Monday, March 9, 2026
Monday, March 9, 2026
Home Blog Page 375

SAIL-VISL ವಿಐಎಸ್ಎಲ್ ಪ್ರಗತಿಯಲ್ಲಿ ಮಹಿಳೆಯರ ಕೊಡುಗೆ ಸ್ಮರಣಾರ್ಹ- ಬಿ.ಎಲ್.ಚಂದ್ವಾನಿ

0

SAIL-VISL ಸೈಲ್-ವಿಐಎಸ್‌ಎಲ್ ಫ್ಯಾಕ್ಟರಿ ಮೀಟಿಂಗ್‌ಹಾಲ್‌ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಮಹಿಳೆಯರು ಮತ್ತು ಬಾಲಕಿಯರಿಗಾಗಿ: ಹಕ್ಕುಗಳು, ಸಮಾನತೆ ಮತ್ತು ಸಬಲತೆ’ ಎಂಬ ಧ್ಯೇಯದೊಂದಿಗೆ ಆಚರಿಸಲಾಯಿತು. ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ), ಶ್ರೀಮತಿ ಶೋಭ ಶಿವಶಂಕರನ್, ಮಹಾಪ್ರಬಂಧಕರು (ಹಣಕಾಸು) ಶ್ರೀ ಜೆ. ಜಗದೀಶ, ಅಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ ಮತ್ತು ಶ್ರೀ ಪಾರ್ಥಸಾರಥಿ ಮಿಶ್ರಾ, ಅಧ್ಯಕ್ಷರು, ವಿಐಎಸ್‌ಎಲ್ ಅಧಿಕಾರಿಗಳ ಸಂಘ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ ತಮ್ಮ ಭಾಷಣದಲ್ಲಿ ವಿಐಎಸ್‌ಎಲ್‌ನ ಮಹಿಳಾ ಸಮುದಾಯದ ಪ್ರಮುಖ ಸಾಧನೆಗಳನ್ನು ಪ್ರಸ್ತಾಪಿಸುತ್ತಾ ಸಮಾಜಕ್ಕೆ ಮತ್ತು ಕಾರ್ಖಾನೆಗೆ ಅವರ ಕೊಡುಗೆಯನ್ನು ಶ್ಲಾಘಿಸಿದರು. ಹಾಗೆಯೇ, ಮಹಿಳೆಯರಿಗೆ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡುವ ಮೂಲಕ ಅವರು ತಮ್ಮ ಸಮಾಥ್ಯವನ್ನು ಪ್ರದರ್ಶಿಸುವಲ್ಲಿ ಸಹಕಾರಿಯಾಗಿದೆ ಎಂದರು.

ಡಾ|| ಸುಶ್ಮಾ, ಡಾ|| ಶೋಭ, ಶ್ರೀಮತಿಯವರಾದ ಅಪರ್ಣ, ನಾಗರತ್ನ, ಅಮೃತಾ, ರಕ್ಷಿತಾ, ಕುಸುಮ, ಪ್ರೇಮ ಭಾಯಿ, ಗಿರಿಜಾ, ಅಮಿತಾ, ಮಂಜುಶ್ರೀ, ರಮ್ಯ, ಮತ್ತು ತ್ರಿವೇಣಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಶ್ರೀಮತಿ ಶೋಭ ಶಿವಶಂಕರನ್ ಮತ್ತು ಶ್ರೀ ಜೆ.ಜಗದೀಶ್ ರವರೂ ಸಹ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಾರ್ಚ್ ೫ ರಂದು ಮಹಿಳಾ ಉದ್ಯೋಗಿಗಳಿಗೆ ಮತ್ತು ಮಹಿಳಾ ಗುತ್ತಿಗೆ ಕಾರ್ಮಿಕರಿಗೆ ವಿನೋದದ ಆಟಗಳನ್ನು ಆಯೋಜಿಸಲಾಗಿತ್ತು ಮತ್ತು ಪ್ರಶಸ್ತಿ ವಿಜೇತರಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು.

ಡಾ|| ಸುಶ್ಮಾ ಮತ್ತು ಡಾ|| ಶೋಭ ರವರು ಮಹಿಳೆಯರ ಆರೋಗ್ಯ ಸಂಬAಧಿ ವಿಷಯದ ಕುರಿತು ವಿಐಎಸ್‌ಎಲ್ ನ ಮಹಿಳಾ ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರೊಂದಿಗೆ ದಿನಾಂಕ ೭ ಮತ್ತು ೮ ಮಾರ್ಚ್ ರಂದು ಸಂವಾದವನ್ನು ನಡೆಸಿಕೊಟ್ಟರು.

SAIL-VISL ಸೈಲ್-ವಿಐಎಸ್‌ಎಲ್ ರಾಂಚಿಯವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವೀಡಿಯೋ ಸಂವಾದದಲ್ಲಿ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ, ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಾರ್ವಜನಿಕ ಸಂಪರ್ಕ), ಶ್ರೀಮತಿ ಶೋಭ ಶಿವಶಂಕರನ್, ಮಹಾಪ್ರಬಂಧಕರು (ಹಣಕಾಸು) ಮತ್ತು ವಿಐಎಸ್‌ಎಲ್‌ನ ಮಹಿಳಾ ಕಾರ್ಮಿಕರು ಭಾಗವಹಿಸಿ ಸೈಲ್ ಅಧ್ಯಕ್ಷರು ಮತ್ತು ಸೈಲ್ ಬೊರ್ಡ್ ಸದಸ್ಯರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಉಚಿತವಾಗಿ ಹೈಬ್ರೀಡ್ ತಳಿಯ ಪಪಾಯ ಮತ್ತು ನುಗ್ಗೆ ಸಸಿಗಳನ್ನು ಮಹಿಳಾ ಕಾರ್ಮಿಕರು ವಿತರಿಸಲಾಯಿತು.

ಡಾ|| ಶೋಭ, ವೈಧ್ಯಾಧಿಕಾರಿ, ವಿಐಎಸ್‌ಎಲ್ ಆಸ್ಪತ್ರೆ ಕಾರ್ಯಕ್ರಮವನ್ನು ನಿರೂಪಿಸಿದರು, ಸಿಬ್ಬಂದಿ, ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಕಾರ್ಯಕ್ರಮವನ್ನು ಆಯೋಜಿಸಿದ್ದವು.

Department of Science and Technology ಹೊಳಲೂರು ಏತ ನೀರಾವರಿಗೆ ಶೀಘ್ರ ಚರ್ಚೆ ಮತ್ತು ನಿರ್ಧಾರ- ಸಚಿವ ಬೋಸರಾಜು

0

Department of Science and Technology ಶಿವಮೊಗ್ಗ ಸಮೀಪದ ಹೊಳಲೂರು ಏತ ನೀರಾವರಿ ಉಳಿದ ಕಾಮಗಾರಿಯನ್ನು ಮುಂದಿನ ಮೂರು ತಿಂಗಳ ಅವಧಿಯಲ್ಲಿ ನೀರಾವರಿ ತಜ್ಞರ ಸಲಹೆಯ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರೈತಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಬೋಸರಾಜು ಅವರು ಹೇಳಿದರು.

ಶಿವಮೊಗ್ಗ ತಾಲೂಕಿನ ಹೊಳಲೂರು ಏತ ನೀರಾವರಿ ಯೋಜನಾ ಪ್ರದೇಶದ ವ್ಯಾಪ್ತಿಗೊಳಪಟ್ಟ ವಿವಿಧ ಸ್ಥಳಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಈ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದರು. ಈಗಾಗಲೇ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾಪೂರ್ಯನಾಯ್ಕ್‌ ಹಾಗೂ ಸ್ಥಳೀಯ ಮುಖಂಡರು ಅಪೂರ್ಣಗೊಂಡಿರುವ ಹಾಗೂ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಈ ಏತ ನೀರಾವರಿ ಯೋಜನೆಯ ಪ್ರಾಥಮಿಕ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡಿದ್ದು, 2008ರಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಅಂದಿನ ಸರ್ಕಾರ ಸುಮಾರು 21ಕೋಟಿ ರೂ.ಗಳಿಗೆ ಅಧಿಕ ಮೊತ್ತ ವ್ಯಯ ಮಾಡಿರುವ ಬಗ್ಗೆ ಮಾಹಿತಿ ಇದೆ.

ಈಗಿರುವ ಯಂತ್ರಗಳು ಹಾಗೂ ಅವುಗಳ ಸಾಮರ್ಥ್ಯದ ಬಗ್ಗೆಯೂ ಮಾಹಿತಿ ಪಡೆಯುವ ಅಗತ್ಯವಿದೆ ಎಂದ ಅವರು ಇಲ್ಲಿನ ಕಾಮಗಾರಿಯ ಕುರಿತು ಜನರಲ್ಲಿ ಸಾಕಷ್ಟು ದೂರುಗಳಿದ್ದು, ಅವುಗಳನ್ನು ಮುಂದಿನ ದಿನಗಳಲ್ಲಿ ಮಾಹಿತಿ ಪಡೆದು, ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮುನ್ನ ಸ್ಥಗಿತಗೊಂಡ ಕಾಮಗಾರಿಯನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲು ಅಗತ್ಯವಿರುವ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು.

Department of Science and Technology ಈಗಾಗಲೇ ಜಿಲ್ಲೆಗೆ ಹಿಂದಿನ ಭೇಟಿ ಸಂದರ್ಭದಲ್ಲಿ ಸೊರಬ ತಾಲೂಕಿನಲ್ಲಿ ಆರು ಏತ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿರುವುದಾಗಿ ಅವರು ತಿಳಿಸಿದರು.
ಹೊಳಲೂರಿನ ಪಂಪ್‌ಹೌಸ್‌ನಲ್ಲಿ ಮೂರು ಮೋಟಾರುಗಳು ಸಕ್ರಿಯವಾಗಿದ್ದು ಅದರಲ್ಲಿ ಎರಡು ಮೋಟಾರುಗಳು ಕಾರ್ಯನಿರ್ವಹಿಸುತ್ತಿವೆ. ಒಂದನ್ನು ಹೆಚ್ಚುವರಿಯಾಗಿ ಉಳಿಸಿಕೊಳ್ಳಲಾಗಿದೆ. ಮಳೆಗಾಲದಲ್ಲಿ ಮಳೆಯ ನೀರು ಊರೊಳಗೆ ಹಾಗೂ ಚಾನಲ್‌ನ ಸಮೀಪದಲ್ಲಿರುವ ಶಾಲೆಗೆ ನುಗ್ಗಿ ತೀವ್ರ ತರಹದ ಅಡಚಣೆ ಉಂಟು ಮಾಡುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಪಂಪ್‌ಹೌಸ್‌ನಿಂದ ಮೇಲೆತ್ತುವ ನೀರು ನಿರೀಕ್ಷೆಯಂತೆ ಸಣ್ಣ ಕೆರೆಗಳಿಗೆ ತಲುಪದಿರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ.

ಮೊದಲು ಇಲ್ಲಿನ ಒ೦ದು ಸಣ್ಣ ಕೆರೆಗೆ ನೀರನ್ನು ಭರ್ತಿಗೊಳಿಸಿ, ನಂತರ ಅಗತ್ಯತೆಗಳಿಗೆ ಬಳಸಬೇಕು ಎಂಬ ಅವರ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅವರ ಈ ಅಭಿಪ್ರಾಯವನ್ನು ಸಹ ಸಕಾಲದಲ್ಲಿ ಪರಿಶೀಲಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದರು. ಆಡಳಿತಾರೂಢ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿದ 16ನೇ ಜನಪ್ರಿಯ ಬಜೆಟ್‌ಇದಾಗಿದ್ದು, ರಾಜ್ಯದ ಜನಸಾಮಾನ್ಯರ ನೋವು-ನಲಿವುಗಳನ್ನು ತಿಳಿದು, ಎಲ್ಲ ವರ್ಗದ ಜನರ ಹಿತಕಾಪಾಡುವ ನಿಟ್ಟಿನಲ್ಲಿ ಜನಸ್ನೇಹಿಯಾಗಿದೆ. ಅನ್ನಭಾಗ್ಯ ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕೆ ಅಗತ್ಯವಿರುವಷ್ಟು ಹಣಕಾಸನ್ನು ಕಾಯ್ದಿರಿಸಲಾಗಿದೆ. ಅಲ್ಲದೇ ಗ್ಯಾರೆಂಟಿ ಯೋಜನೆಯ ಲಾಭವನ್ನು ರಾಜ್ಯದ ಜನರು ಯಾವುದೇ ಮದ್ಯವರ್ತಿಗಳ ಪ್ರವೇಶವಿಲ್ಲದೇ ನೇರವಾಗಿ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಈ ಭೇಟಿಯ ಸಂದರ್ಭದಲ್ಲಿ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ್‌, ವಿಧಾನಪರಿಷತ್‌ಸದಸ್ಯೆ ಶ್ರೀಮತಿ ಬಲ್ಕಿಶ್‌ಬಾನು, ಮುಖಂಡ ಆಯನೂರು ಮಂಜುನಾಥ್‌ಸೇರಿದಂತೆ ಅಧಿಕಾರಿಗಳು, ಹೊಳಲೂರಿನ ಅನೇಕ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

Senior Chamber International Organization ಪುಷ್ಪ ಎಸ್ ಶೆಟ್ಟಿಅವರಿಗೆ ‌ಸೀನಿಯರ್ ಚೇಂಬರ್ ಉನ್ನತ ಪ್ರಶಸ್ತಿ

0

Senior Chamber International Organization ಬ್ರಹ್ಮಾವರದಲ್ಲಿ ನಡೆದ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯ ರಾಷ್ಟ್ರೀಯ ಸಮ್ಮೇಳನದಲ್ಲಿ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವಮೊಗ್ಗದ ಪುಷ್ಪ. ಎಸ್. ಶೆಟ್ಟಿಯವರಿಗೆ ಹಲವಾರು ಲೀಜನ್‌ಗಳಲ್ಲಿ ಸಲ್ಲಿಸಿದ ಸೇವೆಗೆ ಔಟ್ ಸ್ಟ್ಯಾಂಡಿಂಗ್ ನ್ಯಾಷನಲ್ ವೈಸ್ ಪ್ರೆಸಿಡೆಂಟ್ ಅವಾರ್ಡ್ ನೀಡಿ ಗೌರವಿಸಲಾಗಿದೆ.

ಶಿವಮೊಗ್ಗ ಭಾವನ ಹಾಗೂ ಲೀಜನ್‌ಗಳ ಸದಸ್ಯರು ಅಭಿನಂದಿಸಿದ್ದಾರೆ

International Women’s Day ಕುಟುಂಬ ಕ್ಷೇಮಕ್ಕಾಗಿ‌ ಕೊನೆ ಉಸಿರಿರುವವರೆಗೂ ಮಹಿಳೆಯ ತ್ಯಾಗ ದೊಡ್ಡದು- ಗಣೇಶ್ ರಮೇಶ್ ಪೈ

0

International Women’s Day ಇಂದು ಮಹಿಳೆಯರು ಸ್ವಾವಲಂಬಿ ಬದುಕನ್ನು ನಡೆಸುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲು ಮಹಿಳೆ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆ ಪಡುವಂತಹ ವಿಷಯ ಎಂದು ಜೆಸಿಐ ಶಿವಮೊಗ್ಗ ಸ್ಟಾರ್ಸ್ ಅಧ್ಯಕ್ಷ ಕಾರ್ಕಳ ಗಣೇಶ್ ರಾಮೇಶ್ ಪೈ ತಿಳಿಸಿದರು. ಶಿವಮೊಗ್ಗ ನಗರದ ಲತಾ ಬ್ಯೂಟಿ ಸಲೂನ್ ಅವರ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ, ಇಡೀ ದಿನ ಕುಟುಂಬದ ಸದಸ್ಯರ ಯೋಗಕ್ಷೇಮ ನೋಡಿಕೊಂಡು ಕೊನೇ ಉಸಿರಿರು ವವರೆಗೂ ಸಂಸಾರಕ್ಕಾಗಿ ದುಡಿಯುತ್ತಾಳೆ ಎಂದು ತಿಳಿಸಿದರು.

ಪತಿಯ ದುಡಿಮೆಗೆ ಸಹಕಾರಿ ಯಾಗಿ, ಮಕ್ಕಳ ಆರೋಗ್ಯ, ಓದಿಗೆ, ಏಳಿಗೆಗೆ ಸದಾ ಶ್ರಮಿಸುತ್ತಾಳೆ. ಉದ್ಯೋ ಗಿಯಾಗಿದ್ದರೆ ಹೊರಗೂ ದುಡಿದು, ಮನೆಯಲ್ಲೂ ದುಡಿಯುತ್ತಾಳೆ. ಮಹಿಳೆ ತ್ಯಾಗಮಯಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯೂಟಿ ಪಾರ್ಲರ್ ಸಿಬ್ಬಂಧಿಗಳಿಗೆ ಬ್ಯೂಟಿಷಿಯನ್ ತರಬೇತಿ ಕರ‍್ಯಕ್ರಮ ನಡೆಸಿ, ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಅತಿಥಿ ಡಾ. ಶೋಭಾ ಗಿರೀಶ್, ಐಪಿಪಿ ನವೀನ್ ಕುಮಾರ್ ಎನ್.ವಿ, ಸಂಸ್ಥಾಪಕ ಅಧ್ಯಕ್ಷೆ ಅಶ್ವಿನಿ ಇ.ಎಂ, ಕಾರ್ಯದರ್ಶಿ ಪ್ರಿಯಾಂಕಾ ಎಸ್.ಎಂ, ಲೇಡಿ ಜೆಸಿ ಲತಾ ಗೋವಿಂದ್ ಮತ್ತು ಕಿಶನ್ ಸೇರಿದಂತೆ ಹಲವರಿದ್ದರು.

Yakshasinchana Trust ಬೆಂಗಳೂರಿನಲ್ಲಿ ಪುತಿನ ಅವರ ‘ಹರಿಣಾಭಿಸರಣ’ ಯಕ್ಷಗಾನ ಪ್ರದರ್ಶನ

0

ಮಾರ್ಚ 17ರಂದು ಪುತಿನ ಅವರ 120ನೇ ಜನ್ಮದಿನದ ಅಂಗವಾಗಿ ಪುತಿನ ಟ್ರಸ್ಟ್ ಅವರು ವಿಶಿಷ್ಟವಾದ ಯಕ್ಷಗಾನ ಪ್ರಯೋಗವೊಂದನ್ನು ಆಯೋಜಿಸಿದ್ದಾರೆ.

ಪುತಿನ ಅವರ ಪ್ರಸಿದ್ಧವಾದ ಗೀತನಾಟಕವಾದ ’ಹರಿಣಾಭಿಸರಣ’ ಇದರ ಯಕ್ಷಗಾನ ಪ್ರಯೋಗವನ್ನು ಯಕ್ಷಸಿಂಚನ ಟ್ರಸ್ಟ್ ಬೆಂಗಳೂರು ಇವರು ಪ್ರದರ್ಶನಗೈಯಲಿದ್ದಾರೆ.

Yakshasinchana Trust ಈ ಕಾರ್ಯಕ್ರಮದಲ್ಲಿ ಪ್ರೋ ಎಮ್. ಕೃಷ್ಣೇಗೌಡ, ಎನ್.ಎಸ್ ಶ್ರೀಧರರ್ಮೂರ್ತಿ, ಡಾ.ಆನಂದರಾಮ ಉಪಾಧ್ಯ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

-ರವಿ ಮಡೋಡಿ
9986384205

KMF Nandini ಹಾಲಿನ ದರ ಏರಿಕೆ ಪ್ರಸ್ತಾಪ ಕೂಡಲೇ ಕೈ ಬಿಡಿ. ಹೋಟೆಲ್ ಮಾಲೀಕರ ಆಗ್ರಹ

0

KMF Nandini ಪ್ರಸ್ತಾಪಿತ ನಂದಿನಿ ಹಾಲಿನ ಬೆಲೆ ಅಂದಾಜು 5 ರೂಪಾಯಿ ದರ ಏರಿಕೆ ಪ್ರಸ್ತಾಪಕ್ಕೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ (ಕೆಎಸ್‌ಎಚ್‌ಎ) ವಿರೋಧ ವ್ಯಕ್ತಪಡಿಸಿದೆ.

ಈ ಸಂಬoಧ ರಾಜ್ಯ ಸರಕಾರ ಹಾಗು ಕರ್ನಾಟಕ ಹಾಲು ಮಹಾಮಂಡಳ (ಕೆ.ಎಂ.ಎಫ್) ಗಳಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಶ್ರೀ ಜಿ.ಕೆ ಶೆಟ್ಟಿ, ಒಂದೊಮ್ಮೆ ದರ ಹೆಚ್ಚಳ ಮಾಡಿದರೆ ಹೋಟೆಲ್ ಉದ್ಯಮದ ಮೇಲೆ ಅದು ದೊಡ್ಡ ಮಟ್ಟದ ನಕಾರಾತ್ಮಕ ಪರಿಣಾಮ ಬೀರಲಿದೆ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.

ಕಾಫಿ ಪುಡಿ ದರ ಆಕಾಶಕ್ಕೇರಿದೆ. ಈಗ ಹಾಲಿನ ಬೆಲೆ ಹೆಚ್ಚಳಗೊಂಡರೆ ಚಹಾ, ಕಾಫಿ ಯಂತಹ ನಾನಾ ಬಿಸಿ ಪಾನೀಯಗಳ ಬೆಲೆ ಏರಿಕೆ ಹೋಟೆಲ್ ಮಾಲೀಕರಿಗೆ ಅನಿವಾರ್ಯವಾಗಲಿದೆ. ಇದು ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರವಾಗಿರುವ ಹಾಗು ಸರಕಾರ ಹಾಗು ಸ್ಥಳೀಯ ಸಂಸ್ಥೆಗಳಿಗೆ ದೊಡ್ಡ ಮಟ್ಟದ ತೆರಿಗೆ ಮೂಲವಾಗಿರುವ ಹೋಟೆಲ್ ಉದ್ಯಮ ಕ್ಷೇತ್ರಕ್ಕೆ ಕಂಟಕ ಪ್ರಾಯವಾಗುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

“ಹೋಟೆಲ್ ಗಳು ತಮ್ಮ ಗ್ರಾಹಕರಿಗೆ ಆಹಾರ ಸುರಕ್ಷತಾ ನೀತಿಗೆ ಅನುಗುಣವಾಗಿ ಎಲ್ಲ ಶುಚಿತ್ವ ಹಾಗು ಗುಣಮಟ್ಟದ ನೀತಿಗಳನ್ನು ಅನುಸರಿಸುತ್ತಾ ಗುಣಮಟ್ಟದ ಚಹಾ, ಕಾಫಿ, ಹಾಗು ಇತರ ಪಾನೀಯಗಳನ್ನು ಒದಗಿಸುತ್ತವೆ. ಒಚಿದೊಮ್ಮೆ ಹಾಲಿನ ದರ ಹೆಚ್ಚಳಗೊಂಡರೆ, ಇವುಗಳ ಬೆಲೆ ಏರಿಕೆ ಅನಿವಾರ್ಯವಾಗಲಿದೆ. ಆಗ ಗ್ರಾಹಕರು ಅಗ್ಗದ ದರದಲ್ಲಿ ದೊರೆಯುವ ಆದರೆ ಯಾವುದೇ ಸುರಕ್ಷತಾ ಮಾನದಂಡಗಳನ್ನು ಅನುಸರಿಸದೆ ಮಾರಾಟ ಮಾಡಲಾಗುವ ಚಹಾ, ಕಾಫಿ ಸೇವನೆ ಆರಂಭಿಸಬಹುದು.

ಇದು ಸಾರ್ವಜನಿಕ ಆರೋಗ್ಯದ ಮೇಲೆ ದೊಡ್ಡ ಮಟ್ಟದ ಪ್ರತಿಕೂಲ ಪರಿಣಾಮ ಬೀರಬಹುದು ಎಂದು,” ಅವರು ಎದ್ಚರಿಸಿದ್ದಾರೆ.

ಸರಕಾರ ಸಾರ್ವಜನಿಕ ಆರೋಗ್ಯ ಮತ್ತು ಹೋಟೆಲ್ ಉದ್ಯಮದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಹಾಲಿನ ಬೆಲೆ ಏರಿಕೆ ಪ್ರಸ್ತಾಪವನ್ನು ತಕ್ಷಣ ಕೈ ಬಿಡುವಂತೆ ಅವರು ಆಗ್ರಹಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 98440 06736 ಸಂಪರ್ಕಿಸಬಹುದು

MESCOM ಮಾರ್ಚ್ 14. ಕೂಡ್ಲಿ,ಚಿಕ್ಕೂಡ್ಲಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ಎಂ.ಆರ್.ಎಸ್.220/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಮಾರ್ಚ್ 14 ರಂದು ಬೆಳಗ್ಗೆ 9.30 ರಿಂದ ಸಂಜೆ 6.00ರವರೆಗೆ ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಸಕ್ರೇಬೈಲು, ಹೊಳಲೂರು, ಮಡಿಕೆಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚಿನ್ನಮುಂಬಾಪುರ, ಮತ್ತೋಡು, ರತ್ನಗಿರಿನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೋಂಧಿಚಟ್ನಹಳ್ಳಿ, MESCOM ಹೊಳೆಹನಸವಾಡಿ, ಕುಂಚೇನಹಳ್ಳಿ, ಬೀರನಕೆರೆ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಮೇಲಿನಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು ಸುತ್ತಮುತ್ತಲಿನ ಜಲ್ಲಿ ಕ್ರಷರ್‌ಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Indian Post ಭಾರತೀಯ ಅಂಚೆ ವ್ಯವಸ್ಥೆ. ಎಲ್ಲರಿಗೂ ಬೇಕಾದ ಅಮೂಲ್ಯ ಮಾಹಿತಿ ಇಲ್ಲಿದೆ

0

Indian Post ಭಾರತದಲ್ಲಿ ಸುಮಾರು 1,64,972 ಅಂಚೆ ಕಛೇರಿಗಳಿವೆ. ಪಟ್ಟಣ ಪ್ರದೇಶದಲ್ಲಿ 15,494 ಅಂಚೆ ಕಛೇರಿಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ 1,49,478 ಅಂಚೆ ಕಛೇರಿಗಳಿವೆ. ಹಿಮಾಚಲ ಪ್ರದೇಶದ ಹಿಕ್ಕಿಮ್ ಗ್ರಾಮದಲ್ಲಿ 1983 ರಲ್ಲಿ ಆರಂಭಗೊಂಡ ಅಂಚೆ ಕಛೇರಿಯು ಸಮುದ್ರ ಮಟ್ಟದಿಂದ ಅತ್ಯಂತ 14,567 ಅಡಿಗಳಷ್ಟು ಎತ್ತರದಲ್ಲಿದ್ದು ಇದು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಎತ್ತರದಲ್ಲಿರುವ ಅಂಚೆ ಕಛೇರಿಯಾಗಿದೆ.

ಭಾರತದಲ್ಲಿ ಅಂಚೆ ಸೇವೆಯಿಂದ ಹೊರತಾದ ಒಂದು ಚಿಕ್ಕ ಭೂಪ್ರದೇಶವೂ ಇಲ್ಲ. ಕಾಶ್ಮೀರವೇ ಇರಲಿ, ಥಾರ್ ಮರು ಭೂಮಿಯೇ ಇರಲಿ, ಕನ್ಯಾಕುಮಾರಿಯೇ ಇರಲಿ ಭಾರತದ ಯಾವ ಮೂಲೆಯಲ್ಲಿರುವ ಯಾವ ಹಳ್ಳಿಯೇ ಇರಲಿ, ಅಲ್ಲೆಲ್ಲ ಅಂಚೆ ಸೇವೆ ಲಭ್ಯವಿದೆ. ಅಲ್ಲೆಲ್ಲ ಅಂಚೆ ಅಣ್ಣನ ಪತ್ರ ಬಟವಾಡೆ, ಮನಿಯಾರ್ಡರ್ ಪಾವತಿ/ ಬ್ಯಾಕಿಂಗ್ ಸೇವೆಗಳು ನಿರಂತರವಾಗಿ ಜನರಿಗೆ ಲಭ್ಯವಾಗುತ್ತದೆ.

ಇಂತಹ ವಿಶಿಷ್ಟವಾದ ಭಾರತೀಯ ಅಂಚೆ ವ್ಯವಸ್ಥೆಗೆ ಅನೇಕ ಶತಮಾನಗಳ ಇತಿಹಾಸವಿದೆ. ಭಾರತದ ಮೊತ್ತ ಮೊದಲ ಅಂಚೆ ಕಛೇರಿ 1727 ರಲ್ಲಿ ಕಲ್ಕತ್ತಾದಲ್ಲಿ ಪ್ರಾರಂಭವಾಯಿತು. ನಂತರ ಇದು ಪ್ರೆಸಿಡೆನ್ಸಿ ಅಂಚೆ ಕಛೇರಿಯಾಗಿ 1774 ರಲ್ಲಿ ಉನ್ನತಿಕರಣಗೊಂಡಿತು. 1786 ರಲ್ಲಿ ಮದ್ರಾಸಿನಲ್ಲಿ ಅಂದರೆ ಈಗಿನ ಚನ್ನೈನಲ್ಲಿ ಮತ್ತು 1793 ರಲ್ಲಿ ಮುಂಬೈಯಲ್ಲಿ ಪ್ರೆಸಿಡೆನ್ಸಿ ಅಂಚೆ ಕಛೇರಿಗಳು ಆರಂಭಗೊAಡವು. ನಂತರ ದೇಶದೆಲ್ಲೆಡೆ ಅಂಚೆ ಕಛೇರಿಗಳು ಆರಂಭವಾಗುತ್ತ ಬಂದು, ಅಂಚೆ ಸೇವೆಯು ಒಂದು ಸಾಂಸ್ಥಿಕ ರೂಪವನ್ನು ಪಡೆಯುತ್ತಿದಂತೆ ಮೊದಲ ಅಂಚೆ ಕಚೇರಿ ಕಾಯಿದೆಯು 1837 ರಲ್ಲಿ ಜಾರಿಗೆ ಬಂದಿತು.

ನಂತರ 1854 ರಲ್ಲಿ ಹೊಸ ಕಾಯಿದೆಯು ಜಾರಿಗೆ ಬಂತು. ಆ ಕಾಯಿದೆಯು ಅನೇಕ ಬಾರಿ ಪರಿಷ್ಕರಣೆಗೊಂಡು, 1866 ರಲ್ಲಿ ಇನ್ನೂಂದು ಕಾಯಿದೆ ಜಾರಿಗೆ ಬಂತು. ಈ 1866 ರ ಕಾಯಿದೆಗೆ 1882, 1895 ಮತ್ತು 1896 ರಲ್ಲಿ ಅನೇಕ ಪರಿಷ್ಕರಣೆಗಳಾದವು.

ನಂತರ 1898 ರಲ್ಲಿ ಪರಿಷ್ಕೃತ ಅಂಚೆ ಕಛೇರಿ ಕಾಯಿದೆ ಜಾರಿಯಾಯಿತು. ನಂತರದ ವರ್ಷಗಳಲ್ಲಿ ಅಂಚೆ ಸೇವೆಯಲ್ಲಿ ಅನೇಕ ಮಾರ್ಪಾಡುಗಳಾದವು. ಇತ್ತೀಚಿನ ದಿನಗಳಲ್ಲಿ ಅನೇಕ ಹೊಸ ಸೇವೆಗಳ ಅಂಚೆ ಸೇವೆಯು ನಾವೀನ್ಯತೆಯನ್ನು ಪಡೆದು ಜನಜೀವನದ ಅವಿಭಾಜ್ಯ ಅಂಗವಾಗಿದೆ.

ಬದಲಾಗುತ್ತಿರುವ ಕಾಲದ ಅಗತ್ಯಕ್ಕೆ ತಕ್ಕಂತೆ ಜನರಿಗೆ ಅತ್ಯುತ್ತಮ ಸೇವೆಯನ್ನು ನೀಡಲು ಭಾರತ ಸರ್ಕಾರವು ನೂತನವಾಗಿ ‘ಅಂಚೆ ಕಛೇರಿ ಕಾಯಿದೆ 2023’ ನ್ನು ಜಾರಿಗೊಳಿಸಿದೆ. ಈ ಹೊಸ ಕಾಯಿದೆಯು 18 ನೇ ಜೂನ್ 2024 ರಿಂದ ಭಾರತದಾದ್ಯಂತ ಜಾರಿಗೊಂಡಿದ್ದು, 1898ರ ಹಳೆಯ ಕಾಯಿದೆಯು ರದ್ದುಗೊಂಡಿದೆ.
1898 ರ ಕಾಯಿದೆಯನ್ನು ಹೋಲಿಸಿದರೆ 2023 ರ ಕಾಯಿದೆಯಲ್ಲಿ ಅನೇಕ ವಿಶೇಷತೆಗಳಿವೆ ಹಳೆಯ ಕಾಯಿದೆಯಲ್ಲಿ 77 ಸೆಕ್ಷನ್‌ಗಳಿದ್ದವು. ಈಗಿನ ಕಾಯಿದೆಯಲ್ಲಿ 16 ಸಕ್ಷನ್‌ಗಳಿವೆ ಮತ್ತು ಸರಳವಾದ ಭಾಷೆಯಲ್ಲಿದೆ.

ಅಂಚೆ ಕಛೇರಿ ಕಾಯಿದೆ 2023 ರ ಅಡಿಯಲ್ಲಿ ಹೊಸದಾಗಿ ಅಂಚೆ ಕಚೇರಿ ರೆಗ್ಯುಲೇಷನ್ 2024 ಮತ್ತು ಅಂಚೆ ಕಚೇರಿ ರೆಗ್ಯುಲೇಷನ್ 2024 ಡಿಸೆಂಬರ್ 16,2024 ರಿಂದ ಜಾರಿಗೆ ಬಂದಿದೆ. ಇದರಿಂದಾಗಿ 1933 ರ ಅಂಚೆ ಕಛೇರಿ ನಿಯಮಾವಳಿ ರದ್ದುಗೊಂಡಿದೆ. ಅದರಲ್ಲಿ 225 ನಿಯಮಾವಳಿಗಳಿದ್ದವು.

ಈಗ ಕೇವಲ 19 ನಿಯಮಾವಳಿಗಳಿದ್ದು ಸರಳೀಕೃತಗೊಳಿಸಲಾಗಿದೆ. ಅಂಚೆ ಕಛೇರಿ ರೆಗ್ಯುಲೇಷನ್ 2024 ರಲ್ಲಿ 180 ರೆಗ್ಯುಲೇಷನ್‌ಗಳಿವೆ. ಅಂಚೆ ಸೇವೆಯನ್ನು ಇನ್ನಷ್ಟು ಜನಸ್ನೇಹಿಗೊಳಿಸಲು ಈ ಕಾಯಿದೆ, ನಿಯಮಾವಳಿ ಮತ್ತು ರೆಗ್ಯುಲೇಷನ್ ಸಹಕಾರಿಯಾಗಲಿದೆ. ಅಂಚೆ ಚೀಟಿಯನ್ನು ತಯಾರಿಸುವ, ಅದನ್ನು ಬಿಡುಗಡೆಗೊಳಿಸುವ ಅಧಿಕಾರ ಅಂಚೆ ಇಲಾಖೆಗೆ ಮಾತ್ರ ಇದೆ. ಈಗಿರುವ ‘ಪಿನ್ ಕೋಡ್’ ವ್ಯವಸ್ಥೆಯ ಜೊತೆಗೆ ವಿಳಾಸದಾರರನ್ನು ಕ್ಷಿಪ್ರವಾಗಿ ತಲುಪಲು ‘ಪೋಸ್ಟ್ ಕೋಡ್’ ಎಂಬ ಇನ್ನೂಂದು ಹೊಸ ವ್ಯವಸ್ಥೆ ಕೊಡ ಜಾರಿಗೆ ಬರಲಿದೆ.
ಭಾರತದಿಂದ ವಿದೇಶಗಳಿಗೆ ರವಾನಿಸಲ್ಪಡುವ ಮತ್ತು ವಿದೇಶಗಳಿಂದ ಭಾರತಕ್ಕೆ ರವಾನಿಸಲ್ಪಡುವ ಪತ್ರ, ಪಾರ್ಸೆಲ್‌ಗಳ ಬಟವಾಡೆಯಲ್ಲಿ ಉತ್ಕೃಷ್ಠ ಸೇವೆ ನೀಡಲು ವಿದೇಶಗಳೊಡನೆ ವಿಶೇಷ ಸಂವಹನ ಸಾಧಿಸಲು ಹೊಸ ಕಾಯಿದೆ ಅನುವು ಮಾಡಿಕೊಡಲಿದೆ.

Indian Post ಪತ್ರಗಳ ಮೇಲೆ, ಪಾರ್ಸೆಲ್‌ಗಳ ಮೇಲೆ ಅಂಚೆ ಕಛೇರಿಯಿಂದ ಮಾಡಲಾಗುವ ಗುರುತು ಅಥವಾ ಷರಾಗಳಿಗೆ ಕಾನೂನಿನಲ್ಲಿ ವಿಶೇಷ ಮಾನ್ಯತೆಯು ದೊರಕಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಕಚೇರಿ ಪಾವತಿಯಾಗಲು ಬಾಕಿಯಾದ ಮೊತ್ತವನ್ನು ಪಡೆಯಲು ಕಾನೂನಾತ್ಮಕ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ರಾಷ್ಟçದ ರಕ್ಷಣೆ ಮತ್ತು ಸಾರ್ವಜನಿಕ ಹಿತದೃಷ್ಠಿಯಿಂದ ಅಂಚೆ ಕಛೇರಿಯ ಮೂಲಕ ರವಾನೆಯಾಗುತ್ತಿರುವ ಯಾವುದೇ ವಸ್ತುವನ್ನು ಅಗತ್ಯ ಸಂದರ್ಭಗಳಲ್ಲಿ ಪ್ರತಿಬಂಧಿಸಿ, ಅದನ್ನು ಸಕ್ಷಮ ಪ್ರಾಧಿಕಾರದ ಮುಂದೆ ಹಾಜರುಪಡಿಸಿ ಮುಂದಿನ ತನಿಖೆಗೆ ಒಳಪಡಿಸುವ ಅವಕಾಶ ಈ ಕಾಯಿದೆಯಲ್ಲಿದೆ.

ಅದಕ್ಕೆ ನಿರ್ದಿಷ್ಠ ಅಂಚೆ ಪ್ರಾಧಿಕಾರದಿಂದ ಒಪ್ಪಿಗೆಯನ್ನು ಪಡೆಯಬೇಕು ಮತ್ತು ಸೂಚಿತ ವಿಧಾನವನ್ನು ಅನುಸರಿಸಬೇಕಾಗುತ್ತದೆ.
ಅಂಚೆ ಸೇವೆಗಳಲ್ಲೂ ಕೆಲವು ಬದಲಾವಣೆಗಳು 16 ನೇ ಡಿಸೆಂಬರ್ 2024 ರಿಂದ ಜಾರಿಗೆ ಬಂದಿದೆ. ಪತ್ರಗಳನ್ನು ಮೊದಲು 2 ಕಿ.ಲೋ ಗ್ರಾಂ ವರೆಗೆ ಕಳುಹಿಸಬಹುದಾಗಿತ್ತು ಈಗ 500 ಗ್ರಾಂ ವರೆಗೆ ಪತ್ರಗಳಿಗೆ ಅವಕಾಶವಿದೆ. ಅದಕ್ಕಿಂತ ಜಾಸ್ತಿ ಇದ್ದರೆ ಅದು ‘ಇಂಡಿಯಾ ಪೋಸ್ಟ್ ಪಾರ್ಸೆಲ್’ ಎಂದು ಪರಿಗಣಿತವಾಗುತ್ತದೆ. ಈ ಮೊದಲು ಇದ್ದ ‘ರಿಜಿಸ್ಟರ್ಡ್ ಪಾರ್ಸಲ್’ ಈಗ ‘ಇಂಡಿಯಾ ಪೋಸ್ಟ್ ಪಾರ್ಸೆಲ್’ ಎಂದು ಬದಲಾವಣೆಗೊಂಡಿದೆ. 35 ಕಿಲೋ ಗ್ರಾಂ ವರೆಗೂ ‘ಇಂಡಿಯಾ ಪೋಸ್ಟ್ ಪಾರ್ಸೇಲ್’ ಅಥವಾ ‘ಸ್ಪೀಡ್ ಪೋಸ್ಟ್ ಪಾರ್ಸೇಲ್’ ಗಳನ್ನು ಕಳುಹಿಸಬಹುದಾಗಿದೆ. ನೊಂದಾಯಿತವಲ್ಲದ ಅಂದರೆ ‘ಅನ್‌ರಿಜಿಸ್ಟರ್ಡ್ ಪಾರ್ಸೆಲ್ ಸೇವೆ’ ಈಗ ಇರುವುದಿಲ್ಲ. ಇಂಡಿಯಾ ಪೋಸ್ಟ್ ಪಾರ್ಸೆಲ್ ಅಥವಾ ಸ್ಪೀಡ್ ಪೋಸ್ಟ್ ಪಾರ್ಸೆಲ್‌ನ್ನು ಕಳುಹಿಸುವಾಗ ಒಂದು ಸ್ವಯಂ ಘೋಷಣೆಯ ಫಾರಂ ಅನ್ನು ಗ್ರಾಹಕರು ಭರ್ತಿ ಮಾಡಿ ಅಂಚೆ ಕಛೇರಿಗೆ ಸಲ್ಲಿಸಬೇಕಾಗುತ್ತದೆ.

ಈ ಮೊದಲು ‘ಬುಕ್ ಪೋಸ್ಟ್’ ಅಂದರೆ ‘ತೆರೆದ ಅಂಚೆ’ ಯಲ್ಲಿ 6 ವಿಧಗಳಿದ್ದವು. ಆದರೆ ಈಗ ನೋಂದಾಯಿತ ವೃತ್ತ ಪತ್ರಿಕೆ, ನಿಯತಕಾಲಿಕ, ಬ್ಲೆöÊಂಡ್ ಲಿಟರೇಚರ್ ಮತ್ತು ಸಾಮಾನ್ಯ ತೆರೆದ ಅಂಚೆ ಎಂಬ 4 ತರಹದ ಬುಕ್ ಪೋಸ್ಟ್ ಸೇವೆಗಳು ಲಭ್ಯವಿದೆ.

ಅಂಚೆ ಕಾರ್ಡಿನಲ್ಲಿ ಈ ಮೊದಲು 4 ವಿಧಗಳಿದ್ದು ಈಗ ಒಂದೇ ವಿಧವಿದೆ. ಅಂಚೆ ಕಾರ್ಡ್ನ್ನು ನೋಂದಾಯಿತ ಅಂಚೆಯಲ್ಲಿ ಕೂಡಾ ನಿಗಧಿತ ಶುಲ್ಕ ಪಾವತಿಸಿ ಕಳುಹಿಸಬಹುದಾಗಿದೆ.

ನೋಂದಾಯಿತ ವೃತ್ತ ಪತ್ರಿಕೆ ಅಂದರೆ ರಿಜಿಸ್ಟರ್ಡ್ ನ್ಯೂಸ್ ಪೇಪರ್ ಗರಿಷ್ಠ ವಾರಕ್ಕೂಮ್ಮೆಯಾದರೂ ಪ್ರಕಟವಾಗುತ್ತಿದಲ್ಲಿ ಮಾತ್ರ ಅಂಚೆ ಇಲಾಖೆಯಲ್ಲಿ ನೋಂದಾಯಿಸಿ ವಿನಾಯಿತಿ ದರದಲ್ಲಿ ರವಾನಿಸಬಹುದಾಗಿದೆ.

ಪಾಕ್ಷಿಕ, ಮಾಸಿಕ ತ್ರೈಮಾಸಿಕ, ವಾರ್ಷಿಕ ಇತ್ಯಾದಿ ಪತ್ರಿಕೆಗಳನ್ನು ತೆರೆದ ಅಂಚೆಯಲ್ಲಿ ನಿಯತಕಾಲಿಕ ವರ್ಗದಡಿ ಅದಕ್ಕೆ ಅನ್ವಯಿಸುವ ಅಂಚೆದರವನ್ನು ಪಾವತಿಸುವ ಮೂಲಕ ಕಳುಹಿಸಬಹುದು. ಇಂತಹ ಪತ್ರಿಕೆಗಳನ್ನು ಅಂಚೆ ಇಲಾಖೆಯಲ್ಲಿ ಪ್ರತ್ಯೇಕವಾಗಿ ನೋಂದಾಯಿಸುದಿಲ್ಲ.

ಆದರೆ ಆ ವೃತ್ತ ಪತ್ರಿಕೆಗಳು ಪ್ರೆಸ್ ಎಂಡ್ ರಿಜಿಸ್ಟೇಶನ್ ಆಫ್ ಪಿರಿಯಾಡಿಕಲ್ಸ್ ಆಕ್ಟ್ 2023 ರ ಅಡಿಯಲ್ಲಿ ನೋಂದಾಯಿತವಾಗಿರಬೇಕು.
ಈ ಮೂದಲು ಇದ್ದ ‘ವ್ಯಾಲ್ಯೂ ಪೇಯೇಬಲ್ ಪೋಸ್ಟ್’ ಅಂದರೆ ‘ವಿ.ಪಿ.ಪಿ’ ಸೇವೆಯು ಈಗ ಲಭ್ಯವಿರುವದಿಲ್ಲ. ಆದರ ಬದಲಾಗಿ ಹೆಚ್ಚು ಅನುಕೂಲತೆಗಳಿರುವ ‘ಕ್ಯಾಶ್ ಆನ್ ಡೆಲಿವರಿ’ ಅಂದರೆ ಬಟವಾಡೆಯ ಸಮಯದಲ್ಲಿ ಹಣ ಪಾವತಿ ಮಾಡಿ ತೆಗೆದುಕೊಳ್ಳುವ ಸೇವೆ ಲಭ್ಯವಿದೆ. ಈಗ ರಿಟೈಲ್ ಗ್ರಾಹಕರಿಗೂ ಈ ಸೇವೆ ಲಭ್ಯವಿದೆ. ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಮೊದಲು ರೂ. 1,2,5,7,10,20,50 ಮತ್ತು 100 ರೂ. ಮುಖ ಬೆಲೆಗಳಲ್ಲಿ ಲಭ್ಯವಿದ್ದವು. ಈಗ ರೂ. 10,20,50 ಮತ್ತು 100ರ ಮುಖ ಬೆಲೆಯಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಗಳು ಲಭ್ಯವಿದೆ.

ಈ ಮೊದಲು ಮನಿಯಾರ್ಡರ್‌ಗಳನ್ನು ಕಳುಹಿಸುವಾಗ ಪ್ರತಿ ಮನಿಯಾರ್ಡರಿನ ಮೊತ್ತ ರೂ.5000/- ಮೀರುವಂತಿರಲಿಲ್ಲ. ಆದರೆ ಈಗ ರೂ. 10,000/-ದ ವರೆಗೂ ಮನಿಯಾರ್ಡರ್‌ಗಳನ್ನು ಕಳುಹಿಸಬಹುದಾಗಿದೆ. ಅಲ್ಲದೇ ಯಾವುದೇ ವ್ಯಕ್ತಿಯು ಮನಿಯಾರ್ಡರ್ ಮೂಲಕ ಪ್ರತಿ ತಿಂಗಳು ಪಡೆಯಬಹುದಾದ ಹಣ ರೂ.25000/- ವನ್ನು ಮೀರುವಂತಿಲ್ಲ. ಇದು ವೈಯಕ್ತಿಕವಾಗಿ ಕಳುಹಿಸಲ್ಪಡುವ ಮನಿಯಾರ್ಡರಿಗೆ ಅನ್ವಯಿಸುತ್ತದೆ.

ಹೀಗೆ ಬದಲಾದ ಕಾಲಘಟ್ಟದಲ್ಲಿ ಗ್ರಾಹಕರ ಹಿತ, ಗ್ರಾಹಕರ ಸುರಕ್ಷತೆ ಹಾಗೂ ರಾಷ್ಟçದ ಸುರಕ್ಷತೆಗಳಿಗೆ ಪೂರಕವಾಗಿ ಅಂಚೆ ಕಛೇರಿ ಕಾಯಿದೆ 2023, ಅಂಚೆ ಕಚೇರಿ ನಿಯಾಮವಳಿ 2024 ಹಾಗೂ ಅಂಚೆ ಕಚೇರಿ ರೆಗ್ಯುಲೇಷನ್ 2024 ಜಾರಿಗೆ ಬಂದಿದೆ. ವಿಶಾಲವಾದ ಭಾರತ ದೇಶದಲ್ಲಿ ಬಹುದೊಡ್ಡ ಸೇವಾ ಜಾಲದ ಮೂಲಕ ಅಂಚೆ ಕಛೇರಿಗಳು ಜನರ ದೈನಂದಿನ ಜೀವನದಲ್ಲಿ ಅತ್ಯಮೂಲ್ಯವಾದ ಪಾತ್ರವನ್ನು ವಹಿಸುತ್ತದೆ. ಹೊಸ ಅಂಚೆ ಕಛೇರಿ ಕಾಯಿದೆ.

ನಿಯಮಾವಳಿ ಮತ್ತು ರೆಗ್ಯುಲೇಷನ್‌ಗಳ ಅಡಿಯಲ್ಲಿ ಅಂಚೆ ಕಚೇರಿಗಳು ಇನ್ನಷ್ಟು ಉತ್ತಮ ಸೇವೆಯನ್ನು ಜನರಿಗೆ ನೀಡಲಿದೆ ಎಂದು ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

State Film Awards 2020 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆ

0

State Film Awards 2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ 2020ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದ ಒಟ್ಟು 71 ಚಲನಚಿತ್ರಗಳನ್ನು ವೀಕ್ಷಿಸುವಾಗ ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ ನೀಡುವ ಪ್ರಮಾಣ ಪತ್ರಗಳನ್ನು ಆರಂಭದಲ್ಲಿಯೇ ಪರಿಶೀಲಿಸಿದ್ದು ಸಮಿತಿಯು ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ, ಒಮ್ಮತದಿಂದ ಕನ್ನಡ ಭಾಷೆಯ 1) ಭುಗಿಲು, 2)ಕನಸು ಮಾರಾಟಕ್ಕಿದೆ, 3)ಡೊಳ್ಳು, 4) ಕಲ್ಯಾಣ ಕುವರ ಹಾಗೂ ತುಳು ಪ್ರಾದೇಶಿಕ ಭಾಷೆಯ 5) ಶಕಲಕ ಬೂಮ್ ಬೂಮ್ ಚಲನಚಿತ್ರಗಳನ್ನು ವೀಕ್ಷಿಸಿರುವುದಿಲ್ಲ.

State Film Awards ಈ ಚಲನಚಿತ್ರಗಳು 2020ನೇ ಕ್ಯಾಲೆಂಡರ್ ವರ್ಷದಲ್ಲಿ ಪ್ರಮಾಣ ಪತ್ರ ಪಡೆದುಕೊಂಡಿದ್ದರೂ, ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಂಡು ಮುಂದಿನ ವರ್ಷಗಳಿಗೆ ಅನುಮೋದಿತ ಮರು ಪ್ರಮಾಣಪತ್ರ ಪಡೆದುಕೊಂಡಿದ್ದ ಹಿನ್ನೆಲೆಯಲ್ಲಿ ಮೇಲ್ಕಂಡ ಚಲನಚಿತ್ರಗಳನ್ನು ಆಯಾ ವರ್ಷಕ್ಕೆ ಅನ್ವಯಿಸಿಕೊಂಡು ಮರು ಅರ್ಜಿ ಸಲ್ಲಿಸಲು ಅವಕಾಶವಿರುವ ಹಿನ್ನೆಲೆಯಲ್ಲಿ ಈ ಚಿತ್ರಗಳನ್ನು ಸಮಿತಿಯು ವೀಕ್ಷಿಸಿರುವುದಿಲ್ಲ. ಈ ಐದು ಚಲನಚಿತ್ರಗಳನ್ನು ಹೊರತು ಪಡಿಸಿ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯು 66 ಚಲನಚಿತ್ರಗಳನ್ನು ವೀಕ್ಷಿಸಿ, 2020ನೇ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಾಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆಯೆಂದು ತಿಳಿಸುತ್ತಾ, ಪ್ರಶಸ್ತಿಗಳ ವಿವರಗಳನ್ನೊಳಗೊಂಡ ಅನುಬಂಧ-1ರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ

Klive Special ಹೆತ್ತವಳಿಗೊಂದು ಕವನ-ನಮನ

0

Klive Special ದೇವರ ಸ್ವರೂಪ

ಗರ್ಭದಲ್ಲಿ ಹೊತ್ತು
ನವಮಾಸಕ್ಕೆ ಹೆತ್ತು
ಮೌಲ್ಯಗಳನ್ನೇ ಬಿತ್ತು
ಸಲಹಿದೆ ನೀಡಿ ಕೈತುತ್ತು

ಅಮ್ಮ ನಿನ್ನೊಲವು
ಅದುವೇ ಬಣ್ಣಿಸಲಸದಳವು
ಜಗಕ್ಕೆ ನೀ ಜೀವಾಮೃತವು
ನೀನಾದೆ ದೇವರ ಸ್ವರೂಪವು

ಅದೆಂತಹ ಮಮತೆ ನಿನ್ನಲ್ಲಿ
ನಿನ್ನ ಸಾಂಗತ್ಯವೇ ಸ್ವರ್ಗವಿಲ್ಲಿ
ಜಗ ಮರೆತೆ ನಿನ್ನ ಮಡಿಲಿನಲ್ಲಿ
ನಿನ್ನಿಂದಲೇ ಸಿಕ್ಕಿದ ಭಾಗ್ಯವಿಲ್ಲಿ

ಜೀವಕ್ಕೆ ಜೀವವಾಗಿ
ಸಹನೆಯ ಮೂರ್ತಿಯಾಗಿ
ವಾತ್ಸಲ್ಯದ ಅಮೃತಧಾರೆಯಾಗಿ
ದೇವರ ರಾಯಭಾರಿ ನೀನಾಗಿ

ನಿನ್ನ ಅಂತರಾಳದ ಭಾವ
ಮರೆ ಮಾಚಿದೇ ನಿನ್ನೆಲ್ಲ ನೋವ
ಮರೆಯಲುಂಟೇ ನೀ ತುಂಬಿದ ಛಲವ
ತೀರಿಸಲಾಗದು ಆ ನಿನ್ನ ಋಣವ

ಶೋಭಾ ಸತೀಶ್
ಸ.ಹಿ.ಪ್ರಾ.ಶಾಲೆ, ಚಿಲಕಾದ್ರಿಹಳ್ಳಿ
ದೂ.ಸ 8762603511