Wednesday, March 18, 2026
Wednesday, March 18, 2026
Home Blog Page 437

Karnataka School Examination and Assessment Board ಮಾರ್ಚ್ 1ರಿಂದ ಎಸ್ಎಸ್ಎಲ್ ಸಿ & ಮಾರ್ಚ್ 21 ರಿಂದ ಪಿಯು ಪರೀಕ್ಷೆ, ವೇಳಾಪಟ್ಟಿಗೆ ವೆಬ್ ಸೈಟ್ ಭೇಟಿ ಮಾಡಿ

0

Karnataka School Examination and Assessment Board ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್‌ 1 ರಿಂದ ಮಾರ್ಚ್‌ 20ರ ವರೆಗೆ ಪಿಯುಸಿ ಪರೀಕ್ಷೆ ಹಾಗೂ ಮಾರ್ಚ್‌ 21 ರಿಂದ ಏಪ್ರಿಲ್‌ 4ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ವೇಳಾಪಟ್ಟಿಗಾಗಿ kseab.karnataka.gov.in ಗೆ ಭೇಟಿ ನೀಡಬಹುದಾಗಿದೆ

Environmental Science from Sahyadri Science College ಹಬ್ಬಗಳ ಆಚರಣೆಯಿಂದ ಸಂಪ್ರದಾಯ & ವೈಜ್ಞಾನಿಕ ಹಿನ್ನೆಲೆಯನ್ನ ಪೀಳಿಗೆಗೆ ತಿಳಿಸುವಂತಾಗಬೇಕು- ಡಾ.ನಾಗರಾಜ್ ಪರಿಸರ

0

Environmental Science from Sahyadri Science College ಹಬ್ಬಗಳನ್ನು ಆಚರಿಸುವ ಮೂಲಕ ಭಾರತೀಯ ಸಂಸ್ಕೃತಿ, ಸಂಪ್ರದಾಯದ ವೈಜ್ಞಾನಿಕ ಹಿನ್ನೆಲೆಯ ಅರಿವನ್ನು ಮುಂದಿನ ಪೀಳಿಗೆಗೆ ಹಬ್ಬಗಳ ವಿಶೇಷತೆ, ಆಹಾರ ಕ್ರಮ ಉಡುಗೆ-ತೊಡುಗೆಗಳನ್ನು ಪರಿಚಯಿಸಿದಂತಾಗುತ್ತದೆ ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಪರಿಸರ ಹೇಳಿದರು.

ಮಕರ ಸಂಕ್ರಾಂತಿ ಪ್ರಯುಕ್ತ ವಿನೋಬನಗರದ ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಆಯೋಜಿಸಿದ್ದ ರಾಯಲ್ ಸುಗ್ಗಿ ಸಂಭ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಹಬ್ಬಗಳ ಆಚರಣೆಯ ಮಹತ್ವವನ್ನು ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ,
ಮಕ್ಕಳಿಗೆ ಭತ್ತದ ರಾಶಿ, ಕಬ್ಬುಗಳು ಹಾಗೂ ಹಣ್ಣು, ತರಕಾರಿ, ಗೆಡ್ಡೆ ಗೆಣಸುಗಳು, ಎಳ್ಳು ಬೆಲ್ಲ ಹಾಗೂ ಸುಗ್ಗಿಯ ಮಹತ್ವದ ಅರಿವು ಮಕ್ಕಳಿಗೆ ತಿಳಿಸುವುದು ಬಹಳ ವಿಶೇಷ ಎಂದರು.

ಶಾಲೆ ಕಾರ್ಯದರ್ಶಿ ಪೂಜಾ ನಾಗರಾಜ್ ಪರಿಸರ ಮಾತನಾಡಿ, ಶಾಲೆಯ ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಹಬ್ಬದ ಉತ್ಸವದಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷ ಎಂದು ಹೇಳಿದರು.

Environmental Science from Sahyadri Science College ಕನ್ನಡ ಶಿಕ್ಷಕ ಅರುಣ್ ಅವರು ಸಂಕ್ರಾಂತಿ ಹಾಗೂ ಸುಗ್ಗಿ ಹಬ್ಬದ ವಿಶೇಷತೆ ಕುರಿತು ತಿಳಿಸಿಕೊಟ್ಟರು. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ ಎನ್ನುವರು, ಸಂಕ್ರಾಂತಿ ಅಂದಾಕ್ಷಣ ನೆನಪಾಗುವುದು ಎಳ್ಳು ಬೆಲ್ಲ. ಸಂಕ್ರಾಂತಿ ಮಹತ್ವವನ್ನು ಪುರಾಣ ತಿಳಿಸುತ್ತದೆ. ವಿಜ್ಞಾನ ಇಣುಕು ಹಾಕುತ್ತದೆ. ಸಂಪ್ರದಾಯ ಮಾತಾಡುತ್ತದೆ. ಕೃತಜ್ಞತೆ ಕೈ ಹಿಡಿಯುತ್ತದೆ. ನಮಗೆ ಒಳಿತಾಗಲಿ, ನಮ್ಮ ಬದುಕಲ್ಲಿ ಸಂಕ್ರಾಂತಿಯಾಗಲಿ ಎಂಬ ಆಶಾವಾದ ಇರುತ್ತದೆ ಎಂದರು.
ಸಂಕ್ರಾಂತಿಯಂದು ಎಳ್ಳು ಬೆಲ್ಲ ಕಡಲೆ ಮತ್ತು ಕೊಬ್ಬರಿಯನ್ನು ತಿನ್ನಬೇಕು. ಚಳಿಗಾಲದ ಅವಧಿಯಲ್ಲಿ ಚರ್ಮ ಒಡೆದಿರುತ್ತದೆ. ದೇಹದಲ್ಲಿ ಎಣ್ಣೆ ಅಂಶ ಕಡಿಮೆ ಇರುತ್ತದೆ. ಎಳ್ಳು ಬೆಲ್ಲ ಕೊಬ್ಬರಿ ಕಡಲೆಯನ್ನು ಈ ಸಂದರ್ಭದಲ್ಲಿ ಸ್ವೀಕರಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ಪರ್ಶ ಅಮೋಘ, ಮುಖ್ಯ ಶಿಕ್ಷಕ ವಿನಯ್ ಎಸ್, ಶಿಕ್ಷಕರಾದ ಸೋನಿಕ, ವಿಂದ್ಯಾ, ಪಲ್ಲವಿ, ರವಿಕುಮಾರ್, ಭಾಗ್ಯಲಕ್ಷ್ಮಿ, ಸುನಿತ ಇನ್ನಿತರರು ಹಾಗೂ ಪೋಷಕರು ಭಾಗವಹಿಸಿದ್ದರು

Karnataka Knowledge Science ಪ್ರತಿಭಾನ್ವಿತ ಶಿಕ್ಷಕ ಬಿ.ಎಂ.ರಘು ಅವರಿಗೆ ಅನಿತಾ ಕೌಲ್ ಸ್ಮರಣ ಪ್ರಶಸ್ತಿ

0

Karnataka Knowledge Science ರಾಷ್ಟೀಯ ಪದವಿಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಗಣಿತ ಹಾಗೂ ವಿಜ್ಞಾನ ಶಿಕ್ಷಕ ಬಿ.ಎಂ.ರಘುರಿಗೆ ಶಾಲಾ ಶಿಕ್ಷಣದ ಬಗ್ಗೆ ಇರುವ ಬದ್ದತೆ .ಕಾಳಜಿ ಪರಿಶ್ರಮ ಹಾಗೂ ,ರಾಜ್ಯಮಟ್ಟದಲ್ಲಿ ವಿದ್ಯಾರ್ಥಿ ಶಿಕ್ಷಕರುಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವುದ್ದನು . ಗುರುತಿಸಿ ಐಎಎಸ್ ಅಧಿಕಾರಿ ಶ್ರೀಮತಿ ಅನಿತಾಕೌಲ್ ಸ್ಮರಣೆ ಅಂಗವಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ 2024 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಹಿಂದೆ ಇವರ ಪರಿಶ್ರಮಕ್ಕೆ ಅನೇಕ ಪ್ರಶಸ್ತಿ ಈ ಲಭಿಸಿದ್ದು ಈ ಪ್ರಶಸ್ತಿಯಿಂದ ಇವರ ಪರಿಶ್ರಮಕ್ಕೆ ಮತ್ತೋಂದು ಗರಿ ಲಭಿಸಿದಂತಾಗಿದೆ.

Indian Medical Association ಸಹಾಯ ಅಗತ್ಯವಿರುವವರಿಗೆ ಸಿಪಿಆರ್ ನೀಡುವ ಬಗ್ಗೆ ಯುವಕರು ಅರಿವು ಹೊಂದಿರಬೇಕು-ಡಾ.ಅನುಪ್

0

Indian Medical Association ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ತುರ್ತು ಸಂದರ್ಭದಲ್ಲಿ ಅವಶ್ಯಕ ವ್ಯಕ್ತಿಗೆ ಸಹಾಯ ಮಾಡುವ ಬದಲಾಗಿ
ಮೊಬೈಲ್ ನಲ್ಲಿ ವಿಡಿಯೋ ಫೋಟೋ ಮಾಡುವುದು ಹೆಚ್ಚಾಗಿದ್ದು ಯುವಕರು ಈ ಕೆಲಸವನ್ನು ಮಾಡದೆ ಸಹಾಯ ಬೇಕಾಗಿರುವ ವ್ಯಕ್ತಿಗೆ ಸಿಪಿಆರ್ ನೀಡುವ ಮುಖಾಂತರ ನೆರವಾಗಬೇಕು ಎಂದು ಡಾ ಅನುಪ್ ನೆಹರು ಕ್ರೀಡಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಶಿವಮೊಗ್ಗ ಇವರ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಸಿಪಿಆರ್ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
Indian Medical Association ಪ್ರತಿಯೊಬ್ಬ ಕ್ರೀಡಾಪಟು ಮತ್ತು ತರಬೇತಿದಾರ ಸಿಪಿಆರ್ ಜ್ಞಾನ ಪಡೆದುಕೊಳ್ಳುವುದು ಬಹಳ ಉಪಯುಕ್ತ ವಾಗಿದ್ದು ತುರ್ತು ಸಂದರ್ಭದಲ್ಲಿ ಅವಶ್ಯಕ ವ್ಯಕ್ತಿಗೆ ನೆರವಾಗುವ ನಿಟ್ಟಿನಲ್ಲಿ ಸಿ ಪಿ ಆರ್ ಜ್ಞಾನ ಮುಖ್ಯವಾಗಿದ್ದು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಸಿಪಿಆರ್ ಕಾರ್ಯಗಾರ ಆಯೋಜನೆ ಬಹಳ ಅರ್ಥಪೂರ್ಣವಾಗಿದೆ ಎಂದರು ಈ ಸಂದರ್ಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಶಿವಮೊಗ್ಗದ ಮಾಜಿ ಅಧ್ಯಕ್ಷರಾದ ಡಾ ಅರುಣ್ ಮತ್ತು ಐಎಂಎ ಶಿವಮೊಗ್ಗದ ಕಾರ್ಯದರ್ಶಿ ಡಾ ವಿನಯ ಶ್ರೀನಿವಾಸ್ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ಗೌರವಾಧ್ಯಕ್ಷ ಶಿವಮೊಗ್ಗ ವಿನೋದ್
ಅಧ್ಯಕ್ಷ ಮುಕೀಬ್ ಅಹಮದ್ , ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ , ಖಜಾಂಚಿ ಇರ್ಫಾನ್ ಮತ್ತು ಜಿಲ್ಲಾ ಕರಾಟೆ ಅಸೋಸಿಯೇಷನ್ ಪದಾಧಿಕಾರಿಗಳಾದ ಬಾಲ್ರಾಜ್ ಪಂಚಪ್ಪ ಹರೀಶ್ ನರಸಿಂಹಸ್ವಾಮಿ ಕೃಷ್ಣಮೂರ್ತಿ ರಮೇಶ್ ಸಾಧಿಕ್ ಮಧುಕೇಶ್ವರ್ ಹರ್ಷಿತ್ ದಸ್ತಗೀರ ಮದನಿ ಸೇರಿದಂತೆ ಸದಸ್ಯರಾದ ಮದಿಹಾ ಇಬ್ರಾಹಿಂ ಶ್ರಾವ್ಯ ಪ್ರತಿಕ್ಷ ಪ್ರೀತಿಶ್ರೀ ಕಾವ್ಯ ಉಪಸ್ಥಿತರಿದ್ದರು.

Grama One Centre  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

0

Grama One Centre ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ಒದಗಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಮೂಲಕ ಗ್ರಾಮೀಣ ಭಾಗದ ಜನರಿಗೆ ತಮ್ಮ ಸಮೀಪದಲ್ಲಿ ಸರ್ಕಾರದ ಹಲವು ಸೇವೆಗಳು ತಮ್ಮ ಮನೆ ಬಾಗಿಲಿಗೆ ತಲುಪಿಸುತ್ತಿದೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನೂತನ ಯೋಜನೆಗಳನ್ನು ಸೇವಾಸಿಂಧು ಪೋರ್ಟಲ್ ಮೂಲಕ ಅನುಷ್ಠಾನಗೊಳಿಸುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ ಭದ್ರಾವತಿ ತಾಲೂಕಿನ ಕಲ್ಲಹಳ್ಳಿ, ಹೊಸನಗರ ತಾಲೂಕಿನ ಚಿಕ್ಕಜೇನಿ, ಸಾಗರ ತಾಲೂಕಿನ ಖಂಡಿಕ, ಆವಿನಹಳ್ಳಿ ಮತ್ತು ಹಿರೇನೆಲ್ಲೂರು, ಶಿಕಾರಿಪುರ ತಾಲೂಕಿನ ಚುರ್ಚಿಗುಂಡಿ, ಕೊರಟಿಗೆರೆ, ಶಿವಮೊಗ್ಗ ತಾಲೂಕಿನ ಸೋಗಾನೆ, ತೀರ್ಥಹಳ್ಳಿ ತಾಲೂಕಿನ ನಾಲೂರು (ಕೊಲಗಿ), ಬಸವಾನಿ, ದೇಮ್ಲಾಪುರ, ಅರಗ, ಮುಳಬಾಗಿಲು ಗ್ರಾಮಗಳಲ್ಲಿ ಗ್ರಾಮ ಒನ್ ಕೇಂದ್ರಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Grama One Centre   ಆಸಕ್ತಿಯುಳ್ಳವರು ಅರ್ಜಿಗಳನ್ನು https://www.karnatakaone.gov.in/Public/GramaOneFranchisee1crms ರಲ್ಲಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Social Welfare Department ಶಿವಮೊಗ್ಗ ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ವಸತಿ ಶಾಲೆಗಳ 5 ನೇ ತರಗತಿಗೆ ಪ್ರವೇಶಾತಿ ಪ್ರಕಟಣೆ

0

Social Welfare Department ಶಿವಮೊಗ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟವರ್ಗಗಳ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಅಟಲ್ ಬಿಹಾರಿ ವಾಜಪೇಯಿ/ ಶ್ರೀ ನಾರಾಯಣ ಗುರು/ ಶ್ರೀಮತಿ ಇಂದಿರಾಗಾಂಧಿ / ಡಾ|| ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಿಗೆ 2025-26ನೇ ಸಾಲಿನಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಆಸಕ್ತ ಪ.ಜಾ/ಪ.ವ./ಸಾಮಾನ್ಯ/ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಆಸಕ್ತ ವಿದ್ಯಾರ್ಥಿಗಳು ಆಯಾ ತಾಲೂಕಿನ ಮೇಲ್ಕಂಡ ವಸತಿ ಶಾಲೆಗಳ ಮೂಲಕ ಜ.25 ರೊಳಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವುದು. ಪ.ಜಾ./ಪ.ವ. ಹಾಗೂ ಹಿಂ.ವ. ಪ್ರವರ್ಗ-1 ವಿದ್ಯಾರ್ಥಿಗಳ ಕುಟುಂಬ ವಾರ್ಷಿಕ ಆದಾಯವು ರೂ.2.50 ಲಕ್ಷ, ಮತ್ತು ಹಿಂ.ವ. 2ಎ ,2ಬಿ, 3ಎ ಮತ್ತು 3ಬಿ ವಿದ್ಯಾರ್ಥಿಗಳ ಕುಟುಂಬ ವಾರ್ಷಿಕ ಆದಾಯವು ರೂ. 1.00 ಲಕ್ಷಗಳ ಮಿತಿಯೊಳಗಿರಬೇಕು.

ಪ್ರವೇಶ ಪರೀಕ್ಷೆಯು ದಿ: 15/02/2025 ರಂದು ನಡೆಯಲಿದ್ದು, ಪ್ರವೇಶ ಪತ್ರಗಳನ್ನು ಫೆ.06ರಿಂದ ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

Social Welfare Department ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-249241/080-23460460 ಅಥವಾ ಆಯಾ ತಾಲೂಕಿನ ಹತ್ತಿರದ ವಸತಿ ಶಾಲೆ, ಅಥವಾ http://kreis.kar.nic.in, http://kea.kar.nic.in ವೆಬ್‌ಸೈಟ್‌ಗಳ ಮಾಹಿತಿ ಪುಸ್ತಕ-2025ನ್ನು ಸಂಪರ್ಕಿಸುವಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Yuva Nidhi Scheme ಯುವನಿಧಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಿ – ಚಂದ್ರಭೂಪಾಲ್

0

Yuva Nidhi Scheme ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಹಾಗೂ ಡಿಪ್ಲೋಮಾ ತೇರ್ಗಡೆಯಾದವರು ರಾಜ್ಯ ಸರ್ಕಾರದ ಐದು ಖಾತರಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ ವಿಶೇಷ ನೋಂದಣಿ ಅಭಿಯಾನ 2025 ಕ್ಕೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಪ್ರತಿ ತಿಂಗಳು ನಿರುದ್ಯೋಗ ಭತ್ಯೆವನ್ನು ಪಡೆಯುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ಮನವಿ ಮಾಡಿದ್ದಾರೆ.

ಈ ಯೋಜನೆಯಡಿ ನೋಂದಣಿ ಆಗುವ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಪ್ರತಿ ಮಾಹೆಯಾನ ರೂ. 3000 ಹಾಗೂ ಡಿಪ್ಲೋಮಾ ತೇರ್ಗಡೆಯಾದವರು ಪ್ರತಿ ಮಾಹೆಯಾನ ರೂ.1500 ನಿರುದ್ಯೋಗ ಭತ್ಯೆಯನ್ನು ನೇರ ನಗದು ವರ್ಗಾವಣೆಯ ಮೂಲಕ ಅವರವರ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರದಿಂದ ಪಾವತಿಸಲಾಗುತ್ತದೆ.

ಪದವಿ, ಸ್ನಾತಕೋತ್ತರ ಪದವೀಧರರು ಹಾಗೂ ಡಿಪ್ಲೋಮಾ ತೇರ್ಗಡೆ ಹೊಂದಿದ 180 ದಿನಗಳ ಉನ್ನತ ವ್ಯಾಸಂಗಕ್ಕೆ ದಾಖಲಾಗದವರು ಯುವನಿಧಿ ಯೋಜನೆಯಡಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಕರ್ನಾಟಕ ಸರ್ಕಾರದಿಂದ ಅನುಷ್ಠಾನಗೊಂಡ ಯುವನಿಧಿ ಯೋಜನೆಗೆ ಒಂದು ವರ್ಷ ತುಂಬಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ 4972 ಫಲಾನುಭವಿಗಳಿದ್ದಾರೆ. ರೂ.6,31,17000 ನಿರುದ್ಯೋಗ ಭತ್ಯೆ ಪಾವತಿಸಲಾಗಿದೆ.
ಆರ್ಥಿಕ ಸಂಕಷ್ಟದ ನಡುವೆ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಸ್ವಾವಲಂಬಿ ಜೀವನ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನಗಳಿಗೆ ಹಾಜರಾಗಲು ವೆಚ್ಚವನ್ನು ಭರಿಸಲು ನಿರುದ್ಯೋಗ ಭತ್ಯೆ ಸಹಕಾರಿಯಾಗಲಿದೆ. ಆದ್ದರಿಂದ ಈ ಯುವನಿಧಿ ಯೋಜನೆಯಿಂದ ಹೊರಗುಳಿದಿರುವ ಅರ್ಹ ಯುವಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ವಿಶೇಷ ನೋಂದಣಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Yuva Nidhi Scheme 2023-24ನೇ ಸಾಲಿನಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳ ನೋಂದಣಿಗಾಗಿ ಕಾಲೇಜುಗಳಲ್ಲಿ ಯುವನಿಧಿ ವಿಶೇಷ ನೋಂದಣಿ ಸಹಾಯ ಕೇಂದ್ರಗಳನ್ನು ತೆರೆದು ಅರ್ಹ ಅಭ್ಯರ್ಥಿಗಳಿಂದ ಗರಿಷ್ಟ ಮಟ್ಟದ ನೋಂದಣಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿ ಕಾಲೇಜ್‌ಗಳಲ್ಲಿ ಪ್ರಾಂಶುಪಾಲರು, ಪ್ಲೇಸ್‌ಮೆಂಟ್ ಸೆಲ್ ಅಧಿಕಾರಿಗಳು ಹಾಗೂ ಐ.ಟಿ ಕೋ- ಆರ್ಡಿನೇಟರ್‌ಗಳಿಗೆ ನೋಂದಣಿ ಅಭಿಯಾನದ ಉಸ್ತುವಾರಿ ನೀಡಲಾಗಿದೆ.

ಸದರಿ ನೋಂದಣಿ ಸಹಾಯ ಕೇಂದ್ರಗಳನ್ನು ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕಾಲೇಜುಗಳಲ್ಲಿ ತೆರೆಯಬೇಕೆಂದು ಶಿಕ್ಷಣ ಇಲಾಖೆಯ ವ್ಯಾಪ್ತಿಯ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಜೊತೆಗೆ ಡಿಪ್ಲೋಮ ಕಾಲೇಜು ಪ್ರಾಂಶುಪಾಲರುಗಳಿಗೆ ರಾಜ್ಯ ಸರ್ಕಾರ ವಿಶೇಷ ಸೂಚನೆ ನೀಡಿ ಆದೇಶಿಸಿದೆ.

ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ದಾಖಲಾತಿಗಳೊಂದಿಗೆ http://sevasindhuges.karnataka.gove.in ಆನ್‌ಲೈನ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು ಮತ್ತು ಕರ್ನಾಟಕ ಒನ್, ಬೆಂಗಳೂರು ಒನ್, ಶಿವಮೊಗ್ಗ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕಾಲೇಜು ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

Bhadravathi Police ವ್ಯಕ್ತಿ ನಾಪತ್ತೆ, ಭದ್ರಾವತಿ ಪೊಲೀಸ್ ಪ್ರಕಟಣೆ

0

Bhadravathi Police ಭದ್ರಾವತಿಯ ಕಡದಕಟ್ಟೆ ಲೇಔಟ್‌ನ ಚನ್ನಕೇಶವ, 68 ವರ್ಷ ಇವರು 2024 ರ ಜು.3 ರ ರಾತ್ರಿಯಿಂದ ಮನೆಯಿಂದ ಕಾಣೆಯಾಗಿದ್ದಾರೆ.

ಕಾಣೆಯಾದ ಚನ್ನಕೇಶವ ಸುಮಾರು 5.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಧೃಡ ಮೈಕಟ್ಟು ಹೊಂದಿದ್ದಾರೆ. ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಇವರು ಬಿಳಿ ಬಣ್ಣದ ಚೆಕ್ಸ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ತಲೆಯಲ್ಲಿ 1 ಇಂಚು ಉದ್ದರ ಕಪ್ಪು ಬಿಳಿ ಮಿಶ್ರಿತ ಗುಂಗುರು ಕೂದಲು, ಸೊಂಟದಲ್ಲಿ ಬೆಳ್ಳಿ ಉಡುದಾರ, ಕತ್ತಿನಲ್ಲಿ ಮಂಜುನಾಥ ಸ್ವಾಮಿಯ ಡಾಲರ್, ಎಡಗೈ ಮುಂಗೈ ಮೇಲೆ ನಾಣ್ಯದ ಗಾತ್ರದ ಗಾಯದ ಗುರುತು ಹಾಗೂ ಕತ್ತಿನ ಹಿಂಭಾಗದಲ್ಲಿ ಒಂದು ಇಂಚು ಉದ್ದದ ಸುಟ್ಟ ಗಾಯದ ಗುರುತು ಇದೆ.

Bhadravathi Police ಇವರ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಸಂಖ್ಯೆ : 08282 274313, ಸಿಪಿಐ ನಗರ ವೃತ್ತ ಕಚೇರಿ ಸಂಖ್ಯೆ 08282266549, ಡಿಎಸ್‌ಪಿ ಭದ್ರಾವತಿ 08282 266252 ನ್ನು ಸಂಪರ್ಕಿಸಬಹುದೆಂದು ಭದ್ರಾವತಿ ನ್ಯೂಟೌನ್ ಪೊಲೀಸ್ ಇಲಾಖೆ ತಿಳಿಸಿದೆ.

Klive Special Article ಮಕರ ಸಂಕ್ರಾಂತಿ ಹಬ್ಬ, ಉತ್ತರಾಯಣ ಪುಣ್ಯ ಕಾಲ

0

Klive Special Article ಸಂಕ್ರಾಂತಿ ಹಬ್ಬ ಮುಖ್ಯವಾಗಿ ದಕ್ಷಿಣಭಾರತದಲ್ಲಿ
ಆಚರಿಸಲಾಗುವ ಒಂದು ಹಬ್ಬ.
ಭೂಮಿಯಲ್ಲಿ(ಹೊಲಗದ್ದೆಗಳಲ್ಲಿ) ಬೆಳೆದ ಪೈರು
ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ
ಹಬ್ಬ. ಸಮೃದ್ಧಿಯ ಸಂಕೇತ ಸಂಕ್ರಾಂತಿಯನ್ನು
ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ
ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂಧರ್ಮದವರಿಂದ ಆಚರಿಸಲ್ಪಡುತ್ತದೆ.
ಕರ್ನಾಟಕ,ಆಂಧ್ರಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.
ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ.
ಮಕರ ಸಂಕ್ರಾಂತಿ ಪ್ರಸಿದ್ಧವಾಗಿರುವ ಸುಗ್ಗಿಯಕಾಲದ ಹಬ್ಬ.
Klive Special Article ಇದನ್ನು ಪೊಂಗಲ್ ಹಬ್ಬ ಎಂದೂ ಕರೆಯುತ್ತಾರೆ. ಪೊಂಗಲ್ ಎಂದರೆ ಅಕ್ಕಿ ತುಪ್ಪಹಾಲು, ಸಕ್ಕರೆ ಅಥವಾ ಬೆಲ್ಲದಿಂದ ಮಾಡಿದ ಸಿಹಿ ಖಾದ್ಯ.ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯ ಮಾಡ
ಲಾಗುವುದು. ಕರ್ನಾಟಕದಲ್ಲಿ ಎಳ್ಳು,ಬೆಲ್ಲ-ಸಕ್ಕರೆ ಅಚ್ಚುಗಳನ್ನು ನೆರೆಯವರಿಗೆ ,ಬಂಧು-ಮಿತ್ರರಿಗೆ ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಈ ಹಬ್ಬದ ವಿಶೇಷ.
ದನಕರುಗಳ ಮೈ ತೊಳೆದು ಅವುಗಳಿಗೆ ಅಲಂಕಾರ ಮಾಡಿ ಪೂಜಿಸುವ ಸಂಪ್ರದಾಯ ರೂಢಿಯಲ್ಲಿದೆ.
ಉತ್ತರಾಯಣ ಪುಣ್ಯ ಕಾಲ


ಸಾಮಾನ್ಯವಾಗಿ ಪುಷ್ಯಮಾಸದಲ್ಲಿ ಬರುವ
ಮಕರ ಸಂಕ್ರಾಂತಿಯನ್ನು ಉತ್ತರಾಯಣ
ಪುಣ್ಯಕಾಲವೆಂದು ಕರೆಯುತ್ತಾರೆ.ಉತ್ತರಾಯಣ ಪುಣ್ಯಕಾಲ,ಶ್ರೇಷ್ಠಕಾಲವೆಂದು ಹೇಳುತ್ತಾರೆ.
ಭೀಷ್ಮಾಚಾರ್ಯರೂ ಸಹ ಅವರ ದೇಹತ್ಯಾಗಮಾಡಲು ಉತ್ತರಾಯಣ ಪುಣ್ಯಕಾಲ ಬರುವವರೆಗೂ ಶರಶಯ್ಯೆಯಲ್ಲಿಹರಿಸ್ಮರಣೆ ಮಾಡುತ್ತಾ ಕಾದಿದ್ದರು.
ಉತ್ತರಾಯಣ ಪುಣ್ಯಕಾಲದಂದು ಮಾಡಿದ ದಾನ ಧರ್ಮಗಳು ಜನ್ಮ ಜನ್ಮದಲ್ಲೂ ಸದಾ ನಮಗೆ ಸಿಗುವಂತೆ ಸೂರ್ಯಪರಮಾತ್ಮನುಅನುಗ್ರಹಿಸುತ್ತಾನೆ.
ಯುಗಾದಿಯಂದು ಬೇವುಬೆಲ್ಲ ವನ್ನು ಸ್ವೀಕರಿಸಿ
ಜೀವನದಸಿಹಿಕಹಿಗಳನ್ನುಸಮರಸದಿಂದನೋಡುವಂತೆ,ಈ ಹಬ್ಬದಲ್ಲಿ ಎಳ್ಳು ಬೆಲ್ಲಹಂಚುವುದರ ಮೂಲಕ ಮನಸ್ಸಿನ ಕಹಿ ಭಾವನೆ ಮರೆತು ಸಿಹಿ ಭಾವ ತುಂಬಿ ,ಸುಖಸಂತೋಷ ,ನೆಮ್ಮದಿ ಎಲ್ಲರ ಬಾಳಿನಲ್ಲೂ ಬರಲಿ ಎಂಬುದು ಹಬ್ಬದ ದ್ಯೋತಕವಾಗಿದೆ.
ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತಾಡುಎನ್ನುವುದೇ ಮಕರಸಂಕ್ರಾತಿಯ ಸಂದೇಶವಾಗಿದೆ.
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬ ಮತ್ತು ಉತ್ತರಾಯಣ ಪುಣ್ಯಕಾಲದ ಶುಭಾಶಯಗಳು.

MESCOM ಜನವರಿ 16. ಶಿವಮೊಗ್ಗ ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಸಾರ್ವಜನಿಕ ಸಂಪರ್ಕ ಸಭೆ

0

MESCOM ಶಿವಮೊಗ್ಗ ನಗರ ಉಪವಿಭಾಗ – 1 ಮೆಸ್ಕಾಂ ಕಛೇರಿಯಲ್ಲಿ ಜ.16 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲ್ಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ;9448289448.