Rajeev Kudachi ಶಿವಮೊಗ್ಗದಲ್ಲಿ ರಾಜೀವ್ ಕುಡಚಿ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ದಲಿತ ಸಮಾಜದ ಅಭಿವೃದ್ಧಿಗೆ ಮೀಸಲಿಟ್ಟಿದ್ದ 25 ಸಾವಿರ ಕೋಟಿ ಬೇರೆ ಉದ್ದೇಶಕ್ಕೆ ಬಳಕೆಯಾಗಿದೆ.ದಲಿತ ಸಮುದಾಯದ ಮತಗಳಿಂದ ಗೆದ್ದು ಬಂದ ಸಚಿವ ಪ್ರಿಯಾಂಕ ಖರ್ಗೆ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಅವರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ.ಅನುದಾನ ಕಡಿತದ ಪರಿಣಾಮವನ್ನು ದಲಿತರು ಅನುಭವಿಸಿದ್ದಾರೆ.ದಲಿತರ ಕೇರಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ ಎಂದರು.
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ತೋಡಿಲ್ಲ.ಅಂಬೇಡ್ಕರ್ ಆವಾಸ್ ಯೋಜನೆಯಡಿ ಒಂದೇ ಒಂದು ಮನೆ ನಿರ್ಮಾಣ ಆಗಿಲ್ಲ.ದಲಿತರ ಸ್ವಾವಲಂಬನೆಗೆ ಪೂರಕವಾದ ಉದ್ಯೋಗ ಸೃಷ್ಟಿ ಆಗಿತ್ತಿಲ್ಲ. ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಯಾರಿಗೂ ನೆರವು ಸಿಕ್ಕಿಲ್ಲ.
ಅಹಿಂದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಸರ್ಕಾರ ಒಂದೇ ಒಂದು ಗುಂಟೆ ಖರೀದಿ ಮಾಡಿಲ್ಲ.ದಲಿತರ ಅಭಿವೃದ್ಧಿಗೆ 39 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ಸಿದ್ದರಾಮಯ್ಯ ಸುಳ್ಳು ಹೇಳುತ್ತಾರೆ ಎಂದರು.
Rajeev Kudachi ಅದೇ ರೀತಿ ಸಚಿವ ಮಹಾದೇವಪ್ಪ ಸಹ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ.
ಮಾತೆತ್ತಿದರೆ ಸಂವಿಧಾನದ ಬಗ್ಗೆ ಮಾತನಾಡು ಸಿದ್ದರಾಮಯ್ಯಗೆ ಇದು ಗೊತ್ತಾಗುತ್ತಿಲ್ಲವೆ.
ದಲಿತ ಸಮಾಜದ ಶಾಶ್ವತವಾಗಿ ಭಿಕ್ಷುಕರನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂದರು.
ಈಗಿನ ಬಜೆಟ್ ನಲ್ಲಿ ದಲಿತ ಸಮಾಜದ ಪ್ರಮುಖ ಬೇಡಿಕೆ ಈಡೇರುವಂತಾಗಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಲಿತ ಸಚಿವರು ರಸ್ತೆಯಲ್ಲಿ ಓಡಾಡಡಲು ಬಿಡುವುದಿಲ್ಲ.
ತನಿಖಾ ಸಂಸ್ಥೆಗಳನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಹೇಳಿದರು.