Karnataka State Press Distributors Union ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಸರ್ಕಾರದ ಗಮನ ಸೆಳೆದು ವಿಶೇಷ ಅಪಘಾತ ವಿಮಾ ಯೋಜನೆಯ ವಯೋಮಿತಿಯನ್ನು ಹೆಚ್ಚಿಸಿ ರಾಜ್ಯದ ದಿನಪತ್ರಿಕೆಗಳ ವಿತರಕರಿಗೆ ಸಂತೋಷದ ಸುದ್ದಿ ತಿಳಿಸುತ್ತಿದೆ 16 ರಿಂದ 59 ವರ್ಷದ ವಯೋಮಿತಿಯ ಅವಕಾಶವನ್ನು ಹೆಚ್ಚಿಸಿ ಈಗ 16 ರಿಂದ 70 ವರ್ಷದವರೆಗೂ ಅಂಬೇಡ್ಕರ್ ಸಹಾಯ ಹಸ್ತ ಯೋಜನೆ ಅಡಿಯಲ್ಲಿ ಪತ್ರಿಕಾ ವಿತರಕರಿಗಾಗಿ ವಿಶೇಷ ಯೋಜನೆಯನ್ನು ತಂದಿರುವ ಸರ್ಕಾರ ತಾವು ಕುಳಿತಲ್ಲೇ ನೋಂದಾವಣೆ ಮಾಡಿಕೊಳ್ಳಬಹುದು ಎಂದು ತಿಳಿಸುತ್ತಿದೆ.
https://ambedkarsahayahasta.karnataka.gov.in/ ಈಗ ತಿಳಿಸಿರುವ ವೆಬ್ಸೈಟ್ನ ಮುಖಾಂತರ ತಾವುಗಳು ನೊಂದಾವಣೆಯದಲ್ಲಿ ತಮಗೆ ಅಪಘಾತದಲ್ಲಿ ಮೃತಪಟ್ಟಲ್ಲಿ 2 ಲಕ್ಷ ರೂಪಾಯಿ ಪರಿಹಾರ ಹಣ ಕುಟುಂಬಕ್ಕೆ ಅಪಘಾತದಲ್ಲಿ ಅಂಗವಿಪಲ್ಯವಾದರೆ ಅಪಘಾತದ ತೀವ್ರತೆಯನ್ನು ಅರಿತು 2 ಲಕ್ಷ ರೂಪಾಯಿ ವರೆಗೂ ಪರಿಹಾರ ಹಣ ಹಾಗೂ ಒಂದು ಲಕ್ಷ ರೂಪಾಯಿ ಗಂಭೀರ ಕಾಯಿಲೆಗಳಿಗಾಗಿ ಸರ್ಕಾರ ನೀಡುತ್ತಿದೆ ರಾಜ್ಯದ ಪತ್ರಿಕಾ ವಿತರಕರು ಈ ಯೋಜನೆಯಲ್ಲಿ ನೋಂದಾಯಿತರಾಗಿ ಸರ್ಕಾರದ ಸೌಲಭ್ಯವನ್ನು ಪಡೆಯಬೇಕೆಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶಂಭುಲಿಂಗ ತಿಳಿಸಿದರು.
Karnataka State Press Distributors Union ಪತ್ರಿಕಾ ವಿತರಕರಿಗಿರುವ ಅಪಘಾತ ವಿಮೆ ಪ್ರಯೋಜನ ಪಡೆಯಿರಿ- ಶಂಭುಲಿಂಗ
JCI Shimoga ಜೆಸಿಐ ಶಿವಮೊಗ್ಗ ಸ್ಟಾರ್ಸ್ ಅಧ್ಯಕ್ಷರಾಗಿ ಗಣೇಶ್ ಪೈ ಆಯ್ಕೆ
JCI Shimoga ಜೆಸಿಐ ಶಿವಮೊಗ್ಗ ಸ್ಟರ‍್ಸ್ ( ರಿಜನ್-ಸಿ ಏರಿಯಾ ಬಿ, ವಲಯ-೨೪) ಸಂಸ್ಥೆಯ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವು ನಗರದ ಆದಿ ಗ್ರ‍್ಯಾಂಡ್ ಶುಭಂ ಹೋಟೆಲ್‌ನಲ್ಲಿ ವಿಜೃಂಭಣೆಯಿAದ ನಡೆಯಿತು.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ಕಾರ್ಕಳ ಗಣೇಶ್ ರಮೇಶ್ ಪೈ ಅವರು ಅಧಿಕಾರ ವಹಿಸಿಕೊಂಡರು. ಕಾರ್ಯಕ್ರಮ ಉದ್ಘಾಟನೆಯನ್ನು ವಲಯ ೨೪ಜೆಸಿಐ ಭಾರತ ವಲಯ ಅಧ್ಯಕ್ಷ ಸಿ.ಎ. ಗೌರೀಶ್ ಭಾರ್ಗವ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ನವೀನ್‌ಕುಮಾರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಖ್ಯಾತ ಮನೋರೋಗ ತe್ಞೆ ಡಾ. ರಜನಿ ಅಶೋಕ್ ಪೈ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಹಣ ಯಾವತ್ತೂ ಶಾಶ್ವತವಲ್ಲ. ಸೇವೆಯ ಲ್ಲಿರುವಾಗ ಮತ್ತು ನಂತರದಲ್ಲೂ ಸೇವಾ ಮನೋಭಾವನೆ ಹಾಗಯೇ ಇರಬೇಕು. ಈ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
JCI Shimoga ಆರ್ಥಿಕ ಸಂಕಷ್ಟದಲ್ಲಿರುವ ಬಡವರು, ಹಿಂದುಳಿದವರು ಮತ್ತು ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ತಮ್ಮ ಕೈಲಾದಷ್ಟು ಸೇವೆ ಮಾಡಬೇಕೆಂದು ನೂತನ ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಕರೆ ನೀಡಿದರು.
ನೂತನ ಅಧ್ಯಕ್ಷ ಗಣೇಶ್ ಪೈ ಅವರು ೨೮ ಭಾರಿ ರಕ್ತದಾನ ಮಾಡಿ ಜೊತೆಗೆ ಮುಂದಿನ ದಿನಗಳಲ್ಲಿ ಸೇವೆಯು ಬಡವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಿಗಲಿ ಎಂದು ಹಾರೈಸಿದರು.
ಸಂಸ್ಥೆಯ ವಲಯ ತರಬೇತಿದಾರ ಕೆ.ವಿ. ವಸಂತಕುಮಾರ್, ಪೂರ್ವ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಜೆಸಿಐ ಭಾರತದ ಸೆನೆಟರ್ ಎಸ್.ವಿ. ಶಾಸ್ತಿçö ಹಾಗೂ ಹೆಚ್.ಜಿ.ಎಫ್. ತ್ಯಾಗ ರಾಜನ್ ಸೇರಿದಂತೆ ಇನ್ನಿತರರಿದ್ದರು.
National Voter’s Day ಕಾಯ್ದೆ ಉಲ್ಲಂಘಿಸಿದ ತಂಬಾಕು ಉತ್ಪನ್ನ ಮಾರಾಟ ಮಳಿಗೆ ಮೇಲೆ ದಾಳಿ. 21 ಪ್ರಕರಣ ದಾಖಲು
National Voter’s Day ಶಿವಮೊಗ್ಗ ಜಿಲ್ಲಾ ಜಾಗ್ರತ ಮತದಾರರ ವೇದಿಕೆ ವತಿಯಿಂದ ಶಿವಮೊಗ್ಗ ನಗರದ ಲಕ್ಷ್ಮಿ ಟಾಕೀಸ್ ಹತ್ತಿರದ ಅಲ್ಲಮಪ್ರಭು ಬಯಲಿನಲ್ಲಿ (ಪ್ರೀಡ೦ ಪಾರ್ಕ್ -ಹಳೆ ಜೈಲ್ ಆವರಣ) ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ” ಮತದಾರರೊಂದಿಗೆ ಮುಖಾಮುಖಿ” ಎಂಬ ಮತದಾರರ ಜಾಗ್ರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶ್ರೀಯುತ ನಾವಿದ್, ರಾಜ್ಯ ಸಂಪನ್ಮೂಲ ವ್ಯಕ್ತಿ, SVEEP, ಜಿಲ್ಲಾ ಪಂಚಾಯತ್, ಕೆ. ಸಿ. ಬಸವರಾಜ್, ಸಂಚಾಲಕರು, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು ಇತರರು ಪಾಲ್ಗೊಂಡಿದ್ದರು.
Nisarga Convent ಮಕ್ಕಳಿಗೆ ಕೇವಲ ಶಿಕ್ಷಣವೊಂದೇ ಅಲ್ಲ ಪೋಷಕರು ಅವರೊಂದಿಗೆ ಬೆರೆಯಬೇಕು- ಡಾ.ಎಚ್.ಬಿ.ಮಂಜುನಾಥ್
Nisarga Convent ಕೇವಲ ಶಿಕ್ಷಣದಿಂದಲೇ ಸತ್ಪ್ರಜೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ, ಶಿಕ್ಷಣದೊಂದಿಗೆ ನೆಲದ ಸಂಸ್ಕೃತಿ ಹಾಗೂ ಮೌಲ್ಯಯುತ ಸಂಸ್ಕಾರಗಳ ಅರಿವು ಮಾಡಿಸಿದಲ್ಲಿ ಮಾತ್ರ ಸತ್ಪ್ರಜೆಗಳನ್ನು ಸೃಷ್ಟಿಸಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು. ದಾವಣಗೆರೆ ನಗರದ ಎಸ್ ಓ ಜಿ ಕಾಲೋನಿಯಲ್ಲಿರುವ ನಿಸರ್ಗ ಕಾನ್ವೆಂಟ್ ಮತ್ತು ಪ್ರೌಢಶಾಲಾ ‘ನಿಸರ್ಗೋತ್ಸವ’ ಉದ್ಘಾಟಿಸಿ ಮಾತನಾಡುತ್ತಾ ಪೋಷಕರು ಮಕ್ಕಳಿಗೆ ಶಾಲಾ ಶಿಕ್ಷಣದ ಕೊಡಿಸಿದರೆ ಸಾಲದು, ದಿನವೂ ಮನೆಯಲ್ಲಿ ಮಕ್ಕಳೊಂದಿಗೆ ಸ್ವಲ್ಪ ವೇಳೆಯಾದರೂ ಆತ್ಮೀಯವಾಗಿ ಮಾತನಾಡುತ್ತಾ ಕಾಲಕಳೆಯಬೇಕು, ತನ್ಮೂಲಕ ನಮ್ಮ ಸಂಸ್ಕೃತಿ ಸಂಸ್ಕಾರಗಳು ಮಕ್ಕಳ ಅರಿವಿಗೆ ಬರಬೇಕು. ದಿನದಲ್ಲಿ ಒಂದು ಹೊತ್ತಾದರೂ ಊಟ ಅಥವಾ ತಿಂಡಿಯನ್ನು ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ಸೇವಿಸಬೇಕು, ಹಾಗೆ ಆಹಾರ ಸೇವಿಸುವಾಗ ಸೇವಿಸುವಾಗ ಟಿವಿ ಮತ್ತು ಮೊಬೈಲ್ ಇತ್ಯಾದಿಗಳ ಕಡೆ ಗಮನ ಕೊಡದೆ ಪರಸ್ಪರ ತಮಾಷೆ ಮಾಡಿಕೊಳ್ಳುತ್ತಾ ಇರಬೇಕು, ಇದರಿಂದ ಕೌಟುಂಬಿಕ ಬಾಂಧವ್ಯವು ಗಟ್ಟಿಗೊಳ್ಳುತ್ತದೆ, ಮುಂದೆ ಮಕ್ಕಳು ಪೋಷಕರನ್ನು ವೃದ್ದಾಶ್ರಮಕ್ಕೆ ದೂಡುವುದು ತಪ್ಪುತ್ತದೆ ಎಂದರು. Nisarga Convent ಅನ್ಯ ಭಾಷೆಗಳನ್ನು ದ್ವೇಷಿಸದೆ ನಮ್ಮ ಮಾತೃಭಾಷೆ ಹಾಗೂ ಮಾತೃ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ನಿಂಚನ ಪಬ್ಲಿಕ್ ಶಾಲಾ ಸ್ಥಾಪಕ ನಿಂಗಪ್ಪನವರು ಜೀವನದ ಸಾಧನೆಯ ಮಾರ್ಗಗಳ ಬಗ್ಗೆ ಪೋಷಕರು ಮಕ್ಕಳಿಗೆ ತಿಳಿಸುತ್ತಿರಬೇಕು ಎಂದರು. ಮತ್ತೋರ್ವ ಮುಖ್ಯ ಅತಿಥಿಗಳಾಗಿ ಶ್ರೀಮತಿ ನಸ್ರೀನ್ ಖಾನ್ ಮಾತನಾಡಿ ಪೋಷಕರು ಮಕ್ಕಳನ್ನು ಅವರ ಉತ್ತಮ ಕಾರ್ಯಗಳಿಗಾಗಿ ಪ್ರೋತ್ಸಾಹಿಸಬೇಕು ಎಂದರು. ಶಾಲಾ ಕಾರ್ಯದರ್ಶಿ ಹೆಚ್.ಜಿ. ಪ್ರಕಾಶರವರ ಉಪಸ್ಥಿತಿಯಲ್ಲಿ ಶಾಲಾ ಅಧ್ಯಕ್ಷ ಬಿ ಪರಮೇಶ್ವರಪ್ಪ ಅಧ್ಯಕ್ಷೀಯ ನುಡಿಗಳ ನಾಡಿದರು. ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ವಿರಕ್ತಮಠದ ಡಾ.ಶ್ರೀ ಬಸವ ಪ್ರಭು ಸ್ವಾಮೀಜಿಯವರು ಅಲಂಕಾರಗಳು ಬಾಹ್ಯ ಶೃಂಗಾರಕ್ಕಾದರೆ ಸದ್ಗುಣಗಳು ಬದುಕಿನ ಶೃಂಗಾರಕ್ಕೆ ಬೇಕು, ಮಲಿನ ಪರಿಸರದಲ್ಲಿ ಬದುಕದೆ ನಿಸರ್ಗ ಹಾಗೂ ಪರಿಸರ ಕಾಪಾಡುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದರು. ಶಿಕ್ಷಕ ಬಿ ಎಂ ಶಶಿಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಅಕ್ಷತಾ ಮತ್ತು ಸಂಗಡಿಗರು ಹಾಡಿದರೆ ಸ್ವಾಗತವನ್ನು ಶಿಕ್ಷಕಿ ವಿಜಯ ಕೋರಿದರು. ಶಾಲಾ ವಾರ್ಷಿಕ ವರದಿಯನ್ನು ಶಿಕ್ಷಕಿ ಶಕುಂತಲಾ ವಾಚಿಸಿದರೆ ಕ್ರೀಡಾ ವರದಿ ಮತ್ತು ಬಹುಮಾನವನ್ನು ಶಿಕ್ಷಕಿಯರಾದ ಅಸ್ಮ ಹಾಗೂ ರಶ್ಮಿ ಬಿ ಕೆ ನಿರ್ವಹಿಸಿದರು. ಶಿಕ್ಷಕಿ ದೀಪಾ ಆರ್ ವಂದನೆ ಸಲ್ಲಿಸಿದರು. ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಪ್ರಸ್ತುತಿಗಳು ನೆರವೇರಿದವು.
Karnataka Rakshana Vedike ಕರವೇ ಸ್ವಾಭಿಮಾನಿ ಬಣದಿಂದ ಬಡಕುಟುಂಬಗಳಿಗೆ ಸಹಾಯ ಹಸ್ತ
Karnataka Rakshana Vedike ಇಂದಿರಾಗಾಂಧಿ ಬಡಾವಣೆಯ ನೂರು ಅಡಿ ರಸ್ತೆ ಕಟ್ಟೆ ಸುಬ್ಬಣ್ಣ ಬಸ್ ನಿಲ್ದಾಣದ ಪಕ್ಕದಲ್ಲಿ ವಾಸವಿರುವ ಬಡ ಕುಟುಂಬಕ್ಕೆ ಆಹಾರ ಕಿಟ್‌ನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹಾಗೂ ಆನಂದಣ್ಣ ಎನ್ ಬ್ರಿಗೇಡ್ ವತಿಯಿಂದ ವಿತರಿಸಲಾಯಿತು. ಆರ್ಥಿಕವಾಗಿ ಸಹಾಯ ಮಾಡಲಾಯಿತು. ಕುಟುಂಬದ ಆಧಾರ ಸ್ತಂಭಗಳಾದ ಲಲಿತ್ ಬೋರ ಹಾಗೂ ಹೆಂಡತಿ ಅಶ್ವಿನಿ ಬೋರಾ ಮಗ ಪ್ರಶಾಂತ್ ಬೋರ ಇವರ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು ಚಿಕಿತ್ಸೆ ಪಡೆಯಲು ಸಹಾ ಹಣವಿಲ್ಲದೆ ಪರದಾಡುತ್ತಿರುವ ಸ್ಥಿತಿಯಲ್ಲಿದ್ದ ಇವರಿಗೆ ಕರವೇ ಸ್ವಾಭಿಮಾನಿ ಬಣದ ಭೇಟಿ ಮಾಡಿ ಸಾಂತ್ವಾನ ಹಾಗೂ ಧೈರ್ಯ ತುಂಬಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಅಧ್ಯಕ್ಷ ಕರವೇ ಕಿರಣ್ ಮಾತನಾಡಿ ಈ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಮಾಡುವ ದಾನಿಗಳು ಅವರ ಬ್ಯಾಂಕ್ ಖಾತೆ89270100025267 ಹಾಗೂ ಅವರ ದೂರವಾಣಿ ಸಂಖ್ಯೆ 900 868 5482 ಹಾಗೂ97 4078 8328 ಸಂಪರ್ಕಿಸಬಹುದು.
Karnataka Rakshana Vedike ಸಂದರ್ಭದಲ್ಲಿಉಪಾಧ್ಯಕ್ಷರಾದ ವಿಜಯ್ ಕುಮಾರ್ ಯು. ಕೆ. ಜಿಲ್ಲಾ ಖಜಾಂಚಿ ಗಣೇಶ್, ಜಿಲ್ಲಾ ಕಾರ್ಯದರ್ಶಿ ರಾಮು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ ಮುಖಂಡರಾದ ನೂರುಲ್ಲಾ ಖಾನ್ ಕೃಷ್ಣಪ್ಪ ಪತ್ರಿಕಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಮಾಲತೇಶ್, ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ, ಮಾಲತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
MESCOM ಜನವರಿ 28. ಗಾಜನೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ
MESCOM ಗಾಜನೂರು 110/11ಕೆವಿ ವಿ.ವಿ. ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿದ್ದು, ಜ.28 ರಂದು ಬೆ 10.00 ರಿಂದ ಸಂ. 6.00 ರವರೆಗೆ ಗಾಜನೂರು ಕ್ಯಾಂಪ್ ಮತ್ತು ಡ್ಯಾಂ, ಸಕ್ರೆಬೈಲು, ನವೋದಯ ಶಾಲೆ, ಶಿವಮೊಗ್ಗ ಕುಡಿಯುವ ನೀರಿನ ಸ್ಥಾವರ, ಹಾಲಲಕ್ಕವಳ್ಳಿ, ಕಡೆಕಲ್, ಯರಗನಾಳ್, ಕುಸ್ಕೂರು, ಶ್ರೀಕಂಠಪುರ, ವೀರಾಪುರ, ತಟ್ಟಿಕೆರೆ, ಹೊಸಕೊಪ್ಪ, MESCOM ಇಂದಿರಾನಗರ, ಹೊಸಹಳ್ಳಿ, ಮುಳ್ಕೆರೆ, ಆನೆಬಿಡಾರ, ತಿಮ್ಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
Rotary Shimoga ರಾತ್ರಿ ಆಕಾಶದಲ್ಲಿ ಗ್ರಹಗಳ ಮೆರವಣಿಗೆ ವೀಕ್ಷಿಸಿ ಆನಂದಿಸಿದ ಮಕ್ಕಳು
Rotary Shimoga ರೋಟರಿ ಶಿವಮೊಗ್ಗ ಪೂರ್ವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಟೆಲಿಸ್ಕೋಪ್ ಮೂಲಕ ವಿವಿಧ ಗ್ರಹಗಳ ಮೆರವಣಿಗೆಯನ್ನು ತೋರಿಸುವ ಕಾರ್ಯಕ್ರಮವನ್ನು ದಿ. 24.1.2025ರಂದು ಹಮ್ಮಿಕೊಳ್ಳಲಾಗಿತ್ತು.
ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಅಂಡ್ ಛಾರಿಟಬಲ್ ಟ್ರಸ್ಟ್ ನ ಉಪಾಧ್ಯಕ್ಷರಾದ ಡಾ|| ಪರಮೇಶ್ವರ್ ಡಿ. ಶಿಗ್ಗಾವ್ ಅವರು ಶಾಲಾ ಮಕ್ಕಳಿಗೆ ವಿವಿಧ ಗ್ರಹಗಳನ್ನು ಟೆಲಿಸ್ಕೋಪ್ ಮೂಲಕ ತೋರಿಸಿ ವಿವರಿಸಿದರು.
Rotary Shimoga ಗ್ರಹಗಳ ಮೆರವಣಿಗೆ ವಿರಳವಾಗಿದ್ದು, ಮಕ್ಕಳು ನೋಡಿ ಆನಂದಿಸಿದರು. ಹಲವಾರು ಪ್ರಶೆಗಳನ್ನು ಕೇಳಿ ಮಾಹಿತಿ ಪಡೆದರು. ಶಾಲಾ ಪ್ರಾಂಶುಪಾಲರು ಶ್ರೀ ಸೂರ್ಯನಾರಾಯಣ್ ಆರ್., ಶಿಕ್ಷಕರಾದ ಶ್ರೀ ಪ್ರದೀಪ್ ಕುಮಾರ್ ಎಸ್., ಶ್ರೀಮತಿ ಹರ್ಷಿತಾ ಕೆ.ಎಂ., ಶ್ರೀಮತಿ ಶ್ವೇತಾ ಎ.ಟಿ. , ಇತರರು ಹಾಜರಿದ್ದರು.
Consumer Disputes Redressal Commission ಗ್ರಾಹಕರ ಪರ ತೀರ್ಪು ನೀಡಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ
Consumer Disputes Redressal Commission ಎಸ್.ಕೆ. ಅನ್ಸರ್ ಖಾನ್ ಬಿನ್ ಎಸ್.ಕೆ.ಖಾಸಿಂ ಎಂಬುವವರು ಮಹರಾಜ ಗೃಹ ವೈಭವ ಕುವೆಂಪು ರಸ್ತೆ, ಶಿವಮೊಗ್ಗ ಮತ್ತು ಬಿ.ಎಸ್.ಹೆಚ್. ಹೌಸ್‌ಹೋಲ್ಡ್ ಅಪ್ಲಯನ್ಸಸ್ ಮ್ಯಾನಿಫ್ಯಾಕ್ಟರಿಂಗ್ ಪ್ರೈ., ಜೆ.ಪಿ.ನಗರ, ಬೆಂಗಳೂರು ಇವರುಗಳ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡಲು ಆದೇಶಿಸಿದೆ.
ಅರ್ಜಿದಾರ ಎಸ್.ಕೆ.ಅನ್ಸರ್ ಖಾನ್ ರವರು 2019ರಲ್ಲಿ ಎದುರುದಾರ ಮಹರಾಜ ಗೃಹ ವೈಭವದಲ್ಲಿ ಬಾಸ್ಕ್ ಕಂಪನಿಯ ರೆಫ್ರಿಜಿರೇಟರ್‌ನ್ನು ರೂ. 40,000/- ಪಾವತಿಸಿ ಖರೀದಿಸಿದ್ದು, 10 ವರ್ಷಗಳ ವಾರಂಟಿಯನ್ನು ಪಡೆದಿರುತ್ತಾರೆ. 2023ರಲ್ಲಿ ರೆಫ್ರಿಜಿರೇಟರ್ ಹಾಳಾಗಿದ್ದು, ಎದುರುದಾರರ ಟೆಕ್ನಿಷಿಯನ್ ಮನೆಗೆ ಬಂದು ಪರಿಶೀಲಿಸಿ ಕಂಪ್ರೆಸರ್ ಹಾಳಾಗಿದೆ ಎಂದು ಹೊಸ ಕಂಪ್ರೆಸರ್ ಬದಲಾಯಿಸಿದ್ದರು. ಆದರೂ ಪುನಃ ಹಾಳಾಗಿದ್ದು, ದೂರು ನೀಡಿದರೂ ಎದುರುದಾರರು ರಿಪೇರಿ ಮಾಡಿಕೊಡದೆ ಹೊಸ ರೆಫ್ರಿಜಿರೇಟರ್ ತೆಗೆದುಕೊಳ್ಳಲು ತಿಳಿಸಿದರು.
ಈ ಕುರಿತು ಆಯೋಗದ ಮುಂದೆ ಸೂಕ್ತ ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದು, ಪ್ರಕರಣದ ಅಂಶಗಳು ಮತ್ತು ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಗಣಿಸಿ, ಎದುರುದಾರರಿಗೆ ಆಯೋಗವು ನೋಟೀಸ್ ನೀಡಿ ದೂರಿನ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ತಿಳಿಸಿದ್ದು, ದೂರುದಾರರು ರೆಫ್ರಿಜಿರೇಟರ್‌ನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಇರುವುದರಿಂದ ರಿಪೇರಿಗೆ ಬಂದಿರುತ್ತದೆ ಹಾಗೂ ಇದು ತಯಾರಿಕಾ ದೋಷವೆಂದು ನಿರ್ಧರಿಸಲು ಪ್ರಯೋಗಾಲಯದ ವರದಿಯನ್ನು ಸಲ್ಲಿಸಿರುವುದಿಲ್ಲವಾದ ಕಾರಣ ದೂರನ್ನು ವಜಾ ಮಾಡಲು ಎದುರುದಾರರು ಕೋರಿರುತ್ತಾರೆ.
Consumer Disputes Redressal Commission ಅರ್ಜಿದಾರರ ಅಂಶಗಳು, ಪ್ರಮಾಣ ಪತ್ರ, ದಾಖಲೆಗಳನ್ನು ಮತ್ತು ದೂರುದಾರರ ಪರ ವಕೀಲರ ವಾದವನ್ನು ಆಲಿಸಿ, ಎದುರುದಾರರು ಸೇವಾ ನ್ಯೂನತೆ ಎಸಗಿರುತ್ತಾರೆಂದು ಪರಿಗಣಿಸಿ ಎದುರುದಾರರಿಗೆ ರೆಫ್ರಿಜಿರೇಟರ್‌ನ ಬೆಲೆ ರೂ. 40,000/-ಗಳಲ್ಲಿ ದೂರುದಾರರು ರೆಫ್ರಿಜಿರೇಟರ್ ನಾಲ್ಕು ವರ್ಷ ಉಪಯೋಗಿಸಿರುವುದರಿಂದ ಸವಕಳಿಯನ್ನು ಕಳೆದು ರೂ. 30,000/- ಗಳನ್ನು ಶೇ. 9% ಬಡ್ಡಿಯೊಂದಿಗೆ ದೂರದಾರರು ಲೀಗಲ್ ನೋಟಿಸ್ ನೀಡಿದ ದಿನಾಂಕದಿಂದ ಈ ಆದೇಶವಾದ 45 ದಿನಗಳೊಳಗಾಗಿ ಪಾವತಿಸಲು, ತಪ್ಪಿದಲ್ಲಿ ಸದರಿ ಮೊತ್ತಕ್ಕೆ ಶೇ.10 ರಂತೆ ಬಡ್ಡಿಯನ್ನು ಸೇರಿಸಿ, ಈ ಆದೇಶವಾದ ದಿನಾಂಕದಿಂದ ಪೂರಾ ಮೊತ್ತವನ್ನು ನೀಡುವವರೆಗೂ ಕೊಡಬೇಕೆಂದು ಹಾಗೂ ರೂ. 25,000/-ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ. 10,000 ಗಳನ್ನು ವ್ಯಾಜ್ಯದ ಖರ್ಚು ವೆಚ್ಚದ ಬಾಬ್ತಾಗಿ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಜ.20 ರಂದು ಆದೇಶಿಸಿದೆ.
National Voter’s Day ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ನಾವೆಲ್ಲಾ ಪ್ರಯತ್ನಿಸಬೇಕು- ನ್ಯಾ.ಮಂಜುನಾಥ ನಾಯಕ್
National Voter’s Day ಮತದಾನ ಕೇವಲ ಹಕ್ಕಲ್ಲ. ಅದು ನಮ್ಮ ಕರ್ತವ್ಯ. ಹಾಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಾನಗರಪಾಲಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜ.25 ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿಗೆ ಯುವಕರು ಮತದಾನ ಮಾಡುವಲ್ಲಿ ಹಿಂದೆ ಉಳಿದಿದ್ದಾರೆ. ಮತದಾನದ ಮಹತ್ವವನ್ನು ತಿಳಿಯದೆ ನಿರಾಸಕ್ತರಾಗಿದ್ದಾರೆ. ಆದ್ದರಿಂದ ಮತದಾನವೂ ಕೂಡ ಕುಂಠಿತವಾಗುತ್ತಿದೆ. ಮತದಾನದದ ಮಹತ್ವದ ಕುರಿತು ಅರಿವು ಮೂಡಿಸುವಲ್ಲಿ ನಾವೆಲ್ಲಾ ಕೆಲಸ ಮಾಡಬೇಕು ಎಂದರು.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಚುನಾವಣಾ ಅಧಿಕಾರಿಗಳ ತಂಡದ ಪರಿಶ್ರಮದಿಂದ ಮತದಾನದಲ್ಲಿ ಸುಧಾರಣೆಯಾಗಿದೆ. ಅದನ್ನು ಇನ್ನಷ್ಟು ಹೆಚ್ಚಿಸಬೇಕಿದೆ. ಎಲ್ಲರೂ ಮತದಾನದಲ್ಲಿ ಭಾವಹಿಸಬೇಕೆಂಬ ನಿಟ್ಟಿನಲ್ಲಿ ಹೈಕೋರ್ಟ್ ನೋಟಾ ಎಂಬ ಹೊಸ ನಿಯಮ ಜಾರಿ ತಂದಿದೆ. ಆ ಮೂಲಕ ಮತದಾರರು ಮತದಾನದಲ್ಲಿ ಭಾಗವಹಿಸಿ ತಮ್ಮ ನಿಲುವನ್ನು ವ್ಯಕ್ತಪಡಿಸಲು ಅವಕಾಶ ನೀಡಿದೆ ಎಂದರು.
ಮೊದಲೆಲ್ಲಾ 20 ವರ್ಷ ತುಂಬಿದವರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿತ್ತು. 1988 ರಲ್ಲಿ ಅದನ್ನು ತಿದ್ದುಪಡಿ ಮಾಡಿದ ನಂತರ 18 ವರ್ಷ ತುಂಬಿದವರಿಗೆ ಮತದಾನ ಮಾಡುವ ಅವಕಾಶ ದೊರಕಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮನ್ನು ಆಳುವವರು ಯಾರು ಎಂದು ತೀರ್ಮಾನ ಮಾಡಲು ಮತದಾನವನ್ನು ಮಾಡಬೇಕು. ಆ ಮೂಲಕ ಎಲ್ಲರೂ ಮತದಾನದಲ್ಲಿ ಭಾವಹಿಸಬೇಕು ಎಂದು ಕರೆ ನೀಡಿದರು.
National Voter’s Day ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ವಹಿಸಿದ್ದರು.
ಈ ವೇಳೆ ಉತ್ತಮ ಮತಗಟ್ಟೆ ಅಧಿಕಾರಿಗಳನ್ನು, ಕಂಪ್ಯೂಟರ್ ಆಪರೇಟರ್‌ಗಳನ್ನು ಹಾಗೂ ಸ್ವೀಪ್ ಸಮಿತಿ ಅಧಿಕಾರಿಯನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಸ್, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಚ್ಟಾಧಿಕಸರಿ ಜಿ.ಕೆ.ಮಿಥುನ್ ಕುಮಾರ್, ಜಿ.ಪಂ ಸಿಇಓ ಹೇಮಂತ್ ಎನ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಎಸಿ ಸತ್ಯನಾರಾಯಣ, ತಹಶೀಲ್ದಾರ್ ವಿ.ಎಸ್ ರಾಜೀವ್, ಚುನಾವಣಾ ತಹಶೀಲ್ದಾರ್ ಪ್ರದೀಪ್ ಆರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರಿಯಾ ಹಾಗೂ ಮಹಾನಗರಪಾಲಿಕೆ ಆಡಳಿತಾಧಿಕಾರಿಗಳು ಹಾಜರಿದ್ದರು.
Idagunji Ganapathi Temple ಇಡಗುಂಜಿ ಮೇಳಕ್ಕೆ”ಯುನೆಸ್ಕೊ” ಗೌರವ, ಕೆರೆಮನೆ ಶಿವಾನಂದ ಹೆಗಡೆಗೆ ಗೌರವಾರ್ಪಣೆ
Idagunji ganapathi temple ಇಡಗುಂಜಿ ಅಂದರೆ ತಕ್ಷಣ ನಮಗೆ ನೆನಪಿಗೆ ನಿಂತ ನಿಲುವಿನ ಮಹಾಗಣಪತಿಯ ಅಪೂರ್ವ ಮೂರ್ತಿ ಕಣ್ಮುಂದೆ ಬರುತ್ತದೆ.
ಇಡಗುಂಜಿ ಮೇಳ ಅಂದರೆ ನಮಗೆ ಇಡೀ ಯಕ್ಷಗಾನದ ಮದ್ದಳೆ, ಭಾಗವತರ ಕಂಚಿನ ಕಂಠ, ವೇಷತೊಟ್ಟ ಯಕ್ಷಗಾನ ಕಲಾವಿದರು, ಅವರ ಮಾತು, ಹಾವಭಾವ ಏನೆಲ್ಲ ಯಕ್ಷಗಾನದ ವೇದಿಕೆ ಥಟ್ಟನೆ ನೆನಪಾಗುತ್ತದೆ. ಸ್ಥಾಪಕ ಶಿವರಾಮ ಹೆಗಡೆ ನಂತರ ಪುತ್ರರಾದ
ಕರೆಮನೆ ಶಂಭು ಹೆಗಡೆ, ಶಂಭು ಹೆಗಡೆ ಪುತ್ರ ಶಿವಾನಂದ ಹೆಗಡೆ ಅಲ್ಲದೆ ಯುವ ಪೀಳಿಗೆಯ ಶ್ರೀಧರ ಹೆಗಡೆ ತನಕ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ತನ್ನ ಕಲಾ ಪರಂಪರೆಯ
ಮಡಿಹಾಸಿನ ಮೇಲೆ ಕುಣಿದು ಕುಪ್ಪಳಿಸಿದೆ. ಯಕ್ಷಗಾನ ಪ್ರಿಯರ ಮನದಾಳದಲ್ಲಿ ಇಡಗುಂಜಿ ಮೇಳದ ಆಟ ಎಂದರೆ ಬಹುದಿನಗಳ ಹಸಿವೆಗೆ ದೊರಕುವ ರಸದೂಟವೇ ಸರಿ.
ಅವತ್ತು ಏನೆಲ್ಲ ಕೆಲಸ ಇದ್ದರೂ ರಾತ್ರಿ ಎಲ್ಲಾ ಫ್ರೀ ಮಾಡಿಕೊಳ್ಳುವ ಪ್ಲಾನ್ ಹಾಕುವರು ನಮ್ಮ ಯಕ್ಷಗಾನ ಪ್ರಿಯರು.
ಇಡಗುಂಜಿ ಮೇಳಕ್ಕೆ ಈಗ
ಒಂಭತ್ತು ದಶಕಗಳು ಪೂರೈಸಿದ ಸಂಭ್ರಮ.
ಕರ್ನಾಟಕವೇ ಅಲ್ಲದೇ ಹೊರ ರಾಜ್ಯಗಳಲ್ಲಿ ಮೇಳ ಸುಳಿದಾಡಿ
ತನ್ನದೇ ಯಕ್ಷಗಾನದ ಪ್ರತಿಭೆಯಿಂದ ರಸಿಕರ ಮನಸೂರೆಮಾಡಿದೆ. ರಾಷ್ಟ್ರೀಯ ಉತ್ಸವಗಳಲ್ಲಿ ರಾರಾಜಿಸಿದ ಇಡಗುಂಜಿಯ ಮೇಳ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದೆ.
ಈ ವರ್ಷ ಯುನಸ್ಕೋದಿಂದ ಜಾಗತಿಕವಾಗಿ
ಪಾರಂಪರಿಕ ಕಲಾತಂಡವೆಂಬ
ಮನ್ನಣೆ ಪಡೆದು ಮತ್ತಷ್ಟೂ ನಭದತ್ತ ತನ್ನ ಯಕ್ಷ ಚಿತ್ತಾರ ಹರಡಿದೆ. ಇದು ಸುಲಭದ ಸಾಧನೆಯಲ್ಲ ದೇಶೀಯವಾಗಿ
ಈ ಮನ್ನಣೆ ಆರೇಳು ತಂಡಗಳಿಗೆ ಸಿಕ್ಕಿವೆ. ಈ ಸಾಧನೆಯ ಹಿಂದೆ ಕೆರೆಮನೆ ಕುಟುಂಬದ ಶ್ರಮ, ತ್ಯಾಗ, ಅರ್ಪಣಾ ಮನೋಭಾವ ಮತ್ತು ಇಡೀ ಊರಿನವರ ಸಹಕಾರ ಘನವಾಗಿ ನಿಂತಿದೆ.
Idagunji ganapathi temple ಹೊನ್ನಾವರ ಸನಿಹದ ಗುಣವಂತೆ ಎಂಬ ಪುಟ್ಟಗ್ರಾಮದಲ್ಲಿ ಕೆರೆಮನೆ ಶಂಭುಹೆಗಡೆ ಕಲಾಲೋಕವೇ ಮೈದಳೆದು ನಿಂತಿದೆ. ಯಕ್ಷಗಾನವನ್ನ ಒಂದು ಶೈಕ್ಷಣಿಕ ಶಿಸ್ತಾಗಿ ಅಧ್ಯಯನ ಮಾಡುವ
ಅಕಾಡೆಮಿಕ್ ಪ್ರಯತ್ನ ಅಲ್ಲಿ ಸಾಕಾರಗೊಂಡಿದೆ.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ,ಯಕ್ಷಗಾನ ಗುರುಕುಲ,ಪ್ರಾತ್ಯಕ್ಷತೆ ಆಟವೇ ಪಾಠ,ಕಾರ್ಯಾಗಾರಗಳು,ತರಬೇತಿ..ಒಂದೆ ಎರಡೆ ಹೀಗೆ ಹತ್ತು ಹಲವು ಆಯಾಮಗಳಿಂದ ಇಡೀ ಯಕ್ಷಗಾನ ಕಲೆಗಿರುವ ಸಹಸ್ರ ಮುಖಗಳ ಬಗ್ಗೆ ಎಲ್ಲರೂ ನೋಡುವಂತೆ ಮಾಡಲಾಗುತ್ತಿದೆ
ಯಕ್ಷಗಾನ ಕಲಾಪ್ರಪಂಚದ ದಿಗ್ಗಜರೆಲ್ಲರೂ ಈ ಕಲಾವೇದಿಕೆಯ ಹೊನಲುಬೆಳಕಿನಲ್ಲಿ ಬಣ್ಣಹಚ್ಚಿದ್ದಾರೆ. ಕಂಚುಕಂಠದ ಭಾಗವತರು ಪಾತ್ರಗಳಿಗೆ ರಾಗ ಕಂಠ ನೀಡಿದ್ದಾರೆ. ಮದ್ದಳೆ ಪ್ರವೀಣರ ಮಾಂತ್ರಿಕ ಕೈಗಳು ಇಲ್ಲಿ ಸೋತಿಲ್ಲ.. ಅದಕ್ಕೆ ಹೊಯ್ ಕೈಯಾಗಿ ಪಾತ್ರಧಾರಿಗಳ ಮಾತುಗಾರಿಕೆ ಹೆಜ್ಜೆಗಳೂ ದಣಿದಿಲ್ಲ.
ಪ್ರಸ್ತುತ ಇಡಗುಂಜಿ ಮೇಳದ ನಿರ್ದೇಶಕರಾಗಿರುವ ಕೆರೆಮನೆ ಶಿವಾನಂದ ಹೆಗಡೆ ಅವರ ಅವಿರತ ಶ್ರಮದಿಂದಾಗಿ ಗುಣವಂತೆ ಜಾಗತಿಕ ಯಕ್ಷ ನಕ್ಷೆಯಲ್ಲಿ ಮಿನುಗುವಂತಾಗಿದೆ.
ಶಿವಮೊಗ್ಗದ ಯಕ್ಷಗಾನ ಪ್ರೇಮಿಗಳಿಗೆ ಇಡಗುಂಜಿ ಮೇಳ ಬಹಳ ಆಪ್ತವಾಗಿರುವ ಕಲಾತಂಡ. ಅದರ ಕಲಾವಿದರಂತೂ ಬಂಧು ಮಿತ್ರರಂತೆ ಬೆರೆತುಹೋಗಿದ್ದಾರೆ.
ಈ ಬಾರಿ ವಿಶೇಷ ಸಂಗತಿಯೆಂದರೆ
ಜಾಗತಿಕವಾಗಿ ಲಭಿಸಿರುವ “ “ಯುನೆಸ್ಕೊ” ಮನ್ನಣೆ ಕರ್ನಾಟಕವೇ ಹೆಮ್ಮೆ ಪಡುವಂತೆ ಮಾಡಿದೆ. ಇಂತಹ ಅಪೂರ್ವ ಗೌರವಕ್ಕೆ ಭಾಜನವಾಗಿದೆ ಇಡಗುಂಜಿ ಮೇಳ. ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಅವರ
ನೇತೃತ್ವದಲ್ಲಿ “ಸೀತಾಪಹರಣ” ಯಕ್ಷಗಾನ ಪ್ರಸಂಗವನ್ನು ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ
ತಾ.26-1-2025 ರ ಭಾನುವಾರ ಸಂಜೆ 6 ಕ್ಕೆ ಪ್ರದರ್ಶಿಸಲಿದ್ದಾರೆ.
ಜೊತೆಯಲ್ಲಿಯೇ ಯಕ್ಷಗಾನ ಮಂಡಳಿಯ ಮುಂಚೂಣಿಗ
ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಆತ್ಮೀಯ ಸನ್ಮಾನವನ್ನೂ
ಏರ್ಪಡಿಸಲಾಗಿದೆ.
ಶಿವಮೊಗ್ಗದ ಯಕ್ಷಗಾನ ರಸಿಕರು
ಹೆಚ್ವಿನ ಸಂಖ್ಯೆಯಲ್ಲಿ ಅಭಿಮಾನದಿಂದ ಆಗಮಿಸಬೇಕೆಂದು ಶಿವಮೊಗ್ಗ ಅಭ್ಯುದಯ ಸಂಸ್ಥೆಯ ನಿರ್ದೇಶಕ
ಲಕ್ಷ್ಮೀನಾರಾಯಣ ಕಾಶಿ ಕೋರಿದ್ದಾರೆ.
