೆಳೆಯುವಲ್ಲಿ ಕುಟುಂಬದ ಸಹಕಾರ ಕೂಡ ಹೆಚ್ಚಿದೆ. ಗುಣಮಟ್ಟ ಕಾಪಾಡಿಕೊಂಡು ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.

Rotary Shimoga ಅಮೃತ್‌ನೋನಿ ಸಿಇಒ ಇಂಚರಾ ನಾಡಿಗ್ ಮಾತನಾಡಿ, ಅಮೃತ್‌ನೋನಿ ಸಂಸ್ಥೆ ಬೆಳೆದು ಬಂದ ದಾರಿಯ ಜತೆಗೆ ನೋನಿ ಹಣ್ಣಿನ ಔಷಧಿ ಗುಣಗಳು ಹಾಗೂ ಪರಿಣಾಮಕಾರಿ ಉಪಯೋಗಗಳ ಬಗ್ಗೆ ವಿವರಿಸಿದರು. ರೋಟರಿ ಸದಸ್ಯರು ಅಮೃತ್ ನೋನಿ ಸಂಸ್ಥೆ ಆವರಣವನ್ನು ವೀಕ್ಷಿಸಿದರು.
ವೃತ್ತಿಪರ ಜಂಟಿಸಭೆಯನ್ನು ಉದ್ದೇಶಿಸಿ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ಸಂಸ್ಥೆಯು ಸಾವಿರಾರು ಕುಟುಂಬಗಳಿಗೆ ಉದ್ಯೋಗ ಅವಕಾಶ ನೀಡುವ ಜತೆಯಲ್ಲಿ ಬದುಕು ರೂಪಿಸಿಕೊಳ್ಳಲು ಸಹಾಯಕವಾಗಿದೆ ಎಂದು ತಿಳಿಸಿದರು.

ರೋಟರಿ ಸೆಂಟ್ರಲ್ ಕ್ಲಬ್ ಅಧ್ಯಕ್ಷ ಕಿರಣ್‌ಕುಮಾರ್ ಮಾತನಾಡಿ, ವೃತ್ತಿ ಮಾಸಾಚರಣೆ ತಿಂಗಳಲ್ಲಿ ರೋಟರಿ ಸದಸ್ಯರು ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ವೃತ್ತಿ ಕ್ಷೇತ್ರದಲ್ಲಿನ ವಿವಿಧ ಸಂಗತಿಗಳನ್ನು ಅರಿತುಕೊಳ್ಳುವ ಪ್ರಯತ್ನ ಎಂದರು.
ಜಿಲ್ಲಾ ಮಾಜಿ ಗವರ್ನರ್ ಜಿ.ಎನ್.ಪ್ರಕಾಶ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ ಹೋಬಳಿದಾರ್, ಸುಬ್ಬೇಗೌಡ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಕಡಿದಾಳ್ ಗೋಪಾಲ್, ಹೊಸತೋಟ ಸೂರ್ಯನಾರಾಯಣ, ಡಾ. ಗುಡದಪ್ಪ ಕಸಬಿ, ಶ್ರೀಕಾಂತ್, ಕೆ.ಆರ್.ನಟರಾಜ್, ಅಮೃತ್ ನೋನಿ ಸಂಸ್ಥೆಯ ಅಂಬುಜಾಕ್ಷಿ, ಶ್ರೀಕಾಂತ್ ನಾಡಿಗ್, ರಾಮಮೂರ್ತಿ, ಹರಿಣಿ, ರೋಟರಿ ಸದಸ್ಯರು ಉಪಸ್ಥಿತರಿದ್ದರು.