Thursday, March 19, 2026
Thursday, March 19, 2026
Home Blog Page 452

Inner Wheel Shivamogga ಬಾಲ್ಯದಿಂದಲೇ ಮಕ್ಕಳಿಗೆ ವಿಜ್ಞಾನದ ಆಸಕ್ತಿಯನ್ನು ಬೆಳೆಸಬೇಕು- ವಾಗ್ದೇವಿ ಬಸವರಾಜ್

0

Inner Wheel Shivamogga ಇಂದು ಎಲ್ಲಾ ಕ್ಷೇತ್ರಗಳಲ್ಲೂ ತಂತ್ರಜ್ಞಾನದ ಅವಶ್ಯಕತೆ ತುಂಬಾ ಇದೆ ವಿಜ್ಞಾನವನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎಂದು ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರು ಅಭಿಮತ ವ್ಯಕ್ತಪಡಿಸಿದರು.

ಅವರು ಇನ್ನರ್ ವೀಲ್ ಸದಸ್ಯನೀಯರಿಂದ ದೇಣಿಗೆ ಸಂಗ್ರಹಿಸಿ ನಗರದ ಗಾಯಿತ್ರಿ ವಿದ್ಯಾಲಯಕ್ಕೆ ಗ್ರೀನ್ ಬೋರ್ಡ್ ಗಳು ಹಾಗೂ ವಿಜ್ಞಾನದ ಉಪಕರಣಗಳು ಮತ್ತು ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು ಮಕ್ಕಳು ಪರಿಪೂರ್ಣ ವಿದ್ಯಾರ್ಥಿಗಳಾಗಲು ವಿಜ್ಞಾನದ ಕೊಡುಗೆ ತುಂಬಾ ಇದೆ ಬಾಲ್ಯದಲ್ಲೇ ಮಕ್ಕಳಿಗೆ ವಿಜ್ಞಾನದ ಆಸಕ್ತಿಯನ್ನು ಬೆಳೆಸಬೇಕು ಎಂದು ನುಡಿದರು.

ಗಾಯತ್ರಿ ವಿದ್ಯಾಲಯದ ಖಜಾಂಚಿ ಚಂದ್ರಹಾಸ್ ಪಿ ರಾಯ್ಕರ್ ಅವರು ಮಾತನಾಡುತ್ತಾ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಈಗಾಗಲೇ ಸಾಕಷ್ಟು ಸೇವ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದರ ಮುಖಾಂತರ ಅವರ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸಾಕಷ್ಟು ಆರ್ಥಿಕ ಸಹಾಯ ಮಾಡುವುದರ ಮುಖಾಂತರ ವಿದ್ಯಾರ್ಥಿಗಳನ್ನು ಉತ್ತೇಜಿಸಿದ್ದಾರೆ. ಈ ನಿಟ್ಟಿನಲ್ಲಿ ಇಂದು ತುಂಬಾ ಅಗತ್ಯವಾಗಿ ಬೇಕಾಗಿರುವ ವಿಜ್ಞಾನದ ಉಪಕರಣಗಳನ್ನು ನೀಡಿ ಸಹಕರಿಸಿದ್ದಾರೆ ಎಂದು ಇನ್ನರ್ ವೀಲ್ ಸಂಸ್ಥೆ ಯನ್ನು ಅಭಿನಂದಿಸಿದರು.

Inner Wheel Shivamogga ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ ಇನ್ನರ್ ವೀಲ್ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಾಜಮುಖಿ ಹಾಗೂ ಮಾನವೀಯ ಸೇವೆಗಳನ್ನು ಮಾಡ್ತಾ ಬಂದಿದೆ ಈ ನಿಟ್ಟಿನಲ್ಲಿ ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯವರು ಈ ವರ್ಷವಿಡಿ ಸಾಕಷ್ಟು ಮನುಕುಲದ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಯಿತ್ರಿ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಮಾಣೆಶ್ವರ್ ಶೇಟ್ ವಹಿಸಿ ಮಾತನಾಡುತ್ತಾ ಮಕ್ಕಳ ಪ್ರತಿಭೆ ಹಾಗೂ ಶಿಕ್ಷಣ ಅನಾವರಣಗೊಳ್ಳಲು ಹಾಗೂ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲು ಸಂಘ ಸಂಸ್ಥೆಗಳ ನೆರವು ಬಹಳ ಮುಖ್ಯ ಈ ನಿಟ್ಟಿನಲ್ಲಿ ಇನ್ನರ್ ವೀಲ್ ಸಂಸ್ಥೆಯವರು ನಮ್ಮ ವಿದ್ಯಾಲಯಕ್ಕೆ ತುಂಬಾ ಅಗತ್ಯವಾದ ವಸ್ತುಗಳನ್ನು ವಿತರಣೆ ಮಾಡಿ ಸಹಾಯ ಹಸ್ತ ನೀಡಿ ಸಹಕರಿಸಿದ್ದಾರೆ ಎಂದು ನುಡಿದರು.

ವೇದಿಕೆಯಲ್ಲಿ ಕಾರ್ಯದರ್ಶಿ ಲತಾ ಸೋಮಶೇಖರ್ ಇನ್ನರ್ವಿಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್. ವಾಣಿ ಪ್ರವೀಣ್.
ವಿಜಯ ರಾಯ್ಕರ್. ನೇತ್ರಾವತಿ ಅಣಜಿ ಬಸವರಾಜ್, ಮುಖ್ಯೋಪಾಧ್ಯಾಯರಾದ ಮಂಜುನಾಥ್ ರಾಯ್ಕರ್. ಉಪಸ್ಥಿತರಿದ್ದರು.

S.V. Thimmaiah “ಶರಣ್ಯ”ದಲ್ಲಿ ಎಸ್.ವಿ.ತಿಮ್ಮಯ್ಯ ಸಾರ್ಥಕ ಸ್ಮರಣೆಗೆ ಅವಕಾಶ-ಪಾಸಿಟಿವ್ ಮೈಂಡ್ ಡಾ.ಎಸ್.ಟಿ. ಅರವಿಂದ್

0

S.V. Thimmaiah “ಶರಣ್ಯ”ದಲ್ಲಿ ಎಸ್.ವಿ.ತಿಮ್ಮಯ್ಯ ಸಾರ್ಥಕ ಸ್ಮರಣೆಗೆ ಅವಕಾಶ-ಪಾಸಿಟಿವ್ ಮೈಂಡ್ಡಾ.ಎಸ್.ಟಿ. ಅರವಿಂದ್ ಶಿವಮೊಗ್ಗದ ಸಮಾಜ ಸೇವಕರಲ್ಲಿ
ಮುಂಚೂಣಿ ಹೆಸರು ಎಸ್ .ವಿ.ತಿಮ್ಮಯ್ಯ. ತಮ್ಮ ಜೀವಿತದುದ್ದಕ್ಕೂ ಶೈಕ್ಷಣಿಕ್ಷೇತ್ರದಲ್ಲಿ
ಎನ್ ಇ.ಎಸ್ ಮೂಲಕ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಗಾಂಧಿಚಿಂತನೆಗಳಿಂದ ಪ್ರಭಾವಿತರಾಗಿ ಸಮಾಜದ ಸರ್ವತೋಮುಖ ಪ್ರಗತಿಯ ಕನಸು‌ ಕಂಡವರು.
ದಿವಂಗತರ ಹನ್ನೋಂದನೇ ವರ್ಷದ ಪುಣ್ಯಸ್ಮರಣಾರ್ಥ ಅವರ ಸುಪುತ್ರ ಡಾ.ಎಸ್.ಟಿ.ಅರವಿಂದ್
ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು

ಮನೋವೈಜ್ಞಾನಿಕ ವಿಚಾರ ಸಂಕಿರಣ: ಸೋಲದಿರಲಿ ಮನಸ್ಸು.
ಆರ್ಥಿಕ ಸಹಾಯ, ಶಿವಮೊಗ್ಗದ ವಿತರಣೆ, ಅಕ್ಕಿ ,ಬೇಳೆ , ಹಾಗೂ ಅಡುಗೆ ಎಣ್ಣೆ ಹಾಗೂ ಇತರೆ ಸಾಮಗ್ರಿಗಳನ್ನು ಶರಣ್ಯ ರೋಗಿಗಳಿಗೆ ಉಚಿತವಾಗಿ ವಿತರಿಸಲಾಯಿತು.

ಡಿಎಸ್ಎಲ್ ಟ್ರಸ್ಟ್ ಮೂಲಕ ಶ್ರೀ ಡಿಎಲ್ ಮಂಜುನಾಥ್ ಅವರು ಅತ್ಯಂತ ಶ್ಲಾಘನೀಯ ಹಾಗೂ ಪುಣ್ಯದ ಕೆಲಸ ಮಾಡುತ್ತಿದ್ದಾರೆ ಮಾಡುತ್ತಿದ್ದಾರೆ. ಕೊನೆ ಹಂತದ/ ಹಾಸಿಗೆ ಹಿಡಿದಿರುವ ರೋಗಿಗಳ ಆರೈಕೆಯನ್ನು ಮಾಡುತ್ತಿರುವುದು ಪದಗಳಿಗೆ ಮೀರಿ ಮಾಡುತ್ತಿರುವ ಸಮಾಜಮುಖಿ ಕಾರ್ಯ.

ಅವರ ಸಂಸ್ಥೆ ಮೂಲಕ ನನಗೆ ಹಾಗೂ ನಮ್ಮ ಸಿಬ್ಬಂದಿ ವರ್ಗದವರಿಗೆ ಸಸಿ ನೆಡಲು ಸದಾವಕಾಶ ಮಾಡಿಕೊಟ್ಟರು.

S.V. Thimmaiah “ಶರಣ್ಯ”ದಲ್ಲಿ ಎಸ್.ವಿ.ತಿಮ್ಮಯ್ಯ ಸಾರ್ಥಕ ಸ್ಮರಣೆಗೆ ಅವಕಾಶ-ಪಾಸಿಟಿವ್ ಮೈಂಡ್ಡಾ.ಎಸ್.ಟಿ. ಅರವಿಂದ್ಅ ಧ್ಯಕ್ಷತೆಯನ್ನು ವಹಿಸಿ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಶ್ರೀ ಶ್ರೀನಿಧಿ ಅಶ್ವತ್ ನಾರಾಯಣ್ ಅವರು, ನಿರೂಪಣೆಗೈದ ಇಮ್ತಿಯಾಜ್ ಅಹ್ಮದ್ ಅವರು ಶ್ರೀ ಎಸ್ ವಿ ತಿಮ್ಮಯ್ಯನವರ ಜೀವನ ಸಾಧನೆಯನ್ನು ಕಣ್ಮುಂದೆ ತಂದರು,
ನಾ ಕಂಡಂತೆ ಅಪ್ಪಾಜಿ ವಿಷಯವಾಗಿ ಐಶ್ವರ್ಯ ಅರವಿಂದ್ ಅವರು ಅಪ್ಪಾಜಿಯ ಜೊತೆ ಕಳೆದ ಸಮಯ ಹಾಗೂ ಅವರ ವಿಚಾರದ ಧಾರೆಗಳು ಮತ್ತು ಅವರ ಕೊನೆಯ ದಿನಗಳನ್ನು ನೆನಪಿಸಿ,ಎಲ್ಲರನ್ನೂ ಭಾವನಾತ್ಮಕವಾಗಿ ಮಾಡಿದ್ದರು,

ಶ್ರೀಮತಿ ಕಿರಣ್
ದೇಸಾಯಿ ಅವರು ಮಾತನಾಡಿ ಎಸ್ ವಿ ತಿಮ್ಮಯ್ಯ ಅವರ ಕಾರ್ಯಕ್ಷಮತೆ, ಉದಾರತ್ವ, ಸಾಹಿತ್ಯ ಆಸಕ್ತಿ ಬಗ್ಗೆ ಬೆಳಕು ಚೆಲ್ಲಿದರು ಮತ್ತು ಅವರನ್ನು ಜೀವನ್ಮುಖಿ ಎಂದು ಬಿಂಬಿಸಿದ್ದರು.
ಕರ್ನಾಟಕ ಸಂಘದ ಕಾರ್ಯದರ್ಶಿಗಳಾದ ಶ್ರೀಮತಿ ಆಶಾಲತಾ ಮೇಡಂ, ಆರ್ಟ್ ಆಫ್ ಲಿವಿಂಗ್‌ನ ಶ್ರೀ Shabarish Kannan , ಗಾಂಧಿ ಬಸಪ್ಪನವರ ಮಗನಾದ ಶ್ರೀ ಅಶೋಕ್ ಬಸಪ್ಪ, JNNCE ಪ್ರೊಫೆಸರ್ ಆದ ಶ್ರೀ ಸುರೇಶ್ ಗೌಡ್ರು, ಶ್ರೀಮತಿ ಪ್ರಭಾ ಅಶ್ವತ್ ನಾರಾಯಣ್, ಎಸ್ ವಿ ತಿಮ್ಮಯ್ಯ ಕುಟುಂಬಸ್ಥರು ಹಾಗೂ ಶರಣ್ಯ ಪದಾಧಿಕಾರಿಗಳು ಹಾರೈಕೆ ಮಾಡುತ್ತಿರುವ ವೈದ್ಯರು ನರ್ಸ್ ಗಳು ಹಾಗೂ ಎಲ್ಲಾ ಕೆಲಸದವರು ಕಾರ್ಯಕ್ರಮಕ್ಕೆ ವಿಶೇಷ ಮೆರಗು ಮೂಡಿಸಿದರು.

ಒಂದು ಅರ್ಥಪೂರ್ಣ ಕಾರ್ಯಕ್ರಮ ,ಮನಸ್ಸಿಗೆ ತುಂಬಾ ನೆಮ್ಮದಿ ಹಾಗೂ ಸಂತೋಷವನ್ನು ನೀಡಿತು .ನಮ್ಮ ತಂದೆಯವರು ಇಂತ ಕಾರ್ಯಕ್ರಮಗಳಿಗೆ ನಮಗೆ ಸದಾ ಪ್ರೇರಣೆ.
ಸಾರ್ವಜನಿಕರಲ್ಲಿ ನನ್ನ ಒಂದು ವಿನಂತಿ, ಶರಣ್ಯದಂತಹ ಸಂಸ್ಥೆಗಳಿಗೆ ತಮ್ಮ ಕೈಯಲ್ಲಾದ ಹಣ ಹಾಗೂ ಇತರೆ ಸಹಾಯವನ್ನು ಮಾಡಿ ಮಾನವೀಯತೆಯನ್ನು ಜೀವಂತವಾಗಿಡಿ ಎಂದು ಪಾಸಿಟಿವ್ ಮೈಂಡ್ ಆಸ್ಪತ್ರೆಯ ಮುಖ್ಯಸ್ಥ ಡಾ. ಅರವಿಂದ್ ಎಸ್ ಟಿ. ಕೋರಿದ್ದಾರೆ.

Elephant Attack ಕಾಡಾನೆಗಳಿಗೆ ಆಹುತಿಯಾದ ಅಡಿಕೆ ಬಾಳೆ ಫಸಲು. ಪತ್ರೆಹೊಂಡ ಕೃಷಿಕರಿಗೆ ಆಘಾತ

0

Elephant Attack ಸಾಗರ ತಾಲೂಕಿನ ಆನಂದಪುರ ಸಮೀಪದ ಗೀಳಲಗುಂಡಿ ಗ್ರಾಮದ ಪತ್ರೆಹೊಂಡದಲ್ಲಿ ಕಾಡಾನೆ ದಾಳಿಯಿಂದ ತೋಟದ ಬೆಳೆ ನಾಶವಾಗಿರುವ ಘಟನೆ ನಡೆದಿದೆ. ಸತತ ಹದಿನೈದು ದಿನಗಳಿಂದ ಕಾಡಾನೆ ದಾಳಿ ನಡೆದಿದ್ದು ರಾತ್ರಿ ವೇಳೆ ತೋಟಕ್ಕೆ ನುಗ್ಗಿ
Elephant Attack ಅಡಿಕೆ ಬಾಳೆ ತೆಂಗು ನಾಶ ಮಾಡಿವೆ . ಇನ್ಸ್ಪೆಕ್ಟರ್ ವೆಂಕಟ ಸ್ವಾಮಿ ಅವರಿಗೆ ಸೇರಿರುವ ತೋಟದಲ್ಲಿ ಈ ದಾಳಿ ನಡೆದಿದೆ.
ಆನೆಗಳ ನಿರಂತರ ದಾಳಿಯಿಂದ ಗ್ರಾಮಸ್ಥರು ಆತಂಕಕ್ಕಿಡಾಗಿದ್ದಾರೆ‌. ಆನೆಗಳ ದಾಳಿಯಿಂದ ರಕ್ಷಣೆ ಕೊಡಿ ಎಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Holalur Primary Agricultural Cooperative Society ಹೊಳಲೂರು ಸಹಕಾರ ಸಂಘಕ್ಕೆ ನೂತನ ಅಭ್ಯರ್ಥಿಗಳ ಆಯ್ಕೆ

0

Holalur Primary Agricultural Cooperative Society ಶಿವಮೊಗ್ಗ ತಾಲೂಕಿನ ಹೊಳಲೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ನೂತನ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಆಯ್ಕೆಯಾದವರು:ಡಿಸಿ ಜಗದೀಶ್ವರ್ ಹಾಡೋನಹಳ್ಳಿ, ದೇವರಾಜ್ ಎಚ್ ಕೆ, ನಂಜುಂಡಪ್ಪ ಎಸ್, ಫರ್ಜನಾ ಬಾನು, ಮಹಾಬಲೇಶ್ವರಪ್ಪ, ಎಚ್ .ಕೆ . ರಂಗೇಶಪ್ಪ ಕೆ.ಜಿ, ರಾಮಲಿಂಗಪ್ಪ ಬಿ, ಲೀಲಾ ಎಸ್ ವಿ, ಲೋಹಿತ್ ಕುಮಾರ್ ಎಂ, ಶೇಖರಪ್ಪ ಬಿ.ಕೆ, ಸುರೇಶ್ ಎಂಸಿ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘ ಮಾಹಿತಿ ನೀಡಿದೆ.

Kerala Samaj ಕೇರಳ ಸಮಾಜಂ ಅಧ್ಯಕ್ಷರಾಗಿ ಕೆ .ರವೀಂದ್ರನ್ ಆಯ್ಕೆ

0

Kerala Samaj ಶಿವಮೊಗ್ಗ ನಗರದ ಕೇರಳ ಸಮಾಜಂದಿಂದ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆ ಸಮಾಜದ ಸಮಿತಿಗೆ ನೂತನ ಅಧ್ಯಕ್ಷರಾಗಿ ಲಕ್ಷ್ಮಿ ಟ್ರ‍್ಯಾಕ್ಟರ್ ಮಾಲೀಕರಾದ ಕೆ. ರವೀಂದ್ರನ್, ಉಪಾಧ್ಯಕ್ಷರಾಗಿ ಕೆ. ರಾಮಕೃಷ್ಣನ್, ಕಾರ್ಯದರ್ಶಿಯಾಗಿ ವಿ. ಗಿರೀಶ್‌ಕುಮಾರ್ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಕೆ.ಎ. ಸುರೇಶ್ ಕುಮಾರ್, ಸಹ ಕಾರ್ಯದರ್ಶಿಯಾಗಿ ಕೆ.ಬಿ. ಮೋಹನ್ ಹಾಗೂ ನಿರ್ದೇಶಕ ರಾಗಿ ಎಂ. ಪ್ರದೀಪ್‌ಕುಮಾರ್, ಕೆ. ಪ್ರಕಾಶ್, ಜಾಯ್ ವರ್ಗೀಸ್, ಆರ್. ರವೀಂದ್ರನ್, ವನಜಾಕ್ಷಿ, ಎಂಎಂಡಿ ಅಫ್ಸಲ್, ಜಬೀವುಲ್ಲಾö, ಕೆ.ಆರ್. ವಿನೀತ್, ಜಿ. ಹರೀಶ್, ವಿ.ಕೆ. ಬಿನೊಯ್, ಎಂ. ಜಿಯೋರ್ಗೆ, ಶಾಂತಾ ಸಿ. ನಾಯರ್ ಆಯ್ಕೆಯಾಗಿದ್ದಾರೆ.

State Press Distributors Union ಪತ್ರಿಕಾ ವಿತರಕರು ಪತ್ರಿಕೋದ್ಯಮದ ಹೃದಯ- ಡಿ.ಎಸ್.ಅರುಣ್

0

State Press Distributors Union ಮಳೆ ಗಾಳಿ, ಚಳಿ ಎನ್ನದೇ ಪ್ರತಿದಿನ ಬೆಳಿಗ್ಗೆ ಪತ್ರಿಕೆಗಳನ್ನು ಓದುಗರ ಮನೆಗೆ ತಲುಪಿಸುವ ಇವರ ವೃತ್ತಿ ಪತ್ರಿಕಾ ರಂಗದ ಹೃದಯ ಎಂದರೆ ತಪ್ಪಗಲಾರದು ಎಂದು ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ತಿಳಿಸಿದರು.

ಅವರು ನಗರದಲ್ಲಿ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಪತ್ರಿಕಾ ವಿತರಕರ ಉತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರ ಒಕ್ಕೂಟದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಪತ್ರಿಕಾ ವಿತರಕರಿಗೆ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಎರಡು ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಅದನ್ನು ವಿತರಕರು ಮತ್ತು ಅವರ ಕುಟುಂಬದವರಿಗೆ ಸದ್ಬಳಕೆ ಆಗಬೇಕಿದೆ. ಆ ನಿಟ್ಟಿನಲ್ಲಿ ವಿತರಕರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ತಂತ್ರಜ್ಞಾನ ಮುಂದಿವರಿದಿದೆ. ಕ್ಷಣಾರ್ಧದಲ್ಲಿ ದೇಶ, ವಿದೇಶಗಳ ಮಾಹಿತಿಗಳು ಲಭಿಸಿದರೂ ನಾವು ಪ್ರತಿಕೆಗಳಲ್ಲಿ ದಿನನಿತ್ಯದ ಸುದ್ದಿ ಓದುವುದು ಅವಶ್ಯಕ. ಇದಕ್ಕೆ ಕೊಂಡಿಯಾಗಿರುವ ವಿತರಕರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆ ಉಂಟಾದಾಗ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಹೆಚ್ಚಿರುತ್ತದೆ. ಚಿಕಿತ್ಸೆಗೂ ಹಣಕಾಸಿನ ತೊಂದರೆಗಳನ್ನು ಎದುರಿಸುವರು. ಹಾಗಾಗಿ ವಿತರಕರನ್ನು ಆರೋಗ್ಯ ವಿಮೆ ವ್ಯಾಪ್ತಿಗೆ ಸರ್ಕಾರ ತರಬೇಕು ಎಂದು ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರ ಉತ್ಸವ ಅದ್ದೂರಿಯಾಗಿ ನೆರವೇರಿತು. ನಗರದ ನೆಹರು ರಸ್ತೆ ಗಾಂಧಿ ಭವನದಲ್ಲಿ ವರ್ಷಾಂತ್ಯದ ವಿತರಕರಲ್ಲಿ ಸಂಭ್ರಮ ಮನೆ ಮಾಡಿತ್ತು. ಕುಟುಂಬ ವರ್ಗದೊಂದಿಗೆ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಬೆಳಗಿನ ಜಾವ ಪತ್ರಿಕೆಗಳನ್ನು ಜೋಡಿಸಿ ಪ್ಯಾಕ್ ಮಾಡಿಕೊಂಡು ಓದುಗರ ಮನೆ ಮನೆಗೆ ತಲುಪಿಸುವ ವಿತರಕರು ಗಾಂಧಿಭವನದಲ್ಲಿ ಕುಣಿದು ಕುಪ್ಪಳಿಸಿದರು.

ವಿವಿಧ ಕ್ರೀಡೆಗಳಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದು ವಿತರಕರ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು
ಈ ಎಲ್ಲಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಎನ್.ಮಾಲತೇಶ್ ವಹಿಸಿದ್ದರು.

ಹಿರಿಯ ಪತ್ರಕರ್ತರಿಗೆ ಸನ್ಮಾನ :
ಹಿರಿಯ ಪತ್ರಿಕರ್ತರಾದ ನ.ರಾ.ವೆಂಕಟೇಶ್, ವಿಜಯ ವಾಣಿ ಸ್ಥಾನಿಕ ಸಂಪಾದಕರ ಚಂದ್ರಶೇಖರ್, ಭಂಡಿಗಡಿ ನಂಜುಂಡಪ್ಪ, ರವೀಂದ್ರ ನಾಥ್(ಬ್ರದರ್)ನವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಪತ್ರಿಕಾ ವಿತರಕರಿಗೆ ಸನ್ಮಾನ :
ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಖಾರ್ ಅಹಮದ್(ನಜೀರ್), ಸೀತಾರಾಮ್ ದೇವರಾಜ್ ಶೆಟ್ಟಿ, ತೀರ್ಥಹಳ್ಳಿಯ ನಾಗಭೂಷಣ್, ಶಿಕಾರಿಪುರದ ಹುಲಿಗಿ ಕೃಷ್ಣ, ಭದ್ರಾವತಿ ಜಿ.ಐ.ಮಲ್ಲಿಕಾರ್ಜುನ, ಸೋಮಶೇಖರ್ ಅರಳಿಹಳ್ಳಿ, ವಿನಯ್ ಕುಮಾರ್ ಎಸ್. ವಾಲಿ, ಶಿರಾಳಕೊಪ್ಪದ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.

State Press Distributors Union ಉತ್ಸವದ ಆರಂಭಕ್ಕೂ ಮುನ್ನ ಇತ್ತೀಚೆಗೆ ಅಗಲಿದ ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತಿ ಎಸ್.ಎಂ.ಕೃಷ್ಣ, ಹುತಾತ್ಮರಾದ ಐವರು ಸೈನಿಕರ ಗೌರವಾರ್ಥ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ, ಸ್ವಾಭಿಮಾನ ಬಣದ ಜಿಲ್ಲಾಧ್ಯಕ್ಷರಾದ ಕಿರಣ್‌ಕುಮಾರ್, ಒಕ್ಕೂಟದ ಉಪಾಧ್ಯಕ್ಷ ಜಿ.ರಾಮು, ಸಂಘಟನಾ ಕಾರ್ಯದರ್ಶಿ ಪರಶುರಾಮ ರಾವ್, ಖಜಾಂಚಿ ಟಿ.ಮಧು, ಪ್ರಾಣೇಶ್, ದುರ್ಗೋಜಿ, ಪ್ರಶಾಂತ್, ಕೆ.ರಾಜವರ್ಮ ಜೈನ್, ರಾಜಕುಮಾರ್, ಮಂಜುನಾಥ್ ಹೆಚ್.ಆರ್, ಶ್ರೀನಿವಾಸ್, ಹರ್ಷ, ಪ್ರಶಾಂತ್, ಜಗ್ಗ, ಪ್ರಾಣೇಶ್ ಇತರರಿದ್ದರು.
ಸ್ಪರ್ಧಾ ವಿಜೇತರು : ಬಕೆಟ್ ಇನ್ ದ ಬಾಲ್, ಮಕ್ಕಳ ವಿಭಾಗ: ೧.ಮೋಹನ್, ೨. ಅಪೂರ್ವಾ, ೩. ವಿಜಯ, ರಾಜ್ ಮಹಿಳಾ ವಿಭಾಗ: ೧. ಚೈತ್ರಾ ೨. ಗೀತಾ, ಪುರುಷರು: ೧.ಜಿ.ರಾಮು, ೨. ಮಾಲತೇಶ್, ೩. ಮಲ್ಲಿಕಾರ್ಜುನ, ಮ್ಯೂಸಿಕಲ್ ಚೇರ್ : ಮಕ್ಕಳ ವಿಭಾಗ: ೧.ವಿಕ್ರನ್, ೨.ಜನನಿ, ೩.ಸಂಪ್ರೀತ್, ಮಹಿಳೆಯರು: ೧.ಕೋಮಲಾ ಚಂದ್ರಶೇಖರ ೨.ಕವಿತಾ, ೩. ಚೈತ್ರಾ ಪುರುಷರು: ೧.ಸಿ.ಆರ್.ಪುಟ್ಟಣ್ಣ, ೨.ಟಿ.ಡಿ.ಜಗದೀಶ್, ೩.ಚಿಕ್ಕಮಗಳೂರಿನ ಅಭಿಲಾಷ್, ಹಿಟ್ಟಿಂಗ್ ದ ಪಾಟ್ ೧.ವಿನಯ್‌ಕುಮಾರ್ ಜೈನ್ ರಾಕ್, ೨.ನಾಗಭೂಷಣ್, ೩.ಹುಲಿಗಿ ಕೃಷ್ಣ, ಬಾಂಬ್ ಇನ್ ದ ಸಿಟಿ ಮಕ್ಕಳ ವಿಭಾಗ: ೧.ವಿಜಯರಾಜ್, ೨. ವಿಕ್ರನ್, ೩.ಜನನಿ ಮಹಿಳೆಯರು: ೧.ಶಿರಾಳಕೊಪ್ಪದ ಎನ್.ಆರ್.ಗೀತಾ, ೨. ಭದ್ರಾವತಿ ಹೀಬೋನಿ, ೩. ಭದ್ರಾವತಿ ಕವಿತಾ ಪುರುಷರು: ೧.ಮಲ್ಲಿಕಾರ್ಜುನ, ೨.ರಾಘವೇಂದ್ರ, ೩.ಸೋಮಶೇಖರ್ ಕ್ರೀಡೆಯನ್ನು ರಾಮಚಂದ್ರ ಹೆಚ್.ತಿಮ್ಮಹಳ್ಳಿ, ಲೋಕೇಶ್, ಕುಮಾರ್‌ಸ್ವಾಮಿ ನಡೆಸಿಕೊಟ್ಟರು.

Department of Women and Child Development ಅಪೂರ್ಣ ಅರ್ಜಿಗಳನ್ನ ಪೂರ್ಣಗೊಳಿಸಲು ಅವಧಿ ವಿಸ್ತರಣೆ

0

Department of Women and Child Development ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲೆಯ 07 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿರುವ 126 ಅಂಗನವಾಡಿ ಕಾರ್ಯಕರ್ತೆಯರ ಮತ್ತು 448 ಸಹಾಯಕಿಯರ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹಲವಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯಲ್ಲಿ 4 ನೇ ಹಂತಗಳನ್ನು ಪೂರ್ಣಗೊಳಿಸಿರುವುದಿಲ್ಲ. ಪೂರ್ಣಗೊಳಿಸದ ಅರ್ಜಿಗಳು ಊರ್ಜಿತವಲ್ಲದ್ದರಿಂದ ಅಂತಹ ಅಭ್ಯರ್ಥಿಗಳು ಅಪೂರ್ಣವಾಗಿರುವ ಅರ್ಜಿಗಳನ್ನು ಪೂರ್ಣಗೊಳಿಸಲು ದಿ:05/01/2025 ರ ವರೆಗೆ ಅವಕಾಶ ಕಲ್ಪಿಸಲಾಗಿದ್ದು, Department of Women and Child Development http://karnemakaone.kar.nic.in/abcd/ ವೆಬ್ ಸೈಟ್ ರಲ್ಲಿ ಸಲ್ಲಿಸಿ, ಸಲ್ಲಿಕೆಯ 02 ಮತ್ತು 03ನೇ ಹಂತದಲ್ಲಿ ದಾಖಲಾತಿಗಳನ್ನು ಆಪ್‌ಲೋಡ್ ಮಾಡಿ 03ನೇ ಹಂತದಲ್ಲಿ ಇ-ಹಸ್ತಾಕ್ಷರವಾಗಿರುವುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿ 04ನೇ ಹಂತದಲ್ಲಿ ಇ-ಸಹಿಯಾದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-295514ನ್ನು ಸಂಪರ್ಕಿಸುವುದು.

B. Y. Vijayendra ಡಿಸೆಂಬರ್ 29 ರಂದು ನಡೆದ ಕೆಪಿಎಸ್ ಸಿ ಪೂರ್ವಭಾವಿ ಮರು ಪರೀಕ್ಷೆ ಲೋಪದ ಬಗ್ಗೆ ಬಿ.ವೈ.ವಿಜಯೇಂದ್ರ ‘ಗರಂ

0

B. Y. Vijayendra ಕೆಪಿಎಸ್‌ಸಿ ನಡೆಸುತ್ತಿರುವ ಪ್ರತಿಯೊಂದು ಪರೀಕ್ಷೆಗಳಲ್ಲೂ ಗೊಂದಲಗಳು, ಲೋಪಗಳು, ಭಾಷಾಂತರ ದೋಷಗಳ ಮೂಲಕ ಕೆಪಿಎಸ್‌ಸಿ ನ್ಯೂನತೆಗಳು ಬಯಲಾಗುತ್ತಲೇ ಇವೆ. ಡಿಸೆಂಬರ್ 29 ರಂದು ನಡೆದ ಕೆಎಎಸ್ ಪೂರ್ವಭಾವಿ ಮರುಪರೀಕ್ಷೆಯ ಪ್ರವೇಶಪತ್ರ ಬಿಡುಗಡೆ ಮಾಡಿದ್ದ ಕೆಪಿಎಸ್‌ಸಿ ಕನ್ನಡ ಭಾಷೆಯಲ್ಲಿರುವ ಯಾವುದೇ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರೂ ಗೊಂದಲವಾದಲ್ಲಿ ಆಂಗ್ಲ ಭಾಷೆಯ ಪ್ರಶ್ನೆಗಳನ್ನು ನೋಡಿ ಅರ್ಥ ಮಾಡಿಕೊಳ್ಳಿ ಎಂದು ಅಭ್ಯರ್ಥಿಗಳಿಗೆ ಸೂಚಿಸುವ ಮೂಲಕ ತಮ್ಮ ಯಡವಟ್ಟುಗಳನ್ನು ಮಾಡಿಯೇ ಸಿದ್ಧ ಎಂಬ ಮುನ್ಸೂಚನೆ ನೀಡಿತ್ತು, ಇದೀಗ ಮತ್ತೆ ಭಾಷಾಂತರ ಲೋಪ ಹಾಗೂ ಕೆಲ ಜಿಲ್ಲೆಗಳಲ್ಲಿ ಒಎಂಆರ್ ಶೀಟ್ ಸಂಖ್ಯೆಗಳೇ ಅದಲು-ಬದಲಾಗಿರುವುದು ಪರೀಕ್ಷಾರ್ಥಿಗಳನ್ನು ಮತ್ತಷ್ಟು ಆತಂಕಕ್ಕೆ ತಳ್ಳಲ್ಪಟ್ಟಿದೆ.

ಈ ಹಿಂದಿನ ಪರೀಕ್ಷೆಯಲ್ಲೂ ಕನ್ನಡ ಭಾಷಾ ಪರೀಕ್ಷಾರ್ಥಿಗಳಿಗೆ ಸಮರ್ಪಕವಾಗಿ ಭಾಷಾಂತರಿಸದೇ ಯಡವಟ್ಟು ಮಾಡಿ ಲಕ್ಷಾಂತರ ಪರೀಕ್ಷಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕರ್ನಾಟಕದ ಮಾತೃಭಾಷೆಯಲ್ಲಿಯೇ ಸೂಕ್ತ ಪ್ರಶ್ನೆಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿ ಪದೇ ಪದೇ ಕೆಎಎಸ್ ಪರೀಕ್ಷಾರ್ಥಿಗಳನ್ನು ಗೊಂದಲಕ್ಕೆ ದೂಡುತ್ತಿರುವ ಬೇಜವಾಬ್ದಾರಿತನ ಪದೇ ಪದೇ ಮರುಕಳಿಸುತ್ತಿರುವುದು ಕೆಪಿಎಸ್‌ಸಿ ವೈಫಲ್ಯ ಹಾಗೂ ರಾಜ್ಯ ಸರ್ಕಾರದ ಅಸಮರ್ಥ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

B. Y. Vijayendra ಕಠಿಣ ಪರಿಶ್ರಮದಿಂದ ಉದ್ಯೋಗವನ್ನು ಅರಸಿ ಪರೀಕ್ಷೆಗಳನ್ನು ಬರೆಯುವ ಸಾವಿರಾರು ಉದ್ಯೋಗಾಕಾಂಕ್ಷಿಗಳ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಅಲ್ಲದೇ ಕೆಪಿಎಸ್ಸಿ ಎಡವಟ್ಟುಗಳಿಗೆ ಸಂಪೂರ್ಣ ಕಡಿವಾಣ ಹಾಕಿ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪರೀಕ್ಷಾರ್ಥಿಗಳ ಪರ ಬಿಜೆಪಿ ಹೋರಾಟಕ್ಕಿಳಿಯಲಿದೆ ಎಚ್ಚರ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

World Rapid Chess Championship ವಿಶ್ವ ಚದುರಂಗ ರ‍್ಯಾಪಿಡ್ ಚಾಂಪಿಯನ್ ಶಿಪ್ ಗೆದ್ದ ಕೊನೇರು‌ ಹಂಪಿ ಅಭಿನಂದನೆಗಳ ಸುರಿಮಳೆ

0

World Rapid Chess Championship ನ್ಯೂಯಾರ್ಕ್‌ನಲ್ಲಿ ನಡೆದ ಫಿಡೆ ಮಹಿಳಾ ವಿಶ್ವ ರ‍್ಯಾಪಿಡ್‌ ಚೆಸ್ ಚಾಂಪಿಯನ್‍ಶಿಪ್‌-2024 ರಲ್ಲಿ ಇಂಡೋನೇಷ್ಯಾದ ಐರಿನ್​ ಸುಕಂದರ್​ ಅವರನ್ನು ಮಣಿಸುವ ಮೂಲಕ ಮಹಿಳಾ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್​ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿರುವ ಕೊನೆರು ಹಂಪಿ ಅವರಿಗೆ ಅನೇಕ ಗಣ್ಯರು ಅ‌ಭಿನಂದಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೂ ಕೂಡ ಅಭಿನಂದನೆ
ಸಲ್ಲಿಸಿದ್ದಾರೆ.

World Rapid Chess Championship ಚೀನಾದ ಜು ವೆನ್ಜುನ್ ಬಳಿಕ ಮಹಿಳೆಯರ ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಎರಡನೇ ಚೆಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಚೆಸ್​ ಕ್ರೀಡೆಯಲ್ಲಿ ಐತಿಹಾಸಿಕ ಮೈಲಿಗಲ್ಲು ತಲುಪಿದ್ದಾರೆ. ಕೊನೆರು ಹುಂಪಿ ಅವರ ಈ ಮಹತ್ವದ ಸಾಧನೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈಯ್ಯಲು ಪರಿಶ್ರಮಿಸುತ್ತಿರುವ ಪ್ರತಿಭಾವಂತ ಕ್ರೀಡಾರ್ಥಿಗಳಿಗೆ ಸ್ಪೂರ್ತಿಯ ಸೆಲೆಯಾಗಲಿ, ವಿವಿಧ ಕ್ಷೇತ್ರಗಳ ಮಹಿಳೆಯರಿಗೆ ಸಾಧಿಸುವ ಪ್ರೇರಣೆ ತುಂಬಲಿ ಶಾಸಕ ಬಿ.ವೈ.ವಿಜಯೇಂದ್ರ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಹಂಚಿಕೊಂಡಿದ್ದಾರೆ.

Thungataranga Newspaper ತುಂಗಾತರಂಗ ಪತ್ರಿಕೆ ವ್ಯವಸ್ಥಾಪಕ ಸಂಪಾದಕ ಜೇವ್ಹಿಯರ್ ಡೇವಿಡ್ ನಿಧನ

0

Thungataranga Newspaper ಶಿವಮೊಗ್ಗದ ತುಂಗಾತರಂಗ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಜೇವ್ಹಿಯರ್ ಡೇವಿಡ್ ಅವರು ಭಾನುವಾರ ಮದ್ಯಾಹ್ನ ನಿಧನರಾದರು.

ಅವರಿಗೆ 89 ವರ್ಷ ವಯಸ್ಸಾಗಿತ್ತು.
ವಯೋಸಹಜ ಹಾಗೂ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ನಿಧನರಾದ ಅವರು ಕಳೆದ 1978 ರಿಂದ 2011 ರವರೆಗೆ ತುಂಗಾತರಂಗ ದಿನಪತ್ರಿಕೆ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಅವರು ಶಿವಮೊಗ್ಗದ ಹಿರಿಯ ಪತ್ರಿಕಾ ಸಂಪಾದಕರಾಗಿದ್ದಾರು. ಅವರು ಪತ್ನಿ, Thungataranga Newspaper ಮೂವರು ಗಂಡು ಹಾಗೂ ಮೂವರು ಹೆಣ್ಷು ಮಕ್ಕಳು, ಮೊಮ್ಮಕ್ಕಳು ಹಾಗೂ ಶಿವಮೊಗ್ಗದ ಅಪಾರ  ಆತ್ಮೀಯರನ್ನು, ಶಿವಮೊಗ್ಗ ಪತ್ರಿಕಾ ಸಮೂಹವನ್ನು ಬಿಟ್ಟು ಅಗಲಿದ್ದಾರೆ.

ಶಿವಮೊಗ್ಗ ಬಿಹೆಚ್ ರಸ್ತೆಗೆ ಹೊಂದಿಕೊಂಡ ಪೆನ್ಷನ್ ಮೊಹಲ್ಲಾ, (ಚಂದ್ರಿಕಾ ಬಾರ್ ಪಕ್ಕದ ಕ್ರಾಸ್)ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು.