Monday, March 23, 2026
Monday, March 23, 2026
Home Blog Page 474

Kannada Sahitya Sammelana ಡಿಸೆಂಬರ್ 20 ರಿಂದ 22ವರೆಗೆ ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮೇಳನ

0

Kannada Sahitya Sammelana 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯದಲ್ಲಿ ಡಿಸೆಂಬರ್‌ 20, 21, 22 ರಂದು ಜರುಗಲಿದೆ. ಜನಪದ ವಿದ್ವಾಂಸರಾದ ಗೋ.ರು.ಚನ್ನಬಸಪಪ್ಪನವರು ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಹಿಂದೆ ಜೂನ್‌ ತಿಂಗಳಲ್ಲಿ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ಇದೀಗ ಡಿಸೆಂಬರ್‌ ತಿಂಗಳಲ್ಲಿ ಸಮ್ಮೇಳನ ವೈಭವದಿಂದ ನಡೆಯಲಿದೆ. ರಾಜ್ಯದ, ಹೊರರಾಜ್ಯ ಹಾಗೂ ವಿದೇಶದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮ್ಮೇಳನದಲ್ಲಿ ಭಾಗವಹಿಸುವಂತೆ
ಮುಖ್ಯಮಂತ್ರಿ ಸಿದ್ಧರಾಮಯ್ಯ ಮನವಿ ಮಾಡಿದ್ದಾರೆ.

Kannada Sahitya Sammelana ಮಂಡ್ಯದಲ್ಲಿ 48 ನೇ ಸಾಹಿತ್ಯ ಸಮ್ಮೇಳನ 1974 ರಲ್ಲಿ ಜಯದೇವಿ ತಾಯಿ ಲಿಗಾಡೆ ಅವರ ಅಧ್ಯಕ್ಷತೆಯಲ್ಲಿ, 63 ನೇ ಸಾಹಿತ್ಯ ಸಮ್ಮೇಳನ 1994 ರಲ್ಲಿ ಡಾ. ಚದುರಂಗ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

ಸಮ್ಮೇಳನದ ಅವಧಿಯಲ್ಲಿ ಕನ್ನಡಿಗರು ತಮ್ಮ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಮನವಿ ಮನವಿ ಮಾಡಿಕೊಂಡಿದೆ.

Shivamogga City Corporation ಗಬ್ಬು‌ ನಾರುತ್ತಿರುವ ಶಿವಮೊಗ್ಗ ನಗರ ಪಾಲಿಕೆ ಇ.ಟಾಯ್ಲೆಟ್ ಗಳು

0

Shivamogga City Corporation ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಅಡಿಯಲ್ಲಿ ಒಟ್ಟು 33 ಇ-ಶೌಚಲಾಯಗಳನ್ನು ನಿರ್ಮಿಸಲಾಗಿದ್ದು,ನಿರ್ವಹಣೆ ಇಲ್ಲದೆ ಇ-ಶೌಚಾಲಯಗಳು ಸಾಂಕ್ರಮಿಕ ರೋಗದ ತಾಣವಾಗಿವೆ.

ಶಿವಮೊಗ್ಗದ ಮಹಾನಗರ ಪಾಲಿಕೆ ಆವರಣ,ಗೋಪಿ ಸರ್ಕಲ್, ಅಚ್ಯುತರ ಲೇಔಟ್ ಸೇರಿದಂತೆ ಹಲವೆಡೆ ಇರುವ ಇ-ಶೌಚಾಲಯಗಳಿಗೆ ಸ್ವಚ್ಛತೆ ಇಲ್ಲ ಗಬ್ಬು ನಾರುತ್ತಿವೆ.

ಈಗಾಗಲೇ ಶೌಚಾಲಯವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ.

Shivamogga City Corporation ಇ- ಶೌಚಾಲಯಗಳಿಗೆ ಹೋದರೆ ಆಸ್ಪತ್ರೆಯ ಆದಿ ಹಿಡಿಯೋದೆಂತು ಗ್ಯಾರಂಟಿ ಎಂಬಂತಾಗಿದೆ.

ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಇತ್ತ ಗಮನಿಸಿದ ಅಧಿಕಾರಿಗಳಿಗ ನಡೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Basavaraja Bommai ಮುಖ್ಯಮಂತ್ರಿಗಳು ನಮ್ಮ ಸರ್ಕಾರವು ನೀಡಿದ್ದ ಅಫಿಡವಿಟ್ಟನ್ನು ಸರಿಯಾಗಿ ಓದಬೇಕು. ಎಲ್ಲ ಅರ್ಥವಾಗುತ್ತದೆ- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

0

Basavaraja Bommai ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದವರು 2 ಎ ಮೀಸಲಾತಿಗಾಗಿ ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನೆ ಮೇಲೆ ಕರ್ನಾಟಕ ಸರ್ಕಾರವು ಪೋಲಿಸರ ಮೂಲಕ ಲಾಠಿಚಾರ್ಜ್ ಮಾಡಿಸುವ ಮೂಲಕ ಕ್ಷಮಿಸಲಾರದ ತಪ್ಪು ಮಾಡಿದ್ದು, ಇದಕ್ಕೆ ಬೆಲೆ ತೆರಬೇಕಾಗುತ್ತದೆ.

ಇದು ಜನ ವಿರೋಧಿ ಸರ್ಕಾರ ಅಂತ ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ. ವಿಶೇಷವಾಗಿ ರೈತರ ವಿರುದ್ದ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಕಾಲಕಾಲಕ್ಕೆ ಪ್ರವಾಹ, ಬರಗಾಲದ ಪರಿಹಾರ ಕೊಟ್ಟಿಲ್ಲ, ನಾವು ಜಾರಿ ತಂದ ಯೋಜನೆಗಳಿಗೆ ತಿಲಾಂಜಲಿ ಇಟ್ಟಿದ್ದಾರೆ. ರಾಜ್ಯ ಸರ್ಕಾರ ನೀಡುತ್ತಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸ್ಥಗಿತಗೊಳಿಸಿದ್ದಾರೆ.

ನಾನು ಸಿಎಂ ಆಗಿದ್ದಾಗ ರೈತರ ಮಕ್ಕಳಿಗಾಗಿ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ ಯೋಜನೆ ನಿಲ್ಲಿಸಿದ್ದಾರೆ. ಒಂದು ರೀತಿಯಲ್ಲಿ ರೈತ ವಿರೋಧಿ ಮತ್ತು ಜನ ವಿರೋಧಿ ಸರ್ಕಾರ ಇದಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಅದೇ ಹಿಂದುಳಿದ ವರ್ಗ ಹೆಚ್ಚಿನ ಮೀಸಲಾತಿ ಕೇಳುತ್ತಿರುವ ಸಂದರ್ಭದಲ್ಲಿ ಸಮಾಧಾನದಿಂದ ನ್ಯಾಯಸಮ್ಮತ ತೀರ್ಮಾನ ಮಾಡಬೇಕಿತ್ತು. ಪಂಚಮಸಾಲಿ ಪೀಠದ ಸ್ವಾಮೀಜಿವರು ತಮ್ಮನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಈಗ ಪ್ರತಿಭಟನೆ ಮಾಡುವವರ ಮೇಲೆ ಲಾಠಿ ಚಾರ್ಜ್ ಮಾಡಿ ರಕ್ತ ಬರುವಂತೆ ಮಾಡಿದ್ದು, ಕ್ಷಮಿಸಲಾರದಂತಹ ಅಪರಾಧ, ಇದಕ್ಕೆ ರಾಜ್ಯ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ. ಪೋಲಿಸ್ ಆಡಳಿತ, ದೌರ್ಜನ್ಯ ಬಹಳ ದಿನ ನಡೆಯುವುದಿಲ್ಲ.

Basavaraja Bommai ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಫಿಡವಿಟ್ ಬಗ್ಗೆ ಮಾತನಾಡಿದ್ದಾರೆ. ಮೀಸಲಾತಿ ಹೆಚ್ಚಳದ ಬಗ್ಗೆ ನಾವೇ ಆದೇಶ ಮಾಡಿದ್ದೇವೆ. ವೀರಶೈವ ಲಿಂಗಾಯತ ಸಮುದಾಯದ ಮೀಸಲಾತಿ 5% ರಿಂದ 7 ಕ್ಕೆ ಹೆಚ್ಚಿಸಿದ್ದೇವೆ. ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು 4%.ರಿಂದ 6% ಕ್ಕೆ ಹೆಚ್ಚಳ ಮಾಡಿದ್ದೇವೆ. ನಾವೇ ಆದೇಶ ಮಾಡಿ, ನಾವೇ ಯಾಕೆ ತಡೆಯಾಜ್ಞೆ ತರುತ್ತೇವೆ. ಸಿದ್ದರಾಮಯ್ಯ ಅವರ ಬೆಂಬಲಿಗರೇ ಹಿನ್ನೆಲೆಯಲ್ಲಿ ನಿಂತು ಕೋರ್ಟ್ ಗೆ ಹೋದವರು. ಆಗ ನಾವು ಪೂರ್ಣ ವಾದ ಮಾಡಲು ಸಿದ್ದರಿದ್ದೇವೆ ಎಂದು ಹೇಳಿದ್ದೇವು. ಆಗ ಸುಪ್ರೀಂ ಕೋರ್ಟ್ ಇದನ್ನು ಸಂಪೂರ್ಣ ವಾದ ಆಲಿಸಿ ತೀರ್ಪು ಕೊಡುತ್ತೇವೆ‌. ಅಲ್ಲಿಯವರೆಗೂ ರಾಜ್ಯ ಸರ್ಕಾರ ಈ ಆದೇಶ ಜಾರಿ ಮಾಡಬಾರದು ಅಂತ ಹೇಳಿತ್ತು. ನಾವು ಮುಂದಿನ ವಿಚಾರಣೆವರೆಗೂ ನಾವು ಈ ಆದೇಶ ಜಾರಿ ಮಾಡುವುದಿಲ್ಲ ಎಂದು ಹೇಳಿದ್ದೇವು. ಅದು ಬಿಟ್ಟು ನಾವು ಶಾಸ್ವತವಾಗಿ ನಮ್ಮ ಆದೇಶ ಹಿಂಪಡೆಯುತ್ತೇವೆ ಅಂತ ಹೇಳಿರಲಿಲ್ಲ. ಇದೆಲ್ಲ ಗೊತ್ತಿದ್ದರೂ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಓದುತ್ತೇನೆ ಅಂತ ಹೇಳಿದ್ದಾರೆ‌. ಆದರೆ, ಸುಪ್ರೀಂ ಕೋರ್ಟ್ ಆದೇಶವನ್ನೇ ಮಾಡಿಲ್ಲ. 2023 ರ ಜೂನ್ ತಿಂಗಳಲ್ಲಿ ವಿಚಾರಣೆ ಮುಂದೂಡಿದ್ದರು. ಈ ಸರ್ಕಾರಕ್ಕೆ ಕಾಳಜಿ ಇಲ್ಲ. ಈ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಈ ಸರ್ಕಾರದ ನಿಲುವು ಏನು ಅಂತ ಕೂಡ ಹೇಳುತ್ತಿಲ್ಲ.
ನಾವು ಮುಂದಿನ ವಿಚಾರಣೆವರೆಗೆ ಮಾತ್ರ ಅಂತ ಸ್ಪಷ್ಟವಾಗಿ ಹೇಳಿದ್ದೇವೆ. ಇವರು ಓಲೈಕೆ ರಾಜಕಾರಣ ಮಾಡಲು ಪಂಚಮಸಾಲಿ ಸಮುದಾಯದ ನ್ಯಾಯಯುತ ಬೇಡಿಕೆಗೆ ಅನ್ಯಾಯ ಮಾಡುತ್ತಿದೆ. ಇದನ್ನು ಪ್ರತಿಪಕ್ಷಗಳು ಈಗಾಗಲೇ ಹೇಳಿವೆ. ಮುಖ್ಯಮಂತ್ರಿಗಳು ನಾವು ಸಲ್ಲಿಸಿದ್ದ ಅಫಿಡವಿಟನ್ನು ಪೂರ್ಣಪ್ರಮಾಣದಲ್ಲಿ ಸರಿಯಾದ ಅರ್ಥದಲ್ಲಿ ಓದಿದರೆ ಬಹಳ ಸ್ಪಷ್ಟವಾಗುತ್ತದೆ. ದಾರಿ ತಪ್ಪಿಸುವ ಕೆಲಸ ಆಗಬಾರದು.

Karnataka Amateur Boxing Association ಜಿಲ್ಲೆಯಲ್ಲಿ ಮೊದಲ ಬಾರಿಗೆ ಡಿ. 12 & 13 ರಂದು ಎಲೈಟ್ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿ

0

Karnataka Amateur Boxing Association ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಮತ್ತು ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಲೈಟ್(18 ವರ್ಷ ಮೇಲ್ಪಟ್ಟ) ರಾಜ್ಯ ಮಟ್ಟದ ಬಾಕ್ಸಿಂಗ್ ಪಂದ್ಯಾವಳಿ ನಡೆಯಲಿದ್ದು ಪಂದ್ಯಾವಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 100 ಕ್ರೀಡಾಪಟುಗಳು ಆಗಮಿಸುತ್ತಿದ್ದಾರೆ. ಪಂದ್ಯಾವಳಿಯಲ್ಲಿ 10 ವಿವಿಧ ತೂಕದ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು ಇದರಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ (ಭಾರತ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆ) ಆಯೋಜಿಸುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ ಇದು ಕ್ರೀಡಾಪಟುಗಳಿಗೆ ಬಹುಮುಖ್ಯವಾದ ಕ್ರೀಡೆಯಾಗಿದ್ದು ಬಾಕ್ಸಿಂಗ್ ಭಾರತ ಸರ್ಕಾರದಲ್ಲಿ ಅತಿ ಪ್ರಾಮುಖ್ಯತೆಯುಳ್ಳ ಕ್ರೀಡಾಪಟ್ಟಿಯಲ್ಲಿ ಇದ್ದು ರಾಷ್ಟ್ರಮಟ್ಟದಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ಸ್ಕಾಲರ್ಶಿಪ್ ಕ್ರೀಡಾ ಕೋಟಾದಡಿ ಉದ್ಯೋಗ ಸರ್ಕಾರದ ಹಲವು ಸೌಲಭ್ಯಗಳು ದೊರೆಯುತ್ತದೆ.
Karnataka Amateur Boxing Association ಮತ್ತು ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಗುತ್ತದೆ ಹಾಗಾಗಿ ರಾಜ್ಯದ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು ಸಾಕಷ್ಟು ಅಭ್ಯಾಸ ಮಾಡಿ ಈ ಪಂದ್ಯಾವಳಿಗೆ ಬರುವುದರಿಂದ ಪಂದ್ಯಾವಳಿಗಳು ಸಾಕಷ್ಟು ರೋಮಾಂಚನವಾಗಿರುತ್ತದೆ
ಮತ್ತು ನಾಳೆ ಬೆಳಗ್ಗೆ 11 ಗಂಟೆಗೆ
ಪಂದ್ಯಾವಳಿ ಉದ್ಘಾಟನೆಯನ್ನು ಮಾಜಿ ಉಪ ಮುಖ್ಯಮಂತ್ರಿಗಳು ಆದ ಶ್ರೀ ಕೆಎಸ್ ಈಶ್ವರಪ್ಪನವರು
ಮಾಡಲಿದ್ದು ಕ್ರೀಡಾಕೂಟಕ್ಕೆ ಚಾಲನೆಯನ್ನು ಶ್ರೀ ಮಿಥುನ್ ಕುಮಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಡಲಿದ್ದು
ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡರಾದ ಶ್ರೀ ಎಚ್ ಸಿ ಯೋಗೇಶ್ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಾಯಿ ಸತೀಶ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯ ನಾಯಕ್ ಮೆಟ್ರೋ ಹಾಸ್ಪಿಟಲ್ ಸಿಇಓ ಡಾಕ್ಟರ್ ತೇಜಸ್ವಿ ಸೇರಿದಂತೆ ಬಿಜೆಪಿ ಮುಖಂಡರಾದ ರಾಜೇಶ್ ಕಾಮತ್ ದಿವಾಕರ್ ಶೆಟ್ಟಿ ವಿಶ್ವನಾಥ್ ಅರುಣ್ ಬಾಬು ಭಾಗವಹಿಸಲಿದ್ದು
ಪಂದ್ಯಾವಳಿಗೆ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ
ಕ್ವಾಲಿಫೈಡ್ ತೀರ್ಪುಗಾರರು ಆಗಮಿಸುತ್ತಿದ್ದಾರೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

Rotary Club Shivamogga ರಸಪ್ರಶ್ನೆ ಸ್ಪರ್ಧೆಯಿಂದ ಮಕ್ಕಳಲ್ಲಿ ಜ್ಞಾನ & ಕೌಶಲ್ಯ ವೃದ್ಧಿ-ಕಿರಣ್ ಕುಮಾರ್

0

Rotary Club Shivamogga ರಸಪ್ರಶ್ನೆ ಕಾರ್ಯಕ್ರಮದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ, ಜ್ಞಾನ ಹಾಗೂ ಕೌಶಲ್ಯ ಸಾಮರ್ಥ್ಯಗಳು ವೃದ್ಧಿಸುತ್ತವೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಮೇಲಿನ ಹನಸವಾಡಿಯ ತುಂಗಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಸಪ್ರಶ್ನೆ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರೋಟರಿ ಸಂಸ್ಥೆಯು ಸಮಾಜಮುಖಿ ಕಾರ್ಯಕ್ರಮಗಳ ಜತೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದೆ. ಅನೇಕ ಸೇವಾಕೊಡುಗೆಗಳನ್ನು ಸಹ ನಡೆಸುತ್ತಿದೆ ಎಂದರು.

Rotary Club Shivamogga ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಶಿಕ್ಷಕ ಜೆ.ಡಿ.ಬಸವರಾಜ್ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲೂ ಸಾಕಷ್ಟು ಪ್ರತಿಭೆ ಇದೆ. ಇಂತಹ ರಸಪ್ರಶ್ನೆ ಕಾರ್ಯಕ್ರಮಗಳು ಅವರ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ ಎಂದು ತಿಳಿಸಿದರು.

ರವಿ ಕೊಟೋಜಿ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ರಸಪ್ರಶ್ನೆಗಳು ತುಂಬಾ ಪೂರಕವಾಗಿವೆ. ಮುಂಬರುವ ಪರೀಕ್ಷೆಗಳಲ್ಲಿ ಅವರಿಗೆ ಸಂಪೂರ್ಣ ಸಹಕಾರ ಸಿಗುತ್ತದೆ. ಇಂದಿನ ವಿದ್ಯಾಭ್ಯಾಸದಲ್ಲಿ ಒಂದೊಂದು ಅಂಕಗಳು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇಂತಹ ರಸಪ್ರಶ್ನೆ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ರೋಟರಿ ಕ್ಲಬ್ ಸೆಂಟ್ರಲ್‌ನ ರಮೇಶ್.ಎನ್ ಕಾರ್ಯಕ್ರಮದ ಸಂಯೋಜನೆ ಮಾಡಿದ್ದರು. ಜಿಲ್ಲಾ ಸಾಂಸ್ಕೃತಿಕ ವೈಸ್ ಚೇರ್ಮನ್ ಧರ್ಮೇಂದ್ರ ಸಿಂಗ್ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ದೀಪಾ ಶೆಟ್ಟಿ, ಜ್ಯೋತಿ ಶ್ರೀರಾಮ್, ರಾಜಶ್ರೀ ಬಸವರಾಜ್, ಅನ್ ಅಧ್ಯಕ್ಷೆ ಗೀತಾ ಜಗದೀಶ್, ಕಾರ್ಯದರ್ಶಿ ಶುಭಾ ಚಿದಾನಂದ್, ತುಂಗಾ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

CM Siddharamaiah ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಟ್ಯಾಗ್. ವಿಧಾನ ಸಭೆಯಲ್ಲಿ ಸಿಎಂ ಸ್ಪಷ್ಟೀಕರಣ

0

CM Siddharamaiah ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ವಿಚಾರವಾಗಿ ಹಿಂದಿನ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡವಿಟ್ ಹಾಗೂ ನ್ಯಾಯಾಲಯದ ಆದೇಶವನ್ನು ಸದನದ ಮುಂದೆ ಮಂಡಿಸಲಾಗುವುದು.

ಪಂಚಮಸಾಲಿಗಳನ್ನು 2ಎ ಸೇರಿಸಲು ಬಹಳ ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ನಾನು ಮುಖ್ಯಮಂತ್ರಿಯಾದ ಮೇಲೆ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಪಂಚಮಸಾಲಿ ಮುಖಂಡರೊಂದಿಗೆ ಎರಡು ಬಾರಿ ಸಭೆ ನಡೆಸಿದ್ದೇನೆ. ಪಂಚಮಸಾಲಿಗಳು ಮೀಸಲಾತಿ ಕೇಳಲು ನಾನು ಅಡ್ಡಿಯಾಗಿಲ್ಲ.
ಎಂದು ಸಿಎಂ ಸಿದ್ಧರಾಮಯ್ಯ ಸದನ ಕಲಾಪದಲ್ಲಿ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಎ ಹಾಗೂ ಪ್ರವರ್ಗ-3ಬಿ ಎಂದು ವಿಂಗಡಸಲಾಗಿದೆ. ವೀರಶೈವ ಲಿಂಗಾಯಿತ ಹಾಗೂ ಪಂಚಮಸಾಲಿ ಜಾತಿಗಳು 3ಬಿ ಅಡಿ ಮೀಸಲಾತಿ ಪಡೆಯುತ್ತಿವೆ. ಪಂಚಮಸಾಲಿಗಳನ್ನು 2ಎ ಸೇರಿಸಲು ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗದ ಮುಂದೆ ಮೀಸಲಾತಿ ವಿಚಾರವನ್ನು ಮಂಡಿಸುವಂತೆ ಪಂಚಮಸಾಲಿ ಹೋರಾಟಗಾರರಿಗೆ ತಿಳಿಸಿದ್ದೇನೆ ಎಂಬುದಾಗಿ ಂಉಖ್ಯಮಂತ್ರಿ ಸಿದ್ಧರಾಮಯ್ಯನವರು ವಿಧಾನಸಭೆಯಲ್ಲಿ
ತಿಳಿಸಿದ್ದಾರೆ.

CM Siddharamaiah ಹಿಂದಿನ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಪಂಚಮಸಾಲಿಗಳನ್ನು 2ಎ ಸೇರಿಸಿಲ್ಲ ಬದಲಾಗಿ, ಅಲ್ಪಸಂಖ್ಯಾತರಿಗೆ ನೀಡಿದ್ದ ಶೇ.4 ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, 3ಎ ಹಾಗೂ 3ಬಿ ಗೆ ತಲಾ ಶೇ.2 ರಂತೆ ಮೀಸಲಾತಿ ಹಂಚಿಕೆ ಮಾಡಿತ್ತು. ಇದನ್ನು ಆಕ್ಷೇಪಿಸಿ ಮುಸ್ಲಿಂಮರು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಹಿಂದಿನ ಬಿಜೆಪಿ ಸರ್ಕಾರ ಮುಸ್ಲಿಂಮರ ಮೀಸಲಾತಿ ರದ್ದು ಪಡಿಸುವುದಿಲ್ಲ. ಯತಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ಅಫಿಡವಿಡ್ ಸಲ್ಲಿಸಿದೆ. ಇದರ ಆಧಾರದ ಮೇಲೆ ಸರ್ವೋಚ್ಛ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಆದೇಶವನ್ನು ಬದಲಾಯಿಸಲು ಯಾರಿಂದಲೂ ಸಾದ್ಯವಿಲ್ಲ. ಇದರ ಪ್ರತಿಯನ್ನು ನಾಳೆಯೇ ಸದನದ ಮುಂದೆ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿಗಳು
ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆ ಸಂಬಂಧ ಸದನದಲ್ಲಿ ಹೇಳಿಕೆ ನೀಡಿದರು.

Mount Carmel School ನೆಮ್ಮದಿ & ಆರೋಗ್ಯಕ್ಕೆ ಕ್ರೀಡೆ ಸಹಕಾರಿ- ಸುನೀಲ್ ರೋಡ್ರಿಗಸ್

0

Mount Carmel School ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಸಾಮರ್ಥ್ಯ ವೃದ್ಧಿಸುವ ಜತೆಯಲ್ಲಿ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ವಿದ್ಯಾನಗರದ ಮೌಂಟ್ ಕಾರ್ಮೆಲ್ ಸ್ಕೂಲ್ ಮುಖ್ಯ ವ್ಯವಸ್ಥಾಪಕ ಸುನಿಲ್ ರೋಡ್ರಿಗಸ್ ಅಭಿಪ್ರಾಯಪಟ್ಟರು.

ಮೌಂಟ್ ಕಾರ್ಮೆಲ್ ಸ್ಕೂಲ್ ಮತ್ತು ನೆಹರು ಒಳಾಂಗಣದ ಕ್ರೀಡಾಂಗಣ ಆವರಣದಲ್ಲಿ ವಲಯ 10ರ ರೋಟರಿ ವಲಯ ಮಟ್ಟದ ನಾಗಲೋಟ ಕ್ರೀಡೋತ್ಸವ 2024 ಉದ್ಘಾಟಿಸಿ ಮಾತನಾಡಿ, ಕ್ರೀಡೆ, ಸಾಂಸ್ಕೃತಿಕ , ಮನೋರಂಜನಾ ಜೀವನಶೈಲಿ ರೂಢಿಸಿಕೊಳ್ಳಬೇಕು. ನೆಮ್ಮದಿಯ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿರುತ್ತದೆ ಎಂದು ತಿಳಿಸಿದರು.

Mount Carmel School ರೋಟರಿ ವಲಯ 10ರ ಸಹಾಯಕ ಗವರ್ನರ್ ನಾಗರಾಜ್ ಎಸ್.ಆರ್ ಮಾತನಾಡಿ, ರೋಟರಿ ಕ್ಲಬ್‌ಗಳು ಸಮಾಜಮುಖಿ ಕಾರ್ಯಕ್ರಮಗಳ ಜತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಹೆಚ್ಚಿನ ಮಹತ್ವವನ್ನು ನೀಡಿ ಸದಸ್ಯರ ಪ್ರತಿಭೆಯನ್ನು ಮುನ್ನೆಲೆಗೆ ತರುವುದಕ್ಕೆ ಅವಕಾಶ ಕಲ್ಪಿಸುತ್ತದೆ ಎಂದರು. ಎಲ್ಲಾ ರೋಟರಿ ಪರಿವಾರದ ಸದಸ್ಯರಿಗೆ ಶುಭ ಕೋರಿದರು.
ಜೋನಲ್ ಲರ್ನಿಂಗ್ ಫೇಸಿಲಿಟೇಟರ್ ರವೀಂದ್ರನಾಥ್ ಐತಾಳ್ ಮಾತನಾಡಿ, ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೈಗೂಡಿಸಿಕೊಂಡಲ್ಲಿ ಖಿನ್ನತೆ ಕಡಿಮೆ ಮಾಡುವುದರ ಜತೆಯಲ್ಲಿ ದೈಹಿಕ , ಮಾನಸಿಕವಾಗಿ ಸದೃಢರಾಗುತ್ತೇವೆ. ಪರಸ್ಪರರಲ್ಲಿ ಒಡನಾಟ ಪ್ರೀತಿ ವಿಶ್ವಾಸ ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕ್ರೀಡಾ ವಲಯ ಸಂಯೋಜಕ ರೊಟೇರಿಯನ್ ಜಗದೀಶ್ ಸರ್ಜಾ ಮಾತನಾಡಿ, ರೋಟರಿ ವಲಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳು ಜಿಲ್ಲಾಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ವಲಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿದ ರೋಟರಿ ಕ್ಲಬ್ ರಿವರ್ ಸೈಡ್ ಅಧ್ಯಕ್ಷ ಎಂ.ಆರ್.ಬಸವರಾಜ್ ಮಾತನಾಡಿ, ಇಂದಿನ ಕ್ರೀಡಾಕೂಟದಲ್ಲಿ ಭದ್ರಾವತಿ, ಶಿಕಾರಿಪುರ, ಶಿವಮೊಗ್ಗ, ಶಿವಮೊಗ್ಗ ಉತ್ತರ, ರಿವರ್ ಸೈಡ್, ಜುಬಿಲೀ, ಶಿಕಾರಿಪುರ ಸದಸ್ಯರುಗಳು ಮತ್ತು ಅವರ ಪರಿವಾರದವರು ಭಾಗವಹಿಸಿ ಕ್ರೀಡಾ ಪ್ರದರ್ಶನ ನೀಡಲಿದ್ದಾರೆ ಎಂದರು.

ಮಾಜಿ ಸಹಾಯಕ ಗವರ್ನರ್ ಎಂ.ಪಿ.ಆನಂದಮೂರ್ತಿ, ಜಗನ್ನಾಥ್.ಎಂ., ಮುಂದಿನ ಸಾಲಿನ ಸಹಾಯಕ ಗವರ್ನರ್ ಕೆಪಿ ಶೆಟ್ಟಿ, ಕ್ರೀಡಾ ವ್ಯವಸ್ಥಾಪಕರಾದ ಮಲ್ಲೇಶ್ ಸಿ.ಎನ್, ಕ್ರೀಡಾ ಚೇರ್ಮನ್ ಚೇತನ್ ಕುಮಾರ್ ಹಾಗೂ ಕಾರ್ಯದರ್ಶಿ ವಿನಯ್, ಧನರಾಜ್.ಬಿ.ಜಿ, ನಿತಿನ್ ಯಾದವ್, ರಾಜೇಶ್ ಪಿ ಮತ್ತಿತರರು ಉಪಸ್ಥಿತರಿದ್ದರು.

Srinidhi Education Society ಪ್ರೌಢಶಾಲಾಮಕ್ಕಳಿಗೆ ಪುಸ್ತಕ ಬ್ಯಾಗ್ ಉಚಿತ ನೀಡಿದ ದಾನಿ ಶ್ರೀಮತಿ ಸುರಭಿ ಅವರಿಗೆ ಶಾಲೆಯಿಂದ ಅಭಿನಂದನೆ

0

Srinidhi Education Society ಶಿವಮೊಗ್ಗದ ರಾಜೇಂದ್ರ ನಗರದಲ್ಲಿರುವ ಪ್ರೌಢಶಾಲೆಯಲ್ಲಿ ಶ್ರೀಮತಿ ಸುರಭಿ ಸಾಪ್ಟ್ವೇರ್ ಇಂಜಿನಿಯರ್ ಬೆಂಗಳೂರು ಇವರ ವತಿಯಿಂದ 1000.00 ಮುಖ ಬೆಲೆಯ 111 ಶಾಲಾ ಬ್ಯಾಗ್‌ನ್ನು ಉಚಿತವಾಗಿ ವಿತರಿಸಲಾಯಿತು .

Srinidhi Education Society ಕಸದಿಂದ ರಸ ವಿಷಯದ ಕುರಿತು ಮಾಹಿತಿ ನೀಡಿದರು .ಈ ಕಾರ್ಯಕ್ರಮದಲ್ಲಿ ಶ್ರೀನಿಧಿ ಎಜುಕೇಶನ್ ಸೊಸೈಟಿ (ರಿ) ಶಿವಮೊಗ್ಗ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಡಾ|| ಕಡಿದಾಳ್ ಗೋಪಾಲ್ ರವರು , ಉಪಾಧ್ಯಕ್ಷರಾದ ಶ್ರೀಯುತ ಟಿ ಡಿ ಆರ್ ಶ್ರೀಕಂಠಯ್ಯ ರವರು , ಆಡಳಿತಾಧಿಕಾರಿಗಳು ಮತ್ತು ಮುಖ್ಯೋಪಾಧ್ಯಾಯರು , ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯಾಗಿದ್ದು ಮತ್ತು ಶಾಲಾ ಬ್ಯಾಗ್‌ನ್ನು ನೀಡಿದ ಶ್ರೀಮತಿ ಸುರಭಿ ಇವರಿಗೆ ನಮ್ಮ ಸಂಸ್ಥೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಭಿನಂದಿಸಿದರು.

Rotary Club Shivamogga ಗಾಡಿಕೊಪ್ಪದಲ್ಲಿನ ತುಂಗಾ ಮೇಲ್ದಂಡೆ ಜೈವಿಕ ವೈವಿಧ್ಯ ಉದ್ಯಾನ ಸಂರಕ್ಷಣೆಗೆ ಅಮೆರಿಕ ರೋಟರಿ ಕ್ಲಬ್ ನಿಂದ ಧನ ಸಹಾಯ

0

Rotary Club Shivamogga ಶಿವಮೊಗ್ಗ ನಗರದ ಗಾಡಿಕೊಪ್ಪ ಪುರದಾಳು ರಸ್ತೆಯಲ್ಲಿರುವ ತುಂಗಾ ಮೇಲ್ದಂಡೆ ಕಾಲುವೆ ಪಕ್ಕದಲ್ಲಿರುವ ರೋಟರಿ ಬಯೋಡೈವರ್ಸಿಟಿ ಎರಡನೇ ಹಂತದ ಪಾರ್ಕ್ ಅಭಿವೃದ್ಧಿ ಹಾಗೂ ಪಾರ್ಕ್ ಸಂರಕ್ಷಣೆಗೆ ಅಮೇರಿಕಾ ಕ್ಯಾಲಿಫೋರ್ನಿಯಾದ ಮೊಡೆಸ್ಟೋ ರೋಟರಿ ಸಂಸ್ಥೆಯು 62 ಸಾವಿರ ಡಾಲರ್‌ಅನ್ನು ಗ್ಲೋಬಲ್ ಗ್ರ್ಯಾಂಟ್ ಮುಖಾಂತರ ಸಹಾಯಹಸ್ತ ನೀಡಿದೆ.

Rotary Club Shivamogga ಅಮೇರಿಕಾದ ಮೊಡೆಸ್ಟೋ ರೋಟರಿ ಕ್ಲಬ್‌ನ ಅಂತರಾಷ್ಟ್ರೀಯ ಸ್ಪಾನ್ಸರ್ ಅನಿಲ್ ಹಾಲಪ್ಪ ಮಾತನಾಡಿ, ನಮ್ಮ ಕ್ಲಬ್‌ನಲ್ಲಿ 250 ಸದಸ್ಯರಿದ್ದು, ಹಿಂದೆ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಶಾಲೆ, ಸ್ಮಾರ್ಟ್ ಕ್ಲಾಸ್, ಶೌಚಗೃಹ, ನ್ಯಾಪ್ಕಿನ್ ಪ್ಯಾಡ್ ಬರ್ನರ್ ಹಾಗೂ ಶಾಲಾ ಅಭಿವೃದ್ಧಿಗೆ 20 ಸಾವಿರ ಡಾಲರ್ ನೀಡಿದ್ದು, ಸಮಾಜಮುಖಿ ಕಾರ್ಯಗಳಿಗೆ ಬಳಕೆಯಾಗಿದೆ. ಇದರಿಂದ ಪ್ರೇರಿತಗೊಂಡು ಈಗ ಪರಿಸರ ಸಂರಕ್ಷಣೆಗೆ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರೋಟರಿ ಬಯೋಡೈವರ್ಸಿಟಿ ಪಾರ್ಕ್ ಅಧ್ಯಕ್ಷ ಪ್ರೊ. ಎ.ಎಸ್.ಚಂದ್ರಶೇಖರ್ ಮಾತನಾಡಿ, ಮೊಡೆಸ್ಟೋ ರೋಟರಿ ಕ್ಲಬ್ ನೀಡಿರುವ ನೆರವು ಪರಿಸರ ಸಂರಕ್ಷಣೆಯ ಶ್ರೇಷ್ಠ ಕಾರ್ಯಕ್ಕೆ ಸದ್ವಿನಿಯೋಗವಾಗಲಿದೆ. ಪರಿಸರ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ಕಾರ್ಯದರ್ಶಿ ಆನಂದಮೂರ್ತಿ ಮಾತನಾಡಿ, ಶಿವಮೊಗ್ಗದ 8 ರೋಟರಿ ಕ್ಲಬ್‌ಗಳ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, ಎಲ್ಲರೂ ಹೆಚ್ಚಿನ ಸಹಕಾರ ಮಾಡುತ್ತಿದ್ದಾರೆ ಎಂದರು. ಉಮೇಶ್ ಅವರು ಬಯೋಡೈವರ್ಸಿಟಿ ನಡೆದು ಬಂದ ಹಾದಿ ಕುರಿತು ವಿವರಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಲಯ 10ರ ಸಹಾಯಕ ಗವರ್ನರ್ ಎಸ್.ಆರ್.ನಾಗರಾಜ್, ರವೀಂದ್ರನಾಥ ಐತಾಳ, ಸುಂದರ್, ಭಾರತಿ ಚಂದ್ರಶೇಖರ್, ಮಂಜುನಾಥ್, ಕೆ.ಪಿ.ಶೆಟ್ಟಿ, ಜಗದೀಶ್, ರೋಟರಿ ಉತ್ತರ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

Shree Veeranjaneya Educatioal & Charitable Trust ಬಂಗಾರಮಕ್ಕಿಯಲ್ಲಿ ಡಿಸೆಂಬರ್ 14 & 15 ರಂದು ಶ್ರೀದತ್ತ ಜಯಂತ್ಯುತ್ಸವ

0

Shree Veeranjaneya Educatioal & Charitable Trust ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ (ರಿ.) ಶ್ರೀ ಕ್ಷೇತ್ರ ಬಂಗಾರಮಕ್ಕಿ ಇದರ ಆಡಳಿತಕ್ಕೊಳಪಟ್ಟಿರುವ ಹೊನ್ನಾವರ ದುರ್ಗಾಕೇರಿಯ ಶ್ರೀ ದತ್ತ ಮಂದಿರದಲ್ಲಿ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ಡಿ. 14ಮತ್ತು 15 ರಂದು ಶ್ರೀ ದತ್ತ ಜಯಂತ್ಯುತ್ಸವ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಡಿ. 14ರಂದು ಸಂಜೆ 06:30ಕ್ಕೆ ತೊಟ್ಟಿಲೋತ್ಸವ ಹಾಗೂ ಈ ಎರಡೂ ದಿನಗಳಂದು ಮಧ್ಯಾಹ್ನ 01:00 ಗಂಟೆಯಿಂದ ಮಹಾ ಪ್ರಸಾದ ವಿನಿಯೋಗ ನಡೆಯಲಿದೆ.

ಏ. 1,2 ಮಹಾ ಕುಂಭ
ಶ್ರೀ ಕ್ಷೇತ್ರದಲ್ಲಿ ಏ. 1ರಿಂದ 12 ರವರೆಗೆ ಶ್ರೀ ವೀರಾಂಜನೇಯ ದೇವರ ಜೀರ್ಣಾಷ್ಟಬಂಧ ಪ್ರತಿಷ್ಠೆ, ನೂತನ ಶಿಖರ ಸ್ವರ್ಣ ಕಳಶ,
ಸುಬ್ರಹ್ಮಣ್ಯ ನಾಗಬನ ಪೂಜೆ, ಚೌಡೇಶ್ವರಿ ಅಮ್ಮನವರು ಹಾಗೂ ಪರಿವಾರ ದೇವತೆಗಳ ಪ್ರತಿಷ್ಟಾಪನೆ, ಶ್ರೀ ಮಾರುತಿ ಗುರೂಜಿಯವರ ಪೀಠಾರೋಹಣ ರಜತ ಮಹೋತ್ಸವ, ಸಂಸ್ಕೃತಿ ಕುಂಭ – ಮಲೆನಾಡು ಉತ್ಸವ ಹಾಗೂ ಶ್ರೀ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.

  • Shree Veeranjaneya Educatioal & Charitable Trust ಪೂರ್ವಭಾವೀ ಸಭೆ
    ಈ ಎಲ್ಲಾ ಕಾರ್ಯಕ್ರಮಗಳ ಆಯೋಜನೆಯ ಕುರಿತಾಗಿ ಸಮಾಲೋಚಿಸಲು ಡಿ. 16 ರಿಂದ 17 ರವರೆಗೆ ನಿತ್ಯ ಬೆಳಿಗ್ಗೆ 9 :00 ರಿಂದ 11:30 ರ ವರೆಗೆ ಹಾಗೂ ಮಧ್ಯಾಹ್ನ 2:00 ರಿಂದ 4:00ರ ವರೆಗೆ ಹಾಗೂ ಡಿ. 20 ರಿಂದ 23 ಮಧ್ಯಾಹ್ನ 03:00 ರಿಂದ 5:00ರ ವರೆಗೆ ಹಾಗೂ ರಾತ್ರಿ 08:30 ರಿಂದ 10:00 ರ ವರೆಗೆ) ಭಕ್ತಾದಿಗಳ ಸಭೆ ಕರೆಯಲಾಗಿದೆ.

ಭಕ್ತಾದಿಗಳು ವೈಯಕ್ತಿಕವಾಗಿ ಅಥವಾ ತಮ್ಮ ಗ್ರಾಮ,ತಾಲೂಕು, ಜಿಲ್ಲೆಯ ತಂಡದೊಂದಿಗೆ ಆಗಮಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದರ ಮೂಲಕ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿ, ಸಹಕರಿಸಬೇಕಾಗಿ ಶ್ರೀ ಕ್ಷೇತ್ರದ ಆಡಳಿತಾಧಿಕಾರಿಗಳು ಕೋರಿದ್ದಾರೆ.