Sunday, July 13, 2025
Sunday, July 13, 2025

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Date:

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಿಜೆಪಿಗೆ ಭಾರೀ ಸಂತೋಷ ತಂದಿದೆ. ಶಿವಸೇನೆಯ ಇಬ್ಭಾಗ ಮತ್ತು ಸದ್ಯದ ರಾಜಕೀಯ ವಿದ್ಯಮಾನಗಳಿಂದ
“ಮಹಾ” ಚುನಾವಣೆ ದೊಡ್ಡ ಕುತೂಹಲ ಉಂಟುಮಾಡಿತ್ತು.
ಏಕನಾಥ ಶಿಂಧೆ ಅವರ” ಸಿಎಂ ಗಿರಿ”ಗೆ ಈ ಬಾರಿ ಮತದಾರ ಭಾರೀ ಮಣೆ ಹಾಕಿದ್ದಾನೆ. ಹಲವಾರು ಜನಪರ ಯೋಜನೆಗಳಿಂದ ಶಿಂಧೆ ಒಂದು ಕೈ ಮೇಲೆ ಇದ್ದರು. ಉದ್ಧವ್ ಠಾಕ್ರೆ ಅವರ ಚಂಚಲಿತ ನಿಲುವು, ಕಾಂಗ್ರೆಸ್, ಶರದ್ ಪವಾರ್ ಅವರ ಎನ್ ಸಿ ಪಿ‌ ಇವುಗಳ ನಡುವೆ ಭದ್ರ ಬೆಸುಗೆಯ ಕೊರತೆಯಿಂದ ಶಿಂಧೆ ಬಣದ ಶಿವಸೇನೆ ಮತ್ತು ಮೋದಿಯವರ ಮೋಡಿ ಮತ್ತೆ “ಲಕ್ “
ಸಿಗುವಂತೆ ಮಾಡಿದೆ.
Maharashtra Election ಈಗಾಗಲೇ 218 ಸ್ಥಾನ ಗಳಿಸಿ ನಿಚ್ವಳ ಬಹುಮತ ಪಡೆದ ಮಹಾಯುತಿ ಒಕ್ಕೂಟ ಮತ್ತೆ ಮಹಾರಾಷ್ಟ್ರದ ಗದ್ದುಗೆ ಹಿಡಿಯುವಲ್ಲಿ
ಸಫಲವಾಗಿದೆ. ಇನ್ನೂ ಎಣಿಕೆ ಪೂರ್ಣವಾಗಿಲ್ಲದಿದ್ದರೂ ಮತ ಎಣಿಕೆಯ
ಟ್ರೆಂಡ್ ನಲ್ಲಿ ಮಹಾಯುತಿಗೆ ಬಹುಮತ ಸಾಬೀತಾಗಿದೆ.ಬಹಳ ಭರವಸೆ ಇರಿಸಿಕೊಂಡಿದ್ಧ ಕಾಂಗ್ರೆಸ್ ಇರುವ ಮಹಾ ವಿಕಾಸ ಅಘಾಡಿ ಗೆ ಒಂದು ಥರ ಪಾರ್ಶ್ವವಾಯು ಬಡಿದಂತಾಗಿದೆ. ಅಭ್ಯರ್ಥಿಗಳ ಆಯ್ಕೆ, ಪರಸ್ಪರ ಸ್ಥಾನ ಹೊಂದಾಣಿಕೆ ಇವುಗಳಲ್ಲಿ ಮೀನಮೇಷ ಎಣಿಸಿದ್ದರ ಫಲ ಅಘಾಡಿಗೆ ಹಿನ್ನೆಡೆ ಎಂದು ಪರಿಣಿತರ ಲೆಕ್ಕಾಚಾರ. ಪೂರ್ಣ ಸ್ಥಾನಗಳ ಮಾಹಿತಿ ಇನ್ನೂ ಬಂದಿಲ್ಲ.
ಆದರೂ ಎಣಿಕೆ ಸುತ್ತು ಕಡಿಮೆಯಿರುವ ಹಿನ್ನೆಲೆಯಲ್ಲಿ ಮಹಾಯುತಿಗೆ ಜಯಭೇರಿ ಎನ್ನುವುದಕ್ಕೆ ಸಂದೇಹವಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Miss Universe Karnataka ಚಿಕ್ಕಮಗಳೂರಿನ ಕು.ವಂಶಿ ಅವರಿಗೆ ಮಿಸ್ ಯೂನಿವರ್ಸ್ ಕರ್ನಾಟಕ ಪುರಸ್ಕಾರ

Miss Universe Karnataka ಮಿಸ್ ಯೂನಿವರ್ಸ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾಗಿರುವ ಚಿಕ್ಕಮಗಳೂರಿನ...

Department of Agriculture ಶೇ 48. ರಷ್ಟು ಮಾರುಕಟ್ಟೆ ಶುಲ್ಕ ವಿಧಿಸಲು ಅವಕಾಶ ಬೇಕೆಂಬ ಮನವಿಯನ್ನ ಪರಿಶೀಲಿಸಲಾಗುತ್ತದೆ- ಸಚಿವ ಶಿವಾನಂದ ಪಾಟೀಲ್

Department of Agriculture ಕ್ಯಾಂಪ್ಕೋದಿಂದ ಸಂಗ್ರಹಿಸುತ್ತಿರುವ ಮಾರುಕಟ್ಟೆ ಶುಲ್ಕವನ್ನು ಈ ಮೊದಲಿನಂತೆ...

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಅರ್ಹತೆಗಳಲ್ಲಿ‌ ತಿದ್ದುಪಡಿ ಆದೇಶ

ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಗಾಗಿ ತಿದ್ದುಪಡಿ ಆದೇಶ ಹೊರಡಿಸಲಾಗಿದ್ದು,...

University of Horticultural Sciences ಕೃಷಿ ಪದವಿಧರರು ಕೃಷಿಮಾಡಿ ಅಭಿವೃದ್ಧಿಗೆ ಕೊಡುಗೆ ನೀಡಿ-ನಟ ಶಶಿಕುಮಾರ್

ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ...