Saturday, June 21, 2025
Saturday, June 21, 2025

Chamber Of Commerce Shivamogga ಕೇಂದ್ರ ಮುಂಗಡ ಪತ್ರ 2025 ರಲ್ಲಿ ತೆರಿಗೆ ಸುಧಾರಣಾ ಕ್ರಮ, ವಾಣಿಜ್ಯ ಕೈಗಾರಿಕೋದ್ಯಮಿ ಗಳಿಗೆ ಅನುಕೂಲವಾಗುವ ನಿರೀಕ್ಷೆ

Date:

Chamber Of Commerce Shivamogga ಕೇಂದ್ರ ಸರ್ಕಾರವು ಮಂಡಿಸಿದ ಮುಂಗಡಪತ್ರ 2025ರಲ್ಲಿ ಘೋಷಿಸಿರುವ ತೆರಿಗೆ ಸುಧಾರಣ ಕ್ರಮ ಮತ್ತು ತೆರಿಗೆ ವಿನಾಯತಿ ಗಳಿಂದ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ಬೆಳವಣಿಗೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ಕೇಂದ್ರ ಮುಂಗಡಪತ್ರ 2025 ರಲ್ಲಿ ಆದಾಯ ತೆರಿಗೆ ಮತ್ತು ಸರಕು ಮತ್ತು ಸೇವೆ ಕಾಯ್ದೆಗೆ ಆದ ತಿದ್ದುಪಡಿಗಳ ಬಗ್ಗೆ ಆಯೋಜಿಸಿದ್ದ ಸೆಮಿನಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷಗಳಿಂದ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ವ್ಯವಸ್ಥೆ ಗೆ ಸಂಬಂಧಿಸಿದಂತೆ ಕೈಗೊಂಡಿರುವ ವ್ಯಾಪಕ ಸುಧಾರಣೆ ಕ್ರಮಗಳಿಂದ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ಸಂಗ್ರಹದಲ್ಲಿ ವ್ಯಾಪಕವಾಗಿ ಹೆಚ್ಚಳಗೊಂಡಿದೆ ಹಾಗೂ ಮುಂಬರುವ ಹೊಸ ಆದಾಯ ತೆರಿಗೆ 2025 ಕಾಯ್ದೆಯ ಸರಳಿಕೃತ ವ್ಯವಸ್ಥೆಯಿಂದ ಜಿಲ್ಲೆಯ ವಾಣಿಜ್ಯ ಮತ್ತು ಕೈಗಾರಿಕಾ ಬೆಳವಣಿಗೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು ಮುಂದುವರೆದು ಸರಕು ಮತ್ತು ಸೇವಾ ತೆರಿಗೆ ಮತ್ತು ಆದಾಯ ತೆರಿಗೆಯ ತೆರಿಗೆ ಸಂಗ್ರಹಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಸಂಗ್ರಹವಾಗಿ ಕರ್ನಾಟಕ ವು ದೇಶದಲ್ಲಿಯೇ ಎರಡನೇ ಸ್ಥಾನಕ್ಕೆ ಬರಲು ತೆರಿಗೆ ಸಲಹೆಗಾರರು ಹಾಗೂ ಸನ್ನದು ಲೆಕ್ಕ ಪರಿಶೋಧಕರ ಮತ್ತು ಪ್ರಾಮಾಣಿಕ ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳ ಸಹಕಾರ ಮತ್ತು ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ದರು.

12 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿರುವುದು ಮಧ್ಯಮ ವರ್ಗಕ್ಕೆ ತುಂಬಾ ಅನುಕೂಲವಾಗಲಿದೆ ಎಂದರು ಹಾಗೂ ಎಂ ಎಸ್ ಎಂ ಇ ಗಳನ್ನ ಬಲಪಡಿಸಲು , ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸಲು, ಸಣ್ಣ ವ್ಯಾಪಾರಸ್ಥರಿಗೆ ಅನುಕೂಲವಾಗಲು ಆದಾಯ ತೆರಿಗೆಯಲ್ಲಿ ಅನೇಕ ತೆರಿಗೆ ವಿನಾಯಿತಿಗಳನ್ನು ನೀಡಿರುವುದು ಸಮಂಜಸವಾಗಿದೆ ಎಂದು ತಿಳಿಸಿದರು

ವಾಣಿಜ್ಯ ಮತ್ತು ಕೈಗಾರಿಕೆ ಉದ್ಯಮಿಗಳಿಗೆ ಅನುಕೂಲವಾಗುವ ಇಂತಹ ಸೆಮಿನಾರ್ ಕಾರ್ಯಕ್ರಮ ಗಳಿಗೆ ಸಂಘವು ಕೈಜೋಡಿ ಸುತ್ತದೆ ಎಂದರು

Chamber Of Commerce Shivamogga ಈ ಸಂದರ್ಭದಲ್ಲಿ ಸೆಮಿನಾರ್ ನ ವಿಷಯದ ಬಗ್ಗೆ ಸನ್ನದು ಲೆಕ್ಕ ಪರಿಶೋಧಕರು ಹಾಗೂ ಸಂಘದ ತೆರಿಗೆ ಸಲ ಸಮಿತಿಯ ಕಾರ್ಯದರ್ಶಿಯಾದ ಮಧುಸೂದನ್ ನಾವಡ ಯವರು ಮುಂಗಡಪತ್ರದಲ್ಲಿ ಆದಾಯ ತೆರಿಗೆ ಕಾಯ್ದೆಗೆ ಆದ ಬದಲಾವಣೆಗಳು ಹಾಗೂ ತೆರಿಗೆ ದರದ ಕಡಿತದಿಂದ ಉಳಿತಾಯವಾಗುವ ಮೊತ್ತದಿಂದ ಮಧ್ಯಮ ವರ್ಗದವರಿಗೆ ಮತ್ತು ವಾಣಿಜ್ಯೋದ್ಯಮಗಳಿಗೆ ಆಗುವ ಆರ್ಥಿಕ ಅನುಕೂಲತೆ ಬಗ್ಗೆ ವಿವರಿಸಿದರು ಮತ್ತೋರ್ವ ಸನ್ನದು ಲೆಕ್ಕ ಪರಿಶೋಧಕರಾದ ಎಸ್. ಎಸ್. ಶ್ರೀ ರಾಮ್ ರವರು ಕೇಂದ್ರ ಮುಂಗಡಪತ್ರದಲ್ಲಿ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಗೆ ಆದ ತಿದ್ದುಪಡಿಗಳ ಬಗ್ಗೆ ವಿವರವಾಗಿ ಉಪನ್ಯಾಸವನ್ನು ನೀಡಿದರು. ಶ್ರೀಯುತರುಗಳು ತಮ್ಮ ಉಪನ್ಯಾಸದ ಕೊನೆಯಲ್ಲಿ ವ್ಯಾಪಾರಸ್ಥರು ಕೈಗಾರಿಕೋದ್ಯಮಿಗಳು, ಸನ್ನದು ಲೆಕ್ಕ ಪರಿಶೋಧಕರು ಹಾಗೂ ತೆರಿಗೆ ಸಲಹೆ ಗಾರರ ಎಲ್ಲಾ ಸಂದೇಹದ ಪ್ರಶ್ನೆಗಳಿಗೆ ಸಮರ್ಪಕವಾಗಿ ಮಾಹಿತಿಯನ್ನು ನೀಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ತೆರಿಗೆ ಸಲಹ ಸಮಿತಿ ಅಧ್ಯಕ್ಷರಾದ CA ಶರತ್, ಎಲ್ಲಾ ಸದಸ್ಯರುಗಳು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ G.ವಿಜಯ್ ಕುಮಾರ್, ಖಜಾಂಚಿ ಆರ್ ಮನೋಹರ, ನಿರ್ದೇಶಕರುಗಳಾದ ವಸಂತ್ ಹೋಬಳಿ ದಾರ್, ಗಣೇಶ್ ಎಂ ಅಂಗಡಿ, ಲಕ್ಷ್ಮೀದೇವಿ ಗೋಪಿನಾಥ್,ಬಿ ಸುರೇಶ್ ಕುಮಾರ್, ರವಿಪ್ರಕಾಶ್ ಜನ್ನಿ , ಹಾಗೂ ಅನೇಕ ಸನ್ನದು ಲೆಕ್ಕ ಪರಿಶೋಧಕರುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ತೆರಿಗೆ ಸಲಹೆಗಾರರು, ಸಂಯೋಜಿತ ಸಂಸ್ಥೆಗಳ ಪದಾಧಿಕಾರಿಗಳು,ಅನೇಕ ವಾಣಿಜ್ಯೋದ್ಯಮಿಗಳು ಕೈಗಾರಿಕೋದ್ಯಮಿಗಳು, ಸದಸ್ಯರುಗಳು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bharat Scouts and Guides ಬೈಕ್ ಟ್ಯಾಕ್ಸಿ ಚಾಲಕರ ಪ್ರತಿಭಟನಾ ರ‍್ಯಾಲಿ

Bharat Scouts and Guides ಭಾರತ್ ಸ್ಕೌಟ್ ಮತ್ತು ಗೈಡ್ಸ್ ಶಿವಮೊಗ್ಗ...

International Yoga Day ಯೋಗ ದಿನಾಚರಣೆ ಒಂದು ರಾಷ್ಟ್ರೀಯ ಹಬ್ಬವಿದ್ದಂತೆ : ಶ್ರೀ ರುದ್ರಾರಾಧ್ಯ ಸಿ ವಿ

International Yoga Day ಅಂತರಾಷ್ಟ್ರೀಯ ಯೋಗ ದಿನ ಒಂದು ರಾಷ್ಟ್ರೀಯ ಹಬ್ಬವಿದ್ದಂತೆ...

MESCOM ಜೂ.24 ರಂದು ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ನಗರದ ಎಂಆರ್‌ಎಸ್‌ನ 110/11 ಕೆವಿ ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ...

Charaka and Desi Trust ಸಾಂಪ್ರದಾಯಿಕ ನೇಕಾರಿಕೆಗೆ ಸರ್ಕಾರದ ಉತ್ತೇಜನ: ಸಚಿವ ಶಿವಾನಂದ ಪಾಟೀಲ

Charaka and Desi Trust ಸ್ಪರ್ಧಾತ್ಮಕ ಮತ್ತು ತಂತ್ರಜ್ಞಾನ ಯುಗದಲ್ಲಿ ಪಾರಂಪರಿಕ...