Seetharamanjaneya Swamy Temple ಶಿವಮೊಗ್ಗ ನಗರದ ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಎಳ್ಳಮಾವಾಸ್ಯೆಯ ಪ್ರಯುಕ್ತ ೨೬ನೇ ವರ್ಷದಲ್ಲಿ ಶಕ್ತಿ ದೇವತೆಗಳ ಸಮಾವೇಶ ನಡೆಯಿತು.
ನಗರದ ವಿವಿಧೆಡೆಗಳ ೪೮ಕ್ಕೂ ಹೆಚ್ಚು ಶಕ್ತಿ ದೇವತೆಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದವು.
ಸಾವಿರಾರು ಸಂಖ್ಯೆಯ ಭಕ್ತಾದಿಗಳು ಪೂಜೆ ಸಲ್ಲಿಸಿದರು.
Seetharamanjaneya Swamy Temple ವಿಶ್ವಹಿಂದೂ ಪರಿಷತ್, ಬಜರಂಗ ದಳ ಹಾಗೂ ಶಕ್ತಿದೇವತೆಗಳ ಸಮಾವೇಶ ಸಮಿತಿ ವತಿಯಿಂದ ಬಂದ ಎಲ್ಲಾ ಭಕ್ತರಿಗೆ ಮಹಾ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
Seetharamanjaneya Swamy Temple ಶಕ್ತಿ ದೈವಗಳ ಸಮಾವೇಶ
New Year ಹೊಸ ಇಸವಿಯ ಹೊಸ್ತಿಲಲ್ಲಿ… ಕವಿ. ಸ್ವಾಮಿ , ಸಾಗರ
New Year ಸೋಲು..
ಅಂತು ಕಳೆದೆವು ಹಲವು ದಿನಗಳು
ಮತ್ತೇ ಬರುವುದೇ ಆ ನೆನಪುಗಳು |
ಸೋಲು ಗೆಲುವಿನ ಪಯಣಗಳ
ಮರೆಯಲಾರದ ಕ್ಷಣಗಳ ||
ಯೋಚಿಸುವ ಮುನ್ನ ಆಲೋಚಿಸಿದೆ
ಗೆಲುವಿಗಿಂತ ಸೋತದ್ದೆ ಹೆಚ್ಚೆಂದು |
ಇಲ್ಲಿ ನನಗಾರು ಸೋಲಿಸಿಲ್ಲ..!
ನನಗೆ ನಾನೇ ಸೋತಿದ್ದು ||
ಸೋಮಾರಿತನದ ನೆಪದಲ್ಲಿ
ದ್ವೇಷದ ಪರದಿಯಲ್ಲಿ |
ಜಾತಿ-ಧರ್ಮಗಳ ಮನದಲ್ಲಿ
ಹೊರಬಾರದೆ ಸೋತಿದ್ದೇನೆ ||
ಅಧಿಕಾರದ ಅಹಮಿನಲಿ
ಸಿರಿತನದ ಸೋಗಿನಲಿ |
ಬೇವರ ಹರಿಸದ ಬದುಕನು
ಕಾಣದಂತೆ ನಾನೆ ಸೋತಿರುವೆ ||
ಅದೆಷ್ಟು ದಿನಗಳ ಕಳೆದೆವು
ನೆನಪಿಗೆ ಬಾರದ ಕ್ಷಣಗಳ |
ಮರೆತು ಬಿಡುವ ಮುನ್ನ
ನನ್ನ ಸೋಲನ್ನು ನಾನೆ ಸೋಲಿಸಬೇಕು ||
New Year ಹೊಸತನದಿ ಹೊಸಬಗೆಯ
ನಿತ್ಯ ಹರಿಯಲಿ ಹೃದಯದಿ |
ಕಣ ಕಣದಲ್ಲೂ ವಿಶ್ವಪಥದಿ ಸಾಗುವ
ಮನುಜ ಪಥದಿ ಗೆಲುವನು ||
ವಿ.ಟಿ.ಸ್ವಾಮಿ,ಕವಿತೋಟ
ಸಾಗರ
ಮೊ:9880871716
Klive Special Article “ಮಾಗಧ” ಸಾರ್ಥಕ ಓದುವಿಕೆಗೆ ಸೂಕ್ತ ಕಾದಂಬರಿ
ಪರಿಚಯಕಾರ- -ಪ್ರಭಾಕರ ಕಾರಂತ.
Klive Special Article “ಮಾಗಧ “ಸಹನಾ ವಿಜಯ ಕುಮಾರ್ ರವರ ಈಚಿನ ಕಾದಂಬರಿ.772 ಪುಟಗಳ ಈ ಬೃಹತ್ತಾದ ಪುಸ್ತಕವನ್ನು ಸಾಹಿತ್ಯ ಭಂಡಾರ ಪ್ರಕಾಶನ ಪ್ರಕಟಿಸಿದೆ.
ಬೆಲೆ 915 ರೂಗಳು. 94816044 35 ಸಂಪರ್ಕಿಸಿ ಪುಸ್ತಕ ತರಿಸಬಹುದು.
ಕನ್ನಡದಲ್ಲಿ ಬೃಹತ್ ಕಾದಂಬರಿ ಪ್ರಥಮಬಾರಿಗೆ ಬರೆದಿದ್ದು ಕುವೆಂಪುರವರು. ಅವರ ಮಲೆಗಳಲ್ಲಿ ಮದುಮಗಳು ಮಲೆನಾಡಿನ ಬದುಕನ್ನು ಅದರೆಲ್ಲಾ ಬಣ್ಣದೊಂದಿಗೆ ಚಿತ್ರಿಸಿದೆ. ರುದ್ರಮೂರ್ತಿ ಶಾಸ್ತ್ರಿಗಳ ಚಾಣುಕ್ಯ ಮತ್ತೊಂದು ಹೆಸರಿಸಬಹುದಾದ ಬೃಹತ್ ಕೃತಿ. ಬಂದು ಹಲವು ವರ್ಷಗಳಾಯಿತು. ಸಹಸ್ರ ರೂ ಬೆಲೆಯ ಆ ಪುಸ್ತಕ ಹತ್ತು ಸಹಸ್ರಕ್ಕೂ ಹೆಚ್ಚು ಪ್ರತಿ ಮಾರಾಟವಾಗಿದೆ. ಕೊರ್ಗಿ ಶಂಕರನಾರಾಯಣ ಉಪಾಧ್ಯರ ಅಪ್ಪಯ್ಯನ ಆಸ್ತಿಕತೆಯೂ ಈಚಿನ ಬೃಹತ್ತಾದ ಕೃತಿ. ಅದು ಕಾದಂಬರಿಯಲ್ಲದೇ ವ್ಯಕ್ತಿ ಚಿತ್ರವಾದರೂ ಕಾದಂಬರಿಯ ಎಲ್ಲವನ್ನೂ ಒಳಗೊಂಡಿದೆ. ಈಗ ಬೃಹತ್ತಾದ ಪುಸ್ತಕ ಓದುವವರೂ ಇಲ್ಲ ಎಂದು ಪ್ರಕಾಶಕರು ಪ್ರಕಟಿಸಲೂ ಹಿಂಜರಿಯುವ ಕಾಲ ದಲ್ಲಿ ಬರೆಯುವವರೂ ಹಿಂಜರಿಯುತ್ತಾರೆ.ಏನಿದ್ದರೂ 200,300 ಹೆಚ್ಚೆಂದರೆ ಐನೂರು ಪುಟಗಳ ಪುಸ್ತಕ ತಂದರೂ ಮಾರಾಟವಾಗದು ಎಂಬ ದೂರಿದೆ.ಈ ಹಿನ್ನೆಲೆಯಲ್ಲಿ ಮಾಗಧ ಬರೆದವರನ್ನೂ ಪ್ರಕಟಿಸಿದವರನ್ನೂ ಮೆಚ್ಚಲೇ ಬೇಕು.
Klive Special Article ಕನ್ನಡದ ಕಾದಂಬರಿಯ ಲೋಕದಲ್ಲಿ ಶಾಶ್ವತವಾಗಿ ಉಳಿಯುವ ಕೃತಿ ಇದು. ಐತಿಹಾಸಿಕ ಕಾದಂಬರಿಯ ರಚನೆ ಸುಲಭದ್ದಲ್ಲ. ಅದಕ್ಕಾಗಿ ಸತತ ಅಧ್ಯಯನ ನಡೆಸಬೇಕು. ಕೋಶ ಓದುವುದು ಮಾತ್ರವಲ್ಲ ದೇಶ ಸಂಚಾರ ಮಾಡಬೇಕು. ಕೃತಿ ರಚನಾಕಾರ ತನ್ನ ಜ್ಞಾನ ಹೆಚ್ಚಿಸಿಕೊಳ್ಳಬೇಕು. ವಸ್ತುನಿಷ್ಠೆ ಉಳಿಸಿಕೊಳ್ಳಬೇಕೆಂದರೆ ತಪಸ್ಸಾಚರಿಸಬೇಕು. ಈ ಎಲ್ಲಾ ಆಯಾಮಗಳಲ್ಲೂ ಯಶಸ್ವಿ ಆದವರು ಕಡಿಮೆಯೇ. ಸಹನಾ ವಿಜಯಕುಮಾರ್ ಹುಡುಕಿದರೂ ಲೋಪಸಿಗದಂತೆ ಅತ್ಯಂತ ಯಶಸ್ವಿ ಆಗಿದ್ದಾರೆ. ಇತಿಹಾಸಕಾರರು ಉದ್ದೇಶ ಪೂರ್ವಕವಾಗಿ ಚಿತ್ರಿಸಿದ ಕಾರಣ ಜನಮಾನಸದಲ್ಲಿ ಬೇರೂರಿರುವ ಚಿತ್ರವನ್ನು ಬದಲಾಯಿಸುವ ಸಾಹಸ ಲೇಖಕಿ ಮಾಡಿದ್ದಾರೆ. ಅದಕ್ಕಾಗೇ ಅವರು ಅಶೋಕ ಚಕ್ರವರ್ತಿಯ ಶಿಲಾಶಾಸನ ಇರುವೆಡೆಯೆಲ್ಲಾ ಸಂಚರಿಸಿ ಕ್ಷೇತ್ರ ಕಾರ್ಯ ಮಾಡಿದ್ದಾರೆ. ಶ್ರೀಲಂಕಾ ಸೇರಿದಂತೆ ಬೌದ್ಧ ವಿಹಾರಗಳನ್ನು ಸಂದರ್ಶಿಸಿದ್ದಾರೆ. ಬೌದ್ಧ, ಜೈನ ಮತ್ತು ಆಜೀವಕ ಮತವನ್ನು ಅಭ್ಯಸಿಸಿದ್ದಾರೆ. ಗ್ರೀಕ್, ಪರ್ಶಿಯಾ ಮತ್ತು ಭಾರತದ ಇತಿಹಾಸ ಅಭ್ಯಸಿಸಿದ್ದಾರೆ. ಕಲೆ,ಅರ್ಥಶಾಸ್ತ್ರ, ಧರ್ಮಶಾಸ್ತ್ರ ಲಿಪಿ ಅವಲೋಕಿಸಿದ್ದಾರೆ. ಕಲಿಂಗ, ಅಶೋಕನ ಕುರಿತು ಲಭ್ಯ ಗ್ರಂಥ ಅಧ್ಯಯನ ಮಾಡಿದ್ದಾರೆ. ಸಾಂಚಿ, ನಾಳಂದಾ,ಕುಲಬರ್ಗಿ, ಪಾಟ್ನಾ, ಬನಾರಸ್ ವಿಶ್ವ ವಿದ್ಯಾಲಯ ಸಂದರ್ಶಿಸಿ ಅಲ್ಲಿನ ತಜ್ಞರೊಂದಿಗೆ ಸಮಾಲೋಚಿಸಿದ್ದಾರೆ. ಪುಣೆಯ ಸಂಶೋಧನಾ ಕೇಂದ್ರದ ತಜ್ಞರ ನೆರವು ಪಡೆದಿದ್ದಾರೆ. ಶಾಸನ ಅಧ್ಯಯನ ನಡೆಸಿದ್ದಾರೆ. ಸತತ ಮಂಥನ ನಡೆಸಿ ಹತ್ತು ಹಿರಿಯರೊಂದಿಗೆ ಚರ್ಚಿಸಿ…..ಸತ್ಯ ಸಾಕ್ಷಾತ್ಕಾರ ಎಂದರೆ ಇಷ್ಟೆಲ್ಲಾ ಶ್ರಮ ಬೇಡುತ್ತದೆ. ಅದಕ್ಕೇ ಅದು ತಪಸ್ಸು. ಒಂದೆರಡಲ್ಲಾ ನಾಲ್ಕೂವರೆ ವರ್ಷದ ತಪಸ್ಸದು. ಇಷ್ಟೆಲ್ಲಾ ಸಾಕ್ಷಾತ್ಕಾರ ಆದಮೇಲೆ ಅದನ್ನು ನಮ್ಮಂತಹ ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಬರೆಯಬೇಕು. ಸತ್ಯ ಕಥೆ ಕಟ್ಟಬೇಕು. ಬೃಹತ್ತಿನ ಸ್ವಾರಸ್ಯ ಉಳಿಸಿಕೊಳ್ಳದಿದ್ದರೆ ಯಾರು ಓದುತ್ತಾರೆ. ಓದುವಂತೆ ಹುಚ್ಚು ಹಿಡಿದು ಓದುವಂತೆ ಕಾದಂಬರಿ ಬರೆದಿದ್ದಾರೆ. “ಹಿಮ್ಮುಖ ಕಾಲಯಾನ ಅವಕಾಶ ದೊರೆತರೆ ಅಶೋಕನ ಅವಧಿಯ ಘಟನೆಗಳಿಗೆ ಸಾಕ್ಷಿಯಾಗಬೇಕು ಎಂಬ ಪ್ರಭಲ ಇಚ್ಛೆ ಮೂಡಿತು”ಎಂದು ಲೇಖಕಿ ಹೇಳಿಕೊಂಡಿದ್ದಾರೆ. ಆ ಇಚ್ಛೆ ಅವರು ಪೂರೈಸಿಕೊಂಡ ಪುಣ್ಯವೇ ಈ ಕಾದಂಬರಿ.
ಜಗತ್ತಿನಲ್ಲಿ ಸಂತೋಷ ಸಿಗುವುದು ನನ್ನಂತಹವರಿಗೆ ಅಪರೂಪಕ್ಕೆ. ಜ್ಞಾನ ಋಷಿಯನ್ನು ಕಂಡರೆ ಸಿಗುವ ಸಂಭ್ರಮಕ್ಕೆ ಎಣೆಇಲ್ಲ. ಸಹನಾ ವಿಜಯಕುಮಾರ್ ರವರ ಮಾಗಧ ಅಂತ ಸಂತೋಷ ಸಂಭ್ರಮ ಮೂಡಿಸಿದೆ. ಅವರ ಸಾಹಸಕ್ಕೆ ಶ್ರಮಕ್ಕೆ ಸಾಷ್ಟಾಂಗ ಪ್ರಣಾಮಗಳು.
ಸಾಮ್ರಾಟ್ ಅಶೋಕ ಚಕ್ರವರ್ತಿ ಚಂದ್ರಗುಪ್ತ ಮೌರ್ಯನ ಮೊಮ್ಮಗ. ಭರತ ವರ್ಷದ ಚಕ್ರವರ್ತಿ. ಈಗಿನ ಆಫ್ಘಾನಿಸ್ತಾನವೂ ಅವನ ಸಾಮ್ರಾಜ್ಯದ ಬಾಗವಾಗಿತ್ತು. ಅಂತ ಅಶೋಕ ಕಳಿಂಗ ಯುದ್ಧ ಪರಿಣಾಮ ನೋಡಿ ಎದೆಗುಂದಿ (!) ಬೌದ್ಧ ಮತ ಸೇರಿದ. ತನ್ನ ಮಕ್ಕಳನ್ನು ಬೌದ್ಧ ಮತ ಪ್ರಚಾರಕ್ಕೆ ಸಿಂಹಳ ಕಳಿಸಿದ. ಅಹಿಂಸಾವಾದಿಯಾದ ಎಂದು ಏನೆಲ್ಲಾ ನಮ್ಮ ತಲೆಯಲ್ಲಿ ಉಳಿದು ಬಿಟ್ಟಿದೆ. ಬೌದ್ಧರು ಮೊದಲು ಈ ಪ್ರಚಾರ ಆರಂಭಿಸಿದರು. ನಂತರ ನಮ್ಮ ಇತಿಹಾಸಕಾರರು ಇದನ್ನೇ ಕಾದವರು ಮತ್ತಷ್ಟು ಸೇರಿಸಿ ಕಥೆ ಕಟ್ಟಿದರು. ಗಾಂಧಿ ಯುಗದಲ್ಲಿ ಅಹಿಂಸೆಯ ಪ್ರಚಾರ ಮತ್ತಷ್ಟು ವೇಗ ಪಡೆಯಿತು. ಓರ್ವ ಚಕ್ರವರ್ತಿ ಅಹಿಂಸಾ ವೃತ ಕೈಗೊಳ್ಳುವುದೆಂದರೆ ಸಾಮ್ರಾಜ್ಯ ಉಳಿದೀತೇ. ಶತ್ರುಗಳು ಕೈಕಟ್ಟಿ ಕುಳಿತಾರೇ?.ದೇಶದಲ್ಲಿ ದಂಗೆ ಏಳದೇ ಎಂಬೆಲ್ಲಾ ಸಣ್ಣ ಸಂಗತಿಗಳನ್ನೂ ಯೋಚಿಸದಂತೆ ಈ ಇತಿಹಾಸಕಾರರು ನಮ್ಮ ಬುದ್ದಿಗೆ ಮಂಕು ಕವಿಸಿದ್ದರಲ್ಲಾ. ಮಾಗಧ ನಮ್ಮ ಕಣ್ಣಿನ ಪೊರೆ ಕಳಚಿದೆ. ಸತ್ಯದ ಅನಾವರಣವಾಗಿದೆ. ಸಾಕ್ಷಾಧಾರಗಳ ಆಧಾರದಲ್ಲಿ ವಾಸ್ತವ ತೆರೆದಿಟ್ಟಿದೆ.
ಎರಡು ಸಹಸ್ರ ವರ್ಷಕ್ಕೂ ಹಿಂದಿನ ಕಥೆ ಕಟ್ಟುವುದು ಹುಡುಗಾಟಿಕೆಯಲ್ಲ. ಅನೇಕರು ಅಂತಹ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಈ ಕಾಲಘಟ್ಟದಲ್ಲಿ ನಿಂತೇ ಓದುವಾಗ ನಮಗೆ ಗತಕ್ಕೆ ಹೋದ ಅನುಭವ ಆಗಬೇಕು. ಇಂತ ಅನುಭವ ಬೇಕಾದರೆ ಮಾಗಧ ಓದಬೇಕು. ಕಾದಂಬರಿಯನ್ನು ಕಟ್ಟುವಾಗ ಕಲ್ಪನೆ ಇದ್ದೇ ಇರುತ್ತದೆ. ಅಶೋಕ ತನ್ನ ಸತ್ಯಕಥೆ ಬಂದು ಕಿವಿಯಲ್ಲಿ ಉಸುರುವುದಿಲ್ಲ. ಕಲ್ಪನೆ ಎಂದೇ ಗೊತ್ತಾಗದಂತೆ ಕಾದಂಬರಿ ಸಾಗುವುದೇ ಮಾಗಧದ ಹಿರಿಮೆ. ಕಾದಂಬರಿಯ ಮತ್ತಷ್ಟು ಪ್ರತಿಪಾದನೆ ಎಂದರೆ
ಬುದ್ದನ ಉಪದೇಶದ ಮೂಲ ಉಪನಿಷತ್ ಗಳೇ ಎಂಬುದು. ಭಾರತದ ಈ ಬೌದ್ಧ, ಜೈನ ಧರ್ಮಗಳೆಲ್ಲಾ ಸನಾತನ ಶಾಖೆಗಳೇ ಎಂಬುದು. ಯಾವ ಧರ್ಮ ಕೇವಲ ರಾಜಾಶ್ರಯದಿಂದಲೇ ಬೆಳೆಯ ನೋಡಿತೋ ಅದು ಅಳಿಯುವಲ್ಲಿ ಅಚ್ಚರಿ ಏನು?. ಬೌದ್ಧ ಮತದ ಅವನತಿಯತ್ತಲೂ ಈ ಕಾದಂಬರಿ ಬೆಳಕು ಚೆಲ್ಲುತ್ತದೆ. ಜೈನಮುನಿಗಳ ಕಠಿಣ ಸಾಧನೆ ಕಂಡಾಗ ಗೌರವ ಮೂಡುತ್ತದೆ.Klive Special Article “ಮಾಗಧ “ಸಹನಾ ವಿಜಯ ಕುಮಾರ್ ರವರ ಈಚಿನ ಕಾದಂಬರಿ.772 ಪುಟಗಳ ಈ ಬೃಹತ್ತಾದ ಪುಸ್ತಕವನ್ನು ಸಾಹಿತ್ಯ ಭಂಡಾರ ಪ್ರಕಾಶನ ಪ್ರಕಟಿಸಿದೆ.
ಬೆಲೆ 915 ರೂಗಳು. 94816044 35 ಸಂಪರ್ಕಿಸಿ ಪುಸ್ತಕ ತರಿಸಬಹುದು.
ಕನ್ನಡದಲ್ಲಿ ಬೃಹತ್ ಕಾದಂಬರಿ ಪ್ರಥಮಬಾರಿಗೆ ಬರೆದಿದ್ದು ಕುವೆಂಪುರವರು. ಅವರ ಮಲೆಗಳಲ್ಲಿ ಮದುಮಗಳು ಮಲೆನಾಡಿನ ಬದುಕನ್ನು ಅದರೆಲ್ಲಾ ಬಣ್ಣದೊಂದಿಗೆ ಚಿತ್ರಿಸಿದೆ. ರುದ್ರಮೂರ್ತಿ ಶಾಸ್ತ್ರಿಗಳ ಚಾಣುಕ್ಯ ಮತ್ತೊಂದು ಹೆಸರಿಸಬಹುದಾದ ಬೃಹತ್ ಕೃತಿ. ಬಂದು ಹಲವು ವರ್ಷಗಳಾಯಿತು. ಸಹಸ್ರ ರೂ ಬೆಲೆಯ ಆ ಪುಸ್ತಕ ಹತ್ತು ಸಹಸ್ರಕ್ಕೂ ಹೆಚ್ಚು ಪ್ರತಿ ಮಾರಾಟವಾಗಿದೆ. ಕೊರ್ಗಿ ಶಂಕರನಾರಾಯಣ ಉಪಾಧ್ಯರ ಅಪ್ಪಯ್ಯನ ಆಸ್ತಿಕತೆಯೂ ಈಚಿನ ಬೃಹತ್ತಾದ ಕೃತಿ. ಅದು ಕಾದಂಬರಿಯಲ್ಲದೇ ವ್ಯಕ್ತಿ ಚಿತ್ರವಾದರೂ ಕಾದಂಬರಿಯ ಎಲ್ಲವನ್ನೂ ಒಳಗೊಂಡಿದೆ. ಈಗ ಬೃಹತ್ತಾದ ಪುಸ್ತಕ ಓದುವವರೂ ಇಲ್ಲ ಎಂದು ಪ್ರಕಾಶಕರು ಪ್ರಕಟಿಸಲೂ ಹಿಂಜರಿಯುವ ಕಾಲ ದಲ್ಲಿ ಬರೆಯುವವರೂ ಹಿಂಜರಿಯುತ್ತಾರೆ.ಏನಿದ್ದರೂ 200,300 ಹೆಚ್ಚೆಂದರೆ ಐನೂರು ಪುಟಗಳ ಪುಸ್ತಕ ತಂದರೂ ಮಾರಾಟವಾಗದು ಎಂಬ ದೂರಿದೆ.ಈ ಹಿನ್ನೆಲೆಯಲ್ಲಿ ಮಾಗಧ ಬರೆದವರನ್ನೂ ಪ್ರಕಟಿಸಿದವರನ್ನೂ ಮೆಚ್ಚಲೇ ಬೇಕು.
ಕನ್ನಡದ ಕಾದಂಬರಿಯ ಲೋಕದಲ್ಲಿ ಶಾಶ್ವತವಾಗಿ ಉಳಿಯುವ ಕೃತಿ ಇದು. ಐತಿಹಾಸಿಕ ಕಾದಂಬರಿಯ ರಚನೆ ಸುಲಭದ್ದಲ್ಲ. ಅದಕ್ಕಾಗಿ ಸತತ ಅಧ್ಯಯನ ನಡೆಸಬೇಕು. ಕೋಶ ಓದುವುದು ಮಾತ್ರವಲ್ಲ ದೇಶ ಸಂಚಾರ ಮಾಡಬೇಕು. ಕೃತಿ ರಚನಾಕಾರ ತನ್ನ ಜ್ಞಾನ ಹೆಚ್ಚಿಸಿಕೊಳ್ಳಬೇಕು. ವಸ್ತುನಿಷ್ಠೆ ಉಳಿಸಿಕೊಳ್ಳಬೇಕೆಂದರೆ ತಪಸ್ಸಾಚರಿಸಬೇಕು. ಈ ಎಲ್ಲಾ ಆಯಾಮಗಳಲ್ಲೂ ಯಶಸ್ವಿ ಆದವರು ಕಡಿಮೆಯೇ. ಸಹನಾ ವಿಜಯಕುಮಾರ್ ಹುಡುಕಿದರೂ ಲೋಪಸಿಗದಂತೆ ಅತ್ಯಂತ ಯಶಸ್ವಿ ಆಗಿದ್ದಾರೆ. ಇತಿಹಾಸಕಾರರು ಉದ್ದೇಶ ಪೂರ್ವಕವಾಗಿ ಚಿತ್ರಿಸಿದ ಕಾರಣ ಜನಮಾನಸದಲ್ಲಿ ಬೇರೂರಿರುವ ಚಿತ್ರವನ್ನು ಬದಲಾಯಿಸುವ ಸಾಹಸ ಲೇಖಕಿ ಮಾಡಿದ್ದಾರೆ. ಅದಕ್ಕಾಗೇ ಅವರು ಅಶೋಕ ಚಕ್ರವರ್ತಿಯ ಶಿಲಾಶಾಸನ ಇರುವೆಡೆಯೆಲ್ಲಾ ಸಂಚರಿಸಿ ಕ್ಷೇತ್ರ ಕಾರ್ಯ ಮಾಡಿದ್ದಾರೆ. ಶ್ರೀಲಂಕಾ ಸೇರಿದಂತೆ ಬೌದ್ಧ ವಿಹಾರಗಳನ್ನು ಸಂದರ್ಶಿಸಿದ್ದಾರೆ. ಬೌದ್ಧ, ಜೈನ ಮತ್ತು ಆಜೀವಕ ಮತವನ್ನು ಅಭ್ಯಸಿಸಿದ್ದಾರೆ. ಗ್ರೀಕ್, ಪರ್ಶಿಯಾ ಮತ್ತು ಭಾರತದ ಇತಿಹಾಸ ಅಭ್ಯಸಿಸಿದ್ದಾರೆ. ಕಲೆ,ಅರ್ಥಶಾಸ್ತ್ರ, ಧರ್ಮಶಾಸ್ತ್ರ ಲಿಪಿ ಅವಲೋಕಿಸಿದ್ದಾರೆ. ಕಲಿಂಗ, ಅಶೋಕನ ಕುರಿತು ಲಭ್ಯ ಗ್ರಂಥ ಅಧ್ಯಯನ ಮಾಡಿದ್ದಾರೆ. ಸಾಂಚಿ, ನಾಳಂದಾ,ಕುಲಬರ್ಗಿ, ಪಾಟ್ನಾ, ಬನಾರಸ್ ವಿಶ್ವ ವಿದ್ಯಾಲಯ ಸಂದರ್ಶಿಸಿ ಅಲ್ಲಿನ ತಜ್ಞರೊಂದಿಗೆ ಸಮಾಲೋಚಿಸಿದ್ದಾರೆ. ಪುಣೆಯ ಸಂಶೋಧನಾ ಕೇಂದ್ರದ ತಜ್ಞರ ನೆರವು ಪಡೆದಿದ್ದಾರೆ. ಶಾಸನ ಅಧ್ಯಯನ ನಡೆಸಿದ್ದಾರೆ. ಸತತ ಮಂಥನ ನಡೆಸಿ ಹತ್ತು ಹಿರಿಯರೊಂದಿಗೆ ಚರ್ಚಿಸಿ…..ಸತ್ಯ ಸಾಕ್ಷಾತ್ಕಾರ ಎಂದರೆ ಇಷ್ಟೆಲ್ಲಾ ಶ್ರಮ ಬೇಡುತ್ತದೆ. ಅದಕ್ಕೇ ಅದು ತಪಸ್ಸು. ಒಂದೆರಡಲ್ಲಾ ನಾಲ್ಕೂವರೆ ವರ್ಷದ ತಪಸ್ಸದು. ಇಷ್ಟೆಲ್ಲಾ ಸಾಕ್ಷಾತ್ಕಾರ ಆದಮೇಲೆ ಅದನ್ನು ನಮ್ಮಂತಹ ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಬರೆಯಬೇಕು. ಸತ್ಯ ಕಥೆ ಕಟ್ಟಬೇಕು. ಬೃಹತ್ತಿನ ಸ್ವಾರಸ್ಯ ಉಳಿಸಿಕೊಳ್ಳದಿದ್ದರೆ ಯಾರು ಓದುತ್ತಾರೆ. ಓದುವಂತೆ ಹುಚ್ಚು ಹಿಡಿದು ಓದುವಂತೆ ಕಾದಂಬರಿ ಬರೆದಿದ್ದಾರೆ. “ಹಿಮ್ಮುಖ ಕಾಲಯಾನ ಅವಕಾಶ ದೊರೆತರೆ ಅಶೋಕನ ಅವಧಿಯ ಘಟನೆಗಳಿಗೆ ಸಾಕ್ಷಿಯಾಗಬೇಕು ಎಂಬ ಪ್ರಭಲ ಇಚ್ಛೆ ಮೂಡಿತು”ಎಂದು ಲೇಖಕಿ ಹೇಳಿಕೊಂಡಿದ್ದಾರೆ. ಆ ಇಚ್ಛೆ ಅವರು ಪೂರೈಸಿಕೊಂಡ ಪುಣ್ಯವೇ ಈ ಕಾದಂಬರಿ.
ಜಗತ್ತಿನಲ್ಲಿ ಸಂತೋಷ ಸಿಗುವುದು ನನ್ನಂತಹವರಿಗೆ ಅಪರೂಪಕ್ಕೆ. ಜ್ಞಾನ ಋಷಿಯನ್ನು ಕಂಡರೆ ಸಿಗುವ ಸಂಭ್ರಮಕ್ಕೆ ಎಣೆಇಲ್ಲ. ಸಹನಾ ವಿಜಯಕುಮಾರ್ ರವರ ಮಾಗಧ ಅಂತ ಸಂತೋಷ ಸಂಭ್ರಮ ಮೂಡಿಸಿದೆ. ಅವರ ಸಾಹಸಕ್ಕೆ ಶ್ರಮಕ್ಕೆ ಸಾಷ್ಟಾಂಗ ಪ್ರಣಾಮಗಳು.
ಸಾಮ್ರಾಟ್ ಅಶೋಕ ಚಕ್ರವರ್ತಿ ಚಂದ್ರಗುಪ್ತ ಮೌರ್ಯನ ಮೊಮ್ಮಗ. ಭರತ ವರ್ಷದ ಚಕ್ರವರ್ತಿ. ಈಗಿನ ಆಫ್ಘಾನಿಸ್ತಾನವೂ ಅವನ ಸಾಮ್ರಾಜ್ಯದ ಬಾಗವಾಗಿತ್ತು. ಅಂತ ಅಶೋಕ ಕಳಿಂಗ ಯುದ್ಧ ಪರಿಣಾಮ ನೋಡಿ ಎದೆಗುಂದಿ (!) ಬೌದ್ಧ ಮತ ಸೇರಿದ. ತನ್ನ ಮಕ್ಕಳನ್ನು ಬೌದ್ಧ ಮತ ಪ್ರಚಾರಕ್ಕೆ ಸಿಂಹಳ ಕಳಿಸಿದ. ಅಹಿಂಸಾವಾದಿಯಾದ ಎಂದು ಏನೆಲ್ಲಾ ನಮ್ಮ ತಲೆಯಲ್ಲಿ ಉಳಿದು ಬಿಟ್ಟಿದೆ. ಬೌದ್ಧರು ಮೊದಲು ಈ ಪ್ರಚಾರ ಆರಂಭಿಸಿದರು. ನಂತರ ನಮ್ಮ ಇತಿಹಾಸಕಾರರು ಇದನ್ನೇ ಕಾದವರು ಮತ್ತಷ್ಟು ಸೇರಿಸಿ ಕಥೆ ಕಟ್ಟಿದರು. ಗಾಂಧಿ ಯುಗದಲ್ಲಿ ಅಹಿಂಸೆಯ ಪ್ರಚಾರ ಮತ್ತಷ್ಟು ವೇಗ ಪಡೆಯಿತು. ಓರ್ವ ಚಕ್ರವರ್ತಿ ಅಹಿಂಸಾ ವೃತ ಕೈಗೊಳ್ಳುವುದೆಂದರೆ ಸಾಮ್ರಾಜ್ಯ ಉಳಿದೀತೇ. ಶತ್ರುಗಳು ಕೈಕಟ್ಟಿ ಕುಳಿತಾರೇ?.ದೇಶದಲ್ಲಿ ದಂಗೆ ಏಳದೇ ಎಂಬೆಲ್ಲಾ ಸಣ್ಣ ಸಂಗತಿಗಳನ್ನೂ ಯೋಚಿಸದಂತೆ ಈ ಇತಿಹಾಸಕಾರರು ನಮ್ಮ ಬುದ್ದಿಗೆ ಮಂಕು ಕವಿಸಿದ್ದರಲ್ಲಾ. ಮಾಗಧ ನಮ್ಮ ಕಣ್ಣಿನ ಪೊರೆ ಕಳಚಿದೆ. ಸತ್ಯದ ಅನಾವರಣವಾಗಿದೆ. ಸಾಕ್ಷಾಧಾರಗಳ ಆಧಾರದಲ್ಲಿ ವಾಸ್ತವ ತೆರೆದಿಟ್ಟಿದೆ.
ಎರಡು ಸಹಸ್ರ ವರ್ಷಕ್ಕೂ ಹಿಂದಿನ ಕಥೆ ಕಟ್ಟುವುದು ಹುಡುಗಾಟಿಕೆಯಲ್ಲ. ಅನೇಕರು ಅಂತಹ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಈ ಕಾಲಘಟ್ಟದಲ್ಲಿ ನಿಂತೇ ಓದುವಾಗ ನಮಗೆ ಗತಕ್ಕೆ ಹೋದ ಅನುಭವ ಆಗಬೇಕು. ಇಂತ ಅನುಭವ ಬೇಕಾದರೆ ಮಾಗಧ ಓದಬೇಕು. ಕಾದಂಬರಿಯನ್ನು ಕಟ್ಟುವಾಗ ಕಲ್ಪನೆ ಇದ್ದೇ ಇರುತ್ತದೆ. ಅಶೋಕ ತನ್ನ ಸತ್ಯಕಥೆ ಬಂದು ಕಿವಿಯಲ್ಲಿ ಉಸುರುವುದಿಲ್ಲ. ಕಲ್ಪನೆ ಎಂದೇ ಗೊತ್ತಾಗದಂತೆ ಕಾದಂಬರಿ ಸಾಗುವುದೇ ಮಾಗಧದ ಹಿರಿಮೆ. ಕಾದಂಬರಿಯ ಮತ್ತಷ್ಟು ಪ್ರತಿಪಾದನೆ ಎಂದರೆ
ಬುದ್ದನ ಉಪದೇಶದ ಮೂಲ ಉಪನಿಷತ್ ಗಳೇ ಎಂಬುದು. ಭಾರತದ ಈ ಬೌದ್ಧ, ಜೈನ ಧರ್ಮಗಳೆಲ್ಲಾ ಸನಾತನ ಶಾಖೆಗಳೇ ಎಂಬುದು. ಯಾವ ಧರ್ಮ ಕೇವಲ ರಾಜಾಶ್ರಯದಿಂದಲೇ ಬೆಳೆಯ ನೋಡಿತೋ ಅದು ಅಳಿಯುವಲ್ಲಿ ಅಚ್ಚರಿ ಏನು?. ಬೌದ್ಧ ಮತದ ಅವನತಿಯತ್ತಲೂ ಈ ಕಾದಂಬರಿ ಬೆಳಕು ಚೆಲ್ಲುತ್ತದೆ. ಜೈನಮುನಿಗಳ ಕಠಿಣ ಸಾಧನೆ ಕಂಡಾಗ ಗೌರವ ಮೂಡುತ್ತದೆ.
ಅಶೋಕ ಕಳಿಂಗ ಯುದ್ಧ ಮಾಡಿದ್ದೇಕೆ?. ಸಾಮ್ರಾಜ್ಯ ವಿಸ್ತರಣೆಯ ಏಕ ಉದ್ದೇಶದಿಂದ ಯುದ್ಧ ನಡೆಯಿತೇ. ಸಾಮ್ರಾಟನೊಬ್ಬ ಕ್ರೋಧೋನ್ಮತ್ತ ನಾಗುವುದು ಏಕೆ. ಭರತ ವರ್ಷಕ್ಕೆ ಅಲೆಕ್ಸಾಂಡರ್ ರೂಪದಲ್ಲಿ ಬಂದ ಅಪಾಯ ಮೌರ್ಯ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾಯಿತು. ಅಶೋಕನ ಜೀವನವಾದರೂ ಈ ಭರತವರ್ಷದ ರಕ್ಷಣೆಗೇ ಮೀಸಲಿದ್ದುದು. ವಿದ್ರೋಹ ಅಡಗಿಸುತ್ತಾ ರಾಷ್ಟ್ರ ಸಂರಕ್ಷಣೆಯ ಹೊಣೆ ಹೊತ್ತು ಚಕ್ರವರ್ತಿ ವಹಿಸಿದ ಕಷ್ಟ ಎಷ್ಟು. ರಾಜ ಬಹುಪತ್ನಿ ಹೊಂದಿ ಹಲವು ಸಂತಾನ ಸೃಷ್ಟಿಸುವ ಹಿಂದೆ ಏನಾದರೂ ಉದ್ದೇಶ ಇದೆಯೇ. ಹೀಗೆ ಹಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ರಾಣೀವಾಸದ ಚಿತ್ರಣ,ಮಾತೃ ವಾತ್ಸಲ್ಯ, ಕಲಿಂಗ ರಾಣಿಯ ಶೌರ್ಯ ಸಾಹಸ,ಮಂತ್ರಿಗಳ ಮಹತ್ತು ಏನುಂಟು ಏನಿಲ್ಲ.
ಎರಡು ಸಹಸ್ರ ವರ್ಷ ಹಿಂದೆ ಹೋಗುವುದೆಂದರೆ ಭಾಷೆಯೂ ಗತಕ್ಕೆ ಹೋಗಬೇಕು. ಹೆಸರುಗಳು ಅಂದಿನದ್ದೇ ಆಗಬೇಕು. ಇಷ್ಟೆಲ್ಲಾ ಮಾಡಿಯೂ ನಮಗೆ ಈಗಿನವರಿಗೆ ಅರ್ಥವಾಗಬೇಕು. ಮಾಗಧ ಓದು ಏನೆಲ್ಲಾ ಕೊಡುತ್ತದೆ ಎಂದರೆ ವರ್ಣಿಸಲೇ ಕಷ್ಟ. ಕಾದಂಬರಿಯ ಲೋಕದಲ್ಲಿ ಇಂತಹ ಮತ್ತೊಂದನ್ನು ಹೆಸರಿಸುವುದು ಕಷ್ಟ. ಸುಮಾರಾಗಿ ವಸುಧೇಂದ್ರರ ರೇಷ್ಮೆ ಬಟ್ಟೆ ಅದೇ ಕಾಲಘಟ್ಟದ ಘಟನೆ ಒಳಗೊಂಡಿದೆ. ಚಾಣುಕ್ಯ ಓದೂ ಈ ಕಾದಂಬರಿಯ ಅರ್ಥಪೂರ್ಣ ಓದಿಗೆ ನೆರವು ನೀಡುತ್ತದೆ.
ಈ ಕಾದಂಬರಿಯ ಕಾರ್ಯಕ್ರಮ ಒಂದರಲ್ಲಿ ಶತಾವಧಾನಿ ಡಾ.ಆರ್.ಗಣೇಶ್ ಈ ಕೃತಿಯ ಮೂಲಕ ಲೇಖಕಿ ಭೈರಪ್ಪರ ಆವರಣದಿಂದ ಹೊರಬಂದರು ಎಂದರು. ನನಗೆ ಹಾಗೆನಿಸಲಿಲ್ಲ. ಭೈರಪ್ಪ ತಮ್ಮ ಸಂಪೂರ್ಣ ಸಾಮರ್ಥ್ಯದಿಂದ ಮೆರೆಯುತ್ತಿದ್ದವರು ವಯೋ ಸಹಜ ಕಾರಣದಿಂದ ಅದನ್ನು ಕೊಂಚ ಕಳೆದುಕೊಂಡಿರಲೇ ಬೇಕು. ಅವರ ಆ ಸಾಮರ್ಥ್ಯ ಮತ್ತಷ್ಟು ಉತ್ಕರ್ಷ ಸಾಧಿಸಿದ್ದರೆ ಏನು ಸಿಗುತ್ತಿತ್ತೋ ಮಾಗಧ ಅದನ್ನು ನೀಡಿದೆ. ಒಂದು ಸಾರ್ಥಕ ಓದು ಬಯಸುವವರೆಲ್ಲಾ ಓದಲೇ ಬೇಕಾದ ಕಾದಂಬರಿ ಇದು.
Association for Democratic Reforms ನಮ್ಮ ದೇಶದ “ಸೀಎಂ” ಗಳಲ್ಲಿ ಯಾರು ಸಿರಿವಂತರು?
Association for Democratic Reforms ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸಿದಾಗ ತಮ್ಮ ಆಸ್ತಿಘೋಷಣೆ ಮಾಡುತ್ತಾರೆ.
ಜಯಶಾಲಿಯಾದ ನಂತರ ಸರ್ಕಾರದಲ್ಲಿ ನಿಗಮ/ ಮಂಡಳಿ
ಅಧ್ಯಕ್ಷ/ ಸಚಿವರಾಗಿ ಲಾಭದಾಯಕ ಹುದ್ದೆ ಅನುಭವಿಸಿ ಹೊಸದಾಗಿ ಆಸ್ತಿಗಳಿಸಿ ,ತಮ್ಮ ಆದಾಯ ಮೂಲ ಹೆಚ್ಚಿಸಿಕೊಂಡಲ್ಲಿ ಕ್ರಾಸ್ ರೆಫರೆನ್ಸ್ ಮಾಡುವ ಪರಿಪಾಠವಿದೆ.
ಇದೀಗ ದೇಶದ ಬೇರೆಬೇರೆ ರಾಜ್ಯಗಳ ಮುಖ್ಯಮಂತ್ರಿಗಳ ಆದಾಯವನ್ನೇ ಆಧರಿಸಿದ ಒಂದು ಪತ್ರಿಕಾ ವರದಿ ಇದೆ.
ಅದರ ಪ್ರಕಾರ ದೇಶದ ಶ್ರೀಮಂತ ಮುಖ್ಯಮಂತ್ರಿ ಪಟ್ಟಿಯಲ್ಕಿನ ಮೊದಲ ಸ್ಥಾನ, ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಿಗೆ ಸಂದಿದೆ.
ಶ್ರೀಚಂದ್ರಬಾಬು ನಾಯ್ಡು ಅವರ ಆಸ್ತಿಯ ಮೊತ್ತ
₹931ಕೋಟಿಯೆಂದು ಹೇಳಲಾಗಿದೆ.
ಅರುಣಾಚಲ ಪ್ರದೇಶದ ಸೀಎಂ ಪೆಮಾ ಖುಂಡು ದ್ವಿತೀಯ ಸ್ಥಾನದಲ್ಲಿದ್ದಾರೆ.
ಕರ್ನಾಟಕದ ಸೀಎಂ ಸಿದ್ಧರಾಮಯ್ಯ ₹51 ಕೋಟಿ ಆಸ್ತಿ ಹೊಂದಿದ್ದಾರೆಂದು ಹೇಳಲಾಗಿದೆ. ನಮ್ಮ ರಾಜ್ಯದ ಸೀಎಂ ಸಿದ್ಧರಾಮಯ್ಯನವರು ತೃತೀಯ ಸ್ಥಾನದಲ್ಲಿದ್ದಾರೆ.
Association for Democratic Reforms ಅತ್ಯಂತ ಕಡಿಮೆ ಸಿರಿವಂತೆ ಎಂದರೆ ಪ.ಬಂಗಾಳದ ಸೀಎಂ, ಮಮತಾ ‘ದೀದಿ’.
ಅವರ ಆಸ್ತಿ ಮೌಲ್ಯ
₹15 ಲಕ್ಷ ಇದೆ.
Association for Democratic Reforms (ADR) ಈ ಮಾಹಿತಿಯನ್ನ
ಮಾಧ್ಯಮಗಳಿಗೆ ಬಿಡುಗಡೆ ಮಾಡಿ ತಿಳಿಸಿದೆ.
LB & S.B.S. College ನಮ್ಮ ಸಂಸ್ಥೆಯ ಲೆಕ್ಕಪತ್ರಗಳು ಪಾರದರ್ಶಕ, ಆಡಿಟರ್ ಸಲಹೆಯಂತೆ ಕ್ರಮಕೈಗೊಳ್ಳಲಾಗಿದೆ- ಕವಲಕೋಡು ವೆಂಕಟೇಶ್
LB & S.B.S. College ಹಿಂದಿನ ಆಡಳಿತ ಮಂಡಳಿ ಅಕ್ರಮವಾಗಿ ನೊಂದಾಯಿಸಿದ್ದ ಒಂದೇ ಕುಟುಂಬದ ಬಂಧುಗಳಾಗಿದ್ದ 54 ಸದಸ್ಯರ ಸದಸ್ಯತ್ವ ವಜಾ ಆಗಿದ್ದ ಕಾರಣ ಉಂಟಾಗಿದ್ದ ವಿವಾದದಿಂದಾಗಿ ಮುಂದೂಡಲ್ಪಟ್ಟ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಮಹಾಸಭೆ ಹೈಕೋರ್ಟ್ ಆದೇಶದಂತೆ ಪೋಲೀಸ್ ಬಿಗಿ ಬಂದೋಬಸ್ತಿನಲ್ಲಿ ಎಲ್.ಬಿ. & ಎಸ್.ಬಿ.ಎಸ್. ಕಾಲೇಜಿನಲ್ಲಿ ನಡೆಯಿತು.
ಪ್ರಸ್ತುತ ಬದಲಾದ ಶಿಕ್ಷಣ ವ್ಯವಸ್ಥೆಯ ಹಿನ್ನೆಲೆಯಲ್ಲಿ ಮಲೆನಾಡಿನ ವಿದ್ಯಾಕಾಂಕ್ಷಿಗಳ ಬಯಕೆಯಂತೆ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಯಲ್ಲಿ ಹೊಸದಾಗಿ ವಿವಿಧ ಕೋರ್ಸ್ಗಳನ್ನು ಪ್ರಾರಂಭಿಸುವಂತೆ ಮುಂದಿಟ್ಟ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು.
ಹಿಂದಿನ ಆಡಳಿತ ಮಂಡಳಿಯು ನಡೆದಿದೆ ಎನ್ನಲಾದ ಹಲವು ಕೋಟಿ ರೂಪಾಯಿಗಳ ಅವ್ಯವಹಾರ ಕುರಿತಂತೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು.
ಪ್ರಗತಿ ಶಾಲೆಯಲ್ಲಿನ ಸ್ಮಾರ್ಟ್ ಬೋರ್ಡ್ ಹಗರಣ, ಬಿ.ಎಡ್ ಕಾಲೇಜು ಕಟ್ಟಡ, ರಂಗಮಂದಿರ, ಒಳಾಂಗಣ ಕ್ರೀಡಾಂಗಣ ನಿರ್ಮಾಣಗಳಲ್ಲಿ ಆಗಿರುವ ಕಳಪೆ ಕಾಮಗಾರಿ, ಅವ್ಯವಹಾರ, ಹಣಕಾಸಿನ ವ್ಯವಹಾರದಲ್ಲಿ ನಿಯಮಗಳ ಉಲ್ಲಂಘನೆ, ಉಪನ್ಯಾಸಕರ ನೇಮಕಾತಿ ಹಗರಣ, ನ್ಯಾಕ್ ಸಮಿತಿಯ ಭೇಟಿ ಸಂದರ್ಭದಲ್ಲಿ ವ್ಯಯಿಸಿದ ಹಣದ ದುರುಪಯೋಗ, ಸ್ವಜನ ಪಕ್ಷಪಾತ, ನೂರಕ್ಕೂ ಹೆಚ್ಚು ಸ್ವಜನರನ್ನು ಸದಸ್ಯರನ್ನಾಗಿ ನೊಂದಾಯಿಸಿ ಸಂಸ್ಥೆಯನ್ನು ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಳ್ಳು ಮಾಡಿರುವ ಹುನ್ನಾರ, ಸಾಗರದ ಡಿಸಿಸಿ ಬ್ಯಾಂಕಿನಲ್ಲಿ ಮಾಡಿರುವ ಒಂದು ಕೋಟಿ ರೂಪಾಯಿಗಳ ಸಾಲ, ಕರ್ನಾಟಕ ಬ್ಯಾಂಕಿನಲ್ಲಿ 8೦ ಲಕ್ಷದ ಠೇವಣಿ ಮೇಲೆ ಮಾಡಿರುವ 6೦ ಲಕ್ಷ ರೂಪಾಯಿಗಳ ಸಾಲ, 57 ಲಕ್ಷ ಕೈಗಡ ಸಾಲ ಇತ್ಯಾದಿಗಳ ಕುರಿತಂತೆ ವಿವರಗಳನ್ನು ಮತ್ತು ಅಂಗ ಸಂಸ್ಥೆ ತಾಳಗುಪ್ಪ ನಾಲಂದ ಪ್ರೌಢಶಾಲೆಗೆ ಕಾಯಕಲ್ಪ ನೀಡಿದ್ದು, ವಿಶ್ರಾಂತ ಕುಲಪತಿ ಡಾ|| ಮುರಿಗಪ್ಪ ಕುಟುಂಬದ ಕಾಯಕ ಫೌಂಡೇಷನ್ ಸಂಸ್ಥೆಯೊಂದಿಗೆ ಮಾಡಿಕೊಂಡ ಒಪ್ಪಂದ, ಕಾಲೇಜಿನ 83 ಎಕರೆ ಜಮೀನಿನ ಸಂರಕ್ಷಣೆಗಾಗಿ ಕೈಗೊಂಡ ಕಠಿಣ ನಿರ್ಧಾರಗಳ ಬಗ್ಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ|| ಹೆಚ್.ಎಂ. ಶಿವಕುಮಾರ್ ನೀಡಿದರು.
LB & S.B.S. College ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ 85 ಲಕ್ಷಕ್ಕೂ ಹೆಚ್ಚಿನ ಹಣದಲ್ಲಿ ಶಾಲಾ ಕಾಲೇಜು ಅಭಿವೃದ್ಧಿಗೆ ವಿನಿಯೋಗಿಸಿದೆ. ಹಾಗೂ ಉಪನ್ಯಾಸಕರಿಗೆ ವೇತನದಲ್ಲಿ ಹೆಚ್ಚಳ, ಪಿ.ಎಫ್, ಇಎಸ್‌ಐ, ಗ್ಯಾಚ್ಯುಟಿ ಸೌಲಭ್ಯಗಳನ್ನು ನೀಡಲಾಗಿದೆ. ಶಾಲೆ ಕಾಲೇಜುಗಳಲ್ಲಿನ ಮೂಲ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಎಲ್ಲ ಸಾಲಗಳಿಂದ ಮುಕ್ತಗೊಳಿಸಲಾಗಿದೆ ಎಂದು ತಿಳಿಸಲು ಸಂತೋಷ ವಾಗುತ್ತದೆ.ಮತ್ತು
ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಭಾಗೀದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಲಿಂಡೆ ಫೌಂಡೇಷನ್ ಸಿಎಸ್‌ಆರ್ ಖಾತೆಯಿಂದ ರೂ 45 ಲಕ್ಷ ನೀಡಿರುತ್ತಾರೆ. ಇದನ್ನು ಕಾಲೇಜ್ ವಿವಿಧ ಶಿಕ್ಷಣ ಅಭಿವೃದ್ಧಿಗೆ ವಿನಯೋಗಿಸಲಾಗಿದೆ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಸಹಕಾರದಿಂದ ಹೊರಾಂಗಣ ಕ್ರೀಡಾಂಗಣದ ಉನ್ನತಿಗಾಗಿ ಕ್ರಮ ಕೈಗೊಳ್ಳಲಾಗಿದೆ.
ನಮ್ಮ ಸಂಸ್ಥೆಯ ಲೆಕ್ಕಪತ್ರಗಳು ಪಾರದರ್ಶಕವಾಗಿದ್ದು, ಆಡಿಟರ್ ಸಲಹೆ ಯೆಂತ್ತೆ ಕ್ರಮ ಕೈಗೊಳ್ಳಲಾಗಿದೆ.ಮಾನ್ಯ ಸದಸ್ಯರು ಕಛೇರಿ ವೇಳೆಯಲ್ಲಿ ಬಂದು ಪರಿಶೀಲಿಸಬಹುದಾಗಿದೆ ಎಂದು ಕೋಶಾಧಿಕಾರಿ ಕವಲಕೋಡು ವೆಂಕಟೇಶ್ ತಿಳಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಎಂ. ಹರನಾಥರಾವ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಕಳೆದ 60ವರ್ಷಗಳಲ್ಲಿ ಸಂಸ್ಥೆಯಿಂದ ಶಿಕ್ಷಣ ಪಡೆದು ದೇಶವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿರುವ 85 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಹಕಾರ ಪಡೆದು ಸಂಸ್ಥೆಯನ್ನು ಸದೃಢಗೊಳಿಸಿ ಗುಣಮಟ್ಟದ ಶಿಕ್ಷಣ ನೀಡಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿ, ಅನೇಕ ಕಾಲೇಜುಗಳ ಆಡಳಿತ ಮಂಡಳಿಯ ಸದಸ್ಯರೂ, ಖ್ಯಾತ ವಕೀಲರೂ ಆಗಿರುವ ಕೆ. ಬಸಪ್ಪ ಗೌಡರು ಮಾತನಾಡಿ ಉತ್ತಮ ಸಲಹೆಗಳನ್ನು ನೀಡಿದರು.
ಉಪಾಧ್ಯಕ್ಷ ರವಿಕುಮಾರ ಗೌಡ ಅವರು ಆರಂಭದಲ್ಲಿ ಸ್ವಾಗತಿಸಿ, ಸಹಕಾರ್ಯದರ್ಶಿ ಸತ್ಯನಾರಾಯಣ ಎಂ.ಆರ್. ವಂದಿಸಿದರು.
Rotary Club Shivamogga ಅತಿ ವೇಗ ಅಪಘಾತಕ್ಕೆ ಕಾರಣ. ಸುರಕ್ಷಿತವಾಗಿ ವಾಹನ ಚಲಾಯಿಸಿ- ಕೆ.ಬಿ.ಅಶೋಕ ನಾಯ್ಕ್
Rotary Club Shivamogga ಪ್ರತಿಯೊಬ್ಬರೂ ಸುರಕ್ಷಿತ ವಾಹನ ಚಾಲನೆ ಮಾಡಲು ಆದ್ಯತೆ ನೀಡಬೇಕು. ಚಾಲನಾ ಪರವಾನಗಿ ಇಲ್ಲದೇ ವಾಹನ ಚಲಾಯಿಸಬಾರದು ಎಂದು ಮಾಜಿ ಶಾಸಕ, ಹಾಥಿರಾಮ್ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಕೆ.ಬಿ.ಅಶೋಕ್ ನಾಯ್ಕ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್, ಮಹರ್ಷಿ ಹಾಥಿರಾಮ್ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಸಹಯೋಗದಲ್ಲಿ ನಗರದ ಅಕ್ಷರ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ರೋಟರಿ ಜಿಲ್ಲಾ ಕಾರ್ಯಕ್ರಮವಾದ ರಸ್ತೆ ಸಂಚಾರ ಸುರಕ್ಷತೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಎಲ್ಲ ಸಂಚಾರಿ ನಿಯಮವನ್ನು ಪಾಲಿಸಬೇಕು. ಅತಿ ವೇಗ ಅಪಘಾತಕ್ಕೆ ಕಾರಣವಾಗಿದ್ದು, ಸಾರ್ವಜನಿಕರು ಸುರಕ್ಷಿತವಾಗಿ ವಾಹನ ಚಾಲನೆ ಮಾಡಬೇಕು ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಅಧ್ಯಕ್ಷ ಕಿರಣ್ ಕುಮಾರ್.ಜಿ ಮಾತನಾಡಿ, ರೋಟರಿ ಸಂಸ್ಥೆ ರಸ್ತೆ ಸುರಕ್ಷತಾ ಸಂಚಾರಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಹಸಿರು ಮತ್ತು ನೀರಿನ ಅರಿವು, ಆರೋಗ್ಯ ಮತ್ತು ಸ್ವಚ್ಛತಾ ಶಿಕ್ಷಣ, ಕಾನೂನಿನ ಅರಿವು ಸೇರಿದಂತೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಸಮಾಜದ ಒಳಿತಿಗಾಗಿ, ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವುದರಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಪಶ್ಚಿಮ ಸಂಚಾರಿ ಠಾಣೆಯ ಸಬ್ ಇನ್ಸ್ಪೆಕ್ಟರ್ ತಿರುಮಲೇಶ್.ಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಚಾರ ಜಾಗೃತಿ ನಿಯಮಗಳನ್ನು ವಿವರಿಸಿದರು. ವಿಡಿಯೋ ಪ್ರೆಸೆಂಟೇಷನ್ ಮೂಲಕ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮ ಉಲ್ಲಂಘಿಸಿದರೆ ಆಗುವ ಪರಿಣಾಮಗಳ ಬಗ್ಗೆ ವಿವರಿಸಿದರು.
Rotary Club Shivamogga ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸದೆ, ಚಾಲನೆಯ ಪರವಾನಗಿ ಇಲ್ಲದೆ ವಾಹನ ಚಲಾಯಿಸಿದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಂಚಾರಿ ನಿಯಮಗಳನ್ನು ಕೂಡ ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುವ ಅರಿವು ಮೂಡಿಸಿದಾಗ ಭವಿಷ್ಯದಲ್ಲಿ ಇಡೀ ಸಮಾಜ ಜಾಗೃತವಾಗುತ್ತದೆ ಎಂದು ತಿಳಿಸಿದರು.
ಅಕ್ಷರ ಕಾಲೇಜಿನ ಪ್ರಾಂಶುಪಾಲ ಗಿರೀಶ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನ ಬಸವರಾಜ್ ಬಿ, ಕ್ಲಬ್ ಸದಸ್ಯರಾದ ಧರ್ಮೇಂದ್ರ ಸಿಂಗ್, ರಾಜಶ್ರೀ ಬಸವರಾಜ್, ಅನ್ ಕ್ಲಬ್ ಅಧ್ಯಕ್ಷೆ ಗೀತಾ ಜಗದೀಶ್, ಕಾರ್ಯದರ್ಶಿ ಶುಭಾ ಚಿದಾನಂದ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಕ್ಷರ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
Klive News Special ಸರಿ…ಆ ನಾಲ್ಕು ಜನ ಯಾರು??. ಯಕ್ಷ ಪ್ರಶ್ನೆಯೆ?” ಲೇ: ಶ್ರೀಮತಿ ಶುಭಾ ಕುಸ್ಕೂರ್
Klive News Special ಅಯ್ಯೋ ಮಗಳೇ ಜೋರಾಗಿ ಕಿರುಚಾಡಿ ರಂಪ ಮಾಡ್ಬೇಡ..ನಾಲ್ಕು ಜನ ಏನಾದರೂ ತಿಳ್ಕೊತಾರೆ..ಅಯ್ಯೋ ಇಂತಹ ಬಟ್ಟೆ ಹಾಕೋಬೇಡ ನಾಲ್ಕು ಜನ ನೋಡಿದರೆ ಏನಾದರೂ ತಿಳ್ಕೊeತಾರೆ..ಅಯ್ಯೋ ಹುಡುಗರ ಜೊತೆ ಮಾತಾಡ್ಬೇಡ ನಾಲ್ಕು..ಜನ ನೋಡಿದರೆ ಈ ಹುಡ್ಗಿ ಸರಿಯಿಲ್ಲ ಅಂತಾರೆ…ಹೇಳು ಹೇಳು ಹೇಳುವುದೇ ಆಯ್ತು ಮಕ್ಕಳಿಗೆ ಹೆತ್ತವರು ನಮಗೆ ಯಾರದು..ಯಾರು ಆ ನಾಲ್ಕು ಜನ ಮಹಾಜನಗಳು..ಅವರೇನು ನಮಗೆ ಕಷ್ಟಕ್ಕೆ ಆಗುವರ ಇಲ್ಲ ನಾವು ಸಂತೋಷದಲ್ಲಿರುವಾಗ ನೋಡಿ ಸಹಿಸುವರ ಇಲ್ವಲ್ಲ..ನಮ್ಮ ಕಷ್ಟವನ್ನು ನೋಡಿ ಸಂತೋಷಪಡುವವರೆe ಈ ನಾಲ್ಕು ಜನ ಇಂತಹವರಿಗೆ ನಾವು ಹೆದರಿ ಕಟ್ಟು ಪಾಡುಗಳ ಬೇಲಿ ಹಾಕಿ ಮಕ್ಕಳನ್ನು ಬಂಧನದಲ್ಲಿರಿಸಬೇಕ ಆ ನಾಲ್ಕು ಜನರ ಮನೆಯಲ್ಲಿ ದೋಸೆಕಲ್ಲೇ ತೂತವಾಗಿರುವಾಗ ಬೇರೆಯವರ ಮನೆ ದೋಸೆತೂತದ ಬಗ್ಗೆ ಯಾಕೆ ಮಾತಾಡಬೇಕು..ಅವರಿಗೆ ಅವರ ಸಂಸಾರದ ತೂ ತಗಳೇ ತುಂಬಿ ತುಳುಕುವಷ್ಟು ಇರುತ್ತದೆ.ಅಂತವರೆ ಬೇರೆಯವರ ಬಗ್ಗೆ ಮಾತನಾಡುವುದು..
ಅವರ ಬಗ್ಗೆ ನಾವು ಏಕೆ ತಲೆಕೆಡಿಸಿಕೊಳ್ಳಬೇಕು..ಮಕ್ಕಳಿಗೆ ನಾವು ಕಟ್ಟು ಪಾಡು ವಿಧಿಸಿ ಜೀವನದಲ್ಲಿ ಅನುಭವಿಸಬೇಕಾದ ಖುಷಿಯಿಂದ ವಂಚಿತರನ್ನಾಗಿ ಮಾಡುವುದು ಎಷ್ಟು ಸರಿ ಯಾರೋ ಆಡುವ ಮಾತಿಗೆ ತಲೆ ಕೆಡಿಸಿಕೊಳ್ಳುವ ಬದಲು ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ,ಒಳ್ಳೆಯ ನಡೆ..ಹಿರಿಯರನ್ನು ಗೌರವಿಸುವ ರೀತಿ..ಅಸಹಾಯಕರಿಗೆ ಮಾಡುವ ಸಹಾಯ ಇವುಗಳ ಬಗ್ಗೆ ಚಿಕ್ಕಂದಿನಿಂದಲೇ ಅದರ ಬಗ್ಗೆ ತಿಳಿಸುವ ರೀತಿಯನ್ನು ಹೇಳಿಕೊಟ್ಟರೆ ಅವರು ಮುಂದೊಂದು ದಿನ ಸಮಾಜದಲ್ಲಿ ಅವರು ಉನ್ನತ ವ್ಯಕ್ತಿಯಾಗಿ ಎಲ್ಲರನ್ನೂ ಪ್ರೀತಿಸುವ ವ್ಯಕ್ತಿಯನ್ನಾಗಿ ಮಾಡುತ್ತದೆ.
ಅದನ್ನು ಬಿಟ್ಟು ಬೇರೆಯವರಿಗೋಸ್ಕರ ತಮ್ಮತನವನ್ನು ಬಿಟ್ಟು ಪರರಿಗೋಸ್ಕರ ಬದುಕುವ ಬದುಕು ನಮ್ಮ ಬದುಕೇ ಅಲ್ಲ.ನಾವು ಕಷ್ಟದಲ್ಲಿದ್ದಾಗ ಬರದಿದ್ದ ಸಂಬಧಗಳಿಗೆ ನೆರೆ ಹೊರೆಯವರಿಗೆ ಬೆಲೆ ಕೊಡುವುದಾದರು ಏಕೆ..ಅವರಿಗೆ ಏಕೆ ಇಷ್ಟು ಮಾನ್ಯತೆ ನಮ್ಮ ತನ ನಾವು ಬಿಟ್ಟುಕೊಡಬಾರದು ಮಕ್ಕಳನ್ನು ಯಾರ ಅಭಿಮಾನಿಗಳಾಗಿ ಬೆಳೆಸಬಾರದು ಬದಲಾಗಿ ಸ್ವಾಭಿ ಮಾನಿಗಳಾಗಿ ಬದುಕುವಂತೆ ಬೆಳೆಸಬೇಕು.
Klive News Special ಅವರಿಗೆ ಒಳ್ಳೆಯ ನಾಗರಿಕನ ಲಕ್ಷಣಗಳನ್ನು ಹೇಳಿಕೊಡಬೇಕು..ಹೆಣ್ಣು ಮಕ್ಕಳು ಗಂಡುಮಕ್ಕಳು ಎನ್ನುವ ಬೇಧ ಇಲ್ಲದೆ ಅವರಿಗೆ ಒಂದೇ ಸ್ಥಾನ ಕೊಟ್ಟು ಬೆಳೆಸಿದಾಗ ಮಾತ್ರ ಅವರಿಗೆ ಯಾವುದೇ ಕೀಳರಿಮೆ ಇಲ್ಲದೆ ಸಮಾಜವನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಬರುತ್ತದೆ.ಆಗಲೇ ಅವರ ಬದುಕಿಗೊಂದು ಅರ್ಥ ಸಿಗುತ್ತದೆ..
ಆಗ ನಮ್ಮ ಬಗ್ಗೆ ನಾಲ್ಕು ಜನ ನಾಲ್ಕು ಮಾತನಾಡುವರು ಬಾಯಿ ತಂತಾನೇ ಮುಚ್ಚಿಹೋಗಿರು ತ್ತದೆ. ಇದೆ ನಾವು ತಂದೆ ತಾಯಿಗಳು ಮಕ್ಕಳಿಗೆ ಸಮಾಜದ ಬಗ್ಗೆ ಹೆದರಿಕೆ ಹುಟ್ಟಿಸಿ ಬೆಳೆಸುವುದ ಬಿಟ್ಟು ಸಮಾಜವನ್ನು ಎದುರಿಸಿ ಬೆಳೆಸಬೇಕು.ಆಗಲೇ ಅವರ ಇಷ್ಟದ ಬದುಕು ಅವರದ್ದಾಗುತ್ತದೆ.ಎಂಬುದು ನನ್ನ ಅನಿಸಿಕೆ.
ಶುಭ ಕುಸ್ಕೂರು ಶಿವಮೊಗ್ಗ
Seva Sindhu online portal ವಿಕಲ ಚೇತನರು ಬಸ್ ಪಾಸ್ ಗಳನ್ನು ಸೇವಾಸಿಂಧು ಆನ್ ಲೈನ್ ಪೋರ್ಟಲ್ ಮೂಲಕ ಪಡೆಯಲು / ನವೀಕರಿಸಲು ಅರ್ಜಿ ಸಲ್ಲಿಸಬಹುದು
Seva Sindhu online portal 2025ನೇ ಸಾಲಿಗೆ ವಿಕಲಚೇತನರ ರಿಯಾಯಿತಿ ಬಸ್ ಪಾಸ್‌ಗಳ ವಿತರಣೆ/ನವೀಕರಣಕ್ಕೆ “ಸೇವಾ ಸಿಂಧು” ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಡಿ.30 ರಿಂದ ಫೆ.28 ರವರೆಗೆ https://serviceonline.gov.in.karnataka/URL ಬಳಸಿ ಅರ್ಜಿ ಸಲ್ಲಿಸುವುದು ಕಡ್ಡಾಯ. ನಿಗದಿಪಡಿಸಿದ ದಿನಾಂಕದ ಒಳಗೆ ಪಾಸ್‌ಗಳ ವಿತರಣೆ/ನವಿಕರಿಸಬೇಕಾಗಿರುತ್ತದೆ.
ಹೊಸದಾಗಿ ವಿಕಲಚೇತನರ ಬಸ್‌ಪಾಸ್ ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಶಿವಮೊಗ್ಗ ವಿಭಾಗ ಎಂಬ ಕೌಂಟರ್ ಆಯ್ಕೆ ಮಾಡುವುದು ಹಾಗೂ 2024ನೇ ಸಾಲಿನಲ್ಲಿ ಪಾಸ್ ಪಡೆದಿರುವ ಫಲಾನುಭವಿಗಳು ಪಾಸ್ ನವೀಕರಣಕ್ಕಾಗಿ ಘಟಕ ವ್ಯವಸ್ಥಾಪಕರ ಕೌಂಟರ್ ಆಯ್ಕೆ ಮಾಡಲು ಸೂಚಿಸಿದೆ.
Seva Sindhu online portal ಫಲಾನುಭವಿಗಳು ಪಾಸ್ ಪಡೆಯಲು ಬರುವಾಗ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಯವರಿಂದ ದೃಢೀಕರಿಸಿದ ಮಾನ್ಯತೆ ಇರುವ ವಿಕಲಚೇತನರ ಗುರುತಿನ ಚೀಟಿ ಪುಸ್ತಕ ಅಥವಾ ಯುಡಿಐಡಿ ಸ್ಮಾರ್ಟ್ ಕಾರ್ಡ್, ಡಿಸೆಬಿಲಿಟಿ ಸರ್ಟಿಫಿಕೇಟ್, ಫಲಾನುಭವಿಗಳ ಇತ್ತೀಚಿನ 3 ಭಾವಚಿತ್ರ, 2024ನೇ ಸಾಲಿನಲ್ಲಿ ಪಡೆದಿರುವ ವಿಕಲಚೇತನರ ಮೂಲ ಪಾಸ್(ನವೀಕರಣಕ್ಕಾಗಿ), ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ನೀಡಬೇಕು. ಪಾಸ್ ಶುಲ್ಕ ರೂ.660 ಗಳನ್ನು ನಗದು ಮೂಲಕ ಪಾವತಿಸಬೇಕೆಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
Rabindra Kalakshetra ಕವಿತಾ ಸುಧೀಂದ್ರ ಇನ್ನಷ್ಟು ಹೆಚ್ಚು ಕಾರ್ಯಕ್ರಮ ನೀಡಿ ಯಶಸ್ಸು ಸಾಧಿಸಲಿ- ಡಾ.ಎಂ.ವೆಂಕಟೇಶ್
Rabindra Kalakshetra ರಾಜ್ಯಾದ್ಯಂತ ಹಾಸ್ಯ ಕಾರ್ಯಕ್ರಮಗಳ ಮೂಲಕ ಮೌಲ್ಯಗಳ ಅರಿವು ಮೂಡಿಸುವ ಜತೆಯಲ್ಲಿ ವಿಶೇಷ ಸಾಧನೆ ಮಾಡಿರುವ ಜಿಲ್ಲೆಯ ಹಾಸ್ಯ ಕಲಾವಿದೆ ಕವಿತಾ ಸುಧೀಂದ್ರ ಅವರಿಗೆ ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಸುರ್ವೆ ಕಲ್ಚರಲ್ ಅಕಾಡೆಮಿಯಿಂದ ಆಯೋಜಿಸಿದ್ದ ಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನದ 11ನೇ ಆವೃತ್ತಿ ಕಾರ್ಯಕ್ರಮದಲ್ಲಿ ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ ಪ್ರದಾನ ಮಾಡಯಿತು.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಸಮಾರಂಭ ನಡೆಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿರುವ ಕವಿತಾ ಅವರು ಇನ್ನಷ್ಟು ಹೆಚ್ಚು ಕಾರ್ಯಕ್ರಮ ನಡೆಸಿಕೊಡುವ ಮೂಲಕ ಯಶಸ್ಸು ಕಾಣಲಿ ಎಂದು ಕನ್ನಡ ಜಾನಪದ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಂ ವೆಂಕಟೇಶ್, ಕಾರ್ಯದರ್ಶಿ ಖಜಾಂಚಿ, ಪದಾಧಿಕಾರಿಗಳು ಅಭಿನಂದನೆ ತಿಳಿಸಿದ್ದಾರೆ.
Rabindra Kalakshetra ಶಿವಮೊಗ್ಗದ ಕವಿತಾ ಸುಧೀಂದ್ರ ಅವರು ಮಹಿಳಾ ಹಾಸ್ಯ ಕಲಾವಿದರಾಗಿದ್ದು, ವಿವಿಧ ಚಾನಲ್‌ಗಳಲ್ಲಿ ಹಾಗೂ ರಾಜ್ಯಾದ್ಯಂತ ವಿವಿಧ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಜೀವನ ಕೌಶಲ್ಯ ಹಾಗೂ ಮೌಲ್ಯ ಕುರಿತು ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ತೀರ್ಥಹಳ್ಳಿ ಬಿ.ಇ.ಒ .ಕಚೇರಿಯಲ್ಲಿ ವಿಶೇಷ ಮಕ್ಕಳಿಗೆ ಸಮನ್ವಯ ಸಂಪನ್ಮೂಲ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಎನ್‌ಎಸ್‌ಎಸ್ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಭರತನಾಟ್ಯ ಕಲಾವಿದೆ, ಹಾಡುಗಾರ್ತಿ, ಬರಹಗಾರ್ತಿಯಾಗಿದ್ದಾರೆ.
Joint Commissioner Excise North Division ಅಬಕಾರಿ ಸಿಬ್ಬಂದಿ ದಾಳಿ.₹1.35,000 ಮೌಲ್ಯದ ಮದ್ಯ ವಶ. ಆರೋಪಿಗಳ ದಸ್ತಗಿರಿ
Joint Commissioner Excise North Division ಶಿವಮೊಗ್ಗ ನಗರದ ಸವಳಂಗ ರಸ್ತೆಯ ಫ್ಲೈ ಓವರ್‌ನ ಅಂಡರ್ ಪಾಸ್‌ನಲ್ಲಿ ಡಿ.30 ರಂದು ಅಬಕಾರಿ ದಾಳಿ ನಡೆಸಿ 180 ಮಿ.ಲಿ.ನ ಮ್ಯಾಕ್‌ಡೋವೆಲ್ಸ್ ನಂ-1 ವಿಸ್ಕಿಯ 170 ಬಾಟಲಿಗಳು ಅಂದಾಜು ಮೌಲ್ಯ ರೂ.1,35,000 ದ ಒಟ್ಟು 30,600 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ದಾವಣಗೆರೆ ವಿಭಾಗ, ದಾವಣಗೆರೆ ಹಾಗೂ ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಇವರ ನಿರ್ದೇಶನದ ಮೇರೆಗೆ ಅಬಕಾರಿ ಉಪ ಅಧೀಕ್ಷಕರು, ಶಿವಮೊಗ್ಗ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ವಲಯ-1 ರ ಅಬಕಾರಿ ನಿರೀಕ್ಷಕ ಹನುಮಂತಪ್ಪ ಡಿ.ಎನ್ ಇವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಎ-1 ಹರೀಶ, ಎ-2 ಶಿವು ಚನ್ನಗಿರಿ ತಾಲ್ಲೂಕು ಇವರು ಮದ್ಯವನ್ನು ನೋಂದಣಿ ಸಂಖ್ಯೆ ಕೆಎ 17 ಹೆಚ್‌ಕ್ಯು 0728 ದ್ವಿಚಕ್ರ ವಾಹನದಲ್ಲಿ ಸಾಗಾಣಿಕೆ ಮಾಡುವಾಗ ಜಪ್ತಿ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿರುತ್ತದೆ.
Joint Commissioner Excise North Division ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ಚಂದ್ರಪ್ಪ ಎಸ್.ಡಿ, ಅಬಕಾರಿ ಮುಖ್ಯ ಪೇದೆಗಳಾದ ಜಯರಂಜ್ ಡಿ, ಮಹಮ್ಮದ್ ಅಸ್ರಾವುದ್ದೀನ್ ಖಾನ್, ಅಬಕಾರಿ ಪೇದೆಗಳಾದ ನಾಗಪ್ಪ ಶಿರೋಳ್, ನಾಗಪ್ಪ, ರವಿ ಹೆಚ್, ನವೀನ್ ಹೆಚ್ ಬಿ ಹಾಗೂ ಇತರ ಅಬಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರೆಂದು ಅಬಕಾರಿ ಡೆಪ್ಯುಟಿ ಕಮಿಷನರ್ ತಿಳಿಸಿದ್ದಾರೆ.
