Tuesday, March 10, 2026
Tuesday, March 10, 2026
Home Blog Page 384

National Cadet Corps ಮಾಜಿ ಯೋಧರಿಗೆ ಹೊರಗುತ್ತಿಗೆ ಮೇಲೆ‌‌ ಉದ್ಯೋಗಾವಕಾಶ ಪ್ರಕಟಣೆ

0

National Cadet Corps ಎನ್.ಸಿ.ಸಿ, ನಿರ್ದೇಶನಾಲಯ (ಕರ್ನಾಟಕ ಮತ್ತು ಗೋವಾ) ಇವರು ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ರಾಯಚೂರು ಮತ್ತು ಶಿವಮೊಗ್ಗದ ಎನ್.ಸಿ.ಸಿ, ಬೆಟಾಲಿಯನ್‌ಗಳಿಗೆ ಹೆಚ್ಚುವರಿ ತರಬೇತಿ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾಜಿ ಸೈನಿಕರನ್ನು ನೇಮಿಸಿಕೊಳ್ಳಲು ಉದ್ದೇಶಿಸಿದ್ದು, ಭೂ ಸೇನೆಯಿಂದ ಆಕ್ಟೋಬರ್ 2022ರ ನಂತರ ನಿವೃತ್ತರಾಗಿರುವ ಜೆ.ಸಿ.ಒ (ಸುಬೇದಾರ್ ಮತ್ತು ನಾಯಬ್ ಸುಬೇದರ್) ಹಾಗೂ ಹವಾಲ್ದಾರ್ (ಎಮ್ ಎಸಿಪಿ ಹವಾಲ್ದಾರ್‌ಗಳನ್ನು ಪರಿಗಣಿಸುವುದಿಲ್ಲ) ರ‍್ಯಾಂಕ್‌ನ ಮಾಜಿ ಸೈನಿಕ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ
ಸೈನ್ಯದಲ್ಲಿ ದುರ್ನಡತೆ ಸಲುವಾಗಿ ಮತ್ತು ಯಾವುದೇ ವೈದ್ಯಕೀಯ ಕಾರಣಗಳಿಂದ ಸೈನ್ಯದಿಂದ ಬಿಡುಗಡೆಗೊಂಡಿರದ ಆಸಕ್ತ ಮಾಜಿ ಸೈನಿಕರು ಮಾರ್ಚ್ 13 ರ ಒಳಗೆ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ.
National Cadet Corps ಹೆಚ್ಚಿನ ಮಾಹಿತಿಗಾಗಿ ಮಿಂಚAಚೆ : jtdirpc.kardte@nccindia.nic.in, ಜಾಲತಾಣ-https://nis.bisag-n.gov.in/nis/downloads-public ಮತ್ತು ನಿರ್ದೇಶನಾಲಯ (ಕರ್ನಾಟಕ ಮತ್ತು ಗೋವಾ) ಕೆಎಸ್‌ಸಿಎಮ್‌ಎಫ್ ಬಿಲ್ಡಿಂಗ್, 4ನೇ ಮಹಡಿ ನಂ-8, ಕನ್ನಿಂಗ್‌ಹ್ಯಾಮ್ ರಸ್ತೆ, ಬೆಂಗಳೂರು-56000 ಅಂಚೆ ವಿಳಾಸವನ್ನು ಸಂಪರ್ಕಿಸಬಹುದಾಗಿದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Samanvaya Trust Shivamogga “ಸಮನ್ವಯ”ದಿಂದ ಉಜ್ವಲಾ ರವಿ ಅವರಿಗೆ “ಪರಿಸರ ಕುಟುಂಬ‌ “ಪ್ರಶಸ್ತಿ

0

Samanvaya Trust Shivamogga ಪರಿಸದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ವಿನೋಬನಗರದ ನಿವಾಸಿ ಉಜ್ವಲಾ ರವಿ ಕುಟುಂಬಕ್ಕೆ ಸಮನ್ವಯ ಟ್ರಸ್ಟ್ ವತಿಯಿಂದ ಪರಿಸರ ಕುಟುಂಬ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಸಮನ್ವಯ ಟ್ರಸ್ಟ್ ನೇತೃತ್ವದಲ್ಲಿ ಹಾಗೂ ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಮಾರ್ಗದರ್ಶನದಲ್ಲಿ ಶಿವಮೊಗ್ಗದಲ್ಲಿ ಪರಿಸರ ಸ್ನೇಹಿ ಕುಟುಂಬಗಳನ್ನು ಗುರುತಿಸಿ ಪರಿಸರ ಪ್ರಶಸ್ತಿ ನೀಡುವ ಮೂಲಕ ಗೌರವಿಸುವ ಕೆಲಸವನ್ನು ಟ್ರಸ್ಟ್ ವತಿಯಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಟ್ರಸ್ಟ್ ವತಿಯಿಂದ ನೀಡುತ್ತಿರುವ 50ನೇ ಪರಿಸರ ಕುಟುಂಬ ಪ್ರಶಸ್ತಿ ಇದಾಗಿದೆ.
ಉಜ್ವಲಾ ರವಿ ಕುಟುಂಬದವರು ನಿವೇಶನದ ಅರ್ಧಭಾಗದಲ್ಲಿ ಮನೆ ಕಟ್ಟಿಕೊಂಡು ಇನ್ನುಳಿದ ಅರ್ಧ ಭಾಗದಲ್ಲಿ ಪರಿಸರಕ್ಕೆ ಪೂರಕವಾಗಿ ಹಾಗೂ ಪಕ್ಷಿಗಳಿಗೆ ಅನುಕೂಲ ಆಗುವಂತೆ ಸಸಿಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ. ಉಜ್ವಲಾ ರವಿ ಅವರ ಕುಟುಂಬಕ್ಕೆ ಪ್ರಶಸ್ತಿ ವಿತರಿಸಲಾಯಿತು.
Samanvaya Trust Shivamogga ಮನೆ ಆವರಣದಲ್ಲಿ ಸಸ್ಯಗಳನ್ನು ಬೆಳೆದು ಪೋಷಿಸುತ್ತಿದ್ದಾರೆ. ತ್ಯಾಜ್ಯ ನಿರ್ವಹಣೆಯನ್ನು ಮಾಡುತ್ತಾರೆ. ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ಬಳಕೆ ಮಾಡುತ್ತಾರೆ. ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ. ಶಿವಮೊಗ್ಗ ನಗರದ ಜೆಎನ್‌ಎನ್‌ಸಿಇ ಕಾಲೇಜಿನ ಲೆಕ್ಚರ್ ಉಜ್ವಲಾ ರವಿ ಕುಟುಂಬದ ಪರಿಸರ ಕಾಳಜಿ ಗುರುತಿಸಿ ಸಮನ್ವಯ ಟ್ರಸ್ಟ್ ಪರಿಸರ ಪ್ರಶಸ್ತಿ ನೀಡಿ ಅಭಿನಂದಿಸಿದೆ.
ಸಮನ್ವಯ ಟ್ರಸ್ಟ್ ಕಾರ್ಯ ನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ನೇತೃತ್ವದ ತಂಡವು ಶಿವಮೊಗ್ಗದ ಪರಿಸರ ಸ್ನೇಹಿ ಕುಟುಂಬಗಳನ್ನು ಗುರುತಿಸಿ ಗೌರವಿಸುವ ವಿಶೇಷ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದೆ. ಪರಿಸರದ ಕಾಳಜಿಯನ್ನು ಮನೆ ಮನೆಗೆ ತಲುಪಿಸುವ ಆಶಯದಿಂದ ರಾಜ್ಯದಲ್ಲಿಯೇ ನಡೆಸುತ್ತಿರುವ ವಿಶೇಷ ಪ್ರಯತ್ನ ಇದಾಗಿದೆ.
ಪರಿಸರ ಕುಟುಂಬ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಸಮನ್ವಯ ಟ್ರಸ್ಟ್ ನ ಸಮನ್ವಯ ಕಾಶಿ, ಉಜ್ವಲಾ ರವಿ ಕುಟುಂಬದ ಸದಸ್ಯರು, ಸಮನ್ವಯ ಟ್ರಸ್ಟ್ ಸಲಹಾ ಸಮಿತಿ ಸದಸ್ಯ ಯತೀಶ್ ಬಿ ಎನ್ ಉಪಸ್ಥಿತರಿದ್ದರು.

Youth Hostels Association of India ಚಿಕ್ಕಮಗಳೂರು ಜಿಲ್ಲೆ ಹೊರನಾಡಿನಲ್ಲಿ ಬೇಸಿಗೆ ಶಿಬಿರ. ಆಸಕ್ತರಿಗೆ ಇಲ್ಲಿದೆ ಮಾಹಿತಿ

0

Youth Hostels Association of India ಚಿಕ್ಕಮಗಳೂರಿನ ಹೊರನಾಡಿನಲ್ಲಿ ಏಪ್ರಿಲ್ 12ರಿಂದ 20ರವರೆಗೆ ದಿಕ್ಸೂಚಿ ಅಡ್ವೆಂಚರ‍್ಸ್ ಶಿವಮೊಗ್ಗ ವತಿಯಿಂದ ವಿಶೇಷ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. 10 ವರ್ಷ ಮೇಲ್ಪಟ್ಟವರು ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಕ್ಯಾಂಪಿಂಗ್, ಮ್ಯೂಸಿಕ್, ಫಿಲ್ಮ್, ಗೇಮ್ಸ್, ಟ್ರೆಕ್ಕಿಂಗ್, ಪ್ರಥಮ ಚಿಕಿತ್ಸೆ, ಕ್ರಾಫ್ಟ್ಸ್‌, ಅಡುಗೆ ಸೇರಿದಂತೆ ವೈವಿಧ್ಯ ವಿಷಯಗಳ ಬಗ್ಗೆ ಬೇಸಿಗೆ ಶಿಬಿರದಲ್ಲಿ ಕಲಿಸಲಾಗುತ್ತದೆ. ಇಟ್ಸಿ ಬಿಟ್ಸಿ, ಕಲಾತರಂಗ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಘಟಕ, ಮಲ್ನಾಡ್ ಓಪನ್ ಗ್ರೂಪ್, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಗಳ ಸಹಯೋಗದಲ್ಲಿ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಸಕ್ತ 50 ಜನರಿಗೆ ಅವಕಾಶ ಇರಲಿದೆ. ವಿಶೇಷ ಬೇಸಿಗೆ ಶಿಬಿರಕ್ಕೆ ಸಂಬಂಧಿಸಿ ಮಾಹಿತಿಗಾಗಿ ಫ್ವಥಿರಾಜ್ ಗಿರಿಮಾಜಿ 8277314779, ವಿಭಾ 6361993239, ಹರೀಶ್ ಪಂಡಿತ್ 9886422078 ಸಂಪರ್ಕಿಸಬಹುದಾಗಿದೆ.

University of Agricultural and Horticultural Sciences ನನ್ನ ಕಾಲ ಮೇಲೆ ನಾನು ನಿಲ್ಲಬೇಕೆಂಬ ಆಸಕ್ತಿ ವಿದ್ಯಾರ್ಥಿ‌ ಜೀವನದಲ್ಲೇ ಬೆಳೆಸಿಕೊಳ್ಳಬೇಕು- ಡಾ.ಆರ್.ಸಿ.ಜಗದೀಶ್

0

University of Agricultural and Horticultural Sciences ಗ್ರಾಮೀಣ ಉತ್ಪನ್ನಗಳನ್ನು ಆಧರಿಸಿ ಮಲೆನಾಡಿನಲ್ಲಿ ವೈವಿಧ್ಯಮಯ ಉದ್ದಿಮೆಗೆ ವಿಫುಲ ಅವಕಾಶಗಳಿವೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಆರ್.ಸಿ.ಜಗದೀಶ್ ಅಭಿಪ್ರಾಯಪಟ್ಟರು.

ಸಾಗರ ಪಟ್ಟಣದ ಲಾಲ್ ಬಹದ್ದೂರ್ ಕಲಾ ವಿಜ್ಞಾನ ಮತ್ತು ಎಸ್.ಬಿ.ಸೊಲಬಣ್ಣ ಶೆಟ್ಟಿ ಕಾಲೇಜಿನ ದೇವರಾಜ ಅರಸು ಕಲಾಕೇಂದ್ರದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ವಾಣಿಜ್ಯ ವಿಭಾಗ ಮತ್ತು ರಾಯಲ್ ಬಿಲ್ಡರ್ಸ್ ಎಂಡ್ ಡೆವಲಪರ್ಸ್ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಯಾವುದೇ ಉದ್ದಿಮೆಯ ಯಶಸ್ಸಿಗೆ ಕೌಶಲ್ಯ ಅತ್ಯಗತ್ಯ ಎಂದರು.
ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಎಂಬ ಆಸಕ್ತಿ ಕಾಲೇಜು ದಿನಗಳಲ್ಲಿ ಮೊಳಕೆಯೊಡೆಯಬೇಕು. ಪ್ರತಿ ವಿದ್ಯಾರ್ಥಿಯಲ್ಲೂ ಒಂದೊಂದು ವಿಶೇಷ ಗುಣಗಳಿರುತ್ತವೆ. ಅವರ ಆಸಕ್ತಿಗೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಪೋಷಣೆ ಮಾಡಬೇಕು. ಪ್ರತಿ ಗ್ರಾಮದಲ್ಲೂ ಉದ್ದಿಮೆ ಮಾಡಬೇಕು ಎಂಬ ಗುರಿ ಇರಬೇಕು. ದೇಶದಲ್ಲಿ ಪ್ರತಿವರ್ಷ 7 ಕೋಟಿ ವಿದ್ಯಾರ್ಥಿಗಳು ಹೊರಬರುತ್ತಾರೆ. ಅವರೆಲ್ಲರಿಗೂ ಕೆಲಸ ಕೊಡಲು ಸಾಧ್ಯವಿಲ್ಲ. ಕೆಲವರು ಐಎಎಸ್, ಐಪಿಎಸ್ ಮಾಡುತ್ತಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವೀ ಉದ್ದಿಮೆದಾರರಾಗಲು ಸಾಧಕರ ಸಂಪರ್ಕ, ಕೌಶಲ್ಯ, ಹಣಕಾಸು ಲಭ್ಯತೆ ಇತ್ಯಾದಿ ಹುಡುಕಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಬದಲಾದ ಕಾಲಘಟ್ಟದಲ್ಲಿ ಗೂಗಲ್‍ನಲ್ಲಿ ನಮಗೆ ಬೇಕಾದ ಮಾಹಿತಿ ಸಿಗುತ್ತದೆ. ಉದ್ಯಮ ನಡೆಸಲು ಹಲವಾರು ತರಬೇತಿ ಸಂಸ್ಥೆಗಳೂ ಇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಉಚಿತ ತರಬೇತಿಗೆ ಯೋಜನೆಗಳಿವೆ. ಸರ್ಕಾರದಿಂದಲೂ ಅನೇಕ ಸವಲತ್ತುಗಳಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ತರಬೇತಿ ಮಾಹಿತಿ ಕೇಂದ್ರಗಳಿಲ್ಲ. ಕೃಷಿಗೆ ಸಂಬಂಧಿಸಿ 800 ಸ್ಟಾರ್ಟ್‍ಪ್‍ಗಳಿವೆ. ಮಲೆನಾಡಿನಲ್ಲಿ ಹಲಸು, ಅಗರಬತ್ತಿ ತಯಾರಿಕೆ, ಜೇನುಪೆಟ್ಟಿಗೆ ಇಟ್ಟು ತುಪ್ಪ ತಯಾರಿಕೆ, ಬೆಲ್ಲದ ಚಹಾ, ಚಿಕ್ಕಿ ತಯಾರಿಕೆ, ಕಬ್ಬು ಬೆಳೆಯ ಮೌಲ್ಯವರ್ಧನೆ, ಗೇರುಬೀಜ ಪ್ರೊಸೆಸಿಂಗ್, ಗೇರು ಹಣ್ಣಿನಿಂದ ಜ್ಯೂಸ್ ಇತ್ಯಾದಿ ತಯಾರಿಕೆ, ಕುರಿ ಸಾಕಾಣಿಕೆ, ಸಸ್ಯ ನರ್ಸರಿ, ಅಣಬೆ ಉತ್ಪನ್ನ, ವಿವಿಧ ರೀತಿಯ ಅವಲಕ್ಕಿ ತಯಾರಿಕೆ ಹೀಗೆ ವೈವಿಧ್ಯಮಯ ಉದ್ದಿಮೆಗಳಿಗೆ ಅವಕಾಶಗಳಿವೆ. ಕೆಲವು ವಸ್ತುಗಳ ತಯಾರಿಕೆಗೆ ಕಚ್ಚಾ ವಸ್ತುಗಳನ್ನು ಕಂಡುಕೊಳ್ಳಬೇಕು. ಉತ್ತಮ ಕೌಶಲ್ಯದಿಂದ ಹೆಚ್ಚು ಅಭಿವೃದ್ಧಿ ಸಾಧ್ಯ ಎಂದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ.ಶಿವಕುಮಾರ್ ಮಾತನಾಡಿ, ಈ ಕಾಲೇಜಿನಿಂದ ಈವರೆಗೆ ಸುಮಾರು 60 ಸಾವಿರ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಹಲವಾರು ಜನರು ಸ್ವಂತ ಉದ್ದಿಮೆ ಮಾಡಿ ಹತ್ತಾರು ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ಪ್ರಸ್ತುತ ಈ ವಿದ್ಯಾಲಯದಲ್ಲಿ 2500 ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳನ್ನು ನಾವು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ ವಿಶ್ವವಿದ್ಯಾಲಯ ಮಟ್ಟದ ಕಾರ್ಯಕ್ರಮ ಮಾಡುವ ಮೂಲಕ ತರಗತಿಯ ಹೊರಗಿನ ವಿಷಯಗಳ ಕುರಿತು ಅರಿವು ಮೂಡಿಸುತ್ತಿದ್ದೇವೆ. 60 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳಿರುವ ಅತ್ಯುತ್ತಮ ಗ್ರಂಥಾಲಯ ಈ ಕಾಲೇಜಿನಲ್ಲಿದೆ. ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾದ ವಾತಾವರಣ ಈ ಶಿಕ್ಷಣ ಸಂಸ್ಥೆಯಲ್ಲಿದೆ ಎಂದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಹರನಾಥರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಪಡೆದವರು ಸ್ವಯಂ ಉದ್ಯೋಗ ಮಾಡಿ ಹತ್ತಾರು ಜನರಿಗೆ ಉದ್ಯೋಗ ಕೊಡಬೇಕು ಎಂಬ ಗುರಿ ಹೊಂದಬೇಕು. ಕೃಷಿ ವಿಶ್ವವಿದ್ಯಾಲಯವು ವಿವಿಧ ರೀತಿಯ ರೈತಸ್ನೇಹಿ ಸಂಶೋಧನೆ ಕೈಗೊಳ್ಳಬೇಕು. ಇದರಿಂದ ಕಡಿಮೆ ಖರ್ಚಿನಲ್ಲಿ ರೈತಾಪಿ ಕೆಲಸಗಳು ಆಗುವಂತಾಗಬೇಕು. ವಿದ್ಯಾರ್ಥಿಗಳು ಸ್ವಂತ ಉದ್ಯೋಗ ಮಾಡುವತ್ತ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಯಶಸ್ವೀ ಉದ್ದಿಮೆದಾರರಾದ ರಾಯಲ್ ಬಿಲ್ಡರ್ಸ್ ಎಂಡ್ ಡೆವಲಪರ್ಸ್ ನ ಅಬ್ದುಲ್ ಜಲೀಲ್, ಫೆನಿಕ್ಸ್ ಪ್ಯೂರಿಫೈಡ್ ವಾಟರ್‍ನ ಬಿ.ಎ.ಇಂದೂದರ, ಸುಗಂಧಿ ಅಗರಬತ್ತಿಯ ಎಸ್.ಚಂದ್ರಮೋಹನ್, ಶ್ರೀ ರಾಘವೇಂದ್ರ ಮೆಡಿಕಲ್ ಗ್ರೂಪ್‍ನ ರಾಜೇಶ್ ಸಿ.ಆರ್., ಸಹ್ಯಾದ್ರಿ ನರ್ಸರಿಯ ಗಿರೀಶ್ ಹಕ್ರೆ, ಎನ್.ಜಿ.ಪ್ರೈವೇಟ್ ಕೇರ್ ನ ವಾಣಿ ಅರುಣ್, ಸಿರಿ ಫುಡ್ಸ್ ಎಂಡ್ ಬ್ರಿವರೇಜ್‍ನ ಗಿರೀಶ್ ಕೆ.ಎಚ್., ಲಕ್ಸ್ ಇವೆಂಟ್ ಪ್ಲೇನರ್‍ನ ಸಮರ್ಥ ಬಡ್ಕುಮನೆ, ಶ್ರೀ ಸಿದ್ದಿವಿನಾಯಕ ಹೋಮ್ ಕ್ಯಾಟರಿಂಗ್‍ನ ರಾಮಚಂದ್ರ ಎಸ್.ಕೆ. ಅವರನ್ನು ಸನ್ಮಾನಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಬಿ.ಆರ್.ಜಯಂತ್, ಖಜಾಂಚಿ ಕೆ.ವೆಂಕಟೇಶ್ ಕವಲಕೋಡು ಹಾಜರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಲಕ್ಷ್ಮೀಶ್ ಎ.ಎಸ್. ಸ್ವಾಗತಿಸಿದರು. ಲಕ್ಷ್ಮೀ ಸನ್ಮಾನಿತರನ್ನು ಪರಿಚಯಿಸಿದರು. ಡಾ.ಸುಮುಖ ಪಿ.ಎಸ್. ವಂದಿಸಿದರು. ಡಾ.ರಾಘವೇಂದ್ರ ನಿರೂಪಿಸಿದರು.

ನಂತರ ನಡೆದ ಗೋಷ್ಠಿಯಲ್ಲಿ `ಉದ್ದಿಮೆಯಲ್ಲಿ ಎದುರಾಗುವ ತೊಂದರೆಗಳೇನು ?’ ವಿಷಯ ಕುರಿತು ನಾರಿಶಕ್ತಿ ಪ್ರಶಸ್ತಿ ಪುರಸ್ಕೃತ ನೊಮಿಟೊ ಕಾಮದಾರ್ ಮಾತನಾಡಿದರು. ಮಲ್ಲಿಕಾ ಆಟೊ ಸೆಂಟರ್‍ನ ಗುರುಪ್ರಸಾದ್ ಕೆ., ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷ ಬಿ.ಆರ್.ಜಯಂತ್ ಉಪಸ್ಥಿತರಿದ್ದರು.

ಉದ್ಯಮಶೀಲತೆಯ ಅವಕಾಶಗಳು ಕುರಿತ ಗೋಷ್ಠಿಯಲ್ಲಿ ಮಂಜುನಾಥ ಸುವರ್ಣಗದ್ದೆ ಮಾತನಾಡಿದರು. ಉದ್ಯಮಿಗಳಾದ ಎಸ್.ರವೀಂದ್ರ ಭಟ್, ಇಂದೂದರ ಬಿ.ಎ., ಗಿರೀಶ್ ಹಕ್ರೆ, ಕೆ.ವೆಂಕಟೇಶ್ ಭಾಗವಹಿಸಿದ್ದರು.

Shimoga Premier Badminton League ಐಪಿಎಲ್ ಮಾದರಿ ಬ್ಯಾಡ್ಮಿಂಟನ್ ಲೀಗ್ ಶಿವಮೊಗ್ಗದ ಆರ್ ಆರ್ ಸ್ಮ್ಯಾಷರ್ಸ್‌ ಗೆ ದ್ವಿತೀಯ ಸ್ಥಾನ

0

Shimoga Premier Badminton League ಪ್ರಥಮ ಬಾರಿಗೆ ಐಪಿಎಲ್ ಮಾದರಿಯಲ್ಲಿ ನಗರದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಆರ್ ಆರ್ ಸ್ಮಾಷರ‍್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು.

ಅತ್ಯಂತ ಯಶಸ್ವಿಯಾಗಿ ನಡೆದ ಶಿವಮೊಗ್ಗ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಬೆಳಗ್ಗೆಯಿಂದ ರಾತ್ರಿ 8ರವರೆಗೂ ನಡೆದ ಪಂದ್ಯಗಳು ಅತ್ಯಂತ ರೋಚಕತೆಯಿಂದ ಕೂಡಿದ್ದವು. ಫೈನಲ್ ಪಂದ್ಯದಲ್ಲಿ ಜಿಕೆಜಿ ಬುಲ್ಸ್ ತಂಡ ಪ್ರಥಮ ಸ್ಥಾನ ಹಾಗೂ ಆರ್ ಆರ್ ಸ್ಮಾಷರ‍್ಸ್ ತಂಡವು ದ್ವಿತೀಯ ಸ್ಥಾನ ಪಡೆದವು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಮೋಹನ್, ಅಶೋಕ್, ತಂಡದ ಮಾಲೀಕರಾದ ಆರ್ ಆರ್ ಸ್ಮಾಷರ‍್ಸ್ ನ ರಮೇಶ್.ಎನ್, ಜೆಕೆಜಿ ಬುಲ್ಸ್ ನ ಗೋಕುಲ್, ಆರ್ ವಿ ಡಿ ರಾಕರ್ಸ್ ನ ರಘುನಂದನ್, ಅಲ್ಟ್ರಾ ಸ್ಮಾರ‍್ಸ್ ನ ಜಿತೇಂದ್ರ ಹಿರೇಮಠ್, ಸ್ಮಾಷ್ ಇಟ್ ಎಚ್‌ಬಿ ಶಿವಮೊಗ್ಗದ ಪ್ರಶಾಂತ್, ಗುತ್ತಿ ಸ್ಟ್ರೈಕರ್ಸ್‌ ನ ದರ್ಶನ್.ವಿ.ಪಿ, ಬ್ಯಾಡ್ಮಿಂಟನ್ ವಾರಿಯರ್ಸ್ ರಘು ಬಿ ಇ ಹಾಗೂ ಭದ್ರಾ ಬ್ಲ್ಯಾಕ್ ಪ್ಯಾಂಥರ್ ನ ಲೋಕೇಶ್ , ಕಾರ್ಯ ಕ್ರಮ ಸಂಯೋಜಕ ದೀಪಕ್ ಉಪಸ್ಥಿತರಿದ್ದರು.

DVS College of Arts, Science and Commerce ಕ್ಯಾಂಪಸ್ ಡ್ರೈವ್ ನ ಲಾಭವನ್ನ ನಮ್ಮ ವಿದ್ಯಾರ್ಥಿಗಳು ಪಡೆಯಬೇಕು- ಎಸ್.ರಾಜಶೇಖರ್

0

DVS College of Arts, Science and Commerce ಉದ್ಯೋಗ ಕ್ಷೇತ್ರದಲ್ಲಿ ಅನೇಕ ಅವಕಾಶಗಳಿದ್ದು, ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಮುನ್ನಡೆದಾಗ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎಂದು ದೇಶೀಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬೆಂಗಳೂರಿನ ಅಪ್ಟಂ ಹೆಲ್ತ್ ಮತ್ತು ಟೆಕ್ನಾಲಜೀಸ್ ಸಹಯೋಗದಲ್ಲಿ ವಿಜ್ಞಾನ ವಿಭಾಗದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಪ್ಟಂ ಕ್ಯಾಂಪಸ್ ಡ್ರೈವ್ ಮತ್ತು ವಿಶೇಷ ನೇಮಕಾತಿ ಆಯ್ಕೆ ಪ್ರಕ್ರಿಯೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಿವಿಎಸ್ ವಿದ್ಯಾಸಂಸ್ಥೆಯ ಕಾಲೇಜಿನಲ್ಲಿ ನಾಲ್ಕು ವರ್ಷಗಳಿಂದ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಅಪ್ಟಂ ಸಂಸ್ಥೆಯು ಅನೇಕ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ಶೇ. 99ರಷ್ಟು ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳುವಲ್ಲಿ ನೆರವಾಗಿದೆ. ಎಲ್ಲ ವಿದ್ಯಾರ್ಥಿಗಳು ಅಗತ್ಯ ತರಬೇತಿ ಪಡೆದುಕೊಂಡು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಬೇಕು ಎಂದು ತಿಳಿಸಿದರು.

ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಮಾತನಾಡಿ, ವಿದ್ಯಾರ್ಥಿಗಳಿಗೆ ಅತ್ಯಂತ ಶ್ರದ್ಧೆಯಿಂದ ಮತ್ತು ಇಂದಿನ ತಾಂತ್ರಿಕ ಯುಗದ ಪರಿಣಿತಿಯನ್ನು ಕರಗತ ಮಾಡಿಕೊಂಡು ಎಲ್ಲ ರೀತಿಯ ಉದ್ಯೋಗಗಳಿಗೂ ಸನ್ನದ್ಧರಾಗಬೇಕು ಎಂದು ಸಲಹೆ ನೀಡಿದರು.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ಲಭಿಸಲು ಪೂರಕವಾಗಿ ಸರ್ಕಾರಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬಹಳ ಮುಖ್ಯವಾಗಿ ಉದ್ಯೋಗ ಆಕಾಂಕ್ಷಿಗಳು ತಮ್ಮ ಪ್ರಯತ್ನವನ್ನು ನಿರಂತರವಾಗಿ ಮುಂದುವರಿಸಬೇಕು. ಉತ್ತಮ ಆದಾಯ ಇರುವ ಉದ್ಯೋಗಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

DVS College of Arts, Science and Commerce ದೇಶೀಯ ವಿದ್ಯಾಸಂಸ್ಥೆ ಶಿಕ್ಷಣದ ಜತೆಯಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಸಿಗುವಂತೆ ಪೂರಕವಾಗಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವಿದ್ಯಾರ್ಥಿಗಳು ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬೆಂಗಳೂರಿನ ಅಪ್ಟಂ ಹೆಲ್ತ್ ಮತ್ತು ಟೆಕ್ನಾಲಜೀಸ್ ಸಂಸ್ಥೆಯ ದಿವ್ಯದರ್ಶನ್ ಮತ್ತು ಕ್ಲೆಮೆಂಟ್ ಸಿಕ್ವೆರಿಯಾ ಅವರು ಉದ್ಯೋಗ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಿ ಪ್ರವೇಶ ಪರೀಕ್ಷೆ ನಡೆಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ. ಕುಮಾರಸ್ವಾಮಿ.ಎನ್., ಪ್ಲೇಸ್‌ಮೆಂಟ್ ಸೆಲ್ ಸಂಯೋಜಕ ಡಾ. ಚಂದ್ರು.ಕೆ ಪಾಲ್ಗೊಂಡಿದ್ದರು. ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Government Industrial Training Institute ವಿದ್ಯಾರ್ಥಿಗಳು ಕೌಶಲ್ಯ ತರಬೇತಿಯ ಪ್ರಯೋಜನ ಪಡೆಯಬೇಕು- ಜಿ.ವಿಜಯ ಕುಮಾರ್

0

Government Industrial Training Institute ಶಿವಮೊಗ್ಗದಲ್ಲಿ ಇಂದು ದಿನಾಂಕ: 04-03-2025 ರಂದು ಗಾಜನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಬಿ. ಟಿ . ಶೇಖರಪ್ಪ ಇವರ ಅಧ್ಯಕ್ಷತೆಯಲ್ಲಿ ಪಿಎಂ ಇಂಟರ್ನ್ಶಿಪ್ ಅಂಡ್ ಅಪ್ರೆಂಟಿ ಷಿಪ್ ಕಾರ್ಯಗಾರವನ್ನು ನಡೆಸಲಾಯಿತು.

ಕೌಶಲ್ಯ ವೃದ್ಧಿ, ರಾಷ್ಟ್ರ ಅಭಿವೃದ್ಧಿಗೆ, ಕೈಗಾರಿಕೆ ಅಭಿವೃದ್ಧಿಗೆ ಅತ್ಯಂತ ಅವಶ್ಯಕ ವಿದ್ಯಾರ್ಹತೆ ಪಡೆದ ಎಲ್ಲಾ ಅಭ್ಯರ್ಥಿಗಳು ರಿಜಿಸ್ಟ್ರೇಷನ್ ಮಾಡಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಶ್ರೀ. ಜಿ ವಿಜಯಕುಮಾರ್ ನುಡಿದರು, ಅವರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಗಾಜನೂರಿನಲ್ಲಿ ಆಯೋಜಿಸಿದ್ದ ಪಿ. ಎಂ ಇಂಟರ್ನಶಿಪ್ ಅಂಡ್ ಅಪ್ರೆಂಟಿಷಿಪ್ ಯೋಜನೆಗಳ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘ ಆರಂಭಿಸಿರುವ ಅಡ್ವಾನ್ಸ್ಡ್ ಸ್ಕಿಲ್ ಅಕಾಡೆಮಿಯ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಸದುಪಯೋಗ ಪಡೆಯಲು ಕರೆ ನೀಡಿದರು.

Government Industrial Training Institute ಮತ್ತೋರ್ವ ಅತಿಥಿಯಾಗಿದ್ದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕರಾದ ಡಾ. ಬಿ. ವಿ. ಲಕ್ಷ್ಮೀದೇವಿ ಗೋಪಿನಾಥ್ ರವರು ಮಾತನಾಡಿ ಇಂದಿನ ವಿದ್ಯಾರ್ಥಿಗಳ ಗುಣಮಟ್ಟ, ಭವಿಷ್ಯದ ಭಾರತದ ಗುಣಮಟ್ಟವನ್ನು ನಿರ್ಧರಿಸುವುದು ಅದರಿಂದ ಇರುವ ಅವಕಾಶಗಳನ್ನು ಉಪಯೋಗಿಸಿಕೊಂಡು ಕೌಶಲ್ಯ ವೃದ್ಧಿ ಮಾಡಿಕೊಳ್ಳಬೇಕೆಂದು ನುಡಿದರು. ಮತ್ತೋರ್ವ ನಿರ್ದೇಶಕರಾದ ಶ್ರೀ. ಗಣೇಶ್ ಎಂ ಅಂಗಡಿ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಕೌಶಲ್ಯ ಕಲಿತು ಉತ್ಪಾದಕರಾಗಲು/ ಉದ್ಯಮಿಯಾಗಲು ಕರೆ ನೀಡಿದರು.

ಜಿಲ್ಲಾ ಶಿಶಿಕ್ಷು ನೋಡಲು ಅಧಿಕಾರಿಯಾದ ಶ್ರೀ. ವಿಜಯಕುಮಾರ್ ಸಪಲಿ ರವರು ಮಾತನಾಡಿ ಐಟಿಐ ತರಬೇತಿಯಾದ ನಂತರ ಅರ್ಹ ಅಭ್ಯರ್ಥಿಗಳು PMIS Portal ನಲ್ಲಿ & apprenticeshipindia. gov.in portal ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡು ತರಬೇತಿ ಪಡೆಯಲು ಕರೆ ನೀಡಿದರು,
ಕಾರ್ಯಕ್ರಮದಲ್ಲಿ ಗಾಜನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಬಿ. ಟಿ . ಶೇಖರಪ್ಪ, ಶಿವಮೊಗ್ಗ ಜಿಲ್ಲಾ ಶಿಶಿಕ್ಷು ನೋಡಲ್ ಅಧಿಕಾರಿಯಾದ ಶ್ರೀ. ವಿಜಯಕುಮಾರ್ ಸಪಲಿ, ತೀರ್ಥಹಳ್ಳಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ. ಕಾಳಿದಾಸ್ ನಾಯ್ಕ್, ಭದ್ರಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿಗಳು ಹಾಗೂ ಸಹಾಯಕ ಶಿಶಿಕ್ಷು ಅಧಿಕಾರಿಗಳಾದ ಶ್ರೀ. ಮಾಲತೇಶ್ವರ್ ಡಿ, ರಿಪ್ಪನ್ಪೇಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ. ಆರ್ ಮೂರ್ತಿ, ಗಾಜನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಭಾರ ತರಬೇತಿ ಅಧಿಕಾರಿಗಳಾದ ಶ್ರೀ. ಕೃಷ್ಣಮೂರ್ತಿ ಕೆ, NSDC DPMU ರವರಾದ ಶ್ರೀಮತಿ. ಗೀತಾ ಹೆಚ್, ಶಿವಮೊಗ್ಗ ಜಿಲ್ಲೆಯ 10 ಉದ್ದಿಮೆದಾರರು ಹಾಗೂ ತರಬೇತುದಾರರು ಉಪಸ್ಥಿತರಿದ್ದರು.

Sri Renuka Devi Temple ಚಂದ್ರಗುತ್ತಿ ಜಾತ್ರೆಯಲ್ಲಿ ” ಬೆತ್ತಲೆ ಸೇವೆ” ನೀಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ

0

Sri Renuka Devi Temple ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಚಂದ್ರಗುತ್ತಿ ಗ್ರಾಮದ ಶ್ರೀರೇಣುಕಮ್ಮ ದೇವಿ ಜಾತ್ರೆಯು ಮಾರ್ಚ್ 05 ರಿಂದ 10 ರವರೆಗೆ ನಡೆಯಲಿದ್ದು, ವರದಾ ನದಿಯಲ್ಲಿ ಧಾರ್ಮಿಕ ಸ್ನಾನ ಮಾಡುವುದು, ದೇವರಿಗೆ ಮುಡಿಕೊಡುವುದು, ಪಡ್ಲಿಗಿ ತುಂಬಿಸುವುದು ಮತ್ತು “ಬೆತ್ತಲೆ ಸೇವೆ” ಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರು ಆದೇಶ ಹೊರಡಿಸಿದ್ದಾರೆ.
ಈ ನಿಷೇಧಾಜ್ಞೆಯು ಶ್ರೀರೇಣುಕಮ್ಮ ದೇವಿಯ ರಥೋತ್ಸವ ಹಾಗೂ ಇತರೆ ಪೂಜಾ ಕಾರ್ಯಗಳು ಮತ್ತು ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸುವುದಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Department of Animal Husbandry and Veterinary Services ಹಕ್ಕಿಜ್ವರ ಹರಡದಂತೆ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ‌ಕ್ರಮ‌ ಕೈಗೊಳ್ಳಲಾಗಿದೆ- ಡಾ. ಎ.ಬಾಬುರತ್ನ

0

Department of Animal Husbandry and Veterinary Services ರಾಜ್ಯದ ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಾಗಬಾರದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಡಳಿತ ಉಪ ನಿರ್ದೇಶಕ ಡಾ.ಎ.ಬಾಬುರತ್ನ ತಿಳಿಸಿದರು.

ಸೋಮವಾರ ನಗರದ ಇಲಾಖೆಯ ಕಚೇರಿಯಲ್ಲಿ ಸಂಜೆ 5 ಗಂಟೆಗೆ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ವರ್ಚುವಲ್ ಸಭೆಯಲ್ಲಿ ಅವರ ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 332 ಕೋಳಿ ಫಾರಂಗಳಿದ್ದು, ಈ ಫಾರಂಗಳಲ್ಲಿ ಒಟ್ಟು 1741650 ಕೋಳಿಗಳ ಸಾಕಾಣಿಕ ಮಾಡಲಾಗಿದೆ. ಆದರೂ ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಹಕ್ಕಿಜ್ವರ ಪ್ರಕರಣ ವರದಿಯಾಗಿಲ್ಲ. ಈಗಾಗಲೇ ಹಕ್ಕಿಜ್ವರ ಸಂಬಂಧಿಸಿದಂತೆ ಕಣ್ಗಾವಲು ಕಾರ್ಯಕ್ರಮವನ್ನು ನಡೆಸುತ್ತಿದ್ದು, ಈ ವರ್ಷದಲ್ಲಿ 476 ಕೋಳಿಗಳ ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಜಿಲ್ಲೆಯಾದ್ಯಂತ 29 ರ‍್ಯಾಪಿಡ್ ರೆಸ್ಪಾನ್ಸ್ ಟೀಮ್‌ಗಳನ್ನು ಮಾಡಿದ್ದು, ಎಲ್ಲಾ ಕೋಳಿ ಫಾರಂಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವಂತೆ ಮತ್ತು ಅಸಹಜ ಹಾಗೂ ಸಾಮೂಹಿಕ ಕೋಳಿಗಳು ಸಾವನ್ನಪ್ಪಿದರೆ ಕೂಡಲೇ ಕೋಳಿ ಫಾರಂ ಮಾಲೀಕರಿಗೆ ಹಾಗೂ ಸಾರ್ವಜನಿಕರು ಹತ್ತಿರದ ಪಶುವೈದ್ಯ ಸಂಸ್ಥೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ ಅವರು ಪ್ರಕರಣ ಕಂಡಬಂದಲ್ಲಿ ತಕ್ಷಣ ವೈಜ್ಞಾನಿಕ ವಿಲೇವಾರಿಗೂ ಕೂಡ ತಯಾರಿ ಮಾಡಕೊಳ್ಳಲಾಗಿದೆ ಎಂದರು.

Bhadravati Mescom ಮಾರ್ಚ್ 7. ಭದ್ರಾವತಿ ‌ಗ್ರಾಮೀಣ ಉಪವಿಭಾಗೀಯ ಮೆಸ್ಕಾಂ ಕಛೇರಿಯಲ್ಲಿ ಜನಸಂಪರ್ಕ ಸಭೆ

0

Bhadravati Mescom ಭದ್ರಾವತಿ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ.07 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ;9448289507.