Monday, March 9, 2026
Monday, March 9, 2026
Home Blog Page 377

Karnataka Media Academy ಎಸ್ ಸಿ.ಎಸ್.ಟಿ ವಿಶೇಷ ಘಟಕ ಯೋಜನೆಯಡಿ Mo-Jo-kit ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನ

0

Karnataka Media Academy ಕರ್ನಾಟಕ ಮಾಧ್ಯಮ ಅಕಾಡೆಮಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪತ್ರಕರ್ತರಿಗೆ ಉತ್ತೇಜನ ನೀಡುವ ಸಲುವಾಗಿ ಉಚಿತವಾಗಿ Mo-Jo-Kitಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಜಿದಾರರು ಈ ಕೆಳಕಂಡ ಷರತ್ತು ಗೊಳಪಟ್ಟು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿದಾರರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತೆ ಪಡೆದ ಪತ್ರಕರ್ತರಾಗಿರಬೇಕು ಅಥವಾ ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಲ್ಲಿ ಅಥವಾ ಉಪಗ್ರಹ ಸುದ್ದಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು.
ಮಾಧ್ಯಮಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಅನುಭವವಿರಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಒದಗಿಸಬೇಕು.
ಪತ್ರಿಕೆಯ ಸಂಪಾದಕರಾಗಿದ್ದಲ್ಲಿ ಪತ್ರಿಕೆಯು ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಸೇರಿರಬೇಕು.
ಅರ್ಜಿದಾರರು ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ತಾವು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಮುಖ್ಯಸ್ಥರಿಂದ ಸೇವಾ ದೃಢೀಕರಣ ಪತ್ರ ಸಲ್ಲಿಸಬೇಕು.
ಈ ಹಿಂದೆ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ ಹಾಗೂ ಇತರೆ ಸರ್ಕಾರಿ ಸಂಸ್ಥೆಗಳಿಂದ ಸೌಲಭ್ಯ ಪಡೆದ ಫಲಾನುಭವಿಗಳಾಗಿದ್ದರೆ, ಅರ್ಜಿ ಸಲ್ಲಿಸುವಂತಿಲ್ಲ.
ಪತ್ರಿಕೆಯು ನಿರಂತರವಾಗಿ ಪ್ರಕಟಗೊಳ್ಳುತ್ತಿದ್ದು, ಪತ್ರಿಕೆ ಮೇಲಾಗಲಿ ಹಾಗೂ ಸಂಪಾದಕರ ಮೇಲಾಗಲಿ ಯಾವುದೇ ರೀತಿಯ ಕ್ರಿಮಿನಲ್ ಅಪರಾಧ ಮೊಕದ್ದಮೆಗಳು ಇರಬಾರದು.

Karnataka Media Academy ಸರ್ಕಾರದ ವಿವಿಧ ಸಮಿತಿ/ಸಂಸ್ಥೆಗಳಿಗೆ ನೇಮಕ ಮಾಡಿದ ನಾಮ ನಿರ್ದೇಶಿತ ಸದಸ್ಯರುಗಳನ್ನು ಪರಿಗಣಿಸಲಾಗುವುದಿಲ್ಲ.
ಅಭ್ಯರ್ಥಿಗಳು ಸ್ವಯಂ ಅರ್ಜಿಗಳೊಂದಿಗೆ ಪೂರಕ ದಾಖಲೆಗಳನ್ನು ದಿನಾಂಕ: 20.03.2025 ರೊಳಗಾಗಿ ಇ-ಮೇಲ್ ವಿಳಾಸ: karnatakamediaacademy@gmail.comಗೆ ಸಲ್ಲಿಸಬೇಕು ಅಥವಾ ಅಂಚೆ ವಿಳಾಸ: ಕಾರ್ಯದರ್ಶಿಗಳು, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ||. ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು-560001 ಇಲ್ಲಿಗೆ ಅರ್ಜಿಗಳನ್ನು ಕಳುಹಿಸಬೇಕು

Home Guard and Civil Defence Department ಗೃಹರಕ್ಷಕ ಎಸ್.ಟಿ.ಆನಂದ್ ಅವರಿಗೆ ಮುಖ್ಯಮಂತ್ರಿಗಳ ಸುವರ್ಣ ಪದಕ

0

Home Guard and Civil Defence Department ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖೆವತಿಯಿಂದ ಎಸ್.ಟಿ. ಆನಂದ ಇವರು ಮುಖ್ಯ ಮಂತ್ರಿಗಳ ಚಿನ್ನದ ಪದಕ ಪುರಸ್ಕೃತರು.

೨೦೨೪-೨೫ನೇ ಸಾಲಿನ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಇಲಾಖಾ ವತಿಯಿಂದ ಶಿವಮೊಗ್ಗದ ಎಸ್.ಟಿ. ಆನಂದರವರ ಅತ್ಯಮೂಲ್ಯ ಸೇವೆಯನ್ನು ಪರಿಗಣಿಸಿ ಮುಖ್ಯ ಮಂತ್ರಿಗಳ ಚಿನ್ನದ ಪದಕ ದೊರೆತಿದೆ.
ಇವರು ತಿಪ್ಪೆಸ್ವಾಮಿ – ಶ್ರೀಮತಿ ಉಷಾ ಎಸ್.ಟಿರವರ ಪುತ್ರರಾಗಿದ್ದಾರೆ . ಇವರ ವಿಶೇಷ ಸಾಧನೆಗಾಗಿ
ಗೃಹರಕ್ಷಕದಳ ಜಿಲ್ಲಾ ಘಟಕ ಮತ್ತು ಪೌರರಕ್ಷಣೆ ಇಲಾಖೆಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Kote Police Shivamogga ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ವ್ಯಕ್ತಿ ಸಾವು. ಕೋಟೆ ಪೊಲೀಸ್ ಠಾಣೆ ಪ್ರಕಟಣೆ

0

Kote Police Shivamogga ಹೊಳೆಹೊನ್ನೂರು ರಸ್ತೆಯ ಭೈರವ ವೈನ್ ಶಾಪ್ ಹತ್ತಿರ ಅಸ್ವಸ್ಥನಾಗಿ ಮಲಗಿದ್ದ ಸುಮಾರು 60 ರಿಂದ 65 ವಯಸ್ಸಿನ ವ್ಯಕ್ತಿಯನ್ನು ಫೆ.20 ರಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ವ್ಯಕ್ತಿಯು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯು ಸುಮಾರು 5 ಅಡಿ 5 ಇಂಚು ಎತ್ತರ, ಕಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು-ಬಿಳಿ ಬಣ್ಣದ ಕೂದಲು, 3 ಇಂಚು ಉದ್ದದ ಕಪ್ಪು-ಬಿಳಿ ಬಣ್ಣದ ಕುರುಚಲು ಗಡ್ಡ ಇದ್ದು, ಹಣೆಯ ಮಧ್ಯ ಭಾಗದಲ್ಲಿ ಸಾಸಿವೆ ಕಾಳು ಗಾತ್ರದ ಕಪ್ಪು ಮಚ್ಚೆ ಹಾಗೂ ಮೈ ಮೇಲೆ ಬಿಳಿ ಮಾಸಲು ಬಣ್ಣದ ತುಂಬು ತೋಳಿನ ಶರ್ಟ್ ಧರಿಸಿದ್ದಾರೆ.

ಸದರಿ ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಕೋಟೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರು ತಿಳಿಸಿದ್ದಾರೆ

Shivaganga Yoga Kendra  ಬ್ರಾಹ್ಮಿ ಮುಹೂರ್ತದಲ್ಲಿ‌ ಯೋಗ & ಪ್ರಾಣಾಯಾಮ ಮಾಡಿದರೆ ದೀರ್ಘಾಯುಸ್ಸು- ಸಿ.ವಿ.ರುದ್ರಾರಾಧ್ಯ

0

Shivaganga Yoga Kendra  ಸದೃಢವಾದ ಆರೋಗ್ಯ ಯುತ ದೇಹವೇ ನಿಜವಾದ ಸಂಪತ್ತು ಪ್ರತಿದಿನ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎಂದು ಯಾರು ಯೋಗ ಪ್ರಾಣಾಯಾಮ ಧ್ಯಾನ ಮಾಡುತ್ತಾರ ಅವರು ದೀರ್ಘಾಯುಷ್ಯ ಉಳ್ಳವರಾಗುತ್ತಾರೆ ಹಾಗೂ ಸದಾ ಲವಲವಿಕೆಯಿಂದ ಇರುತ್ತಾರೆ ಪ್ರತಿದಿನ ನಮಗೋಸ್ಕರ ಒಂದು ಗಂಟೆಗಳ ಕಾಲ ಮಾಡುವ ಯೋಗ ಇಡೀ ದಿನವನ್ನು ಚೈತನ್ಯ ಭರಿತವಾಗಿ ಇರಿಸುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಸೀಮೆ ರುದ್ರಾರಾಧ್ಯ ರವರು ಅಭಿಮತ ವ್ಯಕ್ತಪಡಿಸಿದರು.

ಅವರು ಶಿವಮೊಗ್ಗ ಕೃಷಿ ನಗರದ ಯೋಗ ಶಾಖೆಗೆ ಭೇಟಿ ನೀಡಿ ಶಿಬಿರಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದರು ಔಷಧಿ ಮಾತ್ರೆಯಿಂದ ಗುಣವಾಗದೆ ಇರುವ ಅನೇಕ ಕಾಯಿಲೆಗಳು. ಇಂದು ಯೋಗದಿಂದ ಪರಿಹಾರ ಕಂಡುಕೊಂಡಿವೆ ಸದೃಢ ಸಮಾಜ ನಿರ್ಮಾಣದಲ್ಲಿ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಯೋಗವು ಸಹ ಪ್ರಮುಖ ಪಾತ್ರ ವಹಿಸಿದೆ ಎಂದು ನುಡಿದರು ಯೋಗ ಪ್ರಾಣಯಾಮ ಧ್ಯಾನದಿಂದ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದರಿಂದ. ಉತ್ತಮ ಆರೋಗ್ಯ ನಿರ್ಮಾಣವಾಗುತ್ತದೆ. ಯೋಗವು ಮನೆ ಮನಗಳನ್ನು ತಲುಪಬೇಕು. ನಗರದಲ್ಲಿ 33 ಕೇಂದ್ರಗಳಲ್ಲಿ ಯಶಸ್ವಿಯಾಗಿ ಈ ದಿನ ಯೋಗ ಪ್ರಾಣಾಯಾಮ ಧ್ಯಾನದ ಶಿಬಿರಗಳು ನಡೆಯುತ್ತೇವೆ ಅಂದರೆ ಅದಕ್ಕೆ ಶಿಕ್ಷಕರ ಹಾಗೂ ಸಾರ್ವಜನಿಕರ ಸಹಕಾರ ತುಂಬಾ ಮುಖ್ಯವಾಗಿದೆ ಸಾವಿರಕ್ಕೂ ಹೆಚ್ಚು ಯೋಗಪಟುಗಳು ಇಂದು ಅಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ ಎಂದು ನುಡಿದರು.

Shivaganga Yoga Kendra  ಶಿಬಿರದಲ್ಲಿ ಯೋಗ ಶಿಕ್ಷಕರಾದ ಚಂದ್ರಶೇಖರಯ್ಯ. ನಾಗರತ್ನಮ್ಮ ಚಂದ್ರಶೇಖರ್. ಜಿ ವಿಜಯಕುಮಾರ್. ಅನಿಲ್. ಪರಮೇಶ್ ಕೃಷ್ಣಮೂರ್ತಿ. ಜ್ಯೋತಿ ಟೀಕಾ ರೆ. ಶರ್ಮಿಳಾ ಮನು ವಿನ್ನು ವಿಜಯಕುಮಾರ್ ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.

Shivamogga Railway Police ತರೀಕೆರೆ- ಮಸರಹಳ್ಳಿ ರೈಲ್ವೆ ನಿಲ್ದಾಣದ ನಡುವೆ ಅಪರಿಚಿತ ಮೃತವ್ಯಕ್ತಿ ಪತ್ತೆ. ರೈಲ್ವೆ ಪೊಲೀಸ್ ಮಾಹಿತಿ

0

Shivamogga Railway Police ತರೀಕೆರೆ ಮತ್ತು ಮಸರಹಳ್ಳಿಯ ರೈಲು ನಿಲ್ದಾಣಗಳ ಮಧ್ಯೆ ದಿ.14-09-2024 ರಂದು ಸುಮಾರು 50 ರಿಂದ 55 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿರುತ್ತಾನೆಂದು ವರದಿ ಮಾಡಲಾಗಿದೆ.

ಮೃತ ವ್ಯಕ್ತಿಯು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈ ಬಣ್ಣ, ತಲೆಯಲ್ಲಿ ಸುಮಾರು 2 ಇಂಚು ಕಪ್ಪು ಮತ್ತು ಬಿಳಿ ಮಿಶ್ರಿತ ತಲೆಕೂದಲು ಹಾಗೂ ಕುರುಚಲು ಬಿಳಿ ಮತ್ತು ಕಪ್ಪು ಮಿಶ್ರಿತ ಗಡ್ಡಮೀಸೆ ಬಿಟ್ಟಿದ್ದು, ಕಡುಗಿಣಿ ಹಸಿರು ಬಣ್ಣದ ರೆಡಿಮೇಡ್ ಟೀ-ಶರ್ಟ್, ಗಿಣಿ ಹಸಿರು ಬಣ್ಣದ ಚೆಕ್ಸ್ ಗೆರೆಗಳಿರುವ ಪಂಚೆ ಹಾಗೂ ಗಿಣಿ ಹಸಿರು ಮತ್ತು ಬಿಳಿ ಬಣ್ಣದ ಉದ್ದಗೆರೆಗಳಿರುವ ಟವೆಲ್ ಇರುತ್ತದೆ.

Shivamogga Railway Police ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ದೇಹವನ್ನು ಇರಿಸಲಾಗಿದೆ. ಈ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್‌ಇನ್ಸ್ಪೆಕ್ಟರ್‌ನ ದೂ.ಸಂ: 08182222974 ನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ

MESCOM ಮಾರ್ಚ್ 12. ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಆಲ್ಕೋಳ. ವಿ.ವಿ.ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ. 12 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ಎಸ್.ವಿ.ಬಡಾವಣೆ ಎ ಯಿಂದ ಎಫ್ ಬ್ಲಾಖ್, ಸ್ವಿಮಿಂಗ್ ಫೂಲ್‌ನ ಸುತ್ತಮುತ್ ಮಹಿಳಾ ಪಾಲಿಟೆಕ್ನಿಕ್, ರಾಮಕೃಷ್ಣ ಐಟಿಐ ಕಾಲೇಜ್, ಸ್ನೇಹ ಅಪಾರ್ಟ್ಮೆಂಟ್, ಚಂದನ ಪಾರ್ಕ್, ಗಾಡಿಕೊಪ್ಪ ಜ್ಞಾನಗಂಗಾ ಶಾಲೆ, ಕಾಳಿದಾಸ ಬಡಾವಣೆ, ನಂಜಪ್ಪ ಲೈಫ್ ಕೇರ್, ಸಂಭ್ರಮ ಅಪಾರ್ಟ್ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Ministry of Cooperation ಸಂಘ-ಸಂಸ್ಥೆಗಳ ನೋಂದಣಿ ನವೀಕರಣಕ್ಕೆ ಮಾರ್ಚ್ 31 ಅಂತಿಮ ದಿನಾಂಕ

0

Ministry of Cooperation ಸಹಕಾರ ಇಲಾಖೆಯು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ-1960 ಕಲಂ 13 ರಂತೆ ನೋಂದಣಿಯಾದ ಪ್ರತಿಯೊಂದು ಸಂಘ-ಸಂಸ್ಥೆಗಳು ಪ್ರತಿವರ್ಷ ನವೀಕರಣಗೊಳಿಸಿಕೊಳ್ಳುವುದು ಕಡ್ಡಾಯ. ಅನೇಕ ಸಂಘ-ಸಂಸ್ಥೆಗಳು 5 ವರ್ಷಗಳಿಗೂ ಮೇಲ್ಪಟ್ಟು ನವೀಕರಿಸದೇ ಇರುವುದರಿಂದ ಇಂತಹ ಸಂಘ-ಸಂಸ್ಥೆಗಳ ಹಿತದೃಷ್ಠಿಯಿಂದ ಕೂಡಲೇ ಪ್ರತಿ ವರ್ಷಕ್ಕೆ ರೂ. 3,000/-ಗಳ ದಂಡ ಪಾವತಿಸಿ ನವೀಕರಿಸಿಕೊಳ್ಳುವುದು.
ಇಂತಹ ಸಂಘ ಸಂಸ್ಥೆಗಳು ದಿ: 31/12/2025 ರೊಳಗಾಗಿ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯಲ್ಲಿ ಸೂಕ್ತ ದಾಖಲೆ ಮತ್ತು ಮಾಹಿತಿಗಳೊಂದಿಗೆ ಫೈಲಿಂಗ್ ಮಾಡುವಂತೆ ತಿಳಿಸಿದೆ.

Renukacharya Jayanti  ಮಾರ್ಚ್ 12. ಜಿಲ್ಲಾಡಳಿತದಿಂದ ಶ್ರೀರೇಣುಕಾಚಾರ್ಯ ಜಯಂತಿ ಆಯೋಜನೆ

0

Renukacharya Jayanti  ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಜಂಗಮ ಹಾಗೂ ಬೇಡ ಜಂಗಮ ಸಮಾಜ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಾ.12 ರ ಬೆಳಿಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ಆಯೋಜಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾಪ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.

ಶಾಸಕರಾದ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರು ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ದಿ ನಿಗಮ ಹಾಗೂ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮತದ ಅಧ್ಯಕ್ಷರುಗಳು, ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಿಗಳ ಅಧ್ಯಕ್ಷರು, ಜನಪ್ರತಿಧಿನಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು.

ಬಸವೇಶ್ವರ ವಿದ್ಯಾ ಸಂಸ್ಥೆಯ ನಿವೃತ್ತ ಪ್ರಾಚಾರ್ಯರಾದ ಗುರುಸಿದ್ದ ಶಾಸ್ತಿç ಜಿ ಟಿ ಎಂ ವಿಶೇಷ ಉಪನ್ಯಾಸ ಮಾಡುವರು.

Ministry of Cooperation ಸಂಘ-ಸಂಸ್ಥೆಗಳ ನೋಂದಣಿ ನವೀಕರಿಸಲು ಸೂಚನೆ

0

Ministry of Cooperation ಸಹಕಾರ ಇಲಾಖೆಯು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ-1960 ಕಲಂ 13 ರಂತೆ ನೋಂದಣಿಯಾದ ಪ್ರತಿಯೊಂದು ಸಂಘ-ಸಂಸ್ಥೆಗಳು ಪ್ರತಿವರ್ಷ ನವೀಕರಣಗೊಳಿಸಿಕೊಳ್ಳುವುದು ಕಡ್ಡಾಯ. ಅನೇಕ ಸಂಘ-ಸಂಸ್ಥೆಗಳು 5 ವರ್ಷಗಳಿಗೂ ಮೇಲ್ಪಟ್ಟು ನವೀಕರಿಸದೇ ಇರುವುದರಿಂದ ಇಂತಹ ಸಂಘ-ಸಂಸ್ಥೆಗಳ ಹಿತದೃಷ್ಠಿಯಿಂದ ಕೂಡಲೇ ಪ್ರತಿ ವರ್ಷಕ್ಕೆ ರೂ. 3,000/-ಗಳ ದಂಡ ಪಾವತಿಸಿ ನವೀಕರಿಸಿಕೊಳ್ಳುವುದು.
ಇಂತಹ ಸಂಘ ಸಂಸ್ಥೆಗಳು ದಿ: 31/12/2025 ರೊಳಗಾಗಿ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯಲ್ಲಿ ಸೂಕ್ತ ದಾಖಲೆ ಮತ್ತು ಮಾಹಿತಿಗಳೊಂದಿಗೆ ಫೈಲಿಂಗ್ ಮಾಡುವಂತೆ ತಿಳಿಸಿದೆ.

MESCOM ಆಲ್ಕೋಳ ಸುತ್ತಮುತ್ತ ಮಾ.12 ರಂದು ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗದ ಆಲ್ಕೋಳ. ವಿ.ವಿ.ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ. 12 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ಎಸ್.ವಿ.ಬಡಾವಣೆ ಎ ಯಿಂದ ಎಫ್ ಬ್ಲಾಖ್, ಸ್ವಿಮಿಂಗ್ ಫೂಲ್‌ನ ಸುತ್ತಮುತ್ ಮಹಿಳಾ ಪಾಲಿಟೆಕ್ನಿಕ್, ರಾಮಕೃಷ್ಣ ಐಟಿಐ ಕಾಲೇಜ್, ಸ್ನೇಹ ಅಪಾರ್ಟ್ಮೆಂಟ್, ಚಂದನ ಪಾರ್ಕ್, ಗಾಡಿಕೊಪ್ಪ ಜ್ಞಾನಗಂಗಾ ಶಾಲೆ, ಕಾಳಿದಾಸ ಬಡಾವಣೆ, ನಂಜಪ್ಪ ಲೈಫ್ ಕೇರ್, ಸಂಭ್ರಮ ಅಪಾರ್ಟ್ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.