Monday, April 28, 2025
Monday, April 28, 2025

Chamber of Commerce Shivamogga ಎಂಎಸ್ ಎಂ ಇ. ಕಾರ್ಯಕ್ರಮವು ಬ್ಯಾಂಕ್ ಗ್ರಾಹಕರಿಗೆ, ವ್ಯಾಪಾರಿಗಳಿಗೆ ,ಉದ್ಯಮಿಗಳಿಗೆ ಸಹಕಾರಿ-ಬಿ.ಗೋಪಿನಾಥ್

Date:

Chamber of Commerce Shivamogga ಮೆಗಾ ಎಂಎಸ್ಎಂಇ ಅರಿವು ಕಾರ್ಯಗಾರದಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಘಟಕಗಳಿಗೆ ಬೇಕಾದ ಸಾಲ ಸೌಲಭ್ಯಗಳ ಪೂರೈಕೆಯಿಂದ ಉದ್ಯಮಗಳಿಗೆ ಅಧಿಕ ಬಂಡವಾಳ ದೊರೆತು ಉದ್ಯಮಗಳ ಆರ್ಥಿಕ ಚೇತರಿಕೆಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ನಗರದ ಗೋಪಾಲಗೌಡ ಬಡಾವಣೆಯಲ್ಲರುವ ಔಷಧ ಭವನದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಿವಮೊಗ್ಗ ಪ್ರಾದೇಶಿಕ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಲಘು ಮತ್ತು ಸಣ್ಣ ಉದ್ಯಮ ಅರಿವು ಕಾರ್ಯಾಗಾರವನ್ನು ಬ್ಯಾಂಕ್ ನ ಹಿರಿಯ ಅಧಿಕಾರಿಗಳ ಜೊತೆಗೂಡಿ ಉದ್ಘಾಟಿಸಿ ಮಾತನಾಡಿದ ಅವರು, ಎಂಎಸ್ಎಂಇ, ಸರ್ಕಾರಿ ಪ್ರಾಯೋಜಿತ ಯೋಜನೆಗಳು ಆರ್ಥಿಕ ಸೇರ್ಪಡೆ ಒಳಗೊಂಡ ಈ ಕಾರ್ಯಕ್ರಮವು ಬ್ಯಾಂಕಿನ ಗ್ರಾಹಕರಿಗೆ, ವ್ಯಾಪಾರಿಗಳಿಗೆ ಕೈಗಾರಿಕೋದ್ಯಮಿಗಳಿಗೆ ಹಾಗೂ ವಾಣಿಜ್ಯೋದಮಿಗಳಿಗೆ ತುಂಬಾ ಅನುಕೂಲಕರವಾಗುತ್ತದೆ. ಹಾಗೂ ಎಂಎಸ್ಎಂಇ ಗಳಿಗೆ ಕಾರ್ಯನಿರತ ಬಂಡವಾಳವನ್ನು ಹೆಚ್ಚಿಸಲು ಸಹಾಯ ಮಾಡುವ ಸಾಲ ಉತ್ಪನ್ನಗಳ ವಿಶೇಷ ವರ್ಗವಾಗಿದೆ. ಹಾಗಾಗಿ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಿ ಎಂದು ಉದ್ಯಮಿದಾರರಿಗೆ ಕರೆ ನೀಡಿದರು.

ಒಂದು ಶತಮಾನದ ಹಿಂದೆ 1919 ರಲ್ಲಿ ಆರಂಭಗೊಂಡ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶದ ದೀರ್ಘಕಾಲೀನ ಬ್ಯಾಂಕ್ ಗಳಲ್ಲಿ ಒಂದಾಗಿದೆ. ಮುಂಬೈನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿ ಕಟ್ಟಡವು 1921 ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಂದ ಉದ್ಘಾಟಿಸಲ್ಪಟ್ಟ ಘನತೆಯನ್ನು ಹೊಂದಿದೆ. ಕೋರ್ ಬ್ಯಾಂಕಿಂಗ್ ಸಿಸ್ಟಮ್ ಮಾಡಿಸಿಕೊಂಡ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಕಳೆದ 100 ವರ್ಷಗಳಲ್ಲಿ ವಿವಿಧ ವಲಯಗಳ ವ್ಯವಹಾರಗಳಿಗೆ ಸಾಲ ನೀಡುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುವಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ ಸರ್ಕಾರವು ಕಳೆದ ಹತ್ತು ವರ್ಷಗಳಿಂದ ಸ್ಟ್ಯಾಂಡ್-ಅಪ್ ಇಂಡಿಯಾ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಸ್ಟಾರ್ಟ್-ಅಪ್ ಇಂಡಿಯಾ ಮತ್ತು ಇನ್ನೂ ಹಲವಾರು ಎಂಎಸ್ಎಂಇಗಳ ಬೆಳವಣಿಗೆಗೆ ವಿವಿಧ ಉಪಕ್ರಮಗಳನ್ನು ಘೋಷಿಸಿರುವುದರಿಂದ ಈ ವರ್ಗಕ್ಕೆ ಬಲ ತುಂಬಿದೆ ಎಂದು ಹೇಳಿದರು.

ಮುಂದುವರೆದು ನಮ್ಮಂತಹ ಅಭಿವೃದ್ಧಿಶೀಲ ರಾಷ್ಟ್ರದ ಆರ್ಥಿಕತೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ದೊಡ್ಡ ಪ್ರಮಾಣದ ಕಾರ್ಖಾನೆಗಳು ಮತ್ತು ಕೈಗಾರಿಕೆಗಳ ಪೂರೈಕೆ ಸರಪಳಿಯಲ್ಲಿ ಎಂಎಸ್ಎಂಇಗಳು ಪ್ರಮುಖ ಪಾತ್ರವಹಿಸುತ್ತವೆ. ಎಂದು ಹೇಳಿದರು.

ಪ್ರೈಮಿನಿಸ್ಟರ್ ಮುದ್ರಾ ಯೋಜನೆಯು ಸಣ್ಣ ವ್ಯಾಪಾರಸ್ಥರಿಗೆ ಮತ್ತು ಯೂನಿಯನ್ ನಾರಿ ಶಕ್ತಿ ಯೋಜನೆಯು ಮಹಿಳಾ ಉದ್ಯಮಗಳು ನಿರ್ವಹಿಸುವ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ, ಯೂನಿಯನ್ ಯುವಶಕ್ತಿ ಯೋಜನೆಯು ಯುವ ಉದ್ಯಮಿಗಳಿಗೆ ತುಂಬಾ ಅನುಕೂಲವಾಗಿದೆ ಎಂದರು.

Chamber of Commerce Shivamogga ಬ್ಯಾಂಕ್ ಅಧಿಕಾರಿಯಾದ ಅರವಿಂದ್ ಹೆಗ್ಡೆ ಉಪ ಮಹಾಪ್ರಬಂಧಕರು, ಯುಬಿಇ ಕೇಂದ್ರ ಕಚೇರಿ ಮುಂಬಯಿ, ಇವರು ಮಾತನಾಡಿ, ಈಗಿನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ರವರು ನಾರಿಶಕ್ತಿ ಸಾಲದ ಉತ್ಪನ್ನದ ಮೂಲಕ ಮಹಿಳಾ ಉದ್ಯಮಿಗಳಿಗೆ ಒತ್ತು ಕೊಟ್ಟಿರುವುದನ್ನು ವಿವರಿಸಿ, ಲಘು ಮತ್ತು ಮಧ್ಯಮ ಉದ್ಯೋಗ ಬೆಳೆದು ಇವೆ ಮುಂದೆ ಬೃಹತ್ ಕೈಗಾರಿಕೆಗಳಾಗಿ ಸಾವಿರಾರು ಜನಕ್ಕೆ ಉದ್ಯೋಗ ಕೊಡಲಿ ಎಂದು ಆಶಿಸಿದರು.

ಪ್ರಾದೇಶಿಕ ಕಚೇರಿ ಮುಖ್ಯಸ್ಥರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಕ್ಷೇತ್ರೀಯ ಮುಖ್ಯಸ್ಥರಾದ ವಿಷು ಕುಮಾರ್, ಬ್ಯಾಂಕಿನ ಧೇಯೋದ್ದೇಶಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧಿಕಾರಿಗಳು ಎಂಎಸ್ಎಂಇ ಸಾಲದ ಉತ್ಪನ್ನಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ಗ್ರಾಹಕರಗಳಿಗೆ ಸಮರ್ಪಕವಾಗಿ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಗ್ರಾಹಕರಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ಎಸ್.ಎನ್.ಓಂಕಾರ ಮೂರ್ತಿ, ವರ್ತಕರು ಹಾಗೂ ಬ್ಯಾಂಕಿನ ಹಿರಿಯ ಗ್ರಾಹಕರು, ಬ್ಯಾಂಕಿನ ವ್ಯವಸ್ಥಾಪಕರುಗಳು, ಅಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಅನೇಕ ಬ್ಯಾಂಕಿನ ಗ್ರಾಹಕರುಗಳು ವಿವಿಧ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರುಗಳು ಅನೇಕ ವಾಣಿಜ್ಯ ಮತ್ತು ಕೈಗಾರಿಕ ಉದ್ಯಮಿಗಳು, ಭಾಗವಹಿಸಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chanakya Chess School ಮೇ 2 ರಿಂದ ಮುಕ್ತ ಚೆಸ್ ತರಬೇತಿ ಶಿಬಿರ

Chanakya Chess School ಚಾಣಕ್ಯ ಚೆಸ್ ಸ್ಕೂಲ್ ವತಿಯಿಂದ ಶಿವಮೊಗ್ಗ ನಗರದ...