Monday, March 9, 2026
Monday, March 9, 2026
Home Blog Page 374

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

0

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ ರಿಲಯನ್ಸ್ ರಿಟೇಲ್ ಲಿ., ರಿಲಯನ್ಸ್ ಡಿಜಿಟಲ್ ಶಿವಮೊಗ್ಗ ಇವರ ವಿರುದ್ದ ರೆಫ್ರಿಜರೇಟರ್‌ಗೆ ಸಂಬಂಧಿಸಿದಂತೆ ಸೇವಾನ್ಯೂನತೆ ಕುರಿತು ಸಲ್ಲಿಸಿದ್ದ ದೂರನ್ನು ಪುರಸ್ಕರಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.

ಅರ್ಜಿದಾರರಾದ ಎಸ್ ವಿ ಲೋಹಿತಾಶ್ವ ಇವರು ರಿಲಯನ್ಸ್ ಡಿಜಿಟಲ್ ಶಿವಮೊಗ್ಗ ಇಲ್ಲಿ ರೆಫ್ರಿಜರೇಟರ್‌ನ್ನು ಕೊಂಡಿದ್ದು 02 ವರ್ಷಗಳ ವಾರಂಟಿ ನೀಡಿರುತ್ತಾರೆ. ಸದರಿ ರೆಫ್ರಿಜರೇಟರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಹಾಗೂ ಕೂಲ್ ಆಗುತ್ತಿಲ್ಲವೆಂದು ಎದುರುದಾರರಿಗೆ ಹಲವಾರು ಬಾರಿ ದೂರಿತ್ತರೂ ಹಾಗೂ ರೆಫ್ರಿಜರೇಟರ್ ವಾರಂಟಿ ಅವಧಿಯೊಳಗಿದ್ದರೂ ಎದುರುದಾರರು ರೆಫ್ರಿಜರೇಟರ್‌ನ್ನು ರಿಪೇರಿ ಮಾಡದೇ ಸೇವಾ ನ್ಯೂನತೆ ಎಸಗಿದ್ದಾರೆಂದು ಆಯೋಗದ ಮುಂದೆ ದೂರನ್ನು ಸಲ್ಲಿಸಿರುತ್ತಾರೆ.

ಆಯೋಗದ ನೋಟಿಸ್‌ಗೂ ಹಾಜರಾಗದ ಕಾರಣ ಎದುರುದಾರರನ್ನು ಏಕ ಪಕ್ಷೀಯವೆಂದು ಮಾಡಿ, ದೂರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ದೂರುದಾರ ವಕೀಲರ ವಾದವನ್ನು ಆಲಿಸಿದ ಆಯೋಗವು, ದೂರುದಾರರು ಹಲವಾರು ಬಾರಿ ರೆಫ್ರಿಜರೇಟರನ್ನು ರಿಪೇರಿ ಮಾಡಿಕೊಡಲು ವಿನಂತಿಸಿರುವುದು ದಾಖಲೆಗಳಿಂದ ಸಾಬೀತಾಗಿರುವುದಾಗಿ ಮತ್ತು ದೂರುದಾರರು ಸಲ್ಲಿಸಿರುವ ದಾಖಲೆಗಳನ್ನಾಗಲಿ ಅಥವಾ ದೂರುದಾರರು ಮಾಡಿರುವ ಆರೋಪವನ್ನಾಗಲಿ ಅಲ್ಲಗಳೆಯಲು ಎದುರುದಾರರು ಈ ಆಯೋಗದ ಮುಂದೆ ಹಾಜರಾಗಿ ಯಾವುದೇ ದಾಖಲೆಗಳನ್ನು ಸಲ್ಲಿಸಿರುವುದಿಲ್ಲವಾದ್ದರಿಂದ ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಲಾಗಿದೆ.

District Consumer Disputes Redressal Commission ಎದುರುದಾರರು ಈ ಆದೇಶವಾದ 45 ದಿನಗಳ ಒಳಗಾಗಿ ರೆಫ್ರಿಜರೇಟರ್‌ನ್ನು ರಿಪೇರಿ ಮಾಡಿ ನೀಡಬೇಕು ಹಾಗೂ ಒಂದು ವೇಳೆ ರಿಪೇರಿ ಮಾಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ, ದೂರುದಾರರು ರೆಫ್ರಿಜರೇಟರ್‌ನ್ನು ಒಂದೂವರೆ ವರ್ಷಗಳ ಕಾಲ ಉಪಯೋಗಿಸುವುದರಿಂದ ಖರೀದಿ ಬೆಲೆಗೆ ಶೇ.10 ಸವಕಳಿಯನ್ನು ಹಾಗೂ ಜಿಎಸ್‌ಟಿಯನ್ನು ಕಳೆದು ರೂ.27,312 ನ್ನು ದೂರುದಾರರಿಂದ ರೆಫ್ರಿಜರೇಟರ್ ಹಿಂಪಡೆದು ನೀಡಲು ಹಾಗೂ ರೂ.5,000/- ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ, ಸದಸ್ಯರಾದ ಬಿ.ಡಿಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಮಾ.11 ರಂದು ಆದೇಶಿಸಿದೆ

Child Labour ಬಾಲಕಾರ್ಮಿಕರನ್ನ ನೇಮಿಸಿಕೊಂಡರೆ ಮಾಲೀಕರಿಗೆ ₹50.000 ದಂಡ & 2 ವರ್ಷ ಜೈಲು

0

Child Labour 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದು ಮತ್ತು 18 ವರ್ಷದೊಳಗಿನ ಕಿಶೋರ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ನೇಮಿಸಿಕೊಂಡ ಮಾಲೀಕರಿಗೆ ರೂ.50,000 ವರೆಗೆ ದಂಡ ಹಾಗೂ 2 ವರ್ಷದವರೆಗಿನ ಸೆರೆಮನೆ ವಾಸದ ಶಿಕ್ಷೆ ಇದ್ದು ತಪ್ಪಿತಸ್ಥ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು. ಹಾಗೂ ಕೆಲಸಕ್ಕೆ ಸೇರಿಸಿದ ಪಾಲಕರ ಮೇಲೆಯೂ ದಂಡ ವಿಧಿಸಲಾಗುವುದು. ಇಂತಹ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರು ಜಿಲ್ಲೆಯಲ್ಲಿ ಎಲ್ಲಿಯಾದರೂ ಕಂಡು ಬಂದರೆ ಮಕ್ಕಳ ಸಹಾಯವಾಣಿ 1098/112 ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬಹುದು.

ಜಿಲ್ಲೆಯಾದ್ಯಂತ ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಕಾರ್ಯಾಚರಣೆ ನಡೆಯುತ್ತಿದ್ದು ಮಕ್ಕಳ ಸಹಾಯವಾಣಿಗೆ ಬಂದ ದೂರಿನ ಅನ್ವಯ ಇತ್ತೀಚೆಗೆ ಶಿವಮೊಗ್ಗದ ಪ್ರತಿಷ್ಟಿತ ಹೋಟೆಲ್ ಹಾಗೂ ಶಿಕಾರಿಪುರ ತಾಲ್ಲೂಕಿನ ಆಟೋಮೊಬೈಲ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕರನ್ನು ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಸ್ಥಳ ಭೇಟಿ ಮಾಡಿ ಬಾಲಕರನ್ನು ರಕ್ಷಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಸ್ಥಳ ಭೇಟಿ ಮಾಡಿ ಬಾಲಕರನ್ನು ರಕ್ಷಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿರುತ್ತಾರೆ.

ಮಕ್ಕಳ ಕಲ್ಯಾಣ ಸಮಿತಿ ಸಭೆಯಲ್ಲಿ ಮಕ್ಕಳು ಹಾಗೂ ಪೋಷಕರನ್ನು ವಿಚಾರಣೆ ಮಾಡಲಾಗಿ ಮಕ್ಕಳು ಬಾಲಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದುದನ್ನು ಖಾತ್ರಿಪಡಿಸಿಕೊಂಡು ಸಂಬಂಧಪಟ್ಟ ಮಾಲೀಕರ ವಿರುದ್ದ ಬಾಲಕಾರ್ಮಿಕ/ಕಿಶೋರ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ ಕಾಯ್ದೆ-1986 ಹಾಗೂ ತಿದ್ದುಪಡಿ ಕಾಯ್ದೆ 2016)ರಡಿಯಲ್ಲಿ ಪ್ರಕರಣ ದಾಖಲಿಸುವಂತೆ ಕಾರ್ಮಿಕ ಇಲಾಖೆಗೆ ನಿರ್ದೇಶನ ನೀಡಿದ್ದು, ಇದರನ್ವಯ ಇಲಾಖೆಯಿಂದ ಮಾಲೀಕರ ವಿರುದ್ದ ಪ್ರಕರಣ ದಾಖಲಾಗಿದ್ದು ಮಕ್ಕಳ ಪುನರ್ವಸತಿಗಾಗಿ ಮಾಲೀಕರಿಂದ ರೂ.20,000 ಕಾರ್ಪಸ್ ನಿಧಿಯನ್ನು ವಸೂಲಿ ಮಾಡಲಾಗಿರುತ್ತದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಖಾನ್ ತಿಳಿಸಿದ್ದಾರೆ.

Annabhagya Yojana ಇನ್ನುಮುಂದೆ ಫಲಾನುಭವಿಗಳಿಗೆ ನಗದು ಬದಲಾಗಿ ಹೆಚ್ಚುವರಿ 5 ಕೆಜಿ ವಿತರಣೆ

0

Annabhagya Yojana ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ಅಂತ್ಯೋದಯ ಅನ್ನಭಾಗ್ಯ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಪಡಿತರ ಚೀಟಿಯ ಕುಟುಂಬ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮುಖಾಂತರ ಅಕ್ಕಿ ಹಣವನ್ನು ವರ್ಗಾಯಿಸುವ ಪ್ರಕ್ರಿಯೆ ಬದಲಾಗಿ 2025 ರ ಫೆಬ್ರವರಿ ಮಾಹೆಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿ ವಿತರಣೆ ಮಾಡಲು ಆದೇಶಿಸಲಾಗಿದೆ.

ವಿತರಣೆ ಪ್ರಮಾಣ : ಅಂತ್ಯೋದಯ ಪಡಿತರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡಿಗೆ 35 ಕೆ.ಜಿ. ಅಕ್ಕಿ. 4 ಸದಸ್ಯರಿರುವ ಕಾರ್ಡಿಗೆ 45 ಕೆ.ಜಿ. ಅಕ್ಕಿ, 5 ಸದಸ್ಯರರಿರುವ ಕಾರ್ಡಿಗೆ 65 ಕೆ.ಜಿ. ಅಕ್ಕಿ, 6 ಸದಸ್ಯರಿರುವ ಕಾರ್ಡಿಗೆ 85 ಕೆ.ಜಿ. ಅಕ್ಕಿ, 7 ಸದಸ್ಯರಿರುವ ಕಾರ್ಡುದಾರರಿಗೆ 105 ಕೆ.ಜಿ ಅಕ್ಕಿ ,8 ಸದಸ್ಯರಿರುವ ಕಾರ್ಡಿಗೆ 125 ಕೆ.ಜಿ. ಅಕ್ಕಿ, 9 ಸದಸ್ಯರಿರುವ ಕಾರ್ಡಿಗೆ 145 ಕೆ.ಜಿ. ಅಕ್ಕಿ, 10 ಸದಸ್ಯರಿರುವ ಕಾರ್ಡಿಗೆ 165 ಕೆ.ಜಿ. ಅಕ್ಕಿ, 11 ಸದಸ್ಯರಿರುವ ಕಾರ್ಡಿಗೆ 185 ಕೆ.ಜಿ. ಅಕ್ಕಿ, 12 ಸದಸ್ಯರಿರುವ ಕಾರ್ಡಿಗೆ 205 ಕೆಜಿ. ಅಕ್ಕಿಯನ್ನು ಹಾಗೂ ಆದ್ಯತಾ ಪಡಿತರ(ಪಿಪಿಹೆಚ್/ಬಿಪಿಎಲ್) ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರಿಗೆ 15 ಕೆ.ಜಿ. ಅಕ್ಕಿಯನ್ನು ಕೊಡಲಾಗುತ್ತದೆ.
ಪಡಿತರ ಚೀಟಿದಾರರು ಮಾರ್ಚ್ ತಿಂಗಳ ಅಂತ್ಯದವರೆಗೆ ತಮ್ಮ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಕೊಟ್ಟು ರಶೀದಿ ಪಡೆದು ಉಚಿತವಾಗಿ ಆಹಾರಧಾನ್ಯವನ್ನು ಪಡೆದುಕೊಳ್ಳಬಹುದಾಗಿದೆ.

Annabhagya Yojana ಒಂದು ವೇಳೆ ನ್ಯಾಯ ಬೆಲೆ ಅಂಗಡಿಯವರು ಕಡಿಮೆ ಪ್ರಮಾಣದಲ್ಲಿ ಅಕ್ಕಿಯನ್ನು ವಿತರಿಸಿದಲ್ಲಿ. ಟೋಲ್‌ಫ್ರೀ ಸಂ.1967, ಆಹಾರ ನಿರೀಕ್ಷಕರ ಮೊ.ಸಂ. 9611195920 ಗೆ ದೂರು ಸಲ್ಲಿಸಬಹುದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಅನೌಪಚಾರಿಕ ಪಡಿತರ ಪ್ರದೇಶ ಭದ್ರಾವತಿಯ ಸಹಾಯಕ ನಿರ್ದೇಶಕರು(ಪ್ರ) ತಿಳಿಸಿದ್ದಾರೆ.

District Court Shivamogga ಕೊಲೆ ತಪ್ಪಿತಸ್ಥನಿಗೆ ಜೀವಾವಧಿ ಶಿಕ್ಷೆ & ದಂಡ ವಿಧಿಸಿ ಕೋರ್ಟ್ ತೀರ್ಪು

0

District Court Shivamogga ಕೊಲೆ ಆರೋಪಿ ನಗರದ ರೈಲ್ವೇ ಕಾಲೋನಿಯ ಅನಿಲ್‌ಕುಮಾರ್‌ನು ತಪ್ಪಿತಸ್ಥನೆಂದು ತೀರ್ಮಾನಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ ನಾಯಕ ಎಂ ರವರು ಐಪಿಸಿ ಕಲಂ 302 ಅಡಿಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಮತ್ತು ರೂ.50 ಸಾವಿರ ದಂಡ ಮತ್ತು ದಂಡ ಕಟ್ಟಲು ತಪ್ಪಿದಲ್ಲಿ ಪುನಃ 6 ತಿಂಗಳ ಶಿಕ್ಷೆ ವಿಧಿಸಿ ಆದೇಶಿಸಿ ತೀರ್ಪು ನೀಡಿರುತ್ತಾರೆ.
District Court Shivamogga ದಿ: 14-01-2021 ರಂದು ರಾತ್ರಿ 11.15 ರ ಸಮಯದಲ್ಲಿ ಶಿವಮೊಗ್ಗದ ಬಾಪೂಜಿ ನಗರ 1ನೇ ಮುಖ್ಯ ರಸ್ತೆಯ ಗಂಗಾಮತ ಹಾಸ್ಟೆಲ್ ಹತ್ತಿರ ಸಂತೋಷ ಎಂಬಾತನು ಅವೆಂಜರ್ ಬೈಕಿನಲ್ಲಿ ಕುಳಿತಿದ್ದು ಆರೋಪಿ ಅನಿಲ್‌ಕುಮಾರ್ ಈತನೇ ಕಿರಣ ಎಂದು ತಪ್ಪಾಗಿ ಭಾವಿಸಿ ಮಚ್ಚಿನಿಂದ ಸಂತೋಷನ ಮುಖಕ್ಕೆ ಬಲವಾಗಿ ಹೊಡೆದಿದ್ದರಿಂದ ಸಂತೋಷನು ಬೈಕಿನಿಂದ ಕೆಳಕ್ಕೆ ಬೀಳುತ್ತಾನೆ. ಆಗ ಆತ ಕಿರಣ ಅಲ್ಲವೆಂದು ಗೊತ್ತಾಗಿಯೂ ಆ ವ್ಯಕ್ತಿಯನ್ನು ಬಿಟ್ಟರೆ ತನಗೆ ತೊಂದರೆ ಎಂದು ಯೋಚಿಸಿ ಪುನಃ ಅದೇ ಮಚ್ಚಿನಿಂದ ಸಂತೋಷನ ಮುಖ, ಕೈ, ಎದೆ ಮೇಲೆ ಬಲವಾಗಿ ಹೊಡೆದು ಕೊಲೆ ಮಾಡಿ ಹತ್ಯೆ ಮಾಡಿದ ಕೃತ್ಯವು ತನಿಖೆಯಲ್ಲಿ ಸ್ಪಷ್ಟವಾದ ಮೇರೆಗೆ ತನಿಖೆಯನ್ನು ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುತ್ತದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಎಂ.ಎಂ ರವರು ಮಂಡಿಸಿದ ವಾದವನ್ನು ನ್ಯಾಯಾಲಯವು ಪುರಸ್ಕರಿಸಿ ಆರೋಪಿತನು ಐಪಿಸಿ ಕಲಂ 302 ಅಡಿಯಲ್ಲಿ ಎಸಗಿರುವ ಆರೋಪವು ದೃಢಪಟ್ಟಿರುತ್ತದೆ ಎಂದು ಪರಿಗಣಿಸಿ ಆರೋಪಿತನನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ ಎಂ ಇವರು ಪ್ರಕರಣದ ಆರೋಪಿ ಅನಿಲ್‌ಕುಮಾರ್ ಬಿನ್ ಗುರಪ್ಪ ಈತನಿಗೆ ಜೀವಾವಧಿ ಶಿಕ್ಷೆ ಮತ್ತು ರೂ.50 ಸಾವಿರ ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಪುನಃ 6 ತಿಂಗಳ ಶಿಕ್ಷೆ ವಿಧಿಸಿ ಜ.31 ರಂದು ಆದೇಶಿಸಿ ತೀರ್ಪು ನೀಡಿರುತ್ತಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ

MESCOM ಮಾರ್ಚ್ 14. ಕುವೆಂಪು ನಗರ,ಎನ್ ಎಎಸ್ ಬಡಾವಣೆ ಸುತ್ತಮುತ್ತ‌ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ 220 ಕೆವಿ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಮಾ.14 ರಂದು ಬೆಳಗ್ಗೆ 09.00 ರಿಂದ ಸಂಜೆ 5.00ರವರೆಗೆ ಕುವೆಂಪುನಗರ, ಎನ್.ಎ.ಎಸ್. ಬಡಾವಣೆ, ಶಿವಬಸವನಗರ, ವೀರಭದ್ರೇಶ್ವರ ಬಡಾವಣೆ, ಇಂದಿರಾಗಾAಧಿ ಬಡಾವಣೆ, ಜ್ಯೋತಿನಗರ, ಜೆಎನ್‌ಎನ್‌ಸಿ ಕಾಲೇಜು, ಪರ್ಫೆಕ್ಟ್ ಅಲಾಯಿ ಪ್ಯಾಕ್ಟರಿ, ರೆಡ್ಡಿ ಬಡಾವಣೆ, ಶಾಂತಿನಗರ, ನವುಲೆ, ಅಶ್ವತ್‌ನಗರ, ಎಲ್.ಬಿ.ಎಸ್.ನಗರ, ಹೊನ್ನಾಳಿ ರಸ್ತೆ, ತ್ಯಾವರೆಚಣ್ನಹಳ್ಳಿ, ಕೀರ್ತಿನಗರ, ಬಸವೇಶ್ವರ ನಗರ, ಕೃಷಿನಗರ, ತರಳುಬಾಳು ಬಡಾವಣೆ, ಸೇವಾಲಾಲ್‌ನಗರ, ಡಾಲರ್ಸ್ ಕಾಲೋನಿ, ಪವನ ಶ್ರೀ ಬಡಾವಣೆ, ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Shivaganga Yoga Center ಮಾನಸಿಕ ಒತ್ತಡ ನಿರ್ವಹಣೆಯಲ್ಲಿ ಯೋಗ ತುಂಬಾ ಸಹಕಾರಿ- ಡಾ.ಬಿ.ಸಿ.ಪೃಥ್ವಿ

0

Shivaganga Yoga Center ಶಿವಮೊಗ್ಗ ಕೃಷಿ ನಗರದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ ನೇತೃತ್ವದಲ್ಲಿ 21 ದಿನಗಳ ಉಚಿತ ಯೋಗ ಪ್ರಾಣಾಯಾಮ ಧ್ಯಾನದ ಶಿಬಿರವನ್ನು ಉದ್ಘಾಟಿಸಲಾಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮೆಟ್ರೋ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ. ಪೃಥ್ವಿ ಒತ್ತಡ ನಿರ್ವಹಣೆಯಲ್ಲಿ ಯೋಗ ತುಂಬಾ ಸಹಕಾರಿಯಾಗಿದೆ. ಒತ್ತಡದ ದಾವಂತದ ಬದುಕಿನಲ್ಲಿ ಪ್ರತಿನಿತ್ಯ ನಾವು ಯೋಗ ಪ್ರಾಣಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ ಮಾನಸಿಕ ನೆಮ್ಮದಿ ಮತ್ತು ಆರೋಗ್ಯ ವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು. ನಿಯಮಿತ ಆಹಾರ ಪದ್ಧತಿ ಕ್ರಮಬದ್ಧವಾದಂತಹ ಜೀವನಶೈಲಿರೂಡಿಸಿಕೊಳ್ಳಿ ಎಂದು ಕರೆ ನೀಡಿದರು. ಶಿವಗಂಗಾ ಯೋಗ ಕೇಂದ್ರದ ಗುರುಗಳಾದ ಯೋಗಾಚಾರ್ಯ ಶ್ರೀ ರುದ್ರಾರಾಧ್ಯ ಅವರು ಯೋಗ ಮಾಡುವುದರಿಂದ ನಾವು ಆರೋಗ್ಯವಾಗಿ ಇರುವುದರ ಜೊತೆ ಸಮಾಜದ ಸ್ವಾಸ್ಥವನ್ನು ಕಾಪಾಡಿಕೊಂಡು ಬರಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಬಳ್ಳೇಕೆರೆ ಸಂತೋಷ ಪ್ರಾಸ್ತಾವಿಕವಾಗಿ ಮಾತನಾಡಿ ಈ 21 ದಿನಗಳ ಕಾಲ ನಡೆಯುವ ಯೋಗ ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ಪ್ರಯೋಜನ ಪಡೆದುಕೊಳ್ಳಿ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ರವೀಂದ್ರ ಹಾಗೂ ಶಿವಗಂಗಾ ಯೋಗ ಕೇಂದ್ರದ ಯೋಗ ಶಿಕ್ಷಕರುಗಳಾದ ಚಂದ್ರಶೇಖರಯ್ಯ ನೀಲಕಂಠರಾವ್, ಡಾ.ನಾಗರಾಜ್ ಪರಿಸರ, ಶ್ರೀ ಅಶೋಕ್, ಶ್ರೀ ರವಿ, ಶ್ರೀಮತಿ ವಿಜಯ ಬಾಯರಿ , ಜಗದೀಶ್. ಜಿ ವಿಜಯಕುಮಾರ್ ಉಪಸ್ಥಿತರಿದ್ದರು.

McGann District Hospital ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ- ವೀರೇಶ್ ಕ್ಯಾತನಕೊಪ್ಪ

0

McGann District Hospital ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸೂಗೂರು ಗ್ರಾಮ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವೀರೇಶ್ ಕ್ಯಾತನಕೊಪ್ಪ ಹೇಳಿದರು.
ಅವರು ಸೂಗೂರು ಗ್ರಾಮ ಪಂಚಾಯಿತಿಯ ಸಮುದಾಯ ಭವನದಲ್ಲಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜ್ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡುತ್ತಾ, ಆಧುನಿಕ ಯುಗದಲ್ಲಿ ಎಲ್ಲರೂ ಒತ್ತಡದ ಜೀವನಶೈಲಿ ನಡೆಸುತ್ತಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಸೂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ಮಾತನಾಡುತ್ತಾ, ಇಂದಿನ ದಿನಗಳಲ್ಲಿ ಆರೋಗ್ಯ ಬಗ್ಗೆ ಎಲ್ಲರಲ್ಲೂ ಕಾಳಜಿ ಹೆಚ್ಚುತ್ತಿದೆ. ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಸೂಗೂರು ಗ್ರಾಮದ ಅಧ್ಯಕ್ಷ ಪ್ರಕಾಶಪ್ಪ, ಗ್ರಾ.ಪಂ.ನ ಮಾಜಿ ಅಧ್ಯಕ್ಷರಾದ ಎಸ್.ಜಿ.ಮಲ್ಲಿಕಾರ್ಜುನ್, ಕೆ.ಪಿ.ಲೋಹಿತ್, ಓಂಕಾರಪ್ಪ, ಉಪಾಧ್ಯಕ್ಷ ಮಧು, ಸದಸ್ಯರಾದ ರೋಹಿಣಿ, ಪ್ರತಿಭಾ, ನೇತ್ರಾವತಿ ರಂಗನಾಥ್, ಲಲಿತಮ್ಮ ಲಕ್ಷ್ಮಣ, ಮಂಜುನಾಥ್ ನವಲಯ್ಯ, ವಿಭಾಗದ ಮುಖ್ಯಸ್ಥರಾದ ಡಾ|| ಪ್ರವೀಣ್ ಕುಮಾರ್, ಡಾ|| ಅವಿನಾಶ್, ಡಾ|| ಕಾವ್ಯ, ವಿವಿದ ವಿಭಾಗದ ಪಿ ಜಿ, ಗೃಹ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Senior Chamber International ರಾಷ್ಟ್ರಮಟ್ಟದ ವಿಡಿಯೊ ಸ್ಪರ್ಧೆ. ಡಿಡಿಕೆ ವಾರ್ತಾವಾಚಕಿ ಸುಗುಣಾ ಸತೀಶ್ ಗೆ ಪ್ರಥಮ ಬಹುಮಾನ

0

Senior Chamber International ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ವಿಡಿಯೋ ಕಾಂಟೆಸ್ಟ್ ನಲ್ಲಿ ದೂರದರ್ಶನ ವಾರ್ತಾವಾಚಕಿ ಹಾಗೂ ನಿರೂಪಕಿಯಾಗಿರುವ ಸುಗುಣಾ ಸತೀಶ್ ಮೊದಲ ಬಹುಮಾನ ಪಡೆದಿದ್ದಾರೆ. ಇತ್ತೀಚೆಗೆ ಬ್ರಹ್ಮಾವರದಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಸೀನಿಯರ್ ಚಿತ್ರ ಕುಮಾರ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

Department of Backward Classes Welfare ಹಿಂದುಳಿದ ವರ್ಗಗಳ ಇಲಾಖೆ. ಅಭ್ಯರ್ಥಿಗಳು ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ವಿಸ್ತರಣೆ

0

Department of Backward Classes Welfare ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2023-24ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಾದ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ಹಾಗೂ ವೃತ್ತಪರ ಸ್ನಾತಕೋತ್ತರ ಪದವಿಗಳ ಕೆಲ ಕೋರ್ಸುಗಳಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಹಾಗೂ ಪ್ರವರ್ಗ-1ರ ಅಲೆಮಾರಿ/ ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಶುಲ್ಕ ಮರುಪಾವತಿ ಸೌಲಭ್ಯಕ್ಕಾಗಿ www.ssp.postmartic.karnataka.gov.in ವೆಬ್‌ಸೈಟ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ಮಾ.30 ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ಹಾಗೂ ಕಾರ್ಯಕ್ರಮಗಳ ವಿವರ ಅರ್ಹತೆ ಸಲ್ಲಿಸಬೇಕಾದ ದಾಖಲೆಗಳು ಹಾಗೂ ಸಂಬಂಧಿಸಿದ ಸರ್ಕಾರಿ ಆದೇಶಗಳ ಬಗ್ಗೆ ಮಾಹಿತಿಗಾಗಿ www.bcwd.karnataka.gov.in ವೆಬ್‌ಸೈಟ್, ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ ಇಮೇಲ್ postmartichelp@karnataka.gov.in, ದೂ.ಸಂ.: 1902, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ದೂ.ಸಂ.: 08182-222129 ಅಥವಾ ಸಹಾಯವಾಣಿ 8050770005 ಗಳನ್ನು ಸಂಪರ್ಕಿಸುವುದು.

ವಿ.ಸೂ.: ಈ ಅರ್ಜಿಗಳಿಗೆ ಆರ್ಥಿಕ ಇಲಾಖೆಯಿಂದ ಹೆಚ್ಚುವರಿ ಅನುದಾನ ಒದಗಿಸಿದ್ದಲ್ಲಿ 2023-24 ಸಾಲಿಗೆ ಶುಲ್ಕ ಮರುಪಾವತಿ ಮಾಡಲು ಕ್ರಮ ವಹಿಸಲಾಗುವುದು.

Rotary Club Shivamogga ಓದಿದ ಶಾಲೆ & ಹೆತ್ತವರ ಋಣ ತೀರಿಸುವುದು ನಮ್ಮ ಆದ್ಯ ಕರ್ತವ್ಯ-‌ಎ.ಎಸ್.ಶಿವಪ್ರಕಾಶ್

0

Rotary Club Shivamogga ಹೆತ್ತವರ ಹಾಗೂ ಓದಿದ ಶಾಲೆಯ ಋಣವನ್ನು ತೀರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಪ್ರತಿಯೊಬ್ಬರಿಗೂ ಶಿಕ್ಷಣ ಬೇಕೇ ಬೇಕು ಶಿಕ್ಷಣದಿಂದ ವ್ಯಕ್ತಿ ಪರಿಪೂರ್ಣನಾಗುತ್ತಾನೆ ಎಂದು ವಿಐಎಸ್‌ಎಲ್‌ ಶಿಕಾರಿಪುರ ಕದಂಬ ಅಧ್ಯಕ್ಷರಾದ ಎ.ಎಸ್.ಶಿವಪ್ರಕಾಶ್ ಅಭಿಮತ ವ್ಯಕ್ತಪಡಿಸಿದರು.

ತೊಗರ್ಸಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ನಲಿ-ಕಲಿ ಟೇಬಲ್, ಕುರ್ಚಿ, ಬೆಂಚ್ ಹಾಗೂ ಶಿಕ್ಷಣ ಸಾಮಗ್ರಿಗಳನ್ನ ವಿತರಿಸಿ ಮಾತನಾಡಿದ ಅವರು, ಬಾಲ್ಯದಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕಾಗ ಒಳ್ಳೆಯ ಸಂಸ್ಕಾರಯುತವಾದ ವಿದ್ಯಾರ್ಥಿಗಳಾಗಿ ಹೊರ ಬರುತ್ತಾರೆ. ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇದ್ದೇ ಇರುತ್ತದೆ. ಅವರ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಕರ್ತವ್ಯ. ಶಿಕ್ಷಣಕ್ಕೆ ಪೂರಕವಾದ ವಾತಾವರಣವೂ ಕೂಡ ಅಷ್ಟೇ ಅಗತ್ಯ ಎಂದು ನುಡಿದರು.

ಇದೇ ಸಂದರ್ಭದಲ್ಲಿ ವಲಯ ಹತ್ತರ ಸಹಾಯಕ ಗವರ್ನರ್ ನಾಗರಾಜ್.ಎಸ್.ಆರ್ ಮಾತನಾಡಿ, ದಾನಿಗಳಿಂದ ನೀಡಿದ ವಸ್ತುಗಳು ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳು ಮೊದಲು ನೆಲದ ಮೇಲೆ ಕೂತು ಓದುವಾಗ ಇರುವ ಆಸಕ್ತಿಗಿಂತ, ಈಗ ನಲಿ ಕಲಿ ಕುರ್ಚಿಯ ಮೇಲೆ ಕೂತು ವಿದ್ಯಾಭ್ಯಾಸ ಮಾಡುವಾಗ ಆ ಮುಖದಲ್ಲಿ ಬದಲಾವಣೆಯನ್ನು ಕಾಣಬಹುದು ಎಂದು ನುಡಿದರು.

ಇದೇ ಸಂದರ್ಭದಲ್ಲಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಸರ್ಕಾರದಿಂದ ಎಷ್ಟೇ ಸೌಲಭ್ಯಗಳು ಇದ್ದರೂ ಸಹ ಸಂಘ ಸಂಸ್ಥೆಗಳ ನೆರವು ತುಂಬಾ ಅಗತ್ಯ. ಈ ನಿಟ್ಟಿನಲ್ಲಿ ಇಂದು ಶಿಕಾರಿಪುರ ರೋಟರಿ ಕ್ಲಬ್ ನವರು ಶಿಕ್ಷಣಕ್ಕೆ ಒತ್ತು ನೀಡಿ ಬಹಳ ಪವಿತ್ರವಾದ ಕಾರ್ಯವನ್ನು ಮಾಡಿದ್ದಾರೆ ಎಂದು ನುಡಿದರು.

ಯು.ರವೀಂದ್ರನಾಥ್ ಐತಾಳ್, ಮಕ್ಕಳಿಗೆ ಶುಭಾಶಯ ತಿಳಿಸಿದರು. ಆರ್ ಎಂ ಬಿ ಅಧ್ಯಕ್ಷ ಹೆಚ್.ಎಸ್.ಮೋಹನ್ ಮಾತನಾಡಿ, ರೋಟರಿ ಕಂಪನಿ ಸ್ನೇಹ ಒಡನಾಟ ಹಾಗೂ ಸೇವೆಗೆ ಮಿಸಲಾಗಿದ್ದು, ಈಗ ಗ್ರಾಮಾಂತರ ಪ್ರದೇಶದಲ್ಲೂ ಸಹ ಇಂತಹ ಸೇವಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ ಎಂದು ನುಡಿದರು.

Rotary Club Shivamogga ಸಮಾರಂಭದಲ್ಲಿ ಎಸ್.ಪಿ.ಶಂಕರ್, ಆನಂದ್, ರಂಗೇಗೌಡ, ಕಾರ್ಯದರ್ಶಿ ವೀರೇಂದ್ರವಾಲಿ, ಮುಖ್ಯೋಪಾಧ್ಯಯರಾದ ಬಸವರಾಜಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸವರಾಜ್ ಜೋಗಿಹಳ್ಳಿ, ಮನೋಜ್ ಗೌಳಿ, ಹುರುಳಿ ಬಸವರಾಜ್, ದಾನಿಗಳಾದ ಪುಷ್ಪ, ಪಿ ಓ ಶಿವಕುಮಾರ್, ಹಾಲಪ್ಪ ಉಳ್ಳೆಹಳ್ಳಿ ಉಪಸ್ಥಿತರಿದ್ದರು.