New Year ಸೋಲು..
ಅಂತು ಕಳೆದೆವು ಹಲವು ದಿನಗಳು
ಮತ್ತೇ ಬರುವುದೇ ಆ ನೆನಪುಗಳು |
ಸೋಲು ಗೆಲುವಿನ ಪಯಣಗಳ
ಮರೆಯಲಾರದ ಕ್ಷಣಗಳ ||
ಯೋಚಿಸುವ ಮುನ್ನ ಆಲೋಚಿಸಿದೆ
ಗೆಲುವಿಗಿಂತ ಸೋತದ್ದೆ ಹೆಚ್ಚೆಂದು |
ಇಲ್ಲಿ ನನಗಾರು ಸೋಲಿಸಿಲ್ಲ..!
ನನಗೆ ನಾನೇ ಸೋತಿದ್ದು ||
ಸೋಮಾರಿತನದ ನೆಪದಲ್ಲಿ
ದ್ವೇಷದ ಪರದಿಯಲ್ಲಿ |
ಜಾತಿ-ಧರ್ಮಗಳ ಮನದಲ್ಲಿ
ಹೊರಬಾರದೆ ಸೋತಿದ್ದೇನೆ ||
ಅಧಿಕಾರದ ಅಹಮಿನಲಿ
ಸಿರಿತನದ ಸೋಗಿನಲಿ |
ಬೇವರ ಹರಿಸದ ಬದುಕನು
ಕಾಣದಂತೆ ನಾನೆ ಸೋತಿರುವೆ ||
ಅದೆಷ್ಟು ದಿನಗಳ ಕಳೆದೆವು
ನೆನಪಿಗೆ ಬಾರದ ಕ್ಷಣಗಳ |
ಮರೆತು ಬಿಡುವ ಮುನ್ನ
ನನ್ನ ಸೋಲನ್ನು ನಾನೆ ಸೋಲಿಸಬೇಕು ||
New Year ಹೊಸತನದಿ ಹೊಸಬಗೆಯ
ನಿತ್ಯ ಹರಿಯಲಿ ಹೃದಯದಿ |
ಕಣ ಕಣದಲ್ಲೂ ವಿಶ್ವಪಥದಿ ಸಾಗುವ
ಮನುಜ ಪಥದಿ ಗೆಲುವನು ||
ವಿ.ಟಿ.ಸ್ವಾಮಿ,ಕವಿತೋಟ
ಸಾಗರ
ಮೊ:9880871716