Tuesday, March 17, 2026
Tuesday, March 17, 2026
Home Blog Page 432

Kuvempu University ಉಪನ್ಯಾಸಕ ಸತೀಶ್ ಅವರಿಗೆ ಕುವೆಂಪು ವಿವಿಯಿಂದ ಪಿ ಎಚ್ ಡಿ ಪದವಿ

0

Kuvempu University ಕುವೆಂಪು ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನಶಾಸ್ತ್ರ ವಿಷಯದಲ್ಲಿ ಸತೀಶ್ ಹೆಚ್ ಸಿ ಇವರು ಪಿಹೆಚ್‌ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.

ಇವರು ಸಿಂಥೆಸಿಸ್ ಕ್ಯಾರೆಕ್ಟರೈಜೇಷನ್ ಆಫ್ ಮೆಟಲ್ ನ್ಯಾನೋ ಪಾರ್ಟಿಕಲ್ಸ್: ಎಲೆಕ್ಟ್ರೋಕೆಮಿಕಲ್ಸ್ ಆಂಡ್ ಡೈ ಡಿಗ್ರಡೆಶನ್ ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಅನಿತಾ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.

Kuvempu University ಇವರು ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಗ್ರಾಮದ ಚಂದ್ರಪ್ಪ ಮತ್ತು ಕೆಂಚಮ್ಮ ದಂಪತಿಗಳ ಪುತ್ರರಾಗಿದ್ದು ಪ್ರಸ್ತುತ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜ.22 ರಂದು ನಡೆಯಲಿರುವ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲರು ಪ್ರಮಾಣ ಪತ್ರ ನೀಡಲಿದ್ದಾರೆ.

SN Channabasappa ವೇಮನರ ವಚನಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವಾಗಲಿ- ಶಾಸಕ ಚನ್ನಬಸಪ್ಪ

0

SN Channabasappa ಪ್ರತಿಯೊಬ್ಬ ವ್ಯಕ್ತಿಯ ಭಾವನೆಗಳನ್ನು ಜನಮಾನಸಕ್ಕೆ ತಲುಪಿಸುವ ವೇಮನರ ಜೀವನದ ಆದರ್ಶಗಳನ್ನು ನಾವು ಪಾಲನೆ ಮಾಡಬೇಕಿದೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ರೆಡ್ಡಿ ಸಂಘದ ಸಹಯೋಗದೊಂದಿಗೆ ಭಾನುವಾರ ನಗರದ ಕುವೆಂಪು ರಂಗಮಂದಿರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೇಮನರ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಮೂಡಬೇಕಿದೆ. ಆ ಮೂಲಕ ವಚನ ಸಾಹಿತ್ಯ, ಕವಿ ಪರಂಪರೆಯನ್ನು ಒಪ್ಪಿಕೊಂಡು ಮುಂದೆ ತೆಗೆದುಕೊಂಡು ಹೊಗಬೇಕಿದೆ ಎಂದರು.

ಮೂಲತಃ ಆಂಧ್ರಪ್ರದೇಶದವರಾದ ವೇಮನ ಅವರು ವಚನ ಸಾಹಿತ್ಯವನ್ನು ದೇಶದ ಮೂಲೆ ಮೂಲೆಗೆ ತಲುಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಿರುವಳ್ಳುವರ್‌ ಮಾದರಿಯಲ್ಲಿ ವೇಮನರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ವೇಮನ ಮಾಡಿದ ಅನೇಕ ಒಳ್ಳೆಯ ಸಂಗತಿಗಳನ್ನು ವಚನಗಳ ಮೂಲಕ ತೋರಿಸಿದ್ದಾರೆ.

ಕರ್ನಾಟಕ ಸರ್ಕಾರ ವೇಮನವರನ್ನು ಬೇರೆ ರಾಜ್ಯದವರು ಎಂಬ ಆಲೋಚನೆ ಮಾಡದೇ ಪ್ರಾಶಸ್ತ್ಯ ನೀಡಬೇಕು. ಭಾಷೆ ಬೇರೆ ಇರಬಹುದು ಆದರೆ ಭಾವನೆ ಒಂದೇ. ಆ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಕೂಡ ಮುತುವರ್ಜಿ ವಹಿಸಿ ವೇಮನರ ಕುರಿತು ಕೈಪಿಡಿಯನ್ನು ಸಿದ್ಧಪಡಿಸಬೇಕು.
ವರ್ತಮಾನದಲ್ಲಿ ಮೊಬೈಲಿನ ಗೀಳು ಹೆಚ್ಚಾಗಿ ಅದರಿಂದ ಇಂದಿನ ಯುವ ಸಮೂಹಕ್ಕೆ ವಚನ, ಸಾಹಿತ್ಯಗಳ ಜ್ಞಾನವೇ ಇಲ್ಲದಂತಾಗಿದೆ. ಅವರ ನೆನಪಿನ ಶಕ್ತಿಯೆನೆಲ್ಲಾ ಹಾಳು ಮಾಡುತ್ತಿದೆ, ಬಸವಣ್ಣ, ಸರ್ವಜ್ಞ, ವೇಮನ ಸಮಕಾಲೀನರಾದರೂ ವೇಮನ ಯುವ ಸಮೂಹಗಳನ್ನು ಹೆಚ್ಚಾಗಿ ತಲುಪಲಿಲ್ಲ ಹಾಗಾಗಿ ಪುಸ್ತಕದ ಮೂಲಕ ಅವರನ್ನು ಜನಮಾನಸಕ್ಕೆ ತಲುಪಿಸಬೇಕಿದೆ ಎಂದರು.

SN Channabasappa ನಿವೃತ್ತ ಶಿಕ್ಷಣಾಧಿಕಾರಿ ಆರ್‌. ರತ್ನಯ್ಯ ಮಾತನಾಡಿ, ವೇಮನ 15 ರಿಂದ 17 ಶತಮಾನದೊಳಗೆ ಇದ್ದರೆಂದು ಇಂಗ್ಲಿಷಿನ ಕವಿಯೊಬ್ಬರು ಉಲ್ಲೇಖಿಸಿದ್ದಾರೆ.
ಆತನ ಕುರಿತು 5 ಸಾವಿರ ಪದ್ಯ ಇರುವ ಪುಸ್ತಕ ಇದೆ ಎಂದರು.

ವೇಮನ ರೆಡ್ಡಿ ಕುಲದಲ್ಲಿ ಜನಿಸಿದರೂ‌ ಆತನೊಬ್ಬ ಮಹಾಯೋಗಿ. ಆಧ್ಯಾತ್ಮಿಕ, ಸಾಹಿತ್ಯ ಪಾರಂಗತ ವಾದವನ್ನು ಸಮಾಜಕ್ಕೆ ತಿಳಿಸಿದವನು. ಈಗಲೂ ಕೂಡ ಆಂಧ್ರ ಮತ್ತು ತೆಲಂಗಾಣದಲ್ಲಿ ರೈತರು ನಾಟಿ ಅಥವಾ ಬೇಸಾಯ ಮಾಡುವಾಗ ಸಹಜನಾಗಿ ವೇಮನ ಪದ್ಯವನ್ನು ಹಾಡಿನ ರೂಪದಲ್ಲಿ ಹೇಳುತ್ತಾರೆ. ಆ ಮೂಲಕ ಅವರು ಪ್ರಜಾಕವಿ ಆಗಿದ್ದಾರೆ. ತನ್ನ ವೇದಾಂತ ಸಾರಾಂಶವನ್ನು ಆಂಧ್ರದವರೆಗೂ ಕಾಪಿಟ್ಟುಕೊಂಡಿದ್ದಾರೆ.

ವಚನಗಳ ಮೂಲಕ ಜ್ಞಾನ, ಆತ್ಮಜ್ಞಾನವನ್ನು ತಿಳಿಸಿಕೊಟ್ಟಿದ್ದಾರೆ. ಸಮಾಜದಲ್ಲಿನ ವಿಂಡಂಬನೆ ವಿಶ್ಲೇಷಿಸಿ ಗಂಡ, ಹೆಂಡತಿ, ಮಕ್ಕಳು ಇವರುಗಳ ಜವಬ್ದಾರಿ ಏನೆಂದು ತಿಳಿಸಿದ್ದಾರೆ ಎಂದರು.
ಯುವ ಪಿಳೀಗೆಗೆ ವೇಮನ ಯಾರೆಂದು ತಿಳಿದಿಲ್ಲ. ಅದನ್ನು ತಿಳಿಸುವ ಜವಬ್ದಾರಿ ರೆಡ್ಡಿ ಸಮುದಾಯದ್ದಾಗಿದೆ. ಆತನ ಬಗ್ಗೆ ಕನ್ನಡದಲ್ಲಿ ಪುಸ್ತಕ ಇದೆ. ಅದನ್ನು ಓದುವಂತೆ ಪ್ರೇರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ರೆಡ್ಡಿ ಸಂಘದ ಅಧ್ಯಕ್ಷ ಭೀಮಾ ರೆಡ್ಡಿ ಮಾತನಾಡಿ, ವೇಮನರು ದೊಡ್ಡ ಭಂಡಾರವಿದ್ದಂತೆ. ತಿರುವಳ್ಳುವರ್, ಸರ್ವಜ್ಞ ರಂತೆ ವೇಮನ ರನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರನ್ನು ಅರ್ಥ ಮಾಡಿಕೊಳ್ಳಲು ಅವರ ಹಾದಿಯಲ್ಲೆ ಸಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್‌.ಉಮೇಶ್‌, ಜಿಲ್ಲಾ ರೆಡ್ಡಿ ಸಂಘದ ಉಪಾಧ್ಯಕ್ಷ ಮೋಹನ್‌ ರೆಡ್ಡಿ ಹಾಗೂ ರೆಡ್ಡಿ ಸಂಘದ ಸದಸ್ಯರು, ಸಮಾಜದ ಮುಖಂಡರು ಹಾಜರಿದ್ದರು.

Co-operative Societies Audit Department ಸೆಪ್ಟೆಂಬರ್ 1 ರೊಳಗೆ ಸಹಕಾರ ಸಂಘಗಳು ತಮ್ಮ ಲೆಕ್ಕಪರಿಶೋಧನೆ ಪೂರೈಸಲು ಇಲಾಖೆ ಸೂಚನೆ

0

Co-operative Societies Audit Department ಶಿವಮೊಗ್ಗ ಜಿಲ್ಲೆಯ ಕಾರ್ಯವ್ಯಾಪಿಯಲ್ಲಿ ಬರುವ ಎಲ್ಲಾ ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳು 2024-25 ನೇ ಸಾಲಿನ ಲೆಕ್ಕಪರಿಶೋಧನೆಯನ್ನು ಸಹಕಾರ ಸಂಘಗಳ ಕಾಯ್ದೆ ಕಲಂ 63(1)ರ ಮೇರೆಗೆ ಸೆಪ್ಟೆಂಬರ್ – 01 ರೊಳಗೆ ಪೂರೈಸಿಕೊಳ್ಳಬೇಕಾಗಿರುತ್ತದೆ.
ಆದ್ದರಿಂದ ಇಲಾಖೆಯವರುhttp://www.sahakaradarpana.kar.nic.in ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅರ್ಹ ಲೆಕ್ಕಪರಿಶೋಧಕರ ಪೈಕಿ ಒಬ್ಬರನ್ನು ಸಂಘದ 2023-24 ಸಾಲಿನ ಮಹಾಸಭೆಯಲ್ಲಿ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಮಾಹಿತಿಯನ್ನು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖಾ ಕಚೇರಿಗೆ ಸಲ್ಲಿಸದೇ ಇರುವವರು ತಕ್ಷಣವೇ ಉಪ ನಿರ್ದೇಶಕರ ಕಚೇರಿ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಜ್ಯುವೆಲ್ ರಾಕ್ ಹೋಟೆಲ್ ರಸ್ತೆ, ಜಗನ್ನಾಥ ನರ್ಸಿಂಗ್ ಹೋಂ ಪಕ್ಕ, ಪಿಜಿಎಸ್ ಟವ್, 2ನೇ ಮಹಡಿ, ಶಿವಮೊಗ್ಗ ಇವರ ಕಚೇರಿಗೆ ಸಲ್ಲಿಸುವತೆ ಹಾಗೂ ಸಕಾಲದಲ್ಲಿ ಲೆಕ್ಕ ಪರಿಶೋಧನೆ ನಿರ್ವಹಿಸಿಕೊಂಡು, ವರದಿಯ ಪ್ರತಿಯನ್ನು ಕಡ್ಡಾಯವಾಗಿ ದಿ: 01-09-2025 ರೊಳಗೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖಾ ಕಚೇರಿಗೆ ಸಲ್ಲಿಸುವಂತೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Department of Horticulture ತೋಟಗಾರಿಕಾ ಇಲಾಖೆಯಿಂದ ತರಕಾರಿ ಬೀಜಗಳ ವಿತರಣೆ. ಆಸಕ್ತ ಕೃಷಿಕರಿಂದ ಅರ್ಜಿ ಆಹ್ವಾನ

0

Department of Horticulture 2024-25 ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯ ತರಕಾರಿ ಬೀಜಗಳ(ಹೈಬ್ರಿಡ್ ಹಾಗೂ ಸುಧಾರಿತ ತಳಿ) ವಿತರಣೆ ಕಾರ್ಯಕ್ರಮದಡಿ ತರಕಾರಿ ಬೀಜಗಳನ್ನು ನೀರಿನ ಸೌಲಭ್ಯವಿರುವ ಶಿವಮೊಗ್ಗ ತಾಲ್ಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ರೈತರಿಗೆ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ಅರ್ಜಿಯೊಂದಿಗೆ ಪಹಣಿ, ಆಧಾರ್, ಬ್ಯಾಂಕ್ ಪಾಸ್‌ಬುಕ್ ಮತ್ತು ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಶಿವಮೊಗ್ಗ ಇವರಿಗೆ ದಿ: 31-01-2025 ರೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಅಥವಾ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದೆAದು ಶಿವಮೊಗ್ಗ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

Indian Post ವೀರಯೋಧರ ಕರ್ತವ್ಯ ನಿರ್ವಹಣೆ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು-ಆಶಾ

0

Indian Post ದೇಶದ ಗಡಿಯಲ್ಲಿ ಹಗಲು ಇರುಳೆನ್ನದೇ ವೀರಯೋಧರು ಸೇವೆ ಸಲ್ಲಿಸುತ್ತಿರುವುದರಿಂದ ಜನರು ಸುರಕ್ಷಿತವಾಗಿದ್ದೇವೆ ಎಂದು ಭಾರತೀಯ ಅಂಚೆ ಕಚೇರಿ ಮಾರ್ಕೆಟಿಂಗ್ ಎಕ್ಸಿಕ್ಯೂಟರ್ ಆಶಾ ಹೇಳಿದರು.

ಭಾರತೀಯ ಅಂಚೆ ಕಚೇರಿ ಶಿವಮೊಗ್ಗ ವತಿಯಿಂದ ನಗರದ ಗ್ಲೋಬಲ್ ಆಂಗ್ಲ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 77ನೇ ಸೈನ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವೀರಯೋಧರು ಕಾರ್ಯ ನಿರ್ವಹಿಸುವ ರೀತಿ ಕುರಿತು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

ಲೀಡರ್ ಟ್ರೈನರ್ ಗೈಡ್ಸ್ ಕಾತ್ಯಾಯಿನಿ ಸಿ.ಎಸ್. ಮಾತನಾಡಿ, ಮಕ್ಕಳು ಸೇವೆಗೆ ಸದಾ ಸಿದ್ಧರಾಗಿರಬೇಕು. ಬಾಲ್ಯದಿಂದಲೇ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಕೈಲಾದಷ್ಟು ಸಹಾಯ ಮಾಡಬೇಕು ಎಂದು ತಿಳಿಸಿದರು.

Indian Post ಮುಖ್ಯಶಿಕ್ಷಕ ಹರ್ಷ ಮಾತನಾಡಿ, ಮಕ್ಕಳು ರಾಷ್ಟ್ರದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ತಮ್ಮ ಕರ್ತವ್ಯ ಮಾಡಬೇಕು ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ನ ಬನ್ನೀಸ್ ಶಿಕ್ಷಕಿ ನಳಿನಿ ಉಪಸ್ಥಿತರಿದ್ದರು.

ಯೋಧರ ಸೇವೆ ಸ್ಮರಿಸುವ, 77ನೇ ಸೈನ್ಯ ದಿನಾಚರಣೆ ಬಗ್ಗೆ ಚಿತ್ರಕಲಾ ಸ್ಪರ್ಧೆ, ಯೋಧರಿಗೊಂದು ಭಾವನಾತ್ಮಕ ಪತ್ರ, ಯೋಧರಿಗಾಗಿ ರಾಖಿ ಚಿತ್ರ ಚಿತ್ರಿಸುವ, ಸಂದೇಶ ಬರೆಯುವ ಹಾಗೂ ಎಲ್ಲ ಪ್ರತಿಗಳನ್ನು ಅಂಚೆ ಕಚೇರಿ ಮೂಲಕ ಯೋಧರಿಗೆ ತಲುಪಿಸುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಕ್ಕಳು ಸೈನ್ಯ ಮತ್ತು ಸೈನಿಕರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಬನ್ನೀಸ್, ಕಬ್ಸ್, ಬುಲ್‌ಬುಲ್ಸ್, ಸ್ಕೌಟ್ಸ್, ಗೈಡ್ಸ್ ಹಾಗೂ ಶಾಲೆಯ ಎಲ್ಲ ಮಕ್ಕಳು ಭಾಗವಹಿಸಿದ್ದರು.

Prerana Institute ಶಿವಮೊಗ್ಗದ ಬಿವಿಐ ಪ್ರೇರಣಾ ಸಂಸ್ಥೆಗೆ ರಾಷ್ಟ್ರಮಟ್ಟದ ಪ್ರಶಸ್ತಿ

0

Prerana Institute ತಮಿಳುನಾಡಿನ ಕಂಚಿಪುರಂನಲ್ಲಿ ಭಾವಸಾರ ವಿಷನ್ ಇಂಡಿಯಾದಿಂದ ಡಿ. 28, 29ರಂದು ಆಯೋಜಿಸಿದ್ದ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಬಿವಿಐ ಪ್ರೇರಣಾ ಶಿವಮೊಗ್ಗ ಸಂಸ್ಥೆಯು ಮೂರು ರಾಷ್ಟ್ರಮಟ್ಟದ ಪ್ರಶಸ್ತಿ ಹಾಗೂ ಏಳು ಏರಿಯಾ ಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

Prerana Institute ಬಿವಿಐ ಪ್ರೇರಣಾ ಶಿವಮೊಗ್ಗ ಸಂಸ್ಥೆಯ ಉಮಾ ವೆಂಕಟೇಶ್ ಅವರು ರಾಷ್ಟ್ರಮಟ್ಟದಲ್ಲಿ ಹೈಯೆಸ್ಟ್ ಪ್ರಾಜೆಕ್ಟ್ ಅವಾರ್ಡ್, ಬೆಸ್ಟ್ ನ್ಯಾಷನಲ್ ಪ್ರೆಸಿಡೆಂಟ್‌ಗೆ ಪಾತ್ರರಾಗಿದ್ದಾರೆ. ಸುನೀಲ್ ಬೇದ್ರೆ ಅವರು ಬೆಸ್ಟ್ ಡೆಪ್ಯುಟಿ ಗವರ್ನರ್ ಆಗಿ ಪ್ರಶಸ್ತಿ ಪಡೆದಿದ್ದಾರೆ.
ಬಿವಿಐ ಪ್ರೇರಣಾ ಶಿವಮೊಗ್ಗ ಸಂಸ್ಥೆಗೆ ಏಳು ಏರಿಯಾ ಗವರ್ನರ್ ಅವಾರ್ಡ್ಸ್ ಲಭಿಸಿದೆ. ಉಮಾ ವೆಂಕಟೇಶ್ ಅವರಿಗೆ ಬೆಸ್ಟ್ ಎಕ್ಸಾಸ್ಟ್ರಾರ್ಡಿನರಿ ಪ್ರೆಸಿಡೆಂಟ್, ಕವಿತಾ ಹರೀಶ್ ಅವರಿಗೆ ಬೆಸ್ಟ್ ಸೆಕ್ರೆಟರಿ ಪ್ರಶಸ್ತಿ, ಸ್ನೇಹಾ ಪ್ರಶಾಂತ್ ಅವರಿಗೆ ಬೆಸ್ಟ್ ವುಮೆನ್ ವೆಲ್ಫೇರ್ ಪ್ರಶಸ್ತಿ, ವನಿತಾ ಪ್ರವೀಣ್ ಅವರಿಗೆ ಬೆಸ್ಟ್ ಚೈಲ್ಡ್ ವೆಲ್ಫೇರ್ ಪ್ರಶಸ್ತಿ, ಮಂಜುನಾಥ್ ಮಾಳದಕರ್ ಅವರಿಗೆ ಬೆಸ್ಟ್ ಪ್ರಾಜೆಕ್ಟ್ ಡೈರೆಕ್ಟರ್ ಪ್ರಶಸ್ತಿ ಹಾಗೂ ಅವಿನಾಶ್ ಮಿರಜಕರ ಅವರಿಗೆ ಬೆಸ್ಟ್ ವಿಜನ್ ಸರ್ವಿಸ್ ಪ್ರಶಸ್ತಿ ಲಭಿಸಿದೆ.

M.B. Patil ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದ ಸಮಸ್ಯೆ ಪರಿಹರಿಸಲು ಮನವಿ

0

M.B. Patil ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದ ಸಮಸ್ಯೆಗಳನ್ನು ಬಗೆಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ನೇತೃತ್ವದಲ್ಲಿ ಪದಾಧಿಕಾರಿಗಳು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಚರ್ಚಿಸಿದರು.

ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದ ಪರಿಸರ ವಿಮೋಚನಾ ಪತ್ರದ ಕುರಿತು ಸಮಾಲೋಚನೆ ನಡೆಸಲಾಯಿತು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಕ್ರಮ ವಹಿಸಬೇಕು. ಮೆಕ್ಕೆಜೋಳ ಸಂಶೋಧನಾ ಕೇಂದ್ರ ಸ್ಥಾಪನೆಗೆ ಚಾಲನೆ ನೀಡಬೇಕು. ಶೀಘ್ರದಲ್ಲಿ ಫುಡ್ ಪಾರ್ಕ್ ಸ್ಥಾಪನೆಗೆ ಕ್ರಮ ವಹಿಸಬೇಕು ಎಂದು ಚರ್ಚಿಸಲಾಯಿತು.
ಕೇಂದ್ರ ಸರ್ಕಾರ ದ ನೀತಿಯಂತೆ ರಾಜ್ಯ ಸರ್ಕಾರವು ಸಣ್ಣ ಮತ್ತು ಮಾಧ್ಯಮ ಕೈಗಾರಿಕೆ ತಯಾರಿಸುವ ವಸ್ತುಗಳೆಗೆ ಪಿಎಲ್ಐ ಸ್ಕೀಮ್ ಪ್ರಾರಂಭಿಸ ಬೇಕು ಎಂದು ಮನವಿ ಮಾಡಿದರು.

ಕೈಗಾರಿಕಾ ಭೂಮಿ ದರ ಹೆಚ್ಚಳ, ಎಂಎಸ್‌ಎಂಇ ಮತ್ತು ಬೃಹತ್ ಉದ್ಯಮ ಸ್ಥಾಪನೆ ಸಂಬಂಧ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಚರ್ಚಿಸಿದರು.

M.B. Patil ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಮಾಜಿ ಅಧ್ಯಕ್ಷ ಎಸ್.ರುದ್ರೇಗೌಡ, ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ನಿರ್ದೇಶಕಿ ಲಕ್ಷ್ಮೀದೇವಿ ಗೋಪಿನಾಥ್, ಮಾಚೇನಹಳ್ಳಿ ಕೈಗಾರಿಕಾ ಅಸೋಸಿಯೇಷನ್ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಮಾಜಿ ಅಧ್ಯಕ್ಷ ರಮೇಶ್ ಹೆಗ್ಡೆ, ಮಹಾನಗರ ಪಾಲಿಕೆ ಮಾಜಿ ಸದಸ್ಯ‌ ಎಚ್.ಸಿ.ಯೋಗೀಶ್, ಜಿಲ್ಲಾ ಆಶ್ರಯ ಯೋಜನೆ ಸಮಿತಿ ಸದಸ್ಯ ಎಚ್.ಮಧು, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ದಿನೇಶ್ ಇತರರಿದ್ದರು.

Karnataka Sangh Bhavan ಅಜೇಯ ಬಳಗದಿಂದ ವಿನೂತನ ಕಾರ್ಯಕ್ರಮ.”ಅಮ್ಮ ಎಂಬ ಅಚ್ಚರಿಗೆ ಅಕ್ಕರೆಯ ನಮನ

0

Karnataka Sangh Bhavan ಶಿವಮೊಗ್ಗ ನಗರದ ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಜ. 19ರ ನಾಳೆ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಕರ್ನಾಟಕ ಸಂಘ ಭವನದಲ್ಲಿ ವಿಶಿಷ್ಟ ಕಾರ್ಯಕ್ರಮ ಒಂದನ್ನು ಹಮ್ಮಿಕೊಳ್ಳಲಾಗಿದೆ.

“ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ” ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ತಾಯಿಯ ಕುರಿತಾದ ಹಲವು ರೀತಿಯ ಅಭಿವ್ಯಕ್ತಿಗಳು ವಿವಿಧ ಗಣ್ಯರಿಂದ ಅನಾವರಣಗೊಳ್ಳಲಿವೆ.

ವೀಣಾ ಬನ್ನಂಜೆ, ಜಗದೀಶ ಶರ್ಮ ಸಂಪ, ವಸುಧೇಂದ್ರ, ಜಿ.ಎಸ್. ನಟೇಶ್, ಸಹನಾ ಚೇತನ್, ವಿಘ್ನೇಶ್ ಭಟ್ ಮೊದಲಾಗಿ ಅನೇಕ ವಿದ್ವಾಂಸರು ಅಮ್ಮನ ಕುರಿತಾದ ತಮ್ಮ ಚಿಂತನೆಗಳನ್ನು ವಿವಿಧ ಆಯಾಮಗಳಲ್ಲಿ ಪ್ರಸ್ತುತ ಪಡಿಸಲಿದ್ದಾರೆ.

Karnataka Sangh Bhavan ಇಡೀ ದಿನ, ಊಟ ತಿಂಡಿ ಪಾನೀಯ ಆದಿಯಾಗಿ ಎಲ್ಲವನ್ನೂ ಒಳಗೊಂಡು ನಡೆಯುವ ಈ ಕಾರ್ಯಕ್ರಮದಲ್ಲಿ ಕಿರು ಉಪನ್ಯಾಸ, ಕಥಾ ವಾಚನ, ಕಿರುಚಿತ್ರ, ಗಮಕ, ಸಂಗೀತ, ನೃತ್ಯ ಮೊದಲಾಗಿ ಹಲವು ಪ್ರಕಾರಗಳ ಮೂಲಕ ಅಮ್ಮನನ್ನು ಕಾಣಿಸುವ ವಿಶೇಷ ಪ್ರಯತ್ನ ಮಾಡಲಾಗಿದೆ.

ಕೇವಲ ಕೆಲವೇ ಜನರು ಪಾಲ್ಗೊಳ್ಳಲು ಅವಕಾಶವಿರುವ ಈ ಕಾರ್ಯಕ್ರಮಕ್ಕೆ ಆಗಮಿಸಲು ಬಯಸುವವರು ಫೋನ್ ನಂಬರ್ 98441 53534 ಅಥವಾ 83108 76277 ಇವುಗಳನ್ನು ಸಂಪರ್ಕಿಸಿ ಕೂಡಲೇ ಹೆಸರು ನೊಂದಾಯಿಸಬೇಕಾಗಿ ಬಳಗ ವಿನಂತಿಸಿದೆ.

Women and Child Development Department ಜನವರಿ 21. ಜಿಲ್ಲೆಯ ವಿವಿಧೆಡೆ ಹಿರಿಯ ನಾಗರಿಕರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರ

0

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಇವರ ಸಂಯುಕ್ತಾಶ್ರಯದಲ್ಲಿ ಜ.21 ರಿಂದ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆವರೆಗೆ ಹಿರಿಯ ನಾಗರಿಕರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ.

ಜ.21 ರಂದು ಸಾಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಗೌತಮಪುರ, ಸಂಪರ್ಕಿಸಬೇಕಾದ ದೂ.ಸಂ: 9535247757. ಹೊಸನಗರ ಸಂಯುಕ್ತ ಆಸ್ಪತ್ರೆ, ನಗರ, ದೂ.ಸಂ: 9731922693, ಜ.22 ರಂದು ತೀರ್ಥಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಟಗಾರು, ದೂ.ಸಂ 9480767638. ಜ.24 ರಂದು ಭದ್ರಾವತಿಯ ಸಮುದಾಯ ಆರೋಗ್ಯ ಕೇಂದ್ರ ಹೊಳೆಹೊನ್ನೂರು, ದೂ.ಸಂ: 7899137243. ಜ.28 ರಂದು ಶಿವಮೊಗ್ಗದ ಸಮುದಾಯ ಆರೋಗ್ಯ ಕೇಂದ್ರ ಆಯನೂರು, ದೂ.ಸಂ: 9980150110. ಸೊರಬದಲ್ಲಿ ಸಾರ್ವಜನಿಕ ಆಸ್ಪತ್ರೆ ಸೊರಬ, ದೂ.ಸಂ: 9110493122. ಜ.31 ರಂದು ಶಿಕಾರಿಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾರಗೊಪ್ಪ, ದೂ.ಸಂ: 9741161346 ಇಲ್ಲಿ ಶಿಬಿರ ನಡೆಸಲಾಗುತ್ತದೆ.

60 ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕ ಮಾತ್ರ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದ್ದು, ಶಿಬಿರಕ್ಕೆ ಹಾಜರಾಗಲು ವಯಸ್ಸಿನ ಸಂಬಂಧ ಜನ್ಮ ದಿನಾಂಕ ನಮೂದಾಗಿರುವ ದಾಖಲಾತಿ ಅಂದರೆ ಇಲಾಖೆಯಿಂದ ವಿತರಿಸಲಾದ ಹಿರಿಯ ನಾಗರಿಕ ಗುರುತಿನ ಚೀಟಿ, ಪಾನ್‌ಕಾರ್ಡ್, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ಶಾಲಾ/ ಕಾಲೇಜು ದಾಖಲಾತಿ ಹಾಗೂ ಆಧಾರ ಕಾರ್ಡ್ ಮತ್ತು ಪಡಿತರ ಚೀಟಿ ಕಡ್ಡಾಯವಾಗಿ ತರತಕ್ಕದ್ದು.

Women and Child Development Department ಹೆಚ್ಚಿನ ಮಾಹಿತಿಗಾಗಿ ವಿಕಲಚೇತನ ಸಲಹೆ ಮತ್ತು ಮಾಹಿತಿ ಕೇಂದ್ರ ದೂ.ಸಂ; 08182251676, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ದೂ.ಸಂ:08182222382, ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರ ದೂ.ಸಂ:08182221188, ಅಂಗವಿಕಲರ ಪುನರ್ವಸತಿ ಕೇಂದ್ರ ದೂ.ಸಂ:08182488438, ಮೊ;8088620178 ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

VISL Bhadravati ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಭದ್ರಾವತಿ ವಿಐಎಸ್ಎಲ್ ನಿಂದ ವಿವಿಧ ಕಾರ್ಯಕ್ರಮ

0

VISL Bhadravati ಸೈಲ್ ವಿ.ಐ.ಎಸ್.ಎಲ್. ಭದ್ರಾವತಿ ವತಿಯಿಂದ ವಿ.ಐ.ಎಸ್.ಎಲ್. ಸಂಸ್ಥಾಪಕರ ದಿನ, ಸೈಲ್ ಸಂಸ್ಥಾಪನೆ ದಿನ ಮತ್ತು ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿ.ಐ.ಎಸ್.ಎಲ್. ವಸ್ತು ಪ್ರದರ್ಶನವನ್ನು ಉದ್ಗಾಟನೆಯನ್ನು 18ನೇ ಜನವರಿ 2025 ರಂದು ಸೈಲ್ ವಿ.ಐ.ಎಸ್.ಎಲ್. ನ ಹಾಕಿ ಮೈದಾನದಲ್ಲಿ ಅಯೋಜಿಸಲಾಗಿದೆ.

VISL Bhadravati ಈ ಕಾರ್ಯಕ್ರಮಗಳ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾಂಸ್ಕöÈತಿಕ ತಂಡಗಳಿಗೆ ಪ್ರತಿಭೆ ಪ್ರದರ್ಶಿಸಲು ವೇದಿಕೆಯನ್ನು ಕೊಡಲಾಗುವುದು. ಈ ಕಾರ್ಯಕ್ರಮದ ಉದ್ಗಾಟನೆಯನ್ನು 18ನೇ ಜನವರಿ 2025ರಂದು ಶ್ರೀ ಬಿ.ಎಲ್. ಚಾಂದ್ವಾನಿ, ಕಾರ್ಯಪಾಲಕ ನಿರ್ದೇಶಕರು ಸೈಲ್ ವಿ.ಐ.ಎಸ್.ಎಲ್. ಭದ್ರಾವತಿ ಸಂಜೆ 07ಗಂಟೆಗೆ ಸೈಲ್ ವಿ.ಐ.ಎಸ್.ಎಲ್. ನ ಹಾಕಿ ಮೈದಾನದಲ್ಲಿ ಮಾಡಲಿದ್ದಾರೆ ಎಂದು ಈ ಮೂಲಕ ತಿಳಿಸಲಾಗಿದೆ.