Sunday, September 27, 2026
Sunday, September 27, 2026

Rotary School in Shivamogga ಕ್ರೀಡೆಗಳಲ್ಲಿ ಸೋಲು ಗೆಲುವಿಗಿಂತ ಸ್ಪರ್ಧಾತ್ಮಕವಾಗಿ ಭಾಗವಹಿಸುವಿಕೆ ಮುಖ್ಯ- ಕಡಿದಾಳ್ ಗೋಪಾಲ್

Date:

Rotary School in Shivamogga ಬಾಲ್ಯದಲ್ಲಿಯೇ ಬೆಳೆಸಿಕೊಂಡ ಕ್ರೀಡಾ ಮನೋಭಾವವು ಮಕ್ಕಳ ದೈಹಿಕ, ಮಾನಸಿಕ ಹಾಗು ಭಾವನಾತ್ಮಕ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೆಷನಲ್ & ಛಾರಿಟಬಲ್ ಟ್ರಸ್ಟ್ನ ಪೇಟ್ರನ್ ಟ್ರಸ್ಟಿ, ರೊ. ಡಾ. ಕಡಿದಾಳ್ ಗೋಪಾಲ್ ಅವರು ಅಭಿಪ್ರಾಯ ಪಟ್ಟರು. ಅವರು ರಾಜೇಂದ್ರನಗರದಲ್ಲಿರುವ ರೋಟರಿ ಪೂರ್ವ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕ್ರೀಡೋತ್ಸವದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಈ ಮೇಲಿನಂತೆ ಅಭಿಪ್ರಾಯ ಪಟ್ಟರು.
Rotary School in Shivamogga ನಾವೆಲ್ಲಾ ಚಿಕ್ಕವರಿದ್ದಾಗ ಚಿನ್ನಿದಾಂಡು, ಬುಗುರಿ ಆಟ, ಲಗೋರಿ ಮುಂತಾದ ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿದ್ದರ ಪರಿಣಾಮವಾಗಿ ಕ್ರೀಡಾ ಮನೋಭಾವವನ್ನು ಬೆಳೆಸಿಕೊಂಡಿದ್ದು, ಇಂದಿಗೂ ಕೂಡ ಆ ಮಧುರ ನೆನಪುಗಳು ಹಚ್ಚಹಸಿರಾಗಿವೆ ಎಂದರು. ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಸ್ಫರ್ಧಾತ್ಮಕವಾಗಿ ಭಾಗವಹಿಸುವುದು ಮುಖ್ಯವೇ ಹೊರತು ಸೋಲು-ಗೆಲುವು ಮುಖ್ಯವಲ್ಲ. ಜೊತೆಗೆ ಕ್ರೀಡಾ ಸ್ಪರ್ಧೆಗಳಲ್ಲಿನ ಸೋಲು-ಗೆಲುವುಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕು. ಈ ನಿಟ್ಟಿನಲ್ಲಿ ರೋಟರಿ ಪೂರ್ವ ಶಾಲೆಯಲ್ಲಿ ಏರ್ಪಡಿಸಿರುವ ವಿವಿಧ ಕ್ರೀಡೆಗಳು ಹಾಗೂ ಆಟೋಟ ಸ್ಫರ್ಧೆಗಳು ಮಕ್ಕಳನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ಬೆಳೆಸುವಲ್ಲಿ ಸಹಾಯಕವಾಗಿವೆ ಎಂದು ಹಾರೈಸಿದರು.
ಟ್ರಸ್ಟ್ನ ಉಪಾಧ್ಯಕ್ಷರಾದ ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್ ಮಾತನಾಡುತ್ತಾ, ವಿದ್ಯಾರ್ಥಿಗಳು ಈ ಹಂತದಲ್ಲಿಯೇ ಪ್ರತಿದಿನ ವ್ಯಾಯಾಮ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಆರೋಗ್ಯಕರವಾದ ಬದುಕನ್ನು ರೂಪಿಸಿಕೊಳ್ಳಬೇಕೆಂದು ಕರೆಕೊಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ, ರೊ. ಚಂದ್ರಶೇಖರಯ್ಯ ಎಂ., ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕ್ರೀಡಾಂಗಣವು ಒಂದು ಪವಿತ್ರ ಸ್ಥಳವಾಗಿದ್ದು, ಅಲ್ಲಿ ತಯಾರಾದ ಕ್ರೀಡಾಪಟುಗಳು ಸಮಷ್ಠಿ ವ್ಯಕ್ತಿತ್ವವನ್ನು ಬೆಳೆಸಿಕೊಂಡು ದೇಶದ ರಕ್ಷಕರಾಗಬಲ್ಲರು ಎಂಬುದನ್ನು, ಲಂಡನ್‌ನಲ್ಲಿರುವ ಈಡನ್ ಆಟದ ಮೈದಾನದಲ್ಲಿ ತಯಾರಾದ ಕ್ರೀಡಾಪಟುಗಳು ಮುಂದೆ ದೇಶದ ಯೋಧರಾಗಿ ಹೇಗೆ ವಾರ‍್ಲೂ ಕದನವನ್ನು ಫ್ರಾನ್ಸ್ನ ನೆಪೋಲಿಯನ್ ಅಂತಹ ಸಾಮ್ರಾಜ್ಯಶಾಹಿಯ ವಿರುದ್ಧ ಗೆದ್ದರು ಎಂಬ ಉದಾಹರಣೆಯನ್ನು ನೀಡುತ್ತಾ ಮನವರಿಕೆ ಮಾಡಿದರು. ಹಾಗಾಗಿ ಶಾಲೆಯಲ್ಲಿ ಎಲ್ಲ ಮಕ್ಕಳಲ್ಲೂ ಇರುವ ಕ್ರೀಡಾ ಪ್ರತಿಭೆಯನ್ನು ಹೊರತೆಗೆದು ಅವರನ್ನು ದೇಸದ ಆಸ್ತಿಯನ್ನಾಗಿ ಮಾಡುವಲ್ಲಿ ಶಾಲಾ ಕ್ರೀಡಾಕೂಟಗಳು ಪ್ರಮುಖ ಪಾತ್ರವಹಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಕಾರ್ಯದರ್ಶಿ ರೊ. ಎಸ್.ಸಿ. ರಾಮಚಂದ್ರ, ಖಜಾಂಚಿ ರೊ. ವಿಜಯ್ ಕುಮಾರ್ ಜಿ., ಜಂಟಿ ಕಾರ್ಯದರ್ಶಿ, ರೊ. ನಾಗವೇಣಿ ಎಸ್.ಆರ್. ಮತ್ತು ವಿಶೇಷ ಆಹ್ವಾನಿತರಾದÀ ಟ್ರಸ್ಟಿ ರೊ. ಮಂಜುನಾಥ್ ಎನ್.ಬಿ., ಹಾಗೂ ಶಾಲೆಯ ಪ್ರಾಂಶುಪಾಲ ಶ್ರೀ ಸೂರ್ಯನಾರಾಯಣ್ ಆರ್. ಇವರು ಭಾಗವಹಿಸಿ ವಿಜೇತರಿಗೆ ಬಹುಮಾನ ವಿರತಣೆ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಪ್ರದೀಪ್ ಕುಮಾರ್ ಎಸ್ ಇವರು ನಿರೂಪಣೆ ಮಾಡಿದ್ದು, ಶ್ರೀಮತಿ ಶ್ವೇತಾ ಎ.ಟಿ. ಇವರು ಸ್ವಾಗತಿಸಿದರೆ, ಶ್ರೀಮತಿ ರೂಪ ಎಸ್. ರಾವ್ ಇವರು ವಂದಿಸಿದರು. ಕ್ರೀಡಾಕೂಟದ ಬಹುಮಾನವನು ಟ್ರಸ್ಟಿ ರೊ. ಎಂ.ಸಿ. ಹೇಮಂತ್ ಇವರು ಪ್ರಾಯೋಜಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...