Tuesday, August 4, 2026
Tuesday, August 4, 2026
Home Blog Page 32

ಹಾಸನ ಜಿಲ್ಲೆಯ ವ್ಯಕ್ತಿ ನಾಪತ್ತೆ. ಸುಳಿವಿಗೆ ಸಹಕರಿಸಲು ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ

0

ಹಾಸನ ಜಿಲ್ಲೆಯ ಅರಕಲಗೂಡ ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಧನಂಜಯ ಕುಮಾರ್, 30 ವರ್ಷ, ಮಾನಸಿಕ ಅಸ್ವಸ್ಥನಾಗಿದ್ದು, ಜೂ. 26 ರಂದು ಶಿವಮೊಗ್ಗದ ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಕರೆದುಕೊಂಡು ಬಂದಿದ್ದ ವೇಳೆ ಆತ ಆಸ್ಪತ್ರೆಯಿಂದ ಕಾಣೆಯಾಗಿರುತ್ತಾರೆ.
5.2 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಎಡಗೈ ಮೇಲೆ ಹಳೆಯ ಗಾಯದ ಗುರುತು ಇರುತ್ತದೆ. ಕಾಣೆಯಾದ ವೇಳೆ ಬೂದು ಬಣ್ಣದ ತುಂಬುತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಸುಳಿವು ಪತ್ತೆಯಾದಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9480803345 /7349604078 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

ಅಮೂಲ್ಯ ಜೀವಗಳನ್ನ ಉಳಿಸಲು ನೌಕರರು ಮತ್ತು ಸಾರ್ವಜನಿಕರು ನಿಯಮಿತವಾಗಿ ರಕ್ತದಾನ ಮಾಡಿ: ಅನೂಪ್ ಕುಮಾರ್

0

ಭದ್ರಾವತಿಯ ಸೈಲ್- ವಿಐಎಸ್‌ಎಲ್ ಆಸ್ಪತ್ರೆ ಮತ್ತು ಜೀವ ಸಂಜೀವಿನಿ ಸ್ವಯಂಸೇವಾ ರಕ್ತ ಕೇಂದ್ರದ ಸಹಯೋಗದೊಂದಿಗೆ ಜುಲೈ ೮, ೨೦೨೬ ರಂದು ಭದ್ರಾವತಿಯ ಸೈಲ್-ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಅನೂಪ್ ಕುಮಾರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಈ ಸಂರ್ದಭದಲ್ಲಿ ಶ್ರೀ ಬಿ. ವಿಶ್ವನಾಥ, ಮುಖ್ಯ ಮಹಾಪ್ರಬಂಧಕರು (ಮಾನವ ಸಂಪನ್ಮೂಲ), ಶ್ರೀ ಟಿ. ರವಿಚಂದ್ರನ್, ಮಹಾಪ್ರಬಂಧಕರು ಪ್ರಭಾರಿ (ಸ್ಥಾವರ), ಡಾ|| ಕೆ.ಎಸ್. ಸುಜೀತ್ ಕುಮಾರ್, ಹೆಚ್ಚುವರಿ ಮುಖ್ಯ ವೈಧ್ಯಾಧಿಕಾರಿಗಳು, ಶ್ರೀ ಅಮೃತ್ ಕುಮಾರ್, ಅಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ ಮತ್ತು ಶ್ರೀ ರಾಜು ನರಸಯ್ಯ ಆಡಳಿತಾಧಿಕಾರಿಗಳು ಜೀವ ಸಂಜೀವಿನಿ ಸ್ವಯಂಸೇವಾ ರಕ್ತ ಕೇಂದ್ರ ಇವರುಗಳು ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಅನೂಪ್ ಕುಮಾರ್, ಸ್ವಯಂಪ್ರೇರಿತ ರಕ್ತದಾನದ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಅಮೂಲ್ಯ ಜೀವಗಳನ್ನು ಉಳಿಸಲು ನೌಕರರು ಮತ್ತು ಸಾರ್ವಜನಿಕರು ನಿಯಮಿತವಾಗಿ ರಕ್ತದಾನ ಮಾಡುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಶ್ರೀ ರಾಜು ನರಸಯ್ಯ ಮತ್ತು ಡಾ|| ಕೆ.ಎಸ್. ಸುಜೀತ್ ಕುಮಾರ್ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ವಿಐಎಸ್‌ಎಲ್‌ನ ಉಪ ಮುಖ್ಯ ವೈಧ್ಯಾಧಿಕಾರಿ ಡಾ|| ಶೋಭ.ಹೆಚ್ ಸ್ವಾಗತಿಸಿದರು ಹಾಗೂ ವಂದನಾರ್ಪಣೆಗೈದರು.

ಶಿಬಿರದಲ್ಲಿ ವಿಐಎಸ್‌ಎಲ್ ಉದ್ಯೋಗಿಗಳು, ಗುತ್ತಿಗೆ ಕಾರ್ಮಿಕರು, ಸಂಚಾರ ಪೋಲೀಸ್ ಇಲಾಖೆಯ ಸಿಬ್ಬಂದಿ ಮತ್ತು ಸ್ವಯಂಸೇವಕರು ಉತ್ಸಾಹದಿಂದ ಭಾಗವಹಿಸಿ, ಸ್ವಯಂಪ್ರೇರಿತ ರಕ್ತದಾನದ ಮೂಲಕ ಜೀವಗಳನ್ನು ಉಳಿಸುವ ಉದ್ದೇಶಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು.

Rotary Club of Shivamogga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ

0

Rotary Club of Shivamogga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಗೆ 2026-27 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜುಲೈ 10ರಂದು ಶುಕ್ರವಾರ ಸಂಜೆ 6:00 ಗಂಟೆಗೆ ನಗರದ ದಿ ಶಿವಮೊಗ್ಗ ಅರೆಕಾನಟ್ ಮರ್ಚೆಂಟ್ ಸ್ಪೋರ್ಟ್ಸ್ ಕ್ಲಬ್ (ಅಡಿಕೆ ಮಂಡಿ ಕ್ಲಬ್) ನಲ್ಲಿ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಪದವಿ ಪ್ರಧಾನ ಅಧಿಕಾರಿಗಳಾದ ರೋಟರಿ ಜಿಲ್ಲೆ 3182 ನ ಚುನಾಯಿತ ಜಿಲ್ಲಾ ಗವರ್ನರ್ ಆದ ಶ್ರೀಯುತ ರೊ ವಸಂತ್ ಹೋಬಳಿದಾರ್ ರವರು ಭಾಗವಹಿಸಲಿದ್ದಾರೆ ವಲಯ 11ರ ರೊ ಸಹಾಯಕ ಗವರ್ನರ್ ನಾಗರಾಜ ಎಸ್,
ಝೋನಲ್ ಲೆಫ್ಟಿನೆಂಟ್
ಮಹೇಶ್ ಆಲೆಮನೆ ರವರು ಉಪಸ್ಥಿತಲಿದ್ದಾರೆ.

ಅಧಿಕಾರಹಸ್ತಾಂತರದ ಈ
ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಡಿಕೆ ಶೇಷಗಿರಿ ರವರು ಕಾರ್ಯದರ್ಶಿಯಾಗಿ ಆರ್ ಮನೋಹರ ರವರು ಅಧಿಕಾರ ಸ್ವೀಕಾರವನ್ನು ಮಾಡಲಿದ್ದಾರೆ.

Rotary Club of Shivamogga ಉಪಾಧ್ಯಕ್ಷರಾಗಿ ಜಿ ವಿಜಯ್ ಕುಮಾರ್, ಜಾಯಿಂಟ್ ಸೆಕ್ರೆಟರಿ ಆಕೃತ್ ಕೆ, ಎಕ್ಸಿಕ್ಯೂಟಿವ್ ಸೆಕ್ರೆಟರಿ ಮಂಜುನಾಥ್ ಆರ್ ಕದಂ , ಖಜಂಚಿ ಸುನಿಲ್ ಕುಮಾರ್ ಜಿ
ಸಾರ್ಜೆಂಟ್ ಆಫ್ ಆರ್ಮ್ಸ್ ಆಕಾಶ್ ಪಿ ಸಿ, ಕ್ಲಬ್ ಎಡಿಟರ್ ರವಿರಾಜ್ ಎಚ್ ಕೆ, ಕ್ಲಬ್ ಸರ್ವಿಸ್ ಕಾಸಲ ವಿ ಸುರೇಂದ್ರ ಕಮ್ಯುನಿಟಿ ಸರ್ವಿಸ್ ಡಾ ಅರುಣ್ ಎಂ ಎಸ್ , ಸಾದ್ವಿ ಸಿ ಕಾಂತ್ ವೊಕೇಶನಲ್ ಸರ್ವಿಸ್, ಲಕ್ಷ್ಮಣ್ ಬಾಬು ಯೂತ್ ಸರ್ವಿಸ್,ಅರುಣ್ ದೀಕ್ಷಿತ್ ಇಂಟರ್ನ್ಯಾಷನಲ್ ಸರ್ವಿಸ್, ಮಧು ಎಚ್ ಎಂ ಡಿಸ್ಟ್ರಿಕ್ಟ್ ಪ್ರಾಜೆಕ್ಟ್ಸ್, ಡಾಗುಡದಪ್ಪ ಕಸಬಿ ಕ್ಲಬ್ ಟ್ರೈನಿಂಗ್ ಫೆಸಿಲಿಟೇಟರ್, ಚಂದ್ರಹಾಸ ಪಿ ರಾಯ್ಕರ್
ಟಿ ಆರ್ ಎಫ್, ಡಾ ರವಿಕಿರಣ್ ಎಚ್ ಕೆ, ಪಲ್ಸ್ ಪೋಲಿಯೋ, ರೊ ಸೂರ್ಯನಾರಾಯಣ ಎಚ್ ಎಸ್ ವಿಶೇಷ ಆಹ್ವಾನಿತರು ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯು ಸಂಘಕ್ಕೆ ಹೆಮ್ಮೆಯ ವಿಷಯ- ಎಂ.ಸಿ.ದೇವರಾಜ್

0

ಶಿವಮೊಗ್ಗ ಜಿಲ್ಲಾ ವಿತರಕರ ಸಂಘ (ರಿ.) ವತಿಯಿಂದ ಮೂರನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಪಡೆದು ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳಾದ ಕು|| ಶಾರ್ವಿ ಗೋಪಿನಾಥ್, ಶ್ರೀ ಸೃಜನ್ ಶೆಟ್ಟಿ, ಕು|| ಬಿ.ವಿ. ತ್ರಿಷಾ ಜೈನ್, ಕು ||ಅದ್ವಿಕಾ ಜವಳಿ, ಕು||ಕೌಸ್ತುಭ ಎಸ್., ಶ್ರೀ ನಿವಾಸ್ ಪಿ. ಶ್ರೀ ಪ್ರಭು, ಕು ||ಲಕ್ಷ್ಮೀ ಪ್ರಭು, ಕು ||ಎಂ.ಆರ್. ನಾಗಸ್ವರ್ಣ ಹಾಗೂ ಶ್ರೀ ಎಂ.ಜಿ. ನಾಗಸ್ವರೂಪ್ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ವಿದ್ಯಾರ್ಥಿಗಳ ಸಾಧನೆಯು ಸಂಘಕ್ಕೆ ಹೆಮ್ಮೆಯ ವಿಷಯವಾಗಿದ್ದು, ಶಿಕ್ಷಣಕ್ಕೆ ಉತ್ತೇಜನ ನೀಡುವ ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಮುಂದಿನ ವರ್ಷಗಳಲ್ಲಿ ಇನ್ನಷ್ಟು ವೈಭವದಿಂದ ಆಯೋಜಿಸಲಾಗುವುದು ಎಂದು ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳನ್ನು ಕುರಿತು ಸಂಘದ ಅಧ್ಯಕ್ಷರಾದ ದೇವರಾಜ್ ಎಂ.ಸಿ. ರವರು ಮಾತನಾಡಿದರು.

ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರು ಹಾಗೂ ನಮ್ಮ ಸಂಘದ ಗೌರವಾಧ್ಯಕ್ಷರಾದ ಗೋಪಿನಾಥ್ ಬಿ ರವರು ಮಾತನಾಡುತ್ತಾ, ಭಾರತದಲ್ಲಿ ಕುಟುಂಬ ವ್ಯವಹಾರ ನಿರ್ವಹಣೆ— ಸವಾಲುಗಳು ಮತ್ತು ಭವಿಷ್ಯ ವಿಷಯವಾಗಿ ವಿಚಾರಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೋಷಕರು ಹಾಗೂ ಮಾಜಿ ಅಧ್ಯಕ್ಷರುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಬದರಿನಾಥ್ ಬಿ ಆರ್, ಕಾರ್ಯದರ್ಶಿ ಗಿರೀಶ್ ಒಡೆಯರ್, ಗೌರವ ಕಾರ್ಯದರ್ಶಿಗಳಾದ ಶ್ರೀನಿವಾಸ್ ಖಜಾಂಚಿಗಳಾದ ಚಂದ್ರಶೇಖರ್ ಕೆ.ಕೆ, ವಿಶೇಷ ಆಹ್ವಾನಿತರಾದ ಹಾಜಿ ಸುಲೇಮಾನ್ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಶಿವರಾಜ್ ಉಡುಗಣಿ, ನಿರ್ದೇಶಕರುಗಳಾದ ಮೋಹನ್ ಕೆ ಎಸ್, ನವೀನ್ ಜವಳಿ, ಮಹಾರುದ್ರಪ್ಪ ಕೆ ವಿ, ಕುಮಾರ್ ಎ ಎಂ, ಮಹಮದ್ ಇಕ್ಬಾಲ್, ಸುರೇಂದ್ರನಾಥ, ರಾಘವೇಂದ್ರ ಎಂ ವೈ ಹಾಗೂ ಸಂಘದ ಗಣ್ಯಮಾನ್ಯ ಸದಸ್ಯರುಗಳು ಉಪಸ್ಥಿತರಿದ್ದರು.

Friends Center Organization ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಫ್ರೆಂಡ್ಸ್ ಸೆಂಟರ್ ಸಂಸ್ಥೆ ಪ್ರಸಿದ್ಧಿ ಪಡೆದಿದೆ- ಎಸ್.ಎನ್.ಚನ್ನಬಸಪ್ಪ

0

Friends Center Organization ಸಮಾಜಮುಖಿ, ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿ ಹಲವಾರು ಕಾರ್ಯಕ್ರಗಳನ್ನು ಮಾಡಿರುವ ಈ ಫ್ರೆಂಡ್ಸ್ ಸೆಂಟರ್ ಸಂಸ್ಥೆ 60 ನೇ ವರ್ಷಕ್ಕೆ ಕಲಿಟ್ಟಿದ್ದು, ಶಿವಮೊಗ್ಗದಲ್ಲಿ ಅತೀ ಹೆಚ್ಚು ವರ್ಷಗಳನ್ನು ಮತ್ತು ಪೂರ್ವ ಅಧ್ಯಕ್ಷರನ್ನು ಒಳಗೊಂಡ ಸಂಸ್ಥೆಯಾಗಿದೆ ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚನ್ನಬಸಪ್ಪ ರವರು ಹೇಳಿದರು.

ಗೋಪಾಳದ ಫ್ರೆಂಡ್ಸ್ ಸೆಂಟರ್ ಹಾಲ್ ನಲ್ಲಿ ನಡೆದ ಫ್ರೆಂಡ್ಸ್ ಸೆಂಟರ್ ಸಂಸ್ಥೆಯ 60 ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ಯುವಜನ ನಾಯಕತ್ವ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ರಾಜ್ಯ ಮಟ್ಟದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಗಳು ಕಲೆ ಮತ್ತು ಸಂಸ್ಕೃತಿಗೆ, ರಕ್ತದಾನ ಮತ್ತು ನೇತ್ರಾದಾನ ಶಿಬಿರಗಳ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲ್ಲಿಕಾರ್ಜುನ ಕಾನೂರ್ ರವರು, ನಿತ್ಯ ಜೀವದ ಪ್ರಯಾಣದಲ್ಲಿ ಪ್ರತಿ ಕ್ಷಣವೂ ಹೊಸ ಪರಿಚಯ, ಸ್ನೇಹ, ಪರಿಚಿತರ ಬೀಳ್ಕೊಡಿಗೆಯೊಂದಿಗೆ ಸಾಗುತ್ತಿದೆ. ನಾವು ಇಲ್ಲದಿದ್ದರೂ ಜನರ ಮನಸಿನಲ್ಲಿ ಜೀವಿಸುವಂತಿರಬೇಕು, ಹೆಜ್ಜೆ ಗುರುತು ಉಳಿದರೆ ಅರ್ಥ ಬದ್ಧ ಜೀವನ ನಮ್ಮದಾದರೆ ಅದು ಒಂದು ಸಾರ್ಥಕ ಬದುಕಾಗುತ್ತದೆ. ಮನದಕಣ್ಣು ತೆರೆಯದೆ ನಾಗರೀಕತೆಯನ್ನು ದೋಷಸುವ ನಮ್ಮ ನಿಲುವು ಬದಲಾಗಬೇಕು. ಮಾನವೀಯ ಮೌಲ್ಯಗಳನ್ನು ಜೀವಂತವಾಗಿರಿಸುವಲ್ಲಿ ಈ ಸಂಸ್ಥೆಯ ಪಾತ್ರ ದೊಡ್ಡದಾಗಿದೆ.
ಮನುಷ್ಯ ವ್ಯಕ್ತಿತ್ವವನ್ನು ರೂಪಿಸುವ ಮತ್ತು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಹಾಗೂ ಸಹಕಾರವನ್ನು ಬೆಳೆಸುವ ನ್ಯೆತಿಕ ಗುಣಗಳು ವ್ಯಕ್ತಿಯನ್ನು ಇತರರೊಂದಿಗೆ ಮಾನವೀಯತೆಯಿಂದ ಬದುಕಲು ಕಲಿಸುತ್ತದೆ. ಮತ್ತು ದ್ಯೆನಂದನ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಅರೋಗ್ಯಕರ ಬದುಕನ್ನು ಸಾಧಿಸಬೇಕಾಗಿದೆ. ಜೀವನದಲ್ಲಿ ಯಾವುದೇ ಹಂತದಲ್ಲಿಯೂ ಹೊಸ ಆರಂಭ ಸಾಧ್ಯ ಎಂದ ಅವರು, ಕಾರ್ಯಕಾರಿ ಮಂಡಳಿಯ ಹೆಸರನ್ನು ಘೋಷಣೆ ಮಾಡಿದರು.

Friends Center Organization ಈ ಸಂದರ್ಭದಲ್ಲಿ ಅಶ್ವಥ್ ನಾರಾಯಣ್ ಮತ್ತು ರಾಜೇಶ್ ಪಿ. ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂದ್ಯಾ ಸತ್ಯನಾರಾಯಣ ಪ್ರಾರ್ಥನೆ ಮಾಡಿದರು, ರವೀಂದ್ರನಾಥ್ ಐತಾಳ್ ವಾರ್ಷಿಕ ವರದಿ ಓದಿದರು, ರಮೇಶ್ ಬಾಬು ಎಸ್.ಜಿ. ಸ್ವಾಗತಿಸಿದರು, ಮೋಹನ್ ಕುಮಾರ್ ಎಲ್.ಎಂ. ವಂದಿಸಿದರು, ಜಿ.ವಿಜಯಕುಮಾರ್ ನಿರೂಪಿಸಿದರು.

ಈ ವೇಳೆ ಪೂರ್ವಧ್ಯಕ್ಷರಾದ ನಾಗರಾಜ್ ವಿ. ಸಂಸ್ಥೆಯ ಪ್ರಗತಿ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾನೂರ್, ನಿಕಟ ಪೂರ್ವ ಅಧ್ಯಕ್ಷರಾದ ಧನರಾಜ್ ಬಿ.ಜೆ., ಸ್ವಪ್ನ ಬದರಿನಾಥ್, ಸುನೀತಾ ಚೇತನ್, ಸ್ಮಿತಾ ನವೀನ್, ಅನಿತ ಸುರೇಂದ್ರ ಕಾಸಲ, ಉಮಾ ವೆಂಕಟೇಶ್, ಲೋಕೇಶ್ ಹೆಚ್.ಕೆ., ಪಂಚಾಕ್ಷರಯ್ಯ ಹಿರೇಮಠ್, ಸತ್ಯನಾರಾಯಣ ಜಿ., ವೆಂಕಟೇಶ್ ಮೂರ್ತಿ ಟಿ.ಆರ್., ಮಹೇಶ್ವರಪ್ಪ ಹೆಚ್., ಮೋಹನ್ ಡಿ.ಪಿ. ಸೇರಿಂದತೆ ಇನ್ನಿತರರು ಉಪಸ್ಥಿತರಿದ್ದರು.

ಹೊಯ್ಸಳ ಆರೋಗ್ಯ ಕೇಂದ್ರದಲ್ಲಿ ‘ಜೀವನಧಾರ’ ಡಯಾಲಿಸಿಸ್ ಬಗ್ಗೆ ಮಾಹಿತಿ‌ ಕಾರ್ಯಾಗಾರ

0

ಹೊಯ್ಸಳ ಸಹಕಾರ ಸಂಘದ ಅಧ್ಯಕ್ಷರೂ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಶಂಕರ್ ಮತ್ತು ಶಶಿ ಎಂ. ಶಂಕರ್ ಇವರ ನೇತೃತ್ವದಲ್ಲಿ ಕುವೆಂಪು ನಗರದಲ್ಲಿರುವ ಹೊಯ್ಸಳ ಆರೋಗ್ಯ ಕೇಂದ್ರದಲ್ಲಿ ‘ಜೀವನಧಾರ’ ಎಂಬ ಹೆಸರಿನಲ್ಲಿ ಪೋಷಕ ಸಿಬ್ಬಂದಿಯಿಂದ ಮೂತ್ರಪಿಂಡ ಡಯಾಲಿಸಿಸ್ ಪ್ರಕ್ರಿಯೆಯ ಬಗ್ಗೆ ಮಾಹಿತಿ ಕಾರ್ಯಗಾರ ಹಾಗೂ ಆರ್ಥಿಕ ನೀಡಿ ಕಾರ್ಯಕ್ರಮ ಆಯೋಜಿಸಲಾಯಿತು.

ಶಿವಮೊಗ್ಗ ಐಡಬ್ಲ್ಯೂಸಿಯ ಪ್ರಸ್ತುತ ಅಧ್ಯಕ್ಷೆ ಸುನೀತಾ ಮೋಹನ್, ಸಂಪಾದಕಿ ಸೋಮಿಯಾ ಮತ್ತು ಮಂಡಳಿಯ ಸದಸ್ಯೆ ಶ್ರೀರಂಜಿನಿ ದತ್ತಾತ್ರಿ ರವರು ಮಾನವ ಜೀವನದಲ್ಲಿ ವೈದ್ಯರ ಪ್ರಾಮುಖ್ಯತೆ ಮತ್ತು ಹೊಯ್ಸಳ ಆರೋಗ್ಯ ಕೇಂದ್ರದ ಬೆನ್ನೆಲುಬಾಗಿರುವ ಡಾ. ಕೇಶವಮೂರ್ತಿ ಸಿಜಿ ರವರ ಸಹಾಯದಿಂದ ಹೊಯ್ಸಳ ಆರೋಗ್ಯ ಕೇಂದ್ರವು ಒದಗಿಸುವ ಅಸಾಧಾರಣ ಸೇವೆಯ ಬಗ್ಗೆ ಮಾತನಾಡಿದರು.

ಈ ವಿಶೇಷ ಸಂದರ್ಭದಲ್ಲಿ ಡಾ. ಕೇಶವಮೂರ್ತಿ ಸಿ.ಜಿ ರವರನ್ನು ಗೌರವಿಸಲಾಯಿತು. ಹೊಯ್ಸಳ ಆರೋಗ್ಯ ಕೇಂದ್ರದಲ್ಲಿ ಮೂತ್ರಪಿಂಡ ಡಯಾಲಿಸಿಸ್ ಚಿಕಿತ್ಸೆಗಾಗಿ ಇಬ್ಬರು ಬಡ ರೋಗಿಗಳಿಗೆ ಔಷಧೀಯ ವೆಚ್ಚಗಳಿಗಾಗಿ ಇಬ್ಬರು ರೋಗಿಗಳಿಗೆ ದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡಯಾಲಿಸಿಸ್ ರೋಗಿಗಳಿಗೆ ಆರ್ಥಿಕ ನೆರವು ನೀಡಲಾಯಿತು.

ಈ ವೇಳೆ ಇನ್ನರ್ ವೀಲ್ ಅಧ್ಯಕ್ಷರಾದ ಮಮತಾ ಸುಧೀಂದ್ರ, ಕಾರ್ಯದರ್ಶಿ ನಿರ್ಮಲಾ ಕೆ.ಪಿ., ಮಾಜಿ ಅಧ್ಯಕ್ಷರಾದ ಬಿಂದು ವಿಜಯ್ ಕುಮಾರ್, ಇನ್ನರ್ ವೀಲ್ ಸದಸ್ಯೆರು ಹಾಗೂ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಆಯನೂರು ಚಿನ್ಮನೆ ಸನಿಹ ” ಹಿಟ್ ಅಂಡ್ ರನ್” ಪ್ರಕರಣ ದಾಖಲು

0

ಆಯನೂರು ಸಮೀಪದ ಚಿನ್ನಮನೆ ಬಸ್ ನಿಲ್ದಾಣದ ಸಮೀಪ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಮತ್ತೋರ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಲಾರಿ ಚಾಲಕನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ವೇಗವಾಗಿ ಪರಾರಿಯಾಗಲು ಯತ್ನಿಸಿದ್ದಾನೆ ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಸಾರ್ವಜನಿಕರು ಲಾರಿಯನ್ನು ಬೆನ್ನಟ್ಟಿ ಅರಸಾಳು ರೈಲ್ವೆ ನಿಲ್ದಾಣದವರೆಗೆ ತೆರಳಿ ಅಡ್ಡಗಟ್ಟಿದರು. ಆದರೆ ಈ ವೇಳೆ ಲಾರಿ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಚಿನ್ನಮನೆಯ ರಾಘು ಎಂಬುವವರಿಗೆ ಅವರಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಇನ್ನೊಂದು ಬೈಕ್ ನಲ್ಲಿದ್ದ ಹಾಲೇಶಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ಎರಡು ಬೈಕ್ ನಜ್ಜುಗುಜ್ಜಾಗಿವೆ. ಗಾಯಾಳು ರಾಘು ಎಂಬುವವರನ್ನು ಮೊದಲಿಗೆ ಆಯನೂರಿನ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಿಪ್ಪನ್‌ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಲಾರಿಯನ್ನು ವಶಕ್ಕೆ ಪಡೆದು, ಘಟನೆ ನಡೆದಿರುವ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಗೆ ವಾಹನವನ್ನು ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುಂಸಿ ಪೊಲೀಸರು ಲಾರಿ ಚಾಲಕನ ಪತ್ತೆಗೆ ಕ್ರಮ ಕೈಗೊಂಡಿದ್ದು, ಅಪಘಾತಕ್ಕೆ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.

ಕಲಬುರ್ಗಿಯಲ್ಲಿ ಸೀಎಂ ಡಿ.ಕೆ.ಶಿವಕುಮಾರ್ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

0

ಕಲಬುರಗಿ‌ ವಿಭಾಗ ಮಟ್ಟದ ಬರ ಪರಿಸ್ಥಿತಿ ಅವಲೊಕಿಸಲು ಜಿಲ್ಲೆಗೆ ಅಗಮಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ನೂರಾರು ಪ್ರತಿನಿಧಿಗಳಿಂದ ಅಹವಾಲು ಆಲಿಸಿದರು.

ಜುಲೈ ತಿಂಗಳಲ್ಲಿಯೂ ಮಳೆ ಬರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಕಲಬುರಗಿ ಜಿಲ್ಲೆಯನ್ನು ಬರಗಾಲ ಪಿಡಿತ ಪ್ರದೇಶವೆಂದು ಘೋಷಿಸಬೇಕು. ಕಳೆದ ವರ್ಷದ ಬಾಕಿ ಬೆಳೆ ವಿಮಿ ಮೊತ್ತ 300 ಕೋಟಿ ರೂ. ಕೂಡಲೆ ಬಿಡುಗಡೆ ಮಾಡಬೇಕೆಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಸಿ.ಪಾಟೀಲ ಮನವಿ ಮಾಡಿದರು.

ಎಸ್.ಟಿ ಸಮುದಾಯಕ್ಕೆ ಸೇರಿದ ತಳವಾರ, ನಾಯ್ಕಡ್ ವರ್ಗದ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಜಾತಿ ಪ್ರಮಾಣ ಪತ್ರ‌ ನಿಡುತ್ತಿಲ್ಲ, ಇದರಿಂದ ಸಮಾಜದ ಯುವಕರಿಗೆ ಉದ್ಯೋಗ, ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಕೂಡಲೆ ಸಮಸ್ಯೆ ಬಗೆಹರಿಸಬೇಕೆಂದರು.

ಬೆಳೆ ಸಾಲ ಮನ್ನಾ ಮಾಡಿ:

ಕಳೆದ ವರ್ಷ ಅತಿವೃಷ್ಟಿಯಿಮದ ಹಸಿ ಬರಗಾಲ ಬಂದರೆ, ಈ ವರ್ಷ ಮಳೆ ಬಾರದೆ ಒಣ ಬರಗಾಲ ನೋಡುವ ಸ್ಥಿತಿ ನಮ್ಮ ರೈತಾಪಿ ವರ್ಗಕ್ಕೆ ಬಂದಿದೆ. ಕಲಬುರಗಿ ಜಿಲ್ಲೆಯಲ್ಲಿ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆ ಬಿದ್ದ ಕಾರಣ ಇದೂವರೆಗೆ ಶೇ.30ರಷ್ಡು ಮಾತ್ರ ಬಿತ್ತನೆ ಮಾಡಲಾಗಿದೆ. ಬಿತ್ತನೆ ನಂತರ ಮಖೆ ಬರದ ಕಾರಣ ರೈತ ಕಂಗಾಲಿದ್ದಾನೆ. ಸಾಲ ಸೂಲ ಮಾಡಿ ಬೀಜ. ಗೊಬ್ಬರ ಖರೀದಿ ಮಾಡಿದ್ದು, ಬೆಳೆ ಕೈಕೊಡುವ ಎಲ್ಲಾ ಲಕ್ಷ್ಣ ಗೋಚರಿಸುತ್ತಿದೆ. ಹೀಗಾಗಿ ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಪಡೆದ ರೈತರಿಗೆ ಸಾಲ ಮನ್ನಾ ಮಾಡಬೇಕೆಂದು ಸಿ‌.ಎಂ. ಅವರಿಗೆ ಮನವಿ ಪತ್ರ ಸಲ್ಲಿಸಿ ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ‌ ಸಿದ್ರಾಮಪ್ಪ ಪಾಟೀಲ ಧಂಗಾಪೂರ ಆಗ್ರಹಿಸಿದರು.

ರಾಜ್ಯದ ಉಪಮುಖ್ಯಮಂತ್ರಿ, ಕಂದಾಯ ಮತ್ತು ಯುವಜನ ಸಬಲೀಕರಣ‌ ಮತ್ತು ಕ್ರೀಡಾ ಸಚಿವ ಡಾ.ಜಿ.ರಮೇಶ್ವರ, ಗೃಹ, ಐ.ಟಿ-ಬಿ.ಟಿ ಹಾಗೂ ಇ-ಆಡಳಿತ ಎಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ,‌ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕ‌ ರಾದ ಎಂ.ವೈ.ಪಾಟೀಲ, ಜಗದೇವ ಗುತ್ತೇದಾರ ಇದ್ದರು.

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

0

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಅವರು ಶಿಕಾರಿಪುರ ರೋಟರಿ ಕದಂಬ ಕ್ಲಬ್, ಶಿವಮೊಗ್ಗ ರೋಟರಿ ಮಲೆನಾಡು ಇವರ ಸಂಯುಕ್ತಾಶ್ರಯದಲ್ಲಿ ರಾಯಲ್ ಆರ್ಕಿಡ್ ಸಭಾಂಗಣದಲ್ಲಿ ಆಯೋಜಿಸಿದ್ದ ರೋ. ಶಿವಪ್ರಕಾಶ್ ಎ.ಎಸ್. ಅವರ 60ನೇ ಜನ್ಮದಿನ ಆಚರಣೆ ಹಾಗೂ ಜಂಟಿ ಕ್ಲಬ್ ಮೀಟ್ ಕಾರ್ಯಕ್ರಮದಲ್ಲಿ ಶಿವಪ್ರಕಾಶ್ ದಂಪತಿಗಳನ್ನು ಅಭಿನಂದಿಸಿ ಮಾತನಾಡಿದರು.
ಶಿವಪ್ರಕಾಶ್ ಉತ್ತಮ ಸ್ನೇಹಿತ. ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನು ಸಾರ್ಥಕಗೊಳಿಸುತ್ತವೆ. ಸಮಾಜಮುಖಿಯಾಗಿ ಕೆಲಸ ಮಾಡಲು ಮತ್ತಷ್ಟು ಪ್ರೇರಣೆ ನೀಡುತ್ತವೆ. ಶಿವಪ್ರಕಾಶ್ ಮತ್ತು ನನ್ನ ಸ್ನೇಹ ತುಂಬಾ ಗಟ್ಟಿಯಾದುದು. ಅವರ ಸೇವಾ ಕಾರ್ಯಗಳು ಮುಂದುವರೆಯಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ರೋಟರಿ ಅಂದರೆ ಸೇವೆ, ಅದು ನಾಯಕತ್ವದ ಜೊತೆಗೆ ಪ್ರೀತಿ ವಿಶ್ವಾಸ ನೀಡುತ್ತದೆ. ಶಿವಪ್ರಕಾಶ್ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರ ಗೆಳೆತನದ ಮಹತ್ವ ಸಾರಿದ ಕಾರ್ಯಕ್ರಮವಿದು ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ಬಿ.ಎಂ. ಭಟ್, ಸಹಾಯಕ ಗವರ್ನರ್ ತೀರ್ಥಯ್ಯ, ಪಿ ಡಿ ಜಿ ಹೆಚ್ ಎಲ್ ರವಿ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ.ಆರ್.ಸಿ. ಜಗದೀಶ್, ಕದಂಬ ಕ್ಲಬ್ ನ ರೋ.ಕೆ.ಎಸ್. ರವಿ, ರೋ. ಮಧುಸೂದನ್, ಉದ್ಯಮಿ ಬೆನಕಪ್ಪ ಡಿ.ಜಿ., ಪಿಡಿಜಿ ದೇವಾನಂದ್, ರೋ.ಪ್ರೊ.ಎ.ಎಸ್. ಚಂದ್ರಶೇಖರ್, ಆನಂದಮೂರ್ತಿ, ಮಲೆನಾಡು ಕ್ಲಬ್ ಅಧ್ಯಕ್ಷೆ ರಶ್ಮಿ ಆರ್.ಎಸ್., ಕಾರ್ಯದರ್ಶಿ ಡಾ. ಸಿದ್ಧಲಿಂಗಮೂರ್ತಿ ಕೆ.ಎಸ್., ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಮೂರ್ತಿ ಎಂ ಆರ್, ಮಾತೆ ಶರಣಾಂಬಿಕೆ, ವೀಣಾ ಶಿವಪ್ರಕಾಶ್, ಶ್ರೀಮತಿ ತೇಜಸ್ವನಿ ಬಿ.ವೈ. ರಾಘವೇಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರೋಟರಿಯ 10 ಮತ್ತು 11ರ ಘಟಕದ ಸದಸ್ಯರು, ಸಂಘ ಸಂಸ್ಥೆಗಳು ಮತ್ತು ಶಿವಪ್ರಕಾಶ್ ಕುಟುಂಬ ವರ್ಗದವರು ಹಾಜರಿದ್ದು, ಶುಭ ಹಾರೈಸಿದರು.

B.Y. Raghavendra ತಾಳಗುಂದ ಶಾಸನವೇ ಕನ್ನಡದ ಮೊದಲ ಶಾಸನ ಸಂಶೋಧಕರ ಇತ್ತೀಚಿನ ಮಾಹಿತಿ ಪ್ರಕಾರ ಹಲ್ಮಿಡಿ ಶಾಸನಕ್ಕಿಂತಲೂ ತಾಳಗುಂದ ಶಾಸನವೇ ಕನ್ನಡದ ಮೊದಲ ಶಾಸನವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಹಾಗಾಗಿ ತಾಳಗುಂದದ ಶಾಸನದ ಸಂರಕ್ಷಣೆಗೆ ಹಾಗೂ ಅಭಿವೃದ್ಧಿಗೆ ಮಹತ್ವ ನೀಡಲಾಗುವುದು. ಇದರ ಜೊತೆಗೆ ಅಕ್ಕಮಹಾದೇವಿ ಕ್ಷೇತ್ರ ಉಡುತಡಿ ಸೇರಿದಂತೆ ಇಡೀ ಕ್ಷೇತ್ರವನ್ನು ಒಂದು ಸುಂದರ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲಾಗುವುದು. ಹಾಗೆಯೇ ಅಡಿಕೆ ಬೆಳೆಗಾರರ ಬಗ್ಗೆ ಶೀಘ್ರವೇ ಕೇಂದ್ರ ಮತ್ತು ಮಹಾರಾಷ್ಟ್ರದ ಜತೆ ಸಭೆ ನಡೆಸಲಾಗುವುದು. ವಿಮಾನ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

0

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ ಇದರ ಆಶ್ರಯದಲ್ಲಿ ಕಳೆದ 18 ವರ್ಷಗಳಿಂದ ನಿರಂತರವಾಗಿ ಅತ್ಯಂತ ಯಶಸ್ವಿಯಾಗಿ ಶ್ರೀ ಶ್ರೀ ಭಗವದ್ಗೀತಾ ಅಭಿಯಾನ ನಡೆಯುತ್ತಾ ಬಂದಿದೆ. ಪ್ರಸ್ತುತ 2026 ರ ಶ್ರೀ ಭಗವದ್ಗೀತಾ ಅಭಿಯಾನವು ವಿಜಯನಗರ ಜಿಲ್ಲೆಯನ್ನು ಕೇಂದ್ರಿತವಾಗಿ ನಡೆಸುವುದಾಗಿ ಶ್ರೀ ಶ್ರೀಗಳು ಆದೇಶಿಸಿದ್ದಾರೆ. ಅದರಂತೆಯೇ ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ ಯಲ್ಲಿ ಪೂರ್ವಭಾವಿಯಾಗಿ ವಿಜಯನಗರ ಜಿಲ್ಲಾ ಮಟ್ಟದ ಪ್ರಮುಖರ ಸಭೆ ಯಶಸ್ವಿಯಾಗಿ ನಡೆಯಿತು.
ಅಭಿಯಾನದ ಮುಖ್ಯ ಉದ್ದೇಶವಾದ ಭಗವದ್ಗೀತೆಯ ಸಾರ್ವಕಾಲಿಕ ಸಂದೇಶಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವುದು. ಈ ಉದ್ದೇಶವನ್ನು ಸಾಕಾರ ಗೊಳಿಸಲು, ಅಭಿಯಾನದ ಯಶಸ್ಸಿಗೆ ಜಿಲ್ಲಾ ಮಟ್ಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.

Sri Sonda Swarnavalli Mahasansthan ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧೀಶರು ಸಭೆಯ ಮುಖ್ಯ ಮಾರ್ಗದರ್ಶನ ಹಾಗೂ ಆಶೀರ್ವಚನವನ್ನು ನೀಡಿದರು. ಸ್ಥಳೀಯ ಮಠಾಧೀಶರಾದ ಹೊಸಪೇಟೆಯ ಕಾಮಾಕ್ಷಿ ದೇವಸ್ಥಾನದ ಶ್ರೀ ಶ್ರೀಮದ್ ಅಂಜನಾನಂದ ಸರಸ್ವತೀ ಮಹಾಸ್ವಾಮಿಗಳು, ಹೊಸಪೇಟೆಯ ಗೀತಾಶ್ರಮದ
ಸುಮೇದಾನಂದ ಸ್ವಾಮಿಗಳು ದಿವ್ಯ ಸಾನ್ನಿಧ್ಯವನ್ನು ನೀಡಿದ್ದರು.
ತಾಲ್ಲೂಕು ಮತ್ತು ಗ್ರಾಮ ಮಟ್ಟದ ಸಮಿತಿಗಳ ರಚನೆ, ವಿಜಯನಗರ ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಗೀತಾ ಅಭಿಯಾನವನ್ನು ತಲುಪಿಸಲು ಪ್ರತ್ಯೇಕ ಕಾರ್ಯಕರ್ತರ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಯಿತು.