Monday, March 9, 2026
Monday, March 9, 2026
Home Blog Page 376

Guarantee Scheme ಸತ್ಯ & ಶುದ್ಧ ಮಾರ್ಗದಿಂದ ರಾಷ್ಟ್ರ ಕಟ್ಟಲು ಸಾಧ್ಯ- ಸಿ.ಎಸ್.ಚಂದ್ರಭೂಪಾಲ್

0

Guarantee Scheme ಅಂತರಂಗ ಮತ್ತು ಬಹಿರಂಗ ಶುದ್ದಿಯಿಂದ ಹಾಗೂ ಸತ್ಯದ ಮಾರ್ಗದಲ್ಲಿ ಸಾಗಿದಾಗ ಮಾತ್ರ ಸದೃಢ ರಾಷ್ಟ್ರ ಕಟ್ಟಲು ಸಾಧ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಅವರು ಪ್ರತಿಪಾದಿಸಿದ್ದರು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ ಸಿ ಎಸ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಜಂಗಮ ಹಾಗೂ ಬೇಡ ಜಂಗಮ ಸಮಾಜ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನುಉದ್ಘಾಟಿಸಿ ಮಾತನಾಡಿದರು.

ಶ್ರೀ ರೇಣುಕಾಚಾರ್ಯರು, ಬಸವಾದಿ ಶರಣರು ನೀಡಿದ ತತ್ವಗಳ ಆಧಾರದಲ್ಲಿ ಸಮಾಜವನ್ನು ಸುಂದರವಾಗಿ ಕಟ್ಟಬಹುದು. ಈ ಸಮಾಜ ಕೂಡ ಆಚಾರ್ಯರ ತತ್ವಗಳ ಆಧಾರದ ಮೇಲೆ ಉತ್ತಮ ಸಮಾಜ ಕಟ್ಟಿದೆ. ಅವರು ನೀಡಿದ ಅಂಶಗಳನ್ನು ಅನುಸರಿಸುವ ಮೂಲಕ ಅಭಿವೃದ್ದಿ ಸಾಧ್ಯವಾಗುತ್ತದೆ. ಶ್ರೀ ರೇಣುಕಾಚಾರ್ಯರು ಸೇರಿದಂತೆ ನಮ್ಮ ಸಮಾಜದ ಮಹನೀಯರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ.
ಎಲ್ಲರೂ ಸಮಾನರಾಗಿ ಪರಿಪೂರ್ಣರಾಗಿ ಬದುಕಿದಾಗಲೇ ದೇಶ ಕಲ್ಯಾಣವಾಗುತ್ತದೆ. ಸತ್ಯದ ಮಾರ್ಗದಲ್ಲಿ ಸಾಗಬೇಕೆಂದು ಪ್ರತಿಪಾದಿಸಿದ ಆಚಾರ್ಯರು ಮನೆ ಮನೆಗೆ ಹೋಗಿ ಭಿಕ್ಷಾಟಣೆ ಮಾಡಿ ಧಾರ್ಮಿಕ ಚಿಂತನೆಯನ್ನು ಬಿತ್ತುತ್ತಿದ್ದರು. ಇಂತಹ ಮಹನೀಯರ ಆದರ್ಶ, ಸಿದ್ದಾಂತ, ತತ್ವಗಳನ್ನು ಮೈಗೂಡಿಸಿಕೊಂಡು ನಡೆಯೋಣವೆಂದು ತಿಳಿಸಿದರು.

Guarantee Scheme ಬಸವೇಶ್ವರ ವಿದ್ಯಾ ಸಂಸ್ಥೆಯ ನಿವೃತ್ತ ಪ್ರಾಚಾರ್ಯರಾದ ಗುರುಸಿದ್ದ ಶಾಸ್ತ್ರಿ ಬಿ ಟಿ ಎಂ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಶ್ರೀ ರೇಣುಕಾಚಾರ್ಯರ ಉದಯ ಸ್ಪೂರ್ತಿದಾಯಕವಾಗಿದೆ. ಶ್ರೀಗಳ ಬಗ್ಗೆ ನಾವು ಹೆಚ್ಚೆಚ್ಚು ತಿಳಿಯಬೇಕು. ಜಗದ್ಗುರು ರೇಣುಕಾಚಾರ್ಯ ಮತ್ತು ಪಂಚಾಚಾರ್ಯರನ್ನು ನೆನೆಸಿದರೆ ನಮ್ಮಲ್ಲಿರುವ ಪಾಪ ನಾಶವಾಗುತ್ತದೆ.
ಅಗಸ್ತ್ಯ ಮುನಿಗಳಿಗೆ ರೇಣುಕಾಚಾರ್ಯರು ಶಿವಾದ್ವೆಂತ ಸಿದ್ದಾಂತವನ್ನು ಉಪದೇಶಿಸುತ್ತಾರೆ. ಅದನ್ನೇ ಸಿದ್ದಾಂತ ಶಿಖಾಮಣಿ ಎಂದು ಕರೆಯಲಾಗಿತ್ತದೆ. ಇದರಲ್ಲಿ 55 ಲಿಂಗ ಅಂತಸ್ತು ಮತ್ತು 57 ಲಿಂಗಸ್ತರಗಳಿವೆ. ಜೀವ ದೇವನಾಗುವ ಬಗೆಯನ್ನು ಇದು ಹೇಳಿದೆ. ಲಿಂಗದ ಬಗ್ಗೆ ಶ್ರದ್ದೆ ಮತ್ತು ಭಕ್ತಿ ಇರುವವರೆಲ್ಲ ಲಿಂಗವನ್ನು ಆರಾಧಿಸಬಹುದು. ಲಿಂಗವನ್ನು ಗುರು ಧೀಕ್ಷೆಯ ಮೂಲಕ ನೀಡಲಾಗುವುದು.
ಲಿಂಗದ ಪೂಜೆಯಿಂದ ಹಿಂದಿನ ಜನ್ಮದ ಪಾಪ ಹೋಗಿ ಶಿವಜ್ಞಾನ ಪ್ರಾಪ್ತಿಯಾಗುತ್ತದೆ. ಗುರುವಿನ ರೂಪದಲ್ಲಿ ದೇವರು ಕಾಣಿಸಿಕೊಳ್ಳುತ್ತಾನೆ. ಲಿಂಗ ಕೇವಲ ಕಲ್ಲಲ್ಲ, ವಿಶ್ವ ಚೈತನ್ಯದ ಭಾಗ. ಇದನ್ನು ಪೂಜಿಸಿದರೆ ವಿಶ್ವವನ್ನೇ ಪೂಜಿಸಿದಂತೆ. ವೀರಶೈವ ಧರ್ಮದ ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿ ಅವಲೋಕಿಸಿದರೆ ಸುಸಂಸ್ಕೃತ ಸಮಾಜ ನಿರ್ಮಿಸುವಲ್ಲಿ ಆಚಾರ್ಯರು, ಬಸವಾದಿ ಶರಣರು ಕೆಲಸ ಮಾಡುತ್ತಾ ಬಂದಿರುವುದನ್ನು ಕಾಣಬಹುದು.
ಕಲಿಯುಗದಲ್ಲಿ ಐದು ಪೀಠಗಳಿವೆ. ಪೀಠಗಳು ಶಾಂತ ಮತ್ತು ಸುಂದರ ಪರಿಸರದಲ್ಲಿವೆ. ಪೀಠಗಳು ಧರ್ಮ ಬೋಧನೆ ಅಷ್ಟೇ ಮಾಡುವುದಿಲ್ಲ, ಜೊತೆಗೆ ಆಧ್ಯಾತ್ಮಿಕ ವಿಜ್ಞಾನ , ಸಾಮಾಜಿಕ ಸೌಹಾರ್ಧತೆ, ಶಾಂತಿ ಸೂತ್ರಗಳನ್ನು ತಿಳಿಸುತ್ತವೆ. ಮನೋ ಬೆಳವಣಿಗೆ, ಸಂಸ್ಕೃತಿ ಬೆಳವಣಿಗೆ ಆಗಬೇಕು. ರೇಣುಕಾಚಾರ್ಯರು ಶಾಂತಿ, ಅಹಿಂಸೆಯನ್ನು ಪ್ರತಿಪಾದಿಸಿದ್ದಾರೆ.

ದಯ, ಕ್ಷಮೆ, ಶಾಂತಿ, ಮನೋನಿಗ್ರಹ, ದಾನ, ಪೂಜೆ, ಧ್ಯಾನ ಸೇರಿದಂತೆ ಸಿದ್ದಾಂತ ಶಿಖಾಮಣಿಯಲ್ಲಿನ ದಶ ಸೂತ್ರಗಳನ್ನು ಪಾಲಿಸೋಣ. ಸರ್ಕಾರ ಮಹನೀಯರ ಜಯಂತಿಗಳ ಆಚರಣೆಗಳನ್ನು ಆಚರಿಸುತ್ತಿರುವುದು ಅತ್ಯುತ್ತಮ ಹಾಗೂ ಶ್ಲಾಘನೀಯವಾಗಿದ್ದು ಎಲ್ಲರೂ ಇದರ ಉಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಮಾತನಾಡಿ, ಐದು ಸ್ಥಳಗಳಲ್ಲಿ ಪೀಠಗಳನ್ನು ಸ್ಥಾಪಿಸಿ, ವೀರಶೈವ ಧರ್ಮ ಪ್ರತಿಪಾದನೆ ಮಾಡಲಾಗುತ್ತಿದೆ. ಈ ಐದು ಪೀಠಗಳನ್ನು ಶಿವನ ಐದು ಮುಖಗಳೆಂದು ಹೇಳಲಾಗುತ್ತದೆ. ಶಾಂತಿ, ಸಹಬಾಳ್ವೆ, ಸಾಮರಸ್ಯ, ಜ್ಞಾನ ಬೋಧನೆಯನ್ನು ಇಲ್ಲಿ ಮಾಡುತ್ತಾ ಬರಲಾಗಿದೆ. ಬಹಳ ಭಕ್ತಿಯಿಂದ ಇಂತಹ ಜಯಂತಿಗಳ ಆಚರಣೆ ಆಗಬೇಕು. ಅವರು ನೀಡಿದ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ವೀರಶೈವ ಲಿಂಗಾಯತ ಧರ್ಮದಲ್ಲಿ 83 ಪಂಗಡಗಳಿದ್ದು ಎಲ್ಲ ಪಂಗಡಗಳೂ ಒಂದೇ. ಒಟ್ಟಾಗಿ, ಒಗ್ಗಟ್ಟಿನಿಂದ ಜಯಂತಿಯನ್ನು, ಕಾರ್ಯಕ್ರಮಗಳನ್ನು ಮಾಡಬೇಕು ಎಂದ ಅವರು ಅಂಗದ ಮೇಲೆ ಲಿಂಗ ಇರಬೇಕು. ಲಿಂಗ ಪೂಜೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷರಾದ ವೇದಮೂರ್ತಿ ಚಂದ್ರಯ್ಯ ಮಾತನಾಡಿ, ಆಚಾರ್ಯರು, ಶರಣಾದಿ ಬಸವರು ಜಾತಿ, ಮತಗಳನ್ನು ನೋಡಲಿಲ್ಲ. ಜಂಗಮ ಎಂದರೆ ಚರ. ಅನ್ನವನ್ನು ಭಿಕ್ಷೆ ಬೇಡಿ ತಂದು ಹಿಂದುಳಿದವರಿಗೆ ಅನ್ನವನ್ನು ನೀಡುತ್ತಾ, ಜೊತೆಗೆ ಜ್ಞಾನ ದಾಸೋಹ ಮಾಡಿದವರು ವೀರಶೈವ ಜಂಗಮ ಪೀಳಿಗೆ. ಧರ್ಮ ಪ್ರಚಾರ ಹಾಗೂ ಮಾನವನನ್ನು ದೇವನನ್ನಾಗಿ ಮಾಡುವುದು ಆಚಾರ್ಯರ ಉದ್ದೇಶವಾಗಿತ್ತು.

ಲಿಂಗಾರಾಧನೆಯಿಂದ ದೇಹದ ಶುಚಿತ್ವದ ಜೊತೆಗೆ ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ. ಆದ್ದರಿಂದ ಎಲ್ಲರೂ ಲಿಂಗ ಪೂಜೆ ಮಾಡಬೇಕೆಂದು ತಿಳಿಸಿದರು.
ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ಹರ‍್ನಹಳ್ಳಿಯ ಶ್ರೀ ರಾಮಲಿಂಗೇಶ್ವರ ಮಠದ ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತಾಲ್ಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷರಾದ ವೇದಮೂರ್ತಿ ಲೋಕೇಶ್ ಹೆಚ್.ಎಂ, ಜಿಲ್ಲಾ ಬೇಡ ಜಂಗಮ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ ಆರ್ ಸೋಮನಾಥ್, ಎಸಿ ಕಚೇರಿಯ ತಹಶೀಲ್ದಾರ್ ಎಂ.ಲಿಂಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಇತರೆ ಅಧಿಕಾರಿಗಳು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

Department of Social Welfare Karnataka ಶುಲ್ಕ ಮರುಪಾವತಿ ಸೌಲಭ್ಯ. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಕಟಣೆ

0

Department of Social Welfare Karnataka ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಶುಲ್ಕ ಮರುಪಾವತಿ ಕಾರ್ಯಕ್ರಮ ಸೌಲಭ್ಯ ನೀಡಲು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ಕೋರ್ಸುಗಳಾದ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ಹಾಗೂ ವೃತ್ತಿಪರ ಸ್ನಾತಕೋತ್ತರ ಪದವಿ ಮತ್ತು ನರ್ಸಿಂಗ್ ಕೋರ್ಸುಗಳಿಗೆ https://ssp.postmartic.karnataka.gov.in ವೆಬ್‌ಸೈಟ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಮಾ.31 ರವರೆಗೆ ವಿಸ್ತರಿಸಲಾಗಿದೆ.

Department of Social Welfare Karnataka ಹೆಚ್ಚಿನ ಮಾಹಿತಿ ಹಾಗೂ ಕಾರ್ಯಕ್ರಮಗಳ ವಿವರ ಅರ್ಹತೆ ಸಲ್ಲಿಸಬೇಕಾದ ದಾಖಲೆಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಬಗ್ಗೆ ಮಾಹಿತಿಗಾಗಿ www.bcwd.karnataka.gov.in, ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ ಇಮೇಲ್ postmatrichelp@karnataka.gov.in, ದೂ.ಸಂ.: 1902, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ದೂ.ಸಂ.: 08182-222129 ಅಥವಾ ಸಹಾಯವಾಣಿ 8050770005 ಗಳನ್ನು ಸಂಪರ್ಕಿಸಬಹುದೆಂದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

JCI Shivamogga ಜೆಸಿಐ ವತಿಯಿಂದ ಮಹಿಳಾ ವಸತಿ ತಾಂತ್ರಿಕ ಶಾಲೆಗೆ ಪ್ಯಾಡ್ ಬರ್ನಿಂಗ್ ಮಿಷನ್ ಕೊಡುಗೆ

0

JCI Shivamogga ಶಿವಮೊಗ್ಗ ಜೆಸಿಐ ಸಮೃದ್ಧಿ ಘಟಕದ ಸಂಸ್ಥಾಪಕ ಅಧ್ಯಕ್ಷರಾದ ಜೆಸಿ ಜೆ ಎಫ್ ಡಿ ನರಸಿಂಹಮೂರ್ತಿ.ಜೆ.ಕೆ ರವರು ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕಲ್ ಶಿವಮೊಗ್ಗ ಆವರಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕೇಕ್ ಕಟ್ ಮಾಡಿ ಸಿಹಿ ಹಂಚುವುದರ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಈ ವಸತಿ ಗೃಹಕ್ಕೆ ಉಪಯುಕ್ತವಾದ ಪ್ಯಾಡ್ ಬರ್ನಿಂಗ್ ಮಿಷನ್ ನ್ನು ಅಧ್ಯಕ್ಷರಾದ ಜೆ.ಸಿ ನರಸಿಂಹ ಮೂರ್ತಿಯವರು ಕೊಡುಗೆಯಾಗಿ ನೀಡಿದರು. ಜೊತೆಗೆ ಒಬ್ಬ ಬಡ ವಿದ್ಯಾರ್ಥಿಗೆ ಫೀಸ್ ಕಟ್ಟಲು ಸಹಾಯವಾಗುವಂತೆ ಚೆಕ್ ನೀಡಿದರು.

ಡಾ. ಅಖಿಲ ಅವರು ಸುಸ್ಥಿರ ಮುಟ್ಟಿನ ಮತ್ತು ಮುಟ್ಟಿನ ನೈರ್ಮಲ್ಯ (Sustainable menstruation and menstruation hygiene) ಬಗ್ಗೆ ಉತ್ತಮ ಮಾಹಿತಿಯನ್ನು ಮಹಿಳೆಯರಿಗೆ ನೀಡಿದರು.

JCI Shivamogga ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜೆಸಿಐ ಡಾ. ಎಸ್.ವಿ.ಶಾಸ್ತ್ರಿ, ಜೆಸಿಐ ಗೌರೀಶ್ ಭಾರ್ಗವ್, ಜೆ ಎಫ್ ಆರ್ ಜಿ.ಸೂರ್ಯನಾರಾಯಣ ವರ್ಮ, ಜೆಸಿಐ ವಿನಿತ್.ಆರ್, ಜೆಸಿ ಶಿವಕುಮಾರ್ ಪಿ ಜೆಡ್ ಪಿ, ಕಾಲೇಜಿನ ಪ್ರಿನ್ಸಿಪಲ್ ರವಿ ನಾಯ್ಕ್ ಆಗಮಿಸಿದ್ದರು.

ಕಾರ್ಯದರ್ಶಿ ಜೆಸಿ ಗಾಯಿತ್ರಿ ಯಲ್ಲಪ್ಪಗೌಡ ಹಾಗೂ ಜೆಸಿ ಸರಳ ವಾಸನ್, ಜೆಸಿ ಪುಷ್ಪ, ಜೆಸಿ ನರಸಮ್ಮ, ಜೆಸಿ ಅನಿತಾ ಸೀರಿಯಲ್, ಜೆಸಿ ಅನ್ನಪೂರ್ಣ ರವರು ಹಾಜರಿದ್ದರು. ಮಹಿಳಾ ವಸತಿ ಪಾಲಿಟೆಕ್ನಿಕಲ್ ಶಿವಮೊಗ್ಗದಿಂದ 400 ವಿದ್ಯಾರ್ಥಿನಿಯರು ಮತ್ತು ಸುಮಾರು 20 ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

Anandapura death news ಆನಂದಪುರದಲ್ಲಿ ಅಪರಿಚಿತ ಮಹಿಳೆಶವ ಪತ್ತೆ. ಆನಂದಪುರ ಪೊಲೀಸ್ ಪ್ರಕಟಣೆ

Anandapura death news ಮಾರ್ಚ್12 ರಂದು ಆನಂದಪುರ ಗ್ರಾಮದ ರಂಗನಾಥ ಬೀದಿ ಪಕ್ಕದಲ್ಲಿರುವ ಭೂಮಿಕಾ ಏಜೆನ್ಸಿ ಎದುರು ಮಲಗಿದ್ದಲ್ಲೆ ಮರಣ ಹೊಂದಿದ್ದ ಸುಮಾರು 30 ರಿಂದ 35 ವಯಸ್ಸಿನ ಮಹಿಳೆಯ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಮೃತ ಮಹಿಳೆಯು ಸುಮಾರು 152 ಸೆ.ಮೀ.ಎತ್ತರ, ಕಪ್ಪು ಮೈ ಬಣ್ಣ, ತೆಳುವಾದ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಕಪ್ಪು ಗುಂಗುರು ಕೂದಲು ಇದ್ದು, ಬಲಗೈ ಮಧ್ಯದಲ್ಲಿ ಮುರುಗೇಶ್ ಎಂದು ಕನ್ನಡದಲ್ಲಿ ಹಚ್ಚೆ ಹಾಕಿದ ಗುರುತು ಇರುತ್ತದೆ.

Anandapura death news ಮೈ ಮೇಲೆ ಬಿಳಿ ಬಣ್ಣದ ಕೆಂಪು ಹೂವಿನ ವಿನ್ಯಾಸವಿರುವ ಚೂಡಿದಾರ್ ಧರಿಸಿದ್ದಾರೆ.
ಈ ಮೃತ ಮಹಿಳೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಆನಂದಪುರ ಪೊಲೀಸ್ ಠಾಣೆ ದೂ.ಸಂ.: 08183-298100 / 9480803363, ಶಿವಮೊಗ್ಗ ಎಸ್.ಪಿ.ಕಚೇರಿ ದೂ.ಸಂ.: 08182-261400, ಸಾಗರ ವೃತ್ತ ನಿರೀಕ್ಷಕರ ದೂ.ಸಂ.: 9480803336 ಗಳನ್ನು ಸಂಪರ್ಕಿಸು ವಂತೆ ಪೊಲೀಸ್ ತಿಳಿಸಿದ್ದಾರೆ.

Election Commission of India ಚುನಾವಣಾ ಆಯೋಗದಿಂದ ರಾಜಕೀಯ ಪಕ್ಷಗಳ‌ ನಾಯಕರೊಂದಿಗೆ ಸಂವಾದಕ್ಕ ಆಹ್ವಾನ

Election Commission of India ಚುನಾವಣಾ ಪ್ರಕ್ರಿಯೆಗಳನ್ನು ಮತ್ತಷ್ಟು ಬಲಪಡಿಸಲು ಕಾನೂನಿನ ಚೌಕಟ್ಟಿನೊಳಗೆ ಸಂವಹನ ನಡೆಸುವ ಉದ್ದೇಶದೊಂದಿಗೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಅಧ್ಯಕ್ಷರು ಹಾಗೂ ನಾಯಕರೊಂದಿಗೆ ಸಭೆಗಳನ್ನು ಹಮ್ಮಿಕೊಳ್ಳಲು ಎಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಿದೆ.
ಚುನಾವಣೆಗಳಿಗೆ ಸಂಬಂಧಿಸಿದಂತೆ ತಾಲೂಕು ಮಟ್ಟದಲ್ಲಿ ಚುನಾವಣಾ ನೊಂದಣಾಧಿಕಾರಿಗಳು (ERO), ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು (DEO) ಅಥವಾ ರಾಜ್ಯ ಮಟ್ಟದಲ್ಲಿ ಮುಖ್ಯ ಚುನಾವಣಾಧಿಕಾರಿಗಳು (CEO) ಬಗೆಹರಿಸಲಾಗದ ಯಾವುದೇ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಸಲಹೆಗಳನ್ನು ಕ್ರೂಢೀಕರಿಸಿ 2025 ರ ಏಪ್ರಿಲ್ 30 ರೊಳಗೆ ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಲು ಸೂಚಿಸಲಾಗಿದೆ.
ಈ ಕುರಿತು ಆಯೋಗದಿಂದ ಇಂದು ರಾಜಕೀಯ ಪಕ್ಷಗಳಿಗೆ ಕಳುಹಿಸಲಾಗಿರುವ ವೈಯಕ್ತಿಕ ಪತ್ರದಲ್ಲಿ, ಆಯೋಗವು ರಾಜಕೀಯ ಪಕ್ಷಗಳ ಅಧ್ಯಕ್ಷರು ಮತ್ತು ಪಕ್ಷದ ಹಿರಿಯ ಸದಸ್ಯರೊಂದಿಗೆ ಪರಸ್ಪರ ಅನುಕೂಲಕರ ಸಮಯದಲ್ಲಿ, ಸ್ಥಾಪಿತ ಕಾನೂನಿಗೆ ಅನುಗುಣವಾಗಿ ಚುನಾವಣಾ ಪ್ರಕ್ರಿಯೆಗಳನ್ನು ಮತ್ತಷ್ಟು ಬಲಪಡಿಸಲು ಸಂವಾದವನ್ನು ರೂಪಿಸಲು ವೇದಿಕೆಯನ್ನು ಸೃಜಿಸಲಾಗಿದೆ.
ಇದಕ್ಕೂ ಮೊದಲು, ಕಳೆದ ವಾರ ನಡೆದ ಭಾರತ ಚುನಾವಣಾ ಆಯೋಗದ ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ಸಮ್ಮೇಳನದಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಎಲ್ಲಾ ರಾಜ್ಯಗಳ / ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ನೋಂದಣಾದಿಕಾರಿಗಳು, ರಾಜಕೀಯ ಪಕ್ಷಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸಲು ಸೂಚನೆ ನೀಡಿದ್ದರು. ಇಂತಹ ಸಭೆಗಳಲ್ಲಿ ಪಡೆದ ಯಾವುದೇ ಸಲಹೆಗಳನ್ನು ಈಗಾಗಲೇ ಕಾನೂನು ಚೌಕಟ್ಟಿನೊಳಗೆ ಕಟ್ಟುನಿಟ್ಟಾಗಿ ಪರಿಹರಿಸಿ, 2025ನೇ ಮಾರ್ಚ್ 31, ರೊಳಗೆ ತೆಗೆದುಕೊಂಡ ವರದಿಯನ್ನು ಆಯೋಗಕ್ಕೆ ಸಲ್ಲಿಸಲು ತಿಳಿಸಲಾಗಿತ್ತು. ಅಲ್ಲದೆ, ಚುನಾವಣಾ ಆಯೋಗದ ಈ ವಿನೂತನ ಕಾರ್ಯಕ್ಕೆ ರಾಜಕೀಯ ಪಕ್ಷಗಳೂ ಸಹ ಕೈಜೋಡಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಲು ಒತ್ತಾಯಿಸಲಾಗಿತ್ತು.
Election Commission of India ಭಾರತ ಚುನಾವಣಾ ಆಯೋಗವು, ಸಂವಿಧಾನ ಮತ್ತು ಶಾಸನಬದ್ಧ ಚೌಕಟ್ಟಿನ ಪ್ರಕಾರ, ಚುನಾವಣಾ ಪ್ರಕ್ರಿಯೆಗಳ ಎಲ್ಲಾ ಅಂಶಗಳನ್ನು ಒಳಗೊಂಡು ಗುರುತಿಸಿರುವ 28 ಪಾಲುದಾರರಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾಲುದಾರರಲ್ಲಿ ಒಂದಾಗಿದೆ. ರಾಜಕೀಯ ಪಕ್ಷಗಳಿಗೆ ಬರೆದ ಪತ್ರದಲ್ಲಿ ಆಯೋಗವು ಜನರ ಪ್ರಾತಿನಿಧ್ಯ ಕಾಯ್ದೆ 1950 ಮತ್ತು 1951; ಮತದಾರರ ನಿಯಮಗಳ ನೋಂದಣಿ, 1960; ಚುನಾವಣಾ ನಿಯಮಗಳ ನಡವಳಿಕೆ, 1961; ಮಾನ್ಯ ಸುಪ್ರೀಂ ಕೋರ್ಟ್ ಮತ್ತು ಭಾರತದ ಚುನಾವಣಾ ಆಯೋಗವು ನೀಡಿದ ಸೂಚನೆಗಳು, ಕೈಪಿಡಿಗಳು ಮತ್ತು ಕೈಪಿಡಿಗಳ ಆದೇಶಗಳು ಭಾರತ ಚುನಾವಣಾ ಆಯೋಗದ ವೆಬ್ ಸೈಟ್ನಲ್ಲಿ ಕಾಲಕಾಲಕ್ಕೆ ಲಭ್ಯವಿದೆ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸಲು ವಿಕೇಂದ್ರೀಕೃತ, ಮತ್ತು ಪಾರದರ್ಶಕ ಕಾನೂನು ಚೌಕಟ್ಟನ್ನು ಆಯೋಗವು ಸ್ಥಾಪಿಸಿದೆ ಎಂದು ತಿಳಿಸಿದೆ.

Ninasam ಕಾಲೇಜು ವಿದ್ಯಾರ್ಥಿಗಳಿಗೆ ಎಂಟು ದಿನಗಳ ರಂಗ ಶಿಬಿರ

Ninasam ಸ್ಪಂದನ (ರಿ) ಸಾಗರ , ಶಿವಮೊಗ್ಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ , ಕಾಲೇಜು ವಿಧ್ಯಾರ್ಥಿಗಳಿಗಾಗಿ ಎಂಟು ದಿನಗಳ ರಂಗತರಬೇತಿ ಶಿಬಿರವನ್ನು ಹರಿವು ಹೆಸರಿನಲ್ಲಿ ಆಯೋಜಿಸಿದೆ.
ಇದು ದಿನಾಂಕ 12:03:25 ರಿಂದ 19:03:25 ರವರೆಗೆ ಸಾಗರದ ಶಿವಪ್ಪನಾಯಕ ನಗರದ ಭೂಮಿ ರಂಗಮನೆಯಲ್ಲಿ ನಡೆಯಲಿದೆ.
ನಾಳೆ ದಿನಾಂಕ 12:03 : 25 ರ
ಸಂಜೆ ನಾಲ್ಕು ಗಂಟೆಗೆ ಇದರ ಉದ್ಘಾಟನೆ ನಡೆಯಲಿದ್ದು…
ಪರಶುರಾಮ್ ಸೂರನಗದ್ದೆ ಚಾಲನೆ ನೀಡಲಿದ್ದಾರೆ.

Ninasam ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗದ ಸಹಾಯಕ ನಿರ್ದೇಶಕರಾದ ಉಮೇಶ್ ಎಚ್ ಅಧ್ಯಕ್ಷತೆ ವಹಿಸಲಿದ್ದು ಸ್ಪಂದನದ ಕಾರ್ಯದರ್ಶಿ ಶಿವಕುಮಾರ್ ಉಳವಿ ಉಪಸ್ಥಿತರಿರುತ್ತಾರೆ.
ಆಸಕ್ತ ಸುಮಾರು 25 ಕ್ಕೂ ಹೆಚ್ಚು ವಿಧ್ಯಾರ್ಥಿ ಯುವಕರು ಭಾಗವಹಿಸಲು ಅವಕಾಶವಿದೆ.

CM Siddharamaih ಸಂಚಾರಿ ಆರೋಗ್ಯ ಘಟಕ ವಾಹನಗಳಿಗೆ ಸಿಎಂ ಸಿದ್ಧರಾಮಯ್ಯ ಅವರಿಂದ ಚಾಲನೆ

0

CM Siddharamaih ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ “ಸಂಚಾರಿ ಆರೋಗ್ಯ ಘಟಕ” ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಸೌಧದ ಭವ್ಯ ಮೆಟ್ಟಿಲುಗಳ ಬಳಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಾಸಕರಾದ ರಿಜ್ವಾನ್ ಅರ್ಷದ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Tarunodaya Shivamogga ನಿಸರ್ಗದಾನಂದ ಸವಿಯ ಬೇಕೆಂದರೆ ಚಾರಣ ಹೋಗಲೇ ಬೇಕು- ಜಿ.ವಿಜಯ ಕುಮಾರ್

0

Tarunodaya Shivamogga ಜರಿ, ತೊರೆ, ಹಕ್ಕಿ ಪಕ್ಷಿಗಳ ಕಲರವ, ಪ್ರಕೃತಿ ಮಾತೆಯ ಸುಂದರ ನೋಟ ಸವಿಯ ಬೇಕಾದವರು ಚಾರಣಕ್ಕೆ ಹೋಗಲೇಬೇಕು ಎಂದು
ತರುಣೋದಯ ಮಾಜಿ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.

ತರುಣೋದಯ ಘಟಕ ಆಯೋಜಿಸಿದ ಮತ್ತಿಘಟ್ಟ ಫಾಲ್ಸ್ ಚಾರಣಕ್ಕೆ ಹೊರಟ ಚಾರಣಿಗರಿಗೆ ಶುಭ ಹಾರೈಸಿ ಮಾತನಾಡಿದ ಅವರು, ಈ ರೀತಿ ಚಾರಣಕ್ಕೆ ಮನೆ ಮಂದಿಯೆಲ್ಲ ಹೋದಾಗ ಒಂದು ರೀತಿ ಸಂತೋಷ ಸಿಗುತ್ತದೆ. ಹೊಸ ಸದಸ್ಯರೊಂದಿಗೆ ಸ್ನೇಹ ಬೆಳೆಸಲು ಇಂತಹ ಚಾರಣ ಸಹಕಾರಿ. ದಿನವಿಡೀ ಜೊತೆಗೆ ಇದ್ದು, ಊಟ, ತಿಂಡಿ, ಚಾರಣದ ಸಮಯದಲ್ಲಿ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡು, ತಮಾಷೆಯಾಗಿ ಸಮಯ ಕಳೆಯುವುದನ್ನು ವರ್ಣಿಸಲು ಸಾಧ್ಯವಿಲ್ಲ ಎಂದರು.

ಛೇರ್ಮನ್ ವಾಗೇಶ್ ಮಾತನಾಡಿ, ನಾವು ಸಂತೋಷ ಪಡಲು ಪ್ರವಾಸ ಹೋಗುವುದು ಸಾಮಾನ್ಯ, ಆದರೆ ಇತರರ ಸಂತೋಷಕ್ಕೆ ಚಾರಣ ಕಳೆದುಕೊಂಡು ಹೋಗುವುದು ಸಾಹಸದ ಕೆಲಸವೆ ಸರಿ. ಬಂದವರನ್ನು ಎಲ್ಲಾ ರೀತಿಯಲ್ಲಿ ಸಮಾಧಾನ ಪಡಿಸುವುದು ಕಷ್ಟಾಸಾಧ್ಯ ಎಂದರು.

Tarunodaya Shivamogga ಕಾರ್ಯದರ್ಶಿ ಸುರೇಶ್ ಕುಮಾರ್ ಮಾತನಾಡಿ, ಹೊಸ ಹೊಸ ಪ್ರದೇಶಗಳನ್ನು ಗುರುತಿಸಿ, ಅಲ್ಲಿಯ ವ್ಯವಸ್ಥೆಗಳನ್ನು ನೋಡಿಕೊಂಡು ಚಾರಣ ಮಾಡುತ್ತೇವೆ. ಚಾರಣಿಗರಿಗೆ ಉತ್ತಮ ಆಹಾರ ಒದಗಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಹಾಗೂ ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದು ಕೊಳ್ಳುತ್ತೇವೆ. ಇಂದು ಹಲವು ಹೊಸ ಸದಸ್ಯರು ಆಗಮಿಸಿದ್ದು ಚಾರಣದ ನಂತರ ತಮ್ಮ ಅನಿಸಿಹಂಚಿಕೊಳ್ಳಬೇಕಾಗಿ ಕೋರಿದರು.

ಈ ವೇಳೆ ಉಪಾಧ್ಯಕ್ಷೆ ಡಾ. ಪ್ರಕೃತಿ, ನಿರ್ದೇಶಕರಾದ ನಾಗರಾಜ್, ಭಾರತಿ, ಗಿರೀಶ್, ಹರೀಶ್, ರಜನಿ, ಬಸವಪ್ಪ, ವೀರಭದ್ರಪ್ಪ ಸೇರಿದಂತೆ ಎಪ್ಪತ್ತೇಳರಿಂದ ಐದು ವರ್ಷದ ಮಗುವರೆಗೂ ಒಟ್ಟು ಐವತ್ತು ಸದಸ್ಯರು ಭಾಗವಹಿಸಿದ್ದರು.

Puttaraj Gawai ಪುಣ್ಯಾಶ್ರಮದಲ್ಲಿ ವಿದುಷಿ ವಸುಧಾ ಶರ್ಮಾ ಅವರಿಗೆ ಗಾನಭೂಷಣ ಪ್ರಶಸ್ತಿ ಪ್ರದಾನ

0

Puttaraj Gawai ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ೧೧೧ನೇ ಜನ್ಮದಿನ ಸಮಾರಂಭವು ಸಾಗರ ರಸ್ತೆ ಅಂಧ ಮಕ್ಕಳ ಸಂಗೀತ ವಿದ್ಯಾಲಯ ಶ್ರೀ ವೀರೇಶ್ವರ ಪುಣ್ಯಾಶ್ರಮ ಸಂಸ್ಕೃತ ಪಾಠ ಶಾಲೆಯಲ್ಲಿ ನೆರವೇರಿತು. ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು ಸಾನ್ನಿಧ್ಯ ವಹಿದ್ದರು. ಪುಣ್ಯಾಶ್ರಮದ ಆರ್.ಬಿ. ಸಂಗಮೇಶ್ವರ ಗವಾಯಿಗಳು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಚಾರ್ಟೆಡ್ ಅಕೌಂಟೆAಟ್ ನರೇಂದ್ರ ಕೆ.ವಿ., ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ಧಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ವಾಗೇಶ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾಗರದ ಖ್ಯಾತ ಹಿಂದೂಸ್ಥಾನಿ ಗಾಯಕಿ ವಿದೂಶಿ ಶ್ರೀಮತಿ ವಸುಧಾ ಶರ್ಮ ಅವರಿಗೆ ಶ್ರೀ ಗುರು ಗಾನಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗಣ್ಯರು ಭಾಗವಹಿಸಿದ್ದರು.

Klive Special Article ಮಹಿ ಮಾತಿಶಯದ ಯತಿ ಧೀರೇಂದ್ರ ತೀರ್ಥರು ಲೇ.ಎನ್.ಜಯಭೀಮ ಜೊಯಿಸ್. ಶಿವಮೊಗ್ಗ

0

Klive Special Article ಶ್ರೀಧೀರೇಂದ್ರತೀರ್ಥ ಶ್ರೀಪಾದಂಗಳವರು..ಭಕ್ತಿಯ ಮಹಿಮೆಯ ಚಿಂತನೆ

ಪವಿತ್ರ ವರದಾನದಿ ಹರಿದಿರುವ “ರಿತ್ತಿ”ಕ್ಷೇತ್ರದಲ್ಲಿ ನೆಲೆಸಿರುವ ರಾಯರು ಶ್ರೀಧೀರೇಂದ್ರತೀರ್ಥರು.ಇವರು ರಿತ್ತಿರಾಯರೆಂದೇ ಖ್ಯಾತರಾಗಿದ್ದಾರೆ.ರಿತ್ತಿಯಲ್ಲಿ ಶ್ರೀಸುಶೀಲೇಂದ್ರತೀರ್ಥರೂ ನೆಲೆಸಿದ್ದಾರೆ. ತಮ್ಮ ಪ್ರೀತಿಯ ಇಬ್ಬರು ಶಿಷ್ಯ ಯತಿಗಳು ಇರುವ ಈ ಸ್ಥಳದಲ್ಲಿ
ಶ್ರೀರಾಘವೇಂದ್ರಗುರುಸಾರ್ವಭೌಮರೂ ಭಕ್ತರನ್ನು ಹರಸಲು ವಿರಾಜಮಾನರಾಗಿದ್ದಾರೆ
ಶ್ರೀಧೀರೇಂದ್ರತೀರ್ಥರು ಶ್ರೀರಾಯರಮಠದ ಪರಂಪರೆಯಲ್ಲಿ ಶ್ರೀರಾಯರ ನಂತರ ಎಂಟನೆಯ ಪೀಠಾಧಿಪತಿಗಳಾಗಿ ವೇದಾಂತ ಸಾಮ್ರಾಜ್ಯವನ್ನಾಳಿದ ಯತಿವರೇಣ್ಯರು. ಇಂದು ಶ್ರೀಗಳವರ ಪೂರ್ವಾರಾಧನೆಯ ಪರ್ವದಿನ.
ಪೂರ್ವಾರಾಧನೆಯ ನಿಮಿತ್ತ ಶ್ರೀಗಳವರ ಮಹಿಮೆಯ ಸ್ಮರಣೆ.
Klive Special Article ಇದು ಬಹಳ ಹಿಂದೆ ನಡೆದ ಒಂದು ಘಟನೆ.ರಿತ್ತಿಯಲ್ಲಿ ಬಾಗಲುಕೋಟೆ ಶೀನಪ್ಪ ಎಂಬುವರು ಇದ್ದರು.ಇವರು
ಶ್ರೀರಾಯರ ಮತ್ತು ಧೀರೇಂದ್ರತೀರ್ಥರ ಭಕ್ತರಾಗಿದ್ದರು ಇವರು ಆ ಊರಿಗೆ ಒಬ್ಬ ನಾಯಕರಂತೆಯೂ ಇದ್ದರು. ಇವರು ಒಂದು ಸಲ ಬದರೀ ಯಾತ್ರೆಗೆ ಹೋಗಿರುತ್ತಾರೆ. ಅಲ್ಲಿ ಅವರಿಗೆ ಆಯಾಸದಿಂದ ತುಂಬಾ ಜ್ವರ ಬಂದು
ಬಿಡುತ್ತದೆ.ಅಲ್ಲಿ ಔಷಧೋಪಚಾರ ನಡೆಯಿತು,ಆದರೂ ಅನಾರೋಗ್ಯ ಕಡಿಮೆಯಾಗಲಿಲ್ಲ.ಏನು ಮಾಡಬೇಕೆಂದು
ತಿಳಿಯದಂತಾಗುತ್ತದೆ.ರಾತ್ರಿ ಶೀನಪ್ಪನವರು ರಿತ್ತಿರಾಯರನ್ನು(ಶ್ರೀಧೀರೇಂದ್ರತೀರ್ಥರನ್ನು) ಸ್ಮರಣೆ
ಮಾಡಿ ಮಲಗಿದರು.ಸ್ವಪ್ನದಲ್ಲಿ ಗುರುಗಳು ಕಾಣಿಸಿಕೊಂಡು “ನಿನ್ನ ಮಕ್ಕಳು ಮಠಕ್ಕೆ ಬಂದಿಲ್ಲ,ಅವರಿಗೆ ಬಂದು ದರ್ಶನ ಮಾಡಲು ತಿಳಿಸು” ನಿನಗೆ ಸಂಪೂರ್ಣ ಗುಣವಾಗುವುದು ಎಂದು ಸೂಚಿಸುತ್ತಾರೆ.ಶೀನಪ್ಪನವರು ಬೆಳಿಗ್ಗೆ ಎದ್ದೊಡನೆಯೇ
ಮಾಡಿದ ಮೊದಲ ಕೆಲಸವೆಂದರೆ ಮಕ್ಕಳಿಗೆ ಫೋನಿನ ಮೂಲಕ ವಿಷಯ ತಿಳಿಸಿದರು. ಫೋನಿನಲ್ಲಿ ವಿಷಯವನ್ನು ಕೇಳಿದ್ದೇ ತಡ ಮಕ್ಕಳು ಮಠಕ್ಕೆ ಬಂದು ಭಕ್ತಿಯಿಂದ ಸೇವೆ ಮಾಡುತ್ತಾರೆ.ಈ ಕಡೆ ಬದರಿಯಲ್ಲಿ
ಶೀನಪ್ಪನವರು ಗುಣಮುಖರಾಗುತ್ತಾರೆ.ಅಲ್ಲಿ ಬದರೀನಾರಾಯಣನಿಗೆ ಭಕ್ತಿಯಿಂದ ನಮಸ್ಕಾರಮಾಡಿ ತಮ್ಮ ಊರಿಗೆ ಹಿಂದಿರುಗಿದರು.
ಈ ಶೀನಪ್ಪನವರ ವಿಷಯ ಕೇಳಿದ ಮೇಲಂತೂ ಜನರಿಗೆ ಗುರುಗಳ ಮೇಲೆ ಭಕ್ತಿ,ನಂಬಿಕೆ ಇನ್ನೂ ಹೆಚ್ಚಾಗಿ ಬೆಳೆಯಿತು.
ಇಂತಹ ಮಹಾಮಹಿಮರು ಶ್ರೀಧಿರೇಂದ್ರತೀರ್ಥ ಗುರುಗಳು.ಇವರು ಮಂತ್ರಾಲಯ ಕ್ಷೇತ್ರದಲ್ಲಿ ಶ್ರೀರಾಯರ ಪಕ್ಕದ ವೃಂದಾವನದಲ್ಲಿ ವಿರಾಜಮಾನರಾಗಿರುವ ಶ್ರೀವಾದೀಂದ್ರತೀರ್ಥ ಗುರುಗಳ ಪೂರ್ವಾ ಶ್ರಮದ ಮಕ್ಕಳು. ಇವರ ಹೆಸರು ಶ್ರೀ ಜಯರಾಮಾ
ಚಾರ್ಯರೆಂಂದು.
ಶ್ರೀಗಳವರ ಪೂರ್ವಾರಾಧನೆಯ ಸಂದರ್ಭದಲ್ಲಿ ಭಕ್ತಿಯಿಂದ ಸ್ಮರಿಸಿ ನಮ್ಮ ನಮನಗಳನ್ನು ಅರ್ಪಿಸಿ ಅವರ ಅನುಗ್ರಹ ಪಡೆಯೋಣ.