Tuesday, March 17, 2026
Tuesday, March 17, 2026
Home Blog Page 435

MESCOM ತೀರ್ಥಹಳ್ಳಿಯ ಮೆಸ್ಕಾಂ ಉಪಕಚೇರಿಯಲ್ಲಿ ಜನಸಂಪರ್ಕ ಸಭೆ

0

MESCOM ತೀರ್ಥಹಳ್ಳಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜ. 20 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧ ಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಇಲಾಖೆ ತಿಳಿಸಿದೆ.

MESCOM ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ;9448289508.

Bharat Scouts and Guides ರಸ್ತೆ ಸುರಕ್ಷತೆ ಬಗ್ಗೆ ಚಿತ್ರಕಲೆ & ಘೋಷ ವಾಕ್ಯ ರಚನೆ ಸ್ಪರ್ಧೆ

0

Bharat Scouts and Guides ಶಿವಮೊಗ್ಗ ನಗರದಲ್ಲಿ ನಾಗರೀಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯು ಜ.18 ರಂದು ರಸ್ತೆ ಸುರಕ್ಷತಾ ರ‍್ಯಾಲಿ ಹಾಗೂ ಶಿವಮೊಗ್ಗ ತಾಲ್ಲೂಕು ಮಟ್ಟದ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ವಿಷಯದಲ್ಲಿ ಚಿತ್ರಕಲಾ ಸ್ಪರ್ಧೆ, ಘೋಷ ವಾಕ್ಯ ಸ್ಪರ್ಧೆಯನ್ನು ಏರ್ಪಡಿಸಿದೆ.

ದಿನಾಂಕ: 18.01.2025 ರ ಶನಿವಾರ ಮಧ್ಯಾಹ್ನ 2.00 ಗಂಟೆಗೆ ಜಿಲ್ಲಾ ಸ್ಕೌಟ್ ಭವನ, ಬಿ.ಹೆಚ್. ರಸ್ತೆ, ಶಿವಮೊಗ್ಗ ಇಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.

Bharat Scouts and Guides ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಕ್ತರು (ರೋವರ್) ಕೆ. ರವಿ ಮೊ.ಸಂ : 9663883213 ಮತ್ತು ಜಿಲ್ಲಾ ಕಾರ್ಯದರ್ಶಿ, ಚಂದ್ರಶೇಖರಯ್ಯ ಕೆ.ವಿ ಮೊ.ಸಂ: 9481066064 ಇವರನ್ನು ಸಂಪರ್ಕಿಸಬಹುದೆಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಕಾರ್ಯದರ್ಶಿ ತಿಳಿಸಿದ್ದಾರೆ.

Department of Sainik Welfare & Resettlement ನಮ್ಮೆಲ್ಲರನ್ನೂ ಕಾಯುವ ಯೋಧರ ಋಣ ತೀರಿಸಲಾಗದ್ದು- ರೇಖಾ ರಂಗನಾಥ್

0

Department of Sainik Welfare & Resettlement ಜನವರಿ 15 ಭಾರತೀಯರು ಹೆಮ್ಮೆಪಡುವ ಭಾರತೀಯ ಸೇನಾ ದಿನ.” ಈ ದಿನವನ್ನು ಜೆಸಿಐ ಶಿವಮೊಗ್ಗ ಭಾವನ ವತಿಯಿಂದ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ ಯೋಧರನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಚೇರಿಯಲ್ಲಿ ಭೇಟಿ ಮಾಡಿ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಿ ಸಿಹಿ ಹಂಚಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜೆಸಿಐ ಶಿವಮೊಗ್ಗ ಭಾವನ ಅಧ್ಯಕ್ಷೆ ಜೆಸಿ ರೇಖಾ ರಂಗನಾಥ್ ಭಾರತಾಂಬೆ ಹಾಗೂ ನಮ್ಮೆಲ್ಲರ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹಗಲಿರುಳು ಹೋರಾಡುತ್ತಿರುವ ಚಳಿ ಮಳೆ ಲೆಕ್ಕಿಸದೆ ಕುಟುಂಬವನ್ನು ಬಿಟ್ಟು ತಮ್ಮ ಜೀವನವನ್ನು ದೇಶಕ್ಕಾಗಿ ಅರ್ಪಿಸಿ ದೇಶದ ಗಡಿ ಭಾಗದಲ್ಲಿ ಸೇವೆ ಮಾಡುತ್ತಾ ನಮ್ಮನ್ನೆಲ್ಲರನ್ನು ಕಾಯುವ ಯೋಧರ ಋಣ ಎಂದು ತಿರಸಲಾಗದು ನಮ್ಮ ಹೆಮ್ಮೆಯ ಯೋಧರಿಗೆ ಕೋಟಿ ನಮನಗಳು ಎಂದು ಹೇಳಿದರು.

Department of Sainik Welfare & Resettlement ಈ ಸಂದರ್ಭದಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರಾದ ಡಾ| ಸಿ.ಎ. ಹಿರೇಮಠ್. ಜೇಸಿಯ ಶಿವಮೊಗ್ಗ ಭಾವನದ ಜಂಟಿ ಕಾರ್ಯದರ್ಶಿಯಾದ ಜೆಸಿ ಕರಿಬಸಮ್ಮ. ಜೂನಿಯರ್ ಜೆಸಿ ಜನ್ಯ ರಂಗನಾಥ್. ಉಪಾಧ್ಯಕ್ಷರು ಜೆ ಸಿ ವೈಷ್ಣವಿ. ಹಾಗೂ ಪೂರ್ವಾ ಅಧ್ಯಕ್ಷರಾದ ಜೆ ಸಿ ಪೂರ್ಣಿಮಾ ಸುನಿಲ್ ಹಾಗೂ ಇತರರು ಉಪಸ್ಥಿತರಿದ್ದರು.

Bekkina Kalmatha ಬೆಕ್ಕಿನ ಕಲ್ಮಠದಲ್ಲಿ ಸಾಧಕರಿಗೆ ಸನ್ಮಾನ

0

Bekkina Kalmatha ಶ್ರೀ ಜಗದ್ಗುರು ಗುರುಬಸವ ಮಹಾಶಿವಯೋಗಿಗಳವರ ೧೧೩ನೇ ಸ್ಮರಣೋತ್ಸವ – ಹಾರನಹಳ್ಳಿ ಕರಿಬಸವಯ್ಯ
ಪೂಜ್ಯರ ಸ್ಮರಣೋತ್ಸವ ಜನವರಿ ೧೬,೧೭,೧೮ರಂದು ಶಿವಮೊಗ್ಗ ಬೆಕ್ಕಿನಕಲ್ಮಠದಲ್ಲಿ ನಡೆಯಲಿದೆ.
( ಲಿಂ. ಪರಮ ತಪಸ್ವಿ ಗುರುಬಸವ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವದಲ್ಲಿ ಸಂದರ್ಭದಲ್ಲಿ ಪೂಜ್ಯರ ಪೀಠಾರೋಹಣ ರಜತ ಮಹೋತ್ಸವ ಸವಿನೆನಪಿಗಾಗಿ ನಾಡಿಗೆ ಅಮೂಲ್ಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಪ್ರತಿ ವರ್ಷ ಗುರುಬಸವಶ್ರೀ ಪ್ರಶಸ್ತಿ , ಶರಣ ಸಾಹಿತ್ಯದಲ್ಲಿ ಸಂಶೋಧನೆ , ಅಧ್ಯಯನ ಮಾಡಿದ ಸಾಧಕರಿಗೆ ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಪ್ರಸಕ್ತ ವರ್ಷದ ಗುರುಬಸವಶ್ರೀ ಪ್ರಶಸ್ತಿಗೆ ಖ್ಯಾತ ರಂಗಭೂಮಿ ನಟ, ಸಿನಿಮಾ ನಿರ್ದೇಶಕ ಟಿ.ಎಸ್.ನಾಗಾಭರಣ ಅಲ್ಲಮಪ್ರಭು ಪ್ರಶಸ್ತಿಗೆ ಸಂಶೋಧಕ ಡಾ.ವೀರಣ್ಣ ರಾಜೂರು, ಅಕ್ಕಮಹಾದೇವಿ ಪ್ರಶಸ್ತಿಗೆ ಖ್ಯಾತ ಕಾದಂಬರಿಕಾರ್ತಿ ಡಾ. ಹೆಚ್ ಎಸ್.ಅನುಪಮ ಅವರು ಅವರು ಭಾಜನರಾಗಿದ್ದಾರೆ.
Bekkina Kalmatha ಮಲೆನಾಡಿನ ಮಹಾಪೀಠವಾದ ಆನಂದಪುರ ಜಗದ್ಗುರು ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನಮಠ, ಶೂನ್ಯ ಪೀಠಾಧ್ಯಕ್ಷ ನಿರಂಜನ ಜಗದ್ಗುರು ಅಲ್ಲಮಪ್ರಭು ಪರಂಪರೆಯ ಕೆಳದಿ ಅರಸರಿಂದ ಗೌರವ ಪಡೆದ ಪ್ರಮುಖ ಧರ್ಮಪೀಠವಾಗಿದೆ. ಐತಿಹಾಸಿಕ ಪರಂಪರೆಯ ತಪಸ್ವಿ, ಪಂಡಿತ, ಕವಿ, ಸಮಾಜ ಸೇವಾತತ್ಪರ ಪೂಜ್ಯರನ್ನು ಪಡೆದ ಹೆಗ್ಗಳಿಕೆ ಶ್ರೀ ಪೀಠದ್ದಾಗಿದೆ. ಈ ದಿವ್ಯ ಪರಂಪರೆಯಲ್ಲಿ ಹದಿನಾಲ್ಕುನೆಯ ಜಗದ್ಗುರುಗಳಾದ ಲಿಂ|| ಗುರುಬಸವ ಮಹಾಶಿವಯೋಗಿಗಳವರ ಹೆಸರು ಸ್ಮರಣೀಯವಾಗಿದೆ.
ಶಿವಮೊಗ್ಗ ನಗರದ ಶ್ರೀ ಬೆಕ್ಕಿನಕಲ್ಮಠ ಸ್ಥಾಪಕರಾದ ಪೂಜ್ಯರು ಇಲ್ಲಿ ನೆಲೆಸಿ ಈ ಕೇಂದ್ರದ ಮೂಲಕ ಬಸವಾದಿ ಪ್ರಮಥರ ಮಾನವ ಧರ್ಮ ಸಂದೇಶವನ್ನು ಸಾಹಿತ್ಯ-ಸಂಸ್ಕೃತಿ ಪ್ರಸಾರ ಪ್ರಕಟನೆಯ ಮೂಲಕ ಸಕಲ ಜೀವಾತ್ಮರ ಲೇಸಿಗಾಗಿ ಶ್ರಮಿಸಿದ್ದಾರೆ. ಆನಂದಪುರ ಶ್ರೀ ಜಗದುರು ಮುರುಘರಾಜೇಂದ್ರ ಮಠದ ಪೀಠಪರಂಪರೆಯ ೧೪ನೇ ಗುರುಬಸವ ಸ್ವಾಮಿಗಳು ಸಂಸ್ಕೃತ ವಿದ್ವಾಂಸರಾಗಿದ್ದು, ಕೋಟೆ ಭೀಮೇಶ್ವರ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದ ವಿದ್ವತ್ ಗೋಷ್ಠಿಯ ಅಧ್ಯಕ್ಷತೆಯ ಗೌರವವನ್ನು ಪಡೆದುಕೊಂಡಿದ್ದರು. ಹಿಂದೆ ಜನಭೀಕರ ರೋಗಕ್ಕೆ ತುತ್ತಾದಾಗ ಜನರಿಗೆ ಆರೋಗ್ಯ ಮಹತ್ವ ತಿಳಿಸಿ ಯೋಗ ಧ್ಯಾನದ ಮೂಲಕ ಜನಸೇವೆ ಮಾಡಿದರು. ಭಕ್ತರು ಇವರ ಮೇಲಿನ ಭಕ್ತಿ,ಅಭಿಮಾನದಿಂದ ಗುರುಪುರ ಎಂದು ನಾಮಕರಣ ಮಾಡಿದgರು. ಒಂದು ಶತಮಾನದ ಹಿಂದೆ ಶಿವಮೊಗ್ಗದ ತುಂಗಾತೀರದಲ್ಲಿ ಬೆಕ್ಕಿನಕಲ್ಮಠವನ್ನು ಭಕ್ತರ ನೆರವಿನಿಂದ ಸ್ಥಾಪಿಸಿದರು. ಗುರು ವಿರಕ್ತರ ಸಮನ್ವಯದ ಸಾಕಾರಮೂರ್ತಿಯಾಗಿದ್ದ ಇವರ ಗದ್ದುಗೆ ಹೊನ್ನಾಳಿ ಹೀರೆಕಲ್ಮಠದಲ್ಲಿದೆ.

ಪ್ರಸ್ತುತ ಪೀಠಾಧಿಕಾರಿಗಳಾದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು. ಡಾ. ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಗುರುಬಸವ ಮಹಾಸ್ವಾಮಿಗಳವರ ಆದರ್ಶಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಪೂಜ್ಯರ ಹೆಸರಿನಲ್ಲಿ ಶ್ರೀ ಜಗದ್ಗುರು ಗುರುಬಸವೇಶ್ವರ ವಿದ್ಯಾಪೀಠ ಸ್ಥಾಪಿಸಿ ಶಿಶುವಿಹಾರದಿಂದ ಕಾಲೇಜು ಶಿಕ್ಷಣದ ವರೆಗೂ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಉಚಿತ ವಿದ್ಯಾರ್ಥಿ ನಿಲಯಗಳನ್ನು ನಡೆಸುತ್ತಿದ್ದಾರೆ. ಗುರುಬಸವ ಅಧ್ಯಯನ ಪೀಠದಿಂದ ಧರ್ಮ, ಸಂಸ್ಕೃತಿ .ಕಲೆಗೆ ಸಂಬಂಧಿಸಿದ ಮೌಲಿಕ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ನಾಡಿನ ಜ್ಞಾನ ದಾಸೋಹಕ್ಕೆ ಅಮೂಲ್ಯ ಕೊಡುಗೆಯನ್ನು ನೀಡುತಿದ್ದಾರೆ. .ಇದುವರೆಗೂ ಸುಮಾರು ೪೦ ಪುಸ್ತಕಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಕಟಿಸಲಾಗಿದೆ. ಕೆಳದಿ ಸಂಸ್ಥಾನದ ಸಮಗ್ರ ಅಧ್ಯಯನ ಕುರಿತು ೧೯೯೧ ರಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಸಿ ಖ್ಯಾತ ಸಂಶೋಧಕ ಪ್ರೊ.ಎಂ.ಎಂ.ಕಲಬುರ್ಗಿಯವರ ಸಂಪಾದಕತ್ವದಲ್ಲಿ ಪುಸ್ತಕ ಪ್ರಕಟಿಸಲಾಗಿದೆ. ಈ ಗ್ರಂಥದ ಮೌಲ್ಯ ಕುರಿತು ಖ್ಯಾತ ಪತ್ರಕರ್ತ ಪಿ. ಲಂಕೇಶ ತಮ್ಮ ಪತ್ರಿಕೆಯಲ್ಲಿ ವಿಮರ್ಶೆ ಬರೆಯುವ ಮೂಲಕ ಈ ಗ್ರಂಥದ ಮಹತ್ವ ತಿಳಿಸಿದ್ದಾರೆ.
ಲಿಂ. ಪರಮ ತಪಸ್ವಿ ಗುರುಬಸವ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶಿವಮೊಗ್ಗದಲ್ಲಿ ಅನುಭಾವ ಸಮ್ಮೇಳನ ,ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನವನ್ನು ಜನವರಿ ೧೭,೧೮ ಮತ್ತು ೧೮ ರಂದು ಶಿವಮೊಗ್ಗ ಬೆಕ್ಕಿನಕಲ್ಮಠದಲ್ಲಿ ನಡೆಸಲಾಗುತ್ತಿದೆ. ವಚನ ಗಾಯನಸ್ಫರ್ಧೆ ರಂಗೊಲಿ ಸ್ಫಧೆೆð , ಶಿವಭಜನೆ ಸ್ಫರ್ಧೆ, ಮಕ್ಕಳ ಮಹಾಪುರುಷರ ವೇಷ-ಭೂಷಣ ಸ್ಫರ್ಧೆ ನಡೆಸಲಾಗುತ್ತಿದೆ.

Karnataka Sanga Shivamogga ಜನವರಿ 18 ಕರ್ನಾಟಕ ಸಂಘದಲ್ಲಿ ಸಾಹಿತಿ “ಜೋಗಿ” ತಿಂಗಳ ಅತಿಥಿ

0

Karnataka Sanga Shivamogga ದಿನಾಂಕ 18 ಜನವರಿ 2025ರ ಶನಿವಾರ, ಸಂಜೆ 5:30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರೀ ಇವರ ಅಧ್ಯಕ್ಷತೆಯಲ್ಲಿ ತಿಂಗಳ ಅತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬೆಂಗಳೂರಿನ ಶ್ರೀ ಜೋಗಿ (ಶ್ರೀ ಗಿರೀಶ್ ರಾವ್ ಹತ್ವಾರ್) ಖ್ಯಾತ ಸಾಹಿತಿಗಳು ಇವರು ‘ನೆನಪುಗಳ ಅಂಗಳದಲ್ಲಿ ಕತೆ, ಕವಿತೆ, ಜನ’ ವಿಷಯದ ಕುರಿತು ಮಾತನಾಡಲಿದ್ದಾರೆ.

Karnataka Sanga Shivamogga ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸಲಾಗಿದೆ.

Shree Purandaradasa ಶ್ರೀಪುರಂದರ ದಾಸರ ಆರಾಧನೋತ್ಸವದ ಅಂಗವಾಗಿ ದೇವರ ನಾಮಗಳನ್ನ ಹಾಡಲು ಆನ್ ಲೈನ್ಉಚಿತ ತರಬೇತಿ

0

Shree Purandaradasa ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ವತಿಯಿಂದ ಪುರಂದರದಾಸರ ಆರಾಧನೋತ್ಸವದ ಅಂಗವಾಗಿ ವಿಶೇಷವಾಗಿ ಶಿವಮೊಗ್ಗ ನಗರದ ವೃತ್ತಿ ನಿರತ ಮಹಿಳೆಯರಿಗೆ ( ಯಾವುದೇ ಸಂಗೀತ ಶಿಕ್ಷಣ ಇಲ್ಲದವರಿಗೂ ) ಆನ್ಲೈನ್ ಮುಖಾಂತರ ಒಂದು ತಿಂಗಳ ದೇವರು ನಾಮಗಳ ಉಚಿತ ಶಿಬಿರವನ್ನು ಪ್ರತಿದಿನ ಸಂಜೆ 7.30 ಕ್ಕೆ ಆಯೋಜಿಸಲಾಗಿದೆ. ಆಸಕ್ತರು ಈ ವಿಶೇಷ ಆನ್ಲೈನ್ ತರಗತಿಯಲ್ಲಿ ಭಾಗವಹಿಸಬಹುದು.

Shimoga District Karate Association ಜಿಲ್ಲಾ ಕರಾಟೆ ಸಂಸ್ಥೆಗೆ ಮೀನಾಕ್ಷಿ ಕಾರ್ಯದರ್ಶಿಯಾಗಿ ಆಯ್ಕೆ

0

Shimoga District Karate Association ಜನವರಿ 12 ರಂದು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಸಭೆಯಲ್ಲಿ ಜಿಲ್ಲಾ ಕರಾಟೆ ಅಸೋಸಿಯೇಷನ್ ಗೆ ನೂತನ ಕಾರ್ಯದರ್ಶಿಯಾಗಿ ಕರಾಟೆ ತರಬೇತಿದಾರೆ ಮೀನಾಕ್ಷಿ ಮತ್ತು ಖಜಾಂಚಿ ಯಾಗಿ ಕರಾಟೆ ತರಬೇತುದಾರ ಇರ್ಫಾನ್ ಆಯ್ಕೆಯಾಗಿದ್ದು ಅವರಿಗೆ ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಪ್ರದಾನ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ಮತ್ತು ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಮುಖೇಬ್ ಅಹಮದ್ ಶುಭ ಕೋರಿದ್ದಾರೆ

Shree Veeranjaneya ಇಂದು ಸಂಜೆ ಬಂಗಾರಮಕ್ಕಿ ಶ್ರೀಮಾರುತಿ ಗುರೂಜಿ‌ ಶಿವಮೊಗ್ಗಕ್ಕೆ ಆಗಮನ

0

Shree Veeranjaneya ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಪುನಃ ಪ್ರತಿಷ್ಟೆ, ನೂತನ ಗೋಪುರ, ಸ್ವರ್ಣ ಕಲಶ, ಶ್ರೀ ಮಹಾಗಣಪತಿ, ಶ್ರೀ ಚೌಡೇಶ್ವರಿ, ಶ್ರೀ ಸುಭ್ರಮಣ್ಯ, ಪರಿವಾರ ದೇವತಾದಿಗಳ ಪ್ರತಿಷ್ಟಾಪನೆ ಹಾಗೂ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಪೀಠಾರೋಹಣದ ರಜತ ಮಹೋತ್ಸವ ಹಿನ್ನೆಲೆಯಲ್ಲಿ ಚರ್ಚಿಸಲು ಇಂದು (16-01-2025) ಸಂಜೆ ಆರು ಗಂಟೆಗೆ ಶಿವಮೊಗ್ಗ ನೂರಡಿ ರಸ್ತೆಯ ನವ್ಯಶ್ರೀ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ.
Shree Veeranjaneya ಸಭೆಗೆ ವಿಶೇಷವಾಗಿ ಬಂಗಾರಮಕ್ಕಿ ಶ್ರೀ ಕ್ಷೇತ್ರದ ಶ್ರೀ ಮಾರುತಿ ಗುರೂಜಿ ಅವರು ಆಗಮಿಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ವ್ಯವಸ್ಥಾಪಕರು ಕೋರಿದ್ದಾರೆ.

Indian Medical Association ಥಟ್ ಅಂತ ಹೇಳಿ ಖ್ಯಾತಿಯ ಡಾ.ನಾ.ಸೋಮೇಶ್ವರ ಅವರಿಂದ ಜನವರಿ‌17 ರಂದು ವಿಶೇಷ ಉಪನ್ಯಾಸ

0

Indian Medical Association ಶಿವಮೊಗ್ಗನಗರದ ಬಹುಮುಖಿಯ 45ನೇ ಕಾರ್ಯಕ್ರಮವಾಗಿ ಜ. 17ರ ಶುಕ್ರವಾರ ಸಂಜೆ 5:30ಕ್ಕೆ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರೆಂಡ್ಸ್ ಸೆಂಟರ್ ಹಾಲ್‌ನಲ್ಲಿ ಭಾರತೀಯ ವೈದ್ಯಕೀಯ ಸಂಘ, ಸಹಯೋಗದಲ್ಲಿ ದೂರದರ್ಶನದ ಥಟ್ ಅಂತ ಹೇಳಿ ಖ್ಯಾತಿಯ ವೈದ್ಯರು, ಲೇಖಕರು ಆದ ಡಾ. ನಾ. ಸೋಮೇಶ್ವರರವರು ಆರೋಗ್ಯ ನಿರ್ವಹಣೆ ಮತ್ತು ಹಿರಿಯರು ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಡಾ.ನಾ. ಸೋಮೇಶ್ವರರವರು, ವೃತ್ತಿಯಲ್ಲಿ ವೈದ್ಯರು ಹಾಗೂ ಪ್ರವೃತ್ತಿಯಲ್ಲಿ ಬರಹಗಾರರಾಗಿದ್ದು, ಅಂಕಣಕಾರರು ಹಾಗೂ ಕ್ವಿಜ್ ಮಾಸ್ಟರ್ ಆಗಿಯೂ ಚಿರಪರಿಚಿತರು. ಇವರಿಗೆ ವೈದ್ಯ ಸಾಹಿತ್ಯ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ಡಾ.ಬಿ.ಸಿ. ರಾಯ್ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.

ಬಹಳ ಮುಖ್ಯವಾಗಿ ಚಂದನ ವಾಹಿನಿಯಲ್ಲಿ ನಡೆಸಿಕೊಂಡು ಬರುತ್ತಿರುವ ‘ಥಟ್ ಅಂತ ಹೇಳಿ’ ಕಾರ್ಯಕ್ರಮ ಬಹಳ ವಿಶೇಷವಾದುದು. ನಾಲ್ಕು ಸಾವಿರ ಕಂತುಗಳನ್ನು ದಾಟಿ ಮುನ್ನಡೆಯುತ್ತಿರುವ ಈ ಕಾರ್ಯಕ್ರಮ ಭಾರತದ ಟೆಲಿವಿಷನ್ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದೆ.

Indian Medical Association ಡಾ. ನಾ. ಸೋಮೇಶ್ವರ ರವರ ಈ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

ವಿವರಗಳಿಗೆ 9449284495, 9845014229, 95380 20367 ರಲ್ಲಿ ಸಂಪರ್ಕಿಸಬಹುದು.

Karnataka Public Service Commission ಗ್ರೂಪ್ ‘ಬಿ’ ವೃಂದದ ನೇಮಕಾತಿ ಪರೀಕ್ಷೆಗೆ ಸಕಲ ಸಿದ್ಧತೆಗೆ ಸೂಚನೆ

0

Karnataka Public Service Commission ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳ ಗ್ರೂಪ್ ‘ಬಿ’ ವೃಂದದ ಹುದ್ದೆಗಳ ನೇಮಕಾತಿ ಸಂಬAಧ ಜ.19 ಮತ್ತು 25 ರಂದು ಪರೀಕ್ಷೆಗಳನ್ನು ನಡೆಸಲಿದ್ದು, ಪರೀಕ್ಷೆಗಳು ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನಡೆಯಲು ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕೆಪಿಎಸ್‌ಸಿ ವತಿಯಿಂದ ವಿವಿಧ ಇಲಾಖೆಗಳ ಗ್ರೂಪ್ ಬಿ ವೃಂದದ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾಗುತ್ತಿರುವ ಪರೀಕ್ಷೆಗಳ ಕುರಿತು ಪರೀಕ್ಷಾ ನಿಯೋಜಿತ ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Karnataka Public Service Commission ದಿನಾಂಕ: 19-01-2025 ರಂದು ಬೆಳಿಗ್ಗೆ 10 ರಿಂದ 11.30 ರವರೆಗೆ ಸಾಮಾನ್ಯ ಪತ್ರಿಕೆ ಪರೀಕ್ಷೆಯು ಶಿವಮೊಗ್ಗ ನಗರದ ಒಟ್ಟು 25 ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ದಿ: 25-01-2025 ರಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ನಿರ್ದಿಷ್ಟ ಪತ್ರಿಕೆ ಪರೀಕ್ಷೆಯು ನಗರದ 23 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
ಜ.19 ರಂದು ನಡೆಯುವ ಸಾಮಾನ್ಯ ಪತ್ರಿಕೆ ಪರೀಕ್ಷೆಗೆ ನಗರದಲ್ಲಿ ಒಟ್ಟು 7182 ಅಭ್ಯರ್ಥಿಗಳು ಹಾಗೂ ಜ.25 ರಂದು ನಡೆಯುವ ನಿರ್ದಿಷ್ಟ ಪತ್ರಿಕೆಗೆ 6414 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ಸ್ಥಳೀಯ ನಿರೀಕ್ಷಣಾಧಿಕಾರಿಗಳು, ಮಾರ್ಗಾಧಿಕಾರಿಗಳು, ವೀಕ್ಷಕರು ಮತ್ತು ಇತರೆ ಸಿಬ್ಬಂದಿಗಳನ್ನು ನಿಯೋಜಿಸಿ, ಸೂಕ್ತ ನಿರ್ದೇಶನ ಮತ್ತು ಸೂಚನೆಗಳನ್ನು ನೀಡಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ವಿಡಿಯೋಗ್ರಫಿ ಮಾಡಲಾಗುವುದು. ಎಲ್ಲ ಕೇಂದ್ರಗಳಲ್ಲಿ ಸಿಸಿ ಟಿವಿ ಇರುತ್ತದೆ. ಜೊತೆಗೆ ಜಾಮರ್‌ಗಳನ್ನು ಅಳವಡಿಸಲಾಗುವುದು. ಪರೀಕ್ಷಾ ಕೇಂದ್ರದೊಳಗೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶ ಇರುವುದಿಲ್ಲ.
ನಿಯೋಜಿತ ಪೊಲೀಸರಿಂದ ಅಭ್ಯರ್ಥಿಗಳ ತಪಾಸಣೆ ನಡೆಸಿ ಕೇಂದ್ರಗಳ ಒಳಗೆ ಬಿಡಲಾಗುವುದು. ಅಂಗವಿಕಲ ಅಭ್ಯರ್ಥಿಗಳಿಗ ಲಿಪಿಕಾರರ ಸೇವೆಯನ್ನು ಹಾಗೂ ಚಲನವಲನ ವೈಕಲ್ಯವುಳ್ಳ ವಿಕಲಚೇತನ ಅಭ್ಯರ್ಥಿಗಳಿಗೆ ವೀಲ್‌ಚೇರ್ ಒದಗಿಸಲಾಗುವುದು ಎಂದರು.
ಪರೀಕ್ಷಾ ದಿನದಂದು ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ.ಫಾಸಲೆಯಲ್ಲಿ ಸಾರ್ವಜನಿಕ ಪ್ರವೇಶ ನಿಷೇಧಿಸಿ ಆದೇಶಿಸಲಾಗಿದೆ ಎಂದ ಅವರು ಪರೀಕ್ಷಾ ಕೇಂದ್ರಗಳಲ್ಲಿ ಪೀಠೋಪಕರಣ ವ್ಯವಸ್ಥೆ, ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯಗಳನ್ನು ವ್ಯವಸ್ಥಿತವಾಗಿ ಮಾಡಬೇಕು. ನಿಯೋಜಿತ ಅಧಿಕಾರಿಗಳು ಪರೀಕ್ಷಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪರೀಕ್ಷೆಗಳನ್ನು ಶಾಂತಿಯುತವಾಗಿ, ಯಾವುದೇ ಗೊಂದಲಗಳಿಗೆ ಆಸ್ಪದವಾಗದಂತೆ ಯಶಸ್ವಿಯಾಗಿ ನಡೆಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಡಿಡಿಪಿಐ ಮಂಜುನಾಥ್, ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.