Wednesday, March 18, 2026
Wednesday, March 18, 2026
Home Blog Page 436

Chamber of Commerce and Industry ಹಬ್ಬಗಳಿಂದ ಸಂಸ್ಕೃತಿ ಪರಂಪರೆಯ ಅರಿವು- ಜಿ.ವಿಜಯ ಕುಮಾರ್

0

Chamber of Commerce and Industry ಹಬ್ಬಗಳು ಮನಸ್ಸಿಗೆ ಸಂತೋಷ ನೀಡುವುದರ ಜತೆಯಲ್ಲಿ ಸಂಸ್ಕೃತಿ ಪರಂಪರೆಯ ಅರಿವು ಮೂಡಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭದ್ರಾವತಿ ವಾಸು ನೇತೃತ್ವದ ಭಾವಗಾನ ತಂಡದಿಂದ ನಗರದ ಗೋಪಿಶೆಟ್ಟಿಕೊಪ್ಪದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಆಯೋಜಿಸಿದ್ದ ಹೊಸ ವರ್ಷಾಚರಣೆ, ಗೀತಗಾಯನ ಹಾಗೂ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಗಾಳಿಪಟ ಹಾರಿಸುವ ಆಚರಣೆ ವಿವಿಧೆಡೆ ಇದೆ. ಹೋರಿಗಳನ್ನು ಬೆದರಿಸುವ, ಕಿಚ್ಚು ಹಾಯಿಸುವ ಆಚರಣೆಗಳು ಸಹ ಇವೆ. ಹಬ್ಬಗಳ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಕರಾತ್ಮಕ ಭಾವನೆ ದೂರವಾಗಿ ಧಾರ್ಮಿಕ ಮನೋಭಾವ ವೃದ್ಧಿಸುತ್ತದೆ. ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾವಗಾನ ತಂಡದ ಅಧ್ಯಕ್ಷ ಭದ್ರಾವತಿ ವಾಸು ಮಾತನಾಡಿ, ಸಂಕ್ರಾಂತಿ ಸಂಭ್ರಮದಂದು ಅಡಕೆ, ಜೋಳ, ಭತ್ತ, ವಿವಿಧ ಧಾನ್ಯಗಳ ರಾಶಿ ಹಾಕಿ ಕಬ್ಬು, ಬಾಳೆ, ತಳಿರುತೋರಣಗಳಿಂದ ಸಿಂಗಾರ ಮಾಡಿ ರಾಶಿಪೂಜೆ ಮಾಡಿ ಹಬ್ಬ ಸಂಭ್ರಮಿಸುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.

Chamber of Commerce and Industry ಎಳ್ಳುಬೆಲ್ಲ ಹಂಚಿ ಹಾಡು, ನೃತ್ಯದೊಂದಿಗೆ ಸಂಭ್ರಮಿಸಲಾಯಿತು. ಸುಗ್ಗಿ ಹಾಡುಗಳನ್ನು ಹಾಡಲಾಯಿತು. ಭಾವೈಕ್ಯತೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆ ಆಚರಣೆಯೊಂದಿಗೆ ಈಗಾಗಲೇ ಭಾವಗಾನ ತಂಡದ ಸದಸ್ಯರು ರಾಜ್ಯಮಟ್ಟದಲ್ಲಿ ಪ್ರತಿಭೆ ಅನಾವರಣಗೊಳಿಸಿ ಶಿವಮೊಗ್ಗ ಜಿಲ್ಲೆ ಕೀರ್ತಿ ತಂದಿರುತ್ತಾರೆ.

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ಗಣೇಶ್, ಭುಜಂಗಪ್ಪ, ಪರಶುರಾಮ್, ಪ್ರಶಾಂತ್, ಆದ್ಯಾ, ಹೇಮಂತ್, ಪ್ರತಿಮಾ, ಉಮಾ, ಪದಾಧಿಕಾರಿಗಳು, ಸದಸ್ಯರು ಇದ್ದರು.

CM Siddaramaiah ಕುಮಾರವ್ಯಾಸ ಭಾರತ ಈಗ ಎರಡು ಸಂಪುಟಗಳಲ್ಲಿ ಲಭ್ಯ

0

CM Siddaramaiah ʼಮನೆಗೊಂದು ಗ್ರಂಥಾಲಯʼ ಯೋಜನೆಯಡಿ ಕುಮಾರವ್ಯಾಸ ಭಾರತ ಕೃತಿಯ ಸಂಪುಟಗಳನ್ನು
ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆಗೊಳಿಸಿದರು.

ಆಡು ಭಾಷೆಯಲ್ಲಿ ಮಹಾಕಾವ್ಯ ಕಟ್ಟಿಕೊಟ್ಟ ಹಿರಿಮೆ ಗದುಗಿನ ನಾರಾಣಪ್ಪ ಅವರದ್ದು. ಕುಮಾರವ್ಯಾಸ ಎಂದೇ ಪ್ರಖ್ಯಾತರಾದ ಗದುಗಿನ ನಾರಾಣಪ್ಪ ರಚಿಸಿದ ʼಕರ್ಣಾಟ ಭಾರತ ಕಥಾಮಂಜರಿ’ ಕುಮಾರವ್ಯಾಸ ಭಾರತ ಎಂದೇ ಪ್ರಖ್ಯಾತವಾಗಿದೆ.

ಕನ್ನಡ ಸಾಹಿತ್ಯ ಲೋಕದ ಅಜರಾಮರ ಕೃತಿಯಾದ ಕುಮಾರವ್ಯಾಸ ಭಾರತವನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಓದುಗರಿಗೆ ಒದಗಿಸಲಾಗುವುದೆಂದು ಸುವರ್ಣ ಸಂಭ್ರಮ ಕಾರ್ಯಕ್ರಮದ ನಿಮಿತ್ತ ಕಳೆದ ವರ್ಷ ಗದಗಿನಲ್ಲಿ ಆಚರಿಸಲಾಗಿದ್ದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ಘೋಷಿಸಿದ್ದರು.

CM Siddaramaiah ಅದರಂತೆ ಕನ್ನಡ ಗಣಕ ಪರಿಷತ್ತು ಈ ಹಿಂದೆ ಪ್ರಕಟಿಸಿದ್ದ ಕುಮಾರವ್ಯಾಸ ಭಾರತದ ಕೃತಿಯ ಹಕ್ಕುಗಳನ್ನು ಪುಸ್ತಕ ಪ್ರಾಧಿಕಾರ ಪಡೆದುಕೊಂಡು ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಈ ಕುಮಾರವ್ಯಾಸ ಭಾರತವನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದೆ. ಈ ಎರಡೂ ಸಂಪುಟಗಳಿಗೆ ಒಟ್ಟು ರೂ.500 ಬೆಲೆ ನಿಗದಿಪಡಿಸಲಾಗಿದೆ
ಎಂದು ಮುಖ್ಯಮಂತ್ರಿ ತಿಳಿಸಿದರು.

Viyananda Saraswati Swamiji ಮಕ್ಕಳಲ್ಲಿ ಆದರ್ಶದ ಗುಣಗಳನ್ನ ಬೆಳೆಸಿ,ಉತ್ತಮ ಪ್ರಜೆಗಳನ್ನಾಗಿ ಮಾಡಿ- ಶ್ರೀವಿನಯಾನಂದ ಸರಸ್ವತಿಶ್ರೀ

0

Viyananda Saraswati Swamiji ಮಕ್ಕಳು ಹಾಗೂ ಯುವಜನರಿಗೆ ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಕಲ್ಲಗಂಗೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಶಿವಮೊಗ್ಗ ನಗರದಲ್ಲಿ ಶ್ರೀ ಸಾಯಿ ಸ್ಕಂದ ಪೂರ್ವ ಪ್ರಾಥಮಿಕ ಶಾಲೆ ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಉತ್ತಮ ಆದರ್ಶ ಗುಣಗಳನ್ನು ಬೆಳೆಸಿ ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಉತ್ತಮ ಉದ್ದೇಶಗಳನ್ನು ಒಳಗೊಂಡ ಸೃಜನಶೀಲ ಸಂಸ್ಥಾಪಕರಿಂದ ಸ್ಥಾಪಿತವಾದ ವಿದ್ಯಾ ಸಂಸ್ಥೆಯು ಮೌಲ್ಯ ಭರಿತ ಶಿಕ್ಷಣ ತತ್ವಗಳ ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ಹಾರೈಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವುದು ಪ್ರಸ್ತುತ ದಿನಗಳಲ್ಲಿ ಕಷ್ಟವೇ ಆಗಿದೆ. ಆದರೆ ಸದಾ ಕ್ರೀಯಾಶೀಲರಾಗಿ ಆದರ್ಶ ಶಿಕ್ಷಕಿಯಾಗಿ ಗುರುತಿಸಿಕೊಂಡಿರುವ ಪಾರ್ವತಿ ಶ್ರೀನಿವಾಸ್ ಅವರು ಸೃಜನಶೀಲ ಚಟುವಟಿಕೆಗಳಿಂದ ವಿದ್ಯಾ ಸಂಸ್ಥೆ ಕಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭಕೋರಿದರು.

Viyananda Saraswati Swamiji ಶಾಲೆಯ ಸಂಸ್ಥಾಪಕಿ ಪಾರ್ವತಿ ಶ್ರೀನಿವಾಸ್ ಮಾತನಾಡಿ ಶಾಲೆಯ ಪ್ರಗತಿ ಹೆಜ್ಜೆಯ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.

ಸಾಹಿತಿ ಶ್ರೀರಂಜಿನಿ ದತ್ತಾತ್ರಿ ಮಾತನಾಡಿ, ಮೌಲ್ಯಯುಕ್ತ ಶಾಲೆ ಕಟ್ಟುವ ಆಶಯಗಳನ್ನು ಮನದಲ್ಲಿ ಇಟ್ಟುಕೊಂಡು ಪಾರ್ವತಿ ಶ್ರೀನಿವಾಸ್ ಅವರು ಶಾಲೆ ಆರಂಭಿಸಿದ್ದಾರೆ. ಅವರ ಆಶಯ ನೆರವೇರಲಿ, ಭಾರತೀಯ ಪರಂಪರೆಯ ಅನುಷ್ಠಾನ ಶಾಲಾ ಚಟುವಟಿಕೆಗಳ ಮೂಲಕ ಹೊರಹೊಮ್ಮಲಿ ಎಂದು ಆಶಿಸಿದರು. ಅಶ್ವಿನಿ ಕಳಸೆ, ಶ್ವೇತಾ ಪ್ರಕಾಶ್, ನರಸಿಂಹ ಸಾಂಬ್ರಾಣಿ ಮತ್ತಿತರರು ಉಪಸ್ಥಿತರಿದ್ದರು.

Nehru Stadium ಜಿಲ್ಲಾ ಥ್ರೋಬಾಲ್ ಪಂದ್ಯಾವಳಿ. ಶಿವಮೊಗ್ಗ ಮಹಿಳಾ ತಂಡಕ್ಕೆ ಅಮೋಘ ಜಯ

0

Nehru Stadium ಇತ್ತೀಚೆಗೆ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ಗ್ರಾಮೀಣ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ನೌಕರರು ಮತ್ತು ಸಿಬ್ಬಂದಿಗಳ ಕ್ರೀಡಾ ಕೂಟದಲ್ಲಿ ಮಹಿಳೆಯರ ತ್ರೋಬಾಲ್ ಪಂದ್ಯ ರೋಚಕವಾಗಿ ನಡೆದ ಅಂತಿಮ ಹಣಾಹಣಿಯಲ್ಲಿ ಶಿವಮೊಗ್ಗ ತಂಡ ಅಮೋಘ ಜಯ ಸಾಧಿಸಿದೆ.

Nehru Stadium ಶಿವಮಾಗ್ಗ ಜಿಲ್ಲೆಯ ಏಳು ತಾಪಂ ತಂಡ ಹಾಗೂ ಜಿ.ಪಂ. ತಂಡ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಪ್ರೇಮಾ ಶೇಟ್ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅವರ ನೇತೃತ್ವದಲ್ಲಿ ಮನೋರಮ, ಅಶ್ವಿನಿ, ಅಕ್ಷತಾ, ಅನಿತಾ, ರೂಪ, ದೀಕ್ಷಾ, ಶಶಿಕಲಾ, ಕೋಕಿಲ, ಸವಿತಾ, ನಾಗರತ್ನ , ಶಶಿಕಲಾ ಬಿ ಇವರ ತಂಡ ಕೋಚ್ ಚಂದ್ರಕಲಾ ಮತ್ತು ಸುಮಯ್ಯ ಅವರ ಮಾರ್ಗದರ್ಶನದಲ್ಲಿ ಅತ್ಯಂತ ರೋಚಕ ಮಟ್ಟದ ಪಂದ್ಯದಲ್ಲಿ ಹೊಸನಗರ ತಂಡವನ್ನು ಸೋಲಿಸಿ ಜಯ ಸಾಧಿಸಿದ್ದಾರೆ.

Manmohan Singh ಜನವರಿ 17 ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ & ನಾ. ಡಿಸೋಜಾ ಅವರಿಗೆ ನುಡಿನಮನ

0

Manmohan Singh ಶಿವಮೊಗ್ಗ ಜಿಲ್ಲಾ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿವೃತ್ತ ಅಧ್ಯಾಪಕರುಗಳ ಸಂಘದ ವತಿಯಿಂದ ಭಾರತದ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹಾಗೂ ನಾಡಿನ ಹೆಸರಾಂತ ಸಾಹಿತಿ, ಚಿಂತಕ ನಾ. ಡಿಸೋಜರವರಿಗೆ ಜ. 17ರ ಶುಕ್ರವಾರ ಬೆಳಿಗ್ಗೆ 11:15ಕ್ಕೆ ನುಡಿ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಚಾರ್ಯ ಬಿ. ಎಂ. ಕುಮಾರ ಸ್ವಾಮಿ, ಡಾ. ಹೆಚ್. ಎಸ್. ನಾಗಭೂಷಣ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನುಡಿ ನಮನ ಸಲ್ಲಿಸಲಿದ್ದಾರೆ.

Manmohan Singh ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗೌಡರ ಶಿವಣ್ಣನವರ್ ವಹಿಸಲಿದ್ದಾರೆ.
ಆಸಕ್ತರು ಪಾಲ್ಗೊಳ್ಳುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಜಿ. ಯು. ಕನ್ನಪ್ಪನವರ್, ಖಜಾಂಚಿ ಪ್ರೊ. ಆರ್. ಮಂಜುನಾಥ್ ಕೋರಿದ್ದಾರೆ.

MESCOM ಜನವರಿ 16. ಶಿವಮೊಗ್ಗ ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಜನ ಸಂಪರ್ಕ ಸಭೆ

0

MESCOM ದಿನಾಂಕ: 16.01.2025 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 01 ರವರೆಗೆ ನಗರ ಉಪವಿಭಾಗ-1, ಸರ್ವಜ್ಞ ವೃತ್ತ, ಬಾಲ್‌ರಾಜ್ ಅರಸ್ ರಸ್ತೆ, ಮೆಸ್ಕಾಂ, ಶಿವಮೊಗ್ಗ ಕಛೇರಿಯಲ್ಲಿ “ಜನ ಸಂಪರ್ಕ ಸಭೆ” ಯನ್ನು ನಡೆಸಲಗುವುದು.
ಈ ಸಭೆಯಲ್ಲಿ ಮೆಸ್ಕಾಂ ಹಿರಿಯ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಗ್ರಾಹಕರಿಂದ ಮೆಸ್ಕಾಂ ಕಂಪನಿಯ ವಿದ್ಯುತ್ ಸಂಬಂಧಿತ ಅಹವಾಲುಗಳನ್ನು ಸ್ವೀಕರಿಸಲಾಗುವುದು.

MESCOM ಆದ್ದರಿಂದ ಶಿವಮೊಗ್ಗ ನಗರ ಉಪವಿಭಾಗ-1 ರ ಘಟಕ-1, 2 ಮತ್ತು 3 ರ ವ್ಯಾಪ್ತಿಯಲ್ಲಿನ ಗ್ರಾಹಕರು ಸದರಿ “ಜನ ಸಂಪರ್ಕ ಸಭೆ” ಯ ಸದುಪಯೋಗ ಪಡೆಯಬೇಕೆಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ನಗರ ಉಪ ವಿಭಾಗ-1 ಇವರು ತಿಳಿಸಿದ್ದಾರೆ.

Banashankari Temple ಶಿವಮೊಗ್ಗದಲ್ಲಿ ಶ್ರೀಬನಶಂಕರಿ ಅಮ್ಮನವರ ವೈಭವದ ರಥೋತ್ಸವ

0

Banashankari Temple ಶಿವಮೊಗ್ಗ ಬಾಪೂಜಿ ನಗರದಲ್ಲಿ ನೆಲೆಸಿರುವ ಶ್ರೀ ಮಾತಾ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಎರಡು ದಿನಗಳ ಅದ್ದೂರಿಯಾಗಿ ಜರುಗಿತು.
ಶ್ರೀ ಮಾತಾ ಬನಶಂಕರಿ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ಅತ್ಯಂತ ವೈಭವದಿಂದ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ನಂದಿ ಧ್ವಜಾರೋಹಣ, ಗಣಪತಿ ಹೋಮ ಪೂಜಾ ಪ್ರಾರಂಭವಾಗಿ ಪುಣ್ಯಾಹ ವಾಚನ, ರಕ್ಷಾ ಬಂಧನ ನಂತರ ಅಭಿಷೇಕ, ಮಹಾಮಂಗಳಾರತಿ ನಡೆಯಿತು. ನಂತರ ಅಮ್ಮನವರ ರಾಜಬೀದಿ ಪಲ್ಲಕ್ಕಿ ಉತ್ಸವವು ಬಾಪೂಜಿನಗರದಿಂದ ಗೋಪಿ ವೃತ್ತದವರೆಗೆ ಡೊಳ್ಳು, ಮಂಗಳವಾದ್ಯ, ಮಹಿಳಾ ಭಜನಾ ತಂಡಗಳೊಂದಿಗೆ ನೆರವೇರಿತು. ಎಲ್ಲ ಭಕ್ತರಿಗೂ ಮಹಾಪ್ರಸಾದ ಅನ್ನಸಂತರ್ಪಣೆ ವಿತರಿಸಲಾಯಿತು.
Banashankari Temple ಶ್ರೀ ಬನಶಂಕರಿ ಮಾತಾ ಅಮ್ಮನವರಿಗೆ ಮರುದಿನ 108 ಲೀಟರ್ ಎಳೆನೀರು, ಕ್ಷೀರಾಭಿಷೇಕ, ದುರ್ಗಾ ಹೋಮ, ಸುಹಾಸಿನಿ ಪೂಜೆ, ಮಹಾ ಮಂಗಳಾರತಿ ನಡೆಯಿತು. ಕಲ್ಲಗಂಗೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಅವರ ಅಮೃತ ಹಸ್ತದಿಂದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವ ಸಮಯದಲ್ಲಿ ಸಾವಿರಾರು ಭಕ್ತರು ನೆರೆದಿದ್ದರು. ರಥೋತ್ಸವ ಸಮಯದಲ್ಲಿ ಡೊಳ್ಳು, ವೀರಗಾಸೆ, ಭಜನೆ, ಮಂಗಳವಾದ್ಯಗಳೊಂದಿಗೆ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು. ಮಧ್ಯಾಹ್ನ ಸಾವಿರಾರು ಭಕ್ತರಿಗೆ ಮಹಾಪ್ರಸಾದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ರಾಜಕೀಯ ಮುಖಂಡರು, ಸ್ವಾಮೀಜಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿದ್ದರು. ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ನಗರ ದೇವಾಂಗ ಸಮಾಜದ ಅಧ್ಯಕ್ಷ ಬಿ.ಸತೀಶ್ ಕುಮಾರ್ ಹಾಗೂ ಆಡಳಿತ ಮಂಡಳಿ ಅತ್ಯಂತ ವ್ಯವಸ್ಥಿತವಾಗಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹಾಗೂ ಕುಟುಂಬ ವರ್ಗ, ಗಾಯತ್ರಿ ಪೀಠ ಹಂಪಿ ಹೇಮ ಕೂಟ ಟ್ರಸ್ಟ್ ಅಧ್ಯಕ್ಷ ಪಿ.ಆರ್.ಗಿರಿಯಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಮಲೆನಾಡು ದೇವಾಂಗ ಸಮಾಜದ ಆಡಳಿತ ಮಂಡಳಿ, ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಟಿ ರಾಜೇಶ್ ಹಾಗೂ ಆಡಳಿತ ಮಂಡಳಿ, ಬನಶಂಕರಿ ಮಹಿಳಾ ಸಮಾಜ ಅಧ್ಯಕ್ಷೆ ಜಯಮ್ಮ ಹಾಗೂ ಆಡಳಿತ ಮಂಡಳಿ, ಶ್ರೀ ದೇವರ ದಾಸಿಮಯ್ಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಹಾಗೂ ಆಡಳಿತ ಮಂಡಳಿಯವರು ಭಾಗವಹಿಸಿದ್ದರು.

Department of Kannada and Culture ಇಂದಿನ ರಾಜಕಾರಣಿಗಳಿಗೆ ಶ್ರೀಸಿದ್ಧರಾಮೇಶ್ವರರ ಆದರ್ಶ ಅನುಸರಣೀಯ- ಬಿ.ವೈ‌ರಾಘವೇಂದ್ರ

0


Department of Kannada and Culture ತಮ್ಮ ಕಾಯಕ ನಿಷ್ಠೆ ಮತ್ತು ಶರಣ ಸಾಹಿತ್ಯದ ಮೂಲಕ ಜಗತ್ತಿನ ಮನುಕುಲದ ಕಣ್ತೆರಿಸಿದ ಮಹನೀಯ ಶಿವಯೋಗಿ ಸಿದ್ದರಾಮೇಶ್ವರರು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಹೇಳಿದರು.

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬೋವಿ ವಿದ್ಯಾವರ್ಧಕ ಸಂಘ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶಿವ ಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾಧಕ ಸಿದ್ಧರಾಮೇಶ್ವರರು ಯಾವುದೇ ಒಂದು ಜಾತಿ- ಸಮುದಾಯಕ್ಕೆ ಸೀಮಿತವಾದವರಲ್ಲ. ಶರಣ ಸಿದ್ದರಾಮರನ್ನು ಭೋವಿ ಮತ್ತು ವೀರಶೈವ ಸಮಾಜದ ಬಂಧುಗಳು ಅವರನ್ನು ಭಕ್ತಿ ಭಾವದಿಂದ ಕಾಣುತ್ತಾರೆ ಮಾತ್ರವಲ್ಲ ಇಂದಿನ ಎಲ್ಲಾ ರಾಜಕಾರಣಿಗಳು ಸಿದ್ದರಾಮೇಶ್ವರರ ಆದರ್ಶ ಮತ್ತು ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂದರು.

ಪ್ರಕೃತಿಯ ಮೇಲೆ ಪ್ರತಿ ಬಾರಿ ದಾಳಿಯಾದಾಗಲೂ ಸೂಕ್ತ ದಂಡ ತರಬೇಕಾಗುತ್ತದೆ ಎಂದು ಶಿವಯೋಗಿ ಸಿದ್ದರಾಮೇಶ್ವರರು ಅಂದೆ ಎಚ್ಚರಿಸಿದ್ದರು. ಅವರು ತಮ್ಮ ಕಾಲಿಕ ನಿಷ್ಠೆ ಜೊತೆಗೆ ಜನಸಾಮಾನ್ಯರ ಬದುಕಿಗೆ ಅನುಕೂಲವಾಗುವಂತೆ ಕೆರೆ-ಕಟ್ಟೆ-ಕಾಲುವೆಗಳನ್ನು ನಿರ್ಮಿಸುವ ಮೂಲಕ ಶಿವನನ್ನು ಕಾಣುವ ಪ್ರಯತ್ನ ಮಾಡಿ ಸಫಲರಾದರು ಎಂದವರು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಬೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್ ರವಿಕುಮಾರ್ ಅವರು ಮಾತನಾಡಿ, ವಿವಿಧ ಕಾರಣಗಳಿಂದಾಗಿ ಅಸಂಘಟಿತರಾಗಿರುವ ಭೋವಿ ಸಮಾಜದ ಬಂಧುಗಳು ಸಿದ್ದರಾಮೇಶ್ವರ ಜಯಂತಿಯ ನೆಪದಲ್ಲಿ ಆದರೂ ಕೂಡ ಸಮನ್ವಯತೆ ಕಾಯ್ದುಕೊಳ್ಳಬೇಕು, ಒಗ್ಗಟ್ಟಾಗಿರಬೇಕು ಮಾತ್ರವಲ್ಲ ಸಿದ್ದರಾಮೇಶ್ವರರ ಮಾರ್ಗದರ್ಶನದಂತೆ ನಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

Department of Kannada and Culture ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಅವರು ವಿಶೇಷ ಉಪನ್ಯಾಸ ನೀಡಿ, ಶ್ರಮಿಕ ಸಮುದಾಯದಿಂದಲೇ ಬಂದ ಸಿದ್ದರಾಮರು ತಮ್ಮ ವೃತ್ತಿಯ ಘನತೆ ಮತ್ತು ಗೌರವವನ್ನು ಹೆಚ್ಚಿಸಿದರು ಎಂದವರು ನುಡಿದರು.

ಮಂತ್ರ ಪೂಜೆಗಳನ್ನು ಹೊರತುಪಡಿಸಿ ಕಾಯಕದ ಮೂಲಕ ಶಿವನ ದರ್ಶನ ಮಾಡಿದ ಸಿದ್ದರಾಮೇಶ್ವರರು ಸoತ ಸಜ್ಜನರ ಸಂಘದಿಂದ ಜ್ಞಾನಾರ್ಜನೆ ಹೊಂದಿದರು. ಸತತವಾಗಿ ಕೆರೆಕಟ್ಟೆ ಕಾಲುವೆಗಳ ನಿರ್ಮಾಣದಿಂದ ಶಿವನನ್ನು ಆರಾಧಿಸಿದರು, ದರ್ಶಿಸಿದರು ಎಂದವರು ನುಡಿದರು.

ನಿಷ್ಕಾಮ ಮನಸ್ಥಿತಿಯ ಸಿದ್ಧರಾಮರ ಬದುಕು ಮತ್ತು ಜೀವನ ಹಾಗೂ ಕಾರ್ಯ ಶೈಲಿ ಮಾದರಿಯಾಗಿದ್ದು ಅದನ್ನು ಅನುಸರಿಸುವಂತೆ ಕಿವಿಮಾತು ಹೇಳಿದರು.

ಇಂದಿನ ಯುವಜನತೆ ಸಂಘಟಿತರಾಗಬೇಕು, ಸಿದ್ದರಾಮೇಶ್ವರರ ಜೀವನ ಪಾಲಿಸಬೇಕು. ಪೋಷಕರು ಸಕಾಲದಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಕುಟುಂಬದ ಉಜ್ವಲ ಭವಿಷ್ಯಕ್ಕೆ ಪ್ರೇರಣೆಯಾಗುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್ ಎನ್ ಚನ್ನಬಸಪ್ಪ ಅವರು ಮಾತನಾಡಿ, ಉತ್ತಮ ಪರಂಪರೆಯ ಪ್ರತೀಕವಾಗಿದ್ದ ಶ್ರೇಷ್ಠ ವಚನಕಾರ ಹಾಗೂ ಶಿವನ ಭಕ್ತ ಶಿವಯೋಗಿ ಸಿದ್ದರಾಮೇಶ್ವರರು ಎಂದು ಬಣ್ಣಿಸಿದ ಅವರು ರೈತರ ನೆಮ್ಮದಿ ಬದುಕಿಗೆ ಸಹಕರಿಸಿ ಎಲ್ಲರ ಮನದಲ್ಲಿ ಅಚ್ಚಳಿದೆ ಉಳಿದಿದ್ದಾರೆ ಮಾತ್ರವಲ್ಲ ತಮ್ಮ ಮೌಲ್ಯಯುತ ಸಾಹಿತ್ಯದ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ರುಜು ಮಾರ್ಗವನ್ನು ಪರಿಚಯಿಸಿದವರಾಗಿದ್ದಾರೆ. ಸಮಾನತೆಯ ಶ್ರೇಷ್ಠ ಪರಂಪರೆಯ ನಾಯಕರಾಗಿ ಬಿಂಬಿತರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯಕ್, ವಿಧಾನ ಪರಿಷತ್ ಸದಸ್ಯ ಶ್ರೀಮತಿ ಬಲ್ಕಿಶ್ ಬಾನು, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀಮತಿ ಪಲ್ಲವಿ ಜಿ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್ ಹೇಮಂತ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ ಎಸ್ ಚಂದ್ರಭೂಪಾಲ, ತಾಲೂಕು ಭೋವಿ ವಿದ್ಯಾಭ್ಯಾಸ ಸಂಘದ ಅಧ್ಯಕ್ಷ ಬಿ ಜಗದೀಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭೋವಿ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Klive Special Article ಸಮಾಜಕ್ಕೊಂದು ಅಳಿಲು ಸೇವೆ ಲೇ: ಪ್ರಭಾಕರ ಕಾರಂತ.

0

Klive Special Article ಮೊನ್ನೆ ಭಾನುವಾರ ಶೃಂಗೇರಿಯಲ್ಲಿ ಚಿಕ್ಕದೊಂದು ಅರ್ಥಪೂರ್ಣ ಸಭೆಯಲ್ಲಿ ಪಾಲ್ಗೊಂಡಿದ್ದೆ.ಶೃಂಗೇರಿ ತಾಲ್ಲೂಕಿನ ವಿಪ್ರ ನೌಕರರ ಸಂಘದವರು ಸ್ಟೀಲ್ ತಟ್ಟೆ ಲೋಟ, ಚಮಚ ಬ್ಯಾಂಕನ್ನು ಆರಂಭಿಸಲು ಉದ್ಘಾಟನೆಗೆ ನನ್ನನ್ನು ಕರೆದಿದ್ದರು. ಉಳುವೆಯ ಗಣಿತವನ ಶಿವಶಂಕರ್ ಈ ಸಂಘಟನೆಯ ಪ್ರಧಾನ ಕಾರ್ಯದರ್ಶಿ. ಅವರು ಹೊಳೆಕೊಪ್ಪ ಪ್ರೌಢ ಶಾಲೆಯಲ್ಲಿ ರಜತ ಮಹೋತ್ಸವ ಮಾಡಿದಾಗಲೂ ಪ್ಲಾಸ್ಟಿಕ್ ಬಳಸದೇ ಮೂರುದಿನದ ಸಮಾರಂಭ ಮಾಡಿದ್ದರು. ವಿಪ್ರ ನೌಕರರು ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆಯ ವಿರುದ್ಧ ತಮ್ಮದೊಂದು ಸಣ್ಣ ಪ್ರಯತ್ನದ ಅಂಗವಾಗಿ ಐದು ನೂರು ತಟ್ಟೆ, ಲೋಟ,ಚಮಚ ಯಾರೇ ಸಸ್ಯಾಹಾರದ ಬಳಕೆಗೆ ಕೇಳಿದರೂ ಉಚಿತವಾಗಿ ಬಳಕೆಗೆ ಕೊಡುತ್ತಾರಿನ್ನು .ಅಷ್ಟರಮಟ್ಟಿಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಆಗುತ್ತದೆ. ಸಮಾಜದಲ್ಲಿ ಎಲ್ಲದರ ಕುರಿತೂ ಗೊಣಗುತ್ತಲೇ ಕುಳಿತಿರದೇ ತಮ್ಮ ಕೈಲಾದಷ್ಟು ಪರಿಹಾರ ಯತ್ನ ಮಾಡುವ ಇಂತಹವರೆಂದರೆ ನನಗೆ ಎಲ್ಲಿಲ್ಲದ ಗೌರವ,ಅಕ್ಕರೆ.
Klive Special Article ಕಾರ್ಯಕ್ರಮದಲ್ಲಿ ಶಿವಶಂಕರ್ ನೀಡಿದ ವರದಿ ಕೇಳಿ ನನಗೆ ನಂಬಲೇ ಆಗಲಿಲ್ಲ. ಕಳೆದ ಒಂದೇ ವರ್ಷದಲ್ಲಿ ಆರೋಗ್ಯ ಚಿಕಿತ್ಸೆಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಹಣ ಒಟ್ಟು ಐವರಿಗೆ ಸೇರಿ ನೀಡಿದ್ದಾರೆ. ಇಬ್ಬರು ವಿಪ್ರ ನೌಕರರಿಗೆ ಚಿಕಿತ್ಸೆಗೆ 85 ಸಾವಿರ ರೂ ನೀಡಿದ್ದಾರೆ. ಬಡ ಬ್ರಾಹ್ಮಣರಿಗೆ ಈರ್ವರ ಅಂತ್ಯ ಸಂಸ್ಕಾರಕ್ಕೂ 55 ಸಾವಿರರೂ ನೀಡಿದ್ದಾರೆ. ಈರ್ವರು ಬಡವರಿಗೆ ಮನೆ ರಿಪೇರಿಗೆ 25 ಸಹಸ್ರ ರೂ ನೀಡಿದ್ದಾರೆ.25 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಾಗಿ 80 ಸಾವಿರ ನೀಡಿದ್ದಾರೆ.ವಿಪ್ರ ವಟುಗಳ ಉಪನಯನ ಏರ್ಪಡಿಸುವ ಬ್ರಾಹ್ಮಣ ಮಹಾಸಭೆಗೆ 25 ಸಹಸ್ರ ರೂ ನೀಡಿದ್ದಾರೆ. ಆರು ಅರ್ಹರಿಗೆ ಪ್ರತಿ ತಿಂಗಳೂ ನೀಡುವ ಸಹಾಯಧನಕ್ಕೆ 58 ಸಹಸ್ರ ರೂ ಖರ್ಚು ಮಾಡಿದ್ದಾರೆ.ಈ ಸ್ಟೀಲ್ ಪರಿಕರಕ್ಕೆ ಒಂದು ಲಕ್ಷ 21 ಸಾವಿರ ಖರ್ಚಾಗಿದೆ.ಇದಲ್ಲದೇ ಇದೇ ಸಭೆಯಲ್ಲಿ ಎರಡು ಗಣಪತಿ ದೇವಸ್ಥಾನಕ್ಕೆ ತಲಾ ಐವತ್ತು ತಟ್ಟೆ ಲೋಟ,ಚಮಚ ಕೊಡುಗೆಯಾಗಿ ನೀಡಲಾಯಿತು. ಇದು ಒಂದು ವರ್ಷದ ಕಾರ್ಯಕ್ರಮದ ವಿವರ.ಶೃಂಗೇರಿಯ ಮಠದ ಆಡಳಿತಾಧಿಕಾರಿಯವರು ಅಧಿಕಾರ ಸ್ವೀಕರಿಸಿದಾಗ ಅವರನ್ನು ಅಭಿನಂದಿಸಲು ಸಂಘ ಹೋಗಿದೆ. ಆಗ ಇವರ ಕಾರ್ಯ ಚಟುವಟಿಕೆಯ ವಿವರ ತಿಳಿದು ಅವರು ಸಹ ತಮ್ಮ ನೆರವು ನೀಡಲು ಮುಂದೆ ಬಂದಿದ್ದಾರೆ. ಮನೆ ದುರಸ್ತಿಗೆ ಮಠವೂ ಸಹಕಾರ ನೀಡಿದೆ.
Klive Special Article ಹತ್ತು ವರ್ಷಗಳಿಂದ ಇಂತಹ ಚಟುವಟಿಕೆಯನ್ನು ಸದ್ದಿಲ್ಲದೇ ನಡೆಸಿಕೊಂಡು ಬರಲಾಗುತ್ತಿದೆ. ಸಂಘ ಸದಸ್ಯ ಶುಲ್ಕ ಪಡೆಯುವುದಿಲ್ಲ. ಏನೇ ಕಾರ್ಯಕ್ರಮ ಇದ್ದರೂ ವ್ಯಾಟ್ಸಾಪ್ ಗ್ರೂಪ್ ನಲ್ಲಿ ಪ್ರಕಟಣೆ ಮಾಡಲಾಗುತ್ತದೆ. ಸದಸ್ಯರು ತಮಗೆ ಇಷ್ಟ ಬಂದಷ್ಟು ಹಣ ಬ್ಯಾಂಕಿನ ಅಕೌಂಟ್ ಗೆ ಹಾಕಬಹುದು. ಈ ಹಣದಲ್ಲೇ ಚಟುವಟಿಕೆ ನಡೆಯುತ್ತದೆ. ನೌಕರರ ಮನೆ ಮಾತ್ರವಲ್ಲ ಸಹಾಯ ಅವಶ್ಯವಿರುವ ಯಾವ ವಿಪ್ರನಿಗೂ ಅದು ತಲುಪುತ್ತದೆ. ಹತ್ತು ವರ್ಷಗಳಿಂದ ಒಮ್ಮೆಯೂ ಪತ್ರಿಕೆಗಳಿಗೆ ಇದನ್ನು ತಿಳಿಸಿಲ್ಲ. ಪ್ರಚಾರ ಪಡೆದಿಲ್ಲ.ಗುಪ್ತಗಾಮಿನಿಯಾಗಿ ನೆರವು ಹರಿದಿದೆ. ಈಗ ಸ್ಟೀಲ್ ಬ್ಯಾಂಕ್ ಮಾಡಿ ಗುಟ್ಟಾಗಿಟ್ಟರೆ ಗಿರಾಕಿ ಬಾರದಿದ್ದರೆ ಎಂದು ಪ್ರಥಮ ಬಾರಿ ಪತ್ರಕರ್ತರಿಗೆ ತಿಳಿಸಿ ಕಾರ್ಯಕ್ರಮ ಮಾಡಲಾಗಿದೆ.ತೊರೆಹಡ್ಲು ಶಾಲೆಯ ಗುರುಮೂರ್ತಿ ಮಾತನಾಡುತ್ತಾ ತಮ್ಮ ಆದಾಯದಲ್ಲಿ ಶೇಕಡ ಮೂರರಷ್ಟು ಪ್ರತಿ ತಿಂಗಳೂ ಸತ್ಕಾರ್ಯದಲ್ಲಿ ತೊಡಗಿಸುವ ಸಂಗತಿ ತಿಳಿಸಿದರು. ಇವರ ಕಾರ್ಯ ಚಟುವಟಿಕೆಯನ್ನು ನೋಡಿ ಯಶ್ ಎಂಬ ನಿವೃತ್ತ ಯೋಧ ಸಂಘಟನೆಗೆ ತಮ್ಮ ನಿವೃತ್ತಿ ಹಣದಲ್ಲಿ 650000 ರೂ ನೀಡಿದ್ದಾರೆ. ಆ ಹಣ ಇಡಿಗಂಟಾಗಿಟ್ಟು ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಯಶ್ ಈ ಊರವರೂ ಅಲ್ಲ.ಶೃಂಗೇರಿಯಲ್ಲಿ ಜಮೀನು ಕೊಂಡು ಈ ಊರಿನ ಸಂಪರ್ಕಕ್ಕೆ ಬಂದವರು.ಇರುವುದು ಬೆಂಗಳೂರಿನಲ್ಲಿ. ತೊರೆಹಡ್ಲು ಶಾಲೆಗೆ ಇವರು ಲಕ್ಷಾಂತರ ಮೌಲ್ಯದ ಸಂಗೀತ ಉಪಕರಣ ನೀಡಿದರಂತೆ. ಸರ್ ಇದನ್ನು ಉಪಯೋಗಿಸುವುದು ಹೇಗೆ ಎಂದು ಗುರುಮೂರ್ತಿ ಪ್ರಶ್ನಿಸಿದರಂತೆ. ನನಗೆ ಸಾಯಿ ಪ್ರೇರಣೆ ಆಗಿದೆ.ನಿಮ್ಮ ಶಾಲೆಗೆ ಕೊಡು ಎಂದು, ಉಪಯೋಗ ಆಗುತ್ತದೆ ಎಂದಿದ್ದರಂತೆ. ಅವರು ಹೇಳಿ ಎರಡೇ ತಿಂಗಳಿಗೆ ಶಾಲೆಯ ಇತಿಹಾಸದಲ್ಲೇ ಪ್ರಥಮ ಬಾರಿ ಸಂಗೀತ ಶಿಕ್ಷಕರೋರ್ವರ ಆಗಮನ ಆಯಿತಂತೆ. ಪವಾಡಗಳು ಆಗೀಗ ನಡೆಯುತ್ತಿರುತ್ತವೆ.
ಈ ಕಾರ್ಯಕ್ರಮದಲ್ಲಿ ಶೃಂಗೇರಿಯ ತರಕಾರಿ ವ್ಯಾಪಾರಿ ನಾಗೇಶ್ ಕಾಮತ್ ಪಾಲ್ಗೊಂಡಿದ್ದರು.ಅವರು ಪರಿಸರದ ನೈಜ ಪ್ರೇಮಿ.ಕಳೆದ ಹತ್ತಾರು ವರ್ಷಗಳಿಂದ ಮಲೆನಾಡಿನ ಜನರಿಗೆ ಬಟ್ಟೆ ಬ್ಯಾಗ್ ಉಚಿತ ಕೊಡುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಯ ಪ್ರದೇಶಕ್ಕೂ ಹೋಗಿ ಮನೆಮನೆಗೆ ಚೀಲ ಪೂರೈಸಿದ್ದಾರೆ. ಈಗಲೂ ಅದನ್ನು ಮುಂದುವರೆಸಿದ್ದಾರೆ. ವರ್ಷದ ಒಂದು ತಿಂಗಳು ಅಂಗಡಿಗೆ ಬರುವ ಎಲ್ಲರಿಗೂ ಕೈಚೀಲ ಕೊಡುತ್ತಾರೆ. ಸಭೆಯಲ್ಲೂ ನಮಗೆಲ್ಲಾ ನೀಡಿದರು.ತಾನಿರುವ ತನಕ ಈ ಕಾರ್ಯಕ್ರಮ ಮುಗಿಯದು ಎಂದವರು ಹೇಳಿದರು. ಮೊನ್ನಿನ ಶೃಂಗೇರಿಯ ಕಾರ್ಯಕ್ರಮದಲ್ಲಿ ಅವರದು ಸ್ವಚ್ಛತೆಯ ಜವಾಬ್ದಾರಿ.ಏಕಾಂಗಿಯಾಗಿ ಚೀಲಗಟ್ಟಲೇ ಪ್ಲಾಸ್ಟಿಕ್ ಬಾಟಲಿ ಹೆರಕುತ್ತಿದ್ದಾರೆ.ಶೃಂಗೇರಿಯಲ್ಲಿ ಸಣ್ಣ ಪ್ಲಾಸ್ಟಿಕ್ ಕಸ ಕಂಡರೆ ಅವರಿಗೆ ಹೊಟ್ಟೆ ಸಂಕಟವಾಗುತ್ತದೆ. ಶೃಂಗೇರಿಯ ಎಲ್ಲಾ ಕಛೇರಿಗೂ ಅವರು ತಟ್ಟೆ ಲೋಟ ಕೊಂಡು ಕೊಡುಗೆ ನೀಡುತ್ತಿದ್ದಾರೆ. ಬಳಸಿ ಎಂಬುದೊಂದೇ ಅವರ ಮನವಿ.ಸ್ವಚ್ಛ ಭಾರತಕ್ಕೆ ಅವರಿಗಿಂತ ಮಿಗಿಲಾದ ಸ್ವಯಂಸೇವಕ ಸಿಗುವುದು ದುರ್ಲಭ. ಕಾರ್ಯಕ್ರಮದ ಅಧ್ಯಕ್ಷರು ಸಂಘದ ಅಧ್ಯಕ್ಷರಾದ ಗುಡ್ಡದ ಹೈಸ್ಕೂಲ್ ಮುಖ್ಯೋಪಾಧ್ಯಾಯ ಶಶಿಧರ್. ಅವರ ಮನೆಯಲ್ಲೇ ಈ ಸ್ಟೀಲ್ ಬ್ಯಾಂಕಿನ ಕಛೇರಿ.ಅವರು ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಸಂಧರ್ಭ ಮಕ್ಕಳನ್ನು ಗುರಿಯಾಗಿಸಿ ಪುಟ್ಟ ಶ್ರೀರಾಮ ಚರಿತೆ ಬರೆದಿದ್ದಾರೆ. ಅದೊಂದು ಪುಸ್ತಕ ನನಗೂ ನೀಡಿದರು. ತಾಲ್ಲೂಕಿನ ಅಡುಗೆ ನಿರ್ವಾಹಕರ ಸಂಘದ ಅಧ್ಯಕ್ಷ ತಲಗಾರು ರಮೇಶ್ ಕಾರ್ಯಕ್ರಮ ಉದ್ಘಾಟಿಸಿದ್ದು.ಈ ಕಾರ್ಯಕ್ರಮ ನೋಡಿ ತಮ್ಮದೂ 2500 ರೂ ದೇಣಿಗೆ ಸಂಸ್ಥೆಗೆ ನೀಡಿದರು. ಇಂತದೇ ಸ್ಟೀಲ್ ಬ್ಯಾಂಕ್ ಕೊಪ್ಪದಲ್ಲಿ ನಡೆಸುತ್ತಿರುವ ಕಲಾವಿದ ಶಿಗದಾಳ್ ಅರವಿಂದ್ ತಮ್ಮ ಅನುಭವದ ಜೊತೆಗೆ ಪ್ಲಾಸ್ಟಿಕ್ ಅಪಾಯದ ಕುರಿತೂ ಮಾತನಾಡಿದರು.

ಸಂಘಟನೆಯ ಬಾಲಗಂಗಾಧರ್, ಬ್ರಾಹ್ಮಣ ಸಂಘದ ಸತೀಶ್,ಶ್ರೀಕೃಷ್ಣ, ಪಟ್ಟಣ ಪಂಚಾಯಿತಿಯ ಪ್ರಕಾಶ್,ಹೀಗೆ ನನ್ನ ಸ್ನೇಹ ವಲಯದ ಅನೇಕರು ಮಾತಿಗೆ ಸಿಕ್ಕರು. ರಾಜೀವ್ ಗಾಂಧಿ ಸಂಸ್ಕೃತ ಕ್ಯಾಂಪಸ್ ನ ಸಹ ನಿರ್ದೇಶಕ ಪ್ರೊ.ಚಂದ್ರಕಾಂತ್ ಸೇರಿದಂತೆ ಅನೇಕರ ಪರಿಚಯವೂ ಆಯಿತು. ಬಾಳೆಹೊನ್ನೂರಿನ ಗೆಳೆಯ ಯಜ್ಞ ಪುರುಷಭಟ್ಟರ ಮಗಳು ಪರಿಚಯಮಾಡಿಕೊಂಡರು.ನನ್ನ ಪಾಲಿಗೆ ಒಂದು ಸತ್ಸಂಗ ಇದು.ಅಪರೂಪಕ್ಕೆ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡ ಕುರಿತು ತೃಪ್ತಿಯಾಯಿತು.

Bangalore International Film Festival ಬೆಂಗಳೂರಿನಲ್ಲಿನ 16 ನೇ ಚಲನಚಿತ್ರೋತ್ಸವಕ್ಕೆ ಮೂರು ಸ್ಪರ್ಧಾ ವಿಭಾಗಕ್ಕೆ ಚಿತ್ರಗಳಿಗೆ ಆಹ್ವಾನ

0

Bangalore International Film Festival 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮಾರ್ಚ್‌ 1 ರಿಂದ 8ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಸರ್ವಜನಾಂಗದ ಶಾಂತಿಯ ತೋಟ ಘೋಷವಾಕ್ಯದಡಿ ನಡೆಯಲಿದೆ.

ಈ ಹಿನ್ನೆಲೆ ಮೂರು ಸ್ಪರ್ಧಾ ವಿಭಾಗಗಳಿಗೆ ಅರ್ಹ ಚಲನಚಿತ್ರಗಳನ್ನು ಆಹ್ವಾನಿಸಲಾಗಿದೆ.

ಏಷಿಯನ್‌ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಸಲ್ಲಿಸಬೇಕಾದ ಕಥಾ ಚಿತ್ರಗಳು ಕನಿಷ್ಠ 70 ನಿಮಿಷದ ಅವಧಿಯದ್ದಾಗಿರಬೇಕು. ಜನವರಿ 1, 2024 ರಿಂದ ಡಿಸೆಂಬರ್‌ 31, 2024ರ ಒಳಗೆ ನಿರ್ಮಾಣಗೊಂಡಿರಬೇಕು. ಏಷ್ಯಾದ ಯಾವುದೇ ದೇಶದಲ್ಲಿ ತಯಾರಾದ ಚಿತ್ರಗಳನ್ನು ಕಳುಹಿಸಬಹುದು.

Bangalore International Film Festival ಚಲನಚಿತ್ರಗಳನ್ನು ಸಲ್ಲಿಸುವ ಪ್ರಕ್ರಿಯೆಯು 2025ರ ಜನವರಿ 9 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಜನವರಿ 23ರವರೆಗೆ ಅವಕಾಶವಿದೆ. biffes.org ಮೂಲಕ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಪ್ರತಿ ಚಿತ್ರಕ್ಕೂ ಪ್ರವೇಶ ಶುಲ್ಕ ₹3,000 ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ 8904645529, biffesblr@gmail.com & biffes.org ಸಂಪರ್ಕಿಸಬಹುದು.