Tuesday, March 17, 2026
Tuesday, March 17, 2026
Home Blog Page 425

Shivamurthy Shivacharyasree ಭರಮಸಾಗರದಲ್ಲಿ ತರಳಬಾಳು ಹುಣ್ಣಿಮೆ. ಏತ ನೀರಾವರಿ ಬಗ್ಗೆ ವಿಶೇಷ‌ ಆಕರ್ಷಣೆ-ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯಶ್ರೀ

0

Shivamurthy Shivacharyasree ಈ ಬಾರಿ ಭರಮಸಾಗರದಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ವಿಶೇಷವಾಗಿರುತ್ತದೆ ಹಾಗೂ ಏತನೀರಾವರಿ ಯೋಜನೆ ವಿಶೇಷ ಆಕರ್ಷಣೆಯಾಗಿರುತ್ತದೆ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಗುರುವಾರ ಸಂಜೆ ಕರೆಯಲಾಗಿದ್ದ ತರಳಬಾಳು ಹುಣ್ಣಿಮೆ ಸಮಿತಿ ರಚನೆ ಸಭೆಯಲ್ಲಿ ಅವರು ಮಾತನಾಡಿದರು.

ಕೆರೆ ಏತನೀರಾವರಿ ಹೆಚ್ಚಿನ ಆಕರ್ಷಣೆ: ಏತನೀರಾವರಿ ಯೋಜನೆ ಯಶಸ್ವಿಯಾಗುವುದಿಲ್ಲ ಎಂಬ ತಪ್ಪು ಭಾವನೆಗೆ ವಿರುದ್ದವಾಗಿ ಯಶಸ್ವಿಯಾಗಿರುವ ಭರಮಸಾಗರ ಏತನೀರಾವರಿ ಯೋಜನೆ ಉದಾಹರಣೆಯಾಗಿದೆ. ಕಾರಣ ಇದು ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಳ್ಳುತ್ತದೆ.

ಸಮಿತಿ ಮತ್ತು ಸಂಪನ್ಮೂಲ ಕ್ರೂಢೀಕರಣಕ್ಕಾಗಿ ತುರ್ತು ಸಭೆ
ತರಳಬಾಳು ಹುಣ್ಣಿಮೆ ನಾಡ ಹಬ್ಬವಾಗಿ ಖ್ಯಾತವಾಗಿದೆ ಕಾರಣ ತರಳಬಾಳು ಹುಣ್ಣಿಮೆಯಲ್ಲಿ ಸಂಘರ್ಷಕ್ಕೆಡೆಮಾಡದಂತೆ ಸಮನ್ವಯತೆಯಿಂದ ಎಲ್ಲರೂ ಕೆಲಸ ನಿರ್ವಹಿಸಬೇಕು ಡಿ.21 ರಿಂದ ಉತ್ತರ ಭಾರತದಲ್ಲಿಯ ಕಾರ್ಯಕ್ರಮಗಳಿಗೆ ತೆರಳಬೇಕಾಗಿರುವುದರಿಂದ ವಿವಿದ ಸಮಿತಿಗಳ ರಚನೆ ಮತ್ತು ಇತರ ಸಂಪನ್ಮೂಲ ಕ್ರೂಢೀಕರಣದ ಉದ್ದೇಶದಿಂದ ಈ ಸಭೆ ತುರ್ತಾಗಿ ಕರೆಯಲಾಗಿದೆ.

ಪರಿಸರದ ಕಾಳಜಿ, ಪ್ಲೆಕ್ಸ್ ಬ್ಯಾನರ್ ಗೆ ಕಡಿವಾಣ ಈ ಬಾರಿಯ ತರಳಬಾಳು ಹುಣ್ಣಿಮೆಯಲ್ಲಿ ಪ್ಲೆಕ್ಸ್ ಗಳನ್ನು ಸಿಡಿಮದ್ದುಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಸತ್ಕಾರ್ಯಗಳಿಗೆ ಬಳಸಬಹುದು ಹಾಗೂ ಉಚ್ಚ ನ್ಯಾಯಾಲಯದ ಆದೇಶವನ್ನು ಸಹ ಪಾಲಿಸುವುದು ನಮ್ಮ ಧರ್ಮವಾಗಿದೆ ,
ಪ್ರತಿದಿನ ಒಂದೊಂದು ವಿಷಯದ ಮೇಲೆ ಉಪನ್ಯಾಸ ಸಂವಾದ:
ಈ ಬಾರಿಯ ತರಳಬಾಳು ಹುಣ್ಣಿಮೆಯಲ್ಲಿ ಇನ್ನೊಂದು ವಿಶೇಷವೆಂದರೆ ಪ್ರತೀ ದಿನವೂ ಒಂದೊಂದು ವಿಷಯದ ಮೇಲೆ ತಜ್ಞರಿಂದ ಉಪನ್ಯಾಸ ಏರ್ಪಡಿಸಲಾಗವುದು, ಶಿಕ್ಷಣ, ಕಲೆ ಸಂಸ್ಕೃತಿ, ಮಹಿಳೆ ಮತ್ತು ಸಮಾಜ, ರಾಜಕಾರಣ, ಶರಣಸಾಹಿತ್ಯ, ನ್ಯಾಯಾಲಯ, ಆರೋಗ್ಯ, ಕೃಷಿ ಮತ್ತು ಜಲಸಂರಕ್ಷಣೆ ನಂತರ ಕೊನೆಯ ದಿನ ಹುಣ್ಣಿಮೆ ಕಾರ್ಯಕ್ರಮ ನಡೆಯುವುದು ಜೊತೆಗೆ ಕೆಲಸ ವಿಷಯಗಳ ಮೇಲೆ ಸಂವಾದವನ್ನು ಸಹ ಏರ್ಪಡಿಸಲಾಗುವುದು.ನ್ಯಾಯಾಲಯ ಮತ್ತು ಸಮಾಜಕ್ಕೆ ಸಂಬಂದಿಸಿದಂತೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತ್ತೋಷಕುಮಾರ್ ಹೆಗ್ಡೆ ಹಾಗೂ ನ್ಯಾಯಾಧೀಶ ಕೃಷ್ಣ ದೀಕ್ಷಿತ್ ರು ಉಪನ್ಯಾಸ ನೀಡಲಿರುವರು.

Shivamurthy Shivacharyasree ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ :
ಎಲ್ಲಾ ಕಾರ್ಯಕ್ರಮ ನಡೆಸಲು ಸಂಪನ್ಮೂಲ ಅಗತ್ಯ ಅದಕ್ಕಾಗಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚನೆ ಮಾಡಲು ಹೆಸರುಗಳನ್ನು ಕ್ರೂಢೀಕರಿಸಲಾಗಿದೆ. ನಿಧಿ ಸಂಗ್ರಹಣೆ ಸಮಿತಿ ಇರುವುದಿಲ್ಲ ತಮ್ಮ ಶಕ್ತಿ ಅನುಸಾರ ದೇಣಿಗೆ ನೀಡಬಹುದು. ತರಳಬಾಳು ಹುಣ್ಣಿಮೆಯಲ್ಲಿ ವೆಚ್ಚವಾಗಿ ಉಳಿದ ಹಣದ 50 ಭಾಗ ಭರಮಸಾಗರದ ಕೆರೆ ಅಭಿವೃದ್ದಿ ಮತ್ತು ಉಳಿದ 50 ಭಾಗ ಹಣವನ್ನು ವಿದ್ಯಾರ್ಥಿಗಳ ಊಟ ವಸತಿಗೆ. ಮೀಸಲಿರಿಸಲಾಗುವುದು ಕೆರೆ ಸುತ್ತಲೂ ವಾಯುವಿಹಾರಕ್ಕಾರಿ ರಸ್ತೆ, ಉದ್ಯಾನವನ, ವಿದ್ಯುತ್ ದೀಪ, ವಿಶ್ರಾಂತಿ ಆಸನಗಳಿಗಾಗಿ ಬಳಸಲಾಗುವುದು, ಈ ವೆಚ್ಚವನ್ನು ಸರ್ಕಾರ ಭರಿಸಿದರೆ ಆ ಹಣವನ್ನು ಆಪಧನ ಎಂದು ನಿರ್ವಹಣೆ ವೆಚ್ಚಕ್ಕೆ ಇಡಲಾಗುವುದು ಇನ್ನುಳಿದ ಅರ್ಧ ಹಣವನ್ನು ಸಿರಿಗೆರೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಊಟ ವಸತಿ ಮೀಸಲಿರಿಸಲಾಗುವುದು. ಕಾರಣ ಕಾರ್ಯಕ್ರಮದ ವೆಚ್ಚ ಮಿತವಾಗಿರಬೇಕು ಎಂದು ಸೂಚಿಸಿದರು.

ರೂ 1 ಕೋಟಿ 26 ಲಕ್ಷ ದೇಣಿಗೆ ವಾಗ್ದಾನ ಸ್ಥಳದಲ್ಲಿ ಸೇರಿದ್ದ ಭರಮಸಾಗರ ಸುತ್ತಮುತ್ತಲ ಹಾಗೂ ಚಿತ್ರದುರ್ಗ ಹೊಳಲ್ಕೆರೆ ಮುಖಂಡರುಗಳು ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಒಟ್ಟು ರೂ 1 ಕೋಟಿ 26 ಲಕ್ಷ ದೇಣಿಗೆಯ ವಾದ್ಗಾನ ಮಾಡಿದರು.
ವೇದಿಕೆ ನಿರ್ಮಾಣ ಕಾಮಗಾರಿ ತಯಾರಿ: ಈಗಾಗಲೇ ಮಠದ ಇಂಜಿನೀಯರ್ ರವಿ ಸ್ಥಳ ಪರಿಶೀಲನೆ ಮಾಡಿದ್ದು ನಕ್ಷೆ ಪ್ರಕಾರ ವೇದಿಕೆ ಸ್ಥಳ ಕಾಮಗಾರಿ ಆರಂಭವಾಗಿದೆ ಇದಕ್ಕಾಗಿ ಸ್ಥಳೀಯ ಮಟ್ಟದ ಮುಖಂಡರ ಸಮಿತಿ ರಚಿಸಲಾಗಿದೆ.
ವೇದಿಕೆ ನಿರ್ಮಾಣ ಸಮಿತಿಗೆ ಎಸ್ ಎಂ ಎಲ್ ತಿಪ್ಪೇಸ್ವಾಮಿ ಡಿ.ಎಸ್.ಪ್ರವೀಣ್, ಸಿ.ಟಿ.ಮಹಂತೇಶ್, ಶೈಲೇಶ್ ಕುಮಾರ್, ಕಲ್ಲೇಶ್, ನಿರಂಜನ್, ತುರುವನೂರು ಮಲ್ಲಣ್ಣ, ಕೋಗುಂಡೆ ಮಂಜುನಾಥ್, ಸಾಮಿಲ್ ಶಿವಣ್ಣ, ಎಮ್ಮೇಹಟ್ಟಿ ರುದ್ರೇಶ್, ಪ್ರಭು, ಷಮೀಂಪಾಷಾ, ಶಶಿಪಾಟೀಲ್, ತೀರ್ಥಪ್ಪ, ಕೃಷ್ಣಮೂರ್ತಿ ಯವರನ್ನು ಆಯ್ಕೆ ಮಾಡಲಾಯಿತು.
ಶಾಸಕರಾದ ಡಾ.ಎಂ.ಚಂದ್ರಪ್ಪ, ಜಗಳೂರು ಶಾಸಕ ದೇವೇಂದ್ರಪ್ಪ, ಮಾಜಿ ಸಚಿವ ಹೆಚ್. ಆಂಜನೇಯ ಸೇರಿದಂತೆ ಹೋಬಳಿಯ ಮುಖಂಡರು ಉಪಸ್ಥಿತರಿದ್ದರು.

ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಗುರುವಾರ ಸಂಜೆ ನಡೆದ ಭರಮಸಾಗರ ತರಳಬಾಳು ಹುಣ್ಣಿಮೆ ಪೂರ್ವಭಾವಿ ಸಭೆಯಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಮಾತನಾಡಿದರು. ಶಾಸಕರಾದ ಡಾ.ಎಂ.ಚಂದ್ರಪ್ಪ, ದೇವೇಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಎಸ್ ಎಂ ಎಲ್ ತಿಪ್ಪೇಸ್ವಾಮಿ, ಶಶಿಪಾಟೀಲ್, ಸಿರಿಗೆರೆ ನಾಗರಾಜ್, ಸಾಮಿಲ್ ಶಿವಣ್ಣ, ಡಿ.ಎಸ್.ಪ್ರವೀಣ್, ತೀರ್ಥಪ್ಪ, ಕೋಗುಂಡೆ ದ್ಯಾಮಣ್ಣ, ಸಿ.ಟಿ.ಮಹಂತೇಶ್, ಶೈಲೇಶ್ ಕುಮಾರ್, ಕಲ್ಲೇಶ್, ನಿರಂಜನ್, ತುರುವನೂರು ಮಲ್ಲಣ್ಣ, ಕೋಗುಂಡೆ ಮಂಜುನಾಥ್, ಎಮ್ಮೇಹಟ್ಟಿ ರುದ್ರೇಶ್, ಪ್ರಭು, ಷಮೀಂಪಾಷಾ, ಶಶಿಪಾಟೀಲ್, ಶಾಂತಾ ಅಶೋಕ್ ಇದ್ದರು.

2 ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಬರುವ ನಿರೀಕ್ಷೆ

  1. ಮುಖ್ಯವಾಗಿ ತರಳುಭಾಳು ಹುಣ್ಣಿಮೆ ಕಾರ್ಯಕ್ರಮಕ್ಕೆ 2 ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಬರುವ ಕಾರಣ ಸುರಕ್ಷತಾ ದೃಷ್ಠಿಯಿಂದ ಸುಮಾರು 900 ಎಕರೆ ಜಾಗದಲ್ಲಿ ತುಂಬಿ ತುಳುಕುತ್ತಿರುವ ಚಿತ್ರದುರ್ಗ ಜಿಲ್ಲೆಯ ಹೆಸರಾಂತ ಬಿಚ್ಚುಗತ್ತಿ ಭರಮಣ್ಣ ನಾಯಕ ರೈತರಿಗಾಗಿ ಕಟ್ಟಿಸಿರುವ ಪುರಾತನ ಭರಮಸಾಗರದ ಭರಮಣ್ಣ ನಾಯಕರು ಕಟ್ಟಿಸಿ ಕೆರೆ ಏರಿಯಲ್ಲಿ ಈಗಾಗಲೆ ಎರಡು ಸಾವು ಸಂಬವಿಸಿದೆ ಸುರಕ್ಷತೆಗಾಗಿ ಕಾರ್ಯಕ್ರಮದ ಮುಂಚೆ ಕೆರೆಯ ಏರಿಯ ಸುತ್ತ ತಡೆ ಗೋಡೆ ನಿರ್ಮಣ ಮಾಡಬೇಕಾಗಿದೆ. ಕೆರೆ ಒತ್ತುವರಿ ತಡೆಯುವುದು ಮತ್ತು ತೆರವುಗೊಳಿಸುವುದು. ಗಡಿ ಕಂಬ ಹಾಕಿ ಸುತ್ತಲೂ ಬೇಲಿ ನಿರ್ಮಿಸುಬೇಕಾಗಿದೆ.
  2. ಸಂಬಂಧಪಟ್ಟ ಇಲಾಖೆ, ಸ್ಥಳೀಯ ಸಂಸ್ಥೆ ಇಲ್ಲವೇ ಅಭಿವೃದ್ಧಿ ಪ್ರಾಧಿಕಾರಗಳ ನೆರವಿನೊಂದಿಗೆ ಕೆರೆಗಳನ್ನು ಸಂರಕ್ಷಣೆ ಮಾಡಿ ಜಲ ಮರುಪೂರಣಗೊಳಿಸಲು ಅಭಿವೃದ್ಧಿಪಡಿಸುವ ಕಾರ್ಯ ಹಾಗೆಯೇ ಉಳಿದಿದೆ.
  3. ಕೆರೆಗಳ ಪರಿಸರ ಹಾನಿ ಕುರಿತು ಅಧ್ಯಯನ ಕೈಗೊಳ್ಳುವುದು.
  4. ಜಲಾನಯನ ಇಲಾಖೆ ಸಹಾಯದಿಂದ ಕೆರೆಗಳು ಮತ್ತು ಸುತ್ತಲಿನ ಪ್ರದೇಶದ ನಕ್ಷೆ ತಯಾರಿಸುವುದು ಮತ್ತು ಅಂಕಿ ಅಂಶ ಸಂಗ್ರಹಿಸುವುದು.
  5. ಕೆರೆಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವುದು, ಅಂತರ್ಜಲ ಮಟ್ಟ ವೃದ್ಧಿಸಲು ಕ್ರಮಕೈಗೊಳ್ಳುವುದು.
  6. ವಿಷಕಾರಿ, ರಾಸಾಯನಿಕಯುಕ್ತ ಕೊಳಚೆ ನೀರು ಕೆರೆಗೆ ಹರಿಯದಂತೆ ತಡೆಯುವುದು. ಜಲ ಸಸ್ಯಗಳು, ಪಕ್ಷಿಗಳು ಮತ್ತು ಜೀವವೈವಿಧ್ಯಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸುವುದು.
  7. ಕೆರೆ ಏರಿಯ ಮಣ್ಣಿನ ಸಂರಕ್ಷಣೆ ಮಾಡಲು ಕೆರೆ ಸುತ್ತಲಿನ ಜಾಗದಲ್ಲಿ ಅರಣ್ಯೀಕರಣಗೊಳಿಸುವುದು.
  8. ಕೆರೆ ನೀರಿನ ಗುಣಮಟ್ಟ ನಿರ್ವಹಣೆ ಮತ್ತು ಸುಧಾರಣೆಗೆ ಕ್ರಮ ತೆಗೆದುಕೊಳ್ಳುವುದು. ಗೃಹ ಮತ್ತು ಕಾರ್ಖಾನೆಗಳ ನೀರು ಕೆರೆ ಸೇರದಂತೆ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು.
  9. ಕೆರೆಗಳ ಸಂರಕ್ಷಣೆ ವಿಚಾರದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಸಮುದಾಯ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಪ್ರೋತ್ಸಾಹಿಸುವುದು.
  10. ದೋಣಿ ವಿಹಾರ ಪ್ರಾರಂಬಿಸಿ ಸ್ಥಳೀಯರಿಗೆ ದುಡಿಮೆಗೆ ಅವಕಾಶ ಮಾಡಬೇಕಾಗಿದೆ.
  11. ಪ್ರವಾಸೋದ್ಯಮ ಇಲಾಖೆಗೆ ಹೆಚ್ಚಿನ ಒತ್ತನ್ನು ನೀಡಿ ಈ ಜಾಗವನ್ನು ಪ್ರವಾಸಿ ತಾಣವನ್ನಾಗಿ ಮಾಡಿ ಜನರ ಆಕರ್ಷಣೆ ಮಾಡುವುದು.
  12. ಬಹಳ ಮುಖ್ಯ ಎಂದರೆ ಈ ಕೆರೆ ಕಟ್ಟಿಸಿ ಮಾಡಿದ ಬಿಚ್ಚುಗತ್ತಿ ಭರಮಣ್ಣನ ನಾಯಕನ ಕಂಚಿನ ವಿಗ್ರಹವನ್ನು ಕೆರೆಯ ಏರಿ ಅಥವಾ ಸರ್ಕಲ್ ನಲ್ಲಿ ಮಾಡಿಸಿ ಶ್ರೀ ಶ್ರೀ ಸಿರಿಗೆರೆಯ ಗುರುಗಳ ಕೈಯಿಂದ ಅನಾವರಣ ಮಾಡಿಸುವುದು.

ವರದಿ

ಮುರುಳೀಧರ್ ನಾಡಿಗೇರ್

Kichcha Sudeep “ಉತ್ತಮ ನಟ” ಪ್ರಶಸ್ತಿಯನ್ನ ನಯವಾಗಿ ತಿರಸ್ಕರಿದ ಕಿಚ್ಚ ಸುದೀಪ್

0

Kichcha Sudeep ಕಿಚ್ಚ ಸುದೀಪ್‌ ಅವರ ” ಪೈಲ್ವಾನ್” ಸಿನಿಮಾದಲ್ಲಿನ ಅಭಿನಯಕ್ಕಾಗಿ ಉತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಜ್ಯ ಚಲನಚಿತ್ರ ಪ್ರಶಸ್ತಿ ತೀರ್ಪುಗಾರರ ಮಂಡಳಿಯವರು ಸುದೀಪ್ ಅವರಿಗೆ “ಉತ್ತಮ ನಟ‌” ಪುರಸ್ಕಾರ ಘೋಷಿಸಿದ್ದಾರೆ.
ಸುದೀಪ್ ಅಭಿಮಾನಿಗಳಿಗೆ ಅಪಾರ ಸಂತೋಷವಾಗಿದೆ.
ಆದರೆ ಇದ್ದಕ್ಕಿದ್ದಂತೆ ಕಿಚ್ಚ ಸುದೀಪ್‌ ಪ್ರಶಸ್ತಿಯು‌ ತಮಗೆ ಬೇಡ. ಈಗ ಕೆಲವು ವರ್ಷಗಳಿಂದ ಪ್ರಶಸ್ತಿ‌ ಸ್ವೀಕಾರ ತ್ಯಜಿಸಿರುವೆ‌.
ರಾಜ್ಯ ಸರ್ಕಾರಕ್ಕೆ‌, ತೀರ್ಪುಗಾರರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಬಹಳ ಶ್ರಮದಿಂದ ಮೇಲ್ಬಂದ ಕಲಾವಿದರಲ್ಲಿ‌ ಸುದೀಪ್ ಕೂಡ ಒಬ್ಬರು. ಗಾಡ್ ಫಾದರ್ ಗಳ‌ ಋತುವಿನ ಯಾವುದೇ‌ ಚಂಡಮಾರುತಕ್ಕೆ ಸಿಲುಕದೇ ತಮ್ಮದೇ ಅಭಿನಯ, ಸ್ಟೈಲ್ ಗಳಿಂದ‌‌ ಕನ್ನಡ‌ಪ್ರೇಕ್ಷಕ ವರ್ಗವನ್ನ ಹೊಂದಿರುವ ಪ್ರಭಾವಶಾಲೀ ನಟ.

Kichcha Sudeep ಅಭಿಮಾನಿಗಳು ಕುಣಿದು‌ ಕುಪ್ಪಳಿಸಲು‌ ಸಿದ್ಧರಾಗುತ್ತಿದ್ದಂತೆಯೇ ಸುದೀಪ್ ತಾಳಿರುವ‌ ಪ್ರಶಸ್ತಿ ತಿರಸ್ಕಾರದ ನಿರ್ಧಾರ‌
ಕಿಚ್ಚ ಪ್ರಿಯರಿಗೆ ‌ಅಚ್ಚರಿ ಹುಟ್ಟಿಸಿದೆ .

CM Siddharamaiah ಬಿಜೆಪಿ‌ ನೇತೃತ್ವದ ಕೇಂದ್ರ ಸರ್ಕಾರವು ಭದ್ರಾ ಯೋಜನೆಗೆ ₹5,300 ಕೋಟಿ ಬಿಡುಗಡೆ ಮಾಡಲಿ- ಸಿದ್ಧರಾಮಯ್ಯ

0

CM Siddharamaiah ನೀರಾವರಿಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, 1,274 ಕೋಟಿ ರೂಪಾಯಿ ವೆಚ್ಚದಲ್ಲಿ ಇಲ್ಲಿಗೆ ಮತ್ತೊಂದು ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ. ಈ ಯೋಜನೆ ಜಾರಿಯಾದರೆ ಈ ಭಾಗದ ಕಟ್ಟ ಕಡೆಯ ಜಮೀನಿಗೂ ನೀರು ಒದಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಾಣಿ ವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಸಮಾರಂಭದಲ್ಲಿ ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುವುದಾಗಿ ಕಾರಜೋಳ ಅವರು ಬರೀ ಬಾಯಿ ಮಾತಲ್ಲಿ ಹೇಳಿ, ಬಳಿಕ ವಂಚಿಸಿದರು. ಈ ಯೋಜನೆಗೆ 5,300 ಕೋಟಿ ರೂಪಾಯಿ ಕೊಡುವುದಾಗಿ ಕೇಂದ್ರ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದರು. ಆದರೆ ನಯಾಪೈಸೆ ಬಿಡುಗಡೆಗೊಳಿಸದೆ ಈ ಭಾಗದ ಜನ ಸಮುದಾಯಕ್ಕೆ ಗೋಂವಿಂದ ಕಾರಜೋಳ ಮತ್ತು ಕೇಂದ್ರ ಸರ್ಕಾರ ವಂಚಿಸಿದೆ ಎಂದರು.

ಇನ್ನಾದರೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆ ಚರ್ಚಿಸಿ ಕೊಟ್ಟ ಮಾತಿನಂತೆ 5,300 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿಸಿಕೊಡಿ. ಬಿಜೆಪಿ ಕೊಟ್ಟ ಮಾತಿಗೆ ವಂಚಿಸುತ್ತದೆ. ನಾವು ಕೊಟ್ಟ ಮಾತು ಈಡೇರಿಸಿ ನುಡಿದಂತೆ ನಡೆಯುತ್ತಿದ್ದೇವೆ.
ಚುನಾವಣೆ ವೇಳೆ ಕೊಟ್ಟ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿ ರಾಜ್ಯದ ಬಡವರು, ಮಧ್ಯಮ ವರ್ಗದವರು ಸೇರಿ ಎಲ್ಲಾ ಜನ ಸಮುದಾಯಗಳ ನಂಬಿಕೆ ಉಳಿಸಿಕೊಂಡಿದ್ದೇವೆ. ಇದೇ ನಮಗೂ ಬಿಜೆಪಿಗೂ ಇರುವ ವ್ಯತ್ಯಾಸ ಎಂದು ತಿಳಿಸಿದರು.

CM Siddharamaiah ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದಿದ್ದು ಸರ್ಕಾರದಿಂದ ಬಾಗಿನ ಅರ್ಪಿಸಿ, ಗಂಗಾಪೂಜೆ ನೆರವೇರಿಸಿದ್ದೇವೆ. 115 ವರ್ಷಗಳ ಇತಿಹಾಸ ಇರುವ, ರಾಜ್ಯದಲ್ಲಿ ನಿರ್ಮಾಣ ಆದ ಮೊದಲ ಜಲಾಶಯ ಇದಾಗಿದ್ದು ಮೂರನೇ ಬಾರಿ ಕೋಡಿ ಬಿದ್ದಿದೆ.ಅಂದಿನ‌ ಮಹಾರಾಣಿ ಅಮ್ಮಣ್ಣಿ ತಾಯಿಯವರು ತಮ್ಮ ಒಡವೆಗಳನ್ನು ಮಾರಿ 45 ಲಕ್ಷ ರೂಪಾಯಿ ಖರ್ಚು ಮಾಡಿ ಈ ಜಲಾಶಯ ನಿರ್ಮಿಸಿದ್ದಾರೆ. ಇದು 30 ಸಾವಿರ ಎಕರೆ ಕೃಷಿ ಭೂಮಿಗೆ ನೀರು ಒದಗಿಸುತ್ತಿದೆ. ಹೀಗಾಗಿ ರಾಣಿ ಅಮ್ಮಣ್ಣಿಯವರನ್ನು ನಾವು ಸ್ಮರಿಸುತ್ತೇವೆ, ಧನ್ಯವಾದ ಅರ್ಪಿಸುತ್ತೇವೆ ಎಂದು ಹೇಳಿದರು.

    Shivamogga City Corporation ನೀರಿನ ಕಂದಾಯ ಸ್ವೀಕೃತಿಗೆ‌ ಮಹಾನಗರ ಪಾಲಿಕೆಯಿಂದ ಭಾನುವಾರ ವಿಶೇಷ ಕೌಂಟರ್

    0

    Shivamogga City Corporation 2024-25ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗದ ವತಿಯಿಂದ ಜ.26ರ ಭಾನುವಾರದಂದು ವಿಶೇಷ ವಸೂಲಾತಿ ಕೌಂಟರ್‌ಗಳನ್ನು ತರೆಯಲಾಗಿದೆ.
    Shivamogga City Corporation ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿಗಾಗಿ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಗಾಂಧೀ ಬಜಾರ್ ಬಸವೇಶ್ವರ ದೇವಸ್ಥಾನದ ಹತ್ತಿರ, ಅರ್.ಎಂ.ಎಲ್.ನಗರ ಕಿದ್ವಾಯಿ ಶಾಲೆ ಎದುರು, ಪೊಲೀಸ್ ಚೌಕಿ ವಿನೋಬನಗರ ಪೊಲೀಸ್ ಠಾಣೆ ಎದುರು, ರವೀಂದ್ರನಗರ ಪಾರ್ಕ್ ಹತ್ತಿರ ಹಾಗೂ ಗುಡ್‌ಲಕ್ ಸರ್ಕಲ್ ಹತ್ತಿರ ವಿಶೇಷ ವಸೂಲಾತಿ ಕೌಂಟರ್ ತೆರೆದಿದ್ದು, ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರು ತಿಳಿಸಿದ್ದಾರೆ.

    Department of Fisheries ಪ್ರಧಾನ ಮಂತ್ರಿ‌ ಮತ್ಸ್ಯ ಸಂಪದ & ನೀಲಿಕ್ರಾಂತಿ‌‌ ಯೋಜನೆಯಡಿ ಅರ್ಜಿ‌ ಆಹ್ವಾನ

    0

    Department of Fisheries ಮೀನುಗಾರಿಕೆ ಇಲಾಖೆಯು ೨೦೨೨-೨೩ ರಿಂದ ೨೦೨೪-೨೫ನೇ ಸಾಲಿನವರೆಗೂ ಮರು ಹಂಚಿಕೆಯಾಗಿರುವ ಪ್ರಧಾನ ಮಂತ್ರಿ ಮತ್ಸö್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
    ಮೀನು ಕೃಷಿಕೊಳಗಳ ನಿರ್ಮಾಣ, ಮೀನುಕೃಷಿ ಕೊಳ ನಿರ್ಮಾಣ ಮಾಡಿ ಮೀನುಕೃಷಿ ಕೈಗೊಂಡವರಿಗೆ ಹೂಡಿಕೆಗಳ ವೆಚ್ಚದ ಮೇಲೆ ಸಹಾಯ, ಯಾಂತ್ರೀಕೃತ ದೋಣಿ ಖರೀದಿಗೆ ಸಹಾಯ, ಮೀನಿಮರಿ ಪಾಲನಾ ಘಟಕ ನಿರ್ಮಾಣದ ಬಗ್ಗೆ ಸಹಾಯ, ಸೈಕಲ್ ವಿತ್ ಐಸ್‌ಬಾಕ್ಸ್, ಮಧ್ಯಮ ವರ್ಗದ ಅಲಂಕಾರಿಕ ಸಾಕಾಣಿಕೆ ಘಟಕ (ಪ.ಜಾ) ಮತ್ತು ಹೊಸತಾದ ಮೀನುಮಾರಾಟದ ಕಿಯೋಸ್ಕ್ ನಿರ್ಮಾಣಕ್ಕಾಗಿ ಸಹಾಯ ಧನ ನೀಡಲಾಗುತ್ತಿದ್ದು, ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. ೪೦ ರಷ್ಟು ಹಾಗೂ ಪ.ಜಾ/ಪ.ಪಂ. ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ. ೬೦ ರಷ್ಟು ಸಹಾಯಧನ ನೀಡಲಾಗುವುದು.
    Department of Fisheries ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಫೆ.೦೭ ರೊಳಗಾಗಿ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿರುತ್ತಾರೆ.

    Republic Day ಲಕ್ಕುಂಡಿಯ ಶಿಲ್ಪಕಲೆ ಸ್ಥಬ್ಧಚಿತ್ರವು ಗಣರಾಜ್ಯೋತ್ಸವ‌ ಪ್ರಶಸ್ತಿ‌‌ ಪಡೆಯುವ ವಿಶ್ವಾಸವಿದೆ- ಹೇಮಂತ್ ನಿಂಬಾಳ್ಕರ್

    0

    Republic Day ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದ್ದು, ಈ ಬಾರಿ “ಲಕ್ಕುಂಡಿಯ ಶಿಲ್ಪಕಲೆಯ ತೊಟ್ಟಿಲು”ವಿಷಯಾಧಾರಿತ ಸ್ತಬ್ಧಚಿತ್ರವು ಅತ್ಯಂತ ಅತ್ಯಾಕರ್ಷಣೀಯವಾಗಿದ್ದು, ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿರುವ ರಾಜ್ಯದ ಸ್ತಬ್ಧಚಿತ್ರವು ಪ್ರಶಸ್ತಿ ಪಡೆಯುವ ವಿಶ್ವಾಸವಿದೆ ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಬಾರಿಯ ಗಣರಾಜ್ಯೋತ್ಸವದಲ್ಲಿ ರಾಜ್ಯದಿಂದ ಭಾಗವಹಿಸಲಿರುವ ಸ್ತಬ್ಧಚಿತ್ರವು ಗದಗಿನ ಲಕ್ಕುಂಡಿಯಲ್ಲಿರುವ ಮಂದಿರಕ್ಕೆ ಹೋಲುವಂತಿರುವ ಸ್ತಬ್ಧಚಿತ್ರವನ್ನು ಅಂತರರಾಷ್ಟ್ರೀಯ ಕಲಾವಿದ ಶಶಿಧರ ಅಡಪ ವಿನ್ಯಾಸಗೊಳಿಸಿದ್ದು, ದೆಹಲಿಯ ರಾಷ್ಟ್ರೀಯ ರಂಗಶಾಲಾ ಕ್ಯಾಂಪಿನಲ್ಲಿ ಕಳೆದ ಒಂದು ತಿಂಗಳಿನಿಂದ ರಾಜ್ಯದ 50ಕ್ಕೂ ಹೆಚ್ಚು ಜನ‌ ಕಲಾವಿದರು,ಕುಶಲ ಕರ್ಮಿಗಳು ಮೈಕೊರೆಯುವ ಚಳಿಯಲ್ಲಿ ಸ್ತಬ್ಧಚಿತ್ರವನ್ನು ನಿರ್ಮಾಣಗೊಳಿಸಿದ್ದಾರೆ.

    ಜ.23ರ ಗುರುವಾರ ನವದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ನಡೆದ ಸ್ತಬ್ಧಚಿತ್ರದ ಪೂರ್ವಾಭ್ಯಾಸದಲ್ಲಿ ರಾಜ್ಯದ ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು ಸ್ತಬ್ಧಚಿತ್ರಕ್ಕೆ ಎರಡೂ ಬದಿಯಲ್ಲಿ ನೆರೆದ ಜನಸ್ತೋಮವು ತಮ್ಮ ಹತ್ತಿರ ಸ್ತಬ್ಧಚಿತ್ರ ಬಂದಾಗ ಅದರ ವಿನ್ಯಾಸ, ಶಿಲ್ಪಕಲೆ, ಸಂಸ್ಕೃತಿ, ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸಿದ ಕಲಾವಿದರ ದೃಶ್ಯವನ್ನು ಕಂಡ ಜನರು ಕರತಾಡನ ಮೂಲಕ ಅಭೂತಪೂರ್ವವಾಗಿ ಸ್ವಾಗತಿಸಿ ಪ್ರಶಂಸೆ ವ್ಯಕ್ತಪಡಿಸಿದರು.

    ಕರ್ತವ್ಯಪಥದಲ್ಲಿ ಸೇರಿದ ಜನರಿಂದ ನಿರೀಕ್ಷೆಗೂ ಮೀರಿ ಬಂದ ಪ್ರತಿಕ್ರಿಯೆಗೆ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ರಾಜ್ಯದ ಸ್ತಬ್ಧಚಿತ್ರಕ್ಕೆ ಪ್ರಶಸ್ತಿ ದೊರೆಯಲಿದೆ ಎಂಬ ವಿಶ್ವಾಸವನ್ನು ಆಯುಕ್ತರಾದ ಹೇಂಮಂತ್ ನಿಂಬಾಳ್ಕರ್ ಅವರು ವ್ಯಕ್ತಪಡಿಸಿದರು.

    ಕರ್ತವ್ಯ ಪಥದಲ್ಲಿ ಸಾಗಿದ ಸ್ತಬ್ದಚಿತ್ರಕ್ಕೆ ಕನ್ನಡ ಸಾಹಿತ್ಯ ಇರುವ “ಶಿಲ್ಪಕಲೆಯ ತೊಟ್ಟಿಲು ನಮ್ಮ ಗದುಗಿನ ಲಕ್ಕುಂಡಿ” ಎಂಬ ಹಾಡಿಗೆ ಹೆಸರಾಂತ ಕಲಾವಿದ ಪ್ರವೀಣ ಡಿ.ರಾವ್ ಅವರ ಸಂಗೀತ ಸಂಯೋಜನೆಯ ನೀನಾದಕ್ಕೆ ಗದಗ, ಬೆಂಗಳೂರು, ಮೈಸೂರು ಹಾಗೂ
    ಧಾರವಾಡದಿಂದ ಆಗಮಿಸಿದ ಸ್ತಬ್ಧಚಿತ್ರದ ಕಲಾವಿದರು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿ ಹೆಚ್ಚಿನ ಮೆರಗು ತಂದಿದ್ದಲ್ಲದಲೇ ಅಲ್ಲಿ ಸೇರಿದವರನ್ನು ರೋಮಾಂಚನಗೊಳಿಸಿತು.

    ಸ್ತಬ್ದಚಿತ್ರದ ಮೇಲ್ಭಾಗದಲ್ಲಿ 10 ಜನ ಕಲಾವಿದರು ಸೇರಿದಂತೆ 18 ಜನ ಕಲಾವಿದರಿದ್ದು,
    ಸ್ತಬ್ಧಚಿತ್ರದ ಇಕ್ಕೆಲಗಳಲ್ಲಿ ನಾಲ್ಕು ಪುರುಷ-ಮಹಿಳೆಯರು ಸಾಂಪ್ರಾದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದು, ಸ್ತಬ್ಧಚಿತ್ರಕ್ಕೆ ಇನ್ನಷ್ಟು ಮೆರಗು ತಂದಿತು.

    Republic Day ಕರ್ನಾಟಕದ ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿಯನ್ನು ಅದರ ಅದ್ಭುತ ಕಲ್ಲಿನ ವಾಸ್ತುಶಿಲ್ಪಕ್ಕಾಗಿ ‘ಶಿಲ್ಪಕಲೆಯ ತೊಟ್ಟಿಲು’ ಎಂದು ಕರೆಯಲಾಗುತ್ತದೆ. ಇಲ್ಲಿನ ಸುಂದರವಾದ ದೇವಾಲಯಗಳು, ಮೆಟ್ಟಿಲು ಬಾವಿಗಳು ಮತ್ತು ಚಾಲುಕ್ಯ ರಾಜವಂಶದ ಶಾಸನಗಳಿಗೆ ನೆಲೆಯಾಗಿದೆ. ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿರುವುದರ ಜೊತೆಗೆ, ಕ್ರಿ. ಶ. 10 ರಿಂದ 12 ನೇ ಶತಮಾನದ ನಡುವೆ ಲಕ್ಕುಂಡಿ ಒಂದು ದೊಡ್ಡ ವಾಣಿಜ್ಯ ಕೇಂದ್ರವಾಗಿತ್ತು. ಈ ನಗರವು ಹಲವಾರು ರಾಜವಂಶಗಳಿಂದ ಆಳಲ್ಪಟ್ಟಿತ್ತಾದರೂ ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಚಾಲುಕ್ಯರ ರಾಜವಂಶ.
    ಲಕ್ಕುಂಡಿಯು ಪ್ರಾಚೀನಾನ್ವೇಷಕರು ಮತ್ತು ವಾಸ್ತುಶಿಲ್ಪ ಪ್ರಿಯರ ಸ್ವರ್ಗವಾಗಿದೆ. ಇದು 50 ದೇವಾಲಯಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ಶಿವನಿಗೆ ಸಮರ್ಪಿತವಾಗಿವೆ; 101 ಮೆಟ್ಟಿಲು ಬಾವಿಗಳು (ಕಲ್ಯಾಣಿ / ಪುಷ್ಕರಣಿ); ಮತ್ತು 29 ಶಾಸನಗಳು ಇಲ್ಲಿವೆ. ಇವುಗಳು ಕಲ್ಯಾಣಿ ಚಾಲುಕ್ಯರ ಕಲೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಶ್ರೇಷ್ಠತೆಯ ಸಂಕೇತವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿರ್ವಹಿಸುತ್ತಿರುವ ವಸ್ತುಸಂಗ್ರಹಾಲಯವು ಲಕ್ಕುಂಡಿಯ ಶ್ರೀಮಂತ ಶಿಲ್ಪಕಲೆಯನ್ನು ಪ್ರದರ್ಶಿಸುತ್ತಿದೆ.
    ಸ್ತಬ್ಧಚಿತ್ರದ ಮುಂಭಾಗವು ಬ್ರಹ್ಮ ಜಿನಾಲಯ ದೇವಸ್ಥಾನದ ಬ್ರಹ್ಮನ ಪ್ರತಿಮೆಯನ್ನು ಹೊಂದಿದೆ. ಇದು ಲಕ್ಕುಂಡಿಯಲ್ಲಿರುವ ಅತ್ಯಂತ ಹಳೆಯ ಜೈನ ದೇವಾಲಯವಾಗಿದ್ದು ಭಗವಾನ್ ಮಹಾವೀರನಿಗೆ ಸಮರ್ಪಿತವಾಗಿದೆ. ಅದರ ನಂತರ ಬ್ರಹ್ಮ ಜಿನಾಲಯ ದೇವಸ್ಥಾನದ ತೆರೆದ ಕಂಬದ ಮಂಟಪವಿದೆ.

    ಸ್ತಬ್ಧಚಿತ್ರದ ಮುಖ್ಯ ವಿಭಾಗವು ಭವ್ಯವಾದ ಮತ್ತು ಅಲಂಕೃತವಾದ ಕಾಶಿ ವಿಶ್ವೇಶ್ವರ ದೇವಸ್ಥಾನ ಮತ್ತು ಶಿವನಿಗೆ ಸಮರ್ಪಿತವಾದ ನನ್ನೇಶ್ವರ ದೇವಸ್ಥಾನವನ್ನು ಪ್ರದರ್ಶಿಸುತ್ತದೆ.

    Shivaganga Yoga Centre ನಿತ್ಯ ಯೋಗಾಭ್ಯಾಸದಿಂದ ಮಾನಸಿಕ ಸಾಮರ್ಥ್ಯ,ನೆಮ್ಮದಿ ಲಭ್ಯ-ಜಿ.ಎಸ್.ಓಂಕಾರ್

    0

    Shivaganga Yoga Centre ಒತ್ತಡಮುಕ್ತ ಜೀವನಶೈಲಿ ರೂಢಿಸಿಕೊಳ್ಳಲು ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಅತ್ಯಂತ ಸಹಕಾರಿಯಾಗಿದೆ. ಯೋಗ, ಪ್ರಾಣಾಯಾಮ, ಧ್ಯಾನದ ಅಭ್ಯಾಸದಿಂದ ಸದೃಢ ಆರೋಗ್ಯ ನಮ್ಮದಾಗುತ್ತದೆ ಎಂದು ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆ ಯೋಗ ಶಿಕ್ಷಕ ಜಿ.ಎಸ್.ಓಂಕಾರ್ ಹೇಳಿದರು.

    ಶಿವಮೊಗ್ಗ ನಗರದ ಶ್ರೀರಾಮ ಆರ್ಯ ವೈಶ್ಯ ಶ್ರೀರಾಮ ಸಹಕಾರ ಸಂಘದ ರಾಘವ ಸಭಾಂಗಣದಲ್ಲಿ ಯೋಗ ಶಿಬಿರಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿ, ಯೋಗ ನಿತ್ಯ ಅಭ್ಯಾಸ ಮಾಡುವುದರಿಂದ ಮಾನಸಿಕ ಸಾಮರ್ಥ್ಯ ವೃದ್ಧಿಸುವ ಜತೆಯಲ್ಲಿ ನೆಮ್ಮದಿ ಜೀವನಶೈಲಿ ನಮ್ಮದಾಗುತ್ತದೆ ಎಂದು ತಿಳಿಸಿದರು.

    ಶಿವಗಂಗಾ ಯೋಗಕೇಂದ್ರದಿಂದ ನಗರದ 33 ಕಡೆ ಉಚಿತವಾಗಿ ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಒತ್ತಡ ನಿರ್ವಹಣೆ ಬಗ್ಗೆ ಉಚಿತ ತರಗತಿಗಳನ್ನು ನಡೆಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    ಯೋಗ ಶಿಕ್ಷಕ ಎಚ್ ಕೆ ಹರೀಶ್ ಮಾತನಾಡಿ, ಸನಾತನ ಕಾಲದಿಂದಲೂ ಸಹ ಇರುವ ಯೋಗ, ಪ್ರಾಣಾಯಾಮ, ಧ್ಯಾನವು ನಮ್ಮ ದೈಹಿಕ ಶಕ್ತಿಯನ್ನು ವೃದ್ಧಿ ಮಾಡುವುದರ ಜತೆಗೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ನಿರಂತರವಾಗಿ ಯೋಗ ಅಭ್ಯಾಸ ಮಾಡಬೇಕು ಎಂದು ಹೇಳಿದರು.

    ಶಿಕ್ಷಕ ವಿಜಯ ಕೃಷ್ಣ ಮಾತನಾಡಿ, ಪ್ರತಿ ನಿತ್ಯ ಯೋಗ ಅಭ್ಯಾಸದಿಂದ ಮನಸ್ಸು ನಿರ್ಮಲವಾಗುವುದರ ಜತೆಗೆ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದರಿಂದ ಎಲ್ಲ ಖಾಯಿಲೆಗಳಿಂದ ರೋಗ ಮುಕ್ತರಾಗುತ್ತೇವೆ. ಉಸಿರಾಟ ಮತ್ತು ಪ್ರಾಣಾಯಾಮದಿಂದ ನಮ್ಮ ಮೆದುಳು ಸಕ್ರಿಯವಾಗಿ ಚುರುಕಾಗುತ್ತದೆ. ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಯೋಗಪಟುಗಳು ಸಾಮಾನ್ಯವಾಗಿ ಕಾಯಿಲೆಯಿಂದ ಬಳಲುವವರ ಸಂಖ್ಯೆ ಕಡಿಮೆ ಎಂದು ನುಡಿದರು.

    ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಮಹೇಶ್, ಶ್ರೀನಿವಾಸ್, ಹಿರಿಯ ಯೋಗಪಟು ಶಶಿಧರ್, ವಿಕ್ರಂ, ಶಂಕರ್, ಆನಂದ್, ಕಾಟನ್ ಜಗದೀಶ್, ಸುಬ್ರಮಣಿ. ಶಿವಕುಮಾರ್, ಸುಜಾತ, ಸೌಮ್ಯ, ಶೋಭಾ, ಉಷಾ, ಸುಮಾ, ಶೈಲಜಾ, ಪ್ರೇಮ ಶ್ರೀನಿವಾಸ್ ಹಾಗೂ ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

    Akashavani Bhadravati ಶಿವಮೊಗ್ಗದಲ್ಲಿ ಆಕಾಶವಾಣಿ ಎಫ್.ಎಂ. 1೦ ಕಿ.ವ್ಯಾ.ಪ್ರಸಾರಕ. ಭದ್ರಾವತಿ ಕೇಂದ್ರದ ಪ್ರಸಾರ ಸಾಮರ್ಥ್ಯ ಹೆಚ್ಚಳ- ಬಿ.ವೈ.ರಾಘವೇಂದ್ರ

    0

    Akashavani Bhadravati ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್.ಮುರುಗನ್ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಪದಾಧಿಕಾರಿಗಳು ಸನ್ಮಾನಿಸಿದರು.

    ಕೆನಡಾದಿಂದ ತರಲಾಗಿರುವ 10 ಕಿಲೋವ್ಯಾಟ್ ಸಾಮರ್ಥ್ಯದ ಟ್ರಾನ್ಸ್ ಮೀಟರ್ ಅಳವಡಿಕೆ ಕಾರ್ಯಕ್ರಮದ ಚಾಲನೆ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಜನಪ್ರತಿನಿಧಿಗಳನ್ನು ಅಭಿನಂದಿಸಿದರು. ಟ್ರಾನ್ಸ್ ಮೀಟರ್ ಅಳವಡಿಕೆಯಿಂದ ಪ್ರಸಾರ ಸಾಮರ್ಥ್ಯ ಹತ್ತುಪಟ್ಟು ಹೆಚ್ಚಾಗಲಿದೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲಿನ ಅನೇಕ ಜಿಲ್ಲೆಗಳಲ್ಲೂ ಆಕಾಶವಾಣಿ ಕಾರ್ಯಕ್ರಮ ಕೇಳಬಹುದಾಗಿದೆ.

    Akashavani Bhadravati ಶಾಸಕ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ನಿರ್ದೇಶಕರಾದ ಗಣೇಶ್ ಎಂ.ಅಂಗಡಿ, ಕಿರಣ್‌ಕುಮಾರ್, ಶಿವಕುಮಾರ್, ರವಿಪ್ರಕಾಶ್, ಜನ್ನಿ, ರಾಜಶೇಖರ್, ಆಕಾಶವಾಣಿಯ ಎಸ್.ಆರ್.ಭಟ್, ಡಾ. ರಘು, ಆಕಾಶವಾಣಿ ನಿರ್ದೇಶಕರು ಸಿಬ್ಬಂದಿ ವರ್ಗ ಇದ್ದರು.

    National Voter’s Day ರಾಷ್ಟ್ರೀಯ ಮತದಾರರ ದಿನಾಚರಣೆ.ಪ್ರತಿಜ್ಞಾ ವಿಧಿ‌ ಸ್ವೀಕಾರ

    0

    National Voter’s Day ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಶುಕ್ರವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮತದಾರರ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.

    ಅಪರ ಜಿಲ್ಲಾಧಿಕಾರಿಗಳಾದ ಸಿದ್ದಲಿಂಗ ರೆಡ್ಡಿ ಅವರು ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

    National Voter’s Day ಈ ವೇಳೆ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಪ್ರದೀಪ್ ನಿಕ್ಕಂ, ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

    Vidhusekhara Bharati Swamiji ಹೊಸಪೇಟೆಯಲ್ಲಿ ಶೃಂಗೇರಿ ಶ್ರೀವಿಧುಶೇಖರ ಭಾರತಿ ಸ್ವಾಮೀಜಿಗಳಿಂದ‌ ಸಾಧಕರಿಗೆ ಸನ್ಮಾನ

    0

    Vidhusekhara Bharati Swamiji ಹೊಸಪೇಟೆ ನಗರದಲ್ಲಿರುವ ಶ್ರೀ ಚಿಂತಾಮಣಿ ಮಠಕ್ಕೆ ಶೃಂಗೇರಿ ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಚಿತ್ತೈಸಿದ್ದರು. ಶ್ರೀ ಚಿಂತಾಮಣಿ ಮಠದ ಪ್ರಸ್ತುತ 31ನೆ ಪೀಠಾಧಿಪತಿಗಳಾಗಿರುವ ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು.

    ಜಗದ್ಗುರುಗಳು ಶ್ರೀಮಠದ ಕಾಶೀ ವಿಶ್ವೇಶ್ವರ ದೇವರಿಗೆ ಹಾಗೂ ಶಂಕರಾಚಾರ್ಯರಿಗೆ ಪುಷ್ಪ ಸಮರ್ಪಿಸಿ ಮಂಗಳಾರತಿ ನೆರವೇರಿಸಿದರು. ನಂತರದಲ್ಲಿ ಯತಿದ್ವಯರಿಬ್ಬರೂ ಗೋ ಶಾಲೆ ಕಡೆ ನಡೆದರು.

    ಚಿಂತಾಮಣಿ ಮಠದಲ್ಲಿ 30 ಶುದ್ಧ ದೇಸಿ ಹಸುಗಳನ್ನು ಸಾಕಲಾಗಿದೆ. ಗುರುಗಳು ಗೋವುಗಳಿಗೆ ಪೂಜೆ ಸಲ್ಲಿಸಿ ಪುಟ್ಟ ಕರುಗಳನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು. ಜಗದ್ಗುರುಗಳು “ಝಾನ್ಸಿ” ಎಂಬ ಪುಟ್ಟ ಕರುವನ್ನು ಮುದ್ದಾಡಿದರು.

    ಇಂದಿನ ಕಾರ್ಯಕ್ರಮದಲ್ಲಿ ವಿಶೇಷವಾಗಿ ಚಿಂತಾಮಣಿ ಮಠದ ಬಾಲ ಗುರುಕುಲಮ್ ವಿದ್ಯಾರ್ಥಿಗಳು ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಮುಂದೆ ಕಂಠಸ್ಥವಾಗಿದ್ದ ಭಗವದ್ಗೀತೆಯ 12ನೆ ಅಧ್ಯಾಯದ ಸಂಪೂರ್ಣ ಶ್ಲೋಕಗಳನ್ನು ಪಾರಾಯಣ ಮಾಡಿದರು. ಶ್ರೀ ಮಾತಾ ಸ್ತೋತ್ರ ಪಾರಾಯಣ ಸಮಿತಿಯವರು ಗುರುದ್ವಯರ ಮುಂದೆ ಭಜನೆ ಮಾಡಿದರು.

    ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ ಏನೆಂದರೆ ಅದ್ವೈತ ಪರಂಪರೆಗೆ ಸೇವೆ ಸಲ್ಲಿಸಿದ ಐದು ಸಾಧಕರಿಗೆ “ಅದ್ವೈತ ಚಿಂತಾಮಣಿ ” ಎಂಬ ಬಿರುದನ್ನು ನೀಡಿ 10,000 ರೂ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

    ಅದ್ವೈತ ಚಿಂತಾಮಣಿಗಳೆಂದು ಬಿರುದು ಪಡೆದ ಸನ್ಮಾನಿತರು:-

    1. ಶ್ರೀ ಸಿ. ಕೃಷ್ಣ ಭಟ್ಟರು
    2. ಶ್ರೀ ಹಿತ್ಳಲ್ಲಿ ಸೂರ್ಯನಾರಾಯಣ ಭಟ್ಟರು
    3. ಶ್ರೀ ಜಿ. ಆರ್. ಪಾಟೀಲರು
    4. ಶ್ರೀ ರಂಗೋಪಂತ ನಾಗರಾಜ್ ರಾವ್ ರವರು
    5. ಶ್ರೀ ಶ್ರೀಕಾಂತ್ ಋಗ್ವೇದಿಯವರು

    Vidhusekhara Bharati Swamiji ಶ್ರೀ ಚಿಂತಾಮಣಿ ಗುರುಗಳು ಹೊಸಪೇಟೆ ನಗರದ ವಿಪ್ರರನ್ನು ಒಗ್ಗೂಡಿಸಿ “ಜಗದ್ಗುರುಗಳ ವಿಜಯನಗರ ಯಾತ್ರಾ ಸಮಿತಿಯನ್ನು ರಚಿಸಿ ತನ್ಮೂಲಕ ವಿಜಯನಗರ ಪ್ರಾಂತ್ಯದ ಯಾತ್ರೆಯು ಸಂಗೋಪಾಂಗವಾಗಿ ನಡೆಯುವಂತೆ ಮಾಡಿದ್ದಾರೆ.

    ಶ್ರೀ ಚಿಂತಾಮಣಿ ಮಠವನ್ನು ಕಂಡು ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಮಾತನಾಡಿದರು.
    ಚಿಂತಾಮಣಿ ಸ್ವಾಮಿಗಳು ನಮಗೆ ಪ್ರೀತಿ ಪಾತ್ರರು. ಪೂರ್ವಶ್ರಮದಲ್ಲಿಯೇ ತಮ್ಮ ಲೌಕಿಕ ವೃತ್ತಿಯನ್ನು ತೊರೆದು ಗುರುಸೇವೆ ತತ್ತ್ವಪ್ರಚಾರವನ್ನೇ ತಮ್ಮ ಜೀವನದ ಮುಖ್ಯ ಗುರಿಯನ್ನಾಗಿಸಿಕೊಂಡಿದ್ದರು. ಅಂತಹವರು ಈ ಪ್ರಾಂತ್ಯಕ್ಕೆ ಪೀಠಾಧಿತಿಗಳಾಗಿರುವುದು ಅತ್ಯಂತ ಸಂತೋಷಕರವಾದ ವಿಷಯ. ಶ್ರೀ ಚಿಂತಾಮಣಿ ಮಠಕ್ಕೆ ಬಹಳ ಪ್ರಾಚೀನವಾದ ಇತಿಹಾಸವಿದೆ. ಇಲ್ಲಿನ ಹಿಂದಿನ ಯತಿಗಳೆಲ್ಲ ತಪಸ್ಸು ಅನುಷ್ಠಾನವಂತರು. ಚಿಂತಾಮಣಿ ಸ್ವಾಮಿಗಳು ನಮ್ಮ ಬಳಿ ಆಗಾಗ ಬಂದು ಶಾಂಕರ ತತ್ತ್ವ ಪ್ರಚಾರದ ಬಗ್ಗೆ ಹಾಗೂ ಇತರೆ ಕಾರ್ಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ತತ್ತ್ವ ಶಂಕರದ ಮೂಲಕ ಅದ್ವೈತ ಪ್ರಚಾರ, ವಿದ್ಯಾರಣ್ಯರ ಬಗ್ಗೆ ಕೂಡ ದೃಶ್ಯಾವಳಿಗಳನ್ನು ಮಾಡಿದ್ದಾರೆ. ಚಿಂತಾಮಣಿ ಮಠವು ತಾತ್ತ್ವಿಕವಾಗಿ ಅಭಿವೃದ್ಧಿಯಾಗಿದೆ. ಲೌಕಿಕವಾಗಿಯೂ ಹೀಗೆ ಅಭಿವೃದ್ಧಿಯಾಗಲಿ. ಕೈಯಲ್ಲಿ ಸಾಧ್ಯವಾದವರು ಮಠದ ಕಾರ್ಯಗಳಿಗೆ ಸಹಾಯ ಮಾಡಬೇಕು. ಆಗದಿದ್ದರೆ ಸುಮ್ಮನಿರಬೇಕು. ತೊಂದರೆ ಮಾಡುವುದು, ಅಡ್ಡಿಮಾಡುವುದು, ಅಪಪ್ರಚಾರ ಮಾಡಿದರೆ ಅವರು ತಮ್ಮ ವಿನಾಶಕ್ಕೆ ತಾವೇ ಶಂಕುಸ್ಥಾಪನೆ ಮಾಡಿಕೊಂಡಂತೆ ಎಂಬ ಅನುಗ್ರಹದ ನುಡಿಗಳನ್ನಾಡಿದರು.

    ಚಿಂತಾಮಣಿ ಮಠದ ಶ್ರೀಗಳು :- ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಬೇರೆ ಯಾರೂ ಅಲ್ಲ…ಜಗದ್ಗುರು ಶ್ರೀಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳೇ ಎಂದು ಕಥೆಯ ಮೂಲಕ ತಿಳಿಸಿಕೊಟ್ಟರು.

    ಶೃಂಗೇರಿ ಮಠದ ನೂತನ ಆಡಳಿತಾಧಿಕಾರಿಗಳಾದ ಗುರುಸೇವ ನಿರತ ಪಿ.ಎ. ಮುರಳಿ ಯವರಿಗೆ ಚಿಂತಾಮಣಿ ಮಠದ ಆಡಳಿತಾಧಿಕಾರಿಗಳಾದ ಶ್ರೀಕಾಂತ್ ಋಗ್ವೇದಿಯವರು ಸನ್ಮಾನ ಮಾಡಿದರು.

    ಸರಿಸುಮಾರು ಚಿಂತಾಮಣಿ ಮಠದಲ್ಲಿ ಒಂದು ಸಾವಿರ ಜನ ಸೇರಿದ್ದರು. ಎಲ್ಲರೂ ಶಂಕರಾಚಾರ್ಯರಿಗೆ ಜೈ ಕಾರ ಹಾಕಿ, ಮಹಾಪ್ರಸಾದ ಸ್ವೀಕರಿಸಿದರು

    ವರದಿ
    ಮುರುಳೀಧರ್ ನಾಡಿಗೇರ್