Tuesday, March 10, 2026
Tuesday, March 10, 2026
Home Blog Page 386

MC Gann Hospital ಆಯನೂರಿನಲ್ಲಿ ಮೃತರಾದ ಅಪರಿಚಿತ ವ್ಯಕ್ತಿಯ ಮಾಹಿತಿ. ಕುಂಸಿ ಠಾಣೆ ಪ್ರಕಟಣೆ

0

MC Gann Hospital ಸುಮಾರು 55 ರಿಂದ 60 ವರ್ಷ ವಯಸ್ಸಿನ ವ್ಯಕ್ತಿ ಆಯನೂರು ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ವಿನಾಯಕ ಮೆಡಿಕಲ್ ಎದುರು ಅಸ್ವಸ್ಥನಾಗಿ ಕುಸಿದು ಬಿದ್ದಿದ್ದು ಆಂಬುಲೆನ್ಸ್ ಕರೆಸಲಾಗಿ, ಸಿಬ್ಬಂದಿ ತಪಾಸಣೆ ನಡೆಸಿ ವ್ಯಕ್ತಿ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಯ ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಮೃತನ ವಾರಸ್ಸುದಾರರು ಯಾರಾದರೂ ಇದ್ದಲ್ಲಿ ಕುಂಸಿ ಪೊಲೀಸ್ ಠಾಣೆಗಾಗಲಿ ಅಥವಾ ಶಿವಮೊಗ್ಗ ಜಿಲ್ಲಾ ಪೊಲೀಸ್ ನಿಯಂತ್ರಣ ಕೋಣೆ, ಪಿ.ಐ ಕುಂಸಿ ಠಾಣೆ 08182 262332, ಡಿ ವೈ ಎಸ್ ಪಿ ಶಿವಮೊಗ್ಗ 08182 261412, ಶಿವಮೊಗ್ಗ ಕಂಟ್ರೋಲ್ ರೂಂ 08182 261413 ನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.

Swachh Bharat Mission ಶಿರಾಳಕೊಪ್ಪಕ್ಕೆ ಜಿಎಫ್ ಸಿ ಶ್ರೇಣಿಯಲ್ಲಿ3-ಸ್ಟಾರ್ ‌ಪಟ್ಟಣ ಎಂಬ ಮನ್ನಣೆ

0

Swachh Bharat Mission ಶಿರಾಳಕೊಪ್ಪ ಪಟ್ಟಣವನ್ನು ಬಯಲು ಶೌಚಮುಕ್ತ ಪ್ಲಸ್ ಮರುಪ್ರಮಾಣೀಕರಣ ಮತ್ತು ಗಾರ್ಬೇಜ್‌ಫ್ರೀ ಸಿಟಿ ರೇಟಿಂಗ್‌ನಲ್ಲಿ ಜಿಎಫ್‌ಸಿ 3 ಸ್ಟಾರ್ ಪಟ್ಟಣವೆಂದು ಘೋಷಿಸಲಾಗಿದೆ.

ಸ್ವಚ್ಚ ಭಾರತ್ ಮಿಷನ್(ನಗರ) ಮಾರ್ಗಚೂಚಿಯಂತೆ ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ಬಯಲು ಶೌಚ ಮುಕ್ತ ಮತ್ತು ಕಸ ಮುಕ್ತ ನಗರ ರೇಟಿಂಗ್ ಮಾರ್ಗಸೂಚಿಗಳನ್ನು ಕ್ರಮಬದ್ದವಾಗಿ ಅನುಷ್ಟಾನಗೊಳಿಸಲಾಗಿದ್ದು, ಶಿರಾಳಕೊಪ್ಪ ಪಟ್ಟಣವನ್ನು ಬಯಲುಶೌಚ ಮುಕ್ತ ಪ್ಲಸ್ ಮರುಪ್ರಮಾಣೀಕರಣ ಮತ್ತು ಗಾರ್ಬೇಜ್‌ಫ್ರೀ ಸಿಟಿ ರೇಟಿಂಗ್‌ನಲ್ಲಿ ಜಿಎಫ್‌ಸಿ 3 ಸ್ಟಾರ್ ಪಟ್ಟಣವೆಂದು ಈ ಮೂಲಕ ಘೋಷಿಸಿದೆ ಎಂದು ಶಿರಾಳಕೊಪ್ಪ ಪುರಸಭೆ ತಿಳಿಸಿದೆ.

Grama One Center ಜಿಲ್ಲೆಯ ಕೆಲವು ಗ್ರಾಮ ಒನ್ ಕೇಂದ್ರಗಳ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನ

0

Grama One Center ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಒನ್ ಕೇಂದ್ರಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ಒದಗಿಸಲು ಗ್ರಾ.ಪಂ ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಮೂಲಕ ಗ್ರಾಮೀಣ ಭಾಗದ ಜನರಿಗೆ ತಮ್ಮ ಸಮೀಪದಲ್ಲಿ ಸರ್ಕಾರದ ಹಲವು ಸೇವೆಗಳು ತಮ್ಮ ಮನೆ ಬಾಗಿಲಿಗೆ ತಲುಪಿಸುತ್ತಿದೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನೂತನ ಯೋಜನೆಗಳನ್ನು ಸೇವಾಸಿಂಧು ಪೋರ್ಟಲ್ ಮೂಲಕ ಅನುಷ್ಟಾನಗೊಳಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಒನ್ ಕೇಂದ್ರಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತಿವುಳ್ಳವರು https://www.karnatakaone.gov.in/Public/GramOneFranchiseeTermsಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮಾ.15 ಕಡೆಯ ದಿನವಾಗಿದೆ. ಶಿವಮೊಗ್ಗ ತಾಲ್ಲೂಕಿನ ಅಗಸವಳ್ಳಿಯಲ್ಲಿ 01, ಭದ್ರಾವತಿ ತಾಲ್ಲೂಕಿನ ಮಾವಿನಕೆರೆ 01, ಕೊಮ್ಮಾರನಹಳ್ಳಿ 01, ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು 01, ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು 01, ಹೊಸನಗರ ತಾಲ್ಲೂಕಿನ ತ್ರಿಣಿವೆ 01 ಮತ್ತು ಮುಂಬಾರುವಿನಲ್ಲಿ 01 ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಬಹುದೆಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ತಿಳಿಸಿದ್ದಾರೆ.

Shivamogga City Corporation ಇ-ಆಸ್ತಿ ಅಭಿಯಾನ. ಸಾರ್ವಜನಿಕರಿಗೆ ಜವಾಬ್ದಾರಿಯಿಂದ ಕೆಲಸ ಮಾಡಿ ಕೊಡಿ- ಡಿಸಿ ಗುರುದತ್ತ ಹೆಗಡೆ

0

Shivamogga City Corporation ಮಹಾನಗರಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತ ಹಾಗೂ ರೆವಿನ್ಯೂ ಜಾಗದಲ್ಲಿ ನಿರ್ಮಿಸಿರುವ ಕಟ್ಟಡ, ನಿವೇಶನಗಳ ಸ್ವತ್ತುಗಳಿಗೆ ಇ-ಆಸ್ತಿ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಇ-ಆಸ್ತಿ ಅಭಿಯಾನ ಕುರಿತು ಚರ್ಚಿಸಲು ಮಹಾನಗರಪಾಲಿಕೆ, ಡಿಯುಡಿಸಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆಯಲ್ಲಿ ಅವರು ಮಾತನಾಡಿದರು.
ಕರ್ನಾಟಕ ಪೌರಸಭೆಗಳ ತೆರಿಗೆ ನಿಯಮ 2025 ಮತ್ತು ಕರ್ನಾಟಕ ಮಹಾನಗರಪಾಲಿಕೆ ತೆರಿಗೆ ನಿಯಮ 2025 ನ್ನು ಜಾರಿಗೆ ತಂದಿದ್ದು ಇದರಂತೆ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎ-ಖಾತಾ ಮತ್ತು ಬಿ-ಖಾತೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ದಿ: 10-09-2024 ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿವೇಶನ/ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಲಿದ್ದು ಇಂತಹ ಪ್ರಕರಣಗಳ ವ್ಯಾಪ್ರಿಗೆ ಬರುವ ಆಸ್ತಿ ಮಾಲೀಕರು ತಮ್ಮ ವ್ಯಾಪ್ತಿಯ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಲ್ಲಿ ನಿಗದಿತ ದಾಖಲೆಗಳನ್ನು ಸಲ್ಲಿಸಿ ಇ-ಖಾತೆಗಳನ್ನು ಪಡೆಯಬಹುದು.
ಇ_ಖಾತೆ ಮಾಡಿಸುವಲ್ಲಿ ಇಸಿ ಪಡೆಯಲು ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿರುವುದು ಕಂಡು ಬಂದಿದೆ. ಆದ್ದರಿಂದ ಇಸಿ ಗೆ ಅರ್ಜಿ ಸಲ್ಲಿಸಿದ 3 ದಿನಗಳ ಒಳಗೆ ಹಾಗೂ ಗರಿಷ್ಟ 1 ವಾರದೊಳಗೆ ಇಸಿ ನೀಡಬೇಕು. ಹಾಗೂ ಆಸ್ತಿ ಮಾಲೀಕರ ವ್ಯವಹಾರದ ನಂತರದ ಒಂದು ವರ್ಷದ ಇಸಿ ಹಾಗೂ ಆನ್‌ಲೈನ್ ಇಸಿ ಯನ್ನು ಪರಿಗಣಿಸುವಂತೆ ತಿಳಿಸಿದ ಅವರು ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡದೇ, ಇಸಿ ಪಡೆಯಲು ಸಮರ್ಪಕವಾಗಿ ಮಾಹಿತಿಯನ್ನು ಮಾಲೀಕರಿಗೆ ನೀಡಬೇಕು.
ಈ ವಿಷಯದಲ್ಲಿ ಯಾವುದೇ ದೂರುಗಳು ಬಾರದಂತೆ ಎಚ್ಚರಿಕೆ ವಹಿಸಿ, ಇ-ಖಾತಾ ಅಭಿಯಾನವನ್ನು ಸಕ್ರಿಯವಾಗಿ ಕೈಗೊಳ್ಳಬೇಕು. ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಂಡು ಸಾರ್ವಜನಿಕರಿಗೆ ಉತ್ತಮವಾಗಿ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.
ಎ-ಖಾತೆ, ಬಿ-ಖಾತೆ ಪಡೆಯುವ ಕುರಿತು ಜನದಟ್ಟಣೆ ಇರುವೆಡೆ ಫ್ಲೆಕ್ಸ್, ಹೋರ್ಡಿಂಗ್ಸ್, ಕಸದ ವಾಹನದಲ್ಲಿ ಜಿಂಗಲ್ಸ್, ಆಟೋ ಪ್ರಚಾರ, ಕರಪತ್ರಗಳ ಮೂಲಕ ವ್ಯಾಪಕ ಪ್ರಚಾರ ನೀಡಬೇಕು. ಹಾಗೂ ಹೆಲ್ಪ್ಲೈನ್ ಮೂಲಕ ಇ-ಖಾತೆ ಪಡೆಯಲು ಮಾಲೀಕರಿಗೆ ಸಹಕರಿಸಬೇಕು ಎಂದರು.
ಡಿಯುಡಿಸಿ ಯೋಜನಾ ನಿರ್ದೇಶಕ ಕೆ.ರಂಗಸ್ವಾಮಿ ಮಾತನಾಡಿ, ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 263808 ಆಸ್ತಿಗಳಿದ್ದು, ಇದರಲ್ಲಿ 43941 ಅನಧಿಕೃತ ಆಸ್ತಿಗಳು ಡಿಸಿಬಿನಲ್ಲಿ ನಮೂದಾಗಿದ್ದು ಇ-ಆಸ್ತಿ ತಂತ್ರಾAಶದ ಮೂಲಕ ಒಟ್ಟು ಅನುಮೋದಿತ ಆಸ್ತಿಗಳು 50,599 ಅಧಿಕೃತ, 1773 ಅನಧಿಕೃತ, 7 ಅಕ್ರಮ ಸೇರಿದಂತೆ 52,379 ಇವೆ. ಕಳೆದ ಫೆ.19 ರಿಂದ ಮಾ.03 ರವರೆಗೆ 1113 ಅಧಿಕೃತ, 22 ಅನಧಿಕೃತ ಆಸ್ತಿಗಳ ಇ-ಆಸ್ತಿ ತಂತ್ರಾAಶದಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಪಾಲಿಕೆ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

Sangeet Samarapan Trust ಶಿವಮೊಗ್ಗದಲ್ಲಿ ಮಾ. 15 ಹಾಗೂ 16 ರಂದು “ಧ್ವನಿ ಸಂಸ್ಕರಣ ಮತ್ತು ಸುಗಮ ಸಂಗೀತ ಕಲಿಕಾ ಶಿಬಿರ

0

Sangeet Samarapan Trust ಶಿವಮೊಗ್ಗ ನಗರದ ಪ್ರಸಿದ್ಧ “ಸಂಗೀತ್ ಸಮರ್ಪಣ್ ಟ್ರಸ್ಟ್” ವತಿಯಿಂದ ಮಾರ್ಚ್ 15 ರ ಶನಿವಾರ ಮತ್ತು 16 ರ ಭಾನುವಾರ ನಗರದ ಆರ್.ಟಿ.ಓ. ಕಛೇರಿ ರಸ್ತೆಯ ಪತ್ರಿಕಾ ಭವನದ ಮೊದಲ ಮಹಡಿಯಲ್ಲಿ ಧ್ವನಿ ಸಂಸ್ಕರಣ, ಸಂಗೀತದ ವಿಧಾನಶಾಸ್ತ್ರ ಹಾಗೂ ಸುಗಮ ಸಂಗೀತದ ಕಲಿಕಾ ಶಿಬಿರ (ಕಾರ್ಯಾಗಾರ) ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ, ಗಾಯಕಿ ಶ್ರೀಮತಿ ಸುರೇಖಾ ಹೆಗಡೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು,ನಾಡಿನ ಪ್ರಖ್ಯಾತ ಸುಗಮ ಸಂಗೀತ ಗಾಯಕ ಮಾಂತ್ರಿಕ, ಸಂಗೀತ ನಿರ್ದೇಶಕ ಪುತ್ತೂರು ನರಸಿಂಹ ನಾಯಕ್ ಹಾಗೂ ಸಂಗೀತ ಸಂಯೋಜಕ, ವ್ಯವಸ್ಥಾಪಕ ಮೆಂಡೋಲಿನ್ ಎನ್.ಎಸ್. ಪ್ರಸಾದ್ ರವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದು , ಈ ಇಬ್ಬರು ದಿಗ್ಗಜರ ಸಾರಥ್ಯದಲ್ಲಿ ಶಿಬಿರ ನಡೆಯಲಿದೆ ಎಂದು ತಿಳಿಸಿದರು.

ಶಿಬಿರವು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 5-30 ಗಂಟೆಯವರೆಗೆ ನಡೆಯಲಿದ್ದು, ಸಂಗೀತವನ್ನು ಕಲಿಯುವ ಉತ್ಸಾಹ ಇರುವ 15 ರಿಂದ 30 ವರ್ಷದೊಳಗಿನ ಶಿವಮೊಗ್ಗ ಜಿಲ್ಲೆಯಲ್ಲಿರುವ ಯುವ ಪೀಳಿಗೆ ಇದರ ಸಂಪೂರ್ಣ ಪ್ರಯೋಜನ ಪಡೆದು ಕೊಳ್ಳಬೇಕೆಂದು ಸುರೇಖಾ ಹೆಗಡೆ ಕೋರಿದ್ದಾರೆ.

ಶಿಬಿರದಲ್ಲಿ ಭಾಗವಹಿಸಲು ನಿಗದಿತ ಶುಲ್ಕವಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9980315679,
9481662308 ಗೆ ಸಂಪರ್ಕಿಸಲು ಅವರು ತಿಳಿಸಿದ್ದಾರೆ.

ಎನ್.ಬಿ. ರವೀಶ್ ಶಿವಮೊಗ್ಗ

ಶ್ರೀ ಪುತ್ತೂರು ನರಸಿಂಹ ನಾಯಕ್

Sangeet Samarapan Trust ಸುಮಾರು 50 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ತೊಡಗಿಸಿಕೊಂಡಿರುವ ನಾಯಕ್ ರವರು, ಆಕಾಶವಾಣಿ ಮತ್ತು ದೂರದರ್ಶನ ‘ಎ’ ಗ್ರೇಡ್ ಕಲಾವಿದರಾಗಿದ್ದಾರೆ. ಇವರು ನಾಡಿನಾದ್ಯಂತ, ದೇಶದಾದ್ಯಂತ ಹಾಗೂ ಅಮೆರಿಕಾ ಸೇರಿದಂತೆ ಸಾಕಷ್ಟು ಹೊರದೇಶದಲ್ಲಿ ತಮ್ಮ ಸಂಗೀತ ಕಾರ್ಯಕ್ರಮವನ್ನು, ಕಾರ್ಯಗಾರವನ್ನು ನಡೆಸುತ್ತಾ ಇಂದಿಗೂ ಬಹಳ ಬೇಡಿಕೆಯಲ್ಲಿ ಇದ್ದಾರೆ.

ದಾಸರ ಪದಗಳ 108 ಕ್ಕೂ ಹೆಚ್ಚಿನ ಆಲ್ಬಂಗಳಲ್ಲಿ ಹಾಡಿ, ಸಂಗೀತ ನಿರ್ದೇಶಕರಾಗಿ, ನಿರ್ಮಾಪಕರಾಗಿ ಕೆಲಸ ಮಾಡಿದ್ದು, ಕನ್ನಡ, ಹಿಂದಿ, ಮರಾಠಿ, ತುಳು ಹೀಗೆ ಸಾಕಷ್ಟು ಭಾಷೆಗಳಲ್ಲಿ ಹಾಡಿದ್ದಾರೆ. ಎಲ್ಲ ಹಿರಿಯ ಸಿನಿಮಾ ಸಂಗೀತ ನಿರ್ದೇಶಕರ ಅಡಿಯಲ್ಲಿ ಹಾಡಿದ ಇವರಿಗೆ “ಗಾಯಕರ ನಾಯಕ” ಎನ್ನುವ ಬಿರುದಾಂಕಿತವಿದೆ.

ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯದಿಂದ “ವಿಜಯ ದುಂದುಭಿ ಪ್ರಶಸ್ತಿ”, “ಉತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ”, “ರಾಜ್ಯೋತ್ಸವ ಪ್ರಶಸ್ತಿ”, “ಕರ್ನಾಟಕ ಸಂಗೀತ ನೃತ್ಯ ಜೀವಮಾನ ಸಾಧನೆ ಪ್ರಶಸ್ತಿ”, “ಹರಿದಾಸ ಸಂಗೀತ ರತ್ನ” ಪ್ರಶಸ್ತಿಯನ್ನು ಪುತ್ತೂರು ನರಸಿಂಹನಾಯಕ್ ಪಡೆದಿದ್ದಾರೆ.

ಶ್ರೀ ಮೆಂಡೋಲಿನ್ ಎನ್.ಎಸ್. ಪ್ರಸಾದ್ ಸಂಗೀತ ನಿರ್ದೇಶಕರಾಗಿ, ವ್ಯವಸ್ಥಾಪಕರಾಗಿ, ನಲವತ್ತು ವರ್ಷಗಳಿಂದ “ಮೆಂಡೋಲಿನ್” ವಾದನದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿ ಹೊಂದಿರುವ ಇವರು, ನಾಡಿನ ಎಲ್ಲಾ ಗಾಯಕ-ಗಾಯಕರಿಗೆ ವಾದ್ಯ ಸಹಕಾರ ನೀಡಿದ್ದಾರೆ. ಸಂಗೀತದ ಮೇರು ಪರ್ವತ ಸಿ. ಅಶ್ವಥ್, ಮೈಸೂರು ಅನಂತಸ್ವಾಮಿ ಮುಂತಾದವರೊಂದಿಗೆ ಕೆಲಸ ಮಾಡಿದ ಅನುಭವವಿರುವ ಇವರು, ಸಾಕಷ್ಟು ಚಲನಚಿತ್ರ, ಟಿವಿ ಧಾರಾವಾಹಿಗಳಿಗೂ ಕೆಲಸ ಮಾಡಿದ್ದಾರೆ . ಸಿ. ಅಶ್ವಥ್ ರವರ ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ರಾಗಶ್ರೀ ಸಂಗೀತ ಅಕಾಡೆಮಿ ಮೂಲಕ ಯುವ ಕಲಾವಿದರಿಗೆ ಮಾರ್ಗದರ್ಶನ ನೀಡಿದ್ದಾರೆ. ಎನ್.ಎಸ್. ಪ್ರಸಾದ್ ರವರು ಸ್ವರ ಮಂದಾರ ಪ್ರಶಸ್ತಿ, ಕಲಾಶ್ರೀ ಪ್ರಶಸ್ತಿ, ಮೆಂಡೋಲಿನ್ ಮಯೂರ ಪ್ರಶಸ್ತಿಯನ್ನು ಪಡೆದಿದ್ದಾರೆ.

ಶ್ರೀಮತಿ ಸುರೇಖಾ ಹೆಗಡೆ :

ಕಳೆದ 20 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಗಾಯಕಿಯಾಗಿ, ಸಂಗೀತ ನಿರ್ದೇಶಕಿಯಾಗಿ ನಾಡು, ದೇಶ ಹಾಗೂ ಹೊರದೇಶಗಳಲ್ಲಿಯೂ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಕಳೆದ 8 ವರ್ಷಗಳಿಂದ ಸಂಗೀತ್ ಸಮರ್ಪಣ್ ಟ್ರಸ್ಟ್ ಮೂಲಕ ಹೊಸತನದಿಂದ ಕೂಡಿದ ಕಾರ್ಯಕ್ರಮಗಳು, ಶಿಬಿರ ಮುಂತಾದವುಗಳ ಮೂಲಕ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸುರೇಖಾ ಹೆಗಡೆಯವರು ಆಕಾಶವಾಣಿ, ದೂರದರ್ಶನದ ‘ಎ’ ಗ್ರೇಡ್ ಕಲಾವಿದೆಯಾಗಿದ್ದಾರೆ.

Jagadguru Sri Vidhushekhara Bharati  ಶೃಂಗೇರಿ ಪೀಠದ ಮಹಾಸ್ವಾಮಿಗಳು ನಮ್ಮ ಕಾಲದ ಶ್ರೇಷ್ಠ ಸಂತರು- ಯೋಗಿ ಆದಿತ್ಯನಾಥ್

0

ಲೇ: ಪ್ರಭಾಕರ ಕಾರಂತ

Jagadguru Sri Vidhushekhara Bharati  ವಿಶ್ವದ ಅದ್ವಿತೀಯ ಮಹಾ ಕುಂಬವು ಪ್ರಯಾಗರಾಜ್ ನಲ್ಲಿ ಸಂಪನ್ನಗೊಂಡಿದೆ. ಪ್ರಪಂಚ ಹಿಂದೆಂದೂ ಕಂಡಿರದ ಮಹಾ ಮೇಳ ಇದು.ಅರವತ್ತಾರು ಕೋಟಿ ಜನರನ್ನು ನಲವತ್ತೈದು ದಿನಗಳ ಕಾಲ ಒಂದು ನದಿತಟದಲ್ಲಿ ಬರುವಂತೆ ಮಾಡುವುದು ಸನಾತನ ಧರ್ಮದ ಶಕ್ತಿ.ಇಷ್ಟು ಜನ ಸೇರುವಲ್ಲಿ ಎಷ್ಟೇ ದೊಡ್ಡ ಏರ್ಪಟೂ ಅಸ್ತವ್ಯಸ್ತ ಆಗುತ್ತದೆ .ರಸ್ತೆಗಳು ಇಕ್ಕಟ್ಟಾಗುತ್ತವೆ.ಸಾವಿರ ಸಾವಿರ ರೈಲುಗಳು ತುಂಬಿ ತುಳುಕುತ್ತವೆ.ಉತ್ತರ ಪ್ರದೇಶದ ಸುತ್ತಲಿನ ನಾಲ್ಕು ರಾಜ್ಯಗಳಲ್ಲೂ ಒತ್ತಡದ ಪರಿಣಾಮ ಗೋಚರಿಸುತ್ತದೆ. ಹೀಗಿದ್ದೂ ಬಂದ ಭಕ್ತರು ಗಲಭೆ ಮಾಡಲಿಲ್ಲ.ಬಡಿದಾಟ ಇಲ್ಲ.ನಿನ್ನ ಜಾತಿಯವರು,ಧರ್ಮ ಯಾವುದು,ವೃತ್ತಿ ಏನು,ಸಂಪತ್ತೇನು, ಭಾಷೆ ಏನು ಯಾರೂ ಕೇಳಲಿಲ್ಲ. ಬದುಕಿನ ಮಹಾನ್ ಪುಣ್ಯ ಕಾರ್ಯಕ್ಕೆ ಕೋಟಿ ಕೋಟಿ ಜನ ಒಂದೇ ಆಗಿ ಸೇರಿದರು. ಪಾವನ ಗಂಗೆಲ್ಲಿ ಮುಳುಗು ಹಾಕಿದರು. ಪುಣ್ಯ ಹೊತ್ತು ತಮ್ಮ ತಮ್ಮ ಊರಿಗೆ ಹಿಂತಿರುಗಿದರು. ನಂಬಲೇ ಸಾಧ್ಯವಿಲ್ಲದೇ ಏಕಾತ್ಮತೆ ತನ್ನ ಪರಮ ವೈಭವವನ್ನು ಜಗತ್ತಿಗೆ ಸಾರಿತು.
ಇದಕ್ಕಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ತಮ್ಮ ಇಡೀ ತಂಡದೊಂದಿಗೆ ವರ್ಷಗಳ ಕಾಲ ತ್ರಿಕರಣಪೂರ್ವಕ ಶ್ರಮ ಹಾಕಿ ಸಾರ್ಥಕ್ಯ ಕಂಡರು. ಜಗತ್ತಿನಲ್ಲಿ ಈ ವರೆಗೆ ಆಗಿಹೋದ ಮನುಷ್ಯರಲ್ಲಿ ಯೋಗಿ ಯಂತವರು ಜನ್ಮ ತಳೆದಿರಲಾರರು.
ಮುಕ್ತಾಯದ ದಿನ ಯೋಗಿ ಕೃತಜ್ಞತಾ ಭಾಷಣ ಪ್ರಯಾಗರಾಜ್ ನಲ್ಲಿ ಮಾಡಿದರು. ಈ ಮಹಾಕುಂಭಕಕ್ಕೆ ಅದೆಷ್ಟು ಸಂತ ಶ್ರೇಷ್ಠರು ಬಂದರು ಎಂದು ಅವರು ಹೇಳಹೊರಟಾಗ ಅವರ ಬಾಯಿಂದ ಬಂದ ಮೊದಲ ಹೆಸರೇ ಶೃಂಗೇರಿಯ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತಿಯವರದ್ದು. ಅಲ್ಲಿ ಬಂದಿರಬಹುದಾದ ಲಕ್ಷ ಸಂತರಲ್ಲಿ ಯೋಗಿ ಬೇರಳೆಣಿಕೆಯ ಸಂತರ ಉಲ್ಲೇಖ ಮಾಡುವಾಗ ಮೊದಲ ಹೆಸರು ಶೃಂಗೇರಿಯ ಜಗದ್ಗುರುಗಳದ್ದು ಎಂದರೆ ಅದಕ್ಕೆ ಕಾರಣ ಇದೆ.ಸನ್ಯಾಸಿಗಳ ಅಖಾಡ ಸ್ಥಾಪನೆ ಶಂಕರ ಭಗವತ್ಪಾದರಿಂದ ಆಯಿತು. ಮುಂದೆ ಶೃಂಗೇರಿಯ ಜಗದ್ಗುರುಗಳಾದ ಶ್ರೀ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ನಂತರ ದಶಕಗಳ ಕಾಲ ಉತ್ತರ ಭಾರತದಲ್ಲೇ ನೆಲೆಸಿ ಧರ್ಮ ಮತ್ತು ದೇಶ ರಕ್ಷಣೆಗಾಗಿ ಸನ್ಯಾಸಿಗಳು ಶಸ್ತ್ರ ಎತ್ತಬೇಕೆಂದು ಉಪದೇಶಿಸಿದರು. ಸಹಸ್ರ ಸಹಸ್ರ ಸಂಖ್ಯೆಯ ಸನ್ಯಾಸಿಗಳು ಶಾಸ್ತ್ರದ ಜೊತೆ ಶಸ್ತ್ರ ಸಹ ಅಭ್ಯಾಸ ಮಾಡಿ ಸನ್ನದ್ದರಾದರು. ಈ ಅಖಾಡಗಳಲ್ಲಿ ಈಗಲೂ ಭಿಕ್ಷೆ ಸ್ವೀಕರಿಸುವ ಮೊದಲು ಶೃಂಗೇರಿ ಶಂಕರಾಚಾರ್ಯರ ಭಿಕ್ಷೆ ಎಂದು ಹೇಳಿ ಭಿಕ್ಷಾ ಸ್ವೀಕರಿಸುವ ಸಂಪ್ರದಾಯ ಉಳಿದು ಬಂದಿದೆ. ತಮ್ಮ ಗುರು ಶಂಕರರನ್ನಾಗಲೀ, ವಿದ್ಯಾರಣ್ಯರನ್ನಾಗಲೀ ಈ ಸನ್ಯಾಸಿಗಳು ಮರೆತು ಬಿಡಲಿಲ್ಲ. ಕೃತಘ್ನರಾಗಲಿಲ್ಲ.ಬದಲಿಗೆ ಶತ ಶತಮಾನಗಳಿಂದ ಅದೇ ಭಕ್ತಿ ಶ್ರದ್ಧೆ ಗೌರವ ಉಳಿಸಿಕೊಂಡು ಬಂದಿದ್ದಾರೆ. ವಿದ್ಯಾರಣ್ಯರು ಸ್ಥಾಪಿಸಿದ ಕೆಲ ಅದ್ವೈತ ಪೀಠಗಳೇ ಅವರನ್ನು ಮರೆತು ಕೃತಘ್ನತೆ ಮೆರೆದಿರುವ ಉಧಾಹರಣೆ ಇರುವಾಗ ಈ ಅಖಾಡಗಳ ಕೃತಜ್ಞತೆ ಮಹತ್ವ ಅರಿವಾಗದಿರದು. ಹೀಗೆಂದೇ ಶೃಂಗೇರಿಯ ಶಂಕರಾಚಾರ್ಯರೆಂದರೆ ಅಖಾಡಗಳ ಪಾಲಿಗೆ ಮಾರ್ಗದರ್ಶಕರು. ಗುರುಗಳು.
ಪ್ರಯಾಗರಾಜ್ ನಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತಿಯವರು ಸಂತ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದು ಈ ಭವ್ಯ ಪರಂಪರೆಯ ಹಿನ್ನೆಲೆಯಲ್ಲಿ. ಭರತವರ್ಷದ ಧರ್ಮ ಜಗತ್ತಿನ ಪ್ರಾತಿನಿಧಿಕ ಸ್ವರೂಪ ಆ ಸಭೆಗಿತ್ತು. ಮಹಾ ಮಂಡಲೇಶ್ವರ ಸ್ವಾಮಿ ಶ್ರೀ ಅವಿದೇಶಾನಂದರವರು ಅಖಾಡಗಳಲ್ಲೇ ಅತಿ ದೊಡ್ಡ ಸಮೂಹದ ಸನ್ಯಾಸಿಗಳನ್ನು ಹೊಂದಿರುವ ಅಖಾಡಾ ಮುಖ್ಯಸ್ಥರು. ಅವರ ನೇತೃತ್ವದಲ್ಲಿ ಹದಿನಾರು ಸಾವಿರ ಸನ್ಯಾಸಿಗಳಿದ್ದಾರೆ. ಶೃಂಗೇರಿಯ ಜಗದ್ಗುರುಗಳ ಅಧ್ಯಕ್ಷತೆಯ ಸಂತ ಸಮ್ಮೇಳನ ಈ ಹಿನ್ನೆಲೆಯಲ್ಲಿ ಇಡೀ ಸನಾತನ ಧರ್ಮ ಪ್ರತಿನಿಧಿಸುತ್ತಿತ್ತು.
ಯೋಗಿಯವರು ಸರ್ವಪ್ರಥಮವಾಗಿ ಶೃಂಗೇರಿಯ ಶಂಕರಾಚಾರ್ಯರನ್ನು ಜ್ಞಾಪಿಸಿಕೊಂಡಿದ್ದರ ಹಿಂದೂ ಈ ಪ್ರಾತಿನಿಧಿಕ ಸ್ವರೂಪದ ಹಿನ್ನೆಲೆ ಇದೆ.ಪ್ರಯಾಗ್ ರಾಜ್ ನಲ್ಲಿ ಶ್ರೀ ವಿಧುಶೇಖರ ಭಾರತಿಯವರನ್ನು ಯೋಗಿ ಬೇಟಿಯಾದಾಗ ಒಂದು ಮಾತು ಹೇಳಿದ್ದರು. ಶಾರದಾಪೀಠ ಧಕ್ಷಿಣಕ್ಕೇ ಸೀಮಿತವಾಗದೇ ಉತ್ತರ ಭಾರತದತ್ತಲೂ ಗಮನಕೊಡಬೇಕು ಎಂದು.ನಂತರ ದೇಶದ ಗೃಹ ಸಚಿವ ಅಮಿತ್ ಶಾ ಯೋಗೀಯವರೊಂದಿಗೇ ಶ್ರೀ ವಿಧುಶೇಖರ ಭಾರತಿಯವರ ದರ್ಶನಕ್ಕೆ ಬಂದರು. ಆಗಲೂ ಅವರು ಹಿಂದೆ ಯೋಗಿಯವರು ಆಡಿದ್ದ ಅದೇ ಮಾತನ್ನೇ ಆಡಿದರು. ಶಾರದಾಪೀಠ ಉತ್ತರದತ್ತ ಆಗಾಗ ಬರುತ್ತಲೇ ಇರಬೇಕು ಎಂದು.
ಯೋಗಿಯವರು ತಾನು ಸನ್ನಿಧಾನಂಗಳ ಜೊತೆ ಏಕಾಂತ ಮಾತುಕತೆ ಬಯಸಿದ್ದರು. ಅದಕ್ಕೆ ಉಭಯತರಿಗೂ ಸಮಯ ಕೂಡಿ ಬಂದಿದ್ದು ಉತ್ತರ ಭಾರತದ ಧರ್ಮ ವಿಜಯ ಯಾತ್ರೆಯ ಕಟ್ಟ ಕಡೆಯ ದಿನ.ಅಂದು ಈ ಉಭಯ ಸಂತರು ಎಪ್ಪತ್ತೈದು ನಿಮಿಷ ಏಕಾಂತದಲ್ಲಿ ಮಾತುಕತೆ ನಡೆಸಿದರು. ಅದೇನಿದ್ದೀತು ಊಹೆಗೆ ಬಿಟ್ಟಿದ್ದು. ಆದರೆ ಅದರ ಒಂದು ಜಲಕ್ ಮುಂದೆ ಪ್ರಕಟವಾಗದೇ ಇರಲಿಲ್ಲ. ಸನ್ನಿಧಾನಂಗಳು ಶೃಂಗೇರಿಗೆ ಮರಳಿದ ಮರುದಿನ ಮಠದ ಕಡೆಯಿಂದ ಯೋಗಿ ಆದಿತ್ಯನಾಥರ ಮುಖ್ಯ ಮಂತ್ರಿ ಕಛೇರಿಯ ಪ್ರಮುಖ ರೋರ್ವರಿಗೆ ಅತ್ಯುತ್ತಮ ಏರ್ಪಾಟಿನಿಂದ ಗುರುಗಳು ಪ್ರಸನ್ನರಾಗಿದ್ದಾರೆ ಎಂಬ ಸಂದೇಶ ಹೋಯಿತು. ಮುಖ್ಯ ಮಂತ್ರಿಗಳಿಗೂ ಶಾರದಾಪೀಠದ ಪರವಾಗಿ ಇದನ್ನು ಗಮನಕ್ಕೆ ತರುವಂತೆ ಸೂಚಿಸಲಾಗಿತ್ತು. ಅಧಿಕಾರಿ ಮುಖ್ಯ ಮಂತ್ರಿಯವರು ಬಂದೊಡನೇ ಶೃಂಗೇರಿಯ ಸಂದೇಶ ಅವರಿಗೆ ತಿಳಿಸಿದರು. ಆಗ ಯೋಗೀಜಿ ಪ್ರತಿಕ್ರಿಯೆ ” ನಾವು ಅವರಿಗೆ ಅನುಕೂಲ ಮಾಡಿಕೊಡದೇ ಮತ್ಯಾರಿಗೆ ಮಾಡುವುದು?.ನಮ್ಮ ಕಾಲದ ಶ್ರೇಷ್ಠ ಸಂತರವರು.ನಾನು ಬದುಕಿನಲ್ಲಿ ಕಂಡ ಶ್ರೇಷ್ಠ ಸಂತ.ನಮ್ಮ ಮೇಲಿನ ಅನುಗ್ರಹದಿಂದಲೇ ಅಂತಹ ಪುಣ್ಯಪುರುಷರ ಪಾದಸ್ಪರ್ಶ ಇಲ್ಲಿಗೆ ಆಗಿದೆ.ನಮ್ಮ ಏರ್ಪಾಟುಗಳೆಲ್ಲಾ ಅವರ ಭವ್ಯತೆಗೆ ಸಾಟಿ ಆಗಲಾರದು ” .ಈ ಮಾತು ಆ ಅಧಿಕಾರಿ ಪುನಃ ಶಾರದಾಪೀಠವನ್ನು ಸಂಪರ್ಕಿಸಿ ಹೇಳಿದ್ದಾರೆ.
ಭಗವತ್ಪಾದರು ತಮ್ಮಿಂದ ಸ್ಥಾಪಿಸಲ್ಪಟ್ಟ ಚತುರಾಮ್ನಾಯ ಪೀಠಾದೀಶ್ವರರು ಹೇಗಿರಬೇಕು ಎಂದು ಉಲ್ಲೇಖಿಸಿದ್ದಾರೆ. ರಾಗದ್ವೇಷ ರಹಿತರು,ದೃಢಚಿತ್ತರು, ಸದಾಚಾರ ಸಂಪನ್ನರು,ಸದ್ವಂಶಸ್ಥರು, ವೇದವೇದಾಂಗ ವಿದ್ವತ್ ಪೂರ್ಣರು,ಯೋಗಪರಿಣಿತರು,ಮೀಮಾಂಸ, ಧರ್ಮ ಶಾಸ್ತ್ರ ಸಂಪನ್ನರು,ಜಿತೇಂದ್ರಿಯರು, ಸಕಲಜೀವಿಗಳಲ್ಲಿ ಕಾರುಣ್ಯ ಉಳ್ಳ ಸಾತ್ವಿಕ ಗುಣಸಂಪನ್ನರು, ಸಮಾಹಿತ ರೂಡರು ಈ ಪೀಠದಲ್ಲಿ ಆರೂಡರಾಗಿ ತಮ್ಮನ್ನೇ ಪ್ರತಿನಿಧಿಸುತ್ತಾರೆ. ಶೃಂಗೇರಿಯ ಗುರುಪರಂಪರೆಯ ಸರ್ವರೂ ಈ ಭಗವತ್ಪಾದರ ಉಲ್ಲೇಖಕ್ಕೆ ಯಥಾ ರೂಪವಾಗೇ ಇದ್ದಾರೆ. ಜಗದ್ಗುರು ಶ್ರೀ ವಿಧುಶೇಖರ ಭಾರತಿಯವರು ಭರತವರ್ಷದ ಹಿಂದೂ ಹೃದಯ ಸಾಮ್ರಾಟರಿಗೆ ಯೋಗಿಗೆ ಹೀಗೇ ಗೋಚರಿಸಿದ್ದಾರೆ. ಅವರೊಂದಿಗೆ ಏಕಾಂತ ಸಂವಾದದ ಭಯಕೆಗಾದರೂ ಅದೇ ಕಾರಣ. ಸನಾತನ ಧರ್ಮದ ಉನ್ನತಿಗೆ ನಾವು ಇನ್ನೂ ಏನೇನು ಮಾಡಬೇಕು,ಧರ್ಮ ದೇಶದ ಉಳಿವಿಗೆ ಯಾವರೀತಿ ಮುಂದುವರೆಯಬೇಕು ಎನ್ನುವುದರ ಜೊತೆ ಸನ್ಯಾಸ ಬದುಕಿನ ಅಂತಿಮಗುರಿ ಆತ್ಮೋನ್ನತಿಯ ಮಾರ್ಗದ ಕುರಿತೇ ಯೋಗಿ ಮಾರ್ಗದರ್ಶನ ಪಡೆದಿರಬೇಕು. ಈ ಉಭಯ ಸಂತಶ್ರೇಷ್ಠರ ಸಮಾಗಮದ ತರುವಾಯ ಯೋಗಿಯವರು ಜಗದ್ಗುರುಗಳನ್ನು ಬೀಳ್ಕೊಡಲು ಅವರ ಜೊತೆ ಹೆಜ್ಜೆಹಾಕುವಾಗಲೂ ಈ ಸಂವಾದದ ಗುಂಗಲ್ಲೇ ಇದ್ದಂತಿತ್ತು. ಅವರು ಸಚಿವಾಲಯದಲ್ಲಿ ಶೃಂಗೇರಿಯ ಜಗದ್ಗುರುಗಳ ಕುರಿತು ಮಾತನಾಡುವಾಗಲೂ ತಮ್ಮ ಸಂವಾದ ಸ್ಮರಣೆಗೆ ಬಂದಿರಲೇ ಬೇಕು.
Jagadguru Sri Vidhushekhara Bharati  ಶಂಕರ ಭಾಷ್ಯದಲ್ಲಿ ಜೀವನ್ಮುಕ್ತ ಸ್ಥಿತಿ ವ್ಯಕ್ತಿ ಸಾಧಿಸಲು ಸಾಧ್ಯ ಎಂದು ಪ್ರತಿಪಾದಿಸಿದ್ದರ ಪ್ರತ್ಯಕ್ಷ ರೂಪವಾಗಿ ನಮ್ಮ ಕಾಲದಲ್ಲೇ ಶ್ರೀ ಭಾರತೀತೀರ್ಥರನ್ನು ಕಾಣುವಂತಾಗಿದೆ.ಜೊತೆಗೆ ಭರತವರ್ಷದ ಸನಾತನ ಧರ್ಮದ ಸಹಸ್ರ ಸಹಸ್ರ ವರ್ಷಗಳ ತಪಸ್ಸಿನ ಫಲವಾಗಿ ಭೂಮಿಯಲ್ಲಿ ಅವತಾರವೆತ್ತಿದ ಶಂಕರ ಭಗವತ್ಪಾದರು ಸಾವಿರದಿನ್ನೂರು ವರ್ಷಗಳ ಹಿಂದೆ ಯಾವ ವೇಗದಲ್ಲಿ ತಮ್ಮ ಕಾರ್ಯ ನಡೆಸಿರಬಹುದು, ಅವರ ಅಘಾದ ಪ್ರಭಾವ ಭರತವರ್ಷದ ಮೇಲೆ ಅದು ಹೇಗೆ ಆಗಿದ್ದಿರಬಹುದು ಎಂಬುದನ್ನು ಈಗ ಅರ್ಥೈಸಲು ಶ್ರೀ ವಿಧುಶೇಖರ ಭಾರತಿಯವರ ಪ್ರತ್ಯಕ್ಷ ದರ್ಶನ ಭಾಗ್ಯವೂ ನಮ್ಮದಾಗಿದೆ.ನಮ್ಮ ಪಾಲಿಗೆ ಇದೂ ಒಂದು ಸಂಗಮ.

Rajeev Kudachi ದಲಿತ‌ ಸಮಾಜದ ಅಭಿವೃದ್ಧಿಗೆ ಮಿಸಲಿಟ್ಟಿದ್ದ ₹25 ಸಾವಿರ ಕೋಟಿ ಬೇರೆ ಉದ್ದೇಶಕ್ಕೆ ಬಳಕೆ- ರಾಜೀವ್ ಕುಡಚಿ

0

Rajeev Kudachi ಶಿವಮೊಗ್ಗದಲ್ಲಿ ರಾಜೀವ್ ಕುಡಚಿ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ದಲಿತ ಸಮಾಜದ ಅಭಿವೃದ್ಧಿಗೆ ಮೀಸಲಿಟ್ಟಿದ್ದ 25 ಸಾವಿರ ಕೋಟಿ ಬೇರೆ ಉದ್ದೇಶಕ್ಕೆ ಬಳಕೆಯಾಗಿದೆ.ದಲಿತ ಸಮುದಾಯದ ಮತಗಳಿಂದ ಗೆದ್ದು ಬಂದ ಸಚಿವ ಪ್ರಿಯಾಂಕ ಖರ್ಗೆ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಅವರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕ‌ ಹಕ್ಕು ಇಲ್ಲ.ಅನುದಾನ ಕಡಿತದ ಪರಿಣಾಮವನ್ನು ದಲಿತರು ಅನುಭವಿಸಿದ್ದಾರೆ.ದಲಿತರ ಕೇರಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ ಎಂದರು.

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ತೋಡಿಲ್ಲ.ಅಂಬೇಡ್ಕರ್ ಆವಾಸ್ ಯೋಜನೆಯಡಿ ಒಂದೇ ಒಂದು ಮನೆ ನಿರ್ಮಾಣ ಆಗಿಲ್ಲ.ದಲಿತರ ಸ್ವಾವಲಂಬನೆಗೆ ಪೂರಕವಾದ ಉದ್ಯೋಗ ಸೃಷ್ಟಿ ಆಗಿತ್ತಿಲ್ಲ. ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಯಾರಿಗೂ ನೆರವು ಸಿಕ್ಕಿಲ್ಲ.
ಅಹಿಂದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಸರ್ಕಾರ ಒಂದೇ ಒಂದು ಗುಂಟೆ ಖರೀದಿ ಮಾಡಿಲ್ಲ.ದಲಿತರ ಅಭಿವೃದ್ಧಿಗೆ 39‌ ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ಸಿದ್ದರಾಮಯ್ಯ ಸುಳ್ಳು ಹೇಳುತ್ತಾರೆ ಎಂದರು.

Rajeev Kudachi ಅದೇ ರೀತಿ ಸಚಿವ ಮಹಾದೇವಪ್ಪ‌ ಸಹ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ.
ಮಾತೆತ್ತಿದರೆ ಸಂವಿಧಾನದ ಬಗ್ಗೆ ಮಾತನಾಡು ಸಿದ್ದರಾಮಯ್ಯಗೆ ಇದು ಗೊತ್ತಾಗುತ್ತಿಲ್ಲವೆ.
ದಲಿತ ಸಮಾಜದ ಶಾಶ್ವತವಾಗಿ ಭಿಕ್ಷುಕರನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂದರು.

ಈಗಿ‌ನ ಬಜೆಟ್ ನಲ್ಲಿ ದಲಿತ ಸಮಾಜದ ಪ್ರಮುಖ ಬೇಡಿಕೆ ಈಡೇರುವಂತಾಗಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಲಿತ ಸಚಿವರು ರಸ್ತೆಯಲ್ಲಿ ಓಡಾಡಡಲು ಬಿಡುವುದಿಲ್ಲ.
ತನಿಖಾ ಸಂಸ್ಥೆಗಳನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಹೇಳಿದರು.

Dr BR Ambedkar Nivas Housing Scheme ವಸತಿ ಯೋಜನೆ ಗೃಹ ನಿರ್ಮಾಣಕ್ಕೆ‌ ನೀಡುವ ಸಹಾಯಧನವನ್ನ ಹೆಚ್ಚಸಲು ಮನವಿ

0

Dr BR Ambedkar Nivas Housing Scheme ವಸತಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ನೀಡುವ ಸಹಾಯಧನವನ್ನು 05 ಲಕ್ಷಕ್ಕೆ ಹೆಚ್ಚುವರಿ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಹಾಗೂ ವಸತಿ ಸಚಿವರಿಗೆ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿರೇಶ್ ಕ್ಯಾತನಕೊಪ್ಪ ಅವರು ಮನವಿ ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ಮೂಲಕ ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ ಯೋಜನೆಗಳ ಅಡಿಯಲ್ಲಿ ಸರ್ಕಾರದಿಂದ ಮನೆಗಳ ನಿರ್ಮಾಣಕ್ಕೆ ಎಸ್ಸಿ, ಎಸ್ಟಿ ಫಲಾನುಭವಿಗೆ 2 ಲಕ್ಷ, ಜನರಲ್‌ಗೆ 1.50 ಲಕ್ಷ ಸಹಾಯಧನ ನೀಡುತ್ತಿದ್ದು, ಇಂದಿನ ಈ ದುಬಾರಿ ದುನಿಯಾದಲ್ಲಿ ಮನೆ ನಿರ್ಮಾಣಕ್ಕೆ ಬೇಕಾಗುವ ಸಿಮೆಂಟ್, ಕಬ್ಬಿಣ, ಇಟ್ಟಿಗೆ ಮರಳು ಗಗನಕ್ಕೇರಿದ್ದು, ಬಡವರು ಮನೆ ನಿರ್ಮಿಸಿಕೊಳ್ಳಲು ಕಷ್ಟವಾಗುತ್ತಿದೆ ಇದನ್ನು ಅರಿತು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಸಹಾಯಧನವನ್ನು 5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಒಂದು ಗ್ರಾಮ ಪಂಚಾಯಿತಿಗೆ ಪ್ರತಿ ವರ್ಷ 50 ರಿಂದ 75 ಮನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Karnataka Union Of Working Journalists Association ಶಿವಮೊಗ್ಗ ಪತ್ರಿಕಾ ಭವನಕ್ಕೆ ಆಡಳಿತಾಧಿಕಾರಿ ನೇಮಕ ಆದೇಶಕ್ಕೆ ರಾಜ್ಯ ಕಾರ್ಯನಿರತ ಪತ್ರಕರ್ತರ ‌ಸಂಘದ ಸ್ವಾಗತ

0

Karnataka Union Of Working Journalists Association ಶಿವಮೊಗ್ಗ ನಗರದ ಆರ್.ಟಿ.ಓ. ಕಚೇರಿ ರಸ್ತೆಯಲ್ಲಿರುವ ಪತ್ರಿಕಾ ಭವನಕ್ಕೆ ಜಿಲ್ಲಾಡಳಿತದಿಂದ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಕಾರ್ಯನಿತರ ಪತ್ರಕರ್ತರ ಧ್ವನಿ ಸಂಘಟನೆಯ ಶಿವಮೊಗ್ಗ ಘಟಕದ ವತಿಯಿಂದ ನಡೆಸಿದ ಪ್ರತಿಭಟನೆ ಮತ್ತು ಮನವಿಗಳಿಗೆ ಸ್ಪಂದಿಸಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಶ್ರೀಯುತ ಗುರುತ್ತ ಹೆಗಡೆಯವರು ಈ ವಿಚಾರದಲ್ಲಿ ಸಮಗ್ರ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿದ್ದು, ಜಿಲ್ಲಾಧಿಕಾರಿಗಳ ಆದೇಶವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯು ಸ್ವಾಗತಿಸಿದೆ.
ಕಳೆದ ಹಲವು ವರ್ಷಗಳಿಂದ ಶಿವಮೊಗ್ಗದಲ್ಲಿ ಸರ್ಕಾರದ ಅನುದಾನ, ಜನಪ್ರತಿನಿಧಿಗಳ ಅನುದಾನದ ಹಣದಲ್ಲಿ ಕಟ್ಟಿದ್ದ ಸರ್ಕಾರದ ಕಟ್ಟಡವಾದ ಪತ್ರಿಕಾ ಭವನವನ್ನು ಪ್ರೆಸ್ ಟ್ರಸ್ಟ್ ಹೆಸರಿನಲ್ಲಿ ನಿರ್ವಹಣೆ ಮಾಡುತ್ತಾ ಬಂದಿದ್ದು, ಸುದ್ದಿಗೋಷ್ಠಿ ಮತ್ತು ಪ್ರೆಸ್‍ನೋಟ್, ಕಾರ್ಯಕ್ರಮದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ವಸೂಲು ಮಾಡುತ್ತಿದ್ದು, ಇದು ಕಾನೂನು ಬಾಹಿರವಾಗಿದೆ ಎಂದು ಆಕ್ಷೇಪಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದ ವತಿಯಿಂದ ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಜನವರಿ 30ರಂದು ಪತ್ರಿಕಾಭವನಕ್ಕೆ ಬೀಗ ಹಾಕಿ ಜಿಲ್ಲಾಡಳಿತಕ್ಕೆ ಬೀಗದ ಕೀ ಕೊಡುವ ಚಳುವಳಿಯನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ ಅದಕ್ಕೂ ಎಚ್ಚೆತ್ತುಕೊಳ್ಳದಿದ್ದಾಗ ಮಾ.20ರಂದು ಪತ್ರಿಕಾ ಭವನದ ಆವರಣದಲ್ಲಿ ಸಾವಿರಾರು ಪತ್ರಕರ್ತರೊಂದಿಗೆ ಅಹೋರಾತ್ರಿ ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬಗ್ಗೆ ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು.
ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಈ ವಿಚಾರವಾಗಿ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ನಿವೃತ್ತ ನ್ಯಾಯಾಧೀಶ ರವೀಂದ್ರನಾಥ್ ಹೆಚ್.ಬಿ. ಇವರನ್ನು ನೇಮಕ ಮಾಡಿ ಆದೇಶ ಸಂಖ್ಯೆ: ಎಸ್‍ಎಂಡಿಸಿ.ಎಂಎಜಿ4/ಪ್ರೆಸ್/1/2025/584503 ದಿನಾಂಕ: 28-02-2025ರಂತೆ ಆದೇಶ ಹೊರಡಿಸಿದೆ. (ಆದೇಶದ ಪ್ರತಿಯನ್ನು ಮಾಹಿತಿಗಾಗಿ ಲಗತ್ತಿಸಿದೆ.)
ಈ ಸಂಬಂಧ ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಸಭೆ ಕರೆದಿದ್ದು, ಈ ಸಭೆಯಲ್ಲಿ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಜಿಲ್ಲಾಧಿಕಾರಿಗಳ ಆದೇಶವನ್ನು ಸ್ವಾಗತಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷರಾದ ಡಿ.ಜಿ. ನಾಗರಾಜ್‍ರವರು ಸಭೆಯನ್ನುದ್ದೇಶಿಸಿ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶ ಸ್ವಾಗತಾರ್ಹ. ಇದು ಸಂಘಟಿತ ಹೋರಾಟಕ್ಕೆ ಸಿಕ್ಕ ಮೊದ ಜಯ. ತನಿಖೆಗೆ ನೇಮಕಗೊಂಡಿರುವ ಗೌರವಾನ್ವಿತ ನಿವೃತ್ತ ನ್ಯಾಯಾಧೀಶರು ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸಿ ವರದಿ ನೀಡುವರೆಂಬ ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಪತ್ರಿಕಾಭನವಕ್ಕೆ ಆಡಳಿತಾಧಿಕಾರಿ ನೇಮಿಸುವುದು ನಿಶ್ಚಿತ ಮತ್ತು ಆ ಪತ್ರಿಕಾ ಭವನ ಎಲ್ಲ ಸಮಾನ ಮನಸ್ಕ ಪತ್ರಕರ್ತರ ಪತ್ರಿಕಾ ಭವನವಾಗಲಿದೆ. ಸಂಘ-ಸಂಸ್ಥೆಗಳು ಕಡಿಮೆ ದರದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಅವಕಾಶವಾಗಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿರುವುದರಿಂದ ಮಾರ್ಚ್ 20ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ, ತನಿಖಾ ವರದಿ ಬರುವವರೆಗೆ ಮತ್ತು ಜಿಲ್ಲಾಧಿಕಾರಿಗಳು ನಿರ್ಧಾರ ಪ್ರಕಟಿಸುವರೆಗೆ ಕಾದು ನೋಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

E-Swathu ಇ -ಸ್ವತ್ತು ಬಗ್ಗೆ ಜನಜಾಗೃತಿ ಮತ್ತು ನಗರಪಾಲಿಕೆಗೆ ಮನವಿ ಸಲ್ಲಿಕೆಗೆ ಬನ್ನಿ – ಕೆ.ವಿ.ವಸಂತಕುಮಾರ್

0

E-Swathu 04.03.2025, ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕೆಎಂಡಿಎಸ್ ಸಾಫ್ಟ್‌ವೇರ್ ಮೂಲಕ ನಾಗರಿಕರಿಗೆ ಇ ಆಸ್ತಿಯ ಪ್ರತಿಯನ್ನು(Citizens draft copy) ನೀಡಲು ಕಮೀಷನರ್ ಶಿವಮೊಗ್ಗ ಮಹಾನಗರ ಪಾಲಿಕೆ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ ತೆರಿಗೆ ಪಾವತಿದಾರರು ಭಾಗವಹಿಸಬೇಕಾಗಿ ಕೋರಲಾಗಿದೆ.