Monday, March 2, 2026
Monday, March 2, 2026
Home Blog Page 312

Shiralakoppa Police ಈರ್ವರು ವ್ಯಕ್ತಿಗಳ ನಾಪತ್ತೆ, ಶಿರಾಳಕೊಪ್ಪ ಪೊಲೀಸ್ ಠಾಣೆ ಮಾಹಿತಿ ಪ್ರಕಟಣೆ

0

Shiralakoppa Police ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಕಾಣೆಯಾಗಿದ್ದು, ಮರು ಪ್ರಕಟಣೆಗಾಗಿ ಕೋರಿರುತ್ತಾರೆ.
ಶಿಕಾರಿಪುರ ತಾಲೂಕು ಶಿರಾಳಕೊಪ್ಪ ನಗರ ಹಳ್ಳೂರುಕೇರಿ ವಾಸಿ ತಬ್ರೇಜ್ ಖಾನ್ ಎಂಬುವವರ ಮಗ ತಾಹೀರ್ ಖಾನ್ ಎಂಬ 26 ವರ್ಷದ ಯುವಕ ಏಪ್ರಿಲ್ 2023ರಲ್ಲಿ ಕಾಣೆಯಾಗಿದ್ದು ಈವರೆಗೂ ಮನೆಗೆ ವಾಪಾಸ್ಸಾಗಿರುವುದಿಲ್ಲ.

ಈತನ ಚಹರೆ 5.2 ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ ಹೊಂದಿದ್ದು, ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ.

ಶಿರಾಳಕೊಪ್ಪ ನಗರ, ಬೆಲವಂತನಕೊಪ್ಪ ವಾಸಿ ಚೇತನಕುಮಾರ್ ಎಂಬುವವರ ಅಣ್ಣ ಶ್ರೀಧರ ಬಿನ್ ಜಗನ್ನಾಥ ಎಂಬ 40 ವರ್ಷದ ವ್ಯಕ್ತಿ ನವೆಂಬರ್ 2024 ರಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಈತನ ಚಹರೆ 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.

Shiralakoppa Police ಈ ಇಬ್ಬರು ವ್ಯಕ್ತಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆ ಪೊ.ನಂ.: 9480803367 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.

Kuvempu Shatamanotsava College ರಕ್ತದಾನದಿಂದ ಪ್ರಾಣವುಳಿಸುವುದುಪುಣ್ಯದ ಕೆಲಸ- ಎಸ್.ಪಿ.ದಿನೇಶ್

0

Kuvempu Shatamanotsava College ಎಲ್ಲಾ ದಾನಗಳಿಗಿಂತ ರಕ್ತದಾನ ತುಂಬಾ ಶ್ರೇಷ್ಠವಾದ ದಾನ ದಾನದಿಂದ ಸದಾ ಲವಲವಿಕೆಯಿಂದ ಇರುವುದರ ಜೊತೆಗೆ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಎಸ್ ಪಿ ದಿನೇಶ್ ಅವರು ಅಭಿಮತ ವ್ಯಕ್ತಪಡಿಸಿದರು. ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಶೋಭಾ ಕಡಿದಾಳ ಸಭಾಂಗಣದಲ್ಲಿ ಆಯೋಜಿಸಲಾಗ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಹಾಗೂ ಬೃಹ ರಕ್ತದಾನ ಶಿಬಿರ ಹಾಗೂ ರಕ್ತದಾನದ ಬಗ್ಗೆ ಜಾಗೃತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು . ಇಂದು ರಕ್ತದ ಕೊರತೆ ಸಾಕಷ್ಟು ಇದೆ ಸಕಾಲದಲ್ಲಿ ರಕ್ತ ಸಿಗದೇ ಸಾಕಷ್ಟು ಜನ ಪ್ರಾಣವನ್ನು ಬಿಡುತ್ತಿದ್ದಾರೆ ಈ ನಿಟ್ಟಿನಲ್ಲಿ ಯುವಕರು ಯುವತಿಯರು ರಕ್ತದಾನ ಮಾಡಿ ಸದೃಢವಾದ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ನುಡಿದರು ಮೂಢನಂಬಿಕೆಯಿಂದ ಹೊರ ಬಂದು ರಕ್ತದಾನ ಮಾಡಿ ಇನ್ನೊಬ್ಬರ ಪ್ರಾಣ ಉಳಿಸುವ ಪುಣ್ಯದ ಕೆಲಸದಲ್ಲಿ ನಾವು ನೀವೆಲ್ಲರೂ ಪಾಲ್ಗೊಳ್ಳೋಣ ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠದಾನ ಎಂದು ನುಡಿದರು. Kuvempu Shatamanotsava College ಇದೇ ಸಂದರ್ಭದಲ್ಲಿ ಶಿಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯ್ ಕುಮಾರ್ ಅವರು ಮಾತನಾಡುತ್ತ ನಿಜವಾದ ಮನಕುಲದ ಸೇವೆಯನ್ನು ಇಂದು ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಸಂಸ್ಥೆ ಮಾಡುತ್ತ ಇದೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ಸುದರ್ಶನ್ ತಾಯಿ ಮನೆ ಅವರು ವಹಿಸಿ ಮಾತನಾಡುತ್ತಾ ಇಂದು ರಕ್ತದಾನ ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನ ನಮ್ಮ ದೇಹದಲ್ಲಿ ರಕ್ತದಾನ ಮಾಡುವ ಶಕ್ತಿ ಇದ್ದಾಗಲೇ ರಕ್ತದಾನ ಮಾಡಬೇಕು ನಾವು ಕೊಡುವ ಒಂದು ಯೂನಿಟ್ ರಕ್ತದಿಂದ ಇಂದು ನಾಲ್ಕು ಜನರ ಪ್ರಾಣವನ್ನ ಉಳಿಸಬಹುದಾಗಿದೆ ಇಂದಿನ ಪರಿಸ್ಥಿತಿಯಲ್ಲಿ ರಸ್ತೆ ಅಪಘಾತಗಳು ಆದಾಗ ಮತ್ತು ಹೆರಿಗೆ ಸಂದರ್ಭದಲ್ಲಿ ಮಾತೃ ಮರಣ ತಡೆಯಲು ರಕ್ತದ ಅವಶ್ಯಕತೆ ಇರುತ್ತೆ ಇದಕ್ಕೆ ನಾವು ರಕ್ತದಾನ ಮಾಡಬೇಕು ರಕ್ತ ಅಮೂಲ್ಯ ವಾದದ್ದು ಎಂದು ಮುಖ್ಯ ಅತಿಥಿ ಯಾಗಿ ಭಗವಾಹಿಸಿದ ರೆಡ್ಕ್ರಾ ಸ್ ನಿರ್ದೇಶಕರು ಡಾ. ರೇಷ್ಮಾ ಇವರು ಇಂತಹ ಪವಿತ್ರ ಕಾರ್ಯದಲ್ಲಿ ನಮ್ಮ ಮಕ್ಕಳು ಪಾಲ್ಗೊಳ್ಳುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಮುಂದಿನ ದಿನಗಳಲ್ಲಿ ನಮ್ಮ ಕಾಲೇಜಿನಲ್ಲಿ ಇರುವ ಎಲ್ಲಾ ವಿದ್ಯಾರ್ಥಿಗಳು ಸಹ ರಕ್ತದಾನ ಮಾಡಲು ಅವರಿಗೆ ಪ್ರೇರೇಪಿಸುತ್ತೇವೆ ಎಂದು ನುಡಿದರು. ವೇದಿಕೆಯಲ್ಲಿ ರೆಡ್ ಕ್ರಾಸ್ ನಿರ್ದೇಶಕರಾದ ಡಾ. ರೇಷ್ಮಾ. ಆರ್ ಗಿರೀಶ್. ಶ್ರೀ. ಕೆ. ಸಿ ಬಸವರಾಜ, ಗೌರವ ಕಾರ್ಯದರ್ಶಿಗಳು ಡಾ. ದಿನೇಶ್ ಉಪಾಧ್ಯಕ್ಷರಾದ ಟೀ ಆರ್ ಅಶ್ವಥ್ ನಾರಾಯಣ್. ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಮಧು ರಕ್ತದಾನಿ ಧರಣೇಂದ್ರ ದಿನಕರ್. ದೈಹಿಕ ಶಿಕ್ಷಣ ನಿರ್ದೇಶಕರಾದ ಶೀಲಾ ಎನ್ ಹೆಚ್ ಉಪಸ್ಥಿತರಿದ್ದರು

Muncipal Corporation ಸ್ವಚ್ಛತೆ & ಕುಡಿಯುವ ನೀರು‌ ಪೂರೈಕೆಗೆ ಆದ್ಯತೆ-ಪ್ರಭು‌ಮೇಸ್ತ್ರಿ

0

Muncipal Corporation ಪುರಸಭೆ ವ್ಯಾಪ್ತಿಗೆ ಒಳಪಡುವ ಕೆಇಬಿ ಕಾಲೋನಿ ಮತ್ತು ಕಾನುಕೊಪ್ಪ ಪ್ರದೇಶಕ್ಕೆ ಪುರಸಭೆ ಅಧ್ಯಕ್ಷ ಪ್ರಭುಮೇಸ್ತ್ರಿ ಗುರುವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ, ಸ್ವಚ್ಛತೆ ಮತ್ತು ಮೂಲ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಮಳೆ ಬಂತೆಂದರೆ ಸಮರ್ಪಕವಾಗಿ ಚರಂಡಿಯಲ್ಲಿ ನೀರು ಹರಿಯುವುದಿಲ್ಲ. ಕೆಲ ಖಾಲಿ ನಿವೇಶನಗಳಲ್ಲಿ ಗಿಡ-ಗಂಟಿಗಳು ಬೆಳೆದು ನಿಂತಿದೆ. ಇದು ವಿಷಜಂತುಗಳ ವಾಸಸ್ಥಾನವಾಗಿ ಮಾರ್ಪಡುತ್ತಿದೆ. ಕೊಡಕಣಿ ಗ್ರಾಮ ಪಂಚಾಯಿತಿಯಿಂದ ಪುರಸಭೆಗೆ ಸೇರ್ಪಡೆಯಾಗಿದ್ದರೂ ಸಹ ಕುಡಿಯುವ ನೀರು ಪೂರೈಸುವ ನಲ್ಲಿಗಳ ದುರಸ್ಥಿ ಕಾರ್ಯವಾಗಬೇಕು. ಕೆಲವಡೆ ಪೈಪ್‌ಗಳು ಒಡೆದು ನೀರು ಪೋಲಾಗುತ್ತದೆ ಎಂದು ಸಾರ್ವಜನಿಕರು ಪುರಸಭೆ ಅಧ್ಯಕ್ಷರಲ್ಲಿ ಅಹವಾಲು ತೋಡಿಕೊಂಡರು.
ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷ ಪ್ರಭುಮೇಸ್ತ್ರಿ ಪುರಸಭೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಿಗೂ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಅಂದಾಜು ಪಟ್ಟಿ ಮಾಡುವಂತೆ ಇಂಜಿನಿಯರ್ ಅವರಿಗೆ ತಿಳಿಸಲಾಗುವುದು. Muncipal Corporation ಮುಂದಿನ ಸಾಮಾನ್ಯ ಸಭೆಯಲ್ಲಿ ಕೆಇಬಿ ಕಾಲೋನಿ ಮತ್ತು ಕಾನುಕೊಪ್ಪ ಪ್ರದೇಶಗಳಿಗೆ ಸೂಕ್ತವಾದ ಸವಲತ್ತುಗಳನ್ನು ಒದಲಾಗಿಸಲಾಗುವುದು ಹಾಗೂ ಗಿಡ-ಗಂಟಿಗಳು ಬೆಳೆದಿರುವ ಖಾಲಿ ನಿವೇಶನದಾರರಿಗೆ ನೋಟೀಸ್ ನೀಡಲಾಗುವುದು ಎಂದ ಅವರು, ನೀರು ಪೋಲಾಗುವ ಸ್ಥಳಗಳನ್ನು ಗುರುತಿಸಿ ತಕ್ಷಣವೇ ದುರಸ್ಥಿ ಮಾಡಬೇಕು ಹಾಗೂ ಸ್ವಚ್ಛತೆ, ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಆರೋಗ್ಯ ನಿರೀಕ್ಷಕ ಎ.ಎನ್. ರವಿಕುಮಾರ್ ನಾಯ್ಕ್, ಗ್ರಾಪಂ ಮಾಜಿ ಸದಸ್ಯ ಚಿನ್ನಪ್ಪ, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ದತ್ತಾ ಸೊರಬ ಸೇರಿದಂತೆ ಪುರಸಭೆ ಸಿಬ್ಬಂದಿ ಮುನಿಸ್ವಾಮಿ ಇತರರಿದ್ದರು.

Klive Special Article ಮುಖ ಮತ್ತು ದವಡರ ಶಸ್ತ್ರ ಚಿಕಿತ್ಸೆ ಏಕೆ? ಹೇಗೆ? ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಮಾಹಿತಿ

0

Klive Special Article ಮುಖ ಮತ್ತು ದವಡೆ ಶಸ್ತ್ರಚಿಕಿತ್ಸೆಯು ಶಸ್ತ್ರಚಿಕಿತ್ಸೆಯ ಒಂದು ವಿಶೇಷ ವಿಭಾಗವಾಗಿದೆ. ಇದು ಮುಖ, ದವಡೆಗಳು ಮತ್ತು ಅವುಗಳ ಸುತ್ತಮುತ್ತಲಿನ ಭಾಗಗಳಲ್ಲಿ ಕಂಡುಬರುವ ತೊಂದರೆಗಳು, ಗಾಯಗಳು ಮತ್ತು ದೋಷಗಳ ಪತ್ತೆಹಚ್ಚುವಿಕೆ (ರೋಗನಿರ್ಣಯ), ಚಿಕಿತ್ಸೆ ಮತ್ತು ನಿರ್ವಹಣೆಗೆ ಸಂಬಂಧಿಸಿದೆ. ಈ ಕ್ಷೇತ್ರದ ತಜ್ಞರು, ಅಂದರೆ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು, ಸಾಮಾನ್ಯ ಹಲ್ಲು ತೆಗೆಯುವುದರಿಂದ ಹಿಡಿದು ಅತ್ಯಂತ ಸಂಕೀರ್ಣವಾದ ಪುನರ್‌ನಿರ್ಮಾಣ ಶಸ್ತ್ರಚಿಕಿತ್ಸೆಗಳವರೆಗೆ ಹಲವಾರು ಬಗೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ತರಬೇತಿ ಪಡೆದಿರುತ್ತಾರೆ.

ಮುಖ ಮತ್ತು ದವಡೆ ಶಸ್ತ್ರಚಿಕಿತ್ಸೆಯ ವ್ಯಾಪ್ತಿ

ಈ ಶಸ್ತ್ರಚಿಕಿತ್ಸೆಯು ಈ ಕೆಳಗಿನ ಹಲವು ವಿಧಾನಗಳನ್ನು ಒಳಗೊಂಡಿದೆ:

ಆರ್ಥೊಗ್ನಾಥಿಕ್ ಶಸ್ತ್ರಚಿಕಿತ್ಸೆ (Orthognathic Surgery – ದವಡೆ ಸರಿಪಡಿಸುವ ಶಸ್ತ್ರಚಿಕಿತ್ಸೆ): ದವಡೆಗಳು ಮತ್ತು ಹಲ್ಲುಗಳ ಸ್ಥಾನದಲ್ಲಿನ ದೋಷಗಳನ್ನು ಸರಿಪಡಿಸಲು ಈ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇದನ್ನು ‘ಸರಿಪಡಿಸುವ ದವಡೆ ಶಸ್ತ್ರಚಿಕಿತ್ಸೆ’ ಎಂದೂ ಕರೆಯುತ್ತಾರೆ. ಇದು ದವಡೆ ಮತ್ತು ಮುಖದ ರಚನೆಯ ಕಾರ್ಯಕ್ಷಮತೆ ಹಾಗೂ ಸೌಂದರ್ಯವನ್ನು ಸುಧಾರಿಸುವ ಗುರಿ ಹೊಂದಿದೆ. ಆರ್ಥೊಗ್ನಾಥಿಕ್ ಶಸ್ತ್ರಚಿಕಿತ್ಸೆಯು ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ನುರಿತ ಶಸ್ತ್ರಚಿಕಿತ್ಸಕರಿಂದ ಬಹಳ ಎಚ್ಚರಿಕೆಯಿಂದ ಯೋಜನೆ ರೂಪಿಸಿ ಮತ್ತು ಕಾರ್ಯಗತಗೊಳಿಸುವ ಅಗತ್ಯವಿರುತ್ತದೆ.

ಫೇಸ್‌ಲಿಫ್ಟ್ (Facelift – ಮುಖದ ಚರ್ಮ ಬಿಗಿಗೊಳಿಸುವಿಕೆ): ಇದನ್ನು ‘ರೈಟಿಡೆಕ್ಟೊಮಿ’ ಎಂದೂ ಕರೆಯುತ್ತಾರೆ. ಮುಖದ ಮೇಲಿನ ವಯಸ್ಸಾಗುವಿಕೆಯ ಲಕ್ಷಣಗಳಾದ ಸುಕ್ಕುಗಳು, ನೆರಿಗೆಗಳು ಮತ್ತು ಜೋತುಬಿದ್ದ ಚರ್ಮವನ್ನು ಕಡಿಮೆ ಮಾಡಲು ಈ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.

ಕಣ್ಣುರೆಪ್ಪೆಗಳ ಶಸ್ತ್ರಚಿಕಿತ್ಸೆ (Eyelid Surgery – ಬ್ಲೆಫೆರೋಪ್ಲ್ಯಾಸ್ಟಿ): ಈ ಶಸ್ತ್ರಚಿಕಿತ್ಸೆಯು ಮೇಲಿನ ಮತ್ತು/ಅಥವಾ ಕೆಳಗಿನ ಕಣ್ಣುರೆಪ್ಪೆಗಳಲ್ಲಿನ ಹೆಚ್ಚುವರಿ ಚರ್ಮ, ಕೊಬ್ಬು ಮತ್ತು ಸ್ನಾಯುಗಳನ್ನು ತೆಗೆದುಹಾಕಲು ನೆರವಾಗುತ್ತದೆ, ಇದರಿಂದ ಮುಖವು ಹೆಚ್ಚು ಯೌವನಯುತವಾಗಿ ಮತ್ತು ತಾಜಾತನದಿಂದ ಕಾಣುತ್ತದೆ.

ರೈನೋಪ್ಲ್ಯಾಸ್ಟಿ (Rhinoplasty – ಮೂಗಿನ ಶಸ್ತ್ರಚಿಕಿತ್ಸೆ): ಇದನ್ನು ಸಾಮಾನ್ಯವಾಗಿ ‘ನೋಸ್ ಜಾಬ್’ ಎಂದು ಕರೆಯಲಾಗುತ್ತದೆ. ಮೂಗಿನ ಆಕಾರ ಮತ್ತು ಗಾತ್ರವನ್ನು ಬದಲಾಯಿಸಿ, ಅದರ ಸೌಂದರ್ಯವನ್ನು ಹೆಚ್ಚಿಸಲು ಮತ್ತು ಕೆಲವು ಸಂದರ್ಭಗಳಲ್ಲಿ ಉಸಿರಾಟದಂತಹ ಕಾರ್ಯವನ್ನು ಸುಧಾರಿಸಲು ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ.

ಬ್ರೋ ಲಿಫ್ಟ್ (Brow Lift – ಹುಬ್ಬು/ಹಣೆ ಎತ್ತುವಿಕೆ): ಇದನ್ನು ‘ಫೋರ್‌ಹೆಡ್ ಲಿಫ್ಟ್’ ಎಂದೂ ಕರೆಯುತ್ತಾರೆ. ಹಣೆ ಮತ್ತು ಹುಬ್ಬಿನ ಭಾಗದಲ್ಲಿನ ಸುಕ್ಕುಗಳು, ನೆರಿಗೆಗಳು ಮತ್ತು ಜೋತುಬಿದ್ದ ಚರ್ಮದ ನೋಟವನ್ನು ಕಡಿಮೆ ಮಾಡಲು ಇದನ್ನು ಮಾಡಲಾಗುತ್ತದೆ.

Klive Special Article ಮುಖದ ಗಾಯಗಳಿಗೆ ಶಸ್ತ್ರಚಿಕಿತ್ಸೆ (Facial Trauma Surgery): ಮುಖಕ್ಕೆ ಉಂಟಾದ ಗಾಯಗಳಿಗೆ, ಉದಾಹರಣೆಗೆ ಮೂಳೆ ಮುರಿತಗಳು ಮತ್ತು ಚರ್ಮದ ಸೀಳಿಕೆಗಳಿಗೆ ಚಿಕಿತ್ಸೆ ನೀಡುವುದು.

ಬಾಯಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸೆ (Oral Cancer Surgery): ಬಾಯಿಯ ಕ್ಯಾನ್ಸರ್‌ಗಳಿಗೆ ಶಸ್ತ್ರಚಿಕಿತ್ಸಕ ಚಿಕಿತ್ಸೆ ನೀಡುವುದು. ಇದರಲ್ಲಿ ಕ್ಯಾನ್ಸರ್ ಗೆಡ್ಡೆಯನ್ನು ತೆಗೆದುಹಾಕುವುದು ಮತ್ತು ಅಗತ್ಯವಿದ್ದಲ್ಲಿ ಪುನರ್‌ನಿರ್ಮಾಣ ಮಾಡುವುದು ಸೇರಿದೆ.

ಪುನರ್‌ನಿರ್ಮಾಣ ಶಸ್ತ್ರಚಿಕಿತ್ಸೆ (Reconstructive Surgery): ಗಾಯ, ರೋಗ ಅಥವಾ ಜನ್ಮಜಾತ ದೋಷಗಳಿಂದ ಉಂಟಾದ ಮುಖದ ನ್ಯೂನತೆಗಳನ್ನು ಸರಿಪಡಿಸಿ, ಮೂಲರೂಪಕ್ಕೆ ತರುವುದು.

ಮುಖ ಮತ್ತು ದವಡೆ ಶಸ್ತ್ರಚಿಕಿತ್ಸೆಯ ಪ್ರಯೋಜನಗಳು

ಮುಖ ಮತ್ತು ದವಡೆ ಶಸ್ತ್ರಚಿಕಿತ್ಸೆಯಿಂದ ಹಲವಾರು ಪ್ರಯೋಜನಗಳಿವೆ, ಅವುಗಳೆಂದರೆ:

ಸುಧಾರಿತ ಕಾರ್ಯಕ್ಷಮತೆ: ದವಡೆಗಳು, ಹಲ್ಲುಗಳು ಮತ್ತು ಸುತ್ತಮುತ್ತಲಿನ ರಚನೆಗಳ ಕಾರ್ಯವು ಉತ್ತಮಗೊಳ್ಳುತ್ತದೆ.

ವರ್ಧಿತ ಸೌಂದರ್ಯ: ಮುಖ ಮತ್ತು ನಗುವಿನ ಅಂದ ಹೆಚ್ಚುತ್ತದೆ.

ನೋವು ನಿವಾರಣೆ: ದೀರ್ಘಕಾಲದ ನೋವು ಮತ್ತು ಅಸ್ವಸ್ಥತೆಯಿಂದ ಮುಕ್ತಿ ಸಿಗುತ್ತದೆ.

ಉತ್ತಮ ಜೀವನ ಗುಣಮಟ್ಟ: ವ್ಯಕ್ತಿಯ ಜೀವನದ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸುತ್ತದೆ. ಇದು ಅವರಿಗೆ ಆತ್ಮವಿಶ್ವಾಸದಿಂದ ತಿನ್ನಲು, ಮಾತನಾಡಲು ಮತ್ತು ಸಾಮಾಜಿಕವಾಗಿ ಬೆರೆಯಲು ಸಹಾಯ ಮಾಡುತ್ತದೆ.

ಹೆಚ್ಚಿದ ಆತ್ಮವಿಶ್ವಾಸ: ವ್ಯಕ್ತಿಯ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ತಮ್ಮ ದೇಹದ ಬಗ್ಗೆ ಹೆಚ್ಚು ಆರಾಮದಾಯಕ ಭಾವನೆ ಮೂಡಿಸುತ್ತದೆ.

ಸಾರಾಂಶ

ಮುಖ ಮತ್ತು ದವಡೆ ಶಸ್ತ್ರಚಿಕಿತ್ಸೆಯು ಅತ್ಯಂತ ವಿಶೇಷವಾದ ಕ್ಷೇತ್ರವಾಗಿದ್ದು, ಇದಕ್ಕೆ ಅಪಾರ ಕೌಶಲ್ಯ ಮತ್ತು ಪರಿಣತಿಯ ಅಗತ್ಯವಿದೆ. ವಿವಿಧ ರೀತಿಯ ತೊಂದರೆಗಳು, ಗಾಯಗಳು ಮತ್ತು ದೋಷಗಳಿಂದ ಬಳಲುತ್ತಿರುವ ವ್ಯಕ್ತಿಗಳ ದೈಹಿಕ ಕಾರ್ಯಕ್ಷಮತೆ, ಸೌಂದರ್ಯ ಮತ್ತು ಜೀವನದ ಗುಣಮಟ್ಟವನ್ನು ಪುನಃಸ್ಥಾಪಿಸುವಲ್ಲಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ.

Ramakrishna Vidyaniketan School ಕು.ನಿಹಾರಿಕಾ ಗೆ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ‌ 615/625

0


Ramakrishna Vidyaniketan School ಶಿವಮೊಗ್ಗ ನಗರದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿ ನಿಹಾರಿಕಾ ಎಸ್.ಕೆ. 615/525 ಅಂಕ ಪಡೆದು ರಾಜ್ಯದಲ್ಲಿ 11 ನೇ ರ‍್ಯಾಂಕ್ ಪಡೆದು ಜಿಲ್ಲೆಗೂ-ಶಾಲೆಗೂ ಕೀರ್ತಿ ತಂದಿದ್ದಾರೆ. ಇವರು ಕೇಶವಮೂರ್ತಿರವರ ಪುತ್ರಿಯಾಗಿದ್ದಾರೆ.

Red Cross Sanjeevini Blood Centre ಇಂದಿನ ಪರಿಸ್ಥಿತಿಯಲ್ಲಿ ಆಧುನಿಕ ರಕ್ತ ಪರೀಕ್ಷಾಯಂತ್ರಗಳು‌ತುಂಬಾ ಅಗತ್ಯವಿವೆ- ಗುರುದತ್ತ ಹೆಗಡೆ

0

Red Cross Sanjeevini Blood Centre ತಂತ್ರಜ್ಞಾನ ಮುಂದುವರೆದಂತೆ ಆಧುನಿಕ ಯಂತ್ರಗಳಿಂದ ಕಾಯಿಲೆಯನ್ನು ಬೇಗ ಪತ್ತೆ ಹಚ್ಚಬಹುದು ಹಾಗೆ ಬೇಗನೆ ಪರಿಹಾರವನ್ನು ಸಹ ಕಂಡುಕೊಳ್ಳಬಹುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಮಾನ್ಯ ಗುರುದತ್ ಹೆಗಡೆಯವರು ನುಡಿದರು ಅವರು ಇಂದು ಬೆಳಿಗ್ಗೆ ನಗರದ ಜೆಪಿಎನ್ ರಸ್ತೆಯಲ್ಲಿರುವ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಸೆಂಟರ್ ನಲ್ಲಿ ಅತ್ಯಾಧುನಿಕ ರಕ್ತ ಪರೀಕ್ಷಾ ಯಂತ್ರ ಉದ್ಘಾಟನೆ ಮಾಡಿ ಮಾತನಾಡಿದರು. ಇಂತಹ ಆಧುನಿಕ ರಕ್ತಪರಿಕ್ಷಾ ಯಂತ್ರಗಳು ಇಂದು ತುಂಬಾ ಅಗತ್ಯತೆ ಇದೆ ಎಂದು ನುಡಿದರು ಇಂದು ರಕ್ತದಲ್ಲಿರುವ ಯಾವುದಾದರೂ ಸಣ್ಣ ಸಮಸ್ಯೆಗಳನ್ನು ಮ್ಯಾನುವಲ್ ಮುಖಾಂತರ ಪರೀಕ್ಷಿಸಿದ ಲೋಪದೋಷಗಳು ಕಂಡು ಬರಬಹುದು ಈಗ ಈ ಹೊಸ ಯಂತ್ರಗಳಿಂದ ಈ ಎಲ್ಲಾ ಲೋಪ ದೋಷಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಹಾಗೂ ಸುರಕ್ಷಿತವಾದ ರಕ್ತವನ್ನು ಪೂರೈಕೆ ಮಾಡಲು ಸಹಾಯಕವಾಗುತ್ತದೆ ಹಾಗೂ ಇದರಿಂದ ಮುಂದೆ ಆಗುವ ಆರೋಗ್ಯ ಸಮಸ್ಯೆಯನ್ನು ತಪ್ಪಿಸಬಹುದು ಎಂದು ನುಡಿದರು. ಆಸ್ಪತ್ರೆಯವರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು ಈ ರಕ್ತ ನಿಧಿಯನ್ನು ಇನ್ನೂ ಉನ್ನತ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಎಂದು ಹಾರೈಸಿದರು ಸಮಾರಂಭದಲ್ಲಿ ರೆಡ್ ಕ್ರಾಸ್ ಉಪಾಧ್ಯಕ್ಷ ಟಿ ಎಸ್ ಅಶ್ವಥ್ ನಾರಾಯಣ ಶೆಟ್ಟಿ ರೆಡ್ ಕ್ರಾಸ್ ಚೇರ್ಮನ್ ಎಸ್ ಪಿ ದಿನೇಶ್ ಗೌರವ ಕಾರ್ಯದರ್ಶಿ ಡಾಕ್ಟರ್ ದಿನೇಶ್ ಐಎಂಎ ಅಧ್ಯಕ್ಷ ಡಾ ಶ್ರೀಧರ್ ನಂಜಪ್ಪ ಲೈಫ್ ಕೇರ್ ಡಾಕ್ಟರ್ ನಮೃತ ಉಡುಪ ಡಾಕ್ಟರ್ ಅರವಿಂದನ್ ರೆಡ್ ಕ್ರಾಸ್ ನಿರ್ದೇಶಕರಾದ ನವೀನ್. ಡಾಕ್ಟರ್ ಶಶಿಧರ್ ಅರಸ್ ಸಿ ಸುರೇಶ್. ಡಾ. ರೇಷ್ಮಾ ದೇವಾನಂದ್. ಅಶೋಕ್ ಜಿ ವಿಜಯಕುಮಾರ್ ಉಪಸ್ಥಿತರಿದ್ದರು.

Karnataka Working Journalists Association Shivamogga ರಾಜ್ಯ ಕಾರ್ಯನಿರತ ಪತ್ರಕರ್ತರಿಗಾಗಿ ಮೇ11 ರಂದು ವಾರ್ಷಿಕ ಕ್ರೀಡಾಕೂಟ & ಸ್ನೇಹಮಿಲನ

0

Karnataka Working Journalists Association Shivamogga ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಮೇ. 11ರ ಭಾನುವಾರ ಬೆಳಿಗ್ಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಪತ್ರಕರ್ತರು, ಪತ್ರಿಕಾಲಯಗಳ ಸಿಬ್ಬಂದಿಗಳು ಹಾಗೂ ಅವರ ಕುಟುಂಬವರ್ಗದವರಿಗಾಗಿ ವಾರ್ಷಿಕ ಕ್ರೀಡಾಕೂಟ ಹಾಗೂ ಸ್ನೇಹ ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಬೆಳಿಗ್ಗೆ 9:30ಕ್ಕೆ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆಯವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಡಿ. ಎಸ್. ಅರುಣ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖಾ ನಾಯ್ಕ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ಭಂಡಿಗಡಿ ನಂಜುಂಡಪ್ಪ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ. ವಿ. ಶಿವಕುಮಾರ್ ವಹಿಸಲಿದ್ದಾರೆ.
Karnataka Working Journalists Association Shivamogga ನಂತರ ಮನೋರಂಜನೆ ಸಹಿತ ವಿವಿಧ ಕ್ರೀಡಾ ಚಟುವಟಿಕೆಗಳು ಮುಂದುವರಿಯಲಿವೆ.
ಸಂಜೆ 5:00ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕರವರು ಪಾಲ್ಗೊಂಡು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ರಕ್ಷಣಾಽಕಾರಿ ಮಿಥುನ್ ಕುಮಾರ್, ಶಿವಮೊಗ್ಗ-ಭದ್ರಾವತಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್. ಎಸ್. ಸುಂದರೇಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್, ಪಾಲ್ಗೊಳ್ಳಲಿದ್ದಾರೆ.
ಈ ಕ್ರೀಡಾಕೂಟ ಹಾಗೂ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸಂಘದ ಎಲ್ಲಾ ಸದಸ್ಯರು, ಅವರ ಕುಟುಂಬ ವರ್ಗದವರು ಹಾಗೂ ಪತ್ರಿಕಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು, ಕುಟುಂಬ ವರ್ಗದವರು ಪಾಲ್ಗೊಳ್ಳುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ವಿ. ಟಿ. ಅರುಣ್, ಕಾರ್ಯದರ್ಶಿಗಳಾದ ಕೆ. ಆರ್. ಸೋಮನಾಥ್, ಗ.ರಾ. ಶ್ರೀನಿವಾಸ್, ದೀಪಕ್ ಸಾಗರ್ ಕೋರಿದ್ದಾರೆ.

Acharya Tulsi National College of Commerce ಬೇಡವಾದ ವೆಬ್ ಸೈಟ್ ಓಪನ್ ಮಾಡಿ ನಾವಾಗಿಯೇ ಸಿಕ್ಕಿಹಾಕಿಕೊಳ್ಳತ್ತೇವೆ- ಅನಿಲ್ ಭೂಮರೆಡ್ಡಿ

0

Acharya Tulsi National College of Commerce ಪ್ರತಿ ದಿನ ಸ್ಮಾರ್ಟ್ ಫೋನಿನ ದುರ್ಬಳಕೆ ಹೆಚ್ಚುತ್ತಿದೆ ತಂತ್ರಜ್ಞಾನ ಮುಂದುವರೆದ ಹಾಗೆ ಆಕರ್ಷಣೆಗೆ ಒಳಗಾಗಿ ಬೇಡವಾದ ವೆಬ್ ಸೈಟ್ಗಳನ್ನು ಓಪನ್ ಮಾಡಿ ನಾವಾಗಿಯೇ ಸಿಕ್ಕಿಹಾಕಿಕೊಳ್ಳುತ್ತೇವೆ ಇತ್ತೀಚಿಗೆ ತುಂಬಾ ಹೆಚ್ಚಾಗುತ್ತಿದೆ ಪ್ರತಿದಿನ ಶಿವಮೊಗ್ಗ ಜಿಲ್ಲೆಯಲ್ಲಿ ನಾಲಕ್ಕರಿಂದ ಐದು ಕೇಸುಗಳು ದಾಖಲಾಗುತ್ತಿವೆ ಕಾಯಿದೆ ದಾಖಲಾಗುವಲ್ಲಿ ಶಿವಮೊಗ್ಗ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಮಹಿಳೆಯರು ಎಷ್ಟು ಜಾಗೃತರಾಗಿದ್ದರು ಸಹ ಸಾಲದು ಈಗಾಗಲೇ ಸೈಬರ್ ಅಪರಾಧದಿಂದ ಕೋಟಿಗಟ್ಟಲೆ ಹಣವನ್ನು ಕಳೆದುಕೊಂಡಿರುವುದು ನೋಡುತ್ತಾ ಇದ್ದೇವೆ ಜೊತೆಗೆ ತಮ್ಮ ಜೀವವನ್ನು ಸಹ ಕಳೆದುಕೊಳ್ಳುತ್ತಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಅನಿಲ್ ಬೊಮರೆಡ್ಡಿ ಅವರು ನುಡಿದರು. ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಹೆನ್ರಿ
ಡುನಂಟ್ ಹುಟ್ಟುಹಬ್ಬ ಹಾಗು ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು ನಾವು ಮೊಬೈಲ್ ಮುಖಾಂತರ ಒಟಿಪಿ ಗಳನ್ನು ಹಾಗೂ ಫೇಸ್ಬುಕ್ ಇನ್ಸ್ಟಾಗ್ರಾಮ್ ನಲ್ಲಿ ನಮ್ಮ ಖಾಸಗಿ ಮಾಹಿತಿಗಳನ್ನು ಹಂಚಿಕೊಳ್ಳುವುದರಿಂದ ಸಾಕಷ್ಟು ಅನಾಹುತಗಳು ಇಂದಿಗೂ ನಡೆಯುತ್ತಾ ಇವೆ ಆದ್ದರಿಂದ ಆದಷ್ಟು ವಾಟ್ಸಪ್ ಸಂದೇಶಗಳನ್ನು ಮೊಬೈಲ್ ಮಾಹಿತಿಗಳನ್ನು ಪರಾಮರ್ಶಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನುಡಿದರು. Acharya Tulsi National College of Commerce ಇದೇ ಸಂದರ್ಭದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಎಫ್ ಪಿ ದಿನೇಶ್ lಮಾತನಾಡುತ್ತ ಮನು ಕುಲದ ಸೇವೆಯಲ್ಲಿ ರೆಡ್ ಕ್ರಾಸಿನ ಕೊಡುಗೆ ತುಂಬಾ ಅಪಾರವಾಗಿದೆ ಹೆನ್ರಿ ಡುನಂಟ್. ರವರು ಸ್ಥಾಪಿಸಿದ ರೆಡ್ ಕ್ರಾಸ್ ಪ್ರಪಂಚಾದ್ಯಂತ ಮಾನವೀಯ ಸೇವೆಗಳ ಮುಖಾಂತರ ತನ್ನದೇ ಆದ ಛಾಪು ಮೂಡಿಸಿದ ಯುದ್ಧ ಹಾಗೂ ಪ್ರಕೃತಿ ವಿಕೋಪ. ಕರೋನಾ. ಸಂದರ್ಭದಲ್ಲಿ ಸಹಾಯ ಹಸ್ತ ನೀಡುವುದರ ಜೊತೆಗೆ ಯುವ ಜನರಿಗೆ ಜೀವನ ಕೌಶಲ್ಯ ತರಬೇತಿ ನೀಡುವುದರ ಮುಖಾಂತರ ಅವರಿಗೆ ಬದುಕನ್ನು ಕಟ್ಟಿಕೊಡುತ್ತದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಎರಡು ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾಕ್ಟರ್ ದಿನೇಶ್ ರೆಡ್ ಕ್ರಾಸ್ ಸಂಸ್ಥೆ ನಡೆದು ಬಂದ ದಾರಿ ಹಾಗೂ ಸಮುದಾಯದಲ್ಲಿ ಈಗಾಗಲೇ ಸಲ್ಲಿಸಿರುವ ಸೇವೆಗಳ ಬಗ್ಗೆ ವಿವರ ನೀಡಿದರು ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕರಾದ ಅಶ್ವತ್ ನಾರಾಯಣ್ ಶೆಟ್ಟಿ ಅವರು ಮಾತನಾಡಿ ಶುಭಾಶಯ ತಿಳಿಸಿದರು . ರೆಡ್ ಕ್ರಾಸ್ ನಿರ್ದೇಶಕ
ವಸಂತ್ ಹೋಬಳಿದಾರ್. ಮಾತನಾಡುತ್ತಾ ರೆಡ್ ಕ್ರಾಸ್ ಸಂಸ್ಥೆಯ ಈ ವರ್ಷದ ಧ್ಯೇಯ ಮಾನವೀಯತೆಯ ನೆಲೆಯಲ್ಲಿ ಸೇವೆ ಮಾಡುವ ಏಕೈಕ ಸಂಸ್ಥೆ ರೆಡ್ ಕ್ರಾಸ್ ಆಗಿದೆ ಎಂದು ನುಡಿದರು ವೇದಿಕೆಯಲ್ಲಿ ರೆಡ್ ಕ್ರಾಸ್ ಅಜೀವ ಸದಸ್ಯರಾದ ಶ್ರೀ ಜಿ ವಿಜಯಕುಮರ್, ಎನ್ ಗೋಪಿನಾಥ, ಪ್ರೊಫೆಸರ್ ಕೆ ಎಂ ನಾಗರಾಜ್, ರೆಡ್ ಕ್ರಾಸ್ ನಿರ್ದೇಶಕ ನವೀನ್. ಸೌಪರ್ಣಿಕಾ, ಉಮೇಶ್, ಶೃತಿ ಕೆ. ಹಾಗೂ ವಿವಿಧ ಕಾಲೇಜುಗಳಿಂದ ರೆಡ್ ಕ್ರಾಸ್ . ಎನ್ಎಸ್ಎಸ್. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

CM Siddharamaih ಭಾರತದ ಹೆಮ್ಮೆಯ ಧೀರ ಸೈನಿಕರಿಗೆ ರಾಜ್ಯದ ಪರವಾಗಿ ಅಭಿನಂದನೆ- ಮುಖ್ಯಮಂತ್ರಿ ಸಿದ್ಧರಾಮಯ್ಯ

0

CM Siddharamaih ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ಗಳಲ್ಲಿನ ಉಗ್ರಗಾಮಿಗಳ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ಭಾರತದ ಹೆಮ್ಮೆಯ ಧೀರ ಸೈನಿಕರಿಗೆ ಇಡೀ ರಾಜ್ಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಸೇನೆ ನಡೆಸಿರುವ ಈ ದಾಳಿ ಭಾರತದ ಮೇಲೆ ಸತತವಾಗಿ ದಾಳಿ ನಡೆಸಿ ಹತ್ಯಾಕಾಂಡ ನಡೆಸುತ್ತಿದ್ದ ಉಗ್ರಗಾಮಿಗಳಿಗೆ ಕಲಿಸಿದ ಪಾಠ ಮಾತ್ರವಲ್ಲ, ಈ ಉಗ್ರರಿಗೆ ಆಶ್ರಯ ಮತ್ತು ನೆರವು ನೀಡಿ ಭಾರತದ ವಿರುದ್ಧ ಅವರನ್ನು ಛೂಬಿಡುತ್ತಿದ್ದ ಪಾಕಿಸ್ಥಾನಕ್ಕೂ ನೀಡಿರುವ ಎಚ್ಚರಿಕೆ ಆಗಿದೆ ಎಂದಿದ್ದಾರೆ.

ದೇಶದ ಸೇನಾಪಡೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ ಪರಾಕ್ರಮ ಮೆರೆದಿದ್ದಾರೆ.

ರಾಷ್ಟ್ರೀಯ ಭದ್ರತೆ ವಿಷಯಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ಈ ದಾಳಿಯನ್ನು ಎಲ್ಲರೂ ಬೆಂಬಲಿಸಿದ್ದೇವೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ನಮ್ಮ ಸರ್ಕಾರ ನೂರಕ್ಕೆ ನೂರರಷ್ಟು ಸೇನೆ ಕೈಗೊಂಡಿರುವ ಕ್ರಮವನ್ನು ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ.

ಆಪರೇಷನ್ ಸಿಂಧೂರ ಹೆಸರಿನಲ್ಲಿ ಸುಮಾರು 9 ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿದೆ. ಕೇವಲ ಉಗ್ರಗಾಮಿಗಳ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ನಮ್ಮ ಸೈನಿಕರು ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ದಾಳಿ ಮಾಡಿದ್ದು, ಅಮಾಯಕ ಜನರ ಸಾವು ನೋವು ತಪ್ಪಿಸಿದ್ದಾರೆ. ನಮ್ಮ ಸೈನಿಕರ ಕಾರ್ಯದಕ್ಷತೆಗೆ ದೊಡ್ಡ ಸಲಾಂ. ಈ ದಾಳಿಯನ್ನು ನಾವು ಸ್ವಾಗತಿಸುತ್ತೇವೆ.ಕಾಶ್ಮೀರದ ಪಹಲ್ಗಾವ್‌ನಲ್ಲಿ ಅಮಾಯಕ 26ಜನ ಹತ್ಯೆ ನಡೆಸಿದ ಉಗ್ರರನ್ನು ಬೆಂಬಲಿಸುವವರು, ಸಾಕುವವರು ಸಹ ಪಾಕಿಸ್ತಾನದವರೇ ಎಂಬುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ನಾವು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದೇವೆ. ರಾಜ್ಯದಲ್ಲಿ ಸುರಕ್ಷತೆಯ ಕುರಿತು ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಉಗ್ರರ ಮೇಲಿನ ದಾಳಿ ಹಿನ್ನೆಲೆಯಲ್ಲಿ ಸಂವಿಧಾನ ಉಳಿಸಿ ಅಡಿಯಲ್ಲಿ ರಾಯಚೂರಿನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಕಾರ್ಯಕ್ರಮನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

CM Siddharamaih ಉಗ್ರರ ನೆಲೆಗಳ ಮೇಲೆ ಸೇನಾದಾಳಿ ನಡೆಸದೆ ಭಾರತದ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ಪಹಲ್ಗಾಮ್ ನಲ್ಲಿ ನಡೆದ ಹತ್ಯಾಕಾಂಡ ನಡೆಸಿದ ಉಗ್ರಗಾಮಿಗಳು ಪಾಕಿಸ್ತಾನಕ್ಕೆ ಸೇರಿದವರೆಂದು ಜಗಜ್ಜಾಹೀರಾಗಿದ್ದರೂ ಪಾಕಿಸ್ತಾನ ಇದನ್ನು ಒಪ್ಪಿಕೊಂಡು ಕ್ರಮಕೈಗೊಳ್ಳುವ ಭರವಸೆ ನೀಡದೆ ಹಠಮಾರಿ ಧೋರಣೆ ತಳೆದಿರುವ ಕಾರಣದಿಂದಾಗಿ ಭಾರತಕ್ಕೂ ಈ ದಾಳಿ ನಡೆಸದೆ ಬೇರೆ ಆಯ್ಕೆಗಳಿರಲಿಲ್ಲ. ಉಗ್ರಗಾಮಿಗಳ ನೆಲೆಗಳನ್ನು ಧೂಳೀಪಟ ಮಾಡಿ ಉಗ್ರರನ್ನು ಶಿಕ್ಷಿಸಿದ ನಮ್ಮ ಸೈನಿಕರ ಧೀರೋದ್ದಾತ ಪರಾಕ್ರಮದಿಂದ ಪಹಲ್ಗಾಮ್ ಹತ್ಯಾಕಾಂಡದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ತುಸು ನೆಮ್ಮದಿ, ಸಮಾಧಾನ ಸಿಕ್ಕಿರಬಹುದೆಂದು ಭಾವಿಸಿದ್ದೇನೆ ಎಂದು ತಿಳಿಸಿದ್ದಾರೆ.

ಇದು ಪಾಕಿಸ್ಥಾನಕ್ಕೆ ಮಾತ್ರವಲ್ಲ ಭಾರತದ ಜೊತೆ ಈ ರೀತಿಯ ಕಿಡಿಗೇಡಿತನವನ್ನು ನಡೆಸುವ ನೆರೆಯ ಎಲ್ಲ ದೇಶಗಳಿಗೆ ಕೂಡಾ ಇಂದಿನ ಸೇನಾದಾಳಿ ಎಚ್ಚರಿಕೆಯ ಗಂಟೆಯಾಗಿದೆ. ಉಗ್ರಗಾಮಿಗಳ ನೆಲೆಯನ್ನೇ ಕೇಂದ್ರವಾಗಿಟ್ಟುಕೊಂಡು ಅಮಾಯಕ ಜನರ ಸಾವು-ನೋವು ನಡೆಯದಂತೆ ದಾಳಿ ನಡೆಸಿರುವ ನಮ್ಮ ಸೈನಿಕರ ಕಾರ್ಯಕ್ಷಮತೆ ಮತ್ತು ಪರಿಣತಿಗೆ ನನ್ನದೊಂದು ದೊಡ್ಡ ಸಲಾಮ್.ಭಾರತ ಸರ್ಕಾರ ಕೈಗೊಂಡಿರುವ ಈ ನಿರ್ಧಾರವನ್ನು ನಮ್ಮ ಪಕ್ಷ ಸಂಪೂರ್ಣ ಬೆಂಬಲಿಸಿದೆ. ನಾನು ಕೂಡಾ ನಮ್ಮ ಸರ್ಕಾರ ಮತ್ತು ರಾಜ್ಯದ ಪರವಾಗಿ ಸಂಪೂರ್ಣ ಬೆಂಬಲ ಘೋಷಿಸುತ್ತಿದ್ದೇನೆ ಎಂದಿದ್ದಾರೆ.

ಇದು ನಾವೆಲ್ಲರೂ ಒಗ್ಗಟ್ಟಿನಿಂದ ಮತ್ತು ಅಷ್ಟೇ ಎಚ್ಚರದಿಂದ ಇರುವ ಕಾಲ. ರಾಜ್ಯದ ಭದ್ರತಾ ವ್ಯವಸ್ಥೆ ಮೇಲೆ ನಿಗಾ ಇಡುವಂತೆ ಪೊಲೀಸ್ ವರಿಷ್ಠರಿಗೆ ತಿಳಿಸಿದ್ದೇನೆ. ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಜೊತೆಯಲ್ಲಿಯೂ ಸಂಪರ್ಕದಲ್ಲಿರುತ್ತದೆ. ಅಲ್ಲಿಂದ ಬರುವ ಸೂಚನೆಗಳನ್ನು ಪಾಲಿಸಲಾಗುತ್ತದೆ.
ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುವುದು.- ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಭಾರತೀಯ ಸೈನ್ಯವು ನಡೆಸಿದ ಯಶಸ್ವಿ ದಾಳಿಯ ಕುರಿತು ಮುಖ್ಯಮಂತ್ರಿ ಅವರ ಮಾತುಗಳಾಗಿವೆ.

Taralabalu Jagadguru Student Hostel ಲೇಖಕ ತೀರ್ಥಲಿಂಗಪ್ಪ ಅವರಿಗೆ ಸನ್ಮಾನ

0

Taralabalu Jagadguru Student Hostel ಬಸವನಗುಡಿಯ ಶ್ರೀ ತರಳಬಾಳು ಜಗದ್ಗುರು ವಿದ್ಯಾರ್ಥಿ ನಿಲಯದ ಕಾರ್ಯದರ್ಶಿಗಳಾದ ಶ್ರೀ ಡಿ.ತೀರ್ಥಲಿಂಗಪ್ಪನವರನ್ನು ಸನ್ಮಾನಿಸಲಾಯಿತು. ಇವರ ಎರಡು ಕೃತಿಗಳಾದ “ ಶ್ರೀ ಡಿ ತೀರ್ಥಲಿಂಗಪ್ಪ ನಾನು, ನನ್ನ ಜೀವನ ( ಆತ್ಮಚರಿತ್ರೆ) “ ಮತ್ತು “ ಶ್ರೀ ತೀರ್ಥಗಿರಿ ( ಅಭಿನಂದನಾ ಗ್ರಂಥ) “ ಗಳನ್ನು ಇತ್ತೀಚಿಗೆ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಗಿತ್ತು. ಶಿವಮೊಗ್ಗದ ವಿದ್ಯಾರ್ಥಿ ನಿಲಯದ ಆಡಳಿತ ಕಛೇರಿಯಲ್ಲಿ, ನಿಲಯದ ಅಧ್ಯಕ್ಷರಾದ ಶ್ರೀ ಡಿ ಜಿ ಬಸವರಾಜಪ್ಪ, ಖಜಾಂಚಿ ಅಂಜಿ ರುದ್ರಪ್ಪ, ಮತ್ತು ನಿರ್ದೇಶಕರುಗಳಾದ ಶ್ರೀ ಡಿ. ಎಂ. ಶಂಕರಪ್ಪ , ಶ್ರೀ ಸಿದ್ದಪ್ಪ , ಶ್ರೀ ಜಗನ್ನಾಥ್, ಶ್ರೀ ನವೀನ್ , ಶ್ರೀ ರವಿ ಬಿಲ್ಗುಣಿ, ಶ್ರೀ ರವಿಕುಮಾರ್, ಅವರು ಶಾಲು, ಮೈಸೂರು ಪೇಟ ಮತ್ತು ಹಾರಗಳಿಂದ ಸನ್ಮಾನಿಸಿದರು.