Monday, March 16, 2026
Monday, March 16, 2026
Home Blog Page 423

Yuva Nidhi Scheme ಯುವನಿಧಿಗೆ ಕಡ್ಡಾಯ‌ ನೋಂದಣಿ‌ ಮಾಡಲು ಕ್ರಮ ಕೈಗೊಳ್ಳಿ- ಸಿ.ಎಸ್.ಚಂದ್ರಭೂಪಾಲ್

0

Yuva Nidhi Scheme ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳ ಕಡ್ಡಾಯ ನೋಂದಣಿಯನ್ನು ಮಾಡಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ್ ಸೂಚಿಸಿದರು.
ಗುರುವಾರ ನಗರದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಯುವನಿಧಿ ವಿಶೇಷ ನೋಂದಣಿ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವನಿಧಿ ಯೋಜನೆಯಡಿ ಈವರೆಗೆ 6273 ಫಲಾನುಭವಿಗಳು ನೋಂದಣಿಯಾಗಿದ್ದು, ಇದರಲ್ಲಿ ಪದವೀಧರರಿಗೆ ಹಾಗೂ ಡಿಪ್ಲೋಮಾ ಪದವೀಧರರಿಗೆ ಸೇರಿದಂತೆ 5300 ಫಲಾನುಭವಿಗಳ ಖಾತೆಗೆ ರೂ. 3000 ಹಾಗೂ ರೂ. 1500 ರಂತೆ ಒಟ್ಟು ರೂ. 9.45 ಕೋಟಿ ಜಮಾ ಮಾಡಲಾಗಿದೆ. ಎಲ್ಲ ಕಾಲೇಜುಗಳಲ್ಲಿ ಪ್ರಾಂಶುಪಾಲರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಫೆಬ್ರವರಿ ಒಳಗೆ ಅರ್ಹ ಫಲಾನುಭವಿಗಳ ನೋಂದಣಿ ಮಾಡಬೇಕೆಂದರು.
ಜಿ.ಪಂ ಸಿಇಓ ಹೇಮಂತ್ ಎನ್ ಮಾತನಾಡಿ, ಯುವನಿಧಿ ನೋಂದಣಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಆಡಳಿತ ಮಂಡಳಿಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳಬೇಕಿದೆ. ಎನ್‌ಎಡಿಯಿಂದ ವಿದ್ಯಾರ್ಥಿಗಳಿಗೆ ನೋಂದಣಿ ಸಮಸ್ಯೆ ಆಗುತ್ತಿದ್ದು, ಇದನ್ನು ಇಲಾಖಾ ಮಟ್ಟದಲ್ಲಿ ಸರಿಪಡಿಸಲಾಗುತ್ತಿದೆ. ಸರ್ಕಾರವು ಕೂಡ ಈ ಕಡೆ ಗಮನ ಹರಿಸುತ್ತಿದೆ ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ 2023-24 ರಲ್ಲಿ ಒಟ್ಟು 15000 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಪದವೀಧರರಾದ 13,000 ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವೀಧರ 2260 ವಿದ್ಯಾರ್ಥಿಗಳು ಇದ್ದಾರೆ. 2023-24 ನೇ ಸಾಲಿನಲ್ಲಿ ಶಿವಮೊಗ್ಗ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬಿಎ, ಬಿಕಾಂ, ಬಿ.ಇಡಿ ಸೇರಿದಂತೆ ಒಟ್ಟು 11,143 ವಿದ್ಯಾರ್ಥಿಗಳು ಈಗಾಗಲೇ ತೇರ್ಗಡೆಯಾಗಿದ್ದಾರೆ. ಇದಲ್ಲದೇ ಕುವೆಂಪು ವಿಶ್ವವಿದ್ಯಾಲಯದ ಅಡಿಯಲ್ಲಿ 84 ಕಾಲೇಜುಗಳಲ್ಲಿ ವಿಶೇಷ ಯುವನಿಧಿ ನೋಂದಣಿ ಅಭಿಯಾನ ಆರಂಭವಾಗಿದೆ. ಆದರೆ ನೋಂದಣಿ ಕುರಿತು ನಿಖರ ಮಾಹಿತಿ ಇಲ್ಲ. ಈ ಕುರಿತು ಇಲಾಖೆಯು ಪ್ರಾಧಿಕಾರಕ್ಕೆ ಸರಿಯಾದ ಅಂಕಿ ಅಂಶಗಳನ್ನು ನೀಡುವ ಮೂಲಕ ವರದಿ ನೀಡಬೇಕು ಎಂದರು.
ತೋಟಗಾರಿಕೆ, ಕೃಷಿ,ಇಂಜಿನಿಯರಿಂಗ್ ಹಾಗೂ ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ಈ ನೋಂದಣಿ ಕುರಿತು ಆಗುತ್ತಿರುವ ಗೊಂದಲಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ತಾಂತ್ರಿಕ ದೋಷಗಳ ಕುರಿತಂತೆ ಜ.28 ರ ಬುಧವಾರದಂದು ಈ ಮೂರು ಕಾಲೇಜುಗಳಿಗೆ ವಿಶೇಷ ತರಬೇತಿಯನ್ನು ನೀಡಲು ತೀರ್ಮಾನ ಕೈಗೊಂಡರು. ಕಾಲೇಜುಗಳಿಗೆ ಪ್ರಾಧಿಕಾರದಿಂದ ಅಧಿಕಾರಿಗಳನ್ನು ಕಳಿಸಿ ಅಲ್ಲಿ ನೋಂದಣಿ ಮಾಡುವುದಾಗಿ ಹೇಳಿದರು. ತಾಂತ್ರಿಕ ದೋಷದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸರಿಪಡಿಸುವುದಾಗಿ ತಿಳಿಸಿದರು.
ಸಭೆಯಲ್ಲಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿಗಳು ಹಾಜರಿದ್ದರು.

Padma Bhushan Award ಹಿರಿಯ ನಟ ಅನಂತನಾಗ್ ಸೇರಿದಂತೆ ರಾಜ್ಯದ ಈರ್ವರಿಗೆ ಪದ್ಮಭೂಷಣ ಪ್ರಶಸ್ತಿ

0

Padma Bhushan Award ಕೇಂದ್ರ ಸರ್ಕಾರವು 2025ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಪ್ರಕಟಿಸಿದೆ.

ಈ ಬಾರಿ 30 ಮಂದಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ವಿವಿಧ ಕ್ಷೇತ್ರಗಳಾದ ಕಲೆ, ಸಾಹಿತ್ಯ, ಸಮಾಜುಮುಖಿ ಕಾರ್ಯ, ಸಾರ್ವಜನಿಕ ವ್ಯವಹಾರ, ವಿಜ್ಞಾನ, ಎಂಜಿನಿಯರಿಂಗ್‌, ವ್ಯಾಪಾರ, ಕೈಗಾರಿಕೆ, ವೈದ್ಯಕೀಯ, ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡುತ್ತಾ ಬಂದಿದೆ.

ಈ ಬಾರಿ ಕಲಾ ವಿಭಗದಿಂದ ರಾಜ್ಯದ ಶ್ರೀ ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ.

Padma Bhushan Award ಪದ್ಮ ಭೂಷಣ ವಿಭಾದಲ್ಲಿ ರಾಜ್ಯದಿಂದ‌ ಇಬ್ಬರು ಪುರಸ್ಕೃತರಾಗಿದ್ದು, ಸಾಹಿತ್ಯ ಮತ್ತು ಶಿಕ್ಷಣ – ಪತ್ರಿಕೋದ್ಯಮದಿಂದ ಶ್ರೀ ಎ. ಸೂರ್ಯಪ್ರಕಾಶ್, ಕಲಾಕ್ಷೇತ್ರದಿಂದ‌ ಶ್ರೀ ಅನಂತ್ ನಾಗ್ ಪುರಸ್ಕೃತರಾದರೆ, ಪದ್ಮಶ್ರೀ ಪ್ರಶಸ್ತಿಗೆ ಕಲೆಯಿಂದ ಶ್ರೀಮತಿ. ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಶ್ರೀ ಹಾಸನ್ ರಘು, ಶ್ರೀ ರಿಕಿ ಗ್ಯಾನ್ ಕೇಜ್, ಶ್ರೀ ವೆಂಕಪ್ಪ ಅಂಬಾಜಿ ಸುಗಟೇಕರ್ ಹಾಗೂ ವ್ಯಾಪಾರ ಮತ್ತು ಕೈಗಾರಿಕೆಯಿಂದ ಶ್ರೀ ಪ್ರಶಾಂತ್ ಪ್ರಕಾಶ್ ಮತ್ತು ವೈದ್ಯಕೀಯ ವಿಭಾಗದಲ್ಲಿ ಶ್ರೀಮತಿ. ವಿಜಯಲಕ್ಷ್ಮಿ ದೇಶಮನೆ ಅವರು ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

Election Commission ಅಧಿಕ ಮತದಾರರ ನೋಂದಣಿ, ಶಿವಮೊಗ್ಗ ವಿಧಾನ ಸಭಾಕ್ಷೇತ್ರಕ್ಕೆ ಪ್ರಶಸ್ತಿ

0

Election Commission 25ನೇ ಜನವರಿ 1950 ರಂದು ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವಾಗಿದ್ದು, 2011 ರಿಂದ ಪ್ರತಿ ವರ್ಷ ಜನವರಿ 25 ರಂದು ದೇಶದಾದ್ಯಂತ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತದೆ.

ರಾಜ್ಯದಲ್ಲಿ ಮತಗಟ್ಟೆ ಮಟ್ಟದಿಂದ ರಾಜ್ಯಮಟ್ಟದವರೆಗೆ ಈ ದಿನವನ್ನು ಆಚರಿಸಲಾಗುತ್ತದೆ.

ಇಂದು ಬೆಂಗಳೂರಿನ ಸರ್. ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್‍ನಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ 15ನೇ ರಾಷ್ಟ್ರೀಯ ಮತದಾರರದಿನ 2025ನ್ನು ಹಮ್ಮಿಕೊಳಲಾಹಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಾರ್ವತ್ರಿಕ ಲೋಕಸಭಾ ಚುನಾವಣೆ – 2024 ರ ಪ್ರಕ್ರಿಯೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಪ್ರಶಸ್ತಿ ವಿತರಣೆ ಮಾಡಿದರು.

ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು‌ ಸಾರ್ವತ್ರಿಕ ಲೋಕಸಭಾ ಚುನಾವಣೆ – 2024 ರ ಪ್ರಕ್ರಿಯೆಯಲ್ಲಿ ಮತದಾರರ ನೋಂದಣಿ ಚುನಾವಣೆ ಪ್ರಕ್ರಿಯೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ, ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿ. ಮುಕ್ತ, ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆಗೆ ಅನುಕೂಲ ಮಾಡಿಕೊಡುವುದರೊಂದಿಗೆ ಮತದಾನದ ಶೇಕಡ ಪ್ರಮಾಣ ಹೆಚ್ಚಿಸಿ, ದೋಷರಹಿತ ಮತದಾರರ ಪಟ್ಟಿಗಳನ್ನು ತಯಾರಿಸಲು ಕಾರಣರಾದ ಡಾ: ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು, ರಾಮನಗರ ಜಿಲ್ಲೆ., ಡಾ: ಕುಮಾರ, ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ. ಶ್ರೀಮತಿ. ಕೆ.ಎಂ. ಜಾನಕಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಬಾಗಲಕೋಟೆ ಜಿಲ್ಲೆ. ಹಾಗೂ ಡಾ.ಸುಶೀಲಾ ಬಿ., ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಯಾದಗಿರಿ ಅವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

Election Commission ಅದೇ ರೀತಿ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳು (ZP CEOs)
ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರಲ್ಲಿ SVEEP ಅಡಿಯಲ್ಲಿ ಮತದಾರರಲ್ಲಿ ಮತದಾರರ ಶಿಕ್ಷಣ, ಮತದಾನದ ಅರಿವು, ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. ವಿಶೇಷಚೇತನ ಮತದಾರರಿಗೆ ಮತದಾನ ಮಾಡಲು ಅಗತ್ಯ ಸೌಲಭ್ಯಗಳನ್ನು ಒದಗಿಸಿರುವುದು. ವಿಶೇಷ ನೈಜ ದುರ್ಬಲ ಬುಡಕಟ್ಟು ಜನಾಂಗದವರಲ್ಲಿ ಮತದಾನದ ಕುರಿತು ಅರಿವು ಮೂಡಿಸಿರುತ್ತಾರೆ. ಒಳಗೊಳ್ಳುವ, ಸುಗಮ ಮತ್ತು ಭಾಗವಹಿಸುವ ಚುನಾವಣೆಯನ್ನು ನಡೆಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ‌, ದಿಗ್ವಿಜಯ್ ಭೊಡ್ಕೆ, ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳು, ರಾಮನಗರ ಜಿಲ್ಲೆ. ಡಾ: ಗೋಪಾಲ್ ಕೃಷ್ಣ ಬಿ, ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳು, ಚಿಕ್ಕಮಗಳೂರು ಜಿಲ್ಲೆ. ಅಕ್ಷಯ್ ಶ್ರೀಧರ್ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳು, ಹಾವೇರಿ ಜಿಲ್ಲೆ. ಡಾ:ಗಿರೀಶ್ ದಿಲೀಪ್ ಬಡೋಳೆ, ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳು. ಬೀದರ್ ಜಿಲ್ಲೆ. ಅವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಮತದಾರರ ನೋಂದಣಿ ಚುನಾವಣೆ ಪ್ರಕ್ರಿಯೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಮತದಾರರ ನೊಂದಣಾಧಿಕಾರಿಗಳು (EROs)
ಅತ್ಯುತ್ತಮವಾಗಿ ಮತದಾರರ ಪಟ್ಟಿಗಳ ಪರಿಷ್ಕರಣೆ ಮಾಡಿರುತ್ತಾರೆ. ಮತದಾರರ ನೋಂದಣಿ ಹೆಚ್ಚಿಸಿರುತ್ತಾರೆ ಹೆಚ್ಚಿನ ಯುವ ಮತದಾರರ ನೋಂದಣಿ ಮಾಡಿರುತ್ತಾರೆ. ಮಹಿಳಾ ಮತದಾರರ ನೋಂದಣಿಗೆ ಪ್ರಾಮುಖ್ಯತೆ ನೀಡಿರುತ್ತಾರೆ. ವಿಶೇಷಚೇತನ ಮತದಾರರ ನೋಂದಣಿಗೆ ವಿಶೇಷ ಪ್ರಾಧಾನ್ಯತೆ ನೀಡಿರುವಂತಹ ಅಧಿಕಾರಿಗಳಾದ ಶಾಂತೀಶ್. ಕೆ. ಆರ್, ಮತದಾರರ ನೊಂದಣಾಧಿಕಾರಿಗಳು, ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ , ಬೆಂಗಳೂರು ಜಿಲ್ಲೆ. ಕೆ. ಮಾಯಣ್ಣ ಗೌಡ, ಮತದಾರರ ನೊಂದಣಾಧಿಕಾರಿಗಳು, ಶಿವಮೊಗ್ಗ ವಿಧಾನ ಸಭಾ ಕ್ಷೇತ್ರ, ಶಿವಮೊಗ್ಗ ಜಿಲ್ಲೆ. ಹರ್ಷವರ್ಧನ ಎಸ್.ಜೆ, ಮತದಾರರ ನೊಂದಣಾಧಿಕಾರಿಗಳು, ಮಂಗಳೂರು ವಿಧಾನ ಸಭಾ ಕ್ಷೇತ್ರ, ದಕ್ಷಿಣ ಕನ್ನಡ ಜಿಲ್ಲೆ. ಅಷಾದ್ ಉರ್ ರೇಹಮಾನ್ ಷರೀಫ್, ಮತದಾರರ ನೊಂದಣಾಧಿಕಾರಿಗಳು, ವಿಜಯಪುರ ನಗರ, ವಿಧಾನಸಭಾ ಕ್ಷೇತ್ರ, ವಿಜಯಪುರ ಜಿಲ್ಲೆ. ಸುಭಾಸ್ ಸುಧಾಕರ್ ಸಂಪಗಾವಿ ಮತದಾರರ ನೊಂದಣಾಧಿಕಾರಿಗಳು, ರಾಯಚೂರು ವಿಧಾನ ಸಭಾ ಕ್ಷೇತ್ರ, ರಾಯಚೂರು ಜಿಲ್ಲೆ ಅವರಿಗೆ ಪ್ರಶಸ್ತಿಗಳನ್ನು ವಿಸ್ತರಿಸಲಾಯಿತು.

ಮತದಾರರ ನೋಂದಣಿ ಚುನಾವಣೆ ಪ್ರಕ್ರಿಯೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಸಹಾಯಕ ಮತದಾರರ ನೊಂದಣಾಧಿಕಾರಿಗಳು (AEROs), ಅತ್ಯುತ್ತಮವಾಗಿ ಮತದಾರರ ಪಟ್ಟಿಗಳ ಪರಿಷ್ಕರಣೆ ಮಾಡಿರುತ್ತಾರೆ. ಮತದಾರರ ನೋಂದಣಿ ಹೆಚ್ಚಿಸಿರುತ್ತಾರೆ. ಹೆಚ್ಚಿನ ಯುವ ಮತದಾರರ ನೋಂದಣಿ ಮಾಡಿರುತ್ತಾರೆ. ಮಹಿಳಾ ಮತದಾರರ ನೋಂದಣಿಗೆ ಪ್ರಾಮುಖ್ಯತೆ ನೀಡಿರುತ್ತಾರೆ. ವಿಶೇಷಚೇತನ ಮತದಾರರ ನೋಂದಣಿಗೆ ವಿಶೇಷ ಪ್ರಾಧ್ಯನ್ನತೆ ನೀಡಿರುವ ಅಧಿಕಾರಿಗಳಾದ ರಾಜೀವ್ ಬಿ ಎಸ್, ಸಹಾಯಕ ಮತದಾರರ ನೊಂದಣಾಧಿಕಾರಿಗಳು, ಮಹಾದೇವಪುರ ವಿಧಾನ ಸಭಾ ಕ್ಷೇತ್ರ , ಬೆಂಗಳೂರು ಜಿಲ್ಲೆ. ಕೆ. ಎಂ. ಮಹೇಶ್ ಕುಮಾರ್, ಸಹಾಯಕ ಮತದಾರರ ನೊಂದಣಾಧಿಕಾರಿಗಳು, ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ, ಮೈಸೂರು ಜಿಲ್ಲೆ. ಶ್ರೀನಿವಾಸ ಮೂರ್ತಿ ಕುಲಕರ್ಣಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳು, ಗದಗ ವಿಧಾನಸಭಾ ಕ್ಷೇತ್ರ , ಗದಗ ಜಿಲ್ಲೆ. ಶ್ರೀಮತಿ ಅಂಜುಂ ತಬಸುಮ್, ಸಹಾಯಕ ಮತದಾರರ ನೊಂದಣಾಧಿಕಾರಿಗಳು, ಹುಮ್ನಾಬಾದ್ ವಿಧಾನಸಭಾ ಕ್ಷೇತ್ರ, ಬೀದರ್ ಜಿಲ್ಲೆ ಅವರಿಗೆ‌ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ರಾಷ್ಟ್ರೀಯ ಮಟ್ಟದ ತರಬೇತುದಾರರು NLMTs ರಾಜ್ಯ ಮಟ್ಟದ ತರಬೇತುದಾರರು (SLMTs) ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (SVEEP) ನ ಅಡಿಯಲ್ಲಿ Voter Education, Voter Enrolment, Voting awareness and Voting ಬಗ್ಗೆ ಯುವ ಮತದಾರರಲ್ಲಿ ಮತದಾರರ ಸಾಕ್ಷರತಾ ಸಂಘಗಳ (Electoral Literacy Clubs) (ELCs), ಮುಖಾಂತರ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಮತದಾನದ ಅರಿವು ಮೂಡಿಸಿರುತ್ತಾರೆ.

ಮುಖ್ಯ ಚುನಾವಣಾಧಿsಕಾರಿಗಳ ಕಛೇರಿಯಿಂದ ನೂತನವಾಗಿ ವಿನ್ಯಾಸಗೊಳಿಸಿರುವ ELCs Management Software ಅನ್ನು ಬಳಸಿಕೊಂಡು ಎಲ್ಲಾ DLMTs, TLMTs ಮತ್ತು ELCs ಸಂಚಾಲಕರಿಗೆ ತರಬೇತಿಯನ್ನು ನೀಡಿರುವಂತಹ ಅಧಿಕಾರಿಗಳಾದ ಶ್ರೀಮತಿ ಶಾಂತಾ ಎಂ, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಟಿ ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ NLMT ಇವರು ಭಾರತ ಚುನಾವಣಾ ಆಯೋಗ, ನವ ದೆಹಲಿಯಲ್ಲಿ ತರಬೇತಿಯನ್ನು ಪಡೆದು ಸುಮಾರು ಆರು ವರ್ಷಗಳಿಂದ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ತರಬೇತುದಾರರಿಗೆ ಯಶಸ್ವಿಯಾಗಿ ತರಬೇತಿಯನ್ನು ನೀಡಿರುತ್ತಾರೆ ಹಾಗೂ ರಾಜ್ಯ ಮಟ್ಟದ ಎಲ್ಲಾ SVEEP ಕಾರ್ಯಕ್ರಮಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳಾದ ಶ್ರೀಮತಿ ಪ್ರಮೀಳಾ ರಾವ್, ಸಹಾಯಕ ಪ್ರಾಧ್ಯಾಪಕರು, ಕೆನರಾ ಕಾಲೇಜು, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಇವರು SLMT ಆಗಿ ಜಿಲ್ಲೆಯ ಎಲ್ಲಾ SLMT ಮತ್ತು DLMT ಗಳಿಗೆ ತರಬೇತಿ ನೀಡುವ ಮುಖಾಂತರ ಶಾಲಾ ಕಾಲೇಜುಗಳಲ್ಲಿ ಮತದಾನದ ಕುರಿತು ಜಾಗೃತಿ ಮಾಡಿರುತ್ತಾರೆ. ವಿಶೇಷ ನೈಜ ದುರ್ಬಲ ಬುಡಕಟ್ಟು ಜನಾಂಗದವರಲ್ಲಿ ಮತದಾನದ ಕುರಿತು ಅರಿವು ಮೂಡಿಸಿ, ಬಂಜಾರು ಮತಗಟ್ಟೆಯಲ್ಲಿ ಮತದಾನನ ಹಿಂದಿನ ದಿನ ಖುದ್ದು ವಾಸ್ತವ್ಯ ಹೂಡಿ ಶೇ. 100 ರಷ್ಟು ಮತದಾನವನ್ನು ಮಾಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ದಿನೇಶ್ ಶೇಠ್, ಕ್ಷೇತ್ರ ಸಮನ್ವಯ ಅಧಿಕಾರಿಗಳು, ಶಿರಸಿ, ಉತ್ತರ ಕನ್ನಡ ಜಿಲ್ಲೆ.NLMT ಇವರು ಭಾರತ ಚುನಾವಣಾ ಆಯೋಗ, ನವ ದೆಹಲಿಯಲ್ಲಿ ತರಬೇತಿಯನ್ನು ಪಡೆದು ಸುಮಾರು ಐದು ವರ್ಷಗಳಿಂದ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ತರಬೇತುದಾರರಿಗೆ ಯಶಸ್ವಿಯಾಗಿ ತರಬೇತಿಯನ್ನು ನೀಡಿರುತ್ತಾರೆ ಹಾಗೂ ರಾಜ್ಯ ಮಟ್ಟದ ಎಲ್ಲಾ SVEEP ಕಾರ್ಯಕ್ರಮಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಸದಾಶಿವಪ್ಪ, ಜೂನಿಯರ್ ಟ್ರೇನಿಂಗ್ ಆಫಿಸರ್,Govt. ITI ಕಾಲೇಜ್ ರಾಯಚೂರು ಜಿಲ್ಲೆ ಇವರು SLMT ಆಗಿ ಜಿಲ್ಲೆಯ ಎಲ್ಲಾ DLMT ಮತ್ತು TLMT ಗಳಿಗೆ ತರಬೇತಿ ನೀಡುವ ಮುಖಾಂತರ ಶಾಲಾ ಕಾಲೇಜುಗಳಲ್ಲಿ ಮತದಾನದ ಕುರಿತು ಜಾಗೃತಿ ಮಾಡಿರುತ್ತಾರೆ ಈ ಎಲ್ಲಾ ಅಧಿಕಾರಿಗಳಿಗೂ‌ ಸಹ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮತಗಟ್ಟೆ ಮಟ್ಟದ ಅಧಿಕಾರಿಗಳಾದ (BLOs) ಮತದಾರರ ನೋಂದಣಿ ಚುನಾವಣೆ ಪ್ರಕ್ರಿಯೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳು (BLOs) ಮನೆ ಮನೆ ಭೇಟಿ ನೀಡಿ ಅರ್ಹ ಮತದಾರರನ್ನು ಗುರುತಿಸಿ ನೋಂದಣಿ ಮಾಡಿಸಿರುತ್ತಾರೆ.
EVM, VVPAT ನಗಳನ್ನು ಬಳಸಿ ಮತದಾನ ಮಾಡುವ ವಿಧಾನದ ಬಗ್ಗೆ ಮತದಾರರಿಗೆ ಅರಿವು ಮೂಡಿಸಿರುತ್ತಾರೆ. ಆರೋಗ್ಯಕರ ಮತದಾರರ ಪಟ್ಟಿಗಳ ತಯಾರಿಕೆಗಾಗಿ ಮೃತ ಹಾಗೂ ಸ್ಥಳಾಂತರಗೊಂಡ ಮತದಾರರನ್ನು ಗುರುತಿಸಿ ಅಂತಹವರ ಹೆಸರುಗಳನ್ನು ತೆಗೆದು ಹಾಕಲು ಕ್ರಮವಹಿಸಿರುವಂತಹ ಶ್ರೀಮತಿ ಕುಸುಮಾ. ಎಮ್. ಅಂಗನವಾಡಿ ಶಿಕ್ಷಕರು, ಭೂತ್ ಮಟ್ಟದ ಅಧಿಕಾರಿಗಳು ಗಾಜನೂರು ಮತಗಟ್ಟೆ, ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ ಶಿವಮೊಗ್ಗ ಜಿಲ್ಲೆ. ಶ್ರೀಮತಿ ಮಧುಮಾಲಾ, ಅಂಗನವಾಡಿ ಶಿಕ್ಷಕರು, ಭೂತ್ ಮಟ್ಟದ ಅಧಿಕಾರಿಗಳು ಬಂಜಾರು ಮತಗಟ್ಟೆ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆ. ಶಶಿಧರ್ ಜೆ. ಸರ್ ದೇಶಪಾಂಡೆ ಸಹಾಯಕ ಶಿಕ್ಷಕರು, ಭೂತ್ ಮಟ್ಟದ ಅಧಿಕಾರಿಗಳು ನಿಂಗಯ್ಯ ನಗರ ಮತಗಟ್ಟೆ, ಗೋಕಾಕ ವಿಧಾನ ಸಭಾ ಕ್ಷೇತ್ರ ಬೆಳಗಾವಿ ಜಿಲ್ಲೆ. ಕೊಟ್ರೇಶ್ ಕೆ ಸಹಾಯಕ ಶಿಕ್ಷಕರು, ಭೂತ್ ಮಟ್ಟದ ಅಧಿಕಾರಿಗಳು ಮತಗಟ್ಟೆ ಹೊಸಹಳ್ಳಿ ಮತಗಟ್ಟೆ, ಕೂಡ್ಲಗಿ ವಿಧಾನ ಸಭಾ ಕ್ಷೇತ್ರ, ವಿಜಯನಗರ ಜಿಲ್ಲೆ ಅವರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಮತದಾರರ ನೋಂದಣಿ ಚುನಾವಣೆ ಪ್ರಕ್ರಿಯೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ (ELCs), ಭಾರತ ಚುನಾವಣಾ ಆಯೋಗವು ನಿಗದಿಪಡಿಸಿದ Calendar of events ಪ್ರಕಾರ ವಿವಿಧ ಕಾರ್ಯ ಚಟುವಟಿಕೆಗಳನ್ನು ಕೈಗೊಂಡು, ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಶಾಲಾ ಕಾಲೆಜುಗಳಲ್ಲಿ ಪ್ರಬಂಧ, ಚರ್ಚಾಸ್ಪರ್ಧೆ, ರಸಪ್ರಶ್ನೆ ಮತ್ತು ಬಿತ್ತಿಚಿತ್ರ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದರ ಮುಖಾಂತರ ಭವಿಷ್ಯದ ಮತ್ತು ಯುವ ಮತದಾರ ವಿದ್ಯಾರ್ಥಿಗಳಲ್ಲಿ Voter Education, Voter Enrolment, Voting awareness and Voting ಬಗ್ಗೆ ಅರಿವು ಮೂಡಿಸುವಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಮತದಾರರ ಸಾಕ್ಷರತಾ ಸಂಘಗಳು (Electoral Literacy Clubs) (ELCs), ಸರ್ಕಾರಿ ಪದವಿಪೂರ್ವ ಕಾಲೇಜು, ಮಲ್ಲೇಶ್ವರಂ ಬೆಂಗಳೂರು. ಸಂಸ್ಥೆಯ ಮತದಾರರ ಸಾಕ್ಷರತಾ ಸಂಘದ ಸಂಚಾಲಕರು ಶ್ರೀಮತಿ ಭಾರತಿ ಸಿ, ರಾಜ್ಯ ಶಾಸ್ತ್ರ ಉಪನ್ಯಾಸಕರು. ಸರ್ಕಾರಿ ಪ್ರೌಢ ಶಾಲೆ, ಆಲೂರು, ಬೈಂದೂರು, ಉಡುಪಿ ಜಿಲ್ಲೆ. ಮತದಾರರ ಸಾಕ್ಷರತಾ ಸಂಘದ ಸಂಚಾಲಕರು ಉದಯಕುಮಾರ್ ಶೆಟ್ಟಿ, ಸಹ ಶಿಕ್ಷಕರು. ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಹುಬ್ಬಳ್ಳಿ, ಧಾರವಾಡ ಜಿಲ್ಲೆ. ಸಂಸ್ಥೆಯ ಮತದಾರರ ಸಾಕ್ಷರತಾ ಸಂಘದ ಸಂಚಾಲಕರು ಶ್ರೀಮತಿ ಮೆಧಾ ಜಯವಂತ ಎಸ್.ಬಿ. ಹೆಚ್, ಸರ್ಕಾರಿ ಪ್ರೌಢ ಶಾಲೆ, ಹಿರೆಕೊಳಚಿ, ವಿಜಯನಗರ ಜಿಲ್ಲೆ. ಸಂಸ್ಥೆಯ ಮತದಾರರ ಸಾಕ್ಷರತಾ ಸಂಘದ ಸಂಚಾಲಕರು ಬನ್ನೆಪ್ಪ ಸಹಶಿಕ್ಷಕರು ಇವರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.

Shivamogga City Corporation ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಗಣರಾಜ್ಯೋತ್ಸವ ‌ಸಂಭ್ರಮ

0

Shivamogga City Corporation ಭಾರತದ ಪರಮ ಪವಿತ್ರ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದ ಸುದಿನ. ಶಿವಮೊಗ್ಗ ಮಹಾನಗರ ಪಾಲಿಕೆಯ ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭಾಗವಹಿಸಿ, ಗಣರಾಜ್ಯೋತ್ಸವದ ಶುಭ ಕೋರಿದರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು

Republic Day ಜಿಲ್ಲಾ ವಾಣಿಜ್ಯ & ಕೈಗಾರಿಕಾ ಸಂಘದಲ್ಲಿ‌ ಗಣರಾಜ್ಯೋತ್ಸವ ಧ್ವಜಾರೋಹಣ

0

ಗಣರಾಜ್ಯೋತ್ಸವ ಅಂಗವಾಗಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದ ಆವರಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಧ್ವಜಾರೋಹಣ ನೆರವೇರಿಸಿದರು.

Republic Day ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರಾದ ಕೆ.ವಿ.ವಸಂತ್‌ಕುಮಾರ್, ಡಿ.ಎಂ.ಶಂಕರಪ್ಪ, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಎಸ್.ಎಸ್.ಉದಯಕುಮಾರ್, ಗಣೇಶ ಎಂ.ಅಂಗಡಿ, ವಿನೋದ್‌ಕುಮಾರ್ ಜೈನ್, ಶರತ್, ಕೆ.ಎನ್.ರಾಜಶೇಖರ್, ಕೆ.ಬಿ.ಶಿವಕುಮಾರ್, ಡಾ. ಲಕ್ಷ್ಮೀದೇವಿ ಗೋಪಿನಾಥ್, ರವಿಪ್ರಕಾಶ್ ಜನ್ನಿ, ಪಿ.ಎಸ್.ಹಾಲಸ್ವಾಮಿ, ಡಿ.ಎಸ್.ನಟರಾಜ್, ಎಂ.ಸಿ.ದೇವರಾಜ, ಕೆ.ಕೆ.ಚಂದ್ರಶೇಖರ್, ಪ್ರಶಾಂತ್ ಶಾಸ್ತ್ರಿ ಇದ್ದರು.

Owners and Traders Association ಹೋಟೆಲ್ ಮಾಲೀಕರ ಸಂಘಟನೆ ಅಧ್ಯಕ್ಷರಾಗಿ‌ ಕೆ.ಬಸವರಾಜ್‌ ಆಯ್ಕೆ

0

Owners and Traders Association ಹೋಟೆಲ್ ಮಾಲೀಕರ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕೆ.ಬಸವರಾಜ್ ಅವರನ್ನು ಶಿವಮೊಗ್ಗ ನಗರದ ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ವತಿಯಿಂದ ಅಭಿನಂದಿಸಲಾಯಿತು.

ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ಅಧ್ಯಕ್ಷ ಎ.ಎಚ್.ಸುನೀಲ್ ಮಾತನಾಡಿ, ಹೋಟೆಲ್ ನಡೆಸುತ್ತಿರುವ ಎಲ್ಲರೂ ಒಟ್ಟುಗೂಡಿ ಸಂಘ ಮುನ್ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಹೋಟೆಲ್ ನಡೆಸುವ ಎಲ್ಲರಿಗೂ ಬೆಂಬಲವಾಗಿ ಸಂಘವು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಸಂಘಟನೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿಯು ಕಾರ್ಯೋನ್ಮುಖವಾಗಬೇಕು. ಹೋಟೆಲ್ ಮಾಲೀಕರ ಬಳಕೆದಾರರ ಸಹಕಾರ ಸಂಘದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಳ್ಳುವ ಮೂಲಕ ಸಂಘದ ವ್ಯಾಪ್ತಿ ಹೆಚ್ಚಿಸಬೇಕು. ಹೋಟೆಲ್ ನಡೆಸುವವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಕೆಲಸವಾಗಬೇಕು ಎಂದು ತಿಳಿಸಿದರು.

Owners and Traders Association ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್ ಮಾತನಾಡಿ, ಸ್ವಾಗತ್ ಕ್ಯಾಂಟೀನ್ ಬಸಣ್ಣ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತೋಷದ ಸಂಗತಿ. ಸಂಘಟನೆ ಬಲ ಹೆಚ್ಚಿಸಿಕೊಂಡು ಕಾರ್ಯ ನಿರ್ವಹಿಸಲಿ ಎಂದು ಶುಭ ಕೋರಿದರು.

ಗಾಂಧಿಬಜಾರ್ ಕಟ್ಟಡ ಮಾಲೀಕರು ಹಾಗೂ ವರ್ತಕರ ಸಂಘದ ಜಿ.ಮಧು, ಪ್ರಭಾಕರ ಗೌಡ, ಆಶೀಸ್ ಜಿ.ಶೇಟ್, ಸದಾನಂದ, ಗಣೇಶ್, ಸುನೀಲ್‌ಕುಮಾರ್, ರಂಗನಾಥ್, ಶ್ರೀನಿವಾಸ್, ಜನ್ನ, ರಾಜು, ಬಾಬು ಮತ್ತಿತರರು ಉಪಸ್ಥಿತರಿದ್ದರು.

Forest Department ಆನೆ ದಾಳಿಯಿಂದ ಆತಂಕದಲ್ಲಿ ಸಿರಿಗೆರೆ ಭಾಗದ ರೈತರು, ಅರಣ್ಯ ಇಲಾಖೆ ಮೌನ?

0

Forest Department ಇತ್ತೀಚೆಗೆ ಆನೆಗಳ ಗುಂಪು ದಾಳಿಯಿಂದಾಗಿ ಸಿರಿಗೆರೆ ಆಯನೂರು ವಿಭಾಗದ ರೈತರು ಕಂಗೆಟ್ಟಿದ್ದಾರೆ.
ಇವತ್ತು‌ ಬೆಳಿಗ್ಗೆ ಆರು ಗಂಟೆಗೇ ಸ್ಷಷ್ಟ‌ ಹಗಲಿನಲ್ಲಿ
ಆನೆಗುಂಪು ರಾಜಾರೋಷವಾಗಿ‌‌ ಸಿರಿಗೆರೆಯ ಹೊಲಗದ್ದೆಗಳಲ್ಲಿ‌ ಕಾಲ್ನಡಿಗೆ ಜಾಥಾ ಬಂದಿವೆ.
ಸಿರಿಗೆರೆಯ ಕೃಷಿಕರು
ಜೀವಭಯ‌ ಪಡುವಂತಾಗಿದೆ. ಇದಕ್ಕೆ ಪೂರ್ಣವಿರಾಮವೇ ಇಲ್ಲವೆ? ಎಂದು ಕಣ್ಣುಕಣ್ಣು ಬಿಡುತ್ತಿದ್ದಾರೆ.

ಪದೇಪದೇ ಆನೆಗಳು ಬಾಳೆ ,ಅಡಿಕೆ ತೋಟಗಳಿಗೆ, ಮೆಕ್ಕೆ ಜೋಳದ ಹೊಲಗಳಿಗೆ ದಾಳಿಯಿಟ್ಟಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಹಾನಿಗೆ ಕಾರಣವಾಗಿವೆ.
ದಾಳಿ ಆದಾಗಲೆಲ್ಲ ಒಂದಲ್ಲ ಒಂದು‌ಕಾರಣ ಹೇಳಿ ರೈತರನ್ನ ಸುಮ್ಮನಾಗಿಸುವ ಕೆಲಸ ಅರಣ್ಯ ಇಲಾಖೆ ಮಾಡುತ್ತಿದೆ.

“ವನ್ಯ ಪ್ರಾಣಿಗಳನ್ನ ರಕ್ಷಿಸಿ” ಎಂಬ ಘೋಷಣೆಯನ್ನ ಮಕ್ಕಳಿಂದಾಗಿಯಾಗಿ ದೊಡ್ಡವತ ತನಕ ಬಾಯಿಪಾಠವಾಗಿದೆ.
ಈಗ ಗ್ರಾಮಸ್ಥರು
” ವನ್ಯ ಪ್ರಾಣಿಗಳಿಂದ ರೈತರ ಬೆಳೆ ರಕ್ಷಿಸಿ” ಎಂಬ ಘೋಷಣೆಯನ್ನ ಅರಣ್ಯ ಇಲಾಖೆಗ ರವಾನಿಸ ಬೇಕಿದೆ.
ಇಲ್ಲಿಯವರೆಗೆ ಆನೆದಾಳಿಗೆ ಬೆಳೆಗಳಷ್ಟೇ ಅಲ್ಲ ಗ್ರಾಮಸ್ಥರ ಜೀವ ಬಲಿ‌ಯಾಗಿದೆ.
ಕೇವಲ ಪರಿಹಾರ ನೀಡಿ ಕೈತೊಳೆದುಕೊಂಡರೆ
ಆನೆದಾಳಿ ಸಮಸ್ಯೆ
ಬಗೆಹರಿಯದು. Forest Department ಈ ಸತ್ಯ ಅರಣ್ಯ ಇಲಾಖೆಯವರಿಗೂ ತಿಳಿದಿದೆ
ಈಗ ರೈತ ಸಮುದಾಯ‌ಎಲ್ಲ ರೀತಿಯ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆದಿದೆ.
ಆದರೂ ಆನೆ ಗುಂಪನ್ನ ನಿಯಂತ್ರಿಸಿಲ್ಲ.
ಈಗ ಉಳಿದಿರುವುದು ಒಂದೇ ಮಾರ್ಗ.
ನಮ್ಮ ಜಿಲ್ಲಾ ಉಸ್ತುವಾರಿ ಸಚಿವ‌
ಮಧು ಬಂಗಾರಪ್ಪ ಅವರು
ತಕ್ಷಣ ಮಧ್ಯ ಪ್ತವೇಶಿಸಿ ರೈತರ ಸಮಸ್ಯೆಗೆ ಕೂಡಲೇ
ಸೂಕ್ತ ಪರಿಹಾರ ಕಂಡು ಹಿಡಿಯ ಬೇಕಿದೆ.
ಇಲ್ಲದದ್ದರೆ ಇದು ಶಿವಮೊಗ್ಗ ಪ್ರದೇಶದ ಭೀಕರ ,ಗಂಭೀರ ಸಮಸ್ಯೆಯಾಗಿ ತಲೆದೋರುವುದರಲ್ಲಿ‌ಸಂದೇಹವಿಲ್ಲ.

Republic Day ನಮ್ಮ ಸಂವಿಧಾನ ವಿಶ್ವಕ್ಕೇ ಮಾದರಿ. ಪ್ರಗತಿಯ ಹಾದಿಯಲ್ಲಿ ಶಿವಮೊಗ್ಗ- ಸಚಿವ ಮಧು ಬಂಗಾರಪ್ಪ

0

Republic Day ವಿಶ್ವದ ಭೂಪಟದಲ್ಲಿ ಹಲವು ಭಾಷೆ, ಧರ್ಮ, ಪ್ರಾಂತ್ಯಗಳಿಂದ ಕೂಡಿರುವ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರ ನಮ್ಮ ಭಾರತ. ಐಕ್ಯತೆ, ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ಬಲಿಷ್ಠ ರಾಷ್ಟ್ರವಾಗಿ ನಮ್ಮ ದೇಶ ಬೆಳೆದು ನಿಂತಿದೆ ಎಂದು‌ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ನುಡಿದರು.

ಜಿಲ್ಲಾ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಜ.26 ರಂದು ನಗರದ ಡಿಎಆರ್ ಪೊಲೀಸ್ ಪೆರೇಡ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ 76 ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಡಾ| ಬಿ. ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ವಿಶ್ವಕ್ಕೆ ಮಾದರಿಯಾಗಿರುವ ನಮ್ಮ ಸಂವಿಧಾನ ರೂಪುಗೊಂಡಿದೆ. ನಾವು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡ ದಿನದಿಂದ ನಮ್ಮ ಸಂವಿಧಾನ ಜಾರಿಗೆ ಬಂದಿದೆ. ಅದುವೇ ಗಣರಾಜ್ಯ ದಿನ.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಹೇಳಿದಂತೆ ನ್ಯಾಯವೆಂದರೆ, ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆ, ಅವರ ಈ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಧ್ಯೇಯ ನಮ್ಮದು.
ಭಾರತವನ್ನು ಬಲಾಡ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ನಮ್ಮ ಅನೇಕ ನಾಯಕರನ್ನು, ಯೋಧರು ಹಾಗೂ ದೇಶಾಭಿಮಾನಿಗಳನ್ನು ನೆನೆಯುವುದು ಮತ್ತು ಅವರು ಆಶಿಸಿದಂತೆ ರಾಷ್ಟ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.
ರಾಜ್ಯದ ಜನಪ್ರಿಯ ಮುಖ್ಯ ಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯ ನವರ ನೇತೃತ್ವದ ನಮ್ಮ ಸರ್ಕಾರ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದಲ್ಲಿ ನಂಬಿಕೆಯಿರಿಸಿದೆ. ಹಲವು ಹೊಸ ಜನಪರ ಯೋಜನೆಗಳ ಮೂಲಕ ಶಿಕ್ಷಣ,ಆರೋಗ್ಯ, ಕೃಷಿ ಗ್ರಾಮೀಣಾಭಿವೃದ್ಧಿ, ನೀರಾವರಿ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಗಮನಹರಿಸಿದೆ.
ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಮನೆಯ ಲಕ್ಷಾಂತರ ಫಲಾನುಭವಿಗಳಿಗೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

Republic Day ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೆ

  • ಶಕ್ತಿ ಯೋಜನೆಯಡಿ 3.85 ಕೋಟಿ ಮಹಿಳೆಯರು ಪ್ರಯಾಣಿಸಿ ಈ ಯೋಜನೆಯ ಸೌಲಭ್ಯ ಪಡೆದಿರುತ್ತಾರೆ.
  • ಗೃಹ ಜ್ಯೋತಿ ಯೋಜನೆಯಡಿ 4.84 ಲಕ್ಷ ಕುಟುಂಬಗಳು ರೂ.332 ಕೋಟಿ ಮೊತ್ತದ ಸಬ್ಸಿಡಿ ಪಡೆದಿದ್ದಾರೆ.
  • ಗೃಹ ಲಕ್ಷ್ಮೀ ಯೋಜನೆಯಡಿ 3.87 ಲಕ್ಷ ಫಲಾನುಭವಿ ಮಹಿಳೆಯರು ಈವರೆಗೆ ರೂ.773 ಕೋಟಿ ಮೊತ್ತದ ಪ್ರಯೋಜನವನ್ನು ಪಡೆದಿದ್ದಾರೆ.
  • ಅನ್ನ ಭಾಗ್ಯ ಯೋಜನೆಯಡಿ 3.60 ಲಕ್ಷ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆ.ಜಿ ಉಚಿತ ಅಕ್ಕಿಯ ಜೊತೆಗೆ ಫಲಾನುಭವಿಗಳ ಖಾತೆಗೆ ನೇರವಾಗಿ ರೂ.170 ಗಳಂತೆ ರೂ.298 ಕೋಟಿಯಷ್ಟು ಮೊತ್ತವನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ.
  • ಯುವನಿಧಿ ಯೋಜನೆಯಡಿ 6273 ವಿದ್ಯಾರ್ಥಿಗಳಿಗೆ ರೂ.9.50 ಕೋಟಿ ಮೊತ್ತವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ.
    ಜಿಲ್ಲೆಯ ಜನರಿಗೆ ಅನುಕೂಲವಾಗಲು ನಗರದ ಹೃದಯ ಭಾಗದಲ್ಲಿ ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಗಳನ್ನು ಒಳಗೊಂಡ ನೂತನ ಜಿಲ್ಲಾಡಳಿತ ಭವನವನ್ನು ರೂ.200 ಕೋಟಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
    ನಗರದ ಹೊರವಲಯದ ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ಕುವೆಂಪು ವಿಮಾನ ನಿಲ್ದಾಣ ಸದಾ ಬಳಸಲು ಅನುಕೂಲವಾಗುವಂತೆ ಈಗಾಗಲೇ 10 ಕೋಟಿ ರೂ.ಗಳ ವೆಚ್ಚದಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ.
    ನಗರದ ಮಧ್ಯಭಾಗದಲ್ಲಿ 46 ಎಕರೆ ವಿಶಾಲ ಪ್ರದೇಶದಲ್ಲಿರುವ ಅಲ್ಲಮಪ್ರಭು ಉದ್ಯಾನವನದ ಅಭಿವೃದ್ಧಿಗೆ ಈಗಾಗಲೇ ಸರ್ಕಾರವು 5 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಹಾಗೂ ಸಂವಿಧಾನದ ಮಹತ್ವವನ್ನು ಸಾರುವ ಕಾರ್ಯಕ್ರಮದ ಭಾಗವಾಗಿ ರಾಜ್ಯದ ಎಲ್ಲೆಡೆ ಸಂವಿಧಾನದ ಪೀಠಿಕೆ ವಾಚನ ನಡೆಯುತ್ತಿರುವುದು ತಮಗೆಲ್ಲ ತಿಳಿದ ಸಂಗತಿಯಾಗಿದೆ. ಇಂದು ನಗರದ ಅಲ್ಲಮಪ್ರಭು ಉದ್ಯಾನವನದಲ್ಲಿ ಸಂವಿಧಾನ ಪೀಠಿಕೆಯನ್ನು ಅನಾವರಣ ಗೊಳಿಸಲಾಗುತ್ತಿದೆ.
    ಸೊರಬ ತಾಲೂಕಿನ ವರದಾ ನದಿಗೆ ಅಡ್ಡಲಾಗಿ ಸರಣಿ ಬ್ಯಾರೇಜ್ ಗಳ ನಿರ್ಮಾಣಕ್ಕಾಗಿ 53 ಕೋಟಿಗಳ ಅನುದಾನ ಬಿಡುಗಡೆಯಾಗಿದೆ. ಈ ಯೋಜನೆಯಿಂದ ನದಿ ಪಾತ್ರದ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ.
    ರಾಜ್ಯಾದ್ಯಾಂತ ಸುಮಾರು 13,500 ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಶಿಕ್ಷಕರ ಆಯ್ಕೆಪಟ್ಟಿಯಲ್ಲಿ 436 ಮಂದಿ ಆಯ್ಕೆಯಾಗಿದ್ದು, ಈಗಾಗಲೇ 398 ಅಭ್ಯರ್ಥಿಗಳು ನೇಮಕಾತಿ ಹೊಂದಿದ್ದಾರೆ. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಒಂದೇ ಸೂರಿನಲ್ಲಿ ಎಲ್.ಕೆ.ಜಿ. ಯಿಂದ ಪಿ.ಯು.ಸಿ ವರೆಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ 10 ಪಬ್ಲಿಕ್ ಶಾಲೆಗಳನ್ನು ತೆರೆಯಲಾಗಿದೆ. ಈ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು 8.00ಕೋಟಿ ಹಣ ಬಿಡುಗಡೆಗೊಳಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 27 ಶಾಲೆಗಳನ್ನು ಆರಂಭಿಸಲು ಯೋಜಿಸಿದೆ.
    ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಸಕಾಲದಲ್ಲಿ ಮಳೆಯಾಗಿದ್ದರಿಂದಾಗಿ ಜಿಲ್ಲೆಯ ಎಲ್ಲಾ ಕೆರೆ ಕಟ್ಟೆ – ಕಾಲುವೆ. ಜಲಾಶಯಗಳು ಭರ್ತಿಯಾಗಿವೆ. ಕೃಷಿ ಚಟುವಟಿಕೆಗಳು ನಿರಂತರವಾಗಿದ್ದು, ನಿರೀಕ್ಷೆಯಂತೆ ಉತ್ತಮ ಇಳುವರಿ ಬಂದಿದೆ. ಇದರಿಂದಾಗಿ ರೈತರ ಮುಖದಲ್ಲಿ ಮಂದಹಾಸ ಕಾಣುವಂತಾಗಿದೆ.
    ಅಂತೆಯೇ ಜಿಲ್ಲೆಯಲ್ಲಿ ಹಲವು ದಶಕಗಳಿಂದ ಇತ್ಯರ್ಥವಾಗದೇ ಉಳಿದಿರುವ ಶರಾವತಿ ಮುಳುಗಡೆ ಸಂತ್ರಸ್ಥರು ಹಾಗೂ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಗಮನಹರಿಸಲಾಗಿದೆ. ಈಸಮಸ್ಯೆಗೆ ತ್ವರಿತಗತಿಯಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತದ ಸುಪ್ರೀಂ‌ಕೋರ್ಟ್ ನಲ್ಲಿ ದಾಖಲಿಸಿರುವ ಮೊಕದ್ದಮೆಯನ್ನು ನಿಭಾಯಿಸಲು ರಾಜ್ಯ ಸರ್ಕಾರವು ಕಾನೂನು ಪರಿಣಿತರೊಂದಿಗೆ ಸಮಾಲೋಚನೆ ನಡೆಸಿ, ಉತ್ತಮ ನ್ಯಾಯವಾದಿಯನ್ನು ನೇಮಿಸಿದೆ. ಶೀಘ್ರದಲ್ಲಿ ಜನಪರವಾದ ತೀರ್ಪು ಬರುವ ನಿರೀಕ್ಷೆ ನಮ್ಮದಾಗಿದೆ.
    ಸಹಸ್ರಾರು ಸಂಖ್ಯೆಯ ನವಜಾತ ಶಿಶುಗಳಿಗೆ ಅನುಕೂಲವಾಗುವಂತೆ ಸಿಮ್ಸ್ ಸಹಯೋಗದೊಂದಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ 75ಲಕ್ಷ ರೂ.ಗಳ ವೆಚ್ಚದಲ್ಲಿ ಎದೆಹಾಲು ಸಂಗ್ರಹ ಕೇಂದ್ರವನ್ನು ಆರಂಭಿಸಲಾಗಿದೆ. ಸುಮಾರು 600ಕ್ಕೂ ಹೆಚ್ಚಿನ ಮಕ್ಕಳು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.
    ಕರ್ನಾಟಕ ಬೈನ್ ಹೆಲ್ತ್ ಇನಿಶಿಯೇಟಿವ್ ಯೋಜನೆಯಡಿ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಮೆದುಳಿನ ಆರೋಗ್ಯದ ಕುರಿತು ವಿಶೇಷ ಕಾರ್ಯಕ್ರಮ ಹಾಗೂ ತಪಾಸಣೆಗಳನ್ನು ನಡೆಸಲಾಗುತ್ತಿದೆ.
    ವಿಶೇಷವಾಗಿ ಶಿಕ್ಷಣ, ಸಂಪರ್ಕ, ಮಾರುಕಟ್ಟೆ ಪ್ರವಾಸೋದ್ಯಮ, ಕೈಗಾರಿಕೆ ಮತ್ತಿತರ ಕ್ಷೇತ್ರಗಳನ್ನು ಒಳಗೊಂಡು ಜಿಲ್ಲೆಯನ್ನು ಎಲ್ಲಾ ಆಯಾಮಗಳಲ್ಲೂ, ಕ್ಷೇತ್ರಗಳಲ್ಲೂ ಪ್ರಾತಿನಿಧ್ಯ ದೊರೆಯುವಂತೆ ಸವಾರ್ಂಗೀಣ ವಿಕಾಸಗೊಳಿಸುವ ಅಭಿಲಾಷೆ ನಮ್ಮದಾಗಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ನಮ್ಮ ರಾಜ್ಯ ಅಭಿವೃದ್ಧಿ ಸಾಧಿಸುತ್ತಿದೆ.
    ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಇತರರ ಹಕ್ಕುಗಳನ್ನು ಗೌರವಿಸುವ, ಶತಮಾನಗಳಿಂದ ನಾವು ಕಾಯ್ದುಕೊಂಡು ಬಂದಿರುವ ಬಹು ಸಂಸ್ಕೃತಿಯನ್ನು ಉಳಿಸಲು ನಾವು ಪಣತೊಡಬೇಕಾಗಿದೆ. ಅಂಬೇಡ್ಕರ ರವರ ಆಶಯಗಳನ್ನು ಅರಿತು ಅದರಂತೆ ನಡೆದುಕೊಳ್ಳುವುದು ಅಗತ್ಯವಾಗಿದೆ ಎಂದರು.
    ಪೆರೇಡ್ ಕಮಾಂಡರ್ ಪ್ರಶಾಂತ್ ಕೆ.
    ಎಸ್. ಕನ್ನಡದಲ್ಲಿ‌ ಆದೇಶ ನೀಡಿದರು.‌ ೨೮ ತಂಡಗಳು ಕವಾಯಿತಿನಲ್ಲಿ ಪಾಲ್ಗೊಂಡಿದ್ದವು.
    ಪ್ರಥಮ ಬಾರಿಗೆ ಪೌರ ಕಾರ್ಮಿಕರ ವಿಶೇಷ ತುಕಡಿ ಶಿಸ್ತುಬದ್ದ ಪಥ ಸಂಚಲನ ನಡೆಸಿ, ಎಲ್ಲರ ಗಮನ ಸೆಳೆಯಿತು.
    ಶಾಲಾ ವಿದ್ಯಾರ್ಥಿಗಳು ನೃತ್ಯ ರೂಪಕ ಪ್ರದರ್ಶನ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
    ಅತ್ಯುತ್ತಮ ಸೇವೆ ಸಲ್ಲಿಸಿದ ೧೧ ಜನ‌ ಸರ್ಕಾರಿ ನೌಕರರನ್ನು‌ ಹಾಗೂ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
    ಶಿಸ್ತುಬದ್ದ ಮತ್ತು ಆರ್ಕಷಕ ಪಥಸಂಚಲನದಲ್ಲಿ ಎನ್ ಸಿ ಸಿ‌ ಬಾಲಕಿಯರು ಪ್ರಥಮ, ಸೇಕ್ರೆಡ್ ಹಾರ್ಟ್ ಶಾಲೆ ದ್ವಿತೀಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ತೃತೀಯ ಬಹುಮಾನ ಪಡೆದರು.
    ಸಾಧನೆ ಮಾಡಿದ ಅಧಿಕಾರಿಗಳು, ವಿದ್ಯಾರ್ಥಿಗಳ
    ಮುಖ್ಯ ಅತಿಥಿಗಳಾಗಿ, ಶಾಸಕರಾದ ಎಸ್.ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್, ಬಲ್ಕೀಶ್ ಬಾನು, ಡಾ.ಧನಂಜಯ ಸರ್ಜಿ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿಗಳು, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಹಾನಗರ ಪಾಲಿಕೆ ಆಯಕ್ತರು, ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು

Klive Special Article ಯಕ್ಷಗಾನ.ಅಂತರ್ಗಾಮೀ ಕಲೆ.ಶಿವ ಶಂಭು ಶಿವ ಶ್ರೀಧರ..

0
  • ಡಾ.ರತ್ನಾಕರ್. ಶಿವಮೊಗ್ಗ

Klive Special Article ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಮನೆ ಬಿಟ್ಟಿದ್ದು 1977…48 ವರ್ಷಗಳ ಹಿಂದೆ 17ನೇ ವಯಸ್ಸಿನಲ್ಲಿ. ಸುಮಾರು ಹತ್ತನೇ ವಯಸ್ಸಿಗೆ ಆಟ (ಯಕ್ಷಗಾನ ಬಯಲಾಟ )ರಾತ್ರಿ ಇಡೀ ನೋಡುವ ಚಟ ಹತ್ತಿ ಆಗಿತ್ತು. ನನ್ನಣ್ಣ ಸುಮಾರು 1980ರ ಹಾಗೆ ಉಡುಪಿ ಯಕ್ಷಗಾನ ಕೇಂದ್ರದಿಂದ ತರಬೇತಿ ಹೊಂದಿದ ಕಲಾವಿದ ಆಗಿದ್ದ. ಅದಕ್ಕೂ ಮುಂಚೆ ಅವನ ಯಕ್ಷಗಾನ ಆಸಕ್ತಿಯನ್ನು ಪ್ರಕಟ ಪಡಿಸಲು ಮನೆಯಲ್ಲಿ ಒಂದೇ ಒಂದು ಯಕ್ಷಗಾನ ಫೋಟೋ ಹಾಕಿದ್ದ… ಅದೇ ದಿವಂಗತ. ಕೆರೆಮನೆ ಶ್ರೀ ಗಜಾನನ ಹೆಗಡೆ ಅವರ ಸ್ತ್ರೀ ವೇಷದ ಫೋಟೋ. ನಮಗ್ಯಾರಿಗೂ ಮನೆಯಲ್ಲಿ ಅಣ್ಣ ಯಕ್ಷಗಾನ ರಂಗಕ್ಕೆ ಹೋಗುತ್ತಾನೆ ಅನ್ನುವುದನ್ನೂ ನಂಬಲು ಅಸಾಧ್ಯ. ಪಿಯುಸಿ ಪ್ರಥಮ ವರ್ಷಕ್ಕೆ ವಿದ್ಯಾಭ್ಯಾಸ ನಿಲ್ಲಿಸಿ ಮನೆಯಲ್ಲಿರುವ ಕಿರಾಣಿ ಅಂಗಡಿಯಲ್ಲಿ ಅಪ್ಪನಿಗೆ ಸಹಕಾರಿ ಆಗಿ ನಿಂತ. ಇವತ್ತಿಗೂ ನಮಗೆ ವಿಸ್ಮಯ, ಅಪ್ಪಯ್ಯ ಯಾಕೆ ಅವನಿಗೆ ಏನೂ ಹೇಳದೆ ಉಳಿದರು ಅಂತ. ಅಂದಿನ ಅಪ್ಪಯ್ಯನ ಮೌನ ಸಮ್ಮತಿಯ ಹಿಂದೆ ನನ್ನ ಅಣ್ಣನ ಜೀವನ ಸಾಧನೆಗಳೇ ಇದ್ದವೋ ಅಂತ…!

ನಮಗೆ ಆ ದಿನಗಳಲ್ಲಿ ಕೆರೆಮನೆ ಮೇಳದ ಮೇಲೆ ಅಪಾರ ಗೌರವ.ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆ ಅಂದರೆ ದೇವರ ಪ್ರತಿನಿಧಿಗಳೇ ಅನ್ನುವಷ್ಟು. ಯಾವುದೇ ದುಶ್ಚಟಗಳಿಲ್ಲದೆ ಕೇವಲ ಪೌರಾಣಿಕ ಪ್ರಸಂಗಗಳನ್ನೇ ಅಭಿನಯಿಸಿ ರಂಗದ ಮೇಲೆ ರಾಮ, ಕೃಷ್ಣ, ಬಲರಾಮ, ರಾವಣ, ಕಾರ್ತವೀರ್ಯ, ಸುಧನ್ವ, ಹರಿಶ್ಚ0ದ್ರ, ಅರ್ಜುನ, ನಳ,
ಋತುಪರ್ಣ ಇತ್ಯಾದಿ ನಾಯಕ, ಖಳನಾಯಕ ರನ್ನು ಜೀವಂತ ತೋರಿಸುವ ಮಹಾನ್ ಕಲಾವಿದರು.

Klive Special Article ಶ್ರೀ. ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ ಮೇಳ ಕಟ್ಟಿ 90 ವರ್ಷಗಳು ಸಂದವು. ಆರ್ಥಿಕವಾಗಿ, ಸಾಮಾಜಿಕವಾಗಿ, ವ್ಯವಹಾರಿಕವಾಗಿ ಎಲ್ಲ ಏಳು ಬೀಳುಗಳನ್ನು ಅನುಭವಿಸಿದರೂ ಅಸ್ತಿತ್ವಕ್ಕಾಗಿ ಯಾವ ಗಿಮಿಕ್ಸ್, ಅಡ್ಡ ದಾರಿ ಹಿಡಿಯಲೇ ಇಲ್ಲ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಮಂಡಳಿಯ ಮೇಲೆ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದವರು ಇದ್ದರೆ, ವಿಶ್ವವಿದ್ಯಾಲಯ ಚಿನ್ನದ ಪದಕವನ್ನು ನೀಡಿದೆ. ಒಂದೇ ಕುಟುಂಬದ ಮೂರು ಕಲಾವಿದರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಮತ್ತು ರಾಷ್ಟ್ರ ಪ್ರಶಸ್ತಿ ಸಿಕ್ಕಿರುವ ಏಕೈಕ ಯಕ್ಷಗಾನ ಮೇಳ, ಕೆರೆಮನೆ ಮೇಳ.

ನನ್ನ ಅಣ್ಣ ಯಕ್ಷಗಾನ ಕಲಾವಿದನಾದ ಮೇಲೆ ನನಗೆ ಶಂಭು ಹೆಗಡೆಯವರ ಆತ್ಮೀಯತೆ ಸಿಕ್ಕಿದ್ದು ಭಾಗ್ಯ. ಮಂಟಪ ಕುಟುಂಬದ ಮೇಲೆ ಅಪಾರ ಗೌರವ ಅವರಿಗೆ. ಶಿವಮೊಗ್ಗಕ್ಕೆ ಬಂದಾಗಲೆಲ್ಲ ಶ್ರೀ. ಲಕ್ಷ್ಮಿನಾರಾಯಣ ಕಾಶಿ ಅವರ ಮನೆಯಲ್ಲಿ ಉಳಿಯುತ್ತಿದ್ದರು. ಇಪ್ಪತ್ತೈದು ವರ್ಷಗಳ ಹಿಂದಿನ ಕಥೆಗಳು. ನನ್ನ ಬಿಡುವಿಲ್ಲದ ಆಸ್ಪತ್ರೆ ಕೆಲಸದ ಮಧ್ಯೆ ರಾತ್ರಿ ಅವರನ್ನು ಕಾಣಲು ಕಾಶಿಯವರ ಮನೆಗೆ ಹೋಗಿ ಗಂಟೆ ಗಟ್ಟಲೆ ಮಾತಾಡುತ್ತಿದ್ದೆವು. ಶ್ರೀ. ಶಂಭು ಹೆಗಡೆ ಅವರೊಡನೆ ಮಾಡಿದ ಸಂಭಾಷಣೆಗಳನ್ನು ಮುದ್ರಿಸಿ ಇಟ್ಟಿದ್ದರೆ ಬೆಲೆ ಕಟ್ಟಲಾಗದ್ದು. ಯಾವತ್ತೂ ಅವರು ಇನ್ನೊಬ್ಬ ಕಲಾವಿದರ ಬಗ್ಗೆ ಕೆಟ್ಟ ಮಾತು ಆಡಿದ್ದಿಲ್ಲ. ನಮ್ಮ ಮಾತಿನಲ್ಲಿ ಅಂತಹ ವಿಷಯಗಳು ಬಂದರೆ ಮೌನವಾಗಿ ಮಾತು ಬದಲಿಸುತ್ತಿದ್ದರು. ಒಮ್ಮೆಯೂ ಮೇಳದ ಆಟವನ್ನು ಆಡಿಸುವ ಬಗ್ಗೆ, ಆರ್ಥಿಕ ಸಹಕಾರಕ್ಕಾಗಲಿ ಕೇಳಲೇ ಇಲ್ಲ.ಯಕ್ಷಗಾನದ ಅಂದಿನ ಆಗು ಹೋಗುಗಳು, ಬದಲಾವಣೆಗಳು, ಆಪತ್ತುಗಳು ಎಲ್ಲವನ್ನೂ ಸಮಗ್ರವಾಗಿ ನಮಗೆ ವಿವರಿಸುತ್ತ, ಕಾಲಮಿತಿ ಪ್ರಯೋಗದ ಅಗತ್ಯತೆಯನ್ನು ಅಂದೇ ನಿರ್ಧರಿಸಿ ನಡೆದರು.
ಅವರ ಮಂಡಳಿಯ ಪ್ರದರ್ಶನದ ಮಂಗಳ ಪದ್ಯದ ನಂತರ ಅವರು ಸ್ಟೇಜ್ ಗೆ ಬಂದು ಐದು ಹತ್ತು ನಿಮಿಷವಾದರೂ ಮಾತನಾಡಿ ಹೊಸ ವಿಷಯಗಳನ್ನು ಹೇಳುವುದನ್ನು ಕೇಳದೆ ಪ್ರೇಕ್ಷಕರು ಏಳುತ್ತಿರಲಿಲ್ಲ.

ಅವರು ಹಾಕಿಕೊಟ್ಟ ದಾರಿಯಲ್ಲಿ ಹೊಸ ಯೋಚನೆಗಳಿಂದ ಹೊಸ ಪ್ರಯೋಗಗಳನ್ನು ಸಂಪ್ರದಾಯದ ಚೌಕಟ್ಟಿನೊಳಗೆ ಮಾಡುತ್ತ ಪ್ರಸ್ತುತ ಶಂಭು ಹೆಗಡೆ ಅವರ ಏಕ ಮಾತ್ರ ಪುತ್ರ ಶಿವಾನಂದ ಹೆಗಡೆ ಹೋರಾಟ ಮುಂದುವರಿಸಿದ್ದಾರೆ. ತಂದೆಯ ನಿರ್ಗಮನದ ನಂತರ ಸಾಕಷ್ಟು ಅಡೆತಡೆಗಳು, ಚಾಲೆಂಜ್ ಗಳಿದ್ದರು ಸಂಪ್ರದಾಯ ಬಿಡಲಿಲ್ಲ, ಯಕ್ಷಗಾನದ ಮೂಲಭೂತ ಸ್ವರೂಪ ನೋಡಬೇಕು ಅಂದರೆ ಇಡಗುಂಜಿ ಮೇಳದ ಆಟವೇ ಆಗಬೇಕು ಅನ್ನುವ ಅನಿವಾರ್ಯತೆ ಇದೆ.
ಇನ್ನೂ ಖುಷಿ ವಿಚಾರ ಅಂದರೆ ಶಿವಾನಂದನ ಮಗ ಶ್ರೀಧರ ಹೆಗಡೆ ಡಿಗ್ರಿ ಓದಿಯೂ ಅಪ್ಪನಿಗೆ ಸಾಥ್ ನೀಡಿರುವುದು. ಶಂಭು ಹೆಗಡೆಯವರು ಕಲಾವಿದನಾಗಿ ವಿಜೃಂಭಿಸಿದರೆ, ಶಿವಾನಂದ ಹೆಗಡೆ ಸಂಘಟನಾ ಚತುರನಾದರು.ಶ್ರೀಧರ ಹೆಗಡೆ ಈಗ ನಾಲ್ಕನೇ ತಲೆಮಾರು. ಮುಂದೆ ಮಂಡಳಿಯನ್ನು ನಡೆಸಬೇಕಾದ ಜವಾಬ್ದಾರಿ ಇದೆ. ಹೊಸಪ್ರಯೋಗ ಏಕವ್ಯಕ್ತಿ “ಮಾರಾವತಾರ ” ಪ್ರದರ್ಶನದ ಮೂಲಕ ತನ್ನೊಳಗು ಅಜ್ಜ ಶಂಭು ಹೆಗಡೆ ಇದ್ದಾರೆ ಅನ್ನುವುದನ್ನೂ ತೋರಿದ್ದಾರೆ.

ನಮ್ಮ ರಾಮಾಯಣ, ಮಹಾಭಾರತ, ಭಾಗವತ ಕಥಾನಕಗಳನ್ನೇ ಪ್ರದರ್ಶಿಸುವ ಇಡಗುಂಜಿ ಮೇಳ ಈಗ ಪ್ರಸ್ತುತ ಸುದ್ದಿ ಮಾಡಿರುವುದು 2024ರ “ಯುನೆಸ್ಕೊ”
ಹೆರಿಟೇಜ್ ಕಲೆಯಾಗಿ ಗುರುತಿಸಲ್ಪಟ್ಟಿದ್ದು.
ಪ್ರಪಂಚದ 58 ಕಲೆಗಳು ಈ ಮಾನ್ಯತೆ ಪಡೆದಿದ್ದರೆ ಭಾರತದಲ್ಲಿ 2024ರಲ್ಲಿ ಮಾನ್ಯತೆ ಸಿಕ್ಕಿದ್ದು ನಮ್ಮ ರಾಜ್ಯದ ಕಲೆ, ಯಕ್ಷಗಾನಕ್ಕೆ. ಈ ಆಯ್ಕೆಯ ಪ್ರಕ್ರಿಯೆಯ ಬಗ್ಗೆಯೇ ಲೇಖನ ಬರೆಯಬಹುದು. ಅರ್ಜಿ ಹಾಕಿ ವಸೂಲಿ ಬಾಜಿ ಮಾಡಿದರೆ, ರಾಜಕಾರಣದಿಂದ ಸಿಗುವ ಮಾನ್ಯತೆಯೇ ಅಲ್ಲ….!
ಇವೆಲ್ಲವನ್ನೂ ಶ್ರೀ. ಕೆರೆಮನೆ ಶಿವಾನಂದ ಹೆಗಡೆ ಅವರ ಮಾತಿನ ಮೂಲಕವೇ ಕೇಳಬೇಕು ಅಂದರೆ, ನಾಳೆ ಜನವರಿ 26,ಭಾನುವಾರ ಸಂಜೆ 6ಕ್ಕೆ ಶಿವಮೊಗ್ಗ, ಸುವರ್ಣ ಸಂಸ್ಕೃತಿ ಭವನಕ್ಕೆ ಬನ್ನಿ…!
ಉಚಿತ ಪ್ರವೇಶ ಇರುವ “ಸೀತಾಪಹಾರ”ಯಕ್ಷಗಾನ ಪ್ರಸಂಗ ನೋಡಿ…. “ಯುನೆಸ್ಕೊ” ಗೌರವಕ್ಕೆ ಅರ್ಹರೋ ನೀವೇ ಹೇಳಿ…!

Republic Day ಜನವರಿ 26. ಸಚಿವ ಮಧು ಬಂಗಾರಪ್ಪ ಅವರಿಂದ ಸಂವಿಧಾನ ಪೀಠಿಕೆ ಪ್ರತಿಷ್ಠಾಪನೆ

0

Republic Day ಜ.26 ರ ಗಣರಾಜ್ಯೋತ್ಸವದಂದು ಬೆಳಿಗ್ಗೆ 10.30 ಕ್ಕೆ ನಗರದ ಅಲ್ಲಮಪ್ರಭು ಉದ್ಯಾನ(ಫ್ರೀಡಂ ಪಾರ್ಕ್)ದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಸಂವಿಧಾನ ಪೀಠಿಕೆ ಪ್ರತಿಷ್ಟಾಪನೆ ಲೋಕಾರ್ಪಣೆಗೊಳಿಸುವರು.

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‌ರವರ ಸವಿನೆನಪಿಗಾಗಿ ಪ್ರತಿ ವರ್ಷ ನ.26 ರಂದು ಸಂವಿಧಾನ ದಿನವನ್ನಾಗಿ ಆಚರಿಸಲು ಉದ್ದೇಶಿಸಲಾಗಿದೆ. ಅದರಂತೆ ನಾಗರಿಕರಲ್ಲಿ ಸಂವಿಧಾನದ ಮೌಲ್ಯಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಪ್ರಚಾರಾಂದೋಲನ ಕೈಗೊಳ್ಳುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ ಪ್ರಸಿದ್ದ ಉದ್ಯಾನಗಳಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯ 10*6 ಅಡಿ ಅಳತೆಯ ಸಂವಿಧಾನ ಪೀಠಿಕೆಯನ್ನು ಉದ್ಘಾಟಿಸಿ ಪ್ರಚಾರಾಂದೋಲನ ಕೈಗೊಳ್ಳಲು ನಿರ್ದೇಶನ ನೀಡಲಾಗಿತ್ತು.

ಅದರನ್ವಯ 2024 ರ ನ.26 ರಂದು ಅಲ್ಲಮಪ್ರಭು ಉದ್ಯಾನದಲ್ಲಿ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಂವಿಧಾನ ಪೀಠಿಕೆ ಪ್ರತಿಷ್ಟಾಪಿಸಲು ಗುದ್ದಲಿ ಪೂಜೆ ನೆರವೇರಿಸಿರುತ್ತಾರೆ.

Republic Day ಸಂವಿಧಾನ ಪೀಠಿಕೆ ಪ್ರತಿಷ್ಟಾಪನೆ ಕಾರ್ಯ ಪೂರ್ಣಗೊಂಡಿದ್ದು ಜ.26 ರಂದು ಜಿಲ್ಲಾ ಉಸ್ತುವಾರಿ ಸಚಿವರು, ಚಿನಾಯಿತು ಪ್ರತಿನಿಧಿಗಳು ಲೋಕಾರ್ಪಣೆಗೊಳಿಸಲಿದ್ದು ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ದಲಿತ ಸಂಘಟನೆ ಮುಖಂಡರು, ವಿವಿಧ ಸಂಘಟನೆಯ ಮುಖಂಡರು ಹಾಗೂ ನಾಗರೀಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲೇಶಪ್ಪ ಕೋರಿದ್ದಾರೆ