Kannada Development Authority ಕೇಂದ್ರ ಸರ್ಕಾರವು ಭಾರತದಂತಹ ಬೃಹತ್ ರಾಷ್ಟ್ರದ ಎಲ್ಲಾ ರಾಜ್ಯಗಳು ಅನ್ವಯವಾಗುವಂತೆ ಏಕರೀತಿಯ ಭಾಷಾ ನೀತಿಯನ್ನು ಅನುಷ್ಠಾನಕ್ಕೆ ತರುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಹೇಳಿದರು.
ಶಿವಮೊಗ್ಗಕ್ಕೆ ಭೇಟಿ ನೀಡಿ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಹಾಗೂ ಸರ್ಕಾರದ ಪ್ರಮುಖ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ನೆರೆಯ ರಾಜ್ಯ ತಮಿಳುನಾಡು ದ್ವಿಭಾಷಾ ಸೂತ್ರವನ್ನು ಅನುಸರಿಸಿದರೆ, ಕರ್ನಾಟಕವು ತ್ರಿಭಾಷಾ ಸೂತ್ರವನ್ನು ಅನುಸರಿಸುತ್ತಿದೆ. ಈ ಭಾಷಾನೀತಿಗಳ ಅನುಷ್ಠಾನದಿಂದಾಗಿ ಆಗಿರುವ ಲಾಭ-ನಷ್ಟಗಳನ್ನು ಪರಿಶೀಲಿಸಿದಾಗ ನಮ್ಮ ರಾಜ್ಯಕ್ಕೆ ಆಗಿರುವ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎಂದ ಅವರು, ಕರ್ನಾಟಕವೂ ಕೂಡ ಕನ್ನಡದ ಭಾಷಾ ಬೆಳವಣಿಗೆ ಮತ್ತು ವಿಕಾಸದ ದೃಷ್ಟಿಯಿಂದ ದ್ವಿಭಾಷಾ ಸೂತ್ರವನ್ನೇ ಅನುಸರಿಸುವ ಅಗತ್ಯವಿದೆ ಎಂದವರು ನುಡಿದರು.
ಮುಂದಿನ ಒಂದೆರೆಡು ತಿಂಗಳೊಳಗಾಗಿ ರಾಜ್ಯದಲ್ಲಿನ ಸಿ.ಬಿ.ಎಸ್.ಸಿ. ಮತ್ತು ಐ.ಸಿ.ಎಸ್.ಇ ಮುಂತಾದ ಕೇಂದ್ರ ಪುರಸ್ಕೃತ ಪಠ್ಯಕ್ರಮಗಳೊಂದಿಗೆ ಪ್ರಾದೇಶಿಕ ಭಾಷೆ ಕನ್ನಡ ಕಲಿಕೆಗೂ ಕೇಂದ್ರದಿಂದಲೇ ಆದೇಶ ಹೊರಡಲಿದೆ. ಈ ಬಗ್ಗೆ ಈಗಾಗಲೇ ಕೇಂದ್ರದ ಸಚಿವರೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ಅವರು ನುಡಿದರು.
ಪ್ರಸಕ್ತ ಸಾಲಿನ ಜೂನ್ ಶೈಕ್ಷಣಿಕ ಸಾಲಿನಿಂದಲೇ ಜೆ.ಎನ್.ಯು. ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠ ಆರಂಭಗೊಳ್ಳಲಿದೆ. ಹೊರರಾಜ್ಯದಲ್ಲಿರುವ ಕನ್ನಡಪೀಠಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಆಡಳಿತಾರೂಢ ರಾಜ್ಯ ಸರ್ಕಾರವು ಪ್ರತಿ ವಿಶ್ವವಿದ್ಯಾಲಯಕ್ಕೆ ಒಂದೇ ಬಾರಿಗೆ ೧೦ಕೋಟಿ ರೂ.ಗಳ ಇಡಿಗಂಟನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದ ಅವರು, ಹೊರ ರಾಜ್ಯ ಮತ್ತು ದೇಶಗಳಲ್ಲಿ ಕನ್ನಡ ಪೀಠಗಳನ್ನು ತೆರಯಬೇಕು. ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ಬಜೆಟ್‌ನೊಳಗಾಗಿ ಕಾಯ್ದಿರಿಸುವ ವಿಶ್ವಾಸವಿರುವುದಾಗಿ ಅವರು ತಿಳಿಸಿದರು.
Kannada Development Authority ಅನ್ಯಭಾಷಿಕರು ಸರಳವಾಗಿ ಕನ್ನಡಭಾಷೆ ಕಲಿಯಲು ಅನುಕೂಲವಾಗುವಂತೆ ೩೬ಗಂಟೆಗಳ ಅವಧಿಯ ಪಠ್ಯಕ್ರಮವನ್ನು ತಯಾರಿಸಲಾಗಿದ್ದು, ಬೆಂಗಳೂರಿನ ೩೦ಕಲಿಕಾ ಕೇಂದ್ರಗಳಲ್ಲಿ ಸುಮಾರು ೬೦೦ಮಲೆಯಾಳಿಗಳು ಹಾಗೂ ಇತರೆ ಪ್ಲಾಟ್‌ಗಳಲ್ಲಿ ವಾಸವಾಗಿರುವ ಅಸಂಖ್ಯಾತ ಜನರಿಗೆ ಕನ್ನಡ ಕಲಿಕಾ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಕಲಿಕಾ ಕೇಂದ್ರಗಳ ಸಂಖ್ಯೆಯನ್ನು ೧೦೦ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದರು.ಸ್ಥಳೀಯ ಜನರು ತಮ್ಮ ಭಾಷೆಯ ಸೊಗಡನ್ನು ಸಂಭ್ರಮಿಸುವಂತೆ ಹಾಗೂ ಇಲ್ಲಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದಂತೆ ಸ್ಥಗಿತಗೊಂಡಿರುವ ಸಹ್ಯಾದ್ರಿ ಉತ್ಸವವನ್ನು ಪುನರ್ ಆರಂಭಗೊಳಿಸಬೇಕು. ಅದಕ್ಕಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಿದ ಅವರು, ಹೊಸದಾಗಿ ಆರಂಭಗೊಳ್ಳುತ್ತಿರುವ ಕೈಗಾರಿಕಾ ಘಟಕಗಳು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ವಿಮಾನ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಕನ್ನಡ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಕೇವಲ ಸರ್ಕಾರಿ ಆದೇಶಗಳಿಂದ ಕನ್ನಡದ ಉಳಿವು ಮತ್ತು ವಿಕಾಸ ಸಾದ್ಯವಿಲ್ಲ. ಕನ್ನಡವನ್ನು ಹೃದಯದ ಭಾಷೆಯಾಗಿ ಪರಿಗಣಿಸಿ, ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗುವಂತೆ ಇಲ್ಲಿನ ಜವಾಬ್ದಾರಿಯುತ ಅಧಿಕಾರಿಗಳು, ಜನಪ್ರತಿನಿಧಿಗಳು ಕನ್ನಡ ಕಟ್ಟುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅನ್ಯಭಾಷಿಕ ನೌಕರರ ನೇಮಕಾತಿಯಿಂದಾಗಿ ಸಾಮಾಜಿಕ ಸಾಮರಸ್ಯ ಕದಡುತ್ತಿದೆ. ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳೂ ಕೂಡ ಆಂಗ್ಲ ಮತ್ತು ಹಿಂದಿ ಬಾಷೆಯಲ್ಲಿ ನಡೆಯುತ್ತಿರುವುದರಿಂದ ಕನ್ನಡಿಗರು ಬ್ಯಾಂಕುಗಳ ನೇಮಕಾತಿ ಪರೀಕ್ಷೆಯಿಂದ ಹೊರಗುಳಿಯುತ್ತಿದ್ದಾರೆ. ಈ ನ್ಯೂನತೆಯನ್ನು ಸರಿಪಡಿಸಲು ಪ್ರಾದೇಶಿಕ ನೇಮಕಾತಿ ಪ್ರಾಧಿಕಾರಿಗಳು ಆರಂಭಗೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದವರು ನುಡಿದರು.
ಸ್ಥಳೀಯ ಹೋಟೆಲ್, ಕಟ್ಟಡ ನಿರ್ಮಾಣ ಮುಂತಾದ ಕಡೆಗಳಲ್ಲಿ ಅನ್ಯಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲು ಅನುಕೂಲವಾಗುವಂತೆ ಕೌಶಲ್ಯ ತರಬೇತಿಗಳನ್ನು ನೀಡಬೇಕಾದ ಅಗತ್ಯವಿದೆ. ಕೈಗಾರಿಕೆಗಳಲ್ಲಿನ ಸಿ. ಮತ್ತು ಡಿ ವೃಂದದ ಹುದ್ದೆಗಳ ನೇಮಕಾತಿಯಲ್ಲೂ ಪ್ರಾತಿನಿಧ್ಯ ದೊರೆಯುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ನಗರಗಳಲ್ಲಿ ವಾಣಿಜ್ಯ ವ್ಯವಹಾರ ಕೇಂದ್ರಗಳಲ್ಲಿ ಅಳವಡಿಸಿರುವ ಫಲಕಗಳು ಪೂರ್ಣಪ್ರಮಾಣದಲ್ಲಿ ಕನ್ನಡ ಭಾಷೆಯಲ್ಲಿಲ್ಲ. ಶೇ. ೧೦೦ರಷ್ಟು ಈ ಕ್ಷೇತ್ರದ ಸಾಧನೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆದ್ದಾರಿಗಳಲ್ಲಿನ ಗ್ರಾಮಗಳ ಹೆಸರುಗಳ ಬರವಣಿಗೆಯಲ್ಲೂ ಲೋಪಗಳಿರುವುದನ್ನು ಗುರುತಿಸಲಾಗಿದೆ. ಅವುಗಳನ್ನು ಸಕಾಲದಲ್ಲಿ ಸರಿಪಡಿಸುವ ಕಾರ್ಯ ಇಲ್ಲಿನ ವಾಸಿಗರಿಂದಲೇ ಆಗಬೇಕಾದ ಅಗತ್ಯವಿದೆ ಎಂದರು.
ಅನೇಕ ಕ್ಷೇತ್ರಗಳನ್ನು ಗಮನಿಸಿದಾಗ ನಿರೀಕ್ಷಿತ ಪ್ರಮಾಣದಲ್ಲಿ ಕನ್ನಡ ಭಾಷೆಯ ಅನುಷ್ಠಾನ ಕಾರ್ಯ ಆಗದಿರುವುದು ವಿಷಾದದ ಸಂಗತಿ. ಕನ್ನಡ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿತಗೊಂಡಿದೆ. ಅನ್ಯಭಾಷೆಯ ಕಲಿಕೆಗೆ ವಿರೋಧವಿಲ್ಲ. ಆದರೆ, ಕನ್ನಡ ನಿರ್ಲಕ್ಷ್ಯ ಸಲ್ಲದು-ಸಹಿಸಲಾಗದು ಎಂದ ಅವರು, ಈ ನೆಲದಲ್ಲಿ ವಾಸವಾಗಿರುವ ಎಲ್ಲ ಕನ್ನಡಿಗರು ಕನ್ನಡವನ್ನು ಉಳಿಸಿ, ಬೆಳೆಸುವ ಸಂಕಲ್ಪ ಮಾಡಬೇಕಾದ ಅಗತ್ಯವಿದೆ. ಅತ್ಯಂತ ಮೌಲ್ಯಯುತ ಬರಹಗಳು ಕನ್ನಡದಲ್ಲಿ ಮೂಡಿಬಂದಿವೆ. ಅಗ್ರಪಂಕ್ತಿಯ ಲೇಖಕರು ಕನ್ನಡದಲ್ಲಿದ್ದಾರೆ. ವಚನಕಾರರ ಪರಂಪರೆಯ ಉಗಮದ ಪುಣ್ಯಭೂಮಿ ಇದಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಡಾ.ಸಂತೋಷ್ ಹಾನಗಲ್, ಡಾ.ರಾಮಚಂದ್ರಪ್ಪ, ಪ್ರಣೀತ್‌ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಮತ್ತಿತರರು ಉಪಸ್ಥಿತರಿದ್ದರು.
Kannada Development Authority ಏಕರೀತಿಯ ಭಾಷಾನೀತಿಯನ್ನು ಅನುಷ್ಠಾನಕ್ಕೆ ತರುವ ಅಗತ್ಯ ಇದೆ- ಡಾ.ಪುರುಷೋತ್ತಮ ಬಿಳಿಮಲೆ
Shivamogga Rangayana ಶಿವಮೊಗ್ಗ ರಂಗಾಯಣದಲ್ಲಿ ರಂಗ ಸಂಕ್ರಾಂತಿ
Shivamogga Rangayana ಶಿವಮೊಗ್ಗ ರಂಗಾಯಣ, ಸಮುದಾಯ ಹಾಗೂ ಕಡೆಕೊಪ್ಪಲು ಪತ್ರಿಷ್ಠಾನದ ಸಹಯೋಗದೊಂದಿಗೆ ಜ.20 ರಿಂದ 22 ವರೆಗೆ ಸಂಜೆ 6.30 ಕ್ಕೆ ಅಶೋಕನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗ ಸಂಕ್ರಾಂತಿ 2025 ಶಿರ್ಷೀಕೆ ಆಡಿಯಲ್ಲಿ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ.
ನಾಟಕೋತ್ಸವವನ್ನು ನಾಟಕ ಅಂಕಣಕಾರರಾದ ಬಿ.ಚಂದ್ರೇಗೌಡ ಉದ್ಘಾಟಿಸಲಿದ್ದು, ರಂಗಾಯಣ ನಿರ್ದೇಶಕ ಪ್ರಸನ್ನ ಡಿ ಸಾಗರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮುದಾಯದ ಕಾರ್ಯದರ್ಶಿ ಡಾ.ಕೆ.ಜಿ.ವೆಂಕಟೇಶ್, ಕಡೆಕೊಪ್ಪಲ ಪ್ರತಿಷ್ಠಾನದ ಮ್ಯಾನೆಜಂಗ್ ಟ್ರಸ್ಟಿ ಡಾ.ಕೆ.ಮಧುಸೂಧನ್ ಆಗಮಿಸಲಿದ್ದು, ರಂಗಾಯಣ ಅಡಳಿತಾಧಿಕಾರಿ ಡಾ.ಎ.ಸಿ.ಶೈಲಜಾ ಉಪಸ್ಥಿತರಿರುವರು.
Shivamogga Rangayana ಜ.20 ರ ಸಂಜೆ 6.30ಕ್ಕೆ ಬೆಂಗಳೂರಿನ ಅನೇಕತಂಡದಿಂದ ‘ಅಂಗವಿಲ್ಲದ ದೇಹದಲ್ಲಿ ಭಂಗೀಹುಳ ನಾಟಕ ನಡೆಯಲಿದ್ದು, ನಾಟಕದ ಮೂಲ ಕೆ.ಟಿ.ಗಟ್ಟಿ, ಮರುರಚನೆ ಹಾಗೂ ನಿರ್ದೇಶನ ಪರಿಕಲ್ಪನೆ ಸುರೇಶ ಆನಗಳ್ಳಿ, ಸಂಗೀತ ಭರತ್, ಸಹ ನಿರ್ದೇಶನ ಅಂಜನಾ.
ಜ.21 ರ ಸಂಜೆ 6.30ಕ್ಕೆ ನಿರ್ದಿಗಂತ ತಂಡದಿಂದ ‘ರಸೀದಿ ಟಿಕೇಟ್’ ನಾಟಕ ನಡೆಯಲಿದ್ದು, ನಾಟಕದ ಮೂಲ ಅಮೃತಾ ಪ್ರೀತಂ, ರಚನೆ ಸುಧಾ ಆಡುಕಳ, ಅಭಿಯನ ಶಾಲೋಮ್ ಸುನ್ನತ, ವಿನ್ಯಾಸ ಹಾಗೂ ನಿರ್ದೇಶನ ಡಾ.ಸವಿತಾರಾಣಿ, ಕಲೆ ಖಾಜುಗುತ್ತಲ, ಸಂಗೀತ ಮುನ್ನ ಮೈಸೂರು.
ಜ.22 ರ ಸಂಜೆ 6.30ಕ್ಕೆ ಮಣಿಪಾಲಿನ ಸಂಗಮ ಕಲಾವಿದರ ತಂಡದಿಂದ ನಿರಂಜನರ ಕಾದಂಬರಿಯ ರಂಗರೂಪ ‘ಮೃತ್ಯುಂಜಯ’ ನಾಟಕ ನಡೆಯಲಿದ್ದು, ರಂಗರೂಪ ಸಚಿನ್ ಅಂಕೋಲ, ನಿರ್ದೇಶನ ರೋಹಿತ್ ಎಸ್ ಬೈಕಾಡಿ ಮಾಡಿದ್ದಾರೆ. ಪ್ರತಿ ನಾಟಕಕ್ಕೂ ರೂ. 30 ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿ ತಿಳಿಸಿದ್ದಾರೆ.
Kuvempu University ಜನವರಿ 22. ಕುವೆಂಪು ವಿವಿಯ 34 ನೇ ಘಟಿಕೋತ್ಸವ
Kuvempu University ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಜ.22 ರ ಬೆಳಿಗ್ಗೆ 10.30 ಕ್ಕೆ ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್‌ನ ಬಸವಸಭಾ ಭವನದಲ್ಲಿ ಕುವೆಂಪು ವಿಶ್ವವಿದ್ಯಾಲಯದ 34 ನೇ ವಾರ್ಷಿಕ ಘಟಿಕೋತ್ಸವ ಏರ್ಪಡಿಸಲಾಗಿದೆ.
ರಾಜ್ಯಪಾಲರು, ಕರ್ನಾಟಕ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್‌ಚಂದ್ ಗೆಹ್ಲೋಟ್ ಅಗ್ರಾಸನ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್‌ರವರ ಉಪಸ್ಥಿತಿಯಿದ್ದು, ಮುಖ್ಯ ಅತಿಥಿಗಳಾಗಿ ಹೈದರಾಬಾದ್ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ರಾಮ್ ರಾಮಸ್ವಾಮಿ ಭಾಗವಹಿಸಲಿದ್ದಾರೆ. Kuvempu University ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕುಲಸಚಿವರಾದ ಎ.ಎಲ್.ಮಂಜುನಾಥ್, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎಸ್.ಎಂ.ಗೋಪಿನಾಥ್ ಪಾಲ್ಗೊಳ್ಳುವರು.
Agriculture University ಕಾಗೋಡು ತಿಮ್ಮಪ್ಪ ಅವರಿಗೆ ಕೃಷಿ ವಿವಿಯಿಂದ “ಗೌರವ ಡಾಕ್ಟರೇಟ್” ಘೋಷಣೆ
Agriculture University ಶಿವಮೊಗ್ಗ ಜಿಲ್ಲೆಯ ಹಿರಿಯ ರಾಜಕಾರಣಿ
ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯು ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಿದೆ. ಜನವರಿ 22 ರಂದು ನಡೆಯಲಿರುವ 9 ನೇ ಘಟಿಕೋತ್ಸವದಲ್ಲಿ
Agriculture University ಕುಲಾಧಿಪತಿ ಮತ್ತು ಮಾನ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಪದವಿ ಪ್ರದಾನ ಮಾಡಲಿದ್ದಾರೆ.
ಸುದ್ದಿಗೆ ಪ್ರತಿಕ್ರಿಯಿಸಿದ ಮುತ್ಸದ್ದಿ ರಾಜಕಾರಣಿ ಕಾಗೋಡು ತಿಮ್ಮಪ್ಪ ನವರು
ತುಂಬಾ ಸಂತೋಷವಾಗಿದೆ. ವಿವಿಗೆ ವುಶೇಷ ಕೃತಜ್ಞತೆಗಳು ಎಂದಿದ್ದಾರೆ.
MESCOM ಜನವರಿ 18 . ಸಂತೇಕಡೂರು ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಸಂತೇಕಡೂರು ಗ್ರಾಮದಲ್ಲಿರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.18 ರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
MESCOM ಜನವರಿ 18 . ಸಂತೇಕಡೂರು ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಎಫ್-1 ಉಂಬ್ಳೇಬೈಲು, ಎಫ್-2 ಲಕ್ಕಿನಕೊಪ್ಪ, ಎಫ್-3 ಮತ್ತೂರು ಕುಡಿಯುವ ನೀರಿನ, ಎಫ್-4 ಸಂತೇಕಡೂರು, ಎಫ್-8 ಗಣಿದಾಳು ಮತ್ತು ಮಾರ್ಗಗಳಿಂದ ವಿದ್ಯುತ್ ಸರಬರಾಜು ಪಡೆಯುವ ಗ್ರಾಮಗಳಾದ ಸಂತೇಕಡೂರು, ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕ ನಗರ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು ಉಂಬ್ಳೆಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈತೊಟ್ಟಿಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪಾಲನೆ ಮತ್ತು ನಿರ್ವಹಣೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
JCI Shivamogga ಜನವರಿ 21 ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯ ಪದಾಧಿಕಾರಗಳ ಪದಗ್ರಹಣ ಸಮಾರಂಭ
JCI Shivamogga ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ವತಿಯಿಂದ ಜ. 21ರಂದು ಸಂಜೆ 6.30ಕ್ಕೆ 2025ನೇ ಸಾಲಿನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ.
2025ರ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷರಾಗಿ ಗಣೇಶ್ ಜಿ ಹಾಗೂ ಕಾರ್ಯದರ್ಶಿಯಾಗಿ ಮಂಜುನಾಥ್ ರಾವ್ ಕದಂ ಅವರು ಪದಾಧಿಕಾರಿಗಳೊಂದಿಗೆ ಅಧಿಕಾರ ಸ್ವೀಕರಿಸುವರು.
JCI Shivamogga ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಉದ್ಘಾಟಿಸುವರು. 2024ರ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷೆ ಡಾ. ಲಲಿತಾ ಭರತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜೆಸಿಐ ಭಾರತ ವಲಯ 24ರ ವಲಯಾಧ್ಯಕ್ಷ ಗೌರೀಶ್ ಭಾರ್ಗವ್, ಸಮುದಾಯ ಅಭಿವೃದ್ಧಿ ರಾಷ್ಟ್ರೀಯ ನಿರ್ದೇಶಕ ಅನೂಷ್ ಗೌಡ, ವಲಯ ಉಪಾಧ್ಯಕ್ಷ ಸಿ.ಎ.ಮಧುಸೂದನ್ ನಾವಡ, ಜೆಎಸಿ ಉಪಾಧ್ಯಕ್ಷ ಶೇಷಗಿರಿ.ಡಿ.ಕೆ. ಉಪಸ್ಥಿತರಿರುವರು.
2025ನೇ ಸಾಲಿನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹಾಜರಿರುವರು.
Shivaganga Yoga Centre ಹಬ್ಬಗಳ ಆಚರಣೆಯಿಂದ ಕೌಟುಂಬಿಕ & ಸಾಮಾಜಿಕ ಸಾಮರಸ್ಯ- ಎಚ್.ಕೆ.ಹರೀಶ್.
Shivaganga Yoga Centre ಹಬ್ಬಗಳ ಆಚರಣೆ ನಮ್ಮ ಹಿಂದು ಸಂಸ್ಕೃತಿಯ ಪ್ರತೀಕ ಎಂದು ನಿವೃತ್ತ ಪ್ರಾಚಾರ್ಯ, ಯೋಗ ಶಿಕ್ಷಕ ಎಚ್.ಕೆ.ಹರೀಶ್ ಅನಿಸಿಕೆ ವ್ಯಕ್ತಪಡಿಸಿದರು.
ಶ್ರೀ ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಹಬ್ಬಗಳ ಆಚರಣೆಯಿಂದ ಕೌಟುಂಬಿಕ ಹಾಗೂ ಸಾಮಾಜಿಕ ಸಾಮರಸ್ಯ, ಅನ್ಯೋನ್ಯತೆ, ಸ್ನೇಹ ಹಾಗೂ ಭಾಂದವ್ಯ ಬೆಸೆಯುತ್ತದೆ ಎಂದರು.
ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶಿಷ್ಟತೆ ಇದ್ದು, ಅದರ ಮಹತ್ವ ಹಾಗೂ ಆಚರಣೆಯನ್ನು ನಮ್ಮ ಮಕ್ಕಳಿಗೆ ತಿಳಿಸಿ ಕೊಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮುಂದಿನ ತಲೆಮಾರುಗಳಿಗೆ ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ರಾಘವ ಶಾಖೆಯ ಮುಖ್ಯಶಿಕ್ಷಕ ಜಿ.ಎಸ್.ಓಂಕಾರ್ ಮಾತನಾಡಿ, ಮಕರ ಸಂಕ್ರಾಂತಿ ಮಹತ್ವವನ್ನು ತಿಳಿಸುತ್ತಾ ಸೂರ್ಯನು ತನ್ನ ಪಥವನ್ನು ಉತ್ತರ ದಿಕ್ಕಿಗೆ ಬದಲಿಸುತ್ತಾ ಮಕರ ರಾಶಿಗೆ ಪ್ರವೇಶಿಸುವುದರಿಂದ ಇದನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ ಹಾಗೂ ಇದನ್ನು ಸುಗ್ಗಿಯ ಹಬ್ಬ ಎಂದು ಸಹ ಕರೆಯುತ್ತಾರೆ ಎಂದರು.
Shivaganga Yoga Centre ಇದೇ ಸಂದರ್ಭದಲ್ಲಿ ರಾಘವ ಶಾಖೆಯ ಹಿರಿಯ ಯೋಗಪಟು ಟಿ.ಸುಬ್ರಮಣಿ ಅವರು 75 ಸಂವತ್ಸರ ಪೂರೈಸಿದ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಎಲ್ಲಾ ಯೋಗ ಪಟುಗಳು ಪರಸ್ಪರ ಎಳ್ಳು ಬೆಲ್ಲವನ್ನು ಹಂಚಿ ಶುಭಾಶಯ ಕೋರಿದರು. ಯೋಗ ಶಿಕ್ಷಕರಾದ ವಿಜಯ ಕೃಷ್ಣ, ಶಂಕರ್, ಜಿ.ವಿಜಯಕುಮಾರ್, ಶಶಿಧರ್, ಸುಜಾತಾ ಮಧುಕೇಶ್ವರ್, ಗಾಯತ್ರಿ ಅಶೋಕ್, ಆನಂದ್, ಶೋಭಾ, ಮಹೇಶ್, ಶ್ರೀನಿವಾಸ್, ಶಂಕರ್, ಯಶವಂತ್, ಉಷಾ, ಸುಮಾ, ಶೈಲಜಾ ಸೇರಿದಂತೆ 40 ಯೋಗ ಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Shivamogga City Corporation ಶಾಸಕ ಚನ್ನಬಸಪ್ಪ ಅವರಿಂದಗಾಡಿಕೊಪ್ಪದಲ್ಲಿ ಪಾರ್ಕ್ ನಿರ್ಮಾಣಕ್ಕೆ ಗುದ್ದಲಿಪೂಜೆ
Shivamogga City Corporation ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಮಹಾನಗರ ಪಾಲಿಕೆಯ ವತಿಯಿಂದ ಗಾಡಿಕೊಪ್ಪ ಹಾಗೂ ಬಲಿಜ ಸಮುದಾಯ ಭವನದ ಬಳಿ ಇರುವ ಬಡಾವಣೆಗಳಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆಯನ್ನು ನೀಡಿದರು.
ಗುದ್ದಲಿ ಪೂಜೆ ನೆರವೇರಿಸಿದ ಕಾಮಗಾರಿಗಳ ವಿವರಗಳು –
- ಗಾಡಿಕೊಪ್ಪದಲ್ಲಿ ಪಾರ್ಕ್ ನಿರ್ಮಾಣ ಕಾಮಗಾರಿಗೆ 17 ಲಕ್ಷ.
- ಬಲಿಜ ಸಮುದಾಯ ಭವನದ ಬಳಿ ಇರುವ ಬಡಾವಣೆಗಳಲ್ಲಿ ಡ್ರೈನ್ ಕಾಮಗಾರಿಗೆ 5 ಲಕ್ಷ.
Information and dissemination Department ಕೇಂದ್ರ ನೌಕರರಿಗೆ 8 ನೇ ವೇತನ ಆಯೋಗ ರಚನೆಯಾಗುವ ಸುದ್ದಿ
Information and dissemination Department ಬಹುದಿನಗಳಿಂದ ಕೇಂದ್ರ ಸರ್ಕಾರಿ ನೌಕರರು ನಿರೀಕ್ಷೆ ಈಗ ನಿಜವಾಗುತ್ತಿದೆ.
ಕೇಂದ್ರವು 8 ನೇ ವೇತನ ಆಯೋಗದ ಬಗ್ಗೆ ಭರವಸೆಯ ಸಂಗತಿ ಪ್ರಕಟಿಸಿದೆ.
2026ರ ವೇಳೆಗೆ 8 ನೇ ವೇತನ ಆಯೋಗ ರಚಿಸಲಾಗುವುದು ಎಂದಷ್ಟೇ ಕೇಂದ್ರ ಸಚಿವರು ಘೋಷಿಸಿದ್ದಾರೆ.
ಮಾಧ್ಯಮಗಳ ಪ್ರಕಾರ, 8 ನೇ ವೇತನ ಆಯೋಗವು ಜನವರಿ 1, 2026 ರಿಂದ ಜಾರಿಗೆ ಬರಲಿದೆ. ಆಯೋಗದ ಅನುಷ್ಠಾನದ ಮೇಲ್ವಿಚಾರಣೆಗಾಗಿ, ಅಧ್ಯಕ್ಷರು ಮತ್ತು ಸದಸ್ಯರನ್ನು ಶೀಘ್ರದಲ್ಲೇ ನೇಮಿಕ ಮಾಡಲಾಗುವುದು ಎಂದೂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
Information and dissemination Department ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 8ನೇ ವೇತನ ಆಯೋಗ ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
