Tuesday, March 10, 2026
Tuesday, March 10, 2026
Home Blog Page 382

DC Shivamogga ಈಗಿನ ಬೇಸಿಗೆ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಸಾರ್ವಜನಿಕರಿಗೆ “ಡಿಸಿ” ಗುರುದತ್ತ ಹೆಗಡೆ ಮನವಿ

0

DC Shivamogga ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಾರ್ವಜನಿಕ ಆರೋಗ್ಯ ಸಲಹೆಯನ್ನು ಅನುಸರಿಸುವ ಮೂಲಕ ತಮ್ಮ ಆರೋಗ್ಯದ ಕಾಳಜಿ ವಹಿಸಬೇಕೆಂದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ತಿಳಿಸಿದ್ದಾರೆ.
ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಅಲ್ಲದೆ ಮೇ ಯಿಂದ ಮಾರ್ಚ್ ವರೆಗೆ ವಾತಾರವಣದಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ. ಇದರಿಂದಾಗಿ ವಾತಾವರಣದಲ್ಲಿ ಅನೇಕ ರೀತಿಯ ಬದಲಾವಣೆ ಉಂಟಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಜಿಲ್ಲೆಯ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.
ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿದೆ. ದಿನೇ ದಿನೇ ಸಾರ್ವಜನಿಕರು ಕೆಲಸದ ಒತ್ತಡದ ಜೊತೆಗೆ ಬಿಸಿಲಿನ ಬೇಗೆಯನ್ನು ಸಹಿಸಿಕೊಳ್ಳದ ಸ್ಥಿತಿಗೆ ತಲುಪಿದ್ದಾರೆ. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಮನುಷ್ಯನ ದೇಹದ ಉಷ್ಣತೆಯು 36.4 ಡಿಗ್ರಿ ಸೆ ನಿಂದ 37.2 ಡಿಗ್ರಿ ಸೆ( 97.5 ಡಿಗ್ರಿ ಸೆ ಎಫ್ ನಿಂದ 98.9 ಡಿಗ್ರಿ ಸೆ ಎಫ್) ಆಗಿರುತ್ತದೆ. ಹಾಗಾಗಿ ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳು ಹೆಚ್ಚಿನ ಉಷ್ಣತೆಯಿಂದ ಕೂಡಿರುತ್ತದೆ. ಈ ಉಷ್ಣತೆಯ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
ನೀರು ಹೆಚ್ಚು ಸೇವಿಸಿ:
ಬಾಯಾರಿಕೆ ನಿರ್ಜಲೀಕರಣದ ಲಕ್ಷಣವಾಗಿದ್ದು. ಪ್ರಯಾಣ ಮಾಡುವ ಸಮಯದಲ್ಲಿ ಹಾಗೂ ಬಾಯಾರಿಕೆ ಇಲ್ಲದಿದ್ದರೂ ಸಹ ಹೆಚ್ಚೆಚ್ಚು ನೀರನ್ನು ಆಗಾಗ್ಗೆ ಕುಡಿಯಬೇಕು. ಮೌಖಿಕ ಪುನರ್ಜಲೀಕರಣ ದ್ರಾವಣ ಹಾಗೂ ಮನೆಯಲ್ಲಿಯೇ ಸಿದ್ದಪಡಿಸಿದ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ/ಲಸ್ಸಿ, ಹಣ್ಣಿನ ಜ್ಯೂಸ್‌ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸಬೇಕು. ಹಾಗೂ ಈ ಋತುಮಾನದಲ್ಲಿ ಲಭ್ಯವಿರುವ ಹೆಚ್ಚಿನ ನೀರಿನಾಂಶ ಹೊಂದಿರುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಬೇಕು. ಇದರಿಂದ ದೇಹವು ಒಣಗದೆ ಚರ್ಮವು ಸದಾ ತ್ವಚ್ಛೆಯಿಂದ ಕೂಡಿರುತ್ತದೆ.
ಇದಲ್ಲದೆ ನಾವು ಧರಿಸುವ ಬಟ್ಟೆಗಳು ಕೂಡ ದೇಹದ ಸುರಕ್ಷತೆಗೆ ಬಹುಮುಖ್ಯವಾಗಿದೆ. ಇಂತಹ ತಾಪಮಾನದಲ್ಲಿ ತಿಳಿ ಬಣ್ಣದ, ಅಳಕವಾದ ಹತ್ತಿಯ ಬಟ್ಟೆಯನ್ನು ಧರಿಸಬೇಕು. ಹೊರ ಹೋಗುವ ಸಂದರ್ಭದಲ್ಲಿ ಛತ್ರಿ, ಟೋಪಿ, ಟವೆಲ್ ಅಥವಾ ಇನ್ನಾವುದೇ ಸಂಪ್ರಾದಯಿಕ ಪದ್ಧತಿಯನ್ನು ಅನುಸರಿಸಿ ಬಿಸಿಲಿನಿಂದ ಪಡೆಯಬೇಕು. ಈ ಸಂದರ್ಭದಲ್ಲಿ ಚಪ್ಪಲಿ/ ಶೂಸ್‌ಗಳನ್ನು ಧರಿಸಬೇಕು.
ಬಿಸಿಲಿನಲ್ಲಿ ಅಂದರೆ 12 ರಿಂದ 3 ಗಂಟೆಗೆ ಹೊರ ಹೋಗುವುದನ್ನು ತಪ್ಪಿಸಬೇಕು. ಚಪ್ಪಲಿ ಧರಸಿ ಹೊರ ಹೋಗಬೇಕು. ಮಧ್ಯಾಹ್ನ ಅಡುಗೆ ಸಿದ್ದಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲನ್ನು ತೆರದಿಡಿ, ಮಧ್ಯಾಹ್ನ ಟೀ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಿ. ಇದರಿಂದ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ ಅಥವಾ ಹೊಟ್ಟೆ ನೋವು ಉಂಟು ಮಾಡುತ್ತದೆ.
DC Shivamogga ಉಷ್ಣತೆಯ ಪರಿಣಾಮದಿಂದಾಗುವ ಆರೋಗ್ಯ ಸಮಸ್ಯೆಗಳು : ಮನುಷ್ಯನ ದೇಹವು ನೀರಿನಿಂದ ಕೂಡಿದ್ದು, ದಿನವಿಡಿ ಸಕ್ರಿಯವಾಗಿರಲು, ದೇಹದ ತ್ವಚ್ಛೆಗಾಗಿ ನೀರು ಅತ್ಯವಶ್ಯ. ಹಾಗಾಗಿ ಈ ಬಿಸಿಯ ಧಗೆಯಲ್ಲಿ ದೇಹಕ್ಕೆ ಅಗತ್ಯಕ್ಕಿಂತÀ ಹೆಚ್ಚಿನ ನೀರನ್ನು ಪೂರೈಸಬೇಕು. ಇಲ್ಲಿದಿದ್ದರೆ ಅತಿಯಾದ ಉಷ್ಣತೆಯಿಂದಾಗಿ ಸಾಧಾರಣದಿಂದ ತ್ರೀವ ಜ್ವರ, ಗಂಧೆಗಳು, ಊತಗಳು, ಸ್ನಾಯು ಸೆಳೆತಗಳು, ಪ್ರಜ್ಞೆ ತಪ್ಪುವುದು, ಉಷ್ಣತೆಯಿಂದ ಸುಸ್ತಾಗುವುದು ಹಾಗೂ ಉಷ್ಣತೆಯಿಂದ ಪಾಶ್ವವಾಯು ಉಂಟಾಗುತ್ತದೆ. ಹಾಗೂ ಉಷ್ಣತೆ ತೀವ್ರತೆಗೆ ಹೃದ್ರೋಗ ಸಮಸ್ಯೆಗಳು, ಉಸಿರಾಟದ ಸಮಸ್ಯೆಗಳು ಹಾಗೂ ಕಿಡ್ನಿ ಸಮಸ್ಯೆಗಳು ಅಧಿಕವಾಗುತ್ತದೆ. ಜೊತೆಗೆ ಅತಿಯಾದ ಶಾಖದಿಂದ ತಲೆ ಸುತ್ತುವುದು, ಅತಿಯಾದ ಬಾಯಾರಿಕೆ, ವಾಕರಿಕೆ ಅಥವಾ ವಾಂತಿಯಾಗುವುದು, ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ, ತಲೆನೋವು, ಏರು ಗತಿಯ ಉಸಿರಾಟ ಹಾಗೂ ಹೃದಯದ ಬಡಿತದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
ನವಜಾತ ಶಿಶುಗಳು, ಗರ್ಭಿಣಿಯರು, ವೃದ್ದರು ಎಚ್ಚg Àವಹಿಸಿ:
ಬಿಸಿಗಾಳಿಯ ಒತ್ತಡ ಹಾಗೂ ಬಿಸಿ ಗಾಳಿಗೆ ಸಂಬAಧಪಟ್ಟ ಆರೋಗ್ಯ ಸಮಸ್ಯೆಗಳಿಂದ ಎಲ್ಲರಿಗೂ ಅಪಾಯವಿದ್ದು, ನವಜಾತ ಶಿಶುಗಳು ಹಾಗೂ ಚಿಕ್ಕಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು, ಆರೋಗ್ಯ ಸಮಸ್ಯೆಗಳಿರುವವರು ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು ಹೆಚ್ಚು ಜಾಗೂರಕತೆಯಿಂದರಬೇಕು. ಹಾಗೂ ಪ್ರತ್ಯೇಕವಾಗಿ/ ಒಂಟಿಯಾಗಿ ವಾಸಿಸುವ ವೃದ್ಧರು ಅಥವಾ ರೋಗಿಗಳ ಉಸ್ತುವಾರಿ ಹಾಗೂ ಅವರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ದೈನಂದಿನವಾಗಿ ಕೈಗೊಳ್ಳಬೇಕು. ಮನೆಯ ಒಳಾಂಗಣವನ್ನು ತಣ್ಣಗಿರಿಸಲು ಪರದೆಗಳು/ ಷಟರ್‌ಗಳನ್ನು ಬಳಸಬೇಕು ಹಾಗೂ ರಾತ್ರಿ ಸಮಯದಲ್ಲಿ ಕಿಟಿಕಿಗಳನ್ನು ತೆರೆದಿಡಬೇಕು. ಹಗಲು ಹೊತ್ತಿನಲ್ಲಿ ಮನೆಯ ಕೆಳಗಿನ ಮಹಡಿಗಳಲ್ಲಿರುವುದು ಉತ್ತಮ, ಶರೀರವನ್ನು ತಣ್ಣಗಿಡಲು ಫ್ಯಾನ್ ಅಥವಾ ತೇವವಾದ ಬಟ್ಟೆಯನ್ನು ಬಳಸಬಹುದು.
ಉಷ್ಣತೆಯಿಂದ ಆರೋಗ್ಯ ಸಮಸ್ಯೆ ತಡೆಗಟ್ಟುವುದು:
ಅತಿಯಾದ ಉಷ್ಣತೆಯಿಂದ ಆರೋಗ್ಯ ಸಮಸ್ಯೆ ಉಂಟಾದರೆ ತಕ್ಷಣವೇ ತಂಪಾದ ಸ್ಥಳಕ್ಕೆ ತೆರಳಿ ಮತ್ತು ದ್ರವಾಹಾರವನ್ನು ಸೇವಿಸಿ, ತಕ್ಷಣವೇ ಸಹಾಯ ಹಾಗೂ ವೈದ್ಯಕೀಯ ನೇರವನ್ನು ಪಡೆಯಿರಿ. ದೇಹದ ಉಷ್ಣತೆಯನ್ನು ಪರೀಕ್ಷಿಸಿ. ಮಾಂಸಖAಡಗಳಲ್ಲಿ ಸೆಳೆತ ಕಂಡಬAದಲ್ಲಿ ತಕ್ಷಣವೇ ತಂಪಾದ ಸ್ಥಳದಲ್ಲಿ ವಿಶ್ರಾಂತಿ ಪಡೆಯಿರಿ ಹಾಗೂ ಹೆಚ್ಚು ಎಲೆಕ್ಟೊçಲೈಟ್ ಗಳನ್ನು ಹೊಂದಿದ ಮೌಖಿಕ ಪುನರ್ಜಲೀಕರಣ ದ್ರಾವಣಗಳನ್ನು ಸೇವಿಸಬೇಕು. ಅತಿಯಾದ ಉಷ್ಣತೆಯಿಂದ ಉಂಟಾಗುವ ಸ್ನಾಯು ಸೆಳೆತವು 1 ಗಂಟೆಯ ಅವಧಿಯಲ್ಲಿ ಶಮನಗೊಳ್ಳದಿದ್ದರೆ ವೈದ್ಯಕೀಯ ನೆರವನ್ನು ಪಡೆಯಬೇಕು.
ಹೊರಾಂಗಣ ಚಟುವಟಿಕೆಗಳನ್ನು ಆದಷ್ಟು ದಿನದ ತಣ್ಣನೆಯ ಸಮಯದಲ್ಲಿ ಅಂದರೆ ಬೆಳಗಿನ ಹೊತ್ತು ಅಥವಾ ಸಂಜೆಗೆ ಸೀಮಿತವಿರುವಂತೆ ಬದಲಾಯಿಸಿಕೊಳ್ಳಬೇಕು. ಹೊರಾಂಗಣ ಪ್ರದೇಶಗಳಲ್ಲಿ ಆಯೋಜಿಸಲಾಗುವ ಚಟುವಟಿಕೆಗಳು ಪೂರ್ವಾಹ್ನ 11 ಗಂಟೆಯ ಒಳಗೆ ಮುಕ್ತಾಯಗೊಳಿಸುವುದು ಉತ್ತಮ. ಪೂರ್ವಾಹ್ನ 11 ರಿಂದ ಸಂಜೆ 4 ಗಂಟೆ ಅವಧಿಯಲ್ಲಿ ಹೊರಾಂಗಣ ಸಭೆಗಳು/ಚಟುವಟಿಕೆಗಳು ನಡೆಯುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬಿಸಲಿನಿಂದ ರಕ್ಷಣೆ ನೀಡಲು ಅಗತ್ಯ ಶಾಮಿಯಾನ ವ್ಯವಸ್ಥೆ ಮಾಡುವುದು. ಉತ್ತಮ ಗಾಳಿ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು. ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು.
ಸದಾ ಎಚ್ಚರದಿಂದಿರಿ :
ರೇಡಿಯೋ, ದೂರರ್ಶನ ಹಾಗೂ ದಿನಪತ್ರಿಕೆಗಳ ಮೂಲಕ ಸ್ಥಳೀಯ ಹವಾಮಾನದ ಮಾಹಿತಿಯನ್ನು ಪಡೆದು ಅದರಂತೆ ಚಟುವಟಿಕೆಗಳನ್ನು ಯೋಜಿಸುವುದು ಉತ್ತಮ. ಈ ಕುರಿತು ಕಾಲಕಾಲಕ್ಕೆ ಮಾಹಿತಿಯನ್ನು ಕರ್ನಾಟಕ ಸ್ಟೇಟ್ ನ್ಯಾಚುರಲ್ ಡಿಸ್ಸಾಸ್ಟರ್ ಮಾನಿಟರಿಂಗ್ ಸೆಂಟರ್‌ನ ಜಾಲತಾಣ https://www.ksdmc.org/default.aspx ದಲ್ಲಿ ಮಾಹಿತಿಯನ್ನು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

MESCOM ಮಾರ್ಚ್ 8. ಶಿವಮೊಗ್ಗ ವಿನೋಬ ನಗರದ ಕರಿಯಣ್ಣ ಬಿಲ್ಡಿಂಗ್ ಸುತ್ತುಮುತ್ತ ವಿದ್ಯುತ್ ವ್ಯತ್ಯಯ

0

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿAದ ಸರಬರಾಜಾಗುವ ಫೀಡರ್ ಎ.ಎಫ್-11 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿAದ ಮಾ.8 ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕರಿಯಣ್ಣ ಜಿಲ್ಡಿಂಗ್ ಸುತ್ತ ಮುತ್ತ, 100 ಅಡಿ ರಸ್ತೆ, ಕೆಂಚಪ್ಪ ಬಡಾವಣೆ, ಸೂಡಾ ಕಛೇರಿ, ವೀರ ಸಾವರ್ಕರ್ ಬಿಲ್ಡಿಂಗ್, ಕೆಎಚ್‌ಬಿ ಕ್ವಾಟ್ರಸ್, ಸವಿ ಬೇಕರಿ ಎದುರು, ಆರಾಧ್ಯ ಕಣ್ಣಿನ ಆಸ್ಪತ್ರೆ, ಪಿ & ಟಿ ಕಾಲೋನಿ, ವಿನೋಬ ನಗರ, ಪೋಲಿಸ್ ಚೌಕಿ, ಹುಚ್ಚುರಾಯ ಕಾಲೋನಿ, ವೀರಣ್ಣ ಲೇಔಟ್, ಅರವಿಂದ ನಗರ, ಮೇದಾರ ಕೇರಿ, ಕನಕ ನಗರ, ದೇವರಾಜ ಅರಸು ಬಡಾವಣೆ, ಶಾರದಮ್ಮ ಲೇಔಟ್, ಖಾಜಿ ಗಾರ್ಡನ್, ಮೈತ್ರಿ ಅಪಾರ್ಟ್ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ನಗರ ಉಪ-ವಿಭಾಗ-3ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nehru Youth Center ಮಾರ್ಚ್ 8. ಸೊರಬ ತಾಲ್ಲೂಕು‌ ಮಟ್ಟದ ಕ್ರೀಡಾಕೂಟ

0

Nehru Youth Center ನೆಹರು ಯುವ ಕೇಂದ್ರ, ಶಿವಮೊಗ್ಗ ಹಾಗೂ ಸಿರಿಶ್ರೀ ಮಹಿಳಾ ಸಂಘ, ಕದಂಬ ಯುವಕ ಸಂಘ, ಸೊರಬ ಇವರ ಸಹಯೋಗದೊಂದಿಗೆ ಸೊರಬ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉಳವಿಯ ಸರ್ಕಾರಿ ಪಿ.ಯು ಕಾಲೇಜು,ಪ್ರೌಢಶಾಲಾ ಆವರಣದಲ್ಲಿ ದಿನಾಂಕ 08.03.2025 ರ ಶನಿವಾರ ಆಯೋಜಿಸಲಾಗಿದೆ.
ಈ ಕ್ರೀಡಾಕೂಟದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಿದ್ದು 15 ರಿಂದ 29 ವರ್ಷದ ಒಳಗಿನವರು ಭಾಗವಹಿಸಬಹುದಾಗಿದೆ. Nehru Youth Center ಗುಂಪು ವಿಭಾಗದಲ್ಲಿ ವಾಲಿಬಾಲ್ ಸ್ಪರ್ಧೆ (ಪುರುಷರಿಗೆ) ಹಾಗೂ ಹಗ್ಗ ಜಗ್ಗಾಟ(ಮಹಿಳೆಯರಿಗೆ), ವೈಯಕ್ತಿಕ ವಿಭಾಗದಲ್ಲಿ ಮಹಿಳೆಯರಿಗಾಗಿ 100 ಮೀ. ಓಟ ಮತ್ತು ನಿಧಾನಗತಿಯ ಸೈಕಲ್ ಸ್ಪರ್ಧೆ, ಬ್ಯಾಟ್ ಮಿಟನ್(ಪುರುಷರಿಗಾಗಿ) ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆಸಕ್ತ ಸ್ಪರ್ಧಿಗಳು ದಿನಾಂಕ 08.03.2025 ರಂದು ಬೆಳಿಗ್ಗೆ 9 ಗಂಟೆಯ ಒಳಗೆ ಸ್ಥಳದಲ್ಲಿ ಹಾಜರಿರಬೇಕೆಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಶ್ರೀ. ಉಲ್ಲಾಸ್ ಕೆ.ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9591934848, 9961332968 ನ್ನು ಸಂಪರ್ಕಿಸಬಹು.

DC Shivamogga ಹಕ್ಕಿ ಜ್ವರ ಬಾರದಂತೆ ಮುನ್ನೆಚ್ಚರಿಕೆ ವಹಿಸಿರಿ- ಗುರುದತ್ತ ಹೆಗಡೆ

0

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಹಕ್ಕಿಜ್ವರ ಪ್ರಕರಣ ವರದಿಯಾಗಿಲ್ಲ. ಆದರೂ ಸಾರ್ವಜನಿಕರು ಹಕ್ಕಿಜ್ವರ ಬಾರದಂತೆ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಹಾಗೂ ಜ್ವರ, ಉಸಿರಾಟದ ತೊಂದರೆ ಇತರೆ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಹೆಚ್5ಎನ್1(ಹಕ್ಕಿಜ್ವರ) ಹಾಗೂ ಇತರೆ ಸಾಂಕ್ರಾಮಿಕ ರೋಗ ತಡೆಗಟ್ಟಲು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಕ್ಕಿಜ್ವರ ಅಥವಾ ಕೋಳಿ ಶೀತ ಜ್ವರ ಹೆಚ್5ಎನ್1 ವೈರಸ್‌ನಿಂದ ಹರಡುವ ರೋಗ. ಇದು ಟರ್ಕಿ, ಗಿನಿ ಕೋಳಿ, ಬಾತು ಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಖಾಯಿಲೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡುತ್ತದೆ. ಕೆಲವೊಮ್ಮೆ ರೋಗಪೀಡಿತ ಹಕ್ಕಿಗಳ ಸಂಪರ್ಕದಿAದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ ಹಕ್ಕಿಜ್ವರ ಪ್ರಕರಣ ಕಂಡು ಬಂದಿಲ್ಲ. ಆದರೂ ಹಕ್ಕಿಜ್ವರ ಕುರಿತು ಮುಂಜಾಗೃತಿ ವಹಿಸಬೇಕು. ಸಾಮಾನ್ಯವಾಗಿ ಹಕ್ಕಿಜ್ವರ ಹೆಚ್1ಎನ್1 ಜ್ವರದ ಲಕ್ಷಣಗಳಂತೆಯೇ ಇರುತ್ತದೆ. ಜ್ವರ ಮತ್ತು ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು, ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ ಬೇಧಿಯೂ ಆಗಬಹುದು. ಹಾಗೂ ಮುಖ್ಯವಾಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ.
DC Shivamogga ಈ ಲಕ್ಷಣಗಳು ಕಂಡು ಬಂದ ತಕ್ಷಣ ಸರ್ಕಾರಿ ಆಸ್ಪತ್ರೆಗಳು ಅಥವಾ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಶಂಕಿತ ಹಕ್ಕಿಜ್ವರ ಪೀಡಿತ ಕೋಳಿಗಳು, ಹಕ್ಕಿಗಳು, ಬಾತುಕೋಳಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆ ವಹಿಸಬೇಕು. ಶಂಕಿತ ಹಕ್ಕಿಜ್ವರ ಪೀಡಿತ ಫಾರಂ ಗಳಿಗೆ ಭೇಟಿ ನೀಡಬಾರದು. ಒಂದು ವೇಳೆ ಸಂಪರ್ಕಕೆ ಬಂದಲ್ಲಿ ತಮ್ಮ ಕೈಕಾಲು ಮತ್ತು ಮುಖವನ್ನು ಚೆನ್ನಾಗಿ ತೊಳೆದುಕೊಂಡು ಬಟ್ಟೆ ಬದಲಾಯಿಸಬೇಕು. ಮುಂದಿನ ನಾಲ್ಕು ದಿನಗಳವರೆಗೆ ದೇಹದ ಉಷ್ಣಾಂಶದಲ್ಲಾಗುವ ಬದಲಾವಣೆಯನ್ನು ಗಮನಿಸಬೇಕು. ಒಂದು ವೇಳೆ ಜ್ವರ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಜಿಲ್ಲೆಯಲ್ಲಿನ ಪಕ್ಷಿಧಾಮಗಳು ಮತ್ತು ಪೌಲ್ಟಿçಗಳಲ್ಲಿ ನಿಯಮಿತವಾಗಿ ಪಕ್ಷಿಗಳ ಕಡೆ ನಿಗಾ ವಹಿಸಿ, ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಪಶುಪಾಲನಾ ಇಲಾಖೆಯ ವೈದ್ಯರು ಪಕ್ಷಿಧಾಮ ಮತ್ತು ಪೌಲ್ಟಿçಗಳಿಗೆ ಭೇಟಿ ನೀಡಿ ತಪಾಸಣೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಐಇಸಿ ಮೂಲಕ ಜಾಗೃತಿ ಮೂಡಿಸಿ, ಪಿಡಿಓ ಗಳು ಕೋಳಿ ಜ್ವರದ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ಕೋಳಿ ಮಾಂಸ ಸೇವನೆಯಿಂದ ಹಕ್ಕಿ ಜ್ವರ ಬರುವುದಿಲ್ಲ :
ಕೋಳಿ ಮಾಂಸ ಅಥವಾ ಮೊಟ್ಟೆಗಳನ್ನು ಸೇವಿಸುವುದರಿಂದ ಹಕ್ಕಿ ಜ್ವರ ಮನುಷ್ಯರಲ್ಲಿ ಬರುವುದಿಲ್ಲ. ಆದರೆ ಸೋಂಕು ತಗುಲಿದ ಕೋಳಿಯ ಮಾಂಸವನ್ನು ಚೆನ್ನಾಗಿ ಬೇಯಿಸದೇ ಹಾಗೂ ಅವುಗಳ ಹಸಿ ಮೊಟ್ಟೆಯ ಸೇವನೆಯಿಂದ ರೋಗ ತಗಲುವ ಸಾಧ್ಯತೆಗಳಿರುತ್ತವೆ.
ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್‌ಗೂ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರವೇ ಸೇವಿಸಬೇಕು. ಅಡುಗೆಗಾಗಿ ಕೋಳಿ ಮಾಂಸ ಸಿದ್ದಪಡಿಸಿದ ನಂತರ ಕೈಗಳನ್ನು ನಂಜುನಾಶಕದಿAದ ಸ್ವಚ್ಚವಾಗಿ ತೊಳೆದುಕೊಳ್ಳಬೇಕು. ಸೋಂಕಿತ ಹಸಿ ಮೊಟ್ಟೆಯನ್ನು ಸೇವಿಸಬಾರದು ಎಂದು ಅವರು ತಿಳಿಸಿದರು.
ಡಿಎಸ್‌ಓ ಡಾ.ನಾಗರಾಜ ನಾಯ್ಕ ಮಾತನಾಡಿ, ರೋಗ ಪೀಡಿತ ಕೋಳಿ ಅಥವಾ ಹಕ್ಕಿಗಳ ಮಾಂಸವನ್ನು ಹಾಗೂ ಮೊಟ್ಟೆಯನ್ನು ಸರಿಯಾಗಿ ಬೇಯಿಸದೇ ತಿನ್ನುವುದರಿಂದ, ಸೋಂಕಿರುವ ಹಸಿ ಮೊಟ್ಟೆಗಳನ್ನು ಸೇವಿಸುವುದರಿಂದ ಹಾಗೂ ಕೋಳಿಗಳ ಹಿಕ್ಕೆಗಳು ಮನುಷ್ಯರು ಕುಡಿಯುವ ನೀರಿನೊಂದಿಗೆ ಬೆರೆತು ಕಲುಷಿತಗೊಂಡಾಗ ಈ ಖಾಯಿಲೆ ಹರಡುತ್ತದೆ ಮತ್ತು ಕೆಲವು ಸಂದರ್ಭದಲ್ಲಿ ಗಾಳಿಯ ಮೂಲಕವೂ ಮನುಷ್ಯರಿಗೆ ಹರಡುತ್ತದೆ.
ಹಕ್ಕಿಜ್ವರ ಮುನ್ನೆಚ್ಚರಿಕೆಯಿಂದ ತಡೆಯಬಲ್ಲ ಖಾಯಿಲೆ. ಆದ್ದರಿಂದ ಖಾಯಿಲೆ ಲಕ್ಷಣಗಳು ಕೋಳಿಗಳಲ್ಲಿ ಕಾಣಿಸಿಕೊಂಡ ಕೂಡಲೇ ಹತ್ತಿರದ ಮಾಹಿತಿ ಕೇಂದ್ರ ಅಥವಾ ಪಶು ವೈದ್ಯಕೀಯ ಸಂಸ್ಥೆಗೆ ಮಾಹಿತಿಯನ್ನು ನೀಡಬೇಕು. ಜಿಲ್ಲೆಯಲ್ಲಿ 332 ಪೌಲ್ಟಿç ಮತ್ತು 2 ಪಕ್ಷಿಧಾಮಗಳಿದ್ದು ಅಲ್ಲಿ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಲು ಹಾಗೂ ಚಲನವಲನ ವೀಕ್ಷಿಸಲು ತಿಳಿಸಲಾಗಿದೆ.
65 ವರ್ಷ ದಾಟಿದ ಹಿರಿಯರು, ಗರ್ಭಿಣಿಯರು, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇತರೆ ಕೋಮಾರ್ಬಿಡಿಟಿ ಉಳ್ಳ ವ್ಯಕ್ತಿಗಳು ಆದಷ್ಟು ಎಚ್ಚರಿಕೆಯಿಂದ ಇರಬೇಕು. ಜಿಲ್ಲೆಯಲ್ಲಿ ಕೋಳಿಜ್ವರಕ್ಕೆ ಚಿಕಿತ್ಸೆ ನೀಡಲು ಅಗತ್ಯವಾದ ಔಷಧಿಗಳು ಲಭ್ಯವಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಕೆಎಫ್‌ಡಿ ನಿಯಂತ್ರಣ ಚಟುವಟಿಕೆಗಳನ್ನು ಸಕ್ರಿಯವಾಗಿ ತೆಗೆದುಕೊಳ್ಳಬೇಕು. ಡೇಪಾ ಆಯಿಲ್‌ನ್ನು ನಿಯಮಿತವಾಗಿ ಮಲೆನಾಡ ಭಾಗದ ಸಾರ್ವಜನಿಕರಿಗೆ ನೀಡಬೇಕು. ಜನರಲ್ಲಿ ಕೆಎಫ್‌ಡಿ ಕುರಿತು ಎಚ್ಚರಿಕೆ ನೀಡಿ ಜಾಗೃತಿ ಮೂಡಿಸಬೇಕು. ಪ್ರಸ್ತುತ 6 ಸಕ್ರಿಯ ಪ್ರಕರಣಗಳಿದ್ದು, ನಿಗಾ ವಹಿಸಿ ಚಿಕಿತ್ಸೆ ನೀಡಬೇಕು. ಜಿಲ್ಲೆಯಲ್ಲಿ ನಾಯಿ ಕಡಿತ, ಹಾವು ಕಡಿತಕ್ಕೆ ಅಗತ್ಯವಾದ ಔಷಧಿಗಳನ್ನು ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಹಾಗೂ ಬೀದಿ ನಾಯಿ ಹಾವಳಿ ನಿಯಂತ್ರಿಸಲು ಪಾಲಿಕೆಯೊಂದಿಗೆ ವಿಶೇಷ ಅಭಿಯಾನ ಕೈಗೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್, ಡಿಹೆಚ್‌ಓ ಡಾ.ನಟರಾಜ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ಆರ್‌ಸಿಹೆಚ್ ಅಧಿಕಾರಿ ಡಾ.ಮಲ್ಲಪ್ಪ, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ವಿವಿಧ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಟಿಹೆಚ್‌ಓ ಗಳು ಹಾಜರಿದ್ದರು.

Kateel Ashok Pai Memorial College ಎಲ್ಲರ ಗಮನ ಸೆಳೆದ ಏಕ ವ್ಯಕ್ತಿ ಪ್ರದರ್ಶನ ” ಶೀತಲ್ ಪಾಟಿ”

0

Kateel Ashok Pai Memorial College ಶಿವಮೊಗ್ಗದ ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ – 2025 ರ ಪ್ರಯುಕ್ತ ಆಯೋಜಿಸುತ್ತಿರುವ ಸಪ್ತಾಹ ಕಾರ್ಯಕ್ರಮಗಳನ್ನು ದಿನಾಂಕ 05- 03-2025 ರಂದು ಅರ್ಥಪೂರ್ಣವಾಗಿ ಉದ್ಘಾಟಿಸಲಾಯಿತು.
ಮಾನಸ ಟ್ರಸ್ಟ್ನ ಶೈಕ್ಷಣಿಕ ನಿರ್ದೇಶಕರಾದ ಡಾ ಪ್ರೀತಿ ಶಾನ್‌ಭಾಗ್ ಹಾಗೂ ಪಶ್ಚಿಮ ಬಂಗಾಳದ ಕೋಲ್ಕತ್ತಾದ ನಾಟಕ ಕಲಾವಿದೆ ಸಂಜೀತಾ ಮುಖರ್ಜಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಜೀವನದ ಆಯಾಮಗಳನ್ನು ತಿಳಿಸುವ ಖ್ಯಾತ ಕಥೆಗಾರ ವಿಭೂತಿ ಭೂಷಿಣ್‌ ಅವರ ಕಥೆಯನ್ನಾಧರಿಸಿದ ‘ಶೀತಲ್ ಪಾಟಿ’ ಎಂಬ ಏಕವ್ಯಕ್ತಿ ನಾಟಕವನ್ನು ಸಂಜೀತಾ ಮುಖರ್ಜಿಯವರು ವೇದಿಕೆಯ ಮೇಲೆ ಪ್ರಸ್ತುತ ಪಡಿಸಿದರು.

ಈ ನಾಟಕದಲ್ಲಿ ‘ಹಾಜು’ ಎಂಬ, ಬಾಲ್ಯವಿವಾಹಿತ ಹೆಣ್ಣುಮಗಳು, ಕುಡುಕ ಗಂಡನ ದೌರ್ಜನ್ಯದಿಂದ ಮನೆಯಿಂದ
ಹೊರಹಾಕಲ್ಪಟ್ಟು, ಬರಗಾಲದ ಆ ಸಂದರ್ಭದಲ್ಲಿ ಗ್ರಾಮಸ್ಥರಲ್ಲಿ ಕೆಲವರು ಅವಳನ್ನು ಪೊರೆಯಿಂದ, ಕೆಲವರು ಹೀಯಾಳಿಸುವ, ಸನ್ನಿವೇಶಗಳನ್ನು ಸಂಜೀತಾ ಯಶಸ್ವಿಯಾಗಿ ಅಭಿನಯ, ಹಾಡು, ಪಪೆಟ್ ಶೋ ಮೂಲಕ ತೋರಿಸಿದರು. ಹಾಡಿನ ಪ್ರತಿಭೆಯ ಹೆಣ್ಣು ಮಗಳು ಅದನ್ನೇ, ತಾನು ಭಿಕೆ ್ಷ ಬೇಡುವ ಆಹಾರಕ್ಕೆ ‘ವೃತ್ತಿ’ಯಂತೆ ಬಳಸಿಕೊಳ್ಳುತ್ತಾಳೆ. ಒಡವೆ, ವಸ್ತುಗಳಿಗಾಗಿ ಹಂಬಲಿಸದ ಆಕೆ ತನ್ನ ಹಾಗೂ ತನ್ನ ಮಗನ ಹಸಿವು, ನೀಗಿಸಲು ಮನೆ ಮನೆಗೆ ತೆರಳಿ ಹಾಡು ಹೇಳಿ ಅನ್ನ ಪಡೆಯುತ್ತಾಳೆ. ಆದರೆ, ಅದೇ
ಊರಿನ ಒಬ್ಬ ದುಷ್ಕರ್ಮಿ ಕಳ್ಳತನದ ಆರೋಪ ಹೋರಿಸಿ ಅವಳನ್ನು ಬಡಿಯುತ್ತಾನೆ. Kateel Ashok Pai Memorial College ಈ ನೋವಿನಿಂದ ಕುಗ್ಗಿದ ಹಾಜು ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಆದರೆ ಅವಳನ್ನು ಸದಾ ಪ್ರೀತಿಯಿಂದ ಪ್ರೋತ್ಸಾಹಿಸುತ್ತಿದ ಊರ ಹಿರಿಯನ ಮಾತು ಹಾಗೂ ತಾನು ಸಾಕಬೇಕಾದ ಮಗನ ಮೇಲಿನ ಮಮತೆಯಿಂದ ತನ್ನ ನಿರ್ಧಾರ ಬದಲಿಸಿ ನಗರಕ್ಕೆ ಪ್ರಯಾಣ ಬೆಳೆಸುತ್ತಾಳೆ. ಅಲ್ಲಿ ಪ್ರಸಿದ್ಧ ನರ್ತಕಿ ಹಾಗೂ ಗಾಯಕಿಯಾಗಿ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾಳೆ.ಹೆಣ್ಣು ಮಗಳೊಬ್ಬಳ ನೋವು, ಅವಳ ಮೇಲಿನ ದೌರ್ಜನ್ಯ, ಅವಳ ಅಂತಃಶಕ್ತಿ, ಆಗಾಗ ಅವಳೇ ಸ್ವತಃ ಬೆಳೆಸಿಕೊಳ್ಳುವ ಧನಾತ್ಮಕ ಮನೋಭಾವ ಗ್ರಾಮದ ಜನರಲ್ಲಿ ಕಂಡು ಬರುವ ಮಿಶ್ರ ಪ್ರತಿಕ್ರಿಯೆಗಳು, ಹಿರಿಯನೊಬ್ಬನ ಪ್ರೀತಿ ಆದರದ ಬೆಂಬಲ ಎಲ್ಲವೂ ಮೂಡಿಬರುವ ಈ ಏಕವ್ಯಕ್ತಿ ನಾಟಕ ವಿದ್ಯಾರ್ಥಿಗಳಿಗೆ ಮುಂದೆ ಸಂಜೀತಾ ಮುಖರ್ಜಿ ಅತ್ಯಂತ ಮನೋಜ್ಞವಾಗಿ ತೋರಿಸಿಕೊಟ್ಟರು.
ಸಂಜೀತಾರವರು ಈ ಕಥೆಯು ಮಹಿಳೆಯೊಬ್ಬಳು ತನ್ನ ಅಂತಃಶಕ್ತಿ ಹಾಗೂ ದೊರೆಯುವ ಸಾಮಾಜಿಕ
ಬೆಂಬಲವನ್ನು ಬಳಸಿ, ಅದೇ ಸಮಾಜದ ಅನುಚಿತ ಅಂಶಗಳನ್ನು ಮೆಟ್ಟಿ ನಿಲ್ಲುವ ಹಾಗೂ
ಬದುಕುಕಟ್ಟಿಕೊಳ್ಳುವ ಪರಿಯನ್ನು ತೋರಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದರು. ವಿಶ್ವ ಮಹಿಳಾ ದಿನಾಚರಣೆಗಾಗಿ
ಮನಃಶಾಸ್ತ್ರ ವಿದ್ಯಾರ್ಥಿಗಳು ‘ತಾಯಿಯ ಕುರಿತು ಅನಿಸಿಕೆ’ ಬರೆಯುವ ಪೋಸ್ಟರ್‌ಗಳನ್ನು ಕಾಲೇಜಿನಲ್ಲಿ ಹಾಕಿದರು. ದಿನಾಂಕ: ೦೫.೦೩.೨೦೨೫ ರಿಂದ, ೧೨.೦೩.೨೦೨೫ ರವರೆಗೆ ವಿದ್ಯಾರ್ಥಿನಿಯರಿಗಾಗಿ ವಿವಿಧ ಸ್ಪರ್ಧೆಗಳು, ರಸಪ್ರಶ್ನೆ ಕಾರ್ಯಕ್ರಮ,
ವೆಬಿನಾರ್‌ಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ದಿನಾಂಕ: ೦೮.೦೩.೨೦೨೫ ರಂದು ಸುಬ್ಬಯ್ಯ ಮೆಡಿಕಲ್ ಕಾಲೇಜು
ಸಹಯೋಗದಲ್ಲಿ ಮಾನಸ ಟ್ರಸ್ಟ್ ವತಿಯಿಂದ ಕೋನಗವಳ್ಳಿ ಗ್ರಾಮ ಪಂಚಾಯಿತಿಯ ಸೇವಾಲಾಲ್
ನಗರದಲ್ಲಿ ಮಹಿಳಾ ಆರೋಗ್ಯ ತಪಾಸಣೆ, ಮಹಿಳೆಯರ ಹಿಮೊಗ್ಲೋಬಿನ್ ತಪಾಸಣೆ, ಅರಿವು ಜಾಥಾ ಹಾಗೂ ಎಂಟು ಜನ ಆಶಾಕಾರ್ಯಕರ್ತರಿಗೆ ಸನ್ಮಾನವನ್ನು ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲರಾದ ಡಾ ಸಂಧ್ಯಾ ಕಾವೇರಿ ಕೆ ತಿಳಿಸಿದರು.

Supreme Court ಒಳ ಮೀಸಲಾತಿ ಬಗ್ಗೆ ಯತ್ನಾಳ್ ಹೇಳಿಕೆ ಖಂಡನೀಯ- ಅಭಿಲಾಷ್ ಹುರುಳಿಕೊಪ್ಪ

0

Supreme Court ಒಳಮೀಸಲಾತಿ ಜಾರಿಯಾಗುವುದರಿಂದ ಸಾಮಾಜಿಕ ನ್ಯಾಯ ಸಿಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ, ಕೂಡ ಕೇವಲ ವೋಟ್ ಬ್ಯಾಂಕ್ ತೆವಲಿಗಾಗಿ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಇತ್ತೀಚೆಗೆ ವಿಜಯಪುರದ ಸಭೆಯೊಂದರಲ್ಲಿ ಒಳಮೀಸಲಾತಿ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಂಚಾಲಕ ಅಭಿಲಾಷ್ ಎನ್. ಹುರುಳಿಕೊಪ್ಪ ಆರೋಪಿಸಿದ್ದಾರೆ.

ಒಳಮೀಸಲಾತಿಯಿಂದಾಗಿ ಬಿಜೆಪಿ ಪಕ್ಷಕ್ಕೆ ಅಧಿಕಾರ ನಷ್ಟವಾಯಿತು, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒಳಮೀಸಲಾತಿ ಕುರಿತು ಕ್ರಮ ತೆಗೆದುಕೊಳ್ಳಬಾರದು ಎಂದು ಹೇಳಿರುವುದನ್ನು ವಿರೋಧಿಸಿದ್ದೆನು. ಒಳ ಮೀಸಲಾತಿ ಜಾರಿಗೆ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದರೂ, ಸಮುದಾಯಗಳ ಮಧ್ಯ ಒಡಕು ಹುಟ್ಟಿಸುವ ಮೂಲಕ ಒಡೆದು ಆಳುವ ನೀತಿಯನ್ನು ತೋರಿರುವ ಬಸವನಗೌಡ ಪಾಟೀಲ್ ಯತ್ನಾಳರ ನಡೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ಗೊಸುಂಬೆಯಂತೆ ಬಣ್ಣ ಬದಲಿಸಿ ಒಳಮೀಸಲಾತಿ ವಿರೋಧಿ ಹೇಳಿಕೆ ನೀಡಿರುವುದು ಅವರ ನೈತಿಕ ಅಧೋಗತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಮಾದಿಗ ಸಮುದಾಯದ ಓಟುಗಳನ್ನು ಪಡೆಯದೇ ತಾವು ಇಷ್ಟು ವರ್ಷಗಳಿಂದ ಗೆದ್ದಿರುವಂತೆ ಬಣ್ಣಿಸಿ ಮಾತನಾಡಿದ ಅವರ ಹೇಳಿಕೆಯಿಂದ ಸಮುದಾಯಕ್ಕೆ ಅತೀವ ನೋವುಂಟು ಮಾಡಿದೆ. ಯತ್ನಾಳ್ ಅವರ ಹಿಂದೆ ಮುಂದೆ ಸುತ್ತುತ್ತಿರುವ ಮಾದಿಗ ಸಮುದಾಯದ ಮುಖಂಡರು ಅವರ ಮಾದಿಗ ವಿರೋಧಿ ನೀತಿಯನ್ನು ಅರಿತು ಅವರನ್ನು ಬಹಿಷ್ಕಾರ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಗೆ ಆಗುವವರೆಗೂ ಬ್ಯಾಕ್ ಲಾಕ್ ಹುದ್ದೆಗಳನ್ನು ನೇಮಕ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

Supreme Court ಎರಡು ತಿಂಗಳ ಹಿಂದೆ ವಿಜಯಪುರದ ಇಟ್ಟಂಗಿ ಭಟ್ಟಿಯಲ್ಲಿ ಮಾದಿಗ ಸಮುದಾಯದ ಕಾರ್ಮಿಕರ ಮೇಲೆ ಅಮಾನುಷ ಹಲ್ಲೆಯಾದ ಸಂದರ್ಭದಲ್ಲಿ ಇಡೀ ರಾಜ್ಯಾದ್ಯಂತ ಜನಸ್ಪಂದನೆ ದೊರೆತರೂ, ಅದೇ ಜಿಲ್ಲೆಯವರಾದ ಬಸವನಗೌಡ ಪಾಟೀಲ್ ಯತ್ನಾಳ್ ಮಾತ್ರ ಸೌಜನ್ಯಕ್ಕಾದರೂ ಒಂದು ಹೇಳಿಕೆ ಸಹ ನೀಡಲಿಲ್ಲ ಎಂಬುದನ್ನು ಮಾದಿಗ ಸಮುದಾಯ ಮರೆತಿಲ್ಲ. ಇದೀಗ ಯತ್ನಾಳ್ ತಮ್ಮ ಭಾಷಣದಲ್ಲಿ ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಮಾದಿಗ ಸಮುದಾಯದ ಓಟುಗಳನ್ನು ಪಡೆಯದೇ ತಾವು ಇಷ್ಟು ವರ್ಷಗಳಿಂದ ಗೆದ್ದಿರುವಂತೆ ಬಣ್ಣಸಿ ಮಾತನಾಡಿರುವುದನ್ನು ಕರ್ನಾಟಕದ ಇಡೀ ಮಾದಿಗ ಸಮುದಾಯಕ್ಕೆ ಅತೀವ ನೋವುಂಟು ಮಾಡಿದೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

Puneeth Rajkumar ಶಿವಮೊಗ್ಗ ಕಲಾವಿದೆ ವಿಜಯಲಕ್ಷ್ಮಿ ಅವರಿಗೆ “ವೀರ ವನಿತೆ” ಪುರಸ್ಕಾರ

0

Puneeth Rajkumar ಬೆಂಗಳೂರಿನ ಚಿತ್ರಸಂತೆಯ ವತಿಯಿಂದ ಹಮ್ಮಿಕೊಂಡಿದ್ದ ಪುನೀತ್‌ರವರ 50ರ ಜನ್ಮದಿನದ ಸಂಭ್ರಮದ ಪುನೀತೋತ್ಸವ ಕಾರ್ಯಕ್ರಮದ ಭಾಗವಾಗಿ, ಶಿವಮೊಗ್ಗದ ರಂಗಭೂಮಿ, ಹಿರಿತೆರೆ-ಕಿರುತೆರೆ ಕಲಾವಿದೆ ವಿಜಯಲಕ್ಷ್ಮೀಯವರಿಗೆ ರಂಗಭೂಮಿ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ, ಅಶ್ವಿನಿ ಪುನೀತ್ ರಾಜಕುಮಾರ್‌ರವರು ವೀರವನಿತೆ ಪ್ರಶಸ್ತಿ ನೀಡಿ ಗೌರವಿಸಿದರು.

Karnataka State Press Distributors Union ಸರ್ಕಾರದ ಸೌಲಭ್ಯಗಳ ಬಗ್ಗೆ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಸ್ಪಂದನ

0

Karnataka State Press Distributors Union ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಕಳೆದ ಐದು ವರ್ಷಗಳಿಂದ ಅನೇಕ ರೀತಿಯಲ್ಲಿ ಸರ್ಕಾರದ ಗಮನ ಸೆಳೆದು ಪತ್ರಿಕಾ ವಿತರಕರಿಗಾಗಿ ಅಸಂಘಟಿತ ಕಾರ್ಮಿಕ ವಲಯದಲ್ಲಿ ಪತ್ರಿಕಾ ವಿತರಕರಿಗಾಗಿ ೫ ಲಕ್ಷದ ಅಪಘಾತ ವಿಮಾ ಯೋಜನೆಯನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದು. ೧೬ ರಿಂದ ೫೯ ವರ್ಷದವರೆಗೂ ಇದ್ದ ವಯೋಮಿತಿ ಯೋಜನೆಯನ್ನು ಈಗ ೧೬ ರಿಂದ ೭೦ ವರ್ಷದವರೆಗೂ ಸರ್ಕಾರದ ಗಮನ ಸೆಳೆದು ಕೊಡಿಸುವಲ್ಲಿ ಯಶಸ್ವಿಯಾಗಿದ್ದು. ಪ್ರಧಾನಮಂತ್ರಿಯ ಸ್ವಾ ನಿಧಿ ಯೋಜನೆ ರಾಜ್ಯದ ಹಲವು ವಿತರಕರಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದು. ಒಂದು ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ. ವಿಶೇಷ ಗಮನಕ್ಕೆ :ಸಾಗರದ ಗಣೇಶ್ ಎಂಬ ಪತ್ರಿಕೆ ಹಂಚುವ ಹುಡುಗ ಅಪಘಾತದಲ್ಲಿ ಮೃತಪಟ್ಟಾಗ ದೇಶದ ಇತಿಹಾಸದಲ್ಲಿ ಒಬ್ಬ ಪತ್ರಿಕಾ ವಿತರಕನ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದು. ೨೦೨೩ ಕಾರ್ಮಿಕ ಇಲಾಖೆಯ ಸಚಿವರ ಮುಖಾಂತರ ಹಾಗೂ ರಾಜ್ಯದಲ್ಲಿರುವ ಅನೇಕ ವಿತರಕರು ಸಂಕಷ್ಟದಲ್ಲಿ ಇದ್ದಾಗ ನಮಗೆ ನಾವೇ ಆಗಬೇಕೆಂಬ ಘೋಷವಾಕ್ಯದಲ್ಲಿ ೬೦ಕ್ಕೂ ಹೆಚ್ಚು ವಿತರಕರಿಗೆ ಸಹಾಯ ಮಾಡಿದ್ದು ಕೆಲವು ಬಾರಿ ಪತ್ರಿಕಾ ವಿತರಕರಿಂದ ನಮ್ಮ ರಾಜ್ಯದ ಎಲ್ಲಾ ವಿತರಕರುಗಳಿಂದ ದೇಣಿಗೆ ಸಂಗ್ರಹಿಸಿ ನೆರವು ನೀಡಿದ್ದು. ನೇರವಾಗಿ ಒಕ್ಕೂಟದ ವತಿಯಿಂದ ಪರಿಹಾರಗಳನ್ನು ನೀಡಿದ್ದು. ರಾಜ್ಯದ ವಿತರಕರ ಕನಸಿನ ಈ ಪಯಣಕ್ಕೆ ಸಹಕಾರಿಯಾದ ಕಾ ನಿ ಪಾ ಸಂಘದ ರಾಜ್ಯಾಧ್ಯಕ್ಷರು ಮುಖ್ಯಮಂತ್ರಿಗಳು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗರಾರು ಕಾರ್ಮಿಕ ಸಚಿವರು ನಮ್ಮ ಎಲ್ಲಾ ಜಿಲ್ಲಾ ಸಂಘಟನೆಗಳು ಸಹಕಾರಿಯಾಗಿವೆ.
Karnataka State Press Distributors Union ಈ ಬಾರಿಯಾದರೂ ರಾಜ್ಯ ಸರ್ಕಾರ ಸಮಸ್ತ ರಾಜ್ಯ ಪತ್ರಿಕಾ ವಿತರಕರ ಕನಸಿಗೆ ಸಹಕಾರಿಯಾಗಬಲ್ಲದೆ. ಹಾಗೂ ನಮಗೆ ಇನ್ನು ತಲುಪದೇ ಇರುವ ಬಹು ದಿನಗಳ ಬೇಡಿಕೆಯ ಒಂದು ಕನಸಿನ ಬುತ್ತಿಯನ್ನು ಈಗ ರಾಜ್ಯ ಸರ್ಕಾರದ ಮುಂದೆ ರಾಜ್ಯದ ವಿತರಕರ ಕನಸನು ತೆರೆದಿಡುತ್ತಿದ್ದೇವೆ ಪ್ರತಿನಿತ್ಯ ಚಳಿ ಮಳೆ ಎನ್ನದೆ ಮನೆ ಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ವಿತರಕರಿಗಾಗಿ ಸರ್ಕಾರ ಘೋಷಣೆ ಮಾಡಿದ್ದ ಕ್ಷೇಮನಿಧಿ ೬ ವರ್ಷ ಕಳೆದರೂ ಜಾರಿಗೆ ಬಂದಿಲ್ಲ. ಸಿದ್ದರಾಮಯ್ಯ ಸಿಎಂ ಆಗಿ ೨೦೧೮ರ ಫೆಬ್ರವರಿಯಲ್ಲಿ ಮಂಡಿಸಿದ ಕೊನೆಯ ಬಜೆಟ್ ನಲ್ಲಿ ಪತ್ರಿಕೆಗಳನ್ನು ಹೊತ್ತು ಹಂಚುತ್ತ ಅನಿಶ್ಚಿತತೆಯ ಬದುಕು ಸಾಗಿಸುವವರ ಕ್ಷೇಮಾಭಿವೃದ್ಧಿಗಾಗಿ ೨ ಕೋಟಿ ರೂ. ಮೀಸಲಿಟ್ಟು ಕ್ಷೇಮ ನಿಧಿ ಯೋಜನೆ ಘೋಷಣೆ ಮಾಡಿದ್ದರು.
ಬಹುತೇಕ ಯೋಜನೆಗಳಂತೆ ಇದು ಸಹ ಕೇವಲ ಬಜೆಟ್ ಘೋಷಣೆ ಆಗಿರಲಿಲ್ಲ ೨ ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ ಯೋಜನೆಯ ರೂಪರೇಷೆ ಸಿದ್ದವಾಗುವಲ್ಲಿ ವಾರ್ತಾ ಇಲಾಖೆ ಅನಿಸರಿಸುತ್ತಿರುವ ನಿಧಾಗತಿ ಧೋರಣೆಯಿಂದಾಗಿ ಅನುಷ್ಠಾನ ವಿಳಂಬವಾಗಿದೆ. ಪತ್ರಿಕಾ ವಿತರಕರ ಯೋಜನೆಗೆ ರೂಪುರೇಷೆ ಸಿದ್ದಪಡಿಸುವ ಹೊಣೆಯನ್ನು ಆಗ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ವಹಿಸಲಾಗಿತ್ತು. ಬಹುತೇಕ ಮಾಧ್ಯಮ ಕಚೇರಿಗಳು ಅಕಾಡೆಮಿಯು ಮನವಿಗೆ ಸ್ಪಂದಿಸಲಿಲ್ಲ ಆ ವೇಳೆಗೆ ಅಕಾಡೆಮಿಯು ಅವಧಿ ಮುಕ್ತಾಯವಾಯಿತು. ವಾರ್ತಾ ಇಲಾಖೆ ಈ ಕೆಲಸವನ್ನು ಮುಂದುವರಿಸಬೇಕಾಗಿತ್ತು ಆದರೆ ಆ ಪ್ರಯತ್ನ ಇಲಾಖೆಯ ಕಡೆಯಿಂದ ಆಗಲಿಲ್ಲ.
ಸರ್ಕಾರ ಘೋಷಣೆ ಮಾಡಿದ್ದ ೨ ಕೋಟಿ ರೂ.ಆರಂಭಿಕ ಮೊತ್ತವಾಗಿದೆ ಪತ್ರಿಕಾ ವಿತರಕರಿಗೆ ಆರೋಗ್ಯ ವಿಮೆಯೋ, ಗುಂಪು ವಿಮೆಯೋ ಯಾವ ರೀತಿಯಲ್ಲಿ ಜಾರಿಗೆ ತರಬೇಕೆಂದು ನಿಯಮಾವಳಿಯನ್ನು ರೂಪಗೊಂಡಿದ್ದರೆ ಸರ್ಕಾರದಿಂದ ಹೆಚ್ಚಿನ ಆರ್ಥಿಕ ನೆರವು ಪಡೆಯಲು ಸಾಧ್ಯತೆಗಳಿದ್ದವು ೨೦೧೮ರ ಸೆಪ್ಟೆಂಬರ್ ೫ ರಂದು ಸರ್ಕಾರ ಅನುಷ್ಠಾನ ಸಮಿತಿ ರಚನೆ ಮಾಡಿರುವುದಾಗಿ ಆದೇಶ ಹೊರಡಿಸಿರುವುದು ಬಿಟ್ಟರೆ ಮತ್ತೆ ಯಾವುದೇ ಪ್ರಕ್ರಿಯೆ ನಡೆದಿಲ್ಲ.
ಮಳೆ ಚಳಿ ಗಾಳಿ ಎನ್ನದೆ ಆರೋಗ್ಯವನ್ನು ಲೆಕ್ಕಿಸದೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸಿದ ವಿತರಕರು ಅಪಘಾತಗಳಿಂದ ಸಾವಿಗೆ ಗುರಿಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಉದ್ಯೋಗದ ಭದ್ರತೆಯೇ ಇಲ್ಲದಿರುವುದರಿಂದ ಯಾವ ಆರ್ಥಿಕ ನೆರವು ಅವರ ಕುಟುಂಬಕ್ಕೆ ಸಿಕ್ಕಿಲ್ಲ.
ಸರ್ಕಾರದಿಂದಲೂ ಸ್ಪಂದನೆಯಾಗಿಲ್ಲ ಕ್ಷೇಮ ನಿಧಿ ಯೋಜನೆ ಜಾರಿಗೆ ಬಂದಿದ್ದರೆ ಒಂದಷ್ಟು ನೆರವು ಅವರಿಗೂ ದೊರಕುತ್ತಿತ್ತು ಸರ್ಕಾರ, ವಾರ್ತಾ ಇಲಾಖೆ,ಮಾಧ್ಯಮ ಅಕಾಡೆಮಿ ಇನ್ನಾದರೂ ಆರು ವರ್ಷದಿಂದ ಕಪಾಟಿನಲ್ಲಿ ಕೊಳೆಯುತ್ತಿರುವ ಯೋಜನೆ ಈ ಯೋಜನೆಯನ್ನು ಮರು ಜಾರಿಗೆ ತರಲು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಜಾರಿಗೆ ತರಲು ಪ್ರಯತ್ನ ಮಾಡುತ್ತಿದೆ ಎಂದು ಶಿವಮೊಗ್ಗ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಎನ್. ಮಾಲತೇಶ್ ಅವರು ತಿಳಿಸಿದ್ದಾರೆ.

Chamber of Commerce Shivamogga ಎಂಎಸ್ ಎಂ ಇ. ಕಾರ್ಯಕ್ರಮವು ಬ್ಯಾಂಕ್ ಗ್ರಾಹಕರಿಗೆ, ವ್ಯಾಪಾರಿಗಳಿಗೆ ,ಉದ್ಯಮಿಗಳಿಗೆ ಸಹಕಾರಿ-ಬಿ.ಗೋಪಿನಾಥ್

0

Chamber of Commerce Shivamogga ಮೆಗಾ ಎಂಎಸ್ಎಂಇ ಅರಿವು ಕಾರ್ಯಗಾರದಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಘಟಕಗಳಿಗೆ ಬೇಕಾದ ಸಾಲ ಸೌಲಭ್ಯಗಳ ಪೂರೈಕೆಯಿಂದ ಉದ್ಯಮಗಳಿಗೆ ಅಧಿಕ ಬಂಡವಾಳ ದೊರೆತು ಉದ್ಯಮಗಳ ಆರ್ಥಿಕ ಚೇತರಿಕೆಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ನಗರದ ಗೋಪಾಲಗೌಡ ಬಡಾವಣೆಯಲ್ಲರುವ ಔಷಧ ಭವನದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಿವಮೊಗ್ಗ ಪ್ರಾದೇಶಿಕ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಲಘು ಮತ್ತು ಸಣ್ಣ ಉದ್ಯಮ ಅರಿವು ಕಾರ್ಯಾಗಾರವನ್ನು ಬ್ಯಾಂಕ್ ನ ಹಿರಿಯ ಅಧಿಕಾರಿಗಳ ಜೊತೆಗೂಡಿ ಉದ್ಘಾಟಿಸಿ ಮಾತನಾಡಿದ ಅವರು, ಎಂಎಸ್ಎಂಇ, ಸರ್ಕಾರಿ ಪ್ರಾಯೋಜಿತ ಯೋಜನೆಗಳು ಆರ್ಥಿಕ ಸೇರ್ಪಡೆ ಒಳಗೊಂಡ ಈ ಕಾರ್ಯಕ್ರಮವು ಬ್ಯಾಂಕಿನ ಗ್ರಾಹಕರಿಗೆ, ವ್ಯಾಪಾರಿಗಳಿಗೆ ಕೈಗಾರಿಕೋದ್ಯಮಿಗಳಿಗೆ ಹಾಗೂ ವಾಣಿಜ್ಯೋದಮಿಗಳಿಗೆ ತುಂಬಾ ಅನುಕೂಲಕರವಾಗುತ್ತದೆ. ಹಾಗೂ ಎಂಎಸ್ಎಂಇ ಗಳಿಗೆ ಕಾರ್ಯನಿರತ ಬಂಡವಾಳವನ್ನು ಹೆಚ್ಚಿಸಲು ಸಹಾಯ ಮಾಡುವ ಸಾಲ ಉತ್ಪನ್ನಗಳ ವಿಶೇಷ ವರ್ಗವಾಗಿದೆ. ಹಾಗಾಗಿ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಿ ಎಂದು ಉದ್ಯಮಿದಾರರಿಗೆ ಕರೆ ನೀಡಿದರು.

ಒಂದು ಶತಮಾನದ ಹಿಂದೆ 1919 ರಲ್ಲಿ ಆರಂಭಗೊಂಡ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶದ ದೀರ್ಘಕಾಲೀನ ಬ್ಯಾಂಕ್ ಗಳಲ್ಲಿ ಒಂದಾಗಿದೆ. ಮುಂಬೈನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿ ಕಟ್ಟಡವು 1921 ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಂದ ಉದ್ಘಾಟಿಸಲ್ಪಟ್ಟ ಘನತೆಯನ್ನು ಹೊಂದಿದೆ. ಕೋರ್ ಬ್ಯಾಂಕಿಂಗ್ ಸಿಸ್ಟಮ್ ಮಾಡಿಸಿಕೊಂಡ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಕಳೆದ 100 ವರ್ಷಗಳಲ್ಲಿ ವಿವಿಧ ವಲಯಗಳ ವ್ಯವಹಾರಗಳಿಗೆ ಸಾಲ ನೀಡುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುವಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ ಸರ್ಕಾರವು ಕಳೆದ ಹತ್ತು ವರ್ಷಗಳಿಂದ ಸ್ಟ್ಯಾಂಡ್-ಅಪ್ ಇಂಡಿಯಾ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಸ್ಟಾರ್ಟ್-ಅಪ್ ಇಂಡಿಯಾ ಮತ್ತು ಇನ್ನೂ ಹಲವಾರು ಎಂಎಸ್ಎಂಇಗಳ ಬೆಳವಣಿಗೆಗೆ ವಿವಿಧ ಉಪಕ್ರಮಗಳನ್ನು ಘೋಷಿಸಿರುವುದರಿಂದ ಈ ವರ್ಗಕ್ಕೆ ಬಲ ತುಂಬಿದೆ ಎಂದು ಹೇಳಿದರು.

ಮುಂದುವರೆದು ನಮ್ಮಂತಹ ಅಭಿವೃದ್ಧಿಶೀಲ ರಾಷ್ಟ್ರದ ಆರ್ಥಿಕತೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ದೊಡ್ಡ ಪ್ರಮಾಣದ ಕಾರ್ಖಾನೆಗಳು ಮತ್ತು ಕೈಗಾರಿಕೆಗಳ ಪೂರೈಕೆ ಸರಪಳಿಯಲ್ಲಿ ಎಂಎಸ್ಎಂಇಗಳು ಪ್ರಮುಖ ಪಾತ್ರವಹಿಸುತ್ತವೆ. ಎಂದು ಹೇಳಿದರು.

ಪ್ರೈಮಿನಿಸ್ಟರ್ ಮುದ್ರಾ ಯೋಜನೆಯು ಸಣ್ಣ ವ್ಯಾಪಾರಸ್ಥರಿಗೆ ಮತ್ತು ಯೂನಿಯನ್ ನಾರಿ ಶಕ್ತಿ ಯೋಜನೆಯು ಮಹಿಳಾ ಉದ್ಯಮಗಳು ನಿರ್ವಹಿಸುವ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ, ಯೂನಿಯನ್ ಯುವಶಕ್ತಿ ಯೋಜನೆಯು ಯುವ ಉದ್ಯಮಿಗಳಿಗೆ ತುಂಬಾ ಅನುಕೂಲವಾಗಿದೆ ಎಂದರು.

Chamber of Commerce Shivamogga ಬ್ಯಾಂಕ್ ಅಧಿಕಾರಿಯಾದ ಅರವಿಂದ್ ಹೆಗ್ಡೆ ಉಪ ಮಹಾಪ್ರಬಂಧಕರು, ಯುಬಿಇ ಕೇಂದ್ರ ಕಚೇರಿ ಮುಂಬಯಿ, ಇವರು ಮಾತನಾಡಿ, ಈಗಿನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ರವರು ನಾರಿಶಕ್ತಿ ಸಾಲದ ಉತ್ಪನ್ನದ ಮೂಲಕ ಮಹಿಳಾ ಉದ್ಯಮಿಗಳಿಗೆ ಒತ್ತು ಕೊಟ್ಟಿರುವುದನ್ನು ವಿವರಿಸಿ, ಲಘು ಮತ್ತು ಮಧ್ಯಮ ಉದ್ಯೋಗ ಬೆಳೆದು ಇವೆ ಮುಂದೆ ಬೃಹತ್ ಕೈಗಾರಿಕೆಗಳಾಗಿ ಸಾವಿರಾರು ಜನಕ್ಕೆ ಉದ್ಯೋಗ ಕೊಡಲಿ ಎಂದು ಆಶಿಸಿದರು.

ಪ್ರಾದೇಶಿಕ ಕಚೇರಿ ಮುಖ್ಯಸ್ಥರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಕ್ಷೇತ್ರೀಯ ಮುಖ್ಯಸ್ಥರಾದ ವಿಷು ಕುಮಾರ್, ಬ್ಯಾಂಕಿನ ಧೇಯೋದ್ದೇಶಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧಿಕಾರಿಗಳು ಎಂಎಸ್ಎಂಇ ಸಾಲದ ಉತ್ಪನ್ನಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ಗ್ರಾಹಕರಗಳಿಗೆ ಸಮರ್ಪಕವಾಗಿ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಗ್ರಾಹಕರಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ಎಸ್.ಎನ್.ಓಂಕಾರ ಮೂರ್ತಿ, ವರ್ತಕರು ಹಾಗೂ ಬ್ಯಾಂಕಿನ ಹಿರಿಯ ಗ್ರಾಹಕರು, ಬ್ಯಾಂಕಿನ ವ್ಯವಸ್ಥಾಪಕರುಗಳು, ಅಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಅನೇಕ ಬ್ಯಾಂಕಿನ ಗ್ರಾಹಕರುಗಳು ವಿವಿಧ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರುಗಳು ಅನೇಕ ವಾಣಿಜ್ಯ ಮತ್ತು ಕೈಗಾರಿಕ ಉದ್ಯಮಿಗಳು, ಭಾಗವಹಿಸಿದ್ದರು

JDS ಓಟ್ ಬ್ಯಾಂಕ್ ಹೆಸರಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿಭಜನೆ ಯತ್ನ- ಜೆಡಿಎಸ್ ನ ರಾಕೇಶ್ ಡಿಸೋಜಾ

0

JDS ಅಲ್ಪಸಂಖ್ಯಾತ ಸಮುದಾಯವನ್ನು ಓಟ್‌ಬ್ಯಾಂಕ್ ಹೆಸರಿನಲ್ಲಿ ವಿಭಜನೆ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ ಖಂಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಾಮಗಾರಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಹೊರಟಿರುವ ತುಷ್ಟೀಕರಣದ ಧೋರಣೆಯ ನಿರ್ಧಾರ ಕೈಬಿಡಬೇಕೆಂದು ಆಗ್ರಹಿಸಿದ್ದಾರಲ್ಲದೇ, ಅಲ್ಪಸಂಖ್ಯಾತರಲ್ಲಿ ತಾರತಮ್ಯ ಧೋರಣ ಸಲ್ಲದು ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರು ಮಾತ್ರ ಕಾಣುತ್ತಾರೆ ಹೊರತು ನೈಜ ಅಲ್ಲಸಂಖ್ಯಾತರಾದ ಕ್ರೈಸ್ತ, ಬೌದ್ಧ, ಜೈನ ಸೇರಿದಂತೆ ಇನ್ನಿತರ ಸಮುದಾಯಗಳು ಕಾಣುವುದೇ ಇಲ್ಲ, ಓಟ್ ಬ್ಯಾಂಕ್ ಆಧಾರದಲ್ಲಿ ಬಹುಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ಮಾತ್ರ ಆದ್ಯತೆ ನೀಡುವುದು ಖಂಡನೀಯ ಎಂದಿದ್ದಾರೆ.

JDS ದಶಕಗಳ ಹಿಂದೆ ಅಲ್ಪಸಂಖ್ಯಾತರಾಗಿದ್ದ ಮುಸ್ಲಿಮರು ಇಂದು ಸಂಘಟಿತವಾಗಿ ಮುಂಚೂಣಿಯಲ್ಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಓಟ್ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಕಾರಣಕ್ಕೆ ಮುಸ್ಲಿಮರಿಗೆ ಮಾತ್ರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಧರ್ಮದ ಹೆಸರಿನಲ್ಲಿ ಉದ್ಯೋಗ ಹಾಗೂ ಶೈಕ್ಷಣಿಕ ಮೀಸಲಾತಿ ನೀಡಲಾಗಿದೆ, ಇದೀಗ ಸರ್ಕಾರಿ ಕಾಮಗಾರಿಗಳಲ್ಲೂ ಶೇ. ೪ ರಷ್ಟು ಮೀಸಲಾತಿ ಕಲ್ಪಿಸಲು ಮುಂದಾಗಿ ನಿಯಮ ರೂಪಿಸಲು ಹೊರಟಿರುವುದು ಮುಸ್ಲಿಂ ಓಲೈಕೆಯ ಪರಮಾವಧಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಮುಸ್ಲಿಮರೂ ಸೇರಿದಂತೆ ನಾಡಿನ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳ ಕುರಿತು ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡರೆ ನಾವು ಅದನ್ನು ಆಕ್ಷೇಪಿಸುವುದಿಲ್ಲ. ಆದರೆ ಕೇವಲ ಮುಸ್ಲಿಮರನ್ನು ಮಾತ್ರ ಪ್ರತ್ಯೇಕಿಸಿ ಓಲೈಸುವುದನ್ನು ಬಲವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.