Gukesh Dommaraju ಭಾರತೀಯ ಚೆಸ್‌ಗೆ ಐತಿಹಾಸಿಕ ಕ್ಷಣ! ಗುಕೇಶ್ ಡಿ ಹೊಸ ವಿಶ್ವ ಚೆಸ್ ಚಾಂಪಿಯನ್! ಕೇವಲ 18 ನೇ ವಯಸ್ಸಿನಲ್ಲಿ, ಅವರು ಅತ್ಯಂತ ಕಿರಿಯ ನಿರ್ವಿವಾದ ಶಾಸ್ತ್ರೀಯ ವಿಶ್ವ ಚಾಂಪಿಯನ್ ಆಗಿದ್ದಾರೆ. Gukesh Dommaraju ನಾಟಕೀಯ ಮತ್ತು ಅನಿರೀಕ್ಷಿತ ಘಟನೆಗಳಲ್ಲಿ, ಅಂತಿಮ ಪಂದ್ಯವು ಡ್ರಾದತ್ತ ಸಾಗುತ್ತಿದೆ ಮತ್ತು ಟೈಬ್ರೇಕ್‌ಗಳು ಅನಿವಾರ್ಯವೆಂದು ತೋರಿದಾಗ, ಚಾಂಪಿಯನ್ ಡಿಂಗ್ ಲಿರೆನ್ ಭಾರಿ ತಪ್ಪು ಮಾಡಿದರು ಮತ್ತು ನಂತರ ಮೂರು ಚಲನೆಗಳ ಮೂಲಕ ಶರಣಾದರು. ಪಂದ್ಯದ ಅಂತಿಮ ಫಲಿತಾಂಶ. ಗುಕೇಶ್ ಮತ್ತು ಡಿಂಗ್ ಲೆರೆನ್ ಪಾಯಿಂಟ್ ಗಳ ಅಂತರ 7.5-6.5 ಆಗಿದೆ.
Shri Kshethra Dharmasthala Rural Development Project ಆರ್ಥಿಕ ಶಕ್ತಿಯಾಗುವ ಭರದಲ್ಲಿ ಸಂಸ್ಕೃತಿ ಸಂಸ್ಕಾರಗಳನ್ನ ಮರೆಯಬಾರದು- ಡಾ.ಎಚ್.ಬಿ.ಮಂಜುನಾಥ್
Shri Kshethra Dharmasthala Rural Development Project ನಮ್ಮ ದೇಶವು ಅನಾದಿಕಾಲದಿಂದಲೂ ಜ್ಞಾನಾಧಾರಿತ ಸುಸಂಸ್ಕೃತಿ ಸಂಸ್ಕಾರಗಳಿಗೆ ವಿಶ್ವದಲ್ಲೇ ಮಾನ್ಯತೆ ಹೊಂದಿದ್ದು ಆರ್ಥಿಕ ಶಕ್ತಿಯಾಗುವ ಭರದಲ್ಲಿ ಇದನ್ನು ಅಲಕ್ಷಿಸಬಾರದು ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ದಾವಣಗೆರೆ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ ಸಂಸ್ಕೃತಿ ಸಂಸ್ಕಾರ ಉಳಿಸುವಿಕೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ, ಕಷ್ಟ ಸಹಿಷ್ಣುತೆ, ಜವಾಬ್ದಾರಿಯ ನಿರ್ವಹಣೆ, ಪೂರ್ವಾಪರ ಆಲೋಚನೆ, ಸೂಕ್ಷ್ಮಗ್ರಹಣ ಎಲ್ಲದರಲ್ಲೂ ಮಹಿಳೆಯರು ಪುರುಷರಿಗಿಂತ ಮುಂದೆ, ಆದ್ದರಿಂದಲೇ ನಮ್ಮ ವೇದೋಪನಿಷತ್ತು, ರಾಮಾಯಣ ಮಹಾಭಾರತ ಕಾಲಗಳಿಂದಲೂ ಮಹಿಳೆಯರಿಗೆ ಪ್ರಧಾನ್ಯತೆ ಇತ್ತು, ಭಾರತದ ಮೇಲೆ ಪರಕೀಯರ ಆಕ್ರಮಣ ಹಾಗೂ ದಬ್ಬಾಳಿಕೆಯ ಆಡಳಿತ ಬಂದ ಮೇಲೆ ಸ್ತ್ರೀಯರ ಶೋಷಣೆ ಹೆಚ್ಚಾಯಿತು ಎಂದರಲ್ಲದೆ ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಮಕ್ಕಳಿಗೆ ಮನದಟ್ಟು ಮಾಡುವ ತಾಳ್ಮೆ ಹಾಗೂ ಜಾಣ್ಮೆ ಎರಡೂ ತಾಯಂದಿರಲ್ಲಿದೆ, ಇದನ್ನು ಮುಂದುವರಿಸಬೇಕು ಎಂದು ಕರೆಕೊಟ್ಟರು. Shri Kshethra Dharmasthala Rural Development Project ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಾ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಉಚಿತ ಕಾನೂನು ನೆರವು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆದ ಮಹಾವೀರ ಕರೆವಣ್ಣನವರ್ ಎಲ್ಲಿ ಮಹಿಳೆಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಹಾ ಪ್ರಸನ್ನರಾಗಿರುತ್ತಾರೆ ಎಂಬ ಸನಾತನ ನುಡಿಗಟ್ಟನ್ನು ಉದಾಹರಿಸುತ್ತಾ ಮಹಿಳೆಯರ ಸಮಾನತೆಗೆ ನಮ್ಮ ಸಂವಿಧಾನವು ಕೊಟ್ಟಿರುವ ಪ್ರಾಶಸ್ತ್ಯವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲರು ಸಮಾಜ ಸೇವಕರು ಆದ ಶ್ರೀಮತಿ ಅನಿತಾ ಹಾಗೂ ಡಾ. ಉಪೇಂದ್ರ ಮಾತನಾಡಿದರು. ಗ್ರಾಮ ಅಭಿವೃದ್ಧಿ ಯೋಜನೆಯ ಹಿರಿಯ ಜಿಲ್ಲಾ ನಿರ್ದೇಶಕ ಎಂ ಲಕ್ಷ್ಮಣ ಸಹ ಮುಖ್ಯ ಅತಿಥಿಗಳಾಗಿ ಯೋಜನೆಯಲ್ಲಿ ಮಹಿಳೆಯರಿಗಿರುವ ಅವಕಾಶಗಳ ಬಗ್ಗೆ ವಿವರಿಸಿದರು. ಮಹಾನಗರ ಪಾಲಿಕಾ ಸದಸ್ಯೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಎಂ ಜಗದೀಶ ಅಧ್ಯಕ್ಷೀಯ ನುಡಿಗಳನ್ಡಿನಾಡಿದರು. ಪ್ರಾದೇಶಿಕ ಯೋಜನಾಧಿಕಾರಿ ರತ್ನಾ ಮೈಪಾಳ್ ಪ್ರಾಸ್ತಾವಿಕ ನುಡಿಗಳನ್ನಾಡಿದರೆ ಯೋಜನಾಧಿಕಾರಿ ಶ್ರೀಮತಿ ಯಶೋದಾ ಸ್ವಾಗತ ಕೋರಿದರು. ವಂದನೆಗಳನ್ನು ಜ್ಞಾನವಿಕಾಸದ ಸಮನ್ವಯಾಧಿಕಾರಿ ಪ್ರತಿಭಾ ಅರ್ಪಿಸಿದರು. ವೀರೇಶ್ ಉಪಸ್ಥಿತರಿದ್ದು ಕಾರ್ಯಕ್ರಮದ ನಿರೂಪಣೆಯನ್ನು ಕೊಟ್ರೇಶ್ ಮಾಡಿದರು.ಪ್ರಾರ್ಥನೆಯನ್ನು ಸುಧಾ ಮಂಜುಳಾದೇವಿ ಶಾಂತಾ ಹಾಡಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಪ್ರಮಾಣ ಪತ್ರಗಳ ವಿತರಣೆಯ ನಂತರ ಯೋಜನೆಯ ಸದಸ್ಯಿಣಿಯರಿಂದ ಆಕರ್ಷಕ ನೃತ್ಯರೂಪಕಗಳು ಪ್ರಸ್ತುತಪಡಿಸಲ್ಪಟ್ಟವು. ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನೆರವೇರಿತು.
K.S. Eshwarappa ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಸರಿಯಲ್ಲ- ಮಾಜಿ ಡಿಸಿಎಂ ಕೆ .ಎಸ್.ಈಶ್ವರಪ್ಪ
K.S. Eshwarappa ಬೆಳಗಾವಿ ವಿಧಾನಸೌಧದ ಮುಂದೆ ಪಂಚಮಸಾಲಿ ಹೋರಾಟ ಹಾಗೂ ಲಾಠಿ ಚಾರ್ಜ್ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪನವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು .
ಯಾವುದೇ ಸಮಾಜ ಸ್ವಾಭಾವಿಕವಾಗಿ ಬೇಡಿಕೆಗಳಿಗೆ ಮನವಿ ಸಲ್ಲಿಸುತ್ತಾರೆ.
ಆದರೆ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕೆನ್ನುವುದು ಸರ್ಕಾರ ತಿಳಿದಿರಬೇಕು ಎಂದರು.
ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದೆ.
ಪಂಚಮಸಾಲಿಯವರು ಮೊದಲೇ ಪ್ರತಿಭಟನೆ ಬಗ್ಗೆ ತಿಳಿಸಿದ್ದರು.ಸರ್ಕಾರದ ಕ್ರಮಕ್ಕೆ ನಾನು ಖಂಡನೆ ವ್ಯಕ್ತಪಡಿಸುತ್ತೇನೆ.ಸರ್ಕಾರ ಮೊದಲು ಎಲ್ಲರ ಮೇಲಿನ ಕೇಸು ವಾಪಸ್ ತೆಗೆದುಕೊಳ್ಳಬೇಕು.ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಕೋರಬೇಕು.
ಲಾಠಿ ಚಾರ್ಜ್ ಮಾಡಿರುವುದು ಒಳ್ಳೆಯದಲ್ಲ ಎಂದರು.
K.S. Eshwarappa ಸರ್ಕಾರ ಬೇಡಿಕೆ ಬಗ್ಗೆ ಕೂತು ಮೊದಲು ಚರ್ಚೆ ಮಾಡಲಿ.ಲಾಠಿ ಚಾರ್ಜ್ ಕ್ರಮ ಸರಿಯಲ್ಲ.ವೈನಾಡುವಿಗೆ ಸಿಎಂ ಸಿದ್ಧರಾಮಯ್ಯ ಪರಿಹಾರ ಘೋಷಿಸಿದ್ದರು.
ಸಂತ್ರಸ್ತರಿಗೆ ಮನೆ ಕಟ್ಟಿ ಕೊಡುತ್ತೇವೆಂದು ಹೇಳಿದ್ದರು.
ಮನೆ ಕಟ್ಟಿಸಿ ಕೊಡ್ತಿನಿ ಎಂದು ಸಿಎಂ ಹೇಳಿದ್ದರು.
ಅದು ಕರುಣೆಯೂ ಅಲ್ಲ ಭಿಕ್ಷೆಯೂ ಅಲ್ಲ.
ಅವರ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಮನಧಿ ಮನವೊಲಿಸಲು ಆ ತರಾ ಹೇಳಿದ್ದಾರೆ.
ಮುಸಲ್ಮಾನರನ್ನು ತೃಪ್ತಿ ಪಡಿಸಲು ಇವರು ಹೊಟಿದ್ದಾರೆ.
ರಾಜ್ಯದಲ್ಲೂ ಮನೆಗಳು ಬಿದ್ದಿವೆ.
ಶಿವಮೊಗ್ಗದಲ್ಲಿ ಮನೆಗಳು ಬಿದ್ದಿವೆ.ಅವರಿಗೂ ಪರಿಹಾರ ಮೊದಲು ನೀಡಲಿ.
ಅವರ ನಾಯಕರನ್ನು ಸಂತೃಪ್ತಿಗೊಳಿಸಲು ಸಿಎಂ ಸಿದ್ಧರಾಮಯ್ಯ ಪರಿಹಾರ ಘೋಷಿಸಿದ್ದಾರೆ ಅಷ್ಟೇ ಎಂದು ಹೇಳಿದರು
Scheduled Castes Sub Plan ಪ.ಜಾ/ಪ.ಪಂ. ಕ್ರೀಡಾಪಟುಗಳು ಪ್ರೋತ್ಸಾಹಧನ ಪಡೆಯಲು ಅರ್ಜಿ ಆಹ್ವಾನ
Scheduled Castes Sub Plan 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ 2023ನೇ ಕ್ಯಾಲೆಂಡರ್ ವರ್ಷದಲ್ಲಿ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪ.ಜಾ./ಪ. ಪಂ. ಗಳ ಕ್ರೀಡಾಪಟುಗಳಿಂದ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಕ್ರೀಡಾಪಟುಗಳು ಅರ್ಜಿಯನ್ನು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಡಿ. 21 ರೊಳಗಾಗಿ ಸಲ್ಲಿಸುವಂತೆ ಇಲಾಖೆ ತಿಳಿಸಿದೆ.
Scheduled Castes Sub Plan ಹೆಚ್ಚಿನ ಮಾಹಿತಿಗಾಗಿ ಇಲಾಖೆ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.:08182-223328 ನ್ನು ಸಂಪರ್ಕಿಸಬಹುದು.
Rotary School in Shivamogga ಕ್ರೀಡೆಗಳಲ್ಲಿ ಸೋಲು ಗೆಲುವಿಗಿಂತ ಸ್ಪರ್ಧಾತ್ಮಕವಾಗಿ ಭಾಗವಹಿಸುವಿಕೆ ಮುಖ್ಯ- ಕಡಿದಾಳ್ ಗೋಪಾಲ್
Rotary School in Shivamogga ಬಾಲ್ಯದಲ್ಲಿಯೇ ಬೆಳೆಸಿಕೊಂಡ ಕ್ರೀಡಾ ಮನೋಭಾವವು ಮಕ್ಕಳ ದೈಹಿಕ, ಮಾನಸಿಕ ಹಾಗು ಭಾವನಾತ್ಮಕ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೆಷನಲ್ & ಛಾರಿಟಬಲ್ ಟ್ರಸ್ಟ್ನ ಪೇಟ್ರನ್ ಟ್ರಸ್ಟಿ, ರೊ. ಡಾ. ಕಡಿದಾಳ್ ಗೋಪಾಲ್ ಅವರು ಅಭಿಪ್ರಾಯ ಪಟ್ಟರು. ಅವರು ರಾಜೇಂದ್ರನಗರದಲ್ಲಿರುವ ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕ್ರೀಡೋತ್ಸವದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಈ ಮೇಲಿನಂತೆ ಅಭಿಪ್ರಾಯ ಪಟ್ಟರು.
Rotary School in Shivamogga ನಾವೆಲ್ಲಾ ಚಿಕ್ಕವರಿದ್ದಾಗ ಚಿನ್ನಿದಾಂಡು, ಬುಗುರಿ ಆಟ, ಲಗೋರಿ ಮುಂತಾದ ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿದ್ದರ ಪರಿಣಾಮವಾಗಿ ಕ್ರೀಡಾ ಮನೋಭಾವವನ್ನು ಬೆಳೆಸಿಕೊಂಡಿದ್ದು, ಇಂದಿಗೂ ಕೂಡ ಆ ಮಧುರ ನೆನಪುಗಳು ಹಚ್ಚಹಸಿರಾಗಿವೆ ಎಂದರು. ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಸ್ಫರ್ಧಾತ್ಮಕವಾಗಿ ಭಾಗವಹಿಸುವುದು ಮುಖ್ಯವೇ ಹೊರತು ಸೋಲು-ಗೆಲುವು ಮುಖ್ಯವಲ್ಲ. ಜೊತೆಗೆ ಕ್ರೀಡಾ ಸ್ಪರ್ಧೆಗಳಲ್ಲಿನ ಸೋಲು-ಗೆಲುವುಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕು. ಈ ನಿಟ್ಟಿನಲ್ಲಿ ರೋಟರಿ ಪೂರ್ವ ಶಾಲೆಯಲ್ಲಿ ಏರ್ಪಡಿಸಿರುವ ವಿವಿಧ ಕ್ರೀಡೆಗಳು ಹಾಗೂ ಆಟೋಟ ಸ್ಫರ್ಧೆಗಳು ಮಕ್ಕಳನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ಬೆಳೆಸುವಲ್ಲಿ ಸಹಾಯಕವಾಗಿವೆ ಎಂದು ಹಾರೈಸಿದರು.
ಟ್ರಸ್ಟ್ನ ಉಪಾಧ್ಯಕ್ಷರಾದ ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್ ಮಾತನಾಡುತ್ತಾ, ವಿದ್ಯಾರ್ಥಿಗಳು ಈ ಹಂತದಲ್ಲಿಯೇ ಪ್ರತಿದಿನ ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಆರೋಗ್ಯಕರವಾದ ಬದುಕನ್ನು ರೂಪಿಸಿಕೊಳ್ಳಬೇಕೆಂದು ಕರೆಕೊಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ, ರೊ. ಚಂದ್ರಶೇಖರಯ್ಯ ಎಂ., ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕ್ರೀಡಾಂಗಣವು ಒಂದು ಪವಿತ್ರ ಸ್ಥಳವಾಗಿದ್ದು, ಅಲ್ಲಿ ತಯಾರಾದ ಕ್ರೀಡಾಪಟುಗಳು ಸಮಷ್ಠಿ ವ್ಯಕ್ತಿತ್ವವನ್ನು ಬೆಳೆಸಿಕೊಂಡು ದೇಶದ ರಕ್ಷಕರಾಗಬಲ್ಲರು ಎಂಬುದನ್ನು, ಲಂಡನ್‌ನಲ್ಲಿರುವ ಈಡನ್ ಆಟದ ಮೈದಾನದಲ್ಲಿ ತಯಾರಾದ ಕ್ರೀಡಾಪಟುಗಳು ಮುಂದೆ ದೇಶದ ಯೋಧರಾಗಿ ಹೇಗೆ ವಾರ‍್ಲೂ ಕದನವನ್ನು ಫ್ರಾನ್ಸ್ನ ನೆಪೋಲಿಯನ್ ಅಂತಹ ಸಾಮ್ರಾಜ್ಯಶಾಹಿಯ ವಿರುದ್ಧ ಗೆದ್ದರು ಎಂಬ ಉದಾಹರಣೆಯನ್ನು ನೀಡುತ್ತಾ ಮನವರಿಕೆ ಮಾಡಿದರು. ಹಾಗಾಗಿ ಶಾಲೆಯಲ್ಲಿ ಎಲ್ಲ ಮಕ್ಕಳಲ್ಲೂ ಇರುವ ಕ್ರೀಡಾ ಪ್ರತಿಭೆಯನ್ನು ಹೊರತೆಗೆದು ಅವರನ್ನು ದೇಸದ ಆಸ್ತಿಯನ್ನಾಗಿ ಮಾಡುವಲ್ಲಿ ಶಾಲಾ ಕ್ರೀಡಾಕೂಟಗಳು ಪ್ರಮುಖ ಪಾತ್ರವಹಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಕಾರ್ಯದರ್ಶಿ ರೊ. ಎಸ್.ಸಿ. ರಾಮಚಂದ್ರ, ಖಜಾಂಚಿ ರೊ. ವಿಜಯ್ ಕುಮಾರ್ ಜಿ., ಜಂಟಿ ಕಾರ್ಯದರ್ಶಿ, ರೊ. ನಾಗವೇಣಿ ಎಸ್.ಆರ್. ಮತ್ತು ವಿಶೇಷ ಆಹ್ವಾನಿತರಾದÀ ಟ್ರಸ್ಟಿ ರೊ. ಮಂಜುನಾಥ್ ಎನ್.ಬಿ., ಹಾಗೂ ಶಾಲೆಯ ಪ್ರಾಂಶುಪಾಲ ಶ್ರೀ ಸೂರ್ಯನಾರಾಯಣ್ ಆರ್. ಇವರು ಭಾಗವಹಿಸಿ ವಿಜೇತರಿಗೆ ಬಹುಮಾನ ವಿರತಣೆ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಪ್ರದೀಪ್ ಕುಮಾರ್ ಎಸ್ ಇವರು ನಿರೂಪಣೆ ಮಾಡಿದ್ದು, ಶ್ರೀಮತಿ ಶ್ವೇತಾ ಎ.ಟಿ. ಇವರು ಸ್ವಾಗತಿಸಿದರೆ, ಶ್ರೀಮತಿ ರೂಪ ಎಸ್. ರಾವ್ ಇವರು ವಂದಿಸಿದರು. ಕ್ರೀಡಾಕೂಟದ ಬಹುಮಾನವನು ಟ್ರಸ್ಟಿ ರೊ. ಎಂ.ಸಿ. ಹೇಮಂತ್ ಇವರು ಪ್ರಾಯೋಜಿಸಿದರು.
B.Y.Raghavendra ಲೋಕಸಭೆಯಲ್ಲಿ ಶರಾವತಿ ಸಂತ್ರಸ್ತರ ಬಗ್ಗೆ ದನಿಯೆತ್ತಿದ ಸಂಸದ ಬಿ.ವೈ. ರಾಘವೇಂದ್ರ
B.Y.Raghavendra ನಾಡಿನಲ್ಲಿ ಎದುರಾಗಿದ್ದ ವಿದ್ಯುತ್ ಬವಣೆಯನ್ನು ನೀಗಿಸಲು ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತನ್ನು ಉಪಯೋಗಿಸಿಕೊಂಡು ಶರಾವತಿ ಜಲವಿದ್ಯುತ್ ಯೋಜನೆಯನ್ನು 1960 ರ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾಯಿತು.
ಈ ಒಂದು ಐತಿಹಾಸಿಕ ಯೋಜನೆಯಿಂದ ಜಲಾಶಯದ ಹಿನ್ನೀರಿನಲ್ಲಿ ವಾಸವಿದ್ದ ಸಾವಿರಾರು ಕುಟುಂಬಗಳು ತಮಗೆ ಆಧಾರವಾಗಿದ್ದ ಸಾವಿರಾರು ಎಕರೆ ಭೂಮಿ ಮುಳುಗಡೆ ಆಗುತ್ತದೆ ಎಂಬ ಕಲ್ಪನೆ ಇದ್ದರೂ ಜಲಾಶಯ ನಿರ್ಮಾಣಕ್ಕೆ ತಮ್ಮ ಸೂಕ್ತ ಸಹಕಾರ ನೀಡಿದ ಪರಿಣಾಮ ಇಂದು ರಾಜ್ಯದ ಬಹುಪಾಲು ವಿದ್ಯುತ್ ಈ ಕೇಂದ್ರದಿಂದ ಉತ್ಪಾದನೆ ಆಗುತ್ತಿದೆ. ಎಂದು ಪ್ರಸ್ತುತ ಲೋಕಸಭಾ ಅಧಿವೇಶನದಲ್ಲಿ
ಶಿವಮೊಗ್ಗ ಕ್ಷೇತ್ರದ ಲೋಕ ಸಭಾಸದಸ್ಯ
ಬಿ ವೈ.ರಾಘವೇಂದ್ರ ಕೇಂದ್ರ ಸರ್ಕಾರದ ಪರಿಸರ ಇಲಾಖೆಗೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ಸಂಪೂರ್ಣ ಚಿತ್ರಣ ನೀಡಿದರು
ಸಂಸದರು ಮುಂದುವರೆದು ಮಾತನಾಡುತ್ತಾ
*ನಂತರ ಆಳಿದ ಸರ್ಕಾರಗಳು ಸೂಕ್ತ ಸಮಯದಲ್ಲಿ ಐತಿಹಾಸಿಕ ನಿರ್ಧಾರಕ್ಕೆ ತನ್ನ ನಿರ್ದಿಷ್ಟ ಇಚ್ಛಾಶಕ್ತಿ ತೋರದೆ ಕಳೆದ 60 ವರ್ಷಕ್ಕೂ ಅಧಿಕ ಸಮಯದಿಂದ ಈ ಗಂಭೀರ ಸಮಸ್ಯೆ ಸಮಸ್ಯೆಯಾಗಿ ಉಳಿದುಕೊಂಡಿದೆ. ಎಂದು ಆಕ್ಷೇಪ ವ್ಯಕ್ತಪಡಿಸಿದರು
ಇಲ್ಲಿಯವರೆಗೂ ಎದುರಾದ ತಾಂತ್ರಿಕ ಮತ್ತು ತಾಂತ್ರಿಕೇತರ ಹಾಗೂ ಇನ್ನಿತರ ಆಡಳಿತಾತ್ಮಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಕೆಳ ಹಂತದ ನ್ಯಾಯಾಲಯದಿಂದ ಹಿಡಿದು ಉಚ್ಚ ನ್ಯಾಯಾಲಯ ದಾಟಿಕೊಂಡು ಈಗ ಸರ್ವೋಚ್ಚ ನ್ಯಾಯಾಲಯಕ್ಕೆ ಕೊನೆಯ ಹಂತದ ನ್ಯಾಯಕ್ಕಾಗಿ ಹೋರಾಟ ಪ್ರಾರಂಭಿಸಿದೆ.
B.Y.Raghavendra ಕೇಂದ್ರದ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದ ಸಮಯದಿಂದ ತನ್ನ ನಿರ್ಣಯಗಳಲ್ಲಿ ಸದಾ ಜನ ಹಿತ ಹಾಗೂ ಜನ ಪರ ಎಂಬುದು ದೃಡಿ ಕರಿಸಿದೆ. ಈಗ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ನ್ಯಾಯ ಪಡೆಯಲು ಹೋರಾಟ ಆರಂಭಿಸಿದೆ.
ಈ ಮಹತ್ತರವಾದ ಸಮಯದಲ್ಲಿ ಕೇಂದ್ರ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಕೇಂದ್ರ ಸಚಿವರು ಮಲೆನಾಡಿನ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಸೂಕ್ತ ರೀತಿಯಲ್ಲಿ ಹೋರಾಟ ನಡೆಸಿ ಹೊಸ ಮೈಲಿಗಲ್ಲು ಸ್ಥಾಪಿಸುವ ಮಹಾದಾಸೆ ಹಾಗೂ ಭರವಸೆ ನಮಗೆಲ್ಲ ಮೂಡಿದೆ.
ಈ ಕುರಿತು ಇಂದು ಸದನದ ಗಮನ ಸೆಳೆದು ಶರಾವತಿ ಹಿನ್ನೀರಿನ ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆ ಎಳೆಯಾಗಿ ತೆರೆದಿಟ್ಟು ಪುನರ್ವಸತಿ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ದಿಟ್ಟ ಕ್ರಮ ತೆಗೆದುಕೊಳ್ಳುವಂತೆ ಮತ್ತೊಮ್ಮೆ ಆಗ್ರಹ ಪೂರ್ವಕವಾಗಿ ಸಂಸದ ರಾಘವೇಂದ್ರ ಅವರು ಲೋಕಸಭೆಯಲ್ಲಿ ಎಲ್ಲರ ಗಮನ ಸೆಳೆದು ಮನವಿ ಮಾಡಿದರು.
Shivamogga Police ವ್ಯಕ್ತಿ ನಾಪತ್ತೆ. ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಮಾಹಿತಿ
Shivamogga Police ಮುನಿಸ್ವಾಮಿ, 65 ವರ್ಷ, ಹೊಸಮನೆ, 4ನೇ ಕ್ರಾಸ್, ಶಿವಮೊಗ್ಗ ಇವರು ಡಿ.04 ರಂದು ಬೆಳಿಗ್ಗೆ ಮನೆಯಿಂದ ಹೋದವರು ವಾಪಸ್ ಬಂದಿರುವುದಿಲ್ಲ.
Shivamogga Police ಕಾಣೆಯಾದ ಮುನಿಸ್ವಾಮಿಗೆ ಮದ್ಯಪಾನ ಚಟವಿರುತ್ತದೆ. ಮುನಿಸ್ವಾಮಿ ಸುಮಾರು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಕಪ್ಪು ಬಿಳಿ ಕೂದಲು ಇರುತ್ತದೆ. ಕನ್ನಡ. ತೆಲುಗು ಮಾತನಾಡುತ್ತಾರೆ.
ಕಾಣೆಯಾದ ವೇಳೆ ಹಸಿರು ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಎಡಗೈಯಲ್ಲಿ ಬೆರಳುಗಳು ಸಣ್ಣದಾಗಿರುತ್ತವೆ.
ಇವರ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ತಿಳಿಸಿದೆ
Vasavi School Shivamogga ಕೃಷ್ಣನ ವ್ಯಕ್ತಿತ್ವದ ಅಪೂರ್ವ ಆಯಾಮಗಳ ಕೃತಿ”ನನ್ನ ಕೃಷ್ಣ” – ವಿನಯ್ ಶಿವಮೊಗ್ಗ
Vasavi School Shivamogga ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ …ಗೋಪೀಜನಪ್ರಿಯ ಗೋಪಾಲಗಲ್ಲದೆ…” ಇದು ಪುರಂದರ ದಾಸರ ಬಲು ಜನಪ್ರಿಯ ಕೃತಿ. ಹಲವು ಕಾರಣಗಳನ್ನು ಕೊಟ್ಟು ಶ್ರೀ ಕೃಷ್ಣನೇ ಅಪರೂಪದಲ್ಲಿ ಅಪರೂಪದ ದೈವವೆಂದು ದಾಸರು ಈ ಕೃತಿಯಲ್ಲಿ ಬಣ್ಣಿಸುತ್ತಾರೆ.
ಭಾರತ ಭಾರಿ ವೈವಿಧ್ಯತೆಯ ನಾಡು. ನೂರಾರು ಆಚರಣೆಗಳು, ಪೂಜಾ ವಿಧಾನಗಳು, ಉಪಾಸನೆಗಳು ಇಲ್ಲಿ ಜನಜನಿತ. ಈ ಎಲ್ಲಾ ವೈವಿಧ್ಯತೆಯ ನಡುವೆ ಭಾರತದಾದ್ಯಂತ ಪೂಜಿಸಲ್ಪಡುವ ಶ್ರೀ ಕೃಷ್ಣನ ವ್ಯಕ್ತಿತ್ವ ಬಲು ಅನನ್ಯ.
ಶ್ರೀ ಕೃಷ್ಣ ಮಹಾವಿಷ್ಣುವಿನ ಅವತಾರವೆಂದು ಧಾರ್ಮಿಕವಾದ ನಂಬಿಕೆ ಇದ್ದರೂ, ಆತ ದೇವರೆಂಬ ಭಯ-ಭಕ್ತಿಯ ಹೊರತಾಗಿ ಆತ ನಮ್ಮ ಮನೆಯ ಹುಡುಗ, ನನ್ನ ಮಿತ್ರನೆಂಬ, ಬಂಧುವೆಂಬ ಆತ್ಮೀಯ ಭಾವವೇ ಪ್ರತಿ ಭಾರತೀಯನ ಹೃದಯದಲ್ಲಿ ಸಂವೇದ್ಯವಾಗಿರುವುದು ಒಂದು ಅಚ್ಚರಿಯೇ ಸರಿ. ಶ್ರೀ ಕೃಷ್ಣ ಮಗುವಾಗಿ, ಯಶೋದೆಯ ಹಸುಳೆಯಾಗಿ, ತುಂಟ ಬಾಲಕನಾಗಿ, ಗೋಪಿಯರ ಹೃದಯ ಗೆದ್ದ ಮೋಹನನಾಗಿ, ಸುಧಾಮನ ಮಿತ್ರನಾಗಿ, ರಾಧೆಯ ಪ್ರೇಮಿಯಾಗಿ, ಕಂಸನ ಶತ್ರುವಾಗಿ, ಅರ್ಜುನನ ಗುರುವಾಗಿ, ಗೀತಾಚಾರ್ಯನಾಗಿ… ಹೀಗೆ ಹತ್ತು ಹಲವು ಆಯಾಮಗಳಲ್ಲಿ ನಮಗೆ ಆದರ್ಶವಾಗಿ ಕಾಣುತ್ತಾನೆ. ಬಹುಶಃ ಪ್ರಪಂಚದ ಇತಿಹಾಸದಲ್ಲೇ ಶ್ರೀಕೃಷ್ಣನಷ್ಟು ಸಮಗ್ರವಾದ ವ್ಯಕ್ತಿಚಿತ್ರಣ ಬೇರೆಲ್ಲೂ ಕಾಣ ಸಿಗದು.
ಹುಟ್ಟು ಮುಖ್ಯವಲ್ಲ, ಆದರೆ ಕಟ್ಚಿಕೊಂಡ ಬದುಕು ಬಹಳ ಮುಖ್ಯವೆಂದು ಕೃಷ್ಣ ಬದುಕಿ ತೋರಿದ ರೀತಿ ಅನ್ಯಾದೃಶ. ಭಾರತೀಯರ ಪಾಲಿಗಂತೂ ಶ್ರೀಕೃಷ್ಣ ನಮ್ಮ ಸಂಸ್ಕೃತಿ, ಸಾರಗಳ ಒಟ್ಚಾರೆ ಪ್ರತೀಕವಾಗಿ ಕಾಣುತ್ತಾನೆ. ಕೃಷ್ಣನ ಕುರಿತಾಗಿ ನಮ್ಮ ಲಲಿತಕಲೆ, ಸಾಹಿತ್ಯಗಳಲ್ಲಿ ನಿರಂತರವಾಗಿ ಮಥನ ನಡೆಯುತ್ತಲೇ ಬಂದಿದೆ. ಇಂದಿಗೂ ನಮ್ಮ ಸಂಗೀತ, ನೃತ್ಯ , ಶಿಲ್ಪಕಲೆಗಳಿಗೆ ಶ್ರೀಕೃಷ್ಣನ ಲೀಲೆಗಳು ನಿರಂತರ ಸ್ಪೂರ್ತಿಯ ಸೆಲೆಯಾಗಿವೆ.
ನಮ್ಮ ಶಿವಮೊಗ್ಗದ ಖ್ಯಾತ ಪತ್ರಕರ್ತ ಎಂ. ಶ್ರೀನಿವಾಸನ್ ಬರೆದಿರುವ “ನನ್ನ ಕೃಷ್ಣ” ‘ಲೋಕೋತ್ತರ ನಾಯಕನ ಜೀವನ ಕಥನ’ ಪುಸ್ತಕ ಶೀರ್ಷಿಕೆಯಷ್ಟೇ ವಿಶೇಷವಾಗಿದೆ. ಹತ್ತಾರು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ವಿವಿಧ ಆಯಾಮಗಳಲ್ಲಿ ಕೊಡಗಿಸಿಕೊಂಡಿರುವ ಶ್ರೀನಿವಾಸನ್ ಒಬ್ಬ ಪತ್ರಕರ್ತರಾಗಿ ಎಲ್ಲರಿಗೂ ಚಿರಪರಿಚಿತರು. ಈ ಹಿಂದೆ ಶ್ರೀನಿವಾಸನ್ ಅವರಿಗೆ ತಮ್ಮ ಅಮರನಾಥ, ಮಾನಸ ಸರೋವರ, ಚಾರ್ ಧಾಮ್ ಸೇರಿದಂತೆ ಅನೇಕ ಪ್ರವಾಸ ಕಥನಗಳನ್ನು ಮನೋಜ್ಞವಾಗಿ ಪುಸ್ತಕ ರೂಪಕ್ಕೆ ಇಳಿಸಿದ ಸಮರ್ಪಕವಾದ ಅನುಭವವಿದೆ.
Vasavi School Shivamogga ಪ್ರಸ್ತುತ ಶ್ರೀನಿವಾಸನ್ ಆಯ್ಕೆ ಮಾಡಿಕೊಂಡಿರುವ ಕೃಷ್ಣನ ಜೀವನ ಕಥನ ಒಂದು ರೀತಿಯಲ್ಲಿ ಆಕಾಶದಷ್ಟು ವಿಸ್ತಾರ ಹಾಗು ಸಾಗರದ ಆಳದಷ್ಟು ಗಹನ. ಹೇಳಲು ಬಹಳಷ್ಟು ಅಧ್ಯಾಯಗಳಿವೆ. ಕೃಷ್ಣನ ಹುಟ್ಟು, ಬಾಲ್ಯ, ಗೋಕುಲ, ಬೃಂದಾವನ ಹಾಗು ಮಥುರೆ, ದ್ವಾರಕೆಯ ಕಥೆಗಳು ಒಂದಾದರೆ ಪಾಂಡವ ಪಕ್ಷಪಾತಿಯಾದ ಶ್ರೀ ಕೃಷ್ಣನ ರಾಜಕೀಯ ವರಸೆಗಳು ಇನ್ನೊಂದೆಡೆ.
ಶ್ರೀಕೃಷ್ಣನನ್ನು ಪವಾಡ ಪುರುಷನಾಗಿ ಬಿಂಬಿಸಿರುವ ಕಥೆಗಳಿಗೆ ನಮ್ಮಲ್ಲಿ ಕೊರತೆ ಇಲ್ಲ. ಆದರೆ ಶ್ರೀನಿವಾಸನ್ ತಮ್ಮ ಕೃತಿಯಲ್ಲಿ ಈ ಎಲ್ಲಾ ವಿಷಯಗಳಿಗಿಂತ ಬಹಳ ಭಿನ್ನವಾಗಿ ಶ್ರೀ ಕೃಷ್ಣನ ವ್ಯಕ್ತಿ ಚಿತ್ರಣವನ್ನು ಕಟ್ಟಿ ಕೊಡುತ್ತಾರೆ. ಈ ಕೃತಿಯಲ್ಲಿ ಶ್ರೀ ಕೃಷ್ಣ ಲೀಲೆಗಳನ್ನು ತೋರುವ ಗಾರುಡಿಗನಲ್ಲ. ಆದರೆ ಅವತ್ತಿನ ಸಮಾಜವನ್ನು ಸಲಹುವ ಮುತ್ಸದ್ಧಿಯಾಗಿ ಕಾಣಿಸುತ್ತಾನೆ. ದೇವರಾಗಿ ಕೃಷ್ಣನ ಲೀಲೆಗಳನ್ನು ಹೃದಯದಿಂದ ಪ್ರೀತಿಸುವ ನಮಗೆ, ಶ್ರೀನಿವಾಸನ್ ಈ ಪುಸ್ತಕದ ಮೂಲಕ ಕೃಷ್ಣನನ್ನು ಹಾಗು ಆತನ ನಡೆಗಳನ್ನು ಪ್ರಜ್ಞಾಪೂರ್ವಕವಾಗಿ ತಿಳಿಯುವ ಹೊಸ ಕಾಣ್ಕೆಯನ್ನು ನೀಡುತ್ತಾರೆ.
ಈ ಲೋಕದಲ್ಲಿ ಎಲ್ಲವೂ ತನ್ನ ಗತಿಯಲ್ಲಿ ನಡೆಯುತ್ತದೆ. ಆದರೆ ಗತಿ ತಪ್ಪಿದ ಕೆಲವು ನಡೆಗಳನ್ನು ಕೃಷ್ಣನಂತಹ ಲೋಕೋತ್ತರ ನಾಯಕ ಈ ಕೃತಿಯಲ್ಲಿ ನಿಭಾಯಿಸುವ ಪರಿ ಹೊಸತನದಿಂದ ಕೂಡಿದೆ. ಪವಾಡಕ್ಕೆ ಹೊರತಾಗಿ ವಾಸ್ತವತೆಗೆ ಹತ್ತಿರವಾಗುವ ಇಲ್ಲಿನ ಕಥೆಗಳಲ್ಲಿ ನೀರಸತೆ ಇಲ್ಲ. ಜನಜನಿತವಾಗಿರುವ ಭಾಗವತ, ಮಹಾಭಾರತ ಪ್ರಸಂಗಗಳನ್ನು ಈ ರೀತಿ ಹೊಸ ತಾರ್ಕಿಕ ದೃಷ್ಚಿಯಿಂದ, ಓದುಗನೂ ಒಪ್ಪುವಂತೆ ಕಟ್ಟಿಕೊಡುವುದು ಸುಲಭದ ಮಾತಲ್ಲ. ಈ ಪ್ರಯತ್ನದಲ್ಲಿ ಶ್ರೀನಿವಾಸನ್ ಗೆದ್ದಿದ್ದಾರೆ!
ಮಹಾಭಾರತ-ಭಾಗವತದ ಆಳವಾದ ಅಧ್ಯಯನ ಹಾಗೂ ನವಿರಾದ ಕಥೆ ಕಟ್ಟುವ ಧಾರಣಶಕ್ತಿ ಶ್ರೀನಿವಾಸನ್ ಅವರಿಗೆ ಸಿದ್ಧಿಸಿದೆ. ಈ ಕೃತಿಯಲ್ಲಿ ಕೃಷ್ಣನ ಚಿತ್ರಣ ಭಿನ್ನವಾದರೂ ನಮ್ಮ ಆಸ್ಥೆ-ನಂಬಿಕೆಗಳಿಗೆ ಎರವಾಗುವುದಿಲ್ಲ.
ಶ್ರೀನಿವಾಸನ್ ಅವರ ಭಾಷಾಪ್ರಯೋಗ, ಕಾವ್ಯ ಪ್ರೀತಿ ಹಾಗು ನವಿರಾದ ನಿರೂಪಣೆ ಓದುಗನನ್ನು ಈ ಕೃತಿಗೆ ಇನ್ನಷ್ಟು ಹತ್ತಿರ ಮಾಡುತ್ತದೆ ಎಂದರೆ ತಪ್ಪಾಗಲಾರದು. ಶ್ರೀಕೃಷ್ಣನ ಕುರಿತು ಅಸಂಖ್ಯಾತ ಕೃತಿಗಳಿದ್ದರೂ ಅವನ ಜೀವನವನ್ನು ಒಂದು ಹೊಸ ರೀತಿಯ ವಿಮರ್ಶಾತ್ಮಕ ನಿಲುವಿನಿಂದ ಶ್ರೀನಿವಾಸನ್ ಅವರ ಈ ಕೃತಿ ಬಲು ಅನನ್ಯವಾಗಿ ನಿಲ್ಲುತ್ತದೆ.
ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ ಹೊರತಂದಿರುವ ಈ ಕೃತಿ ಬರುವ ಭಾನುವಾರ 15ರ ಸಂಜೆ ನಮ್ಮ ಶಿವಮೊಗ್ಗದಲ್ಲಿ ಬಿಡುಗಡೆಗೊಳ್ಳಲಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿವಮೊಗ್ಗ ಘಟಕ, ಅಜೇಯ ಸಂಸ್ಕೃತಿ ಬಳಗ ಹಾಗೂ ಸಹಚೇತನ ನಾಟ್ಯಾಲಯದ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಶಾಸಕರಾದ ಶ್ರೀ ಎಸ್. ಎನ್. ಚನ್ನಬಸಪ್ಪನವರು ಕೃತಿಯನ್ನು ಬಿಡುಗಡೆಗೊಳಿಸಲಿದ್ದು, ಕನ್ನಡ ನಾಡಿನ ಖ್ಯಾತ ಕಾದಂಬರಿಕಾರ ಡಾ. ಗಜಾನನ ಶರ್ಮ ಕೃತಿಯ ಕುರಿತು ಮಾತನಾಡಲಿದ್ದಾರೆ . ವಾಸವಿ ಶಾಲೆಯ ಚಿಗುರು ಸಭಾಂಗಣದಲ್ಲಿ ನಡೆಯಲಿರುವ ಈ ಆಪ್ತ ಸಮಾರಂಭದಲ್ಲಿ ಶಿವಮೊಗ್ಗದ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಊರಿನ ಸಾಧಕನ್ನು ಅಭಿನಂದಿಸಬೇಕೆಂದು ಆತ್ಮೀಯ ವಿನಂತಿ.
Karnataka Sanga ಕರ್ನಾಟಕ ಸಂಘ ಏರ್ಪಡಿಸಿದ್ದ ಗಾಯನ ಸ್ಪರ್ಧೆ. ಬಹುಮಾನ ವಿತರಣೆಗೆ ಸುಪ್ರಿಯಾ ರಘುನಂದನ್ ಅತಿಥಿ
Karnataka Sanga ದಿನಾಂಕ 14-12-2024 ಶನಿವಾರ ಸಂಜೆ 5:30ಕ್ಕೆ ಕರ್ನಾಟಕ ಸಂಘದ ಭವನದಲ್ಲಿ ಭಾವಗೀತೆ ಗಾಯನ ಸ್ಪರ್ಧೆ ವಿಜೇತರಿಗೆ ‘ಬಹುಮಾನ ವಿತರಣೆ’ ಹಾಗೂ ‘ಭಾವ ಸಂಧ್ಯಾ’ ಆಯ್ದ ಭಾವಗೀತೆಗಳ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಡಾ. ಶಿವಮೊಗ್ಗ ಸುಬ್ಬಣ್ಣ, ಅವರ ಸಹೋದರರು ಮತ್ತು ಸಹೋದರಿ ಸ್ಥಾಪಿಸಿರುವ ದಿ|| ರಂಗನಾಯಕಮ್ಮ ಗಣೇಶರಾವ್ ದತ್ತಿನಿಧಿ ಪ್ರಾಯೋಜಿತ ದಿ: 30-11-2024ರಂದು ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಅಯೋಜಿಸಿದ್ದ ಕನ್ನಡ ಭಾವಗೀತೆ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಿವಮೊಗ್ಗ ಸುಬ್ಬಣ್ಣನವರ ೮೬ನೇ ಹುಟ್ಟುಹಬ್ಬದ ದಿನವಾದ ಡಿಸೆಂಬರ್ 14ರಂದು ಬಹುಮಾನ ವಿತರಣೆ ಸಮಾರಂಭ ಇರುತ್ತದೆ.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುಪ್ರಿಯಾ ರಘುನಂದನ್, ಪ್ರಸಿದ್ಧ ಗಾಯಕರು, ಬೆಂಗಳೂರು ಇವರು ಭಾಗವಹಿಸಲಿದ್ದಾರೆ.
ಸುಪ್ರಿಯಾ ರಘುನಂದನ್ (ಸುಪ್ರಿಯಾ ಆಚಾರ್ಯ) ಕನ್ನಡ ಸುಗಮ ಸಂಗೀತ ಕ್ಷೇತ್ರದ ಯುವ ಕಲಾವಿದರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಹೆಸರು.
Karnataka Sanga ಸಂಗೀತ ಕ್ಷೇತ್ರದ ಪ್ರಸಿದ್ಧ ಕಲಾವಿದರಾದ ಎಸ್.ಪಿ. ಬಾಲಸುಬ್ರಮಣ್ಯಂ, ವಾಣಿ ಜಯರಾಂ, ಪಿ. ಸುಶೀಲ, ಶಿವಮೊಗ್ಗ ಸುಬ್ಬಣ್ಣ, ರಾಜು ಅನಂತಸ್ವಾಮಿ, ರತ್ನಮಾಲ ಪ್ರಕಾಶ್ ಹಾಗೂ ಪುತ್ತೂರು ನರಸಿಂಹ ನಾಯಕ್ ಅವರೊಂದಿಗೆ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಸುಪ್ರಿಯಾ ಅವರಿಗೆ ಸಿ. ಅಶ್ವಥ್ ಅವರ ಪರಿಕಲ್ಪನೆಯಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮ “ಕನ್ನಡವೇ ಸತ್ಯ” ಕಾರ್ಯಕ್ರಮದಲ್ಲಿ ಹಾಡಿರುವ ಹೆಗ್ಗಳಿಕೆ ಇದೆ.
ಅಮೇರಿಕದ “ಅಕ್ಕ” ಕನ್ನಡ ಸಮ್ಮೇಳನ, ಹಾಂಕಾಂಗ್ ಕನ್ನಡ ಕೂಟ ಸೇರಿದಂತೆ ಹಲವಾರು ಪ್ರಮುಖ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಸುಪ್ರಿಯಾ ಅವರು ಕನ್ನಡ ಚಲನಚಿತ್ರಗಳಿಗೆ (ಅಮೃತಧಾರೆ, ರಂಗಿ ತರಂಗ, ಮೆರವಣಿಗೆ, ಮೀರ ಮಾಧವ) ಹಿನ್ನೆಲೆ ಗಾಯಕಿಯಾಗಿಯೂ ಜನಪ್ರಿಯರಾಗಿದ್ದಾರೆ.
ಸಂಘದ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತಿç ಅಧ್ಯಕ್ಷತೆಯನ್ನು ವಹಿಸಲಿದ್ದಾರೆ,
ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳ ಬೇಕೆಂದು ಈ ಮೂಲಕ ವಿನಂತಿಸಲಾಗಿದೆ.
B.Y. Vijayendra ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಸಿಎಂ ಕ್ಷಮೆಯಾಚಿಸಬೇಕು- ಬಿ.ವೈ.ವಿಜಯೇಂದ್ರ
B.Y. Vijayendra ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಮುಖ್ಯಮಂತ್ರಿಗಳ ಕುಮ್ಮಕ್ಕಿನಿಂದಲೇ ಹತ್ತಿಕ್ಕುವ ಕೆಲಸವಾಗಿದೆ. ಲಾಠಿ ಚಾರ್ಜ್, ಹಿಂಸೆಯ ಮೂಲಕ ಪಂಚಮಸಾಲಿ ಹೋರಾಟಗಾರರನ್ನು ಬೆದರಿಸಲು ಯತ್ನಿಸಿದ ಷಡ್ಯಂತ್ರ ಅಕ್ಷಮ್ಯ ಅಪರಾಧ. ಸಿದ್ದರಾಮಯ್ಯ ಅವರು ಈ ಕೂಡಲೇ ಕ್ಷಮೆಯಾಚಿಸಬೇಕು.
B.Y. Vijayendra ಸರ್ಕಾರ ಈ ಕೂಡಲೇ ಲಾಠಿ ಚಾರ್ಜ್ ನಡೆಸಿದ, ದರ್ಪದಿಂದ ಮೆರೆದ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸುತ್ತೇನೆ. ಸದನದಲ್ಲೂ ಈ ವಿಚಾರವನ್ನು ಪ್ರಸ್ತಾಪಿಸುತ್ತೇವೆ.
ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
