Tuesday, March 10, 2026
Tuesday, March 10, 2026
Home Blog Page 385

MESCOM ಮಾರ್ಚ್ 6.ಆಲ್ಕೊಳ ಫೀಡರ್ ಸುತ್ತಮುತ್ತ ಕೆಲವು ಗಂಟೆಗಳ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-8ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.6 ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

MESCOM ಕರಿಯಣ್ಣ ಬಿಲ್ಡಿಂಗ್ ಸುತ್ತಮುತ್ತ, 100 ಅಡಿ ರಸ್ತೆ, ಕೆಂಚಪ್ಪ ಬಡಾವಣೆ, ಸೂಡಾ ಕಛೇರಿ, ವೀರ ಸಾವರ್ಕರ್ ಬಿಲ್ಡಿಂಗ್, ಕೆಎಚ್ ಬಿ ಕ್ವಾಟ್ರಸ್, ಸವಿ ಬೇಕರಿ ಎದುರು. ಆರಾಧ್ಯ ಕಣ್ಣಿನ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Dinesh Gundurao ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ- ದಿನೇಶ್ ಗುಂಡೂರಾವ್

0

Dinesh Gundurao ಪ್ಲಾಸ್ಟಿಕ್ ಪೇವರ್ ಬಳಸಿ ಇಡ್ಲಿ ತಯಾರಿಸುವುದು ಆರೋಗ್ಯಕ್ಕೆ ಮಾರಕ. ಆಹಾರ ಮತ್ತು ಸುರಕ್ಷತಾ ಇಲಾಖೆ 681 ಹೋಟೆಲ್, ರೆಸ್ಟೊರೆಂಟ್ ಸೇರಿದಂತೆ ಎಲ್ಲೆಡೆ ಪರಿಶೀಲಿಸಿ ನಡೆಸಿದ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ.

Dinesh Gundurao ಹೋಟೆಲ್, ರೆಸ್ಟೊರೆಂಟ್, ಬೀದಿ ಬದಿ ಉಪಹಾರ ತಯಾರಿಕಾ ಕೇಂದ್ರಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಪೇಪರ್ ಬಳಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರ ಆರೋಗ್ಯ ಹಾಗೂ ಆಹಾರದ ಸುರಕ್ಷೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇ-ಆಸ್ತಿ ನಾಗರಿಕ ಪ್ರತಿ ಪಡೆಯಲು ಬಂದಿದ್ದ ನಾಗರಿಕ‌ ಹಿತರಕ್ಷಣಾ ವೇದಿಕೆ ಪ್ರತಿನಿಧಿಗಳ ಬಗ್ಗೆ ನಗರಪಾಲಿಕೆ ಅಸೌಜನ್ಯ ತೋರಿದ ಪ್ರಕರಣ

0

ಆಸ್ತಿ ತೆರಿಗೆ ಪಾವತಿದಾರರಿಗೆ ಇ ಆಸ್ತಿ ನಾಗರೀಕ ಪ್ರತಿಯನ್ನು ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಾವು ಇಂದು ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ನಿಮಗೆ ತಿಳಿದಿದೆ. ಆದರೆ ಆಯುಕ್ತರು ನಮ್ಮ ಮನವಿಯನ್ನು ಸ್ವೀಕರಿಸದೆ ಕಚೇರಿಯಿಂದ ಹೊರಟುಹೋದರು. ಇದರಿಂದಾಗಿ ನ್ಯಾಯಯುತ ಸಮಸ್ಯೆಗಾಗಿ ಹೋರಾಡುತ್ತಿರುವ ಪ್ರತಿಭಟನಾಕಾರರನ್ನು ಅವಮಾನಿಸಲಾಗಿದೆ.
ತೆರಿಗೆದಾರರನ್ನು ಅವಮಾನಿಸುವ ಆಯುಕ್ತರು ಶಿವಮೊಗ್ಗ ನಗರಕ್ಕೆ ಬೇಡ. ದಯಮಾಡಿ ಇವರನ್ನು ಎಲ್ಲಿಂದ ಬೇರೆಡೆಗೆ ವರ್ಗಾಯಿಸಬೇಕಾಗಿ ಶಿವಮೊಗ್ಗ ನಾಗರೀಕರ ಪರವಾಗಿ ಆಗ್ರಹಿಸುತ್ತೇವೆ

World Obesity Day ಸೈಕಲ್ ಬಳಸಿ,ಬೊಜ್ಜು ಕರಗಿಸಿ ವಿಶ್ವ ಬೊಜ್ಜು ನಿವಾರಣಾ ದಿನಾಚರಣೆಗೆ ಚಾಲನೆ

0

World Obesity Day ವಿಶ್ವ ಬೊಜ್ಜು ನಿವಾರಣಾ ದಿನಾಚರಣೆಯ ಅಂಗವಾಗಿ ಶಿವಮೊಗ್ಗದ ಭಾರತೀಯ ವೈದ್ಯಕೀಯ ಸಂಘ ಮತ್ತು ಭಾರತೀಯ ಮಕ್ಕಳ ವೈದ್ಯರ ಸಂಘ ಜಂಟಿಯಾಗಿ ಸೈಕಲ್ ಜಾಥಾ ಹಮ್ಮಿಕೊಂಡಿದ್ದರು. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ ನಾಗರಾಜ ನಾಯ್ಕ ಜಾಥಾಗೆ ಚಾಲನೆ ಕೊಟ್ಟರು. ಭಾರತೀಯ ವೈದ್ಯಕೀಯ ಸಂಘದ ಆವರಣದಿಂದ ಹೊರಟು, ಕುವೆಂಪು ರಸ್ತೆಯ ಮೂಲಕ
ಎ ಪಿ ಎಂ ಸಿ, ಫ್ರೀಡಂ ಪಾರ್ಕ್ ತಲುಪಿದ ಜಾಥಾದಲ್ಲಿ ಸದಸ್ಯರು “ಸೈಕಲ್ ಬಳಸಿ, ಬೊಜ್ಜನ್ನು ಕರಗಿಸಿ” ಎಂಬ ಘೋಷಣೆಗಳನ್ನು ಕೂಗುತ್ತಾ ಜನಜಾಗೃತಿಯನ್ನು ಮೂಡಿಸಿದರು.
ಜನ ಸಾಮಾನ್ಯರಲ್ಲಿ ಬೊಜ್ಜಿನಿಂದ ಆರೋಗ್ಯದ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅರಿವನ್ನು ಮೂಡಿಸಿದರು.ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ ಶ್ರೀಧರ ಎಸ್, ಕಾರ್ಯದರ್ಶಿ ಡಾ ವಿನಯ ಶ್ರೀನಿವಾಸ್, ಭಾರತೀಯ ಮಕ್ಕಳ ವೈದ್ಯರ ಸಂಘದ ಅಧ್ಯಕ್ಷ ಡಾ ಯತೀಶ್, ಕಾರ್ಯದರ್ಶಿ ಡಾ ರಾಜಾರಾಮ್ ಯು ಹೆಚ್, ಖಜಾಂಚಿ ಡಾ ವಿನೋದ್, ಡಾ ಶ್ರೀಕಾಂತ್ ಹೆಗಡೆ, ಡಾ ರವೀಶ್ ಕೆ ಆರ್, ಡಾ ಶಾಂತಲಾ, ಡಾ ವಿನಯ್ ಪಾಟೀಲ್, ಡಾ ಅರುಣ್ ಎಂ ಎಸ್, ಡಾ ಚೇತನ್ ಸಾಗರ್, ಶ್ರೀ ರಾಜೇಂದ್ರ ಪ್ರಸಾದ್ ಜವಳಿ, ಮತ್ತಿತರರು ಜಾಥಾದಲ್ಲಿ ಭಾಗವಹಿಸಿದ್ದರು.

Youth Congress ಯುವ ಕಾಂಗ್ರೆಸ್ ತರೀಕೆರೆ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ಬಾಲಾಜಿ ಟಿ ಜಿ ಆಯ್ಕೆ

0

Youth Congress ಯುವ ಕಾಂಗ್ರೆಸ್ ತರೀಕೆರೆ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ 1040 ಮತಗಳ ಅಂತರದಲ್ಲಿ ತರೀಕೆರೆಯ ಬಾಲಾಜಿ ಟಿ ಜಿ ಅವರು ಆಯ್ಕೆಯಾಗಿದ್ದಾರೆ

ಗೆಲುವಿಗೆ ಸಹಕರಿಸಿದ ಕ್ಷೇತ್ರದ ಶಾಸಕರು, ಪಕ್ಷದ ಹಿರಿಯ, ಕಿರಿಯ ಮುಖಂಡರು, ಮತದಾನ ಮಾಡಿ ಗೆಲ್ಲಿಸಿದ ಯುವ ಕಾರ್ಯಕರ್ತರಿಗೆ ಚುನಾಯಿತರು ಕೃತಜ್ಞತೆ ಸಲ್ಲಿಸಿದ್ದಾರೆ.

MESCOM ಮಾರ್ಚ್ 6. ಮಂಡ್ಲಿ ವ್ಯಾಪ್ತಿಯ‌ ಕೆಲವೆಡೆ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ನಗರ ಉಪವಿಭಾಗ-2ರ ಮಂಡ್ಲಿ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.06 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಪೇಪರ್ ಪ್ಯಾಕೇಜ್, ಹರಕೆರೆ, ನ್ಯೂಮಂಡ್ಲಿ, ಹಳೇ ಮಂಡ್ಲಿ, ಗಂಧರ್ವನಗರ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಮಂಜುನಾಥ ರೈಸ್‌ಮಿಲ್, ಬೆನಕೇಶ್ವರ ರೈಸ್‌ಮಿಲ್, ಅನ್ನಪೂರ್ಣೇಶ್ವರಿ ಬಡಾವಣೆ, ಗಜಾನನ ಗ್ಯಾರೇಜ್, ಪೀಲೆ ಫ್ಯಾಕ್ಟರಿ, ಸವಾಯಿಪಾಳ್ಯ, ಕುರುಬರ ಪಾಳ್ಯ, ಇಲಿಯಾಜ್‌ನಗರ 1 ರಿಂದ 4ನೇ ಅಡ್ಡರಸ್ತೆ, 100 ಅಡಿರಸ್ತೆ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

CM Siddaramaiah ರಾಜ್ಯ ಸರ್ಕಾರದ ಬಜೆಟ್ ನಿಲುವು ನೋಡಿ ನಂತರ ಹೋರಾಟ ಸ್ವರೂಪದ ತೀರ್ಮಾನ- ಎಚ್.ಆರ್.ಬಸವರಾಜಪ್ಪ

0

CM Siddaramaiah ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾ.7 ರಂದು ಬಜೆಟ್ ಮಂಡನೆ ಮಾಡಲಿದೆ. ಸಿದ್ದರಾಮಯ್ಯನವರ ಬಜೆಟ್‍ನ್ನು ಸಮಗ್ರವಾಗಿ ಹಾಗೂ ವಿಮರ್ಷಾತ್ಮಕವಾಗಿ ವಿಶ್ಲೇಷಣೆಗೊಳಪಡಿಸಲು ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಮಾ.12 ಮತ್ತು 13 ರಂದು ‘ಜನಚಳುವಳಿಗಳ ಬಜೆಟ್ ಅಧಿವೇಶನ’ವನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಯುಕ್ತ ಹೋರಾಟ – ಕರ್ನಾಟಕದ ಹೆಚ್.ಆರ್.ಬಸವರಾಜಪ್ಪ ಹೇಳಿದರು.

ಮಂಗಳವಾರ ಪತ್ರಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ ಅಧಿವೇಶನ ಕೇವಲ ಆಯ-ವ್ಯಯದ ಬಜೆಟ್ ಮಂಡನೆಗೆ ಮಾತ್ರ ಸೀಮಿತವಾಗದೆ ಜನಪರ ನೀತಿಗಳನ್ನು ರೂಪಿಸುವ ದಿಟ್ಟ ಹೆಜ್ಜೆಯನ್ನಿಡುವಂತಿರಲಿ. ಗ್ಯಾರೆಂಟಿ ಯೋಜನೆಯೊಂದನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಿದ್ದಾರೆ. ರೈತರ ಸಮಸ್ಯೆ ಬಗ್ಗೆ ಚರ್ಚಿಸುತ್ತಿಲ್ಲ. ಹಾಗಾಗಿ ಸರ್ಕಾರ ಬಜೆಟ್ ಕುರಿತು ವಿವಿಧ ಕೋನಗಳಿಂದ ಚರ್ಚೆ ನಡೆಸಿ ಸಮಗ್ರ ನಿಲುವನ್ನು ತೆಗೆದುಕೊಳ್ಳಲಾಗುತ್ತದೆ. ಹಾಗೂ ಮುಂದಿನ ಹೋರಾಟದ ಸ್ವರೂಪದ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.

ಅಧಿಕಾರಕ್ಕೇರುವ ಮುನ್ನ ರೈತರ, ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಎರಡು ವರ್ಷವಾದರೂ ಅವ್ಯಾವುದನ್ನೂ ಬಗೆಹರಿಸಿಲ್ಲ. ಈ ಬಾರಿಯ ಬಜೆಟ್ ನಲ್ಲಾದರೂ ಇವುಗಳನ್ನು ಜಾರಿಗೊಳಿಸುವುದಾಗಿ ಘೋಷಿಸಬೇಕೆಂದು ಆಗ್ರಹಿಸಿದರು.

ವಿದ್ಯುತ್ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ಬಗರ್‍ಹುಕುಂ ರೈತರ ಭೂಮಿಗಳನ್ನು ಕೂಡಲೇ ಮಂಜೂರು ಮಾಡಬೇಕು. ಕಾನೂನು ತೊಡಕನ್ನು ಕಾರಣವಾಗಿ ನೀಡಿ ಬಡ ರೈತರ ಅರ್ಜಿಗಳನ್ನು ತಿರಸ್ಕರಿಸಬಾರದು ಮತ್ತು ಒಕ್ಕಲೆಬ್ಬಿಸಬಾರದು. ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಕಾರ್ಮಿಕರ ಕುರಿತ 4 ಕೋಡ್‍ಗಳನ್ನು ತಿರಸ್ಕರಿಸುವ ತೀರ್ಮಾನ ತೆಗೆದುಕೊಳ್ಳಬೇಕು. ಅಂತರಾಷ್ಟ್ರೀಯ ಶ್ರಮ ಒಡಂಬಡಿಕೆಗೆ ವಿರುದ್ಧವಾಗಿ ದುಡಿಮೆಯ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಸಿರುವ ಕಾರ್ಮಿಕ ವಿರೋಧಿ ತಿದ್ದುಪಡಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

CM Siddaramaiah ಎಲ್ಲಾ ಬಗೆಯ ಅಸಂಘಟಿತ, ಅನೌಪಚಾರಿಕ, ಸ್ಕೀಂ, ಗುತ್ತಿಗೆ ಮುಂತಾದ ಬಗೆಯ ಕಾರ್ಮಿಕರು ಹಾಗೂ ನೌಕರರ ಉದ್ಯೋಗ ಭದ್ರತೆ, ಸಾಮಾಜಿಕ ಕಲ್ಯಾಣ ಹಾಗೂ ಘನತೆಯ ವೇತನಕ್ಕಾಗಿ ಸಮಗ್ರ ನೀತಿಯನ್ನು ರೂಪಿಸಬೇಕು. ಎಸ್ ಸಿ ಪಿ ಎಸ್ / ಎಸ್ ಟಿ ಪಿ ಎಸ್ ನಿಧಿಯ ದುರಪಯೋಗವನ್ನು ತಡೆಯಬೇಕು. ಗ್ಯಾರಂಟಿ ಯೋಜನೆಗಳಿಗೂ ಒಳಗೊಂಡಂತೆ ಬೇರೆ ಉದ್ದೇಶಗಳಿಗೆ ಬಳಕೆಯಾಗಿದ್ದ ಹಣವನ್ನು ಮತ್ತೆ ಈ ನಿಧಿಗೆ ಮರು ಭರ್ತಿ ಮಾಡಬೇಕು. ಮೈಕ್ರೋ ಫೈನಾನ್ಸ್ ಹಾವಳಿಯಿಂದ ಜನರನ್ನು ವಿಶೇಷವಾಗಿ ಮಹಿಳೆಯರನ್ನು ಹಾಗೂ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರ, ಭ್ರೂಣ ಹತ್ಯೆ, ಮಾರ್ಯದೆಗೇಡು ಹತ್ಯೆ ಮುಂತಾದ ಹಿಂಸೆಗಳಿಂದ ಮಹಿಳೆಯರನ್ನು ಪಾರು ಮಾಡಲು ಪಾರುಮಾಡಲು ಸಮಗ್ರ ನೀತಿ ರೂಪಿಸಬೇಕು. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಯನ್ನು ತಿರಸ್ಕರಿಸಬೇಕು. ಬೆಲೆ ಏರಿಕೆಗೆ ಕಡಿವಾಣ ಹಾಕಲೇಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಅಗತ್ಯ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ಮೇಲೂ ಒತ್ತಡ ಹೇರಬೇಕು ಎಂಬುದನ್ನು ಸೇರಿದಂತೆ ಹನ್ನೆರಡು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಸಿ ಐ ಟಿ ಯು ನ ಮುಖಂಡ ಎಂ.ನಾರಾಯಣ್ ಮಾತನಾಡಿ, ಜನಪರ ವಾಗಿರುತ್ತೇವೆ ಎಂದು ಆಶ್ವಾಸನೆ ಕೊಡುವುದರ ಮೂಲಕ ರೈತರಿಗೆ ಬೆಂಬಲ ಬೆಲೆ ಕೊಡುತ್ತೇವೆ ಎಂದು ಹೇಳಿ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಸುಳ್ಳು ಭರವಸೆ ಕೊಡುವುದರಲ್ಲಿ ತೇಲುತ್ತಿದೆ. ಗುತ್ತಿಗೆ ಪದ್ಧತಿ ರಾಜ್ಯಾವ್ಯಾಪಿಯಾಗಿ ಹಬ್ಬಿಕೊಂಡಿದೇ. ಗುತ್ತಿಗೆ ಪದ್ಧತಿಗೆ ಕಡಿವಾಣ ಹಾಕಬೇಕು. ಸಮನಾ ಕೆಲ್ಸಕ್ಕೆ ಸಮಾನ ವೇತನ ಕೊಡಬೇಕು. ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ನಿಬರ್ಂಧ ಮಾಡಬೇಕು. ಯಾವುದೇ ಕಾರ್ಮಿಕರಿಗೆ ಅನ್ಯಾಯವಾಗಬಾರದು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಚಂದ್ರಪ್ಪ, ರಾಘವೇಂದ್ರ, ಮಹದೇವಪ್ಪ, ಶೇಖರಪ್ಪ, ಮಂಜಪ್ಪ, ಹನುಮಂತಪ್ಪ, ಹುಟ್ಟೂರು ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Kuvempu University ವಿಕಸಿತ ಭಾರತ ಯುವ ಸಂಸತ್ ನಲ್ಲಿ ಭಾಗವಹಿಸಲು ಮಾರ್ಚ್ 9 ರೊಳಗೆ ನೋಂದಣಿಗೆ ಅವಕಾಶ- ಡಾ.ಶುಭಾ ಮರವಂತೆ

0

Kuvempu University ಎನ್ ಎಸ್ ಎಸ್ ಹಾಗೂ ನೆಹರೂ ಯುವ ಕೇಂದ್ರದ ಸಹಭಾಗಿತ್ವದಲ್ಲಿ ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಆಶಯದಂತೆ 2047 ರ ವೇಳೆಗೆ 1 ಲಕ್ಷ ಜಾಗೃತ ಯುವ ನಾಯಕರನ್ನು ಗುರುತಿಸುವ ಉದ್ದೇಶಕ್ಕಾಗಿ ಯುವ ಸಂಸತ್ (ಯೂತ್ ಪಾರ್ಲಿಮೆಂಟ್) ಯುವ ಧ್ವನಿಯನ್ನು ದಾಖಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಮತ್ತು ಉಪನ್ಯಾಸಕರಾದ ಡಾ. ಶುಭ ಮರವಂತೆ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ರಾಜಕೀಯ ವ್ಯವಸ್ಥೆ ಜಿಡ್ಡುಗಟ್ಟಿ ಹೋಗಿದೆ ಅದನ್ನು ಸರಿಮಾಡಲು ರಾಜಕೀಯದಲ್ಲಿ ಯುವಕರು ಭಾಗವಹಿಸಬೇಕು. ಭವಿಷ್ಯದ ಭಾರತ ಯುವಕರ ಕೈಯಲ್ಲಿ ಹೇಗಿರಲಿದೆ, ಹಾಗೆಯೇ ದೇಶದ ಬಗ್ಗೆ ಯುವಕರ ಚಿಂತನೆ ಯಾವ ರೀತಿ ಇರಲಿದೆ ಎಂಬುದನ್ನು ತಿಳಿದುಕೊಳ್ಳಲು ನರೇಂದ್ರ ಮೋದಿಯವರ ಆಶಯದಂತೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಭಾಗವಹಿಸಲು ಇಚ್ಚಿಸುವವರು 1 ನಿಮಿಷದ ವಿಡಿಯೋ ಮಾಡಿ ಮೈ ಭಾರತ್ ಪೋರ್ಟಲ್ ನಲ್ಲಿ ಅಪೆÇ್ಲೀಡ್ ಮಾಡಬೇಕು ಎಂದು ಹೇಳಿದರು.

Kuvempu University ಈ ಕಾರ್ಯಕ್ರಮಕ್ಕೆ 18 ರಿಂದ 25 ವರ್ಷದ ಯುವಕ ಯುವತಿಯರು ಮೈ ಭಾರತ್ ಪೋರ್ಟಲ್ ನಲ್ಲಿ ಒಂದು ನಿಮಿಷದ ನಿಮ್ಮ ಆಡಿಯೋ ವಿಡಿಯೋವನ್ನು ಅಪ್ಲೋಡ್ ಮಾಡಬೇಕು. ವಿಡಿಯೋವು ಗರಿಷ್ಠ 25 ಎಂಬಿ ಯ ಒಳಗಿರಬೇಕು. ಭಾಷಣವು ಬಹುಭಾಷಾ ಆಗಿರಬಹುದು ಕನ್ನಡ, ಹಿಂದಿ, ಇಂಗ್ಲಿಷ್ ಯಾವುದೇ ಮಾತೃ ಭಾμÉಯಲ್ಲಿಯಾದರೂ ವಿಡಿಯೋ ಮಾಡಬಹುದು ಎಂದರು.

ವೀಡಿಯೋ ಅಪ್ಲೋಡ್ ಮಾಡಲು ಕೊನೆಯ ದಿನಾಂಕ ಮಾ.09 ಆಗಿದ್ದು, ವಿಡಿಯೋದ ಆರಂಭದಲ್ಲಿ ನಿಮ್ಮ ಹೆಸರು ಜಿಲ್ಲೆಯ ಹೆಸರು ರಾಜ್ಯದ ಹೆಸರು ನೊಡಲ್ ಸೆಂಟರ್ ಹೆಸರು ಇರಬೇಕು. ಇದರಲ್ಲಿ ಅತ್ಯುತ್ತಮ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಮಾ.14, 15 ರಂದು ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲಾ, ನೊಡಲ್ ಸೆಂಟರ್ ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸ್ಪರ್ಧೆ ನಡೆಸಲಾಗುವುದು. ಅಂದು ಬೆಳಿಗ್ಗೆ 9.30 ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಜರಿರಬೇಕು ಎಂದರು.

ನಂತರ ಇಲ್ಲಿ ಆಯ್ಕೆಯಾದ 10 ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು. ಇಲ್ಲಿಂದ 3 ಜನರನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗುವುದು, ಅಂತಿಮ ಹಂತದಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ರೂ 2ಲಕ್ಷ, ದ್ವಿತೀಯ 1.5 ಲಕ್ಷ, ತೃತೀಯ 1 ಲಕ್ಷ ನೀಡಲಾಗುವುದು, ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಭಾರತದ ಸಂಸತ್ ಭವನದಲ್ಲಿ ಮಾತನಾಡುವ ಅವಕಾಶ ಪಡೆಯುತ್ತಾರೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ಕೇಶವ್, ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಅವಿನಾಶ್, ಕನ್ನಡ ಉಪನ್ಯಾಸಕರಾದ ಡಾ. ಪ್ರಕಾಶ್, ನೆಹರು ಯುವ ಕೇಂದ್ರದ ಉಲ್ಲಾಸ್ ಉಪಸ್ಥಿತರಿದ್ದರು.

Rovers Club Shivamogga ಸಾಧಕರನ್ನು ಗೌರವಿಸಿದಾಗ ಸಂಸ್ಥೆಯ ಹೆಮ್ಮೆ ಹೆಚ್ಚುತ್ತದೆ -ಹೆಚ್.ಸಿ.ಸುರೇಶ್

0

Rovers Club Shivamogga ಸಮಾಜದಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಸಾಧನೆ ಮಾಡಿ, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಮ್ಮ ರೋವರ್ಸ್ ಕ್ಲಬ್ ನ ಸದಸ್ಯರು ನಮ್ಮ ಸಂಸ್ಥೆಗೆ ಗೌರವ ತಂದಿದ್ದಾರೆ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸಿದಾಗ ನಮ್ಮ ಸಂಸ್ಥೆಯ ಹೆಮ್ಮೆ ಹೆಚ್ಚುವುದು ಎಂದು ರೋವರ್ಸ್ ಕ್ಲಬ್ ನ ಅಧ್ಯಕ್ಷರಾದ ಹೆಚ್.ಸಿ.ಸುರೇಶ್ ಹೇಳಿದರು.

ಶಿವಮೊಗ್ಗ ನಗರದ ರೋವರ್ಸ್ ಕ್ಲಬ್ ನ ಸದಸ್ಯರು ಪದಾಧಿಕಾರಿಗಳು ವಿವಿಧ ಸಂಘ ಸಂಸ್ಥೆಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಗಣ್ಯರಾದ ಕೆ.ಶಂಕರ್ (ಗನ್ನಿ), ಎಂ.ಕೆ.ಸುರೇಶ್ ಕುಮಾರ್ (ಚಾಣಕ್ಯ), ಎಸ್‍.ಡಿ.ಸೋಮಶೇಖರ್, ಜಿ.ವಿಜಯ್ ಕುಮಾರ್, ಪರಶುರಾಮ್, ಪಿ.ಎಲ್.ನಾಗರಾಜ್ ಪಾಟ್ನರ್, ಎಸ್.ಜಿ.ಆನಂದ್, ರಾಕೇಶ್ ಇವರಿಗೆ ರೋವರ್ಸ್ ಕ್ಲಬ್ ನಲ್ಲಿ ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು, ಸುಮಾರು 40 ವರ್ಷಗಳ ಒಂದು ಕೌಟುಂಬಿಕ ಕ್ಲಬ್ ರೋವರ್ಸ್ ಕ್ಲಬ್ ಆಗಿದೆ. ನಮ್ಮ ಕ್ಲಬ್ ಮೂಲಕ ಸುನಾಮಿ ಸಂದರ್ಭದಲ್ಲಿ ಕೋವಿಡ್ ಹಾಗೂ ಬೇರೆ ಬೇರೆ ಸಂದರ್ಭಗಳಲ್ಲಿ ಹಲವಾರು ಸಮಾಜ ಮುಖಿ ಸೇವಾ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದೆ ಎಂದು ನುಡಿದರು.

Rovers Club Shivamogga ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಹೆಚ್.ಕೃಷ್ಣ, ಕಾರ್ಯದರ್ಶಿ ಅ.ಮಾ.ಪ್ರಕಾಶ್, ಎಂ.ಬಿ.ವಿನಾಯಕ, ಎಸ್.ಚಿನ್ನಪ್ಪ, ಅಗಡಿ ಮಹೇಶ್, ಎಂ.ಆರ್.ಬಸವರಾಜ್, ಎಸ್.ಸುನಿಲ್ ಕುಮಾರ್, ಮಹಾದೇವಾಚಾರ್, ಮಾಜಿ ಅಧ್ಯಕ್ಷರಾದ ಕೆ.ಸಿ.ಮಲ್ಲಿಕಾರ್ಜುನ್, ಹಿರಿಯ ಸದಸ್ಯರುಗಳಾದ ಗೋವಿಂದಪ್ಪ, ಜಿ.ಕೆ.ಪ್ರಕಾಶ್, ರಾಜಶೇಖರ್, ದಿನೇಶ್, ಈಶ್ವರಪ್ಪ, ಮಾಜಿ ಖಜಾಂಚಿ ಎ.ಹೆಚ್.ಸುನಿಲ್ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

Information & Public Relations Department ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾ ವ್ಯಾಪ್ತಿ ಪ್ರಯಾಣಕ್ಕೆ ಪಾಸ್ ಪಡೆಯಲು ಅರ್ಹರಿಂದ ಅರ್ಜಿ‌ ಆಹ್ವಾನ

0

Information & Public Relations Department ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಮುಖ್ಯಮಂತ್ರಿಗಳು 2024-25 ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆ ಘೋಷಿಸಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಪೂರ್ಣಾವಧಿಗೆ ನೇಮಕಗೊಂಡು 4 ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು. ನೇಮಕಾತಿ ಆದೇಶ/ವೇತನ ಪತ್ರ/ಬ್ಯಾಂಕ್ ಸ್ಟೇಟ್‌ಮೆಂಟ್‌ಗಳಲ್ಲಿ ಯಾವುದಾದರೂ ದಾಖಲೆಗಳನ್ನು ಸೇವಾನುಭವಕ್ಕಾಗಿ ಒದಗಿಸಬೇಕು.

ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಜಿಲ್ಲಾ ವ್ಯಾಪ್ತಿಗೆ ಉಚಿತವಾಗಿ ಸಂಚರಿಸಬಹುದು.ತಹಸೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಒದಗಿಸಬೇಕು. ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ವರದಿಗಾರರಿಗೆ ಪ್ರತಿ ತಾಲ್ಲೂಕಿಗೆ ಸಂಪಾದಕರು ಸೂಚಿಸುವ ಒಬ್ಬರಿಗೆ, ಜಿಲ್ಲಾ ಮಟ್ಟದ ಪತ್ರಿಕೆಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಒಬ್ಬರಿಗೆ, ಆರು ಪುಟಗಳಲ್ಲಿ ಪ್ರಕಟವಾಗುವ ಪ್ರಾದೇಶಿಕ ಪತ್ರಿಕೆಗಳು ಓರ್ವ ವರದಿಗಾರರು ಹಾಗೂ ಓರ್ವ ಫೋಟೋಗ್ರಾಫರ್ ಎಂಟು ಅಥವಾ ಹೆಚ್ಚು ಪುಟಗಳಲ್ಲಿ ಪ್ರಕಟವಾಗುವ ಪ್ರಾದೇಶಿಕ ಪತ್ರಿಕೆಗಳು ಇಬ್ಬರು ವರದಿಗಾರರು ಹಾಗೂ ಓರ್ವ ಫೋಟೋಗ್ರಾಫರ್‌ಗೆ ಬಸ್ ಪಾಸ್ ಪಡೆಯಲು ಅವಕಾಶವಿದೆ.

ಉಪಗ್ರಹ ಆಧಾರಿತ ವಿದ್ಯುನ್ಮಾನ ವಾಹಿನಿಗಳ ವರದಿಗಾರರು ತಾಲೂಕು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಪ್ರತಿ ತಾಲ್ಲೂಕಿಗೆ ಓರ್ವ ಕ್ಯಾಮರಾಮ್ಯಾನ್ ಹಾಗೂ ಓರ್ವ ವರದಿಗಾರರು ಬಸ್ ಪಾಸ್ ಪಡೆಯಬಹುದಾಗಿದೆ.

ದಿನಪತ್ರಿಕೆಗಳು ಹಾಗೂ ಉಪಗ್ರಹ ಸುದ್ದಿ ವಾಹಿನಿಗಳ ಸಂಪಾದಕರು ನೀಡುವ ನೇಮಕಾತಿ ಪತ್ರ ಹಾಗೂ ಶಿಫಾರಸ್ಸು ಆಧರಿಸಿ ಅರ್ಹ ಪತ್ರಕರಿಗೆ ಬಸ್ ಪಾಸ್‌ಗಳನ್ನು ನೀಡಲಾಗುವುದು.

ಆಸಕ್ತ ಹಾಗೂ ಅರ್ಹ ಪತ್ರಕರ್ತರು ತಮ್ಮ ಸಮೀಪದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು. ಅಪ್‌ಲೋಡ್ ಮಾಡಿದ ದಾಖಲೆಗಳು ಹಾಗೂ ಆನ್‌ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ತಮ್ಮ ಜಿಲ್ಲೆಯ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಗೆ ಸ್ವಯಂ ದೃಢೀಕರಿಸಿ ಸಲ್ಲಿಸಬೇಕು ಎಂದು ತಿಳಿಸಿದೆ